ಗಿಲಿಯನ್ ಬೇವರ್‌ಸ್ಟಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಲಿಯನ್ ಬೇವರ್‌ಸ್ಟಾಕ್
ಜನನಗಿಲಿಯನ್ ಮೇರಿ ಬೇವರ್‌ಸ್ಟಾಕ್
(೧೯೩೧-೦೭-೧೫)೧೫ ಜುಲೈ ೧೯೩೧
ಬೋರ್ನ್ ಎಂಡ್, ಬಕಿಂಗ್ಹ್ಯಾಮ್ಶೈರ್, ಇಂಗ್ಲೆಂಡ್
ಮರಣ24 June 2007(2007-06-24) (aged 75)
ಇಲ್ಕ್ಲೆ, ವೆಸ್ಟ್ ಯಾರ್ಕ್‌ಷೈರ್, ಇಂಗ್ಲೆಂಡ್
ವೃತ್ತಿಬರಹಗಾರ್ತಿ
ವಿದ್ಯಾಭ್ಯಾಸಬೆನೆಂಡೆನ್ ಶಾಲೆ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯ
ಬಾಳ ಸಂಗಾತಿಡೊನಾಲ್ಡ್ ಬೇವರ್‌ಸ್ಟಾಕ್ (ವಿವಾಹ 1957; ಮರಣ 1995)
ಮಕ್ಕಳು
ಸಂಬಂಧಿಗಳುರೋಸ್ಮರಿ ಪೊಲಾಕ್ (ಮಲ-ಸಹೋದರಿ)

ಗಿಲಿಯನ್ ಮೇರಿ ಬೇವರ್‌ಸ್ಟಾಕ್ (ಜನನ ಪೊಲಾಕ್; ೧೫ ಜುಲೈ ೧೯೩೧ - ೨೪ ಜೂನ್ ೨೦೦೭) ಒಬ್ಬ ಬ್ರಿಟಿಷ್ ಲೇಖಕ, ಕಾಲ್ಪನಿಕವಲ್ಲದ ಬರಹಗಾರ್ತಿ ಮತ್ತು ಆತ್ಮಚರಿತ್ರೆಕಾರ. ಗಿಲಿಯನ್ ಬೇವರ್‌ಸ್ಟಾಕ್ ಅವರು ಇಂಗ್ಲಿಷ್ ಕಾದಂಬರಿಕಾರ ಎನಿಡ್ ಬ್ಲೈಟನ್ ಮತ್ತು ಹಗ್ ಪೊಲಾಕ್ ಅವರ ಹಿರಿಯ ಮಗಳು. ಹಗ್ ಪೊಲಾಕ್ ಅವರು ಎನಿಡ್ ಬ್ಲೈಟನ್ ಅವರ ಮೊದಲ ಪತಿ.

ಆರಂಭಿಕ ಜೀವನ[ಬದಲಾಯಿಸಿ]

ಗಿಲಿಯನ್ ಮೇರಿ ಪೊಲಾಕ್ ಅವರು ೧೫ ಜುಲೈ ೧೯೩೧ ರಂದು ಜನಿಸಿದರು. ಅವರು ಎನಿಡ್ ಬ್ಲೈಟನ್ (೧೮೯೭-೧೯೬೮) ಮತ್ತು ಮೇಜರ್ ಹಗ್ ಪೊಲಾಕ್ (೧೮೮೮-೧೯೭೧) ಅವರ ಮಗಳು. ೨೭ ಅಕ್ಟೋಬರ್ ೧೯೩೫ ರಂದು, ಅವರ ಕಿರಿಯ ಸಹೋದರಿ, ಇಮೋಜೆನ್ ಮೇರಿ ಪೊಲಾಕ್ ಅವರು ಜನಿಸಿದರು. ಅವರು ೧೨ ವರ್ಷದವಳಿದ್ದಾಗ ಮತ್ತು ಅವಳ ಸಹೋದರಿ ೮ ವರ್ಷದವಳಿದ್ದಾಗ, ಅವರ ಪೋಷಕರು ವಿಚ್ಛೇದನ ಪಡೆದರು. ಅವರ ತಾಯಿ ನಂತರ ಶಸ್ತ್ರಚಿಕಿತ್ಸಕ ಕೆನ್ನೆತ್ ಫ್ರೇಸರ್ ಡ್ಯಾರೆಲ್ ವಾಟರ್ಸ್ (೧೮೯೨-೧೯೬೭) ಅವರನ್ನು ವಿವಾಹವಾದರು. ಅವರ ತಂದೆ ಬರಹಗಾರ ಇಡಾ ಕ್ರೋವ್ ಅವರನ್ನು ವಿವಾಹವಾದರು. ನಂತರ ಅವರಿಗೆ ರೋಸ್ಮರಿ ಪೊಲಾಕ್ ಎಂಬ ಮಗಳು ಜನಿಸಿದಳು.[೧]

