ವಿಷಯಕ್ಕೆ ಹೋಗು

ಬಾಣಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾವಲಿ ಇಂದ ಪುನರ್ನಿರ್ದೇಶಿತ)

ಬಾಣಲೆಯು ಆಹಾರಗಳನ್ನು ಕರಿಯಲು, ಬಾಡಿಸಲು/ಹುರಿಯಲು, ಮತ್ತು ಕಂದುಬರಿಸಲು ಬಳಸಲ್ಪಡುವ ಚಪ್ಪಟೆ ತಳದ ಹರಿವಾಣ. ಇದು ಸಾಮಾನ್ಯವಾಗಿ ೨೦೦ ರಿಂದ ೩೦೦ ಮಿ.ಮಿ. ವ್ಯಾಸವನ್ನು ಹೊಂದಿರುತ್ತದೆ ಮತ್ತು ಹೊರಗಡೆಗೆ ಅಗಲವಾಗುವ ತುಲನಾತ್ಮಕವಾಗಿ ಕಡಿಮೆ ಎತ್ತರದ ಬದಿಗಳು, ಒಂದು ಉದ್ದನೆಯ ಕೈಹಿಡಿಯನ್ನು ಹೊಂದಿದ್ದು ಮುಚ್ಚಳವನ್ನು ಹೊಂದಿರುವುದಿಲ್ಲ. ಹೆಚ್ಚು ದೊಡ್ಡ ಬಾಣಲೆಗಳು ಮುಖ್ಯ ಕೈಹಿಡಿಗೆ ಎದುರಾಗಿ ಚಿಕ್ಕ ಬಿಗಿ ಹಿಡಿಯನ್ನು ಹೊಂದಿರಬಹುದು. ಇದಕ್ಕೆ ಹೋಲುವ ಅಳತೆಯ, ಆದರೆ ಕಡಿಮೆ ಅಗಲವಾಗುವ ಲಂಬ ಬದಿಗಳು ಮತ್ತು ಹಲವುವೇಳೆ ಮುಚ್ಚಳವನ್ನು ಹೊಂದಿರುವ ಬಾಣಲೆಯನ್ನು ಸಾಟೆ ಬಾಣಲೆ ಎಂದು ಕರೆಯಲಾಗುತ್ತದೆ. ಸಾಟೆ ಬಾಣಲೆಯನ್ನು ಬಾಣಲೆಯಂತೆ ಬಳಸಬಹುದಾದರೂ, ಅದನ್ನು ಕಡಿಮೆ ಶಾಖದ ಅಡಿಗೆ ವಿಧಾನಗಳಿಗೆ (ಉದಾ. ಸಾಟೆಯಿಂಗ್) ವಿನ್ಯಾಸಗೊಳಿಸಲಾಗಿರುತ್ತದೆ.

