ವಿಷಯಕ್ಕೆ ಹೋಗು

ಛಠ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಛತ್ ಇಂದ ಪುನರ್ನಿರ್ದೇಶಿತ)
Chhath
Performing of morning puja to Surya.
ಪರ್ಯಾಯ ಹೆಸರುಗಳುChhathi
Dala Chhath
Surya Shashti
ಆಚರಿಸಲಾಗುತ್ತದೆHindus, Sikhs and Jains
ರೀತಿCultural, Historical, Religious
ಮಹತ್ವTo thank Surya for bestowing the bounties of life on earth and fulfilling particular wishes
ಆಚರಣೆಗಳುPrayers and religious rituals, including puja and prasad, bathing in the Ganges, and fasting
ಆರಂಭ2 days prior to Kartik Shasti
ಅಂತ್ಯThe day after Kartik Shasti
ದಿನಾಂಕKartik Shukla Shasti
೨೦೨೪ datedate missing (please add)

ಛಠ್ ಹಿಂದಿ:छठ,ಇದನ್ನು ದಾಲಾ ಛಠ್)ಎಂದೂ ಕರೆಯಲಾಗುತ್ತದೆ.ಇದು ಪುರಾತನ ಹಿಂದೂ ಹಬ್ಬಾಚರಣೆ ;ಇಲ್ಲಿ ಹಿಂದೂಗಳ ಸೂರ್ಯ ದೇವ ಸೂರ್ಯನ ಪೂಜೆಗೆ ಈ ಶುಭಸಂದರ್ಭ ಆಚರಿಸಲಾಗುತ್ತದೆ,ಅದಲ್ಲದೇ ಇದನ್ನು ಸೂರ್ಯ ಷಷ್ಟಿ ಎನ್ನಲಾಗುತ್ತದೆ.[] ಈ ಪೃಥ್ವಿಯ ಮೇಲಿನ ಜೀವಿಗಳ ಬದುಕಿಗೆ ಕಾರಣನಾದ ಸೂರ್ಯನ ಆರಾಧನೆಯೇ ಛಠ್ ಪೂಜಾ ಎನ್ನಲಾಗುತ್ತದೆ.ಆತ ಬೇಡಿದರೆ ಹಲವು ಅಭಿಲಾಷೆಗಳನ್ನು ಪೂರೈಸುತ್ತಾನೆ. ಸೂರ್ಯ ಶಕ್ತಿ ದೇವತೆಯಾಗಿ ಆರಾಧಿಸಲ್ಪಡುತ್ತಾನೆ.ಜೀವಕ್ಕೆ ಪ್ರಭಾವೀ ಶಕ್ತಿ ಪೂರೈಸುವ ಆತನನ್ನು ಛಠ್ ಹಬ್ಬಾಚರಣೆಯಲ್ಲಿ ಪೂಜಿಸಿ ಆತನಿಂದ ಹಾರೈಕೆ,ಪ್ರಗತಿ ಮತ್ತು ಅಭಿವೃದ್ಧಿಗಳಿಗಾಗಿ ವರ ಬೇಡುತ್ತಾರೆ. ಹಿಂದೂ ಪೌರಾಣಿಕ ಕಥೆಗಳಲ್ಲಿ ಸೂರ್ಯನ ಪೂಜೆಯಿಂದ ಹಲವು ರೋಗಗಳು ವಾಸಿಯಾಗುತ್ತವೆ.ಕುಷ್ಠದಂತಹ ಕಾಯಿಲೆಗಳಿಗೆ ಆತನೇ ರಾಮಬಾಣ ಎನಿಸಿದ್ದಾನೆ.ಕುಟುಂಬಕ್ಕೆ ಅಭಿವೃದ್ಧಿ,ಸದಸ್ಯರಿಗೆ ದೀರ್ಘಾಯುಷ್ಯ,ಸ್ನೇಹಿತರಿಗೆ ಮತ್ತು ಹಿರಿಯ ಜೀವಿಗಳಿಗೆ ಆತ ಆಶೀರ್ವದಿಸುತ್ತಾನೆ.

ಈ ಹಬ್ಬಾಚರಣೆಯ ಕಟ್ಟುಪಾಡುಗಳು ಅತ್ಯಂತ ನಿಯಮಬದ್ದ ಮತ್ತು ವೃತಾಚರಣೆಗೆ ಪ್ರಖ್ಯಾತವಾಗಿದ್ದು ಇದನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಅದರಲ್ಲಿ ಪವಿತ್ರ ಸ್ನಾನ,ಉಪವಾಸ ಮತ್ತು ನೀರೂ ಸಹ ಮುಟ್ಟದೇ (ವೃತ) ಉಪಾಸನೆ,ಸುದೀರ್ಘ ಕಾಲದ ವರೆಗೆ ನೀರಿನಲ್ಲಿ ನಿಂತು ಧ್ಯಾನ ಮತ್ತು ಪ್ರಶಾದ್ (ಪ್ರಾರ್ಥನೆ ಸಲ್ಲಿಕೆ) ಅಲ್ಲದೇ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಅರ್ಘ್ಯ ಸಮರ್ಪಣೆ ಇದರ ವಿಷೇಷಗಳಾಗಿವೆ.

ಇದನ್ನು ವಿಶಾಲ ತಳಹದಿ ಮೇಲೆ ಬಿಹಾರ್ ಜಾರ್ಖಂಡ್ ಮತ್ತು ನೇಪಾಳದ ತೆರೈ ಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.ಇಲ್ಲಿ ವಲಸೆ ಬಂದವರಿಂದ ಹೆಚ್ಚಾಗಿ ಆಚರಿಸಲ್ಪಡುತ್ತದೆ.ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಈ ಪೂಜೆ ಪ್ರಚಲಿತವಿದೆ. ಈ ಹಬ್ಬವನ್ನು ಹಲವೆಡೆ ಆಚರಿಸಲಾಗುತ್ತದೆ,ಆದರೆ ಭಾರತದ ಈಶಾನ್ಯ ಪ್ರದೇಶದ ರಾಜ್ಯಗಳು,ಮಧ್ಯ ಪ್ರದೇಶ,ಉತ್ತರ ಪ್ರದೇಶ,ಛಠ್ತೀಸಗಢ್ ಮತ್ತು ಚಂಡೀಘಡ್ ಗಳಲ್ಲಿ ವಿರಳವಾಗಿ ಆಚರಿಸಲ್ಪಟ್ಟರೂ ಚಾಲ್ತಿಯಲ್ಲಿದೆ. ಗುಜರಾತ,[] ದೆಹಲಿ,[] ಮುಂಬಯಿ[] ಮತ್ತು ಮಾರಿಶಸ್.[]

ಹಬ್ಬಾಚರಣೆ ದಿನಾಂಕ

[ಬದಲಾಯಿಸಿ]

ಛಠ್ ಪೂಜಾ ಸಮಾರಂಭವನ್ನು ಕಾರ್ತಿಕ ಶುಕ್ಲ ಷಷ್ಟಿ ಯೆಂದು ಆಚರಿಸಲಾಗುತ್ತದೆ.ಇದು ಹಿಂದೂ ಪಂಚಾಂಗದಲ್ಲಿ ಕಾರ್ತಿಕ ಮಾಸದ ಆರನೆಯ ದಿವಸವಾಗಿದೆ. ಇದು ಗ್ರೆಗೊರಿಯನ್ ಕ್ಯಾಲಂಡರ್ ಪ್ರಕಾರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುವುದು ಸ್ವಾಭಾವಿಕ.

ಇದನ್ನು ಬೇಸಿಗೆ ಕಾಲದ (ಮಾರ್ಚ್-ಏಪ್ರಿಲ್)ಚೈತ್ರ ಷಷ್ಟಿ ಯೆಂದೂ ಆಚರಿಸಲಾಗುತ್ತದೆ.ಹೋಳಿಹುಣ್ಣಿಮೆ ನಂತರ ಆಚರಿಸುವ ಇದನ್ನು ಚೈತಿ ಛಠ್ ಎನ್ನಲಾಗುತ್ತದೆ.[] ಆದರೆ ಮೊದಲಿನದು ಹೆಚ್ಚು ಪ್ರಚಲಿತವಾಗಿದೆ.ಉತ್ತರ ಭಾರತದಲ್ಲಿ ಚಳಿಗಾಲವು ಸುಮಾರಾಗಿ ಹೆಚ್ಚು ಹಬ್ಬಗಳಿಗೆ ಕಾಲಾವಕಾಶವಾಗಿದೆ.ಈ ಹಬ್ಬವು ಕಠಿಣ ವೃತಗಳಿಗೆ ಹೆಸರಾಗಿದೆ.ಚಳಿಗಾಲದ ಸಮಯದಲ್ಲಿ ಇದರ ಭಕ್ತರು ನಿರಂತರವಾಗಿ 36 ಗಂಟೆಗಳ ಕಾಲ ನೀರೂ ಸಹ ಮುಟ್ಟದೇ ಉಪವಾಸ ವೃತ ಆಚರಣೆ ಮಾಡಬೇಕಾಗುತ್ತದೆ.ಭಾರತದ ಚಳಿಗಾಲದಲ್ಲಿ ಇದು ಕಟ್ಟುನಿಟ್ಟಿನ ಆಚರಣೆಯೇ ಸರಿ.

