ವಿಷಯಕ್ಕೆ ಹೋಗು

ಐಎಸ್ಓ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐಎಸ್ಒ ಇಂದ ಪುನರ್ನಿರ್ದೇಶಿತ)
ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ(ಇಂಟರ್ನ್ಯಾಶನಲ್ ಆರ್ಗನೈಜೇಶನ್ ಆಫ್ ಸ್ಟ್ಯಾಂಡರ್ಡೈಜೇಶನ್)

ಐಎಸ್ಓ ಸದಸ್ಯತ್ವ (ಕೆಳಗೆ ನೋಡಿ)
ಸ್ಥಾಪನೆ೨೩ ಫೆಬ್ರವರಿ ೧೯೪೭
ಶೈಲಿಸರ್ಕಾರೇತರ ಸಂಸ್ಥೆ
Purposeಅಂತರಾಷ್ಡ್ರೀಯ ಪ್ರಮಾಣೀಕರಣ
ಪ್ರಧಾನ ಕಚೇರಿಜಿನೀವಾ, ಸ್ವಿಟ್ಜರ್ಲ್ಯಾಂಡ್
Membership
೧೬೩ ಸದಸ್ಯರುಗಳು
ಅಧಿಕೃತ ಭಾಷೆs
ಅಧಿಕೃತ ಜಾಲತಾಣiso.org

`ಐಎಸ್ಓ(ISO)' ಎಂದು ಕರೆಯಲ್ಪಡುವ ವಿವಿಧ ದೇಶಗಳ ಪ್ರಮಾಣಿಕರಿಸುವ ಸಂಸ್ಥೆಗಳು ಸದಸ್ಯರಾಗಿರುವ ಒಂದು ಸಂಸ್ಥೆ. `ಐಎಸ್ಓ(ISO)' ಎನ್ನುವುದು 'ಇಂಟರ್ನ್ಯಾಶನಲ್ ಆರ್ಗನೈಜೇಶನ್ ಆಫ್ ಸ್ಟ್ಯಾಂಡರ್ಡೈಜೇಶನ್' ಎಂದು ಕರೆಯಲ್ಪಡುವ ಒಂದು ಸಂಸ್ಥೆಯ ಸಂಕ್ಷಿಪ್ತ ರೂಪವಾಗಿದೆ. ಇದು ಇದು ೨೩ ಫೆಬ್ರವರಿ ೧೯೪೭ ರಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಸ್ವಿಟ್ಜ್ ರ್ ಲ್ಯಾಂಡಿನ ಜಿನಿವಾದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ.

ಹೆಸರು ಮತ್ತು ಸಂಕ್ಷೇಪಣಗಳು

[ಬದಲಾಯಿಸಿ]

ಐಎಸ್ಓ ನ ಮೂರು ಅಧಿಕೃತ ಭಾಷೆಗಳು ಇಂಗ್ಲೀಷ್, ‌ಪ್ರೆಂಚ್, ರಷಿಯನ್, ಸಂಸ್ಥೆಯು ಗ್ರೀಕ್ ಬಾಷೆಯಲ್ಲಿ ಸಮಾನ(isos) ಎಂಬ ಅರ್ಥಬರುವ ಐಎಸ್ಓ(ISO) ಶಬ್ದವನ್ನುಸಂಕ್ಷೇಪವಾಗಿ ಆಯ್ಕೆ ಮಾಡಿಕೊಂಡಿದೆ. ಐಎಸ್ಓ ಮತ್ತು ಲಾಂಛನಗಳು ನೊಂದಾಯಿತ ಟ್ರೇಡ್ ಮಾರ್ಕ್ ಗಳಾಗಿವೆ ಮತ್ತು ಅವುಗಳ ಉಪಯೋಗಗಳು ನಿರ್ಬಂಧಿಸಲ್ಪಟ್ಟಿವೆ.

ಚರಿತ್ರೆ

[ಬದಲಾಯಿಸಿ]
ಐಎಸ್ಓನ ಪೂರ್ವ ಸಂಸ್ಥೆ ಐಎಸ್ಏ ನಿಂದ ಸ್ಥಾಪಿಸಲ್ಪಟ್ಟ ಪ್ರೇಗ್ ನಲ್ಲಿರುವ ಕಟ್ಟಡದ ಫಲಕ ಗುರುತು.
(ದೊಡ್ಡದಾಗಿಸಲು / ಓದಲು ಕ್ಲಿಕ್ ಮಾಡಿ.)

ಐಎಸ್ಒ ಎಂದು ಕರೆಯಲ್ಪಡುವ ಈ ಸಂಸ್ಥೆಯು ೧೯೨೬ ರಲ್ಲಿ ಇಂಟರ್ ನ್ಯಾಶನಲ್ ‌‌‍ಫೆಡರೇಶನ್ ಆಫ್ ದಿ ನ್ಯಾಶನಲ್ ಸ್ಟಾಂಡರಡ್ಸಿಂಗ್ ಅಸೋಸಿಯೇಶನ್ಸ್ ಎಂಬ ಹೆಸರಿನೊಡನೆ ಸ್ಥಾಪಿಸಲ್ಪಟ್ಟಿತು. ಎರಡನೇ ಮಹಾಯುದ್ಧದ ಸಮಯ ೧೯೪೨ ರಲ್ಲಿ ಅಮಾನತುಗೊಳಿಸಲ್ಪಟ್ಟಿತು. ಆದರೆ ಯುದ್ದದ ನಂತರ ಆಗ ತಾನೆ ಹುಟ್ಟಿದ್ದ ಯುನೈಟೆಡ್ ನೇಶನ್ಸ್ ಸ್ಟಾಂಡರಡ್ಸ್ ಕೋಆರಡಿನೇಟಿಂಗ್ ಕಮಿಟಿಯಿಂದ ಒಂದು ಹೊಸ ಜಾಗತಿಕ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸಲ್ಪಟ್ಟಿತು.೧೯೪೬ರ ಅಕ್ಟೋಬರ್ ನಲ್ಲಿ ಗಳ ೨೫ ಪ್ರತಿನಿಧಿಗಳು ಲಂಡನ್ ನಗರದಲ್ಲಿ ಭೇಟಿಯಾಗಿ ಮತ್ತು ಪ್ರಮಾಣಿಕರಣಕ್ಕೆಂದು ಒಂದು ಹೊಸ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸೃಷ್ಟಿಸಲು ಬಲವನ್ನು ಸೇರಿಸಲು ಒಪ್ಪಿಕೊಂಡವು. ಈ ಹೊಸ ಸಂಸ್ಥೆಯು ೧೯೪೭ರ ಪೆಬ್ರವರಿಯಂದು ಅಧಿಕೃತವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಿತು.

ಐಎಸ್ಒ ಒಂದು ಸ್ವಯಂಪ್ರೇರಿತ ಸಂಸ್ಥೆಯಾಗಿದ್ದು ಇವುಗಳ ಸದಸ್ಯರುಗಳು ಪ್ರಮಾಣೀಕರಣದಲ್ಲಿ ಮಾನ್ಯತೆ ಇರುವ ಅಧಿಕಾರಿಗಳಾಗಿದ್ದು ಪ್ರತಿಯೊಬ್ಬನೂ ಒಂದು ದೇಶವನ್ನು ಪ್ರತಿನಿಧಿಸುವನು. ಸದಸ್ಯರು ಪ್ರತಿ ವರ್ಷವೂ ಕಾರ್ಯತಂತ್ರದ ಗುರಿಗಳನ್ನು ಚರ್ಚಿಸಲು ಜನರಲ್ ಅಸೆಂಬ್ಲಿಯಲ್ಲಿ ಸೇರುವರು. ಸಂಸ್ಥೆಯು ಜಿನೀವಾದಲ್ಲಿರುವ ಸೆಂಟ್ರಲ್ ಸೆಕ್ರೆಟೇರಿಯಟ್ ನಿಂದ ಸಹಭಾಗಿಸಲ್ಪಡುವುದು. ತಿರುಗುವ ಸದಸ್ಯತ್ವವಿರುವ ೨೦ ಸದಸ್ಯರ ಒಂದು ಕೌನ್ಸಿಲ್ ಸೆಂಟ್ರಲ್ ಸೆಕ್ರೆಟೇರಿಯಟ್ ನ ವಾರ್ಷಿಕ ಮುಂಗಡಪತ್ರವನ್ನು ನಿಗದಿಪಡಿಸುವುದು ಸೇರಿದಂತೆ ಮಾರ್ಗದರ್ಶನ ಮತ್ತು ಆಡಳಿತವನ್ನು ನೀಡುವುದು. ಐಎಸ್ಒ ಮಟ್ಟವನ್ನು ಬೆಳೆಸಲು ಸುಮಾರು ೨೫೦ ತಾಂತ್ರಿಕ ಸಮಿತಿಗಳ ಜವಾಬ್ದಾರಿಯನ್ನು ಟೆಕ್ನಿಕಲ್ ಮ್ಯಾನೇಜ್ಮಂಟ್ ಬೋರ್ಡ ಹೊಂದಿದೆ.

