ಅಸಿಕ್ನಿ (ದೇವತೆ)
ಅಸಿಕ್ನಿ | |
---|---|
ಇತರ ಹೆಸರುಗಳು | ಪಂಚಜನಿ, ವಿರಾಣಿ, ವಿರಿಣಿ |
ದೇವನಾಗರಿ | असिक्नी |
ಸಂಗಾತಿ | ದಕ್ಷ |
ಮಕ್ಕಳು | |
ತಂದೆತಾಯಿಯರು | ವೀರನ ಅಥವಾ ಪಂಚಜನ (ತಂದೆ) |
ಹಿಂದೂ ಪುರಾಣಗಳಲ್ಲಿ, "ಪಂಚಜನಿ" ಮತ್ತು "ವಿರಾನಿ" ಎಂದೂ ಕರೆಯಲ್ಪಡುವ "ಆಸಿಕ್ನಿ" ಯ ಹೆಸರು "ಕಪ್ಪಗಿನ" ಅಥವಾ "ರಾತ್ರಿ" ಎಂಬ ಅರ್ಥ ಕೊಡುತ್ತದೆ. ಪೌರಾಣಿಕ ದೇವತಾ ಗಣಗಳಲ್ಲಿ ಈಕೆ ದಕ್ಷ ಪ್ರಜಾಪತಿಯ ಪತ್ನಿ. ಹೆಚ್ಚಿನ ಪುರಾಣಗಳು ಮತ್ತು ಧರ್ಮಗ್ರಂಥಗಳು ಅವಳನ್ನು 6000 ಗಂಡು ಮತ್ತು 60 ನಕ್ಷತ್ರ ನಾಮಾಂಕಿತ ಹೆಣ್ಣುಮಕ್ಕಳ ತಾಯಿ ಎಂದು ಉಲ್ಲೇಖಿಸುತ್ತವೆ.
ವ್ಯುತ್ಪತ್ತಿಶಾಸ್ತ್ರ ಮತ್ತು ವಿಶೇಷಣಗಳು
[ಬದಲಾಯಿಸಿ]"ಆಸಿಕ್ನಿ" ಎಂಬ ಪದದ ಅರ್ಥ 'ಕತ್ತಲೆ' ಅಥವಾ 'ರಾತ್ರಿ' ಎಂದು ತಿಳಿಯಬಹುದು.[೧][೨] ಈ ಪದವನ್ನು ಋಗ್ವೇದದಲ್ಲಿ (ಕ್ರಿ.ಪೂ. 1500) ಚೆನಾಬ್ ನದಿಯನ್ನು ವಿವರಿಸಲು ಬಳಸಲಾಗಿದೆ.[೩][೪][lower-alpha ೧]ಅಲ್ಲದೆ ಆಸಿಕ್ನಿಯನ್ನು "ಪಾಂಚಜನಿ" ಮತ್ತು "ವಿರಾನಿ" ಎಂದೂ ಕರೆಯಲಾಗುತ್ತದೆ.[೭]
ದಂಥಕತೆ
[ಬದಲಾಯಿಸಿ]ಜನನ
[ಬದಲಾಯಿಸಿ]ಪುರಾಣಗಳು ಇವಳ ಹೆತ್ತವರ ಬಗ್ಗೆ ಭಿನ್ನವಾಗಿ ತಿಳಿಸಿದ್ದಾರೆ. ದೇವಿ-ಭಾಗವತ ಪುರಾಣ,[೭] ಕಲಿಕಾ ಪುರಾಣ,[೮] ಗರುಡ ಪುರಾಣ, ಮತ್ತು ಬ್ರಹ್ಮ ಪುರಾಣ[೯] ಆಸಿಕ್ನಿ ಬ್ರಹ್ಮನಿಂದ , ಅವನ ಎಡ ಹೆಬ್ಬೆರಳಿನಿಂದ ಜನಿಸಿದಳು ಎಂದು ಹೇಳಿದರೆ, ಭಾಗವತ ಪುರಾಣದ ಪ್ರಕಾರ[೧೦] ಮತ್ತು ಶಿವ ಪುರಾಣದ ಪ್ರಕಾರ ,[೧೧] ಇವಳು ಪ್ರಜಾಪತಿ ಪಂಚಜನನ ಮಗಳು ಎಂದು