ವಿಷಯಕ್ಕೆ ಹೋಗು

ಆನೇಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆನೆಕಲ್ ಇಂದ ಪುನರ್ನಿರ್ದೇಶಿತ)
ಅನೇಕಲ್
ತಾಲ್ಲೂಕು ಕೇಂದ್ರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ ಜಿಲ್ಲೆ
ಸರ್ಕಾರ
 • MLAಬಿ.ಶಿವಣ್ಣ
Elevation
೯೧೫ m (೩,೦೦೨ ft)
Population
 (೨೦೧೧)
 • Total೩೩,೧೬೦
ಭಾಷೆಗಳು ಕನ್ನಡ
 • ಅಧಿಕೃತಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
562106
ದೂರವಾಣಿ ಕೋಡ್91-80
ವಾಹನ ನೋಂದಣಿKA 59

ಆನೇಕಲ್ ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, ತಮಿಳುನಾಡು ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ. ಗಡಿನಾಡು ಪ್ರದೇಶದಲ್ಲಿದ್ದರೂ ತಾಲೂಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು ಕರ್ನಾಟಕರಾಗಿಯ ಕಣಜವೆಂದು ಕರೆಯಲಾಗುತ್ತದೆ. ಆನೇಕಲ್ ತಾಲೂಕು 530 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ಜಿಲ್ಲೆಯ ಈಶಾನ್ಯದಲ್ಲಿರುವ ಈ ಪಟ್ಟಣದಲ್ಲಿ ಎರಡು ಕಣಿವೆಗಳಿವೆ. ಪಶ್ಚಿಮದ ಭಾಗ ಬೆಟ್ಟಗುಡ್ಡಗಳಿಂದಲೂ ಕಾಡಿನಿಂದಲೂ ತುಂಬಿದೆ. ಇದು ನದಿಯ ಜಲಾನಯನ ಕಣಿವೆಗೆ ಸೇರಿದ್ದು. ಪೂರ್ವದ ಕಣಿವೆ ಪೊನ್ಯೈಯಾರ್ ನದಿಯ ಜಲಾನಯನ ಭೂಮಿಗೆ ಸೇರಿದೆ.

ಜನಸಂಖ್ಯೆ

[ಬದಲಾಯಿಸಿ]

ಈ ತಾಲ್ಲೂಕಿನ ಜನಸಂಖ್ಯೆ 2,98,961 ಹಾಗೂ ಪಟ್ಟಣದ ಜನಸಂಖ್ಯೆ 33,160.

ಭೌಗೋಳಿಕ

[ಬದಲಾಯಿಸಿ]

ಬೆಂಗಳೂರು ನಗರದ ಆಗ್ನೇಯಕ್ಕೆ 36 ಕಿ.ಮೀ.ಗಳ ದೂರದಲ್ಲಿ 12°42′N 77°42′E / 12.7°N 77.7°E / 12.7; 77.7.[] ಅಕ್ಷಾಂಶ,ರೇಖಾಂಶಗಳು ಸಂಧಿಸುವ ಭಾಗದಲ್ಲಿ ತಾಲ್ಲೂಕಿನ ಕೇಂದ್ರವಾದ ಆನೇಕಲ್ ಪಟ್ಟಣವಿದೆ.ಇದು ಸಮುದ್ರ ಮಟ್ಟದಿಂದ ಸರಾಸರಿ 915 metres (3001 feet)ಎತ್ತರದಲ್ಲಿದೆ. ಆನೇಕಲ್ ಪದದ ಅರ್ಥದ ಪ್ರಕಾರ ಆನೆಯಕಲ್ಲು ಅಥವಾ ಅಣಿಕಲ್ಲು ಎಂಬ ವ್ಯಾಖ್ಯಾನ ದೊರಕುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಕಥೆಯೂ ದೊರಕುವುದಿಲ್ಲ.