ಐಇಸಿ ಜಂಟಿ ಸಮಿತಿಗಳು(IEC joint committees)

[ಬದಲಾಯಿಸಿ]

ಐಎಸ್ಒ ಇಂಟರ್ ನ್ಯಾಶನಲ್ ಟೆಕ್ನಿಕಲ್ ಕಮಿಶನ್ ವಿದ್ಯುತ್, ವಿದ್ಯುನ್ಮಾನ ಮತ್ತು ಸಂಬಂಧಿತ ಪ್ರದೇಶದಲ್ಲಿ ಪ್ರಮಾಣಿಕರಣ ಮತ್ತು ಪಾರಿಭಾಷಿಕಗಳನ್ನು ಅಭಿವೃದ್ಧಿ ಪಡಿಸಲು ಜಂಟಿ ಸಮಿತಿಗಳನ್ನು ರಚಿಸುವುದು. ಐಎಸ್ಓ/ಐಇಸಿ ಜೆಟಿಸಿ (ISO/IEC JTC 1)

  • ಮಾಹಿತಿ ತಂತ್ರಜ್ಝಾನ

ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೧ (ISO/IEC Joint Technical Committee 1 (JTC 1))ಯು ಮಾಹಿತಿ ತಂತ್ರಜ್ಝಾನವನ್ನು ಅಭಿವೃದ್ಧಿ ಪಡಿಸಲು, ಸಂಭಾಳಿಸಲು, ಪ್ರಚಾರ ಮತ್ತು ಅನುಕೂಲ ಮಾಡಿಕೊಡುವುದು. ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೨ (ISO/IEC JTC 2)

  • ಜಂಟಿ ಯೋಜನಾ ಸಮಿತಿ(Joint Project Committe )- ಶಕ್ತಿ ಯ ಕಾರ್ಯಕ್ಷಮತೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳು- ಸಾಮಾನ್ಯ ಪಾರಿಭಾಷಿಕಗಳು

ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೨ (ISO/IEC JTC 2) ಶಕ್ತಿಯ ಕಾರ್ಯಕ್ಷಮತೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರದಲ್ಲಿ ಪ್ರಮಾಣೀಕರಣಗೊಳಿಸುವ ಉದ್ದೇಶದಿಂದ ೨೦೦೯ ರಲ್ಲಿ ರಚಿಸಲ್ಪಟ್ಟಿತು.

ಸದಸ್ಯತ್ವ

[ಬದಲಾಯಿಸಿ]
  ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳನ್ನು ಮತ್ತು ಐಎಸ್ಓ ಮತದಾನ ಹಕ್ಕು ಹೊಂದಿರುವ ಐಎಸ್ಓ ಸದಸ್ಯ ರಾಷ್ಟ್ರಗಳು.
  ಬಾತ್ಮೀದಾರ ಸದಸ್ಯರು(ಈ ದೇಶಗಳಿಗೆ ತಮ್ಮದೇ ಆದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳಿಲ್ಲ).
  ಚಂದಾದಾರ ಸದಸ್ಯರು(ಸಣ್ಣ ಆರ್ಥಿಕತೆಯನ್ನು ಹೊಂದಿದ ದೇಶಗಳು).
  ಐಎಸ್ಓ ೩೧೬೬-೧ ಕೋಡ್ಗಳನ್ನು ಹೊಂದಿರುವ ಸದಸ್ಯರಲ್ಲದ ರಾಷ್ಟ್ರಗಳು.

ಜಗತ್ತಿನ ಒಟ್ಟು ೨೦೬ ದೇಶಗಲ್ಲಿ ೧೬೪ ದೇಶಗಳು ಐಎಸ್ಓನ ಸದಸ್ಯರಾಗಿರುವರು. ಐಎಸ್ಓ ನಲ್ಲಿ ಮೂರು ವಿಧದ ಸದಸ್ಯತ್ವವಿದೆ.

  • ಸದಸ್ಯ ಮುಖ್ಯಭಾಗಗಳು()- ಎಂಬ ಆಯಾ ದೇಶಗಳ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳು ಸದಸ್ಯರಾಗಿರುವುದು. ಇವುಗಳಿಗೆ ಮಾತ್ರ ಮತದಾನದ ಹಕ್ಕು ಇರುವುದು:
  • ಬಾತ್ಮೀದಾರ ಸದಸ್ಯರು- ಈ ದೇಶಗಳಿಗೆ ತಮ್ಮದೇ ಆದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳಿಲ್ಲ. ಈ ಸದಸ್ಯರುಗಳಿಗೆ ಐಎಸ್ಓನ ಚಟುವಟಿಕೆಗಳ ಬಗ್ಗೆ ತಿಳಿಸಲಾಗುವುದು. ಆದರೆ ಅವುಗಳು ಮಟ್ಟಪ್ರಸಾರಣೆಯಲ್ಲಿ ಭಾಗವಹಿಸುವಂತಿಲ್ಲ.
  • ಚಂದಾದಾರ ಸದಸ್ಯರು- ಸಣ್ಣ ಆರ್ಥಿಕತೆಯನ್ನು ಹೊಂದಿದ ದೇಶಗಳು ಇದರ ಸದಸ್ಯರು. ಅವುಗಳು ಕಡಿಮೆ ಸದಸ್ಯತ್ವ ಶುಲ್ಕವನ್ನು ಪಾವತಿಸಿದರೂ; ಪ್ರಮಾಣಗಳ ಅಭಿವ್ರುದ್ದಿಯನ್ನು ಅನುಸರಿಸುವರು.

ಭಾಗವಹಿಸುವ ಸದಸ್ಯರುಗಳನ್ನು "ಪಿ" ಸದಸ್ಯರೆಂದೂ; ಗಮನಿಸುವ ಸದಸ್ಯರನ್ನು "ಓ" ಸದಸ್ಯರೆಂದೂ ಕರೆಯುವರು.

ಹಣಕಾಸು

[ಬದಲಾಯಿಸಿ]

ಐಎಸ್ಒ ಈ ಕೆಳಕಂಡವುಗಳ ಸಂಯೋಜನೆಯಿಂದ ನಿಧಿಯನ್ನು ಸಂಗ್ರಹಿಸುವುದು.

  • ತಾಂತ್ರಿಕ ಕೆಲಸದಲ್ಲಿ ಭಾಗವಹಿಸುವ, ನಿರ್ದಿಷ್ಟ ಯೋಜನೆಗಳನ್ನು ನಿರ್ವಹಿಸುವ ಅಥವಾ ಸಾಲ ತಜ್ಞ ಸಂಸ್ಥೆಗಳು.
  • ಸದಸ್ಯ ರಾಷ್ತ್ರಗಳಿಂದ ಬರುವ ಚಂದಾ- ಈ ಚಂದಾವು ಪ್ರತಿಯೊಂದು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮತ್ತು ವ್ಯಾಪಾರದ ಅಂಕಿಅಂಶಗಳಿಗೆ ಅನುಗುಣವಾಗಿರುತ್ತದೆ.
  • ಪ್ರಮಾಣಗಳ ಮಾರಾಟ.

ಅಂತಾರಾಷ್ಟ್ರೀಯ ಪ್ರಮಾಣಗಳು ಮತ್ತು ಇತರೆ ಪ್ರಕಟಣೆಗಳು

[ಬದಲಾಯಿಸಿ]

ಐಎಸ್ಒನ ಮುಖ್ಯ ಉತ್ಪನ್ನಗಳು ಅಂತರಾಷ್ಟ್ರೀಯ ಪ್ರಮಾಣಗಳು. ಐಎಸ್ಒ ಇದಲ್ಲದೆ ತಾಂತ್ರಿಕ ವರದಿಗಳು; ವಿಶೇಷಣಗಳು; ಸಾರ್ವಜನಿಕವಾಗಿ ಲಭ್ಯವಾಗುವ ವಿಶೇಷಣಗಳು; ತಾಂತ್ರಿಕ ಕೋರಿಜೆಂಡದ ಮತ್ತು ಮಾರ್ಗದರ್ಶಕಗಳು.

ಅಂತಾರಾಷ್ಟ್ರೀಯ ಪ್ರಮಾಣಗಳು

[ಬದಲಾಯಿಸಿ]

ಇವುಗಳನ್ನು ಗೊತ್ತುಪಡಿಸಿದ ಸ್ವರೂಪದಲ್ಲಿ ಉಪಯೋಗಿಸಲಾಗುತ್ತದೆ.

