ವಿಷಯಕ್ಕೆ ಹೋಗು

ಕಂಕುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಕ್ಷ ಇಂದ ಪುನರ್ನಿರ್ದೇಶಿತ)

ಕಂಕುಳು ಎಂದರೆ ತೋಳು ಭುಜಕ್ಕೆ ಜೋಡಣೆಯಾಗುವ ಕೀಲಿನ ನೇರವಾಗಿ ಕೆಳಗಿರುವ ಮಾನವ ಶರೀರದ ಮೇಲಿನ ಪ್ರದೇಶ. ಇದು ತೋಳಿನ ಕೆಳಗಿನ ಬೆವರು ಗ್ರಂಥಿಯನ್ನು ಕೂಡ ಒದಗಿಸುತ್ತದೆ. ಮಾನವರಲ್ಲಿ, ಮೈ ವಾಸನೆಯ ರಚನೆ ಬಹುತೇಕವಾಗಿ ಕಂಕುಳು ಪ್ರದೇಶದಲ್ಲಿ ಆಗುತ್ತದೆ.[] ಈ ಗಂಧಜನಕ ವಸ್ತುಗಳು ಕೂಡುವಿಕೆಗೆ ಸಂಬಂಧಿಸಿದ ಪಾತ್ರವಹಿಸುವ ಫ಼ೆರೊಮೋನ್‍ಗಳಾಗಿ ಕಾರ್ಯನಿರ್ವಹಿಸುತ್ತವೆ. ಮೈ ವಾಸನೆಗಾಗಿ ಕಂಕುಳು ಪ್ರದೇಶಗಳು ಜನನಾಂಗ ಪ್ರದೇಶಗಳಿಗಿಂತ ಹೆಚ್ಚು ಮುಖ್ಯವೆಂದು ತೋರುತ್ತವೆ. ಇದು ಮಾನವ ದ್ವಿಪಾದಬಳಕೆಗೆ ಸಂಬಂಧಿಸಿರಬಹುದು.

ಕಂಕುಳು ಕಚಗುಳಿಗೆ ಸ್ಪಂದಿಸುವ ಪ್ರದೇಶವಾಗಬಲ್ಲದು, ಸಂಭಾವ್ಯವಾಗಿ ಅದು ಹೊಂದಿರುವ ನರಗಳ ಸಂಖ್ಯೆಯ ಕಾರಣದಿಂದ. ಕಚಗುಳಿ ಇಟ್ಟಾಗ ಕೆಲವು ಜನರು ಈ ಪ್ರದೇಶವು ವಿಶೇಷವಾಗಿ ಅಹಿತಕರವೆನಿಸುತ್ತದೆ ಎಂದು ಕಂಡುಕೊಳ್ಳುತ್ತಾರೆ. ಕಂಕುಳು ಕೂದಲು ಸಾಮಾನ್ಯವಾಗಿ ಗಂಡಸರು ಮತ್ತು ಹೆಂಗಸರು ಇಬ್ಬರ ಕಂಕುಳುಗಳಲ್ಲಿ ಬೆಳೆಯುತ್ತದೆ, ಮತ್ತು ಬೆಳವಣಿಗೆಯು ತಾರುಣ್ಯದಲ್ಲಿ ಆರಂಭವಾಗುತ್ತದೆ. ಕೆಲವು ಆಧುನಿಕ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ, ಮಹಿಳೆಯರು ಕಂಕುಳಿನ ಕೂದಲನ್ನು ತೆಗೆಯುವುದು ಸಾಮಾನ್ಯವಾಗಿದೆ. ಕೆಲವರು ಈ ಅಭ್ಯಾಸವನ್ನು ಸೌಂದರ್ಯದ ವಿಷಯವಾಗಿ ಕಂಡರೆ, ಇತರರು ಇದನ್ನು ಆರೋಗ್ಯ ಸಂಬಂಧಿ ಕಾಳಜಿಗಳಿಗಾಗಿ ತೆಗೆಯಬೇಕೆಂದು ಕಾಣುತ್ತಾರೆ. ಕಂಕುಳಿನ ಕೂದಲು ಬೇಗನೇ ಬೆಳೆಯುವುದರಿಂದ, ಆಗಾಗ್ಗೆ ಅದನ್ನು ಬೋಳಿಸಬೇಕಾಗುತ್ತದೆ, ಇಲ್ಲದಿದ್ದರೆ ಕಂಕುಳಿನಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಇಸ್ಲಾಮೀ ಸಂಪ್ರದಾಯದಲ್ಲಿ, ಕಂಕುಳಿನ ಕೂದಲನ್ನು ತೆಗೆಯುವುದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಒಂದು ಧಾರ್ಮಿಕ ನೈರ್ಮಲ್ಯದ ಅಭ್ಯಾಸವಾಗಿದೆ. ಬಹುತೇಕ ಮುಸ್ಲಿಮರು ಅದನ್ನು ಬೋಳಿಸಿದರೆ, ಕೆಲವರು ಮೇಣದಂತಹ ಉತ್ಪನ್ನಗಳಿಂದ ಅದನ್ನು ಕೀಳುತ್ತಾರೆ, ಏಕೆಂದರೆ, ಇದು ಮತ್ತೆ ಬೆಳೆಯದೇ ದೀರ್ಘ ಕಾಲದವರೆಗೆ ಉಳಿದುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಸ್ತ್ರೀ ಸಮಾನತಾವಾದಿ ಚಳುವಳಿಯಲ್ಲಿ, ಹಿಪ್ಪಿ ಸಂಸ್ಕೃತಿಯಲ್ಲಿ, ಮತ್ತು ಪಂಕ್ ರಾಕ್ ಕ್ಷೇತ್ರದಲ್ಲಿ, ಕೆಲವು ಮಹಿಳೆಯರು ತಮ್ಮ ಕಂಕುಳಿನ ಕೂದಲನ್ನು ವಿವಿಧ ಕಾರಣಗಳಿಗಾಗಿ ಬೋಳಿಸುವುದಿಲ್ಲ. ಇವುಗಳಲ್ಲಿ ವಿದ್ರೋಹ ಚರ್ಯೆ, ಸಮಾನತಾವಾದ ಮತ್ತು ಆರಾಮ ಸೇರಿವೆ. ಇದಕ್ಕೆ ವಿರುದ್ಧವಾಗಿ ಆದರೆ ಅಸಾಮಾನ್ಯವಾಗಿ, ಕೆಲವು ಪುರುಷರು ತಮ್ಮ ಕಂಕುಳಿನ ಕೂದಲನ್ನು ತೆಗೆಯಲು ಆಯ್ದುಕೊಳ್ಳಬಹುದು, ಸೌಂದರ್ಯದ ಕಾರಣಗಳಿಗಾಗಿ ಅಥವಾ ಈಜಿನಂತಹ ಕ್ರೀಡೆಗಳಲ್ಲಿ ಘರ್ಷಣೆಯನ್ನು ಕಡಿಮೆ ಮಾಡುವ ಕಾರಣಕ್ಕಾಗಿ.

ಉಲ್ಲೇಖಗಳು

[ಬದಲಾಯಿಸಿ]
  1. Turkington, Carol; Dover, Jeffrey S. (2007). The encyclopedia of skin and skin disorders (3rd ed.). New York: Facts on File. p. 363. ISBN 978-0-8160-6403-8.


"https://kn.wikipedia.org/w/index.php?title=ಕಂಕುಳು&oldid=1031300" ಇಂದ ಪಡೆಯಲ್ಪಟ್ಟಿದೆ