ಸೊಯುಜ್ ಕೋಶ ಟಿಎಮ್ಎ-20ಎಮ್
ಗೋಚರ
(ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಸೊಯುಜ್ ಟಿಎಮ್ಎ-೨೦ಎಮ್ ಇಂದ ಪುನರ್ನಿರ್ದೇಶಿತ)
ಪೀಠಿಕೆ
[ಬದಲಾಯಿಸಿ]*
- ಕಾರ್ಯ ನಿರ್ವಾಹಕ = ರೊಸ್ಕೊಸ್ಮೊಸ್
- ಸಿಓಎಸ್ಪಿಎಆರ್ ಐಡಿ -ಗುರುತು=2016-018 ಂ
- ಎಸ್.ಎ.ಟಿ.ಸಿ.ಎ.ಟಿ. =41391
- ಬಾಹ್ಯಾಕಾಶ ಗುಣಗಳು
- ನೌಕೆ ಹೆಸರು=
- ತಯಾರಕ = ಆರ್.ಕೆಕೆ ಎನರ್ಜಿಯ
- ಸಿಬ್ಬಂದಿ =ಜೆಫ್ ವಿಲಿಯಮ್ಸ್ (58),;ಅಲೆಕ್ಸೆ ಒವ್ಚಿನಿನ್,; ಒಲೆಗ್ ಸ್ಕ್ರಿಪೋಛ್ಕಾ
- ಕರೆ ಚಿಹ್ನೆ = ಬು¯ರ್Àಕ್
- ಕಾರ್ಯಾಚರಣೆಯ ಆರಂಭ
- ಉಡಾವಣೆ ದಿನಾಂಕ = ಮಾರ್ಚ್ 18, 2016
- ರಾಕೆಟ್ = ಸೊಯಜ್ ಎಫ್ ಜಿ
- ಉಡಾವಣೆ ಸ್ಥಳ = ಬಲ್ಕನುರ್ 1/5
- ಪ್ರದಕ್ಷಿಣ ಕ್ರಮ = ಭೂ ಕೇಂದ್ರ
- ರೆಜೀಮ್ = ಭೂ ತಲ
- ಡಾಕಿಂಗ್ ದಿನಾಂಕ ಮಾರ್ಚ್ 19, 2016
- ಡಾಕಿಂಗ್ ದಿನಾಂಕ ಮಾರ್ಚ್ 19, 2016
- ಭೂ ಸ್ಪರ್ಷ = ಸೆಪ್ಟಂಬರ್ 6, 2016
- ಸೊಯುಜ್ (ಅಥವಾ ಸಾಯೂಜ್) ರಷ್ಯಾದ ಬಾಹ್ಯಾಕಾಶ ನೌಕೆ. ಸೊಯುಜ್ ಮತ್ತು ಬಾಹ್ಯಾಕಾಶ ನಿಲ್ದಾಣದಿಂದ ಜನರನ್ನು ಮತ್ತು ಪೂರೈಕೆಗಳನ್ನು ಒಯ್ಯುತ್ತದೆ. ಸೊಯುಜ್ ಜನರನ್ನು ಸಹ ಭೂಮಿಗೆ ತರಬಹುದು.
- ರಶಿಯಾ ಒಂದು ದೊಡ್ಡ ದೇಶ. ರಶಿಯಾವು ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ (ಯುನೈಟೆಡ್ ಸ್ಟೇಟ್ಸ್ಗೆ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕ್ರಿಯಾಯೋಜನೆಯಲ್ಲಿ ಸಹಾಯ ಮಾಡುವುದು.. ಇತರ ದೇಶಗಳೂ ಬಾಹ್ಯಾಕಾಶ ನಿಲ್ದಾಣದ ಕೆಲಸದಲ್ಲಿ ಸಹಾಯ ಮಾಡುವುವು. . ಆದರೆ ಈಗ ಸಧ್ಯದಲ್ಲಿ ರಷ್ಯಾದ ಬಾಹ್ಯಾಕಾಶ ನೌಕೆ ಮಾತ್ರಾ ಜನರು ಮತ್ತು ಸಾಮಗ್ರಿ ಸಾಗಿಸುವ ಕೆಲಸ ಮಢುತ್ತದೆ.
