ಕೈಬೆರಳು
ಗೋಚರ
(ಅಂಗುಲಿ ಇಂದ ಪುನರ್ನಿರ್ದೇಶಿತ)
ಕೈಬೆರಳು ಮಾನವ ಶರೀರದ ಒಂದು ಅವಯವ ಮತ್ತು ಒಂದು ಬಗೆಯ ಬೆರಳು, ಅಂದರೆ ಮನುಷ್ಯರು ಮತ್ತು ಇತರ ಪ್ರೈಮೇಟ್‍ಗಳ ಹಸ್ತಗಳಲ್ಲಿ ಕಂಡುಬರುವ ಕುಶಲ ಬಳಕೆ ಮತ್ತು ಸಂವೇದನೆಯ ಅಂಗ. ಸಾಮಾನ್ಯವಾಗಿ ಮಾನವರು ಪ್ರತಿ ಹಸ್ತದಲ್ಲಿ ಐದು ಬೆರಳುಗಳನ್ನು ಹೊಂದಿರುತ್ತಾರೆ, ಮತ್ತು ಇವುಗಳ ಮೂಳೆಗಳನ್ನು ಫ಼ೇಲ್ಯಾಂಕ್ಸ್‌ಗಳು ಎಂದು ಕರೆಯಲಾಗುತ್ತದೆ. ಆದರೆ ಕೆಲವರು ಬಹುಬೆರಳು ಸ್ಥಿತಿ ಅಥವಾ ಅಲ್ಪಬೆರಳು ಸ್ಥಿತಿಯಂತಹ ಜನ್ಮಜಾತ ಅಸ್ವಸ್ಥತೆಗಳು ಅಥವಾ ಆಕಸ್ಮಿಕ ಅಥವಾ ವೈದ್ಯಕೀಯ ಅಂಗಚ್ಛೇದನೆಗಳ ಕಾರಣ ಐದಕ್ಕಿಂತ ಹೆಚ್ಚು ಅಥವಾ ಕಡಿಮೆ ಬೆರಳುಗಳನ್ನು ಹೊಂದಿರಬಹುದು. ಮೊದಲ ಬೆರಳು ಹೆಬ್ಬೆರಳು, ನಂತರ ತೋರು ಬೆರಳು, ನಡುಬೆರಳು, ಉಂಗುರದ ಬೆರಳು, ಮತ್ತು ಕಿರುಬೆರಳು..[೧][೨]
ಜನನಾಂಗಗಳನ್ನು ಬಿಟ್ಟರೆ, ಬೆರಳತುದಿಗಳು ಮಾನವ ತ್ವಚೆಯ ಎಲ್ಲ ಪ್ರದೇಶಗಳ ಪೈಕಿ ಗರಿಷ್ಠ ಪ್ರಮಾಣದ ಸ್ಪರ್ಶ ಗ್ರಾಹಕಗಳು ಮತ್ತು ಉಷ್ಣ ಗ್ರಾಹಕಗಳನ್ನು ಹೊಂದಿವೆ, ಮತ್ತು ಹಾಗಾಗಿ ಅವು ಉಷ್ಣತೆ, ಒತ್ತಡ, ಕಂಪನ, ರಚನೆ ಮತ್ತು ತೇವಾಂಶಕ್ಕೆ ತೀವ್ರ ಸಂವೇದಿಯಾಗಿವೆ.
ಉಲ್ಲೇಖಗಳು
[ಬದಲಾಯಿಸಿ]