ವಿಷಯಕ್ಕೆ ಹೋಗು

ಆಫ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಫ್ರಿಕ ಇಂದ ಪುನರ್ನಿರ್ದೇಶಿತ)
ಆಫ್ರಿಕ

ಆಫ್ರಿಕಾ ಅಥವಾ‌ ಆಫ್ರಿಕೆ ಅಥವಾ ಆಫ್ರಿಕ - ಪ್ರಪಂಚದ ಏಳು ಖಂಡಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ.

ಪ್ರಾಂತ್ಯಗಳು ಮತ್ತು ರಾಷ್ಟ್ರಗಳು

[ಬದಲಾಯಿಸಿ]

ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.

ಆಫ್ರಿಕದ ಪ್ರಾಂತ್ಯಗಳು:
ಆಫ್ರಿಕದ ಸ್ವಾಭಾವಿಕ ಭೂಪಟ
ಬಾಹ್ಯಾಕಾಶದಿಂದ ಆಫ್ರಿಕ
ಪ್ರಾಂತ್ಯ / ರಾಷ್ಟ್ರ [] ಮತ್ತು
ಧ್ವಜ
ಅಳತೆ (ಚದುರ ಕಿ.ಮಿ.) ಜನಸಂಖ್ಯೆ
(೨೦೦೨ರ ಅಂದಾಜು)
ಜನಸಂಖ್ಯೆ ಸಾಂದ್ರತೆ ರಾಜಧಾನಿ
ಪೂರ್ವ ಆಫ್ರಿಕ:
ಬ್ರಿಟನ್ನಿನ ಹಿಂದೂ ಮಹಾಸಾಗರದ ವಸಾಹತು 60 ~3,500 58.3 None
ಬುರುಂಡಿ 27,830 6,373,002 229.0 ಬುಜುಮ್ಬುರ
ಕೊಮೊರೊಸ್ 2,170 614,382 283.1 ಮೊರೊನಿ
ದ್ಜಿಬೂಟಿ 23,000 472,810 20.6 ದ್ಜಿಬೂಟಿ ನಗರ
ಎರಿಟ್ರಿಯ 121,320 4,465,651 36.8 ಆಸ್ಮಾರ
ಇತಿಯೋಪಿಯ 1,127,127 67,673,031 60.0 ಅಡ್ಡಿಸ್ ಅಬ್ಬಾಬಾ
ಕೀನ್ಯಾ 582,650 31,138,735 53.4 ನೈರೋಬಿ
ಮಡಗಾಸ್ಕರ್ 587,040 16,473,477 28.1 ಅನ್ಟನನರಿವೊ
ಮಾಲಾವಿ 118,480 10,701,824 90.3 ಲಿಲೊಂಗ್ವೆ
ಮಾರಿಶಸ್ 2,040 1,200,206 588.3 ಪೋರ್ಟ್ ಲೂಯಿ
ಮಯೋಟ್ (ಫ್ರಾನ್ಸ್) 374 170,879 456.9 ಮಾಮೌದ್ಜು
ಮೊಜಾಮ್ಬಿಕ್ 801,590 19,607,519 24.5 ಮಪುತೊ
ರೆಯುನಿಯನ್ (ಫ್ರಾನ್ಸ್) 2,512 743,981 296.2 ಸೇಂಟ್ ಡೆನಿಸ್
ರ್ವಾಂಡ 26,338 7,398,074 280.9 ಕಿಗಾಲಿ
ಸೆಶೆಲ್ಸ್ 455 80,098 176.0 ವಿಕ್ಟೋರಿಯ
ಸೊಮಾಲಿಯಾ 637,657 7,753,310 12.2 ಮೊಗಡಿಶು
ಟಾನ್ಜೇನಿಯ 945,087 37,187,939 39.3 ಡೊಡೊಮ
ಉಗಾಂಡ 236,040 24,699,073 104.6 ಕಂಪಾಲ
ಜಾಂಬಿಯ 752,614 9,959,037 13.2 ಲುಸಾಕ
ಜಿಂಬಾಬ್ವೆ 390,580 11,376,676 29.1 ಹರಾರೆ
ಮಧ್ಯ ಆಫ್ರಿಕ:
ಅಂಗೋಲ 1,246,700 10,593,171 8.5 ಲುಆಂಡ
ಕ್ಯಾಮೆರೂನ್ 475,440 16,184,748 34.0 ಯಓಂಡೆ
ಮಧ್ಯ ಆಫ್ರಿಕ ಗಣರಾಜ್ಯ 622,984 3,642,739 5.8 ಬಂಗುಯ್
ಚಾಡ್ 1,284,000 8,997,237 7.0 ನ್'ಡ್ಜಮೇನ
ಕಾಂಗೋ 342,000 2,958,448 8.7 ಬ್ರಾಜವಿಲ್
ಲೋಕತಂತ್ರಿಕ ಕಾಂಗೋ ಗಣರಾಜ್ಯ 2,345,410 55,225,478 23.5 ಕಿನ್ಶಾಸ
ಭೂಮಧ್ಯರೇಖೆಯ ಗಿನಿ 28,051 498,144 17.8 ಮಾಲಬೊ
ಗಬೋನ್ 267,667 1,233,353 4.6 ಲಿಬ್ರವಿಲ್
ಸಾವೊ ಟೋಮೆ ಮತ್ತು ಪ್ರಿನ್ಸಿಪೆ 1,001 170,372 170.2 ಸಾವೊ ಟೋಮೆ
ಉತ್ತರ ಆಫ್ರಿಕ:
ಅಲ್ಜೀರಿಯ 2,381,740 32,277,942 13.6 ಅಲ್ಜೇರ್ಸ್
ಈಜಿಪ್ಟ್[] 1,001,450 70,712,345 70.6 ಕೈರೊ
ಲಿಬ್ಯ 1,759,540 5,368,585 3.1 ಟ್ರಿಪೊಲಿ
ಮೊರಾಕೊ 446,550 31,167,783 69.8 ರಾಬಾತ್
ಸುಡಾನ್ 2,505,810 37,090,298 14.8 ಖಾರ್ತೂಮ್
ಟುನೀಸಿಯ 163,610 9,815,644 60.0 ಟುನೀಸ್
ಪಶ್ಚಿಮ ಸಹಾರ (ಮೊರಾಕೊ)[] 266,000 256,177 1.0 ಎಲ್ ಆಇಯುನ್
ದಕ್ಷಿಣ ಯುರೋಪ್ ದೇಶಗಳ ಆಧೀನತೆಯಲ್ಲಿರುವ ಉತ್ತರ ಆಫ್ರಿಕದ ದೇಶಗಳು:
ಕ್ಯಾನರಿ ದ್ವೀಪಗಳು (ಸ್ಪೇನ್)[] 7,492 1,694,477 226.2 Las Palmas de Gran Canaria,
Santa Cruz de Tenerife
ಚೀವ್ಟಾ (ಸ್ಪೇನ್)[] 20 71,505 3,575.2
ಮದೀರ ದ್ವೀಪಗಳು (ಪೋರ್ಚುಗಲ್)[] 797 245,000 307.4 Funchal
ಮೆಲಿಯ್ಯ (ಸ್ಪೇನ್)[] 12 66,411 5,534.2
ದಕ್ಷಿಣ ಆಫ್ರಿಕಾ:
ಬೋಟ್ಸ್ವಾನ 600,370 1,591,232 2.7 ಗಾಬೊರೋನ್
ಲೆಸೊಥೊ 30,355 2,207,954 72.7 ಮಸೇರು
ನಮೀಬಿಯ 825,418 1,820,916 2.2 ವಿಂಡ್ಹೋಕ್
ದಕ್ಷಿಣ ಆಫ್ರಿಕ 1,219,912 43,647,658 35.8 Bloemfontein, Cape Town, Pretoria[]
ಸ್ವಾಜಿಲ್ಯಾಂಡ್ 17,363 1,123,605 64.7 ಮ್ಬಾಬನೆ
ಪಶ್ಚಿಮ ಆಫ್ರಿಕ:
ಬೆನಿನ್ 112,620 6,787,625 60.3 ಪೋರ್ಟೊ-ನೋವೊ
ಬುರ್ಕೀನ ಫಾಸೊ 274,200 12,603,185 46.0 ಉಅಗಡೊಗೊ
ಕೇಪ್ ವೆರ್ದೆ 4,033 408,760 101.4 ಪ್ರಾಯಿಅ
ಕೋತ್ ದ್'ಇವ್ವಾರ್ 322,460 16,804,784 52.1 ಅಬಿದ್ಜಾನ್, ಯಮೌಸ್ಸುಕ್ರೊ[]
ಗ್ಯಾಂಬಿಯ 11,300 1,455,842 128.8 ಬಾಂಜುಲ್
ಘಾನ 239,460 20,244,154 84.5 ಅಕ್ಕ್ರಾ
ಗಿನಿ 245,857 7,775,065 31.6 ಕೊನಕ್ರಿ
ಗಿನಿ-ಬಿಸೌ 36,120 1,345,479 37.3 Bissau
ಲೈಬೀರಿಯ 111,370 3,288,198 29.5 ಮಾನ್ರೋವಿಯ
ಮಾಲಿ 1,240,000 11,340,480 9.1 Bamako
ಮೌರಿಟೇನಿಯ 1,030,700 2,828,858 2.7 Nouakchott
ನೈಜರ್ 1,267,000 10,639,744 8.4 ನಿಯಾಮೆ
ನೈಜೀರಿಯ 923,768 129,934,911 140.7 ಅಬೂಜ
ಸೇಂಟ್ ಹೆಲೇನ (ಯುನೈಟೆಡ್ ಕಿಂಗ್ಡಮ್)
(ಅಸೆನ್ಷನ್ ದ್ವೀಪ ಮತ್ತು ತ್ರಿಷ್ಟಾನ್ ದ ಕುನ್ಹ ಒಳಗೊಂಡಿವೆ)
410 7,317 17.8 ಜೇಮ್ಸ್ ಟೌನ್
ಸೆನೆಗಲ್ 196,190 10,589,571 54.0 ಡಕಾರ್
ಸಿಯೆರ್ರಾ ಲಿಯೋನ್ 71,740 5,614,743 78.3 ಫ್ರೀಟೌನ್
ಟೊಗೊ 56,785 5,285,501 93.1 ಲೊಮೆ
ಒಟ್ಟು 30,305,053 842,326,984 27.8

ಆಫ್ರಿಕಾದ ಇತಿಹಾಸ:

ಆಫ್ರಿಕಾ

[ಬದಲಾಯಿಸಿ]

(೧೧ ಏಪ್ರಿಲ್ ೨೦೦೯)

  • ಆಫ್ರಿಕಾ ಖಂಡವು ಪೂವರ್ಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಆಕ್ರಮಿಸಿದ್ದು ವಿಸ್ತೀರ್ಣದಲ್ಲಿ ಯೂರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ.
  • ಕಳೆದ ಮೂರು-ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ಧಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವರ್ತಿತಗೊಂಡ ಈ ಭೂಭಾಗದಲ್ಲಿ ಪೋರ್ಚುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. 19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪರ್ಧೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವರ್ತಿಸಲಾಯಿತು. 1876 ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, 1900 ರ ಹೊತ್ತಿಗೆ ಹತ್ತನೆ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು.

ಆಫ್ರಿಕಾ ಭೂಖಂಡ ಹಂಚಿಕೆಗಾಗಿ ಕಾದಾಟ

[ಬದಲಾಯಿಸಿ]
  • ಈಜಿಪ್ಟ್ನ ಕೈರೋದಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವರೆಗೆ ಪೂರ್ಣ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಇಂಗ್ಲೆಂಡ್ನ ಆಸೆ ಮೊದಲನೆ ವಿಶ್ವ ಮಹಾಯುದ್ದ ನಂತರವಷ್ಟೆ ಕೈಗೂಡಿತು. ಈಜಿಪ್ಟನ್ನು ಆಕ್ರಮಿಸಿಕೊಳ್ಳುವಾಗಲೇ ಪೂರ್ವ ಸೂಡಾನ್ನೊಳಗೂ ಇಂಗ್ಲೆಂಡ್ ಒಳ ನುಸುಳಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ಘಾನಾ ಮತ್ತು ನೈಜೀರಿಯಾದ ಭೂಭಾಗಗಳ ಮೇಲೆ ಇಂಗ್ಲೆಂಡ್ ಆಕ್ರಮಣಕಾರಿ ಯುದ್ದಗಳನ್ನು ಹೂಡಿತ್ತು. ಫ್ರಾನ್ಸ್ ಕೂಡ ಆಫ್ರಿಕಾದಲ್ಲಿ ಅತಿ ದೊಡ್ಡ ವಸಾಹತು ಸಾಮ್ರಾಜ್ಯವನ್ನೇ ಹೊಂದಿತ್ತು. ಅಲ್ಜೀರಿಯಾದಿಂದ ಆರಂಭಿಸಿ ತುನಿಷಿಯಾ, ಮೊರಾಕೊ ಮತ್ತು ಸೆನೆಗಲ್ಗಳನ್ನು ಫ್ರಾನ್ಸ್ ವಸಾಹತುವನ್ನಾಗಿಸಿತು. ಜರ್ಮನಿಯು ಆಫ್ರಿಕಾದ ಕೆಲವು ಬುಡಕಟ್ಟು ನಾಯಕರುಗಳ ಮೇಲೆ ಅಸಮ್ಮತ ಒಪ್ಪಂದಗಳನ್ನು ಹೇರಿ ಪೂರ್ವ ಆಫ್ರಿಕಾದ ಭಾಗಗಳನ್ನು ಒಳಗೊಂಡಂತೆ ಪಶ್ಚಿಮದ ಟೋಗೋ, ಮತ್ತು ಕೆಮರೂನ್ಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.
  • ಇಟಲಿಯೂ ಸಹ ಇಥಿಯೋಪಿಯಾ ವಿರುದ್ದ ಯುದ್ದ ಘೋಷಣೆಯಿಲ್ಲದೆ ಮಿಲಿಟರಿ ದಾಳಿ ನಡೆಸಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳೊಂದಿಗೆ ಒಡಗೂಡಿ ಇಟಲಿಯು ಸೋಮಾಲಿಯಾವನ್ನು ವಿಭಜನೆ ಮಾಡಿತು. ಪೋರ್ಚುಗಲ್ ಮತ್ತು ಸ್ಪೇನ್ಗಳು ಆಫ್ರಿಕಾದ ಹಲವು ಸಂಖ್ಯೆಯ ಭೂಭಾಗಗಳನ್ನು ಆಕ್ರಮಿಸಿಕೊಂಡಿದ್ದವು. ಬೆಲ್ಜಿಯಂ ಕಾಂಗೋವನ್ನು 1908 ರಲ್ಲಿ ವಸಾಹತುವನ್ನಾಗಿಸಿತು. ಮೊದಲನೆ ಮಹಾಯುದ್ದಕ್ಕೆ ಮೊದಲು ಆಫ್ರಿಕಾದ ಎರಡು ರಾಷ್ಟ್ರಗಳಷ್ಟೆ - ಇಥಿಯೋಪಿಯಾ ಮತ್ತು ಲೈಬೀರಿಯಾ - ಸ್ವತಂತ್ರವಾಗಿದ್ದವು.
  • ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು ಹಾಗೂ ಆಫ್ರಿಕನ್ ರಾಷ್ಟ್ರಗಳ ಮಿಲಿಟರಿ ದೌರ್ಬಲ್ಯ ಮತ್ತು ಆಫ್ರಿಕನ್ನರ ಅನೈಕ್ಯತೆಯು ಯೂರೋಪಿಯನ್ನರ ವಿರುದ್ದ ಆಫ್ರಿಕನ್ನರು ಸೋತದ್ದಕ್ಕೆ ಪ್ರಮುಖ ಕಾರಣ. ಸಾಮ್ರಾಜ್ಯಶಾಹಿ ರಾಷ್ಟ್ರಗಳು ಆಫ್ರಿಕಾದ ಜನತೆಯನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುತ್ತಿದ್ದವು. ಕೆಲವು ಪಾಳೇಗಾರಿ ದೊರೆಗಳನ್ನು ಒಮ್ಮೆ ಮೇಲೇರಿಸುತ್ತಾ ಮತ್ತೆ ಕೆಲವೊಮ್ಮೆ ಕೆಳದೂಡುತ್ತಿದ್ದವು. ಆಫ್ರಿಕಾವನ್ನು ವಿಭಜಿಸಿದ ನಂತರ ಯೂರೋಪಿಯನ್ ರಾಷ್ಟ್ರಗಳು ಅದನ್ನು 'ಅಭಿವೃದ್ಧಿ' ಪಡಿಸಲು ಶುರು ಮಾಡಿದವು. ತಮ್ಮ ರಾಷ್ಟ್ರಗಳಿಗೆ ಕೃಷಿ ಮತ್ತು ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ನೆಲೆಗಳನ್ನಾಗಿ ಆಫ್ರಿಕಾದ ವಸಾಹತುಗಳನ್ನು ಪರಿವರ್ತಿಸಲಾಯಿತು. ವಸಾಹತುಗಳ ಜನತೆಯು ಕ್ರೂರ ಶೋಷಣೆಗೆ ಬಲಿಯಾದರು.
  • ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಫ್ರಿಕಾದ ವಸಾಹತು ರಾಷ್ಟ್ರದೊಳಗೆ ಬಂಡವಾಳದ ಬೃಹತ್ ಪ್ರಮಾಣದಲ್ಲಿ ಹರಿಯತೊಡಗಿತು. ಈ ಮೊದಲು ಆಫ್ರಿಕಾದ ರೈತನು ತನ್ನ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದನು. ವಸಾಹತುಶಾಹಿಯ ಪ್ರವೇಶದಿಂದಾಗಿ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ರಪ್ತು ಮಾಡುವ ಬೆಳೆಗಳ ಉತ್ಪಾದನೆಗೆ ತಳಪಾಯ ಹಾಕಲಾಯಿತು. ಈಜಿಪ್ಟ್ನಲ್ಲಿ ಹತ್ತಿ, ಸೆನೆಗಲ್ನಲ್ಲಿ ಕಡ್ಲೆಕಾಯಿ ಮತ್ತು ನೈಜೀರಿಯಾದಲ್ಲಿ ಕೋಕೋ ಮತ್ತು ತಾಳೆ ಎಣ್ಣೆ, ಇತ್ಯಾದಿ. ದಕ್ಷಿಣ ಆಫ್ರಿಕಾದಲ್ಲಿ ಚಿನ್ನ ಮತ್ತು ವಜ್ರ ಗಣಿಗಾರಿಕೆಗೆ ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಈ ರಾಷ್ಟ್ರಗಳ ಆರ್ಥಿಕತೆಯು ವಿಶ್ವ ಆರ್ಥಿಕತೆಯೊಂದಿಗೆ ಕೊಂಡಿ ಏರ್ಪಡಿಸಿಕೊಂಡಿತು. ಆಫ್ರಿಕಾವನ್ನು ವಿಶ್ವ ಮಾರುಕಟ್ಟೆಗೆ ಎಳೆದು ತಂದು ಅಲ್ಲಿನ ಸಾರಿಗೆ ಮತ್ತು ಸಂಪರ್ಕವನ್ನು ಅದರ ಸಂಪತ್ತನ್ನು ಹೊರಸಾಗಿಸುವ ಅವಶ್ಯಕತೆಗನುಗುಣವಾಗಿ ಅಭಿವೃದ್ಧಿ ಗೊಳಿಸಿದವು. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹಿಗ್ಗಾ ಮುಗ್ಗಾ ದೋಚಲಾಯಿತು. ಆರಂಭದಲ್ಲಿ ಯೂರೋಪಿಯನ್ ಕಬಳಿಕೆದಾರರು 780 ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಫಾರ್ಮನೀರ್ ಕಂಪನಿಯೊಂದೇ 1.4 ಲಕ್ಷ ಭೂಮಿಯನ್ನು ಆಕ್ರಮಿಸಿಕೊಂಡಿತ್ತು. 1913 ರ ಹೊತ್ತಿಗೆ ಮೊರಾಕ್ಕೋದಲ್ಲಿ 1.0 ಲಕ್ಷ ಹೆಕ್ಟೇರ್ ಭೂಮಿಯನ್ನು ವಿದೇಶಿ ಕಂಪನಿಗಳು ಕಬಳಿಸಿದ್ದವು.
  • ಮೊದಲನೆ ವಿಶ್ವ ಮಹಾಯುದ್ದ ಜರುಗಲು ಆಫ್ರಿಕಾದಲ್ಲಿನ ವಸಾಹತುಗಳಿಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ನಡೆದ ಕಿತ್ತಾಟವೂ ಒಂದು ಪ್ರಮುಖ ಕಾರಣವಾಗಿತ್ತು. ಸೂಯೆಜ್ ಕಾಲುವೆ ನಿರ್ಮಾಣ ಮಾಡಿ ತಮ್ಮ ವ್ಯಾಪಾರಕ್ಕಾಗಿ ಈ ಜಲ ಮಾರ್ಗವನ್ನು ಬಳಸಿಕೊಂಡು ಬ್ರಿಟಿಷರು ಮತ್ತು ಫ್ರೆಂಚರು ವ್ಯಾಪಾರ ದ್ವಿಗುಣ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ಜರ್ಮನ್-ತುರ್ಕರು ಇದನ್ನು ಬಲವಾಗಿ ವಿರೋಧಿಸಿದರೂ, ಈ ಪ್ರತಿರೋಧವನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು.
  • ಯುದ್ದ ಸಮಯದಲ್ಲಿ ಆಫ್ರಿಕಾವು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಪ್ರಧಾನ ಆಕರವಾಗಿತ್ತು. ಈ ಸಮಯದಲ್ಲಿ ಮಿಲಿಯನ್ಗಟ್ಟಲೆ ಆಹಾರ ಸಾಮಗ್ರಿ ಮತ್ತು ತರಕಾರಿ ಹಾಗೂ ಖನಿಜ ವಸ್ತುಗಳನ್ನು ತಮ್ಮ ವಶದಲ್ಲಿದ್ದ ಆಫ್ರಿಕಾದಿಂದ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳು ಸರಬರಾಜು ಮಾಡಿಕೊಂಡವು. ಆಫ್ರಿಕಾದ ವಸಾಹತುವಿನ ಐದು ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನರನ್ನು ಫ್ರೆಂಚ್ ಸೇನೆಯು ತನ್ನ ಸೇನೆಯಲ್ಲಿ ಹೊಂದಿತ್ತು. ಬ್ರಿಟಿಷ್ ಸೇನೆಯು ಸುಮಾರು ಮೂರು ಲಕ್ಷ ಆಫ್ರಿಕನ್ನರನ್ನು ಸಿದ್ದ ಪಡಿಸಿತ್ತು. ಜರ್ಮನ್ ಸೇನೆಯು ಸುಮಾರು 20,000 ಆಫ್ರಿಕನ್ ಸೈನಿಕರು ಮತ್ತು 20,000 ಬುಡಕಟ್ಟು ಜನರನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು.
  • ವಸಾಹತುಶಾಹಿ ರಾಷ್ಟ್ರಗಳು ಯುದ್ದದಲ್ಲಿ ತಮ್ಮ ಮೇಲೆ ಬಿದ್ದ ಅಪಾರ ಹೊರೆಯನ್ನು ಆಫ್ರಿಕಾದ ಜನತೆಯ ಮೇಲೆ ವರ್ಗಾಯಿಸಿದವು. ಶೋಷಣೆಯ ಸ್ವರೂಪ ವ್ಯಾಪಿಸಿತೊಡಗುತ್ತಿದ್ದಂತ,ೆ ತೀವ್ರಗೊಂಡ ವಸಾಹತುಶಾಹಿ ರಾಷ್ಟ್ರಗಳ ದೌರ್ಜನ್ಯದ ವಿರುದ್ದ ಜನತೆಯು ಇದಿರು ನಿಲ್ಲುವಂತೆ ಪ್ರೇರೇಪಿಸಿತು. ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯು ತೀವ್ರಗೊಂಡಿತು. ಸೂಡಾನ್, ನೈಜೀರಿಯಾ, ಲಿಬಿಯಾಗಳಲ್ಲಿ ಜನರು ಬಂಡಾಯವೆದ್ದರು. ಅಲ್ಜಿರೀಯಾ, ತುನೀಷಿಯಾ, ಮೊರಾಕೊಗಳ ಜನತೆ ಫ್ರೆಂಚ್ ಸೇನೆಯ ವಿರುದ್ದ ಕಾದಾಡತೊಡಗಿದರು.
  • ಪ್ರಥಮ ಮಹಾಯುದ್ದ ಪರಿಣಾಮ ಆಫ್ರಿಕಾದ ರಾಜಕೀಯ ಭೂಪಟವನ್ನು ಪುನರ್-ರಚಿಸಲಾಯಿತು. ಈ ಮೊದಲು ಜರ್ಮನಿಯ ತೆಕ್ಕೆಯಲ್ಲಿದ್ದ ವಸಾಹತು ಪ್ರದೇಶಗಳನ್ನು 'ಲೀಗ್ ಆಫ್ ನೇಷನ್' ಮುಖಾಂತರ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂಗಳಿಗೆ ವಹಿಸಿಕೊಡಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟ, ಟೋಗೋ ಮತ್ತು ಕೆಮರೂನ್ಗಳ 'ಲೀಗ್ ಆಫ್ ನೇಷನ್'ನ ಸದಸ್ಯತ್ವವನ್ನು ರದ್ದುಗೊಳಿಸಿ ಅವುಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಹಂಚಲಾಯಿತು.
  • ಪ್ರಥಮ ವಿಶ್ವ ಯುದ್ದಾನಂತರ ವಿದೇಶಿ ಬಂಡವಾಳವು ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವೇಚ್ಛಾಚಾರದಿಂದ ಹರಿದಾಡಲಾರಂಭಿಸಿತು. ವಸಾಹತುಶಾಹಿ ರಾಷ್ಟ್ರಗಳು ಹಳೆಯ ಬಂಡವಾಳಶಾಹಿ-ಪೂರ್ವ ಸಂಬಂಧಗಳನ್ನೇ ಮುಂದುವರಿಸಲು ಯತ್ನಿಸಿದ್ದವು. ಆ ರಾಷ್ಟ್ರಗಳಲ್ಲಿ ದೇಶೀಯ ಬಂಡವಾಳಶಾಹಿಯು ಬೆಳೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಪಾಳೇಗಾರಿ ಮತ್ತು ಪಾಳೇಗಾರಿ-ಪೂರ್ವ ಶೋಷಣೆಯ ವಿಧಾನಗಳನ್ನು ಅನುಸರಿಸಲಾಯಿತು. ಗಣಿಗಾರಿಕೆ, ಮತ್ತು ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಬೃಹತ್ ಕೈಗಾರಿಕಾ ರಂಗದಲ್ಲಿ ದೇಶೀಯ ಬಂಡವಾಳವು ತಲೆ ಎತ್ತದಂತೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡವು. ಏಕಮುಖ ಕೃಷಿ ಮತ್ತು ಕಚ್ಚಾ ವಸ್ತು ತಯಾರಿಕೆ ಆಧಾರಿತ ಆರ್ಥಿಕತೆಯನ್ನು ವಸಾಹತು ಶಾಹಿ ರಾಷ್ಟ್ರಗಳು ಬಲಗೊಳಿಸಿದವು. ಆಫ್ರಿಕಾದ ಸಮಾಜದಲ್ಲಿ ಆಂತರಿಕವಾಗಿ ಪ್ರಮುಖ ಬದಲಾವಣೆಗಳು ಜರುಗತೊಡಗಿದವು. ಅತಿ ಹೆಚ್ಚು ಹಿಂದುಳಿದ ಆಫ್ರಿಕಾದಲ್ಲಿ ಬಂಡವಾಳಶಾಹಿ-ಪೂರ್ವದ ಸಂಬಂಧಗಳ ಮೇಲೆ ಪ್ರಹಾರಗಳು ಹೆಚ್ಚಾದವು. ಈ ಹಂತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಉದ್ದಿಮೆದಾರ ಮತ್ತು ಕಾಮರ್ಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು.

ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು

[ಬದಲಾಯಿಸಿ]
  • ಎರಡನೇ ಮಹಾಯುದ್ದ ಸಮಯದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಯಾಯಿತು. ಹಲವು ವಿಧದ ಕಚ್ಛಾ ವಸ್ತುಗಳ ಉತ್ಪಾದನೆಯಾಯಿತು. ಖನಿಜ ಸಂಪತ್ತುಗಳ ಶೋಧನೆಯಾಯಿತು. ಆಫ್ರಿಕಾದಿಂದ ಹೆಚ್ಚೆಚ್ಚು ಯುದ್ದ ಸಾಮಗ್ರಿಗಳು ಮತ್ತು ಗಣಿ ಸಂಪತ್ತುಗಳನ್ನು ಸಂಸ್ಕರಿಸಿ ಸಾಗಿಸುತ್ತಿದ್ದರಿಂದ 1940-45ರ ಅವಧಿಯಲ್ಲಿ ಆಫ್ರಿಕಾದ ನಗರಗಳು ಮೂರುಪಟ್ಟು ನಾಲ್ಕುಪಟ್ಟು ಹೆಚ್ಚಾದವು. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಆಫ್ರಿಕಾದಿಂದ ಸಾಗಣೆ ಮಾಡುವ ಸಲುವಾಗಿ ಜೀವನಕ್ಕಾಗಿ ಕೃಷಿ ಮಾಡುತ್ತಿದ್ದ ಮತ್ತು ಸಣ್ಣ ಕೈಗಾರಿಕೆಗಳಿದ್ದ ಆಫ್ರಿಕಾದ ಆರ್ಥಿಕ ತಳಪಾಯವನ್ನು ಬೃಹತ್ ಮಟ್ಟದ ರಪ್ತು-ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸಲಾಯಿತು. ಈ ಮಧ್ಯೆ, ಏಷ್ಯಾದಿಂದ ಬರುತ್ತಿದ್ದ ಲಾಭಕ್ಕೆ ಪೆಟ್ಟು ಬಿದ್ದ ನಂತರ ಪ್ರಪಂಚದ ಸುಲಿಗೆಕೋರರ ದೃಷ್ಟಿ ಆಫ್ರಿಕಾ ವಸಾಹತುವಿನತ್ತ ಹೆಚ್ಚೆಚ್ಚು ಹರಿಯಿತು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯನ್ನು ನಾಶಗೊಳಿಸಿ ರೈತಾಪಿಯನ್ನು ಬಲವಂತವಾಗಿ ಕೈಗಾರಿಕಾ ಕಾರ್ಮಿಕರನ್ನಾಗಿಸಲಾಯಿತು. ಹಳ್ಳಿಗರನ್ನು ಗಣಿಗಳು, ರೈಲು-ರಸ್ತೆಗಳು ಮತ್ತು ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡಲು ಯೋಗ್ಯವಿರುವ 'ಕ್ರೂರಪಶು' ಗಳೆಂದು ಪರಿಗಣಿಸಲಾಗುತ್ತಿತ್ತು.
  • ಕಾರ್ಮಿಕ ಪಡೆಯನ್ನು ನಿರ್ಮಿಸಲು ಎರಡು ವಿಧಾನಗಳನ್ನು ಬಳಸಲಾಗುತ್ತಿತ್ತು. ಮೊದಲನೆಯದು, ಹೆಚ್ಚೆಚ್ಚು ತೆರಿಗೆಯನ್ನು ವಿಧಿಸಿ ಅದನ್ನು ಹಣದ ರೂಪದಲ್ಲೇ ಪಾವತಿಸುವಂತೆ ಮಾಡಿದ್ದು. ಈ ತೆರಿಗೆ ಪಾವತಿಸಲು ಹಣಕ್ಕಾಗಿ ಆಫ್ರಿಕನ್ನರು ಯೂರೋಪ್ ಅಥವಾ ಅಮೇರಿಕಾದ ಕಂಪನಿಗಳಲ್ಲಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬಹುತೇಕ ವಸಾಹತುಗಳಲ್ಲಿ ಆಫ್ರಿಕನ್ನರ ಭೂಮಿ ಮೇಲಿನ ಒಡೆತನ ಶೇಕಡಾ 10ಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದ ಭೂಮಿಯನ್ನು ರಪ್ತು-ಆಧಾರಿತ ಬೆಳೆ ಬೆಳೆಯಲು ಅಗತ್ಯಕ್ಕಿಂತ ಅಗಾಧವಾದ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ವಸಾಹತುಶಾಹಿಗಳಿಗೆ ನೀಡಿದ್ದರಿಂದ ಸ್ವಾವಲಂಬಿಯಾಗಿದ್ದ ಆಫ್ರಿಕಾ ಆಹಾರಕ್ಕಾಗಿ ಆಮದು ಮಾಡಿಕೊಳ್ಳಬೇಕಾಯಿತು. ಎರಡನೆಯದು, ಬಲಾತ್ಕಾರದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಆಧುನಿಕ ಗುಲಾಮಗಿರಿ. ಹಳ್ಳಿಗಳಿಂದ ಅಪಹರಿಸಿದ ಜನರನ್ನು ಗುತ್ತಿಗೆದಾರರ ನೆರವಿನಿಂದ ಬಲವಂತವಾಗಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆರೋಗ್ಯ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಅತ್ಯವಶ್ಯ ಸೌಲಭ್ಯಗಳಿಲ್ಲದೆ ಹಂದಿಗೂಡಿನಂಥಹ ವಸತಿಗಳಲ್ಲಿ ವಾಸವಾಗಿದ್ದುಕೊಂಡು ದೀರ್ಘಾವಧಿ ಸಮಯ ಕೆಲಸ ಮಾಡುತ್ತಾ ಕುಟುಂಬದ ಸಂಪರ್ಕವಿಲ್ಲದೆ ಕಾರ್ಮಿಕರ ಜೀವನ ಹೀನಾಯ ಸ್ಥಿತಿಯಲ್ಲಿತ್ತು.
  • ಇಂಥಹ ಕ್ರೂರ ಸ್ಥಿತಿಗಳಿಂದಾಗಿ ಉತ್ತಮ ವೇತನ, ಉತ್ತಮ ದುಡಿಯುವ ವಾತಾವರಣಕ್ಕಾಗಿ ಮತ್ತು ಗುಲಾಮಗಿರಿಯನ್ನು ಕೊನೆಗಾಣಿಸಲು ಕಾರ್ಮಿಕ ಸಂಘಟನೆಗಳು 1920ರ ದಶಕದಲ್ಲಿ ತುನೀಷಿಯಾ, ಜಾಂಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದುಬಂದವು. ಆರಂಭದ ಕಾರ್ಮಿಕ ಸಂಘಟನೆಗಳು ಕಾನೂನುಬಾಹಿರವಾಗಿದ್ದು ಮುಷ್ಕರಗಳನ್ನು ನಡೆಸುವವರಿಗೆ ಆಮಿಷವನ್ನೊಡ್ಡಲಾಗುತ್ತಿತ್ತು, ಇದಕ್ಕೆ ಬಗ್ಗದಿದ್ದರೆ ದಂಡನೆಗೊಳಪಡಿಸಲಾಗುತ್ತಿತ್ತು. ಮುಷ್ಕರಗಳಲ್ಲಿ ಡಜನ್ಗಟ್ಟಲೆ ಕಾರ್ಮಿಕರನ್ನು ಕೊಂದು ನೂರಾರು ಮಂದಿಯನ್ನು ಬಂಧಿಸಿ ಅವರನ್ನು ಮತ್ತೆ ಆಧುನಿಕ ಗುಲಾಮಗಿರಿಗೆ ದೂಡಲಾಗುತ್ತಿತ್ತು.
  • ಸಾಮ್ರಾಜ್ಯಶಾಹಿ ಮತ್ತು ಖಾಸಗಿ ಕಂಪನಿಗಳ ದುರಾಸೆ ಮತ್ತು ಶೋಷಣೆ ಹೆಚ್ಚಾದಂತೆ, ದುಡಿಯುವ ಜನತೆಯ ಐಕ್ಯತೆ ಗಟ್ಟಿಗೊಂಡಿತು. ಸಾಮ್ರಾಜ್ಯಶಾಹಿ ಗುಲಾಮತನದ ವಿರುದ್ದದ ಹೋರಾಟದಲ್ಲಿ ಮೊದಲಿಗೆ ದೇಶೀಯ ಬಂಡವಾಳಶಾಹಿ ಮತ್ತು ಬುದ್ದಿಜೀವಿಗಳ ನೇತೃತ್ವದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳನ್ನು ಸ್ಥಾಪಿಸಲಾಯಿತು. 1920ರಲ್ಲಿ ಅಲ್ಜೀರಿಯಾ, ತುನೀಷಿಯಾ ಮತ್ತು ಮೊರಾಕೋಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಸ್ಥಾಪಿಸಲಾಯಿತು. ಎಲ್ಲೆಡೆ ವ್ಯಾಪಿಸುತ್ತಿದ್ದ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಗಳಲ್ಲಿ ಉತ್ತರ ಆಫ್ರಿಕಾದ ರಾಷ್ಟ್ರಗಳಾದ ಈಜಿಪ್ಟ್, ಸೂಡಾನ್, ಮೊರಾಕೋ ಮುಂಚೂಣಿಯಲ್ಲಿದ್ದವು. ಪೂರ್ವ ಆಫ್ರಿಕನ್ ಒಕ್ಕೂಟವನ್ನು ಕೀನ್ಯಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟದಲ್ಲಿ ಅಂಗೋಲಾ, ಕಾಂಗೋ, ಇಟಾಲಿಯನ್ ಸೋಮಾಲಿಲ್ಯಾಂಡ್ ಮತ್ತು ಚಡ್, ಇನ್ನಿತರ ಪ್ರದೇಶಗಳಲ್ಲಿ ರೈತಾಪಿಯ ಗಲಭೆಗಳಿಂದ ಮತ್ತು ದೊಡ್ಡ ನಗರಗಳಲ್ಲಿ ನಡೆದ ಮುಷ್ಕರ ಮತ್ತು ಪ್ರದರ್ಶನಗಳಿಂದ ಬಂಡಾಯವು ತೀವ್ರ ಸ್ವರೂಪವನ್ನು ಪಡಕೊಂಡು ಆಳುವ ವರ್ಗಗಳಿಂದ ಕೆಲವು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗಿತ್ತು. ಇಟಲಿಯು ಇಥಿಯೋಪಿಯಾದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಜರುಗಿದವು.
  • ದ್ವಿತೀಯ ಮಹಾಯುದ್ದ ಸಮಯದಲ್ಲಿ ಆಫ್ರಿಕಾದ ಎಲ್ಲ ರಾಷ್ಟ್ರಗಳ ಮೇಲೂ ಯುದ್ದವನ್ನು ಹೇರಲಾಯಿತು. 1930ರ ದಶಕದಲ್ಲಿ ಆಫ್ರಿಕಾವು ಫ್ಯಾಸಿಸ್ಟ್ ಆಕ್ರಮಣವನ್ನು ಎದುರಿಸಬೇಕಾಯಿತು. ಈಜಿಪ್ಟ್, ಲಿಬ್ಯಾ, ತುನೀಷಿಯಾ, ಇಥಿಯೋಪಿಯಾ, ಸೋಮಾಲಿಲ್ಯಾಂಡ್, ಸೂಡಾನ್ ಮತ್ತು ಕೀನ್ಯಾ ಭೂಪ್ರದೇಶಗಳಲ್ಲಿ ಯುದ್ದ ಚಟುವಟಿಕೆಗಳು ಜರುಗಿದವು. ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕಾ ಸೈನಿಕರು ಬ್ರಿಟನ್ ಮತ್ತು ಜಪಾನ್ ಸೇನೆಯ ಭಾಗವಾಗಿ ಯುದ್ದಗಳಲ್ಲಿ ಕಾದಾಡಿದರು. ಆಫ್ರಿಕಾದಲ್ಲಿನ ಇಟಾಲಿಯನ್ ಮತ್ತು ಜರ್ಮನ್ ಫ್ಯಾಸಿಸಂ ವಿರುದ್ದ ನಡೆದ ಹೋರಾಟಗಳಲ್ಲಿ ಆಫ್ರಿಕಾದ ವಸಾಹತುಗಳು ಗಣನೀಯ ಮಿಲಿಟರಿ ಕೊಡುಗೆ ನೀಡಿವೆ.
  • ಅಮೇರಿಕಾ ಮತ್ತು ಯೂರೋಪ್ ವಸಾಹತುಶಾಹಿ ರಾಷ್ಟ್ರಗಳಿಗೆ ಎರಡನೇ ಮಹಾಯುದ್ದವು ನಾಜಿವಾದದ ವಿರುದ್ದವಿದ್ದರೆ, ಆಫ್ರಿಕಾದ ಸೈನಿಕರಿಗೆ ವರ್ಣಭೇಧ ನೀತಿ ಮತ್ತು ವಸಾಹತುಶಾಹಿಯ ವಿರುದ್ದದ ಯುದ್ದವಾಗಿತ್ತು. ಭಾರತದಲ್ಲಿ ಬ್ರಿಟಿಷರಿಗಾಗಿ ಸೇವೆ ಸಲ್ಲಿಸುತ್ತಿದ್ದ ನೈಜೀರಿಯಾದ ಸೈನಿಕನೊಬ್ಬ 1945ರಲ್ಲಿ ತಾನು ಮನೆಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾನೆ: ವಿದೇಶದಲ್ಲಿರುವ ನಾವೆಲ್ಲ ಸೈನಿಕರು ಹೊಸ ವಿಚಾರದೊಂದಿಗೆ ವಾಪಸು ಬರುತ್ತಿದ್ದೇವೆ. ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿವೆಂದು ನಮಗೆ ತಿಳಿಸಲಾಗಿದೆ. ನಮಗೆ ಸ್ವಾತಂತ್ರ್ಯ ಬೇಕಷ್ಟೆ. ಬಿಳಿಯ ಸೈನಿಕರೊಂದಿಗೆ ಸರಿಸಮಾನರಾಗಿ ಆಫ್ರಿಕಾದ ಸೈನಿಕರು ಹೋರಾಡಿದರು. ದೂರ ಪ್ರದೇಶಗಳಲ್ಲಿ ಯುದ್ದಗಳನ್ನು ಗೆದ್ದರು. ಹಲವರು ಓದಲು, ಬರೆಯಲು ಕಲಿತರು, ತಾಂತ್ರಿಕ ಪರಿಣತಿ ಪಡೆದರು. ಇದರಿಂದ ಬಿಳಿಯರು ಮಾತ್ರವೇ ಶ್ರೇಷ್ಟರೆಂಬುದು ಅಸಂಬದ್ಧವೆನಿಸಿತವರಿಗೆ. ಹೀಗಾಗಿ ಸ್ವಾತಂತ್ರ್ಯದ ವಿಚಾರಗಳನ್ನು ಅವರು ಅತ್ಯುತ್ಸಾಹದಿಂದ ಸ್ವಾಗತಿಸಿದರು.
  • ಕ್ರಾಂತಿಕಾರಿ ವಿಚಾರಗಳನ್ನು ಹೊಂದಿರುವ ಕಾರ್ಮಿಕರ ಪಕ್ಷ ಮಾತ್ರವೇ ಪೂರ್ಣ ಸ್ವಾತಂತ್ರ್ಯ ಗಳಿಸಲು ಸಾಧ್ಯವೆಂದು ಅಲ್ಜಿರೀಯಾ ಸ್ವಾತಂತ್ರ್ಯ ಹೋರಾಟಗಾರರು ನಂಬಿದ್ದರು. ಆರಂಭಿಕ ಕಾರ್ಮಿಕ ಸಂಘಟನೆಗಳ ನಾಯಕರೆಲ್ಲ ಕಮ್ಯುನಿಸ್ಟರೇ ಆಗಿದ್ದು ಯೂರೋಪಿನ ಸಮಾಜವಾದಿ ಚಳುವಳಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ರಾಷ್ಟ್ರೀಯ ವಿಮೋಚನಾ ಕ್ರಾಂತಿಗಳಲ್ಲಿ ಯಶಗಳಿಸಿದ್ದು ಮತ್ತು ರಷ್ಯಾ, ಚೀನಾ, ವಿಯೆಟ್ನಾಂ, ಉತ್ತರ ಕೊರಿಯಾಗಳು ಸಮಾಜವಾದಿ ರಾಷ್ಟ್ರಗಳಾಗಿ ಪರಿವರ್ತನೆಯಾದದ್ದು ಆಫ್ರಿಕಾದ ರಾಷ್ಟ್ರಗಳಿಗೆ ಮತ್ತಷ್ಟು ಪ್ರೇರಣೆ ನೀಡಿದವು.
  • ವಿಮೋಚನಾ ಹೋರಾಟ ಸಮಯದಲ್ಲಿ ಆಫ್ರಿಕಾದ ಜನತೆಯು ಒಗ್ಗೂಡಲಾರಂಭಿಸಿದರು. ಅವರ ಸಾಮಾಜಿಕ ಪ್ರಜ್ಞೆಯು ಬೆಳೆಯತೊಡಗಿತು ಮತ್ತು ಬುದ್ದಿಮತ್ತೆಯ ಮಿಲಿಟರಿ ಕಮ್ಯಾಂಡರ್ಗಳು ಮತ್ತು ನಾಯಕರು ಉತ್ತುಂಗಕ್ಕೆ ಬರತೊಡಗಿದರು. ಆದರೂ ವಸಾಹತುಶಾಹಿ ಶಕ್ತಿಗಳ ಪ್ರಹಾರವನ್ನು ತಾಳಲಾರದೆ, ಆದಾಯ ಗಳಿಸುವ ಹಾದಿಗಳಿಲ್ಲದೆ ಹಸಿವು ಮತ್ತು ಹಲವು ರೋಗರುಜಿನಗಳಿಂದ ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕನ್ನರು ಸಾವನ್ನಪ್ಪುತ್ತಿದ್ದರು. ರಪ್ತು-ಆಧಾರಿತ ಕೈಗಾರಿಕೆಗಳು ಹೆಚ್ಚಾದಂತೆ ಕಾರ್ಮಿಕ ಸಂಖ್ಯೆಯಲ್ಲಿ ಹೆಚ್ಚಳವಾಯಿತು. 1950ರ ದಶಕದಲ್ಲಿ 4.0 ಲಕ್ಷ ಸ್ವ-ಇಚ್ಚಾ ಕಾರ್ಮಿಕರಿದ್ದರೆ ಸುಮಾರು 3.8 ಲಕ್ಷ ಗುತ್ತಿಗೆ ಕಾರ್ಮಿಕರಿದ್ದರು ಎಂದು ಅಂಗೋಲಾದ ವಸಾಹತುಶಾಹಿ ಸರ್ಕಾರದ ವರದಿಗಳೇ ತಿಳಿಸುತ್ತವೆ. ಆಫ್ರಿಕಾದಾದ್ಯಂತ ಈ ಪ್ರಮಾಣದ ಗುತ್ತಿಗೆ ಕಾಮರ್ಿಕರ ಸಂಖ್ಯೆ ಸರ್ವ ಸಾಮಾನ್ಯವಾಗಿತ್ತು.
