ಅನ್ನಿ ಟೇಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ನಿ ಟೇಲರ್

ಅನ್ನಿ ಗಿಲ್ಬರ್ಟ್ (೩೦ ಜನವರಿ ೧೭೮೨ - ೨೦ ಡಿಸೆಂಬರ್ ೧೮೬೬) ಇವರು ಇಂಗ್ಲಿಷ್ ಕವಯತ್ರಿ ಮತ್ತು ಸಾಹಿತ್ಯ ವಿಮರ್ಶಕಿ. ಇವರು ತಮ್ಮ ಯೌವನದಲ್ಲಿ ಮಕ್ಕಳ ಪದ್ಯಗಳ ಬರಹಗಾರರಾಗಿ ಜನಪ್ರಿಯತೆಯನ್ನು ಗಳಿಸಿದರು. ಮದುವೆಯವರೆಗಿನ ವರ್ಷಗಳಲ್ಲಿ, ಇವರು ಸಂಕೋಚಕ ಸಾಹಿತ್ಯ ವಿಮರ್ಶಕರಾಗಿದರು. ಅವರು ಜೇನ್ ಟೇಲರ್ ಅವರ ಅಕ್ಕ ಮತ್ತು ಸಹಯೋಗಿಯಾಗಿ ನೆನಪಿಸಿಕೊಳ್ಳುತ್ತಾರೆ.

ಕುಟುಂಬ[ಬದಲಾಯಿಸಿ]

ಇವರು ಐಸಾಕ್ ಟೇಲರ್ ಮತ್ತು ಅನ್ನಿ ಟೇಲರ್ ಅವರ ಮಗಳು.[೧] ಅನ್ನಿ ಇಸ್ಲಿಂಗ್ಟನ್‌ನಲ್ಲಿ ಜನಿಸಿದರು. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಇವರ ತಂದೆ ಐಸಾಕ್ ಟೇಲರ್ ಮತ್ತು ಅಜ್ಜ ಇಬ್ಬರೂ ಕೆತ್ತನೆಗಾರರು. ಆಕೆಯ ತಂದೆ ನಂತರ ಶೈಕ್ಷಣಿಕ ಪ್ರವರ್ತಕ ಮತ್ತು ಸ್ವತಂತ್ರ ಮಂತ್ರಿಯಾದರು. ಯುವಕರಿಗೆ ಹಲವಾರು ಸೂಚನಾ ಪುಸ್ತಕಗಳನ್ನು ಬರೆದರು. ಅವರ ತಾಯಿ, ಶ್ರೀಮತಿ (ಆನ್ ಮಾರ್ಟಿನ್) ಟೇಲರ್ (೧೭೫೭-೧೮೩೦) ಅವರು ನೈತಿಕ ಮತ್ತು ಧಾರ್ಮಿಕ ಸಲಹೆಯ ಏಳು ಕೃತಿಗಳನ್ನು ಬರೆದರು. ಅವುಗಳಲ್ಲಿ ಎರಡು ಕಾಲ್ಪನಿಕವಾಗಿದೆ.

ಅನ್ನಿ ಅವರ ಸಹೋದರ ಐಸಾಕ್ ಇವರು ದೇವತಾಶಾಸ್ತ್ರಜ್ಞದ ಬಗ್ಗೆ ಲೇಖನವನ್ನು ಬರೆದರು. ಅವರ ಹಿರಿಯ ಸಹೋದರ ಚಾರ್ಲ್ಸ್ ಟೇಲರ್ ಅವರು ದಿ ಲಿಟರರಿ ಪನೋರಮಾವನ್ನು ಸಂಪಾದಿಸಿದರು. ಅವರ ಕಿರಿಯ ಸಹೋದರ ಜೋಸಿಯಾ ವಾಸ್ತುಶಿಲ್ಪ ಮತ್ತು ವಿನ್ಯಾಸದ ಕೃತಿಗಳನ್ನು ರಚಿಸಿದರು.

