ವಿಷಯಕ್ಕೆ ಹೋಗು

ಜಲಾಶಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಟ್ಟೆ (ಜಲಾಶಯ) ಇಂದ ಪುನರ್ನಿರ್ದೇಶಿತ)
ಯುನೈಟಡ್ ಕಿಂಗ್ಡಮ್‍ನ ಒಂದು ಜಲಾಶಯ

ಜಲಾಶಯವು ನೀರಿಗಾಗಿ ಮಾಡಲಾಗಿರುವ ಶೇಖರಣಾ ಸ್ಥಳ. ಸಾಮಾನ್ಯವಾಗಿ ಜಲಾಶಯದ ಅರ್ಥ ನೀರನ್ನು ಸಂಗ್ರಹಿಸಿಡಲು ಅಣೆಕಟ್ಟೆ ಅಥವಾ ಜಲಬಂಧ ಬಳಸಿ ಸೃಷ್ಟಿಸಲಾದ ವಿಸ್ತೃತವಾದ ನೈಸರ್ಗಿಕ ಅಥವಾ ಕೃತಕ ಸರೋವರ, ಸಂಗ್ರಹ ಕೊಳ ಅಥವಾ ಜಲಸಮೂಹ. ಅಸ್ತಿತ್ವದಲ್ಲಿರುವ ಒಂದು ಜಲಸಮೂಹದಿಂದ ನೀರನ್ನು ಹೀರುವ ಒಂದು ಹೊಳೆಯನ್ನು ನಿಯಂತ್ರಿಸಿ ಜಲಾಶಯಗಳನ್ನು ಸೃಷ್ಟಿಸಬಹುದು. ಅವುಗಳನ್ನು ನದಿ ಕಣಿವೆಗಳಲ್ಲಿ ಅಣೆಕಟ್ಟೆಯನ್ನು ಬಳಸಿಯೂ ನಿರ್ಮಿಸಬಹುದು. ಪರ್ಯಾಯವಾಗಿ, ಚಪ್ಪಟೆ ನೆಲವನ್ನು ಅಗೆದು ಅಥವಾ ತಡೆಗೋಡೆಗಳು ಮತ್ತು ಒಡ್ಡುಗಳನ್ನು ನಿರ್ಮಿಸಿ ಒಂದು ಜಲಾಶಯವನ್ನು ಕಟ್ಟಬಹುದು. ತೊಟ್ಟಿ ಜಲಾಶಯಗಳು ಸಂಗ್ರಹ ತೊಟ್ಟಿಗಳಲ್ಲಿ ನೀರನ್ನು ಸಂಗ್ರಹಿಸುತ್ತವೆ. ಇವು ಎತ್ತರದಲ್ಲಿರಬಹುದು, ನೆಲಮಟ್ಟದಲ್ಲಿರಬಹುದು, ಅಥವಾ ನೆಲದಡಿ ಇರಬಹುದು. ತೊಟ್ಟಿ ಜಲಾಶಯಗಳನ್ನು ನೀರುತೊಟ್ಟಿಗಳು ಎಂದು ಕೂಡ ಕರೆಯಲಾಗುತ್ತದೆ.

