ವಿಷಯಕ್ಕೆ ಹೋಗು

ಪೊದರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಂಟಿ ಇಂದ ಪುನರ್ನಿರ್ದೇಶಿತ)

ಪೊದರು ಎಂದರೆ ಸಣ್ಣದಿಂದ ಮಧ್ಯಮ ಗಾತ್ರದ ದಾರುವಿನಂಥ ಸಸ್ಯ. ಮೂಲಿಕೆಗಳಿಂದ ಭಿನ್ನವಾಗಿರುವ ಪೊದರುಗಳು ನೆಲದ ಮೇಲೆ ಅವಿಚ್ಛಿನ್ನ ದಾರುವಿನಂಥ ಕಾಂಡಗಳನ್ನು ಹೊಂದಿರುತ್ತವೆ. ಪೊದರುಗಳು ಮರಗಳಿಂದ ಬೇರೆಯಾಗಿವೆ, ಹೇಗೆಂದರೆ ಪೊದರುಗಳು ಅನೇಕ ಕಾಂಡಗಳನ್ನು ಮತ್ತು ಗಿಡ್ಡ ಎತ್ತರವನ್ನು ಹೊಂದಿದ್ದು, ಸಾಮಾನ್ಯವಾಗಿ ೬ ಮೀ. ಗಿಂತ ಕಡಿಮೆ ಎತ್ತರವಿರುತ್ತವೆ.[] ಅನೇಕ ಪ್ರಜಾತಿಗಳ ಸಸ್ಯಗಳು ಅವುಗಳ ಬೆಳವಣಿಗೆ ಪರಿಸ್ಥಿತಿಗಳನ್ನು ಅವಲಂಬಿಸಿ ಪೊದರುಗಳಾಗಿ ಅಥವಾ ಮರಗಳಾಗಿ ಬೆಳೆಯಬಹುದು. ಲ್ಯಾವೆಂಡರ್, ಪೆರಿವಿಂಕಲ್ ಮತ್ತು ಗುಲಾಬಿಗಳ ಬಹುತೇಕ ಸಣ್ಣ ಉದ್ಯಾನ ವೈವಿಧ್ಯಗಳಂತಹ, ಸಣ್ಣ, ಕಡಿಮೆ ಎತ್ತರದ ಪೊದರುಗಳನ್ನು (ಸಾಮಾನ್ಯವಾಗಿ ೨ ಮಿ. ಗಿಂತ ಕಡಿಮೆ ಎತ್ತರ) ಹಲವುವೇಳೆ "ಉಪಪೊದರುಗಳು" ಎಂದು ಕರೆಯಲಾಗುತ್ತದೆ.

ಉದ್ಯಾನ ಅಥವಾ ತೋಟದಲ್ಲಿನ ಬೆಳೆಸಿದ ಪೊದರುಗಳ ಪ್ರದೇಶವನ್ನು ಪೊದೆಗಾಡು ಎಂದು ಕರೆಯಲಾಗುತ್ತದೆ. ಅಲಂಕಾರಕ್ಕಾಗಿ ಪೊದರುಗಳನ್ನು ಕತ್ತರಿಸಿದಾಗ, ಪೊದರುಗಳ ಸೂಕ್ತ ಪ್ರಜಾತಿಗಳು ಅಥವಾ ವೈವಿಧ್ಯಗಳು ದಟ್ಟ ಎಲೆಗಳನ್ನು ಬೆಳೆಸಿಕೊಳ್ಳುತ್ತವೆ ಮತ್ತು ಅನೇಕ ಚಿಕ್ಕ ಎಲೆಯುಳ್ಳ ಶಾಖೆಗಳು ಒಟ್ಟಾಗಿ ಹತ್ತಿರದಲ್ಲಿ ಬೆಳೆಯುತ್ತವೆ. ಅನೇಕ ಪೊದರುಗಳು ನವೀಕರಣ ಸಮರುವಿಕೆಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತವೆ. ಇದರಲ್ಲಿ ಮಣ್ಣಿನ ಹತ್ತಿರದಷ್ಟು ಎತ್ತರಕ್ಕೆ ಸಸ್ಯವನ್ನು ಕತ್ತರಿಸಿದಾಗ ಜಲ್ಲೆಗಳು ಎಂದು ಕರೆಯಲ್ಪಡುವ ಉದ್ದನೆಯ ಹೊಸ ಕಾಂಡಗಳು ಮೂಡುತ್ತವೆ. ಇತರ ಪೊದರುಗಳು ಆಯ್ದ ಸಮರುವಿಕೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ. ಇದರಿಂದ ಅವುಗಳ ರಚನೆ ಮತ್ತು ವೈಶಿಷ್ಟ್ಯ ಬಹಿರಂಗಗೊಳ್ಳುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Anna Lawrence; William Hawthorne (2006). Plant Identification: Creating User-friendly Field Guides for Biodiversity Management. Routledge. pp. 138–. ISBN 978-1-84407-079-4.


"https://kn.wikipedia.org/w/index.php?title=ಪೊದರು&oldid=866558" ಇಂದ ಪಡೆಯಲ್ಪಟ್ಟಿದೆ