ಕರ್ತೃತ್ವ[ಬದಲಾಯಿಸಿ]

ವಯಸ್ಕ ಓದುಗರಿಗಾಗಿ ಕವನ ಬರೆಯುವ ಲೇಖಕಿಯಾಗಿ ಜೇನ್ ಆನ್‌ಗಿಂತ ಹೆಚ್ಚಾಗಿ ಸಾಧನೆ ಮಾಡಿದ್ದಾರೆ. ೧೮೧೦ ರಂದು ಅಸೋಸಿಯೇಟ್ ಮಿನ್‌ಸ್ಟ್ರೆಲ್ಸ್‌ನಲ್ಲಿ ಆನ್‌ನ "ದಿ ಮ್ಯಾನಿಯಕ್ಸ್ ಸಾಂಗ್" ಕವಿತೆ ಪ್ರಕಟವಾಗಿದೆ. ಇದು ಅವರ ಅತ್ಯುತ್ತಮ ಸಣ್ಣ ಕವಿತೆಯಾಗಿದೆ ಮತ್ತು ಇದನ್ನು ಕೀಟ್ಸ್‌ನ ಲಾ ಬೆಲ್ಲೆ ಡೇಮ್ ಸಾನ್ಸ್ ಮರ್ಸಿಗೆ ಸ್ಫೂರ್ತಿ ಎಂದು ಪ್ರತಿಪಾದಿಸಲಾಗಿದೆ.[೨]

ಅನ್ನಿ ಟೇಲರ್ ಗದ್ಯದ ಬರಹಗಾರರಾಗಿ ನೆನಪಿಸಿಕೊಳ್ಳತ್ತಾರೆ. ಆತ್ಮಚರಿತ್ರೆಯು ೧೮ನೇ ಶತಮಾನದ ಉತ್ತರಾರ್ಧದ ಮತ್ತು ೧೯ನೇ ಶತಮಾನದ ಆರಂಭವು ಅವರ ಕುಟುಂಬದ ಜೀವನದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.[೩]

ಮೆಚ್ಚುಗೆಗಳು[ಬದಲಾಯಿಸಿ]

ಅನ್ನಿ ಟೇಲರ್ ಅವರ ಮಗ ಜೋಸಿಯಾ ಗಿಲ್ಬರ್ಟ್ ಅವರು ಅನ್ನಿ ಟೇಲರ್ ಅವರಿಗೆ 'ಮೈ ಮದರ್' ಮತ್ತು 'ದಿ ಸ್ಟಾರ್' ಎಂಬ ಎರಡು ಕವನವನ್ನು ಬರೆದರು. ಈ ಎರಡೂ ಕವಿತೆಗಳು ೧೯ ನೇ ಶತಮಾನದಲ್ಲಿ ರಚನೆಯಾಗಿದೆ. ಇದು ಅವರ ಮೆಚ್ಚುಗೆಯನ್ನು ವಿವರಿಸುತ್ತದೆ.[೪]

೧೮೦೬ರಲ್ಲಿ ಅನ್ನಿ ಮತ್ತು ಜೇನ್ ಟೇಲರ್ ರ ರೈಮ್ಸ್ ಫಾರ್ ದಿ ನರ್ಸರಿ ಮತ್ತು ೧೮೦೮ ರಲ್ಲಿ ಹೈಮ್ಸ್ ಫಾರ್ ಇನ್‌ಫ್ಯಾಂಟ್ ಮೈಂಡ್ಸ್ ಮೂಲ ಕವಿತೆಗಳಲ್ಲಿ ಪ್ರತಿ ಕವಿತೆಗೆ ಲೇಖಕರನ್ನು ಗುರುತಿಸಲಾಗಿದೆ. ಅವರ ಕವಿತೆಗಳ ಗುಣಲಕ್ಷಣಗಳನ್ನು ಅಸಾಧಾರಣ ಸಂಪನ್ಮೂಲದಲ್ಲಿ ಕಾಣಬಹುದು. ದ ಟೇಲರ್ಸ್ ಆಫ್ ಒಂಗರ್: ಕ್ರಿಸ್ಟಿನಾ ಡಫ್ ಸ್ಟೀವರ್ಟ್ ಅವರ ಬಯೋ-ಬಿಬ್ಲಿಯೋಗ್ರಫಿ.[೫]

ವಿವಾಹ[ಬದಲಾಯಿಸಿ]