ವ್ಯುತ್ಪತ್ತಿ

[ಬದಲಾಯಿಸಿ]

ಛಠ್ ಶಬ್ದವು ಹಿಂದಿಯಲ್ಲಿ [] ಅಂಕಿ 6 ನ್ನು ಸೂಚಿಸುತ್ತದೆ.ಅಲ್ಲದೇ ಈ ಹಬ್ಬವನ್ನು ಹಿಂದೂ ಚಂದ್ರಮಾನ ತಿಂಗಳು ಕಾರ್ತಿಕದಲ್ಲಿ ಆಚರಿಸಲಾಗುತ್ತದೆ.

ಛಠ್ ಶಬ್ದವು ಎರಡು ಶಬ್ದಗಳ ಸಂಯುಕ್ತವಾಗಿದೆ."ಛಹ್" ಅಂದರೆ "ಆರು ಹಂತಗಳು"ಮತ್ತು "ಹಠ್" ಆಂದರೆ ಹಠಯೋಗಕ್ಕೆ ಸಂಬಂಧಿಸಿದ ವಿಜ್ಞಾನವಾಗಿದೆ.(ತ್ಯಾಗ,ನಿಸ್ವಾರ್ಥತೆ) ಛಠ್ ಶಬ್ದವು ಹಠ ಯೋಗದಿಂದ ಆರು ಹಂತಗಳಲ್ಲಿ ಸೂರ್ಯನನ್ನು ಪೂಜಿಸಿ ಸೂರ್ಯ ಶಕ್ತಿಯನ್ನು ಪಡೆದುಕೊಳ್ಳುವುದಾಗಿದೆ. "ಹಠ್" ಇದು ವೈರಾಗ್ಯ,ತ್ಯಾಗ ಮತ್ತು ನಿಸ್ವಾರ್ಥತೆಯನ್ನು ಸೂಚಿಸುತ್ತದೆ.ಉದಾಹರಣೆಗೆ ಕಠಿಣ ಉಪವಾಸ ಮತ್ತು ದೀರ್ಘ ಕಾಲದ ವರೆಗೆ ನೀರಲ್ಲಿ ನಿಂತು ವೃತಾಚರಣೆಗೆ ಉಲ್ಲೇಖಿತವಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಈ ಹಬ್ಬಾಚರಣೆ ಬಗ್ಗೆ ಪುರಾತನ ವೇದಗಳ ಪಠ್ಯಗಳಲ್ಲಿಯೂ ಛಠ್ ಪೂಜೆ ಬಗ್ಗೆ ಉಲ್ಲೇಖಿಸಲಾಗುತ್ತದೆ.ಋಗ್ವೇದದಲ್ಲಿ ಸೂರ್ಯ ದೇವನನ್ನು ಸ್ತುತಿಸುವ ಶ್ಲೋಕಗಳ ಪ್ರಸ್ತಾಪವಿದೆ. ಈ ಧಾರ್ಮಿಕ ಕ್ರಿಯಾವಿಧಿಗಳ ಆಚರಣೆಯು ಸಂಸ್ಕೃತ ಪವಿತ್ರ ಗ್ರಂಥ ದ ಉಲ್ಲೇಖದಲ್ಲಿ ಮಹಾಭಾರತ ದಲ್ಲಿ ದ್ರೌಪದಿ ಇದೇ ತೆರನಾದ ಈ ಧಾರ್ಮಿಕ ಅನುಷ್ಟಾನವನ್ನು ಮಾಡಿದಳೆಂದು ಹೇಳಲಾಗುತ್ತದೆ.

ಕವಿತೆಯೊಂದರಲ್ಲಿ ದ್ರೌಪದಿ ಮತ್ತು ಪಾಂಡವರು,ಇವರು ಹಸ್ತಿನಾಪುರದರಸರಾಗಿದ್ದರು.(ಆಧುನಿಕ ದೆಹಲಿ),ಆಗಿನ ಸಂತ ಉದಾತ್ತ ಋಷಿ ಧೌಮ್ಯ ಅವರ ಉಪದೇಶದ ಮೇರೆಗೆ ಅವರು ಛಠ್ ಪೂಜಾ ನೆರವೇರಿಸಿದರೆಂದು ಪ್ರತೀತಿ ಇದೆ. ಸೂರ್ಯನ ಪೂಜೆ ಮಾಡುವ ಮೂಲಕ ದ್ರೌಪತಿ ತನ್ನ ಸಮಸ್ಯೆಗಳಿಗೆ ತೀಕ್ಷ್ಣ ಪರಿಹಾರ ಪಡೆದಳಲ್ಲದೇ ಪಾಂಡವರು ತಮ್ಮ ಕಳೆದ ರಾಜ್ಯ ಮರಳಿ ಪಡೆಯುವಲ್ಲಿ ಸಾಫಲ್ಯ ತಂದಳು.

ಛಠ್ ಪೂಜೆಯನ್ನು ಕರ್ಣ ಆರಂಭಿಸಿದ ಎಂದು ನಂಬಲಾಗಿದೆ.ಸೂರ್ಯ ಪುತ್ರನಾದ ಕರ್ಣ ಮಹಾಭಾರತದ ಕಾಲದಲ್ಲಿ ಅಂಗ ದೇಶವನ್ನಾಳುತ್ತಿದ್ದ.(ಸದ್ಯ ಬಿಹಾರನ ಭಾಗಲಪುರ ಜಿಲ್ಲೆ) ಆತ ಶೂರ ಯೋಧನಾಗಿದ್ದನಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿರುದ್ದ ಯುದ್ದ ಮಾಡಿದ.

ಅದರ ಯೋಗಿಕ್ /ವೈಜ್ಞಾನಿಕ ಯುಗದ ಇತಿಹಾಸವು ವೇದಕಾಲಕ್ಕೆ ಕೊಂಡೊಯ್ಯುತ್ತದೆ. ಆಗಿನ ಕಾಲದ ಋಷಿಗಳು ಉಪವಾಸ ವೃತ ಮಾಡಿ ಸೂರ್ಯನ ಆರಾಧಿಸಿ ತಮಗೆ ನೇರವಾಗಿ ಶಕ್ತಿ ಬೇಡಿಕೊಳ್ಳುತ್ತಿದ್ದರು. ಇದನ್ನು ಛಠ್ ಪದ್ದತಿ ಮೇಲೆ ಮಾಡಲಾಗುತಿತ್ತು.[]

ಧಾರ್ಮಿಕ ಕ್ರಿಯೆಗಳು ಮತ್ತು ಸಂಪ್ರದಾಯಗಳು

[ಬದಲಾಯಿಸಿ]

ಛಠ್ ಧಾರ್ಮಿಕ ವಿಧಿ ವಿಧಾನವು ಆಚರಿಸುವವನನ್ನು ಈ ಅವಧಿಯಲ್ಲಿ ನಾಲ್ಕು ದಿನಗಳ ಕಾಲ ತನ್ನ ಸಂಸಾರ ಗದ್ದಲಿಂದ ದೂರವಿಡುತ್ತದೆ. ಈ ಸಮಯದಲ್ಲಿ ಇದರ ಉಪಾಸಕ ಪರಿಶುದ್ದತೆಗಾಗಿ ಒಂದೇ ಒಂದು ಬ್ಲ್ಯಾಂಕೆಟ್ ಬಳಸಿ ಅಲ್ಲಿಯೇ ಮಲಗುತ್ತಾನೆ.

ಇದೊಂದೇ ಪವಿತ್ರ ಹಬ್ಬಾಚರಣೆ ಎಂದರೆ ಇಲ್ಲಿ ಪಂಡಿತರ ಪಾತ್ರವಿಲ್ಲ.(ಅರ್ಚಕ) ಭಕ್ತರು ಸೂರ್ಯ ಹುಟ್ಟುವ ಮತ್ತು ಅಸ್ತಮಿತಗೊಳ್ಳುವ ಪ್ರಕ್ರಿಯೆಯನ್ನು ಮನುಷ್ಯನ ಹುಟ್ಟು ಸಾವಿಗೆ ಹೋಲಿಸುತ್ತಾರೆ.ಇದು ಜನ್ಮ ಜಾತಕದಲ್ಲಿ ಕೂಡಿ ಬರುವ ಪ್ರಮುಖ ನಕ್ಷತ್ರವಾಗಿದೆ. ಇದನ್ನು ಅತ್ಯಂತ ವೈಭಯುತ ಸೂರ್ಯ ಆರಾಧನೆ ಎನ್ನಲಾಗುತ್ತದೆ.