ಹೇಳುತ್ತದೆ. ಬ್ರಹ್ಮ ಪುರಾಣ,[೯] ಬ್ರಹ್ಮಾಂಡ ಪುರಾಣ,[೧೨] ವಾಯು ಪುರಾಣ,[೧೩] ಕಲ್ಕಿ ಪುರಾಣ, ಕೂರ್ಮ ಪುರಾಣ,[೧೪] ಪದ್ಮ ಪುರಾಣ,[೧೫] ಗರುಡ ಪುರಾಣ,[೧೬] ಮತ್ತು ಶಿವ ಪುರಾಣದ[೧೧] ಪ್ರಕಾರ ಇವಳು ವೀರಾನನ ಮಗಳು ಎಂದು ಹೇಳುತ್ತದೆ.[೧೭]
ಮದುವೆ
[ಬದಲಾಯಿಸಿ]ಮದುವೆ ಎನ್ನುವ ವಿಶಾಲವಾದ ವಿಷಯವು ವಾಯು ಪುರಾಣದಲ್ಲಿ ವ್ಯಕ್ತವಾಗಿದೆ,[೧೮] ಭಾಗವತ ಪುರಾಣ,[೮] ಮತ್ತು ಬ್ರಹ್ಮ ಪುರಾಣದ ಪ್ರಕಾರ[೯][೭][lower-alpha ೨] ಬ್ರಹ್ಮಾಂಡವನ್ನು ಹರಡಲು ವಿಧ ವಿಧದ ಜೀವಿಗಳನ್ನು ಸೃಷ್ಟಿಸಲು ದಕ್ಷ ಅವರನ್ನು ಬ್ರಹ್ಮ ನಿಯೋಜಿಸಿದರು; ಅವನು ತನ್ನ ಮನಸ್ಸಿನಿಂದ ದೇವರುಗಳನ್ನು, ಋಷಿಗಳನ್ನು, ಅಸುರರನ್ನು ಮತ್ತು ಯಕ್ಷರನ್ನು ಸೃಷ್ಟಿಸಲು ಹೋದನು, ಆದರೆ ಅದರಿಂದ ಆತ ಯಶಸ್ವಿಯಾಗಲು ವಿಫಲನಾದನು.[೭][೯][lower-alpha ೩] ಬ್ರಹ್ಮಾಂಡ ಪುರಾಣ ಮತ್ತು ವಾಯು ಪುರಾಣವು ಸಸ್ಯಗಳು, ಮಾನವರು, ದೆವ್ವಗಳು, ಸರ್ಪಗಳು, ಜಿಂಕೆಗಳು, ಮಾಂಸ ತಿನ್ನುವ ರಾಕ್ಷಸರು ಮತ್ತು ಪಕ್ಷಿಗಳ ಸೃಷ್ಟಿಗಳ ಸುದೀರ್ಘ ಪಟ್ಟಿಯನ್ನು ನೀಡುತ್ತದೆ. ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಪ್ರಭೇದಗಳು ಪ್ರಸರಣ ಮಾಡಲು ವಿಫಲವಾದ ನಂತರ ಮಹಾದೇವನು ಅವನನ್ನು ಗದರಿಸಿದ್ದನು ಎಂದು ಉಲ್ಲೇಖಿಸುತ್ತದೆ. ಆ ಬಳಿಕ ಆತನ ಯಶಸ್ವಿ ತಪಸ್ಸಿನ ನಂತರ, ವಿಷ್ಣುವಿನಿಂದ ಆಸಿಕ್ನಿಯನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿದನು ಮತ್ತು ತನ್ನನ್ನು ಕೂಡು ಎಂದು ಒತ್ತಾಯಿಸಿದನು[೭][೧೦][lower-alpha ೪] ಎಂದೂ ಹೇಳುತ್ತದೆ.
