ವಿಷಯಕ್ಕೆ ಹೋಗು

ಗ್ಲಾಡಿಯೇಟರ್ (೨೦೦೦ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗ್ಲಾಡಿಯೇಟರ್(2000 ಚಲನಚಿತ್ರ) ಇಂದ ಪುನರ್ನಿರ್ದೇಶಿತ)
Gladiator
A man standing at the center of the image is wearing armor and is holding a sword in his right hand. In the background is the top of the Colosseum with a barely visible crowd standing in it. The poster includes the film's title, cast credits, and release date.
Promotional movie poster
ನಿರ್ದೇಶನRidley Scott
ನಿರ್ಮಾಪಕDouglas Wick
David Franzoni
Branko Lustig
ಲೇಖಕScreenplay:
David Franzoni
John Logan
William Nicholson
Story:
David Franzoni
ಪಾತ್ರವರ್ಗRussell Crowe
Joaquin Phoenix
Connie Nielsen
Oliver Reed
Derek Jacobi
Djimon Hounsou
and Richard Harris
ಸಂಗೀತHans Zimmer
Lisa Gerrard
ಛಾಯಾಗ್ರಹಣJohn Mathieson
ಸಂಕಲನPietro Scalia
ವಿತರಕರುDomestic:
DreamWorks
International:
Universal Studios
ಬಿಡುಗಡೆಯಾಗಿದ್ದುAustralia
May 4, 2000
United States
May 5, 2000
ಅವಧಿTheatrical Cut:
154 min.
Extended Cut:
171 min.
ದೇಶUnited States
United Kingdom
ಭಾಷೆEnglish
ಬಂಡವಾಳ$103,000,000[][]
ಬಾಕ್ಸ್ ಆಫೀಸ್$457,640,427

ಗ್ಲಾಡಿಯೇಟರ್ ಒಂದು (West Frisian) ಅಮೇರಿಕನ್/ಬ್ರಿಟಿಷ್ ಮತ್ತು ಮಹಾಕಾವ್ಯದ ಚಿತ್ರವಾಗಿದ್ದು, ರಿಡ್ಲೆ ಸ್ಕಾಟ್ ನಿರ್ದೇಶಿಸಿದ್ದಾರೆ. ರಸ್ಸೆಲ್ ಕ್ರೋವ್‌, ಜೊವಾಕ್ವಿನ್ ಫೊಯನಿಕ್ಸ್, ಕೋನಿ ನೈಲ್ಸೆನ್, ಆಲಿವರ್ ರೀಡ್, ಡ್ಜಿಮೋನ್ ಹೌನ್ಸ್, ಡೆರೆಕ್ ಜಾಕೋಬಿ, ಮತ್ತು ರಿಚಾರ್ಡ್ ಹ್ಯಾರಿಸ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಮೋಸಗೊಂಡು ಬುದ್ಧಿಭ್ರಮಣೆಗೊಳಗಾದ ಮಗ ಕೊಮೋಡಸ್ (ಫೊಯನಿಕ್ಸ್)‌ನಿಂದಲೇ ಹತ್ಯೆಗೀಡಾಗುವ ಚಕ್ರವರ್ತಿ ಮಾರ್ಕಸ್ ಆರೆಲಿಯಸ್‌ನ ಅಚ್ಚುಮೆಚ್ಚಿನ ಸೇನಾಧಿಕಾರಿ ಜನರಲ್ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್‌ನ ಪಾತ್ರದಲ್ಲಿ ಕ್ರೋವ್‌ ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದಾನೆ. ಹೊಸ ಸೀಸರ್ ಆಗಿ ಕೊಮೋಡಸ್‌ ರಾಜಗದ್ದುಗೆ ಏರುವುದನ್ನು ವಿರೋಧಿಸಿದ ಮ್ಯಾಕ್ಸಿಮಸ್‌ಗೆ ಮರಣದಂಡನೆಯನ್ನು ವಿಧಿಸುವಂತೆ ಕೊಮೋಡಸ್‌ ಆದೇಶಿಸುತ್ತಾನೆ. ಮ್ಯಾಕ್ಸಿಮಸ್ ಅವನ ಮರಣದಂಡನೆಯ ಕುಣಿಕೆಯಿಂದ ಪಾರಾಗಿ ಕುಟುಂಬ ನೋಡಲೆಂದು ಮನೆಗೆ ಧಾವಿಸುತ್ತಾನೆ, ಆದರೆ ಅವನು ಬರುವಷ್ಟರಲ್ಲೇ ಅವರನ್ನು ಸಾಯಿಸಲಾಗಿರುತ್ತದೆ. ತನ್ನವರೆಲ್ಲರನ್ನು ಕಳೆದುಕೊಂಡು ಸೆರೆ ಸಿಕ್ಕಿದ ಮ್ಯಾಕ್ಸಿಮಸ್‌ನನ್ನು ರೋಮನ್ ಸಾಮ್ರಾಜ್ಯದ ಹೊರೆಎಲ್ಲೆಯಲ್ಲಿ ಗುಲಾಮನನ್ನಾಗಿ ಇರಿಸಲಾಗುತ್ತದೆ, ಬಳಿಕ ತನ್ನ ಕುಟುಂಬದ ಮತ್ತು ಚಕ್ರವರ್ತಿಯ ಹತ್ಯೆಯ ಸೇಡು ತೀರಿಸಲು ಕತ್ತಿಮಲ್ಲ ಕಣದ ವೀರನಾಗಿ ಬೆಳೆಯುತ್ತಾನೆ.

ಗ್ಲಾಡಿಯೇಟರ್ 2000ರ ಮೇ 5ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಈ ಚಿತ್ರ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡು, ಐತಿಹಾಸಿಕ ಮಹಾಕಾವ್ಯದ ಬಗ್ಗೆ ಸಂಕ್ಷೇಪ ಚಿತ್ರಣವನ್ನು ನೀಡಿದ ಖ್ಯಾತಿಗೆ ಪಾತ್ರವಾಯಿತು. ಚಿತ್ರವು 73ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಐದು ಅಕಾಡೆಮಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ್ದೇ ಅಲ್ಲದೆ ಹಲವಾರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು.

ಕಥಾವಸ್ತು

[ಬದಲಾಯಿಸಿ]

ಹಿಸ್ಪೇನಿಯದ ಮೂಲನಿವಾಸಿ ರೋಮನ್ ಜನರಲ್ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್ ನೇತೃತ್ವದ ರೋಮನ್ ಸೇನೆ ಜರ್ಮೇನಿಯಾ ಅನಾಗರಿಕರ ವಿರುದ್ಧ 180 A.D.ಯಲ್ಲಿ ದಂಡೆತ್ತಿ ಹೋಗುತ್ತದೆ, ಮತ್ತು ಇದು ಸುದೀರ್ಘಕಾಲದ ಕದನದಲ್ಲಿ ಕೊನೆಗೊಳ್ಳುತ್ತದೆ. ಈ ವಿಜಯದೊಂದಿಗೆ ಹಿರಿಯ ಚಕ್ರವರ್ತಿ ಮಾರ್ಕಸ್ ಆರೆಲಿಯಸ್‌‌ನ ಮನ್ನಣೆಯನ್ನು ಗಳಿಸುತ್ತಾನೆ. ಯುದ್ಧದ ಅಂತಿಮ ಹಂತದಲ್ಲಿ ಚಕ್ರವರ್ತಿಯ ಮಗ ಕೊಮೋಡಸ್ಮತ್ತು ಮಗಳು ಲುಸಿಲ್ಲಾ, ಆಗಮಿಸುತ್ತಾರೆ.

ಪ್ರಜಾಪ್ರಭುತ್ವವನ್ನು ಪರಿಣಾಮಕಾರಿಯಾಗಿ ಪುನರುಜ್ಜೀವಗೊಳಿಸುವುದಕ್ಕಾಗಿ ಅಧಿಕಾರವನ್ನು ರೋಮನ್ ಸೆನೆಟ್‌ಗೆ ಹಿಂದಿರುಗಿಸುವ ಆಶಯದೊಂದಿಗೆ ನೈತಿಕವಾಗಿ-ನೇರ ನಡೆನುಡಿಯ ಮ್ಯಾಕ್ಸಿಮಸ್‌ಗೆ ಅಧಿಕಾರದ ಚುಕ್ಕಾಣಿಯನ್ನು ನೀಡಲು ನಿರ್ಧರಿಸುತ್ತಾನೆ.

ಅಧಿಕಾರ ಕಳೆದುಕೊಳ್ಳುವ ಮಾತ್ಸರ್ಯದಲ್ಲಿ ತಂದೆಯನ್ನೇ ಕೊಲೆ ಮಾಡಿದ್ದ ಕೊಮೋಡಸ್‌ಗೆ ಈ ವಿಷಯವನ್ನು ಹೇಳುವ ಮೊದಲೇ, ಮ್ಯಾಕ್ಸಿಮಸ್‌ಗೆ ಆರೆಲಿಯಸ್ ವಿಷಯ ತಿಳಿಸುತ್ತಾನೆ.  ಈ ನಡುವೆ, ತಾನೇ ಚಕ್ರವರ್ತಿ ಎಂದು ಘೋಷಿಸಿಕೊಂಡ ಕೊಮೋಡಸ್ ತನಗೆ ನಿಯತ್ತನ್ನು ತೋರುವಂತೆ ಮ್ಯಾಕ್ಸಿಮಸ್‌ಗೆ ಹೇಳುತ್ತಾನೆ, ಆದರೆ ಚಕ್ರವರ್ತಿಯ ಸಾವಿನಲ್ಲಿ ಈತ ಭಾಗಿಯಾಗಿರುವುದನ್ನು ತಿಳಿದಿದ್ದ ಮ್ಯಾಕ್ಸಿಮಸ್‌ ಕೊಮೋಡಸ್‌ನ ಆದೇಶವನ್ನು ಧಿಕ್ಕರಿಸುತ್ತಾನೆ.  ಕೊಮೋಡಸ್ ಇದರಿಂದ ಕ್ರುದ್ಧನಾಗಿ, ಮ್ಯಾಕ್ಸಿಮಸ್‌ಗೆ ಮರಣದಂಡನೆ ವಿಧಿಸಲು  ಆದೇಶಿಸುತ್ತಾನೆ, ಮತ್ತು ಅವನ ಪತ್ನಿ ಮತ್ತು ಮಗನನ್ನು ಹತ್ಯೆಗೈಯಲ್ಲು ರೋಮನ್‌ ಚಕ್ರವರ್ತಿಯ ಅಂಗರಕ್ಷಕ ದಳದವರನ್ನು ಕಳುಹಿಸಿ ಕೊಡುತ್ತಾನೆ. ಮ್ಯಾಕ್ಸಿಮಸ್ ಸ್ವಲ್ಪದರಲ್ಲೇ ಪಾರಾದರೂ, ಆಗ ನಡೆದ ಘಟನಾವಳಿಗಳಲ್ಲಿ ಗಾಯಗೊಳ್ಳುತ್ತಾನೆ.  ಕೂಡಲೇ ಮನೆಗೆ ಧಾವಿಸಿ ಬರುತ್ತಾನೆ, ಅಷ್ಟರಲ್ಲಿ ನಿರ್ನಾಮಗೊಂಡಿದ್ದ ಮನೆಯ ಅವಶೇಷಗಳೆಡೆಯಲ್ಲಿ ಪತ್ನಿ ಮತ್ತು ಮಗನನ್ನು ಶಿಲುಬೇಗೇರಿಸಿರುವುದು ಕಂಡು ಅವನಿಗೆ ಕಾಣುತ್ತದೆ.  ಅವರ ಅಂತ್ಯಕ್ರಿಯೆ ಮಾಡಿದ ಬಳಿಕ ಮ್ಯಾಕ್ಸಿಮಸ್ ನಿತ್ರಾಣಗೊಂಡು ಕುಸಿಯುತ್ತಾನೆ.

ಗುಲಾಮ ವರ್ತಕರು ಮ್ಯಾಕ್ಸಿಮಸ್‌ನನ್ನು ಕಂಡು ಉತ್ತರ ಆಫ್ರಿಕಾದ ಕಗ್ಗಾಡು ಪ್ರದೇಶ ಜುಕಾಬಾರ್‌‌ಗೆ ಕರೆದೊಯ್ಯುತ್ತಾರೆ, ಅಲ್ಲಿ ಅವನನ್ನು ಕತ್ತಿಮಲ್ಲ ಶಾಲೆಯ ಮುಖ್ಯಸ್ಥ ಆಂಟೋನಿಯಸ್ ಪ್ರೋಕ್ಸಿಮೊ ಕೊಂಡುಕೊಳ್ಳುತ್ತಾನೆ. ಮ್ಯಾಕ್ಸಿಮಸ್ ಆರಂಭದಲ್ಲಿ ಸೆಣಸಾಡಲು ನಿರಾಕರಿಸುತ್ತಾನೆ, ಆದರೆ ಹೋರಾಟ ಕಣದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವನು ತೋರುವ ಅಸಾಧಾರಣ ಹೋರಾಟ ಕೌಶಲ್ಯ ಪ್ರೇಕ್ಷಕ ವರ್ಗದಲ್ಲಿ ಬಹು ಜನಪ್ರಿಯತೆಯನ್ನು ತಂದುಕೊಡುತ್ತದೆ, ಅಲ್ಲದೆ ಜೊತೆ ಹೋರಾಟಗಾರರ ಮನ್ನಣೆಗೆ ಪಾತ್ರನಾಗುತ್ತಾನೆ. ಅವನು "ದಿ ಸ್ಪೇನಿಯಾರ್ಡ್" ಎಂದು ಹೆಸರು ಪಡೆದುಕೊಂಡು ಇನ್ನಷ್ಟು ತರಬೇತಿ ಪಡೆಯುತ್ತಾನೆ ಮತ್ತು ಜರ್ಮನ್ ಅನಾಗರಿಕ ಹ್ಯಾಜೆನ್ ಮತ್ತು ನ್ಯುಮಿಡಿಯಾದ ಬೇಟೆಗಾರ ಜ್ಯೂಬಾ ಮೊದಲಾದವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾನೆ.

ರೋಮ್‌ನಲ್ಲಿ ಕೊಮೋಡಸ್ ತನ್ನ ತಂದೆಗೆ ಗೌರವ ಕಾಣಿಕೆ ಸಲ್ಲಿಸಲು ಮತ್ತು ಜನರ ಪ್ರೀತಿ ಗಳಿಸುವುದಕ್ಕಾಗಿ ಕತ್ತಿಮಲ್ಲ ಆಟವನ್ನು ಪುನಃ ಪ್ರಾರಂಭಿಸುತ್ತಾನೆ, ಆಟದಲ್ಲಿ ಭಾಗವಹಿಸಲು ಪ್ರೋಕ್ಸಿಮೊದ ಕತ್ತಿಮಲ್ಲರನ್ನು ಬಾಡಿಗೆಗೆ ಕರೆಸಿಕೊಳ್ಳುತ್ತಾನೆ. ಎರಡನೇ ಪುನಿಕ್ ಯುದ್ಧಜಾಮ ಕದನವನ್ನು ಪುನರಭಿನಯಿಸಿದ ಸಂದರ್ಭದಲ್ಲಿ ಮ್ಯಾಕ್ಸಿಮಸ್ ಹ್ಯಾನಿಬಲ್‌ನ ಸೇನಾಪಡೆಯ ವೇಷ ಧರಿಸಿ ಪ್ರೋಕ್ಸಿಮೋ ಕತ್ತಿಮಲ್ಲರ ಮುಂದಾಳತ್ವ ವಹಿಸುತ್ತಾನೆ. ಪ್ರಬಲ ಎದುರಾಳಿ ವಿರುದ್ಧದ ನಿರ್ಣಾಯಕ ಹೋರಾಟವನ್ನು ವೀಕ್ಷಿಸಲು ಸೇರಿದ್ದ ಜನಸಮೂಹ ಮತ್ತು ಚಕ್ರವರ್ತಿ ಎಲ್ಲರೂ ಅಚ್ಚರಿಪಡುತ್ತಾರೆ. ವಿಜಯೀಗಳನ್ನು ಸಂದರ್ಶಿಸುವುದಕ್ಕಾಗಿ ಸ್ಪರ್ಧೆ ನಡೆದ ಸ್ಥಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡುವ ಕೊಮೋಡಸ್, "ದ ಸ್ಪೇನಿಯಾರ್ಡ್"‌ಗೆ ಅವನ ಹೆಲ್ಮೆಟ್ಟನ್ನು ತೆಗೆಯಲು ಹೇಳಿ ಹೆಸರು ಕೇಳುತ್ತಾನೆ. ಇದರಿಂದ ಸಿಟ್ಟಿಗೆದ್ದ ಮ್ಯಾಕ್ಸಿಮಸ್ ಮುಖ ತೋರಿಸಿ ಅವನ ಗುರುತನ್ನು ತಿಳಿಯಪಡಿಸುತ್ತಾನೆ. ಮ್ಯಾಕ್ಸಿಮಸ್‌ಗೆ ಜನಸಮೂಹದ ಬೆಂಬಲ ಇದ್ದುದರಿಂದ ಚಕ್ರವರ್ತಿಗೆ ಅವನನ್ನು ಕೊಲ್ಲಲು ಸಾಧ್ಯವಾಗದೆ ಕಣದ ಸ್ಥಳದಿಂದ ಹೊರನಡೆಯುತ್ತಾನೆ. ಸ್ಪರ್ಧೆಯು ಮುಂದುವರಿದಂತೆ, ರೋಮ್‌ನ ಏಕೈಕ ಸೋಲರಿಯದ ಕತ್ತಿಮಲ್ಲ ಗೌಲ್‌ನ ಟಿಗ್ರಿಸ್‌ನನ್ನು ಮ್ಯಾಕ್ಸಿಮಸ್‌ ವಿರುದ್ಧ ಕೊಮೋಡಸ್ ಕಣಕ್ಕಿಳಿಸುತ್ತಾನೆ, ಮತ್ತು ಕಣವನ್ನು ಹುಲಿಗಳ ಗುಂಪಿನಿಂದ ಸುತ್ತವರಿಸಲಾಗುತ್ತದೆ. ಮ್ಯಾಕ್ಸಿಮಸ್ ಹುಲಿಗಳೊಂದಿಗೆ ಸೆಣಸಾಡಿ ಹೊರಬಂದು ಟಿಗ್ರಿಸ್‌ನನ್ನು ಸೋಲಿಸಿದರೂ ಕೊಲ್ಲಲು ಹಿಂದೇಟು ಹಾಕುತ್ತಾನೆ. ಹೀಗೆ ಕೊಮೋಡಸ್‌ನ ಆದೇಶಗಳನ್ನು ನೇರವಾಗಿ ವಿರೋಧಿಸಿ ಉದ್ಧೇಶಪೂರ್ವಕವಾಗಿ ಅವನನ್ನು ಅವಮಾನಿಸುತ್ತಾನೆ. ಪ್ರೇಕ್ಷಕ ವರ್ಗ ಮ್ಯಾಕ್ಸಿಮಸ್‌ನನ್ನು ಶ್ಲಾಘಿಸಿ, ಅವನಿಗೆ "ಕರುಣಾಮಯಿ" ಎಂಬ ಬಿರುದು ನೀಡುತ್ತದೆ. ಮ್ಯಾಕ್ಸಿಮಸ್‌ನನ್ನು ಕೊಲ್ಲಲು ಅಸಮರ್ಥನಾದುದಕ್ಕೆ ಕೊಮೋಡಸ್ ನಿರಾಶೆಗೊಳಗಾಗುತ್ತಾನೆ, ಅಲ್ಲದೆ ಹೆಚ್ಚುತ್ತಿರುವ ಮ್ಯಾಕ್ಸಿಮಸ್‌ನ ಜನಪ್ರಿಯತೆಗೆ ಕಡಿವಾಣ ಹಾಕಲೂ ಅವನಿಂದ ಸಾಧ್ಯವಾಗುವುದಿಲ್ಲ.

ಈ ನಡುವೆ ಮ್ಯಾಕ್ಸಿಮಸ್‌ ತನ್ನ ಮಾಜಿ ಯೋಧ ಸಿಸೆರೊನನ್ನು ಭೇಟಿಯಾಗುತ್ತಾನೆ, ಮತ್ತು ತನ್ನ ಸೇನೆ ಇನ್ನೂ ತನಗೆ ನಿಷ್ಠೆಯಿಂದಿರುವುದನ್ನು ಆತನ ಮೂಲಕ ತಿಳಿದುಕೊಳ್ಳುತ್ತಾನೆ. ಕೊಮೋಡಸ್‌ನ ಪದಚ್ಯುತಿಗೆ ಮತ್ತು ತನ್ನ ಸೇನೆಯೊಂದಿಗೆ ಮತ್ತೆ ಸೇರಿಕೊಳ್ಳಲು ಲುಸಿಲ್ಲಾ ಮತ್ತು ಸೆನೆಟರ್ ಗ್ರಾಚುಸ್‌ನೊಂದಿಗೆ ಮ್ಯಾಕ್ಸಿಮಸ್ ಒಂದು ಸಂಚು ಹೂಡುತ್ತಾನೆ. ಸಹೋದರಿಯು ತನಗೆ ನಂಬಿಕೆ ದ್ರೋಹ ಬಗೆಯುತ್ತಿದ್ದಾಳೆಂದು ಅನುಮಾನಿಸಿದ ಕೊಮೋಡಸ್, ಅವಳ ಕಿರಿಯ ಮಗನಿಗೆ ಬೆದರಿಕೆ ಹಾಕಿ ಸಂಚನ್ನು ಬಹಿರಂಗಪಡಿಸುವಂತೆ ಅವಳನ್ನು ಬಲವಂತ ಪಡಿಸುತ್ತಾನೆ. ತಕ್ಷಣವೇ ಚಕ್ರವರ್ತಿಯ ಅಂಗರಕ್ಷಕ ಪಡೆಯ ಯೋಧರು ಗ್ರಾಚುಸ್‌ನನ್ನು ಬಂಧಿಸಿ, ಪ್ರೋಕ್ಸಿಮೊದ ಕತ್ತಿಮಲ್ಲರ ವಠಾರಕ್ಕೆ ಲಗ್ಗೆಯಿಡುತ್ತಾರೆ, ಕತ್ತಿಮಲ್ಲರೊಂದಿಗಿನ ಹೋರಾಟದ ವೇಳೆ ಮ್ಯಾಕ್ಸಿಮಸ್ ತಪ್ಪಿಸಿಕೊಳ್ಳುತ್ತಾನೆ. ಈ ಮುತ್ತಿಗೆಯಲ್ಲಿ ಹ್ಯಾಜೆನ್ ಮತ್ತು ಪ್ರೋಕ್ಸಿಮೊ ಕೊಲ್ಲಲ್ಪಟ್ಟು, ಜ್ಯೂಬಾ ಮತ್ತು ಮತ್ತಿತರ ಬದುಕುಳಿದವರು ಬಂಧಿಸಲ್ಪಡುತ್ತಾರೆ. ಸಿಸೆರೊ ಸಾವಿನ ಪ್ರತ್ಯಕ್ಷದರ್ಶಿಯಾಗುವುದಕ್ಕಾಗಿ ಮ್ಯಾಕ್ಸಿಮಸ್ ನಗರದ ಹೊರ ಆವರಣದವರೆಗೆ ಓಡಿ ಬರುತ್ತಾನೆ, ಆದರೆ ಚಕ್ರವರ್ತಿಯ ಅಂಗರಕ್ಷಕ ಪಡೆಯಿಂದ ಬಂಧಿತನಾಗುತ್ತಾನೆ.

ಕೊಲೊಸ್ಸಿಯಮ್‌ನಲ್ಲಿ ಎಲ್ಲಾ ಪ್ರೇಕ್ಷಕ ವರ್ಗದ ಮುಂದೆ ದ್ವಂದ್ವಯುದ್ಧಕ್ಕೆ ಮ್ಯಾಕ್ಸಿಮಸ್‌ಗೆ ಕೊಮೋಡಸ್ ಪಂಥಾಹ್ವಾನ ನೀಡುತ್ತಾನೆ. ಮ್ಯಾಕ್ಸಿಮಸ್‌ ಮೇಲುಗೈ ಸಾಧಿಸುತ್ತಿರುವುದನ್ನು ಗುರುತಿಸಿದ ಕೊಮೋಡಸ್ ಕಠಾರಿಯಿಂದ ಅವನನ್ನು ತಿವಿದು ಗಾಯಗೊಳಿಸುತ್ತಾನೆ. ಕಣದಲ್ಲಿ ಇಬ್ಬರೂ ಕತ್ತಿ ಕಾಳಗದಲ್ಲಿ ತೊಡಗಿರುವಾಗ ಕೊಮೋಡಸ್‌ನ ಕೈಯಿಂದ ಖಡ್ಗವನ್ನು ಮ್ಯಾಕ್ಸಿಮಸ್ ಒಮ್ಮೆಲೆ ಕಿತ್ತುಕೊಳ್ಳುತ್ತಾನೆ. ಆಗ ಕೊಮೋಡಸ್‌‌ನ ಸಹಾಯಕ್ಕೆ ಹೋಗದಂತೆ ಚಕ್ರವರ್ತಿಯ ಅಂಗರಕ್ಷಕ ಪಡೆಗೆ ಕ್ವಿಂಟಸ್ ಆದೇಶಿಸುತ್ತಾನೆ. ಮ್ಯಾಕ್ಸಿಮಸ್ ಕೂಡ ತಾನಾಗಿಯೇ ಖಡ್ಗವನ್ನು ಕೈಚೆಲ್ಲಿದಾಗ, ಕೊಮೋಡಸ್ ತಾನು ಅಡಗಿಸಿಟ್ಟಿದ್ದ ಕಠಾರಿಯನ್ನು ಹೊರತೆಗೆದು ದಾಳಿಯನ್ನು ಮತ್ತೆ ಆರಂಭಿಸುತ್ತಾನೆ. ತಕ್ಷಣ ಎಚ್ಚೆತ್ತುಕೊಂಡ ಮ್ಯಾಕ್ಸಿಮಸ್ ಕೊಮೋಡಸ್‌ನ ಕುತ್ತಿಗೆಗೆ ಅವನದ್ದೇ ಕಠಾರಿಯಿಂದ ತಿವಿದು ಸಾಯಿಸುತ್ತಾನೆ. ಹೀಗೆ ಸಂಪೂರ್ಣ ನೀರವತೆ ಆವರಿಸಿದ್ದ ಕೊಲೊಸ್ಸಿಯಮ್‌ನಲ್ಲಿ ಕೊಮೋಡಸ್ ಮರಣವನ್ನಪ್ಪುತ್ತಾನೆ, ಇನ್ನೊಂದೆಡೆ ಸಾಯುತ್ತಿದ್ದ ಮ್ಯಾಕ್ಸಿಮಸ್ ಪರಲೋಕ ಜೀವನದಲ್ಲಿ ಪತ್ನಿ ಮತ್ತು ಮಗ ಬಾಳುತ್ತಿರುವುದನ್ನು ಕಾಣಲು ಪ್ರಾರಂಭಿಸುತ್ತಾನೆ. ಆ ಹೊತ್ತಿಗೆ ಮ್ಯಾಕ್ಸಿಮಸ್ ಇದ್ದಲ್ಲಿಗೆ ಧಾವಿಸುವ ಕ್ವಿಂಟಸ್ ಅವನನ್ನು ವಾಸ್ತವ ಸ್ಥಿತಿಗೆ ತಂದು, ಮುಂದಿನ ಸೂಚನೆಗಳಿಗಾಗಿ ಕೋರುತ್ತಾನೆ. ಪ್ರೋಕ್ಸಿಮೊ ಕತ್ತಿಮಲ್ಲರನ್ನು ಬಿಡುಗಡೆಗೊಳಿಸುವಂತೆಯೂ ಮತ್ತು ಸೆನೆಟರ್ ಗ್ರಾಚುಸ್‌‌ನನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸುವಂತೆ ಮ್ಯಾಕ್ಸಿಮಸ್ ಆದೇಶಿಸುತ್ತಾನೆ, ಅಲ್ಲದೆ ರೋಮ್‌ನಲ್ಲಿ ಸೆನೆಟ್-ಆಧಾರಿತ ಆಡಳಿತವನ್ನು ಮತ್ತೆ ತರಲು ಅವನಿಗೆ ಸೂಚಿಸುತ್ತಾನೆ. ನಂತರ ಸಾವನ್ನಪ್ಪುವ ಮ್ಯಾಕ್ಸಿಮಸ್, ಪರಲೋಕ ಜೀವನದಲ್ಲಿ ತನ್ನ ಕುಟುಂಬವನ್ನು ಅರಸಿಕೊಂಡು ಅಲೆಯುತ್ತಾನೆ. ಸೆನೆಟರ್ ಗ್ರಾಚುಸ್‌‌, ಕ್ವಿಂಟಸ್ ಮತ್ತು ಪ್ರೋಕ್ಸಿಮೊ ಕತ್ತಿಮಲ್ಲರು ಮ್ಯಾಕ್ಸಿಮಸ್‌ನ ದೇಹವನ್ನು ಕೊಲೊಸ್ಸಿಯಮ್‌ನಿಂದ ಹೊತ್ತು ಹೊರತರುತ್ತಾರೆ, ಕೊಮೋಡಸ್‌ನ ಕಳೇಬರ ಅಲ್ಲೇ ಉಳಿಯುತ್ತದೆ. ಆ ರಾತ್ರಿ ಜ್ಯೂಬಾ ನೀರವತೆ ತುಂಬಿರುವ ಕೊಲೊಸ್ಸಿಯಮ್‌ಗೆ ಹಿಂದಿರುಗಿ, ಪರಲೋಕ ಜೀವನದಲ್ಲಿ ಮ್ಯಾಕ್ಸಿಮಸ್‌ನನ್ನು ಕಂಡು ಮಾತನಾಡುತ್ತಾರೆ.

