ವಿಷಯಕ್ಕೆ ಹೋಗು

ಕಾರ್ಯನಿರ್ವಹಣ ಸಾಧನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾರ್ಯಾಚರಣಾ ವ್ಯವಸ್ಥೆ ಇಂದ ಪುನರ್ನಿರ್ದೇಶಿತ)

ಕಾರ್ಯನಿರ್ವಹಣ ಸಾಧನ ಅಥವ ಕಾರ್ಯಾಚರಣಾ ವ್ಯವಸ್ಥೆ ಯು (ಸಾಮಾನ್ಯವಾಗಿ ಸಂಕ್ಷೇಪದಲ್ಲಿ OS ಅಥವಾ O/S ಎನ್ನಲಾಗುತ್ತದೆ) ಯಂತ್ರಾಂಶ ಮತ್ತು ಬಳಕೆದಾರರ ನಡುವಿನ ಒಂದು ಅಂತರ್ವರ್ತನ; OSಯು ಗಣಕದ ಸಂಪನ್ಮೂಲಗಳ ಹಂಚಿಕೆ, ಕಾರ್ಯಗಳ ನಿರ್ವಹಣೆ ಮುಂತಾದ ಅನೇಕ ನಿರ್ವಹಣೆ ಹಾಗೂ ಸಮನ್ವಯ ಕಾರ್ಯಗಳಿಗೆ ಜವಾಬ್ದಾರನಾಗಿದೆ. ಕಾರ್ಯಾಚರಣಾ ವ್ಯವಸ್ಥೆಯು ಗಣಕದಲ್ಲಿ ಕಾರ್ಯಾಚರಿಸುವ ಗಣಕ ಆನ್ವಯಿಕೆಗಳಿಗೆ ಆತಿಥೇಯನಾಗಿ ವರ್ತಿಸುತ್ತದೆ. ಆತಿಥೇಯನಾಗಿ ಕಾರ್ಯಾಚರಣೆ ವ್ಯವಸ್ಥೆಯ ಪ್ರಮುಖ ಉದ್ದೇಶವೇನೆಂದರೆ ಯಂತ್ರಾಂಶದ ಕಾರ್ಯಗಳ ಸಂಪೂರ್ಣ ನಿರ್ವಹಣೆಯನ್ನು ಮಾಡುವುದು. ಗಣಕ ಅನ್ವಯಿಕೆಗಳು ಇದರಿಂದಾಗಿ ಈ ಜವಾಬ್ದಾರಿಯಿಂದ ಮುಕ್ತವಾಗುವುದರೊಂದಿಗೆ, ಅನ್ವಯಿಕೆಗಳನ್ನು ರಚಿಸುವುದು ಸುಲಭವಾಗುತ್ತದೆ. ಬಹುಪಾಲು ಎಲ್ಲಾ ಗಣಕಗಳು (ಹಸ್ತಾಧರಿತ ಗಣಕಗಳು, ಡೆಸ್ಕ್‌ಟಾಪ್‌ ಗಣಕಗಳು, ಸೂಪರ್‌ ಗಣಕ‌ಗಳು, ವಿಡಿಯೋ ಆಟಗಳೆಲ್ಲವೂ ಸೇರಿದಂತೆ) ಜೊತೆಗೆ ಕೆಲವು ಯಂತ್ರ ಮಾನವರು, ಗೃಹಬಳಕೆಯ ಉತ್ಪನ್ನಗಳು(ತಟ್ಟೆ ತೊಳೆಯುವ ಯಂತ್ರ, ಬಟ್ಟೆ ಒಗೆಯುವ ಯಂತ್ರ), ಮತ್ತು ಹಗುರ ಸಂಗೀತ ಸಾಧನಗಳೂ ಸಹಾ ವಿವಿಧ ಮಾದರಿಯ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬಳಸುತ್ತವೆ.[] ಆದರೂ ಕೆಲವೊಂದು ಹಳೆಯ ಸಾಧನಗಳು ಈಗಲೂ, ಅಡಕ ಡಿಸ್ಕ್‌ ಅಥವಾ ಇತರೆ ದತ್ತ ಸಂಗ್ರಹಣಾ ಸಾಧನಗಳಲ್ಲಿರುವ ಅಂತರ್ಗತ ಕಾರ್ಯಾಚರಣಾ ವ್ಯವಸ್ಥೆಯನ್ನು ಬಳಸುತ್ತಿರಬಹುದು.

ಕಾರ್ಯಾಚರಣಾ ವ್ಯವಸ್ಥೆಗಳು ಅನ್ವಯಿಕ ತಂತ್ರಾಂಶಗಳಿಗೆ ಮತ್ತು ಬಳಕೆದಾರರಿಗೆ ಅನೇಕ ವಿಧವಾದ ಸೇವೆಗಳನ್ನು ನೀಡುತ್ತವೆ. ಅನ್ವಯಿಕಗಳು ಈ ಎಲ್ಲಾ ಸೇವೆಗಳನ್ನು ಅನ್ವಯಿಕ ಪ್ರೋಗ್ರಾಮಿಂಗ್‌ ಅಂತರ್ವರ್ತನಗಳು (APIಗಳು) ಅಥವಾ ವ್ಯವಸ್ಥಾ ಕರೆಗಳ ಮೂಲಕ ಪಡೆಯುತ್ತವೆ. ಈ ಅಂತರ್ವರ್ತನಗಳನ್ನು ಕರೆಯುವ ಮೂಲಕ ಅನ್ವಯವು ಕಾರ್ಯಾಚರಣಾ ವ್ಯವಸ್ಥೆಯಿಂದ ಅಗತ್ಯವಾದ ಸೇವೆಗೆ ಕೋರಿಕೆಯನ್ನು ಸಲ್ಲಿಸಬಹುದು ಹಾಗೂ ಅಗತ್ಯ ಪರಿಮಾಣಗಳನ್ನು ನೀಡಿ, ಸೇವೆಯ ಫಲಿತಾಂಶವನ್ನು ಪಡೆಯಬಹುದು. ಬಳಕೆದಾರರು ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ ಕೆಲ ಮಾದರಿಯ ತಂತ್ರಾಂಶದ ಬಳಕೆದಾರ ಅಂತರ್ವರ್ತನ(UI)ಗಳಿಂದ ಸಹಾ ಎಂದರೆ ಆದೇಶಗಳನ್ನು ನೀಡುವ ಆದೇಶ ಅಂತರ್ವರ್ತನ (CLI) ಅಥವಾ ಚಿತ್ರಕ ಬಳಕೆದಾರ ಅಂತರ್ವರ್ತನ (GUI, ಸಾಮಾನ್ಯ ಬಳಕೆಯಲ್ಲಿ “ಗೂಯಿ”)ಗಳನ್ನು ಬಳಸಿ ಕಾರ್ಯಾಚರಿಸಬಹುದು. ಹಸ್ತಾಧರಿತ ಹಾಗೂ ಡೆಸ್ಕ್‌ಟಾಪ್‌ ಗಣಕಗಳಿಗೆ ಬಳಕೆದಾರ ಅಂತರ್ವರ್ತನವೂ ಸಹಾ ಸಾಮಾನ್ಯವಾಗಿ ಕಾರ್ಯಾಚರಣೆಯ ಅಂಗವಾಗಿ ಪರಿಗಣಿಸಲ್ಪಡುತ್ತದೆ. ದೊಡ್ಡ ಬಹು-ಬಳಕೆದಾರ ವ್ಯವಸ್ಥೆಗಳಾದ Unix ಮತ್ತು Unix‌ ಮಾದರಿಯ ಗಣಕಗಳಲ್ಲಿ, ಬಳಕೆದಾರ ಅಂತರ್ವರ್ತನವೂ ಸಹಾ ಕಾರ್ಯಾಚರಣಾ ವ್ಯವಸ್ಥೆಯ ಹೊರಗೆ ಕೆಲಸ ಮಾಡುವ ಅನ್ವಯಿಕಗಳಲ್ಲೊಂದಾಗಿ ಪರಿಗಣಿಸಲಾಗುತ್ತದೆ. (ಬಳಕೆದಾರ ಅಂತರ್ವರ್ತನವನ್ನೂ ಸಹಾ ಕಾರ್ಯಾಚರಣಾ ವ್ಯವಸ್ಥೆಯ ಭಾಗವಾಗಿಸಬೇಕೆ ಎಂಬುದು ಚರ್ಚೆಯ ವಿಷಯವಾಗಿದೆ.)

ಸಾಮಾನ್ಯ ಈಗಿನ ದಿನಮಾನದ ಕಾರ್ಯಾಚರಣಾ ವ್ಯವಸ್ಥೆಗಳ ಗುಂಪುಗಳೆಂದರೆ BSD, Darwin (MAC‌ OS X), Linux, Sun‌OS(Solaris‌/OpenSolaris‌‌), ಮತ್ತು Windows‌ NT (XP/Vista/7). ಸರ್ವರ್‌ಗಳು ಸಾಮಾನ್ಯವಾಗಿ Unix ಅಥವಾ ಕೆಲ Unix‌-ಮಾದರಿಯ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬಳಸಿದರೆ , ಅಂತರ್ಗತ ವ್ಯವಸ್ಥೆಗಳ ಮಾರುಕಟ್ಟೆಗಳು ಹಲವು ಕಾರ್ಯಾಚರಣಾ ವ್ಯವಸ್ಥೆಗಳ ನಡುವೆ ಹಂಚಿ ಹೋಗಿವೆ.[][]

ಇತಿಹಾಸ

[ಬದಲಾಯಿಸಿ]

ಆರಂಭದಲ್ಲಿ

[ಬದಲಾಯಿಸಿ]

ಮೊದಲಿನ ಗಣಕಗಳು ಕೇವಲ ನೇರ ಕಾರ್ಯಾಚರಣೆಯ ಪ್ರೋಗ್ರಾಂಗಳನ್ನು ಮಾತ್ರ ಹೊಂದಿದ್ದು, ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿರಲಿಲ್ಲ. 1960ರ ದಶಕದ ಮಧ್ಯದಲ್ಲಿ ಅಭಿವೃದ್ಧಿ, ಕಾಲ ಹೊಂದಾಣಿಕೆಗಳನ್ನು ಸುಗಮಗೊಳಿಸಲು ಮತ್ತು ಕೆಲವೊಮ್ಮೆ "ಕೇಂದ್ರ ನಿಯಂತ್ರಣ ಪ್ರೋಗ್ರಾಂ" ಅಥವಾ "ನಿರ್ವಾಹಕ" ಅಥವಾ "ಮೇಲ್ವಿಚಾರಕ" ಎಂದು ಕರೆಯಲ್ಪಡುತ್ತಿದ್ದ ಆದೇಶ ತಂಡ ನಿರ್ವಹಣಾ ವ್ಯವಸ್ಥೆಯ ಮೂಲಕ ಕೆಲಸಗಳನ್ನು ನಡೆಸಲು, ವಾಣಿಜ್ಯ ಗಣಕ ಮಾರಾಟಗಾರರು ಬಹಳಷ್ಟು ಸಾಧನಗಳನ್ನು ನೀಡುತ್ತಿದ್ದರು. ಉದಾಹರಣೆಗೆ ಹೆಚ್ಕೋ ಸಿದ್ಧಪಡಿಸಿದ UNIVAC ಮತ್ತು ಇನ್ನಿತರವೆಂದರೆ ಕಂಟ್ರೋಲ್‌ ಡಾಟಾ ಕಾರ್ಪೋರೇಷನ್‌ನಿಂದ ಸಿದ್ಧಪಡಿಸಿದ ಸಾಧನಗಳು.

ಮೇನ್‌ಫ್ರೇಂಗಳಲ್ಲಿ ಮೊದಲಿಗೆ ಅಳವಡಿಸಿದ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು, ನಂತರ, ಮೂಲ ಸೂಕ್ಷ್ಮ ಗಣಕ ಕಾರ್ಯಾಚರಣಾ ವ್ಯವಸ್ಥೆಗಳು, ಒಮ್ಮೆಗೆ ಕೇವಲ ಒಂದು ಪ್ರೋಗ್ರಾಂ ಮಾತ್ರ ಬೆಂಬಲಿಸುತ್ತಿದ್ದುದರಿಂದ, ಸಾಧಾರಣ ಮಟ್ಟದ ಕಾರ್ಯಯೋಜಕ ಸಾಕಿತ್ತು. ಪ್ರತಿ ಪ್ರೋಗ್ರಾಂ ಸಹಾ ತನ್ನನ್ನು ನಡೆಸುತ್ತಿರುವ ಗಣಕದ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿತ್ತು. 1960ರ ದಶಕದಲ್ಲಿ ಮೊದಲ ಬಾರಿಗೆ ಬಹುಕಾರ್ಯಕ (ಸಮಯ ಹೊಂದಾಣಿಕೆ ಮಾದರಿ)ಗಳು ಮೇನ್‌ಫ್ರೇಂಗಳಿಗೆ ಅನ್ವಯವಾದವು.1970ರ ಹೊತ್ತಿಗೆ, ಸಾಕಷ್ಟು ಮಿನಿಗಣಕಗಳನ್ನು ವಾಣಿಜ್ಯ ಕಾರ್ಯಾಚರಣಾ ವ್ಯವಸ್ಥೆಗಳೊಂದಿಗೆ ಕೊಂಡುಕೊಳ್ಳಬಹುದಾಗಿತ್ತು(ಇವುಗಳಲ್ಲಿ ಕೆಲವು ಏಕಕಾಲೀನ ಹಿನ್ನೆಲೆ ಹಾಗೂ ಮುನ್ನೆಲೆ ಪ್ರೋಗ್ರಾಂಗಳನ್ನು ಬೆಂಬಲಿಸುತ್ತಿದ್ದವು, ಉದಾಹರಣೆಗೆ DEC,PDP-11ಗಳಿಗೆ RT-11, ಮತ್ತು ಡಾಟಾ ಜನರಲ್‌ ಗಣಕಗಳಿಗೆ RDOS ಇದ್ದ ಹಾಗೆ), ಆದರೂ ಒಂದು ದಶಕದ ನಂತರ ಹೊರಬಂದ ಅನೇಕ ಸೂಕ್ಷ್ಮ ಗಣಕಗಳು ಕೇವಲ BASICನ್ನು ಅಂತರ್ಗತವಾಗಿಟ್ಟುಕೊಂಡು ಹೊರಬಂದವು, ಡಿಸ್ಕ್‌ ಡ್ರೈವ್‌ನ್ನು ಸೇರಿಸಿದ ನಂತರ ಮಾತ್ರವೇ ಸೇರಿಸುವ ಹಾಗೆ ಹಳೆಯ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಯನ್ನು (ಉದಾಹರಣೆಗೆ TRSDOS ಅಥವಾ NewDOS ಅಥವಾ CP/M) ಅಳವಡಿಸಿಕೊಂಡು ಬಂದವು .

ವಾಣಿಜ್ಯ ಕಾರ್ಯಾಚರಣಾ ವ್ಯವಸ್ಥೆಗಳನ್ನು ಕಂಪೆನಿಗಳ ಯಂತ್ರಾಂಶವನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ರೂಪಿಸಲಾಗುತ್ತಿತ್ತು. ಯಾಂತ್ರಿಕ ತಂತ್ರಾಂಶವಿಲ್ಲದೆಯೇ (ಕಂಪೈಲರ್‌ಗಳು ಮತ್ತು ಕಾರ್ಯಾಚರಣಾ ವ್ಯವಸ್ಥೆಗಳು), ಓರ್ವ ಯಂತ್ರಾಂಶ ತಯಾರಕ ತನ್ನ ಗಣಕವನ್ನು ಮಾರುಕಟ್ಟೆಗೆ ಹೊರಬಿಡಲು ಬಹಳ ಕಷ್ಟಪಡಬೇಕಾಗಿತ್ತು ; ಕಾರ್ಯಾಚರಣಾ ವ್ಯವಸ್ಥೆಗಳ ಲಭ್ಯತೆ ಕೇವಲ ಒಬ್ಬಿಬ್ಬರು ಯಂತ್ರಾಂಶ ವಿತರಕರಿಗೆ ಸೀಮಿತವಾಗಿರದೇ ಇದ್ದುದು - ಉದಾಹರಣೆಗೆ ಡಿಜಿಟಲ್ ರೀಸರ್ಚ್ CP/M ಸೂಕ್ಷ್ಮ ಗಣಕಗಳಿಗೆ, ಮತ್ತು Unix ‌ಬೃಹತ್‌ ಗಣಕಗಳಿಗೆ - ಗಣಕ ಉದ್ಯಮವನ್ನೇ ಮಾರ್ಪಡಿಸಿತು; ನವನವೀನ ಯೋಜನೆಗಳಿರುವ ಯಾರು ಬೇಕಾದರೂ ಯಂತ್ರಾಂಶಗಳನ್ನು ತಯಾರಿಸಬಹುದಾಗಿತ್ತು. ಇವುಗಳಿಗೆ ಮಾನಕಗಳಿಗೆ ಅನುಗುಣವಾಗಿರುವ ತಂತ್ರಾಂಶಗಳನ್ನು ಅಳವಡಿಸಿಕೊಂಡು ಬಳಕೆದಾರರು ಉಪಯೋಗಿಸಬಹುದಿತ್ತು. 1969-70ರಲ್ಲಿ UNIX ಮೊದಲಿಗೆ PDP-7ರಲ್ಲಿ ಪ್ರತ್ಯಕ್ಷವಾಗಿ ನಂತರ PDP-11ಗೂ ಪ್ರವೇಶ ಪಡೆಯಿತು. ಕೂಡಲೇ ಇದು ಪ್ರತಿಬಂಧಕ ಬಹು ಕಾರ್ಯಕಗಳ ಸಹಾಯದಿಂದ ವಿವಿಧ ಪ್ಲಾಟ್‌ಫಾರ್ಮ್‌ಗಳ ನಡುವೆ ಸಮಯ ಹೊಂದಾಣಿಕೆ ನಡೆಸುವ, ಸುಧಾರಿತ ಸ್ಮರಣೆ ನಿರ್ವಹಣೆ, ಸ್ಮರಣೆ ರಕ್ಷಣೆ ಮತ್ತು ಇನ್ನಿತರ ಸುಧಾರಿತ ಸಾಮರ್ಥ್ಯಗಳನ್ನು ಗಳಿಸಿತು. ಒಡನೆಯೇ UNIX ಮೇನ್‌ಫ್ರೇಂಗಳು ಮತ್ತು ಮಿನಿಗಣಕಗಳೆರಡರ ಕಾರ್ಯಾಚರಣಾ ವ್ಯವಸ್ಥೆಯಾಗಿ ಜನಪ್ರಿಯವಾಯಿತು. Unix ಕಾರ್ಯಾಚರಣಾ ವ್ಯವಸ್ಥೆಯನ್ನು Multics, ಡಾಟಾ ಜನರಲ್‌ನ AOS-VS ಹಾಗೂ ಇನ್ನಿತರ ಕಾರ್ಯಾಚರಣಾ ವ್ಯವಸ್ಥೆಗಳಿಂದ ಮತ್ತು IBM ತನ್ನ PC DOSನ 2.0ನೇ ಆವೃತ್ತಿಯಲ್ಲಿ ಸೇರಿಸಿದಂತಹಾ ಉಪಡೈರೆಕ್ಟರಿಗಳ ಕಲ್ಪನೆಯ ಮಾದರಿಯಿಂದ ಪ್ರೇರಿತವಾಗಿ ನಿರ್ಮಿಸಲಾಗಿತ್ತು.

Microsoft ಸಿಯಾಟಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌‌ನಿಂದ QDOS ಎಂಬ CP/M ಸದೃಶ ಸರಳ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಯನ್ನು PC DOS ಎಂಬ ಹೆಸರಿನಲ್ಲಿ ರಚಿಸಿ ಹೊಸ IBM PCನೊಂದಿಗೆ ನೀಡಲು ಕೊಂಡಿತು. IBMನೊಂದಿಗಿನ ಈ ವ್ಯವಹಾರದಲ್ಲಿ ಈ ಕಾರ್ಯಾಚರಣಾ ವ್ಯವಸ್ಥೆಯನ್ನು MS DOS ಎಂಬ ಹೆಸರಿನಲ್ಲಿ IBM-ಏತರ ಗಣಕಗಳಿಗೆ ಕಾರ್ಯಾಚರಣಾ ವ್ಯವಸ್ಥೆಯಾಗಿ ಮಾರುವ ಅವಕಾಶವೂ ಇತ್ತು. Microsoft ಬೆಸ-ಸಂಖ್ಯೆಯ ಪ್ರಮುಖ ಆವೃತ್ತಿಗಳನ್ನು ರಚಿಸಿದರೆ, IBM ಸಮಸಂಖ್ಯೆಯ ಆವೃತ್ತಿಗಳನ್ನು ರಚಿಸುವ ಜವಾಬ್ದಾರಿಯನ್ನು (2.0, 2.1, 4.0, ಇತ್ಯಾದಿ) 6ನೇ ಆವೃತ್ತಿಯವರೆಗೆ ಹೊತ್ತುಕೊಂಡಿತ್ತು. MS-DOS ಮತ್ತು PC-DOS ಮಧ್ಯೆ ಹೆಚ್ಚಿನ ವ್ಯತ್ಯಾಸಗಳಿರಲಿಲ್ಲ, ಉದಾಹರಣೆಗೆ MS-DOS ಜೊತೆಗೆ GW-BASIC ಲಭ್ಯವಿದ್ದುದು (ಏಕೆಂದರೆ IBM PC ROMನಲ್ಲಿದ್ದ ಕೆಲ BASICನ ಕಿರು ಪ್ರೋಗ್ರಾಂಗಳನ್ನು IBMಏತರ ಗಣಕಗಳಲ್ಲಿ ಬಳಸುವುದು ಅಕ್ರಮವಾಗಿತ್ತು). MS-DOS ಮತ್ತು PC-DOSಗಳೆರಡೂ ಶೀಘ್ರವೇ ಸರಳವಾಗಿ "DOS" ಎಂದು ಗುರುತಿಸಿಕೊಳ್ಳತೊಡಗಿದವು (ಈ ಪದವನ್ನು ಪ್ರಸಕ್ತವಾಗಿ ಇನ್ನಿತರ "DOSಗಳನ್ನೂ" ಸೇರಿಸಿ ಹೇಳಲಾಗುತ್ತದೆ ಉದಾಹರಣೆಗೆ DR-DOS ಮತ್ತು FreeDOS, ಆದರೆ ಇದನ್ನು ಕೆಲ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಅಂತರ್ಗತವಾಗಿರುವ ಆದೇಶಪಟ್ಟಿಗಳು ಮತ್ತು COMMAND.COM ನಡುವೆ ಗೊಂದಲ ಬೇಡ). MS-DOSನ್ನು IBMನ PCಗಿಂತ ವಿಭಿನ್ನ ಯಂತ್ರಾಂಶಗಳಿಗೆ ಹೊಂದಿಸಬಹುದಾಗಿದ್ದರೂ, ಯಂತ್ರಾಂಶ ವಿತರಕರು ತಮ್ಮ ಯಂತ್ರಾಂಶಗಳನ್ನು ಆದಷ್ಟು ಮಟ್ಟಿಗೆ IBM PCಗೆ ಮತ್ತು ಅದರ IBM ಉನ್ನತೀಕರಿಸಿದ ಯಂತ್ರಾಂಶಗಳಿಗೆ (PC-XT ಮತ್ತು ನಂತರದ IBM PC-AT ಮಾದರಿಗಳು) ಹೊಂದಿಕೊಳ್ಳುವ ಹಾಗೆ ತಯಾರಿಸುವುದು ಸಹಜವಾಗಿಬಿಟ್ಟಿತು. ಬಹಳಷ್ಟು ಜನಪ್ರಿಯ DOS ಪ್ರೋಗ್ರಾಂಗಳು ಕಾರ್ಯಾಚರಣಾ ವ್ಯವಸ್ಥೆಯನ್ನು ಉಲ್ಲಂಘಿಸಿ ವೇಗವಾಗಿ ಕಾರ್ಯಾಚರಿಸಲು ಯಂತ್ರಾಂಶವನ್ನು ನೇರವಾಗಿ ಸಂಪರ್ಕಿಸುವುದು ಸಹಜವಾಗಿ, ಇತರೆ ತಯಾರಕರಿಗೆ IBM ವಿನ್ಯಾಸಕ್ಕೆ ಹತ್ತಿರವಾಗಿ, ಅದರ ಮಿತಿಗಳನ್ನೂ ಒಳಗೊಂಡಂತೆ ಯಂತ್ರಾಂಶವನ್ನು ನಿರ್ಮಿಸುವುದು ಅನಿವಾರ್ಯವಾಯಿತು. MS-DOSನ ಲಭ್ಯತೆ ಗಣಕ ಉದ್ಯಮದ ಮೇಲೆ ಎರಡು ಪ್ರಮುಖ ಪರಿಣಾಮಗಳನ್ನು ಬೀರಿತು: ಅವೆಂದರೆ ವೇಗ ಅಥವಾ ಸಾಮರ್ಥ್ಯ ಹೆಚ್ಚಿಸುವಿಕೆಗಾಗಿ ಅಥವಾ ನಕಲುತಡೆಗಾಗಿ "ಚೋರ ತಂತ್ರಗಳ" ವಾಣಿಜ್ಯಿಕ ಸ್ವೀಕೃತಿ (ಉದಾಹರಣೆಗೆ ರಾಲ್ಫ್‌ ಬ್ರೌನ್‌ನ ಇಂಟೆರಪ್ಟ್‌ ಪಟ್ಟಿಯಲ್ಲಿ ದಾಖಲಿಸಿದ ಹಾಗೆ, ಮತ್ತು ಹೆಚ್ಚಿನ ಹೊಂದಾಣಿಕೆ ಬಯಸುವ ಮಾರುಕಟ್ಟೆ (ವೇಗ ಮತ್ತು ಅಲಂಕಾರಿಕ ವ್ಯತ್ಯಾಸಗಳು ಮಾತ್ರ ಸ್ವೀಕಾರಾರ್ಹ ನಾವೀನ್ಯತೆಗಳಾಗಿದ್ದವು).

IBM PC ಸಹವರ್ತಿಗಳು 1980ರ ದಶಕದ ಪ್ರಾರಂಭದಲ್ಲಿನ UNIX-ಮಾದರಿ ಕಾರ್ಯಾಚರಣಾ ವ್ಯವಸ್ಥೆ Microsoftನ ಕ್ಸೆನಿಕ್ಸ್‌‌ ಅನ್ನು ಸಹಾ ಚಲಾಯಿಸಬಲ್ಲವಾಗಿದ್ದವು. Xenixನ್ನು ತನ್ನ ಏಕ ಬಳಕೆದಾರ MS-DOS ಕಾರ್ಯಾಚರಣೆಯ ಬದಲಿಗೆ ಬಹು-ಬಳಕೆದಾರ ಕಾರ್ಯಾಚರಣಾ ವ್ಯವಸ್ಥೆಯಾಗಿ ಭರ್ಜರಿ ಮಾರಾಟ ಪ್ರಚಾರ ನಡೆಸಿತು. ಈ ಖಾಸಗಿ ಗಣಕಗಳ CPUಗಳು ಕರ್ನಲ್‌ ಸ್ಮರಣೆಯ ಸುರಕ್ಷತೆ ಅಥವಾ ಉಭಯ ಕ್ರಮದ ಕಾರ್ಯಗಳನ್ನು ಬೆಂಬಲಿಸದೇ ಇದ್ದುದರಿಂದ, Xenix ಸಹಕಾರಿ ಬಹುಕಾರ್ಯಕಗಳ ಮೇಲೆ ಅವಲಂಬಿಸಿದ್ದ ಕಾರಣ, ಸುರಕ್ಷಿತ ಸ್ಮರಣೆ ಇರಲಿಲ್ಲ.

80286-ಆಧರಿತ IBM PC ATಯು ಸುರಕ್ಷಿತ ಸ್ಮರಣೆ ಕ್ರಮ ಹೊಂದಿದ್ದ ಪ್ರಥಮ IBM ಸಹವರ್ತಿ ಖಾಸಗಿ ಗಣಕವಾಗಿದ್ದಿತು. ಆದರೂ ಈ ಕ್ರಮವನ್ನು 286ರಲ್ಲಿ ಕಾರ್ಯಗತಗೊಳಿಸುವಾಗ ತಂತ್ರಾಂಶ ತೊಂದರೆಗಳು ಉಂಟಾಗಿದ್ದರಿಂದ, ಇಂಟೆಲ್‌ 80386ನ ಬಿಡುಗಡೆವರೆಗೆ ಇದು ಹೆಚ್ಚು ಸ್ವೀಕೃತವಾಗಿರಲಿಲ್ಲ. 386ರಿಂದ BSD Unixನ್ನು PCಗೆ ಹೊಂದಿಸುವುದು ಸಾಧ್ಯವಾಯಿತು ಮತ್ತು ಅನೇಕ Unix-ಮಾದರಿಯ ವ್ಯವಸ್ಥೆಗಳು (ಕೆಲವೊಮ್ಮೆ "*ನಿಕ್ಸ್‌‌" ಎಂಬ ಅಂತ್ಯಪ್ರತ್ಯಯದೊಂದಿಗೆ ) Linux ಸೇರಿದಂತೆ ಹೊಮ್ಮಿದವು, ಆದರೆ IBM (ಮತ್ತು, ಮೊದಲಿಗೆ Microsoft) PS/2ನ ಆರಂಭದಿಂದ OS/2ವನ್ನು ಬಳಸಿತು. Microsoft ಅಂತಿಮವಾಗಿ Microsoft Windowsನ್ನು ಮೊದಲಿಗೆ DOSನ ಮೇಲೆ GUI ಆಗಿ, ನಂತರ ತನ್ನದೇ ಆದ ಪ್ರತ್ಯೇಕ ಪೂರ್ಣ ಕಾರ್ಯಾಚರಣಾ ವ್ಯವಸ್ಥೆಯಾಗಿಸಿತು.

ಹಳೆಯ Mac OS, ಮತ್ತು Microsoft Windows 1.0-3.11 ಆವೃತ್ತಿಗಳು ಸಹಕಾರಿ ಬಹುಕಾರ್ಯಕ (Windows 95, 98, ಮತ್ತು MEಗಳು 32-ಬಿಟ್‌ ಕಾರ್ಯಗಳನ್ನು ಚಾಲಿಸುವಾಗ ಮಾತ್ರ ಪ್ರತಿಬಂಧಕ ಬಹುಕಾರ್ಯಕಗಳನ್ನು ಬೆಂಬಲಿಸಿ, ಹಳೆಯ 16-ಬಿಟ್‌ ಕಾರ್ಯಗಳನ್ನು ಸಹಕಾರಿ ಬಹುಕಾರ್ಯಕ ವ್ಯವಸ್ಥೆಯಲ್ಲಿ ಚಾಲಿಸುತ್ತದೆ), ಮತ್ತು ಸುರಕ್ಷಿತ ಸ್ಮರಣೆಯ ಅನುಕೂಲಗಳನ್ನು ಪಡೆಯುವಲ್ಲಿ ಅನೇಕ ಮಿತಿಗಳನ್ನು ಎದುರಿಸುತ್ತಿದ್ದವು. ಈ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಚಾಲಿತ ಕಾರ್ಯಗಳು ಸ್ವಯಂಚಾಲಿತವಾಗಿ ಇಲ್ಲವೇ ಫಂಕ್ಷನ್‌ ಒಂದನ್ನು ಚಾಲಿಸಿ CPU ಸಮಯವನ್ನು ಕಾರ್ಯಯೋಜನಕಾರಕ್ಕೆ ಬಿಟ್ಟುಕೊಡಲೇಬೇಕಿತ್ತು.