- ರಷ್ಯಾ, ಯುನೈಟೆಡ್ ಸ್ಟೇಟ್ಸ್-ನಾಸಾ, ಯುರೋಪ್, ಕೆನಡಾ ಮತ್ತು ಜಪಾನ್ ಈ ಎಲ್ಲಾ ಸಿಬ್ಬಂದಿಘಳನ್ನು ಗಗನಯಾತ್ರಿಗಳು ಎಂದು ಕರೆಯಲಾಗುತ್ತದೆ.
- ಸೊಯುಜ್ ಕೋಶ ನೌಕೆ ಬಾಹ್ಯಾಕಾಶ ನಿಲ್ದಾಣದಿಂದ ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕೊಂಡೊಯ್ಯುತ್ತದೆ ಮತ್ತು ಗಗನಯಾತ್ರಿಗಳು ಕರೆತರುತ್ತದೆ. ಸೊಯುಜ್ ನಲ್ಲಿ- ಮೂರು ಜನರ ಯಾನಕ್ಕೆ ಕೊಠಡಿ ಹೊಂದಿದೆ. ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶ ನಿಲ್ದಾಣಕ್ಕೆ ಆಹಾರ ಮತ್ತು ನೀರಿನ್ನೂ ಒಯ್ಯುತ್ತದೆ.
- ಸೊಯುಜ್ ಒಂದು ದಡದಿಂದ ಇನ್ನೋದು ದಡಕ್ಕೆ ಸಂಪರ್ಕದ ದೋಣಿ ಹಾಗೆ. ಕನಿಷ್ಠ ಒಂದು ಸೊಯುಜ್ ಯಾವಾಗಲೂ ಬಾಹ್ಯಾಕಾಶ ನಿಲ್ದಾಣಕ್ಕೆ ಲಗತ್ತಿಸಲಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಇದ್ದ ವೇಳೆ, ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣ ಬಿಡಲು ಈ ಸೊಯುಜ್ ಬಳಸಲು ಮತ್ತು ಭೂಮಿಗೆ ಹಿಂದಿರುಗಲು ಉಪಯೋಗ.[೧]
ಸೊಯುಜ್ ಭಾಗಗಳು
[ಬದಲಾಯಿಸಿ]- ಸೊಯುಜ್ ಎರಡು ಭಾಗಗಳನ್ನು ಹೊಂದಿದೆ. ಒಂದು ಭಾಗವು ಸೊಯುಜ್ ಬೀಜಕೋಶವಾಗಿರುತ್ತದೆ. ಎರಡನೇ ಭಾಗ ಸೊಯುಜ್ ರಾಕೆಟ್. ಸೊಯುಜ್ ಕೋಶ(ಕ್ಯಾಪ್ಸುಲ್) ಸೊಯುಜ್ ರಾಕೆಟ್ ಮೇಲೆ ಕೂರುತ್ತದೆ. ಕ್ಯಾಪ್ಸುಲ್ ಮೂರು ಭಾಗಗಳನ್ನು ಹೊಂದಿದೆ. ಭಾಗಗಳನ್ನು ಮಾಡ್ಯೂಲ್ ಕರೆಯಲಾಗುತ್ತದೆ.
- ಕ್ಯಾಪ್ಸುಲ್ ಮೊದಲ ಭಾಗ ಆರ್ಬಿಟಲ್ ಘಟಕ ಹೊಂದಿದೆ. ಅವರು ಕಕ್ಷೆಯಲ್ಲಿರುವ ಸಂದರ್ಭದಲ್ಲಿ, ಸಿಬ್ಬಂದಿ ಆರ್ಬಿಟಲ್ ಮಾಡ್ಯೂಲ್ ನಲ್ಲಿ ವಾಸಿಸುತ್ತಾರೆ. ಈ ಘಟಕವು ದೊಡ್ಡ ವ್ಯಾನ್ ಗಾತ್ರದಷ್ಟಿದೆ.ಇದರಿಂದ ಕಕ್ಷೀಯ ಮಾಡ್ಯೂಲ್ನಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಪರ್ಕಿಸಬಹುದು.