  • ನಿಧಾನವಾಗಿ ಆಫ್ರಿಕಾದಲ್ಲಿ ತಳವೂರಿದ್ದ ವಸಾಹತು ವ್ಯವಸ್ಥೆಯು ಶಿಥಿಲಗೊಳ್ಳತೊಡಗಿತು. ಫ್ಯಾಸಿಸ್ಟ್ ರಾಷ್ಟ್ರಗಳ ಕೂಟವನ್ನು ಸೋವಿಯನ್ ಸೇನೆ ಮತ್ತು ಮೈತ್ರಿಕೂಟವು ಹೀನಾಯವಾಗಿ ಸೋಲಿಸಿದ್ದು ಆಫ್ರಿಕಾವು ರಾಜಕೀಯವಾಗಿ ಜಾಗೃತಗೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತು. ದ್ವಿತೀಯ ಮಹಾಯುದ್ದ ನಂತರದಲ್ಲಿ ವಸಾಹತು ರಾಷ್ಟ್ರಗಳಲ್ಲಿ ವಿಮೋಚನೆಗಾಗಿ ಹೋರಾಡುವ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ವ್ಯತಿರಿಕ್ತವಾಗಿ ವಸಾಹತು-ಪರ ಪಕ್ಷಗಳು ಮತ್ತು ಗುಂಪುಗಳನ್ನು ಸಹ ಸ್ಥಾಪಿಸಲಾಯಿತು. ಈ ಗುಂಪುಗಳು ಪ್ರಮುಖವಾಗಿ ಬಂಡವಾಳಗಾರರಾಗಿ ಪರಿವರ್ತಗೊಂಡಿದ್ದ ಪಾಳೇಗಾರಿ ದೊರೆಗಳನ್ನು ಬೆಂಬಲಿಸುತ್ತಿದ್ದವು. ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಹೋರಾಟವು ವಿವಿಧ ರೂಪಗಳಲ್ಲಿತ್ತು. ಬಹುತೇಕ ವಸಾಹತುಗಳಲ್ಲಿ ಅದು ಪ್ರತಿಭಟನೆಗಳು, ಮುಷ್ಕರ ಮತ್ತು ನಾಗರೀಕ ಅಸಹಕಾರ ಚಳುವಳಿಯ ರೂಪದಲ್ಲಿತ್ತು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಬಂಡಾಯಗಳು, ಗೆರಿಲ್ಲಾ ಹೋರಾಟಗಳು ನಡೆದವು. ಈಜಿಪ್ಟ್ನಲ್ಲಿ ಸಶಸ್ತ್ರ ಹೋರಾಟಗಳು ಜರುಗಿದವು.
  • ಆಫ್ರಿಕಾದ ವಿಮೋಚನೆಯಲ್ಲಿ ಪ್ರಧಾನ ಪಾತ್ರವಹಿಸಿದ ಅಂಶವೆಂದರೆ ಕಾರ್ಮಿಕ ಸಂಘಟನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿ. 20ನೇ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಶೋಷಣೆಯ ಸಂಕಷ್ಟಮಯ ಪರಿಸ್ಥಿತಿಯಿಂದಾಗಿ ಆಫ್ರಿಕಾದ ಕಾರ್ಮಿಕ ಸಂಘಟನೆಗಳು ಸೆಟೆದೆದ್ದು ಬಂದವು. ಮೊರಾಕೋ ಮತ್ತು ತುನೀಷಿಯಗಳಲ್ಲಿ ಬೆಳೆದು ಬಂದ ಸಶಸ್ತ್ರ ಚಳುವಳಿಯಿಂದಾಗಿ 1956ರಲ್ಲಿ ಫ್ರೆಂಚ್ ಸರಕಾರವು ಸ್ವಾತಂತ್ರ್ಯ ಘೋಷಿಸಬೇಕಾಯಿತು. ಇಟಲಿಯ ವಸಾಹತುವಾಗಿದ್ದ ಲಿಬ್ಯಾವನ್ನು ನಂತರ ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡವು. ಏಳು ವರ್ಷಗಳವರೆಗೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ 15 ಲಕ್ಷ ಜನರನ್ನು ಕಳೆದುಕೊಂಡಿದ್ದ ಅಲ್ಜಿರೀಯಾ ಅಂತಿಮವಾಗಿ 1962ರಲ್ಲಿ ಯಶಗಳಿಸಿತು.
  • ಜ್ಯೂಲಿಯಸ್ ನೈರೇರೆಯವರು ಟಾಂಜೇನಿಯಾ ದೇಶದಲ್ಲಿ ತಾಂಗಾನಿಕಾ ಆಫ್ರಿಕನ್ ನ್ಯಾಷನಲ್ ಯೂನಿಯನ್ ಒಂದನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದರು. ಅವರು ಆ ದೇಶದ ಮೊದಲ ಅಧ್ಯಕ್ಷರೂ (1962-1985) ಆಗಿದ್ದರು. ಇಡಿ ಆಫ್ರಿಕಾಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ನೀಡಿದರು. ಜಿಂಬಾಬ್ವೆ, ಮೊಜಾಂಬಿಕ್, ಅಂಗೋಲಾ ಮತ್ತು ಬಿಗಾಂಡಾದ ಸ್ವಾತಂತ್ರ್ಯ ಹೋರಾಟದ ಗೆರಿಲ್ಲಾ ನೆಲೆಗಳಿಗೆ ಸಹಾಯ ಒದಗಿಸಿದ್ದರು.
  • ಬೆಲ್ಜಿಯನ್ ಕಾಂಗೋ (ಪ್ರಸ್ತುತ ಝೈರೇ) ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂಚೂಣಿ ನಾಯಕತ್ವ ನೀಡಿದವರೆಂದರೆ ಪ್ಯಾಟ್ರಿಕ್ ಲೂಮುಂಬಾ ರವರು. 1959ರಲ್ಲಿ ಬೆಲ್ಜಿಯಂ ಸರ್ಕಾರವು ಕಾಂಗೋ ದೇಶಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ತಮ್ಮ ಬಾಲಂಗೋಚಿಗಳಿಗೆ ನೀಡುವ ಪ್ರಯತ್ನವನ್ನು ಲೂಮುಂಬಾ ನಾಯಕತ್ವದ ಪಕ್ಷವು ವಿರೋಧಿಸಿತು. ತೀವ್ರ ಚಳುವಳಿಗಳಿಂದಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಲೂಮುಂಬಾ ಪ್ರಧಾನಮಂತ್ರಿಯಾದರೂ ಪ್ರತ್ಯೇಕತಾವಾದದ ದನಿಯೆತ್ತಿ ಬಂಡಾಯ ಸಾರಿದ ಕಟಿಂಗಾ ಪ್ರಾಂತ್ಯಕ್ಕೆ ಬೆಂಬಲವಾಗಿ ಬೆಲ್ಜಿಯನ್ ಸೇನೆ ನಿಂತಿತು. ಇದರ ವಿರುದ್ದ ಲೂಮುಂಬಾ ವಿಶ್ವ ಸಂಸ್ಥೆಗೆ ದೂರಿತ್ತರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದಿನ ಅಧ್ಯಕ್ಷ ಈಸಬವು ಲೂಮುಂಬಾ ಸರ್ಕಾರವನ್ನು ವಜಾ ಮಾಡಿದರು. ಈ ಅವಕಾಶ ಬಳಸಿಕೊಂಡು ಮಿಲಿಟರಿ ನಾಯಕರು ಅಧಿಕಾರ ಗ್ರಹಣ ಮಾಡಿದರು. ನಂತರದಲ್ಲಿ ಲೂಮುಂಬಾರನ್ನು ಹತ್ಯೆ ಮಾಡಲಾಯಿತು. ಇದರ ಹಿಂದೆ ಅಮೇರಿಕಾದ ಗೂಢಾಚಾರ ಸಂಸ್ಥೆ ಸಿಐಎ ಯ ಪ್ರಧಾನ ಪಾತ್ರವಿದೆ ಎನ್ನಲಾಗುತ್ತದೆ.
  • ಘಾನಾದಲ್ಲಿ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕ್ವಾಮೆ ಎನ್ ಕ್ರೂಮಾರವರು ಸ್ವತಂತ್ರ ಘಾನಾದ ಅಧ್ಯಕ್ಷರಾದರು. ಅವರು ಇಡೀ ಆಫ್ರಿಕಾವನ್ನು ಸಾಮ್ರಾಜ್ಯಶಾಹಿ-ವಸಾಹತುಶಾಹಿಯಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಆಫ್ರಿಕಾದ ಐಕ್ಯತೆಗಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ ಅವರು ಹಲವು ರಾಷ್ರಗಳ ಬೆಂಬಲ ಗಳಿಸಿ ಆಫ್ರಿಕಾ ಐಕ್ಯತಾ ಸಂಘಟನೆ (ಓಎಯು) ನ್ನು 1963ರಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  • 1960ರ ಹೊತ್ತಿಗೆ 17 ರಾಷ್ಟ್ರಗಳು ಸ್ವತಂತ್ರಗೊಂಡವು. 1970ರ ಹೊತ್ತಿಗೆ ಬಹುತೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆದವು. 1961ರಲ್ಲಿ ಅಂಗೋಲಾದಲ್ಲಿ, 1964ರ್ಲಿ ಜುನಿಯಾ ಮತ್ತು 1964ರಲ್ಲಿ ಮೊಜಾಂಬಿಕ್ಗಲ್ಲಿ ಪೋರ್ಚುಗೀಸರ ವಿರುದ್ದ ಸಶಸ್ತ್ರ ಹೋರಾಟ ನಡೆಯಿತು. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಯಥೇಚ್ಛವಾದ ಖನಿಜ ಸಂಪತ್ತು ದೊರೆಯುತ್ತಿದ್ದರಿಂದ ಪಶ್ಚಿಮ ರಾಷ್ಟ್ರಗಳ ಕಣ್ಣೆಲ್ಲ ಅಲ್ಲಿತ್ತು. 1960ರ ದಶಕದಿಂದೀಚೆಗೆ ದಕ್ಷಿಣ ಆಫ್ರಿಕಾದೊಂದಿಗೆ ಹೆಚ್ಚು ಬಂಡವಾಳ ಹೂಡುವ ಮತ್ತು ವ್ಯಾಪಾರ ಬಾಂಧವ್ಯ ಹೊಂದಿದ್ದ ಬ್ರಿಟನ್, ಅಮೇರಿಕಾಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿತು. ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ಜಿಂಬಾಬ್ವೆ, ಅಂಗೋಲಾ, ಮೊಜಾಂಬಿಕ್ ಮತ್ತು ನಮೀಬಿಯಾದ ಭೂಭಾಗಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದವು. ಜಿಂಬಾಬ್ವೆ ಮತ್ತು ನಮೀಬಿಯಾಗಳಲ್ಲಿ ಗೆರಿಲ್ಲಾ ಯುದ್ದ ಚಟುವಟಿಕೆಗಳು ತೀವ್ರ ಸ್ವರೂಪ ಪಡಕೊಂಡದ್ದರಿಂದ ಅಲ್ಲಿ ಚುನಾವಣೆ ನಡೆಸಲು ಅಮೇರಿಕಾ ಒಪ್ಪದೆ ಅನ್ಯ ಮಾರ್ಗವಿರಲಿಲ್ಲ.
  • 1975ರಲ್ಲಿ ಅಂಗೋಲಾವು ಸ್ವತಂತ್ರ ಗಳಿಸಿತು. ಸ್ವಾತಂತ್ರ್ಯಗೊಂಡ ಬಳಿಕ ಅಂಗೋಲಾದಲ್ಲಿ ಮಾಕ್ಸರ್್ವಾದಿ ಪಕ್ಷವು ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಜೋನಾಸ್ ಸವಿಂಬಿ ಎಂಬುವನ ನಾಯಕತ್ವದಲ್ಲಿ ಯೂನಿಟಾ ಎಂಬ ಹೆಸರಿನ ಚಳುವಳಿಯು ಆರಂಭಗೊಂಡು ಹೊಸ ಸರ್ಕಾರದ ವಿರುದ್ದ ಗೆರಿಲ್ಲಾ ಯುದ್ದ ನಡೆಸಿತು. ಈ ಚಳುವಳಿಗೆ ಬಿಳಿಯ ಜನಾಂಗದ ನೇತೃತ್ವ ಹೊಂದಿದ್ದ ದಕ್ಷಿಣ ಆಫ್ರಿಕಾ ಸರ್ಕಾರವು ಸೇರಿದಂತೆ ಅಮೇರಿಕಾ ಮತ್ತು ಯೂರೋಪ್ ರಾಷ್ರಗಳು ಬೆಂಬಲ ನೀಡಿದ್ದವು. ಅಂಗೋಲಾದ ಸರ್ಕಾರವನ್ನು ರಕ್ಷಿಸುವ ಸಲುವಾಗಿ ಕ್ಯೂಬಾ ಮತ್ತು ಸೋವಿಯತ್ ರಷ್ಯಾ ನೆರವು ನೀಡಿದವು. ಆದರೂ 1991 ರ ಸಂಧಾನಗಳು ಮತ್ತು 1992ರ ಚುನಾವಣೆಗಳು ಕೂಡ ಈ ನಾಗರೀಕ ಯುದ್ದವನ್ನು ಕೊನೆಗಾಣಿಸುವಲ್ಲಿ ವಿಫಲವಾದವು. 1998-99 ರ ಹೊತ್ತಿಗೆ ಅಂಗೋಲಾದ ಶೇ. 60ರಷ್ಟು ಪ್ರದೇಶದ ಮೇಲೆ ಯೂನಿಟಾ ಸಂಘಟನೆಯು ನಿಯಂತ್ರಣದ ಹೊಂದಿದ್ದು, ಗಂಭೀರವಾದ ಹೋರಾಟಗಳು ನಡೆದು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಅಂಗೋಲಾದ ಸೇನೆಯು ಯೂನಿಟಾ ನೆಲೆಗಳ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಿ ಶತ್ರುಪಡೆಗಳನ್ನು ಬಹುತೇಕ ಧ್ವಂಸಗೊಳಿಸಿತು. ಆದರೂ, 2002ರಲ್ಲಿ ಸವಿಂಬಿಯು ಮರಣಗೊಂಡ ನಂತರವಷ್ಟೆ ನಾಗರೀಕ ಯುದ್ದವು ಅಂತ್ಯಕಂಡಿತು. ಯೂನಿಟಾ ಸಂಘಟನೆಯು ತನ್ನ ಸೇನೆಯನ್ನು ನಾಶ ಮಾಡಿ ತಾನೊಂದು ರಾಜಕೀಯ ಪಕ್ಷವೆಂದು ಘೋಷಿಸಿಕೊಂಡಿತು. ಅಂಗೋಲಾದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ನಿರಂತರ ನಾಗರೀಕ ಯುದ್ದಗಳಿಂದಾಗಿ 15ಲಕ್ಷಕ್ಕೂ ಹೆಚ್ಚು ಮಂದಿ ಮರಣಹೊಂದಿದ್ದಾರೆ.
  • ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರವು ನಮೀಬಿಯಾವನ್ನು ಆಕ್ರಮಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ಸೇನೆಯ ವಿರುದ್ದ ನೈರುತ್ಯ ಪೊಲೀಸ್ ಸಂಘಟನೆಯು ಸ್ಯಾಮ್ ನೂಜೋಮಾರವರ ನಾಯಕತ್ವದಲ್ಲಿ ಅವಿರತ ಹೋರಾಟ ನಡೆಸಿತು. ಇದರ ಫಲವಾಗಿ ಸ್ಯಾಮ್ ನೂಜೋಮಾರವರು 1990ರಲ್ಲಿ ಸ್ವಾತಂತ್ರ್ಯ ಗಳಿಸಿದ ನಮೀಬಿಯಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಮೀಬಿಯಾವು ಅಂಗೋಲಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಬಂಡುಕೋರ ಯೂನಿಟಾ ಸಂಘಟನೆಯ ವಿರುದ್ದ ಹೋರಾಡಲು ಬೆಂಬಲ ನೀಡಿತು. ಯೂನಿಟಾ ಸೇನೆಯ ಮೇಲೆ ದಾಳಿ ನಡೆಸಲು ನಮೀಬಿಯಾ ತನ್ನ ಭೂನೆಲೆಗಳನ್ನು ಅಂಗೋಲಾ ಸೇನೆಗೆ ನೀಡಿತು. ಅಂಗೋಲಾದ ಯುದ್ದದಿಂದಾಗಿ ಸಾವಿರಾರು ಸಂಖ್ಯೆಯ ನಿರಾಶ್ರಿತರು ನಮೀಬಿಯಾದಲ್ಲಿ ಆಶ್ರಯ ಪಡೆದರು. 2001ರಲ್ಲಿ ಸುಮಾರು 30,000 ಅಂಗೋಲಾ ನಿರಾಶ್ರಿತರು ನಮೀಬಿಯಾದಲ್ಲಿದ್ದರು. ನಮೀಬಿಯಾದಲ್ಲಿ ಶೇ. 20ರಷ್ಟು ಜನತೆ ಶೇ. 75ರಷ್ಟು ಭೂಮಿಯನ್ನು ಹೊಂದಿದ್ದಾರೆ. ಭೂಸುಧಾರಣೆಯು ಅತ್ಯಂತ ಪ್ರಮುಖವಾದ ವಿಷಯವಾಗಿದ್ದು ತೀರಾ ನಿಧಾನಗತಿಯಲ್ಲಿ ಭೂಸುಧಾರಣಾ ಕಾರ್ಯವು ಸಾಗುತ್ತಿದೆ. 2003ರಲ್ಲಿ ಹಿಫಿಕೆಪುನ್ಯೆ ಪೊಹಂಬಾರವರು ನಮೀಬಿಯಾದ ಅಧ್ಯಕ್ಷರಾಗಿ ಚುನಾಯಿತರಾದರು.

ದಕ್ಷಿಣ ಆಫ್ರಿಕಾ

[ಬದಲಾಯಿಸಿ]
  • ವರ್ಣಭೇಧ ನೀತಿಯಿರುವ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ಜನಾಂಗವು ಸಾಮ್ರಾಜ್ಯಶಾಹಿ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೆಂಡ್, ಮತ್ತು ಜರ್ಮನಿಗಳಿಂದ ಬೆಂಬಲ ಪಡೆದಿತ್ತು. ದಕ್ಷಿಣ ಆಫ್ರಿಕಾದ ಸಾಮಾಜಿಕ ಮತ್ತು ಆರ್ಥಿಕ ರಚನೆ ಹೇಗಿತ್ತೆಂದರೆ, ಅದು ವಸಾಹತುವಾಗಿರದಿದ್ದರೂ, ವಿದೇಶಿ ಬಿಳಿಯ ಜನಾಂಗವು ಸಣ್ಣ ಸಂಖ್ಯೆಯಲ್ಲಿದ್ದರೂ, ಬಹುಸಂಖ್ಯಾತ ಜನತೆಯನ್ನು ದಮನ ಮಾಡುತ್ತಿತ್ತು. ಆ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡದ್ದು ದೂರದಲ್ಲೆಲ್ಲೂ ಇರುವ ಅನ್ಯರಾಷ್ಟ್ರವಾಗಿರದೆ, ತನ್ನದೇ ಗಡಿಯೊಳಗಿರುವ ಬಿಳಿಯ ಜನಾಂಗವಾಗಿತ್ತು. ದಕ್ಷಿಣ ಆಫ್ರಿಕಾದ ಕಾರ್ಮಿಕರ ಸಂಖ್ಯೆಯು ಹೆಚ್ಚಳಗೊಂಡಂತೆ ಸ್ವಾತಂತ್ರ್ಯಕ್ಕಾಗಿ ಮುಷ್ಕರಗಳನ್ನು ನಡೆಸಲಾಯಿತು. ಇದರೊಂದಿಗೆ ಸ್ಟೀವ್ ಬೈಕೊರವರ ಕಪ್ಪು ಜನಾಂಗದ ಪ್ರಜ್ಞೆಯ ಚಳುವಳಿ ಮತ್ತು ವಿದ್ಯಾರ್ಥಿ ನೇತೃತ್ವದ ಚಳುವಳಿಗಳು ತೀವ್ರಗೊಂಡವು. 1985ರಲ್ಲಿ ದಕ್ಷಿಣ ಆಫ್ರಿಕಾ ಕಾರ್ಮಿಕ ಸಂಘಟನೆಗಳ ಒಕ್ಕೂಟವನ್ನು (ಕೊಸಾಟು) ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಚಳುವಳಿಗೆ ಇನ್ನಿಲ್ಲದಂಥ ಸೆರ್ಯ ನಿಡಿತು. ಈ ಒಕ್ಕೂಟವು ಒಂದು ಮಾದರಿ ಸಂಘಟನೆಯಾಗಿ ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ ಮತ್ತು ಸ್ವಾಜಿಲ್ಯಾಂಡ್ ಗಳಲ್ಲಿನ ಕಾರ್ಮಿಕ ಸಂಘಟನೆಗಳಿಗೆ ನೇರವಾದ ನೆರವು ಮತ್ತು ನಿದರ್ೇಶನಗಳನ್ನು ನೀಡಿತು. ಆದರೂ ದಕ್ಷಿಣ ಆಫ್ರಿಕಾ ಸರ್ಕಾರರದ ನಾಯಕನಾಗಿದ್ದ ಪಿ.ಡಬ್ಲ್ಯೂ ಬೋಥಾನು ಇದಕ್ಕೆ ಮಣಿಯದೆ ತುರ್ತು ಪರಿಸ್ಥಿತಿ ಹೇರಿದನು. ಧೃತಿಗೆಡದ ಕಾರ್ಮಿಕರ ನೇತೃತ್ವದಲ್ಲಿ ಜನರು ಬೀದಿಗಳಲ್ಲಿ ಹೆಚ್ಚೆಚ್ಚು ನೆರೆಯಲಾರಂಭಿಸಿದರು, ಕಾರ್ಖಾನೆಗಳು ಮುಷ್ಕರದಿಂದ ಗರಬಡಿದಂತೆ ನಿಂತವು. ವರ್ಣಭೇದ ನೀತಿಯನ್ನು ಹತ್ತಿಕ್ಕುವಂತೆ ಮತ್ತು ಕರಿಯರಿಗೂ ಕೂಡ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ದಕ್ಷಿಣ ಆಫ್ರಿಕಾದ ಜನತೆಯೂ ಸೇರಿದಂತೆ ಪ್ರಪಂಚದ ಎಲ್ಲ ಮೂಲೆಗಳಿಂದ ಒತ್ತಡ ಬರಲಾರಂಭಿಸಿತು. ಹಲವು ದೇಶಗಳು ಆರ್ಥಿಕ ದಿಗ್ಪ್ಬಂಧನ ವಿಧಿಸಿದವು.
  • 1989ರಲ್ಲಿ ಪಿ.ಡಬ್ಲ್ಯೂ ಬೋಥಾರವರ ಸ್ಥಾನದಲ್ಲಿ ಎಫ್ ಡಬ್ಲ್ಯೂ ಡಿ ಕ್ಲರ್ಕ್ ಎಂಬುವನು ಅಧ್ಯಕ್ಷನಾದನು. ಒಂದೆಡೆ, ನೆಲ್ಸನ್ ಮಂಡೇಲಾ, ಆಲಿವರ್ ಟ್ಯಾಂಬೊ, ಮತ್ತು ವಾಲ್ಟರ್ ಸಿಸುಲು ರವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಘಟನೆಗೆ ನಾಯಕತ್ವ ನೀಡಿದ್ದರು. 1990ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಈ ಪಕ್ಷಗಳು ತಮ್ಮ ಹಿಂಸಾತ್ಮಕ ಹೋರಾಟವನ್ನು ಕೈಬಿಟ್ಟವು. ಮತ್ತೊಂದೆಡೆ, ಈ ಒತ್ತಡದ ಪರಿಣಾಮ 1990ರ ಹೊತ್ತಿಗೆ ವರ್ಣ ಭೇದ ನೀತಿಯ ವಿರುದ್ದ ಹೋರಾಡುತ್ತಿದ್ದ ನೇತಾರ ನೆಲ್ಸನ್ ಮಂಡೇಲಾರನ್ನು ಬಿಡುಗಡೆ ಮಾಡಿ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 1994ರಲ್ಲಿ ನಡೆದ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಪಕ್ಷ ಮತ್ತು ಇಂಕತ ಫ್ರೀಡಂ ಪಕ್ಷಗಳೊಂದಿಗೆ ಒಡಗೂಡಿ ಮೈತ್ರಿ ಸರ್ಕಾರವನ್ನು ರಚಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಹೊಸ ಸರ್ಕಾರವು ಜುಲು ಎಂಬ ಅಲ್ಪಸಂಖ್ಯಾತ ಜನತೆಯ ಹಿತಕಾಯಲಾರದೆಂದು ಇಂಕತ ಫ್ರೀಡಂ ಪಕ್ಷವು 1996ರಲ್ಲಿ ತನ್ನ ಬೆಂಬಲವನ್ನು ವಾಪಸು ಪಡೆದುಕೊಂಡಿತು. ಈ ಪಕ್ಷದ ನಾಯಕ ಮಾಂಗೊಸುತು ಬುತೆಲೆಜಿಯ ನೇತೃತ್ವದಲ್ಲಿ ಜುಲು ಜನಾಂಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಾಂಗೀಯ ಘರ್ಷನೆಗಳು ನಡೆದವು. 1999ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿ ಶೇಕಡಾ 66ರಷ್ಟು ಮತ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ತಬೋ ಮುಬೆಕಿ ಯವರು ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 2004ರಲ್ಲಿ ನಡೆದ ಚುನಾವಣೆಯಲ್ಲೂ ಕೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಗಳಿಸಿದರೂ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಶ್ಯವಿರುವ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ಸಂಘಟನೆಗಳ ಚಳುವಳಿ ಮತ್ತು ಹೋರಾಟಗಳ ಮೂಲಕ ತನ್ನ ಪ್ರಭಾವವನ್ನು ವಿಸ್ತೃತಗೊಳಿಸುತ್ತಿದೆ.
  • ವಸಾಹತು ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದದ್ದೇನೂ ವಸಾಹತುಶಾಹಿಯು ಅಂತಿಮ ಸೋಲನುಭವಿಸಿತು ಎಂದೇನಲ್ಲ. ಆದರೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೊಸ ರೂಪದ ವಸಾಹತು ನೀತಿಯನ್ನು ಜನತೆಗಳ ಮೇಲೆ ಹರಿಯಬಿಟ್ಟಿತು. ಸಾಲ ನಿಧಿ ಮತ್ತು ಇನ್ನಿತರ ಹೆಸರಿನಲ್ಲಿ ಆರ್ಥಿಕ ಗುಲಾಮಗಿರಿಯನ್ನು ಆಧುನಿಕ ನಾಗರೀಕ ಚೌಕಟ್ಟಿಗೆ ಅಳವಡಿಸಿತು.
  • ಆಫ್ರಿಕಾದ ಜನತೆಯಲ್ಲಿ ಬೇರೂರಿರುವ ಆರ್ಥಿಕ ಹಿಂದುಳಿಕೆ, ಅಸ್ಥಿರ ರಾಜಕೀಯ, ತಂತ್ರಜ್ಞರ ಕೊರತೆ, ಮತ್ತು ಮಿಲಿಯಗಟ್ಟಲೆ ಜನರ ಪ್ರಜ್ಞೆಯಲ್ಲಿ ಬುಡಕಟ್ಟು ಸಿದ್ದಾಂತದ ಪ್ರಭಾವ - ಈ ದೌರ್ಬಲ್ಯಗಳನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೆಚ್ಚೆಚ್ಚು ಶೋಷಿಸಿಲಾರಂಭಿಸಿದವು. ರಾಷ್ಟ್ರೀಯ ವಿಮೋಚನಾ ಚಳುವಳಿಗಳನ್ನು ವಿಭಜಿಸಲು ಯತ್ನಿಸಿದವು. ಇದಕ್ಕೆ ಉದಾಹರಣೆಯೆಂದರೆ ಪ್ರ್ಯಾಟ್ರಿಸ್ ಲುಮುಂಬಾ ನೇತೃತ್ವದ ಕಾಂಗೋ ಸರ್ಕಾರದ ಪ್ರಗತಿಪರ ನೀತಿಗಳ ವಿರುದ್ದ ವಿದೇಶಿ ಶಕ್ತಿಗಳು ಆಕ್ರಮಣ ಮಾಡಿದ್ದು. ಆಫ್ರಿಕಾ ಒಕ್ಕೂಟದ ರಾಷ್ಟ್ರಗಳ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಾ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಲು ಯತ್ನಿಸಿದವು.
  • ಆಂಗ್ಲೋ-ಫ್ರೆಂಚ್-ಇಸ್ತ್ರೇಲ್ ದಾಳಿ ವಿರುದ್ದ ಈಜಿಪ್ಟಿನ ಜನತೆಯು ಜಯಗಳಿಸುವಲ್ಲಿ ಸೋವಿಯತ್ ಒಕ್ಕೂಟದ ಬೆಂಬಲವು ನಿರ್ಣಾಯಕವಾಗಿತ್ತು. 1970ರ ಹೊತ್ತಿಗೆ ಸೋವಿಯತ್ ರಷ್ಯಾವು 34 ಆಫ್ರಿಕನ್ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿತ್ತು. ಆರ್ಥಿಕ, ತಾಂತ್ರಿಕ ಮತ್ತು ಇನ್ನಿತರ ನೆರವನ್ನು ಅದು ನೀಡಿತ್ತು. ಅದರ ನೆರವಿಂದಾಗಿ ಆಫ್ರಿಕಾದಲ್ಲಿ ಸ್ವತಂತ್ರಗೊಂಡ ರಾಷ್ಟ್ರಗಳ ಅಧಿಕಾರದಡಿಯಲ್ಲಿ ಪ್ರಥಮ ಬಾರಿಗೆ 125 ಕೈಗಾರಿಕಾ ಘಟಕಗಳು ಸೇರಿದಂತೆ 320 ವಾಣಿಜ್ಯ ಘಟಕಗಳನ್ನು ನಿರ್ಮಾಣಿಸಲಾಯಿತು. ಆ ಸಮಯದಲ್ಲಿ 5,000 ಕ್ಕೂ ಮೀರಿ ಆಫ್ರಿಕನ್ ವಿದ್ಯಾರ್ಥಿಗಳು ಸೋವಿಯತ್ ರಷ್ಯಾದಲ್ಲಿ ಅಭ್ಯಸಿಸುತ್ತಿದ್ದರು. 1970ರ ಹೊತ್ತಿಗೆ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳ ಸಂಖ್ಯೆಯು 41 ನ್ನು ಮುಟ್ಟಿತು.