ಒಂದು ಕಣಿವೆಯಲ್ಲಿ ನಿರ್ಮಿಸಲಾದ ಅಣೆಕಟ್ಟೆಯು ಜಲಾಶಯದ ಜಲಾನಯನ ಭೂಮಿಯ ಬಹುತೇಕ ಭಾಗವನ್ನು ಒದಗಿಸಲು ನೈಸರ್ಗಿಕ ಸ್ಥಳಾಕೃತಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಅಣೆಕಟ್ಟೆಗಳು ನೈಸರ್ಗಿಕ ಜಲನಾಯನ ಭೂಮಿಯ ನದಿದಿಕ್ಕಿನ ಕಡೆ ಕಣಿವೆಯ ಕಿರಿದಾದ ಭಾಗದಲ್ಲಿ ಸ್ಥಿತವಾಗಿರುತ್ತವೆ. ಕಣಿವೆಯ ಪಾರ್ಶ್ವಗಳು ಸ್ವಾಭಾವಿಕ ಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ, ಮತ್ತು ಬಲ ಹಾಗೂ ಅತ್ಯಂತ ಕಡಿಮೆ ನಿರ್ಮಾಣ ವೆಚ್ಚವನ್ನು ಒದಗಿಸಲು ಅಣೆಕಟ್ಟೆಯು ಅತ್ಯಂತ ಕಿರಿದಾದ ಕಾರ್ಯೋಪಯೋಗಿ ಬಿಂದುವಿದ್ದಲ್ಲಿ ಸ್ಥಿತವಾಗಿರುತ್ತದೆ. ಅನೇಕ ಜಲಾಶಯ ನಿರ್ಮಾಣ ಯೋಜನೆಗಳಲ್ಲಿ, ಜನರನ್ನು ಸ್ಥಳಾಂತರಿಸಿ ಮರುವಸತಿ ಕಲ್ಪಿಸಬೇಕಾಗುತ್ತದೆ, ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಅಥವಾ ಅಪರೂಪದ ಪರಿಸರಗಳನ್ನು ಹೊಸ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕಾಗುತ್ತದೆ. ಉದಾಹರಣೆಗಳಲ್ಲಿ ಅಬು ಸಿಂಬೆಲ್ ದೇಗುಲಗಳು (ಈಜಿಪ್ಟ್‌ನಲ್ಲಿ ನೈಲ್ ನದಿಯಿಂದ ನಾಸೆರ್ ಸರೋವರವನ್ನು ಸೃಷ್ಟಿಸಲು ಆಸ್ವಾನ್_ಕಟ್ಟೆ ಅಣೆಕಟ್ಟಿನ ನಿರ್ಮಾಣಕ್ಕೆ ಮುಂಚೆ ಇವನ್ನು ಸ್ಥಳಾಂತರಿಸಲಾಯಿತು), ಲಿನ್ ಸೆಲಿನ್‍ನ ನಿರ್ಮಾಣದ ಅವಧಿಯಲ್ಲಿ ಕೇಪೆಲ್ ಸೆಲಿನ್ ಹಳ್ಳಿಯ ಸ್ಥಳಾಂತರ ಸೇರಿವೆ. ಒಂದು ಕಣಿವೆಯಲ್ಲಿ ಜಲಾಶಯದ ನಿರ್ಮಾಣಕ್ಕೆ ನಿರ್ಮಾಣದ ಒಂದು ಭಾಗದ ಅವಧಿಯಲ್ಲಿ ಸಾಮಾನ್ಯವಾಗಿ ನದಿಯ ದಿಕ್ಕನ್ನು ಬದಲಾಯಿಸಬೇಕಾಗುತ್ತದೆ, ಹಲವುವೇಳೆ ತಾತ್ಕಾಲಿಕ ಸುರಂಗ ಅಥವಾ ಬಳಸು ಕಾಲುವೆ ಮೂಲಕ.[] ಗುಡ್ಡಗಾಡು ಪ್ರದೇಶಗಳಲ್ಲಿ, ಹಲವುವೇಳೆ ಅಸ್ತಿತ್ವದಲ್ಲಿರುವ ಸರೋವರಗಳನ್ನು ಹಿಗ್ಗಿಸಿ ಜಲಾಶಯಗಳನ್ನು ನಿರ್ಮಿಸಲಾಗುತ್ತದೆ. ಕೆಲವೊಮ್ಮೆ ಅಂತಹ ಜಲಾಶಯಗಳಲ್ಲಿ, ಹೊಸದಾದ ಮೇಲಿನ ನೀರಿನ ಮಟ್ಟವು ಒಂದು ಅಥವಾ ಹೆಚ್ಚಿನ ಪೋಷಕ ಹೊಳೆಗಳ ಮೇಲಿನ ಜಲಾನಯನ ಭೂಮಿಯ ಎತ್ತರವನ್ನು ಮೀರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Construction of Hoover Dam: a historic account prepared in cooperation with the Department of the Interior. KC Publications. 1976. ISBN 0-916122-51-4.


"https://kn.wikipedia.org/w/index.php?title=ಜಲಾಶಯ&oldid=966043" ಇಂದ ಪಡೆಯಲ್ಪಟ್ಟಿದೆ