- ಕ್ಯಾಪ್ಸುಲ್ ಎರಡನೇ ಭಾಗ ಇಳಿಯುವ (ಡಿಸೆಂಟ್) ಘಟಕ ಹೊಂದಿದೆ.. ಸೊಯುಜ್ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಪ್ರಾರಂಭ ಮಾಡಿದಾಗ ಸಿಬ್ಬಂದಿ ಈ ಭಾಗದಲ್ಲಿ ಇರುವರು. ಅವರು ಭೂಮಿಯ ಮೇಲೆ ಇಳಿಯುವಾಗ ಅವರೋಹಣ ಘಟಕವನ್ನು ಬಳಸುವರು.
- ಮೂರನೆಯ ಘಟಕ ಜೀವಾಧಾರಕ ವ್ಯವಸ್ಥೆಗಳು ನೆಲೆಯಾಗಿದೆ. ಇದು ಬ್ಯಾಟರಿಗಳು, ಸೌರ ಫಲಕಗಳು ಮತ್ತು ಸ್ಟೀರಿಂಗ್ ಎಂಜಿನ್ ವಸ್ತುಗಳನ್ನು ಹೊಂದಿದೆ.[೨]
ಸೊಯುಜ್ ಟಿಎಮ್ಎ-20ಎಮ್
[ಬದಲಾಯಿಸಿ]ಸೊಯುಜ್ ಟಿಎಮ್ಎ-20ಎಮ್ ಸೊಯುಜ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ಕ್ಕೆ ಉಡಾಯಿಸಿದ 2016 ರ ಒಂದು ಗಗನನೌಕೆ ಆಗಿದೆ. ಅದರಲ್ಲಿ ಮೂರು ಸಿಬ್ಬಂದಿ ಸದಸ್ಯರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸಲಾಯಿತು. ಅದು ಐ.ಎಸ್.ಎಸ್.ಗೆ (ISS ಗೆ) 47 ನೇ ಯಾತ್ರೆ (ಎಕ್ಸ್ಪೆಡಿಶನ್) . ಟಿಎಮ್ಎ-20ಎಮ್ ಸೊಯುಜ್ ನೌಕೆಯ 129 ನೆಯ ಸೂಯೆಜ್ ಯಾನ. ಅದರ ಸಿಬ್ಬಂದಿಗಳು ರಷ್ಯಾದ ಕಮಾಂಡರ್ ಮತ್ತು ಫ್ಲೈಟ್ ಇಂಜಿನಿಯರ್, ಹಾಗೂ ಅಮೆರಿಕಾದ ಫ್ಲೈಟ್ ಎಂಜಿನಿಯರ್ ಗಳನ್ನು ಒಳಗೊಂಡಿದೆ.
- ಇದು ಅಂತಿಮ ಯೋಜನೆಯಾಗಿದ್ದು ಸೊಯುಜ್ ಎಂ ನ್ನು ಉನ್ನತಗೊಳಿಸಿದ ಸೊಯುಜ್- ಎಂಎಸ್ ನ್ನು ಉಪಯೋಗಿಸಲಾಗುವುದು.