ದಿನಾಂಕ ಮತ್ತು ಐಎಸ್ ಗಳನ್ನು ಅಪೂರ್ಣ ಮತ್ತು ಅಪ್ರಕಟಿತ ಪ್ರಮಾಣಗಳಲ್ಲಿ ಉಪಯೋಗಿಸಲಾಗುವುದಿಲ್ಲ ಹಾಗೂ ಕೆಲವು ಸಂದರ್ಭಗಳಲ್ಲಿ ಪ್ರಕಟವಾದವುಗಳಲ್ಲಿ; ಶೀರ್ಷಿಕೆಗಳಲ್ಲೂ ಬಿಡಬಹುದು.

ತಾಂತ್ರಿಕ ವರದಿಗಳು

[ಬದಲಾಯಿಸಿ]

ಇವುಗಳು ತಾಂತ್ರಿಕ ಸಮಿತಿ ಮತ್ತು ಉಪಸಮಿತಿಗಳು ಸಾಮಾನ್ಯವಾಗಿ ಪ್ರಕಟಣೆಗೊಂಡ ಒಂದು ಅಂತರಾಷ್ಟ್ರೀಯ ಪ್ರಮಾಣಕ್ಕಿಂತ ಬೇರೆ ರೀತಿಯ ದತ್ತಾಂಶಗಳನ್ನು ಸಂಗ್ರಹಿಸಿದಾಗ ಬಿಡುಗಡೆಗೊಳಿಸಲಾಗುತ್ತದೆ. ಇವುಗಳನ್ನು ಹೆಸರಿಸುವ ಪದ್ಧತಿಯು ಪ್ರಮಾಣಗಳಂತೆ ಇರುತ್ತದೆ. ಆದರೆ ವರದಿಯ ಹೆಸರಿನಲ್ಲಿ ಐಎಸ್ ಬದಲಿಗೆ ಟಿ ಆರ್ ಎಂದು ಇರುತ್ತದೆ.

ತಾಂತ್ರಿಕ ಮತ್ತು ಸಾರ್ವಜನಿಕವಾಗಿ ಲಭ್ಯವಾಗುವ ವಿಶೇಷಣಗಳು

[ಬದಲಾಯಿಸಿ]

ತಾಂತ್ರಿಕ ವಿಶೇಷಣಗಳನ್ನು ``ಪ್ರಶ್ನಾತ್ಮಕವಾದ ವಿಷಯವು ಅಭಿವೃದ್ಧಿಪಡಿಸುತ್ತಿರುವಾಗ ಅಥವಾ ಬೇರೆ ಯಾವುದೋ ಕಾರಣದಿಂದ ಅಂತಾರಾಷ್ಟ್ರೀಯ ಪ್ರಮಾಣವು ಭವಿಷ್ಯತ್ತಿನಲ್ಲಿ ಬೇಕಾಗುವ ಸದ್ಯ ಒಪ್ಪಂದ ಪ್ರಕಟಿಸಲು ಸಾದ್ಯತೆ ಇಲ್ಲದಿರುವಾಗ`` ತಯಾರಿಸಲಾಗುವುದು. ಸಾಮಾನ್ಯವಾಗಿ ಒಂದು ಸಾರ್ವಜನಿಕವಾಗಿ ಲಭ್ಯವಿರುವ ವಿಶೇಷಣಗಳು ಮಧ್ಯಂತರ ವಿಶೇಷಣಗಳಾಗಿದ್ದು ಅಂತಾರಾಷ್ಟ್ರೀಯ ಪ್ರಮಾಣ ಪ್ರಕಟಣೆಗಳು ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುವ ಮೊದಲು ಪ್ರಕಟವಾಗಿರುವಂತಹುದು ಅಥವಾ ಇಂಟರ್ ನ್ಯಾಶನಲ್ ಟೆಕ್ನಿಕಲ್ ಕಮಿಶನ್ ನಲ್ಲಿ ಸಹಯೋಗದೊಂದಿಗೆ ದ್ವಿ ಚಿಹ್ನೆ ಪ್ರಕಟಣೆಯಾದವುಗಳು. ಜತೆಗೆ ಬಾಹ್ಯ ಸಂಸ್ಥೆ. ಸಂಪ್ರದಾಯದಂತೆ, ಎರಡೂ ತರಹದ ವಿಶೇಷಣಗಳನ್ನು ಸಂಸ್ಥೆ ತಾಂತ್ರಿಕ ವರದಿಯಲ್ಲಿರುವ ರೀತಿಯಲ್ಲಿ ಹೆಸರಿಸಲಾಗುವುದು.

ಉದಾಹರಣೆ:

ಐಎಸ್ಓ/ಟಿಎಸ್ ೧೬೯೫೨-೧:೨೦೦೬ ತಾಂತ್ರಿಕ ಉತ್ಪನ್ನ ದಾಖಲೀಕರಣ - ಉಲ್ಲೇಖ ಪದನಾಮ ವ್ಯವಸ್ಥೆ - ಭಾಗ ೧: ಸಾಮಾನ್ಯ ಅರ್ಜಿ ನಿಯಮಗಳು (ISO/TS 16952-1:2006 Technical product documentation — Reference designation system — Part 1: General application rules)

ಐಎಸ್ಓ/ಪಿಏಎಸ್ ೧೧೧೫೪:೨೦೦೬ ರಸ್ತೆ ವಾಹನಗಳು - ಮೇಲ್ಛಾವಣಿ ಲೋಡ್ ಕ್ಯಾರಿಯೆರ್ ಗಳು (ISO/PAS 11154:2006 Road vehicles — Roof load carriers)

ತಾಂತ್ರಿಕ ಕೋರಿಜೆಂಡಂಗಳು

[ಬದಲಾಯಿಸಿ]

ಐಎಸ್ಓ ಕೂಡ ಕೆಲವು ಸಲ ತಾಂತ್ರಿಕ ಕೋರಿಜೆಂಡಂಗಳನ್ನು ಬಿಡುಗಡೆಗೊಳಿಸುವುದು. ಇವುಗಳು ಪ್ರಸಕ್ತ ಇರುವ ಪ್ರಮಾಣಗಳಲ್ಲಿರುವ ಚಿಕ್ಕ ತಾಂತ್ರಿಕ ತಪ್ಪುಗಳಿಗೆ ತಿದ್ದುಪಡಿಗಳಾಗಿದ್ದು ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಸುಧಾರಣೆಗಳು ಅಥವಾ ನಿಯಮಿತ ಬಳಕೆಯ ವಿಸ್ತರಣೆಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ಸಂಬಂಧಿಸಿದ ಪ್ರಮಾಣವು ಇಂದಿನದನ್ನಾಗಿ ಮಾಡುವಲ್ಲಿ ಅಥವಾ ಮುಂದಿನ ಪುನರಾವಲೋಕನ ಸಮಯದಲ್ಲಿ ಹಿಂದಕ್ಕೆ ಪಡೆಯಲಾಗುವುದನ್ನು ನಿರೀಕ್ಷಿಸಿ ಬಿಡುಗಡೆಗೊಳಿಸಲಾಗುವುದು .

ಐಎಸ್ಓ ಕೈಪಿಡಿಗಳು

[ಬದಲಾಯಿಸಿ]

ಇವುಗಳು ``ಅಂತಾರಾಷ್ಟ್ರೀಯ ಪ್ರಮಾಣೀಕರಣಗಳ ವಿಷಯಕ್ಕೆ ಸಂಬಂಧಿಸಿದಂತೆ`` ಒಳಗೊಂಡಿರುವ ಮೆಟಾ ಪ್ರಮಾಣಗಳಾಗಿವೆ. ಇವುಗಳನ್ನು ``ISO[/IEC] Guide N:yyyy: Title`` ನಮೂನೆಯನ್ನು ಉಪಯೋಗಿಸಿ ಹೆಸರಿಸಲಾಗುವುದು. ಉದಾಹರಣೆಗೆ:

  • ISO/IEC Guide 2:2004 Standardization and related activities — General vocabulary
  • ISO/IEC Guide 65:1996 General requirements for bodies operating product certification

ದಾಖಲೆಯ ಹಕ್ಕುಸ್ವಾಮ್ಯ

[ಬದಲಾಯಿಸಿ]

