ವಿಷಯಕ್ಕೆ ಹೋಗು

ಉದಾರತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಔದಾರ್ಯ ಇಂದ ಪುನರ್ನಿರ್ದೇಶಿತ)

ಉದಾರತೆಯು ಪ್ರಾಪಂಚಿಕ ವಸ್ತುಗಳಿಂದ ನಿರ್ಲಿಪ್ತವಾಗಿರುವ ಸದ್ಗುಣ, ಇದನ್ನು ಹಲವುವೇಳೆ ಉಡುಗೊರೆಗಳ ಕೊಡುವಿಕೆಯೊಂದಿಗೆ ಸಂಕೇತಿಸಲಾಗುತ್ತದೆ.[] ವಿವಿಧ ವಿಶ್ವ ಧರ್ಮಗಳು ಉದಾರತೆಯನ್ನು ಒಂದು ಸದ್ಗುಣವೆಂದು ಪರಿಗಣಿಸುತ್ತವೆ, ಮತ್ತು ಇದನ್ನು ಹಲವುವೇಳೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಕೊಂಡಾಡಲಾಗುತ್ತದೆ. ಉದಾರತೆಯಲ್ಲಿನ ವೈಜ್ಞಾನಿಕ ತನಿಖೆಯು ಒಬ್ಬ ವ್ಯಕ್ತಿಯ ಉದಾರತೆ ಮೇಲೆ ಅನೇಕ ಘಟನಾವಳಿಗಳು ಮತ್ತು ಆಟಗಳ ಪ್ರಭಾವವನ್ನು, ಮತ್ತು ಆಕ್ಸಿಟೋಸಿನ್‍ನಂತಹ ನರ ರಾಸಾಯನಿಕಗಳೊಂದಿಗಿನ ಸಂಭಾವ್ಯ ಸಂಬಂಧಗಳನ್ನು, ಮತ್ತು ಅನುಭೂತಿಯಂತಹ ಹೋಲಿಕೆಯ ಅನಿಸಿಕೆಗಳೊಂದಿಗಿನ ಸಂಬಂಧವನ್ನು ಪರಿಶೀಲಿಸಿದೆ.

ಉದಾರತೆ ಪದವನ್ನು ಕೆಲವೊಮ್ಮೆ ದಾನಶೀಲತೆಯನ್ನು (ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಕೊಡುವ ಸದ್ಗುಣ) ಸೂಚಿಸಲು ಬಳಸಲಾಗುತ್ತದೆ. ಇದು ಅವಶ್ಯಕತೆ ಇರುವ ಯಾರಿಗಾದರೂ ನೆರವಾಗಲು ಸಮಯ, ಸ್ವತ್ತುಗಳು ಅಥವಾ ಪ್ರತಿಭೆಗಳನ್ನು ನೀಡುವುದನ್ನು ಒಳಗೊಳ್ಳಬಹುದು. ನೈಸರ್ಗಿಕ ವಿಕೋಪದ ಸಮಯಗಳಲ್ಲಿ, ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಅಥವಾ ಗುಂಪುಗಳು ಸ್ವಯಂಪ್ರೇರಣೆಯಿಂದ ಆಗಾಗ್ಗೆ ಪರಿಹಾರ ಪ್ರಯತ್ನಗಳನ್ನು ಒದಗಿಸುತ್ತವೆ. ಇವುಗಳು ಸಮಯ, ಸಂಪನ್ಮೂಲಗಳು, ಸರಕುಗಳು, ಹಣ ಇತ್ಯಾದಿಗಳ ಉಡುಗೊರೆಗಳನ್ನು ನೀಡುತ್ತವೆ. ದಾನಶೀಲತೆಯು ಅನೇಕ ನೋಂದಾಯಿತ ಧರ್ಮಾರ್ಥ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಒಂದು ಮಾರ್ಗದರ್ಶಕ ತತ್ವವಾಗಿದೆ. ಉದಾರತೆ ಪದವು ಹಲವುವೇಳೆ ದಾನಶೀಲತೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆಯಾದರೂ, ಸಾರ್ವಜನಿಕ ಗಮನದಲ್ಲಿರುವ ಅನೇಕ ಜನರು ತಮ್ಮ ಒಳ್ಳೆ ಕೆಲಸಗಳಿಗೆ ಮಾನ್ಯತೆ ಬೇಡುತ್ತಾರೆ. ಸಂಸ್ಥೆಗಳು ಮತ್ತು ಸಮಿತಿಗಳಿಗೆ ಆಧಾರ ನೀಡಲು ಕಾಣಿಕೆಗಳು ಬೇಕಾಗುತ್ತವೆ, ಆದರೆ ದಾನಶೀಲತೆಯು ನೈಸರ್ಗಿಕ ವಿಕೋಪಗಳು ಮತ್ತು ವಿಪರೀತ ಪರಿಸ್ಥಿತಿಗಳಂತಹ ಅಗಾಧ ಅಗತ್ಯದ ಸಮಯಕ್ಕೆ ಸೀಮಿತವಾಗಿರಬಾರದು.

ಉದಾರತೆಯು ಅನುಭೂತಿಗೆ ಸಂಬಂಧಿಸಿದೆ ಎಂದು ಸಂಶೋಧನೆ ತೋರಿಸಿಕೊಟ್ಟಿದೆ. ಸಂಶೋಧಕ ಪೌಲ್ ಜ಼್ಯಾಕ್ ಮತ್ತು ಸಹೋದ್ಯೋಗಿಗಳಿಂದ ನಡೆದ ಈ ಸಂಶೋಧನೆಯಲ್ಲಿ, ಪೆಪ್ಟೈಡ್ ಆಕ್ಸಿಟೋಸಿನ್ ಅಥವಾ ಪ್ಲಸೀಬೊವನ್ನು ಸುಮಾರು ೧೦೦ ಪುರುಷರಿಗೆ ನೀಡಲಾಯಿತು ಮತ್ತು ನಂತರ ಅವರು ಹಣಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ಧಾರಗಳನ್ನು ಮಾಡಿದರು. ಇದರಲ್ಲಿ ಒಂದು ಕಾರ್ಯವಾದ ಅಲ್ಟಿಮೇಟಮ್ ಗೇಮ್‍ನ್ನು ಉದಾರತೆಯನ್ನು ಅಳಿಯಲು ಬಳಸಲಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Michael Pakaluk, Aristotle's Nicomachean Ethics: An Introduction, 2005, p. 173 explains the translation difficulties and names generosity as the least bad translation of Greek eleutheriotes (Google Books)


"https://kn.wikipedia.org/w/index.php?title=ಉದಾರತೆ&oldid=1019125" ಇಂದ ಪಡೆಯಲ್ಪಟ್ಟಿದೆ