ಫ್ರಾನ್ಸಿಸ್ ಕೋಡೆ ಅಲ್ಡಾನಾ
ಗೋಚರ
(ಅಲ್ಡಾನಾ ಫ್ರಾನ್ಸಿಸ್ ಕೋಡೆ ಇಂದ ಪುನರ್ನಿರ್ದೇಶಿತ)
1537-78. ಹದಿನಾರನೆಯ ಶತಮಾನದ ಸ್ಪೇನ್ ದೇಶದ ಕವಿ.
ದೊರೆ ಸೆಬ್ಯಾಸ್ಟಿಯನ್ ಮೊರ್ಯಾಕೊನ ಮೇಲೆ ನಡೆಸಿದ ದುರದೃಷ್ಟಕರ ದಂಡಯಾತ್ರೆಯಲ್ಲಿ ಸೈನಿಕನಾಗಿ ಭಾಗವಹಿಸಿ ಯುದ್ಧದಲ್ಲಿ ಮಡಿದ. ಧಾರ್ಮಿಕ ಹಾಗೂ ಸೈನಿಕ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಕುರಿತು ಬರೆದನಲ್ಲದೆ, ಹಲವು ಪ್ರಣಯಗೀತೆಗಳನ್ನು ರಚಿಸಿದ. ಕೃತಿಗಳನ್ನು ಈತ ನಿಧನನಾದ ಹತ್ತು ಹನ್ನೆರಡು ವರ್ಷಗಳ ಅನಂತರ ಪ್ರಕಟಿಸಲಾಯಿತು. ತ್ರಿಪದಿ ಕಾವ್ಯಶೈಲಿಯಲ್ಲಿ ಈತ ಸ್ಪೇನಿನ ಮತ್ತೊಬ್ಬ ಪ್ರತಿಭಾವಂತ ಕವಿ ಅರಿಯಸ್ ಮೊಂಟಾನೋಗೆ ಬರೆದ ಪತ್ರಗಳು ಸತ್ತ್ವಯುತವಾಗಿವೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: