ವಿಷಯಕ್ಕೆ ಹೋಗು

ಬಿಲ್ ಗೇಟ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೀಲ್ ಗೇಟ್ ಇಂದ ಪುನರ್ನಿರ್ದೇಶಿತ)
ಬಿಲ್ ಗೇಟ್ಸ್
Born (1955-10-28) ೨೮ ಅಕ್ಟೋಬರ್ ೧೯೫೫ (ವಯಸ್ಸು ೬೯)
Alma materಹಾರ್ವರ್ಡ್ ವಿಶ್ವವಿದ್ಯಾಲಯ(ಪದವಿ ಮೊಟಕುಗೊಳಿಸಿದ್ದು - 1975)
Occupation(s)ಮೈಕ್ರೋಸಾಫ್ಟ್ ಅಧ್ಯಕ್ಷ
ಬಿಲ್ & ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಉಪಾಧ್ಯಕ್ಷ
Spouseಮೆಲಿಂದಾ ಗೇಟ್ಸ್ (1994-೨೦೨೧-೦೫-೦೩)
Childrenಜೆನಿಫರ್ ಕ್ಯಾಥರೀನ್ ಗೇಟ್ಸ್ (ಹು.1996)
ರೋರಿ ಜಾನ್ ಗೇಟ್ಸ್ (ಹು.1999)
ಫೋಬ್ ಅಡೆಲ್ ಗೇಟ್ಸ್(ಹು.2002)
Websiteಬಿಲ್ ಗೇಟ್ಸ್
Signature

ವಿಲಿಯಂ ಹೆನ್ರಿ "ಬಿಲ್‌" ಗೇಟ್ಸ್‌ III (ಅಕ್ಟೋಬರ್‌ 28, 1955ರಲ್ಲಿ ಜನನ)[] ರವರು ಅಮೆರಿಕದ ಪ್ರಭಾವಿ ಉದ್ಯಮಿ , ಪರೋಪಕಾರಿ ಮತ್ತು ಪಾಲ್‌ ಅಲೆನ್‌ ಜೊತೆಗೂಡಿ ತಾವೇ ಸ್ಥಾಪಿಸಿದ ಮೈಕ್ರೋಸಾಫ್ಟ್‌ ಎಂಬ ಸಾಫ್ಟ್‌ವೇರ್‌ ಕಂಪನಿಯ ಅಧ್ಯಕ್ಷ.[] ಇವರು ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿದ್ದಾರೆ[] ಮತ್ತು ಒಟ್ಟಾರೆಯಾಗಿ 2009 ರವರೆಗಿನ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[]

ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ, CEO ಹಾಗೂ ಮುಖ್ಯ ಸಾಫ್ಟ್‌ವೇರ್‌ ವಿನ್ಯಾಸಕನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಂಪನಿಯ ಸಾಮಾನ್ಯ ಸ್ಟಾಕ್‌ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್‌ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ.[] ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ-ಲೇಖಕರಾಗಿದ್ದಾರೆ.

ಪರ್ಸನಲ್‌ ಕಂಪ್ಯೂಟರ್‌ ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿಗಳಲ್ಲಿ ಬಿಲ್‌ ಗೇಟ್ಸ್‌ ಒಬ್ಬರು.ಹಲವರು ಇವರನ್ನು ಮೆಚ್ಚಿಕೊಂಡಿದ್ದಾರಾದರೂ, ಇವರ ವ್ಯಾಪಾರಿ ಕಾರ್ಯತಂತ್ರಗಳು ಸ್ಪರ್ಧಾಕ್ಮತೆಯ-ವಿರೋಧಿ ಎಂದು ಉದ್ಯಮದೊಳಗಿನ ಬಹಳಷ್ಟು ಮಂದಿ ಟೀಕಿಸುತ್ತಾರೆ. ಈ ಅಭಿಪ್ರಾಯವನ್ನು ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಮೈಕ್ರೋಸಾಫ್ಟ್‌ನ ಕುರಿತಾದ ಟೀಕೆಯನ್ನು ನೋಡಿ).[][]

ತಮ್ಮ ವೃತ್ತಿಜೀವನದ ನಂತರದ ಘಟ್ಟಗಳಲ್ಲಿ, ಬಿಲ್‌ & ಮೆಲಿಂಡ ಗೇಟ್ಸ್‌ ಪ್ರತಿಷ್ಠಾನದ ಮೂಲಕ ಹಲವು ದತ್ತಿ ಪ್ರತಿಷ್ಠಾನಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಧನ ಸಹಾಯ ಮಾಡುವ ಮೂಲಕ ಹಲವು ಪರೋಪಕಾರಿ ಸಾಹಸಗಳಲ್ಲಿ ಗೇಟ್ಸ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

2000ರ ಜನವರಿಯಲ್ಲಿ ಬಿಲ್‌ ಗೇಟ್ಸ್‌ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದರು. ಇದರ ನಂತರ ಕೇವಲ ಅಧ್ಯಕ್ಷರಾಗಿ ಉಳಿದ ಇವರು ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕ ಎಂಬ ನೂತನ ಹುದ್ದೆಯನ್ನು ಸೃಷ್ಟಿಸಿದರು. ತಾವು ಮೈಕ್ರೋಸಾಫ್ಟ್‌ನ ಪೂರ್ಣಕಾಲಿಕ ಹುದ್ದೆಯಿಂದ ಅರೆಕಾಲಿಕ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಹಾಗೂ ಬಿಲ್‌ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ‌ದಲ್ಲಿ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳುವುದಾಗಿ 2006ರ ಜೂನ್‌ನಲ್ಲಿ ಗೇಟ್ಸ್‌ ಪ್ರಕಟಿಸಿದರು. ಇವರು ಕ್ರಮೇಣವಾಗಿ ತಮ್ಮ ಜವಾಬ್ದಾರಿಗಳನ್ನು ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕರಾಗಿದ್ದ ರೇ ಓಝೀಹಾಗೂ ಸಂಶೋಧನೆ ಮತ್ತು ಕಾರ್ಯತಂತ್ರಗಳ ಮುಖ್ಯಾಧಿಕಾರಿಯಾದ್ದ ಕ್ರೇಗ್ ಮುಂಡೀಯವರಿಗೆ ವರ್ಗಾಯಿಸಿದರು. 2008ರ ಜೂನ್‌ 27 ಮೈಕ್ರೋಸಾಫ್ಟ್‌ನಲ್ಲಿನ ಬಿಲ್‌ ಗೇಟ್ಸ ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದರು. ಈಗ ಅವರು ಮೈಕ್ರೋಸಾಫ್ಟ್‌ನ ಅಕಾರ್ಯಕಾರಿ ಅಧ್ಯಕ್ಷರಾಗಷ್ಟೇ ಉಳಿದಿದ್ದಾರೆ.