೨೪ ಡಿಸೆಂಬರ್ ೧೮೧೩ ರಂದು, ಅನ್ನಿ ಮಂತ್ರಿ ಮತ್ತು ದೇವತಾಶಾಸ್ತ್ರಜ್ಞ ಜೋಸೆಫ್ ಗಿಲ್ಬರ್ಟ್ ಅವರನ್ನು ವಿವಾಹವಾದರು. ರೊಥರ್‌ಹ್ಯಾಮ್ ಬಳಿಯ ಮಾಸ್ಬರೋದಲ್ಲಿ ತನ್ನ ಕುಟುಂಬದಿಂದ ದೂರವಿರುವ ಹೊಸ ಮನೆಗೆ ತೊರೆದರು. ಆಕೆಯ ಬರಹಗಳಿಂದ ಆಕೆಯ ಪಾತ್ರ ಮತ್ತು ಬುದ್ಧಿವಂತಿಕೆಯ ಬಗ್ಗೆ ಅಂದಾಜು ಮಾಡಿದರು. ಗಿಲ್ಬರ್ಟ್ ಅವರ ವಿವಾಹದ ಸಮಯದಲ್ಲಿ ರೋದರ್‌ಹ್ಯಾಮ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ಕ್ಲಾಸಿಕ್ಸ್ ಬೋಧಕರಾಗಿದರು. ೧೮೧೭ರಲ್ಲಿ, ಅವರು ಹಲ್‌ನಲ್ಲಿರುವ ಫಿಶ್ ಸ್ಟ್ರೀಟ್ ಚಾಪೆಲ್‌ನ ಪಾದ್ರಿಗಳಿಗೆ ತೆರಳಿದರು, ನಂತರ ೧೮೨೫ ರಲ್ಲಿ ನಾಟಿಂಗ್‌ಹ್ಯಾಮ್‌ಗೆ ತೆರಳಿದರು. ಉಳಿದ ಜೀವನಕ್ಕಾಗಿ ಅವರು ಚಾಪೆಲ್‌ಗಳಲ್ಲಿ ಸೇವೆ ಸಲ್ಲಿಸಿದರು.[೬]

ಪತ್ನಿಯ ಕರ್ತವ್ಯಗಳಲ್ಲಿ ನಿರತರಾದ್ದಾಗ, ಅನ್ನಿ ಗಿಲ್ಬರ್ಟ್ ಮತ್ತಷ್ಟು ಕವಿತೆಗಳು, ಸ್ತೋತ್ರಗಳು, ಪ್ರಬಂಧಗಳು ಮತ್ತು ಪತ್ರಗಳನ್ನು ಬರೆಯುವಲ್ಲಿ ಯಶಸ್ವಿಯಾದರು. ನಾಸ್ತಿಕತೆ, ಜೈಲು ಸುಧಾರಣೆ ಮತ್ತು ಗುಲಾಮಗಿರಿ-ವಿರೋಧಿ ಚಳುವಳಿಯಂತಹ ಸಾರ್ವಜನಿಕ ವಿಷಯಗಳಲ್ಲಿ ಆಕೆಯ ಆಸಕ್ತಿಯು ಮುದ್ರಣಕ್ಕೆ ದಾರಿ ಕಂಡುಕೊಂಡವು. ಇವರು ಸ್ತ್ರೀ ಮತದಾನದ ಹಕ್ಕನ್ನು ದೃಢವಾಗಿ ವಿರೋಧಿಸಿದರು.[೭]

ಗಿಲ್ಬರ್ಟ್ ೧೨ ಡಿಸೆಂಬರ್ ೧೮೫೨ ರಂದು ನಿಧನರಾದ ನಂತರ, ಅನ್ನಿ ಅವರ ಆತ್ಮಚರಿತ್ರೆಯನ್ನು ಬರೆದರು. ಇವರು ೨೦ ಡಿಸೆಂಬರ್ ೧೮೬೬ ರಂದು ನಿಧನರಾದರು ಅವರ ಸಮಾದಿಯನ್ನು ನಾಟಿಂಗ್ಹ್ಯಾಮ್ ಜನರಲ್ ಸ್ಮಶಾನದಲ್ಲಿ ಅವರ ಗಂಡನ ಸಮಾಧಿ ಪಕ್ಕದಲ್ಲಿ ಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. https://www.oxforddnb.com/view/10.1093/ref:odnb/9780198614128.001.0001/odnb-9780198614128-e-27018
  2. ANQ, Vol. 17, Issue 1 (2004).
  3. Donelle Ruwe, "The Rational Gothic: The Case of Ann Taylor's 'The Hand-Post'" in Aesthetics of Children's Poetry. Ed. Louise Joy and Katherine Wakely-Mulroney. Routledge, 2018, pp. 94–108.
  4. Athenaeum, 12 May 1866; see also AOMMG, vol 1, pp. 228–231. The Autobiography and Other Memorials of Mrs Gilbert, formerly Ann Taylor, edited by Josiah Gilbert, London: Henry S. King & Co., 1874.
  5. New York/London: Garland Publishing, 1975.
  6. Donelle Ruwe, "Poetry in Picturebooks", in Routledge Companion to Picturebooks. Ed. Bettina Kummerling-Meibauer. Routledge, 2018, pp. 246–259.
  7. "Walter Crane, "My Mother"". University of Florida, Baldwin Library of Historical Children's Literature.