ಬಿಹಾರನಲ್ಲಿ ಅಸಂಖ್ಯಾತ ಸೂರ್ಯ ದೇವಾಲಯಗಳಿವೆ.ಅಲ್ಲಿನ ಸೂರಜ್ ಕುಂಡ್ ಅಥವಾ ಸೂರ್ಯನ ಪವಿತ್ರ ಕೊಳಗಳು ಅಲ್ಲಿನ ಆಚರಣೆಗೆ ಪೂರಕವಾಗಿವೆ.

ಇದರ ಮೂಲ ಅರ್ಚನೆ ಮಾಡುವವರನ್ನು ಪಾರ್ವೈತಿನ್ (ಸಂಸ್ಕೃತದಲ್ಲಿ ಪರ್ವ ,ಅಂದರೆ 'ಸಂಧರ್ಭ'ಅಥವಾ 'ಹಬ್ಬ')ಎನ್ನುತ್ತಾರೆ ಬಹುತೇಕ ಮಹಿಳೆಯರು ಇದರಲ್ಲಿ ಪ್ರಮುಖ ಅನುಷ್ಟಾನ ಮಾಡುವವರಾಗಿದ್ದಾರೆ. ಆದರೂ ದೊಡ್ಡ ಪ್ರಮಾಣದ ಪುರುಷರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಪರ್ವೈತಿನ್ ಗಳು ತಮ್ಮ ಕುಟುಂಬ ಹಾಗು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಒಂದು ಕುಟುಂಬ ಒಮ್ಮೆ ಈ ಛಠ್ ಪೂಜೆ ಆರಂಭಿಸಿದರೆ ಅದನ್ನು ಅವರ ಮನೆತನದ ಎಲ್ಲರೂ ಮುಂದುವರೆಸಿಕೊಂಡು ಹೋಗುತ್ತಾರೆ. ಕುಟುಂಬದಲ್ಲಿ ಸಾವು ಸಂಭವಿಸಿದರೆ ಮಾತ್ರ ಆ ವರ್ಷ ಆಚರಣೆಗೆ ತಡೆಯಾಗಬಹುದು.

ಪ್ರಸಾದವೆಂದರೆ ಸಿಹಿತಿನಿಸುಗಳು ಮತ್ತು ಹಣ್ಣುಗಳನ್ನು ಬಿದರಿನ ಮೊರಗಳಲ್ಲಿ ನೀಡಲಾಗುತ್ತದೆ. ಆಹಾರವು ಕಟ್ಟುನಿಟ್ಟಾಗಿ ಶಾಖಾಹಾರಿಯಾಗಿದ್ದು ಉಪ್ಪು,ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಲಾಗಿರುವುದಿಲ್ಲ. ಶುದ್ದ ಆಹಾರವನ್ನೇ ಬಳಸಲಾಗುತ್ತದೆ.

ಛಠ್ ಪೂಜಾದ ನಾಲ್ಕು ದಿನಗಳು

[ಬದಲಾಯಿಸಿ]
  • ಮೊದಲ ದಿನ

ನಾಹಾಕಾ(ಅಕ್ಷರಶಃ, ಮಜ್ಜನ ಸ್ನಾನ ಮತ್ತು ಪ್ರಸಾದ):
ಛಠ್ ಪೂಜೆಯ ಮೊದಲ ದಿನ ಭಕ್ತರು ಗಂಗಾ ನದಿಯಲ್ಲಿ ಮುಳುಗು ಹಾಕಿ ಅದರ ಪವಿತ್ರ ಜಲವನ್ನು ಮನೆಗೊಯ್ದು ಅದನ್ನು ಸೂರ್ಯನ ಅರ್ಪಣೆಗೆ ಸಾಮಗ್ರಿ ತರಲಾಗುತ್ತದೆ. ಮನೆ ಹಾಗು ಸುತ್ತಮುತ್ತಲಿನ ಜಾಗೆಗಳನ್ನು ನಿಷ್ಟೆಯಿಂದ ಸ್ವಚ್ಛಗೊಳಿಸುತ್ತಾರೆ. ಪರ್ವೈತಿನ್ಸ್ ಗಳು ಒಂದೇ ಹೊತ್ತು ಆಹಾರ ತೆಗೆದುಕೊಳ್ಳುತ್ತಾರೆ.

  • ದಿನ 2: ಖರ್ನಾ(ಛಠ್ ಪೂಜೆಯ ಮುಂಚಿನ ದಿನ):

ಪಂಚಮಿ ದಿನ ಛಠ್ ಗೆ ಮೊದಲು ದಿನ ಪಾರ್ವೈತಿನ್ಸ್ ಇಡೀ ದಿನ ಉಪವಾಸ ಮಾಡುತ್ತಾರೆ.ಸೂರ್ಯಾಸ್ತದ ನಂತರ ಸ್ವಲ್ಪ ಆಹಾರ ಸೇವಿಸುತ್ತಾರೆ. ಭೂಮಿತಾಯಿ ಪೂಜೆ ನಂತರ ರಸೊಯಿ-ಖೀರ್ (ಅಕ್ಕಿಪಾಯಸ)ಪೂರಿಗಳು (ಕರಿದ ಗೋಧಿಹಿಟ್ಟಿನ ಹಲ್ಲೆಗಳು)ಬಾಳೆಹಣ್ಣುಗಳನ್ನು ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ವಿತರಿಸುತ್ತಾರೆ. ಈ ದಿನದ ನಂತರ ಪಾರ್ವೈತಿನ್ಸ್ ಗಳು ನಂತರ 36 ಗಂಟೆಗಳ ಕಾಲ ನೀರಾಹಾರ ತ್ಯಜಿಸುತ್ತಾರೆ.

  • ದಿನ 3: ಛಠ್ ಸಂಜೆಯ ಅರ್ಘ್ಯ (ಸಾಯಂಕಾಲದ ಸಮರ್ಪಣೆ):

ಆದಿನ ಪ್ರಸಾದ (ನೈವೇದ್ಯ) ತಯಾರಿಕೆಯಲ್ಲಿ ಕಳೆಯುತ್ತಾರೆ. ಈ ದಿನ ಪಾರ್ವೈತಿನ್ಸ್ ಗಳ ಜೊತೆಗೆ ಅವರ ಕುಟುಂಬವರ್ಗ, ಬಂಧುಬಳಗ ಹತ್ತಿರದ ಕೊಳ ಅಥವಾ ನೀರಿರುವ ಸ್ಥಳಕ್ಕೆ ಹೋಗಿ ಅಸ್ತಮಿಸುತ್ತಿರುವ ಸೂರ್ಯನಿಗೆ ಅರ್ಘ್ಯ ಅರ್ಪಿಸುವಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಂತದಲ್ಲಿ ಭಕ್ತವೃಂದ ಅಸ್ತಮಿಸುವ ಸೂರ್ಯನಿಗೆ ಪ್ರಾಥನೆ ಸಲ್ಲಿಸುತ್ತಾರೆ.

ಈ ಸಂದರ್ಭವು ಬಹುತೇಕ ಜಾತ್ರಾ ಮ್ಹೋತ್ಸವದಂತಿರುತ್ತದೆ. ಅದಲ್ಲದೇ ಪರ್ವೈತಿನ್ಸ್ ರ ಸ್ನೇಹಿತರು,ಅಸಂಖ್ಯಾತ ಪಾಲ್ಗೊಂಡ ಜನರು ಅಲ್ಲಿನ ಪೂಜೆ ಮಾಡುವವರಿಂದ ಹಾರೈಕೆ,ಆಶೀರ್ವಾದ ಬಯಸುತ್ತಾರೆ. ಈ ಧಾರ್ಮಿಕ ಕ್ರಿಯೆಯಲ್ಲಿ ಜನಪದ ಭಕ್ತಿ ಗೀತೆಗಳ ಗಾಯನ ನಡೆಯುತ್ತದೆ.ಅತ್ತೆ-ಸೊಸೆಯರು,ತಾಯಿ-ಮಗಳು,ಮಾವನ ಮನೆಯವರು,ಎಲ್ಲರೂ ಒಟ್ಟಾಗಿ ಹಾಡುಗಳನ್ನು ಹಾಡಿ ಸೂರ್ಯನನ್ನು ಸ್ಮರಿಸುತ್ತಾರೆ.