ಬಾಲ್ಯ ಜೀವನ

ಇಂಗ್ಲಿಷ್, ದಲ್ಬೈಒದ್ ಜರ್ಮನ್, ಐರಿಷ್, ಸ್ಕಾಟಿಷ್ ತಲೆಮಾರಿನ ವಿಲಿಯಂ ಎಚ್. ಗೇಟ್ಸ್, Sr. ಮತ್ತು ಮೇರಿ ಮ್ಯಾಕ್ಸ್‌ವೆಲ್‌ ಗೇಟ್ಸ್‌ ದಂಪತಿಗಳ ಮಗನಾಗಿ ವಾಷಿಂಗ್ಟನ್‌ಸಿಯಾಟಲ್‌ನಲ್ಲಿ ಗೇಟ್ಸ್‌ ಜನಿಸಿದರು.[][] ಇವರದು ಮೇಲ್ಮಧ್ಯಮ ವರ್ಗದ ಕುಟುಂಬ; ಇವರ ತಂದೆ ಪ್ರಖ್ಯಾತ ವಕೀಲರಾಗಿದ್ದರು ಮತ್ತು ಇವರ ತಾಯಿ ಫಸ್ಟ್‌ ಇಂಟರ್‌ಸ್ಟೇಟ್ ಬ್ಯಾಂಕ್‌ಸಿಸ್ಟಮ್‌ ಮತ್ತು ಯುನೈಟೆಡ್‌ ವೇ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲೊಬ್ಬರಾಗಿ ಸೇವೆ ಸಲ್ಲಿಸಿದ್ದರು. ಆಕೆಯ ತಂದೆ ಜೆ. ಡಬ್ಲ್ಯು. ಮ್ಯಾಕ್ಸ್‌ವೆಲ್, ನ್ಯಾಷನಲ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಗೇಟ್ಸ್‌ಗೆ ಕ್ರಿಸ್ಟಿ (ಕ್ರಿಸ್ಟಿಯಾನ್ನೆ) ಎಂಬ ಹೆಸರಿನ ಒಬ್ಬರು ಅಕ್ಕ ಮತ್ತು ಲಿಬ್ಬಿ ಎಂಬ ಹೆಸರಿನ ಒಬ್ಬರು ತಂಗಿ ಇದ್ದಾರೆ. ಇವರು ತಮ್ಮ ಕುಟುಂಬದಲ್ಲಿನ ಗೇಟ್ಸ್‌ ಹೆಸರಿನ ನಾಲ್ಕನೇ ವ್ಯಕ್ತಿಯಾಗಿದ್ದರೂ ಸಹ, ವಿಲಿಯಂ ಗೇಟ್ಸ್‌ III ಅಥವಾ "ಟ್ರೇ" ಎಂದೇ ಅವರನ್ನು ಕರೆಯಲಾಗುತ್ತಿತ್ತು. ಏಕೆಂದರೆ ಅವರ ತಂದೆ ತಮ್ಮದೇ ಹೆಸರಿನ ಮುಂದಿದ್ದ III ಎಂಬ ಉತ್ತರ ಪ್ರತ್ಯಯವನ್ನು ಕೈಬಿಟ್ಟಿದ್ದರು.[೧೦] ಇವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು.[೧೧]