ತಾಮ್ರದ ಬಾಣಲೆಗಳನ್ನು ಪ್ರಾಚೀನ ಮೆಸೊಪೊಟೇಮಿಯಾದಲ್ಲಿ ಬಳಸಲಾಗುತ್ತಿತ್ತು.[] ಬಾಣಲೆಗಳು ಪ್ರಾಚೀನ ಗ್ರೀಸ್‍ನಲ್ಲೂ ಪರಿಚಿತವಿದ್ದವು ಮತ್ತು ಅಲ್ಲಿ ಇವುಗಳನ್ನು ಟ್ಯಾಗೆನಾನ್ ಎಂದು ಮತ್ತು ರೋಮ್‍ನಲ್ಲಿ ಇವುಗಳನ್ನು ಪಟೆಲಾ ಅಥವಾ ಸಾರ್ಟಾಗೊ ಎಂದು ಕರೆಯಲಾಗುತ್ತಿತ್ತು. ೧೯ನೇ ಶತಮಾನದ ಮಧ್ಯಭಾಗದಲ್ಲಿ ಅಡಿಗೆ ಒಲೆಯ ಪರಿಚಯವಾಗುವ ಮುಂಚೆ, ಸ್ಪೈಡರ್ ಎಂದು ಕರೆಯಲ್ಪಡುತ್ತಿದ್ದ ಸಾಮಾನ್ಯವಾಗಿ ಬಳಸಲಾದ ಎರಕಹೊಯ್ದ ಕಬ್ಬಿಣದ ಬಾಣಲೆಯು ಒಂದು ಕೈಹಿಡಿ ಮತ್ತು ಮೂರು ಕಾಲುಗಳನ್ನು ಹೊಂದಿತ್ತು. ಇದರ ಉಪಯೋಗವೆಂದರೆ ಬೆಂಕಿಯ ಕಲ್ಲಿದ್ದಲು ಮತ್ತು ಬೂದಿ ಮೇಲೆ ನಿಂತಿರುವುದು. ಅಡಿಗೆ ಒಲೆಗಳು ಜನಪ್ರಿಯವಾದಾಗ, ಕಾಲುಗಳಿಲ್ಲದ, ಚಪ್ಪಟೆ ತಳದ ಅಡುಗೆ ಪಾತ್ರೆಗಳು ಮತ್ತು ಬಾಣಲೆಗಳನ್ನು ವಿನ್ಯಾಸಗೊಳಿಸಲಾಯಿತು; ೧೯ನೇ ಶತಮಾನದ ಉತ್ತರಾರ್ಧದ ಈ ಅವಧಿಯು ಚಪ್ಪಟೆ ಎರಕಹೊಯ್ದ ಕಬ್ಬಿಣದ ತವಾದ ಪರಿಚಯವನ್ನು ಕಂಡಿತು.

ಸಾಂಪ್ರದಾಯಿಕವಾಗಿ, ಬಾಣಲೆಗಳನ್ನು ಎರಕಹೊಯ್ದ ಕಬ್ಬಿಣದಿಂದ ತಯಾರಿಸಲಾಗುತ್ತಿತ್ತು. ಇಂದು ಕೂಡ ಎರಕಹೊಯ್ದ ಕಬ್ಬಿಣವು ಜನಪ್ರಿಯವಾಗಿದ್ದಾರೂ, ವಿಶೇಷವಾಗಿ ಹೊರಾಂಗಣ ಅಡುಗೆಗಾಗಿ, ಬಹುತೇಕ ಬಾಣಲೆಗಳನ್ನು ಈಗ ಅಲ್ಯುಮಿನಿಯಂ ಅಥವಾ ತುಕ್ಕಹಿಡಿಯದ ಉಕ್ಕಿನಂತಹ ಲೋಹಗಳಿಂದ ತಯಾರಿಸಲಾಗುತ್ತದೆ. ಆಧುನಿಕ ಬಾಣಲೆಗಳಲ್ಲಿ ಬಳಸಲಾದ ವಸ್ತುಗಳು ಮತ್ತು ನಿರ್ಮಾಣ ವಿಧಾನವು ಬಹಳವಾಗಿ ಬದಲಾಗುತ್ತದೆ. ಕೆಲವು ಸಾಮಾನ್ಯ ನಿರ್ಮಾಣ ವಸ್ತುಗಳೆಂದರೆ ಅಲ್ಯುಮಿನಿಯಂ ಅಥವಾ ಅನಾಡೀಕರಿಸಿದ ಅಲ್ಯುಮಿನಿಯಂ, ಎರಕಹೊಯ್ದ ಕಬ್ಬಿಣ, ತಾಮ್ರ, ತುಕ್ಕುರಹಿತ ಉಕ್ಕು ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]
  1. Nemet-Nejat, Karen Rhea (1998). Daily Life in Ancient Mesopotamia (in ಇಂಗ್ಲಿಷ್). Greenwood Publishing Group. ISBN 9780313294976.


"https://kn.wikipedia.org/w/index.php?title=ಬಾಣಲೆ&oldid=864885" ಇಂದ ಪಡೆಯಲ್ಪಟ್ಟಿದೆ