ಸಿಬ್ಬಂದಿ ವರ್ಗ
[ಬದಲಾಯಿಸಿ]ಹುದ್ದೆ | ಸಿಬ್ಬಂದಿ ಸದಸ್ಯರು | ದೇಶ | ಯಾತ್ರೆ | ಅನುಭವ |
---|---|---|---|---|
ಕಮಾಂಡರ್ | ಅಲೆಕ್ಸಿ ಒವ್ಚಿನಿನ್ | ರಶಿಯಾ ಆರ್ಎಸ್ಎ | ಗಗನಯಾತ್ರೆ 47 | ಮೊದಲ ಗಗನನೌಕಾ ಯಾತ್ರೆ |
ಫ್ಲೈಟ್ ಇಂಜಿನಿಯರ್ 1 | ಒಲೆಗ್ ಸ್ಕ್ರಿಪೋಛ್ಕಾ, | ರಶಿಯಾ | ಗಗನಯಾತ್ರೆ 47 | ಎರಡನೇ ಗಗನನೌಕಾ ಯಾತ್ರೆ |
ಫ್ಲೈಟ್ ಇಂಜಿನಿಯರ್ 2 | ಜೆಫ್ರಿ ವಿಲಿಯಮ್ಸ್, | ನಾಸಾ; ಯುನೈಟೆಡ್ ಸ್ಟೇಟ್ಸ್ | ಗಗನಯಾತ್ರೆ 47 | ನಾಲ್ಕನೇ ಗಗನನೌಕಾ ಯಾತ್ರೆ |
=ಬ್ಯಾಕಪ್ ಸಿಬ್ಬಂದಿ
[ಬದಲಾಯಿಸಿ]ಪೊಸಿಷನ್ | ಸಿಬ್ಬಂದಿ ಸದಸ್ಯರು | ದೇಶ |
---|---|---|
ಕಮಾಂಡರ್ | ಸೆರ್ಗೆಯ್ ರಿಷಿಕೊವ್ | ರಶಿಯಾ |
ಫ್ಲೈಟ್ ಇಂಜಿನಿಯರ್ 1 | ಆಂಡ್ರೇ ಬೊರಿಸೆಂಕೊ | ರಶಿಯಾ |
ಫ್ಲೈಟ್ ಇಂಜಿನಿಯರ್ 2 | ಶೇನ್ ಕಿಂಬ್ರೋಹ್ | ಯುನೈಟೆಡ್ ಸ್ಟೇಟ್ಸ್; ನಾಸಾ |
ಮರಳಿ ಧರೆಗೆ
[ಬದಲಾಯಿಸಿ]- ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಆರು ತಿಂಗಳು ಕಳೆದ ಗಗನಯಾತ್ರಿಗಳಾದ ಅಮೆರಿಕದ ಜೆಫ್ ವಿಲಿಯಮ್ಸ್ (58), ರಷ್ಯಾದ ಅಲೆಕ್ಸೆ ಒವ್ಚಿನಿನ್ ಮತ್ತು ಒಲೆಗ್ ಸ್ಕ್ರಿಪೋಛ್ಕಾ ಅವರು ಬುಧವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಮೂವರು ಗಗನಯಾತ್ರಿಗಳನ್ನು ಹೊತ್ತು ರಷ್ಯಾ ನಿರ್ಮಿತ ‘ಸೊಯುಜ್ ಕೋಶ’, ಕಜಕಸ್ತಾನದ ಪೂರ್ವ ನಿರ್ಧರಿತ ಸ್ಥಳದಲ್ಲಿ ದಿ.೭-೯-೨೦೧೬ ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 7.13 ಗಂಟೆಗೆ ಇಳಿಯಿತು.