ಈ ಜನಪದ ಗೀತೆಗಳಲ್ಲಿ ಛಠ್ ಪೂಜೆ ಆಚರಣೆಯ ಸಂಸ್ಕೃತಿ,ಸಾಮಾಜಿಕ ಸಂಬಹಂಧ,ಪೌರಾಣಿಕತೆ ಮತ್ತು ಬಿಹಾರ ಮತ್ತು ಉತ್ತರ ಪ್ರದೇಶದ ಇತಿಹಾಸಗಳು ಇಲ್ಲಿ ಬಿಂಬಿಸಲ್ಪಡುತ್ತವೆ. ಆದರಿಂದು ಛಠ್ ಗೀತೆಗಳು ಬಾಲಿಯುಡ್ ನಲ್ಲಿನ ಸಿನೆಮಾಗಳಲ್ಲಿ ರಿಮಿಕ್ಸ್ ಸಂಸ್ಕೃತಿಗೆ ಒಳಗಾದರೂ ಅದರ ಜನಪದೀಯ ಶಕ್ತಿಯ ಸೊಗಡು ಇನ್ನೂ ಉಳಿದುಕೊಂಡಿದೆ. ಇಲ್ಲಿ ಒಟ್ಟು ಮೂರು ಪ್ರಾದೇಶಿಕ ಸಂಸ್ಕೃತಿಗಳು ಒಟ್ಟು ಸೇರಿ ಏಕತೆ ಮೆರೆದಿವೆ.ಪ್ರಧಾನವಾಗಿ ಬಿಹಾರದ (ಮೈಥಿಲಿ,ಮಾಗಧಿ ಮತ್ತು ಭೋಜಪುರಿ ಇವುಗಳಲ್ಲಿ ಇದರ ಸಂಭ್ರಮಾಚಾರಣೆ ಒಳಗೊಂಡಿದ್ದು,ಆದರೆ ಇವರೆಲ್ಲಾ ಛಠ್ ಪೂಜೆಯನ್ನೇ ಪ್ರಮುಖವಾಗಿಸಿ ಇದನ್ನು ನಡೆಸಿಕೊಡುತ್ತಾರೆ. ಈ ಛಠ್ ಆಚರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಖರ್ನಾ ಧಾರ್ಮಿಕ ಕ್ರಿಯೆಯಲ್ಲಿ ಕಂಡರೂ ಆಯಾ ಪ್ರಾದೇಶಿಕತೆಯ ಭೇದ ಮರೆತು ಮೂಲಭೂತ ಆಚರಣೆಗೆ ಒತ್ತು ನೀಡಲಾಗುತ್ತದೆ.

ಕೋಸಿ: ಮೂರನೆಯ ದಿನಾಚರಣೆಯ ಆ ರಾತ್ರಿ ವರ್ಣರಂಜಿತವಾಗಿ ಕೋಸಿಯನ್ನು ನೆರವೇರಿಸುತ್ತಾರೆ. ಮಣ್ಣಿನ ಹಣತೆಗಳನ್ನು ಐದು ಕಬ್ಬಿನ ಜಲ್ಲೆಯ ಗೂಡಿನಡಿ ಹಚ್ಚಿ ಪ್ರಕಾಶ ಬೆಳಗುತ್ತಾರೆ. ಈ ಐದು ಕಬ್ಬಿನ ಜಲ್ಲೆಗಳು ಮನುಷ್ಯನಲ್ಲಿರುವ ಪಂಚತತ್ವ(ಐದು ಪ್ರಮುಖ ಅಂಶಗಳು ಪೃಥ್ವಿ,ಜಲ,ಅಗ್ನಿ,ವಾಯು ಮತ್ತು ಆಕಾಶ)ಎನ್ನಲಾಗುತ್ತದೆ. ಈ ಸಾಂಕೇತಿಕ ಛಠ್ ಪೂಜೆಯನ್ನು ಆ ಕುಟುಂಬದಲ್ಲಿ ನೂತನ ವಿವಾಹ ಸಮಾರಂಭ ಅಥವಾ ಮಗು ಹುಟ್ಟಿದ ಸಂಭ್ರಮವಿದ್ದರೆ ಹೆಚ್ಚು ನಿಷ್ಠೆಯಿಂದ ಆಚರಿಸುತ್ತಾರೆ. ಈ ಹಚ್ಚಿದ ಹಣತೆಗಳು ಮಾನವ ಕುಲದ ರಕ್ಷಣೆ ಮಾಡುವ ಸೂರ್ಯನನ್ನು ನೆನಪಿಸುತ್ತವೆ. ಸೂರ್ಯನ ಪೂಜೆ ನಂತರ ಜನರು ತಮ್ಮ ಮನೆಗಳಲ್ಲಿ ಸಾಯಂಕಾಲ ಮೂರನೆಯ ದಿನದ ಈ ಆಚರಣೆಯನ್ನು ದೀಪಗಳೊಂದಿಗೆ ಆಚರಿಸುತ್ತಾರೆ.ಅಸ್ತಮಿತ ಸೂರ್ಯನಿಗೆ ಇಲ್ಲಿ ಪೂಜೆ ಮಾಡುವರು. ಅದರ ನಂತರ ನಾಲ್ಕನೆಯ ದಿನ ಉಗಮಿಸುವ ಸೂರ್ಯನಿಗೆ ಪೂಜೆಗೆ ಮುನ್ನ ಇದನ್ನು ನದಿ ತೀರ್ಗಳಲ್ಲಿ ಮಾಡುತ್ತಾರೆ.

  • ದಿನ 4: ಪಾರ್ಣಾ(ಛಠ್ ನಂತರದ ದಿನ)

ಬಿಹಾನಿಯಾ ಅರ್ಘ್ಯ (ಮರುದಿನ ಬೆಳಗಿನ ಆಚರಣೆ):ಛಠ್ ಪೂಜೆಯ ಕೊನೆಯ ದಿನ ಭಕ್ತರು,ಕುಟುಂಬ ಸದಸ್ಯರು,ಸ್ನೇಹಿತರು ಸೂರ್ಯೋದಯಕ್ಕೆ ಮುಂಚೆ ನದಿ ತೀರದೆಡೆಗೆ ತೆರಳುತ್ತಾರೆ.ಉಗಮಿಸುವ ಸೂರ್ಯನಿಗೆ ಅರ್ಘ್ಯ ಅರ್ಪಿಸಲು ಅವರಲ್ಲಿಗೆ ತೆರಳುತ್ತಾರೆ. ಪಾರ್ವತೈನಿಸ್ ಗಳು ಉಪವಾಸ ಮುಗಿಸಿದ ಅನಂತರ ಹಬ್ಬಾಚರಣೆಗೆ ತೆರೆ ಬೀಳುತ್ತದೆ.ಕುಟುಂಬ ಸದಸ್ಯರು ತಮ್ಮ ಪರಿಚಯಿಸ್ಥರ ಮನೆಗೆ ತೆರಳಿ ಪ್ರಸಾದ ಸ್ವೀಕರಿಸುತ್ತಾರೆ. ನದಿ ತೀರದಲ್ಲಿ ಬೆಳಗಿನ ಚುಮುಚುಮು ನಸುಕು ಮುಸುಕಿನಲ್ಲಿ ಛಠ್ ಹಬ್ಬಾಚರಣೆ ನೋಡಲು ಅತ್ಯಂತ ಮನೋಹರವಾಗಿರುತ್ತದೆ.ಆಧ್ಯಾತ್ಮಿಕ,ಧಾರ್ಮಿಕ ಅನುಭವ ಈ ಆಧುನಿಕ ಯುಗದಲ್ಲಿ ಪ್ರಾಚೀನ ಸಂಸ್ಕೃತಿಯ ತಳುಕು ಹಾಕಿದಂತಿರುತ್ತದೆ.

ಧಾರ್ಮಿಕ ನಿಲುವಿನ ದೃಷ್ಟಿಕೋನ

[ಬದಲಾಯಿಸಿ]

ಆದರೆ ಇಲ್ಲಿ ಧಾರ್ಮಿಕ ಯೋಗಿಗಳಿಗೆ ಸಂಬಂಧಿಸಿದ ಛಠ್ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದೆ.ಪ್ರಾಚೀನ ಯೋಗಿಗಳ ಋಷಿ ಮುನಿಗಳ ತರ್ಕದ ಆಚರಣೆ ಎಂಬುದು ಇಂದಿನ ಆಧುನಿಕರಿಗೆ ಅಷ್ಟಾಗಿ ಗಮನಕ್ಕೆ ಬಂದಿಲ್ಲ.