ಇತಿಹಾಸ

[ಬದಲಾಯಿಸಿ]

ಇಲ್ಲಿ ಕೋಟೆ ಮತ್ತು ಕೆರೆಯನ್ನು 17ನೆಯ ಶತಮಾನದ ಪ್ರಾರಂಭದಲ್ಲಿ ಸಲಗತ್ತೂರ್ ವಂಶದ ಮುಖ್ಯಸ್ಥ ಕಟ್ಟಿಸಿದನೆಂದು ಪ್ರತೀತಿಯಿದೆ. ಒಂದು ಶತಮಾನ ಕಳೆದ ಅನಂತರ ಇದು ಮೈಸೂರಿಗೆ ಸೇರಿದುದಲ್ಲದೆ 1760ರಲ್ಲಿ ಹೈದರನ ಕೈವಶವಾಯಿತು. 1400ರಲ್ಲಿ ಇಲ್ಲಿನ ವಾಸಸ್ಥರು ಕ್ರೈಸ್ತ ದೇವಾಲಯವನ್ನು ಕಟ್ಟಿದರೆಂದು ತಿಳಿದುಬರುತ್ತದೆ. ಪೌರಸಭೆ 1870ರಲ್ಲಿ ಪ್ರಾರಂಭವಾಯಿತು. ಇತ್ತೀಚಿನ ಜನಜಾಗೃತಿಯ ಚಟುವಟಿಕೆಗಳಿಂದ ಪಟ್ಟಣ ಅನೇಕ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದಲ್ಲದೆ ತಾಲ್ಲೂಕಿನ ಅಭಿವೃದ್ಧಿಗೂ ಸಹಾಯಕವಾಗಿದೆ.

ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]
  • ಬನ್ನೇರುಘಟ್ಟ : ಬನ್ನೇರುಘಟ್ಟ ಬೆಂಗಳೂರು ಹಾಗು ಆನೇಕಲ್ ನಡುವೆ ಎರಡೂ ಸ್ಥಳಗಳಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟದಲ್ಲಿ ಒಂದು ಸುಂದರ ರಾಷ್ಟೀಯ ಉದ್ಯಾನವವಿದೆ.
  • ವಿದ್ಯುನ್ಮಾನ ನಗರ (Electronics City) : ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಕಚೇರಿಗಳಿರುವ ವಿದ್ಯುನ್ಮಾನ ನಗರ (Electronics City)ಆನೇಕಲ್ ನಿಂದ ೨೦ ಕಿ.ಮೀ ದೂರದಲ್ಲಿದೆ.
  • ಮುತ್ಯಾಲಮಡುವು : ಆನೇಕಲ್ ನಿಂದ ೫ ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
  • ಕಂಬದ ಗಣಪತಿ ದೇವಾಲಯ
ಇತಿಹಾಸ ಪ್ರಸಿದ್ಧ ಕಂಬದ ಗಣಪತಿ
  • ಶ್ರೀ ತಿಮ್ಮರಾಯಸ್ವಾಮಿ ದೇವಾಲಯ ಇದೆ.
  • ಶ್ರೀ ಚನ್ನಕೇಶವ ದೇವಾಲಯ ಇದೆ.
  • ಶಂಕರ ಮಠ : ಇಲ್ಲಿನ ಅಮೃತ ಶಿಲೆಯ ಶ್ರೀ ಶಂಕರಾಚಾರ್ಯ ಹಾಗು ಶ್ರೀ ಶಾರದಾ ದೇವಿಯ ವಿಗ್ರಹಗಳು ಐತಿಹಾಸಿಕ ಮಹತ್ವ ಪಡೆದಿದೆ.
  • ಶ್ರೀ ಆಂಜಿನೇಯ ದೇವಾಲಯ ಹೊಸುರು ಬಾಗಿಲು.
  • ಈ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ಚೋಳರ ಕಾಲದ ಶ್ರೀರಾಮ ದೇವಾಲಯವನ್ನು ಕಾಣಬಹುದಾಗಿದೆ.
  • ಈ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಶ್ರೀ ಮದ್ದೂರಮ್ಮ ದೇವಿಯ ಪ್ರಸಿದ್ದ ಜಾತ್ರೆ ನಡೆಯುತ್ತದೆ.
  • ಈ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ ವಿಷ್ಣು ದೇವರ ಬೃಂದಾವನ ದಶಾವತಾರದೊಂದಿಗೆ ಸುಮಾರು 850 ವರ್ಷಗಳ ಹಳೆಯ ದೇವಾಲಯ.
  • ಹಾರಗದ್ದೆ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯವು ಪುರಾತನ ಕಾಲದ ದೇವಾಲಯವಾಗಿದೆ

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆನೇಕಲ್&oldid=1272421" ಇಂದ ಪಡೆಯಲ್ಪಟ್ಟಿದೆ