ಐಎಸ್ಓ ದಾಖಲೆಗಳು ಹಕ್ಕುಸ್ವಾಮ್ಯವುಳ್ಳದ್ದಾಗಿವೆ ಮತ್ತು ಐಎಸ್ಓ ಬಹಳಷ್ಟು ಪ್ರತಿಗಳಿಗೆ ಶುಲ್ಕ ವಿಧಿಸುತ್ತವೆ. ಆದರೆ, ಬಹಳಷ್ಟು ವಿದ್ಯುನ್ಮಾನ ನಮೂನೆಯಲ್ಲಿರುವ ದಾಖಲೆಗಳ ಕರಡು ಪ್ರತಿಗಳಿಗೆ ಶುಲ್ಕ ವಿಧಿಸುವುದಿಲ್ಲ. ಅವುಗಳ ಉಪಯೋಗವಿದ್ದರೂ, ಅವುಗಳು ಪ್ರಮಾಣಗಳಾಗಿ ಅಂತಿಮಗೊಳ್ಳುವ ಮೊದಲು ಗಣನೀಯವಾಗಿ ಬದಲಾವಣೆಯಾಗುವ ಸಂಭವನೀಯತೆ ಇರುವುದರಿಂದ ಈ ಕರಡುಗಳನ್ನು ಉಪಯೋಗಿಸುವಾಗ ವಾಗಿ ಕಾಳಜಿ ವಹಿಸಬೇಕಾಗುವುದು. ಐಎಸ್ಓ ಮತ್ತು ಅಧಿಕೃತ ಯು.ಎಸ್ಸ್. ಅಭ್ಯರ್ಥಿಗಳಿಂದ(ಯು.ಎಸ್. ನ್ಯಾಶನಲ್ ಕಮಿಟಿ, ದಿ ಇಂಟರ್ ನ್ಯಾಶನಲ್ ಎಲೆಕ್ಟ್ರೋಟೆಕ್ನಿಕಲ್ ಕಮೀಷನ್ ಮೂಲಕ) ಕೆಲವು ಪ್ರಮಾಣಗಳನ್ನು ಉಚಿತವಾಗಿ ದೊರಕುವಂತೆ ಮಾಡಲಾಗುವುದು.

ಪ್ರಮಾಣಿಕರಣ ಸಂಸ್ಕರಣೆ

[ಬದಲಾಯಿಸಿ]

ಐಎಸ್ಓ/ಐಇಸಿ ಯಿಂದ ಪ್ರಕಾಶನಗೊಂಡ ಒಂದು ಪ್ರಮಾಣವು ಉದ್ದ ಸಂಸ್ಕರಣೆಯ ಒಂದು ಕೊನೆಯ ಹಂತವಾಗಿದ್ದು ಅದು ಸಾಮಾನ್ಯವಾಗಿ ಸಮಿತಿಯಲ್ಲಿ ಹೊಸಕೆಲಸದ ಪ್ರಸ್ತಾವನೆಯೊಂದಿಗೆ ಪ್ರಾರಂಭವಾಗುವುದು. ಪ್ರಮಾಣಗಳನ್ನು ತಯಾರಿಸುವ ಜತೆಗೆ ಸ್ಥಿತಿಯನ್ನು ತಿಳಿಯಲು ಇಲ್ಲಿ ಕೆಲವು ಸಂಕ್ಷೇಪಣಗಳನ್ನು ಕೊಡಲಾಗಿದೆ.

  • ಪಿಡಬ್ಲುಐ(PWI) - ಪೂರ್ವಬಾವಿ ಕಾರ್ಯ ಬಾಬು (Preliminary Work Item).
  • ಎನ್ಪಿ ಅಥವಾ ಎನ್ ಡಬ್ಲು ಐ ಪಿ - ಹೊಸ - ಪ್ರಸ್ತಾವನೆ/ ಹೊಸ ಕಾರ್ಯ ಪ್ರಸ್ತಾವನೆ (ಉದಾಹರಣೆ: ಐಎಸ್ಓ/ಐಇಸಿ ಎನ್ಪ ಪಿ ೨೩೦೦೦೭) (NP or NWIP - New Proposal / New Work Item Proposal (e.g., ISO/IEC NP 23007)
  • ಎಡಬ್ಲುಐ(AWI) - ಅನುಮೋದಿಸಲ್ಪಟ್ಟ ಹೊಸ ಕಾರ್ಯ ಪ್ರಸ್ತಾವನೆ(ಉದಾಹರಣೆ: ಐಎಸ್ಓ/ಐಇಸಿ ಎಡಬ್ಲುಐ ೧೫೪೪೪-೧೪) (Approved new Work Item (e.g., ISO/IEC AWI 15444-14))
  • ಡಬ್ಲುಡಿ(WD) - ಕಾರ್ಯಕಾರಿ ಕರಡು(ಉದಾಹರಣೆ: ಐಎಸ್ಓ/ಐಇಸಿ ಡಬ್ಲುಡಿ ೨೭೦೩೨) ((Working Draft (e.g., ISO/IEC WD 27032))
  • ಸಿಡಿ(CD) - ಸಮಿತಿ ಕರಡು(ಉದಾಹರಣೆ: ಐಎಸ್ಓ/ಐಇಸಿ ಸಿಡಿ ೨೩೦೦೦-೫)(Committee Draft (e.g., ISO/IEC CD 23000-5))
  • ಎಪ್ ಸಿಡಿ (FCD) - ಅಂತಿಮ ಸಮಿತಿ ಕರಡು(ಉದಾಹರಣೆ: ಐಎಸ್ಓ/ಐಇಸಿ ಎಪ್ ಸಿಡಿ ೨೩೦೦೦-೧೨)( Final Committee Draft (e.g., ISO/IEC FCD 23000-12))
  • ಡಿಐಎಸ್ (DIS) - ಕರಡು ಅಂತಾರಾಷ್ಟ್ರೀಯ ಪ್ರಮಾಣ(ಉದಾಹರಣೆ: ಐಎಸ್ಓ/ಐಇಸಿ ಡಿಐಎಸ್ ೧೪೯೨೭)(Draft International Standard (e.g., ISO/IEC DIS 14297))
  • ಎಫ್ ಡಿಎಸ್(FDIS) - ಅಂತಿಮ ಕರಡು ಅಂತಾರಾಷ್ಟ್ರೀಯ ಪ್ರಮಾಣ(ಉದಾಹರಣೆ: ಐಎಸ್ಓ/ಐಇಸಿ ಡಿಐಎಸ್ ೨೭೦೦೩) (Final Draft International Standard (e.g., ISO/IEC FDIS 27003))
  • ಪಿಆರ್ ಎಫ್ (PRF) - ಹೊಸ ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ಪಿಆರ್ ಎಫ್ ೧೮೦೧೮) (Proof of a new International Standard (e.g., ISO/IEC PRF 18018))
  • ಐಎಸ್(IS)- ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭)(International Standard (e.g., ISO/IEC 13818-1:2007))

ತಿದ್ದುಪಡಿಗಳಿಗೆ ಉಪಯೋಗಿಸುವ ಸಂಕ್ಷೇಪಣಗಳು.

  • ಎನ್ ಪಿ ಏಎಂ ಡಿ(NP Amd) - ಹೊಸ ಪ್ರಸ್ಥಾವನೆ ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೫೪೪೪-೨:೨೦೦೪/ಎನ್ ಪಿ ಏಎಂ ಡಿ ೩)(NP Amd - New Proposal Amendment (e.g., ISO/IEC 15444-2:2004/NP Amd 3)
  • ಏಡಬ್ಲುಐ ಏ ಎಂ ಡಿ(AWI Amd) - ಹೊಸ ಕಾರ್ಯ ಬಾಬು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೨:೨೦೦೧/ಎನ್ ಪಿ ಏಎಂ ಡಿ ೪)(AWI Amd - Approved new Work Item Amendment (e.g., ISO/IEC 14492:2001/AWI Amd 4))
  • ಡಬ್ಲುಡಿ ಏ ಎಂ ಡಿ(WD Amd) - ಕಾರ್ಯ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ ೧೧೦೯೨:೧೯೯೩/ಡಬ್ಲುಡಿ ಏಎಂ ಡಿ ೧)( WD Amd - Working Draft Amendment (e.g., ISO 11092:1993/WD Amd 1))
  • ಸಿಡಿ ಏ ಎಂ ಡಿ / ಪಿಡಿ ಏ ಎಂ ಡಿ(CD Amd / PDAmd) - ಸಮಿತಿ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಸಿಡಿ ಎಂ ಡಿ ೬ ) (CD Amd / PDAmd - Committee Draft Amendment / Proposed Draft Amendment (e.g.ISO/IEC 13818-1:2007/CD Amd 6))
  • ಎಫ್ ಪಿ ಡಿ ಏ ಎಂ ಡಿ / ಡಿಎಎಂ (ಡಿಎಂ ಡಿ)(FPDAmd / DAM (DAmd)) - ಅಂತಿಮ ಪ್ರಾಸ್ತಾವಿಕ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೬-೧೪:೨೦೦೩/ಎಫ್ ಪಿ ಡಿ ಏ ಎಂ ಡಿ ೧ )(FPDAmd / DAM (DAmd) - Final Proposed Draft Amendment / Draft Amendment (e.g., ISO/IEC 14496-14:2003/FPDAmd 1))
  • ಎಫ್ ಡಿ ಏ ಎಂ(ಎಫ್ ಎಎಂ ಡಿ)(FDAM (FDAmd)) - ಅಂತಿಮ ಕರಡು ತಿದ್ದುಪಡಿ (ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಎಫ್ ಡಿ ಏ ಎಂ ಡಿ ೪)( (FDAM (FDAmd) - Final Draft Amendment (e.g., ISO/IEC 13818-1:2007/FDAmd 4))
  • ಪಿಆರ್ ಎಫ‍್ ಏ ಎಂ ಡಿ(PRF Amd) -(ಉದಾಹರಣೆ: ಐಎಸ್ಓ ೧೨೬೩೯:೨೦೦೪/ಪಿ ಆರ್ ಎಫ್ ಏ ಎಂ ಡಿ ೧)( PRF Amd - (e.g., ISO 12639:2004/PRF Amd 1))
  • ಏ ಎಂ ಡಿ(Amd) - ತಿದ್ದುಪಡಿ (ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ ಏ ಎಂ ಡಿ ೧:೨೦೦೭)( Amd - Amendment (e.g., ISO/IEC 13818-1:2007/Amd 1:2007))

ಇತರೆ ಸಂಕ್ಷೇಪಣಗಳು.