ಪಾತ್ರವರ್ಗ

[ಬದಲಾಯಿಸಿ]
  • ರಸ್ಸೆಲ್ ಕ್ರೋವ್‌‌ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್ ಪಾತ್ರದಲ್ಲಿ ನಟಿಸಿದ್ದಾನೆ: ಜರ್ಮೇನಿಯಾದಲ್ಲಿ ಒಬ್ಬ ಹಿಸ್ಪಾನೊ-ರೋಮನ್ ಜನರಲ್ ಆಗಿರುವ ಮೆರಿಡಿಯಸ್, ನಂ ತರ ಗುಲಾಮನಾಗುತ್ತಾನೆ ಹಾಗೂ ಕೊಮೋಡಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಚಲನಚಿತ್ರದ ಆರಂಭದ ಸನ್ನಿವೇಶಗಳಲ್ಲಿ ಮಾರ್ಕಸ್ ಆರೆಲಿಯಸ್‌ ಹಾಗೂ ಲುಸಿಲ್ಲಾಳ ಮೆಚ್ಚುಗೆಗೆ ಪಾತ್ರವಾಗಿರುತ್ತಾನೆ. ಅವನ ಮನೆ ಟ್ರುಜಿಲ್ಲೊಗೆ ಹತ್ತಿರದಲ್ಲಿದೆ (ಇಂದಿನ ಸ್ಪೇನ್‌ನ ಕ್ಯಾಕೆರೆಸ್). ಅವನ ಕುಟುಂಬವು ಹತ್ಯೆಗೀಡಾದ ನಂತರ ಪ್ರತೀಕಾರದ ಪ್ರತಿಜ್ಞೆ ಮಾಡುತ್ತಾನೆ. ಮಾರ್ಕಸ್ ನೊನಿಯಸ್ ಮ್ಯಾಕ್ರಿನಸ್, ನಾರ್ಕಿಸಸ್, ಸ್ಪರ್ಟಾಕಸ್, ಸಿಂಸಿನಾಟಸ್, ಮತ್ತು ಹಿಸ್ಪೇನಿಯಾದ ಮ್ಯಾಕ್ಸಿಮಸ್ ಮೊದಲಾದವರಿಂದ ಭಾಗಶಃ ಪ್ರೇರಿತವಾದ ಮ್ಯಾಕ್ಸಿಮಸ್ ಒಂದು ಕಾಲ್ಪನಿಕ ಪಾತ್ರವಾಗಿದೆ.
  • ಜೊವಾಕ್ವಿನ್ ಫೊಯನಿಕ್ಸ್‌ಕೊಮೋಡಸ್‌ನ ಪಾತ್ರ ಮಾಡಿದ್ದಾನೆ: ಕೊಮೋಡಸ್ ಒಬ್ಬ ದುರಹಂಕಾರಿ ಮತ್ತು ಅಧಿಕಾರ ದಾಹ ಹೊಂದಿದ್ದು, ಸಾಮಾಜಿಕ ವ್ಯವಸ್ಥೆಯ ವಿರುದ್ಧವಿರುವ ಯುವಕ. ಆತ ತನ್ನ ತಂದೆಯನ್ನೇ ಸಾಯಿಸುತ್ತಾನೆ ಮತ್ತು ಸ್ವಂತ ಸಹೋದರಿ ಲುಸಿಲ್ಲಾಳನ್ನು ಬಯಸುತ್ತಾನೆ. ತಂದೆಯ ಮರಣಾನಂತರ ರೋಮ್‌ನ ಚಕ್ರವರ್ತಿಯಾಗುತ್ತಾನೆ.
  • ಕೋನಿ ನೀಲ್ಸನ್‌ ಲುಸಿಲ್ಲಾಳ ಪಾತ್ರದಲ್ಲಿ ನಟಿಸಿದ್ದಾಳೆ: ಇವಳು ಮಾರ್ಕಸ್ ಆರೆಲಿಯಸ್‌ನ ಹಿರಿಯ ಮಗಳು, ಆವಾಗಷ್ಟೆ ವಿಧವೆಯಾದವಳು. ತನ್ನ ಮಗ ಲುಸಿಯಸ್‌ನನ್ನು ರಕ್ಷಿಸುವುದರೊಂದಿಗೆ, ತನ್ನ ಸ್ವಂತ ಸಹೋದರನ ಸಂಭೋಗದ ಆಕಾಂಕ್ಷೆಯನ್ನು ಪ್ರತಿಭಟಿಸುತ್ತಾಳೆ.
  • ಬೇಟೆಗಾರ ಜ್ಯೂಬಾ ಆಗಿ ಡ್ಜಿಮೋನ್ ಹೌನ್ಸು ನಟಿಸಿದ್ದಾನೆ: ಜ್ಯೂಬಾ ನ್ಯುಮಿಡಿಯನ್ ಕುಲದವನಾಗಿದ್ದು, ಗುಲಾಮ ವರ್ತಕರು ಅವನ ಮನೆ ಮತ್ತು ಕುಟುಂಬದಿಂದ ಕರೆದುಕೊಂಡು ಬಂದಿರುತ್ತಾರೆ. ಕಷ್ಟಕರ ಸನ್ನಿವೇಶಗಳಲ್ಲಿ ಅವನು ಮ್ಯಾಕ್ಸಿಮಸ್‌ಗೆ ಹತ್ತಿರದ ಸ್ನೇಹಿತನಾಗುತ್ತಾನೆ.
  • ಆಲಿವರ್ ರೀಡ್‌ ಆಂಟೋನಿಯಸ್ ಪ್ರೋಕ್ಸಿಮೊ ಪಾತ್ರ ವಹಿಸಿದ್ದಾನೆ: ಹಿರಿಯ ಹಾಗೂ ಮಿತಮಾತಿನ ಕತ್ತಿಮಲ್ಲ ತರಬೇತುದಾರ, ಇವನು ಉತ್ತರ ಆಫ್ರಿಕಾದಲ್ಲಿ ಮ್ಯಾಕ್ಸಿಮಸ್‌ನನ್ನು ಕೊಂಡುಕೊಳ್ಳುತ್ತಾನೆ. ಪೂರ್ವಕಾಲದಲ್ಲಿ ಕತ್ತಿಮಲ್ಲನಾಗಿದ್ದ ಈತ ಮಾರ್ಕಸ್ ಆರೆಲಿಯಸ್‌ನಿಂದ ಸ್ವತಂತ್ರವಾಗಿರುತ್ತಾನೆ. ಮ್ಯಾಕ್ಸಿಮಸ್‌ಗೆ ತನ್ನ ಸ್ವಂತ ರಕ್ಷಾಕವಚವನ್ನು ನೀಡಿದ್ದಲ್ಲದೆ, ಅಂತಿಮವಾಗಿ ಸ್ವತಂತ್ರವಾಗುವ ಅವಕಾಶವನ್ನೂ ಕೊಡುತ್ತಾನೆ.
  • ಡೆರೆಕ್ ಜಾಕೋಬಿ ಸೆನೆಟರ್ ಗ್ರಾಚುಸ್ ಪಾತ್ರದಲ್ಲಿ ನಟಿಸಿದ್ದಾನೆ‌‌: ಕೊಮೋಡಸ್‌ನ ಮುಖಂಡತ್ವವನ್ನು ವಿರೋಧಿಸಿದ ಸೆನಾಟರ್‌ಗಳಲ್ಲಿ ಇವನೂ ಒಬ್ಬ. ಅಂತಿಮವಾಗಿ ಚಕ್ರವರ್ತಿಯನ್ನು ಪದಚ್ಯುತಿಗೊಳಿಸುವ ಮ್ಯಾಕ್ಸಿಮಸ್‌ನ ಕಾರ್ಯಕ್ಕೆ ನೆರವು ನೀಡಲು ಈತ ಒಪ್ಪುತ್ತಾನೆ.
  • ರಾಲ್ಫ್ ಮೊಯೆಲ್ಲರ್ ಹ್ಯಾಜೆನ್ ಪಾತ್ರದಲ್ಲಿ ಅಭಿನಯಿಸಿದ್ದಾನೆ: ಇವನು ಜರ್ಮೇನಿಯಾದವನು ಹಾಗೂ ಪ್ರೋಕ್ಸಿಮೊದ ಮುಖ್ಯ ಕತ್ತಿಮಲ್ಲ. ರೋಮ್‌ ಕದನಗಳ ವೇಳೆ ಮ್ಯಾಕ್ಸಿಮಸ್ ಮತ್ತು ಜ್ಯೂಬಾಗೆ ಸ್ನೇಹಿತನಾಗುತ್ತಾನೆ.
  • ಸ್ಪೆನ್ಸರ್ ಟ್ರೀಟ್ ಕ್ಲಾರ್ಕ್‌ ಲುಸಿಯಸ್ ವರುಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ: ಲುಸಿಲ್ಲಾಳ ಮಗ. ಅವನಿಗೆ ಮ್ಯಾಕ್ಸಿಮಸ್ ಬಗ್ಗೆ ಅಪಾರ ಗೌರವವಿತ್ತು, ಇದಕ್ಕಾಗಿ ಮತ್ತು ಕತ್ತಿಮಲ್ಲನಂತೆ ಅಭಿನಯಿಸಿದ್ದಕ್ಕಾಗಿ ಮಾವ ಕೊಮೋಡಸ್‌ನ ಸಿಟ್ಟಿಗೆ ಗುರಿಯಾಗುತ್ತಾನೆ. ಲುಸಿಯಸ್ ಸದಾ ಉತ್ಸಾಹದಿಂದ ಇರುತ್ತಾನೆ, ಮತ್ತು ಕೊಮೋಡಸ್‌ನ ನಿಜವಾದ ಬಣ್ಣ ಬಯಲಾಗುವವರೆಗೆ ಅವನನ್ನು ಇಷ್ಟಪಡುತ್ತಿರುತ್ತಾನೆ. ಅವನ ತಂದೆಯೆನ್ನಲಾದ ಮತ್ತು ಮಾರ್ಕಸ್ ಆರೆಲಿಯಸ್‌ನ ಸಹ-ಆಡಳಿತಗಾರನಾದ ಲುಸಿಯಸ್ ವರುಸ್‌ನ ಹೆಸರನ್ನು ಅವನಿಗೆ ನಂತರ ಇಡಲಾಗಿತ್ತು.
  • ರಿಚಾರ್ಡ್ ಹ್ಯಾರಿಸ್‌ ರೋಮ್‌ ಚಕ್ರವರ್ತಿ ಮಾರ್ಕಸ್ ಆರೆಲಿಯಸ್ ಪಾತ್ರದಲ್ಲಿ ನಟಿಸಿದ್ದಾನೆ: ರೋಮ್ಅನ್ನು ಮತ್ತೆ ಪ್ರಜಾಪ್ರಭುತ್ವ ಮಾದರಿಯ ಆಡಳಿತಕ್ಕೆ ತರಬೇಕೆಂಬ ಅಭಿಲಾಷೆಯನ್ನು ಹೊಂದಿರುತ್ತಾನೆ, ಆದರೆ ಅವನ ಆಶಯ ಪೂರ್ಣಗೊಳ್ಳುವ ಮೊದಲೇ ಮಗ ಕೊಮೋಡಸ್‌ನಿಂದ ಹತ್ಯೆಗೀಡಾಗುತ್ತಾನೆ.
  • ಸಿಸೆರೊ ಪಾತ್ರದಲ್ಲಿ ಟೋಮಿ ಫ್ಲನಾಗನ್ ನಟಿಸಿದ್ದಾನೆ: ಇವನು ರೋಮನ್ ಸೇನಾನಿ ಮತ್ತು ಮ್ಯಾಕ್ಸಿಮಸ್‌ನ ನಿಯತ್ತಿನ ಸೇವಕ, ಮ್ಯಾಕ್ಸಿಮಸ್ ದಾಸ್ಯಕ್ಕೊಳಗಾದ ಸಂದರ್ಭದಲ್ಲಿ ಅವನಿಗೆ ಮಾಹಿತಿಯನ್ನು ಪೂರೈಸುತ್ತಾನೆ.
  • ಜನರಲ್ ಕ್ವಿಂಟಸ್‌ ತೋಮಸ್ ಅರನ ಪಾತ್ರದಲ್ಲಿ ನಟಿಸಿದ್ದಾನೆ: ಇವನು ಮತ್ತೊಬ್ಬ ರೋಮನ್ ಜನರಲ್ ಮತ್ತು ಮ್ಯಾಕ್ಸಿಮಸ್‌ನ ಮಾಜಿ ಸ್ನೇಹಿತ. ಚಕ್ರವರ್ತಿಯ ಅಂಗರಕ್ಷಕ ದಳದ ಮುಖ್ಯಸ್ಥನಾಗಿ ಕೊಮೋಡಸ್‌ನಿಂದ ನೇಮಕಗೊಂಡವನು. ಕೊಮೋಡಸ್‌ ತನ್ನ ಜನರಿಗೇ ಮರಣದಂಡನೆಯನ್ನು ಆದೇಶಿಸುವವರೆಗೆ ಅವರು ಬಹುನಿಷ್ಠರಾಗಿದ್ದರು.
  • ಜಾನ್ ಶ್ರಾಪ್ನೆಲ್‌ನು ಗಯುಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ: ಇವನು ಗ್ರಾಚುಸ್‌ನ ಮತ್ತೊಬ್ಬ ಆಪ್ತ ಸೆನೆಟರ್.
  • ಫಾಲ್ಕೊ ಪಾತ್ರದಲ್ಲಿ ಡೇವಿಡ್ ಸ್ಕೊಫೀಲ್ಡ್ ಸೆನೆಟರ್ ಕಾಣಿಸಿಕೊಂಡಿದ್ದಾನೆ: ಇವನು ರೋಮನ್ ಚಕ್ರವರ್ತಿಯ ಪ್ರತಿನಿಧಿ ಮತ್ತು ಗ್ರಾಚುಸ್‌ ವಿರೋಧಿ ಸೆನೆಟರ್. ಕೊಮೋಡಸ್‌ನ ಪ್ರಾಬಲ್ಯವನ್ನು ಬಲಪಡಿಸಲು ಅವನಿಗೆ ಸಹಾಯ ಮಾಡುತ್ತಾನೆ.
  • ಸ್ವೆನ್-ಓಲೆ ಥೋರ್ಸೆನ್‌‌ ಗಾಲ್‌ನ ಟಿಟುಸ್‌ನ ಪಾತ್ರದಲ್ಲಿ ಅಭಿನಯಿಸಿದ್ದಾನೆ: ಇವನು ಸೋಲನ್ನೇ ಕಂಡಿರದ ಸರದಾರ. ದ್ವಂದ್ವ ಯುದ್ಧದ ವೇಳೆ ಮ್ಯಾಕ್ಸಿಮಸ್‌ನನ್ನು ಹಿಮ್ಮೆಟ್ಟಿಸಲು ಇವನನ್ನು ಕರೆಯಲಾಗುತ್ತದೆ.
  • ಕ್ಯಾಸಿಯಸ್‌ ಪಾತ್ರದಲ್ಲಿ ಡೇವಿಡ್ ಹೆಮಿಂಗ್ಸ್‌ ನಟಿಸಿದ್ದಾನೆ: ಇವನು ಕೊಲೊಸ್ಸಿಯಮ್‌ನಲ್ಲಿ ಸ್ಪರ್ಧೆಯನ್ನು ಏರ್ಪಡಿಸುತ್ತಾನೆ.
  • ಮ್ಯಾಕ್ಸಿಮಸ್‌ನ ಪತ್ನಿಯಾಗಿ ಗಿಯಾನಿನ ಫೇಸಿಯೊ ನಟಿಸಿದ್ದಾರೆ.
  • ಮ್ಯಾಕ್ಸಿಮಸ್‌ನ ಮಗನಾಗಿ ಜಾರ್ಜಿಯೊ ಕ್ಯಾಂಟರಿನಿ ಅಭಿನಯಿಸಿದ್ದಾರೆ.

ನಿರ್ಮಾಣ

[ಬದಲಾಯಿಸಿ]

ಚಿತ್ರಕಥೆ

[ಬದಲಾಯಿಸಿ]

ಗ್ಲಾಡಿಯೇಟರ್ ಚಿತ್ರ ಡೇವಿಡ್ ಫ್ರಾಂಜೋನಿಯ ಮೂಲ ನಿರೂಪಣೆಯನ್ನು ಆಧರಿಸಿದ್ದು, ಚಿತ್ರದ ಎಲ್ಲಾ ಆರಂಭಿಕ ರೂಪುರೇಖೆಗಳನ್ನು ಸ್ವತಃ ಅವರೇ ಬರೆದಿದ್ದಾರೆ.[] ಸ್ಟೀವನ್ ಸ್ಪೈಲ್ಬರ್ಗ್‌ಅಮಿಸ್ಟೆಡ್ ‌‌ ಚಿತ್ರದಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಫ್ರಾಂಜೋನಿಯೊಂದಿಗೆ ಡ್ರೀಮ್‌ವರ್ಕ್ಸ್‌ ಬರಹಗಾರ ಮತ್ತು ಸಹ-ನಿರ್ದೇಶಕನಾಗಿ ಮೂರು-ಚಿತ್ರಗಳಿಗೆ ಕರಾರು ಮಾಡಿಕೊಂಡಿತು. ಇದು ಡ್ರೀಮ್‌ವರ್ಕ್ಸ್‌ನ ಪ್ರಸಿದ್ಧಿ ಹೆಚ್ಚಾಗಲೂ ಸಹಾಯಕವಾಯಿತು. ಫ್ರಾಂಜೋನಿ ಶಾಸ್ತ್ರೀಯ ವಿದ್ವಾಂಸನಲ್ಲ, ಆದರೆ ಡೇನಿಯಲ್ P. ಮ್ಯಾನಿಕ್ಸ್‌ನ 1958ರ ಕಾದಂಬರಿ ದೋಸ್ ಎಬೌಟ್ ಟು ಡೈ ಯಿಂದ ಸ್ಫೂರ್ತಿ ಪಡೆದವನು, ಹಾಗೂ ಆಗಸ್ತನ್ ಹಿಸ್ಟರಿ ಯನ್ನು ಓದಿದ ಬಳಿಕ ಕೊಮೋಡಸ್‌ನಲ್ಲಿ ಐತಿಹಾಸಿಕವಾಗಿ ತನ್ನ ಗಮನ ಕೇಂದ್ರೀಕರಿಸಲು ನಿರ್ಧರಿಸಿದನು. 1998ರ ಎಪ್ರಿಲ್ 4ರಲ್ಲಿ ಬರೆದ ಮೊದಲ ರೂಪುರೇಖೆಯಲ್ಲಿ ಫ್ರಾಂಜೋನಿಯು ತನ್ನ ಕಥಾನಕದ ಮುಖ್ಯ ಪಾತ್ರವನ್ನು ನಾರ್ಸಿಸಸ್ ಎಂದು ಹೆಸರಿಸಿದನು, ಆದರೆ ಅದು ಚಕ್ರವರ್ತಿ ಕೊಮೋಡಸ್‌ನನ್ನು ಕತ್ತು ಹಿಸುಕಿ ಕೊಂದ ಕುಸ್ತಿಪಟುವಿನ ಹೆಸರಿನ ಮೊದಲ ಹೆಸರಾಗಿತ್ತು. ಆಲಿಯಸ್ ಲಾಂಪ್ರಿಡಿಯಸ್‌ ಬರೆದ ಕೊಮೋಡಸ್‌ನ ಆತ್ಮಚರಿತ್ರೆ ಆಗಸ್ತನ್ ಹಿಸ್ಟರಿ ಯಲ್ಲಿ ಆ ವ್ಯಕ್ತಿಯ ಹೆಸರಿರಲಿಲ್ಲ. ಹೆರೋಡಿಯನ್ ಮತ್ತು ಕ್ಯಾಸಿಯಸ್ ಡಿಯೊ ಮಾತ್ರ ನಾರ್ಸಿಸಸ್ ಎಂಬ ಹೆಸರನ್ನು ನೀಡಿದರು, ಹೀಗಾಗಿ ಮೊದಲ ಚಿತ್ರದ ಆರಂಭಿಕ ರೂಪುರೇಖೆಯನ್ನು ಅಭಿವೃದ್ಧಿಪಡಿಸಲು ಪುರಾತನ ಮೂಲಗಳ ವೈವಿಧ್ಯತೆಯನ್ನು ಬಳಸಿಕೊಳ್ಳಲಾಯಿತು.[]

Several dead men and various scattered weapons are located in a large arena. Near the center of the image is a man wearing armor standing in the middle of an arena looking up at a large crowd. The man has his right foot on the throat of an injured man who is reaching towards the crowd. Members of the crowd are indicating a "thumbs down" gesture. The arena is adorned with marble, columns, flags, and statues.
ಜೀನ್-ಲಿಯೋನ್ ಗೆರೋಮೆಯ ಪೋಲಿಸ್ ವರ್ಸೊ ("ಥಂಬ್ಸ್ ಡೌನ್") - ಪ್ರಾಜೆಕ್ಟ್ ನಿರ್ವಹಿಸಲು ರಿಡ್ಲೆ ಸ್ಕಾಟ್‌ಗೆ ಪ್ರೇರಣೆ ನೀಡಿದ 19ನೇ ಶತಮಾನದ ಚಿತ್ರಕಲೆ.