ಇವರು ತಮ್ಮ 13ನೇ ವಯಸ್ಸಿನಲ್ಲಿ ಲೇಕ್‌ಸೈಡ್‌ ಸ್ಕೂಲ್‌ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಾದರು[೧೨]. ಇವರು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯ ಮದರ್ಸ್‌ ಕ್ಲಬ್‌, ಲೇಕ್‌ಸೈಡ್‌ ಕೊಕ್ಕ್ಗ್ಕ್ಗುಜರಿ ಮಾರಾಟದಿಂದ ಬಂದ ಆದಾಯವನ್ನು ಶಾಲೆಯ ಮಕ್ಕಳಿಗೆ ASR-33 ಟೆಲಿಪ್ರಿಂಟರ್‌ ಸಾಧನ‌ ಮತ್ತು ‌ಜನರಲ್ ಎಲೆಕ್ಟ್ರಿಕ್(GE) ಕಂಪ್ಯೂಟರ್‌ನ, ಕಂಪ್ಯೂಟರ್‌ ಸಮಯದ ಒಂದು ವಿಭಾಗವನ್ನು ಕೊಳ್ಳಲು ಬಳಸಿಕೊಂಡಿತು.[೧೩] ಗೇಟ್ಸ್‌ BASICನಲ್ಲಿ GE ಸಿಸ್ಟಮ್‌ನ್ನು ಪ್ರೋಗ್ಯ್ರಾಮ್‌ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್‌ ತಮ್ಮ ಮೊದಲ ಕಂಪ್ಯೂಟರ್‌ ಪ್ರೊಗ್ರಾಮ್‌ ಅನ್ನು ಬರೆದರು. ಇದು ಟಿಕ್‌-ಟ್ಯಾಕ್‌-ಟೋ ಎಂಬ ವಿಶಿಷ್ಟ ಚೌಕದಾಟದ ಅಳವಡಿಕೆಯಾಗಿದ್ದು, ಕಂಪ್ಯೂಟರ್‌ಗೆ ಎದುರಾಗಿ ಕುಳಿತು ಬಳಕೆದಾರರು ಆಟಗಳನ್ನಾಡಲು ಇದು ಅವಕಾಶ ಒದಗಿತು. ಈ ಯಂತ್ರದಿಂದ ಮತ್ತು ತಂತ್ರಾಂಶದ ಸಂಕೇತಗಳನ್ನು (ಸಾಫ್ಟ್‌ವೇರ್‌ ಕೋಡ್‌ಗಳನ್ನು) ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಇದರ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್‌ರವರು ಮೋಡಿಗೊಳಗಾಗಿದ್ದರು. ತನ್ನ ವಿಚಾರ ಮಂಥನದಿಂದ ಆ ಕ್ಷಣಕ್ಕೆ ಹಿಂದಕ್ಕೆ ಬಂದ ಅವರು ಆ ಕುರಿತು ವರ್ಣಿಸುತ್ತಾ, "ಈ ಯಂತ್ರದಲ್ಲಿ ಅಚ್ಚುಕಟ್ಟುತನದಿಂದ ಕೂಡಿರುವಂಥಾದ್ದೇನೋ ಇತ್ತು" ಎಂದು ಉದ್ಗರಿಸಿದರು.[೧೪] ಮದರ್ಸ್ ಕ್ಲಬ್‌ನ ದೇಣಿಗೆ ಖಾಲಿಯಾದ ಮೇಲೆ, ಗೇಟ್ಸ್‌ ಮತ್ತು ಇತರೆ ವಿದ್ಯಾರ್ಥಿಗಳು DEC [[ಪ್ರೋಗ್ಯ್ರಾಮ್‌ ಮಾಡಲಾದ ದತ್ತಾಂಶ ಸಂಸ್ಕಾರಕ |PDP]] ಮಿನಿಕಂಪ್ಯೂಟರ್‌ಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಕಂಪ್ಯೂಟರ್‌ಗಳಿಗೆ ಸಮಯವನ್ನು ವಿನಿಯೋಗಿಸುತ್ತಾ ಬಂದರು. ಈ ಸಿಸ್ಟಮ್‌ಗಳಲ್ಲೊಂದಾದ PDP-10, ಕಂಪ್ಯೂಟರ್ ಸೆಂಟರ್‌ ಕಾರ್ಪೊರೇಷನ್‌ (CCC)ಸಂಸ್ಥೆಗೆ ಸೇರಿತ್ತು. ಈ ಕಂಪನಿಯು ಲೇಕ್‌ಸೈಡ್‌ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್‌, ಪಾಲ್‌ ಅಲೆನ್‌, ರಿಕ್ ವೀಲ್ಯಾಂಡ್‌, ಮತ್ತು ಕೆಂಟ್‌ ಇವಾನ್ಸ್‌ರವರ ಮೇಲೆ ಬೇಸಿಗೆಯ ಅವಧಿಗೆ ಬಹಿಷ್ಕಾರ ಹೇರಿತ್ತು. ಉಚಿತವಾದ ಕಂಪ್ಯೂಟರ್‌ ಕಾಲಾವಕಾಶವನ್ನು ಪಡೆಯಲು ಕಂಪ್ಯೂಟರ್‌ನಲ್ಲಿ ಆಪರೇಟಿಂಗ್‌ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಈ ಬಹಿಷ್ಕಾರವನ್ನು ಹೇರಿತ್ತು.[೧೫]

ನಿಷೇಧದ ಅವಧಿ ಕೊನೆಯಾಗುವ ಹೊತ್ತಿಗೆ, ತಮಗೆ ಬೇಕಿರುವ ಕಂಪ್ಯೂಟರ್‌ನ ಕಾಲಾವಕಾಶಕ್ಕೆ ಪ್ರತಿಯಾಗಿ CCCಯ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿದುಕೊಡುವ ಪ್ರಸ್ತಾವವನ್ನು ಈ ನಾಲ್ವರು ವಿದ್ಯಾರ್ಥಿಗಳು ಮುಂದಿಟ್ಟರು.

ಟೆಲಿಪ್ರಿಂಟರ್‌ ಮೂಲಕವಾಗಿ ಸಿಸ್ಟಮ್‌ ಅನ್ನು ಬಳಸುವುದಕ್ಕೆ ಬದಲು, CCCಯ ಕಚೇರಿಗಳಿಗೆ ತೆರಳಿದ ಗೇಟ್ಸ್‌, ಸಿಸ್ಟಮ್‌ನ್ನು ನಡೆಸುತ್ತಿದ್ದ ವಿವಿಧ ಪ್ರೋಗ್ರ್ಯಾಮ್‌ಗಳ ಮೂಲ ಸಂಕೇತಗಳನ್ನು (ಸೋರ್ಸ್‌ ಕೋಡ್‌) ಅಧ್ಯಯನ ಮಾಡಿದರು. ಈ ಪ್ರೋಗ್ರ್ಯಾಮ್‌ಗಳಲ್ಲಿ FORTRAN, LISP ಹಾಗೂ ಯಂತ್ರಭಾಷೆ (ಮೆಷೀನ್‌ ಲಾಂಗ್ವೇಜ್‌)ಯಲ್ಲಿನ ಪ್ರೋಗ್ರ್ಯಾಮ್‌ಗಳೂ ಸೇರಿದ್ದವು.