ಡಿಜಿಟಲ್‌ ಈಕ್ವಿಪ್‌ಮೆಂಟ್‌ ಕಾರ್ಪೋರೇಷನ್‌VMSನ್ನು ವಿನ್ಯಾಸ ಮಾಡಿದ ತಂಡವೇ, Windows NTಯ ಅಂತರ್ಗತ ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ನ್ನೂ ವಿನ್ಯಾಸ ಮಾಡಿದ್ದರಿಂದ, ಒಂದು UNIX-ಮಾದರಿಯ ಕಾರ್ಯಾಚರಣಾ ವ್ಯವಸ್ಥೆಯ ಹಾಗೆಯೇ ಎಲ್ಲಾ ಬಳಕೆದಾರ ಕಾರ್ಯಗಳಿಗೆ ಸುರಕ್ಷಿತ ಕ್ರಮ ಕಾರ್ಯವನ್ನು ನೀಡುತ್ತದೆ, ಕರ್ನಲ್‌ ಸ್ಮರಣೆ ಸುರಕ್ಷತೆ, ಪ್ರತಿಬಂಧಕ ಬಹು-ಕಾರ್ಯಕ, ಅವಾಸ್ತವ ಕಡತ ವ್ಯವಸ್ಥೆ ಬೆಂಬಲ, ಮತ್ತು ಇನ್ನಿತರ ಅನೇಕ ಸೌಲಭ್ಯಗಳು ಲಭ್ಯವಿವೆ.

ಹಳೆಯ AmigaOS ಮತ್ತು Microsoft Windowsನ Windows 1.0 ನಿಂದ Windows Meವರೆಗಿನ ಆವೃತ್ತಿಗಳು ಚಾಲನಾವಧಿಯಲ್ಲಿ ಪ್ರಕ್ರಿಯೆಗಳಿಂದ ಬಳಕೆಯಾದ ಸಂಪನ್ಮೂಲಗಳ ಸರಿಯಾದ ನಿರ್ವಹಣೆ ಮಾಡುತ್ತಿರಲಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ] ಯಾವುದಾದರೂ ಪ್ರಕ್ರಿಯೆಯನ್ನು ಮಧ್ಯೆ ನಿಲ್ಲಿಸಿದರೆ ಗಣಕವನ್ನು ಪುನರರಾಂಭಿಸುವವರೆಗೆ ಅದು ಬಳಸುತ್ತಿದ್ದ ಸ್ಮರಣೆಯನ್ನು ನಂತರ ಚಾಲನೆಯಾದ ಪ್ರೋಗ್ರಾಂಗಳು ಬಳಸಲಾಗುತ್ತಿರಲಿಲ್ಲ.

ಅನೇಕ ದೊಡ್ಡ ("ಸೂಪರ್‌ಮಿನಿ") ಗಣಕಗಳ ಕಾರ್ಯಾಚರಣಾ ವ್ಯವಸ್ಥೆಯ ಹಾಗೆಯೇ, AmigaOS ಸಹಾ ಪ್ರತಿಬಂಧಕ ಬಹುಕಾರ್ಯಕವನ್ನು ಹೊಂದಿತ್ತು, ಆದರೆ ತಾಂತ್ರಿಕವಾಗಿ ಉತ್ತಮವಿದ್ದರೂ, ಹೆಚ್ಚಿನ ವೇಗದ "ಖಾಸಗೀ" ಗಣಕಗಳು ಮತ್ತು ವರ್ಗಾಯಿಸಲಾಗದ ತಂತ್ರಾಂಶಗಳಿಗೆ ಬದ್ಧರಾದ ಗ್ರಾಹಕರ ಕಾರಣದಿಂದ (ಹಳೆಯ ತಂತ್ರಾಂಶ ಮತ್ತು ವಾಣಿಜ್ಯ ಕಛೇರಿ ದಾಖಲೆಗಳು) ಮಾರುಕಟ್ಟೆಯಲ್ಲಿನ ಸ್ಪರ್ಧೆಯಲ್ಲಿ ಸೋಲು ಕಂಡಿದೆ.

ಮೇನ್‌ಫ್ರೇಂಗಳು

[ಬದಲಾಯಿಸಿ]

1950ರ ದಶಕದುದ್ದಕ್ಕೂ, ಅನೇಕ ಪ್ರಮುಖ ಸೌಲಭ್ಯಗಳನ್ನು ಕಾರ್ಯಾಚರಣಾ ವ್ಯವಸ್ಥೆಗಳ ಕ್ಷೇತ್ರದಲ್ಲಿ ಪ್ರವರ್ತಿಸಲಾಯಿತು. IBM System/360ಯ ಅಭಿವೃದ್ಧಿಯು ಮೇನ್‌ಫ್ರೇಂ ಗಣಕಗಳ ಕುಟುಂಬವನ್ನೇ ಸೃಷ್ಟಿಸಿತು. ಇವು ಸಾಮರ್ಥ್ಯ ಮತ್ತು ಬೆಲೆಸೂಚಿಗಳಲ್ಲಿ ವ್ಯಾಪಕವಾದ ವ್ಯತ್ಯಾಸವನ್ನು ಹೊಂದಿದ್ದರೂ, ಇವೆಲ್ಲಕ್ಕೂ ಏಕೈಕ ಕಾರ್ಯಾಚರಣಾ ವ್ಯವಸ್ಥೆ OS/360ಯನ್ನು ಯೋಜಿಸಲಾಯಿತು (ಪ್ರತಿ ಮಾದರಿಗೂ ತಾತ್ಕಾಲಿಕವಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಅಭಿವೃದ್ಧಿ ಪಡಿಸುವ ಬದಲಾಗಿ). ಒಂದಿಡೀ ಉತ್ಪಾದನಾ ಶ್ರೇಣಿಗೆ ಏಕೈಕ OS ಎಂಬ ನವೀನ ಕಲ್ಪನೆ System/360ಯ ಯಶಸ್ಸಿಗೆ ಕಾರಣವಾಯಿತು. ಒಂದು ರೀತಿಯಲ್ಲಿ IBMನ ಪ್ರಸಕ್ತ ಮೇನ್‌ಫ್ರೇಂ ಕಾರ್ಯಾಚರಣಾ ವ್ಯವಸ್ಥೆಗಳು ಈ ಮೂಲ ವ್ಯವಸ್ಥೆಯ ದೂರದ ಸಂಬಂಧಿಗಳಂತಿವೆ; ಅಲ್ಲದೇ OS/360ಗೆಂದು ರಚಿಸಿದ ಪ್ರೋಗ್ರಾಂಗಳು ಈಗಿನ ಆಧುನಿಕ ಗಣಕಗಳಲ್ಲೂ ಚಾಲನೆಯಾಗಬಲ್ಲವು. 70ರ ದಶಕದ ಮಧ್ಯದಲ್ಲಿ, OS/360ಯ ಸಂಬಂಧಿ MVS ಕಾರ್ಯಾಚರಣಾ ವ್ಯವಸ್ಥೆಯು, ಡಿಸ್ಕ್‌ ನಿವಾಸಿ ದತ್ತಕ್ಕೆ RAMನ್ನು ಪಾರದರ್ಶಕ ತೀವ್ರವೇಗದ ಸ್ಮರಣೆಯನ್ನಾಗಿ ಬಳಸುವುದನ್ನು ಪ್ರಪ್ರಥಮವಾಗಿ [ಸಾಕ್ಷ್ಯಾಧಾರ ಬೇಕಾಗಿದೆ] ಕಾರ್ಯಗತಗೊಳಿಸಿತು.

OS/360ಯು ಇನ್ನೂ ಅನೇಕ ಕಲ್ಪನೆಗಳನ್ನು ಪ್ರವರ್ತಿಸಿದ್ದು, ಕೆಲವು ಸಂದರ್ಭಗಳಲ್ಲಿ, ಅವನ್ನು ಮೇನ್‌ಫ್ರೇಂ ಕ್ಷೇತ್ರದ ಹೊರಗೆ ಗಮನಿಸಲಾಗಿಲ್ಲ. ಉದಾಹರಣೆಗೆ OS/360ರಲ್ಲಿ, ಒಂದು ಪ್ರೋಗ್ರಾಂ ಆರಂಭವಾದಾಗ, ಕಾರ್ಯಾಚರಣಾ ವ್ಯವಸ್ಥೆಯು ಸಂಗ್ರಹಣಾ ಸ್ಥಳ, ಸಂಪನ್ಮೂಲ ಬಂಧಕ, ದತ್ತಾಂಶ ಕಡತಗಳನ್ನೂ ಸೇರಿಸಿ ಎಲ್ಲಾ ಸಂಪನ್ಮೂಲಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾವುದೇ ಕಾರಣದಿಂದ ಪ್ರಕ್ರಿಯೆಯೊಂದನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿದರೆ, ಅದು ಬಳಸುತ್ತಿದ್ದ ಎಲ್ಲಾ ಸಂಪನ್ಮೂಲಗಳನ್ನು ಕಾರ್ಯಾಚರಣಾ ವ್ಯವಸ್ಥೆ ಹಿಂಪಡೆಯುತ್ತದೆ. ಪರ್ಯಾಯವಾದ CP-67 ವ್ಯವಸ್ಥೆಯು ಅವಾಸ್ತವ ಗಣಕಗಳೆಂಬ ಕಲ್ಪನೆಯ ಮೇಲೆ ಆಧಾರಿತವಾಗಿ ಕಾರ್ಯಾಚರಣಾ ವ್ಯವಸ್ಥೆಗಳ ಶ್ರೇಣಿಯನ್ನೇ ಹೊರತಂದಿತು.

ಕಂಟ್ರೋಲ್‌ ಡಾಟಾ ಕಾರ್ಪೋರೇಷನ್‌‌ ಕಂಪೆನಿಯು, ತಂಡ ನಿರ್ವಹಣಾ ಕಾರ್ಯಗಳಿಗೆಂದು SCOPE ಎಂಬ ಕಾರ್ಯಾಚರಣಾ ವ್ಯವಸ್ಥೆಯನ್ನು 1960ರ ದಶಕದಲ್ಲಿ ನಿರ್ಮಿಸಿತು. ಮಿನ್ನೆಸೋಟಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ KRONOS ಮತ್ತು ನಂತರದ NOS ಕಾರ್ಯಾಚರಣಾ ವ್ಯವಸ್ಥೆಗಳನ್ನು 1970ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು. ಇವು ತಂಡ ಮತ್ತು ಸಮಯಹೊಂದಿಕೆ ಎರಡೂ ವ್ಯವಸ್ಥೆಗಳನ್ನು ಏಕಕಾಲಿಕವಾಗಿ ಬೆಂಬಲಿಸಿದ್ದವು. ಅನೇಕ ವಾಣಿಜ್ಯಿಕ ಸಮಯಹಂಚಿಕೆ ವ್ಯವಸ್ಥೆಗಳ ಹಾಗೆ, ಇದರ ಅಂತರ್ವರ್ತನವೂ Dartmouth ‌ BASIC ಕಾರ್ಯಾಚರಣಾ ವ್ಯವಸ್ಥೆಗಳ ವಿಸ್ತರಣೆಯಾಗಿತ್ತು, ಸಮಯಹಂಚಿಕೆ ಮತ್ತು ಪ್ರೋಗ್ರಾಮಿಂಗ್‌ ಭಾಷೆಗಳ ವಿಚಾರದಲ್ಲಿ ಇದೊಂದು ಪ್ರವರ್ತಕ ಹೆಜ್ಜೆಯಾಗಿತ್ತು. 1970ರ ದಶಕದ ಕೊನೆಯಲ್ಲಿ, ಕಂಟ್ರೋಲ್‌ ಡಾಟಾ ಮತ್ತು ಇಲ್ಲಿನಾಯ್ಸ್‌ ವಿಶ್ವವಿದ್ಯಾಲಯಗಳು PLATO ಕಾರ್ಯಾಚರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವು. ಇದು ಪ್ಲಾಸ್ಮಾ ಫಲಕದ ದರ್ಶಕಗಳನ್ನು ಮತ್ತು ಹೆಚ್ಚಿನ ಅಂತರದ ಸಮಯ ಹಂಚಿಕೆ ಜಾಲಗಳನ್ನು ಹೊಂದಿತ್ತು. ರಿಯಲ್‌ಟೈಂ ಚ್ಯಾಟ್‌ ಮತ್ತು ಬಹು-ಬಳಕೆದಾರ ಚಿತ್ರಿಕ ಆಟಗಳನ್ನು ಒಳಗೊಂಡು, Platoವು ತನ್ನ ಕಾಲದ ಗಮನಾರ್ಹ ನಾವೀನ್ಯತೆಯನ್ನು ಹೊಂದಿತ್ತು. ಬರ್ರೋಸ್‌ ಕಾರ್ಪೋರೇಷನ್‌ 1961ರಲ್ಲಿ B5000 ಎಂಬ MCP (ಕೇಂದ್ರ ನಿಯಂತ್ರಣ ಪ್ರೋಗ್ರಾಂ) ಸಹಿತ ಕಾರ್ಯಾಚರಣಾ ವ್ಯವಸ್ಥೆಯನ್ನು ಪರಿಚಯಿಸಿತು. B5000ಯು ಮೇಲ್ಮಟ್ಟದ ಭಾಷೆಗಳ ಬೆಂಬಲದೊಂದಿಗೆ ಯಂತ್ರಭಾಷೆ ಅಥವಾ ಅಸೆಂಬ್ಲರ್‌‌ಗಳ ಬೆಂಬಲವನ್ನು ನೀಡದೇ ವಿನ್ಯಾಸ ಮಾಡಿದ ಸ್ಟ್ಯಾಕ್‌ ಯಂತ್ರವಾಗಿತ್ತು. ವಾಸ್ತವಿಕವಾಗಿ MCPಯು ALGOLನ ಉಪಭಾಷೆಯಾದ ESPOL ಎಂಬ ವಿಶೇಷವಾಗಿ ಮೇಲ್ಮಟ್ಟದ ಭಾಷೆಯಲ್ಲಿ ಬರೆದ ಪ್ರಥಮ OS ಆಗಿತ್ತು. MCPಯು ಪ್ರಥಮವಾಗಿ ವಾಣಿಜ್ಯ ವಾಸ್ತವಿಕ ಸ್ಮರಣೆ ಬಳಕೆ ಸೇರಿದಂತೆ ಇನ್ನೂ ಅನೇಕ ನಾವೀನ್ಯತೆಗಳನ್ನು ಪರಿಚಯಿಸಿತು. AS400ನ ಅಭಿವೃದ್ಧಿ ಪ್ರಗತಿಯಲ್ಲಿದ್ದ ಸಮಯದಲ್ಲಿ, IBM ಬರ್ರೋಸ್‌ಗೆ AS400 ಯಂತ್ರಾಂಶದೊಂದಿಗೆ MCPಯನ್ನು ಬಳಸಲು ಪರವಾನಗಿ ಪಡೆದುಕೊಳ್ಳುವ ಬಗ್ಗೆ ಒಂದು ಪ್ರಸ್ತಾಪ ಮಂಡಿಸಿತು. ಬರ್ರೋಸ್‌ನ ಆಡಳಿತ ಈ ಪ್ರಸ್ತಾಪವನ್ನು ತನ್ನ ಪ್ರಸಕ್ತ ಯಂತ್ರಾಂಶ ಉತ್ಪಾದನೆಯನ್ನು ಸಂರಕ್ಷಿಸುವ ಉದ್ದೇಶದಿಂದಾಗಿ ತಿರಸ್ಕರಿಸಿತು. MCPಯು ಈಗಲೂ ಯೂನಿಸಿಸ್‌ಕ್ಲಿಯರ್‌ಪಾತ್‌/MCP ಶ್ರೇಣಿಯ ಗಣಕಗಳಲ್ಲಿ ಬಳಕೆಯಲ್ಲಿದೆ.

UNIVAC, ಪ್ರಥಮ ವಾಣಿಜ್ಯ ಗಣಕ ತಯಾರಕವು, EXEC ಕಾರ್ಯಾಚರಣಾ ವ್ಯವಸ್ಥೆಗಳ ಸರಣಿಯನ್ನೇ ಹೊರತಂದಿತು. ಹಿಂದಿನ ಎಲ್ಲಾ ಮೇನ್‌ಫ್ರೇಂಗಳ ಹಾಗೆಯೇ, ಇದೂ ಸಹಾ ಆದೇಶ ತಂಡ-ದೃಷ್ಟಿಕೋನದ ವ್ಯವಸ್ಥೆಯಾಗಿದ್ದು ಕಾಂತೀಯ ಡ್ರಂಗಳು, ಡಿಸ್ಕ್‌‌ಗಳು, ಕಾರ್ಡ್‌ ರೀಡರ್‌ಗಳು ಮತ್ತು ಸಾಲು ಮುದ್ರಕಗಳನ್ನು ನಿರ್ವಹಿಸುತ್ತಿತ್ತು. 1970ರ ದಶಕದಲ್ಲಿ, UNIVAC ಬೃಹತ್‌ ಪ್ರಮಾಣದ ಸಮಯ ಹಂಚಿಕೆಯನ್ನು ಬೆಂಬಲಿಸಲು Dartmouth BASIC ವ್ಯವಸ್ಥೆಯ ಮಾದರಿಯಲ್ಲಿ ರಿಯಲ್‌-ಟೈಮ್‌ ಬೇಸಿಕ್‌ (RTB) ವ್ಯವಸ್ಥೆಯನ್ನು ಉತ್ಪಾದಿಸಿತು.

ಜನರಲ್‌ ಎಲೆಕ್ಟ್ರಿಕ್‌ ಮತ್ತು MITಗಳು ಜನರಲ್‌ ಎಲೆಕ್ಟ್ರಿಕ್‌ ವಿವಿಧೋದ್ದೇಶ ಕಾರ್ಯಾಚರಣಾ ಮೇಲ್ವಿಚಾರಕ(GECOS)ವನ್ನು ಅಭಿವೃದ್ಧಿಪಡಿಸಿ, ವರ್ತುಲಾತ್ಮಕ ಸುರಕ್ಷಾ ಸೌಕರ್ಯ ಮಟ್ಟಗಳನ್ನು ಪರಿಚಯಿಸಿದವು. ಹನಿವೆಲ್‌ನಿಂದ ಸ್ವಾಧೀನಗೊಂಡ ನಂತರ ಇದನ್ನು ಜನರಲ್‌ ವಿವಿಧೋದ್ದೇಶ ಕಾರ್ಯಾಚರಣಾ ವ್ಯವಸ್ಥೆ (GCOS) ಎಂದು ಮರುನಾಮಾಂಕಿತಗೊಳಿಸಿತು.

ಡಿಜಿಟಲ್‌ ಈಕ್ವಿಪ್‌ಮೆಂಟ್‌ ಕಾರ್ಪೋರೇಷನ್‌ ಅನೇಕ ಕಾರ್ಯಾಚರಣಾ ವ್ಯವಸ್ಥೆಗಳನ್ನು 36-ಬಿಟ್‌ PDP-10 ದರ್ಜೆ ವ್ಯವಸ್ಥೆಗಳಿಗೆಂದು ಉದ್ದೇಶಿಸಿದ TOPS-10 ಮತ್ತು TOPS-20 ಸಮಯ ಹಂಚಿಕೆ ವ್ಯವಸ್ಥೆಗಳೂ ಸೇರಿದಂತೆ ತನ್ನ ವಿವಿಧ ಗಣಕ ಶ್ರೇಣಿಗಳಿಗೆಂದು ಅಭಿವೃದ್ಧಿಪಡಿಸಿತು. UNIXನ ವ್ಯಾಪಕ ಬಳಕೆಗಿಂತ ಮುನ್ನ ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಹಿಂದಿನ ARPANET ಸಮುದಾಯಗಳಲ್ಲಿ TOPS-10 ಜನಪ್ರಿಯ ವ್ಯವಸ್ಥೆಯಾಗಿತ್ತು.

1960ರ ದಶಕದ ಕೊನೆಯಿಂದ 1970ರ ದಶಕದ ಕೊನೆಯವರೆಗೂ, ಸಮಾನ ಅಥವಾ ಪರಿವರ್ತಿತ ತಂತ್ರಾಂಶಗಳನ್ನು ಒಂದಕ್ಕಿಂತ ಹೆಚ್ಚು ಮಾದರಿಯ ಯಂತ್ರಾಂಶಗಳಲ್ಲಿ ಚಾಲಿತವಾಗುವ ಹಾಗೆ ಅನೇಕ ಯಂತ್ರಾಂಶ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಯಿತು. ಮುಂಚಿನ ವ್ಯವಸ್ಥೆಗಳು ಮೈಕ್ರೋಪ್ರೋಗ್ರಾಮಿಂಗ್‌ನ್ನು ಬಳಸಿ ಒಂದೇ ಶ್ರೇಣಿಯಲ್ಲಿನ ವಿವಿಧ ಯಂತ್ರಾಂಶಗಳಲ್ಲಿ ಒಂದೇ ಮಾದರಿಯ ಆಂತರಿಕ ಯಂತ್ರಶಿಲ್ಪವೆಂಬಂತೆ ಪ್ರತಿಪಾದಿಸಿಕೊಳ್ಳುವಂತೆ ಮಾಡಿಕೊಂಡವು. ವಸ್ತುಶಃ 360/40 ನಂತರದ (360/165 ಮತ್ತು 360/168 ಹೊರತುಪಡಿಸಿ) ಬಹುಪಾಲು 360ಗಳು ಮೈಕ್ರೋಪ್ರೋಗ್ರಾಂ ಮಾಡಿದ ಯಂತ್ರಶಿಲ್ಪಗಳು. ಆದರೆ ಕೆಲ ಕಾಲಾ ನಂತರ ಅನ್ವಯ ಸಹವರ್ತಿತ್ವವನ್ನು ಪಡೆಯುವ ಇತರೆ ಹೆಚ್ಚಿನ ಗಮನಾರ್ಹ ಮಾರ್ಗಗಳು ಕಂಡುಬಂದವು.

1960ರ ದಶಕದಲ್ಲಿ ತಂತ್ರಾಂಶದ ಮೇಲೆ ಭಾರೀ ಬಂಡವಾಳ ಹೂಡಬೇಕಾದ ಕಾರಣ, ನಂತರವೂ ಬಹಳಷ್ಟು ಮೂಲ ಗಣಕ ತಯಾರಕರಿಗೆ ಯಂತ್ರಾಂಶದೊಂದಿಗೆ ಸಹವರ್ತಿ ಕಾರ್ಯಾಚರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿತ್ತು. ಗಣನೀಯವಾದ ಬೆಂಬಲಿತ ಮೇನ್‌ಫ್ರೇಂ ಕಾರ್ಯಾಚರಣಾ ವ್ಯವಸ್ಥೆಗಳೆಂದರೆ:

ಸೂಕ್ಷ್ಮಗಣಕಗಳು

[ಬದಲಾಯಿಸಿ]

ಪ್ರಪ್ರಥಮ ಸೂಕ್ಷ್ಮಗಣಕಗಳು ಮೇನ್‌ಫ್ರೇಂಗಳು ಮತ್ತು ಮಿನಿಗಳಿಗೆಂದು ಉದ್ದೇಶಿಸಿದ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬಳಸುವ ಅಗತ್ಯ ಅಥವಾ ಸಾಮರ್ಥ್ಯವನ್ನು ಹೊಂದಿರಲಿಲ್ಲ; ಲಘುಪ್ರಮಾಣದ ಕಾರ್ಯಾಚರಣಾ ವ್ಯವಸ್ಥೆಗಳನ್ನು ROMನಿಂದ ಲೋಡ್‌ ಆಗುತ್ತಿದ್ದ ಇವನ್ನು ಮಾನಿಟರ್‌ ಗಳೆಂದು ಕರೆಯುತ್ತಿದ್ದರು. ಗಮನೀಯವಾದಂತಹಾ ಒಂದು ಡಿಸ್ಕ್‌‌-ಆಧರಿತ ಕಾರ್ಯಾಚರಣಾ ವ್ಯವಸ್ಥೆ ಎಂದರೆ CP/M. ಅನೇಕ ಹಳೆಯ ಸೂಕ್ಷ್ಮಗಣಕಗಳಲ್ಲಿ ಬೆಂಬಲಿತವಾದ, IBM PCಗೆಂದು ಆಯ್ಕೆ ಮಾಡಿದ ಇದನ್ನು (IBMನ ಆವೃತ್ತಿಯನ್ನು IBM DOS ಅಥವಾ PC DOS ಎಂದು ಕರೆಯಲಾಗುತ್ತಿತ್ತು) ಅನುಕರಿಸಿ ರೂಪಿಸಿದ MS-DOSನ್ನು ಜನಪ್ರಿಯ ಕಾರ್ಯಾಚರಣಾ ವ್ಯವಸ್ಥೆಯಾಗಿಸಿ Microsoft ಇದರ ಉತ್ತರಾಧಿಕಾರಿ ಎನಿಸಿಕೊಂಡಿತು. 80ರ ದಶಕದಲ್ಲಿ Apple Computers‌ Inc.(ಈಗಿನ Apple‌ Inc‌.) ತನ್ನ ಜನಪ್ರಿಯ Apple II ಶ್ರೇಣಿಯ ಸೂಕ್ಷ್ಮಗಣಕಗಳನ್ನು ಸ್ಥಗಿತಗೊಳಿಸಿ, Mac OSಗೆ ನಾವೀನ್ಯತೆ ಹೊಂದಿರುವ ಚಿತ್ರಿಕ ಬಳಕೆದಾರ ಅಂತರ್ವರ್ತನ (GUI) ಅಳವಡಿಸಿ Apple Macintosh ಗಣಕವನ್ನು ಪರಿಚಯಿಸಿತು.

32-ಬಿಟ್‌ ಯಂತ್ರಶಿಲ್ಪ ಮತ್ತು ಪೇಜಿಂಗ್‌ ಸಾಮರ್ಥ್ಯಗಳೊಂದಿಗೆ Intel 80386 CPU ಚಿಪ್‌ನ ಲಭ್ಯತೆ, ಖಾಸಗೀ ಗಣಕಗಳಿಗೆ ಹಿಂದಿನ ಮಿನಿಗಣಕಗಳು ಮತ್ತು ಮೇನ್‌ಫ್ರೇಂಗಳಂತೆ ಬಹುಕಾರ್ಯಕ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬಳಸುವ ಸಾಮರ್ಥ್ಯ ಕಲ್ಪಿಸಿತು. ಡಿಜಿಟಲ್‌ ಈಕ್ವಿಪ್‌ಮೆಂಟ್‌ ಕಾರ್ಪೋರೇಷನ್‌ಗಾಗಿ VMS ಕಾರ್ಯಾಚರಣಾ ವ್ಯವಸ್ಥೆ ಅಭಿವೃದ್ಧಿಪಡಿಸಿದ ಡೇವ್‌ ಕಟ್ಲರ್‌ರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ Microsoft ಈ ಬೆಳವಣಿಗೆಗೆ ತನ್ನ ಪ್ರತಿಕ್ರಿಯೆ ತೋರಿತು. ಆತನನ್ನು ಈಗಿನ Microsoft ಕಾರ್ಯಾಚರಣಾ ವ್ಯವಸ್ಥೆಗಳ ಶ್ರೇಣಿಯ ತಳಹದಿಯಾಗಿರುವ Windows NT ಕಾರ್ಯಾಚರಣಾ ವ್ಯವಸ್ಥೆಯ ಅಭಿವೃದ್ದಿ ತಂಡದ ಮುಖ್ಯಸ್ಥನನ್ನಾಗಿ ಮಾಡಲಾಯಿತು. Apple Inc.ನ ಸಹಸ್ಥಾಪಕ ಸ್ಟೀವ್‌ ಜಾಬ್ಸ್‌, Unix-ಮಾದರಿಯ NEXTSTEP ಕಾರ್ಯಾಚರಣಾ ವ್ಯವಸ್ಥೆಯನ್ನು ರೂಪಿಸಿದ NeXT Computers Inc‌.ನ್ನು ಸ್ಥಾಪಿಸಿದರು. NEXTSTEPನ್ನು ನಂತರ Apple Inc. ಸ್ವಾಧೀನಪಡಿಸಿಕೊಂಡು FreeBSDಯ ಜೊತೆಗೆ ಗಣಕಸಂಕೇತಗಳೊಂದಿಗೆ Mac OS Xನ ಜೀವಾಳವಾಗಿ ಬಳಸಿತು.