ಈ ಮಧ್ಯೆ, ವಾಲ್ಟರ್ F. ಪಾರ್ಕಸ್ ಮತ್ತು ಡೌಗ್ಲಸ್ ವಿಕ್ ಮೊದಲಾದ ನಿರ್ಮಾಪಕರು ರಿಡ್ಲೆ ಸ್ಕಾಟ್‌ನನ್ನು ಸಂಧಿಸಿದರು. ಅವರು ಸ್ಕಾಟ್‌ಗೆ ಪೋಲಿಸ್ ವರ್ಸೊ ("ಥಂಬ್ಸ್ ಡೌನ್" ) ಎಂಬ ಹೆಸರಿನ ಜೀನ್-ಲಿಯೋನ್ ಗೆರೋಮಿಯ 1872ರ ಸಂದರ್ಭದ ವರ್ಣಚಿತ್ರದ ಪ್ರತಿಯೊಂದನ್ನು ತೋರಿಸಿದರು. ಹೀಗೆ ಸ್ಕಾಟ್ ಪುರಾತನ ರೋಮ್‌ ಕುರಿತು ಚಿತ್ರ ಮಾಡುವತ್ತ ಆಕರ್ಷಿತನಾದನು. ಫ್ರಾಂಜೋನಿಯ ಸಂಭಾಷಣಾ ಶೈಲಿಯು ತೀರ "ರೇಗಿಸುವಂಥದ್ದು" ಎಂದು ಅಭಿಪ್ರಾಯಪಟ್ಟ ಸ್ಕಾಟ್, ತನ್ನ ಇಚ್ಛೆಯಂತೆ ಕಥಾವಸ್ತುವನ್ನು ಮತ್ತೆ ಬರೆಯಲು ಜಾನ್ ಲೋಗನ್‌ನನ್ನು ನೇಮಿಸಿಕೊಂಡನು. ಲೋಗನ್ ಮೊದಲ ದೃಶ್ಯದ ಹೆಚ್ಚಿನ ಭಾಗವನ್ನು ಪುನಹ ಬರೆದನು, ಹಾಗೂ ಪಾತ್ರಗಳ ಕುರಿತ ಆಸಕ್ತಿ ಹೆಚ್ಚಿಸಲು ಮ್ಯಾಕ್ಸಿಮಸ್‌ನ ಕುಟುಂಬವನ್ನು ಸಾಯಿಸುವ ನಿರ್ಧಾರವನ್ನು ಮಾಡಿದನು.[]

ಚಿತ್ರೀಕರಣಕ್ಕೆ ಹೋಗುವ ಎರಡು ವಾರಗಳ ಮುನ್ನ ನಟರು ಕಥಾವಸ್ತುವಿನ ಸಮಸ್ಯೆಗಳ ಬಗ್ಗೆ ದೂರಿದರು. ಮ್ಯಾಕ್ಸಿಮಸ್‌ ಪಾತ್ರದ ಸೂಕ್ಷ್ಮತೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ವಿಲಿಯಮ್ ನಿಕೋಲ್ಸನ್‌ನನ್ನು ಶೆಪ್ಪರ್ಟನ್ ಸ್ಟುಡಿಯೊಗೆ ಕರೆತರಲಾಯಿತು. "ಒಬ್ಬನನ್ನು ಸಾಯಿಸಲು ಬಯಸುವವನ ಚಿತ್ರವನ್ನು ನೋಡಲು ತಾನು ಇಚ್ಛಿಸುವುದಿಲ್ಲ" ಎಂದ ಅವರು ಚಿತ್ರದಲ್ಲಿ ಜ್ಯೂಬಾನ ಸ್ನೇಹಕ್ಕೆ ಮಹತ್ವ ನೀಡಿ, ಪರಲೋಕ ಜೀವನ ಕುರಿತ ಎಳೆಯನ್ನು ಅಭಿವೃದ್ಧಿಪಡಿಸಿದರು.[] ಲೋಗನ್ ಮತ್ತು ನಿಕೋಲ್ಸನ್ ಮತ್ತೆ ಬರೆದುದನ್ನು ಪರಿಷ್ಕರಿಸುವುದಕ್ಕಾಗಿ ನಂತರ ಡೇವಿಡ್ ಫ್ರಾಂಜೋನಿಯನ್ನು ಕರೆತರಲಾಯಿತು. ಈ ಕಾರ್ಯಕ್ಕಾಗಿ ನಿರ್ಮಾಪಕರ ಪ್ರಶಂಸೆಯನ್ನೂ ಪಡೆದರು. 0 ನಿಕೋಲ್ಸನ್‌ನನ್ನು ಕರೆಯಿಸಿದ್ದಾಗ, ಆತ ಫ್ರಾಂಜೋನಿಯ ಮೂಲ ಕಥಾವಸ್ತು ಮತ್ತು ಕೆಲವು ದೃಶ್ಯಗಳನ್ನು ಓದಲು ಪ್ರಾರಂಭಿಸಿದ್ದನು. ಫ್ರಾಂಜೋನಿಯು ಚಿತ್ರಕಥೆಯನ್ನು ರಚನಾತ್ಮಕವಾಗಿ ಪುನಃ ಬರೆಯಲು ಸಹಾಯ ಮಾಡಿದನು, ಅಲ್ಲದೆ ನಿರ್ಮಾಪಕರ ಸಮ್ಮುಖದಲ್ಲಿ ತನ್ನ ಮೂಲ ಕಥಾವಸ್ತುವನ್ನು ಸಮರ್ಥಿಸಿಕೊಂಡನು ಹಾಗೂ ಮೂಲಕ್ಕೆ ಸರಿಯಾಗಿ ಚಿತ್ರಿಸುವಂತೆ ವಾದಿಸಿದನು.[] ಬಳಿಕ ಫ್ರಾಂಜೋನಿ ಉತ್ತಮ ಚಿತ್ರಕ್ಕಾಗಿ ಡೌಗ್ಲಾಸ್ ವಿಕ್ ಮತ್ತು ಬ್ರಾಂಕೊ ಲಸ್ಟಿಗ್ ನಿರ್ಮಾಪಕರೊಂದಿಗೆ ಅಕಾಡೆಮಿ ಪ್ರಶಸ್ತಿಯನ್ನು ಹಂಚಿಕೊಂಡನು.[]

ಆದರೆ ಈ ನಡುವೆ ಕಥಾವಸ್ತು ಕುರಿತು ರಸ್ಸೆಲ್ ಕ್ರೋವ್‌ ನೀಡಿದ ಸಲಹೆಗಳಿಂದಾಗಿ ಚಿತ್ರಕಥೆಯನ್ನು ಪುನಃ ಪರಿಶೀಲಿಸಬೇಕಾಗಿ ಬಂತು ಮತ್ತು ಪದೇ ಪದೇ ಮರು ಬರೆಯಬೇಕಾಗಿ ಬಂತು. ಕಥಾವಸ್ತುವಿನ ಪ್ರತಿಯೊಂದು ಅಂಶವನ್ನೂ ಕ್ರೋವ್‌ ಪ್ರಶ್ನಿಸಿದನು, ತಕ್ಕ ಪ್ರತಿಕ್ರಿಯೆಗಳು ಬಾರದಿದ್ದಾಗ ಆದರೆ ಉತ್ತರಗಳನ್ನು ಪಡೆಯದಿದ್ದಾಗ ಅವನು ಅದರಿಂದ ಹೊರಬಂದನು. ಡ್ರೀಮ್‌ವರ್ಕ್ಸ್‌ ನಿರ್ವಹಣಾಧಿಕಾರಿ ಪ್ರಕಾರ, "(ರಸ್ಸೆಲ್ ಕ್ರೋವ್‌) ಸ್ಥಳದಲ್ಲೇ ಸಂಪೂರ್ಣ ಕಥಾವಸ್ತುವನ್ನು ಪುನಃ ಬರೆಯಲು ಪ್ರಯತ್ನಿಸಿದನು. 'ಈ ಜೀವನದಲ್ಲಿ ಅಥವಾ ಮುಂದಿನ ಜೀವನದಲ್ಲಿ ನಾನು ನನ್ನ ಸೇಡನ್ನು ಹೊಂದಿರುತ್ತೇನೆ' ಎಂಬ ಟ್ರೇಲರ್‌ನಲ್ಲಿರುವ ವಾಕ್ಯದ ಸಾಲಿನ ಬಗ್ಗೆ ನಿನಗೆ ತಿಳಿದಿದೆಯೇ? ಆರಂಭದಲ್ಲಿ ಅವನು ಇದನ್ನು ಹೇಳಲು ಖಂಡಿತವಾಗಿ ನಿರಾಕರಿಸಿದನು."[] ಕ್ರೋವ್ ತನಗೆ ಹೇಳಿದ್ದನ್ನು, ಮೂರನೇ ಮತ್ತು ಅಂತಿಮ ಚಿತ್ರಕಥೆಗಾರ ನಿಕೋಲ್ಸನ್‌ ಹೀಗೆ ತಿಳಿಸುತ್ತಾನೆ - "ನಿನ್ನ ವಾಕ್ಯದ ಸಾಲು ನಿರುಪಯುಕ್ತವಾದುದು, ಆದರೆ ಪ್ರಪಂಚದಲ್ಲೇ ನಾನು ಶ್ರೇಷ್ಠ ನಟನಾದುದರಿಂದ ನಿರುಪಯುಕ್ತ ವಾಕ್ಯವನ್ನೂ ಉತ್ತಮವಾಗಿಸಬಲ್ಲೆ" ನಿಕೋಲ್ಸನ್ ಹೀಗೆಂದು ಮುಂದುವರಿಸುತ್ತಾನೆ - "...ಬಹುಶಃ ನನ್ನ ಸಾಲುಗಳು ನಿರುಪಯುಕ್ತವಾಗಿರಬಹುದು, ಆದ್ದರಿಂದಲೇ ಅವನು ಹೀಗೆ ನೇರವಾಗಿ ಹೇಳುತ್ತಿದ್ದಾನೆ."[]

ಚಿತ್ರೀಕರಣ

[ಬದಲಾಯಿಸಿ]
Several men in white robes are facing away from the image, at the top of large steps. A man is at the center of the image being handed flowers by a girl. In the background are rows of thousands of soldiers and members of a large crowd. In the distance, the Colosseum can be seen along with other buildings in Rome. Dark clouds are visible in the sky.
ರೋಮ್‌ನಲ್ಲಿನ CGI ಚಿತ್ರೀಕರಣ

ಗ್ಲಾಡಿಯೇಟರ್ ಚಿತ್ರದ ಚಿತ್ರೀಕರಣವನ್ನು ಮೂರು ಪ್ರಮುಖ ಸ್ಥಳಗಳಲ್ಲಿ 1999ರ ಜನವರಿಯಿಂದ ಮೇವರೆಗೆ ನಡೆಸಲಾಯಿತು. ಜರ್ಮೇನಿಯಾದ ಅರಣ್ಯದಲ್ಲಿನ ಆರಂಭದ ಯುದ್ಧದ ದೃಶ್ಯಗಳನ್ನು ಇಂಗ್ಲೆಂಡ್‌ನ ಸುರ್ರೆಯ ಫಾರ್ನಮ್‌ ಸಮೀಪದ ಬರ್ನೆ ಕಾಡಿನಲ್ಲಿ ಮೂರು ವಾರಗಳಲ್ಲಿ ಚಿತ್ರೀಕರಿಸಲಾಯಿತು. ಸೇವಿಂಗ್ ಪ್ರೈವೇಟ್ ರ್ಯಾನ್ (1998)ಚಿತ್ರದಲ್ಲಿ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲು ಬಳಸಿದ ತಂತ್ರಜ್ಞಾನಗಳ ಮಾದರಿಯಲ್ಲೇ, ಹಲವಾರು ಕ್ಯಾಮೆರಾಗಳನ್ನು ಬಳಸಿಕೊಂಡು ಸ್ಕಾಟ್ ಮತ್ತು ಛಾಯಾಗ್ರಾಹಕ ಜಾನ್ ಮಾಥೈಸನ್ ವಿವಿಧ ಬಿಡಿ ಚಿತ್ರಗಳನ್ನು ಚಿತ್ರೀಕರಿಸಿದರು.[] ಆ ನಂತರದ ಮುಂದಿನ ಮೂರು ವಾರಗಳಲ್ಲಿ ಗುಲಾಮಗಿರಿ, ಮರಳುಗಾಡಿನ ಪ್ರಯಾಣ ಮತ್ತು ಕತ್ತಿಮಲ್ಲರಿಗೆ ತರಬೇತಿ ನೀಡುವ ದೃಶ್ಯಗಳನ್ನು ಅಟ್ಲಾಸ್ ಪರ್ವತದ ದಕ್ಷಿಣದಲ್ಲಿರುವ ಮೊರೊಕೊಕ್ವಾರ್ಜನೇಟ್‌ನಲ್ಲಿ ಚಿತ್ರೀಕರಿಸಲಾಯಿತು. ಅಂತಿಮವಾಗಿ ಪುರಾತನ ರೋಮ್‌ನ ದೃಶ್ಯಗಳನ್ನು ಮಾಲ್ಟರಿಕಸೋಲಿಯ ಕೋಟೆಯಲ್ಲಿ ಹತ್ತೊಂಬತ್ತು ವಾರಗಳ ಅವಧಿಯಲ್ಲಿ ಚಿತ್ರೀಕರಿಸಲಾಯಿತು.[೧೦][೧೧]

ರೋಮ್‌ನ ಕೊಲೊಸ್ಸಿಯಮ್‌ನ ಸುಮಾರು ಮೂರನೇ ಒಂದು ಭಾಗದ ಪ್ರತಿಕೃತಿಯನ್ನು ಮಾಲ್ಟದಲ್ಲಿ ಪ್ಲಾಸ್ಟರ್ ಮತ್ತು ಪ್ಲೈವುಡ್‌ನಿಂದ 52 ಅಡಿ (15.8 ಮೀಟರ್‌ಗಳು) ಎತ್ತರದಲ್ಲಿ ನಿರ್ಮಿಸಲಾಯಿತು (ಇತರ ಮೂರನೇ ಎರಡು ಭಾಗವನ್ನು ಮತ್ತು ಉಳಿದ ಎತ್ತರವನ್ನು ಡಿಜಿಟಲ್ ತಂತ್ರಜ್ಞಾನದ ಬಳಸಿ ಸೇರಿಸಲಾಯಿತು). ಈ ಪ್ರತಿಕೃತಿಯನ್ನು ರಚಿಸಲು ಅನೇಕ ತಿಂಗಳುಗಳು ಬೇಕಾದವು ಮತ್ತು $1 ದಶಲಕ್ಷದಷ್ಟು ಮೌಲ್ಯವನ್ನು ವಿನಿಯೋಗಿಸಲಾಯಿತು.[೧೨] ಚಿತ್ರೀಕರಣದ ಇತರ ಅವಶ್ಯಕತೆಗಳಿಗಾಗಿ ಈ ಸಂಕೀರ್ಣದ ಹಿಂದೆ ಪುರಾತನ ರೋಮ್‌ನ ವೈಭವವನ್ನು ಹೇಳುವ ಬೀದಿಗಳು, ಪೀಠೋಪಕರಣಗಳು, ಕಂಬಸಾಲುಗಳು, ಮಹಾದ್ವಾರಗಳು, ಪ್ರತಿಮೆಗಳು, ಮತ್ತು ಮಾರುಕಟ್ಟೆ ಸ್ಥಳಗಳ ಸೆಟ್ ಹಾಕಲಾಯಿತು. ಗ್ರಾಮಗಳಲ್ಲಿರುವ ಉಡುಪು ಮಳಿಗೆಗಳು ಈ ಸಂಕೀರ್ಣಕ್ಕೆ ಅವಶ್ಯಕ ಪೋಷಾಕುಗಳನ್ನು ಪೂರೈಸುತ್ತಿದ್ದವು. ಸಂಕೀರ್ಣದೊಳಗೆ ಪೋಷಾಕು ಬದಲಾವಣೆ ಕೊಠಡಿ, ಸಂಗ್ರಹ, ಯುದ್ಧ ಕವಚ-ಶಸ್ತಾಸ್ತ್ರಗಳ ಕೋಣೆ ಮತ್ತು ಇತರ ಸೌಲಭ್ಯಗಳಿದ್ದವು.[೧೦]

ಕೊಲೊಸ್ಸಿಯಮ್‌ನ ಉಳಿದ ಭಾಗವನ್ನು ಜೀವಂತ ಚಟುವಟಿಕೆಗಳನ್ನು ಹೋಲುವ ವಿನ್ಯಾಸಗಳು ಮತ್ತು ನೀಲನಕ್ಷೆಗಳ ಅನುರೂಪಗಳನ್ನು ಬಳಸಿ CG ಪರಿಣಾಮಗಳನ್ನು ಸೃಷ್ಟಿಸಲಾಯಿತು. ಬೆಂಕಿಯ ಕೆನ್ನಾಲಿಗೆಯ ಮತ್ತು ತೀರ ಘೋರ ದೃಶ್ಯಗಳನ್ನು ಬೆಳಕಿನೊಂದಿಗೆ ಹೊಂದಿಸಿಕೊಳ್ಳುವುದಕ್ಕಾಗಿ ಅದಕ್ಕೆ ಮೂರು ಪದರಗಳನ್ನೂ ಅಳವಡಿಸಲಾಯಿತು.[೧೩]

ನಿರ್ಮಾಣದ-ನಂತರ

[ಬದಲಾಯಿಸಿ]