CCC ಸಂಸ್ಥೆಯೊಂದಿಗಿನ ಇವರ ಸಂಬಂಧವು ಕಂಪನಿ ಉದ್ಯಮದಿಂದ ಹೊರಗುಳಿಯುವವರೆಗೂ, ಅಂದರೆ, 1970ರವರೆಗೂ ಮುಂದುವರಿಯಿತು. ಇದರ ನಂತರದ ವರ್ಷದಲ್ಲಿ, ಇನ್‌ಫರ್ಮೇಷನ್‌ ಸೈನ್ಸಸ್‌ ಇಂಕ್‌ ಎಂಬ ಸಂಸ್ಥೆಯು ಲೇಕ್‌ಸೈಡ್‌ ಸ್ಕೂಲ್‌ನ ಈ ನಾಲ್ಕು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡು, COBOLನಲ್ಲಿ ಸಂಬಳದಾರರ ಪಟ್ಟಿಯ (ಪೇ ರೋಲ್‌) ಪ್ರೋಗ್ಯ್ರಾಮ್‌ ಒಂದನ್ನು ರಚಿಸಲು ಅವಕಾಶನೀಡುವುದರ ಜೊತೆಗೆ, ಕಂಪ್ಯೂಟರ್‌ ಕಾಲಾವಕಾಶ ಹಾಗೂ ರಾಯಧನವನ್ನೂ ಅವರಿಗೆ ನೀಡಿತು.ಪ್ರೋಗ್ರ್ಯಾಮ್‌ ಬರೆಯುವುದಕ್ಕೆ ಸಂಬಂಧಿಸಿದಂತೆ ಗೇಟ್ಸ್‌ ಹೊಂದಿದ್ದ ಸಾಮರ್ಥ್ಯವು ಸಂಸ್ಥೆಯ ಆಡಳಿತಗಾರರ ಅರಿವಿಗೆ ಬಂದನಂತರ, ತಮ್ಮ ಶಾಲೆಯ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಪಟ್ಟಿಮಾಡುವುದಕ್ಕೆ ಗೇಟ್ಸ್‌ ಶಾಲೆಯ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ನ್ನು ಬರೆದರು.ಬಹುತೇಕ ಹುಡುಗಿಯರೇ ತುಂಬಿದ್ದ ತರಗತಿಗಳಲ್ಲಿ ತಮ್ಮನ್ನು ಕೂರಿಸಲೆಂಬ ಉದ್ದೇಶದಿಂದ ಅವರು ಸಂಕೇತಗಳನ್ನು ಮಾರ್ಪಡಿಸಿದರು. ಈ ಕುರಿತು ಅವರು ನಂತರ ಮಾತಾಡುತ್ತಾ, "ನಾನು ಸುಸ್ಪಷ್ಟವಾಗಿ ಯಶಸ್ಸನ್ನು ಪ್ರದರ್ಶಿಸಿದ ಯಂತ್ರವೊಂದರಿಂದ ಒಲ್ಲದ ಮನಸ್ಸಿನಿಂದ ದೂರ ಸರಿಯಲು ತುಂಬಾ ಕಷ್ಟವಾಗಿತ್ತು" ಎಂದು ಅಭಿಪ್ರಾಯಪಟ್ಟರು.[೧೪] ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್‌, ಇಂಟೆಲ್ 8008 ಪ್ರೊಸೆಸರ್‌ ಅನ್ನು ಆಧರಿಸಿ ಟ್ರಾಫಿಕ್‌ ಕೌಂಟರ್‌ಗಳನ್ನು ರೂಪಿಸಲು ಸ್ನೇಹಿತ ಅಲೆನ್‌ ಜೊತೆ ಸೇರಿ ಟ್ರ್ಯಾಫ್‌-ಓ-ಡಾಟ ಎಂಬ ಹೊಸ ಸಾಹಸಕ್ಕೆ ಕೈಹಾಕಿದರು.[೧೬] 1973ರ ಆರಂಭಿಕ ದಿನಗಳಲ್ಲಿ U.S.ನ ಹೌಸ್‌ ಆಫ್ ರೆಪ್ರೆಸೆಂಟೇಟಿವ್ಸ್‌‌ನಲ್ಲಿ ಕಾಂಗ್ರೆಸ್ಸಿನ ದೂತನಾಗಿ ಗೇಟ್ಸ್‌ ಸೇವೆ ಸಲ್ಲಿಸಿದರು.[೧೭]

ಚಿತ್ರ:Bill Gates public domain mugshot.jpg
1977ರಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಾಗ ತೆಗೆದ ಬಿಲ್‌ ಗೇಟ್ಸ್‌ನ ಮುಖದ ಛಾಯಾಚಿತ್ರ

