ಕಾಮದೇವ
ಗೋಚರ
(ಅಂಗಜಾತ ಇಂದ ಪುನರ್ನಿರ್ದೇಶಿತ)
ಮಾರ ಎಂದೂ ಕರೆಯಲ್ಪಡುವ ಕಾಮದೇವನು ಮಾನವ ಪ್ರೇಮ ಹಾಗೂ ಬಯಕೆಯ ಹಿಂದೂ ದೇವತೆ. ಮನ್ಮಥ', 'ಕಂದರ್ಪ', ಅತನು,ಮದನ', 'ದರ್ಶಕ, ', ರತಿಕಾಂತ, ಕುಸುಮಶರ ಅಥವಾ ಕಾಮ ಅವನ ಇತರ ಹೆಸರುಗಳು. ಕಾಮದೇವನು ಹಿಂದೂ ದೇವತೆ ಶ್ರೀಯ ಮಗ ಮತ್ತು ಜೊತೆಗೆ ಕೃಷ್ಣನ ಮಗನಾದ ಪ್ರದ್ಯುಮ್ನನು ಕಾಮದೇವನ ಅವತಾರನೆಂದು ಪರಿಗಣಿಸಲಾಗುತ್ತದೆ. ಇವನು ಒಂದೊಮ್ಮೆ ಶಿವನ ಮೂರನೇ ಕಣ್ಣಿನ ಅಗ್ನಿಗೆ ಆಹುತಿಯಾಗಿ ಮತ್ತೆ ಇವನ ಬೂದಿಯಲ್ಲಿ ಚಿತ್ರಲೇಖ ಎಂಬ ಗಂಧರ್ವ ಕನ್ಯೆಯಿಂದ ಪುನರ್ ಹುಟ್ಟು ಪಡೆದ. ಇವನ ಪತ್ನಿಯೇ ರತಿ.. ( ಕಮಲಭೂಪನ ಮಗಳು). ಇವರಿಬ್ಬರ ವಿವಾಹ ಗತ ಜನ್ಮದಲ್ಲೇ ನಿಗದಿಯಾಗಿದ್ದು, ಈ ವಿವಾಹಕ್ಕೆ ಕೌಂಡ್ಲಿಕ ಎಂಬ ರಾಕ್ಷಸ ಅಡ್ಡಿಯಾದ..ಇವನನ್ನು ದ್ರೌಪದಿಯೊಬ್ಬಳೆ ಯುದ್ದದಲ್ಲಿ ಗೆದ್ದು ಕೊಂದಳು...