ಚಿತ್ರೀಕರಣದ ನಂತರ ಸೇರಿಸಿದ ಹೆಚ್ಚಿನ CGI ಪರಿಣಾಮಗಳಿಗೆ ಬ್ರಿಟಿಷ್ ನಿರ್ಮಾಣ ಕಂಪೆನಿ ದಿ ಮಿಲ್‌ ಜವಾಬ್ದಾರಿಯಾಗಿತ್ತು. ಬ್ಲೂಸ್ಕ್ರೀನ್‌ನಲ್ಲಿ ನಿಜವಾದ ಹುಲಿಗಳಂತೆ ಚಿತ್ರೀಕರಿಸಿದುದನ್ನು ಕಾದಾಡುವ ದೃಶ್ಯಗಳೊಂದಿಗೆ ಸಂಯೋಜಿಸುವ ತಂತ್ರಗಾರಿಕೆಯನ್ನು ಈ ಕಂಪೆನಿ ಬಳಸಿತು. ಫಿರಂಗಿಯಂತೆ ಹೊಗೆ ಬಿಡುವ ಹಾಗೂ ಆರಂಭದ ದೃಶ್ಯದಲ್ಲಿ ಉರಿಯುತ್ತಿರುವ ಬಾಣಗಳು ಆಗಸದಲ್ಲಿ ಪರಸ್ಪರ ಸಂಧಿಸುವ ದೃಶ್ಯಗಳನ್ನು ಗ್ರಾಫಿಕ್ಸ್ ನೆರವಿನಿಂದ ಅದು ಸೃಷ್ಟಿಸಿತು, ಮತ್ತು ಬಾಣಗಳು ಹಾರುವ ಪಥವನ್ನು ಚಿತ್ರೀಕರಿಸಿದ್ದಕ್ಕಿಂತಲೂ ಹೆಚ್ಚು ದೂರಕ್ಕೆ ವಿಸ್ತರಿಸುವ ಕಾರ್ಯವನ್ನೂ ಮಾಡಿತು. ಯುದ್ಧ ಸನ್ನಿವೇಶದಲ್ಲಿ 35,000 ಜನರಿರುವುದು ನಿಜವೆಂಬಂತೆ ಕಾಣಿಸುವುದಕ್ಕಾಗಿ ಮತ್ತು ಪ್ರತಿ ಕಾದಾಟದ ಗುಂಪನ್ನು CG (ಕಂಪ್ಯೂಟರ್ ಗ್ರಾಫಿಕ್ಸ್)ಮೂಲಕ ಸೃಷ್ಟಿಸುವುದಕ್ಕಾಗಿ 2,000 ನಟರನ್ನು ಕಂಪೆನಿ ಬಳಸಿಕೊಂಡಿತು.[೧೪] ದಿ ಮಿಲ್ ಸಂಸ್ಥೆ ನಟರನ್ನು ವಿವಿಧ ಭಂಗಿಗಳಲ್ಲಿ ಚಿತ್ರೀಕರಿಸಿ, ನಂತರ ಅವರನ್ನು ಚಿತ್ರದ ಸನ್ನಿವೇಶಗಳಿಗೆ ಹೊಂದಿಸಿ, ಚಲಿಸುವುದನ್ನು ಸೆರೆಹಿಡಿಯುವ ಪರಿಕರಗಳ ಸಹಾಯದಿಂದ 3D ಸಂಯೋಜನೆ ಮಾಡಿ ವ್ಯಕ್ತಿಗಳಾಗಿ ರೂಪಿಸಿ ಅದ್ಭುತ ಚಮತ್ಕಾರವನ್ನು ಸಾಧಿಸಿತು.[೧೩]

ಮಾಲ್ಟದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಆಲಿವರ್ ರೀಡ್ ಪಾಲ್ಗೊಂಡಿರುವ ಎಲ್ಲಾ ದೃಶ್ಯಗಳು ಚಿತ್ರೀಕರಣಗೊಳ್ಳುವ ಮೊದಲೇ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದರಿಂದಾಗಿ ನಿರ್ಮಾಣ ನಂತರದ ಕಾರ್ಯಗಳಿಗೆ ಹಿನ್ನಡೆಯಾಯಿತು. ಆತ ನಿರ್ವಹಿಸಿದ ಪ್ರೋಕ್ಸಿಮೊ[೧೩] ಪಾತ್ರದ ಉಳಿದ ದೃಶ್ಯಗಳಿಗಾಗಿ ದಿ ಮಿಲ್ ಡಿಜಿಟಲ್ ವ್ಯಕ್ತಿಯ ಪ್ರತಿರೂಪವನ್ನು ಸೃಷ್ಟಿಸಿತು. ಜೀವಂತ ವ್ಯಕ್ತಿಯ-ಪ್ರತಿರೂಪವನ್ನು ನೆರಳಿನಲ್ಲಿ ಛಾಯಾಚಿತ್ರೀಕರಿಸಿ, ರೀಡ್‌ನ ಮುಖದ 3D CGI ಮೊಗವಾಡವನ್ನು ರೂಪಿಸುವ ಮೂಲಕ ಉಳಿದ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಈ ಎರಡು ನಿಮಿಷದ ಹೆಚ್ಚುವರಿ ಚಿತ್ರೀಕರಣಕ್ಕೆ ಖರ್ಚಾಗಿದ್ದು $3.2 ದಶಲಕ್ಷ.[೧೫] ಚಿತ್ರವನ್ನು ರೀಡ್‌ನ ನೆನಪಿಗಾಗಿ ಸಮರ್ಪಿಸಲಾಗಿದೆ.[೧೬]

ಐತಿಹಾಸಿಕ ನಿಖರತೆ

[ಬದಲಾಯಿಸಿ]

ಗ್ಲಾಡಿಯೇಟರ್ ಚಿತ್ರ ಸ್ವಲ್ಪ ಮಾತ್ರ ಐತಿಹಾಸಿಕ ಘಟನೆಗಳನ್ನು ಆಧರಿಸಿದೆ. ಚಿತ್ರ ನಿರ್ಮಾಪಕರು ಪುರಾತನ ರೋಮನ್ ಚಕ್ರಾಧಿಪತ್ಯದ ಬಗ್ಗೆ ತಿಳಿದಿರುವ ಇತಿಹಾಸ ತಜ್ಞರನ್ನು ಸಂಧಿಸಿದರೂ, ಚಿತ್ರಕಥೆಗಾರರಿಂದಾಗಿ ಚಿತ್ರಕ್ಕೆ ಐತಿಹಾಸಿಕ ಸಾಂಗತ್ಯ ಇಲ್ಲದಂತಾಯಿತು.[೧೭] ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಿದ್ದರಿಂದ ಓರ್ವ ಐತಿಹಾಸಿಕ ಸಲಹೆಗಾರ ಹೊರಟು ಹೋದರೆ, ಇನ್ನೊಬ್ಬರು ಚಿತ್ರತಂಡದ ಪಟ್ಟಿಯಲ್ಲಿ ತಮ್ಮನ್ನು ಹೆಸರಿಸದಂತೆ ಕೇಳಿಕೊಂಡರು. ಐತಿಹಾಸಿಕ ನಿಖರತೆಯಿಂದಾಗಿ ಗ್ಲಾಡಿಯೇಟರ್‌ ಮೇಲೆ ಆಸಕ್ತಿ ಕಡಿಮೆಯಾಗದು ಅಥವಾ ಕುತೂಹಲವೂ ಕ್ಷೀಣಿಸದು ಎಂದ ಕನೆಕ್ಟಿಕಟ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಅಲ್ಲೆನ್ ವಾರ್ಡ್ ಮುಂದುವರಿದು ಹೀಗೆ ಹೇಳಿದ್ದಾರೆ: "ಕ್ರಿಯಾಶೀಲ ಕಲಾವಿದರಿಗೆ ಸ್ವಲ್ಪ ಮಟ್ಟಿಗೆ ಕಾವ್ಯಾತ್ಮಕವಾಗಿ ರಚಿಸುವ ಸ್ವಾತಂತ್ರ್ಯವಿರಬೇಕು, ಆದರೆ ಐತಿಹಾಸಿಕ ಕಾಲ್ಪನಿಕ ಘಟನೆಗಳನ್ನು ಸಂಪೂರ್ಣವಾಗಿ ಕಡೆಗಣಿಸುವ ಅವಕಾಶ ನೀಡಬಾರದು".[೧೮]

ಮ್ಯಾಕ್ಸಿಮಸ್‌ಗೆ ಐತಿಹಾಸಿಕ ವ್ಯಕ್ತಿಗಳಾದ ನಾರ್ಸಿಸಸ್ (ಕಥಾವಸ್ತುವಿನ ಮೂಲ ಪ್ರತಿಯಲ್ಲಿನ ಪಾತ್ರದ ಹೆಸರು ಹಾಗೂ ಕೊಮೋಡಸ್‍‌ನನ್ನು ಸಾಯಿಸಿದ ನಿಜವಾದ ಕೊಲೆಗಾರ),[೧೯] ಸ್ಪರ್ಟಾಕಸ್ (ಪ್ರಮುಖ ಗುಲಾಮ ದಂಗೆ ಎದ್ದವನು), ಸಿಂಸಿನಾಟಸ್ (ರೈತನಾಗಿದ್ದವನು ಸರ್ವಾಧಿಕಾರಿಯಾಗಿ ರೋಮ್‌ನ್ನು ದಾಳಿಯಿಂದ ಉಳಿಸಿದನು, ನಂತರ ಅವನ 6-ತಿಂಗಳ ಅಧಿಕಾರವನ್ನು ಹದಿನೈದು ದಿನಗಳಲ್ಲೇ ತ್ಯಜಿಸಿದನು),[೨೦][೨೧][೨೨] ಮತ್ತು ಮಾರ್ಕಸ್ ನೋನಿಯಸ್ ಮ್ಯಾಕ್ರಿನಸ್ (ನಂಬಿಕಸ್ಥ ಜನರಲ್, AD 154ರ ಪ್ರತಿನಿಧಿ, ಹಾಗೂ ಮಾರ್ಕಸ್ ಆರೆಲಿಯಸ್‌ನ ಸ್ನೇಹಿತ) ಮೊದಲಾದವರೊಂದಿಗೆ ಹೋಲಿಕೆಯಿದ್ದರೂ ಅವನ ಪಾತ್ರ ಕಾಲ್ಪನಿಕವಾದುದು.[೨೩][೨೪] ಕೊಮೋಡಸ್ ಕೊಲೊಸಿಯಮ್‌ನಲ್ಲಿನ ಸ್ಪರ್ಧೆಯಲ್ಲಿ ಭಾಗವಹಿಸಿದರೂ, ಐತಿಹಾಸಿಕ ಸತ್ಯ ಸಂಗತಿಯೆಂದರೆ ಕುಸ್ತಿಪಟು ನಾರ್ಸಿಸಸ್‌ ಸ್ನಾನದ ಸಮಯದಲ್ಲಿ ಕೊಮೋಡಸ್‌ನ ಕತ್ತು ಹಿಸುಕುತ್ತಾನೆ. ಚಿತ್ರದಲ್ಲಿರುವಂತೆ ಆತ ಹೋರಾಟ ಕಣದಲ್ಲಿ ಸಾಯಿಸಲ್ಪಡುವುದಿಲ್ಲ.

ಪ್ರಭಾವಗಳು

[ಬದಲಾಯಿಸಿ]

ಚಿತ್ರದ ಕಥಾವಸ್ತು 'ಸೋರ್ಡ್ ಆಂಡ್ ಸ್ಯಾಂಡಲ್' ಪ್ರಕಾರದ 1960ರ ಎರಡು ಹಾಲಿವುಡ್ ಚಿತ್ರಗಳಿಂದ ಪ್ರಭಾವಕ್ಕೊಳಗಾಗಿದೆ. ಆ ಎರಡು ಚಿತ್ರಗಳೆಂದರೆ - ದ ಫಾಲ್ ಆಫ್ ದ ರೋಮನ್ ಎಂಪೈರ್ ಮತ್ತು ಸ್ಪರ್ಟಾಕಸ್. [೨೫] ದ ಫಾಲ್ ಆಫ್ ದ ರೋಮನ್ ಎಂಪೈರ್ ಮಾರ್ಕಸ್ ಆರೆಲಿಯಸ್‌ನ ಉದ್ಧೇಶಿತ ಉತ್ತರಾಧಿಕಾರಿ ಲಿವಿಯಸ್‌ನ ಕಥೆಯನ್ನು ಹೇಳುತ್ತದೆ. ಲಿವಿಯಸ್‌ ಗ್ಲಾಡಿಯೇಟರ್ ‌ನಲ್ಲಿನ ಮ್ಯಾಕ್ಸಿಮಸ್‌. ಲಿವಿಯಸ್ ಲುಸಿಲ್ಲಾಳನ್ನು ಪ್ರೀತಿಸಿ ಮದುವೆಯಾಗಲು ಇಚ್ಚಿಸುತ್ತಾನೆ, ಆದರೆ ಮ್ಯಾಕ್ಸಿಮಸ್ ಆಕೆಯನ್ನು ಮುಂಚೆಯೇ ಪ್ರೀತಿಸಿ ಅಧಿಕೃತವಾಗಿ ಮದುವೆಯಾಗಿದ್ದ. ಎರಡೂ ಚಿತ್ರಗಳು ಮಾರ್ಕಸ್ ಆರೆಲಿಯಸ್‌‌ನ ಮರಣವನ್ನು ಒಂದು ಹತ್ಯೆಯೆಂಬಂತೆ ಚಿತ್ರಿಸುತ್ತವೆ. ದಿ ಫಾಲ್ ಆಫ್ ದಿ ರೋಮನ್ ಎಂಪೈರ್ ‌ನಲ್ಲಿ, ಕೊಮೋಡಸ್‌ನಿಂದ ಹೊರತಾದ ಸಂಚುಗಾರರ ಗುಂಪೊಂದು ಕೊಮೋಡಸ್‌ನ ಆಳ್ವಿಕೆಯಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸಿ ಮಾರ್ಕಸ್ ಆರೆಲಿಯಸ್‌ಗೆ ವಿಷ ನೀಡಲು ಯೋಜಿಸುತ್ತಾರೆ; ಆದರೆ ಗ್ಲಾಡಿಯೇಟರ್ ‌ನಲ್ಲಿ ಕೊಮೋಡಸ್ ಅವನೇ ಸ್ವತಃ ತಂದೆಯನ್ನು ಉಸಿರುಕಟ್ಟಿಸಿ ಸಾಯಿಸುತ್ತಾನೆ. ದಿ ಫಾಲ್ ಆಫ್ ದಿ ರೋಮನ್ ಎಂಪೈರ್ ‌ನಲ್ಲಿ, ಕೊಮೋಡಸ್ ಅವನ ತಂದೆಯ ಆಲೋಚನೆಗೆ ತದ್ವಿರುದ್ಧವಾಗಿ ಚಕ್ರಾಧಿಪತ್ಯವನ್ನು ಗಮನದಲ್ಲಿಟ್ಟುಕೊಂಡು ಲಿವಿಯಸ್‌ನನ್ನು ಜಯಿಸಲು ವಿಫಲ ಯತ್ನ ನಡೆಸುತ್ತಾನೆ, ಹಾಗಿದ್ದರೂ ಅವನನ್ನು ಸೇವೆಯಲ್ಲಿರಿಸಿಕೊಳ್ಳುತ್ತಾನೆ; ಆದರೆ ಗ್ಲಾಡಿಯೇಟರ್ ‌ನಲ್ಲಿ ಮ್ಯಾಕ್ಸಿಮಸ್‌ನ ಸ್ವಾಮಿನಿಷ್ಠೆಯನ್ನು ಪಡೆದುಕೊಳ್ಳುವಲ್ಲಿ ಕೊಮೋಡಸ್ ವಿಫಲನಾಗುತ್ತಾನೆ. ಮ್ಯಾಕ್ಸಿಮಸ್‌ನ ಪತ್ನಿ ಮತ್ತು ಮಗನಿಗೆ ಮರಣದಂಡನೆಯನ್ನು ನೀಡಿ ಅವನನ್ನೂ ಗಲ್ಲಿಗೇರಿಸುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗುವುದಿಲ್ಲ. ದಿ ಫಾಲ್ ಆಫ್ ದಿ ರೋಮನ್ ಎಂಪೈರ್ ‌ನಲ್ಲಿ ಲಿವಿಯಸ್ ಮತ್ತು ಗ್ಲಾಡಿಯೇಟರ್ ‌ನಲ್ಲಿ ಮ್ಯಾಕ್ಸಿಮಸ್ ದ್ವಂದ್ವಯುದ್ಧದಲ್ಲಿ ಕೊಮೋಡಸ್‌ನನ್ನು ಸಾಯಿಸುತ್ತಾರೆ: ಲುಸಿಲ್ಲಾಳನ್ನು ಉಳಿಸುವುದಕ್ಕಾಗಿ ಲೇವಿಯಸ್ ಹಾಗೂ ಮಾರ್ಕಸ್ ಆರೆಲಿಯಸ್‌ನನ್ನು ಕೊಂದ ಸೇಡಿಗಾಗಿ ಮ್ಯಾಕ್ಸಿಮಸ್ ಕೊಮೋಡಸ್‌ನ ಹತ್ಯೆಗೈಯುತ್ತಾರೆ, ಇಬ್ಬರೂ ರೋಮ್‌ಗೆ ಒಳ್ಳೆಯದು ಮಾಡುವುದಕ್ಕಾಗಿಯೇ ಈ ಕೃತ್ಯವನ್ನು ಮಾಡುತ್ತಾರೆ.