ಆಫ್ರಿಕಾದ ರಾಜಕೀಯ ಹಾದಿ ಮತ್ತು ಸ್ವಾತಂತ್ರ್ಯಾ ನಂತರದ ಆಫ್ರಿಕಾ

[ಬದಲಾಯಿಸಿ]
  • ಆಫ್ರಿಕಾದಲ್ಲಿ ದುಡಿಯುವ ವರ್ಗವು ಸಣ್ಣ ವಿಭಾಗವಾಗಿತ್ತು. ರಾಜಕೀಯ ಅಧಿಕಾರವು ಸಣ್ಣ ಪುಟ್ಟ ಬಂಡವಾಳಿಗರ ಕೈಯಲ್ಲಿತ್ತು. ಆಫ್ರಿಕಾದ ಹಲವು ದೇಶಗಳು ಪ್ರಮುಖವಾಗಿ ಮೂರು ಸೈದ್ದಾಂತಿಕ ರಾಜಕೀಯ ಕವಲು ಹಾದಿಯಲ್ಲಿ ಮುನ್ನಡೆದವು. ಮೊದಲ ಎರಡು ವಿಭಾಗದಲ್ಲಿ ಸಮಾನತೆಯುಳ್ಳ ಸಮಾಜ ನಿರ್ಮಾಣಕ್ಕಾಗಿ ದೂರದೃಷ್ಟಿ ಹೊಂದಿದ್ದ ನಾಯಕರನ್ನು ಕಾಣಬಹುದಾಗಿದೆ. ಈ ನಾಯಕರು ಸಮಾನತೆ ಮತ್ತು ಸ್ವಾವಲಂಬನೆಗೆ ಮಹತ್ವ ನೀಡಿದರು. ತಮ್ಮ ದೇಶದ ಆಥರ್ಿಕತೆಯನ್ನು ವಸಾಹತುಶಾಹಿಯ ಸರಪಳಿಯಿಂದ ಬಂಧಮುಕ್ತಗೊಳಿಸಲು ಆಸ್ಥೆ ವಹಿಸಿದರು.
  • ಮೊದಲನೆಯದಾಗಿ ಆಫ್ರೋ-ಮಾಕ್ಸರ್್ವಾದಿ ಸಿದ್ದಾಂತದಲ್ಲಿ ಕೆಲಮಟ್ಟಿಗೆ ನಂಬಿಕೆಯಿಟ್ಟಿದ್ದ ರಾಷ್ಟ್ರಗಳೆಂದರೆ: ಅಂಗೋಲಾ, ಇಥಿಯೋಪಿಯಾ, ಜಿನಿಯಾ ಬಿಸ್ಸಾವು, ಕೇಪ್ ವಡರ್್ ಮತ್ತು ಪ್ರಿನ್ಸಿಪ್ ದ್ವೀಪಗಳು, ಮೊಜಾಂಬಿಕ್, ಬಿನಿನ್, ಮಲಗಯ್, ಸೋಮಾಲಿಯಾ, ಬುಕರ್ಿನಾಫಾಸೋ ಮತ್ತು ಕಾಂಗೋ. ಇದರ ಪ್ರತಿಪಾದಕರು ತಮ್ಮ ಸಿದ್ದಾಂತವನ್ನು ವಸಾಹತು-ಪೂರ್ವ ಆಫ್ರಿಕಾದ, ಪ್ರಮುಖವಾಗಿ ಆಸ್ತಿಯ ಮೇಲೆ ಸಾಮೂಹಿಕ ಒಡೆತನ ಹೊಂದಿದ್ದ ಆದಿಮ ಕಮ್ಯುನಿಸ್ಟ್ ಸಮಾಜದ ದೃಷ್ಟಿಕೋನ ಹೊಂದಿದ್ದರು. ಆದರೆ ವಸಾಹತುಶಾಹಿಯು ಆಫ್ರಿಕಾದ ಸಮಾಜದೊಳಗೆ ಮಾಡಿದ್ದ ಮಾಪರ್ಾಡುಗಳನ್ನು ಮತ್ತು ಸಮಾಜದ ವಿಭಜನೆಯನ್ನು ಇವರು ಕಡೆಗಣಿಸಿದ್ದರು. ಈ ಸಿದ್ದಾಂತವು ಯಾವುದೇ ಕಾರ್ಮಿಕ ಚಳುವಳಿಯ ವಿಸéರಣೆಯಾಗಿರದೆ ರಾಷ್ಟ್ರೀಯ ವಿಮೋಚನೆ, ಪ್ರಜಾಸತ್ತಾತ್ಮಕ ಚಳುವಳಿಗಳು ಮತ್ತು ವಸಾಹತುಶಾಹಿ-ವಿರೋಧಿ ಚಳುವಳಿಯೊಂದಿಗೆ ಮೂಡಿಬಂದಿತು.
  • ಎರಡನೆಯದಾಗಿ, ಮಾಕ್ಸರ್್ವಾದಿ-ಸಮಾಜವಾದಿಗಳೆಂದು ಕರೆಯಲ್ಪಡುತ್ತಿದ್ದ ರಾಷ್ಟ್ರಗಳೆಂದರೆ: ಟ್ಯಾಂಜೇನಿಯಾ(ಜೂಲಿಯಸ್ ನ್ಯೇರೇರೆ), ಘಾನಾ(ಕ್ವಾಮೆ ಎನ್ಕ್ರೂಮಾ), ಜಾಂಬಿಯಾ(ಕೆನೆತ್ ಕೌಂಡ), ಜಿಂಬಾಬ್ವೆ (ರಾಬಟರ್್ ಮುಗಾಬೆ), ಜಿನಿಯಾ(ಸಿಕಾವೊ ಟೌರೆ), ಮತ್ತು ಉಗಾಂಡಾ(ಮಿಲ್ಟನ್ ಒಬೊಟು). ಮಾಕ್ಸರ್್ವಾದಿ-ಸಮಾಜವಾದಿಗಳು ಮಾಕ್ಸ್ವಾದ-ಲೆನಿನ್ವಾದವನ್ನು ಒಪ್ಪಿ ತಮ್ಮ ನಿರ್ಣಯಗಳನ್ನು ಕೆಲಮಟ್ಟಿಗೆ ವಿಶ್ವದ ಮುಂಚೂಣಿ ಕಮ್ಯುನಿಸ್ಟ್ ರಾಷ್ಟ್ರಗಳಾದ ಯುಎಸ್ಎಸ್ಆರ್, ಕ್ಯೂಬಾ, ವಿಯೆಟ್ನಾಂ ಮತ್ತು ಚೀನಾ ದೇಶಗಳ ನಿಲುಮೆಯ ಆಧಾರದಲ್ಲಿ ಕೈಗೊಳ್ಳುತ್ತಿದ್ದವು. 1970 ರ ದಶಕದ ಕೊನೆಯ ಹೊತ್ತಿಗೆ ಇಥಿಯೋಪಿಯಾ, ಅಂಗೋಲಾ ಮತ್ತು ಮೊಜಾಂಬಿಕ್ಗಳಲ್ಲಿ ಸಮಾಜವಾದಿ ಅಥವಾ ಮಾಕ್ಸರ್್ವಾದಿ ಗುಂಪುಗಳು ಜಯಗಳಿಸಿದ ನಂತರ ತಮ್ಮ ಹಿತಾಸಕ್ತಿಗೆ ಪೆಟ್ಟುಬೀಳುವುದೆಂದು ಪಾಶ್ಚಿಮಾತ್ಯ ದೇಶಗಳಿಗೆ ನಡುಕ ಉಂಟಾಗಿತ್ತು. ಸೋಮಾಲಿಯಾ, ನಮೀಬಿಯಾ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ ಅದೇ ಹಾದಿ ತುಳಿಯುವ ಎಲ್ಲ ಸಾಧ್ಯತೆಗಳೂ ಇದ್ದವು.
  • ಆಫ್ರಿಕಾದ ಸಮಾಜವಾದಿಗಳು ಮತ್ತು ಮಾಕ್ಸರ್್ವಾದಿಗಳು ತಮ್ಮ ಮುಂದಿದ್ದ ಕಾರ್ಯಭಾರವನ್ನು ಮನಗಂಡಿದ್ದರು. ಸಮಾಜಕಲ್ಯಾಣ ಸೇವೆಗಳನ್ನು ವಿಸ್ತರಿಸುವುದು ಮತ್ತು ಭೂ-ಸುಧಾರಣೆ ಜಾರಿಗೊಳಿಸಿ ಉತ್ಪಾದನೆಯನ್ನು ಆಧುನಿಕಗೊಳಿಸುವುದು ಸೇರಿದಂತೆ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸಕ್ತಿ ಹೊಂದಿದ್ದರು. ಹೀಗೆ ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ, ಜಿನಿಯಾ ಬಿಸ್ಸಾವು, ಮತ್ತು ಕಾಂಗೋ ದೇಶಗಳು ಕೃಷಿಯಲ್ಲಿ ಬದಲಾವಣೆ ತರುವುದರೊಂದಿಗೆ ಆರ್ಥಿಕಭಿವೃದ್ಧಿಗಾಗಿ ಮತ್ತು ಸಾರ್ವಜನಿಕ ಉದ್ದಿಮೆಗಳ ಅಭಿವೃದ್ಧಿಗಾಗಿ ಶ್ರಮಿಸಲಾರಂಭಿಸಿದ್ದವು. ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ಭದ್ರತೆಯಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಯಾಗುತ್ತದೆಂದು ನಿರೀಕ್ಷಿಸಲಾಗಿತ್ತು.
  • ಆದರೆ, ಆಥರ್ಿಕತೆಯನ್ನು ಪುನರ್-ರಚಿಸುವ ಅವರ ಯೋಜನೆಗಳೆಲ್ಲ ನಿರಂತರವಾದ ಸಮಾಜ-ಘಾತುಕ ಚಟುವಟಿಕೆಗಳು, ಅಂತ:ಕಲಹ, ಆಕ್ರಮಣ ಮತ್ತು ಬಂಡುಕೋರರ ಉಪಟಳಗಳಿಂದ ಆ ನಿಟ್ಟಿನಲ್ಲಿ ಯಾವೊಂದು ಪ್ರಗತಿಯನ್ನು ಸಹ ಕಾಣಲು ಸಾಧ್ಯವಾಗಲಿಲ್ಲ. ಅಮೇರಿಕಾ-ಬೆಂಬಲಿತ ವಿರೋಧಿ ಶಕ್ತಿಗಳು ಮತ್ತು ದಕ್ಷಿಣ ಆಫ್ರಿಕಾದ ವರ್ಣಭೇದ ಆಡಳಿತವು ಸಶಸ್ತ್ರ ಹೋರಾಟ ನಡೆಸಿ ಅಂಗೋಲಾ ಮತ್ತು ಮೊಜಾಂಬಿಕ್ಗಳ ಮಾಕ್ಸರ್್ವಾದಿ ಸಕರ್ಾರಗಳನ್ನು ಕೆಳಗುರುಳಿಸಿದವು. ಹಾಗೆಯೇ, ಇಥಿಯೋಪಿಯಾ ಮತ್ತು ಸೋಮಾಲಿಯಾಗಳು ಸಶಸ್ತ್ರ ಬಿಕ್ಕಟ್ಟು, ಅಂತ:ಕಲಹ ಮತ್ತು ಪ್ರತ್ಯೇಕತಾವಾದಿಗಳ ವಿರೋಧವನ್ನು ಎದುರಿಸಬೇಕಾಯಿತು. ಈ ದೇಶ-ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರಗಳು ಕ್ರಮ ಕೈಗೊಂಡವಾದರೂ ವಿರೋಧಿ ಶಕ್ತಿಗಳ ಕೈಮೇಲಾಗಿ ಸವರ್ಾಧಿಕಾರಿ ಪ್ರವೃತ್ತಿಗಳು ಮೂಡಿಬಂದವು.
  • ಮೂರನೆಯದಾಗಿ, ಸಾಮ್ರಾಜ್ಯಶಾಹಿ ಆರ್ಥಿಕತೆಯ ಜೊತೆಜೊತೆಗೆ ತಮ್ಮ ಆರ್ಥಿಕತೆಯಯನ್ನು ಮುನ್ನಡೆಸಿದಲ್ಲಿ, ಅದರೊಂದಿಗೆ ಹೆಚ್ಚೆಚ್ಚು ಸಂಬಂಧ ಹೊಂದಿದಲ್ಲಿ ತಮ್ಮ ದೇಶವೂ ಅಭಿವೃದ್ದಿ ಹೊಂದಿದ ರಾಷ್ಟ್ರವಾಗುತ್ತದೆಂದು ಬೊಗಳೆ ಬಿಡುತ್ತಾ ವಿದೇಶೀ ಶಕ್ತಿಗಳೊಂದಿಗೆ ಶಾಮೀಲಾಗಿ ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಿದ್ದ ರಾಷ್ಟ್ರೀಯವಾದಿ ನಾಯಕರು. ಈ ರಾಷ್ರಗಳಲ್ಲಿ ಸಮಾನತೆಗಿಂತ ಹೆಚ್ಚಾಗಿ ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಯಿತು. ಖಾಸಗಿ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲಾಯಿತು. ರಪ್ತು ಬೆಳೆಗಳ ಉತ್ಪಾದನೆಯನ್ನು ವಿಸ್ತರಿಸಲಾಯಿತು. ಉದಾಹರಣೆಗೆ, ಕೀನ್ಯಾದಲ್ಲಿ ಕಾಫಿ ಮತ್ತು ಟೀ ಬೆಳೆಯನ್ನು ವಿಸ್ತರಿಸಿ ಹೆಚ್ಚಿನ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಯಿತು. ಈ ರಾಷ್ರಗಳು ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಜಪಾನ್ ದೇಶಗಳೊಂದಿಗೆ ಹೆಚ್ಚಿನ ಸಂಬಂಧವಿಟ್ಟುಕೊಂಡು ಸಮಯ ಬಂದಾಗಲೆಲ್ಲ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ದೇಶಗಳ ಪರ ದನಿಯೆತ್ತುತ್ತಿದ್ದವು. ಕೀನ್ಯಾ, ನ್ಶೆಜೀರಿಯಾ, ಘಾನಾ, ಐವರಿ ಕೋಸ್ಟ್ ಮತ್ತು ಸೆನೆಗಲ್ ದೇಶದ ರಾಷ್ಟ್ರೀಯವಾದಿ ನಾಯಕರು ತಾವು ಅನುಸರಿಸಿದ ನೀತಿಗಳಲ್ಲಿ ದೋಷವಿದೆಯೆಂದು ಕಾಲಕ್ರಮೇಣ ಒಪ್ಪಿಕೊಳ್ಳುವ ಹಂತಕ್ಕೆ ಬಂದಿವೆ.
  • ಆಫ್ರಿಕಾದ ದೇಶಗಳು ರಾಜಕೀಯ ಸ್ವಾತಂತ್ರ್ಯ ಪಡೆದರೂ ಆಥರ್ಿಕ ಸ್ವಾತಂತ್ರ್ಯ ಪಡೆದವೆಂದು ಹೇಳಲಾಗದು. ಆಪ್ರಿಕಾದ ದೇಶಗಳಲ್ಲಿ ಅಧಿಕಾರವನ್ನು ಶಾಂತಿಯುತವಾಗಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ವಗರ್ಾಯಿಸಿದ್ದನ್ನು 'ನವ-ವಸಾಹತುಶಾಹಿ ಪರಿಹಾರ' ಎಂಧಲೂ ಕರೆಯಲಾಗುತ್ತದೆ. ಏಕೆಂದರೆ ಹೊಸ ಸಕರ್ಾರಗಳಿಗೆ ದೊರಕಿರುವ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದತ್ತ ಗಮನಹರಿಸಿದಾಗ ವಿದೇಶಿ ಕಂಪನಿಗಳ ಆಥರ್ಿಕ ಹಿತಾಸಕ್ತಿಗಳನ್ನು ಬಹುವಾಗಿ ಸಂರಕ್ಷಿಸಿರುವುದು ಮತ್ತು ವಿದೇಶಿ ರಾಷ್ಟ್ರಗಳ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಂಡಿರುವುದು ಕಂಡುಬರುತ್ತದೆ.
  • ನೈಸಗರ್ಿಕ ವಿಕೋಪಗಳೊಂದಿಗೆ ಫಲವತ್ತತೆಯಿಲ್ಲದ ಭೂಮಿಗಳಲ್ಲಿ ರೈತರು ಬೇಸಾಯ ಮಾಡಬೇಕಾಗಿತ್ತು. ಜನತೆಗೆ ಅವಶ್ಯವಿರುವ ಬೆಳೆಗಳ ಬದಲು ವಿದೇಶಿ ರಾಷ್ಟ್ರಗಳಿಗೆ ಅಗತ್ಯವಿರುವ ಬೆಳೆಗಳನ್ನು ಬೆಳೆಯುವಂತೆ ಅವರನ್ನು ಬಲವಂತಗೊಳಿಸಲಾಗುತ್ತಿತ್ತು. ಅಗಾಧ ತೆರಿಗೆ, ಕಡ್ಡಾಯವಾಗಿ ನಿದರ್ಿಷ್ಟ ಬೆಳೆ ಬೆಳೆಯುವುದು, ಬಲವಂತ ಕೆಲಸ ಮತ್ತು ದೈಹಿಕ ಕಿರುಕುಳ ಗಳಿಂದಾಗಿ ತಮ್ಮ ಭೂಮಿಯ ಫಲವತ್ತತೆ ಕಳೆದುಕೊಳ್ಳುವ ಮತ್ತು ಕ್ಷಾಮಕ್ಕೀಡಾಗುವಂಥಹ ವಿದೇಶಿ ಕಂಪನಿಗಳಿಗೆ ಅವಶ್ಯವಿರುವ ಬೆಳೆಗಳನ್ನು ರೈತರು ಬೆಳೆಯಬೇಕಾಗಿತ್ತು.
  • ಆಫ್ರಿಕಾದ ದೇಸಿ ಸಂಸ್ಕೃತಿಯನ್ನು ವಿದೇಶಿ ಆಳ್ವಿಕೆಯು ನಾಶ ಮಾಡತೊಡಗಿತ್ತು. ಆಫ್ರಿಕಾದ ಉಪಖಂಡವನ್ನು ಫೆಂಚ್ ಮಾತನಾಡುವ ಪ್ರದೇಶ, ಇಂಗ್ಲೀಷ್ ಮಾತನಾಡುವ ಪ್ರದೇಶ ಮತ್ತು ಅರಬ್ ಮಾತನಾಡುವ ಪ್ರದೇಶಗಳೆಂದೇ ವಿಂಗಡಿಸಿ ಕರೆಯಲಾಗುತ್ತಿತು. ಸ್ವತಂತ್ರಗೊಂಡ ಆಫ್ರಿಕಾ ರಾಷ್ರಗಳ ಜನರಲ್ಲಿ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆ ಕುರಿತಂತೆ ಗೌರವ ಮೂಡಿತ್ತು. ಏಕೆಂದರೆ, ಈ ಭಾಷೆ ಮಾತನಾಡಬಲ್ಲವರು ಅಥವಾ ಕಲಿತವರು ವಿಶೇಷ ಆರ್ಥಿಕ ಮತ್ತು ರಾಜಕೀಯ ವಿನಾಯಿತಿಗಳನ್ನು ಸುಲಭವಾಗಿ ಪಡೆಯಬಹುದಿತ್ತು.
  • ಸ್ವಾತಂತ್ರ್ಯಾನಂತರದಿಂದಲೂ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ಜವಾಬ್ದಾರಿ ಹೊರಲು ಸರ್ಕಾರಗಳು ಅಸಮರ್ಥವಾಗಿದ್ದವು. ಮಧ್ಯಮ ಕುಶಲಕಮರ್ಿಗಳು, ಶ್ರೀಮಂತ ರೈತರು, ಅಧಿಕಾರಿಗಳು, ಮತ್ತು ದೇಶ-ವಿದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ದುಡಿದು ಹಣ ಗಳಿಸಿದ್ದವರಿಂದ ಖಾಸಗಿ ಬಂಡವಾಳ ಹೂಡಿಕೆಗಾಗಿ ಸರ್ಕಾರ ಯತ್ನಿಸುತ್ತಿತ್ತು. ಸ್ಥಳೀಯವಾಗಿ ದೊಡ್ಡ ಬಂಡವಾಳಿಗರಿಲ್ಲದ್ದರಿಂದ ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ವಿದೇಶಿ ಬಂಡವಾಳದೊಂದಿಗೆ ಕೈಜೋಡಿಸಿದವು.
  • ಸ್ವಾತಂತ್ರ್ಯ ಗಳಿಸಿದ ಕೆಲವೇ ವರ್ಷಗಳಲ್ಲಿ ಆಫ್ರಿಕಾ ದೇಶಗಳು ಸಂವಿಧಾನದಲ್ಲಿ ಭಾರಿ ಬದಲಾವಣೆ ಮಾಡಿದವು. ಅಧಿಕಾರವು ಪ್ರಜೆಗಳಿಂದ ಮಿಲಿಟರಿಗೆ ವಗರ್ಾವಣೆಗೊಂಡು ಸವರ್ಾಧಿಕಾರಿ ಧೋರಣೆ ಬೆಳೆದುಬಂದಿತು. ಹಲವಾರು ಆಳುವ ನಾಯಕರು ಸಂವಿಧಾನವನ್ನು ತಿರುಚಿ ತಮ್ಮ ವೈಯುಕ್ತಿಕ ನಿರಂಕುಶ ಅಧಿಕಾರವನ್ನು ಜಾರಿ ತಂದರು. ಚುನಾವಣೆಗಳನ್ನು ನಡೆಸಲಾಯಿತಾದರೂ ಅದರಲ್ಲಿ ಭಾಗವಹಿಸಿದವರಿಗೆ ಪಯರ್ಾಯವಾದ ಪ್ರಜಾಸತ್ತಾತ್ಮಕ ಆಯ್ಕೆಗಳಿರಲಿಲ್ಲ. ಉದಾಹರಣೆಗೆ, ಕೀನ್ಯಾದ ಏಕ ಪಕ್ಷದ ಆಳ್ವಿಕೆಯಲ್ಲಿ ಸರ್ಕಾರದ ನೀತಿಗಳನ್ನು ಬದಲಿಸುವ ಆಯ್ಕೆ ಮತದಾರರಿಗಿರಲಿಲ್ಲ. ಹೆಚ್ಚೆಂದರೆ ಆ ಸಮಯದಲ್ಲಿ ಆಳುತ್ತಿದ್ದ ಕೀನ್ಯಾ ಆಫ್ರಿಕನ್ ರಾಷ್ಟ್ರೀಯ ಒಕ್ಕೂಟ ಪಕ್ಷವು ನಿಲ್ಲಿಸಿದ್ದ ಅಭ್ಯಥರ್ಿಗಳಲ್ಲಿ ಯಾವುದಾದರೊಂದು ಅಭ್ಯಥರ್ಿಯನ್ನು ಮತದಾರರು ಆಯ್ಕೆ ಮಾಡಬಹುದಿತ್ತಷ್ಟೆ.
  • ಬಹುತೇಕ ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡಜನತೆಯು ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿ ಹೋದರು. ಬಡತನ, ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರು ನರಳುತ್ತಿದ್ದರು. ತೀರಾ ಕಡಿಮೆ ಅಭಿವೃದ್ಧಿ ಹೊಂದಿರುವ ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ 30ರಲ್ಲಿ 21 ರಾಷ್ಟ್ರಗಳು ಆಫ್ರಿಕಾ ಖಂಡಕ್ಕೆ ಸೇರಿವೆ. 1970-80ರ ದಶಕದಲ್ಲಿ ಆಫ್ರಿಕಾದ 20 ರಾಷ್ಟ್ರಗಳ ಒಟ್ಟಾರೆ ಆಂತರಿಕ ಉತ್ಪನ್ನವು ಹಿಮ್ಮುಖ ದರದಲ್ಲಿತ್ತು. 1970 ರಿಂದೀಚೆಗೆ, ಬಹುತೇಕ ರಾಷ್ಟ್ರಗಳ ಹಣದುಬ್ಬರದ ದರವು ಎರಡಂಕೆಯಲ್ಲಿದೆ. ತಲಾದಾಯವು ಒಂದೇ ಮಟ್ಟದಲ್ಲಿದೆ. ಯೂರೋಪ್ ರಾಷ್ರಗಳಲ್ಲಿ ಪ್ರತಿ ಹಸುವಿಗೆ ದಿನವೊಂದಕ್ಕೆ 2 ಡಾಲರ್ ಸಹಾಯಧನ ದೊರೆಯುತ್ತದೆಯಾದರೂ ಇದು ಆಫ್ರಿಕಾದ ಪ್ರತಿ ಕುಟುಂಬದ ಆದಾಯಕ್ಕಿಂತ ಎರಡಷ್ಟು. ಉತ್ಪಾದನಾ ಅಥವಾ ಕೃಷಿ ಕ್ಷೇತ್ರದ ಬೆಳವಣಿಗೆ ನಿರಾಶಾದಾಯಕವಾಗಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಮೊತ್ತ 1970ರಲ್ಲಿ 902 ಕೋಟಿ ಅಮೇರಿಕನ್ ಡಾಲರ್ಗಳಷ್ಟು ಇದ್ದದ್ದು 1978ರಲ್ಲಿ 4960 ಕೋಟಿ ಡಾಲರ್ ಬೆಳೆದಿತ್ತು. ನಿರುದ್ಯೋಗವು ಶೇ. 10ರಿಂದ ಶೇ. 50ಕ್ಕೇರಿತ್ತು. ಕೆಲವು ರಾಷ್ಟ್ರಗಳಲ್ಲಿ ಶೇ. 40ರಷ್ಟು ಜನತೆಗೆ ವಸತಿ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಇಂಧನ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕೇ ಇಲ್ಲ. ಉತ್ಪಾದನೆಯನ್ನು ಮತ್ತಷ್ಟು ಅಭಿವೃಧ್ಧಿ ಪಡಿಸುವತ್ತ ಗಮನಹರಿಸದೆ ಜನತೆಯನ್ನು ಹೀರಿ ಹಿಪ್ಪೆ ಮಾಡಿ ಆಫ್ರಿಕಾದ ಸಣ್ಣ ಬಂಡವಾಳಿಗರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಲಾಭ ಗಳಿಸುತ್ತಿದ್ದವು.
  • ಆಫ್ರಿಕಾ ರಾಷ್ಟ್ರಗಳು ಈ ಹಿಂದಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮೇಲೆ ಎಂದಿನಂತೆ ಆರ್ಥಿಕವಾಗಿ ಅವಲಂಬನೆಯನ್ನು ಮುಂದುವರೆಸುವಂತಾಯಿತು. ಕೀನ್ಯಾ, ಜಾಂಬಿಯಾ ಮತ್ತು ಸೆನೆಗಲ್ಗಳು ಒಂದೆಡೆ ಮಾಕ್ಸರ್್ವಾದಿ ಸಿದ್ದಾಂತವನ್ನು ಖಂಡಿಸುತ್ತಾ ತಾವು ಸಮಾಜವಾದಿಗಳೆಂದು ಘೋಷಿಸಿಕೊಂಡವು. ಆದರೆ 1980ರ ಹೊತ್ತಿಗೆ ಕೀನ್ಯಾದಲ್ಲಿ ಆಳುವ ಮೇಲ್ಸ್ತರದವರು ರಾಜಕೀಯ ಅಧಿಕಾರವನ್ನು ತಮ್ಮ ಸ್ವತ್ತಾಗಿಸಿಕೊಂಡು ಸಂಪತ್ತನ್ನು ಲೂಟಿ ಮಾಡಿದರು. ಅಧಿಕಾರಶಾಹಿ ಮತ್ತು ಸರಕಾರದೊಂದಿಗೆ ಸಂಪರ್ಕವಿದ್ದ ಮೇಲ್ಸ್ತರದವರು ದೇಶದ ಆದಾಯದ ಬಹುತೇಕ ಪಾಲನ್ನು ಭ್ರಷ್ಟತೆಯಿಂದ ಸೂರೆ ಮಾಡಿದರು. 1980 ಮತ್ತು 1990ರ ದಶಕದಲ್ಲಿ ಕೀನ್ಯಾದ ಪ್ರಮುಖ ರಾಜಕೀಯ ನಾಯಕರುಗಳ ಭ್ರಷ್ಟಾಚಾರ ಯಾವ ಹಂತ ತಲುಪಿತ್ತೆಂದರೆ, ಇದರಿಂದ ಸರ್ಕಾರದಲ್ಲಿ ಹಣಕಾಸು ಕೊರತೆಯುಂಟಾಗಿ ಹಣದುಬ್ಬರ ತೀರಾ ದೊಡ್ಡ ಮಟ್ಟ ತಲುಪಿತು.
  • 1978 ಮತ್ತು 1990ರ ನಡುವೆ ಆಫ್ರಿಕಾ ಖಂಡದ ಸರಾಸರಿ ತಲಾ ಆದಾಯವು 854 ಡಾಲರ್ಗಳಿಂದ 565 ಡಾಲರ್ಗಿಳಿಯಿತು. 1981 ಮತ್ತು 1990ರ ನಡುವೆ ಕಡಿಮೆ ಅಭಿವೃದ್ಧಿ ಹೊಂದಿರುವ ಆಫ್ರಿಕಾದ ರಾಷ್ಟ್ರಗಳ ಸಂಖ್ಯೆ 21ರಿಂದ 28ಕ್ಕೇರಿತು. 1978 ಮತ್ತು 1988ರ ನಡುವೆ ಒಟ್ಟಾರೆ ದೇಶೀಯ ಆಂತರಿಕ ಉತ್ಪನ್ನವು(ಜಿಡಿಪಿ) ಶೇ. 3.03ರಿಂದ ಶೇ. 0.7 ಕ್ಕಿಳಿಯಿತು. ಅಕ್ಷರಸ್ಥರ ಸಂಖ್ಯೆಯು 1962ರಲ್ಲಿದ್ದ 142 ಮಿಲಿಯನ್ನಿಂದ 1985 ರಲ್ಲಿ 165 ಮಿಲಿಯನ್ ಆಗಿದೆಯಷ್ಟೆ. ಆಫ್ರಿಕಾದ ಆಯವ್ಯಯ ಕೊರತೆಯು 1978ರಲ್ಲಿ 3.9 ಬಿಲಿಯನ್ ಡಾಲರ್ಗಳಿಂದ 1988ರ ಹೊತ್ತಿಗೆ 20.3 ಬಿಲಿಯನ್ ಮುಟ್ಟಿತ್ತು. ವಿದೇಶಿ ಸಾಲವು 1978ರಲ್ಲಿ 48.3 ಬಿಲಿಯನ್ ಡಾಲರ್ನಿಂದ ಏರಿಕೆ ಕಂಡು 1980ರಲ್ಲಿ 230 ಬಿಲಿಯನ್ ಡಾಲರ್ ಮತ್ತು 1990ರ ಹೊತ್ತಿಗೆ 260 ಬಿಲಿಯನ್ ಡಾಲರ್ ತಲುಪಿತು. 1980ರಲ್ಲಿ ಶೇ. 5.3 ರಷ್ಟಿದ್ದ ನಿರುದ್ಯೋಗ ದರವು 1990ರ ಹೊತ್ತಿಗೆ ಶೇ. 13ರಷ್ಟು ಹೆಚ್ಚಿತು.
  • ಹೀಗೆ 1970ರ ದಶಕದ ನಂತರ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು, ಹಾಗೂ ವಾಣಿಜ್ಯ ಹಣಕಾಸು ಬ್ಯಾಂಕುಗಳ ಕೂಟವು ವಸಾಹತುಶಾಹಿಯ ಸಿದ್ದಾಂತ ಮತ್ತು ಆಕ್ರಮಣಗಳನ್ನು ನಡೆಸುತ್ತಾ ಬಂದಿತು. ಈ ಕೂಟವನ್ನು ನವ-ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ ಮತ್ತು ಇತರೆ ರಾಷ್ಟ್ರಗಳು ತಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುತ್ತಿರುವ ನ್ಯಾಟೋ ಶಕ್ತಿಯ ವಿರುದ್ದ ಸೆಣಸಬೇಕಾಯಿತು. ಜೊತೆಗೆ ನವ-ವಸಾಹತುಶಾಹಿಯಿಂದ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪಡೆಯುತ್ತಿರುವ ಸಶಸ್ತ್ರಧಾರಿ ಬಂಡಾಯಗಾರರನ್ನು ಸಹ ಆ ರಾಷ್ಟ್ರಗಳು ಎದುರಿಸಬೇಕಾಯಿತು.