Minix ಎಂಬ ಹಳೆಯ PCಗಳಲ್ಲಿ ಚಾಲಿಸಬಹುದಾಗಿದ್ದ ಶೈಕ್ಷಣಿಕ ತರಬೇತಿ ಸಾಧನವು, Unixನ ಇನ್ನೊಂದು ಮರುಕಾರ್ಯರೂಪವಾಗಿ, Linuxನ ನಿರ್ಮಾಣಕ್ಕೆ ಸ್ಪೂರ್ತಿಯಾಯಿತು. GNU Project ಸಾಧನಗಳನ್ನು ಬಳಸಿಕೊಂಡು ಗಣಕ ವಿದ್ಯಾರ್ಥಿ ಲಿನಸ್‌ ಟೋರ್‌ವಾಲ್ಸ್ಸ್‌ ಅಂತರ್ಜಾಲದ ಇತರ ಉತ್ಸಾಹಿ ಸಹಾಯಕರೊಂದಿಗೆ ಕಾರ್ಯಾಚರಣಾ ವ್ಯವಸ್ಥೆಯೊಂದನ್ನು ರೂಪಿಸಿದನು. BSD ಎಂದು ಹೆಸರಾದ Berkeley Software Distributionವು UNIX ಜನ್ಯ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು 1970ರ ದಶಕದಿಂದ ಆರಂಭಿಸಿ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ವಿತರಿಸಲಾಗುತ್ತಿದೆ. ಅನೇಕ ಮಿನಿಗಣಕಗಳಲ್ಲಿ ಬಳಸುವಂತೆ ಪರಿವರ್ತನೆಯಾದ ಕಾರಣ, ಈ ಕಾರ್ಯಾಚರಣ ವ್ಯವಸ್ಥೆಯು PCಗಳಲ್ಲಿ ಪರಿವರ್ತನೆಯಾದುದರಿಂದ ಮತ್ತು ಉಚಿತ ವಿತರಣೆಯ ಕೃಪೆಯಿಂದ, ಪ್ರಮುಖವಾಗಿ FreeBSD, NetBSD ಮತ್ತು OpenBSDಗಳೆಂಬ ಅವತರಣಿಕೆಗಳು ಜನಪ್ರಿಯಗೊಂಡು ಅಂತಿಮವಾಗಿ ತನ್ನದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಪ್ರೋಗ್ರಾಂ ಚಲಾವಣೆ

[ಬದಲಾಯಿಸಿ]

ಕಾರ್ಯಾಚರಣಾ ವ್ಯವಸ್ಥೆಯು ಅನ್ವಯಗಳು ಮತ್ತು ಯಂತ್ರಾಂಶಗಳ ನಡುವೆ ಅಂತರ್ವರ್ತನವಾಗಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ಯಂತ್ರಾಂಶದೊಂದಿಗೆ "ಪರೋಕ್ಷವಾಗಿ" ಸಂವಹನ ನಡೆಸುತ್ತಾರೆ. ಕಾರ್ಯಾಚರಣಾ ವ್ಯವಸ್ಥೆಯು ಅನ್ವಯಗಳ ರಚನೆಗಳಿಗೆ ಅನುಕೂಲ ಮಾಡುವಂತಹಾ ಸೇವೆಗಳ ಗುಂಪಾಗಿದೆ. ಪ್ರೋಗ್ರಾಂ ಒಂದರ ಚಾಲನೆ ಕಾರ್ಯಾಚರಣಾ ವ್ಯವಸ್ಥೆಯಿಂದ ಹೊಸದೊಂದು ಪ್ರಕ್ರಿಯೆಯನ್ನು ಆರಂಭಿಸುವುದರಿಂದ ಆಗುತ್ತದೆ. ರಚಿಸಬೇಕಿರುವ ಪ್ರಕ್ರಿಯೆಗೊಂದು ಆದ್ಯತೆಯನ್ನು ನೀಡಿ ನಂತರ ( ಬಹು-ಕಾರ್ಯಕ ವ್ಯವಸ್ಥೆಗಳಲ್ಲಿ) ಸ್ಮರಣೆ ಮತ್ತು ಇನ್ನಿತರ ಸಂಪನ್ಮೂಲಗಳನ್ನು ನಿಯೋಜಿಸಿ ಕರ್ನಲ್‌ ಪ್ರಕ್ರಿಯೆಯನ್ನು ರಚಿಸುತ್ತದೆ. ನಂತರ ಸ್ಮರಣೆಯಲ್ಲಿ ಪ್ರೋಗ್ರಾಂ ಸಂಕೇತಗಳನ್ನು ಅಳವಡಿಸಿ ಪ್ರೋಗ್ರಾಂನ್ನು ಚಾಲನೆ ಮಾಡುತ್ತದೆ. ಪ್ರೋಗ್ರಾಂ ನಂತರ ಬಳಕೆದಾರ ಮತ್ತು/ಅಥವಾ ಇತರೆ ಸಾಧನಗಳೊಂದಿಗೆ ಸಂವಹನ ನಡೆಸಿ ತನ್ನ ಉದ್ದೇಶಿತ ಕಾರ್ಯವನ್ನು ನಡೆಸುತ್ತದೆ.

ಇಂಟರಪ್ಟ್‌ಗಳು

[ಬದಲಾಯಿಸಿ]

ಇಂಟರಪ್ಟ್‌ಗಳು ಕಾರ್ಯಾಚರಣಾ ವ್ಯವಸ್ಥೆಗಳಿಗೆ ಪ್ರಮುಖವಾದವು, ಏಕೆಂದರೆ ಅವು ಕಾರ್ಯಾಚರಣಾ ವ್ಯವಸ್ಥೆಗೆ ಅದರ ಆವರಣದೊಂದಿಗೆ ಸಂವಹನ ನಡೆಸಲು ದಾರಿ ಮಾಡುತ್ತದೆ. ಇದರ ಬದಲಾಗಿ ಕಾರ್ಯಾಚರಣಾ ವ್ಯವಸ್ಥೆಯು ಕಾರ್ಯ ನಡೆಸಲು ವಿವಿಧ ಆದಾನ ಮೂಲಗಳನ್ನು ನಡೆಯಬಹುದಾದ ವಿದ್ಯಮಾನಗಳಿಗೆಂದು "ಕಟ್ಟೆಚ್ಚರದಿಂದ ಗಮನಿಸುವುದು"(ಪಾಲಿಂಗ್‌) CPU ಸಂಪನ್ಮೂಲಗಳ ಅಪಬಳಕೆಯೇ ಸರಿ. ಇಂಟರಪ್ಟ್‌-ಆಧರಿತ ಪ್ರೋಗ್ರಾಮಿಂಗ್‌ ಅನ್ನು ಬಹಳಷ್ಟು CPUಗಳು ನೇರವಾಗಿ ಬೆಂಬಲಿಸುತ್ತವೆ. ಇಂಟರಪ್ಟ್‌ಗಳ ಸಹಾಯದಿಂದ ಗಣಕವು ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ನಿಗದಿತ ಸಂಕೇತವನ್ನು ಕಾರ್ಯಗತಗೊಳಿಸುವುದು ಸಾಧ್ಯ. ತೀರಾ ಸರಳವಾದ ಗಣಕಗಳು ಸಹಾ ಯಂತ್ರಾಂಶ ಇಂಟರಪ್ಟ್‌ಗಳನ್ನು ಬೆಂಬಲಿಸುವುದಲ್ಲದೇ, ಪ್ರೋಗ್ರಾಮರ್‌ಗಳಿಗೆ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡಲು ನಿಗದಿತ ಸಂಕೇತವನ್ನು ಸೂಚಿಸಲು ಅವಕಾಶ ಕೊಡುತ್ತವೆ.

ಒಂದು ಇಂಟರಪ್ಟ್‌ನ್ನು ಪಡೆದಾಗ ಗಣಕದ ಯಂತ್ರಾಂಶವು ಸ್ವಯಂಚಾಲಿತವಾಗಿ ಪ್ರಸಕ್ತ ಚಾಲನೆಯಲ್ಲಿರುವ ಪ್ರೋಗ್ರಾಂನ್ನು ಸ್ಥಗಿತಗೊಳಿಸಿ, ಅದರ ಪ್ರಸಕ್ತ ಸ್ಥಿತಿಯನ್ನು ಉಳಿಸಿ, ಇಂಟರಪ್ಟ್‌ನೊಂದಿಗೆ ಸಂಬಂಧಿಸಿದ ಗಣಕ ಸಂಕೇತವನ್ನು ಚಾಲಿಸುತ್ತದೆ ; ಇದು ದೂರವಾಣಿ ಕರೆ ಬಂದಾಗ ಪುಸ್ತಕದಲ್ಲಿ ಬುಕ್‌ಮಾರ್ಕ್‌ ಇಡುವುದಕ್ಕೆ ಸಮಾನವಾಗಿದೆ. ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ, ಇಂಟರಪ್ಟ್‌ಗಳು ಕಾರ್ಯಾಚರಣಾ ವ್ಯವಸ್ಥೆಗಳ ಕರ್ನಲ್‌ನಿಂದ ನಿರ್ವಹಿಸಲ್ಪಡುತ್ತದೆ. ಗಣಕದ ಯಂತ್ರಾಂಶ ಅಥವಾ ಚಾಲಿತ ಪ್ರೋಗ್ರಾಂಗಳಿಂದ ಸಹಾ ಇಂಟರಪ್ಟ್‌ಗಳು ಬರಬಹುದಾದ ಸಾಧ್ಯತೆ ಇರುತ್ತದೆ.

ಯಂತ್ರಾಂಶ ಸಾಧನವು ಒಂದು ಇಂಟರಪ್ಟ್‌ನ್ನು ಪ್ರಚೋದಿಸಿದಾಗ ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ ಪ್ರಸಕ್ತ ವಿದ್ಯಮಾನಕ್ಕೆ ಹೇಗೆ ಪ್ರತಿಕ್ರಿಯೆ ಕೊಡುವುದೆಂದು ನಿರ್ಧರಿಸುತ್ತದೆ, ಇದು ಸಾಮಾನ್ಯವಾಗಿ ಪ್ರಕ್ರಿಯಾತ್ಮಕ ಸಂಕೇತವನ್ನು ಚಾಲಿಸುವುದಾಗಿರುತ್ತದೆ. ಸಂಕೇತದ ಎಷ್ಟು ಭಾಗ ಚಾಲಿತವಾಗುತ್ತದೆ ಎಂಬುದು ಇಂಟರಪ್ಟ್‌ನ ಆದ್ಯತೆಯ ಮೇಲೆ ನಿರ್ಧರಿತವಾಗುತ್ತದೆ (ಉದಾಹರಣೆಗೆ: ವ್ಯಕ್ತಿಯು ದೂರವಾಣಿ ಕರೆಗಿಂತ ಬೆಂಕಿಯ ಎಚ್ಚರಿಕೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾನೆ). ಯಂತ್ರಾಂಶ ಇಂಟರಪ್ಟ್‌ಗಳ ಸಂಸ್ಕರಣವನ್ನು ಸಾಧನ ಡ್ರೈವರ್‌ಗಳು ಎಂದು ಕರೆಯಲಾಗುವ ತಂತ್ರಾಂಶಗಳಿಗೆ ನಿಯೋಜಿಸಲಾಗಿರುತ್ತದೆ. ಇವುಗಳು ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ನ ಭಾಗ, ಇನ್ನೊಂದು ಪ್ರೋಗ್ರಾಂ ಇಲ್ಲವೇ ಎರಡೂ ಆಗಿರಬಹುದು. ನಂತರ ಸಾಧನ ಡ್ರೈವರ್‌ಗಳು ಮಾಹಿತಿಯನ್ನು ಪ್ರೋಗ್ರಾಂಗಳಿಗೆ ವಿವಿಧ ರೀತಿಯಲ್ಲಿ ತಿಳಿಯಪಡಿಸುತ್ತದೆ.

ಒಂದು ಪ್ರೋಗ್ರಾಂ ಸಹಾ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಇಂಟರಪ್ಟ್‌ ಒಂದನ್ನು ಪ್ರಚೋದಿಸಬಹುದು. ಯಾವುದೇ ಪ್ರೋಗ್ರಾಂ ಯಂತ್ರಾಂಶವನ್ನು ಬಳಸಲಿಚ್ಚಿಸಿದರೆ ಉದಾಹರಣೆಗೆ, ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ನ ಕಾರ್ಯಾಚರಣೆಯನ್ನು ತಡೆಹಿಡಿದು ಯಂತ್ರಾಂಶವನ್ನು ಬಳಸುತ್ತದೆ, ಇದರಿಂದ ಬಳಕೆಯ ನಂತರ ನಿಯಂತ್ರಣ ಕರ್ನಲ್‌ಗೆ ಮರಳುವಂತಾಗುತ್ತದೆ. ನಂತರ ಕರ್ನಲ್‌ ಕೋರಿಕೆಯನ್ನು ಸಂಸ್ಕರಿಸುತ್ತದೆ. ಯಾವುದಾದರೂ ಪ್ರೋಗ್ರಾಂ ಹೆಚ್ಚಿನ ಸಂಪನ್ಮೂಲಗಳನ್ನು ಬಯಸಿದ್ದರೆ (ಅಥವಾ ಸಂಪನ್ಮೂಲಗಳನ್ನು ತೊರೆಯಲು ಬಯಸಿದರೆ) ನಿದರ್ಶನೆಗಾಗಿ ಸ್ಮರಣೆ ಬೇಕಾಗಿದ್ದರೆ, ಕರ್ನಲ್‌ನ ಗಮನ ಸೆಳೆಯಲು ಇಂಟರಪ್ಟ್‌ನ್ನು ಪ್ರಚೋದಿಸುತ್ತದೆ.

ಸಂರಕ್ಷಿತ ವಿಧಾನ ಮತ್ತು ಮೇಲ್ವಿಚಾರಣಾ ವಿಧಾನ

[ಬದಲಾಯಿಸಿ]

ಆಧುನಿಕ CPUಗಳು ಉಭಯ ವಿಧಾನ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತವೆ. ಈ ಸಾಮರ್ಥ್ಯವಿರುವ CPUಗಳು ಎರಡು ವಿಧಾನಗಳನ್ನು ಬಳಸುತ್ತವೆ: ಸಂರಕ್ಷಿತ ವಿಧಾನ ಮತ್ತು ಮೇಲ್ವಿಚಾರಕ ವಿಧಾನ, ಇದು ಕೇವಲ ನಿರ್ದಿಷ್ಟ CPU ಕ್ರಿಯೆಗಳನ್ನು ನಿಯಂತ್ರಿಸಲು ಸಾಧ್ಯ ಮತ್ತು ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ ನಿಂದ ಮಾತ್ರವೇ ಇದನ್ನು ಆಚರಿಸಲು ಸಾಧ್ಯ. ಇಲ್ಲಿ ಸಂರಕ್ಷಿತ ವಿಧಾನವು, ನಿರ್ದಿಷ್ಟವಾಗಿ 80286 (Intelನ x86 16-ಬಿಟ್‌ ಸೂಕ್ಷ್ಮ ಸಂಸ್ಕಾರಕ) CPU ವೈಶಿಷ್ಟ್ಯಕ್ಕೆ ಮಾತ್ರ ಸಂಬಂಧಿಸಿದುದಲ್ಲವಾದರೂ ಅವು ಪರಸ್ಪರ ಹೋಲುತ್ತವೆ. CPUಗಳು 80386ಅವಾಸ್ತವ 8086 ವಿಧಾನ (Intelನ x86 32-ಬಿಟ್‌ ಸೂಕ್ಷ್ಮ ಸಂಸ್ಕಾರಕ ಅಥವಾ i386)ನಂತಹ, 80286ರ ಸಂರಕ್ಷಿತ ವಿಧಾನವನ್ನು ಹೋಲುವ ಇನ್ನೂ ಅನೇಕ ವಿಧಾನಗಳನ್ನು ಹೊಂದಿರಬಹುದು.

ಕಾರ್ಯಾಚರಣಾ ವ್ಯವಸ್ಥೆ ಸಿದ್ದಾಂತದ ಪ್ರಕಾರ ಇಲ್ಲಿ ಇದನ್ನು ಸಾರ್ವತ್ರಿಕವಾಗಿ ತಮ್ಮ ಮೂಲಕ ಚಾಲಿತವಾಗುವ ಪ್ರೋಗ್ರಾಂಗಳ ಸಾಮರ್ಥ್ಯಗಳನ್ನು ನಿಯಂತ್ರಿಸಬಲ್ಲಂತಹಾ ಎಲ್ಲಾ ವಿಧಾನಗಳನ್ನು ಸೂಚಿಸಲು ಬಳಸಲಾಗಿದೆ. ಮೇಲ್ವಿಚಾರಣಾ ವಿಧಾನದಲ್ಲಿ ಚಾಲಿತವಾಗಿರುವ ಪ್ರೋಗ್ರಾಂನಿಂದ ನಿರ್ಧರಿತವಾಗಿ, ಯಂತ್ರಾಂಶಕ್ಕೆ ನಿಯಂತ್ರಿತ ಪ್ರವೇಶಾನುಮತಿ ಮತ್ತು ಅವಾಸ್ತವ ಸ್ಮರಣೆ ಸ್ಥಳ ನಿರ್ದೇಶನ. ಸೂಪರ್‌ಗಣಕ‌ಗಳು, ಮಿನಿಗಣಕಗಳು, ಮತ್ತು ಮೇನ್‌ಫ್ರೇಂಗಳಲ್ಲಿಯೂ ಸಹಾ ಇದೇ ಮಾದರಿಯ ವಿಧಾನಗಳಿದ್ದವು. UNIX-ಮಾದರಿ ಬಹು-ಬಳಕೆದಾರ ಕಾರ್ಯಾಚರಣಾ ವ್ಯವಸ್ಥೆಗಳನ್ನು ಪೂರ್ಣಪ್ರಮಾಣದಲ್ಲಿ ಬೆಂಬಲಿಸಲು ಇವು ಅವಶ್ಯಕವಾಗಿದ್ದವು.

ಗಣಕವು ಮೊದಲಿಗೆ ಆರಂಭವಾದಾಗ, ಸ್ವಯಂಚಾಲಿತವಾಗಿ ಮೇಲ್ವಿಚಾರಣಾ ವಿಧಾನದಲ್ಲೇ ಕಾರ್ಯಾರಂಭಿಸಿರುತ್ತದೆ. ಗಣಕದಲ್ಲಿ ಪ್ರಪ್ರಥಮವಾಗಿ ಆರಂಭವಾಗುವ ಕೆಲ ಪ್ರೋಗ್ರಾಂಗಳು, BIOS, ಬೂಟ್‌ಲೋಡರ್‌ ಮತ್ತು ಕಾರ್ಯಾಚರಣಾ ವ್ಯವಸ್ಥೆಗಳು ಯಂತ್ರಾಂಶದ ಮೇಲೆ ಅನಿಯಂತ್ರಿತ ಪ್ರವೇಶಾನುಮತಿ ಹೊಂದಿವೆ, ಇದು ಏಕೆಂದರೆ ಸುರಕ್ಷಿತ ಆವರಣವನ್ನು ರಚಿಸುವುದು ಕೇವಲ ಅನಿಯಂತ್ರಿತ ಸನ್ನಿವೇಶದಲ್ಲಿ ಮಾತ್ರ ಸಾಧ್ಯ. ಕಾರ್ಯಾಚರಣಾ ವ್ಯವಸ್ಥೆಯು ನಿಯಂತ್ರಣವನ್ನು ಇನ್ನೊಂದು ಪ್ರೋಗ್ರಾಂಗೆ ಹಸ್ತಾಂತರಿಸಿದಾಗ, ಅದು CPUವನ್ನು ಸಂರಕ್ಷಿತ ವಿಧಾನದಲ್ಲಿಟ್ಟಿರುತ್ತದೆ.

ಸಂರಕ್ಷಿತ ವಿಧಾನದಲ್ಲಿ, ಪ್ರೋಗ್ರಾಂಗಳು CPUನ ಪರಿಮಿತ ಸೂಚನೆಗಳನ್ನು ಮಾತ್ರ ಬಳಸಬಲ್ಲವು. ಓರ್ವ ಬಳಕೆದಾರ ಪ್ರೋಗ್ರಾಂ ಸಂರಕ್ಷಿತ ವಿಧಾನದಿಂದ ಕೇವಲ ಇಂಟರಪ್ಟ್‌ನ್ನು ಪ್ರಚೋದಿಸಿ ಮಾತ್ರವೇ ಹೊರನಡೆಯಬಹುದು, ಇದು ನಿಯಂತ್ರಣವನ್ನು ಕರ್ನಲ್‌ ಗೆ ಮರಳಿಸುತ್ತದೆ. ಇದರಿಂದಾಗಿ ಕಾರ್ಯಾಚರಣಾ ವ್ಯವಸ್ಥೆಯು ಯಂತ್ರಾಂಶ ಮತ್ತು ಸ್ಮರಣೆಗಳ ಮೇಲಿನ ಪ್ರವೇಶಾನುಮತಿಗಳ ಮೇಲಿನ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ.

"ಸಂರಕ್ಷಿತ ವಿಧಾನ ಸಂಪನ್ಮೂಲ"ವನ್ನು ಒಂದು ಅಥವಾ ಹೆಚ್ಚಿನ CPU ರೆಜಿಸ್ಟರ್‌ಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಇವು ಚಾಲನೆಯಲ್ಲಿರುವ ಪ್ರೋಗ್ರಾಂ ಬದಲಾಯಿಸಲಾಗದಂತಹಾ ಮಾಹಿತಿಯನ್ನು ಹೊಂದಿರುತ್ತವೆ. ಈ ಸಂಪನ್ಮೂಲಗಳನ್ನು ಮಾರ್ಪಾಟು ಮಾಡಲು ಪ್ರಯತ್ನಿಸಿದರೆ ಸಾಧಾರಣವಾಗಿ ಮೇಲ್ವಿಚಾರಣಾ ವಿಧಾನಕ್ಕೆ ಬದಲಾಗುತ್ತದೆ. ಈ ವಿಧಾನದಲ್ಲಿ ಕಾರ್ಯಾಚರಣಾ ವ್ಯವಸ್ಥೆಯು ಅನುಮತಿ ಇಲ್ಲದ ಕಾರ್ಯಗಳನ್ನು ಮಾಡಲು ಯತ್ನಿಸಿದ ಪ್ರೋಗ್ರಾಂನ್ನು ನಿರ್ವಹಿಸುವುದಕ್ಕೆ ಸಾಧ್ಯವಿರುತ್ತದೆ (ಉದಾಹರಣೆಗೆ, ಪ್ರೋಗ್ರಾಂನ್ನು ನಿಲ್ಲಿಸುವುದು).

ಸ್ಮರಣೆ ನಿರ್ವಹಣೆ

[ಬದಲಾಯಿಸಿ]

ಇತರೆ ಜವಾಬ್ದಾರಿಗಳೊಂದಿಗೆ ಮಲ್ಟಿಪ್ರೋಗ್ರಾಮಿಂಗ್‌ ಕಾರ್ಯಾಚರಣಾ ವ್ಯವಸ್ಥೆಯಕರ್ನಲ್‌ ಎಲ್ಲಾ ಪ್ರೋಗ್ರಾಂಗಳು ಬಳಸುತ್ತಿರುವ ಗಣಕ ಸ್ಮರಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಹೊಂದಿದೆ. ಇದರಿಂದ ಒಂದು ಪ್ರೋಗ್ರಾಂನ ಬಳಕೆಯಲ್ಲಿರುವ ಸ್ಮರಣೆಯಲ್ಲಿ ಮತ್ತೊಂದು ಪ್ರೋಗ್ರಾಂ ಹಸ್ತಕ್ಷೇಪ ನಡೆಸುವ ಸಾಧ್ಯತೆ ಇರುವುದಿಲ್ಲ. ಪ್ರೋಗ್ರಾಂಗಳು ಸಮಯ ಹಂಚಿಕೆ ಮಾಡಿಕೊಳ್ಳುವುದರಿಂದ ಪ್ರತಿ ಪ್ರೋಗ್ರಾಂ ಸಹಾ ಪ್ರತ್ಯೇಕವಾಗಿ ಸ್ಮರಣೆಯನ್ನು ಸಂಪರ್ಕಿಸುವ ಸೌಲಭ್ಯವಿರಬೇಕಾಗುತ್ತದೆ.

ಅನೇಕ ಹಳೆಯ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಬಳಸುತ್ತಿದ್ದ ಸಹಕಾರಿ ಸ್ಮರಣೆ ನಿರ್ವಹಣೆಯಲ್ಲಿ ಎಲ್ಲಾ ಪ್ರೋಗ್ರಾಂಗಳು ಕರ್ನಲ್‌ ನ ಸ್ಮರಣೆ ನಿರ್ವಾಹಕದ ಸಹಾಯದಿಂದ ಐಚ್ಛಿಕ ಸ್ಮರಣೆ ಬಳಕೆಯನ್ನು ಮಾಡುತ್ತಿದ್ದು, ತಮಗೆ ಹಂಚಿದ ಸ್ಮರಣೆಗಿಂತ ಹೆಚ್ಚನ್ನು ಬಳಸುತ್ತಿರಲಿಲ್ಲ ಎಂದು ಭಾವಿಸಿರಲಾಗುತ್ತಿತ್ತು. ಸ್ಮರಣೆ ನಿರ್ವಹಣೆಯ ವ್ಯವಸ್ಥೆಯನ್ನು ಆ ನಂತರ ಎಲ್ಲೂ ಬಳಸುತ್ತಿರಲಿಲ್ಲ, ಇದಕ್ಕೆ ಪ್ರಮುಖ ಕಾರಣವೆಂದರೆ ಪ್ರೋಗ್ರಾಂಗಳಲ್ಲಿದ್ದ ಬಗ್‌ಗಳಿಂದ ಅವು ತಮಗೆ ಹಂಚಲಾಗಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸ್ಮರಣೆಯನ್ನು ಬಳಸುತ್ತಿದ್ದವು. ಇದರಿಂದಾಗಿ ಚಾಲನೆಯಲ್ಲಿದ್ದ ಪ್ರೋಗ್ರಾಂ ವಿಫಲವಾದರೆ ಇತರೆ ಒಂದು ಅಥವಾ ಹೆಚ್ಚಿನ ಪ್ರೋಗ್ರಾಂಗಳು ಬಳಸುತ್ತಿದ್ದ ಸ್ಮರಣೆಯ ಮೇಲೆ ಪ್ರಭಾವ ಬೀರುತ್ತಿತ್ತು ಅಥವಾ ಮಾರ್ಪಡಿಸುತ್ತಿತ್ತು. ಹಾನಿಕರ ಪ್ರೋಗ್ರಾಂಗಳು, ಅಥವಾ ವೈರಸ್‌ಗಳು ಉದ್ದೇಶಪೂರ್ವಕವಾಗಿಯೇ ಇನ್ನೊಂದು ಪ್ರೋಗ್ರಾಂನ ಸ್ಮರಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಹುದು ಅಥವಾ ಕಾರ್ಯಾಚರಣಾ ವ್ಯವಸ್ಥೆಯ ಕಾರ್ಯಗಳ ಮೇಲೆಯೇ ತನ್ನ ಪ್ರಭಾವ ಬೀರಲು ಪ್ರಯತ್ನಿಸಬಹುದಾಗಿತ್ತು. ಸಹಕಾರಿ ಸ್ಮರಣೆ ನಿರ್ವಹಣೆಯಲ್ಲಿ ಕೇವಲ ಒಂದು ಅನುಚಿತವಾಗಿ ವರ್ತಿಸುವ ಪ್ರೋಗ್ರಾಂ ಪೂರ್ಣ ಗಣಕವನ್ನೇ ಹಾಳುಗೆಡವಬಲ್ಲದು.

ಸ್ಮರಣೆ ಸುರಕ್ಷತೆಯ ಸಹಾಯದಿಂದ ಕರ್ನಲ್‌ ಗಣಕದ ಸ್ಮರಣೆಗೆ ಪ್ರಕ್ರಿಯೆ ಪ್ರವೇಶವನ್ನು ನಿಯಂತ್ರಿಸುತ್ತದೆ. ಸ್ಮರಣೆ ವಿಭಜನೆ ಮತ್ತು ಪೇಜಿಂಗ್‌ಗಳೂ ಸೇರಿದಂತೆ ಸ್ಮರಣೆ ಸುರಕ್ಷತೆಗೆ ಅನೇಕ ವಿಧಾನಗಳಿವೆ. ಎಲ್ಲಾ ವಿಧಾನಗಳಿಗೆ ಕೆಲ ಹಂತದ ಯಂತ್ರಾಂಶ ಬೆಂಬಲ ಬೇಕಿರುತ್ತದೆ. (ಉದಾಹರಣೆಗೆ 80286 MMU) ಆದರೆ ಇದು ಎಲ್ಲಾ ಗಣಕಗಳಲ್ಲಿರಲೇಬೇಕೆಂದಿಲ್ಲ.

ವಿಭಜನೆ ಮತ್ತು ಪೇಜಿಂಗ್‌ ಎರಡರಲ್ಲೂ, ಕೆಲವು ಸಂರಕ್ಷಿತ ವಿಧಾನ ರೆಜಿಸ್ಟರ್‌ಗಳು CPUಗೆ ಸ್ಮರಣೆಯ ಯಾವ ವಿಳಾಸಕ್ಕೆ ಚಾಲಿತ ಪ್ರೋಗ್ರಾಂಗೆ ಪ್ರವೇಶ ನೀಡಬೇಕೆಂದು ಸೂಚಿಸುತ್ತವೆ. ಇನ್ನಿತರ ವಿಳಾಸಗಳಿಗೆ ಪ್ರಯತ್ನಿಸಿದಾಗ ಅದು ಪ್ರಚೋದನೆ ಇಂಟರಪ್ಟ್‌ ಒಂದನ್ನು ಪ್ರಚೋದಿಸುತ್ತದೆ. ಇದರಿಂದಾಗಿ CPU, ಕರ್ನಲ್‌ನ ಮೇಲ್ವಿಚಾರಣೆಯಲ್ಲಿ ಮೇಲ್ವಿಚಾರಣಾ ವಿಧಾನಕ್ಕೆ ಮರಳಿ ಹೋಗುವಂತಾಗುತ್ತದೆ. ಇದನ್ನು ವಿಭಜನೆಯ ಉಲ್ಲಂಘನ ಅಥವಾ ಸಂಕ್ಷೇಪವಾಗಿ Seg-V ಎಂದು ಕರೆಯಲಾಗುತ್ತದೆ. ಇಂತಹಾ ಕಾರ್ಯಕ್ಕೆ ಅರ್ಥವತ್ತಾದ ಫಲಿತಾಂಶವನ್ನು ನೀಡಲು ಸಾಧ್ಯವಾಗದಿರುವುದಕ್ಕೆ ಮತ್ತು ಇದು ಸಾಧಾರಣವಾಗಿ ಹಾನಿಕಾರಿ ಪ್ರೋಗ್ರಾಂಗಳ ಲಕ್ಷಣವಾಗಿರುವುದರಿಂದ, ಕರ್ನಲ್‌ ಸಾಮಾನ್ಯವಾಗಿ ಸಂಬಂಧಪಟ್ಟ ಪ್ರೋಗ್ರಾಂನ್ನು ನಿಷ್ಕ್ರಿಯಗೊಳಿಸಿ ದೋಷದ ಬಗ್ಗೆ ವರದಿ ನೀಡುವುದು.

Windows 3.1-Me ಕೆಲ ಮಟ್ಟದ ಸ್ಮರಣೆ ಸಂರಕ್ಷಣೆಯನ್ನು ಹೊಂದಿದ್ದವು, ಆದರೆ ಪ್ರೋಗ್ರಾಂಗಳು ಇದರಿಂದ ಸುಲಭವಾಗಿ ನುಣುಚಿಕೊಳ್ಳುತ್ತಿದ್ದವು. Windows 9x ಸರಣಿಯಲ್ಲಿ ಎಲ್ಲಾ MS-DOS ಅನ್ವಯಗಳು ಮೇಲ್ವಿಚಾರಣಾ ವಿಧಾನದಲ್ಲಿ ಚಾಲಿತವಾಗುತ್ತಿದ್ದವು. ಇದು ಅವುಗಳಿಗೆ ಬಹುಮಟ್ಟಿಗೆ ಗಣಕದ ಮೇಲಿನ ಹೆಚ್ಚಿನ ನಿಯಂತ್ರಣ ನೀಡುತ್ತಿತ್ತು. ಸಾಧಾರಣ ಸುರಕ್ಷತಾ ತೊಂದರೆಯು ವಿಭಜನಾತ್ಮಕ ಉಲ್ಲಂಘನೆಯನ್ನು ಸೂಚಿಸುತ್ತಿತ್ತು. ಇದರಿಂದಾಗಿ ಗಣಕವು ಆಗಾಗ್ಗೆ ಹಾಳಾಗುತ್ತಿತ್ತು.