ಗೇಟ್ಸ್‌‌ 1973ರಲ್ಲಿ ಲೇಕ್‌ಸೈಡ್‌ ಸ್ಕೂಲ್‌ನಿಂದ ಪದವಿ ಪಡೆದರು. ಇವರುSAT[೧೮] ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್‌ಗೆ ಸೇರಿದರು.[೧೯] 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170[೨೦] ಎಂದು ಭಾವಿಸಲಾಗಿತ್ತು. ಈ ಅಂಶ ಆಗಿನ ಮಾಧ್ಯಮಗಳಲ್ಲಿ ಆಗಿದಾಂಗ್ಗೆ ಪ್ರಕಟವಾಗುತ್ತಲೇ ಇತ್ತು.[೨೧] ಹಾರ್ವರ್ಡ್‌‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗೇಟ್ಸ್‌, ಸ್ಟೀವ್‌ ಬಾಲ್ಮರ್‌ ಎಂಬ ಹೆಸರಿನ ತಮ್ಮ ಭವಿಷ್ಯದ ವ್ಯವಹಾರದ ಪಾಲುದಾರರನ್ನು ಭೇಟಿಯಾದರು. ಇವರೇ ಮುಂದೆ ಮೈಕ್ರೋಸಾಫ್ಟ್‌ನ CEO ಆಗಿ ನೇಮಕವಾದರು. ಕಂಪ್ಯೂಟರ್‌ ವಿಜ್ಞಾನಿ ಕ್ರಿಸ್ಟೋಸ್‌‌ ಪ್ಯಾಪಡಿಮಿಟ್ರಿಯೊ ಎಂಬುವವರರನ್ನೂ ಇದೇ ಹಾರ್ವರ್ಡ್‌ನಲ್ಲಿ ಭೇಟಿಯಾದರು. ಗೇಟ್ಸ್ ಮುಂದೆ ಪ್ಯಾನ್‌ಕೇಕ್‌ ಸಾರ್ಟಿಂಗ್‌ ಎಂದು ಹೇಳಲಾಗುವ ವಿಶಿಷ್ಟ ಸಮಸ್ಯಾ ಪರಿಹಾರಕ ಸೂತ್ರದ ಕುರಿತಾದ ಒಂದು ಪತ್ರಿಕೆಯಲ್ಲಿ ಇವರ ಜೊತೆಗೂಡಿ ಕೆಲಸ ಮಾಡಿದರು.[೨೨] ಇವರು ಹಾರ್ವರ್ಡ್‌ನಲ್ಲಿ[೨೩] ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲದೆ ಶಾಲೆಯ ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಪಾಲ್‌ ಅಲೆನ್‌ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಗೇಟ್ಸ್‌, 1974ರ ಬೇಸಗೆಯಲ್ಲಿ ಹನಿವೆಲ್‌ನಲ್ಲಿ ಅವರನ್ನು ಸೇರಿಕೊಂಡರು.[೨೪] ಇದರ ನಂತರದ ವರ್ಷದಲ್ಲಿ ಇಂಟೆಲ್‌ 8080 CPU ಆಧಾರಿತ MITS ಆಲ್ಟೇರ್‌ 8800 ಬಿಡುಗಡೆಯಾಯಿತು. ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್‌, ತಮ್ಮದೇ ಸ್ವಂತ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು.[೨೫] ಈ ನಿರ್ಧಾರದ ಬಗ್ಗೆ ಗೇಟ್ಸ್ ತನ್ನ ಹೆತ್ತವರೊಂದಿಗೆ ಚರ್ಚಿಸಿದರು. ತನ್ನದೇ ಸಂಸ್ಥೆ ಸ್ಥಾಪಿಸುವ ವಿಚಾರದಲ್ಲಿ ಗೇಟ್ಸ್‌ ಅವರಿಗಿದ್ದ ಬಯಕೆಯನ್ನು ಕಣ್ಣಾರೆ ಕಂಡಿದ್ದ ಅವರು ತಮ್ಮ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದರು.[೨೩]

ಮೈಕ್ರೋಸಾಫ್ಟ್

BASIC

ಫ್ಲಾಪಿ ಡಿಸ್ಕ್‌ ವ್ಯವಸ್ಥೆಯೊಂದಿಗಿನ MITS ಆಲ್ಟೇರ್‌ 8800 ಕಂಪ್ಯೂಟರ್‌ [51]

ಪಾಪುಲರ್ ಎಲೆಕ್ಟ್ರಾನಿಕ್ಸ್ ಪತ್ರಿಕೆಯು ತನ್ನ 1975ರ ಜನವರಿ ಸಂಚಿಕೆಯಲ್ಲಿ ಆಲ್ಟೇರ್‌ 8800 ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನು ಓದಿದ ಗೇಟ್ಸ್‌, ಹೊಸ ಮೈಕ್ರೋಕಂಪ್ಯೂಟರ್ ಸೃಷ್ಟಿಸಿದ ಮೈಕ್ರೋ ಇನ್‌ಸ್ಟ್ರುಮೆಂಟೇಷನ್‌ ಅಂಡ್‌ ಟೆಲಿಮೆಟ್ರಿ ಸಿಸ್ಟಮ್ಸ್‌ (MITS) ಸಂಸ್ಥೆಯನ್ನು ಸಂಪರ್ಕಿಸಿ, ತಾವು ಮತ್ತು ತಮ್ಮ ಸ್ನೇಹಿತರು ಅದೇ ನೆಲೆಗಟ್ಟಿಗಾಗಿ BASIC ಇಂಟರ್‌ಪ್ರಿಟರ್ ಒಂದರ ಮೇಲೆ ಈಗಾಗಲೇ ಕೆಲಸ ಮಾಡಲು ಆರಂಭಿಸಿದ್ದುದನ್ನು ತಿಳಿಸಿದರು.[೨೬] ವಾಸ್ತವದಲ್ಲಿ ಗೇಟ್ಸ್‌ ಮತ್ತು ಅಲೆನ್‌ ಬಳಿ ಆಲ್ಟೇರ್‌ ಇರಲೇ ಇಲ್ಲ. ಜೊತೆಗೆ ಇದಕ್ಕಾಗಿ ಯಾವುದೇ ಸಂಕೇತವನ್ನೂ ಬರೆದಿರಲಿಲ್ಲ. MITSನ ಆಸಕ್ತಿಯನ್ನು ಅಳೆಯುವ ಉದ್ದೇಶದಿಂದಷ್ಟೇ ಅವರಿಬ್ಬರೂ ಈ ರೀತಿ ಹೇಳಿದ್ದರು. MITS ಅಧ್ಯಕ್ಷ ಎಡ್‌ ರಾಬರ್ಟ್ಸ್ ಇವರನ್ನು ಭೇಟಿ ಮಾಡಲು ಒಪ್ಪಿ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಇವರನ್ನು ಆಹ್ವಾನಿಸಿದರು. ಕೆಲವು ವಾರಗಳ ನಂತರ ಇವರು ಮಿನಿಕಂಪ್ಯೂಟರ್‌ನಲ್ಲಿ ಚಾಲನೆಯಾಗುವ ಆಲ್ಟೇರ್‌ ಎಮ್ಯುಲೇಟರ್‌ ಎಂಬ ಸೂತ್ರವನ್ನು ಮತ್ತು ಇದರ ನಂತರ BASIC ಇಂಟರ್‌ಪ್ರಿಟರ್‌ ಅನ್ನು ಆಭಿವೃದ್ಧಿಪಡಿಸಿದರು. ಅಲ್ಬುಕರ್ಕ್‌ನಲ್ಲಿರುವ MITSನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಯೋಗಾರ್ಥ ಪ್ರದರ್ಶನದಲ್ಲಿ ಗೇಟ್ಸ್‌ಗೆ ಅಮೋಘ ಯಶಸ್ಸು ದೊರೆಯಿತಲ್ಲದೆ, ಇಂಟರ್‌ಪ್ರಿಟರ್‌ಗಳನ್ನು ಆಲ್ಟೇರ್‌ BASIC ಸ್ವರೂಪದಲ್ಲಿ ವಿತರಿಸುವ ಕುರಿತು MITSನೊಂದಿಗೆ ಒಡಂಬಡಿಕೆ ಏರ್ಪಟ್ಟಿತು. ಪಾಲ್‌ ಅಲೆನ್‌ ಅವರನ್ನು ಉದ್ಯೋಗಿಯಾಗಿ MITS ನೇಮಿಸಿಕೊಂಡಿತು.[೨೭] ಹಾಗೂ ಗೇಟ್ಸ್‌‌ ಅಲ್ಬುಕರ್ಕ್‌ನಲ್ಲಿನ MITS ಕಚೇರಿಯಲ್ಲಿ ಅಲೆನ್‌ನೊಂದಿಗೆ ಕೆಲಸ ಮಾಡಲು ಹಾರ್ವರ್ಡ್‌ನಿಂದ 1975ರ ನವೆಂಬರ್‌ನಲ್ಲಿ ಗೈರುಹಾಜರಿ ರಜೆ‌ಯನ್ನು ಪಡೆದರು. ಗೇಟ್ಸ್‌ ಮತ್ತು ಅಲೆನ್‌ ತಮ್ಮ ಪಾಲುದಾರಿಕೆಯನ್ನು "ಮೈಕ್ರೋ-ಸಾಫ್ಟ್‌" ಎಂದು ಹೆಸರಿಸಿ, ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್‌ನಲ್ಲಿ ತೆರೆದರು.[೨೭] ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆಯನ್ನು(-) ಕೈಬಿಡಲಾಯಿತು. ಅಲ್ಲದೆ 1976ರ ನವೆಂಬರ್‌‌ 25ರಂದು "ಮೈಕ್ರೋಸಾಫ್ಟ್‌" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್‌ ಸ್ಟೇಟ್‌ ಆಫ್‌ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು.[೨೭] ಇದಾದ ನಂತರ, ಅರ್ಧಕ್ಕೆ ನಿಲ್ಲಿಸಿದ್ದ ವ್ಯಾಸಂಗವನ್ನು ಪೂರ್ಣಗೊಳಿಸಲು ಗೇಟ್ಸ್‌ರವರು ಮತ್ತೆ ಹಾರ್ವರ್ಡ್‌ಗೆ ಹಿಂದಿರುಗಲೇ ಇಲ್ಲ.