ಮಕ್ಕಳು
[ಬದಲಾಯಿಸಿ]ದಕ್ಷ ಮತ್ತು ಅಸಿಕ್ನಿಯ ಕೂಡಿವಿಕೆಯಿಂದ, ಹಲವಾರು ಮಕ್ಕಳು ಜನಿಸಿದರು.[೮] ಅಲ್ಲದೆ ಈ ವಿಷಯವು ಬ್ರಹ್ಮಾಂಡ ಪುರಾಣ[೧೨] ಭಾಗವತ ಪುರಾಣ,[೧೦] ಲಿಂಗ ಪುರಾಣ[೧೯][lower-alpha ೫], ಗರುಡ ಪುರಾಣ,[೧೬] ಕೂರ್ಮ ಪುರಾಣ,[೧೪] ಶಿವ ಪುರಾಣ,[೧೧][೧೭] ವಿಷ್ಣು ಪುರಾಣ,[೨೦][೨೧] ವಾಯು ಪುರಾಣ,[೨೦][೧೩] ಪದ್ಮ ಪುರಾಣ[೧೫][lower-alpha ೬], ಮತ್ತು ಬ್ರಹ್ಮ ಪುರಾಣ[೯] ಈ ನಿಟ್ಟಿನಲ್ಲಿ ಸಕಲ ಪುರಾಣದ್ಯಾಂತ ವ್ಯಾಪಿಸಿದೆ.[೮] ದಕ್ಷ ಮತ್ತು ಆಶಿಕ್ನಿ ಆರಂಭದಲ್ಲಿ ಐದು ಸಾವಿರ ಗಂಡು ಮಕ್ಕಳನ್ನು ಹೆತ್ತರು, ಅವರನ್ನು ಹರ್ಯಶ್ವರು ಮತ್ತು ಶಬಲಶ್ವರು ಎಂದು ಕರೆಯಲಾಗುತ್ತಿತ್ತು.[೭] ಅವರು ಭೂಮಿಯ ಮೇಲೆ ವಾಸಿಸಲು ಆಸಕ್ತಿ ಹೊಂದಿದ್ದರು ಆದರೆ ನಾರದನ ಸಲಹೆಯ ಮೇರೆಗೆ, ಬದಲಿಗೆ ಲೌಕಿಕ ವ್ಯವಹಾರಗಳನ್ನು ಕಂಡುಹಿಡಿಯಲು ಪ್ರಾರಂಭಿಸಲು ಹೋದವರು ಮತ್ತೆ ಎಂದಿಗೂ ಹಿಂತಿರುಗಲಿಲ್ಲ.[೭][lower-alpha ೭] ದಕ್ಷ ಮತ್ತು ಆಶಿಕ್ನಿ ಮತ್ತೆ ಇನ್ನೂ ಸಾವಿರ ಗಂಡು ಮಕ್ಕಳನ್ನು ಹೆತ್ತರು (ಹರ್ಯಶ್ವರು ಮತ್ತು ಶಬಲಶ್ವಗಳು), ಅವರು ಇದೇ ರೀತಿಯ ಉದ್ದೇಶಗಳನ್ನು ಹೊಂದಿದ್ದರು ಆದರೆ ಅದೇ ಫಲಿತಾಂಶಗಳಿಗೆ ನಾರದರಿಂದ ಮನವೊಲಿಸಲ್ಪಟ್ಟರು.[೭][lower-alpha ೮] ಕೋಪಗೊಂಡ ದಕ್ಷನು ನಾರದನನ್ನು ಸದಾ ಅಲೆದಾಡುವವನು ಎಂದು ಶಪಿಸಿದನು. ಈ ಬಾರಿ, ಅವರು ಆಸಿಕ್ನಿಯಿಂದ ಅರವತ್ತು ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು.[೮][lower-alpha ೯] ಅವರು ವಿವಿಧ ಋಷಿಗಳು ಮತ್ತು ದೇವತೆಗಳನ್ನು ವಿವಾಹವಾದರು ಮತ್ತು ವಿವಿಧ ಜಾತಿಗಳಿಗೆ ಜನ್ಮವನ್ನು ನೀಡಿದರು.[೮][೯][lower-alpha ೧೦][lower-alpha ೧೧] ಶಿವ ಪುರಾಣದ ಪ್ರಕಾರ, ಅದರ ನಂತರ ಶಿವನು ಸ್ವತಃ ಆಸಿಕಿನಿಯ ಗರ್ಭದಲ್ಲಿ ಪುನರ್ಜನ್ಮ ಪಡೆದನು; ಈ ಅವಧಿಯಲ್ಲಿ ಆಸಿಕ್ನಿಯನ್ನು ಎಲ್ಲಾ ದೇವತೆಗಳು ವ್ಯಾಪಕವಾಗಿ ಗೌರವಿಸುತ್ತಿದ್ದರು ಮತ್ತು ಹೊಗಳುತ್ತಿದ್ದರು.[೧೧][lower-alpha ೧೨] ಮತ್ತೆ ಕಾಲಂತರದಲ್ಲಿ ಹತ್ತನೇ ತಿಂಗಳಲ್ಲಿ, ಆಸಿಕ್ನಿ ಸತಿಗೆ ಜನ್ಮ ನೀಡಿದಳು; ಅವಳು ಮತ್ತು ದಕ್ಷ ಅವಳನ್ನು ಚೆನ್ನಾಗಿ ನೋಡಿಕೊಂಡರು.[೧೧][lower-alpha ೧೩]
ಟಿಪ್ಪಣಿಗಳು
[ಬದಲಾಯಿಸಿ]- ↑ RV 7.20.25 and 10.75.5.ಇಲ್ಲಿ ಉಲ್ಲೇಖಿಸಲಾಗಿದೆ[೫] ಮಧ್ಯಕಾಲೀನ ಸಾಹಿತ್ಯವು ಇದನ್ನು ತೀರ್ಥಯಾತ್ರೆಯ ನದಿ ಎಂದು ಉಲ್ಲೇಖಿಸುತ್ತದೆ[೬]
- ↑ ಇತರ ಪುರಾಣಗಳು ಸಾಮಾನ್ಯವಾಗಿ ವಿಷ್ಣುವಿನ ವರದ ವಿವರವಾದ ನಿರೂಪಣೆಯನ್ನು ಬಿಟ್ಟುಬಿಡುತ್ತವೆ.
- ↑ ಬ್ರಹ್ಮ ಪುರಾಣವು ದಕ್ಷನು ತನ್ನ ಮನಸ್ಸಿನಿಂದ ಗಂಧರ್ವಗಳನ್ನು ಸಹ ಸೃಷ್ಟಿಸಿದನೆಂದು ಹೇಳುತ್ತದೆ.
- ↑ ವಾಯು ಪುರಾಣದಲ್ಲಿ ಆಸಿಕ್ನಿ ಇಡೀ ಜಗತ್ತನ್ನು ಬೆಂಬಲಿಸುತ್ತಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.
- ↑ ಅವಳನ್ನು ಆಸಿಕ್ನಿ ಎಂದು ಉಲ್ಲೇಖಿಸುವುದಿಲ್ಲ. ಬದಲಿಗೆ ಸುತಿ ಮತ್ತು ವಿರಿಣಿಯನ್ನು ಬಳಸಲಾಗುತ್ತದೆ.