ಹೆಚ್ಚಿನ Linux ಗಣಕಗಳಲ್ಲಿ, ಕಾರ್ಯಾಚರಣಾ ವ್ಯವಸ್ಥೆಯು ಸ್ಥಾಪಿತವಾಗುವ ಸಮಯದಲ್ಲೇ, ಹಾರ್ಡ್‌ ಡಿಸ್ಕ್‌ನ ಭಾಗವನ್ನು ಅವಾಸ್ತವ ಸ್ಮರಣೆಗೆಂದು ಕಾದಿರಿಸಲಾಗಿರುತ್ತದೆ. ಈ ಭಾಗವನ್ನು ಸ್ವಾಪ್‌ ಸ್ಥಳವೆಂದು ಹೇಳಲಾಗುತ್ತದೆ. Windows ಗಣಕಗಳು ಸ್ವಾಪ್‌ ಕಡತವನ್ನು ವಿಭಾಗಗಳ ಬದಲಾಗಿ ಬಳಸುತ್ತವೆ.

ಅವಾಸ್ತವ ಸ್ಮರಣೆ

[ಬದಲಾಯಿಸಿ]

ಅವಾಸ್ತವ ಸ್ಮರಣೆ ಸ್ಥಳನಿರ್ದೇಶನದ ಬಳಕೆ (ಉದಾಹರಣೆಗೆ ಪೇಜಿಂಗ್‌ ಅಥವಾ ವಿಭಜನೆ )ಯಲ್ಲಿ ಯಾವುದೇ ಸಮಯದಲ್ಲಿ ಪ್ರತಿ ಪ್ರೋಗ್ರಾಂ ಎಷ್ಟು ಸ್ಮರಣೆ ಬಳಸಬಹುದು ಎಂಬುದನ್ನು ಕರ್ನಲ್‌ ನಿರ್ಧರಿಸಲು ಸಾಧ್ಯವಿದೆ. ಇದರಿಂದಾಗಿ ಕಾರ್ಯಾಚರಣಾ ವ್ಯವಸ್ಥೆಯು ಅದೇ ಸ್ಮರಣೆ ಸ್ಥಳಗಳನ್ನು ಬೇರೆ ಬೇರೆ ಕಾರ್ಯಗಳಿಗೆ ನಿಯೋಜಿಸಬಹುದಾಗಿದೆ.

ಯಾವುದೇ ಪ್ರೋಗ್ರಾಂ ತನಗೆ ಹಂಚಿಕೆಯಾಗದ ಸ್ಮರಣೆಯನ್ನು ಬಳಸಲು ಪ್ರಯತ್ನಿಸಿದಲ್ಲಿ, ಕರ್ನಲ್‌ ಪ್ರೋಗ್ರಾಂ ತನ್ನ ಹಂಚಿಕೆಯಾದ ಸ್ಮರಣೆಗಿಂತ ಹೆಚ್ಚಿನ ಸ್ಮರಣೆ ಬಳಸಿದರೆ ಹೇಗೆ ಕರ್ನಲ್‌ ಇಂಟರಪ್ಟ್‌ ಅನ್ನು ಪ್ರಚೋದಿಸುತ್ತಿರುತ್ತಿತ್ತೋ ಅದೇ ರೀತಿ ಪ್ರಚೋದಿಸುತ್ತದೆ. (ಸ್ಮರಣೆ ನಿರ್ವಹಣೆಯ ವಿಭಾಗವನ್ನು ನೋಡಿ.) UNIXನಲ್ಲಿ ಈ ರೀತಿಯ ಇಂಟರಪ್ಟ್‌ ಅನ್ನು ಪೇಜ್‌ ಫಾಲ್ಟ್‌ ಎನ್ನುತ್ತಾರೆ.

ಕರ್ನಲ್‌ ಪೇಜ್‌ ಫಾಲ್ಟ್‌ನ್ನು ಪತ್ತೆ ಮಾಡಿದಾಗ ಸಾಮಾನ್ಯವಾಗಿ ಪ್ರಚೋದನೆ ನೀಡಿದ ಪ್ರೋಗ್ರಾಂನ ಅವಾಸ್ತವ ಸ್ಮರಣೆ ಭಾಗವನ್ನು ಹೊಂದಿಸಿಕೊಂಡು ಅದು ಕೋರಿಕೊಂಡ ಪ್ರಮಾಣದ ಸ್ಮರಣೆಯನ್ನು ನೀಡುತ್ತದೆ. ನಿಗದಿತ ಪ್ರೋಗ್ರಾಂನ ಸ್ಮರಣೆಯನ್ನು ಎಲ್ಲಿ ಉಳಿಸಿರಲಾಗುತ್ತದೆ, ಅದು ಉಳಿಸಬಹುದಾ ಅಥವಾ ಅದಕ್ಕೆ ಸ್ಮರಣೆಯು ಹಂಚಿಕೆಯಾಗಿದೆಯಾ ಎಂಬ ವಿಚಾರಗಳ ಬಗ್ಗೆ ಕರ್ನಲ್‌ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುತ್ತದೆ.

ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ, ಕಡಿಮೆ ಸಮಯ ಬಳಸಲಾದ ಅನ್ವಯ ಸ್ಮರಣೆಯ ದತ್ತವನ್ನು ತಾತ್ಕಾಲಿಕವಾಗಿ ಡಿಸ್ಕ್‌‌ ಅಥವಾ ಇನ್ನಿತರ ಮಾಧ್ಯಮದಲ್ಲಿ ಉಳಿಸಿ ಆ ಸ್ಥಳವನ್ನು ಬೇರೆ ಪ್ರೋಗ್ರಾಂಗಳಿಗೆ ಬಳಸುವ ಹಾಗೆ ಮಾಡಲಾಗುತ್ತದೆ. ನಿಗದಿತ ಸ್ಮರಣೆಯ ಒಂದು ಭಾಗವನ್ನೇ ಅನೇಕ ಪ್ರೋಗ್ರಾಂಗಳು ಬಳಸಬಹುದಾಗಿದ್ದು, ಆ ಸ್ಮರಣೆಯ ಸ್ಥಳದಲ್ಲಿ ಇದ್ದುದನ್ನು ಬೇಕಾದಾಗ ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಇರುವುದರಿಂದ ಇದನ್ನು ಸ್ವಾಪಿಂಗ್‌ ಎಂದು ಕರೆಯಲಾಗುತ್ತದೆ.

ಬಹುಕಾರ್ಯಕ

[ಬದಲಾಯಿಸಿ]

ಬೇರೆ ಬೇರೆ ಗಣಕ ಪ್ರೋಗ್ರಾಂಗಳನ್ನು ಒಟ್ಟಿಗೆ ಚಾಲಿತವಾಗುತ್ತಿದೆ ಎನ್ನಿಸುವಂತೆ ಒಂದೇ ಗಣಕದಲ್ಲಿ ಚಾಲಿಸುವುದನ್ನು ಬಹುಕಾರ್ಯಕ ಎನ್ನುತ್ತಾರೆ. ಬಹಳಷ್ಟು ಗಣಕಗಳು ಒಮ್ಮೆಗೆ ಹೆಚ್ಚೆಂದರೆ ಒಂದು ಅಥವಾ ಎರಡು ಕೆಲಸಗಳನ್ನು ಮಾಡಬಹುದಾದ್ದರಿಂದ, ಇದನ್ನು ಸಾಧಾರಣವಾಗಿ ಸಮಯ ಹಂಚಿಕೆ ಮೂಲಕ ಸಾಧಿಸಲಾಗುತ್ತದೆ, ಎಂದರೆ ಪ್ರತಿ ಪ್ರೋಗ್ರಾಂ ಸಹಾ ಚಾಲನೆಯಾಗಲು ಗಣಕದ ಸಮಯದ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ.

ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ , ಕಾರ್ಯಯೋಜನಕಾರ ಎಂಬ ಕಿರು ತಂತ್ರಾಂಶವನ್ನು ಹೊಂದಿರುತ್ತದೆ. ಈ ತಂತ್ರಾಂಶವು ಪ್ರತಿ ಪ್ರೋಗ್ರಾಂ ಎಷ್ಟು ಪ್ರಮಾಣದ ಅವಧಿಯಲ್ಲಿ ಚಾಲನೆಯಾಗಬಹುದು ಮತ್ತು ಯಾವ ಸರದಿಯಲ್ಲಿ ಚಾಲನೆಯ ನಿಯಂತ್ರಣವು ನಡೆಯಬೇಕು ಎಂಬುದನ್ನು ನಿರ್ಧರಿಸುತ್ತದೆ. ಕರ್ನಲ್‌ ಒಂದು ಪ್ರಕ್ರಿಯೆಗೆ ನಿಯಂತ್ರಣವನ್ನು ನೀಡಿದಾಗ ಅದು ಪ್ರೋಗ್ರಾಂಗೆ, CPU ಮತ್ತು ಸ್ಮರಣೆಯನ್ನು ಬಳಸಲು ಅನುಮತಿ ನೀಡಿರುತ್ತದೆ. ಕೆಲ ಕಾಲಾನಂತರ ನಿಗದಿತ ವಿಧಾನದ ಮೂಲಕ ನಿಯಂತ್ರಣವು ಕರ್ನಲ್‌ಗೆ ಮರಳುತ್ತದೆ. ಇದರಿಂದಾಗಿ ಇನ್ನೊಂದು ಪ್ರೋಗ್ರಾಂ CPUನ್ನು ಬಳಸಲು ಅನುಮತಿ ಪಡೆಯುತ್ತದೆ. ಕರ್ನಲ್‌ ಮತ್ತು ಅನ್ವಯಗಳ ನಡುವಿನ ಈ ನಿಯಂತ್ರಣ ಹಸ್ತಾಂತರವನ್ನು ಕಾಂಟೆಕ್ಸ್ಟ್‌ ಸ್ವಿಚ್‌ ಎನ್ನುತ್ತಾರೆ.

ಪ್ರೋಗ್ರಾಂಗಳಿಗೆ ಸಮಯ ಹಂಚಿಕೆಯ ಅಧಿಕಾರವನ್ನು ನೀಡಿದ್ದ ಹಳೆಯ ಹಂಚಿಕೆ ವಿಧಾನವೊಂದನ್ನು ಸಹಕಾರಿ ಬಹುಕಾರ್ಯಕ ಕರೆಯುತ್ತಾರೆ. ಈ ವಿಧಾನದಲ್ಲಿ, ಪ್ರೋಗ್ರಾಂ ಕರ್ನಲ್‌ನಿಂದ ನಿಯಂತ್ರಣವನ್ನು ಪಡೆದಾಗ, ತನಗೆ ಬೇಕಾದ ಅವಧಿಯವರೆಗೆ ಚಾಲಿತವಾದ ನಂತರ ಕರ್ನಲ್‌ ಗೆ ನಿಯಂತ್ರಣವನ್ನು ಹಸ್ತಾಂತರಿಸಬಹುದು. ಇದರರ್ಥವೇನೆಂದರೆ ಹಾನಿಕಾರಿ ಅಥವಾ ಅಸಮರ್ಪಕ ಕಾರ್ಯ ನಡೆಸುತ್ತಿರುವ ಪ್ರೋಗ್ರಾಂ ಇತರೆ ಪ್ರೋಗ್ರಾಂಗಳ CPU ಬಳಕೆಯನ್ನು ತಡೆಗಟ್ಟುವುದು ಮಾತ್ರವಲ್ಲ, ಅನಿಶ್ಚಿತ ಲೂಪ್‌ಗೆ ಇದು ಪ್ರವೇಶಿಸಿದರೆ ಇಡೀ ಗಣಕವನ್ನೇ ಸ್ಥಗಿತಗೊಳಿಸಬಲ್ಲದು.

ಪ್ರತಿಬಂಧಕ ಬಹುಕಾರ್ಯಕದ ಮುಖ್ಯ ಉದ್ದೇಶವೇನೆಂದರೆ ಎಲ್ಲಾ ಪ್ರೋಗ್ರಾಂಗಳಿಗೂ ಸಮಾನವಾಗಿ CPUನ ಸಮಯ ಹಂಚಿಕೆಯಾಗಬೇಕು ಎಂಬುದು. ಇದರಿಂದಾಗಿ ಎಲ್ಲಾ ಪ್ರೋಗ್ರಾಂಗಳು ಯಾವುದೇ ತಡೆಯಿಲ್ಲದೇ ಕೇವಲ ನಿಯಮಿತ CPU ಸಮಯವನ್ನು ಮಾತ್ರ ಬಳಸಬಹುದು. ಇದನ್ನು ಸಾಧಿಸಲು, ಆಧುನಿಕ ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ಗಳು ನಿರ್ಬಂಧಿತ ಸಮಯದ ಇಂಟರಪ್ಟ್‌ಗಳನ್ನು ಬಳಸುತ್ತವೆ. ಸಂರಕ್ಷಿತ ವಿಧಾನ ಕಾಲಮಾಪಕವನ್ನು ಕರ್ನಲ್‌ ಹೊಂದಿಸಿದ್ದು ನಿಗದಿತ ಸಮಯದ ನಂತರ ಮೇಲ್ವಿಚಾರಣಾ ವಿಧಾನಕ್ಕೆ ಮರಳಲು ಪ್ರಚೋದಿಸುವಂತೆ ಮಾಡುತ್ತದೆ. (ಇಂಟರಪ್ಟ್‌ಗಳು ಮತ್ತು ಉಭಯ ವಿಧಾನ ಕಾರ್ಯಾಚರಣೆಗಳ ವಿಭಾಗಗಳಿಗಾಗಿ ಮೇಲೆ ನೋಡಿ.)

ಅನೇಕ ಏಕ-ಬಳಕೆದಾರ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಸಹಕಾರಿ ಬಹುಕಾರ್ಯಕವು ಸರ್ವಥಾ ಸೂಕ್ತವಾದುದು, ಏಕೆಂದರೆ ಗೃಹ ಗಣಕಗಳು ಸಾಧಾರಣವಾಗಿ ಉತ್ತಮವಾಗಿ ಪರೀಕ್ಷಿಸಿದ ಕೆಲವೇ ಪ್ರೋಗ್ರಾಂಗಳನ್ನು ಚಾಲಿಸುತ್ತವೆ. Windows NTಯು ಪ್ರತಿಬಂಧಕ ಬಹುಕಾರ್ಯಕವನ್ನು ಅಳವಡಿಸಿದ್ದ Microsoft Windowsನ ಪ್ರಪ್ರಥಮ ಆವೃತ್ತಿಯಾಗಿದ್ದರೂ, ಇದು ಗೃಹ ಬಳಕೆದಾರರ ಮಾರುಕಟ್ಟೆಗೆ Windows XP(ಏಕೆಂದರೆ Windows NTಯು ಕೇವಲ ವೃತ್ತಿಪರರ ಬಳಕೆಗಾಗಿತ್ತು.)ಯ ತನಕ ಪರಿಚಿತವಾಗಿರಲಿಲ್ಲ.

ಕರ್ನಲ್‌ ಪ್ರತಿಬಂಧನೆ

[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ ಕೆಲ ಕರ್ನಲ್‌ ರನ್‌ಟೈಮ್‌ಗಳಿಗೆ ಸಂಬಂಧಿಸಿದಂತೆ ದೀರ್ಘಾವಧಿಯ ಕಾಲಕ್ಷೇಪಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ, ಕೆಲವೊಮ್ಮೆ 100ms ಅಥವಾ ಹೆಚ್ಚಿನ ಕಾಲಕ್ಷೇಪಗಳು ಏಕಸ್ತರ ಕರ್ನಲ್‌ ಇರುವ ಗಣಕಗಳಲ್ಲಿ ಗಮನಿಸಲಾಗಿದೆ. ಈ ಕಾಲಕ್ಷೇಪಗಳು ಡೆಸ್ಕ್‌ಟಾಪ್‌ ಗಣಕಗಳನ್ನು ಆಗಾಗ್ಗೆ ಗಣನೀಯ ಪ್ರಮಾಣದಲ್ಲಿ ನಿಧಾನಗೊಳಿಸುತ್ತವೆ ಹಾಗೂ ಕಾರ್ಯಾಚರಣಾ ವ್ಯವಸ್ಥೆಗಳು ಸಮಯ-ನಿರ್ಬಂಧಿತ ಕಾರ್ಯಗಳನ್ನು ಉದಾಹರಣೆಗೆ ಧ್ವನಿ ಮುದ್ರಣ ಮತ್ತು ಇತರೆ ಸಂವಹನ[] ಸಂಬಂಧಿ ಕಾರ್ಯಗಳನ್ನು ಇದರಿಂದಾಗಿ ನಡೆಸಲಾಗುವುದಿಲ್ಲ.

ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳು ಅನ್ವಯ ಪ್ರತಿಬಂಧನೆಯನ್ನು ಸಾಧನ ಡ್ರೈವರ್‌ಗಳಿಗೆ ಮತ್ತು ಕರ್ನಲ್‌ ಸಂಕೇತಗಳಿಗೂ ವಿಸ್ತರಿಸಿವೆ. ಇದರಿಂದಾಗಿ ಕಾರ್ಯಾಚರಣಾ ವ್ಯವಸ್ಥೆಯು ಪ್ರತಿಬಂಧಕ ನಿಯಂತ್ರಣವನ್ನು ಆಂತರಿಕ ರನ್‌ಟೈಂಗಳ ಮೇಲೆ ಸಹಾ ಹೊಂದಬಹುದಾಗಿದೆ. Windows Vistaದಲ್ಲಿ ಪರಿಚಯಿಸಿರುವ Microsoft‌ ಪ್ರದರ್ಶನ ಡ್ರೈವರ್‌ ವಿಧಾನವು (WDDM) ಇದನ್ನು ಪ್ರದರ್ಶನ ಡ್ರೈವರ್‌ಗಳಿಗೆ ಅಳವಡಿಸಿರುತ್ತದೆ ಹಾಗೂ Linuxನ 2.6ನೇ ಆವೃತ್ತಿಯಲ್ಲಿ ಪರಿಚಯಿಸಲಾದ ಪ್ರತಿಬಂಧಕೀಯ ಕರ್ನಲ್‌ ವಿಧಾನವು ಎಲ್ಲಾ ಸಾಧನ ಡ್ರೈವರ್‌ಗಳಿಗೆ ಮತ್ತು ಇತರೆ ಕೆಲ ಕರ್ನಲ್‌ ಸಂಕೇತಗಳಿಗೆ ಪ್ರತಿಬಂಧಕ ಬಹು-ಕಾರ್ಯಕದ ಲಾಭ ಪಡೆಯುವಂತೆ ಮಾಡುತ್ತದೆ.

Windowsಗೆ ಸಂಬಂಧಪಟ್ಟಂತೆ Windows Vistaಗೆ ಮುನ್ನಾ ಹಾಗೂ Linuxನಲ್ಲಿ 2.6ನೇ ಆವೃತ್ತಿಗೆ ಮುನ್ನ ಎಲ್ಲಾ ಡ್ರೈವರ್‌ಗಳ ಕಾರ್ಯಾಚರಣೆಯು ಸಹಕಾರಿ ವಿಧಾನದಲ್ಲಿತ್ತು, ಎಂದರೆ ಯಾವುದಾದರೂ ಒಂದು ಡ್ರೈವರ್‌ ಅನಿಶ್ಚಿತ ಲೂಪ್‌ಗೆ ಪ್ರವೇಶಿಸಿದರೆ ಅದು ಗಣಕವನ್ನು ಸ್ಥಗಿತಗೊಳಿಸುತ್ತಿತ್ತು.

ಡಿಸ್ಕ್ ಪ್ರವೇಶ ಮತ್ತು ಕಡತ ವ್ಯವಸ್ಥೆಗಳು

[ಬದಲಾಯಿಸಿ]

ಡಿಸ್ಕ್‌ಗಳಲ್ಲಿ ಸಂಗ್ರಹಗೊಂಡಿರುವ ದತ್ತಾಂಶಕ್ಕೆ ಪ್ರವೇಶವು ಎಲ್ಲಾ ಕಾರ್ಯಾಚರಣಾ ವ್ಯವಸ್ಥೆಗಳ ಕೇಂದ್ರ ಗುಣಲಕ್ಷಣವಾಗಿದೆ. ವೇಗದ ಪ್ರವೇಶ, ಹೆಚ್ಚಿನ ಜವಾಬ್ದಾರಿಗಾಗಿ ಅನುಮತಿಸಲು, ಮತ್ತು ಡ್ರೈವ್‌ಗಳಲ್ಲಿನ ಲಭ್ಯವಿರುವ ಸ್ಥಳವನ್ನು ಉತ್ತಮವಾಗಿ ಬಳಸುವ ಬದಲು ನಿರ್ದಿಷ್ಟ ಮಾರ್ಗದಲ್ಲಿ ರಚಿಸಿದ ಕಡತ‌ಗಳನ್ನು ಬಳಸುವುದರಿಂದ ಡಿಸ್ಕ್‌ನಲ್ಲಿ ಗಣಕ‌ಗಳು ದತ್ತಾಂಶವನ್ನು ಸಂಗ್ರಹಿಸುತ್ತದೆ. ಡಿಸ್ಕ್‌ನಲ್ಲಿ ಕಡತ‌ಗಳ ಸಂಗ್ರಹವಾಗಿರುವ ನಿರ್ದಿಷ್ಟ ವಿಧಾನವನ್ನು ಕಡತ ವ್ಯವಸ್ಥೆ, ಮತ್ತು ಹೆಸರುಗಳು ಮತ್ತು ಅಟ್ರೀಬ್ಯುಟ್‌ಗಳನ್ನು ಹೊಂದಲು ಕಡತಗಳನ್ನು ಸಕ್ರಿಯಗೊಳಿಸುವುದು. ಇದು ಡೈರೆಕ್ಟರಿ ವೃಕ್ಷದಲ್ಲಿ ಸಿದ್ಧಪಡಿಸಿದ ಡೈರೆಕ್ಟರಿ ಅಥವಾ ಫೋಲ್ಡರ್‌ಗಳ ಶ್ರೇಣಿಯಲ್ಲಿ ಸಂಗ್ರಹಿಸಲು ಸಹ ಅವುಗಳನ್ನು ಅನುಮತಿಸುತ್ತದೆ.

ಸಾಮಾನ್ಯವಾಗಿ ಹಿಂದಿನ ಕಾರ್ಯಾಚರಣಾ ವ್ಯವಸ್ಥೆಗಳು ಏಕ ಪ್ರಕಾರದ ಡಿಸ್ಕ್‌ ಡ್ರೈವ್ ಮತ್ತು ಒಂದೇ ತರಹದ ಕಡತ ಪ್ರಕಾರವನ್ನು ಬೆಂಬಲಿಸುತ್ತಿದ್ದವು. ಹಿಂದಿನ ಕಡತ ವ್ಯವಸ್ಥೆಗಳ ಸಾಮರ್ಥ್ಯ, ವೇಗ, ಮತ್ತು ಕಡತ ಹೆಸರುಗಳ ಪ್ರಕಾರಗಳು ಮತ್ತು ಅವುಗಳ ಬಳಸುವ ಡೈರೆಕ್ಟರಿ ರಚನೆಯಲ್ಲಿ ಮಿತಿ ಇತ್ತು. ಕಾರ್ಯಚರಣಾ ವ್ಯವಸ್ಥೆಗಳಲ್ಲಿ ಮಿತಿಗಳಿರುವುದರಿಂದ ಒಂದಕ್ಕಿಂತ ಹೆಚ್ಚು ಕಡತ ವ್ಯವಸ್ಥೆಯನ್ನು ಬೆಂಬಲಿಸಲು ಅದಕ್ಕೆ ತುಂಬಾ ಜಟಿಲವಾಗಿರುವುದು.

ಸಂಗ್ರಹ ವ್ಯವಸ್ಥೆಗಳು, Linuxನಂತಹ ಕಾರ್ಯಾಚರಣಾ ವ್ಯವಸ್ಥೆಗಳನ್ನು ಪ್ರವೇಶಿಸುವುದಕ್ಕಾಗಿ ಆಯ್ಕೆಗಳ ಮಿತವಾದ ಶ್ರೇಣಿಯನ್ನು ಕೆಲವು ಸರಳವಾದ ಕಾರ್ಯಚರಣಾ ವ್ಯವಸ್ಥೆಗಳು ಬೆಂಬಲಿಸುವಾಗ ಅವಾಸ್ತವ ಕಡತ ವ್ಯವಸ್ಥೆ ಅಥವಾ VFS ನಂತೆ ತಿಳಿದಿರುವ ತಂತ್ರಜ್ಞಾನವನ್ನು ಬೆಂಬಲಿಸುವುದು. ವಿಶಾಲ ಶ್ರೇಣಿಯ ಸಂಗ್ರಹ ಸಾಧನಗಳನ್ನು UNIXನಂತಹ ಕಾರ್ಯಾಚರಣಾ ವ್ಯವಸ್ಥೆಗಳು ಸಾಮಾನ್ಯ ಅನ್ವಯ ಪ್ರೋಗ್ರಾಮಿಂಗ್ ಅಂತರ್ವರ್ತನ (API)ನ ಮೂಲಕ ಪ್ರವೇಶಿಸಲು ಅವುಗಳ ವಿನ್ಯಾಸ ಮತ್ತು ಕಡತ ವ್ಯವಸ್ಥೆಗಳನ್ನು ಲೆಕ್ಕಿಸದೆ ಬೆಂಬಲಿಸುವುದು. ಅವರು ಪ್ರವೇಶಿಸುತ್ತಿರುವ ಸಾಧನದ ಬಗ್ಗೆ ಯಾವುದೇ ಜ್ಞಾನ ಹೊಂದಲು ಪ್ರೋಗ್ರಾಂ‌ಗಳಿಗೆ ಇದು ಅನಗತ್ಯವಾಗಿಸುವುದು. ನಿರ್ದಿಷ್ಟ ಸಾಧನ ಡ್ರೈವರ್‌ಗಳು ಮತ್ತು ಕಡತ ವ್ಯವಸ್ಥೆ ಡ್ರೈವರ್‌ಗಳನ್ನು ಬಳಸುವುದರ ಮೂಲಕ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಸ್ಥಾಪಿಸಿದ ಅನಂತ ಕಡತ ವ್ಯವಸ್ಥೆಗಳ ವಿಧದೊಂದಿಗೆ ಅನಿಯಮಿತ ಸಂಖ್ಯೆಯ ಸಾಧನಗಳ ಪ್ರವೇಶದೊಂದಿಗೆ ಪ್ರೋಗ್ರಾಂಗಳನ್ನು ಒದಗಿಸಲು VFSವು ಕಾರ್ಯಚರಣಾ ವ್ಯವಸ್ಥೆಯನ್ನು ಅನುಮತಿಸುವುದು.

ಹಾರ್ಡ್‌ಡ್ರೈವ್‌ನಂತಹ ಸಂಪರ್ಕಿಸಲಾದ ಸಂಗ್ರಹ ಸಾಧನಕ್ಕೆ ಸಾಧನ ಡ್ರೈವರ್ ಮೂಲಕವೇ ಪ್ರವೇಶಾನುಮತಿ ಸಿಗುವುದು. ಸಾಧನ ಡ್ರೈವರ್‌ ಡ್ರೈವ್‌ನ ನಿರ್ದಿಷ್ಟ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದು ಕಾರ್ಯಾಚರಣಾ ವ್ಯವಸ್ಥೆಯು ಎಲ್ಲಾ ಡಿಸ್ಕ್ ಡ್ರೈವ್‌‌ಗಳನ್ನು ಪ್ರವೇಶಿಸಲು ಬಳಸುವ ಪ್ರಮಾಣಿತ ಭಾಷೆಗೆ ಡ್ರೈವ್‌ನ ಸಂಕೇತಗಳನ್ನು ಭಾಷಾಂತರಿಸಬಹುದು. UNIX ನಲ್ಲಿ ಇದು ಬ್ಲಾಕ್ ಸಾಧನಗಳ ಭಾಷೆಯಾಗಿದೆ.

ಸರಿಯಾದ ಸಾಧನ ಡ್ರೈವರ್‌ನ್ನು ಹೊಂದಿದಾಗ, ಕರ್ನಲ್ ಕಚ್ಚಾ ಸ್ವರೂಪದಲ್ಲಿ ಒಂದು ಅಥವಾ ಹೆಚ್ಚು ಕಡತ ವ್ಯವಸ್ಥೆಯನ್ನು ಹೊಂದಿರುವ ಡಿಸ್ಕ್‌ ಡ್ರೈವ್‌ನ ವಿಷಯಗಳನ್ನು ನೋಡಬಹುದಾಗಿದೆ. ಕಡತ ವ್ಯವಸ್ಥೆ ಡ್ರೈವರ್‌ ಎಲ್ಲಾ ಕಡತ ವ್ಯವಸ್ಥೆಗಳಿಗೆ ನೀಡಲು ಬಳಸಬಹುದಾದ ಆದೇಶಗಳ ಪ್ರಮಾಣಿತ ಗುಂಪಿಗೆ ಪ್ರತಿ ನಿರ್ದಿಷ್ಟ ಕಡತ ವ್ಯವಸ್ಥೆಯಲ್ಲಿ ಬಳಸುವ ಆದೇಶಗಳನ್ನು ಭಾಷಾಂತರಿಸಲು ಉಪಯುಕ್ತ. ಪ್ರೋಗ್ರಾಂ‌ಗಳು ನಂತರ ವರ್ಗ ಶ್ರೇಣಿಯ ರಚನೆಯೊಳಗೆ ಹೊಂದಿರುವ ಪ್ರೋಗ್ರಾಂ‌ಗಳು ನಂತರ ಕಡತ ಹೆಸರುಗಳು, ಮತ್ತು ಡೈರೆಕ್ಟರಿಗಳು/ಫೋಲ್ಡರ್‌ಗಳ ಆಧಾರದ ಮೇಲೆ ಈ ಕಡತ ವ್ಯವಸ್ಥೆಗಳೊಂದಿಗೆ ವ್ಯವಹರಿಸುವುದು. ಪ್ರೋಗ್ರಾಂಗಳು ಕಡತ‌ಗಳನ್ನು ರಚಿಸುವುದು, ಅಳಿಸುವುದು, ತೆರೆಯುವುದು ಮತ್ತು ಮುಚ್ಚುವುದು, ಹಾಗೆಯೇ ಅವುಗಳ ಪ್ರವೇಶಾನುಮತಿ, ಗಾತ್ರ, ಖಾಲಿ ಸ್ಥಳ, ಮತ್ತು ರಚನೆ ಮತ್ತು ಮಾರ್ಪಾಡು ದಿನಾಂಕಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತದೆ.