ಕಂಪ್ಯೂಟರ್‌ ಹವ್ಯಾಸಿಗಳಲ್ಲಿ ಮೈಕ್ರೋಸಾಫ್ಟ್ನ BASIC ಸಾಕಷ್ಟು ಜನಪ್ರಿಯವಾಯಿತು. ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್‌ ಪತ್ತೆ ಹಚ್ಚಿದರು. 1976ರ ಫೆಬ್ರವರಿಯಲ್ಲಿ ಗೇಟ್ಸ್‌ MITS ಸುದ್ದಿಪತ್ರದಲ್ಲಿ ಹವ್ಯಾಸಿಗಳಿಗೊಂದು ಮುಕ್ತ ಪತ್ರ ವನ್ನು ಬರೆದರು. ಹಣ ಪಾವತಿಯಾಗದೆ MITS ಸಂಸ್ಥೆಯು ಸಾಫ್ಟ್‌ವೇರ್‌ನ ಉತ್ಪಾದನೆ, ವಿತರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಹಾಗೂ ಸಾಫ್ಟ್‌ವೇರ್‌ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಆ ಪತ್ರ ಒಳಗೊಂಡಿತ್ತು.[೨೮] ಈ ಮುಕ್ತ ಪತ್ರ ಅನೇಕ ಕಂಪ್ಯೂಟರ್‌ ಹವ್ಯಾಸಿಗಳ ನಡುವೆ ಅಪಖ್ಯಾತಿಗೆ ಗುರಿಯಾಯಿತು. ಆದರೆ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡುವವರು ತಮ್ಮ ಉತ್ಪನ್ನಗಳಿಗೆ ಸಲ್ಲಬೇಕಾದ ಪಾವತಿಯನ್ನು ಕೇಳುವ ಸಾಮರ್ಥ್ಯ ಹೊಂದಿರಬೇಕು ಎಂದು ಗೇಟ್ಸ್‌ ದೃಢವಾಗಿ ನಂಬಿದ್ದರು. ಮೈಕ್ರೋಸಾಫ್ಟ್ 1976ರ ಉತ್ತರಾರ್ಧದಲ್ಲಿ MITS ಕಂಪನಿಯಿಂದ ಹೊರಬಂದು ಸ್ವತಂತ್ರವಾಯಿತು. ಅಲ್ಲದೆ ವಿವಿಧ ಸಿಸ್ಟಮ್‌ಗಳಿಗೆ ಪ್ರೋಗ್ಯ್ರಾಮಿಂಗ್‌ ಭಾಷೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಿತು.[೨೭] 1979ರ ಜನವರಿ 1ರಂದು ಅಲ್ಬುಕರ್ಕ್‌ನಿಂದ ವಾಷಿಂಗ್ಟನ್‌ನ ಬೆಲ್ಲೆವ್ಯೂ ನಗರದಲ್ಲಿನ ಹೊಸ ಕಚೇರಿಗೆ ಕಂಪನಿಯು ಸ್ಥಳಾಂತರಗೊಂಡಿತು.[೨೬]

ಮೈಕ್ರೋಸಾಫ್ಟ್‌‌ನ ಆರಂಭಿಕ ವರ್ಷಗಳಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಉದ್ಯೋಗಿಗಳೂ ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದ್ದರು.