ಛಠ್ ನ ಯೋಗಜ್ಞಾನದ ತಾತ್ವಿಕತೆ

[ಬದಲಾಯಿಸಿ]

ಯೋಗಶಾಸ್ತ್ರೀಯ ತತ್ವದಲ್ಲಿ ಪ್ರತಿಯೊಂದು ಜೀವಿಯಲ್ಲಿ ಅತ್ಯಧಿಕ ಸೂಕ್ಷ್ಮ ಮತ್ತು ಉನ್ನತ ಮಟ್ಟದ ಶಕ್ತಿ ಪ್ರವಹಿಸುವ ವಾಹಿನಿಗಳ ಸಾಮರ್ಥ್ಯವಿದೆ. ಸೂರ್ಯನ ಶಕ್ತಿಯು ದೇಹ ಪ್ರವೇಶಿಸಿದಾಗ ಮನುಷ್ಯನ ದೇಹದಲ್ಲಿ ತರಾಂಗಾಂತರದಲ್ಲಿ ವಿಕಿರಣಗಳ ಹರಿವು ಉಂಟಾಗುತ್ತದೆ.ಇಲ್ಲಿ ಜೈವಿಕ-ವಿದ್ಯುತ್ ಪ್ರವರಿಸುತ್ತದೆ. ಕೆಲವು ನಿರ್ಧಿಷ್ಟ ಭೌತಿಕ ಮತ್ತು ಮಾನಸಿಕ ಪರಿಸ್ಥಿತಿಗಳಲ್ಲಿ ಈ ಸೂರ್ಯ ಶಕ್ತಿಯ ಹೀರುವಿಕೆಯಿಂದಾಗಿ ಸೂರ್ಯ-ಜೈವಿಕ-ವಿದ್ಯುತ್ ಪ್ರಮಾಣ ಹೆಚ್ಚುತ್ತದೆ. ಈ ಛಠ್ ಪೂಜೆಯಿಂದ ದೇಹ ಮತ್ತು ಮನಸ್ಸನ್ನು ಕಠಿಣ ವೃತಗಳಿಗಾಗಿ ಸಿದ್ದಗೊಳಿಸಿ ಬ್ರಹ್ಮಾಂಡದ ಸೂರ್ಯ ಶಕ್ತಿಯನ್ನು ಒಳಗೊಳ್ಳುವಿಕೆಗೆ ಅಣಿಗೊಳಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಇಂತಹ ವೈಜ್ಞಾನಿಕ ಕ್ರಮವು ಈ ಹಿಂದಿನ ಋಷಿ-ಮುನಿ-ಸನ್ಯಾಸಿಗಳಲ್ಲಿ ತಮ್ಮ ವೈರಾಗ್ಯದ ಪೋಷಣೆಗೆ ನೆರವಾಗುತಿತ್ತು.ಯಾವುದೇ ನೀರಾಹಾರ ಅಥವಾ ಘನಾಹಾರ ಸೇವಿಸದೇ ಅವರು ವೃತಾಚರಣೆಗೆ ಸಜ್ಜಾಗುತ್ತಿದ್ದರು. ಹೀಗೆ ಈ ಛಠ್ ಪೂಜೆ ಆಚರಣೆಯೊಂದಿಗೆ ಅವರು ಸೂರ್ಯನ ಶಕ್ತಿಯನ್ನು ಆಹ್ವಾನ ಮಾಡಿಕೊಂಡು ನೇರವಾಗಿ ಸೂರ್ಯನ ಪ್ರಭಾವಲಯಕ್ಕೆ ಹತ್ತಿರವಾಗುತ್ತಿದ್ದರು.ಇದನ್ನು ನೀರು ಅಥವಾ ಆಹಾರದ ಮೂಲಕ ಪಡೆಯುವುದಗಿಂತ ನೇರವಾಗಿ ಸೂರ್ಯನ ಶಕ್ತಿಯಿಂದಲೇ ಪಡೆಯುತ್ತಿದ್ದರು.

ಈ ಅಕ್ಷಿಪಟಲ ಎಂಬುದು ಸೂರ್ಯನಿಗೆ ಒಡ್ಡಿದ್ದಾಗ ತನ್ನ ಫೊಟೊಎಲೆಕ್ಟ್ರಿಸಿಟಿ ವಸ್ತುವಿನಿಂದಾಗಿ ಬೆಳಕಿನ ಶಕ್ತಿಯನ್ನು ಸಂಚಯಿಸುವಲ್ಲಿ ಸಫಲವಾಗುತ್ತದೆ. ಆದ್ದರಿಂದ ಹೀಗೆ ವಿಶಾಲ ಗಾತ್ರದ ವಿದ್ಯುತ್ ಶಕ್ತಿ ರೆಟಿನಾದಿಂದ ಸ್ಪುರಿಸಲಾರಂಭಿಸುತ್ತದೆ. ಈ ಶಕ್ತಿಯು (ಛಾಯಾಗ್ರಹಿತ-ಜೈವಿಕ-ವಿದ್ಯುತ್)ರೆಟಿನಾದಿಂದ ಶಂಖುವಿನಾಕೃತಿಯ ಗ್ರಂಥಿಗೆ ವರ್ಗಾವಣೆಯಾಗುತ್ತದೆ.ಗೋಚರಸಾಮರ್ಥ್ಯದ ಆಪ್ಟಿಕ್ ನರಗಳ ಮೂಲಕ ಪಿನಿಯಲ್ ಗ್ರಂಥಿಗಳಿಗೆ ಸಂವಹನಗೊಂಡು ಸಕ್ರಿಯಗೊಳ್ಳಲು ಆರಂಭಿಸುತ್ತದೆ. ಈ ಗ್ರಂಥಿಯು ಪಿಟ್ಯುಟರಿ ಗ್ರಂಥಿಗೆ ಅತಿ ಹತ್ತಿರವಾಗಿರುತ್ತದೆ.ಅಲ್ಲದೇ ಮಿದುಳಿನ ಕೆಳಭಾಗದ ಗ್ರಂಥಿಗಳು (ಈ ಮೂರೂ ಗ್ರಂಥಿಗಳನ್ನು ತ್ರಿವೇಣಿ ಎನ್ನಲಾಗುತ್ತದೆ)ಏಕೆಂದರೆ ಈ ಮೂರೂ ಗ್ರಂಥಿಗಳು ಒಂದೊಕ್ಕೊಂದು ಸಂವಹನಗೊಂಡು ಶಕ್ತಿ ಸಂಚಯಕ್ಕೆ ದಾರಿ ಮಾಡಿಕೊಡುತ್ತವೆ. ಹೀಗೆ ಅದು ಪ್ರಾಣಾಯಾಮದ ಪ್ರಾಣಿಕ್ ಕ್ರಿಯೆಯು ಸಮರೂಪಕ್ಕೆ ಬಂದು ವೃತ ಕೈಗೊಳ್ಳುವವರಿಗೆ ಆರೋಗ್ಯ ಮತ್ತು ಪ್ರಶಾಂತ ಮನಸ್ಸನ್ನು ನೀಡುತ್ತದೆ.

ಛಠ್ ನ ವಿವಿಧ ಹಂತಗಳು (ಜ್ಞಾನಸಂವೇದಿ ಛಾಯಾಶಕ್ತಿ ಸಂಚಯದ ಪ್ರಕ್ರಿಯೆ)

[ಬದಲಾಯಿಸಿ]

ಯೋಗದ ತತ್ವಶಾಸ್ತ್ರವು ಛಠ್ ಪ್ರಕ್ರಿಯೆಯನ್ನು ಆರು ವಿಭಾಗಗಳಾಗಿ ವಿಂಗದಿಸುತ್ತದೆ.ಅವು ಜಾಗೃತ ಜ್ಞಾನದ ಬ್ರಹ್ಮಾಂಡದಲ್ಲಿನ ಸೂರ್ಯ ಶಕ್ತಿ ಪ್ರವಹಿಸುವ ತಂತ್ರಜ್ಞಾನವನ್ನು ಸೂಚಿಸುತ್ತವೆ.(ಜ್ಞಾನಸಂವೇದಿ ಛಾಯಾಶಕ್ತಿ ಸಂಚಯದ ಪ್ರಕ್ರಿಯೆ)[]

ಹಂತ 1: ಉಪವಾಸ ಮತ್ತು ಕಟ್ಟುನಿಟ್ಟಿನ ಶಿಸ್ತು ದೇಹದೊಳಗಿನ ವಿಷಕಾರಕಗಳನ್ನು ಸ್ವಚ್ಛಗೊಳಿಸುತ್ತದೆ.ಇದು ದೇಹ ಮತ್ತು ಮನಸ್ಸುಗಳನ್ನು ಶುಚಿಯಾಗಿಡಲು ಸಹಕರಿಸುತ್ತದೆ. ಈ ಹಂತದಲ್ಲಿ ವೃತಾಚರಣೆ ಮಾಡುವ (ಭಕ್ತ) ಬ್ರಹ್ಮಾಂಡದ ಸೌರಶಕ್ತಿ ಪಡೆಯುತ್ತಾನೆ.