ಸ್ಪರ್ಟಾಕಸ್ ಚಿತ್ರ ಕತ್ತಿಮಲ್ಲ ಯುದ್ಧದ ವಿಶಿಷ್ಟ ಲಕ್ಷಣವನ್ನು ನೀಡುತ್ತದೆ, ಅಲ್ಲದೆ ಸೆನೆಟರ್ ಗ್ರಾಚುಸ್‌ನ ಪಾತ್ರದ ಬಗ್ಗೆಯೂ ವಿವರಿಸುತ್ತದೆ. ಈ ಸೆನೆಟರ್ ಪಾತ್ರವು ಕಾಲ್ಪನಿಕವಾದುದು (2ನೇ ಶತಮಾನ BCಯಲ್ಲಿನ ಕ್ರಾಂತಿಕಾರಕ ಜನನಾಯಕ ಜೋಡಿಯ ಹೆಸರಿಗೆ ಸಂಬಂಧಿಸಿರುವುದು). ಇವನು ಎರಡೂ ಚಿತ್ರಗಳಲ್ಲಿ ಪುರಾತನ ರೋಮ್‌ನ ಹಿರಿಯ ರಾಜ್ಯತಂತ್ರಜ್ಞನಾಗಿದ್ದು ಮಹತ್ವಾಕಾಂಕ್ಷೆಯ ನಿರಂಕುಶ ದೊರೆಯ — ಸ್ಪರ್ಟಾಕಸ್‌ ನಲ್ಲಿ ಮಾರ್ಕಸ್ ಲಿಸಿನಿಯಸ್ ಕ್ರಾಸಸ್ ಮತ್ತು ಗ್ಲಾಡಿಯೇಟರ್ ‌ನಲ್ಲಿ ಕೊಮೋಡಸ್ - ಸಮ್ಮಖದಲ್ಲಿ ರೋಮನ್ ಸೆನೆಟ್‌ನ ಪುರಾತನ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಗ್ರಾಚುಸ್ ಪಾತ್ರವನ್ನು ಮಾಡಿದ (ಸ್ಪರ್ಟಾಕಸ್‌ ಮತ್ತು ಗ್ಲಾಡಿಯೇಟರ್ ‌ನಲ್ಲಿ) ಇಬ್ಬರೂ ನಟರು ಹಿಂದಿನ ಚಿತ್ರಗಳಲ್ಲಿ ಕ್ಲಾಡಿಯಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ — ಸ್ಪರ್ಟಾಕಸ್‌‌ನ ಚಾರ್ಲ್ಸ್ ಲಾಫ್ಟನ್ 1937 ಚಿತ್ರ I, ಕ್ಲಾಡಿಯಸ್ ‌ನಲ್ಲಿ ಮತ್ತು ಗ್ಲಾಡಿಯೇಟರ್ ‌ನ ಡೆರೆಕ್ ಜಾಕೋಬಿ 1975 BBC ಮಾರ್ಪಾಡಿನಲ್ಲಿ ಕ್ಲಾಡಿಯಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎರಡೂ ಚಿತ್ರಗಳು ಒಂದು ನಿರ್ದಿಷ್ಟ ಅಂಶವನ್ನು ಪರಸ್ಪರ ಹಂಚಿಕೊಳ್ಳುತ್ತವೆ - ಒಬ್ಬ ಕತ್ತಿಮಲ್ಲ (ಇಲ್ಲಿ ಮ್ಯಾಕ್ಸಿಮಸ್, ಸ್ಪರ್ಟಾಕಸ್‌ )‌ನಲ್ಲಿ ವುಡಿ ಸ್ಟ್ರೋಡ್‌ನ ಡ್ರಾಬ) ಪಂದ್ಯದ ಕೊನೆಯಲ್ಲಿ ತನ್ನ ಆಯುಧವನ್ನು ಪ್ರೇಕ್ಷಕರತ್ತ ಪೆಟ್ಟಿಗೆಯತ್ತ ಎಸೆಯುತ್ತಾನೆ ಹಾಗೂ ಒಂದು ಸಾಲಿನ ಮಾತು - "ರೋಮ್ ಎನ್ನುವುದು ಗಲಭೆಯ ಗುಂಪು" - ಹೇಳುತ್ತಾನೆ. ಇಲ್ಲಿ ಗ್ರಾಚುಸ್ ಈ ಮಾತನ್ನು ಹೇಳಿದರೆ, ಸ್ಪರ್ಟಾಕಸ್‌ ‌ನಲ್ಲಿ ಜೂಲಿಯಸ್ ಸೀಸರ್ (ಜಾನ್ ಗೇವಿನ್) ಹೇಳಿದ್ದಾರೆ.

ನಾಜಿ ರ್ಯಾಲಿಯ ಚಿತ್ರ ನಿರೂಪಣೆ ರೋಮನ್ ಚಕ್ರಾಧಿಪತ್ಯದಿಂದ ಪ್ರೇರಿತವಾಗಿದೆ ಎಂದು ರಿಡ್ಲೆ ಸ್ಕಾಟ್ ಹೇಳಿದ್ದಾನಾದರೂ, ಚಿತ್ರದಲ್ಲಿ ರೋಮ್‌ಗೆ ಕೊಮೋಡಸ್‌ ಪ್ರವೇಶ ಮಾಡುವ ಚಿತ್ರಣವು ಲೇನಿ ರೈಫೆಂಸ್ಟಾಲ್‌ನಾಜಿ ಪ್ರಚಾರ ಚಿತ್ರ ಟ್ರಿಯಂಫ್ ಆಫ್ ದಿ ವಿಲ್ (1934) ನಿಂದ ಕಲ್ಪನೆಗಳನ್ನು ತೆಗೆದುಕೊಂಡಿದೆ. ಅಡೋಲ್ಫ್ ಹಿಟ್ಲರ್‌ನ ಮೆರವಣಿಗೆಯಲ್ಲಿ ನಡೆದ ಇದೇ ತೆರನಾದ ಘಟನೆಗಳನ್ನು ಗ್ಲಾಡಿಯೇಟರ್ ಪ್ರತಿಬಿಂಬಿಸುತ್ತದೆ. ಹಿಟ್ಲರ್ ವಿಮಾನದಿಂದ ಆಗಮಿಸುವುದನ್ನು ತೋರಿಸುವ ಮೂಲಕ ನಾಜಿ ಚಿತ್ರ ಆರಂಭವಾಗುತ್ತದೆ, ಆದರೆ ಸ್ಕಾಟ್ ರೋಮ್‌ನ ವೈಮಾನಿಕ ಚಿತ್ರವನ್ನು ಮೊದಲು ತೋರಿಸಿ, ಆ ನಂತರ ಕೊಮೋಡಸ್ ತನ್ನ ವಿಜಯರಥದಲ್ಲಿ ಮೆರವಣಿಗೆ ಮಾಡುವುದನ್ನು ವೀಕ್ಷಿಸುತ್ತಿರುವ ಜನಸಾಗರದ ದೃಶ್ಯವನ್ನು ತೋರಿಸಿದ್ದಾನೆ.[೨೬] ಟ್ರಿಯಂಫ್ ಆಫ್ ದ ವಿಲ್ ‌ನಲ್ಲಿ ಮೊದಲು ಕಾಣಿಸಿಕೊಳ್ಳುವುದು ನಾಜಿ ಗರುಡ. ಇದು ಗರುಡನ ಒಂದು ಪ್ರತಿಮೆ(ನಂತರ ಉಳಿದ ದೃಶ್ಯಗಳಲ್ಲಿ ಇನ್ನಷ್ಟು ಅಲಂಕೃತ ಗರುಡಗಳು ಬರುತ್ತವೆ) ಕೊಮೋಡಸ್‌ನ ಮೆರವಣಿಗೆಯಲ್ಲಿ ಪ್ರಧಾನವಾಗಿರುವ ಕಮಾನುಗಳಲ್ಲಿ ಒಂದರ ತುದಿಯಲ್ಲಿ ಕುಳಿತುಕೊಂಡಿರುವುದನ್ನು ಸೂಚಿಸುತ್ತದೆ. ನಾಜಿ ಚಿತ್ರದ ಒಂದು ದೃಶ್ಯದಲ್ಲಿ ಒಬ್ಬಳು ಸಣ್ಣ ಹುಡುಗಿ ಹಿಟ್ಲರ್‌ಗೆ ಹೂ ನೀಡುತ್ತಾಳೆ, ಅದೇ ಕೊಮೋಡಸ್ ಅನೇಕ ಹುಡುಗಿಯರನ್ನು ಭೇಟಿಯಾಗುತ್ತಾನೆ ಅವರೆಲ್ಲರೂ ಅವನಿಗೆ ಹೂಗೊಂಚಲುಗಳನ್ನು ಕೊಡುತ್ತಾರೆ.[೨೭]

ಧ್ವನಿಪಥಗಳು

[ಬದಲಾಯಿಸಿ]

ಆಸ್ಕರ್-ನಾಮನಿರ್ದೇಶನಗೊಂಡ ಸಂಗೀತವನ್ನು ಸಂಯೋಜಿಸಿದವರು ಹಾನ್ಸ್ ಜಿಮ್ಮರ್ ಮತ್ತು ಲಿಸ ಗೆರಾರ್ಡ್, ಅದನ್ನು ಗೇವಿನ್ ಗ್ರೀನವೇ ನಿರ್ದೇಶಿಸಿದರು. ಲಿಸ ಗೆರಾರ್ಡ್‌ಳ ಧ್ವನಿಯು ದ ಇನ್‌ಸೈಡರ್ ‌ ಚಿತ್ರದಲ್ಲಿನ ಅವಳ ಸಂಗೀತದಂತೆಯೇ ಇದೆ.[೨೮] ಹೆಚ್ಚಿನ ಯುದ್ಧದ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ಗುಸ್ತವ್ ಹೋಲ್ಸ್ಟ್‌ನ "ಮಾರ್ಸ್: ದಿ ಬ್ರಿಂಜರ್ ಆಫ್ ದಿ ವಾರ್" ಚಿತ್ರದಲ್ಲಿರುವಂತೆ ಇದೆಯೆಂದು ಗುರುತಿಸಲಾಗಿದೆ. 2006ರ ಜೂನ್‌ನಲ್ಲಿ ಹೋಲ್ಸ್ಟ್ ಫೌಂಡೇಶನ್ ಹಿಂದಿನ ಗುಸ್ತವ್ ಹೋಲ್ಸ್ಟ್ನ ಕೆಲಸವನ್ನು ನಕಲು ಮಾಡಿದುದಕ್ಕಾಗಿ ಹಾನ್ಸ್ ಜಿಮ್ಮರ್‌ನ ವಿರುದ್ಧ ಮೊಕದ್ದಮೆ ಹೂಡಿತು.[೨೯][೩೦] ವಿಜಯೋತ್ಸವದೊಂದಿಗೆ ಕೊಮೋಡಸ್‌ ರೋಮ್‌ಗೆ ಪ್ರವೇಶಿಸುವ ದೃಶ್ಯದಲ್ಲಿ ಮತ್ತೊಂದು ಇಷ್ಟವೆನಿಸುವ ಸಂಗೀತ ಹೋಲಿಕೆಯಿದೆ. ಇದು ವ್ಯಾಗನರ್‌ರಿಂಗ್ ಆಫ್ ದಿ ನೈಬಲಂಗ್ಸ್‌ನ ಎರಡು ದೃಶ್ಯಗಳಿಂದ - ದಾಸ್ ರೈನ್‌ಗೋಲ್ಡ್‌ನ ಪ್ರಾಸ್ತಾವಿಕ ರಾಗಾಲಾಪನೆ ಮತ್ತು ಗೋಟರ್‌ಡ್ಯಾಮರಂಗ್ನಿಂದ ಸೈಗ್‌ಫ್ರೀಡ್‌ನ ಶವಸಂಸ್ಕಾರ ಯಾತ್ರೆ - ಸಂಗೀತದಿಂದ ಪ್ರೇರಿತವಾಗಿ ಜೊತೆಗೂಡಿದೆ. ಆರಂಭಿಕ ದೃಶ್ಯದ "ಜರ್ಮನ್" ಕದನದ ಹಾಡನ್ನು ರಿಡ್ಲೆ ಸ್ಕಾಟ್‌ನ ಅಚ್ಚುಮೆಚ್ಚಿನ ಚಲನಚಿತ್ರಗಳಲ್ಲಿ ಒಂದಾದ 1964 ಚಿತ್ರ ಜುಲು ಇಂದ ತೆಗೆದುಕೊಳ್ಳಲಾಗಿದೆ. ಮೊದಲ ಧ್ವನಿಪಥ ಬಿಡುಗಡೆಯಾದ ಒಂದು ವರ್ಷದ ನಂತರ 2001ರ ಫೆಬ್ರವರಿ 27ರಲ್ಲಿ ಡೆಕ್ಕಾ ಗ್ಲಾಡಿಯೇಟರ್: ಮೋರ್ ಮ್ಯೂಸಿಕ್ ಫ್ರಮ್ ದಿ ಮೋಶನ್ ಪಿಕ್ಚರ್ ಅನ್ನು ನಿರ್ಮಿಸಿದನು. ನಂತರ 2005ರ ಸೆಪ್ಟೆಂಬರ್ 5ರಲ್ಲಿ ಡೆಕ್ಕಾ ಮೇಲೆ ಸೂಚಿಸಿದ ಎರಡೂ ಬಿಡುಗಡೆಗಳನ್ನು ಹೊಂದಿರುವ ಎರಡು-CD ಪ್ಯಾಕ್ ಗ್ಲಾಡಿಯೇಟರ್: ಸ್ಪೆಶಲ್ ಆನಿವರ್ಸರಿ ಎಡಿಶನ್ ನಿರ್ಮಿಸಿದನು. ಚಿತ್ರ ಸಂಗೀತದ ಕೆಲವನ್ನು 2003ರ ಜನವರಿಯಲ್ಲಿ NFL ಪ್ಲೇಆಫ್ಸ್‌ನಲ್ಲಿ ಜಾಹೀರಾತಿನ ಮೊದಲು ಹಾಗೂ ವಿರಾಮದ ಮೊದಲು ಮತ್ತು ನಂತರ ಪ್ರದರ್ಶಿಸಲಾಗಿದೆ.[೩೧] 2003ರಲ್ಲಿ ಲುಸಿಯಾನೊ ಪವರೋಟಿಯು ಚಿತ್ರದ ಹಾಡನ್ನು ತಾನೇ ಹಾಡಿ ಅದರ ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದನು, ಅಲ್ಲದೆ ಚಿತ್ರದ ಧ್ವನಿಪಥವನ್ನು ನಿರ್ಮಿಸುವಂತೆ ತಮಗೆ ಬಂದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕೆ ಈಗ ಪಶ್ಚಾತಾಪ ಪಡುತ್ತಿರುವುದಾಗಿ ಹೇಳಿದನು.[೩೨] ಚಿತ್ರದ ಧ್ವನಿಪಥ ಅತಿ ಹೆಚ್ಚು ಮಾರಾಟವಾಗಿ ಸರ್ವಕಾಲೀಕ ದಾಖಲೆಯನ್ನು ಸ್ಥಾಪಿಸಿದೆ ಮತ್ತು ಹೆಚ್ಚು ಜನಪ್ರಿಯವಾಗಿದೆ.