- ↑ ಅವಳನ್ನು ಆಸಿಕ್ನಿ ಎಂದು ಉಲ್ಲೇಖಿಸುವುದಿಲ್ಲ, ಬದಲಿಗೆ ವಿರಿಣಿಯನ್ನು ಬಳಸಿದ್ದಾರೆ ಮತ್ತು ಅವಳನ್ನು ದಕ್ಷನ "ಸೇವಕಿ" ಎಂದು ಪರಿಗಣಿಸುತ್ತಾರೆ.
- ↑ ಎರಡರಲ್ಲೂ ಈ ನಷ್ಟದ ನಂತರ ಬ್ರಹ್ಮನು ದುಃಖಿತ ದಕ್ಷನನ್ನು ಸಮಾಧಾನಪಡಿಸಿದನು.
- ↑ ಭಾಗವತ ಪುರಾಣ ಮತ್ತು ಶಿವ ಪುರಾಣದ ಪ್ರಕಾರ, ನಾರದರಿಂದ ದಾರಿತಪ್ಪುವ ಮೊದಲು, ಪುತ್ರರು ಈಗಾಗಲೇ ಸಿಂಧೂ ನದಿಯ ಸಂಗಮದಲ್ಲಿ (ತಮ್ಮ ಕರ್ತವ್ಯವನ್ನು ಪೂರೈಸಲು) ತಪಸ್ಸು ಪ್ರಾರಂಭಿಸಿದ್ದರು. ಬ್ರಹ್ಮ ಪುರಾಣದಲ್ಲಿ ನಾರದನ ಮಾತುಗಳನ್ನು ವಿವರವಾಗಿ ವಿವರಿಸುತ್ತದೆ. ಕೂರ್ಮ ಪುರಾಣವು ಸಬಲಸ್ವರ ಪ್ರಕರಣವನ್ನು ಬಿಟ್ಟುಬಿಡುತ್ತದೆ.
- ↑ ವಾಯು ಪುರಾಣದಲ್ಲಿ, ನಾರದನು ಗರ್ಭದಲ್ಲಿ ಉಳಿಯುವ ಶಾಶ್ವತ ನೋವಿನಿಂದ ಶಾಪಗ್ರಸ್ತನಾಗಿದ್ದಾನೆ. ಕುರ್ಮಾ ಪುರಾಣದಲ್ಲಿ, ಅವನು ವಿಷಯರಹಿತನೆಂದು ಶಾಪಗ್ರಸ್ತನಾಗಿದ್ದಾನೆ.
- ↑ ಮದುವೆ ಪಟ್ಟಿ ಹೀಗಿದೆ:
- 10 (ಅರುಂಧತಿ, ವಾಸು, ಯಾಮಿ, ಲಂಬಾ, ಭಾನು, ಮಾರುತಿ, ಸಂಕಲ್ಪ, ಮುಹೂರ್ತ, ಸಧ್ಯ, ವಿಶ್ವ) ಆ ಹೆಣ್ಣುಮಕ್ಕಳಲ್ಲಿ 13 ಅದಿತಿ, ದಿತಿ, ಧನು, ಅರಿಷ್ಠ, ಸುರಸ, ಖಾಸಾ, ಸುರಭಿ, ವಿನಾತ, ತಾಮ್ರ, ಕ್ರೋಧವಶ, ಇರಾ, ಕಶ್ಯಪ,ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ತಾರಕಂ ಅಥವಾ ಆರ್ದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಜನಕಂ ಅಥವಾ ಮಾಘ, ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತ, ಚಿತ್ರ, ಸ್ವಾತಿ, ವಿಶಾಖ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವ ಆಷಾಢ, ಉತ್ತರ ಆಷಾಢ, ಸ್ರೋಣ ಅಥವಾ ಶ್ರಾವಣ, ಧನಿಷ್ಠ ಅಥವಾ ಶತಭಿಷ, ಅಭಿಜಿತ್
- ↑ ವಿಷ್ಣು ಪುರಾಣ ಈ ಅರವತ್ತು ಹೆಣ್ಣುಮಕ್ಕಳನ್ನು ಅವನ ಮನಸ್ಸಿನಿಂದ ಸೃಷ್ಟಿಸಲಾಗಿದೆ ಎಂದು ಹೇಳುತ್ತದೆ.[೨೧]
ಅಗ್ನಿ ಪುರಾಣವೂ ಇದನ್ನೇ ಹೇಳುತ್ತದೆ.[೨೨] ಇದಲ್ಲದೆ, ಆಸಿಕ್ನಿ ಅಥವಾ ಅವರ 6000 ಪುತ್ರರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.[೨೨] - ↑ ಇದು ಶಿವನು ತನ್ನ ಮದುವೆಗೆ ಬಹಳ ಮುಂಚೆಯೇ, ದೀರ್ಘ ತಪಸ್ಸಿನ ಪರಿಣಾಮವಾಗಿ ದಕ್ಷನಿಗೆ ನೀಡಿದ ವರದ ಫಲಿತಾಂಶವಾಗಿದೆ.