ಆಫ್ರಿಕಾದಲ್ಲಿ ಬಡತನ

[ಬದಲಾಯಿಸಿ]
  • ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಇತರೆ ಪ್ರದೇಶಗಳಿಗೆ ಆಫ್ರಿಕಾದ ಅಭಿವೃದ್ಧಿ ಸೂಚ್ಯಂಕಗಳನ್ನು ಹೋಲಿಸಿದಲ್ಲಿ ಆಘಾತಕಾರಿ ಅಂಶಗಳು ಹೊರಬೀಳುತ್ತವೆ.
  • ಪ್ರದೇಶ ತಲಾ ಆದಾಯ ಜಿಡಿಪಿಯ ಬೆಳವಣಿಗೆ (ಶೇಕಡಾವಾರು)

1965-73 1973-78 1980-89

  • ಆಫ್ರಿಕಾ ಖಂಡ 3.2 0.1 - 2.2
  • ಪೂರ್ವ ಏಷ್ಯಾ 5.1 4.7 6.7
  • ದಕ್ಷಿಣ ಏಷ್ಯಾ 1.2 1.7 3.2
  • ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬೀಯನ್ 3.7 2.6 - 0.6
  • ಮೂಲ: ವಿಶ್ವ ಅಭಿವೃದ್ಧಿ ವರದಿ 1990 : ಬಡತನ (ವಾಷಿಂಗ್ಟನ್, 1990)
  • ಕಳೆದ 25 ವರ್ಷಗಳುದ್ದಕ್ಕೂ ಆಫ್ರಿಕಾದ ಅಭಿವೃದ್ಧಿಗಾಗಿ ತಾವು ನಿರಂತರ ನೆರವು ಮತ್ತು ಅನುದಾನ ನೀಡುತ್ತಿರುವೆವೆಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ವಿದೇಶಿ ಹಣಕಾಸು ಸಂಸ್ಥೆಗಳು ಬೊಗಳೆ ಹೊಡೆದರೂ ಆಫ್ರಿಕಾದ ಮುಕ್ಕಾಲು ಪಾಲು ಜನತೆ ಇನ್ನೂ ಬಡತನದ ದವಡೆಯಲ್ಲಿದ್ದಾರೆ. ಉದಾಹರಣೆಗ, ಇಥಿಯೋಪಿಯಾದ ಒಟ್ಟಾರೆ ಜನಸಂಖ್ಯೆಯು 1993ರಲ್ಲಿ 53.2 ಮಿಲಿಯನ್ ಇದ್ದು ಅದರಲ್ಲಿ ಬಡಜನತೆಯ ಸಂಖ್ಯೆ 20 ಮಿಲಿಯನ್ಗೂ ಹೆಚ್ಚಿದ್ದಾರೆ. ಅದಕ್ಕೆ ನಿರಾಶ್ರಿತರು, ಭೂರಹಿತರು ಮತ್ತು ಯುದ್ದದಿಂದ ನಿರಾಶ್ರಿತರಾದವರ ಸಂಖ್ಯೆಯನ್ನು ಸೇರಿಸಿದಲ್ಲಿ ಬಡಜನತೆಯ ಸಂಖ್ಯೆ 52 ಮಿಲಿಯನ್ ಮುಟ್ಟುತ್ತದೆ. ಹೀಗೆ ಇಥಿಯೋಪಿಯಾದಲ್ಲಿ ಶೇ. 97ರಷ್ಟು ಬಡಜನತೆಯಿದ್ದಾರೆ. ಸಿಯಾರ್ ಲಿಯೋನ್ನಲ್ಲಿ ಆದಾಯ ಗಳಿಕೆಯು ಅಸಮಾನವಾಗಿದೆ. 1993ರ ಅಂದಾಜಿನ ಪ್ರಕಾರ ಮೂರನೇ ಎರಡರಷ್ಟು ಜನ ಬಡತನದಲ್ಲಿದ್ದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ವಯಸ್ಕರ ಅನಕ್ಷರತೆಯು ಶೇ. 79ರಷ್ಟಿದ್ದು ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಪ್ರಮಾಣದ್ದು. ಪ್ರಾಥಮಿಕ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದ್ದಾಗಿದೆ. ಈ ನಡುವೆ, ಶ್ರೀಮಂತ ಕೃಷಿ ಪ್ರದೇಶವನ್ನು ಹೊಂದಿದ್ದರೂ ಜನಾಂಗೀಯ ಅಂತಃಕಲಹದಿಂದಾಗಿ ಶೇ. 15ರಿಂದ 20ರಷ್ಟು ಜನತೆ ನಿರಾಶ್ರಿತರಾಗಿದ್ದಾರೆ.
  • ಉಗಾಂಡಾದಲ್ಲಿ ಶೇ. 93ರಷ್ಟು ಬಡವರಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಡತನವು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದು ತೀವ್ರ ಸ್ವರೂಪದಲ್ಲಿದೆ. ಪುರುಷರ ಜೀವಿತಾವಧಿಯು ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದಲ್ಲಿದೆ. ಇದರೊಂದಿಗೆ ದುರದೃಷ್ಟವಶಾತ್ ಏಡ್ಸ್ ರೋಗವು ಕೂಡ ಕೈಜೋಡಿಸಿ ಸಾವಿನ ಸಂಖ್ಯೆಯನ್ನು ಇಮ್ಮಡಿಗೊಳಿಸಿದೆ. ಘಾನಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಪಟ್ಟಣ ಪ್ರದೇಶಗಳಿಗಿಂತ 13ಪಟ್ಟು ಹೆಚ್ಚಿನದು. ಕಡಿಮೆ ಉತ್ಪಾದನಾ ಸಮಸ್ಯೆಯು ಇನ್ನೂ ಅರ್ಧ ಶತಮಾನ ಕಾಲ ಹಾಗೆಯೇ ಮುಂದುವರೆಯುತ್ತದೆಂದು ಅಭಿಪ್ರಾಯ ಪಡಲಾಗಿದೆ. ನಮೀಬಿಯಾದಲ್ಲಿ ಆದಾಯ ಹಂಚಿಕೆಯು ತೀವ್ರತರದ ಅಸಮಾನತೆಯಿಂದ ಕೂಡಿದ್ದು ಸಂಪೂರ್ಣ ಬಡತನವು ವ್ಯಾಪಕವಾಗಿ ಹಬ್ಬಿದೆ. ಅಲ್ಲಿನ ಶೇ. 5ರಷ್ಟು ಶ್ರೀಮಂತರು ಜಿಡಿಪಿಯ ಶೇ. 70ರಷ್ಟನ್ನು ನಿಯಂತ್ರಿಸಿದರೆ ಶೇ. 55ರಷ್ಟು ಬಡವರು ಬರೆ ಶೇ. 3ರಷ್ಟು ಹೊಂದಿದ್ದಾರೆ. ಮಹಿಳೆಯು ಗಂಭೀರ ಬಡತನದಿಂದ ಜಂಜರಿತಳಾಗಿದ್ದಾಳೆ.
  • ವಿಶ್ವಬ್ಯಾಂಕ್ ಬೃಹತ್ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಟಾಂಜೇನಿಯಾದ ಜೀವನ ಗುಣಮಟ್ಟ ದರವು 1969 ಮತ್ತು 1983ರ ನಡುವಿನ ವರ್ಷಗಳಲ್ಲಿ (ಸರಾಸರಿ ವಾಷರ್ಿಕ) ಶೇ. 2.5ರಷ್ಟು ಇಳಿಮುಖಗೊಂಡಿತು. ಇದೇ ಅವಧಿಯಲ್ಲಿ ನಗರ ಪ್ರದೇಶದ ಕೂಲಿದರ ಶೇ. 65 ರಷ್ಟು ಕುಸಿತಕಂಡಿತು. ಸಾಮಾನ್ಯ ಜನರು ಮಾಂಸ, ಡೈರಿ ಉತ್ಪನ್ನ, ತರಕಾರಿಗಳಿಂದ ದೂರಸರಿದು ಕಳಪೆ ಆಹಾರ ಪದಾರ್ಥಗಳೆಡೆಗೆ ಸರಿದರು. ಹೆಚ್ಚು ಜನಸಂಖ್ಯೆ ಹೊಂದಿದ್ದು ಶ್ರೀಮಂತ ರಾಷ್ಟ್ರವೂ ಆಗಿರುವ ನೈಜೀರಿಯಾದಲ್ಲಿ 1980ರಲ್ಲಿ ಆಹಾರ ಬಳಕೆಯು ಶೇ. 7ರಷ್ಟು ಕಡಿಮೆಗೊಂಡು ಅಲ್ಲಿನ ಜೀವನ ಗುಣಮಟ್ಟವು 1950ರ ಪ್ರಮಾಣಕ್ಕಿಂತ ಕೆಳಗಿದ್ದಿತು. 1980ರ ದಶಕದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಅಲ್ಲಿನ ಪ್ರಗತಿಯು ಕಳೆದ 20 ವರ್ಷಗಳ ಹಿಂದಿನ ಮಟ್ಟ ತಲುಪಿತು. ಜಾಂಬಿಯಾದಲ್ಲಿ ಶೇ. 80ರಷ್ಟು ಗ್ರಾಮೀಣವಾಸಿಗಳು ಬಡತನದಲ್ಲಿದ್ದಾರೆ. ನಿರಂತರವಾಗಿ ಹಳ್ಳಿಗಾಡಿನಿಂದ ನಗರ ಪ್ರದೇಶದೆಡೆಗೆ ಮತ್ತು ವಿದೇಶಕ್ಕೆ ಹಣ ಹರಿದು ಹೋದದ್ದೇ ಬಡತನಕ್ಕೆ ಕಾರಣವಾಗಿತ್ತು. ಇತರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಆಫ್ರಿಕಾದ ಬಡತನ ಪ್ರಮಾಣವು 1980 ಮತ್ತು 1990 ರ ದಶಕಗಳ ನಡುವೆ ಹೆಚ್ಚಳಗೊಂಡಿತು. ಜನಸಂಖ್ಯೆ ಬೆಳೆಯತೊಡಗಿತು, ನಗರಗಳು ವಿಸ್ತರಣೆಗೊಂಡವು ಮತ್ತು ಆಹಾರ ಧಾನ್ಯಗಳಿಗಾಗಿ ವಿದೇಶದ ಮೇಲಿನ ಅವಲಂಬನೆಯು ಹೆಚ್ಚತೊಡಗಿತು.
  • 1980ರ ದಶಕದಲ್ಲಿ ಆಫ್ರಿಕಾದ ಬಹುತೇಕ ಎಲ್ಲ ಬಡರಾಷ್ಟ್ರಗಳು ಸಾಲ ಮರುಪಾವತಿಸಲಾಗದೆ ದಿವಾಳಿ ಎದ್ದಾಗ ಹಳೆಸಾಲ ತೀರಿಸಲು ಹೊಸ ಸಾಲ ನೀಡಲಾಯಿತು. ತಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗಿಂತ ಸಾಲ ಮರುಪಾವತಿಗಾಗಿ ಹೆಚ್ಚಿನ ವೆಚ್ಚ ಭರಿಸಿವೆ. ಉದಾಹರಣೆಗೆ, ದೇಶದ ಜಿಡಿಪಿಯಲ್ಲಿ ಸರಾಸರಿ ಆಫ್ರಿಕಾದ ಸಾಲ ಮರುಪಾವತಿ ಶೇಕಡಾ 16ರಷ್ಟಿದ್ದರೆ, ಶಿಕ್ಷಣ, ರಕ್ಷಣೆ ಮತ್ತು ಆರೋಗ್ಯಕ್ಕೆ ಅದಕ್ಕಿಂತಲೂ ಕಡಿಮೆ ಹಣ ಹಂಚಿಕೆಯಾಗುತ್ತಿತ್ತು. ಸಾಲ ಮರುಪಾವತಿಯ ಒತ್ತಡದಿಂದಾಗಿ ಬಲಿಪಶುಗಳಾದವರೆಂದರೆ ಮಕ್ಕಳು, ಅಂಗವಿಕಲರು ಮತ್ತು ಮಹಿಳೆಯರು. ಅಪೌಷ್ಟಿಕತೆ, ಮಾನಸಿಕ ಒತ್ತಡ, ನಿರುದ್ಯೋಗ, ಹಸಿವು ಮತ್ತು ದಾರಿದ್ರ್ಯಗಳಿಂದಾಗಿ ಈ ವರ್ಗದ ಜನತೆಗೆ ತಕ್ಷಣದ ಹೊಡೆತ ಬಿದ್ದಿತು. ಉದಾಹರಣೆಗೆ, ಆಫ್ರಿಕಾದಲ್ಲಿ ಏಡ್ಸ್ ರೋಗವು ವ್ಯಾಪಕ ಪ್ರಮಾಣದಲ್ಲಿ ಹಬ್ಬಲು ವಿಶ್ವ ಬ್ಯಾಂಕಿನ ಆಥರ್ಿಕ ನೀತಿಗಳೇ ಕಾರಣವೆಂದು ಅಮೇರಿಕಾ ರೋಗ ನಿಯಂತ್ರಣ ಸಂಸ್ಥೆಯು ಒಂದೊಮ್ಮೆ ದೂರಿತ್ತು. ಆರೋಗ್ಯ ಕ್ಷೇತ್ರದಲ್ಲಿ ಒಂದೆಡೆ ಸರ್ಕಾರವು ಸಹಾಯಧನವನ್ನು ಕಡಿತಗೊಳಿಸಿ ಮತ್ತೊಂದೆಡೆ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದ್ದರಿಂದ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಬಳಸುವವರ ಸಂಖ್ಯೆ ಕುಸಿದು ಬಿದ್ದಿತು. 'ಮಾನವ ಸಂಪನ್ಮೂಲದ ಸರೋವರ' ವಾಗಬೇಕಿದ್ದ ಆಫ್ರಿಕಾ ಹಿಂಸೆಯಿಂದ ನರಳುತ್ತಿರುವವರ ಕೂಪವಾಯಿತು.