  • ಟಿಆರ್(TR)- ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಟಿಆರ್ ೧೯೭೯೧:೨೦೦೬) (TR - Technical Report (e.g., ISO/IEC TR 19791:2006))
  • ಡಿಟಿಆರ್(DTR)- ಕರಡು ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಡಿಟಿಅರ್ ೧೯೭೯೧)( DTR - Draft Technical Report (e.g., ISO/IEC DTR 19791))
  • ಟಿಎಸ್(TS) - ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಟಿಎಸ್ ೧೬೯೪೯:೨೦೦೯) (TS - Technical Specification (e.g., ISO/TS 16949:2009))
  • ಡಿಟಿಎಸ್(DTS) - ಕರಡು ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಡಿಟಿಎಸ್ ೧೧೬೦೨-೧) (DTS - Draft Technical Specification (e.g., ISO/DTS 11602-1))
  • ಪಿಏಏಸ್(PAS) - ಸಾರ್ವಜನಿಕವಾಗಿ ಲಭ್ಯವಿರುವ ನಿರ್ದಿಷ್ಟ ವಿವರಣೆ (PAS - Publicly Available Specification)
  • ಟಿಟಿಏ(TTA) - ತಾಂತ್ರಿಕ ಪ್ರವೃತ್ತಿಗಳ ಮೌಲ್ಯಮಾಪನ(ಉದಾಹರಣೆ: ಐಎಸ್ಓ/ಟಿಟಿಏ ೧:೧೯೯೪) (TTA - Technology Trends Assessment (e.g., ISO/TTA 1:1994))
  • ಐಡಬ್ಲುಏ(IWA) - ಅಂತಾರಾಷ್ಟ್ರೀಯ ಕಾರ್ಯಗಾರ ಒಪ್ಪಂದ(ಉದಾಹರಣೆ: ಐಡಬ್ಲುಏ ೧:೨೦೦೫)( IWA - International Workshop Agreement (e.g., IWA 1:2005))
  • ಸಿಓಅರ್(Cor) - ತಾಂತ್ರಿಕ ಕೋರಿಜೆಂಡಂ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ ಸಿಓಅರ್ ೧:೨೦೦೮ )(Cor - Technical Corrigendum (e.g., ISO/IEC 13818-1:2007/Cor 1:2008))
  • ಮಾರ್ಗದರ್ಶಕ(Guide) - ಒಂದು ಪ್ರಮಾಣವನ್ನು ತಯಾರಿಸುವಲ್ಲಿ ತಾಂತ್ರಿಕ ಸಮಿತಿಗೆ ಮಾರ್ಗದರ್ಶನ((Guide - a guidance to technical committees for the preparation of standards))

ಅಂತಾರಾಷ್ಟ್ರೀಯ ಪ್ರಮಾಣಗಳನ್ನು ಅಭಿವೃದ್ಧಿ ಪಡಿಸಲು ಐಎಸ್ಓ ತಾಂತ್ರಿಕ ಸಮಿತಿ ಮತ್ತು ಎನ್ ಬಿ ಎಸ್ ಪಿ:(ಟಿಸಿ) ಮತ್ತು ಉಪಸಮಿತಿಗಳು ಮತ್ತು ಎನ್ ಬಿ ಎಸ್ ಪಿ:(ಎಸ್ ಸಿ) ಆರು ಹಂತಗಳಲ್ಲಿ ಸಂಸ್ಕರಿಸಲಾಗುವುದು.

  • ಹಂತ ೧: ಪ್ರಸ್ತಾವನೆಯ ಹಂತ
  • ಹಂತ ೨: ತಯಾರಿಕೆಯ ಹಂತ
  • ಹಂತ ೩: ಸಮಿತಿ ಹಂತ
  • ಹಂತ ೪: ವಿಚಾರಣೆ ಹಂತ
  • ಹಂತ ೫: ಅನುಮೋದನೆಯ ಹಂತ
  • ಹಂತ ೬: ಪ್ರಕಟಣೆಯ ಹಂತ

ಟಿಸಿ/ಎಸ್ ಸಿ( TC/SC) ಕಾರ್ಯಕಾರಿ ಕರಡುಗಳನ್ನು ತಯಾರಿಸಲು ತಜ್ಞರುಗಳ ಕೆಲಸಗಾರ ಗುಂಪುಗಳನ್ನು(WG) ಸ್ಥಾಪಿಸುವುದು.ಉಪಸಮಿತಿಗಳು ಹಲವು ಉಪ ಗುಂಪುಗಳಿರುವ ಕೆಲಸಗಾರ ಗುಂಪುಗಳನ್ನು (SG) ಹೊಂದಿರುವವು. ಐಎಸ್ಓ ಪ್ರಮಾಣವನ್ನು ಅಬಿವೃದ್ಧಿಪಡಿಸುವಾಗ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.

ಟೆಂಪ್ಲೇಟು:Bigger[]
ಹಂತ ಕೋಡ್ ಹಂತ ಸಂಬಂಧಿತ ದಾಖಲೆ ಹೆಸರು ಸಂಕ್ಷೇಪಣಗಳು
  • ವಿವರ
  • ಟಿಪ್ಪಣಿಗಳು
00 ಪೂರ್ವಬಾವಿ ಪೂರ್ವಬಾವಿ ಕಾರ್ಯ ಬಾಬು ಪಿಡಬ್ಲುಐ(PWI)
10 ಪ್ರಸ್ತಾವನೆ ಹೊಸ ಕಾರ್ಯ ಪ್ರಸ್ತಾವನೆ
  • ಎನ್ಪಿ ಅಥವಾ ಎನ್ ಡಬ್ಲು ಐ ಪಿ
  • ಎನ್ ಪಿ ಅಥವಾ ಎನ್ ಡಬ್ಲು ಐ ಪಿ ಏಎಂಡಿ/ ಟಿ ಆರ್/ಟಿ ಎಸ್ / ಐ ಡಬ್ಲು ಏ (NP or NWIP
  • NP Amd/TR/TS/IWA)
20 ತಯಾರಿಕೆ ಕಾರ್ಯಕಾರಿ ಕರಡು ಅಥವಾ ಕರಡುಗಳು
  • ಎಡಬ್ಲುಐI
  • ಎಡಬ್ಲುಐ ಎಎಂಡಿ/ಟಿಆರ್/ಟಿಎಸ್
  • ಡಬ್ಲುಡಿ
  • ಡಬ್ಲುಡಿ ಎಎಂಡಿ /ಟಿಅರ್/ಟಿಎಸ್(hlist
  • AWI
  • AWI Amd/TR/TS
  • WD
  • WD Amd/TR/TS)
30 ಸಮಿತಿ ಸಮಿತಿ ಕರಡು ಅಥವಾ ಕರಡುಗಳು
  • ಸಿಡಿ
  • ಸಿಡಿ ಎಎಂಡಿ/ಸಿಓಆರ್/ಟಿಅರ್/ಟಿಎಸ್
  • ಪಿಎಂಡಿ (ಪಿಡಿಎಎಂ)
  • ಪಿಡಿಟಿಅರ್
  • ಪಿಡಿಟಿಎಸ್(CD
  • CD Amd/Cor/TR/TS
  • PDAmd (PDAM)
  • PDTR
  • PDTS)
40 ವಿಚಾರಣೆ ವಿಚಾರಣೆ ಕರಡು ಅಥವಾ ಕರಡುಗಳು
  • ಡಿಐಎಸ್
  • ಎಫ್ ಸಿಡಿ
  • ಎಫ್ ಪಿಡಿಏ ಎಎಂಡಿ
  • ಡಿಎಎಂಡಿ (ಡಿಎಎಂ)
  • ಎಫ್ ಪಿ ಡಿ ಐ ಎಸ್ ಪಿ
  • ಡಿ ಟಿ ಅರ್
  • ಡಿ ಟಿ ಎಸ್
(ಸಿಡಿವಿ ಐಇಸಿ)
50 ಅನುಮೋದನೆ ಅಂತಿಮ ಕರಡು.
  • ಎಪ್ ಡಿಐಎಸ್
  • ಎಪ್ ಡಿ ಎ ಎಂ ಡಿ (ಎಪ್ ಡಿ ಎ ಎಂ)
  • ಪಿ ಆರ ಎಫ್
  • ಪಿ ಅರ್ ಎಫ್ ಎ ಎಂ ಡಿ/ಟಿಟಿಎ/ಟಿ ಅರ್/ಟಿ ಎಸ್/ಪೂರಕ
  • ಎಫ್ ಡಿಟಿಅರ್(FDIS
  • FDAmd (FDAM)
  • PRF
  • PRF Amd/TTA/TR/TS/Suppl
  • FDTR)
60 ಪ್ರಕಟಣೆ ಅಂತಾರಾಷ್ಟ್ರೀಯ ಪ್ರಮಾಣಗಳು
  • ಐಎಸ್ಓ
  • ಟಿಆರ್
  • ಟಿಎಸ್
  • ಐಡಬ್ಲುಎ
  • ಎಎಂಡಿ
  • ಸಿಓಅರ್(ISO
  • TR
  • TS
  • IWA
  • Amd
  • Cor)
90 ಪುನರಾವಲೋಕನ
95 ಹಿಂತೆಗೆದುಕೊಳ್ಳುವಿಕೆ