ಪ್ರತಿಕ್ರಿಯೆ

[ಬದಲಾಯಿಸಿ]

ಗ್ಲಾಡಿಯೇಟರ್ ಉತ್ತಮ ವಿಮರ್ಶೆಗಳನ್ನು ಪಡೆಯಿತಲ್ಲದೆ, ರೋಟನ್ ಟೊಮಾಟೋಸ್‌ ನಡೆಸಿದ ಮತದಾನದಲ್ಲಿ 77% ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು.[೩೩] ಸಾಮಾನ್ಯ ಯೋಗ್ಯತೆ ನಿರ್ಣಯ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೆಟಾಕ್ರಿಟಿಕ್ ವೆಬ್‌ಸೈಟ್‌ನಲ್ಲಿ, ಗ್ಲಾಡಿಯೇಟರ್ ಚಿತ್ರ ಮುಖ್ಯವಾಹಿನಿ ವಿಮರ್ಶಕರಿಂದ 37 ಪ್ರತಿಕ್ರಿಯೆಗಳ ಆಧಾರದ ಮೇಲೆ 64/100ರಷ್ಟು ಪರವಾದ ವಿಮರ್ಶೆಯನ್ನು ಗಳಿಸಿಕೊಂಡಿತು.[೩೪] ಜರ್ಮೇನಿಯಾ ಯುದ್ಧವನ್ನು CNN.com ಅದರ "ಅಚ್ಚುಮೆಚ್ಚಿನ ಪರದೆ ಮೇಲಿನ ಯುದ್ಧ ದೃಶ್ಯ" ಎಂದು ಬಣ್ಣಿಸಿತು,[೩೫]. ಎಂಟರ್ಟೈನ್‌ಮೆಂಟ್ ವೀಕ್ಲಿ ಯು "ಕ್ರೋವ್‌ನ ನಿಷ್ಠುರ, ಭಾವಪೂರ್ಣ ಅಭಿನಯ"ದಿಂದಾಗಿ[೩೬] ಮ್ಯಾಕ್ಸಿಮಸ್‌ ಅದರ ಆರನೇ ಮೆಚ್ಚಿನ ಕ್ರಿಯಾಶೀಲ ನಟನೆಂದೂ, ಚಿತ್ರವನ್ನು ತನ್ನ ಮೂರನೇ ಮೆಚ್ಚಿನ ಸೇಡಿನ ಚಿತ್ರವೆಂದೂ ಹೆಸರಿಸಿತು.[೩೭] 2002ರಲ್ಲಿ ಚಾನೆಲ್ 4 (UK TV) ಇದನ್ನು ಸರ್ವಕಾಲೀಕ ಆರನೇ ಶ್ರೇಷ್ಠ ಚಿತ್ರವೆಂದು ಘೋಷಿಸಿತು.[೩೮]

ಇದು ಕೂಡ ಟೀಕೆಗೆ ಹೊರತಾಗಿರಲಿಲ್ಲ, ರೋಗರ್ ಎಬರ್ಟ್ ಚಿತ್ರ "ಮಸುಕು ಮಸುಕಾಗಿದೆ ಮತ್ತು ಅಸ್ಪಷ್ಟವಾಗಿದೆ" ಎಂದು ನಿರ್ದಿಷ್ಟವಾಗಿ ತೀವ್ರವಾಗಿ ವಿಮರ್ಶಿಸಿದರು. ಅಲ್ಲದೆ ಅವರು ಚಿತ್ರಕಥೆಯು "ಪಾತ್ರಗಳಿಗೆ ಖಿನ್ನತೆಯನ್ನೇ ಬದಲಿಯಾಗಿ ಬಳಸಿಕೊಳ್ಳಲಾಗಿದೆ ಹಾಗೂ ಪಾತ್ರಗಳು ಸಾಕಷ್ಟು ವ್ಯಥೆ ತುಂಬಿ ಮಂಕಾಗಿರುವಂತೆ ಕಾಣುತ್ತದೆ, ಆದರೆ ಅವು ಯಾಕಾಗಿ ಮಂಕಾಗಿವೆ ಎಂಬುದನ್ನು ನಮಗೆ ಗುರುತಿಸಲಾಗುವುದಿಲ್ಲ" ಎಂದು ಹೇಳಿ ಅಣಕಿಸಿದನು.[೩೯]

ಚಿತ್ರವು 2,938 U.S. ಚಿತ್ರಮಂದಿರಗಳಲ್ಲಿ ಪ್ರದರ್ಶಗೊಂಡು, ವಾರಾಂತ್ಯದಲ್ಲಿ $34.82 ದಶಲಕ್ಷದಷ್ಟು ಗಳಿಸಿತು.[೪೦] ಎರಡು ವಾರಗಳೊಳಗೆ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆಯು ಚಿತ್ರ ನಿರ್ಮಾಣಕ್ಕೆ ತೊಡಗಿಸಿದ $103,000,000 ವೆಚ್ಚವನ್ನು ಮೀರಿಸಿ ಲಾಭಗಳಿಸಿತು.[] ಈ ಚಿತ್ರ 2000ರಲ್ಲೂ ಅತೀ ಹೆಚ್ಚು ಲಾಭ ಗಳಿಕೆಯ ಚಿತ್ರವಾಗಿ ಮುಂದುವರಿಯಿತು. ಪ್ರಪಂಚದಾದ್ಯಂತ ಅದರ ಗಲ್ಲಾಪೆಟ್ಟಿಗೆ ಗಳಿಕೆ $457,640,427. ಅಮೇರಿಕಾದ ಚಿತ್ರ ಮಂದಿರಗಳಲ್ಲಿ $187 ದಶಲಕ್ಷ ಮತ್ತು ಹೊರದೇಶಗಳಲ್ಲಿ $269 ದಶಲಕ್ಷಕ್ಕಿಂತಲೂ ಹೆಚ್ಚು ಲಾಭ ಗಳಿಸಿತು.[೪೧]

ಮಹಾಕಾವ್ಯದ ಪರಿಣಾಮ

[ಬದಲಾಯಿಸಿ]

ಚಿತ್ರದ ಭಾರಿ ಯಶಸ್ಸು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ರೋಮನ್ ಮತ್ತು ಪುರಾತನ ಇತಿಹಾಸದ ಬಗ್ಗೆ ಆಸಕ್ತಿ ಹೆಚ್ಚಿಸಿತು. ದಿ ನ್ಯೂಯಾರ್ಕ್ ಟೈಮ್ಸ್ ‌ನ ಪ್ರಕಾರ, ಇದನ್ನು "ಗ್ಲಾಡಿಯೇಟರ್ ಇಫೆಕ್ಟ್" ಆಗಿ ಡಬ್ ಮಾಡಲಾಯಿತು.

It's called the 'Gladiator' effect by writers and publishers. The snob in us likes to believe that it is always books that spin off movies. Yet in this case, it's the movies — most recently Gladiator two years ago —; that have created the interest in the ancients. And not for more Roman screen colossals, but for writing that is serious or fun or both."[೪೨]

ಚಿತ್ರದ ಬಿಡುಗಡೆಯ ನಂತರ ಸಿಸೆರೊನ ಜೀವನ ಚರಿತ್ರೆ ಸಿಸೆರೊ: ದಿ ಲೈಫ್ ಆಂಡ್ ಟೈಮ್ಸ್ ಆಫ್ ರೋಮ್ಸ್ ಗ್ರೇಟೆಸ್ಟ್ ಪೊಲಿಟೀಶಿಯನ್ ಮತ್ತು ಗ್ರಿಗರಿ ಹೇಮಾರ್ಕಸ್ ಆರೆಲಿಯಸ್' ಮೆಡಿಟೇಶನ್ಸ್‌ನ ಅನುವಾದಗಳು ಮಾರಾಟದಲ್ಲಿ ಉತ್ಕೃಷ್ಟ ಮಟ್ಟವನ್ನು ತಲುಪಿದವು.[೪೨] '' ಟ್ರಾಯ್, ಅಲೆಕ್ಸಾಂಡರ್, ಕಿಂಗ್ಡಮ್ ಆಫ್ ಹೆವನ್, ಮತ್ತು 300 ಮೊದಲಾದ ಚಿತ್ರಗಳಿಗೆ ಕಾರಣವಾಗಿ ಈ ಚಿತ್ರ ಐತಿಹಾಸಿಕ ವೀರಚರಿತ್ರೆ ಪ್ರಕಾರವನ್ನು ಪುನರುಜ್ಜೀವನಗೊಳಿಸಿತು.[೪೩]

ಪ್ರಶಸ್ತಿಗಳು

[ಬದಲಾಯಿಸಿ]

ಗ್ಲಾಡಿಯೇಟರ್ 73ನೇ ಅಕಾಡೆಮಿ ಪ್ರಶಸ್ತಿ, BAFTA ಪ್ರಶಸ್ತಿ, ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮೊದಲಾವುಗಳನ್ನು ಒಳಗೊಂಡಂತೆ ವೈಯಕ್ತಿಕ ವಿಭಾಗದಲ್ಲಿ 36 ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು. 119 ಪ್ರಶಸ್ತಿಗಳಿಗೆ ಹೆಸರು ನಾಮಕರಣಗೊಂಡು, ಆ ಪೈಕಿ 48 ಪ್ರಶಸ್ತಿಗಳನ್ನು ಗೆದ್ದುಕೊಂಡಿತು.[೪೪]

ಚಿತ್ರ ಐದು ಅಕಾಡೆಮಿ ಪ್ರಶಸ್ತಿಗಳನ್ನು ಜಯಿಸಿದೆ ಹಾಗೂ ಹೆಚ್ಚುವರಿಯಾಗಿ ಮತ್ತೆ ಏಳಕ್ಕೆ ನಾಮನಿರ್ದೇಶನಗೊಂಡಿತು. ಜೊವಾಕ್ವಿನ್ ಫೊಯನಿಕ್ಸ್‌ ಅತ್ಯುತ್ತಮ ಪೋಷಕ ನಟ ಮತ್ತು ರಿಡ್ಲೆ ಸ್ಕಾಟ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಅತ್ಯುತ್ತಮ ಸೃಜನಶೀಲ ಸಂಗೀತ ಪ್ರಶಸ್ತಿಗೆ ಚಿತ್ರಗಳ ನಾಮನಿರ್ದೇಶನದಲ್ಲಿ ವಾದವಿವಾದಗಳು ನಡೆದವು. ಪ್ರಶಸ್ತಿಯನ್ನು ಅಧಿಕೃತವಾಗಿ ಹಾನ್ಸ್ ಜಿಮ್ಮರ್‌ಗೆ ಮಾತ್ರ ಸೂಚಿಸಲಾಯಿತು, ಅಕಾಡೆಮಿ ನಿಯಮಗಳಿಂದಾಗಿ ಲಿಸ ಗೆರಾರ್ಡ್‌ಗೆ ನೀಡಲಿಲ್ಲ. ಆದಾಗ್ಯೂ, ಇದೇ ಜೋಡಿಯು ಸಂಗೀತ ಸಹ-ಸಂಯೋಜನೆ ಮಾಡಿದುದರಿಂದ ಅತ್ಯುತ್ತಮ ಸೃಜನಶೀಲ ಸಂಗೀತಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಸ್ವಂತ ಮಾಧ್ಯಮ ಬಿಡುಗಡೆ

[ಬದಲಾಯಿಸಿ]

ಚಿತ್ರ ಮೊದಲು 2000ರ ನವೆಂಬರ್ 20ರಲ್ಲಿ DVDಯಲ್ಲಿ ಬಿಡುಗಡೆಯಾಯಿತು ಹಾಗೂ ನಂತರ ಅನೇಕ ವಿವಿಧ ವಿಸ್ತೃತ ಮತ್ತು ವಿಶೇಷ ಸಂಕಲನ ಆವೃತ್ತಿಗಳಲ್ಲಿ ಬಿಡುಗಡೆಯಾಯಿತು. ಚಿತ್ರದ ಪರಿಚಯ ತುಣುಕುಗಳು 2009ರ ಸೆಪ್ಟೆಂಬರ್‌ನಲ್ಲಿ ಎರಡು-ಡಿಸ್ಕ್ ಬ್ಲೂ-ರೇಯಲ್ಲಿ ಬಿಡುಗಡೆಗೊಂಡವು.[೪೫] ಅಳಿಸಿ ಹಾಕಿದ ದೃಶ್ಯಗಳು, ಟ್ರೇಲರ್‌ಗಳು, ಸಾಕ್ಷ್ಯ ಚಿತ್ರಗಳು, ಅಭಿಪ್ರಾಯಗಳು, ಸಿನಿಮಾ ಯೋಜನೆಗಳು, ಛಾಯಾಂಕಣಗಳು, ಈಸ್ಟರ್ ಮೊಟ್ಟೆಗಳು, ಮತ್ತು ಪಾತ್ರದ ಧ್ವನಿ ಪರೀಕ್ಷೆ ಮೊದಲಾದವನ್ನು ಬ್ಲೂ-ರೇ ಡಿಸ್ಕ್ ಮತ್ತು DVDಗಳು ಒಳಗೊಂಡಿವೆ. ಬ್ಲೂ-ರೇ ಡಿಸ್ಕ್ ಬಿಡುಗಡೆ ಕುರಿತ ಆರಂಭಿಕ ವಿಮರ್ಶೆಗಳು ಚಿತ್ರದ ಕಳಪೆ ಗುಣಮಟ್ಟವನ್ನು ಟೀಕಿಸಿದವು, ಹಾಗೂ 2007ರಲ್ಲಿ ದಿ ಫಿಫ್ತ್ ಎಲಿಮೆಂಟ್‌‌ಗೆ ಸೋನಿ ಮಾಡಿದಂತೆ ಮರು ಮಾದರಿ ತಯಾರಿಸಬೇಕೆಂದು ಹಲವರು ಕೇಳಿಕೊಂಡರು.[೪೬]

ಮೂಲ ಎರಡು-ಡಿಸ್ಕ್ ಆವೃತ್ತಿಗಳ ನಂತರ DVD ಆವೃತ್ತಿಗಳು ಬಿಡುಗಡೆಗೊಂಡವು. ಏಕ-ಡಿಸ್ಕ್ ಆವೃತ್ತಿಯ ಚಿತ್ರ ಹಾಗೂ 2005ರ ಆಗಸ್ಟ್‌ನಲ್ಲಿ ಬಿಡುಗಡೆಗೊಂಡ ಮೂರು-ಡಿಸ್ಕ್ "ವಿಸ್ತೃತ ಆವೃತ್ತಿ" DVD ಮೊದಲಾದವುಗಳನ್ನು ಇದು ಒಳಗೊಂಡಿದೆ. ವಿಸ್ತೃತ ಆವೃತ್ತಿ DVD ಸುಮಾರು ಹದಿನೈದು ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪ್ರದರ್ಶಿಸುತ್ತದೆ. ಆ ಪೈಕಿ ಹೆಚ್ಚಿನವುಗಳು ಹಿಂದಿನ ಬಿಡುಗಡೆಯಲ್ಲಿ ಅಳಿಸಿ ಹಾಕಿದ ದೃಶ್ಯಗಳಾಗಿವೆ. ಸ್ಕಾಟ್ ನಿರ್ದೇಶನದ ತುಣುಕು ಎನ್ನಲಾದ ಮೂಲ ಪ್ರತಿಯಿಂದ ಗುರುತು ಮಾಡಿರದ ವಿಭಾಗದ ಮೂಲಕ ಆರಿಸಬಹುದಾಗಿದೆ. (ಇದು UK ಸಂಕಲನದಲ್ಲಿ ಸೇರಿಲ್ಲ). ಹೊಸ DVDಯು ನಿರ್ದೇಶಕ ಸ್ಕಾಟ್ ಮತ್ತು ನಟ ಕ್ರೋವ್‌ರ ಹೊಸ ನಿರೂಪಣೆ ಶೈಲಿಯನ್ನು ಹೊಂದಿರುವುದರಿಂದ ಇನ್ನಷ್ಟು ಗಮನಾರ್ಹವಾಗಿದೆ. ಒಟ್ಟು ಚಿತ್ರ ಮೊದಲ ಡಿಸ್ಕ್‌ನ್ನು ಆಕ್ರಮಿಸಿಕೊಂಡಿದೆ, ಎರಡನೇ ಡಿಸ್ಕ್ DVD ನಿರ್ದೇಶಕ ಚಾರ್ಲ್ಸ್ ಡಿ ಲಾಜಿರಿಕಾ ಚಿತ್ರ ತೆಗೆದ ಬಗ್ಗೆ ಮೂರು-ಗಂಟೆಗಳ ಸಾಕ್ಷ್ಯಚಿತ್ರಗಳನ್ನು ಹೊಂದಿದೆ. ಮೂರನೇ ಡಿಸ್ಕ್ ಅನುಬಂಧಗಳನ್ನು ಒಳಗೊಂಡಿದೆ. ಮೂರು-ಡಿಸ್ಕ್ ವಿಸ್ತೃತ ಆವೃತ್ತಿಯ ಒಂದು ಮತ್ತು ಎರಡು ಡಿಸ್ಕ್‌ಗಳನ್ನೂ ಹೊಸ ರೂಪದಲ್ಲಿ ಪ್ರಸ್ತುತಪಡಿಸಲಾಯಿತು, ಮತ್ತು ಎರಡು-ಡಿಸ್ಕ್ "ವಿಶೇಷ ಆವೃತ್ತಿ" ಆಗಿ 2005ರಲ್ಲಿ EUನಲ್ಲಿ ಮಾರಾಟ ಮಾಡಲಾಯಿತು.