ಆಫ್ರಿಕಾದಲ್ಲಿ ಜನಾಂಗೀಯ ಘರ್ಷಣೆ

[ಬದಲಾಯಿಸಿ]
  • 20 ನೇ ಶತಮಾನದಲ್ಲಿ ಆಫ್ರಿಕಾದಲ್ಲಿ ನಡೆದಿರುವ ಜನಾಂಗೀಯ ಕಲಹಗಳು ಆಫ್ರಿಕಾದ ಇತಿಹಾಸದಲ್ಲೇ ಕಂಡಿರದ ಮಾರಣಹೋಮಗಳನ್ನು ಮತ್ತು ಕಗ್ಗೊಲೆಗಳನ್ನು ಉಂಟು ಮಾಡಿವೆ. ವಿಶ್ವದಲ್ಲೇ ಅತಿ ಹೆಚ್ಚು ನಿರಾಶ್ರಿತರನ್ನು ಆಫ್ರಿಕಾ ಹೊಂದಿತ್ತು. 1992ರಲ್ಲಿ ನಿರಾಶ್ರಿತರ ಸಂಖ್ಯೆ 50 ಲಕ್ಷ ಮೀರಿತ್ತು. 23ಲಕ್ಷ ಜನಸಂಖ್ಯೆಯಿರುವ ಲೈಬೀರಿಯಾದಂಥಹ ಚಿಕ್ಕ ದೇಶದಲ್ಲಿ ಬರೇ 4 ವರ್ಷಗಳಲ್ಲಿ ಸುಮಾರು 2.50 ಲಕ್ಷ ಜನರು ಅಂತಃಕಲಹದಿಂದ ಅಸು ನೀಗಿದ್ದಾರೆ. 1993ರಲ್ಲಿ ಘಾನಾದಲ್ಲಿ ನಡೆದ ರಕ್ತಪಾತದಲ್ಲಿ ಬುಡಕಟ್ಟು ಗುಂಪುಗಳ 6000 ಮಂದಿ ಹತ್ಯೆಯಾಗಿದ್ದು 200 ಹಳ್ಳಿಗಳು ನಾಶಗೊಂಡು 15000 ಮಂದಿ ನಿರಾಶ್ರಿತರಾಗಿದ್ದಾರೆ. ಸಿಯಾರ ಲಿಯೋನ್ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ಕಾದಾಟದಿಂದ ಅಂದಾಜು 35,000 ನಿರಾಶ್ರಿತರು ಒಂದೇ ವಾರದಲ್ಲಿ ಪಕ್ಕದ ಜಿನಿಯಾ ಗಡಿಗೆ ನುಸುಳಿದ್ದಾರೆ.
  • 1980ರ ದಶಕದಲ್ಲಿ ಅಂಗೋಲಾ ಮತ್ತು ಮೊಜಾಂಬಿಕ್ಗಳಲ್ಲಿ ನಡೆದ ವಿಶ್ವದಲ್ಲೇ ದೀಘರ್ಾವಧಿ ಜನಾಂಗೀಯ ಕಲಹದಲ್ಲಿ 15 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸೂಡಾನ್ನಲ್ಲಿ ಕಳೆದ 10 ವರ್ಷಗಳಲ್ಲಿ ಯುದ್ದ ಮತ್ತು ಕ್ಷಾಮಗಳಿಂದ 5ಲಕ್ಷ ಜನ ಸಾವನ್ನಪ್ಪಿದ್ದಾರೆ. 1988ರ ಒಂದೇ ವರ್ಷದಲ್ಲಿ 2.5ಲಕ್ಷ ಜನ ಸತ್ತರು. ಈ ಜನಾಂಗೀಯ ಕಲಹಗಳು ಆಫ್ರಿಕಾದ ಅಭಿವೃದ್ಧಿಗೆ ತೊಡಕಾಗಿದ್ದು ರಾಷ್ಟ್ರೀಯ ಐಕ್ಯತೆಗೆ ಪೆಟ್ಟು ನೀಡಿವೆ.
  • ಈ ಜನಾಂಗೀಯ ಕಲಹಗಳು ಹಿಂದಿನ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಬಳುವಳಿ ಪಡೆದು ಕೊಂಡು ಬಂದಿವೆ. ಇಂಥಹ ಘರ್ಷಣೆಗಳನ್ನು ಹತ್ತಿಕ್ಕಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ರೂಪುಗೊಳಿಸುವಲ್ಲಿ ಆಫ್ರಿಕಾದ ನಾಯಕತ್ವವು ವಿಫಲವಾಗಿದ್ದೇಕೆಂದರೆ ವಿದೇಶಿ ಶಕ್ತಿಗಳ ನಿರಂತರ ಹಸ್ತಕ್ಷೇಪ. ನೈಜೀರಿಯಾದಲ್ಲಿ 1980ರಲ್ಲಿ 60,000 ಮಿಲಿಯನ್ ಡಾಲರ್ನಿಂದ 1987ರ ಹೊತ್ತಿಗೆ 2.0 ಲಕ್ಷ ಮಿಲಿಯನ್ ಡಾಲರ್ನಷ್ಟು ಬಂಡವಾಳ ಹೊರದೇಶಕ್ಕೆ ಹರಿದು ಹೋಗಿ ತೀವ್ರತರದ ಹಾನಿಯುಂಟು ಮಾಡಿತ್ತು.
  • 1970 ರಿಂದೀಚೆಗೆ ಆಫ್ರಿಕಾದ ವಯಸ್ಕರಲ್ಲಿ ಏಡ್ಸ್ ಪ್ರಮಾಣವು 1 ಕೋಟಿ ಜನರಲ್ಲಿ ವ್ಯಾಪಿಸಿದೆ. ಏಡ್ಸ್ ರೋಗವು ವ್ಯಾಪಕವಾಗಿ ಹಬ್ಬಲು ಕಾರಣವೇನೆಂದರೆ, ಅಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಕಾದಾಟಗಳು, ಕ್ಷಾಮ ಮತ್ತು ಅಂತಃಕಲಹ.
  • 1970ರಲ್ಲಿ ಸೋಮಾಲಿಯಾದಲ್ಲಿ ಮಿಲಿಟರಿ ಆಳ್ವಿಕೆ ಬಂದಿತು. ಹಾಗೆಯೇ ಇಥಿಯೋಪಿಯಾ 1974ರಲ್ಲಿ ಮತ್ತು ಸೂಡಾನ್ 1969ರಲ್ಲಿ ಮಿಲಿಟರಿ ಆಡಳಿತದ ತೆಕ್ಕೆಗೆ ಸರಿದವು. ಇಥಿಯೋಪಿಯಾದಲ್ಲಿ ಮಾಕ್ಸರ್್ವಾದಿ-ಲೆನಿನ್ವಾದಿ ಪಕ್ಷದ ನಾಯಕ ಮೆಂಗಿಸ್ಟು ಹ್ಯೆಲ್ ಮೆರಿಯಮ್ ಆಳ್ವಿಕೆಯನ್ನು ಕಿತ್ತೊಗೆದು ದೇಶ ವಿಭಜನೆ ಮಾಡಲು ಯತ್ನಿಸಲಾಯಿತು. ಅಂತಿಮವಾಗಿ 1991ರಲ್ಲಿ ಮೆಂಗಿಸ್ಟು ಆಳ್ವಿಕೆಯನ್ನು ಕೊನೆಗಾಣಿಸಲಾಯಿತು. ತನ್ನ ವಿವಾದಿತ ಗಡಿಪ್ರದೇಶಗಳನ್ನು ವಾಪಸು ಪಡೆಯಲು ಅದೀಗ ತಾನೆ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಎರಿಟ್ರಿಯಾ ದೇಶದ ಮೇಲೆ ಇಥಿಯೋಪಿಯಾವು 1998-99 ರಲ್ಲಿ ಯುದ್ದ ಮಾಡಿತು. 1999ರ ಹೊತ್ತಿಗೆ, ಕೇಂದ್ರೀಯ ಸೋಮಾಲಿ ಭೂಪ್ರದೇಶದಲ್ಲಿ ವಾಯುವ್ಯ ಭೂಭಾಗವು ಸೋಮಾಲಿಲ್ಯಾಂಡ್ ಆಗಿ ವಿಭಜನೆಗೊಂಡು, ದಕ್ಷಿಣ ಭೂಭಾಗವು ಯುದ್ದಕೋರರ ನಡುವೆ ಹರಿದು ಹಂಚಿಹೋಯಿತು.
  • ದಕ್ಷಿಣ ಸೂಡಾನ್ನಲ್ಲಿ ಉತ್ತರದ ಇಸ್ಲಾಂಮಿಕ್ ಪಂಗಡ ಮತ್ತು ದಕ್ಷಿಣ ಜನತೆಯ ನಡುವಿನ ದೀಘರ್ಾವಧಿ ಯುದ್ದ ಇನ್ನೂ ನಡೆಯುತ್ತಲೇ ಇದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧಾರ್ಮಿಕ ಅನುಯಾಯಿಗಳ ನಡುವಿನ ಘರ್ಷಣೆಯು ಜನಾಂಗೀಯ ಯುದ್ದಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಸೂಡಾನ್, ಇಥಿಯೋಪಿಯಾ ಮತ್ತು ಸೋಮಾಲಿಯಾಗಳಲ್ಲಿನ ಜನಾಂಗೀಯ ಘರ್ಷಣೆಗಳಿಂದಾಗಿ ಅಲ್ಲಿನ ಜನರೆಲ್ಲ ನಿರಾಶ್ರಿತ ಶಿಬಿರಗಳಲ್ಲೇ ಬಹುತೇಕ ತಮ್ಮೆಲ್ಲ ಜೀವನವನ್ನು ಕಳೆದಿದ್ದಾರೆ. 1994ರಲ್ಲಿ ರುವಾಂಡಾದಲ್ಲಿ ಘೋರವಾದ ಜನಾಂಗೀಯ ಘರ್ಷಣೆ ನಡೆದು ಬಹುಸಂಖ್ಯಾತ ಹುಟು ಜನಾಂಗವು ಅಲ್ಪಸಂಖ್ಯಾತ ಟುಟ್ಸಿ ಜನಾಂಗದ ಮೇಲೆ ಮಿಲಿಟರಿ ಕಗ್ಗೊಲೆ ನಡೆಸಿತು.

ಆಫ್ರಿಕಾದ ಮಹಾಯುದ್ದಗಳು

[ಬದಲಾಯಿಸಿ]
  • ಝೈರೇ ದೇಶ (ಇಂದಿನ ಕಾಂಗೋ)ದ ಮೇಲಿನ ನಿಯಂತ್ರಣಕ್ಕಾಗಿ ವಿವಿಧ ಪಂಗಡಗಳ ನಡುವೆ ಈ ಮಹಾಯುದ್ದಗಳು ಜರುಗಿದವು. ಇದರಲ್ಲಿ ಪ್ರಮುಖವಾಗಿ ನಾಲ್ಕು ಜನಾಂಗಗಳ ಸಶಸ್ತ್ರ ಗುಂಪುಗಳಿವೆ:
  • ಮೊದಲನೆಯ ಗುಂಪಿನಲ್ಲಿ, ರುವಾಂಡ ಮತ್ತು ಬುರುಂಡಿ ದೇಶಗಳಲ್ಲಿ ಟುಟ್ಸಿ ಜನಾಂಗವು ಪ್ರಾಬಲ್ಯ ಹೊಂದಿದೆ. ರುವಾಂಡ ಮತ್ತು ಬುರುಂಡಿಯ ರಾಷ್ಟ್ರೀಯ ಭದ್ರತೆ ಮತ್ತು ನೈಸಗರ್ಿಕ ಸಂಪನ್ಮೂಲಗಳ ಹಂಚಿಕೆಗಾಗಿ ಈ ಸಕರ್ಾರಗಳು ರುವಾಂಡಾದ ಮೈತ್ರಿ ಸೇನೆಯನ್ನು ನಿಮರ್ಿಸಿವೆ. ಈ ಮೈತ್ರಿ ಸೇನೆ ಹಾಗೂ ಟುಟ್ಸಿ ಜನಾಂಗದ ಮಿಲಿಟರಿ ಗುಂಪು ಉಗಾಂಡಾದ ಮೈತ್ರಿ ಸೇನೆಯ ವಿರುದ್ದ ಕಾದಾಡಿತು. ಎರಡನೆಯದು, ಹುಟು ಮೈತ್ರಿ ಕೂಟವು 1994ರಲ್ಲಿ ರುವಾಂಡಾದಲ್ಲಿ ನಡೆದ ನರಮೇಧಕ್ಕೆ ಕಾರಣವಾಗಿದೆ. ಇದರಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ಸೇರಿಕೊಂಡಿವೆ. ಬುರುಂಡಿ ಸಕರ್ಾರವನ್ನು ಕಿತ್ತೊಗೆಯುವುದು, ಕಾಂಗೋದ ಹುಟು ಜನಾಂಗ ಮತ್ತು ಮಾಯಿ-ಮಾಯಿ ಎಂಬ ಹೆಸರಿನ ಮಿಲಿಟರಿ ಗುಂಪಿನ ಮೇಲೆ ಯುದ್ದ ಮಾಡುವುದು ಮತ್ತು ನಿಸರ್ಗದ ಸಂಪತ್ತಿನ ನಿಯಂತ್ರಣ ಇದರ ಉದ್ದೇಶ. ಈ ಕೂಟವು ರುವಾಂಡ ಮತ್ತು ಬುರುಂಡಿಯ ಟುಟ್ಸಿ ಸೇನೆಯ ವಿರುದ್ದ ಸದಾ ಕತ್ತಿ ಮಸೆಯುತ್ತಿದೆ. ಮೂರನೆಯದಾಗಿ, ಉಗಾಂಡಾದ ಮೈತ್ರಿ ಕೂಟವು ಉಗಾಂಡಾ ರಾಷ್ಟ್ರೀಯ ಸೇನೆ ಮತ್ತು ಬಂಡುಕೋರರ ಮೈತ್ರಿ ಕೂಟವಾಗಿದೆ. ಇದು ರಿಪಬ್ಲಿಕ್ ಕಾಂಗೋದ ಈಶಾನ್ಯ ಮತ್ತು ಉತ್ತರ ದಿಕ್ಕಿನ ಕೇಂದ್ರೀಯ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ಇದರ ಉದ್ದೇಶ ಕಾಂಗೋ ಸಕರ್ಾರದ ಸೇನೆಯ ದಾಳಿಯಿಂದ ತನ್ನ ಸಂಪನ್ಮೂಲ ಮತ್ತು ಭೂಭಾಗವನ್ನು ರಕ್ಷಿಸಿಕೊಳ್ಳುವುದು. ನಾಲ್ಕನೆಯದಾಗಿ, ಕಿನ್ಸಾಶಾ ಮೈತ್ರಿಕೂಟದಲ್ಲಿ ಕಾಂಗೋ ಸಕರ್ಾರ, ಮಾಯಿ-ಮಾಯಿ ಗುಂಪು ಮತ್ತು ಮೈತ್ರಿ ದೇಶಗಳಾದ ಜಿಂಬಾಬ್ವೆ, ಅಂಗೋಲಾ, ಸೂಡಾನ್, ಛಡ್ ಮತ್ತು ನಮೀಬಿಯಾ ದೇಶಗಳು ಒಟ್ಟಿಗಿವೆ. ಈ ಮೈತ್ರಿಕೂಟವು ರಿಪಬ್ಲಿಕ್ ಕಾಂಗೋ ದೇಶದ ಪೂರ್ವ ಮತ್ತು ದಕ್ಷಿಣ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ತನ್ನ ಗಡಿಯನ್ನು ರಕ್ಷಿಸಿಕೊಂಡು ನೈಸಗರ್ಿಕ ಸಂಪನ್ಮೂಲವನ್ನು ನಿಯಂತ್ರಿಸುವುದು ಇದರ ಉದ್ದೇಶ.

ಆಫ್ರಿಕಾದ ಮೊದಲನೇ ಮಹಾಯುದ್ದ

[ಬದಲಾಯಿಸಿ]
  • ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು 1994ರಲ್ಲಿ ನಡೆಸಿದ ರುವಾಂಡಾ ನರಮೇಧದ ಅಂತ್ಯದಲ್ಲಿ ರುವಾಂಡಾ ಸಕರ್ಾರಿ ಸೇನೆಯ ಪ್ರತಿದಾಳಿಗೆ ಹೆದರಿ 20 ಲಕ್ಷ ಹುಟು ಜನತೆಯು ನಿರಾಶ್ರಿತರಾಗಿ ರುವಾಂಡಾವನ್ನು ತ್ಯಜಿಸಿ ಪಕ್ಕದ ಝೈರೇ ಮತ್ತು ಟಾಂಜೇನಿಯಾ ದೇಶಗಳಿಗೆ ಓಡಿಹೋದರು. ಇದರಲ್ಲಿ ನರಮೇಧ ನಡೆಸಿದ ಹುಟು ಜನಾಂಗದ ನಾಯಕರು ಇದ್ದರು. ಝೈರೇಯ ಬುಕಾವು, ಗೋಮ ಮತ್ತು ಉವಿರಾ ಪ್ರದೇಶಗಳಲ್ಲಿ ನೆಲೆಯೂರಿದ್ದ ನಿರಾಶ್ರಿತರ ಶಿಬಿರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಈ ನಾಯಕರು ಯಶಸ್ವಿಯಾದರು. ಇವರಿಗೆ ಬುರುಂಡಿಯ ಟುಟ್ಸಿ ಜನಾಂಗದ ಸಕರ್ಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದ ಹುಟು ಜನತೆಯ ಸಂಘಟನೆ ಮತ್ತು ಝೈರೇಯ ಅಧ್ಯಕ್ಷ ಮೊಬುಟು ಸೆಸೆ ಸೆಕೊ ರವರು ಬೆಂಬಲವಾಗಿ ನಿಂತರು. ನೆರೆಯ ನೈರೋಬಿ, ಕೀನ್ಯಾ, ಅಮೇರಿಕಾ ಮತ್ತು ಯೂರೋಪ್ ರಾಷ್ರಗಳಿಂದ ಸಂಪನ್ಮೂಲ ಮತ್ತು ಶಸ್ತ್ರಾಸé್ರಗಳನ್ನು ಸಂಗ್ರಹಿಸುತ್ತಾ ನಿರಾಶ್ರಿತ ಜನತೆಗೆ ಮಿಲಿಟರಿ ತರಬೇತಿ ನೀಡಿ ಸನ್ನದ್ದಗೊಳಿಸಿದರು. ಅಂತಿಮವಾಗಿ, ಸೆಂಬ್ಲಮೆಂಟ್ ಡೆಮಕ್ರಟಿಕ್ ಪೋರ್ ಲ ರುವಾಂಡಾ (ಆರ್ಡಿಆರ್) ಎಂಬ ಸಂಘಟನೆಯ ನೇತೃತ್ವದಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ರುವಾಂಡಾ ಸಕರ್ಾರದ ವಿರುದ್ದ 1995-1996ರಲ್ಲಿ ಯುದ್ದ ಸಾರಿದವು. ಇದಕ್ಕೆ ಪ್ರತ್ಯುತ್ತರವಾಗಿ, ಪಾಲ್ ಕಗಾಮೆ ನಾಯಕತ್ವದ ರುವಾಂಡಾ ಸಕರ್ಾರಿ ಸೇನೆಯು ಬಂಡಾಯ ಗುಂಪುಗಳ ನಾಯಕ ಕಬಿಲಾ ಸಹಕಾರದಲ್ಲಿ ಪೂರ್ವ ಝೈರೇಯ ಮೇಲೆ ದಾಳಿಯಿಟ್ಟಿತು. ಆರ್ಡಿಆರ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಈ ಪ್ರತಿ ದಾಳಿಯಿಂದ ನಿರಾಶ್ರಿತ ಜನತೆ ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾದರು. 6.0 ಲಕ್ಷ ಜನ ನಿರಾಶ್ರಿತರಾಗಿ ಕಿವುಸ್ ಪ್ರದೇಶಕ್ಕೂ, ಸುಮಾರು 4.0ಲಕ್ಷ ಜನರು ಟಾಂಜೇನಿಯಾಕ್ಕೂ ಓಡಿಹೋದರು. ಸಾವಿರಗಟ್ಟಲೆ ಜನ ಹಸಿವು, ಹಿಂಸೆಗಳಿಂದ ಮರಣ ಹೊಂದಿದರು. ಮೇ, 1997ರಲ್ಲಿ ರಾಜಧಾನಿ ಕಿನ್ಸಾಸಾ ವನ್ನು ಪ್ರವೇಶಿಸಿದಾಕ್ಷಣ ಝೈರೇ ಅಧ್ಯಕ್ಷ ಮೊಬುಟು ಅಲ್ಲಿಂದ ಪರಾರಿಯಾದ. ಯುದ್ದಕ್ಕೆ ಅಂತ್ಯ ಹಾಡಿ ರಿಪಬ್ಲಿಕ್ ಕಾಂಗೋದ ಅಧ್ಯಕ್ಷ ಕಬಿಲಾ ಎಂದು ಘೋಷಿಸಲಾಯಿತು.

