ವಿಷಯಕ್ಕೆ ಹೋಗು

ವಿ. ಎಸ್. ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ವಿ. ಎಸ್. ಆಚಾರ್ಯ ಇಂದ ಪುನರ್ನಿರ್ದೇಶಿತ)
ಮಧ್ಯದಲ್ಲಿ ವಿ. ಎಸ್. ಆಚಾರ್ಯ

"ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ"ರವರು, ಕರ್ನಾಟಕ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾಗಿದ್ದರು. ಇವರು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿ [] ಸೇವೆಸಲ್ಲಿಸಿದ್ದಾರೆ. ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಮತ್ತು ಮೂರು ಬಾರಿ ಸತತವಾಗಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಆಚಾರ್ಯ ಅವರು ಜೆ.ಡಿ.ಎಸ್‌../-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 'ವೈದ್ಯಕೀಯ ಶಿಕ್ಷಣ' ಮತ್ತು 'ಪಶು ಸಂಗೋಪನೆ' ಸಚಿವರಾಗಿದ್ದರು. ಅವರ ರಾಜಕೀಯ ಜೀವನದಲ್ಲೂ ನಿಷ್ಕಳಂಕ ವ್ಯಕ್ತಿಯಾಗಿ ಬಾಳಿದ ಆಚಾರ್ಯರ ಕಾರ್ಯವಿಧಿಗಳಲ್ಲಿ ಪಾರದರ್ಶಕತೆ, ಎದ್ದು ಕಾಣಿಸುತ್ತಿತ್ತು. ಅವರನ್ನು ಒಬ್ಬ 'ಬೃಹಸ್ಪತಿ'ಯೆಂದು ಎಲ್ಲರೂ ಪರಿಗಣಿಸಿದ್ದರು. ಅರ್ಥಶಾಸ್ತ್ರಜ್ಞ,ಶಿಕ್ಷಣತಜ್ಞ,ಪತ್ರಿಕೋದ್ಯಮಿ,ಸಾಹಿತಿ,ರಾಜತಾಂತ್ರಿಕ ಹಾಗೂ ವೃತ್ತಿಯಲ್ಲಿ ಒಬ್ಬ ವೈದ್ಯ, ಹೀಗೆ ಅವರು ಒಬ್ಬ ಮುತ್ಸದ್ಧಿಯಾಗಿ ಎಲ್ಲರಿಗೂ ಮಾರ್ಗದರ್ಶನಮಾಡುತ್ತಿದ್ದರು.

ನಿರಂತರವಾಗಿ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದರು

[ಬದಲಾಯಿಸಿ]
  • ೧೯೫೯ ರಲ್ಲಿ ವೈದ್ಯಕೀಯ ಪದವಿಯನ್ನು ಗಳಿಸಿ ರಾಜಕೀಯಕ್ಕೆ ಪದಾರ್ಪಣೆಮಾಡಿದರು.
  • ೧೯೬೮ ರಲ್ಲೇ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಆಯ್ಕೆ,
  • ೧೯೭೪ ರಲ್ಲಿ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆ,
  • ೧೯೭೭ ರಲ್ಲಿ ಜಿಲ್ಲಾ ಧ್ಯಕ್ಷರಾಗಿ ಆಯ್ಕೆ,
  • ೧೯೮೩ ರಲ್ಲಿ ಶಾಸಕರಾಗಿ ಆಯ್ಕೆ,
  • ೧೯೮೪ ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ,
  • ೨೦೦೩ ರಿಂದ ಕರ್ನಾಟಕ ಎಮ್. ಏಲ್. ಸಿ. ಯಾಗಿ ಸೇವೆಸಲ್ಲಿಸಿದ್ದರು.