ಕಡತ ವ್ಯವಸ್ಥೆಗಳ ನಡುವಿನ ವ್ಯತ್ಯಾಸವು ಎಲ್ಲಾ ಕಡತ ವ್ಯವಸ್ಥೆಗಳನ್ನು ಬೆಂಬಲಿಸುವುದನ್ನು ಜಟಿಲಗೊಳಿಸುತ್ತದೆ. ಕಡತಗಳ ಹೆಸರಿನಲ್ಲಿ ಅನುಮತಿಸಿದ ಅಕ್ಷರಗಳು, ಅಕ್ಷರ ಸೂಕ್ಷ್ಮತೆ, ಮತ್ತು ವಿವಿಧ ಪ್ರಕಾರದ ಕಡತ ಅಟ್ರಿಬ್ಯುಟ್‌ಗಳೆಂಬ ಅನೇಕ ವಿವರಗಳಿರುತ್ತವೆ. ಒಂದೇ ಅಂತರ್ವರ್ತನದ ಸಹಾಯದಿಂದ ಪ್ರತಿ ಕಡತ ವ್ಯವಸ್ಥೆಯಲ್ಲಿ ಮೇಲ್ಕಂಡ ವಿವರಣಾತ್ಮಕ ಸೌಲಭ್ಯಗಳನ್ನು ನೀಡುವುದು ಜಟಿಲಕಾರ್ಯವಾಗಿರುತ್ತದೆ. ಕಾರ್ಯಾಚರಣಾ ವ್ಯವಸ್ಥೆಗಳು ಅವುಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕಡತ ವ್ಯವಸ್ಥೆಯನ್ನು ಬಳಸಲು (ಮತ್ತು ಸಹಜವಾಗಿ ಬೆಂಬಲಿಸುವುದು) ಶಿಫಾರಸು ಮಾಡುತ್ತವೆ; ಉದಾಹರಣೆಗೆ, Windowsನಲ್ಲಿ NTFS ಮತ್ತು Linuxನಲ್ಲಿ ext3 ಹಾಗೂ ReiserFS. ಆದರೂ, ರೂಢಿಯಲ್ಲಿ ಇತರೆ ಡ್ರೈವರ್‌‌ಗಳು ಹೆಚ್ಚು ಸಾಮಾನ್ಯ ಉದ್ದೇಶದ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಅತಿ ಹೆಚ್ಚು ಬಳಸಿದ ಕಡತ‌ ವ್ಯವಸ್ಥೆಗಳಿಗಾಗಿ ಬೆಂಬಲ ನೀಡಲು ಸಾಮಾನ್ಯವಾಗಿ ಲಭ್ಯವಿರುವುದು (ಉದಾಹರಣೆಗೆ, NTFS-3g ಮೂಲಕ Linuxನಲ್ಲಿ NTFS ಲಭ್ಯವಿದೆ ಮತ್ತು FS-ಡ್ರೈವರ್ ಮತ್ತು rfstool ಮೂಲಕ Windowsನಲ್ಲಿ ReiserFS ಮತ್ತು ext2/3 ಲಭ್ಯವಿವೆ).

ಸಾಧನ ಡ್ರೈವರ್‌ಗಳು

[ಬದಲಾಯಿಸಿ]

ಸಾಧನ ಡ್ರೈವರ್ ಎಂದರೆ ಯಂತ್ರಾಂಶಗಳೊಂದಿಗೆ ಪ್ರಕ್ರಿಯೆಗೆ ಅನುವು ಮಾಡಿಕೊಡಲು ಅಭಿವೃದ್ಧಿಸಿದ ನಿರ್ದಿಷ್ಟ ಪ್ರಕಾರದ ಗಣಕ ತಂತ್ರಾಂಶ. ತಾಂತ್ರಿಕವಾಗಿ ಇದು ಒಂದೆಡೆ ಸಾಧನದೊಂದಿಗೆ ನಿರ್ದಿಷ್ಟ ಸಂವಹನ ಮಾಡುವುದಕ್ಕಾಗಿ ಗಣಕ ಬಸ್ ಅಥವಾ ಸಂವಹನ ಉಪವ್ಯವಸ್ಥೆಗಳಿಗೆ ಸಂಪರ್ಕಿಸಿದ ಯಂತ್ರಾಂಶಗಳ ಮೂಲಕ, ಅದಕ್ಕೆ ನೀಡಿದ ಆದೇಶಗಳು ಮತ್ತು/ಅಥವಾ ಸಾಧನದಿಂದ ಸ್ವೀಕರಿಸಿದ ದತ್ತಾಂಶ, ಮತ್ತು ಇನ್ನೊಂದು ಕಡೆಯಲ್ಲಿ, ಕಾರ್ಯಾಚರಣಾ ವ್ಯವಸ್ಥೆ ಮತ್ತು ತಂತ್ರಾಂಶ ಅನ್ವಯಿಕ‌ಗಳಿಗೆ ಅವಶ್ಯಕ ಅಂತರ್ವರ್ತನಗಳ ವ್ಯವಸ್ಥೆಯಾಗಿದೆ.ಇದು ಇನ್ನೊಂದು ಪ್ರೋಗ್ರಾಂನ್ನು ಸಕ್ರಿಯಗೊಳಿಸುವ ನಿರ್ದಿಷ್ಟ ಯಂತ್ರಾಂಶ ಆಧಾರಿತ ಹಾಗೂ ವಿಶೇಷವಾಗಿ ಕಾರ್ಯಾಚರಣಾ ವ್ಯವಸ್ಥೆ ಆಧಾರಿತ ಗಣಕ ಪ್ರೋಗ್ರಾಂ ಆಗಿದೆ. ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್ ನ ಅಡಿಯಲ್ಲಿ ತಾಂತ್ರಿಕವಾಗಿ ಕಾರ್ಯಾಚರಣಾ ವ್ಯವಸ್ಥೆ ಅಥವಾ ಅನ್ವಯ ತಂತ್ರಾಂಶ ಪ್ಯಾಕೇಜ್‌ ಅಥವಾ ಗಣಕ ಪ್ರೋಗ್ರಾಂಗಳು ಯಂತ್ರಾಂಶ ಸಾಧನದೊಂದಿಗೆ ಪಾರದರ್ಶಕವಾಗಿ ಪ್ರತಿಕ್ರಿಯಿಸಲು, ಮತ್ತು ಸಾಮಾನ್ಯವಾಗಿ ಯಾವುದೇ ಅಗತ್ಯ ಅಸಮಕಾಲಿಕ ಸಮಯ-ಆಧಾರಿತ ಯಂತ್ರಾಂಶ ಅಂತರ್ವರ್ತನದ ಅವಶ್ಯಕ ಇಂಟರಪ್ಟ್‌‌ ನಿರ್ವಹಣೆಯ ಅವಶ್ಯಕತೆಗಳನ್ನು ನಿರ್ವಹಿಸುತ್ತದೆ.

ಸಾಧನ ಡ್ರೈವರ್‌ಗಳ ಮುಖ್ಯ ವಿನ್ಯಾಸ ಗುರಿ ಎಂದರೆ ಬೇರ್ಪಡಿಸುವಿಕೆ. ಯಂತ್ರಾಂಶ‌ದ ಪ್ರತಿ ಮಾದರಿಯು (ಆದೇ ವರ್ಗದ ಸಾಧನದಲ್ಲಿಯೂ ಸಹ) ವಿಭಿನ್ನವಾಗಿರುತ್ತದೆ. ಹೆಚ್ಚು ಭರವಸೆಯ ಅಥವಾ ಉತ್ತಮ ನಿರ್ವಹಣೆಯನ್ನು ನೀಡುವ ಹೊಸದಾದ ಮಾದರಿಗಳೂ ಸಹ ನಿರ್ಮಾಪಕರಿಂದ ಬಿಡುಗಡೆ ಮಾಡಲಾಗುವುದು. ಗಣಕ ಮತ್ತು ಅದರ ಕಾರ್ಯಾಚರಣಾ ವ್ಯವಸ್ಥೆಗಳು ಪ್ರತಿ ಸಾಧನವನ್ನು ನಿಯಂತ್ರಿಸುವುದು ಹೇಗೆಂದು ತಿಳಿಯಲು ಈಗಲೂ ಮತ್ತು ಭವಿಷ್ಯದಲ್ಲೂ ನಿರೀಕ್ಷಿಸಲಾಗದು. ಈ ಸಮಸ್ಯೆಯನ್ನು ಪರಿಹರಿಸಲು, ಪ್ರತಿಯೊಂದು ಪ್ರಕಾರದ ಸಾಧನವನ್ನು ಹೇಗೆ ನಿಯಂತ್ರಿಸಬೇಕು ಎನ್ನುವ ಆದೇಶ ನೀಡಲು OSಗಳ ಅವಶ್ಯಕತೆ ಇದೆ. ಸಾಧನ ಡ್ರೈವರ್‌ನ ಕಾರ್ಯವು ನಂತರ ಸಾಧನ ನಿರ್ದಿಷ್ಟ ಕರೆಗಳಿಗೆ ಈ OSನ ಅಧಿಕೃತ ಕಾರ್ಯ ಕರೆಗಳನ್ನು ಭಾಷಾಂತರಿಸುವುದಾಗಿದೆ. ಸಾಧನ ನಿಯಮದ ಪ್ರಕಾರ, ಯಾವುದೇ ಹೊಸದಾದ ರೀತಿಯಲ್ಲಿ ನಿಯಂತ್ರಿಸಲ್ಪಡುವ ಹೊಸ ಸಾಧನವು ಸರಿಯಾದ ಡ್ರೈವರ್ ಸಿಕ್ಕಿದಾಗ ಸರಿಯಾಗಿ ಕಾರ್ಯನಿರ್ವಹಿಸಬೇಕು. ಈ ಹೊಸ ಡ್ರೈವರ್ ಕಾರ್ಯಾಚರಣಾ ವ್ಯವಸ್ಥೆಯ ದೃಷ್ಟಿಯಿಂದ ಸಾಧನವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

ನೆಟ್‌ವರ್ಕಿಂಗ್

[ಬದಲಾಯಿಸಿ]

ಪ್ರಸ್ತುತವಾಗಿ ಹೆಚ್ಚಿನ ಕಾರ್ಯಾಚರಣಾ ವ್ಯವಸ್ಥೆಗಳು ಅವುಗಳಿಗಾಗಿ ಬಳಸುವ ವಿವಿಧ ಜಾಲ‌ ಪ್ರೋಟೋಕಾಲ್‌ಗಳು, ಯಂತ್ರಾಂಶ‌ಗಳು, ಮತ್ತು ಅನ್ವಯಗಳನ್ನು ಬೆಂಬಲಿಸುತ್ತದೆ. ಸಮಾನವಾಗಿಲ್ಲದ ಕಾರ್ಯಚರಣಾ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಗಣಕಗಳು ಗಣಕ ಕ್ರಿಯೆಗಳು, ಕಡತ‌ಗಳು, ಮುದ್ರಕಗಳು, ಮತ್ತು ಸ್ಕ್ಯಾನರ್‌ಗಳಂತಹ ಸಂಪನ್ಮೂಲಗಳನ್ನು ಹಂಚುವುದಕ್ಕಾಗಿ ತಂತಿ ಅಥವಾ ತಂತಿರಹಿತ ಸಂಪರ್ಕದಿಂದ ಸಾಮಾನ್ಯ ಜಾಲ‌ದಲ್ಲಿ ಭಾಗವಹಿಸಬಹುದು. ಜಾಲಗಳು ತಮ್ಮ ಭಾಗವಾಗಿರುವ ಯಾವುದೇ ಗಣಕದ ಕಾರ್ಯಾಚರಣಾ ವ್ಯವಸ್ಥೆಯು ಸಂಪರ್ಕಿತವಾಗಿರುವ ಇನ್ನಿತರ ಅಸನ್ನಿಹಿತ ಗಣಕದ ಸಂಪನ್ಮೂಲಗಳನ್ನು ತನ್ನ ಭಾಗವೇ ಆಗಿರುವಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಾಗುವಂತೆ ಸಹಾಯ ಮಾಡುತ್ತವೆ. ಇದು ಸರಳ ಸಂವಹನದಿಂದ ಜಾಲದಲ್ಲಿ ಲಭ್ಯವಿರುವ ಕಡತ ವ್ಯವಸ್ಥೆಗಳನ್ನು ಅಥವಾ ಇನ್ನೊಂದು ಗಣಕದ ಗ್ರಾಫಿಕ್ಸ್ ಅಥವಾ ಧ್ವನಿ ಯಂತ್ರಾಂಶವನ್ನು ಹಂಚಿಕೊಳ್ಳಲು ಸಹ ಬಳಸುವವರೆಗೆ ಎಲ್ಲವನ್ನೂ ಒಳಗೊಂಡಿದೆ. SSHನಂತೆ ಜಾಲ‌ದಲ್ಲಿರುವ ಗಣಕವೊಂದರ ಆದೇಶ ಸಾಲು ಅಂತರ್ವರ್ತನಕ್ಕೆ ಬಳಕೆದಾರರ ನೇರ ಪ್ರವೇಶವನ್ನು ಅನುಮತಿಸುವಂತೆ ಕೆಲವು ಜಾಲ ಸೇವೆಗಳು ಗಣಕದ ಸಂಪನ್ಮೂಲಗಳಿಗೆ ಪಾರದರ್ಶಕ ಪ್ರವೇಶವನ್ನು ನೀಡುತ್ತವೆ.

ಜಾಲದ ಭಾಗವಾಗಿರುವ ಗಣಕದ ಪ್ರೋಗ್ರಾಂವೊಂದು ಸರ್ವರ್‌ ಎಂದು ಕರೆಯಲಾಗುವ ಇನ್ನೊಂದು ಗಣಕವನ್ನು ಸಂಪರ್ಕಿಸುವುದನ್ನು ಗ್ರಾಹಕ/ಸರ್ವರ್ ನೆಟ್‌ವರ್ಕಿಂಗ್ ಎನ್ನುತ್ತಾರೆ. UNIX ಅಥವಾ Linuxನಲ್ಲಿ ಕಾರ್ಯನಿರ್ವಹಿಸುವ ಸರ್ವರ್‌ಗಳು ಇತರ ಜಾಲ ಗಣಕಗಳಿಗೆ ಮತ್ತು ಬಳಕೆದಾರರಿಗೆ ವಿವಿಧ ಸೇವೆಗಳನ್ನು ನೀಡುತ್ತವೆ (ಅಥವಾ ಹೋಸ್ಟ್‌ ಮಾಡುತ್ತವೆ). ಈ ಸೇವೆಗಳನ್ನು ಸಾಮಾನ್ಯವಾಗಿ ಸರ್ವರ್‌ನ ಜಾಲ ವಿಳಾಸದ ಆಚೆಯ, ಪೋರ್ಟ್‌ಗಳು ಅಥವಾ ಅಂಕೀಕರಿಸಿದ ಪ್ರವೇಶ ಕೇಂದ್ರಗಳ ಮೂಲಕ ಒದಗಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಪೋರ್ಟ್‌ ಸಂಖ್ಯೆಯು ಆಯಾ ಪೋರ್ಟ್‌ಗೆ ಬಂದ ವಿನಂತಿ ನಿರ್ವಹಣೆ ಜವಾಬ್ದಾರಿಯಿರುವ ಗರಿಷ್ಠ ಒಂದು ಚಾಲಿತ ಪ್ರೋಗ್ರಾಂನೊಂದಿಗೆ ಸಹಯೋಗಗೊಂಡಿರುತ್ತದೆ. ಡೆಮನ್‌ ಎಂದರೆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೋಗ್ರಾಂ, ಬಳಕೆದಾರ ಪ್ರೋಗ್ರಾಂ ಆಗಿರುವುದರಿಂದ ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ಗೆ ವಿನಂತಿಗಳನ್ನು ನೀಡಿ ಸ್ಥಳೀಯ ಯಂತ್ರಾಂಶ ಸಂಪನ್ಮೂಲಗಳನ್ನು ಬಳಸಬಹುದಾಗಿದೆ.

ಹಲವು ಕಾರ್ಯಾಚರಣಾ ವ್ಯವಸ್ಥೆಗಳು ಒಂದು ಅಥವಾ ಹೆಚ್ಚು ವಿಕ್ರಯದಾರ-ನಿರ್ದಿಷ್ಟ ಅಥವಾ ತೆರೆದ ನೆಟ್‌ವರ್ಕಿಂಗ್ ಪ್ರೋಟೊಕಾಲ್‌ಗಳಂತೆ ಬೆಂಬಲಿಸುತ್ತದೆ, ಉದಾಹರಣೆಗೆ, IBM ಗಣಕಗಳಲ್ಲಿ SNA, ಡಿಜಿಟಲ್ ಈಕ್ವಿಪ್‌ಮೆಂಟ್ ಕಾರ್ಪೋರೇಶನ್‌ನ ಗಣಕಗಳಲ್ಲಿ DECnet, ಮತ್ತು Windowsನಲ್ಲಿ Microsoft-ನಿರ್ದಿಷ್ಟ ಪ್ರೋಟೊಕಾಲ್ (SMB). ನಿರ್ದಿಷ್ಟ ಕಾರ್ಯಗಳಿಗಾಗಿ ನಿರ್ದಿಷ್ಟ ಪ್ರೋಟೊಕಾಲ್‌ಗಳನ್ನು, ಉದಾಹರಣೆಗೆ ಕಡತ ಪ್ರವೇಶಕ್ಕಾಗಿ NFS ಲಭ್ಯವಿರುವಂತೆ ಸಹ ಕಾರ್ಯಾಚರಣ ವ್ಯವಸ್ಥೆಯು ಬೆಂಬಲಿಸಬಹುದು. ಅಸನ್ನಿಹಿತ ಗಣಕದ ಧ್ವನಿ ಯಂತ್ರಾಂಶದ ಮೂಲಕ ಧ್ವನಿಯನ್ನು ಒದಗಿಸಲು ಸಾಧ್ಯವಾಗುವಂತೆ ESound ಅಥವಾ esdನಂತಹ ಪ್ರೋಟೊಕಾಲ್‌ಗಳ ಸಹಾಯದಿಂದ ಸ್ಥಳೀಯ ಅನ್ವಯಗಳನ್ನು ವಿಸ್ತರಿಸಬಹುದಾಗಿರುತ್ತದೆ.

ಭದ್ರತೆ

[ಬದಲಾಯಿಸಿ]

ಹಲವಾರು ತಂತ್ರಜ್ಞಾನಗಳು ಸರಿಯಾಗಿ ಕೆಲಸ ಮಾಡುವುದರ ಮೇಲೆ ಗಣಕ ಸುರಕ್ಷತೆ ಅವಲಂಬಿತವಾಗಿರುತ್ತದೆ. ಆಧುನಿಕ ಕಾರ್ಯಾಚರಣಾ ವ್ಯವಸ್ಥೆಯು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಾಂಶಗಳಿಗೆ ಲಭ್ಯವಿರುವ ಅನೇಕ ಸಂಪನ್ಮೂಲಗಳನ್ನು ಕರ್ನಲ್‌‌ನ ಸಹಾಯದಿಂದ ಜಾಲ‌ಗಳಂತಹ ಬಾಹ್ಯ ಸಾಧನಗಳಿಗೆ ಪ್ರವೇಶ ನೀಡುವುದು.

ಕಾರ್ಯಾಚರಣಾ ವ್ಯವಸ್ಥೆಯು ಯಾವ ವಿನಂತಿಯನ್ನು ಪ್ರಕ್ರಿಯೆಗೊಳಿಸಬೇಕು, ಮತ್ತು ಇತರ ಯಾವುದನ್ನು ಪ್ರಕ್ರಿಯೆಗೊಳಿಸಬಾರದು ಎನ್ನುವುದರ ನಡುವಿನ ವ್ಯತ್ಯಾಸವನ್ನು ಅರ್ಥೈಸಿಕೊಳ್ಳಬೇಕು. ಕೆಲವು ವ್ಯವಸ್ಥೆಗಳು "ಸೌಲಭ್ಯ ಹೊಂದಿದ" ಮತ್ತು "ಸೌಲಭ್ಯ-ಹೊಂದಿರದ" ನಡುವಿನ ವ್ಯತ್ಯಾಸವನ್ನು ಸರಳವಾಗಿ ಗುರುತಿಸಿದರೂ, ಸಾಮಾನ್ಯವಾಗಿ ಬಳಕೆದಾರರ ಹೆಸರಿನಂತಹ ವಿನಂತಿದಾರರ ಗುರುತ ನ್ನು ಸ್ಪಷ್ಟಪಡಿಸುವಂತಹಾ ಏರ್ಪಾಟನ್ನು ಹೊಂದಿರುತ್ತವೆ. ಗುರುತನ್ನು ಸ್ಥಾಪಿಸುವುದಕ್ಕೆ ದೃಢೀಕರಣದ ಪ್ರಕ್ರಿಯೆ ಇರಬಹುದು. ಕೆಲವೊಮ್ಮೆ ಬಳಕೆದಾರರ ಹೆಸರನ್ನು ಉಲ್ಲೇಖಿಸಬೇಕಾಗುತ್ತದೆ, ಮತ್ತು ಪ್ರತಿ ಬಳಕೆದಾರ ಹೆಸರು ತನ್ನದೇ ಆದ ಸಂಕೇತ ಪದವನ್ನು ಹೊಂದಿರಬೇಕು.ಬದಲಿಗೆ ಕಾಂತೀಯ ಕಾರ್ಡ್‌ಗಳು ಮತ್ತು ಬಯೋಮ್ಯಾಟ್ರಿಕ್ ದತ್ತಾಂಶದಂತಹ ಇತರ ದೃಢೀಕರಣ ವಿಧಾನಗಳನ್ನು ಬಳಸಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಜಾಲ ಸಂಪನ್ಮೂಲಗಳಿಂದ ಸಂಪರ್ಕಗಳು ಯಾವುದೇ ದೃಢೀಕರಣವಿಲ್ಲದೆ ಪ್ರವೇಶಿಸಬಹುದಾಗಿದೆ (ಜಾಲ ಹಂಚಿಕೆಯಾದ್ಯಂತ ಕಡತ‌ಗಳನ್ನು ಓದಿದಂತೆ). ವಿನಂತಿದಾರರ ಗುರುತು ವಿಷಯವು ಸಹ ದೃಢೀಕರಣ ದ ಪ್ರಕ್ರಿಯೆಯ ಭಾಗವಾಗಿದೆ; ನಿರ್ದಿಷ್ಠ ಸೇವೆ ಮತ್ತು ಸಂಪನ್ಮೂಲಗಳು ವ್ಯವಸ್ಥೆಗೆ ಒಮ್ಮೆ ಲಾಗ್ ಇನ್ ಆದ ನಂತರ ವಿನಂತಿದಾರರಿಗೆ ಪ್ರವೇಶಾನುಮತಿಸಲ್ಪಡುತ್ತದೆ ಮತ್ತು ವಿನಂತಿದಾರರ ಬಳಕೆದಾರ ಖಾತೆ ಅಥವಾ ವಿನಂತಿದಾರರಿಗೆ ಸಂಬಂಧಿಸಿದಂತೆ ವಿವಿಧ ಕಾನ್ಫಿಗರ್ ಮಾಡಿದ ಗುಂಪುಗಳಿಗೆ ಸಂಪರ್ಕಿಸಿರಲಾಗಿರುತ್ತದೆ.

ಸಾಧಾರಣವಾದ ಅನುಮತಿ/ತಿರಸ್ಕರಣೆ ವ್ಯವಸ್ಥೆಗಳಿಗೆ ಹೆಚ್ಚುವರಿಯಾಗಿ, ಹೆಚ್ಚಿನ ಪ್ರಮಾಣದ ಭದ್ರತೆಯನ್ನು ಹೊಂದಿರುವ ವ್ಯವಸ್ಥೆಯು ಆಡಿಟಿಂಗ್‌ ಆಯ್ಕೆಗಳನ್ನು ಸಹ ನೀಡುವುದು. ಇವುಗಳು ಸಂಪನ್ಮೂಲಗಳಿಗೆ ಪ್ರವೇಶ ಪಡೆವ ವಿನಂತಿಗಳ ಜಾಡನ್ನು ಪತ್ತೆಹಚ್ಚುವುದಕ್ಕೆ ಅನುವು ಮಾಡಿಕೊಡುವವು("ಈ ಕಡತವನ್ನು ಯಾರು ಓದುತ್ತಿದ್ದಾರೆ?" ಎಂಬಂತೆ). ಆಂತರಿಕ ಭದ್ರತೆ ಅಥವಾ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪ್ರೋಗ್ರಾಂನಿಂದ ಭದ್ರತೆಯು, ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ ಇಂಟರಪ್ಟ್‌ಗಳ ಮೂಲಕ ಎಲ್ಲಾ ಸಂಭಾವ್ಯ ಹಾನಿಕಾರಕ ವಿನಂತಿಗಳನ್ನು ನಿರ್ವಹಿಸುವುದಾಗಿದ್ದರೆ ಮಾತ್ರವೇ ಕಾರ್ಯಸಾಧ್ಯವಾಗುವುದು. ಒಂದು ವೇಳೆ ಯಾವುದೇ ಪ್ರೋಗ್ರಾಂ ಯಂತ್ರಾಂಶ ಮತ್ತು ಸಂಪನ್ಮೂಲಗಳನ್ನು ನೇರವಾಗಿ ಪ್ರವೇಶಿಸುತ್ತಿದ್ದರೆ, ಅವುಗಳನ್ನು ಸುರಕ್ಷಿತವಾಗಿಡಲಾಗುವುದಿಲ್ಲ.

ಸಂಪರ್ಕಿಸಿದ ಕನ್ಸೋಲ್ ಅಥವಾ ಕೆಲವು ಜಾಲ ಸಂಪರ್ಕಗಳಲ್ಲಿ, ಲಾಗಿನ್‌ನಂತಹ ಗಣಕಕ್ಕೆ ಹೊರಗಡೆಯಿಂದ ಬರುವ ವಿನಂತಿಯ ನಿರ್ವಹಣೆಯು ಬಾಹ್ಯ ಭದ್ರತೆಯ ನಿರ್ವಹಣೆಯ ಭಾಗವಾಗಿರುವುದು. ಬಾಹ್ಯ ವಿನಂತಿಗಳು ಆಗಾಗ್ಗೆ ಸಾಧನ ಡ್ರೈವರ್‌ಗಳ ಮೂಲಕ ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌‌ನ್ನು ತಲುಪಿ, ಅನ್ವಯಗಳಿಗೆ ವಿನಂತಿಯನ್ನು ಹಸ್ತಾಂತರಿಸಲಾಗುವುದು ಇಲ್ಲವೇ ನೇರವಾಗಿ ನಿರ್ವಹಿಸಲಾಗುವುದು. ಕಾರ್ಯಾಚರಣಾ ವ್ಯವಸ್ಥೆಗಳ ಭದ್ರತೆಯು ದೀರ್ಘಾವಧಿಯ ಉದ್ದೇಶವನ್ನು ಹೊಂದಿದೆ, ಏಕೆಂದರೆ ವಾಣಿಜ್ಯ ಮತ್ತು ಸೈನ್ಯಕ್ಕೆ ಎರಡಕ್ಕೂ ಸಂಬಂಧಿಸಿದ ಅತೀ ಸೂಕ್ಷ್ಮ ದತ್ತಾಂಶವನ್ನು ಗಣಕವು ಹೊಂದಿರುವುದು. ಭದ್ರತೆಯ ಪ್ರಭಾವವನ್ನು ನಿರ್ಧರಿಸುವುದಕ್ಕಾಗಿ ಮೂಲ ಅವಶ್ಯಕತೆಗಳನ್ನು ಹೊಂದುವ ಮಾನಕವಾಗಿ ನಂಬಲರ್ಹ ಗಣಕ ವ್ಯವಸ್ಥೆ ಮೌಲ್ಯಮಾಪನ ಮಾನದಂಡ (TCSEC)ನ್ನು ಅಮೇರಿಕಾ ಸರಕಾರರಕ್ಷಣಾ ಇಲಾಖೆ(DoD) ರಚಿಸಿದೆ. TCSECಯು ಸಾಮಾನ್ಯವಾಗಿ ಗಣಕ ವ್ಯವಸ್ಥೆಗಳನ್ನು ಪರಿಶೀಲಿಸಿ ಪ್ರಕ್ರಿಯೆ, ಸಂಗ್ರಹಣೆ ಮತ್ತು ಸೂಕ್ಷ್ಮತೆಯ, ಅಥವಾ ವರ್ಗೀಕರಿಸಿದ ಮಾಹಿತಿಯ ಆಧಾರದ ಮೇಲೆ ವಿಂಗಡಿಸುತ್ತದೆ. ಆದ್ದರಿಂದ TCSECಯು ಕಾರ್ಯಾಚರಣಾ ವ್ಯವಸ್ಥೆ ರಚನೆಗಾರರಿಗೆ ಮಹತ್ವದ್ದಾಗಿದೆ.

ಕಡತ ಹಂಚಿಕೆ, ಮುದ್ರಣ ಸೇವೆಗಳು, ಇಮೇಲ್, ಜಾಲತಾಣಗಳು, ಮತ್ತು ಕಡತ ವರ್ಗಾವಣೆ ಪ್ರೋಟೊಕಾಲ್‌ ಗಳಂತಹವನ್ನು (FTP) ಜಾಲ ಸೇವೆಗಳು ನೀಡುತ್ತದೆ, ಇವುಗಳಲ್ಲಿ ಹೆಚ್ಚಿನವು ಭದ್ರತೆಯನ್ನು ರಾಜಿಮಾಡಿಕೊಳ್ಳಬಹುದಾಗಿದೆ. ಭದ್ರತೆಯ ಮೊದಲ ಸಾಲಿನಲ್ಲಿ ಫೈರ್‌ವಾಲ್‌ ಗಳೆಂದು ಹೆಸರಾಗಿರುವ ಯಂತ್ರಾಂಶ ಸಾಧನಗಳು ಅಥವಾ ಅನುಮತಿಯಿಲ್ಲದ ಪ್ರವೇಶವನ್ನು ಪತ್ತೆಹಚ್ಚುವ/ತಡೆಯುವ ವ್ಯವಸ್ಥೆಗಳಿರುತ್ತವೆ. ಕಾರ್ಯಾಚರಣಾ ವ್ಯವಸ್ಥೆಯ ಮಟ್ಟದಲ್ಲಿ, ಅನುಮತಿಯಿಲ್ಲದ ಪ್ರವೇಶವನ್ನು ಪತ್ತೆಹಚ್ಚುವಿಕೆ/ತಡೆಗಟ್ಟುವಿಕೆ ವ್ಯವಸ್ಥೆಗಳಂತಹ ಹೆಚ್ಚಿನ ತಂತ್ರಾಂಶ ಫೈರ್‌ವಾಲ್‌ಗಳು ಲಭ್ಯವಿದೆ. ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳು ಸಹಜವಾಗಿ ಸಶಕ್ತವಾಗಿರುವ ತಂತ್ರಾಂಶ ಫೈರ್‌ವಾಲ್ ಒಳಗೊಂಡಿರುತ್ತದೆ. ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವೆಗಳು ಅಥವಾ ಅನ್ವಯಗಳಿಗೆ ಒಳಬರುವ ಇಲ್ಲವೇ ಹೊರಹೋಗುವ ಜಾಲ ದಟ್ಟಣೆಯನ್ನು ಅನುಮತಿಸಲು ಮತ್ತು ತಿರಸ್ಕರಿಸಲು ತಂತ್ರಾಂಶ ಫೈರ್‌ವಾಲ್‌ಗಳನ್ನು ಕಾನ್ಫಿಗರ್ ಮಾಡಬಹುದು. ಅದಕ್ಕಾಗಿ, Telnet ಅಥವಾ FTPನಂತಹ ಹಾಗೂ ಭದ್ರತೆ ಭಂಗದಿಂದ ಅಪಾಯಕ್ಕೆ ಒಳಗಾಗದ ಅಸುರಕ್ಷಿತ ಸೇವೆಯನ್ನು ಸ್ಥಾಪಿಸಿ ಕಾರ್ಯನಿರ್ವಹಿಸಿದರೂ, ಆ ಪೋರ್ಟ್‌ನಲ್ಲಿ ಸೇವೆಗೆ ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಎಲ್ಲಾ ದಟ್ಟಣೆಯನ್ನು ಫೈರ್‌ವಾಲ್ ತಿರಸ್ಕರಿಸಬಹುದಾದ್ದರಿಂದ ಭದ್ರತೆ ಭಂಗದ ಅಪಾಯವಿಲ್ಲ.