ಗಿಲಿಯನ್ ಪೊಲಾಕ್ ಅವರು ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಬಾಲಕಿಯರ ಬೋರ್ಡಿಂಗ್ ಸ್ವತಂತ್ರ ಶಾಲೆಯಾದ ಬೆನೆಂಡೆನ್ ಸ್ಕೂಲ್‌ನಲ್ಲಿ ಶಿಕ್ಷಣವನ್ನು ಪಡೆದರು. ನಂತರ ಸ್ಕಾಟ್‌ಲ್ಯಾಂಡ್‌ನ ಫೈಫ್‌ನಲ್ಲಿರುವ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದರು.

ವೃತ್ತಿ[ಬದಲಾಯಿಸಿ]

ಬೇವರ್‌ಸ್ಟಾಕ್ ಅವರು ಇಲ್ಕ್ಲೆಯ ಮೂರ್‌ಫೀಲ್ಡ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.[೨]

ಕ್ವಿಲ್ ಪಬ್ಲಿಕೇಷನ್ಸ್, ಲಿಮಿಟೆಡ್[ಬದಲಾಯಿಸಿ]

೧೯೯೯ ರಲ್ಲಿ, ಮಕ್ಕಳ ಕಾಮಿಕ್ ಪುಸ್ತಕ ಬ್ಲೂ ಮೂನ್‌ನ ಹನ್ನೆರಡು ಆವೃತ್ತಿಗಳನ್ನು ತಯಾರಿಸಲು ಕಾಮಿಕ್ ಬರಹಗಾರ ಟಿಮ್ ಕ್ವಿನ್‌ನೊಂದಿಗೆ ಬೇವರ್‌ಸ್ಟಾಕ್ ಅವರು ಕ್ವಿಲ್ ಪಬ್ಲಿಕೇಷನ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಅವರು "ಸ್ಲೀಪಿಂಗ್ ಬ್ಯೂಟಿ" ಮತ್ತು "ಲಿಟಲ್ ರೆಡ್ ರೈಡಿಂಗ್ ಹುಡ್" ನಂತಹ ಕಾಲ್ಪನಿಕ ಕಥೆಗಳನ್ನು ಆಧರಿಸಿದ ಕಥೆಗಳ ಸರಣಿಯನ್ನು ಬರೆದಿದ್ದಾರೆ.[೩]

ಗೋಚರತೆಗಳು[ಬದಲಾಯಿಸಿ]

  • ಎಡಿನ್‌ಬರ್ಗ್ ಬುಕ್ ಫೆಸ್ಟಿವಲ್, "ಗ್ರೋಯಿಂಗ್ ಅಪ್ ವಿತ್ ಎನಿಡ್ ಬ್ಲೈಟನ್", ೨೬ ಆಗಸ್ಟ್ ೨೦೦೬.[೪]
  • ಆಕ್ಸ್‌ಫರ್ಡ್ ಲಿಟರರಿ ಫೆಸ್ಟಿವಲ್, "ಎನಿಡ್ ಬ್ಲೈಟನ್", ೨೫ ಮಾರ್ಚ್ ೨೦೦೭.[೫]

