ವಿಷಯಕ್ಕೆ ಹೋಗು

ಕಾರ್ಲ್ ಫರ್ಡಿನಾಂಡ್ ಗುಟ್ಸ್‌ಕೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗುಟ್ಸ್‌ಕೊ, ಕಾರ್ಲ್ ಫರ್ಡಿನಾಂಡ್ ಇಂದ ಪುನರ್ನಿರ್ದೇಶಿತ)

1811-78. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ಪತ್ರಿಕೋದ್ಯಮಿ. ಜರ್ಮನ್ ಸಾಹಿತ್ಯದ ಪ್ರಥಮ ಸಾಮಾಜಿಕ ಕಾದಂಬರಿಕರ್ತೃ.

Karl Gutzkow

ಬದುಕು

[ಬದಲಾಯಿಸಿ]

ಹುಟ್ಟಿದ್ದು ಬಡಕುಟುಂಬದಲ್ಲಿ. ಆದರೆ ಈತನಲ್ಲಿ ನೆಲೆಸಿದ್ದ ಮಹತ್ತ್ವಾಕಾಂಕ್ಷೆಗಳು ಈತನ ಪುರೋಭಿವೃದ್ಧಿಗೆ ದಾರಿ ತೋರಿಸಿದವು. ಈತನ ಸೂಕ್ಷ್ಮಮತಿ ಹಾಗೂ ಗ್ರಹಣಶಕ್ತಿ ಈತನ ಮಹತ್ತ್ವಾಕಾಂಕ್ಷೆಗಳಿಗೆ ಪೂರಕವಾದವು. ಗಯಟೆ ಮಹಾಕವಿಯನ್ನು ರಮ್ಯ ಸಾಹಿತ್ಯ ಪಂಥದ ಪ್ರವರ್ತಕನೆಂದು ಜರ್ಮನ್ ಸಾಹಿತ್ಯ ಹೇಳಿದರೆ, ಗುಟ್ಸ್‌ಕೊನನ್ನು ಆ ಪಂಥದ ವಿರೋಧಿಗಳ ನಾಯಕನೆಂದು ನಿರೂಪಿಸುತ್ತದೆ. ಹೀಗಾಗಿ ಈತನ ಹೆಸರು ಜರ್ಮನ್ ಸಾಹಿತ್ಯದಲ್ಲಿ ಪ್ರಸಿದ್ಧವಾದುದು. ಯುರೋಪಿನಲ್ಲಾದ 1830ರ ಕ್ರಾಂತಿ ಈತನ ಮೇಲೆ ಅಪೂರ್ವವಾದ ಪ್ರಭಾವ ಬೀರಿತೆನ್ನಬಹುದು.

ಕೃತಿಗಳು

[ಬದಲಾಯಿಸಿ]
  • 1835ರಲ್ಲಿ ಪ್ರಕಟವಾದ ವಲ್ಲಿ ಡಿ ತ್ಸೈಫ್ಲೆರಿನ್ ಕಾದಂಬರಿ ವಿವಾಹ ಪದ್ಧತಿಯನ್ನು ಕುರಿತದ್ದು. ಇದರಲ್ಲಿ ಅಂದಿನ ಧಾರ್ಮಿಕ ಪದ್ಧತಿಗಳಲ್ಲಿನ ನ್ಯೂನತೆಗಳನ್ನು ವಿವರಿಸಲಾಗಿತ್ತು. ಅದಕ್ಕಾಗಿ ಈತ ಮೂರು ತಿಂಗಳ ಕಾರಾಗೃಹವಾಸವನ್ನು ಅನುಭವಿಸಬೇಕಾಯಿತು.
  • 1836ರಲ್ಲಿ ಇತಿಹಾಸದ ಮೂಲತತ್ತ್ವಗಳು (ಟ್ಸುರ್ ಫಿಲೋಸೋಫಿ ಡೆರ್ ಗೆಶಿಷ್ಟೆ) ಎಂಬ ಉದ್ಗ್ರಂಥ ಪ್ರಕಟವಾಯಿತು.
  • 1839 ರಿಂದ ಈತನ ನಾಟಕಗಳು ರಂಗಸ್ಥಳದ ಮೇಲೆ ಬರಲಾರಂಭಿಸಿದವು. ಈತ ಬರೆದ ನಾಟಕಗಳು 20 ಸಂಪುಟಗಳಲ್ಲಿ ಹೊರಬಿದ್ದಿವೆ.
  • ವಲ್ಲಿಯನ್ನು ಬಿಟ್ಟರೆ ಪ್ರೇತಸರ್ದಾರರು (ಡೀ ರೆಟೆರ್ ಫ್ರೋಮ್ ಗೈಸ್ಟೆ) ಮತ್ತು ರೋಮ್ ನಗರದ ಮಾಂತ್ರಿಕರು (ಡೀ ಚ್ಸಾನೆರೆರ್ ಫಾನ್ ರೋಮ್) ಎಂಬುವು ಅನೇಕ ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ಪ್ರಸಿದ್ಧವೆನಿಸಿವೆ. ಈತನ ಕೃತಿಗಳಲ್ಲಿ ಅಂದಿನ ಸ್ತ್ರೀ ಜೀವನ, ಸಾಮಾಜಿಕ, ರಾಜಕೀಯ ವಿಷಯಗಳ ನೈಜ ಚಿತ್ರಣವನ್ನು ಕಾಣಬಹುದು.