ಸಾಫ್ಟ್‌ವೇರ್‌ ಸಂಕೇತಗಳನ್ನು ಬರೆಯುವ ಕೆಲಸವನ್ನು ಗೇಟ್ಸ್‌ ಮುಂದುವರಿಸಿದರಲ್ಲದೆ, ಕಂಪನಿಯ ವ್ಯವಹಾರದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಆರಂಭದ ಐದು ವರ್ಷಗಳಲ್ಲಿ ಕಂಪನಿ ಬರೆಯುವ ಎಲ್ಲ ಕೋಡ್‌ಗಳನ್ನು ಇವರೇ ಸ್ವತಃ ಪರೀಕ್ಷಿಸಿದರು. ಅಲ್ಲದೆ ಅಗತ್ಯ ಕಂಡುಬಂದಾಗಲೆಲ್ಲಾ ಅದರ ಕೆಲವು ಭಾಗಗಳನ್ನು ಮರು ರಚಿಸುತ್ತಿದ್ದರು.[೨೯]

IBM ಪಾಲುದಾರಿಕೆ

1980ರಲ್ಲಿ IBM ಕಂಪನಿಯು ತನ್ನ ಮುಂಬರುವ IBM PC ಎಂಬ ಹೆಸರಿನ ಪರ್ಸನಲ್‌ ಕಂಪ್ಯೂಟರ್‌ಗೆ BASIC ಇಂಟರ್‌ಪ್ರಿಟರ್‌ ಬರೆದುಕೊಡುವಂತೆ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಪ್ರಸ್ತಾವನೆ ಸಲ್ಲಿಸಿತು. ತಮಗೆ ಒಂದು ಆಪರೇಟಿಂಗ್ ಸಿಸ್ಟಮ್‌ನ ಅಗತ್ಯವಿದೆ ಎಂದು IBMನ ಪ್ರತಿನಿಧಿಗಳು ಹೇಳಿದಾಗ, ಅಗಿನ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ CP/M ಆಪರೇಟಿಂಗ್‌ ಸಿಸ್ಟಮ್‌ನ ತಯಾರಕರಾಗಿದ್ದ ಡಿಜಿಟಲ್‌ ರಿಸರ್ಚ್(DRI) ಕಂಪನಿಯ ಹೆಸರನ್ನು ಗೇಟ್ಸ್‌ ಸೂಚಿಸಿದರು.[೩೦] ಡಿಜಿಟಲ್‌ ರಿಸರ್ಚ್‌ ಕಂಪನಿಯೊಂದಿಗಿನ IBM ಮಾತುಕತೆಗಳು ನಿರೀಕ್ಷಿತ ಮಟ್ಟದಲ್ಲಿರದಿದ್ದುದರಿಂದ, ಪರವಾನಗಿಯ ಒಪ್ಪಂದವು ಅವರ ಕೈಗೆ ಸಿಗಲಿಲ್ಲ. IBM ಪ್ರತಿನಿಧಿಯಾಗಿದ್ದ ಜಾಕ್‌ ಸ್ಯಾಮ್ಸ್‌, ಗೇಟ್ಸ್‌ರೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ಪರವಾನಗಿ ಪಡೆಯುವಲ್ಲಿನ ತೊಂದರೆಗಳನ್ನು ವಿವರಿಸಿ, ಸ್ವೀಕಾರಾರ್ಹ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಕೇಳಿಕೊಂಡರು.ಕೆಲವು ವಾರಗಳ ನಂತರ, ಗೇಟ್ಸ್‌ CP/Mಗೆ ಸಮಾನವಾಗಿದ್ದ 86-DOS (QDOS) ಎಂಬ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಬಳಸಿಕೊಳ್ಳಲು ಉದ್ದೇಶಿಸಿದರು. ಇದನ್ನು PCಯ ರೀತಿಯಲ್ಲೇ ಇದ್ದ ಯಂತ್ರಾಂಶವೊಂದಕ್ಕೆ ಒಂದಕ್ಕೆ ಸಿಯಾಟಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌(SCP)ನ ಟಿಮ್‌ ಪೀಟರ್ಸನ್‌ ಎಂಬುವವರು ಅಭಿವೃದ್ಧಿಪಡಿಸಿದ್ದರು. SCP ಕಂಪನಿಯೊಂದಿಗೆ ಮೈಕ್ರೋಸಾಫ್ಟ್‌ ಒಪ್ಪಂದ ಮಾಡಿಕೊಂಡು, ಅವರ ಏಕೈಕ ಪರವಾನಗಿ ಏಜೆಂಟ್‌ ಆಯಿತು. ತದನಂತರ 86-DOSನ ಪೂರ್ಣ ಮಾಲೀಕತ್ವವನ್ನು ತಾನೇ ಪಡೆಯಿತು. PCಗೆ ಆಪರೇಟಿಂಗ್ ಸಿಸ್ಟಮ್‌ ಅನ್ನು ಅಳವಡಿಸಿದ ನಂತರ ಮೈಕ್ರೋಸಾಪ್ಟ್‌ ಅದನ್ನು IBMಗೆ PC-DOS ಎಂಬ ಹೆಸರಿನಲ್ಲಿ ವಿತರಣೆ ಮಾಡಿ, ಒಂದೇ ಸಲಕ್ಕೆ 50,000$ ಶುಲ್ಕವನ್ನು ಪಡೆದುಕೊಂಡಿತು. ಆದರೆ ಆಪರೇಟಿಂಗ್‌ ಸಿಸ್ಟಮ್ ಮೇಲಿನ ಹಕ್ಕುಸ್ವಾಮ್ಯವನ್ನು ಮಾತ್ರ ಗೇಟ್ಸ್‌ ಹಸ್ತಾಂತರ ಮಾಡಲಿಲ್ಲ. ಏಕೆಂದರೆ, ಇತರ ಯಂತ್ರಾಂಶ ಮಾರಾಟಗಾರರು IBM ಸಿಸ್ಟಮ್‌ ಅನ್ನು ಸ್ವತಃ ಹುಟ್ಟುಹಾಕಬಹುದು ಎಂಬ ನಂಬಿಕೆ ಗೇಟ್ಸ್‌ಗಿತ್ತು.[೩೧] ಅವರು ಅದನ್ನು ಸಾಧಿಸಿಯೇಬಿಟ್ಟರು ಮತ್ತು MS-DOSನ ಮಾರಾಟದಿಂದಾಗಿ ಮೈಕ್ರೋಸಾಫ್ಟ್‌ ಕಂಪನಿಯು ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿತು.[೩೨]