ಹಂತ 2: ಈರಿನಲ್ಲಿ ಅರ್ಧ ಶರೀರವನ್ನು ನಿಲ್ಲಿಸುವುದರಿಂದ ದೇಶದ ಶಕ್ತಿ ಸೋರಿಕೆ ನಿಲ್ಲುತ್ತದೆ.(ಮೊಳಕಾಲ ವರೆಗಿನ ನೀರಿನ ಆಳ)ಪ್ರಾಣದ (ಮನಃಶಕ್ತಿ)ಮತ್ತು ಇದು ಶುಷುಮ್ನ (ಬೆನ್ನುಮೂಲೆಯಲ್ಲಿನ ಮನೋವಾಹಿನಿ)ಇದನ್ನು ಶಕ್ತಿಗೊಳಿಸುತ್ತದೆ.

ಹಂತ 3: ಬ್ರಹ್ಮಾಂಡದ ಸೌರಶಕ್ತಿ ವೃತ ಮಾಡುವವನ ದೇಹದೊಳಗೆ ಪ್ರವೇಶಿಸುತ್ತದೆ.ಪಿನಿಯಲ್ ,ಪಿಟ್ಯುಟರಿ ಮತ್ತು ಹೈಪೊಥಾಲ್ಮಸ್ ಗ್ರಂಥಿಗಳು (ತ್ರಿವೇಣಿ ಸಂಕೀರ್ಣ)ಇದು ರೆಟಿನಾದ ಮೂಲಕ ಆಪ್ಟಿಕ್ ನರಗಳಿಗೆ ತಲಪುತ್ತದೆ.

ಹಂತ 4: ತ್ರಿವೇಣಿ ಮೂರು ಗ್ರಂಥಿಗಳ ಸಂವೇದಿತ ಸಕ್ರಿಯತೆಗೆ ಅನುವು ಮಾಡುತ್ತದೆ.(ಪಿನೆಯಲ,ಪಿಟ್ಯುಟರಿ ಮತ್ತು ಹೈಪೊಥಾಲ್ಮಸ್).

ಹಂತ 5: ಈ ಒಂದು ತೆರನಾದ ಧ್ರುವೀಕರಣವು ಬೆನ್ನು ಮೂಳೆಯಲ್ಲಿ ಸಂಭವಿಸುತ್ತದೆ.ವೃತಗಾರನ ದೇಹದಲ್ಲಿ ಒಟ್ಟಾರೆ ಶಕ್ತಿ ಸಂಚಿತವಾಗಿ ಅದು ಬ್ರಹ್ಮಾಂಡದ ಶಕ್ತಿಮನೆಯಾಗಿ ಮಾರ್ಪಡುತ್ತದೆ. ಅದು ನಂತರ ಜಾಗೃತಾವಸ್ಥೆಗೆ ಅಂದರೆ ಮನೋಬಲದ ಹೆಚ್ಚಳಕ್ಕೆ ಕಾರಣವಾಗಿ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸುತ್ತದೆ.

ಹಂತ 6: ವೃತ ಮಾಡುವವನ ದೇಹವು (ಭಕ್ತ)ಒಂದು ವಾಹಿನಿಯಾಗಿ ಇಡೀ ವಿಶ್ವಕ್ಕೇ ಮರುಜನ್ಮದ ರೂಪಾಂತರ ನೀಡುತ್ತದೆ.

ಛಠ್ ಪ್ರಕ್ರಿಯೆಯ ಪ್ರಯೋಜನಗಳು

[ಬದಲಾಯಿಸಿ]

ಛಠ್ ಪ್ರಕ್ರಿಯೆಯಲ್ಲಿ ದೇಹದಲ್ಲಿನ ವಿಷವಸ್ತು ನಾಶವಾಗುತ್ತದೆ.

ಮಾನಸಿಕವಾಗಿ ಛಠ್ ಪ್ರಕ್ರಿಯೆ ಶಿಸ್ತನ್ನು ಕಲಿಸುತ್ತದೆ. ಈ ಕಾರ್ಯದಿಂದ ಮಾನಸಿಕ ಶಿಸ್ತಿನ ಶುದ್ದತೆ. ಈ ಧಾರ್ಮಿಕ ವಿಧಾನದಲ್ಲಿ ಹಲವು ಶಿಸ್ತುಗಳನ್ನು ಪಾಲಿಸುವುದರಿಂದ ಸ್ವಚ್ಛತೆ ಮತ್ತು ಪರಿಸರ ಸಮತೋಲನದಲ್ಲಿರುತ್ತದೆ. ಛಠ್ ಸಮಯದಲ್ಲಿ ಭಕ್ತರಲ್ಲಿ ಅವರ ಮನಸ್ಸಿನ ಪರಿಶುದ್ದತೆ ಗೋಚರವಾಗುತ್ತದೆ.ÀÀÀÀÀÀ

ಇಂತಹ ವಿಷಕಾರಕಗಳ ಹೊರದೂಡುವ ಇದು ಮನೋಸ್ವಾಸ್ಥ ಮತ್ತು ದೇಹದ ಜೈವಿಕರಾಸಾಯನಿಕಗಳ ಬದಲಾವಣೆಗೆ ಸಹಾಯ ಮಾಡುತ್ತದೆ. ಸದ್ಯ ಭೌತಿಕ ಅಥವಾ ದೈಹಿಕ ನಿರ್ವೀಷೀಕರಣ. ಇದು ವಸ್ತುಗಳ ಭೌತಿಕ ಮಟ್ಟದಲ್ಲೂ ವಿಷಪದಾರ್ಥಗಳನ್ನು ಶೀಘ್ರವಾಗಿ ಹೊರದೂಡುತ್ತದೆ.

ಈ ನಿರ್ವೀಷೀಕರಣವು ದೇಹದಲ್ಲಿನ ಪ್ರಾಣವಾಯು ಸುಲಭವಾಗಿ ಹರಿದು ಅದನ್ನು ಸಬಲಗೊಳಿಸುತ್ತದೆ. ದೇಹದ ನೈಸರ್ಗಿಕ ರೋಗ ನಿರೋಧಕಶಕ್ತಿಯು ಈ ವಿಷಗಳ ಹೊರಹಾಕಲು ವ್ಯರ್ಥ ಶಕ್ತಿ-ಶ್ರಮ ವಹಿಸಬೇಕಾಗುತ್ತದೆ. ಹಲವಾರು ನಿರ್ವೀಷೀಕರಣದ ಪದ್ದತಿಗಳನ್ನು ಬಳಸುವುದರಿಂದ ಉದಾಹರಣೆಗೆ ಪ್ರಾಣಾಯಾಮ,ಧ್ಯಾನ,ಯೋಗಮತ್ತು ಛಠ್ ಆಚರಣೆಗಳು ದೇಹದಲ್ಲಿನ ಬಹುತೇಕ ವಿಷ ಪದಾರ್ಥಗಳನ್ನು ಇಲ್ಲವಾಗಿಸುತ್ತದೆ. ಹೀಗೆ ದೇಹ ನಿರ್ವೀಷೀಕರಣವಾಗುವುದರಿಂದ ಶಕ್ತಿ ವ್ಯಯ ಕಡಿಮೆಯಾಗಿ ನೀವು ಮತ್ತಷ್ಟು ಶಕ್ತಿವಂತರಾಗುತ್ತೀರಾ. ಚರ್ಮದ ಗೋಚರಿಕೆಯಲ್ಲೂ ಅದು ಸುಧಾರಣೆ ತರಬಲ್ಲದು.ದೃಷ್ಟಿಶಕ್ತಿ ಅಧಿಕವಾಗುತ್ತದೆ.ಮುಪ್ಪಿನ ಪ್ರಕ್ರಿಯೆ ಕೂಡಾ ನಿಧಾನಗೊಳ್ಳುತ್ತದೆ.