ಪೊಪೆಕ್ ಮತ್ತು ಗೋಲ್ಡ್‌ಬರ್ಗ್ ವರ್ಚುವಲೈಜೇಶನ್ ಅಗತ್ಯತೆಗಳನ್ನು ಪೂರೈಸದ ವ್ಯವಸ್ಥೆಗಳಲ್ಲಿ ಸಾಧ್ಯವಿರುವ ಏಕೈಕ ಸ್ಯಾಂಡ್‌ಬಾಕ್ಸ್ ಕಾರ್ಯವಿಧಾನವೆಂದರೆ, ಕಾರ್ಯಾಚರಣಾ ವ್ಯವಸ್ಥೆಯು ಬಳಕೆದಾರ ಪ್ರೋಗ್ರಾಂಗಳನ್ನು ಸ್ಥಳೀಯ ಕೋಡ್‌ನಂತೆ ನಿರ್ವಹಿಸದೇ, ಬದಲಿಗೆ ಪ್ರೊಸೆಸರ್ ಅನುಕರಿಸುವುದು ಇಲ್ಲವೇ ಪಿ-ಕೋಡ್ ಆಧಾರಿತ Javaದಂತಹ ವ್ಯವಸ್ಥೆಯನ್ನು ನೀಡುವುದು.

ಆಂತರಿಕ ಭದ್ರತೆಯು ವಿಶೇಷವಾಗಿ ಬಹು-ಬಳಕೆದಾರ ಗಣಕಗಳಿಗೆ ಸಂಬಂಧಪಟ್ಟಿದ್ದು, ಗಣಕದ ಪ್ರತಿ ಬಳಕೆದಾರರಿಗೆ ಇತರ ಬಳಕೆದಾರರು ಬದಲಾಯಿಸಲಾಗದ ಅಥವಾ ಓದಲಾಗದ ಖಾಸಗಿ ಫೈಲ್‌ಗಳನ್ನು ಹೊಂದಲು ಅನುಮತಿಸುತ್ತದೆ. ಆಡಿಟಿಂಗ್‌ ಅಗತ್ಯವೆನಿಸಿದ ಪಕ್ಷದಲ್ಲಿ ಆಂತರಿಕ ಸುರಕ್ಷಾ ವ್ಯವಸ್ಥೆಯು ಪ್ರಮುಖವಾಗಿರುತ್ತದೆ. ಏಕೆಂದರೆ ಕಾರ್ಯಾಚರಣಾ ವ್ಯವಸ್ಥೆಯನ್ನು ಉಪೇಕ್ಷಿಸಿದ ಪ್ರೋಗ್ರಾಂವೊಂದು ಆಡಿಟಿಂಗ್‌ನ್ನು ಸಹಾ ಉಪೇಕ್ಷಿಸಬಹುದಾಗಿದೆ.

ಉದಾಹರಣೆ: Microsoft Windows

[ಬದಲಾಯಿಸಿ]

Windows 9x ಸರಣಿಗಳು ಬಹು ಬಳಕೆದಾರರಿಗೆ ಪ್ರೊಫೈಲ್‌ಗಳನ್ನು ಹೊಂದುವ ಆಯ್ಕೆಯನ್ನು ನೀಡಿದಾಗ, ಅದರಲ್ಲಿ ಪ್ರವೇಶಾನುಮತಿ ಸೌಲಭ್ಯದ ಕಲ್ಪನೆ ಇರಲಿಲ್ಲ, ಮತ್ತು ಸಹಗಾಮಿ ಪ್ರವೇಶವನ್ನು ಅನುಮತಿಸುತ್ತಿರಲಿಲ್ಲ; ಮತ್ತು ಹಾಗಾಗಿಯೇ ಅವುಗಳು ನೈಜ ಬಹು-ಬಳಕೆದಾರ ಕಾರ್ಯಾಚರಣಾ ವ್ಯವಸ್ಥೆಗಳಾಗಿರಲಿಲ್ಲ. ಹೆಚ್ಚುವರಿಯಾಗಿ, ಅವು ಭಾಗಶಃ ಸ್ಮರಣೆ ಸುರಕ್ಷತೆ ಮಾತ್ರ ನಿರ್ವಹಿಸುತ್ತಿದ್ದವು. ಅಂತೆಯೇ ಅವು ಭದ್ರತೆಯ ಕೊರತೆಗಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟಿವೆ.

Windows NT ಕಾರ್ಯಾಚರಣಾ ವ್ಯವಸ್ಥೆಗಳ ಸರಣಿಯು ನೈಜ ಬಹು-ಬಳಕೆದಾರ ವ್ಯವಸ್ಥೆಯಾಗಿದ್ದು, ಸಮಗ್ರ ಸ್ಮರಣೆ ಸಂರಕ್ಷಣೆ ನಿರ್ವಹಣೆಯಿಂದ ಭಿನ್ನವಾಗಿದೆ. ಹೀಗಿದ್ದರೂ, Windows Vistaಗಿಂತ ಹಿಂದಿನ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ, ಸೆಟಪ್ ಪ್ರಕ್ರಿಯೆಯ ಸಮಯದಲ್ಲಿ ರಚಿತವಾಗುವ ಮೊದಲ ಬಳಕೆದಾರ ಖಾತೆಯು ನಿರ್ವಾಹಕರ ಖಾತೆಯಾಗಿದ್ದು, ಹೊಸ ಖಾತೆಗಳೂ ಸಹಾ ಸಾಧಾರಣವಾಗಿ ನಿರ್ವಾಹಕರ ಖಾತೆಯಾಗಿಯೇ ರಚಿಸಲಾಗಿರುತ್ತಿದ್ದರಿಂದ ನೈಜ ಬಹು-ಬಳಕೆದಾರ ವ್ಯವಸ್ಥೆಯ ಹೆಚ್ಚಿನ ಅನುಕೂಲಗಳು ಅನುಪಯುಕ್ತವಾಗಿದ್ದವು. Windows XP ಮಿತವಾದ ಖಾತೆಗಳನ್ನು ಹೊಂದಿದ್ದರೂ ಸಹ, ಅಸಂಖ್ಯ ಪ್ರೋಗ್ರಾಂಗಳು ನಿರ್ವಾಹಕರ ಹಕ್ಕುಗಳನ್ನು ಅನಗತ್ಯವಾಗಿ ಕೇಳುವುದರಿಂದ, ಗೃಹ ಬಳಕೆದಾರರಲ್ಲಿ ಬಹುಮಂದಿ ಭಾಗಶಃ ನಿರ್ವಾಹಕ ಹಕ್ಕುಗಳ ಖಾತೆ ಪ್ರಕಾರಕ್ಕೆ ಬದಲಾಯಿಸಿಕೊಳ್ಳುವುದಿಲ್ಲ. ಹೀಗಾಗಿ ಯಾವಾಗಲೂ ಹೆಚ್ಚಿನ ಗೃಹ ಬಳಕೆದಾರರು ನಿರ್ವಾಹಕರಂತೆ ಕಾರ್ಯನಿರ್ವಹಿಸಿರುತ್ತಾರೆ.

ಇದನ್ನು [] ಬದಲಾಯಿಸಿ Windows Vistaವು ಬಳಕೆದಾರ ಖಾತೆ ನಿಯಂತ್ರಣ ಎಂದು ಕರೆಯಲ್ಪಡುವ ಸೌಲಭ್ಯ ಉನ್ನತಿ ವ್ಯವಸ್ಥೆಯನ್ನು ಪರಿಚಯಿಸಿತು. ಪ್ರಮಾಣಿತ ಬಳಕೆದಾರರಂತೆ ಲಾಗ್ ಇನ್ ಆದಾಗ, ಲಾಗಾನ್ ಅಧಿವೇಶನ ರಚಿಸಲಾಗುವುದು ಮತ್ತು ಮೂಲ ಸೌಲಭ್ಯಗಳನ್ನು ಮಾತ್ರ ಒಳಗೊಂಡಿರುವ ಟೋಕನ್‌ನ್ನು ನಿಗದಿಮಾಡಲಾಗುವುದು. ಈ ರೀತಿಯಲ್ಲಿ, ಹೊಸ ಲಾಗಾನ್ ಅಧಿವೇಶನವು ಪೂರ್ಣ ಗಣಕದ ಮೇಲೆ ಪರಿಣಾಮ ಮಾಡಬಹುದಾದ ಬದಲಾವಣೆಗಳನ್ನು ಮಾಡಲು ಅಸಮರ್ಥವಾಗಿರುತ್ತದೆ. ನಿರ್ವಾಹಕರ ಗುಂಪಿನ ಬಳಕೆದಾರರಂತೆ ಲಾಗ್ ಇನ್ ಮಾಡುವಾಗ, ಎರಡು ಪ್ರತ್ಯೇಕ ಟೋಕನ್‌ಗಳನ್ನು ನಿಗದಿ ಪಡಿಸಲಾಗುತ್ತದೆ. ಮೊದಲ ಟೋಕನ್ ನಿರ್ವಾಹಕರಿಗೆ ನೀಡಲಾಗುವ ಎಲ್ಲಾ ಸೌಲಭ್ಯವನ್ನು ಹೊಂದಿರುವುದು, ಮತ್ತು ಎರಡನೆಯದು ಪ್ರಮಾಣಿತ ಬಳಕೆದಾರರು ಪಡೆಯಬಹುದಾದ ನಿರ್ಬಂಧಿತ ಟೋಕನ್ ಆಗಿದೆ. Windows ಶೆಲ್‌ ಸೇರಿದಂತೆ ಬಳಕೆದಾರ ಅನ್ವಯಗಳು ನಂತರ ನಿರ್ಬಂಧಿತ ಟೋಕನ್‌ಗಳೊಂದಿಗೆ, ಅದೂ ಸಹ ನಿರ್ವಾಹರ ಖಾತೆಯಡಿಯಲ್ಲಿಯೂ ಮಿತಿಗೊಳಿಸಿದ ಸೌಲಭ್ಯದಲ್ಲಿ ಕಾರ್ಯಾಚರಿಸುವುದು. ಹೆಚ್ಚಿನ ಸೌಲಭ್ಯಗಳಿಗೆ ಅನ್ವಯಗಳು ವಿನಂತಿಸಿದಾಗ ಅಥವಾ "ನಿರ್ವಾಹಕರಂತೆ ಕಾರ್ಯನಿರ್ವಹಿಸಿ" ಅನ್ನು ಕ್ಲಿಕ್ ಮಾಡಿದಾಗ, UACವು ದೃಢೀಕರಣ ಕೇಳುತ್ತದೆ ಮತ್ತು, ಒಂದು ವೇಳೆ ಒಪ್ಪಿಗೆ ನೀಡಿದರೆ (ನಿರ್ವಾಹಕರ ದಾಖಲೆಗಳು ಸೇರಿದಂತೆ, ಉನ್ನತಿಯನ್ನು ವಿನಂತಿಸುತ್ತಿರುವ ಖಾತೆಯು ನಿರ್ವಾಹಕರ ಗುಂಪಿನ ಸದಸ್ಯರಲ್ಲದಿದ್ದರೆ), ನಿರ್ಬಂಧಿತವಲ್ಲದ ಟೋಕನ್ ಬಳಸಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.[]

ಉದಾಹರಣೆ:Linux/Unix

[ಬದಲಾಯಿಸಿ]

ಎಲ್ಲಾ UNIX-ಮಾದರಿಯ ಗಣಕಗಳಲ್ಲಿನ ವಿಶೇಷ ಬಳಕೆದಾರ ಖಾತೆಯಾದ ರೂಟ್‌ ಬಳಕೆದಾರ ಮಾತ್ರವೇ ಗಣಕದಾದ್ಯಂತ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುವಂತಹಾ ಮಿತಿಯನ್ನು ಹೊಂದಿರುವ Linux ಮತ್ತು UNIXಗಲೆರಡೂ ಎರಡು ಶ್ರೇಣಿಯ ಭದ್ರತೆಯನ್ನು ಹೊಂದಿವೆ. ರೂಟ್‌ ಬಳಕೆದಾರ ವಾಸ್ತವಿಕವಾಗಿ ವ್ಯವಸ್ಥಾ ಬದಲಾವಣೆಗಳಿಗಾಗಿ ಅನಿಯಮಿತ ಅನುಮತಿಗಳನ್ನು ಹೊಂದಿದ್ದರೆ, ಸಾಧಾರಣ ಬಳಕೆದಾರರಿಂದ ಚಾಲಿತವಾದ ಪ್ರೋಗ್ರಾಂಗಳು ಕಡತಗಳನ್ನು ಉಳಿಸುವ ಸ್ಥಳ, ಬಳಸಬಹುದಾದ ಯಂತ್ರಾಂಶಗಳು ಇತ್ಯಾದಿ ನಿಯಂತ್ರಣಕ್ಕೊಳಪಟ್ಟಿವೆ. ಅನೇಕ ವ್ಯವಸ್ಥೆಗಳಲ್ಲಿ ಬಳೆಕದಾರನ ಸ್ಮರಣೆ ಬಳಕೆ, ಲಭ್ಯವಿರುವ ಪ್ರೋಗ್ರಾಂಗಳು, ಅವರ ಒಟ್ಟು ಡಿಸ್ಕ್‌‌ ಬಳಕೆ ಅಥವಾ ಮಿತಿ, ಪ್ರೋಗ್ರಾಂಗಳ ಆದ್ಯತೆ ಸಜ್ಜಿಕೆಗಳ ಲಭ್ಯವಿರುವ ಶ್ರೇಣಿ, ಮತ್ತು ಇತರ ಕಾರ್ಯಗಳನ್ನು ಸಹಾ ನಿಯಂತ್ರಣಕ್ಕೊಳಪಡಿಸಬಹುದು. ಇದರಿಂದಾಗಿ ಬಳಕೆದಾರರಿಗೆ ಅಪರಿಮಿತ ಸ್ವಾತಂತ್ರ್ಯವು ನೀಡಿದರೂ ಸಹಾ, ಗಣಕ ವ್ಯವಸ್ಥೆಯ ಯಾವುದೇ ಭಾಗವನ್ನು ಗಂಡಾಂತರಕ್ಕೊಳಪಡಿಸದೇ(ವ್ಯವಸ್ಥಾ-ಮಟ್ಟದ ಬಗ್‍‌ಗಳ ಆಕಸ್ಮಿಕ ಪ್ರಚೋದನೆಗಳನ್ನು ಹೊರತುಪಡಿಸಿ) ಇಲ್ಲವೇ ಸಾರಾ ಸಗಟಾಗಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಹಾಳು ಮಾಡದೇ ಇರಲು ಸಾಧ್ಯವಾಗಿದೆ. ನಂತೆ ನಿಂದ ಅನುಸರಿಸಿದ ಕಲ್ಪನೆ ನಂತರ ಬಳಕೆದಾರನ ಸಜ್ಜಿಕೆಗಳನ್ನು, ಹಾಗೂ ಅದೇ ರೀತಿಯಲ್ಲಿ ತನ್ನ ಕಾರ್ಯಸಂಬಂಧಿ ಕಡತಗಳನ್ನೂ ಸಹಾ ಗೃಹ ಡೈರೆಕ್ಟರಿ ಎಂದು ಕರೆಯಲ್ಪಡುವ ಗಣಕದ ಕಡತ ವ್ಯವಸ್ಥೆಯ ಒಂದು ಭಾಗದಲ್ಲಿ ಸಂಗ್ರಹಿಸುವ ವ್ಯವಸ್ಥೆಯ ಕಲ್ಪನೆಯನ್ನು ನಂತರ Windows ಅನುಸರಿಸಿ 'My Documents' ಫೋಲ್ಡರ್‌ ಎಂದು ಕರೆಯಿತು. ಬಳಕೆದಾರ ಗೃಹ ಡೈರೆಕ್ಟರಿಯ ಹೊರಗೆ ತಂತ್ರಾಂಶವನ್ನು ಸ್ಥಾಪಿಸಬೇಕಾದರೆ ಅಥವಾ ಗಣಕದಾದ್ಯಂತ ಬದಲಾವಣೆಗಳನ್ನು ಮಾಡಬೇಕಾದರೆ, ತಾತ್ಕಾಲಿಕವಾಗಿ ರೂಟ್‌ ಬಳಕೆದಾರನಾಗಿ ಬದಲಾಗಬೇಕಾಗುತ್ತದೆ. ಇದಕ್ಕಾಗಿ ಸಾಮಾನ್ಯವಾಗಿ su ಅಥವಾ ಸೂಡೊ ಆದೇಶ ನೀಡಿದ ನಂತರ ಗಣಕವು ಕೇಳಿದಾಗ ರೂಟ್‌ ಸಂಕೇತಪದ ನೀಡಿರಬೇಕು. ಕೆಲವು ವ್ಯವಸ್ಥೆಗಳು (Ubuntu ಮತ್ತು ಅದರ ಉತ್ಪನ್ನಗಳಂತಹವು) ಪ್ರೋಗ್ರಾಂಗಳನ್ನು ರೂಟ್‌ ಬಳಕೆದಾರರಂತೆ ಚಾಲಿಸಲು sudo ಆದೇಶದ ನಂತರ ದೃಢೀಕರಣಕ್ಕಾಗಿ ಗಣಕದ ರೂಟ್‌ ಸಂಕೇತಪದದ ಬದಲು ಬಳಕೆದಾರರ ಸ್ವಂತ ಸಂಕೇತಪದವನ್ನು ಬಳಸುವಂತೆ ಸಾಧಾರಣವಾಗಿ ವಿನ್ಯಾಸಗೊಂಡಿರುತ್ತದೆ. ರೂಟ್‌ ಪ್ರವೇಶಕ್ಕೆ ಉನ್ನತೀಕರಿಸುವಾಗ ಒಬ್ಬರನ್ನು ಮೇಲಕ್ಕೇರಿಸುವಾಗ, ಕೆಲವೊಮ್ಮೆ "ರೂಟ್‌ಗೆ ಚಲಿಸಿ" ಅಥವಾ “ರೂಟ್‌ಗೆ ಇಳಿಸಿ" ಎಂದು ಹೇಳಲಾಗುತ್ತದೆ.

Linux su/sudo ವಿಧಾನ ಮತ್ತು Vista ದ ಬಳಕೆದಾರ ಖಾತೆ ನಿಯಂತ್ರಣ ದ ನಡುವಿನ ವ್ಯತ್ಯಾಸಗಳಲ್ಲಿ ಹೆಚ್ಚಿನ ಮಾಹಿತಿಗಾಗಿ, ಸೌಲಭ್ಯ ದೃಢೀಕರಣ ವೈಶಿಷ್ಟ್ಯಗಳ ಹೋಲಿಕೆಯನ್ನು ನೋಡಿ.

ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಕಡತ ವ್ಯವಸ್ಥೆ ಬೆಂಬಲ

[ಬದಲಾಯಿಸಿ]

ಸರಿಸುಮಾರು ಎಲ್ಲಾ ಕಾರ್ಯಚರಣಾ ವ್ಯವಸ್ಥೆಗಳಲ್ಲೂ ಬೆಂಬಲಿತವಾಗಿರುವ, ಬೆಂಬಲ ಮತ್ತು ಡ್ರೈವರ್ ಲಭ್ಯವಿರುವ ಹಲವು ಸಾಮಾನ್ಯ ಕಡತ ವ್ಯವಸ್ಥೆಗಳಿದ್ದರೂ ಸಹ ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳಾದ್ಯಂತ ಕಡತ ವ್ಯವಸ್ಥೆಗಳ ಬೆಂಬಲವು ವೈವಿಧ್ಯಮಯವಾಗಿವೆ.

Solaris ಕಾರ್ಯಾಚರಣಾ ವ್ಯವಸ್ಥೆಯು (ತೆರೆದ ಮಾಪನಗಳು ಮತ್ತು/ಅಥವಾ ತೆರೆದ ಮೂಲ ಆಧಾರದ ಮೇಲೆ ಹೆಚ್ಚಿನ ಕಾರ್ಯಚರಣಾ ವ್ಯವಸ್ಥೆಯೊಂದಿಗೆ) ತನ್ನ ಪ್ರಾಥಮಿಕ ಕಡತ ವ್ಯವಸ್ಥೆಯಂತೆ UFSನ್ನು ಬಳಸುತ್ತದೆ. 1998ರ ಹಿಂದೆ, Solaris UFSವು ಲಾಗಿಂಗ್/ಜರ್ನಲಿಂಗ್ ಸಾಮರ್ಥ್ಯಗಳನ್ನು ಹೊಂದಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ OS ಇದು ಮತ್ತು ಇತರ ಹೊಸ ದತ್ತಾಂಶ ನಿರ್ವಹಣೆ ಸಾಮರ್ಥ್ಯಗಳನ್ನು ಪಡೆದುಕೊಂಡಿತು.

ಸನ್ ಮೈಕ್ರೊ ಸಿಸ್ಟಮ್ಸ್‌ನಿಂದ Veritas (ಜರ್ನಲಿಂಗ್) VxFS, QFS ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡಿರುವುದು, ಬಹು ಟೆರಾಬೈಟ್ ಬೆಂಬಲ ಮತ್ತು OSನ ಭಾಗವು ಸೇರಿದಂತೆ UFS ಸಂಪುಟ ನಿರ್ವಹಣೆ ಸೇರಿದಂತೆ UFSಗೆ ವರ್ಧಕಗಳು, ಮತ್ತು ZFS (ತೆರೆದ ಮೂಲ, ಪೂಲ್ ಮಾಡಬಹುದಾದ, 128-ಬಿಟ್, ಕುಗ್ಗಿಸಲಾಗುವ, ಮತ್ತು ದೋಷ-ಸರಿಪಡಿಸುವುದು).

ಕರ್ನಲ್‌ ವಿಸ್ತರಣೆಗಳನ್ನು ಬೂಟ್‌ ಮಾಡಬಹುದಾದ Veritas VxFS ಕಾರ್ಯಚರಣೆಗೆ ಅನುಮತಿಸಲು Solarisಗೆ ಸೇರಿಸಲಾಗಿದೆ. ಲಾಗಿಂಗ್‌ ಅಥವಾ ಜರ್ನಲಿಂಗ್‌ನ್ನು Solaris 7ನಲ್ಲಿ UFSಗೆ ಸೇರಿಸಲಾಗಿದೆ. Solaris 10ನ ಆವೃತ್ತಿಗಳು, Solaris Express, OpenSolaris, ಮತ್ತು ನಂತರದ ಇತರ Solarisನ ತೆರದ ಮೂಲದ ಉತ್ಪನ್ನಗಳ ಬೂಟ್ ಮಾಡಬಹುದಾದ ZFS ಅನ್ನು ಬೆಂಬಲಿಸುವುದು.

ತರ್ಕಬದ್ಧ ಸಂಪುಟ ನಿರ್ವಹಣೆಯು ವಿಪುಲತೆ, ಸಾಮರ್ಥ್ಯ, ಮತ್ತು/ಅಥವಾ ಗಣಕದಾದ್ಯಂತ ಸೇರಿಸುವ ಉದ್ದೇಶಕ್ಕಾಗಿ ಬಹುಸಾಧನಗಳಾದ್ಯಂತ ಕಡತ ವ್ಯವಸ್ಥೆಯನ್ನು ಹಾದುಹೋಗುವುದಕ್ಕೆ ಅನುಮತಿಸುವುದು. Solaris ಕಾರ್ಯಾಚರಣಾ ವ್ಯವಸ್ಥೆಯು Solaris ಸಂಪುಟ ನಿರ್ವಾಹಕ (ಹಿಂದೆ Solstice DiskSuiteನಂತೆ ತಿಳಿದಿರುವ)ನ್ನು ಒಳಗೊಂಡಿರುತ್ತದೆ. Veritas ಸಂಪುಟ ನಿರ್ವಾಹಕನಿಂದ ಬೆಂಬಲಿಸ್ಪಟ್ಟ ಹಲವು ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಸೊಲಾರಿಸ್ ಕೂಡ ಒಂದು.ಆಧುನಿಕ Solaris ಆಧಾರಿತ ಕಾರ್ಯಾಚರಣಾ ವ್ಯವಸ್ಥೆ ZFSನಲ್ಲಿ ವಾಸ್ತವ ಪ್ರಾಯ ಸಂಗ್ರಹ ಪೂಲ್‌ಗಳ ಪ್ರಭಾವದ ಮೂಲಕ ಸಂಪುಟ ನಿರ್ವಹಣೆಗೆ ಅವಶ್ಯಕತೆಗಳನ್ನು ಭರಿಸುವುದು.

ಹಲವು Linux ಕಾರ್ಯಚರಣ ವ್ಯವಸ್ಥೆಯು ext2, ext3, ext4, ReiserFS, Reiser4, JFS , XFS , GFS, GFS2, OCFS, OCFS2, ಮತ್ತು NILFS ನ ಕೆಲವುದಕ್ಕೆ ಅಥವಾ ಎಲ್ಲದಕ್ಕೂ ಬೆಂಬಲವನ್ನು ನೀಡುವುದು. ext ಕಡತ ವ್ಯವಸ್ಥೆಗಳೆಂದರೆ ಮೂಲ Linux ಕಡತ ವ್ಯವಸ್ಥೆಯಲ್ಲಿ ಆಧಾರಿತವಾಗಿರುವ ext2, ext3 ಮತ್ತು ext4 ಗಳಾಗಿವೆ.ತಮ್ಮ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕಂಪನಿಗಳು ಇತರ ಕಡತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿವೆ, ಹವ್ಯಾಸಿಗಳಿಗಾಗಿ ಅಭಿವೃದ್ಧಿಪಡಿಸಿರುವ ಅಥವಾ UNIX, Microsoft Windows, ಮತ್ತು ಇತರ ಕಾರ್ಯಾಚರಣಾ ವ್ಯವಸ್ಥೆಗಳಿಂದ ಇವುಗಳನ್ನು ಪಡೆಯಲಾಗಿದೆ.Linux ಕಾರ್ಯನಿರ್ವಹಣೆ ವ್ಯವಸ್ಥೆಯು FATನೊಂದಿಗೆ (MS-DOS ಕಡತ ವ್ಯವಸ್ಥೆ) XFS ಮತ್ತು JFSಗಾಗಿ ಪೂರ್ಣ ಬೆಂಬಲವನ್ನು ನೀಡುವುದು ಮತ್ತು HFSವು ಮ್ಯಾಕಿಂತೋಷ್ ನ ಪ್ರಾಥಮಿಕ ಕಡತ ವ್ಯವಸ್ಥೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ Microsoft Windows NTNTFS ಕಡತ ವ್ಯವಸ್ಥೆ Linuxನಲ್ಲಿ ಕಾಣಿಸಿದೆ ಮತ್ತು ಈಗ NTFS ಕಡತ ವ್ಯವಸ್ಥೆಯು ಇತರ ಸ್ಥಳೀಯ UNIX ಕಡತ ವ್ಯವಸ್ಥೆಗಳಿಗೆ ಲಭ್ಯವಿರುವ ಬೆಂಬಲಕ್ಕೆ ಯೋಗ್ಯವಾಗಿದೆ. ISO 9660 ಮತ್ತು ಸಾರ್ವತ್ರಿಕ ಡಿಸ್ಕ್‌‌ ಸ್ವರೂಪ (UDF) CDಗಳು, DVDಗಳು, ಮತ್ತು BluRay ಡಿಸ್ಕ್‌ಗಳಲ್ಲಿ ಬಳಸಿದ ಪ್ರಮಾಣಿತ ಕಡತ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ. Linuxನ್ನು ಹಲವು ಕಡತ ವ್ಯವಸ್ಥೆಗಳಲ್ಲಿ ಸ್ಥಾಪಿಸಲು ಸಾಧ್ಯ. ಇತರ ಕಾರ್ಯಾಚರಣಾ ವ್ಯವಸ್ಥೆಯಂತಲ್ಲದೆ, Linux ಮತ್ತು UNIXವು ಹಾರ್ಡ್‌ಡ್ರೈವ್, ಡಿಸ್ಕ್ (CD,DVD...), USB ಕೀ, ಅಥವಾ ಇನ್ನೊಂದು ಕಡತ ವ್ಯವಸ್ಥೆಯೊಳಗಿರುವ ಕಡತ ಆಗಿದ್ದರೂ ಸಹ, ಮಾದ್ಯಮವು ಯಾವುದರಲ್ಲಿ ಸಂಗ್ರಹಿಸಲ್ಪಟ್ಟಿದೆ ಎನ್ನುವುದಕ್ಕೆ ಸಂಬಂಧಿಸದೆ, ಯಾವುದೇ ಕಡತ ವ್ಯವಸ್ಥೆಯನ್ನು ಅನುಮತಿಸುವುದು.

Microsoft Windows

[ಬದಲಾಯಿಸಿ]

Microsoft Windows ಪ್ರಸ್ತುತವಾಗಿ ಇತರ ಗಣಕಗಳಿಂದ ಹಂಚಿದ ಜಾಲ ಕಡತ ವ್ಯವಸ್ಥೆಗಳು ಹಾಗೂ ISO 9660 ಮತ್ತು CDಗಳು, DVDಗಳು, ಮತ್ತು ಇತರ Blu-rayನಂತಹ ಇತರ ದ್ವುತಿಸಂಶ್ಲೇಷಿತ ಡಿಸ್ಕ್‌ಗಳಿಗೆ ಬಳಸಿದ UDF ಕಡತ ವ್ಯವಸ್ಥೆಯೊಂದಿಗೆ NTFS ಮತ್ತು FAT ಕಡತ ವ್ಯವಸ್ಥೆಯನ್ನು ಬೆಂಬಲಿಸುವುದು.Windowsನಲ್ಲಿ ಪ್ರತಿ ಕಡತ ವ್ಯವಸ್ಥೆಯನ್ನು ನಿರ್ದಿಷ್ಟ ಮಾಧ್ಯಮಕ್ಕೆ ಅನ್ವಯಿಸಲಾಗಿದೆ. ಉದಾಹರಣೆಗೆ CDಗಳು 660 ಅಥವಾ DFನ್ನು ಬಳಸುವುದು ಮತ್ತು Windows vistaದಲ್ಲಿ NTFS ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಸ್ಥಾಪಿಸಿದ ಏಕೈಕ ಕಡತ ವ್ಯವಸ್ಥೆಯಾಗಿದೆ. Windows Embedded CE 6.0, windows vista Service Pack 1, ಮತ್ತು Windows Server 2008ವು ExFAT, ಫ್ಲಾಶ್ ಡ್ರೈವ್‌ಗಳಿಗೆ ಹೆಚ್ಚು ಸೂಕ್ತವಾಗುವ ಕಡತ ವ್ಯವಸ್ಥೆಯನ್ನು ಬೆಂಬಲಿಸವೆ.