- ↑ ವರಕ್ಕೆ ಅನುಗುಣವಾಗಿ "ಸತಿ" (ಹಿಂದಿನ ಟಿಪ್ಪಣಿಯನ್ನು ನೋಡಿ), ಚಿಕ್ಕ ವಯಸ್ಸಿನಿಂದಲೂ ಶಿವನನ್ನು ಬಯಸಿದಳು ಮತ್ತು ಅವನನ್ನು ಮದುವೆಯಾದಳು. ಅಲ್ಲದೆ, ನೋಡಿ ದಕ್ಷ ಯಜ್ಞ ಪುರಾಣ.
ಉಲ್ಲೇಖಗಳು
[ಬದಲಾಯಿಸಿ]- ↑ Gandhi, Maneka (1993). The Penguin Book of Hindu Names (in ಇಂಗ್ಲಿಷ್). Penguin Books India. p. 39. ISBN 978-0-14-012841-3.
- ↑ Williams, Monier; Leumann, Ernst; Cappeller, Carl (1899). A Sanskrit-English Dictionary: Etymologically and Philologically Arranged with Special Reference to Cognate Indo-European Languages (in ಇಂಗ್ಲಿಷ್). Motilal Banarsidass Publishing House. p. 120. ISBN 978-81-208-3105-6.
- ↑ Habib, Irfan (2001). "Imaging River Sarasvati: A Defence of Commonsense". Social Scientist. 29 (1/2): 48. doi:10.2307/3518272. ISSN 0970-0293. JSTOR 3518272.
- ↑ Sharma, B. R. (1957). "ON SAPTÁ—IN THE ṚGVEDA". Bulletin of the Deccan College Research Institute. 18: 298. ISSN 0045-9801. JSTOR 42930810.
- ↑ Neelis, Jason (2011). "TRADE NETWORKS IN ANCIENT SOUTH ASIA". Early Buddhist Transmission and Trade Networks. Mobility and Exchange within and beyond the Northwestern Borderlands of South Asia. Brill. p. 193. JSTOR 10.1163/j.ctt1w8h16r.9.
- ↑ Salomon, Richard (1979). "Tīrtha-pratyāmnāyāḥ: Ranking of Hindu Pilgrimage Sites in Classical Sanskrit Texts". Zeitschrift der Deutschen Morgenländischen Gesellschaft. 129 (1): 112, 115. ISSN 0341-0137. JSTOR 43376115.
- ↑ ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ Mani, Vettam (1975). "Aksini". Puranic Encyclopedia: a comprehensive dictionary with special reference to the epic and Puranic literature. Delhi, India: Motilal Banarsidass, Delhi. pp. 57–58.
- ↑ ೮.೦ ೮.೧ ೮.೨ ೮.೩ ೮.೪ ೮.೫ Mani, Vettam (1975). "Dakṣa". Puranic Encyclopedia: a comprehensive dictionary with special reference to the epic and Puranic literature. Delhi, India: Motilal Banarsidass. pp. 192–193.