ಇಲ್ಲಿ ಕೆಲವು ಹಂತಗಳನ್ನು ಕೈ ಬಿಡಬಹುದು. ಉದಾಹರಣೆಗೆ ಮತ್ತೊಂದು ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಡ ಪ್ರಮಾಣೀಕರಣ.ಯೋಜನೆಯನ್ನು ಪ್ರಮಾಣೀಕರಿಸುವಾಗ ಒಂದು ದಾಖಲೆಯು ಪರಿಪಕ್ವತೆಯ ಮಟ್ಟದಲ್ಲಿದ್ದರೆ, ಐಎಸ್ಓ/ಐಇಸಿ(ISO/IEC) ನಿರ್ದೇಶನಗಳು ವೇಗ ಗತಿಯ(ಫಾಸ್ಟ್ ಟ್ರ್ಯಾಕ್) ವಿಧಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವಿಧಾನದಲ್ಲಿ ದಾಖಲೆಯು ನೇರವಾಗಿ ಸದಸ್ಯ ಸಂಸ್ಥೆಗಳಿಗೆ ಕರಡು ಪ್ರತಿಯಾಗಿ (DIS) ಅಥವಾ ದಾಖಲೆಯು ಐಎಸ‍್ಒ ಮಂಡಳಿಯಿಂದ ಅಂಗೀಕೃತವಾದ ಅಂತರರಾಷ್ಥೀಯ ಪ್ರಮಾಣೀಕರಣ ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಟದ್ದಾದರೆ ಅಂತಿಮ ಕರಡು ಅಂತರರಾಷ್ಥೀಯ ಪ್ರಮಾಣೀಕರಣವೆಂದು (FDIS) ಅನುಮೋದನೆಗೆ ಒಪ್ಪಿಸಲ್ಪಡುವುವು.

ಮೊದಲ ಹೆಜ್ಜೆಯಾಗಿ-ಒಂದು ಕೆಲಸದ ಪ್ರಸ್ತಾವನೆಯು (ಹೊಸ ಪ್ರಸ್ತಾವನೆ) ಸರಿಯಾದ ಉಪಸಮಿತಿ ಅಥವಾ ತಾಂತ್ರಿಕ ಸಮಿತಿಯಲ್ಲಿ ಒಪ್ಪಿಗೆ ಪಡೆಯಲ್ಪಡುವುದು(ಉದಾಹರಣೆಗೆ, ಮೂವಿಂಗ್ ಪಿಕ್ಚರ್ಸ್ ಎಕ್ಸಪರ್ಟ್ ಗ್ರೂಪ್ - ISO/IEC JTC1/SC29/WG11 ನ ಕೆಲಸದಲ್ಲಿ ಕ್ರಮವಾಗಿ SC29 ಮತ್ತು JTC1 ). ಟಿಸಿ/ಏಸ್ಸಿ(TC/SC) ಯು ಕಾರ್ಯಗತವಾಗುವ ಕರಡನ್ನು ತಯಾರಿಸಲು ತಜ್ಞರ ಒಂದು ವರ್ಕಿಂಗ್ ಗ್ರೂಪ್ (WG) ನ್ನು ಸ್ಥಾಪಿಸುವುದು. ಯಾವಾಗ ಹೊಸ ಕೆಲಸದ ಉದ್ದೇಶವು ಸಾಕಷ್ಟಾಗಿ ಮನವರಿಕೆಯಾಗುವುದೊ, ಆಗ ಕೆಲವು ವರ್ಕಿಂಗ್ ಗ್ರೂಪ್ಗಳು (ಉದಾಹರಣೆಗೆ MPEG, ) ಸಾಮಾನ್ಯವಾಗಿ "ಹೊಸ ಅಭಿಪ್ರಾಯಗಳು" ಎಂದು ಕರೆಯಲ್ಪಡುವ ಅಭಿಪ್ರಾಯಗಳಿಗೆ ಬೇಡಿಕೆಯನ್ನು ಮುಂದಿರಿಸುವವು. ಹೀಗೆ ಉತ್ಪತ್ತಿಯಾದ ಮೊದಲ ದಾಖಲೆಯನ್ನು ಉದಾಹರಣೆಗೆ, ಆಡಿಯೋ ಮತ್ತು ವಿಡಿಯೋ ಕೋಡಿಂಗ್ ಪ್ರಮಾಣಿಕರಣವನ್ನು ತಾಳೆ ನೋಡುವ ಮಾದರಿ(ವೆರಿಪಿಕೇಶನ್ ಮಾಡೆಲ್ (VM)) ಎಂದು ಕರೆಯುವರು. ಈ ಹಿಂದೆ ಇದನ್ನು ಸಿಮುಲೇಶನ್ ಅಂಡ್ ಟೆಸ್ಟ್ ಮಾಡೆಲ್ ಎಂದು ಕರೆಯಲಾಗುತಿತ್ತು. ಯಾವಾಗ ಒಂದು ಪ್ರಮಾಣದ ಸ್ಥಿರತೆಯಲ್ಲಿ ಸಾಕಷ್ಟಾಗಿ ವಿಶ್ವಾಸವು ತಲುಪುವುದೋ, ಆಗ, ಒಂದು ಕಾರ್ಯಗತ ಕರಡನ್ನು ತಯಾರಿಸಲಾಗುವುದು. ಇದು ಒಂದು ಪ್ರಮಾಣದ ರೂಪದಲ್ಲಿರುವುದು ಆದರೆ, ಆಂತರಿಕವಾಗಿ ವರ್ಕಿಂಗ್ ಗ್ರೂಪ್ ನಲ್ಲಿ ಪುಃನವಿಮರ್ಶೆಗೋಸ್ಕರ ಇರಿಸಲಾಗುವುದು. ಯಾವಾಗ ಕಾರ್ಯಗತ ಕರಡು ಸಾಕಷ್ಟಾಗಿ ಘನೀಕೃತವಾಗಿ ಮತ್ತು ವರ್ಕಿಂಗ್ ಗ್ರೂಪ್ ಗೆ ತಾನು ನಿವಾರಿಸುವ ಸಮಸ್ಯೆಗೆ ಉತ್ಪಾದಿಸಿದ ತಾಂತ್ರಿಕ ಉತ್ತರವು ತೃಪ್ತಿಯಾಗುವುದೋ, ಆಗ ಅದು ಸಮಿತಿ ಕರಡು (ಕಮಿಟಿ ಡ್ರಾಫ್ಟ್ (CD)) ಆಗುವುದು. ನಂತರ, ಅದನ್ನು, ಬೇಕಿದ್ದರೆ, ಮತದಾನಗೋಸ್ಕರ, ಟಿಸಿ/ಏಸ್ಸಿ(TC/SC) ನ (ರಾಷ್ಟ್ರೀಯ ಮಂಡಳಿ) ಪಿ-ಸದಸ್ಯರುಗಳಿಗ ಕಳುಹಿಸಲಾಗುವುದು.