Mac OS X ತನ್ನ ಪ್ರಾಥಮಿಕ ಕಡತ ವ್ಯವಸ್ಥೆಯಾಗಿ HFS+ನ್ನು ಜರ್ನಲಿಂಗ್‌‌ನೊಂದಿಗೆ ಬೆಂಬಲಿಸುವುದು. ಈ ಕಡತ ವ್ಯವಸ್ಥೆಯು ಹಿಂದಿನ Mac OSಶ್ರೇಣೀಯ ಕಡತ ವ್ಯವಸ್ಥೆಯಿಂದ ಬಂದಿದೆ. Mac OS Xಯು FAT, NTFS (ಓದಲು ಮಾತ್ರ ಸಾಧ್ಯ, ಆದಾಗ್ಯೂ NTFS 3G ಎಂದು ತಿಳಿದಿರುವ ತೆರೆದ-ಮೂಲ ಪ್ಲಾಟ್‌ಫಾರ್ಮ್‌ನಾದ್ಯಂತ ಕಾರ್ಯಗತಗೊಳಿಸುವಿಕೆಯು Mac OS X ಬಳಕೆದಾರರಿಗಾಗಿ Microsoft Windows NTFS ಕಡತ ವ್ಯವಸ್ಥೆಗೆ ಓದಲು ಮತ್ತು ಬರೆಯುವ ಬೆಂಬಲವನ್ನು ಒದಗಿಸುವುದು.), UDF, ಮತ್ತು ಇತರ ಕಡತ ವ್ಯವಸ್ಥೆಗಳನ್ನು ಓದಲು ಮತ್ತು ಬರೆಯುವ ಸೌಲಭ್ಯವನ್ನು ಹೊಂದಿದೆ. ಆದರೆ ಅವುಗಳನ್ನು ಸ್ಥಾಪಿಸಲಾಗುವುದಿಲ್ಲ. ತನ್ನ UNIX ಪರಂಪರೆಯ ಕಾರಣದಿಂದ Mac OS X ಈಗ UNIX VFSನಿಂದ ಬೆಂಬಲಿತ ಎಲ್ಲಾ ಕಡತ ವ್ಯವಸ್ಥೆಗಳನ್ನು ವಾಸ್ತವಿಕವಾಗಿ ಬೆಂಬಲಿಸುವುದು. ಪ್ರಸ್ತುತವಾಗಿ Apple Inc. Sun MicrosystemZFS ಕಡತ ವ್ಯವಸ್ಥೆಯಿಂದ Mac OS Xವರೆಗೆ ಪೋರ್ಟ್‌ ಮಾಡುವ ಕೆಲಸವನ್ನು ಪ್ರಾರಂಭಿಸಿದೆ ಮತ್ತು Mac OS X 10.5ನಲ್ಲಿ ಪ್ರಾಥಮಿಕ ಬೆಂಬಲವು ಈಗಾಗಲೇ ಲಭ್ಯವಿದೆ ಮತ್ತು ಬ್ಲ್ಯೂ-ರೇ ಡಿಸ್ಕ್‌ಗಳನ್ನು ಬೆಂಬಲಿಸುವುದು.

ಸಾಮಾಜಿಕ-ಉದ್ದೇಶದ ಕಡತ ವ್ಯವಸ್ಥೆಗಳು

[ಬದಲಾಯಿಸಿ]

FAT ಕಡತ ವ್ಯವಸ್ಥೆಗಳು ಸಾಮಾನ್ಯವಾಗಿ ಫ್ಲಾಪಿ ಡಿಸ್ಕ್‌‌ಗಳು, ಫ್ಲಾಶ್ ಸ್ಮರಣೆ ಕಾರ್ಡ್‌ಗಳು, ಡಿಜಿಟಲ್ ಕ್ಯಾಮರಾಗಳು, ಮತ್ತು ಹಲವು ಇತರ ಕಿರು ವಿದ್ಯುನ್ಮಾನ ಸಾಧನಗಳಲ್ಲಿ ಅವುಗಳ ಸರಳತೆಯಿಂದಾಗಿ ಕಂಡುಬರುತ್ತದೆ. FATನ ನಿರ್ವಹಣೆಯು ತುಂಬಾ ಸರಳೀಕೃತ ದತ್ತಾಂಶ ವಿನ್ಯಾಸವನ್ನು ಬಳಸುವುದು. ಕಡತ ಕಾರ್ಯಚರಣೆಗೆ ಹೆಚ್ಚಿನ ಸಮಯವನ್ನು ಬಳಸುವುದು ಮತ್ತು ಹಲವು ಚಿಕ್ಕ ಕಡತಗಳಿದ್ದ ಸಂದರ್ಭದಲ್ಲಿ ಡಿಸ್ಕ್‌‌ ಸ್ಥಳದ ಉತ್ತಮವಲ್ಲದ ಬಳಕೆಯಿಂದ ಇತರ ಕಡತ ವ್ಯವಸ್ಥೆಗೆ ಹೋಲಿಸಿದಾಗ ಇದರ ನಿರ್ವಹಣೆ ಕಳಪೆಯಾಗಿರುವುದು. ISO 9660 ಮತ್ತು ಸಾರ್ವತ್ರಿಕ ಡಿಸ್ಕ್‌‌ ಸ್ವರೂಪಗಳೆಂದರೆ ಕಾಂಪ್ಯಾಕ್ಟ್‌ ಡಿಸ್ಕ್‌ಗಳು ಮತ್ತು DVDಗಳು ಎರಡು ಸಾಮಾನ್ಯ ಸ್ವರೂಪಗಳಾಗಿವೆ. Linux 2.6 ಸರಣಿಗಳು ಮತ್ತು Windows Vistaದಿಂದ ಬೆಂಬಲಿತ Mount Rainier ಒಂದು UDFಗೆ ಹೊಸ ವಿಸ್ತರಣೆಯಾಗಿದೆ. ಅದು ಫ್ಲಾಪಿ ಡಿಸ್ಕ್‌‌‌ಗಳನ್ನು ಬರೆದ ರೀತಿಯಲ್ಲಿ DVDಗಳನ್ನು ಮರುಬರೆಯುವ ಸೌಲಭ್ಯವನ್ನು ಒದಗಿಸಿದೆ.

ಜರ್ನಲೈಸ್ ಮಾಡಿದ ಕಡತ ವ್ಯವಸ್ಥೆಗಳು

[ಬದಲಾಯಿಸಿ]

ಗಣಕ ಹಾಳಾದ ಸಂದರ್ಭದಲ್ಲಿ ಕಡತ ವ್ಯವಸ್ಥೆಗಳನ್ನು ಸುರಕ್ಷಿತವಾಗಿ ಪುನರ್ ‌ಸಂಪಾದಿಸಲು ಜರ್ನಲಿಂಗ್‌ನ್ನು ಒದಗಿಸಬಹುದು. ಜರ್ನಲೈಸ್ ಮಾಡಿದ ಕಡತ ವ್ಯವಸ್ಥೆಯು ಎರಡು ಬಾರಿ ಕೆಲವು ಮಾಹಿತಿಯನ್ನು ಬರೆಯುವುದು: ಮೊದಲು ಕಡತ ವ್ಯವಸ್ಥೆ ಕಾರ್ಯಚರಣೆಗಳನ್ನು ಲಾಗ್ ಆಗಿರುವ ಜರ್ನಲ್ ಬರೆಯುವುದು, ನಂತರ ಸಾಮಾನ್ಯ ಕಡತ ವ್ಯವಸ್ಥೆಯಲ್ಲಿ ಸರಿಯಾದ ಸ್ಥಳದಲ್ಲಿ ಬರೆಯುವುದು. ಜರ್ನಲಿಂಗ್ ಕಡತ ವ್ಯವಸ್ಥೆ ಡ್ರೈವರ್‌ನಿಂದ ನಿರ್ವಹಿಸಲಾಗುವುದು ಮತ್ತು ಡಿಸ್ಕ್‌‌ನ ವಿಷಯಗಳನ್ನು ಬದಲಿಸವ ಪ್ರತಿ ಕಾರ್ಯಾಚರಣೆಯನ್ನು ಪರಿವೀಕ್ಷಿಸುತ್ತಿರುವುದು. ಘರ್ಷಣೆಯ ಸಂದರ್ಭದಲ್ಲಿ, ಜರ್ನಲ್‌ನ ಪ್ರತಿಕ್ರಿಯಿಸುವ ಭಾಗದಿಂದ ಸಮಂಜಸ ಪ್ರಕಾರಕ್ಕೆ ಗಣಕವನ್ನು ಪುನಸ್ಸಂಪಾದಿಸಬಹುದಾಗಿದೆ. ReiserFS, JFS, ಮತ್ತು Ext3 ಸೇರಿದಂತೆ ಹಲವು UNIX ಕಡತ ವ್ಯವಸ್ಥೆಗಳು ಜರ್ನಲಿಂಗ್‌ನ್ನು ಒದಗಿಸುವುದು.

ಪ್ರತಿಯಾಗಿ, ಅಸಂಮಜಸವಾಗಿ ಗಣಕವನ್ನು ಮುಚ್ಚಿದ ನಂತರ ಯಾವುದೇ ಅಸಂಗತ ಬದಲಾವಣೆಗಳಿಗಾಗಿ ಜರ್ನಲೈಸ್ ಮಾಡದ ಕಡತ ವ್ಯವಸ್ಥೆಯನ್ನು fsck ಅಥವಾ chkdskನಂತಹ ಸಲಕರಣೆಗಳಿಂದ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ಮಾಡಬೇಕಾಗುತ್ತದೆ. ತಂತ್ರಾಂಶ ನವೀಕರಣಗಳು ಜರ್ನಲಿಂಗ್‌ಗೆ ಬದಲಿಯಾಗಿ ನವೀಕರಣ ಕಾರ್ಯಾಚರಣೆಗಳನ್ನು ಜಾಗ್ರತೆಯಿಂದ ಆದೇಶಿಸುವುದರಿಂದ ಅಧಿಕ ಬರೆಯುವುದನ್ನು ತಪ್ಪಿಸುವುದು. ಲಾಗ್-ವಿನ್ಯಾಸದ ಕಡತ ವ್ಯವಸ್ಥೆಗಳು ಮತ್ತು ZFS ಯಾವಾಗಲೂ ದತ್ತಾಂಶದ ಹೊಸ ನಕಲುಗಳನ್ನು ಬರೆಯುವುದು, ಮೂಲ ಸ್ಥಳದ ನವೀಕರಣಗಳನ್ನು ತ್ಯಜಿಸುವುದರಿಂದ ಅಸಂಗತಗಳನ್ನು ಅವುಗಳು ತಪ್ಪಿಸುವುದರಲ್ಲಿ ಸಾಂಪ್ರದಾಯಿಕ ಜರ್ನಲ್‌ ಮಾಡಿದ ಕಡತ ವ್ಯವಸ್ಥೆಗಳಿಂದ ಸಹ ಭಿನ್ನವಾಗಿರುತ್ತದೆ.

ಚಿತ್ರಿತ ಬಳಕೆದಾರ ಅಂತರ್ವರ್ತನಗಳು

[ಬದಲಾಯಿಸಿ]

ಹೆಚ್ಚಿನ ಆಧುನಿಕ ಗಣಕ ವ್ಯವಸ್ಥೆಗಳು ಚಿತ್ರಿತ ಬಳಕೆದಾರ ಅಂತರ್ವರ್ತನಗಳನ್ನು(GUI) ಬೆಂಬಲಿಸುತ್ತದೆ ಮತ್ತು ಗ್ರಾಫಿಕಲ್ ಬಳಕೆದಾರ ಅಂತರ್ವರ್ತನಗಳನ್ನು ಒಳಗೊಂಡಿರುತ್ತದೆ. Microsoft Windows ಮತ್ತು Mac OS ಮೂಲ ಕಾರ್ಯಗತಗೊಳಿಸುವಿಕೆಯಂತಹವುಗಳ ಕೆಲವು ಗಣಕ ವ್ಯವಸ್ಥೆಗಳಲ್ಲಿ GUI ಕರ್ನಲ್‌ನೊಳಗೆ ಅಂತರ್ಗತವಾಗಿರುತ್ತದೆ.

ತಾಂತ್ರಿಕವಾಗಿ ಚಿತ್ರಿತ ಬಳಕೆದಾರ ಅಂತರ್ವರ್ತನವು ಕಾರ್ಯಾಚರಣಾ ವ್ಯವಸ್ಥೆ ಸೇವೆಯಲ್ಲದಿರುವಾಗ, GUIಗೆ ಕಾರ್ಯಚರಣಾ ವ್ಯವಸ್ಥೆ ಕರ್ನಲ್‌‌ನೊಳಗೆ ಒಂದು ಕಾರ್ಯಕ್ಕೆ ಬೆಂಬಲವನ್ನು ಒಟ್ಟು ಸೇರಿಸುವುದರಿಂದ ತನ್ನ ಪ್ರಧಾನ ಕಾರ್ಯಗಳನ್ನು ಕಾರ್ಯನಿರ್ವಹಿಸಲು ಹಲವು ವಿಷಯ ಬದಲಾವಣೆಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚು ಪ್ರತಿಕ್ರಿಯಾಶೀಲಾಗೊಳಿಸಲು GUIನ್ನು ಅನುಮತಿಸಬಹುದು. ಇತರ ಕಾರ್ಯಾಚರಣಾ ವ್ಯವಸ್ಥೆಗಳು ಸರಿಹೊಂದಿಸುವ ಉಪಕರಣವಾಗಿದೆ. ಇದು ಕರ್ನಲ್‌ ಮತ್ತು ಕಾರ್ಯಾಚರಣಾ ವ್ಯವಸ್ಥೆಯಿಂದ ದರ್ಶಕ ಉಪವ್ಯವಸ್ಥೆಯನ್ನು ಬೇರ್ಪಡಿಸುವುದು. 1980ನ UNIXನಲ್ಲಿ VMS ಮತ್ತು ಹಲವು ಇತರ ಕಾರ್ಯಾಚರಣಾ ವ್ಯವಸ್ಥೆಗಳು ಮೇಲಿನ ರೀತಿ ರಚಿಸಲಾದ ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿದೆ. Linux ಮತ್ತು Mac OS Xಗಳನ್ನೂ ಸಹ ಈ ರೀತಿ ರಚಿಸಲಾಗಿದೆ. Windows vistaದಂತಹ Microsoft Windowsನ ಇತ್ತೀಚಿನ ಆವೃತ್ತಿಗಳು ಹೆಚ್ಚಾಗಿ ಬಳಕೆದಾರ ಸ್ಥಳದಲ್ಲಿರುವ ದರ್ಶಕ ಉಪವ್ಯವಸ್ಥೆಯನ್ನು ಕಾರ್ಯಗತಗೊಳಿಸಿದೆ. ಆದಾಗ್ಯೂ Windows NT 4.0 ಮತ್ತು windows Server 2003ನ ನಡುವಿನ ಆವೃತ್ತಿಗಳ ಗ್ರಾಫಿಕ್ಸ್ ಸಾಮಾನ್ಯ ಹೆಚ್ಚಾಗಿ ಕರ್ನಲ್‌ ಸ್ಥಳದಲ್ಲಿ ರಚಿಸುವುದು. Windows 9x ಅಂತರ್ವರ್ತನ ಮತ್ತು ಕರ್ನಲ್ ಅತ್ಯಲ್ಪ ವ್ಯತ್ಯಾಸವನ್ನು ಹೊಂದಿದೆ.

ಹಲವು ಗಣಕ ಕಾರ್ಯಾಚರಣಾ ವ್ಯವಸ್ಥೆಗಳು ಯಾವುದೇ ಬಳಕೆದಾರರು ಇಚ್ಛಿಸಿದಂತೆ ಯಾವುದೇ ರೀತಿಯ ಬಳಕೆದಾರ ಅಂತರ್ವರ್ತನವನ್ನು ಸ್ಥಾಪಿಸಲು ಅಥವಾ ರಚಿಸಲು ಅನುಮತಿಸುತ್ತದೆ. GNOME ಅಥವಾ KDEನೊಂದಿಗೆ ಕೂಡುವಿಕೆಯಲ್ಲಿ X Window System ಹೆಚ್ಚಿನ Unix ಮತ್ತು Unix-ನಂತಹ (BSD,Linux, Minix)ಗಣಕಗಳಲ್ಲಿ ಸಾಮಾನ್ಯವಾಗಿ ದೊರೆಯುವ ಸ್ಥಾಪಕವಾಗಿದೆ. Windows ಶೆಲ್ ಪ್ರತಿನಿಧಿಗಳ ಸಂಖ್ಯೆಯು Microsoft Windowsಗಾಗಿ ಬಿಡುಗಡೆ ಮಾಡಲಾಗಿದೆ. ಇದು Windows ಶೆಲ್ ಒಳಗೊಂಡಿರುವುದಕ್ಕೆ ಬದಲಿಗಳನ್ನು ನೀಡುವುದು, ಆದರೆ ಶೆಲ್‌ನ್ನು ಸಹ Windowsನಿಂದ ಬೇರ್ಪಡಿಸಲಾಗಿಲ್ಲ.

ಅನೇಕ Unix ಆಧರಿತ GUIಗಳು ಕೆಲವು ಸಮಯದ ನಂತರ ಅಸ್ತಿತ್ವಕ್ಕೆ ಬಂದವು. ಅವುಗಳಲ್ಲಿ ಹೆಚ್ಚಿನವು X11ನಿಂದ ಬಂದಿರುವುದಾಗಿದೆ. Unixನ (HP, IBM, Sun) ವಿವಿಧ ವಿಕ್ರಯದಾರರೊಳಗಿನ ಸ್ಪರ್ಧೆಯು ಹೆಚ್ಚಿನ ಛಿದ್ರೀಕರಣಕ್ಕೆ ಕಾರಣವಾಗುತ್ತದೆ. ಅನೇಕ ಕಾರಣಗಳಿಂದ 1990ನಲ್ಲಿ COSE ಮತ್ತು CDEನ ಹೆಚ್ಚಿನ ಭಾಗಗಳನ್ನು ಪ್ರಮಾಣೀಕರಿಸುವ ಪ್ರಯತ್ನವು ವಿಫಲವಾದರೂ ಸಹಾ, ಸಾಂದರ್ಭಿಕವಾಗಿ GNOME ಮತ್ತು KDEನ ವಿಶಾಲವಾಗಿ ವಿಸ್ತರಿತ ಅನುಸರಣೆಯಿಂದ ಅಡ್ಡಿಯಾಗಿದೆ. ತೆರೆದ ಮೂಲ ಆಧಾರಿತ ಟೂಲ್‌ಕಿಟ್‌ಗಳು ಮತ್ತು ಡೆಸ್ಕ್‌ಟಾಪ್ ಪರಿಸರಗಳಿಗೆ ಮೊದಲು, ಮೊತಿಫ್‌ವು ಪ್ರಚಲಿತ ಟೂಲ್‌ಕಿಟ್/ಡೆಸ್ಕ್‌ಟಾಪ್ ಹೊಂದಿಕೆಯಾಗಿದೆ (ಮತ್ತು CDEನ್ನು ಯಾವುದರಲ್ಲಿ ಅಭಿವೃದ್ಧಿಸಲ್ಪಟ್ಟಿದೆಯೋ, ಅದರಲ್ಲಿ ಇದನ್ನು ಅಭಿವೃದ್ಧಿಸಲಾಗಿದೆ).

ಚಿತ್ರಿತ ಬಳಕೆದಾರ ಅಂತರ್ವರ್ತನಗಳು ಕಾಲಾಂತರದಲ್ಲಿ ವಿಕಸಿಸುವುದು. ಉದಾಹರಣೆಗೆ, ಪ್ರತಿ ಬಾರಿ ಹೊಸ ಪ್ರಮುಖ ಆವೃತ್ತಿಯನ್ನು ಬಿಡುಗಡೆ ಮಾಡುವಾಗಲೂ Windows ತನ್ನ ಬಳಕೆದಾರ ಅಂತರ್ವರ್ತನವನ್ನು ಮಾರ್ಪಡಿಸುವುದು ಮತ್ತು 1999ರಲ್ಲಿ Mac OS Xನ ಪರಿಚಯದೊಂದಿಗೆ ಪರಿಣಾಮಕಾರಿಯಾಗಿ Mac OS GUIನ ಬಳಕೆದಾರ ಅಂತರ್ವರ್ತನವನ್ನು ಬದಲಿಸಿತು.[27]

ಕಾರ್ಯಾಚರಣಾ ವ್ಯವಸ್ಥೆಗಳ ಉದಾಹರಣೆ

[ಬದಲಾಯಿಸಿ]

ಟೆಂಪ್ಲೇಟು:Future software

Microsoft Windows

[ಬದಲಾಯಿಸಿ]

Microsoft WindowsIBM PCಗಾಗಿ ಹಳೆಯ MS-DOSಕಾರ್ಯಚರಣಾ ವ್ಯವಸ್ಥೆಗೆ ಸೇರ್ಪಡೆಗಳಂತೆ ರಚಿಸಿದ ಮಾರಾಟ ಸ್ವಾಮ್ಯ ಪಡೆದ ಕಾರ್ಯಾಚರಣಾ ವ್ಯವಸ್ಥೆಗಳ ಕುಟುಂಬವಾಗಿದೆ. ಆಧುನಿಕ ಆವೃತ್ತಿಗಳ ಮೂಲವಾಗಿ OS/2ಗಾಗಿ ಉದ್ದೇಶಿಸಿದ ಹೊಸದಾದ Windows NT ಕರ್ನಲ್‌‌ ಆಧಾರಿತವಾಗಿದೆ. Windows x86, x86-64 ಮತ್ತು ಇತಾನಿಯಂ ಸಂಸ್ಕಾರಕನಲ್ಲಿ ಕಾರ್ಯನಿರ್ವಹಿಸುವುದು. ಹಿಂದಿನ ಆವೃತ್ತಿಗಳಾದ DEC Alpha, MIPS, Fairchild (Intergraphನ ನಂತರದ ಆವೃತ್ತಿಗಳು) Clipper ಮತ್ತು PowerPC ಯಂತ್ರಶಿಲ್ಪಗಳು (SPARC ಯಂತ್ರಶಿಲ್ಪಕ್ಕೆ ಪರಿವರ್ತನೆ ಮಾಡುವಲ್ಲಿ ಸಾಕಷ್ಟು ಕೆಲಸಗಳಾಗಿವೆ)ನಲ್ಲಿ ಸಹ ಕಾರ್ಯನಿರ್ವಹಿಸುತ್ತದೆ.

ಜೂನ್ 2008ರಲ್ಲಿ ದೊರೆತ ಮಾಹಿತಿಯಂತೆ, Microsoft Windows ಜಗತ್ತಿನಾದ್ಯಂತ ಹೆಚ್ಚಿನ ಪ್ರಮಾಣದ ಡೆಸ್ಕ್‌ಟಾಪ್ ಮಾರುಕಟ್ಟೆ ಪಾಲು ಹೊಂದಿದೆ. Windows ಸರ್ವರ್‌ಗಳು, ವೆಬ್ ಸರ್ವರ್‌ಗಳು ಮತ್ತು ಡಾಟಾಬೇಸ್ ಸರ್ವರ್‌ಗಳು ಅಂತಂಹ ಬೆಂಬಲಿಸುವ ಅನ್ವಯಗಳನ್ನು ಬಳಸುವುದು. ಇತ್ತೀಚಿನ ವರ್ಷಗಳಲ್ಲಿ, ಸಮಂಜಸ ದರ/ನಿರ್ವಹಣೆ ದಾಖಲೆಗಳು (TPCನ್ನು ನೋಡಿ) ಮತ್ತು ಉದ್ಯಮ ಮಾರುಕಟ್ಟೆಯಲ್ಲಿ ಪ್ರಮುಖ ಅನುಮೋದನೆಯಲ್ಲಿ ಪರಿಣಾಮ ಬೀರುವ ಯಾವುದೇ ಉದ್ಯಮ ಅನ್ವಯದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ Windowsಗೆ ಇದೆ ಎನ್ನುವುದನ್ನು ಪ್ರದರ್ಶಿಸಲು Microsoft ಪ್ರಮುಖವಾಗಿ ಮಾರ್ಕೆಟಿಂಗ್, ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣವನ್ನು ಖರ್ಚುಮಾಡುತ್ತಿದೆ.

25 ಅಕ್ಟೋಬರ್ 2001ರಲ್ಲಿ ಬಿಡುಗಡೆಯಾದ Windows XPಯು Microsoft Windows ಕುಟುಂಬದಲ್ಲಿ ಹೆಚ್ಚಾಗಿ ಬಳಸಿದ ಆವೃತ್ತಿಯಾಗಿದೆ.

ನವೆಂಬರ್ 2006ರಲ್ಲಿ, ದೊಡ್ಡ ಸಂಖ್ಯೆಯ ಹೊಸ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಬದಲಾವಣೆಗಳು ಹೊಂದಿರುವ Microsoft Windows ಕುಟುಂಬದ ಆವೃತ್ತಿಯಾದ ಹೊಸ ಕಾರ್ಯಾಚರಣಾ ವ್ಯವಸ್ಥೆ ಅವೃತ್ತಿಯಾದ Windows Vistaವನ್ನು Microsoft ಐದು ವರ್ಷದ ಅಭಿವೃದ್ದಿ ಕಾರ್ಯದ ನಂತರ ಬಿಡುಗಡೆ ಮಾಡಿದೆ. ಹೊಸ ಬಳಕೆದಾರ ಅಂತರ್ವರ್ತನ ಮತ್ತು ದರ್ಶನ ಕಾರ್ಯಗಳಲ್ಲಿ ಪ್ರಮುಖವಾಗಿರುವುದನ್ನು Windows Aero ಎಂದು ಕರೆಯಲಾಗುವುದು, ಅದರಲ್ಲಿ ಬಳಕೆದಾರ ಖಾತೆ ನಿಯಂತ್ರಣದಂತಹ ಹೆಚ್ಚಿನ ಹೊಸ ಭದ್ರತೆ ವೈಶಿಷ್ಟ್ಯಗಳಿವೆ ಮತ್ತು Windows ಡಿವಿಡಿ ಮೇಕರ್‌ನಂತಹ ಕೆಲವು ಹೊಸ ಬಹುಮಾದ್ಯಮ ಅನ್ವಯಗಳಿವೆ. ಕೆಲವು ಕರ್ನಲ್ ‌ಮೇಲೆ ಆಧಾರಿತ ಸರ್ವರ್ ರೂಪಾಂತರವಾಗಿರುವ Windows Server 2008ನ್ನು 2008ರ ಮೊದಲು ಬಿಡುಗಡೆ ಮಾಡಲಾಯಿತು.

Windows 7ಕಾರ್ಯಚರಣಾ ವ್ಯವಸ್ಥೆಯು ಪ್ರಸ್ತುತವಾಗಿ ಅಭಿವೃದ್ಧಿಯಲ್ಲಿದೆ; Microsoft Windows 7 ಕಾರ್ಯಚರಣಾ ವ್ಯವಸ್ಥೆಯ ಅಭಿವೃದ್ಧಿಯನ್ನು ಮೂರು ವರ್ಷದ ಸಮಯಮಿತಿಯ ಉದ್ದೇಶದೊಂದಿಗೆ ಪ್ರಾರಂಭಿಸಿತು; Windows 7ನ್ನು 22 ಅಕ್ಟೋಬರ್ 2009ರಂದು ಬಿಡುಗಡೆ ಮಾಡಲಿದೆ.

Unix ಮತ್ತು Unix-ಮಾದರಿಯ ಕಾರ್ಯಾಚರಣಾ ವ್ಯವಸ್ಥೆಗಳು

[ಬದಲಾಯಿಸಿ]
Debian (linux-ಆಧಾರಿತ) unix-ಮಾದರಿಯ ವ್ಯವಸ್ಥೆಯಾಗಿದೆ

ಕೆನ್ ಥಾಂಪ್ಸನ್‌ರವರು BCPL ಆಧಾರಿತ B ಭಾಷೆಯನ್ನು ರಚಿಸಿದರು. ಮುಖ್ಯವಾಗಿ MULTICS ಯೋಜನೆಯ ಅನುಭವದ ಆಧಾರದ ಮೇಲೆ ಅದನ್ನು Unixನ್ನು ಬರೆಯಲು ಬಳಸಲಾಗಿತ್ತು. B ಭಾಷೆಯು Cನಿಂದ ಬದಲಿಸಲ್ಪಟ್ಟಿದೆ ಮತ್ತು Unix ಪ್ರತಿ ಆಧುನಿಕ ಕಾರ್ಯಾಚರಣಾ ವ್ಯವಸ್ಥೆಯಲ್ಲಿ (ಇತಿಹಾಸವನ್ನು ನೋಡಿ) ತುಂಬಾ ಪ್ರಭಾವ ಹೊಂದಿದ ಅಂತರ್-ಸಂಬಂಧಿಸಿದ ಕಾರ್ಯಾಚರಣಾ ವ್ಯವಸ್ಥೆಗಳ ದೊಡ್ಡ, ಸಂಕೀರ್ಣ ಕುಟುಂಬವಾಗಿ ಅಭಿವೃದ್ಧಿಸಲಾಗಿದೆ. Unix-ಮಾದರಿಯ ಕಾರ್ಯಚರಣಾ ವ್ಯವಸ್ಥೆಗಳ ಕುಟುಂಬವು System V, BSD, ಮತ್ತು Linux ಸೇರಿದಂತೆ ಕೆಲವು ಉಪ-ವರ್ಗಗಳೊಂದಿಗೆ ಕಾರ್ಯಾಚರಣಾ ವ್ಯವಸ್ಥೆಗಳ ಅಸಾಮ್ಯತೆ ಹೊಂದಿದ ಗುಂಪಾಗಿದೆ. "UNIX" ಹೆಸರು ದಿ ಒಪನ್ ಗ್ರೂಪ್‌ನ ಟ್ರೇಡ್‌ಮಾರ್ಕ್ ಆಗಿದೆ. ಅದು ಕಾರ್ಯಾಚರಣಾ ವ್ಯವಸ್ಥೆಯ ವ್ಯಾಖ್ಯಾನಗಳಿಗೆ ಖಚಿತಪಡಿಸಲು ಪ್ರದರ್ಶಿಸಲಾದ ಯಾವುದೇ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಅದನ್ನು ಬಳಸುವುದಕ್ಕಾಗಿ ಪರವಾನಗಿ ಹೊಂದಿದೆ. "Unix-ಮಾದರಿ"ಯು ಮೂಲ Unix ಹೋಲುವ ಕಾರ್ಯಾಚರಣಾ ವ್ಯವಸ್ಥೆಗಳ ದೊಡ್ಡ ಸಮೂಹವನ್ನು ಸಾಮಾನ್ಯವಾಗಿ ಉಲ್ಲೇಖಿಸಲಾಗುವುದು.