ವೈಯಕ್ತಿಕ ಜೀವನ[ಬದಲಾಯಿಸಿ]

೧೯೫೭ ರಲ್ಲಿ, ಪೊಲಾಕ್ ಅವರು ಬಿಬಿಸಿ(BBC) ನಿರ್ಮಾಪಕ ಮತ್ತು ಕಾರ್ಯನಿರ್ವಾಹಕನಾದ ಡೊನಾಲ್ಡ್ ಬೇವರ್‌ಸ್ಟಾಕ್ ಅವರನ್ನು ಪಿಕ್ಕಾಡಿಲಿಯ ಸೇಂಟ್ ಜೇಮ್ಸ್ ಚರ್ಚ್‌ನಲ್ಲಿ ವಿವಾಹವಾದರು. ಅವರಿಬ್ಬರಿಗೆ ನಾಲ್ಕು ಜನ ಮಕ್ಕಳಿದ್ದರು: ಗ್ಲಿನ್ (ಬಿ. ೧೯೬೧, ಡಿ. ೧೯೮೩, ಕಾರು ಅಪಘಾತ), ಸಿಯಾನ್ (ಬಿ. ೧೯೫೮, ಡಿ. ೨೦೦೬, ಹೃದಯಾಘಾತ), ಸಾರಾ ಮತ್ತು ಓವೈನ್. ಅವರ ಪತಿಯ ಮರಣದ ನಂತರ, ಅವರು ಇಂಗ್ಲೆಂಡಿನ ಇಲ್ಕ್ಲಿಯಲ್ಲಿ ವಾಸಿಸುತ್ತಿದ್ದರು.

ಮರಣ[ಬದಲಾಯಿಸಿ]

೨೪ ಜೂನ್ ೨೦೦೭ ರಂದು ಇಲ್ಕ್ಲಿಯಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ನಿಧನವನ್ನು ಹೊಂದಿದರು.[೬] ಬೇವರ್‌ಸ್ಟಾಕ್ ಅವರು ತನ್ನ ನಾಲ್ವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಮತ್ತು ಐದು ಮೊಮ್ಮಕ್ಕಳು ಗ್ಲಿಂಡ್ವರ್, ಡೊಮಿನಿಕ್, ಜೊಯಿ, ಅಲೆಕ್ ಮತ್ತು ಜಾರ್ಜಿನಾ ಜೊತೆ ವಾಸಿಸುತ್ತಿದ್ದರು.

ಗ್ರಂಥಸೂಚಿ[ಬದಲಾಯಿಸಿ]

  • Gillian Baverstock, Enid Blyton, Tell Me About Series, Evans Brothers, 1997 ISBN 0-237-51751-5
  • Gillian Baverstock, Memories of Enid Blyton, Telling Tales Series, Mammoth, 2000 ISBN 0-7497-4275-5

ಉಲ್ಲೇಖಗಳು[ಬದಲಾಯಿಸಿ]

  1. https://alchetron.com/Gillian-Baverstock
  2. Unhappy families by Gyles Brandreth in The Daily Telegraph, 30 March 2002 (accessed 19 November 2009)
  3. Publisher rejected Blyton tale for being 'xenophobic' by Chris Hastings (Arts Correspondent) in The Daily Telegraph, 19 November 2005 (accessed 25 August 2007)
  4. "Growing Up with Enid Blyton", Audio recording and transcript[ಶಾಶ್ವತವಾಗಿ ಮಡಿದ ಕೊಂಡಿ] (Accessed 20 May 2009)
  5. Oxford Literary Festival 2007 Archived 2008-01-21 ವೇಬ್ಯಾಕ್ ಮೆಷಿನ್ ನಲ್ಲಿ. (Accessed 10 May 2007) A critical response to her appearance is at http://www.dailyinfo.co.uk/reviews/feature/1765/Sunday-Times-Oxford-Literary-Fest
  6. https://www.telegraph.co.uk/news/obituaries/1555952/Gillian-Baverstock.html