ಮುನ್ನಡೆ

[ಬದಲಾಯಿಸಿ]

2001ರ ಜೂನ್‌ನಲ್ಲಿ ಡೌಗ್ಲಸ್ ವಿಕ್ ಗ್ಲಾಡಿಯೇಟರ್ ಆಧರಿತ ಸಿನಿಮಾ ಪ್ರಗತಿಯಲ್ಲಿದೆ ಎಂದು ಹೇಳಿದನು.[೪೭] ನಂತರದ ವರ್ಷದಲ್ಲಿ ವಿಕ್, ವಾಲ್ಟರ್ ಪಾರ್ಕೆಸ್, ಡೇವಿಡ್ ಫ್ರಾಂಜೋನಿ, ಮತ್ತು ಜಾನ್ ಲೋಗನ್ ಜೊತೆಯಾಗಿ ಹದಿನೈದು ವರ್ಷಗಳ ನಂತರ ಚಿತ್ರದ ಉತ್ತರಾರ್ಧ ಭಾಗದ ನಿರ್ದೇಶನಕ್ಕೆ ತೊಡಗಿದರು;[೪೮] ಈ ಭಾಗ ರೋಮನ್ ಚಕ್ರವರ್ತಿಯ ಅಂಗರಕ್ಷಕ ದಳದವರು ರೋಮ್ಅನ್ನು ಆಳುವ ಹಾಗೂ ಹಿರಿಯ ಲುಸಿಯಸ್ ಅವನ ನಿಜವಾದ ತಂದೆಯ ಬಗ್ಗೆ ತಿಳಿಯಲು ಪ್ರಯತ್ನಿಸುವ ದೃಶ್ಯಗಳನ್ನು ಒಳಗೊಂಡಿದೆ. ಆದಾಗ್ಯೂ, ರಸ್ಸೆಲ್ ಕ್ರೋವ್‌ ಮ್ಯಾಕ್ಸಿಮಸ್‌ನನ್ನು ಮತ್ತೆ ಜೀವಂತಗೊಳಿಸುವ ಆಸಕ್ತಿಯನ್ನು ಹೊಂದಿದ್ದನು, ಮತ್ತು ಅದನ್ನು ಸಾಧಿಸುವುದಕ್ಕಾಗಿ ಪರಲೋಕ ಜೀವನದ ಕುರಿತಾದ ರೋಮನ್ ನಂಬಿಕೆಗಳ ಬಗ್ಗೆ ಸಂಶೋಧನೆ ನಡೆಸಿದನು.[೪೯] ಹಾಗೆ ಮಾಡಿದಲ್ಲಿ ಗ್ಲಾಡಿಯೇಟರ್ ಚಿತ್ರವನ್ನು ಮಾಡಲಾಗದೆ ಸಿನಿಮಾ ಹೆಸರನ್ನೂ ಬದಲಾಯಿಸಬೇಕಾಗಬಹುದಾದರೂ, ಆ ವಿಷಯದಲ್ಲಿ ರಿಡ್ಲೆ ಸ್ಕಾಟ್ ತೀವ್ರ ಆಸಕ್ತಿಯನ್ನು ಹೊಂದಿದ್ದನು.[೫೦] ವಿಸ್ತೃತ ಆವೃತ್ತಿ/ ವಿಶೇಷ ಆವೃತ್ತಿ DVDಯ ಡಿಸ್ಕ್ 2ರಲ್ಲಿದ್ದ ಈಸ್ಟರ್ ಮೊಟ್ಟೆಗಳ ಬಿಡುಗಡೆಯು ಚಿತ್ರದ ಮುನ್ನಡೆಗಾಗಿ ಸಂಭಾವ್ಯ ಸನ್ನಿವೇಶಗಳ ಕುರಿತ ಚರ್ಚೆಗಳನ್ನು ಒಳಗೊಂಡಿದೆ. ಅಲ್ಲದೆ ಮೂಲ ಚಿತ್ರದ ಕೊನೆಯಲ್ಲಿ ಸಾಯುವ ಮ್ಯಾಕ್ಸಿಮಸ್‌ ಪಾತ್ರಕ್ಕೆ ರಸ್ಸೆಲ್ ಕ್ರೋವ್‌ ಮತ್ತೆ ಜೀವ ತುಂಬುವುದು, ದಿ ಗಾಡ್‌ಫಾದರ್ ಪಾರ್ಟ್ IIರಲ್ಲಿ ಬಳಸಿಕೊಂಡಂತೆ "ಮ್ಯಾಕ್ಸಿಮಸ್ ಮತ್ತು ಆರೆಲಿಯನ್ಸ್ ಕುರಿತ ಬಹು-ತಲೆಮಾರಿನ ನಾಟಕ ಹಾಗೂ ರೋಮ್‌ನ ಪ್ರಕರಣ"ವನ್ನು ಹೊಂದಿರುವ ಚಿತ್ರದ ಉತ್ತರಾರ್ಧ ಭಾಗ ಬರಬೇಕು ಎಂದು ವಾಲ್ಟರ್ F. ಪಾರ್ಕೆಸ್‌ ನೀಡಿದ ಸಲಹೆಯನ್ನು ಈ ಡಿಸ್ಕ್‌ ಒಳಗೊಂಡಿದೆ.

ಚಿತ್ರವನ್ನು ಪುನಃ ಬರೆಯುವ ನಿಟ್ಟಿನಲ್ಲಿ 2006ರಲ್ಲಿ ನಿಕ್ ಕೇವ್‌ನನ್ನು ತಾನು ಮತ್ತು ಕ್ರೋವ್ ಭೇಟಿಯಾಗಿದ್ದಾಗಿ ಸ್ಕಾಟ್ ಹೇಳಿದ್ದಾನೆ, ಆದರೆ ಹೊಸ ಚಿತ್ರದಿಂದ ಲುಸಿಯಸ್‌ನ್ನು ಬಿಟ್ಟು, ಲುಸಿಲ್ಲಾ ಜಾಗಕ್ಕೆ ಮ್ಯಾಕ್ಸಿಮಸ್‌ ಮಗನ ತರುವ ಡ್ರೀಮ್‍‌ವರ್ಕ್ಸ್‌ನ ಅಭಿಪ್ರಾಯಕ್ಕೆ ಸ್ಕಾಟ್ ಮತ್ತು ಕ್ರೋವ್ ಸಹಮತ ಹೊಂದಿರಲಿಲ್ಲ ಎಂಬುದನ್ನು ಎಂದು ಸ್ಕಾಟ್ ಬಹಿರಂಗಪಡಿಸಿದನು. ರೋಮ್‌ನಲ್ಲಿ ಈ ರೀತಿಯ ನೀತಿ ಇಲ್ಲದ ಕಥೆಯು ತುಂಬಾ ಜಟಿಲವಾಗಿದೆ. ಗ್ಲಾಡಿಯೇಟರ್ ಅದರ ಸರಳತೆಯಿಂದಾಗಿ ಪ್ರಸಿದ್ಧವಾಯಿತು.[೫೧] ಮ್ಯಾಕ್ಸಿಮಸ್ ರೋಮನ್ ದೇವತೆಗಳಿಂದಾಗಿ ಮರುಹುಟ್ಟು ಪಡೆಯುತ್ತಾನೆ ಹಾಗೂ ಕ್ರಿಶ್ಚಿಯನ್ನರನ್ನು ಕಿರುಕುಳದಿಂದ ರಕ್ಷಿಸಲು ರೋಮ್‌ಗೆ ಹಿಂತಿರುಗುತ್ತಾನೆ, ನಂತರ ಅವನು ವಿಶ್ವ ಸಮರ 2ನ್ನೂ ಒಳಗೊಂಡಂತೆ ಇತಿಹಾಸದಲ್ಲಿನ ಮತ್ತೊಂದು ಪ್ರಮುಖ ಅವಧಿಗೆ ಹಿಂತಿರುಗುತ್ತಾನೆ, ಅಂತಿಮವಾಗಿ ಆಧುನಿಕ-ಕಾಲದ ಪೆಂಟಗಾನ್‌ನಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ ಎನ್ನುವ ಅಂತರ್ಜಾಲದಲ್ಲಿ 2009ರಲ್ಲಿ ಬಹಿರಂಗಗೊಂಡ ಕೇವ್‌ನ ಚಿತ್ರಕಥೆಯನ್ನು ಅಂತಿಮವಾಗಿ ತಿರಸ್ಕರಿಸಲಾಯಿತು.[೫೨]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Sale, Martha Lair (2005). "Losing Like Forrest Gump: Winners and Losers in the Film Industry" (PDF). Archived from the original (PDF) on 2007-02-27. Retrieved 2007-02-19. {{cite news}}: Unknown parameter |coauthor= ignored (|author= suggested) (help)
  2. Schwartz, Richard (2001). The Films of Ridley Scott. Westport, CT: Praeger. p. 141. ISBN 0275969762.
  3. ೩.೦ ೩.೧ Stax (April 4, 2002). "The Stax Report's Five Scribes Edition". IGN. Archived from the original on ಮೇ 9, 2009. Retrieved February 27, 2009.
  4. Jon Solomon (April 1, 2004). "Gladiator from Screenplay to Screen". In Martin M. Winkler (ed.). Gladiator: Film and History. Blackwell Publishing. p. 3.
  5. ೫.೦ ೫.೧ Tales of the Scribes: Story Development (DVD). Universal. 2005.
  6. John Soriano (2001). "WGA.ORG's Exclusive Interview with David Franzoni" (PDF). Archived from the original (PDF) on ಡಿಸೆಂಬರ್ 3, 2007. Retrieved February 27, 2009.
  7. Corliss, Richard (May 8, 2000). "The Empire Strikes Back". Time. Archived from the original on ಮೇ 8, 2009. Retrieved February 27, 2009. {{cite news}}: Italic or bold markup not allowed in: |publisher= (help); Unknown parameter |coauthor= ignored (|author= suggested) (help)
  8. "Bill Nicholson's Speech at the launch of the International Screenwriters' Festival". January 30, 2006. Archived from the original on ಡಿಸೆಂಬರ್ 15, 2018. Retrieved February 27, 2009.
  9. Bankston, Douglas (May 2000). "Death or Glory". American Cinematographer. American Society of Cinematographers.
  10. ೧೦.೦ ೧೦.೧ "Gory glory in the Colosseum". KODAK: In Camera. 2000. Archived from the original on ಫೆಬ್ರವರಿ 9, 2005. Retrieved February 27, 2009. {{cite web}}: Unknown parameter |month= ignored (help)CS1 maint: bot: original URL status unknown (link)
  11. "Malta Film Commission - Backlots". Malta Film Commission. Archived from the original on 29 ಜುಲೈ 2012. Retrieved 28 August 2009.
  12. ವಿಂಕ್ಲರ್, ಪು.130
  13. ೧೩.೦ ೧೩.೧ ೧೩.೨ Bath, Matthew (October 25, 2004). "The Mill". Digit Magazine. Retrieved February 27, 2009.
  14. Landau, Diana (2000). Gladiator: The Making of the Ridley Scott Epic. Newmarket Press. p. 89. ISBN 1557044287. {{cite book}}: Unknown parameter |coauthors= ignored (|author= suggested) (help)
  15. "Oliver Reed Resurrected On Screen". Internet Movie Database. April 12, 2000. Archived from the original on ಜನವರಿ 2, 2007. Retrieved February 27, 2009.
  16. ಸ್ಕ್ವಾರ್ಟ್ಜ್, ಪು.142
  17. Winkler, Martin (2004). Gladiator Film and History. Malden, MA: Blackwell Publishing. p. 6. ISBN 1405110422.
  18. http://ablemedia.com/ctcweb/showcase/wardgladiator1.html
  19. "Gladiator: The Real Story". Archived from the original on ಫೆಬ್ರವರಿ 12, 2009. Retrieved February 27, 2009.
  20. ಲಿವಿ. ಸಿಂಸಿನಾಟಸ್ ಲೀವ್ಸ್ ಹಿಸ್ ಪ್ಲೊ. ದ ವೆಸ್ಟರ್ನ್ ವರ್ಲ್ಡ್ ISBN 100536993734 ಇಂದ ತೆಗೆದುಕೊಳ್ಳಲಾಗಿದೆ
  21. Andrew Rawnsley (June 23, 2002). "He wants to go on and on; they all do". Guardian Unlimited. Retrieved February 27, 2009.
  22. Llewellyn H. Rockwell Jr. (April 29, 2001). "Bush, the 'Gladiator' president?". WorldNetDaily. Archived from the original on ಮೇ 7, 2009. Retrieved February 27, 2009.
  23. Peter Popham (October 16, 2008). "Found: Tomb of the general who inspired 'Gladiator'". The Independent. Archived from the original on December 26, 2008. Retrieved February 27, 2009.
  24. "'Gladiator' Tomb is Found in Rome". BBC News. October 17, 2008. Retrieved February 27, 2009.
  25. Martin M. Winkler (June 23, 2002). "Scholia Reviews ns 14 (2005) 11". Archived from the original on ಆಗಸ್ಟ್ 25, 2004. Retrieved February 27, 2009.
  26. ವಿಂಕ್ಲರ್, ಪು.114
  27. ವಿಂಕ್ಲರ್, ಪು.115
  28. "Zimmer and Gladiator". Reel.com. Archived from the original on ಫೆಬ್ರವರಿ 10, 2008. Retrieved February 27, 2009.
  29. Priscilla Rodriguez (June 12, 2006). ""Gladiator" Composer Accused of Copyright Infringement". KNX 1070 NEWSRADIO. Retrieved February 27, 2009.
  30. Michael Beek (June 2006). "Gladiator Vs Mars - Zimmer is sued:". Music from the Movies. Archived from the original on ಜೂನ್ 18, 2008. Retrieved February 27, 2009.
  31. ವಿಂಕ್ಲರ್, ಪು.141
  32. Anastasia Tsioulcas (October 26, 2003). "For Pavarotti, Time To Go 'Pop'". Yahoo! Music. Retrieved February 27, 2009.
  33. "Gladiator". Rotten Tomatoes. Retrieved February 27, 2009.
  34. "Gladiator". Metacritic. Archived from the original on ಫೆಬ್ರವರಿ 9, 2009. Retrieved February 27, 2009.
  35. "The best — and worst — movie battle scenes". CNN. April 2, 2007. Retrieved February 27, 2009.
  36. Marc Bernadin (October 23, 2007). "25 Awesome Action Heroes". Entertainment Weekly. Archived from the original on ಮಾರ್ಚ್ 9, 2009. Retrieved February 27, 2009. {{cite news}}: Italic or bold markup not allowed in: |publisher= (help)
  37. Gary Susman (December 12, 2007). "20 Best Revenge Movies". Entertainment Weekly. Archived from the original on ಮೇ 8, 2009. Retrieved February 27, 2009. {{cite news}}: Italic or bold markup not allowed in: |publisher= (help)
  38. "100 Greatest Films". Channel 4. Archived from the original on ಏಪ್ರಿಲ್ 15, 2008. Retrieved February 27, 2009.
  39. Ebert, Roger (May 5, 2000). "Gladiator Review". Chicago Sun-Times. Archived from the original on ಸೆಪ್ಟೆಂಬರ್ 28, 2012. Retrieved February 27, 2009. {{cite web}}: Italic or bold markup not allowed in: |publisher= (help)
  40. ಸ್ಕ್ವಾರ್ಟ್ಜ್, ಪು.141
  41. "Gladiator total gross". Box Office Mojo. Retrieved February 27, 2009.
  42. ೪೨.೦ ೪೨.೧ Martin, Arnold (July 11, 2002). "Making Books; Book Parties With Togas". ದ ನ್ಯೂ ಯಾರ್ಕ್ ಟೈಮ್ಸ್. Retrieved February 27, 2009. {{cite news}}: Italic or bold markup not allowed in: |publisher= (help)
  43. "The 15 Most Influential Films of Our Lifetime". Empire. June 2004. p. 115. {{cite news}}: Italic or bold markup not allowed in: |publisher= (help)
  44. "Gladiator awards tally". Internet Movie Database. Retrieved February 27, 2009.
  45. "Gladiator". Blu-ray.com. Retrieved 2009-05-16.
  46. "Initial "Gladiator" Blu-ray Reviews Report Picture Quality Issues". Netflix. Retrieved 2009-09-11.
  47. Stax (June 16, 2001). "IGN FilmForce Exclusive: David Franzoni in Negotiations for Another Gladiator!". IGN. Archived from the original on ಫೆಬ್ರವರಿ 26, 2012. Retrieved February 27, 2009.
  48. Brian Linder (September 24, 2002). "A Hero Will Rise... Again". IGN. Archived from the original on ಫೆಬ್ರವರಿ 26, 2012. Retrieved February 27, 2009.
  49. Stax (December 17, 2002). "A Hero Will Rise - From the Dead!". IGN. Archived from the original on ಫೆಬ್ರವರಿ 26, 2012. Retrieved February 27, 2009.
  50. Stax (September 11, 2003). "Ridley Talks Gladiator 2". IGN. Archived from the original on ಫೆಬ್ರವರಿ 26, 2012. Retrieved February 27, 2009.
  51. Reg Seeton. "Ridley Scott Interview, Page 2". UGO Networks. Archived from the original on ಮೇ 27, 2010. Retrieved February 27, 2009.
  52. https://www.theguardian.com/music/2009/may/06/nick-cave-rejected-gladiator-script


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಲ್ಯಾಂಡಯು, ಡಯಾನ; ವಾಲ್ಟರ್ ಪಾರ್ಕೆಸ್, ಜಾನ್ ಲೋಗನ್, ಮತ್ತು ರಿಡ್ಲೆ ಸ್ಕಾಟ್. ಗ್ಲಾಡಿಯೇಟರ್: ದ ಮೇಕಿಂಗ್ ಆಫ್ ದ ರಿಡ್ಲೆ ಸ್ಕಾಟ್ ಎಪಿಕ್. ನ್ಯೂಮಾರ್ಕೆಟ್ ಪ್ರೆಸ್, 2000. ISBN 978-0751328868
  • Reynolds, Mike (2000). "Ridley Scott: From Blade Runner to Blade Stunner". DGA Monthly Magazine. Directors Guild of America. Archived from the original on 2007-02-03. Retrieved 2007-01-31. {{cite news}}: Unknown parameter |month= ignored (help)
  • ಸ್ಕ್ವಾರ್ಟ್ಜ್, ರಿಚಾರ್ಡ್ (2001). ದ ಫಿಲ್ಮ್ಸ್ ಆಫ್ ರಿಡ್ಲೆ ಸ್ಕಾಟ್. ವೆಸ್ಟ್‌ಪೋರ್ಟ್, CT: ಪ್ರೇಗರ್. ISBN 0-275-96976-2
  • Ward, Allen (2001). "The Movie "Gladiator" in Historical Perspective". Classics Technology Center. AbleMedia. Retrieved 2007-01-26.
  • ವಿಂಕ್ಲರ್, ಮಾರ್ಟಿನ್ (2004). ಗ್ಲಾಡಿಯೇಟರ್ ಫಿಲ್ಮ್ ಆಂಡ್ ಹಿಸ್ಟರಿ ಮಾಲ್ಡನ್, MA: ಬ್ಲ್ಯಾಕ್‌ವೆಲ್ ಪಬ್ಲಿಷಿಂಗ್. ISBN 1-4051-1042-2

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Portal

Awards and achievements
Preceded by Academy Award for Best Picture
2000
Succeeded by
Golden Globe: Best Motion Picture, Drama
2000
BAFTA Award for Best Film
2000
Succeeded by