- ↑ ೯.೦ ೯.೧ ೯.೨ ೯.೩ ೯.೪ ೯.೫ Söhnen-Thieme, Renate; Schreiner, Peter (1989). Brahmapurāṇa: Summary of Contents, with Index of Names and Motifs (in ಇಂಗ್ಲಿಷ್). Wiesbaden, Germany: Otto Harrassowitz Verlag. pp. 4–5. ISBN 978-3-447-02960-5.
- ↑ ೧೦.೦ ೧೦.೧ ೧೦.೨ Tagare, Ganesh Vasudeo (1976). The Bhagavata Purana: Part II. Ancient Indian Tradition & Mythology. Vol. 8. Delhi, India: Motilal Banarsidass. pp. 803–809.
- ↑ ೧೧.೦ ೧೧.೧ ೧೧.೨ ೧೧.೩ ೧೧.೪ Shastri, J. L. (1950). The Siva Purana: Part I. Ancient Indian Tradition and Mythology. Vol. 1. Delhi, India: Motilal Banarsidass. pp. 252, 328–335.
- ↑ ೧೨.೦ ೧೨.೧ G. V. Tagare (1958). Brahmanda Purana - English Translation - Part 2 of 5. pp. 407–414.
- ↑ ೧೩.೦ ೧೩.೧ Tagare, G. V. (1988). Bhatt, G. P. (ed.). The Vayu Purana: Part II. Ancient Indian Tradition and Mythology. Vol. 38. Delhi, India: Motilal Banarsidass. pp. 478, 494–497.
- ↑ ೧೪.೦ ೧೪.೧ Motilal Banarsidass Publishers (1951-01-01). Kurma Purana Full (Parts 1 and 2). pp. 142–143, 177.
- ↑ ೧೫.೦ ೧೫.೧ N. A., Dehpande (1988). G. P., Bhatt (ed.). The Padma Purana: Part I. Ancient Indian Tradition And Mythology. Vol. 39. Delhi, India: Motilal Banarsidass. p. 47.
- ↑ ೧೬.೦ ೧೬.೧ J.L. Shastri (1957-01-01). Garuda Purana English Motilal 3 Volumes In 1. pp. 20, 24–25.
- ↑ ೧೭.೦ ೧೭.೧ Klostermaier, Klaus (1985). "THE ORIGINAL DAKṢA SAGA". Journal of South Asian Literature. 20 (1): 96. ISSN 0091-5637. JSTOR 40872713.
- ↑ Long, J. Bruce (1977). "Dakṣa: Divine Embodiment of Creative Skill". History of Religions. 17 (1): 57. doi:10.1086/462778. ISSN 0018-2710. JSTOR 1062496. S2CID 162060462.
- ↑ Shastri, J. L. Ed. The Linga-purana. p. 242.
- ↑ ೨೦.೦ ೨೦.೧ "PUI Cologne Scan". www.sanskrit-lexicon.uni-koeln.de. p. 226, 229. Archived from the original on 2021-07-11. Retrieved 2021-07-11.
- ↑ ೨೧.೦ ೨೧.೧ Hara, Minoru (2009). "Divine Procreation". Indo-Iranian Journal. 52 (2/3): 231. doi:10.1163/001972409X12562030836697. ISSN 0019-7246. JSTOR 24664700.Also, Schreiner, Peter (2013). Visnupurana : Althergebrachte Kunde über Visnu (in German) (2 ed.). Verlag der Weltreligionen im Insel Verlag. ISBN 9783458734956.
{{cite book}}
: CS1 maint: unrecognized language (link) - ↑ ೨೨.೦ ೨೨.೧ J. L. Shastri, G. P. Bhatt (1998-01-01). Agni Purana Unabridged English Motilal. p. 44.