೧೯೬೮ರಲ್ಲಿ [] ಅದರ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಉಡುಪಿ ನಗರ ಸಭ ಸದಸ್ಯ, ಅಧ್ಯಕ್ಷಗಿ ರಾಜಕೀಯ ವಲಯಕ್ಕೆ ಧಾವಿಸಿದ ನಾಲ್ಕು ದಶಕಗಳ ಕಾಲ ಸುದೀರ್ಘ ಅನುಭವ, ಪಕ್ಷನಿಶ್ಠೆ, ಗಳಿಂದ ಬಿಜೆಪಿ ಪಕ್ಷದ ಹಿರಿಯ ರಾಜಕೀಯ ಮುತ್ಸತ್ತಿಯೆಂದು ಹೆಸರಾದರು ಇವರು ದಕ್ಷೀಣ ಭಾರತದ ಮೊದಲ ಭಾರತೀಯ ಜನಸಂಘದ ಚುನಾಯಿತರಾಗಿ, ಪ್ರಸಿದ್ಧಿ ಪಡೆದಿದ್ದರು. ಬಿಜೆಪಿಯ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅದ್ವಾನಿಅವರು ಹೇಳಿದಂತೆ, ಅ೯೬೮ರಲ್ಲಿ ಜನಸಂಘದ ವಿಜಯ ದಕ್ಷೀಣ ಭಾರತದಲ್ಲಿ ಬಿಜೆಪಿ ಸರ್ಕಾರಕ್ಕೆ ನಾಂದಿಹಾಡಿ, ನಲವತ್ತು ವರ್ಷದ ನಂತರ ೨೦೦೮ರಲ್ಲಿ ಕರ್ನಾಟಕದಲ್ಲಿ ಸರ್ಕಾರದ ಚುಕ್ಕಾಣಿಹಿಡಿದಿದೆ. ಇವರು ೧೯೮೩ರಲ್ಲಿ ಚುನಾಯಿತ ಶಾಸಕರಾಗಿದ್ದರು. ಇಂದಿರಾ ಗಾಂಧಿಯವರ ಆಡಳಿತದ ಸಮಯದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ,ಜನಸಂಘದಲ್ಲಿ ಕೆಲಸಮಾಡುತ್ತಿದ್ದ ಆಚಾರ್ಯರು, ೧೮ ತಿಂಗಳು ಜೈಲುವಾಸವನ್ನು ಅನುಭವಿಸಿದರು.

ಜನನ,ವಿದ್ಯಾಭ್ಯಾಸ ಹಾಗೂ ಪರಿವಾರ

[ಬದಲಾಯಿಸಿ]

ತಂದೆ, ಕಟ್ಟೆ ಶ್ರೀನಿವಾಸ ಹಾಗೂ ಕೃಷ್ಣವೇಣಿ ಅಮ್ಮ ದಂಪತಿಗಳ ಪುತ್ರನಾಗಿ ಸನ್, ೧೯೩೯ ರಲ್ಲಿ ಜನಿಸಿದರು. ಪತ್ನಿ, ಶಾಂತಾ ವಿ.ಆಚಾರ್ಯ, ಪುತ್ರರಾದ ಡಾ| ರವಿರಾಜ ಆಚಾರ್ಯ, ಡಾ| ಕಿರಣ್‌ ಆಚಾರ್ಯ, ಗಣೇಶ ಪ್ರಸಾದ್‌, ರಾಜೇಶ್‌ ಪ್ರಸಾದ್‌, ಪುತ್ರಿ, ಭಾರತೀ ಎಂ. ಹೆಬ್ಟಾರ್‌..... ..

ಹಲವು ಸುಧಾರಣೆಗಳು ಜಾರಿಗೆ ಬಂದವು

[ಬದಲಾಯಿಸಿ]

ಅವರ ಕಾರ್ಯಾವಧಿಯಲ್ಲಿ ತಲೆಯಮೇಲೆ ಮಲವನ್ನು ಹೊರುವ ಅನಿಷ್ಠ ಪದ್ಧತಿಗೆ ದೇಶದಲ್ಲಿ ಮೊಟ್ಟಮೊದಲ ಬಾರಿಗೆ, ತೆರೆ ಎಳೆದರು. ನೂತನ ನಗರಾಡಳಿತ ಕಚೇರಿ, ಒಳಚರಂಡಿ ವ್ಯವಸ್ಥೆ, ನಗರಲ್ಲಿ ಸುಧಾರಿತ ರಸ್ತೆಗಳು, ನಗರ ಸುಧಾರಣಾ ಮಂಡಳಿ ಮುಂತಾದವುಗಳು ಇವರ ಕಾರ್ಯಾವಧಿಯಲ್ಲಿ ಜಾರಿಗೆ ಬಂದವು.