ಛಠ್ ಪೂಜಾದ ಪ್ರಯೋಜನಗಳು

[ಬದಲಾಯಿಸಿ]

ಛಾಹಾಗ್ರಾಹಿತ-ವಿದ್ಯುತ್-ರಾಸಾಯನಿಕ ಪರಿಣಾಮ:ದೈಹಿಕ ಪ್ರಯೋಜನಗಳು

  1. ಛಠ್ ಪೂಜೆಯು ವೃತಗಾರನ ದೇಹದ ರೋಗ ನ್ರಿಓಧಕ ಶಕ್ತಿ ಸುಧಾರಿಸುತ್ತದೆ.
  2. ನಂಜುಕಾರಕಗಳ ವಿರೋಧೀ ಪರಿಣಾಮ:ಸೂರ್ಯನ ಕಿರಣಗಳಿಂದ ಚರ್ಮದ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳ ನಾಶ.
  3. ರಕ್ತವರ್ಧಕ (ರಕ್ತಕ್ಕೆ ಹೋರಾಟದ ಅಧಿಕ ಶಕ್ತಿ ತುಂಬುತ್ತದೆ):ಛಠ್ ಪೂಜಾವಿಧಾನದಿಂದ ಹೆಚ್ಚಾದ ಕೆಂಪು ರಕ್ತಕಣಗಳಿಂದ ಬಿಳಿ ರಕ್ತಕಣಗಳ ಹೆಚ್ಚಳ.
  4. ಸೌರ ಶಕ್ತಿಯು ಗ್ರಂಥಿಗಳ ಮೇಲೆ ಅತ್ಯಧಿಕ ಪ್ರಭಾವ ಬೀರುತ್ತದೆ.ಇದು ಹಾರ್ಮೋನ್ ಗಳ ಸಮತೋಲನಕ್ಕೆ ಕಾರಣವಾಗುತ್ತದೆ.
  5. ಅಗತ್ಯ ಶಕ್ತಿಯು ನೇರವಾಗಿ ಸೌರ ಮೂಲದಿಂದ ದೊರಕುತ್ತದೆ. ಇದು ಮತ್ತೆ ದೇಹವನ್ನು ಮತ್ತಷ್ಟು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ.

ಛಾಹಾಗ್ರಹಿತ-ವಿದ್ಯುತ್-ಮನೋಬಲದ ಪರಿಣಾಮಗಳು: ಮನಸ್ಸಿಗಾಗುವ ಪ್ರಯೋಜನಗಳು

  1. ಮನಸ್ಸಿನಲ್ಲಿ ಒಂದು ಸ್ಥಿರ ಪ್ರಶಾಂತತೆ ನಿರ್ಮಾಣವಾಗುವುದು.
  2. ಎಲ್ಲಾ ಋಣಾತ್ಮಕ ಪ್ರತಿಕ್ರಿಯೆಗಳು ತಮ್ಮ ಮೂಲದಲ್ಲಿ ಪ್ರಾಣಾಯಾಮದಿಂದಾಗಿ ಅದರ ಹರಿವಿಗೆ ಸಹಾಯಕವಾಗುತ್ತವೆ. ದೇಹದಲ್ಲಿ ಪ್ರಾಣವಾಯು ಸರಿಯಾಗಿ ಹರಿದಾಗ ನಿಯಮಿತಗೊಂಡಾಗ ಕೋಪ,ಅಸೂಹೆ ಅಮ್ತ್ತು ಇನ್ನಿತರ ಋಣಾತ್ಮಕ ಭಾವನೆಗಳು ದೂರಾಗುತ್ತವೆ.
  3. ಶಾಂತತೆಯಿಂದ ಮತ್ತು ಸಂಯಮದಿಂದಾಗಿ ಅಂತಃಸತ್ವ,ಉಪಶಮನಶಕ್ತಿ ಮತ್ತು ಆರನೆಯ ಇಂದ್ರಿಯದ ಟೆಲೆಪತಿ ಕೂಡಾ ಜಾಗೃತಗೊಳ್ಳುತ್ತದೆ. ವೃತಾಚರಣೆಯನ್ನು ಯಾವ ರೀತ್ಸಿ ಕ್ಲೇಂದ್ರೀಕೃತ ಮನೋಸ್ಥಿತಿಯಲ್ಲಿ ಮಾಡಲಾಗಿದೆ ಎಂಬುದರ ಮೇಲೆ ಲಾಭಗಳು ಅವಲಂಬಿತವಾಗಿವೆ.

ಪ್ರತಿನಿತ್ಯ ಸೂರ್ಯ ಧ್ಯಾನ (ಛಠ್ ಪ್ರಕ್ರಿಯೆ)

[ಬದಲಾಯಿಸಿ]

ಇಂದಿನ ಧಾವಂತದ ಜಗತ್ತಿನಲ್ಲಿ ಛಠ್ ಧಾರ್ಮಿಕ ಪ್ರಕ್ರಿಯೆ ಮೇಲಿಂದ ಮೇಲೆ ಆಚರಿಸಲು ಅಡ್ಡಿಗಳು ಎದುರಾಗುತ್ತಿವೆ. ಈ ನಿರ್ವಿಷೀಕರಣವನ್ನು ಪ್ರಾಣಾಯಾಮ,ಯೋಗ,ಧ್ಯಾನ ಮತ್ತು ಸುಷುಪ್ತಿಯ ಫೊಟೊಎನರ್ಜೈಶೇನ್ ಮೂಲಕ ಮಾಡಬಹುದಾಗಿದೆ.ಇದನ್ನು ಛಠ್ ಧ್ಯಾನ ಸಾಧನಾ (CDS)ಎನ್ನುತ್ತಾರೆ.

ಛಠ್ ಧ್ಯಾನ ಸಾಧನಾ (CDS)ಜಾಗೃತ ಫೊಟೊಎನರ್ಜೈಶೇನ್ ಪ್ರಕ್ರಿಯೆ.

ಒಂದು ವಿಶ್ರಾಮ ಸ್ಥಿತಿ ಕಲ್ಪಿಸಿಕೊಳ್ಳಿ (ನಿಂತಾಗ ಅಥವಾ ಕುಳಿತ ಬಹಂಗಿಯಲ್ಲಿ)ಬೆನ್ನು ಮತ್ತು ಬೆನ್ನು ಮೂಳೆಯನ್ನು ನೇರವಾಗಿಡಿ. ಕಣ್ಣು ಮುಚ್ಚಿ ಸೂರ್ಯನೆಡೆಗೆ ಮುಖಮಾಡಿ. ಸಂಪೂರ್ಣ ಉಸಿರನ್ನೊಳಗೆಳೆದುಕೊಳ್ಳಿ,ಸಾಧ್ಯವಾದಷ್ಟು ನಿಧಾನವಾಗಿ. ಉಸಿರಾಟ ನಿಧಾನ ಮಾಡುವಾಗ ದಣಿಯಬೇಡಿ ನಿಮ್ಮ ಉಸಿರಾಟದ ಮಟ್ಟವನ್ನು ಗಮನಿಸಿ ಮುಂದುವರಿಯಿರಿ ನೀವು ನಿಧಾನವಾಗಿ ಉಸಿರಾಡಿದಂತೆ (ಸ್ವತಃ ಅನುಭವಿಸಿ)ಬ್ರಹ್ಮಾಂಡದ ಸೌರ ಶಕ್ತಿ ನಿಮ್ಮ ಮೂಲಕ ಹಾದು ನಿಮ್ಮ ಗ್ರಂಥಿಗಳಲ್ಲಿ ಹಾದು ಆಪ್ಟಿಕ್ ನರಗಳ ಮೂಲಕ ಪಿನೆಯಲ್-ಪಿಟ್ಯುಟರ-ಹೈಪೊಥಾಲ್ಮಸ್ ಸಂಕೀರ್ಣತೆಯಲ್ಲಿ ಪ್ರವರಿಸುತ್ತದೆ. ನೀವು ಉಸುರಾಡಿದಂತೆ ಬ್ರಹ್ಮಾಂಡದ ಶಕ್ತಿ ಸಂಚಯದ ಅನುಭವ ಪಡೆಯುತ್ತೀರಾ.ದೇಹಾದ್ಯಂತದ ಎಲ್ಲಾ ಗ್ರಂಥಿಗಳ ಮೂಲಕ ನಿಮ್ಮ ಎಲ್ಲ ಜೀವಕೋಶಗಳಿಗೆ ತಲುಪಿದ ಅನುಭವ ನಿಮಗಾಗುತ್ತದೆ.ಇದು ಬ್ರಹ್ಮಾಂಡದ ಅಪರೂಪದ ಶಕ್ತಿ ನಿಮ್ಮನ್ನು ಸಧೃಡಗೊಳಿಸುತ್ತದೆ.