ಧನಾತ್ಮಕ ಮತಗಳ ಸಂಖ್ಯೆಯು ನಿಯಮಿತ ಕನಿಷ್ಠ ಮಿತಿಗಿಂತ ಜಾಸ್ತಿ ಇದ್ದರೆ ಸಿಡಿ(CD)ಯು ಅಂತಿಮ ಸಮಿತಿಯ ಕರಡು(FCD) ಆಗಿರುವುದು. ತಾಂತ್ರಿಕ ಅಡಕಗಳ ಮೇಲೆ ಸರ್ವ ಸಮ್ಮತಿ ಸಿಗುವವರೆಗೆ ಒಂದಾದ ಮೇಲೆ ಇನ್ನೊಂದರಂತೆ ಸಮಿತಿಯ ಕರಡುಗಳನ್ನು ಆಲೋಚಿಸಬಹುದು. ಸರ್ವ ಸಮ್ಮತಿ ಸಿಕ್ಕ ನಂತರ, ಮೂಲ ಗ್ರಂಥವನ್ನು ಕರಡು ಅಂತಾರಾಷ್ಟ್ರೀಯ(DIS) ವೆಂದು ಒಪ್ಪಿಸಲು ಅಂತಿಮಗೊಳಿಸಲಾಗುವುದು. ಇದಾದ ನಂತರ, ಮೂಲ ಗ್ರಂಥವನ್ನು ಐದು ತಿಂಗಳೊಳಗೆ ಮತದಾನಗೋಸ್ಕರ ರಾಷ್ಟ್ರೀಯ ಮಂಡಳಿ ಗೆ ಒಪ್ಪಿಸಲಾಗುವುದು. ನಂತರ ಟಿಸಿ/ಏಸ್ಸಿ(TC/SC) ನ ಪಿ- ಸದಸ್ಯರುಗಳು ಮೂರನೇ ಎರಡರಷ್ಟು ಬಹುಮತದಷ್ಟು ಪರವಾಗಿದ್ದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಿಮ ಕರಡು ಅಂತಾರಾಷ್ಟ್ರೀಯ ಪ್ರಮಾಣ (FDIS) ವೆಂದು ಒಪ್ಪಿಸಲು ಮಂಜೂರು ಮಾಡಲು. ಐಎಸ್ಓ ನಂತರ ಎರಡು ತಿಂಗಳೊಳಗೆ ಯಾವುದೇ ತಾಂತ್ರಿಕ ಬದಲಾವಣೆಗಳಿಗೆ ಆಸ್ಪದವಿಲ್ಲದೆಯೆ ರಾಷ್ಟ್ರೀಯ ಮಂಡಳಿ ಗಳ ಜತೆಗೆ ಮತದಾನ ನಡೆಸುವುದು. ಮೂರನೇ ಎರಡರಷ್ಟು ಬಹುಮತವು ಪಿ- ಸದಸ್ಯರುಗಳು ಸಮ್ಮತಿಸಿದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಾರಾಷ್ಟ್ರೀಯ ಪ್ರಮಾಣ ಎಂದು ಮಂಜೂರಾಗುವುದು. ಮಂಜೂರಾತಿಯ ನಂತರ, ಕೇವಲ ಸಂಪಾದಕತ್ವದ ಬದಲಾವಣೆಗಳನ್ನು ಮಾತ್ರ ಅಂತಿಮ ಮೂಲ ಗ್ರಂಥಕ್ಕೆ ಸೇರಿಸಲಾಗುವುದು. ಅಂತಿಮ ಮೂಲ ಗ್ರಂಥವನ್ನು ಐಎಸ್ಓ ಕೇಂದ್ರಿಯ ಸೆಕ್ರಟೆರಿಯೆಟ್ ಗೆ ಕಳುಹಿಸಲಾಗುವುದು. ಅದು ಅಂತಾರಾಷ್ಟ್ರೀಯ ಪ್ರಮಾಣ ಎಂದು ಪ್ರಕಾಶಿಸಲ್ಪಡುವುದು.

ಐಎಸ್ಓ ಹೆಸರಿರುವ ಉತ್ಪನ್ನಗಳು

[ಬದಲಾಯಿಸಿ]
  • ಐಎಸ್ಓ ಸೃಷ್ಟಿಸಿದ ಬಹಳ ಪ್ರಮಾಣಗಳು ಪ್ರಮಾಣಕ್ಕೆ ಅನುಗುಣವಾಗಿರುವ ನಿಜವಾಧ ಉತ್ಪನ್ನವನ್ನು ಸಾಮಾನ್ಯವಾದ ಉಪಯೋಗಕ್ಕೆ 'ಐಎಸ್ಓ' ಎಂದು ವಿವರಿಸಲು ಸರ್ವತ್ರ ಸಂದರ್ಭದಲ್ಲಿ ಕಾರಣವಾಗಿದೆ. ಇವುಗಳಿಗೆ ಕೆಲವು ಉದಾಹರಣೆಗಳು ಇಂತಿವೆ,
  • ಬಹಳ ಸೀಡಿ ಬಿಂಬಗಳು(ಇಮೇಜ್ ಗಳು) (CD images) ಫೈಲ್ ವಿಸ್ತರಣೆಯಲ್ಲಿ 'ಐಎಸ್ಓ' ಎಂದು ಕೊನೆಗೊಳ್ಳುವಿಕೆಯು, ಬೇರೆ ಫೈಲ್ ವ್ಯವಸ್ಥೆಗೆ ವಿರುದ್ಧವಾಗಿ 'ಐಎಸ್ಓ 9660' ಪ್ರಮಾಣದ ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವುದೆಂದು ತೋರಿಸುವುದು-ಆದುದರಿಂದ, ಸೀಡಿ ಬಿಂಬ(ಇಮೇಜ್)ಗಳನ್ನು ಸಾಮನ್ಯವಾಗಿ 'ಐಎಸ್ಓ' ಎಂದು ಕರೆಯುವರು. ಸೀಡಿ ಆರ್ ಓ ಎಮ್(CD-ROM) ಗಳು ಇರುವ ಈ ಪ್ರಮಾಣವನ್ನು ಉಪಯೋಗಿಸುವ ಎಲ್ಲಾ ಗಣಕಗಳಲ್ಲಿ ಸೀಡಿಗಳನ್ನು ಓದುವವು. ಕೆಲವು ಡೀವೀಡಿ ಆರ್ ಓ ಎಮ್ (DVD-ROM) ಗಳಲ್ಲಿ ಕೂಡ 'ಐಎಸ್ಓ 9660' ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವವು.
  • ಬೆಳಕಿಗೆ ಸೂಕ್ಷ್ಮವಾಗಿರುವ ಫೋಟೋಗ್ರಾಪಿಕ್ ಫಿಲ್ಮ್ ಗಳು(ಅದರ "ಫಿಲ್ಮ್ ವೇಗ") ಐಎಸ್ಓ 6, ಐಎಸ್ಓ 2240, ಮತ್ತು ಐಎಸ್ಓ 5800 ನಿಂದ ವಿವರಿಸಲ್ಪಡುವವು. ಆದುದರಿಂದ, ಫಿಲ್ಮ್ ವೇಗವನ್ನು ಕೆಲವೊಮ್ಮೆ ಐಎಸ್ಓ ಅಂಕೆಯಿಂದ ಕರೆಯಲಾಗುವುದು.
  • ಐಎಸ್ಓ 518 ನಲ್ಲಿ ಮೊದಲು ನಿರೂಪಿತವಾಗಿರುವ ಕ್ಯಾಮರಾದಲ್ಲಿ ಕಂಡುಬರುವ ಹಾಟ್ ಶೂ(hot shoe )ವನ್ನು ಐಎಸ್ಓ ಶೂ ಎಂದು ಕೆಲವೊಮ್ಮೆ ಕರೆಯುವರು.

ಟೀಕೆ-ಟಿಪ್ಪಣಿ

[ಬದಲಾಯಿಸಿ]

ಅಪರೂಪವಾಗಿ ಕೆಲವೊಂದು ಪ್ರತ್ಯೇಕ ಪ್ರಮಾಣಗಳನ್ನು ಬಿಟ್ಟರೆ, ಐಎಸ್ಓ ಪ್ರಮಾಣಿಕರಣಗಳು ಸಾಮಾನ್ಯವಾಗಿ ಉಚಿತವಾಗಿ ಆದರೆ ಖರೀದಿ ಬೆಲೆಗೆ ದೊರೆಯುವುದು.ಇದನ್ನು ಕೆಲಮಂದಿ ಚಿಕ್ಕ ಮುಕ್ತ ಆಕರ ಯೋಜನೆಗಳಿಗೂ ಅತಿ ಹೆಚ್ಚು ಬೆಲೆಯೆಂದು ತಿಳಿಯುವರು.

