ಅಧ್ಯಯನ ಕೌಶಲಗಳು
ಅಧ್ಯಯನ ಕೌಶಲಗಳು, ಅಥವಾ ಶೈಕ್ಷಣಿಕ ಕೌಶಲಗಳು ಕಲಿಕೆಗೆ ಅನ್ವಯಿಸಲಾದ ಕಾರ್ಯವಿಧಾನಗಳು. ಅವು ಸಾಮಾನ್ಯವಾಗಿ ಶಾಲೆಯಲ್ಲಿ ಯಶಸ್ಸಿಗೆ ನಿರ್ಣಾಯಕವಾಗಿವೆ,[೧] ಉತ್ತಮ ಅಂಕಗಳನ್ನು ಪಡೆಯಲು ಅಗತ್ಯವೆಂದು ಪರಿಗಣಿತವಾಗಿವೆ, ಮತ್ತು ಒಬ್ಬರ ಜೀವನದಾದ್ಯಂತ ಕಲಿಕೆಗೆ ಉಪಯುಕ್ತವಾಗಿವೆ.
ಅಧ್ಯಯನ ಕೌಶಲಗಳು ಹೊಸ ಮಾಹಿತಿಯನ್ನು ಪಡೆಯುವ ಮತ್ತು ಸಂಘಟಿಸುವ, ಮಾಹಿತಿಯನ್ನು ನೆನಪಿನಲ್ಲಿಡುವ, ಅಥವಾ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ನಿಭಾಯಿಸುವ ಕೌಶಲಗಳ ಒಂದು ವ್ಯೂಹವಾಗಿವೆ. ಅವು ಮಾಹಿತಿಯ ಪಟ್ಟಿಗಳ ಧಾರಣದಲ್ಲಿ ಸಹಾಯಮಾಡುವ ಸ್ಮರಣ ಸಾಧನಗಳು, ಪರಿಣಾಮಕಾರಿ ಓದುವಿಕೆ, ಏಕಾಗ್ರತಾ ತಂತ್ರಗಳು, ಮತ್ತು ಸಮರ್ಥವಾಗಿ ಟಿಪ್ಪಣಿಗಳನ್ನು ಬರೆಯುವುದನ್ನು ಒಳಗೊಂಡಿವೆ.
ಹಲವುವೇಳೆ ವಿದ್ಯಾರ್ಥಿ ಮತ್ತು ಅವರ ಬೆಂಬಲ ಜಾಲಕ್ಕೆ ಬಿಟ್ಟುಬಿಡಲಾಗುತ್ತದಾದರೂ, ಅಧ್ಯಯನ ಕೌಶಲಗಳನ್ನು ಹೆಚ್ಚಾಗಿ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಸಲಾಗುತ್ತದೆ. ಅನೇಕ ಪುಸ್ತಕಗಳು ಮತ್ತು ಜಾಲಗಳು ಲಭ್ಯವಿವೆ, ಉದಾಹರಣೆಗೆ ಟೋನಿ ಬೂಜ಼ಾನ್ರ ಪುಸ್ತಕಗಳು.
ಹೆಚ್ಚು ವಿಶಾಲವಾಗಿ, ಒಬ್ಬ ವ್ಯಕ್ತಿಯ ಓದುವ, ನೆನಪಿನಲ್ಲಿಡುವ ಮತ್ತು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ನೆರವುನೀಡುವ ಮಾಹಿತಿಯನ್ನು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಯಾವುದೇ ಕೌಶಲವನ್ನು ಅಧ್ಯಯನ ಕೌಶಲವೆಂದು ಕರೆಯಬಹುದು, ಮತ್ತು ಇದು ಸಮಯ ನಿರ್ವಹಣೆ ಮತ್ತು ಪ್ರೇರಕ ತಂತ್ರಗಳನ್ನು ಒಳಗೊಳ್ಳಬಹುದು.
ಅಧ್ಯಯನ ಕೌಶಲಗಳು ಸಾಮಾನ್ಯವಾಗಿ ಅಲ್ಪ ಸಮಯದಲ್ಲಿ ಕಲಿಯಬಹುದಾದ, ಮತ್ತು ಅಧ್ಯಯನದ ಎಲ್ಲ ಅಥವಾ ಬಹುತೇಕ ಕ್ಷೇತ್ರಗಳಿಗೆ ಅನ್ವಯಿಸಬಹುದಾದ ಬೇರೆ ಬೇರೆ ತಂತ್ರಗಳು. ಹಾಗಾಗಿ, ಅವನ್ನು ಒಂದು ನಿರ್ದಿಷ್ಟ ಅಧ್ಯಯನ ಕ್ಷೇತ್ರಕ್ಕೆ (ಉದಾ. ಸಂಗೀತ ಅಥವಾ ತಂತ್ರಜ್ಞಾನ) ವಿಶಿಷ್ಟವಾದ ಕಾರ್ಯಕೌಶಲಗಳಿಂದ, ಮತ್ತು ಬುದ್ಧಿಮತ್ತೆಯ ಅಂಶಗಳು ಅಥವಾ ಕಲಿಕಾ ಶೈಲಿಗಳಂತಹ ವಿದ್ಯಾರ್ಥಿಯಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯಗಳಿಂದ ಪ್ರತ್ಯೇಕಿಸಬೇಕು.
ಕಂಠಪಾಠವು ಯಾವುದನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವ ಪ್ರಕ್ರಿಯೆ. ಕಂಠಪಾಠದ ಕ್ರಿಯೆಯು ಹಲವುವೇಳೆ ಆನಂತರದ ಸ್ಮರಣಕ್ಕಾಗಿ ಅನುಭವಗಳು, ಹೆಸರುಗಳು, ಭೇಟಿಕಾಲಗಳು, ವಿಳಾಸಗಳು, ದೂರವಾಣಿ ಸಂಖ್ಯೆಗಳು, ಪಟ್ಟಿಗಳು, ಕಥೆಗಳು, ಕವನಗಳು, ಚಿತ್ರಗಳು, ನಕ್ಷೆಗಳು, ರೇಖಾಚಿತ್ರಗಳು, ವಾಸ್ತವ ಸಂಗತಿಗಳು, ಸಂಗೀತ ಅಥವಾ ಇತರ ದೃಶ್ಯ, ಶ್ರವ್ಯ, ಅಥವಾ ಯುದ್ಧತಂತ್ರದ ಮಾಹಿತಿಯಂತಹ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಕೈಗೊಂಡ ಒಂದು ಉದ್ದೇಶಪೂರ್ವಕ ಮಾನಸಿಕ ಪ್ರಕ್ರಿಯೆ.
ಉಲ್ಲೇಖಗಳು
[ಬದಲಾಯಿಸಿ]