ಹೀಗೆ ಈ ಪ್ರಕ್ರಿಯೆ ಉಛ್ವಾಸ ಮತ್ತು ನಿಶ್ವಾಸದ ಮೂಲಕ ಆರಂಭವಾಗುತ್ತದೆ. ಇದು ಒಂದು ಆವೃತ್ತಯಾಗಿ ಮರಕಳಿಸುತ್ತದೆ. ಆದರೆ ಇದನ್ನು ಐದು ಸುತ್ತುಗಳಲ್ಲಿ ಅನುಭವಿಸಿ (ಎರಡು ನಿಮಿಷಗಳು)ನಿಮಗೆ ಅನುಕೂಲವಾದರೆ ವೇಳೆ ಹೆಚ್ಚಿಸಿ. ಈ ಪ್ರಕ್ರಿಯೆ ಅನಂತರ ನೀವು ಸೂರ್ಯನನ್ನು ಅಭಿನಂದಿಸಿ ಆತ ಸಕಲ ಜೀವಕೋಟಿಗೆ ಸೌರ ಶಕ್ತಿಯೊಂದಿಗೆ ಬದುಕು ಕೊಟ್ಟದ್ದನ್ನು ಸ್ಮರಿಸಿ. ನಂತರ ಒಂದು ನಿಮಿಷದ ಕಾಲ ಶಾಂತವಾಗಿರಿ.ನಿಮ್ಮ ಸುತ್ತ ಪರಿಸರದಲ್ಲಿನ ಉತ್ತಮ ವಸ್ತುಗಳತ್ತ ನಿಮ್ಮ ಗಮನ ಹರಿಸಿ.

ಈ CDS ನ್ನು ಸೂರ್ಯೋದಕ್ಕೆ ಮೊದಲು ಒಂದು ಗಂಟೆ ಅಥವಾ ಸೂರ್ಯಾಸ್ತಕ್ಕೆ ಮೊದಲು ಒಂದು ಗಂಟೆಯ ಅವಧಿಯಲ್ಲಿ ಆಚರಿಸಿ. ಯಾವುದೇ ವಯಸ್ಸಿನ ಯಾವುದೇ ವ್ಯಕ್ತಿ CDS ನ್ನು ಆಚರಿಸಬಹುದು.ನೀವು ಇವೆರಡೂ ಸಮಯದಲ್ಲಿ ಮಾಡದೇ ಬೇರೆ ಸಮಯದಲ್ಲಿ CDS ಮಾಡಿದರೆ ಸೂರ್ಯನೆದುರು ಮಾತ್ರ ಮಾಡಬೇಡಿ. ನೀವು ಕೋಣೆಯೊಂದರಲ್ಲಿ CDS ನ್ನು ಆಚರಿಸಿಕೊಳ್ಲಬಹುದು. ಹಾಸಿಗೆ ಹಿಡಿದ ವ್ಯಕ್ತಿ ಕೂಡ ಈ CDS ನ್ನು ಮಾಡುವ ಮೂಲಕ ಸೌರಶಕ್ತಿ ಪಡೆದು ಉತ್ತಮ ಫಲಿತಾಂಶ ಕಾಣಬಹುದು. ನಿಯಮಿತ ಇದನ್ನು ಮಾಡುವುದರೊಂದಿಗೆ ದೈಹಿಕ ಮತ್ತು ಮಾನಸಿಕ ಉತ್ತಮ ಸುಧಾರಣೆಯನ್ನು ಆಕೆ/ಆತ ಪಡೆಯಬಹುದಾಗಿದೆ. ಯಾರು ಸೂರ್ಯನನ್ನು ಎದುರು ಮಾಡಿಕೊಂಡು ಇದನ್ನು ಮಾಡಲಾಗದೋ ಅವರು ಉತ್ತಮ ಗಾಳಿ ಬೆಳಕು ಬರುವ ತಮ್ಮ ಕೊಠಡಿಗಳಲ್ಲಿ ಮಾಡಿ ಪ್ರಯೋಜನ ಪಡೆಯಲು ಸಾಧ್ಯ. ನಿಮಗೆ ಸಮಯವಿದ್ದರೆ ದಿನಕ್ಕೆ ಎರಡು ಬಾರಿ ಮಾಡಬಹುದು. ಶೀಘ್ರದಲ್ಲೇ ಸುತ್ತುಗಳ ಹೆಚ್ಚಳಕ್ಕೆ ಧಾವಂತ ಮಾಡಬೇಡಿ,ಇದರಲ್ಲಿನ ಯಶಸ್ವಿಗೆ ಅಡ್ಡ ಮಾರ್ಗ ಅಥವಾ ಕಿರುದಾರಿಗಳಿಲ್ಲ. ದೇಹದಲ್ಲಿನ ನರಮಂಡಲವು ಸುಧಾರಣೆಗೆ ತನ್ನದೇ ಆದ ಸಮಯ ಪರಿಮಿತಿ ಹೊಂದಿದೆ.ಅದಕ್ಕೆ ಬೇಕಾದಾಗ ಅದು ಶಕ್ತಿ ಪಡೆಯುವ ಸಾಮರ್ಥ್ಯ ಅದಕ್ಕಿದೆ.

ಸೂರ್ಯಾಸ್ತ ಮತ್ತು ಸೂರ್ಯೋದಯದ ಪ್ರಮುಖ ಅಂಶಗಳ ಪರಿಗಣಿಸುವುದು ಉತ್ತಮ ವಿಧಾನ.

ಕೇವಲ ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಮಾತ್ರ ಮನುಷ್ಯರು ನೇರವಾಗಿ ಸೂರ್ಯನಿಂದ ಶಕ್ತಿ ಪಡೆಯಬಹುದಾಗಿದೆ. ಹೇಗೆಯಾದರೂ ಕೆಲವೆಡೆ ಅಪವಾದದ ಉದಾಹರಣೆಗಳುಂಟು. ಆದ್ದರಿಂದಲೇ ಛಠ್ ಪೂಜೆಯಲ್ಲಿ ಸಾಂಪ್ರದಾಯಿಕವಾಗಿ ಅಸ್ತಮಿಸುವ ಮತ್ತು ಉದಯಿಸುವ ಸೂರ್ಯನಿಗೆ ಮಾತ್ರ ಅರ್ಘ್ಯ ನೀಡಲಾಗುತ್ತದೆ. ಈ ಹಂತಗಳಲ್ಲಿ (ಸೂರ್ಯೋದಯ ಮತ್ತು ಸೂರ್ಯಾಸ್ತದ ಒಂದು ಗಂಟೆ ಮೊದಲು)ನೇರಳೆವಿಕಿರಣ ವಿಕಿರಣಗಳ ಮಟ್ಟ ಒಂದೇ ಇರುತ್ತದೆ.ಇದು ಸುರಕ್ಷಿತ ಮಟ್ಟ ಕಾಯ್ದುಕೊಂಡಿರುವಂತೆ ನೋಡಿಕೊಳ್ಳಬೇಕು.

ಛಠ್ ಪೂಜಾ ವಿಧಾನದ ಚಿತ್ರಗಳು

[ಬದಲಾಯಿಸಿ]

ಗಹಮರ್ ಘಾಜಿಪಿರದ ಛಠ್ ಪೂಜಾ ಡಿ

ಉಲ್ಲೇಖಗಳು

[ಬದಲಾಯಿಸಿ]
  1. http://www.aryabhatt.com/fast_fair_festival/Festivals/Chhath%20Festival.htm
  2. "Surat 1 lakh to celebrate chhath puja". Jai Bihar. October 22, 2009. Archived from the original on 2010-01-03. Retrieved 2009-12-14.
  3. "15 lakh to observe Chhath Puja in Delhi". Jai Bihar. October 22, 2009. Archived from the original on 2009-11-02. Retrieved 2009-12-14.
  4. "Juhu Beach decks up for worshiping the sun god". DNA India. October 24, 2009. Retrieved 2009-12-14.
  5. "Festive fervour reaches Fiji, Mauritius". The Telegraph - Calcutta(Kolkata). October 24, 2009. Archived from the original on 2012-10-23. Retrieved 2009-12-14.
  6. "Chaiti Chhath to start today". Jai Bihar. March 30, 2009. Archived from the original on 2010-01-04. Retrieved 2009-12-14.
  7. http://www.experiencefestival.com/etymology_of_india
  8. ಶ್ರೀ ಛಠ್ ಮಹಾವಿಜ್ಞಾನ (ದಿ ಸೈನ್ಸ್ ಆಫ್ ಛಠ್) ಬೈ ಯೋಗಿಶ್ರೀ ಓಂಕಾರ
  9. https://web.archive.org/web/20110813124415/http://chhathpuja.webs.com/meaningofwordchhath.htm


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಛಠ್&oldid=1167130" ಇಂದ ಪಡೆಯಲ್ಪಟ್ಟಿದೆ