೭೨ ವರ್ಷ ಪ್ರಾಯದ, ಡಾ.ಬಿ.ಎಸ್.ಆಚಾರ್ಯರವರು, ಫೆಬ್ರವರಿ,೧೪, ಮಂಗಳವಾರ ಉಡುಪಿಯಿಂದ ಕಾರಿನಲ್ಲಿ ಮಂಗಳೂರಿಗೆ ಬಂದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರಕಾರಿ ಕಲಾವಿಜ್ಞಾನ ಕಾಲೇಜಿನಲ್ಲಿ 'ಕರ್ನಾಟಕ ರಾಜ್ಯಸರಕಾರಿ ಪ್ರಾಂಶುಪಾಲರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಭಾಗವಹಿಸಲು ಬರಬೇಕಾಗಿತ್ತು. ಆದರೆ, ಪ್ರಯಾಣದ ಕಾಲದಲ್ಲಿ ೨ ಗಂಟೆ ತಡವಾಯಿತು. ಗಡಿಬಿಡಿಯಲ್ಲಿ ವೇದಿಕೆಯ ಮೇಲೆ ಹತ್ತಿ ಬರಲು ಪ್ರಯತ್ನಿಸಿದಾಗ, ಅಲ್ಲಿಯೇ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥರಾದರು. ಕೂಡಲೆ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ,ಫೆಬ್ರುವರಿ ೧೪ ೨೦೧೨ [] ರಂದು ಬೆಂಗಳೂರಿನಲ್ಲಿ ಆದರೆ ಚಿಕಿತ್ಸೆಗಳಿಗೆ ಅವರ ಶರೀರ ಸ್ಪಂದಿಸದೇ ವಿಧಿವಶವಾದರು. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ, 'ಮಂಗಳೂರು ವಿಮಾನನಿಲ್ದಾಣ'ಕ್ಕೆ ಕರೆತರಲಾಯಿತು. ಉಡುಪಿಯ ಅವರ ಮನೆಗಯಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಿದ ಬಳಿಕ, ಅವರ ಪಾರ್ಥಿವ ದೇಹವನ್ನು ಮಣಿಪಾಲ್ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರ ಬಳಿಕ, 'ಉಡುಪಿಯ ಬೀಡಿನ ಗುಡ್ಡೆಯ ಹಿಂದೂ ರುದ್ರಭೂಮಿ'ಯಲ್ಲಿ ಅಂತ್ಯ ಕ್ರಿಯೆ ಜರುಗಿತು. ಆ ಸಮಯದಲ್ಲಿ, ಲಾಲ್ ಕೃಷ್ಣ ಅದ್ವಾನಿ, ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಎಡಿಯೂರಪ್ಪ, ಅನಂತ ಕುಮಾರ್, ಧನಂಜಯ ಕುಮಾರ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಮೊದಲಾದವರು ಉಪಸ್ಥಿತರಿದ್ದರು.

ಆಧಾರಾಗಳು

[ಬದಲಾಯಿಸಿ]
  1. "Smalland trvialincidents Acharya". Indian Express. Archived from the original on 2009-02-10. Retrieved 2009-09-07.
  2. {{cite web url=http://kla.kar.nic.in/mlc'list/Sri%20V%20s%20Acharya.htm%7Ctitle=V.S.Acharya%7Caccessdate= 2009-09-07 |publisher=http://kla.kar.nic.in}}
  3. "Karnataka Minister V.S. Acharya dies". The Hindu. February 14, 2012. {{cite web}}: |access-date= requires |url= (help); Missing or empty |url= (help); Unknown parameter |rl= ignored (help)


  • ಖಾಸಗಿ ಬ್ಲಾಗ್ :

[೧]