ವಿಷಯಕ್ಕೆ ಹೋಗು

ಬೈಗುಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದೂಷಣೆ ಇಂದ ಪುನರ್ನಿರ್ದೇಶಿತ)
ಅಪವಾದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆರೋಪ ಲೇಖನಕ್ಕಾಗಿ ಇಲ್ಲಿ ನೋಡಿ.

ಬೈಗುಳವನ್ನು (ನಿಂದೆ) ಬಲಿಪಶುವಿಗೆ ಹೇಳಲಾದ ಅಥವಾ ಬಲಿಪಶು ಬಗ್ಗೆ ಹೇಳಲಾದ, ಅಥವಾ ಯಾವುದೇ ಪ್ರತಿಕ್ರಿಯೆಯನ್ನು ತಡೆಹಿಡಿದು ಗುರಿಯು ಅಸ್ತಿತ್ವದಲ್ಲಿಲ್ಲವೆಂದು ವ್ಯಾಖ್ಯಾನಿಸಿ ಕೊಡಲಾದ ಒಂದು ನಕಾರಾತ್ಮಕ ವ್ಯಾಖ್ಯಾನದ ಹೇಳಿಕೆ ಎಂದು ವರ್ಣಿಸಲಾಗುತ್ತದೆ. ನಿಂದಿಸುವವನು ತಕ್ಷಣ ಕ್ಷಮೆಯಾಚಿಸಿ ವ್ಯಾಖ್ಯಾನದ ಹೇಳಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಸಂಬಂಧವು ತೆಗಳಿಕೆಭರಿತವಾಗಿರಬಹುದು.[]. ಸಿಟ್ಟು ಬೈಗುಳವಿರುವ ವರ್ತನೆಯ ಹಿಂದೆ ಇರುತ್ತದೆ, ಅದನ್ನು ಪ್ರೇರೇಪಿಸುತ್ತದೆ ಮತ್ತು ಅದನ್ನು ಶಾಶ್ವತವಾಗಿಸುತ್ತದೆ.

ಶಾಲೆಗಳಲ್ಲಿ ಮತ್ತು ದೈನಂದಿನ ಜೀವನದಲ್ಲಿ, ಉದ್ದೇಶಿತ ವ್ಯಕ್ತಿಗಿಂತ ಉತ್ತಮ ಸ್ಥಾನಮಾನ ಗಳಿಸಲು ಮತ್ತು ಗುರಿಯ ವಿರುದ್ಧ ಇತರರೊಡನೆ ಸೇರಿಕೊಳ್ಳಲು ಒಬ್ಬ ವ್ಯಕ್ತಿಯು ಬೈಗುಳದಲ್ಲಿ ತೊಡಗಬಹುದು-ಬೆದರಿಸುವುದು (ಹಲವುವೇಳೆ ದೈಹಿಕ ಅಂಶವನ್ನು ಹೊಂದಿರುತ್ತದೆ). ಸಾಮಾನ್ಯವಾಗಿ ಬೆದರಿಸುವವನಿಗೆ ಇತರರೊಡನೆ ಭಾವನಾತ್ಮಕವಾಗಿ ಸಂಬಂಧ ಬೆಳೆಸಲು ಬೇರೆ ಯಾವುದೇ ರೀತಿ ತಿಳಿದಿರುವುದಿಲ್ಲ.

ಪ್ರಣಯ ಸಂಬಂಧಗಳಲ್ಲಿ, ನಿಂದಿಸುವವನು ಜತೆಗಾರನ "ಪ್ರತ್ಯೇಕತೆ"ಗೆ ಪ್ರತಿಕ್ರಿಯಿಸುತ್ತಿರಬಹುದು, ಅಂದರೆ, ಸ್ವತಂತ್ರ ಭಾವನೆಗಳು, ದೃಷ್ಟಿಕೋನಗಳು, ಬಯಕೆಗಳು, ಅನಿಸಿಕೆಗಳು, ಅಭಿವ್ಯಕ್ತಿಗಳು (ಸಂತೋಷ ಸೇರಿದಂತೆ), ಇವುಗಳನ್ನು ನಿಂದಿಸುವವನು ಬೆದರಿಕೆ, ಉದ್ರೇಕಕಾರಿ ಅಥವಾ ಆಕ್ರಮಣವಾಗಿ ನೋಡಬಹುದು. ನಿಂದಿಸುವವನು ಕಡಿಮೆ ಆತ್ಮಗೌರವವನ್ನು ಹೊಂದಿರುವುದರಿಂದ ತನ್ನ ಬಲಿಪಶುವನ್ನು ಸಮಾನ ಸ್ಥಾನದಲ್ಲಿ ಇಡಲು ಪ್ರಯತ್ನಿಸುತ್ತಾನೆ ಎಂದು ಕೆಲವು ಜನರು ನಂಬುತ್ತಾರೆ, ಅಂದರೆ ತಮ್ಮ ಬಗ್ಗೆ ನಕಾರಾತ್ಮಕ ವಿಷಯಗಳನ್ನು ನಂಬುವುದು. ನಿಂದಿಸುವವನಿಗೆ ಪ್ರಾಧಾನ್ಯ ಬೇಕಾಗಿರುವುದರಿಂದ ಮತ್ತು ತನ್ನ ಜತೆಗಾರನನ್ನು ಸಮಾನನೆಂದು ಸ್ವೀಕರಿಸಲು ಇಷ್ಟಪಡದಿರುವುದರಿಂದ, ಬೈಗುಳದ ಬಗ್ಗೆ ಜತೆಗಾರನ ಗ್ರಹಿಕೆಗಳನ್ನು ಇಲ್ಲವಾಗಿಸಲು ನಿಂದಿಸುವವನು ಪ್ರಯತ್ನಿಸುತ್ತಾನೆ, ಇದು ಬಲಿಪಶುವಿಗೆ ಹೆಚ್ಚು ಮಾನಸಿಕ ನೋವು ಉಂಟುಮಾಡುತ್ತದೆ. ಇದನ್ನು ಗ್ಯಾಸ್‍ಲೈಟಿಂಗ್ ಅಥವಾ ಜೆಕಿಲ್ ಹೈಡ್ ವರ್ತನೆ ಎಂದೂ ಕರೆಯಲಾಗುತ್ತದೆ, ಏಕೆಂದರೆ ನಿಂದಿಸುವವನು ತನ್ನ ಬಿಸಿ-ತಂಪು ಅನಿರೀಕ್ಷಿತ ವರ್ತನೆಯಿಂದ ಬೈಗುಳದ ಗುರಿಯನ್ನು ಸಮತೋಲನರಹಿತವಾಗಿ ಇಡುತ್ತಾನೆ. ಈ ಗೊಂದಲವು ಮಾನಸಿಕ ನಿಂದೆಯಿಂದ ಉಂಟಾದ ನೋವಿಗೆ ಸೇರಿಕೊಳ್ಳುತ್ತದೆ ಮತ್ತು ಬಲಿಪಶುವನ್ನು ಸಮತೋಲನರಹಿತವಾಗಿ ಮಾಡಿಬಿಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. The Verbally Abusive Relationship, Patricia Evans. Adams Media Corp 1992, 1996, 2010


"https://kn.wikipedia.org/w/index.php?title=ಬೈಗುಳ&oldid=849570" ಇಂದ ಪಡೆಯಲ್ಪಟ್ಟಿದೆ