Unix-ಮಾದರಿಯ ವ್ಯವಸ್ಥೆಗಳು ಯಂತ್ರಶಿಲ್ಪಗಳ ವಿಶಾಲ ವೈವಿಧ್ಯತೆಯಲ್ಲಿ ಕಾರ್ಯನಿರ್ವಹಿಸುವುದು. ಅವುಗಳನ್ನು ವ್ಯಾಪಾರಗಳಲ್ಲಿ ಹಾಗೆಯೇ ಶೈಕ್ಷಣಿಕ ಮತ್ತು ಇಂಜಿನಿಯರಿಂಗ್ ಪರಿಸರಗಳಲ್ಲಿ ಕಾರ್ಯಸ್ಥಳಗಳಲ್ಲಿ ಸರ್ವರ್‌ಗಳಿಗೆ ಹೆಚ್ಚಾಗಿ ಬಳಸಲಾಗುವುದು. GNU, Linux ಮತ್ತು BSDನಂತಹ ಉಚಿತ Unix ರೂಪಾಂತರಗಳು ಈ ವಲಯದಲ್ಲಿ ಜನಪ್ರಿಯವಾಗಿದೆ.

ಕೆಲವು Unix ರೂಪಾಂತರಗಳಾದ HPಯ HP-UX ಮತ್ತು IBMನ AIXನ್ನು ವಿಕ್ರಯದಾರರ ಯಂತ್ರಾಂಶಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. Solarisನಂತಹ ಇತರ x86 ಸರ್ವರ್‌ಗಳು ಮತ್ತು PCಗಳು ಸೇರಿದಂತೆ ಬಹುಪ್ರಕಾರದ ಯಂತ್ರಾಂಶದಲ್ಲಿ ಕಾರ್ಯನಿರ್ವಹಿಸುವುದು. NeXTSTEP, Mach, ಮತ್ತು FreeBSDನಿಂದ ಬಂದಿರುವ ಮಿಶ್ರ ಕರ್ನಲ್ ಆಧಾರಿತ BSD ರೂಪಾಂತರವಾಗಿರುವ Appleನ Mac OS Xವು Appleನ ಹಿಂದಿನ ಆವೃತ್ತಿಯಾದ (Unix-ಏತರ) Mac OSನ್ನು ಬದಲಿಸಿದೆ.

Unix ಅಂತರ್‌-ಕಾರ್ಯಾಚರಣೆ ಸಾಮರ್ಥ್ಯವು POSIX ಮಾಪನವನ್ನು ಸ್ಥಾಪಿಸುವುದರಿಂದಾಗಿದೆ. POSIX ಮಾಪನವನ್ನು ಮೂಲವಾಗಿ ಅದು ವಿವಿಧ Unix ರೂಪಾಂತರಗಳಿಗಾಗಿ ರಚಿಸಿದ್ದರೂ ಸಹ ಯಾವುದೇ ಕಾರ್ಯಾಚರಣಾ ವ್ಯವಸ್ಥೆಗೆ ಅನ್ವಯಿಸಬಹುದು.

ಚಿತ್ರ:Leopard Desktop.png
ಅತ್ಯಾಧುನಿಕ Mac OS X ಆವೃತ್ತಿ

Mac OS X Apple Inc.ನಿಂದ ಅಭಿವೃದ್ಧಿಸಿದ, ಮಾರುಕಟ್ಟೆಗೊಳಿಸಿದ, ಮಾರಾಟಮಾಡಿದ ಗ್ರಾಫಿಕಲ್ ಕಾರ್ಯಾಚರಣಾ ವ್ಯವಸ್ಥೆಗಳ ಸ್ವಾಮ್ಯದಲ್ಲಿದೆ. ಪ್ರಸ್ತುತವಾಗಿ ಎಲ್ಲಾ ಮ್ಯಾಕಿಂತೋಷ್ ಗಣಕಗಳು ರವಾನೆಯ ಮೊದಲೇ Mac OS X ಕಾರ್ಯಚರಣಾ ವ್ಯವಸ್ಥೆಯನ್ನು ಲೋಡ್ ಮಾಡಿದ ಆಧುನಿಕ ಗಣಕಗಳಾಗಿವೆ. Mac OS X, 1984ರ Appleನ ಪ್ರಾಥಮಿಕ ಕಾರ್ಯಾಚರಣಾ ವ್ಯವಸ್ಥೆಯಾಗಿರುವ ಮೂಲ Mac OSನ ಮುಂದುವರಿದ ಆವೃತ್ತಿಯಾಗಿದೆ. Mac OS X, ತನ್ನ ಪೂರ್ವ ಆವೃತ್ತಿಯಂತಿರದೆ, 1997ರಲ್ಲಿ Apple ಖರೀದಿ ಮಾಡುವವರೆಗೆ ಅದು 1980ನ ಉತ್ತರಾರ್ಧದುದ್ದಕ್ಕೂ NeXTನಲ್ಲಿ ಅಭಿವೃದ್ಧಿಸಲಾದ ತಂತ್ರಜ್ಞಾನದಲ್ಲಿ ರಚಿಸಿದ UNIX ಕಾರ್ಯಾಚರಣಾ ವ್ಯವಸ್ಥೆಯಾಗಿದೆ.

1999ರಲ್ಲಿ ಪ್ರಥಮ ಬಾರಿಗೆ Macನ ಸರ್ವರ್ ಕಾರ್ಯಾಚರಣಾ ವ್ಯವಸ್ಥೆಯನ್ನು Mac OS X Server 1.0) ಬಿಡುಗಡೆ ಮಾಡಲಾಯಿತು, ಇದರ ಮುಂದುವರಿದ ಡೆಸ್ಕ್‌ಟಾಪ್-ಉದ್ದೇಶಿತ ಆವೃತ್ತಿಯಾದ (Mac OS X v10.0 ಅನ್ನು ಮಾರ್ಚ್ 2001ರಲ್ಲಿ ಬಿಡುಗಡೆಮಾಡಿತು. ಇಲ್ಲಿಯವರೆಗೆ, Mac OS X ಐದಕ್ಕೂ ಹೆಚ್ಚು ವೈಶಿಷ್ಟ್ಯಮಯ "ಬಳಕೆದಾರ ಕೇಂದ್ರಿತ" ಮತ್ತು "ಸರ್ವರ್" ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. Mac OS Xನ ಇತ್ತೀಚಿನ ಆವೃತ್ತಿಯಾದ Mac OS X v10.5ನ್ನು ಅಕ್ಟೋಬರ್‌ 2007ರಲ್ಲಿ ಬಿಡುಗಡೆ ಮಾಡಿದೆ. Mac OS Xನ ಆವೃತ್ತಿಗಳನ್ನು Big cats ಎಂದು ಹೆಸರಿಸಲಾಗಿದೆ; Mac OS X v10.5ಅನ್ನು "Leopard" ಎಂದು ಕರೆದರೆ, ಇದರ ಮುಂದುವರಿದ OS X ಆವೃತ್ತಿಯನ್ನು "Snow leopard" ಅನ್ನು ಸೆಪ್ಟಂಬರ್ 2009ರಲ್ಲಿ ಬಿಡುಗಡೆ ಮಾಡುವುದು.

ಸರ್ವರ್ ಆವೃತ್ತಿಯಾದ Mac OS X Serverವು ವಿನ್ಯಾಸದಲ್ಲಿ ಅದರ ಡೆಸ್ಕ್‌ಟಾಪ್‌ನ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಸಾಮಾನ್ಯವಾಗಿ Appleನ ಮ್ಯಾಕಿಂತೋಷ್ ಸರ್ವರ್ ಯಂತ್ರಾಂಶದಿಂದ ಕಾರ್ಯನಿರ್ವಹಿಸುತ್ತದೆ. ಮೇಲ್ ವರ್ಗಾವಣೆ ಮಧ್ಯವರ್ತಿ, Samba ಸರ್ವರ್, LDAP ಸರ್ವರ್, ಡೊಮೈನ್ ಹೆಸರು ಸರ್ವರ್, ಮತ್ತು ಇತರೆ ಸೇರಿದಂತೆ ಪ್ರಮುಖ ಜಾಲ ಸೇವೆಗಳಿಗೆ ನಿರ್ದಿಷ್ಟಪಡಿಸಿದ ಪ್ರವೇಶವನ್ನು ಒದಗಿಸುವ ಗುಂಪು ನಿರ್ವಹಣೆ ಮತ್ತು ನಿರ್ವಾಹಕ ತಂತ್ರಾಂಶ ಸಾಧನಗಳನ್ನು Mac OS X Server ಒಳಗೊಂಡಿದೆ.

ColdSun Technologies, Inc. ಪ್ರಸ್ತುತವಾಗಿ Linuxನ ಭದ್ರ ತಳಹದಿಯ ಮೇಲೆ Mac OSXನ ಬಳಕೆದಾರ ಸ್ನೇಹಿ ಅಂತರ್ವರ್ತನ ಹಾಗು ಭದ್ರತೆ ಮತ್ತು Windowsನ ನಮ್ಯತೆಯನ್ನು ವಿಲೀನಗೊಳಿಸಿ ಹೊಸ ಕಾರ್ಯಾಚರಣಾ ವ್ಯವಸ್ಥೆಯನ್ನು ಅಭಿವೃದ್ಧಿಸುತ್ತಿದೆ. Portals OS 1xನ್ನು ಅಕ್ಟೋಬರ್ 10, 2010ರಂದು (ಅಥವಾ 10.10.10) ಅಮೇರಿಕಾದಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. Portals OS 1xವೊಂದಿಗೆ ಬೀಟಾ ಆವೃತ್ತಿಯನ್ನು ಮಾರ್ಚ್ 2010ರಂದು ಮತ್ತು ರಿಲೀಸ್ ಕ್ಯಾಂಡಿಡೇಟ್(RC)ಅನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

Unix ಕಾರ್ಯಾಚರಣಾ ವ್ಯವಸ್ಥೆಯನ್ನು ರಚಿಸಲು ಕೆನ್ ಥಾಂಪ್ಸನ್, ಡೆನ್ನಿಸ್ ರಿಚಿ ಮತ್ತು ಡೌಗ್ಲಾಸ್ ಮೆಕ್‌ಲಾರೇರವರು ಬೆಲ್ ಪ್ರಯೋಗಾಲಯದಲ್ಲಿ C ಅನ್ವಯ ಭಾಷೆಯನ್ನು ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಿದರು. ಬೆಲ್‌ ಪ್ರಯೋಗಾಲಯದಲ್ಲಿರುವ ಪ್ರೋಗ್ರಾಮರ್‌ಗಳು ಆಧುನಿಕ ವಿತರಿಸಿದ ಪರಿಸರದಲ್ಲಿ Plan 9 ಮತ್ತು Infernoವನ್ನು ಅಭಿವೃದ್ಧಿಪಡಿಸಿದರು. Plan 9 ಕಾರ್ಯಚರಣಾ ವ್ಯವಸ್ಥೆಯು Unixನಂತಿರದೆ ಜಾಲ ಕಾರ್ಯಾಚರಣಾ ವ್ಯವಸ್ಥೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದಕ್ಕೆ ಗ್ರಾಫಿಕ್ಸ್ ಅಂತರ್ಗತ ವೈಶಿಷ್ಟ್ಯಗಳನ್ನು ನಂತರ ಸೇರಿಸಲಾಗಿದೆ. Unix ರೂಪಾಂತರಗಳಂತೆ Plan 9 ನಿಧಾನವಾಗಿ ಜನಪ್ರಿಯವಾಗುತ್ತಿದ್ದರೂ ಅದರ ಕಾರ್ಯಚರಣಾ ವ್ಯವಸ್ಥೆಯ ಅಭಿವೃದ್ಧಿಗಾರರ ಸಮುದಾಯವು ವಿಸ್ತರಣೆಯಾಗುತ್ತಿದೆ. ಇದನ್ನು ಪ್ರಸ್ತುತವಾಗಿ ಲುಸೆಂಟ್ ಸಾರ್ವಜನಿಕ ಪರವಾನಗಿಯಡಿ ಬಿಡುಗಡೆ ಮಾಡಲಾಗಿದೆ. Infernoನ್ನು ವೀಟಾ ನೌವಾ ಹೋಲ್ಡಿಂಗ್ಸ್‌ಗೆ ಮಾರಲಾಗಿದ್ದು GPL/MIT ಪರವಾನಗಿಯಡಿ ಬಿಡುಗಡೆ ಮಾಡಲಾಗಿದೆ.

ರಿಯಲ್‌-ಟೈಮ್‌ ಕಾರ್ಯಾಚರಣಾ ವ್ಯವಸ್ಥೆಗಳು

[ಬದಲಾಯಿಸಿ]

ರಿಯಲ್‌-ಟೈಮ್ ಕಾರ್ಯಾಚರಣಾ ವ್ಯವಸ್ಥೆಯು (RTOS1) ನಿರ್ದಿಷ್ಟ ಮಿತಿಯೊಂದಿಗೆ ಅನ್ವಯಗಳಿಗಾಗಿ ಉದ್ದೇಶಿಸಲಾದ ಬಹುಕಾರ್ಯಕ ಕಾರ್ಯಾಚರಣಾ ವ್ಯವಸ್ಥೆಯಾಗಿದೆ (ರಿಯಲ್‌ಟೈಂ ಗಣಕೀಕರಣ). ಕೆಲವು ಚಿಕ್ಕ ಅಂತರ್ಗತ ಗಣಕಗಳು, ಆಟೋಮೊಬೈಲ್ ಯಂತ್ರ ನಿಯಂತ್ರಕಗಳು, ಕೈಗಾರಿಕಾ ಯಂತ್ರಮಾನವರು, ಬಾಹ್ಯಕಾಶ ನೌಕೆಗಳು, ಕೈಗಾರಿಕ ನಿಯಂತ್ರಣ, ಮತ್ತು ಕೆಲವು ದೊಡ್ಡ ಮಟ್ಟದ ಗಣಕೀಕರಣ ವ್ಯವಸ್ಥೆಗಳನ್ನು ಅಂತಹ ಅನ್ವಯಗಳು ಒಳಗೊಂಡಿರುತ್ತದೆ.

ದೊಡ್ಡ ಮಟ್ಟದ ರಿಯಲ್‌-ಟೈಮ್ ಕಾರ್ಯಾಚರಣಾ ವ್ಯವಸ್ಥೆಗೆ ಉದಾಹರಣೆಯಾದ ಸಬ್ರೆ ವಿಮಾನಯಾನ ಕಾಯ್ದಿರಿಸುವಿಕೆ ವ್ಯವಸ್ಥೆಯು ಅಮೇರಿಕಾ ವಿಮಾನಯಾನ ಸಂಸ್ಥೆ ಮತ್ತು IBMನ ಸಹಯೋಗಿತ್ವದಲ್ಲಿ ವ್ಯವಹಾರ ಪ್ರಕ್ರಿಯೆ ಸೌಲಭ್ಯಗಳಿಗೆಂದು ಅಭಿವೃದ್ಧಿಸಲ್ಪಟ್ಟಿದೆ.

ಅಂತರ್ಗತ ವ್ಯವಸ್ಥೆಗಳು

[ಬದಲಾಯಿಸಿ]

ಅಂತರ್ಗತ ವ್ಯವಸ್ಥೆ ಗಳು ವಿವಿಧ ಮೀಸಲಿರಿಸಿದ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬಳಸುತ್ತದೆ. ಕೆಲವು ಸಂದರ್ಭಗಳಲ್ಲಿ, "ಕಾರ್ಯಾಚರಣಾ ವ್ಯವಸ್ಥೆ" ತಂತ್ರಾಂಶವನ್ನು ಸಾಮಾಜಿಕ ಉದ್ದೇಶದ ಪ್ರೋಗ್ರಾಂನ್ನು ರಚಿಸಲು ಅನ್ವಯಕ್ಕೆ ನೇರವಾಗಿ ಸಂಪರ್ಕಿಸಲಾಗುವುದು. ಅತೀ ಸರಳ ಅಂತರ್ಗತ ಗಣಕಗಳಲ್ಲಿ OS ಮತ್ತು ಅನ್ವಯಗಳ ಮಧ್ಯೆ ಯಾವುದೇ ವ್ಯತ್ಯಾಸವಿರುವುದಿಲ್ಲ.

ಅಂತರ್ಗತ ಗಣಕಗಳು VxWorks, eCos, QNX, MontaVista Linux ಮತ್ತು RTLinuxನಂತಹ ರಿಯಲ್‌ಟೈಂ ಕಾರ್ಯಾಚರಣಾ ವ್ಯವಸ್ಥೆಯನ್ನು ಬಳಸಿ ನಿರ್ದಿಷ್ಟ ಮಿತಿ ಹೊಂದಿರುತ್ತದೆ.

Symbian OS, Palm OS, Windows CE, BSD, ಮತ್ತು Linuxನಂತಹ ಕಾರ್ಯಚರಣಾ ವ್ಯವಸ್ಥೆಗಳು ರಿಯಲ್‌-ಟೈಮ್‌ ಗಣಕೀಕರಣ ಬೆಂಬಲಿಸದಿದ್ದರೂ ಸಹ ಕೆಲವು ಅಂತರ್ಗತ ಗಣಕಗಳು ಅದನ್ನು ಬಳಸುವುದು.

Windows CEಯು ಸಮಾನವಾದ APIಗಳನ್ನು ಡೆಸ್ಕ್‌ಟಾಪ್ ವಿಂಡೊಸ್‌ನೊಂದಿಗೆ ಹಂಚಿಕೊಳ್ಳುವುದು. ಆದರೆ ಅದು ಯಾವುದೇ ಡೆಸ್ಕ್‌ಟಾಪ್ ವಿಂಡೊಸ್‌ ಕೋಡ್‌ಬೇಸ್[31]ಅನ್ನು ಹಂಚಿಕೊಳ್ಳುವುದಿಲ್ಲ.

ಹವ್ಯಾಸಿ ಅಭಿವೃದ್ಧಿ

[ಬದಲಾಯಿಸಿ]

ಕಾರ್ಯಾಚರಣಾ ವ್ಯವಸ್ಥೆ ಅಭಿವೃದ್ಧಿ ಸಂಕ್ಷಿಪ್ತವಾಗಿ OSDevವು ದೊಡ್ಡ ಪ್ರಮಾಣದ ಹವ್ಯಾಸಿಗಳ ಗುಂಪನ್ನು ಹೊಂದಿರುತ್ತದೆ. Linuxನಂತಹ ಕಾರ್ಯಾಚರಣಾ ವ್ಯವಸ್ಥೆಗಳು ಕಾರ್ಯಾಚರಣಾ ವ್ಯವಸ್ಥೆಗಳು ಹವ್ಯಾಸಿ ಯೋಜನೆಗಳಿಂದ ರಚಿತವಾಗಿದೆ. ಕಾರ್ಯಾಚರಣಾ ವ್ಯವಸ್ಥೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಗೆ ಕೌಶಲ್ಯ ಮತ್ತು ನಿರ್ಣಯದ ಅಗತ್ಯವಿದೆ, ಮತ್ತು ಈ ವಿಷಯವು ಸಾಮಾನ್ಯ ಬೂಟ್ ಲೋಡರ್‌ "ಹಲೋ ವರ್ಲ್ಡ್" ನಿಂದ ಹಿಡಿದು ಪೂರ್ಣವಾಗಿ ವೈಶಿಷ್ಟ್ಯಗಳುಳ್ಳ ಕರ್ನಲ್ ಅನ್ನು ಕೂಡ ಒಳಗೊಂಡಿರಬಹುದು. ಇದಕ್ಕೊಂದು ಸಾಂಪ್ರದಾಯಿಕ ಉದಾಹರಣೆಯೆಂದರೆ Minix ಕಾರ್ಯಚರಣಾ ವ್ಯವಸ್ಥೆಯಾಗಿದೆ. ಈ OS ಒಂದು ಬೋಧನಾ ಸಾಧನದಂತೆ ಎ.ಎಸ್.ಟೆನೆನ್‌ಬಾಮ್ ರವರಿಂದ ವಿನ್ಯಾಸಗೊಳಿಸಲಾಗಿದೆ. ಆದರೆ Linux ಜನಪ್ರಿಯವಾಗುವುದಕ್ಕೆ ಮೊದಲು ಇದು ಹವ್ಯಾಸಿಗಳಿಂದ ಹೆಚ್ಚಾಗಿ ಬಳಸಲ್ಪಟ್ಟಿದೆ.

ಸ್ಥಾಪಿತ ಮಾರುಕಟ್ಟೆಗಳಲ್ಲಿ ಈಗಲೂ ಚಲಾವಣೆಯಲ್ಲಿರುವ ಹಳೆಯ ಕಾರ್ಯಾಚರಣಾ ವ್ಯವಸ್ಥೆಗಳೆಂದರೆ IBM ಮತ್ತು Microsoftನ OS/2, Appleನ Mac OS Xಗೆ ಮುಂಚಿನ Unixಏತರ Mac OS ; BeOS; XTS-300. ಕೆಲವು, ಪ್ರಮುಖವಾಗಿ AmigaOS 4 ಮತ್ತು RISC OS, ಉತ್ಸಾಹಿ ಸಮುದಾಯಗಳು ಮತ್ತು ತಜ್ಞ ಅನ್ವಯಗಳಿಗಾಗಿ ಅಲ್ಪಸಂಖ್ಯಾತ ವೇದಿಕೆಯಂತೆ ಅಭಿವೃದ್ಧಿಪಡಿಸುವುದು ಮುಂದುವರಿದಿದೆ. ಪೂರ್ವದಲ್ಲಿ DECನದಾಗಿದ್ದ OpenVMS ಈಗಲೂ Hewlett-Packardನಿಂದ ಸಕ್ರಿಯವಾಗಿ ಅಭಿವೃದ್ಧಿಯಲ್ಲಿದೆ. 8 ಬಿಟ್‌ ಗಣಕಗಳಿಗೆಂದು ಬಹಳಷ್ಟು ಕಾರ್ಯಾಚರಣಾ ವ್ಯವಸ್ಥೆಗಳಿದ್ದವು - Apple IIಗೆಂದು Appleನ DOS (ಡಿಸ್ಕ್‌‌ ಕಾರ್ಯಾಚರಣಾ ವ್ಯವಸ್ಥೆ ) 3.2 & 3.3 , ProDOS, UCSD, CP/M - ಅನೇಕ 8 ಮತ್ತು 16 ಬಿಟ್‌ ಗಣಕವ್ಯವಸ್ಥೆಗಳನ್ನು ಬೆಂಬಲಿಸುತ್ತಿದ್ದವು.

ಹೊಸ ಕಾರ್ಯಾಚರಣಾ ವ್ಯವಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿಯು ಮುಂದುವರೆಯುತ್ತಿದೆ. GNU Hurdನ್ನು Unixನೊಂದಿಗೆ ಹಿಮ್ಮುಖ ಸಹವರ್ತಿಯಾಗಿರುವಂತೆ ಮಿಗಿಲಾದ ಕಾರ್ಯಕ್ಷಮತೆ ಹಾಗೂ ಮೈಕ್ರೋಕರ್ನಲ್‌ ಸಂರಚನೆಯೊಂದಿಗೆ ರಚಿಸಲಾಗಿದೆ. Singularityಯು .Net ನಿರ್ವಹಿತ ಸಂಕೇತ ವಿಧಾನದ ಆಧಾರದ ಮೇಲೆ ಉತ್ತಮ ಸ್ಮರಣೆ ಸಂರಕ್ಷಣೆಯೊಂದಿಗೆ ಕಾರ್ಯಾಚರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ Microsoft Researchನ ಒಂದು ಯೋಜನೆಯಾಗಿದೆ.ವ್ಯವಸ್ಥೆಗಳ ಅಭಿವೃದ್ಧಿಯು ತಂತ್ರಾಂಶ ಅಭಿವೃದ್ಧಿಯಲ್ಲಿ ಬಳಸುವ ಆವೃತ್ತಿ ನಿಯಂತ್ರಣ "ಟ್ರೀಗಳು",[] ಫೋರ್ಕ್‌ಗಳು, "ಪ್ಯಾಚ್‌ಗಳು", ಮತ್ತು ವೈಶಿಷ್ಟ್ಯ ವಿವರಗಳು ಮುಂತಾದುವುಗಳಿರುವ ವಿಧಾನವನ್ನೇ ಅನುಸರಿಸುತ್ತದೆ. AT&T-Berkeley ಮೊಕದ್ದಮೆಯ ಕಾರಣದಿಂದ ಹೊಸದಾದ ಪ್ರತಿಬಂಧಿತವಲ್ಲದ ವ್ಯವಸ್ಥೆಗಳು 4.4BSD ಆಧಾರಿತವಾಗಿದ್ದು, ನಂತರ ಅವು Unix ಸಮರಗಳ ಕಾರಣದಿಂದ ಬಿಟ್ಟುಹೋದ ಸಂಕೇತಗಳನ್ನು ಸೇರ್ಪಡಿಸಲು FreeBSD ಮತ್ತು NetBSDಗಳಾಗಿ ಕವಲೊಡೆದವು. ಇತ್ತೀಚಿನ ಕವಲುಗಳೆಂದರೆ BSD Unix[] ನಿಂದ ಕವಲೊಡೆದ ಡ್ರಾಗನ್‌ಫ್ಲೈ BSD ಮತ್ತು ಡಾರ್ವಿನ್‌.

ಕಾರ್ಯಾಚರಣಾ ವ್ಯವಸ್ಥೆಗಳ ವೈವಿಧ್ಯತೆ ಮತ್ತು ಹೊಂದಾಣಿಕೆಯ ಸೌಲಭ್ಯಗಳು

[ಬದಲಾಯಿಸಿ]

ಅನ್ವಯಿಕ ತಂತ್ರಾಂಶಗಳನ್ನು ಸಾಧಾರಣವಾಗಿ ನಿಗದಿತ ಕಾರ್ಯಾಚರಣಾ ವ್ಯವಸ್ಥೆಗಳಿಗೆಂದು ಬರೆಯಲಾಗುತ್ತದೆ, ಹಾಗೂ ಕೆಲವೊಮ್ಮೆ ನಿಗದಿತ ಯಂತ್ರಾಂಶಕ್ಕೆಂದೇ ಬರೆಯಲಾಗಿರುತ್ತದೆ. ಒಂದು ಅನ್ವಯವನ್ನು ಮತ್ತೊಂದು OSಗೆ ಹೊಂದಿಸಬೇಕಾದಾಗ, ಅನ್ವಯವನ್ನು ಹೊಂದಿಸಲು ಅಗತ್ಯವಿರುವ ಕಾರ್ಯವನ್ನು ಗ್ರಾಹಕ OS ಬೇರೆಯೇ ರೀತಿಯಲ್ಲಿ ಕಾರ್ಯಗತಗೊಳಿಸಿರುತ್ತದೆ(ಫಂಕ್ಷನ್‌ಗಳ ಹೆಸರು, ಆಂತರಿಕ ಅಗತ್ಯ ಮಾಹಿತಿಯ ಅರ್ಥಗಳು ಇತ್ಯಾದಿ.).

ಕಾರ್ಯಾಚರಣಾ ವ್ಯವಸ್ಥೆಗಳ ವೈವಿಧ್ಯತೆಯನ್ನು ಸಾಧಿಸಲು ಆಗುವ ವೆಚ್ಚವನ್ನು ತಂತ್ರಾಂಶ ವೇದಿಕೆಗಳಾದ Java, Qt ಅಥವಾ ವೆಬ್‌ ಬ್ರೌಸರ್‌ಗಳಿಗೆಂದು ಅನ್ವಯಗಳನ್ನು ಬರೆಯುವ ಮೂಲಕ ತಗ್ಗಿಸಬಹುದು. ನಿಗದಿತ ಕಾರ್ಯಾಚರಣಾ ವ್ಯವಸ್ಥೆಗಳು ಮತ್ತು ಅವುಗಳ ವ್ಯವಸ್ಥಾ ಲೈಬ್ರರಿಗಳಿಗೆ ಹೊಂದಿಸಲು ಆಗುವ ವೆಚ್ಚವನ್ನು ಈ ವೇದಿಕೆಗಳು ಈಗಾಗಲೇ ಭರಿಸಿವೆ.

ಇನ್ನೊಂದು ವಿಧಾನವೆಂದರೆ ಕಾರ್ಯಾಚರಣಾ ವ್ಯವಸ್ಥೆಗಳ ನಿರ್ಮಾಪಕರು ಮಾನಕಗಳನ್ನು ಅನ್ವಯಿಸಿಕೊಳ್ಳುವುದು. ಉದಾಹರಣೆಗೆ, POSIX ಮತ್ತು OS ಅಮೂರ್ತ ಸ್ತರಗಳು ಬಹಳಷ್ಟು ಸಮಾನ ಅಂಶಗಳನ್ನು ಹೊಂದಿದ್ದು ಹೊಂದಾಣಿಕೆ ವೆಚ್ಚವನ್ನು ಇಳಿಸುತ್ತವೆ.

ಇದನ್ನು ನೋಡಿರಿ

[ಬದಲಾಯಿಸಿ]

ಅಡಿಬರಹ

[ಬದಲಾಯಿಸಿ]
  1. [2] ^ ಡಿಶ್‌ವಾಶರ್ ಕಾರ್ಯಾಚರಣಾ ವ್ಯವಸ್ಥೆ
  2. [3] ^Linux Win 98ನ್ನು ಮೀರಿಸಲು ಮಾರುಕಟ್ಟೆ ಪಾಲನ್ನು ಹೊಂದಿಸಿದೆ. ಈಗಲೂ OS X Vistaಗಿಂತ ಮುಂದಿದೆ
  3. [4] ^Linux ಸರ್ವರ್ ಮಾರುಕಟ್ಟೆ ಪಾಲು ವೃದ್ಧಿಯಾಗುತ್ತಿದೆ Archived 2021-04-01 at Archive.is
  4. "ಆರ್ಕೈವ್ ನಕಲು" (PDF). Archived from the original (PDF) on 2009-03-25. Retrieved 2009-08-19.
  5. [24] ^ Microsoft TechNet ಪತ್ರಿಕೆಯಲ್ಲಿ ಇದನ್ನು ಎದುರಿಸಲು ತೆಗೆದುಕೊಂಡ ಹಂತಗಳನ್ನು ವಿವರವಾಗಿ ವಿವರಿಸಿದೆ. http://technet.microsoft.com/en-us/Windowsvista/aa905073.aspx
  6. Kenny Kerr (2006-09-29). "Windows Vista for Developers – Part 4 – User Account Control". Retrieved 2007-03-15.
  7. [32] ^ ನವೀಕರಣ ನಿಯಂತ್ರಣ ತಂತ್ರಾಂಶದ ಹೋಲಿಕೆ
  8. [33] ^ BSD ಕಾರ್ಯಾಚರಣಾ ವ್ಯವಸ್ಥೆಗಳ ಹೋಲಿಕೆ


ಆಕರಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]