ಐಎಸ್ಓ/ಐಇಸಿ ಜೆಟಿಸಿ೧(ISO/IEC JTC1)ನ ವಿಧಾನಗಳು(ಪ್ರೊಸಿಜರ್) ಗಳು(("ಓಓಎಕ್ಸ ಎಮ್ ಎಲ್(OOXML) ನವರು "ಫಾಸ್ಟ್ ಟ್ರಾಕ್(Fast-track)" ಎನ್ನುವರು ಮತ್ತು ಒಪೆನ್ ಡಾಕ್ಯಮೆಂಟ್ ನವರು "ಪಿಎಎಸ್(PAS)" ಎನ್ನುವರು))ಆಫೀಸ್ ಓಪನ್ ಎಕ್ಸಎಮ್ಎಲ್ ಪ್ರಮಾಣಿಕರಣ(standardization of Office Open XML (ISO/IEC 29500))ಕ್ಕೆಸಂಬಂಧಪಟ್ಟಂತೆ ಟೀಕೆಗಳನ್ನು ಹೊಂದಿದೆ. ನಿವೃತ್ತರಾಗುತ್ತಿರುವ ಐಎಸ್ಓ/ಐಇಸಿ ಜೆಟಿಸಿ೧/ಎಸ್ ಸಿ ೩೪ಡಬ್ಲುಜಿ ೧(ISO/IEC JTC1/SC34 WG1)ಕನ್ವಿನರ್ ರ್ಮಾರ್ಟಿನ್ ಬ್ರಿಯಾನ್ ಹೇಳಿದ್ದನ್ನು ಉಲ್ಲೇಖಿಸಬಹುದು.

ನಾನು ಉತ್ತರಾಧಿಕಾರಿಗಳಿಗೆ ಶಿಪಾರಸು ಮಾಡುವುದು ಎನೆಂದರೆ ಓಏಎಸ್ಐಎಸ್(OASIS)ನ್ನು ಮೀರಿ ಡಬ್ಲುಜಿ ೧(WG1) ಒಂದು ವರ್ಷದ ಒಳಗೆ ಮಂಜೂರ ಆಗುವುದರಿಂದ ಪ್ರಮಾಣವನ್ನು ತೇರ್ಗಡೆ ಮಾಡಲು ಬಹು:ಷ ಇದು ಸಮಯವಾಗಿದೆ. ನಂತರ ಐಎಸ್ಓಗೆ ಪಿಏಎಸ್(PAS) ಸಲ್ಲಿಸುವುದರಿಂದ ಹೆಚ್ಚಿಗೆ ಗಮನ ಸೆಳೆಯುವುದು ಮತ್ತು ಡಬ್ಲುಜಿ ೧(WG1)ರಲ್ಲಿ ಸದ್ಯ ಇರುವ ಪ್ರಮಾಣಗಳಿಗಿಂತಲೂ ವೇಗವಾಗಿ ಮಂಜೂರವಾಗುವುದು.

ಪಿಏಎಸ್(PAS) ಗಳಿಗಿರುವ ನಿಯಮಗಳ ಅಸಮಾನತೆ, ಫಾಸ್ಟ್ ಟ್ರಾಕ್ ಮತ್ತು ಐಎಸ್ಓ ಕಮಿಟಿ ತಯಾರಿಸಿದ ಪ್ರಮಾಣಗಳು- ಇವು ತಂತ್ರಜ್ಞಾನ ವಲಯದಲ್ಲಿ ಒಂದು ಹಾಸ್ಯಸ್ಪದ ವಸ್ತುಗಳಾಗಿವೆ. ಮುಕ್ತ ಪ್ರಮಾಣ ಅಭಿವೃದ್ಧಿಯ ದಿನಗಳು ವೇಗವಾಗಿ ಅದೃಶ್ಯವಾಗುತ್ತಲಿದ್ದು ಬದಲಾಗಿ ನಮಗೆ ಕಾರ್ಪೋರೇಷನನ ಪ್ರಮಾಣಿಕರಣಗಳಾಗಿ ಸಿಗುತ್ತಲಿವೆ.

ಕಂಪ್ಯೂಟರ್ ಸೆಕ್ಯುರಿಟಿ ಉದ್ಯಮಿಯಾದ ಮತ್ತು ಉಬಂಟು ಹೂಡಿಕೆದಾರನಾದ ಮಾರ್ಕ ಶಟ್ಲುವರ್ತ್ ಆಫಿಸ್ ಓಪನ್ ಎಕ್ಸಎಮ್ಎಲ್ ಸ್ಟ್ಯಾಂಡರ್ಡೈಜೇಶನ್(Standardization of Office Open XML )ಸಂಸ್ಕರಣೆಮೇಲೆ "ಪ್ರಮಾಣ ನಿಗದಿಯ ಸಂಸ್ಕರಣೆಯು ಪ್ರಮಾಣಗಳಲ್ಲಿ ಜನರಿಗಿರುವ ಆತ್ಮವಿಶ್ವಾಸವನ್ನು ಅಪಮೌಲ್ಯ ವೆಸೆಗುವೆಂದು ನಾನು ತಿಳಿಯುತ್ತೇನೆ" ಎಂದು ವಿಮರ್ಶಿಸಿದ್ದಾರೆ. ಅದಲ್ಲದೆ ಐಎಸ್ಓ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲವೆಂದು ದೂರಿದ್ದಾರೆ.

ಮೈಕ್ರೋಸಾಫ್ಟ್ ಕಂಪನಿಯು ಬಹಳದೇಶಗಳಲ್ಲಿ ತೀವ್ರ ತರನಾಗಿ ಲಾಬಿ ನಡೆಸಿ ಐಎಸ್ಓನಲ್ಲಿ ಸಾಂಪ್ರದಾಯಿಕವಾಗಿ ಭಾಗವಹಿಸದೆ ಓಪನ್ಎಕ್ಸಎಮ್ಎಲ್(Office Open XML)ಸಹಾನುಭೂತಿಗಾರರನ್ನು ಟೆಕ್ನಿಕಲ್ ಕಮಿಟಿಗಳಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು, ಪರಿಹಾರ ತೋರಿಸುವವರನ್ನು(ಸಲ್ಯೂಶನ್ ಪ್ರಾವೈಡರ್ಸ್) ಮತ್ತು ಮರುಮಾರಾಟಗಾರರನ್ನುತುಂಬಿಸಿರುವುದನ್ನುತೋರಿಸಿದ್ದಾರೆ. ನಿಮ್ಮಹತ್ತಿರ ಯಾವಾಗ ವಿಶ್ವಾಸದ ಮೇಲೆ ಕಟ್ಟಿರುವ ಸಂಸ್ಕರಣೆ ಇರುವುದೋ ಮತ್ತು ಆವಿಶ್ವಾಸವು ದುರುಪಯೋಗವಾದಾಗ, ಐಎಸ್ಓ ಆಗ ಸಂಸ್ಕರಣೆಯನ್ನು ನಿಲ್ಲಿಸಬೇಕು...ಐಎಸ್ಓ ಒಂದು ಇಂಜಿನಿಯರಿಂಗ್ ನ ಹಳೆಯ ಹುಡುಗರ ಕ್ಲಬ್ ಆಗಿರುವುದು ಮತ್ತು ಇವುಗಳು ಬೇಸರ ತರುವಂತಾದ್ದು ಆದುದರಿಂದ ನೀವು ಬಹಳಷ್ಟು ಅಪೇಕ್ಷೆಯನ್ನುಹೊಂದಿರಬೇಕು..ಆಗ ತತ್ಕ್ಷಣ ನಿಮಗೆ ಬಹಳಷ್ಟು ಹಣದ ಹೂಡಿಕೆಯಾಗುವುದು ಮತ್ತು ಲಾಬಿಯು ನಡೆಯುವುದು ಮತ್ತು ನಿಮಗೆ ಕೃತಕ ಫಲಿತಾಂಶಗಳು ಸಿಗುವುದು. ಸಂಸ್ಕರಣೆಯು ತೀಕ್ಷ್ಣ ಕಾರ್ಪೋರೇಟ್ ಲಾಬಿಗೆ ಎದುರು ನಿಲ್ಲಲು ಸಾದ್ಯವಿಲ್ಲದಿರುವುದರಿಂದ ಮತ್ತು ನಿಮಗೆ ಕೊನೆಗೆ ಅಸ್ಪಷ್ಟವಾದ ಪ್ರಮಾಣವು ಸಿಗುವುದು.

ಉಲ್ಲೇಖ

[ಬದಲಾಯಿಸಿ]
  1. ISO/IEC JTC1 (2 November 2009), Letter Ballot on the JTC 1 Standing Document on Technical Specifications and Technical Reports (PDF) {{citation}}: Unknown parameter |deadurl= ignored (help)CS1 maint: numeric names: authors list (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಐಎಸ್ಓ&oldid=1201932" ಇಂದ ಪಡೆಯಲ್ಪಟ್ಟಿದೆ