ಆಫ್ರಿಕಾದ ಎರಡನೇ ಮಹಾಯುದ್ದ

[ಬದಲಾಯಿಸಿ]
  • ಜಾಂಬಿಯಾ, ಅಂಗೋಲಾ, ಕಾಂಗೋ-ಬೆಜ್ಜವಿಲ್ಲೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಛಡ್, ಸೂಡಾನ್, ಬರುಂಡಿ ಮತ್ತು ಟಾಂಜೇನಿಯಾಗಳಲ್ಲಿ ಚದುರಿಹೋಗಿದ್ದ ಹುಟು ಜನಾಂಗದ ಹೋರಾಟಗಾರರು ಮತ್ತೆ ರುವಾಂಡಾ ವಿಮೋಚನಾ ಮೈತ್ರಿ (ಎಎಲ್ಐಆರ್) ಯನ್ನು ಸಂಘಟಿಸಿ ಅದು 1997ರ ಹೊತ್ತಿಗೆ ಕೆಲಸ ಮಾಡಲಾರಂಭಿಸಿತು. ಕಬಿಲಾ ಸಕರ್ಾರದ ವಿರುದ್ದ ಕತ್ತಿ ಮಸೆಯಲಾರಂಬಿಸಿದರು. ಎರಡನೆ ಕಾಂಗೋ ಮಹಾಯುದ್ದವನ್ನು ಆಫ್ರಿಕಾದ ಮಹಾಯುದ್ದವೆಂದೂ ಕರೆಯಲಾಗುತ್ತದೆ. ಆಫ್ರಿಕಾದ 8 ರಾಷ್ಟ್ರಗಳ ನಡುವೆ ನಡೆದ ಈ ಯುದ್ದವು 1998ರಲ್ಲಿ ಆರಂಭವಾಗಿ 2003ರಲ್ಲಿ ಕೊನೆಗೊಂಡಿತು. ಎರಡನೆ ವಿಶ್ವ ಮಹಾಯದ್ದಾನಂತರದಲ್ಲಿ ನಡೆದ ಅತ್ಯಂತ ಬರ್ಭರ ಯುದ್ದ ಇದಾಗಿದ್ದು ಇದರಲ್ಲಿ 25 ಸಶಸ್ತ್ರ ಗುಂಪುಗಳು ಭಾಗಿಯಾಗಿದ್ದು ಸುಮಾರು 38ಲಕ್ಷ ಜನ ಬಹುತೇಕ ಹಸಿವು ಮತ್ತು ಬಡತನದಿಂದ ಅಸುನೀಗಿದ್ದಾರೆ. ಲಕ್ಷಾಂತರ ಜನರು ಈ ಯುದ್ದದಿಂದಾಗಿ ನಿರಾಶ್ರಿತರಾಗಿದ್ದಾರೆ.
  • ರಚಿಸಿ ಲಾರೆಂಟ್ ಕಬಿಲಾ ರನ್ನು ರಿಪಬ್ಲಿಕ್ ಕಾಂಗೋದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಂಗೋಲಾ, ಜಿಂಬಾಬ್ವೆ, ಛಡ್, ಸೂಡಾನ್ ಮತ್ತು ಲಿಬ್ಯಾಗಳು ಕಬಿಲಾ ಬೆಂಬಲಕ್ಕೆ ನಿಂತವು. ಆದರೆ, 2002ರಲ್ಲಿ ಅವರನ್ನು ಹತ್ಯೆ ಮಾಡಿದ್ದರಿಂದ ಅವರ ಮಗ ಜೋಸೆಫ್ ಕಬಿಲಾರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಮಧ್ಯಂತರ ಸಕರ್ಾರದ ಅವಧಿ ಮುಗಿದ ನಂತರ 2006ರಲ್ಲಿ ಸಾಮಾನ್ಯ ಚುನಾವಣೆ ನಡೆದು ಕಬಿಲಾ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ಜಾಗತೀಕರಣ ಯುಗದಲ್ಲಿ ಆಫ್ರಿಕಾ

[ಬದಲಾಯಿಸಿ]
  • ನ್ಶೆಜೀರಿಯಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಹನ್ನೊಂದನೆ ಸ್ಥಾನದಲ್ಲಿದೆ. ನ್ಶೆಜೀರಿಯಾ ಸಕರ್ಾರದ ಶೇ. 80 ರಷ್ಟು ಆದಾಯವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದ್ದು ಯೂರೋಪ್ ಮತ್ತು ಅಮೇರಿಕಾಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುತ್ತವೆ. ಅಂಗೋಲಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಫ್ರಿಕಾದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದರ ಶೇ. 90ರಷ್ಟು ಆದಾಯವು ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ಚೀನಾ ಈ ದೇಶದ ಪ್ರಮುಖ ಆಮದುದಾರ ರಾಷ್ಟ್ರವೆನಿಸಿದೆ. ಸೂಡಾನ್ ದೇಶವೂ ಕೂಡ ತನ್ನ ಬಹುಪಾಲು ಆದಾಯವನ್ನು ಪೆಟ್ರೋಲಿಯಂ ರಫ್ತಿನಿಂದಾಗಿ ಗಳಿಸುತ್ತಿದೆ.
  • ಆದರೂ ಆಫ್ರಿಕಾದಲ್ಲಿ 1985ರಿಂದೀಚೆಗೆ ಬಡತನ ಮತ್ತು ಮಿಲಿಟರಿ ಗಲಭೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿವೆ. 1989ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆಗೊಂಡದ್ದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವನ್ನು ಮತ್ತಷ್ಟು ಮಣಿಸಿ ಹೊಸ ರೂಪದ ಸುಲಿಗೆಕೋರ ಆಥರ್ಿಕ ನೀತಿಗಳನ್ನು ಹೇರಲಾಗುತ್ತಿದೆ. ಒಂದರ್ಥದಲ್ಲಿ ಪ್ರಪಂಚದೆಲ್ಲೆಡೆ ಜಾಗತೀಕರಣ ನೀತಿಯನ್ನು ಜಾರಿಮಾಡುವ ಮೊದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮೊದಲಿಗೆ ಅದನ್ನು ಅನಧಿಕೃತವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ 1980ರ ದಶಕದ ಸುಮಾರಿಗೆ ಜಾರಿ ಮಾಡಿದ್ದವೆಂದೇ ಹೇಳಬಹುದು. ಆಫ್ರಿಕನ್ ರಾಷ್ಟ್ರಗಳನ್ನು ಒಂದೇ ಮಾರುಕಟ್ಟೆಗೆ ಎಳೆತರುವುದು ನವ-ವಸಾಹತುವಾದದ ರೂಪಗಳಲ್ಲೊಂದು. ಆಫ್ರಿಕಾದ ರಾಷ್ಟ್ರಗಳ ಸ್ವಾವಲಂಬನೆ ಮತ್ತು ಸ್ವತಂತ್ರ ಆಥರ್ಿಕ ಹಾದಿಗಳನ್ನು ಬುಡಮೇಲುಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶ್ವಬ್ಯಾಂಕ್ ಮತ್ತು ಐಎಂಎಫ್-ಪ್ರೇರಿತ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು, ಉದಾರ ಆಥರ್ಿಕ ನೀತಿ, ಸಾರ್ವಜನಿಕ ಉತ್ಪಾದನಾ ಕ್ಷೇತ್ರವನ್ನು ಕಿತ್ತೊಗೆಯುವುದು, ಮತ್ತು ಮುಕ್ತ ಮಾರುಕಟ್ಟೆ ನೀತಿಗಳನ್ನು ಪರಿಹಾರವೆಂಬಂತೆ ನೀಡಿದವು. ಪಶ್ಚಿಮ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ಗಳು ಅಲ್ಲಿ ರಾಜಕೀಯ ಸುಧಾರಣೆ, ಬಹುಪಕ್ಷ ವ್ಯವಸ್ಥೆ, ಪತ್ರಿಕೋದ್ಯಮದ ಮುಕ್ತ ಸ್ವಾತಂತ್ರ್ಯ ಗಳ ನೆಪದಲ್ಲಿ ಮೇಲಿನ ವಿಧಾನಗಳನ್ನು ಪರಿಹಾರ ರೂಪದಲ್ಲಿ ಉಣಬಡಿಸಿದವು. ಜಾಗತೀಕರಣವು ಸ್ಥಳೀಯ ಉತ್ಪಾದನಾ ವ್ಯವಸ್ಥೆಯನ್ನು ಹಾಳುಗೆಡವಿ ಜಾಗತಿಕ ಸ್ಪಧರ್ಾ ಮಾರುಕಟ್ಟೆಯಲ್ಲಿ ಆಫ್ರಿಕಾದ ಉತ್ಪನ್ನಗಳನ್ನು ಮೂಲೆಗೆ ತಳ್ಳಿತು. 1992 ಮತ್ತು 1994ರ ನಡುವೆ ಜಿಂಬಾಬ್ವೆಯ ದೊಡ್ಡ ಜವಳಿ ಕಾಖರ್ಾನೆ ಸ್ಭೆರಿದಂತೆ ಸುಮಾರು 60ಕ್ಕೂ ಹೆಚ್ಚು ಕಾಖರ್ಾನೆಗಳನ್ನು ಮುಚ್ಚಲಾಯಿತು.

ರಫ್ತು ಕುಸಿತ

[ಬದಲಾಯಿಸಿ]
  • ಅಸಮಾನ ವ್ಯಾಪಾರ ನೀತಿಗಳಿಂದ ಆಫ್ರಿಕಾಗೆ ಬಹಳ ಪೆಟ್ಟು ಬಿದ್ದಿತು. ರಪ್ತು ಉತ್ಪನ್ನಗಳಿಗೆ ದೊರಕುತ್ತಿದ್ದ ಬೆಲೆಯು ಆಮದು ಉತ್ಪನ್ನಗಳಿಗೆ ಹೋಲಿಸಿದಲ್ಲಿ ಏನೇನೂ ಇರಲಿಲ್ಲ. ಜಾಗತಿಕ ವ್ಯಾಪಾರದಲ್ಲಿ ಆಫ್ರಿಕಾದ ಪಾಲು ಕುಸಿದು ಹೋಗಲು ಕಾರಣವೆಂದರೆ ಬಹುತೇಕ ರಾಷ್ಟ್ರಗಳು ಕೇವಲ ಕೆಲವೇ ಉತ್ಪನ್ನಗಳ ರಪ್ತಿನ ಮೇಲೆ ಅವಲಂಬಿತವಾಗಿದ್ದವು. ಒಟ್ಟಾರೆ ರಪ್ತಿನಲ್ಲಿ ಶೇ. 75ರಷ್ಟು ಪಾಲು ಒಂದೇ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳೆಂದರೆ: ಅಂಗೋಲ, ಬೊಟ್ಸಾವಾನಾ, ಬುರುಂಡಿ, ಕಾಂಗೋ, ಗ್ಯಾಬನ್, ನೈಜರ್, ನೈಜೀರಿಯಾ, ಸೋಮಾಲಿಯಾ, ಉಗಾಂಡಾ ಮತ್ತು ಜಾಂಬಿಯಾ. ತಮ್ಮ ರಪ್ತು ಪ್ರಮಾಣದಲ್ಲಿ ಕನಿಷ್ಟ ಶೇ. 25 ರಷ್ಟನ್ನು ನಾಲ್ಕಕ್ಕೂ ಹೆಚ್ಚು ಉತ್ಪನ್ನಗಳಿಂದ ಗಳಿಸುವ ರಾಷ್ಟ್ರಗಳೆಂದರೆ: ಗ್ಯಾಂಬಿಯಾ, ಲೆಸೊತೊ, ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್, ಟ್ಯಾಂಜೇನಿಯಾ ಮತ್ತು ಜಿಂಬಾಬ್ವೆ. 1980 ರಿಂದ 2000 ರವರೆಗೆ, ಆಫ್ರಿಕಾದ ರಪ್ತು ಪ್ರಮಾಣವು ಕುಸಿತಗೊಂಡು ಸಕ್ಕರೆ ಶೇ. 77 ರಷ್ಟು ಕೋಕೋ ಶೇ. 71, ಕಾಫಿ ಶೇ. 64ರಷ್ಟು ಮತ್ತು ಹತ್ತಿಯು ಶೇ. 47ರಷ್ಟು ಕುಸಿತಗೊಂಡಿದೆ. ಇದೇ ವೇಳೆ ಆಫ್ರಿಕಾದಿಂದ ಅಮೇರಿಕಾಗೆ ರಫ್ತಾಗುವ ಕಡಲೆಕಾಯಿ ಮೇಲಿನ ಆಮದು ಸುಂಕವನ್ನು ಅಮೇರಿಕಾವು ಶೇ. 132 ರಷ್ಟು ಹೆಚ್ಚಿಸಿದೆ.
  • ಈ ಮಧ್ಯೆ ಚೀನಾ ಆಫ್ರಿಕಾ ನಡುವಿನ ಬಾಂಧವ್ಯ ವೃದ್ದಿಸುತ್ತಿದೆ. 1990 ರ ಹೊತ್ತಿಗೆ ಆಫ್ರಿಕಾ-ಚೀನಾದ ವ್ಯಾಪಾರವು ಶೇ. 700 ರಷ್ಟು ಬೆಳವಣಿಗೆ ಹೊಂದಿದೆ. ಅಂಗೋಲಾ, ಸೂಡಾನ್ ಮತ್ತು ಇನ್ನಿತರ ದೇಶಗಳಿಂದ ಚೀನಾ ಪೆಟ್ರೋಲಿಯಂ ನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೇರಿಕಾ ಮತ್ತು ಫ್ರಾನ್ಸ್ನ ನಂತರ ಚೀನಾ ಅತಿ ದೊಡ್ಡ ವ್ಯಾಪಾರ ಮೈತ್ರಿಯನ್ನು ಏರ್ಪಡಿಸಿದೆ. ಚೀನಾದ ಮೈತ್ರಿಯು ಬರೆ ವ್ಯಾಪಾರೋದ್ದೇಶಕ್ಕೆ ಮಾತ್ರವೇ ಸೀಮಿತವಾಗಿರದೆ, ಆಫ್ರಿಕಾದಲ್ಲಿ ರೈಲು ಮಾರ್ಗ, ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳು, ಸೇತುವೆಗಳು, ಮತ್ತು ಕಛೇರಿ ನಿಮರ್ಾಣಗಳಂಥಹ ಅಭಿವೃದ್ಧಿ ಕಾರ್ಯಗಳಿಗೂ ಸಹ ನೆರವು ನೀಡುತ್ತಿದೆ. ಆಫ್ರಿಕಾ ಪಡೆದಿದ್ದ 10 ಬಿಲಿಯನ್ ಡಾಲರ್ ಸಾಲವನ್ನು ಚೀನಾ ಇತ್ತೀಚೆಗಷ್ಟೆ ಮನ್ನಾ ಮಾಡಿತು. ಆಫ್ರಿಕಾ ದೇಶಗಳಲ್ಲಿ ಶಾಂತಿ ಪಾಲನೆಗಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸುಮಾರು 1,500 ಸೈನಿಕರನ್ನು ಅದು ಕಳುಹಿಸಿದೆ. ಆರೋಗ್ಯ ಸೇವೆ ಒದಗಿಸಲು ತನ್ನ ಡಾಕ್ಟರುಗಳನ್ನು ಆಫ್ರಿಕಾಗೆ ಕಳುಹಿಸಿದೆ. ಆಫ್ರಿಕಾದ ಕಾಮರ್ಿಕರು ಮತ್ತು ವಿದ್ಯಾಥರ್ಿಗಳು ಚೀನಾದ ವಿಶ್ವವಿದ್ಯಾನಿಲಯ ಮತ್ತು ತರಬೇತಿ ಕೇಂದ್ರಗಳಲ್ಲಿ ತರಬೇತು ಪಡೆಯುತ್ತಿದ್ದಾರೆ.
  • ಇನ್ನೊಂದೆಡೆ, ನಿರಂತರವಾಗಿ ಆಫ್ರಿಕನ್ ರಾಷ್ಟ್ರಗಳಿಗೆ ಅಗಾಧ ಪ್ರಮಾಣದ ಸಾಲ ನೀಡುತ್ತಾ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಪಾರ ಹೊರೆಯನ್ನು ಹೇರಿದವು. ಉದಾಹರಣೆಗೆ, 1990ರಲ್ಲಿ 60 ಬಿಲಿಯನ್ ಡಾಲರ್ ಸಾಲ ಪಡೆದದ್ದಕ್ಕೆ 1997ರ ಹೊತ್ತಿಗೆ ಆಫ್ರಿಕಾದ ರಾಷ್ಟ್ರಗಳು 162 ಬಿಲಿಯನ್ ಡಾಲರ್ ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದವು. ಕುತ್ತಿಗೆಯ ಸುತ್ತ ಉಸಿರುಗಟ್ಟುವಂತೆ ಬಿಗಿದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಮಿಸುಕಾಡುತ್ತಿದ್ದವು. ಇದರಿಂದಾಗಿ ವಿಶ್ವ ಸಂಸ್ಥೆಯ ವರದಿಯಂತೆ, ಸರಾಸರಿ ಆಫ್ರಿಕಾದ ಕುಟುಂಬಕ್ಕೆ 25 ವರ್ಷಗಳ ಹಿಂದೆ ಸಿಗುತ್ತಿದ್ದ ಆಹಾರಕ್ಕಿಂತ ಶೇಕಡಾ 20ರಷ್ಟು ಕಡಿಮೆ ಆಹಾರ ದೊರಕುತ್ತಿದೆ. ಅಮೇರಿಕಾದ ಪ್ರಜೆಯೊಬ್ಬ ಗಳಿಸುವ ಪ್ರತಿ ಡಾಲರ್ಗೆ ಆಫ್ರಿಕಾದ ಪ್ರಜೆ ಕೇವಲ 0.06 ಡಾಲರ್ ಗಳಿಸುತ್ತಿದ್ದಾನಷ್ಟೆ. 1998ರಲ್ಲಿ ಆಫ್ರಿಕಾವು ಶೇ. 10ರಷ್ಟು ವಿಶ್ವ ಜನಸಂಖ್ಯೆಯನ್ನು ಹೊಂದಿದ್ದರೆ, ಕೇವಲ ಶೇ. 1ರಷ್ಟು ಕೈಗಾರಿಕಾ ಉತ್ಪಾದನೆಯ ಪಾಲನ್ನು ಹೊಂದಿತ್ತು. ಇಸ್ತ್ರೇಲ್ ಮತ್ತು ಬೆಲ್ಜಿಯಂ ದೇಶಗಳು ಅಗಾಧ ಮೊತ್ತದ ಶಸ್ತ್ರಾಸé್ರಗಳನ್ನು ಉಗಾಂಡಕ್ಕೆ ನೀಡಿ ಬದಲಿಗೆ ಅಲ್ಲಿನ ಬೆಲೆಬಾಳುವ ವಜ್ರಗಳನ್ನು ಕೊಳ್ಳೆ ಹೊಡೆಯುತ್ತಿವೆ. ಆಫ್ರಿಕಾ ರಾಷ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಶೇ. 25 ರಿಂದ 50ರವರೆಗೂ ಇದೆ. ಹೆಚ್.ಐ.ವಿ ರೋಗದ ಸೋಂಕಿಗೆ ತುತ್ತಾದವರ ಸಂಖ್ಯೆಯು ವಿಶೇಷವಾಗಿ ಪೂರ್ವ, ಮಧ್ಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಎಬೋಲಾದಂಥಹ ಅಪಾಯಕಾರಿ ವೈರಸ್ ರೋಗಗಳನ್ನು ನಿಯಂತ್ರಿಸಲಾಗದೆ ಸಾವಿರಾರು ಆಪ್ರಿಕನ್ನರು ಮರಣವಾದರು.
  • ಪ್ರತಿಭಾ ಪಲಾಯನ:
  • ಪ್ರತಿ ವರ್ಷ ಸುಮಾರು 70,000 ಪರಿಣಿತ ಕೆಲಸಗಾರರು ಆಫ್ರಿಕಾದಿಂದ ಅಭಿವೃದ್ಧಿ ಹೊಂದಿದ ರಾಷ್ರಗಳಿಗೆ ವಲಸೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಾಂಬಿಯಾವು ತನ್ನ 1400 ಡಾಕ್ಟರುಗಳಲ್ಲಿ ಸುಮಾರು 400 ಮಂದಿಯನ್ನು ಪ್ರತಿಭಾ ಪಲಾಯನದಿಂದಾಗಿ ಕಳೆದುಕೊಂಡಿದೆ.

ಉಲ್ಲೇಖ

[ಬದಲಾಯಿಸಿ]
  • ಆಕರ ಗ್ರಂಥ:
  • 1. ಆಫ್ರಿಕಾ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ : ಎ ಫ್ಯೂಚರಿಸ್ಟಿಕ್ ಎಕ್ಸರ್ಸ್ಶೆಜ್
  • 2. ಕಾಲಿನ್ಸ್ ವಲ್ಡರ್್ ಅಟ್ಲಾಸ್ & ಎನ್ಸೈಕ್ಲೋಪಿಡಿಯ
  • 3. ದಿ ಗ್ರೇಟ್ ಸೋವಿಯತ್ ಎನ್ಸೈಕ್ಲೋಪಿಡಿಯ
  • ೪. ವಿಚ್ ವೇ ಆಫ್ರಿಕಾ?, ಬೆಸಿಲ್ ಡೇವಿಡ್ಸನ್, ಮೂರನೇ ಮುದ್ರಣ, ಪೆಂಗ್ವಿನ್ ಬುಕ್ಸ್, 1973.
  • ೫. ನ್ಯೂ ಥಿಯರೀಸ್ ಆಫ್ ರೆವಲ್ಯೂಷನ್, ಜಾಕ್ ವುಡ್ಸ್, 1977, ಇಂಟರ್ ನ್ಯಾಷನಲ್ ಪಬ್ಲಿಷರ್ಸ್, ನ್ಯೂಯಾಕರ್್.
  • ೬ ದಿ ಸೌತ್ ಆಫ್ರಿಕನ್ ವಕರ್ಿಂಗ್ ಕ್ಲಾಸ್: ಪ್ರೊಡಕ್ಷನ್, ರಿಪ್ರೊಡಕ್ಷನ್ ಅಂಡ್ ಪಾಲಿಟಿಕ್ಸ್, ಪ್ಯಾಟ್ರಿಕ್ ಬಾಂಡ್, ಡಾಲರ್ಿನ್ ಮಿಲ್ಲರ್ ಮತ್ತು ಗ್ರೆಗ್ ರಾಯಟರ್ಸ್, ಸೋಷಿಯಲಿಸ್ಟ್ ರಿಜಿಸ್ಟರ್, 2001.

ಮೂಲಗಳು

[ಬದಲಾಯಿಸಿ]
  1. Continental regions as per UN categorisations/map.
  2. ಈಜಿಪ್ಟ್ is generally considered a transcontinental country in Northern Africa (UN region) and Western Asia; population and area figures are for African portion only, west of the Suez Canal.
  3. ಪಶ್ಚಿಮ ಸಹಾರ ಬಹುಪಾಲು ಮೊರಾಕೊ ಆಡಳಿತದಲ್ಲಿದೆ.
  4. The Spanish Canary Islands, of which Las Palmas de Gran Canaria are Santa Cruz de Tenerife are co-capitals, are often considered part of Northern Africa due to their relative proximity to Morocco and Western Sahara; population and area figures are for 2001.
  5. The Spanish exclave of Ceuta is surrounded on land by Morocco in Northern Africa; population and area figures are for 2001.
  6. The Portuguese Madeira Islands are often considered part of Northern Africa due to their relative proximity to Morocco; population and area figures are for 2001.
  7. The Spanish exclave of Melilla is surrounded on land by Morocco in Northern Africa; population and area figures are for 2001.
  8. Bloemfontein is the judicial capital of ದಕ್ಷಿಣ ಆಫ್ರಿಕಾ, while Cape Town is its legislative seat, and Pretoria is the country's administrative seat.
  9. Yamoussoukro is the official capital of Côte d'Ivoire, while Abidjan is the de facto seat.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ವರ್ಗ;ಖಂಡಗಳು ವರ್ಗ;ಇತಿಹಾಸ

"https://kn.wikipedia.org/w/index.php?title=ಆಫ್ರಿಕಾ&oldid=1258790" ಇಂದ ಪಡೆಯಲ್ಪಟ್ಟಿದೆ