ಕಾರ್ಯ ಮತ್ತು ಬಾಹ್ಯಾಕಾಶದಲ್ಲಿದ್ದ ಕಾಲ
[ಬದಲಾಯಿಸಿ]- 'ಭೂಮಿಗಿಳಿದ ಜೆಫ್ ಅವರಿಗೆ ಸ್ವಾಗತ. ಅವರು ಈ ಸಲ ಐಎಸ್ಎಸ್ನಲ್ಲಿ 172 ದಿನಗಳನ್ನು ಕಳೆದಿದ್ದಾರೆ’ ಎಂದು ನಾಸಾ ಟ್ವೀಟ್ ಮಾಡಿದೆ. ಈ ಮೂರೂ ಗಗನಯಾನಿಗಳು ಐಎಸ್ಎಸ್ನಲ್ಲಿ ಅನೇಕ ವೈಜ್ಞಾನಿಕ ಪ್ರಯೋಗಗಳಿಗೆ ಕೈ ಜೋಡಿಸಿದ್ದರು. ವಿಲಿಯಮ್ಸ್ ಐದು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದರು. ನಾಸಾದ ಮತ್ತೊಬ್ಬ ಗಗನಯಾನಿ ಕಾಟೆ ರುಬಿನ್ಸ್ ಅವರೊಂದಿಗೂ ಒಮ್ಮೆ ಅಂತರಿಕ್ಷದಲ್ಲಿ ಹೆಜ್ಜೆ ಹಾಕಿದ್ದರು. 'ಅಮೆರಿಕವು ಭವಿಷ್ಯದಲ್ಲಿ ಕಳುಹಿಸಲಿರುವ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಗೆ ನಿಲ್ದಾಣವನ್ನು ಸಿದ್ಧಪಡಿಸುವ ಯೋಜನೆಯಲ್ಲಿ ವಿಲಿಯಮ್ಸ್ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ನಾಸಾ ತಿಳಿಸಿದೆ.
ಬಾಹ್ಯಾಕಾಶದಲ್ಲಿದ್ದ ಅನುಭವ
[ಬದಲಾಯಿಸಿ]- ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಅಮೆರಿಕನ್ನರ ಪೈಕಿ ವಯಸ್ಸಿನಲ್ಲಿ ವಿಲಿಯಮ್ಸ್ ಹಿರಿಯರು. ಅವರು 2000ನೇ ಇಸವಿಯಲ್ಲಿ ಮೊದಲಿಗೆ ‘ಷಟಲ್ ಅಟ್ಲಾಂಟಿಸ್ ನೌಕೆ’ ಮೂಲಕ ಗಗನಯಾತ್ರೆ ಕೈಗೊಂಡಿದ್ದರು. ಪುನಃ 2006ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಆಗ ಅದು ಅತ್ಯಂತ ಚಿಕ್ಕ ನಿಲ್ದಾಣವಾಗಿತ್ತು. ಮತ್ತೆ 2009ರಲ್ಲಿ ಅಲ್ಲಿಗೆ ಹೋಗಿದ್ದರು. ಪ್ರಸ್ತುತ ಐಎಸ್ಎಸ್, ಫುಟ್ಬಾಲ್ ಮೈದಾನದಷ್ಟು ವಿಶಾಲವಾಗಿದ್ದು, ಅದರಲ್ಲಿ ಇನ್ನೂ ಆರು ಗಗನಯಾತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಹ್ಯಾಕಾಶ ವಾಸ
[ಬದಲಾಯಿಸಿ]ರಷ್ಯಾದ ಗೆನಾಡಿ ಪಡಲ್ಕಾ ಅವರು ಅತಿ ಹೆಚ್ಚು ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಒಟ್ಟಾರೆ 879 ದಿನ ಅಲ್ಲಿ ಕಳೆದಿದ್ದರು.[೫]
ನೋಡಿ
[ಬದಲಾಯಿಸಿ]ಹೆಚ್ಚಿನ ಓದಿಗೆ
[ಬದಲಾಯಿಸಿ]- ಬಾಹ್ಯಾಕಾಶದಲ್ಲಿ ಹೊಸ ರಾಷ್ಟ್ರದ ನಿರ್ಮಾಣ;ನಾಗೇಶ್ ಹೆಗಡೆ;20 Oct, 2016 Archived 2016-10-20 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]- ↑ ಚಿತ್ರ:ಸೊಯುಜ್ ಕೋಶ ಟಿಎಮ್ಎ-20ಎಮ್
- ↑ What Is the Soyuz Spacecraft?
- ↑ au/steven/space/russia-man.txt
- ↑ http://www.astronaut.ru/register/or_flight.htm
- ↑ "ಭೂಮಿಗೆ ಮರಳಿದ ಗಗನಯಾತ್ರಿಗಳು". Archived from the original on 2016-09-08. Retrieved 2016-09-08.