2== ವಿಂಡೋಸ್‌ ==

1981ರ ಜೂನ್‌ 25ರಂದು ಮೈಕ್ರೋಸಾಫ್ಟ್ ಕಂಪನಿಯನ್ನು ಪುನರ್ರಚಿಸಲಾಯಿತು. ಇದರ ಮೇಲ್ವಿಚಾರಣೆಯನ್ನು ಗೇಟ್ಸ್‌ ವಹಿಸಿದ್ದರು. ಇದರನ್ವಯ ವಾಷಿಂಗ್ಟನ್‌ನಲ್ಲಿ ಕಂಪನಿಯು ಮರುಸಂಘಟಿತಗೊಂಡು, ಗೇಟ್ಸ್‌‌ ಅವರನ್ನು ಮೈಕ್ರೋಸಾಫ್ಟ್‌ನ ಅಧ್ಯಕ್ಷ ಹಾಗೂ ಮಂಡಳಿಯ ಸಭಾಧ್ಯಕ್ಷ ಎಂದು ಘೋಷಿಸಿತು.[೨೬] ಮೈಕ್ರೋಸಾಫ್ಟ್ ಕಂಪನಿ ತನ್ನ ಮೈಕ್ರೋಸಾಫ್ಟ್‌ ವಿಂಡೋಸ್‌ನ ಮೊದಲ ಬಿಡಿ ಆವೃತ್ತಿಯನ್ನು 1985ರ ನವೆಂಬರ್‌ 20ರಂದು ಬಿಡುಗಡೆ ಮಾಡಿತು ಹಾಗೂ ಆಗಸ್ಟ್‌ನಲ್ಲಿ OS/2 ಹೆಸರಿನ ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್‌ ಅಭಿವೃದ್ಧಿಪಡಿಸಲು IBMನೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಎರಡೂ ಸಂಸ್ಥೆಗಳು ಹೊಸ ಸಿಸ್ಟಮ್‌ನ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರೂ, ಇವುಗಳ ನಡುವೆ ಏರುತ್ತಲೇ ಇದ್ದ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದ ಈ ಸಂಸ್ಥೆಗಳ ಪಾಲುದಾರಿಕೆ ಒಳಗೊಳಗೇ ಹಾಳಾಯಿತು.

1991ರ ಮೇ 16ರಂದು ಆಂತರಿಕ ಜ್ಞಾಪನಾಪತ್ರವೊಂದನ್ನು ವಿತರಿಸಿದ ಗೇಟ್ಸ್‌, OS/2 ಪಾಲುದಾರಿಕೆ ಅಂತ್ಯಗೊಂಡಿದ್ದು ಮೈಕ್ರೋಸಾಫ್ಟ್ ತನ್ನೆಲ್ಲ ಪ್ರಯತ್ನಗಳನ್ನು ವಿಂಡೋಸ್‌ NT ಕೆರ್ನೆಲ್‌ನ ಅಭಿವೃದ್ಧಿಗೆ ವರ್ಗಾಯಿಸಲಿದೆ ಎಂದು ತಮ್ಮ ಉದ್ಯೋಗಿಗಳಿಗೆ ಪ್ರಕಟಿಸಿದರು.[೩೩]

ಆಡಳಿತ ವೈಖರಿ

1975ರಲ್ಲಿ ಮೈಕ್ರೋಸಾಫ್ಟ್ ಹುಟ್ಟಿದಂದಿನಿಂದ 2006ವರೆಗೆ, ಕಂಪನಿಯ ಉತ್ಪಾದನಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಪ್ರಮುಖ ಹೊಣೆಗಾರಿಕೆಗಳನ್ನು ಗೇಟ್ಸ್‌ ತಾವೇ ನಿರ್ವಹಿಸಿದರು. ದೃಢವಾದ ಅತ್ಮವಿಶ್ವಾಸದಿಂದ ಕಂಪನಿಯ ಉತ್ಪನ್ನ ಶ್ರೇಣಿಯನ್ನು ಇವರು ವಿಸ್ತರಿಸಿದ್ದೇ ಅಲ್ಲದೆ, ಮೈಕ್ರೋಸಾಫ್ಟ್ ಪ್ರಬಲ ಸ್ಥಾನವನ್ನು ಗಳಿಸಿದಾಗಲೆಲ್ಲಾ ಹುರುಪಿನೊಂದಿಗೆ ಅದನ್ನು ಕಾಪಾಡಿಕೊಳ್ಳುತ್ತಾ ಹೋದರು.

ಕಾರ್ಯಕಾರಿ ಅಧಿಕಾರಿಯಾಗಿದ್ದ ಗೇಟ್ಸ್‌ ಮೈಕ್ರೋಸಾಫ್ಟ್‌ನ ಹಿರಿಯ ವ್ಯವಸ್ಥಾಪಕರನ್ನು ಮತ್ತು ಪ್ರೋಗ್ರ್ಯಾಮ್‌ ವ್ಯವಸ್ಥಾಪರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು. ಈ ಸಭೆಗಳ ಸಾಕ್ಷಾತ್‌ ವಿವರಣೆಗಳು ಇವರನ್ನು ವರ್ಣಿಸುವ ರೀತಿಯಲ್ಲಿಯೇ ಹೇಳವುದಾದರೆ, ಗೇಟ್ಸ್‌ ಪದತಃ ಕಲಹಪ್ರಿಯರಾಗಿದ್ದರು. ವ್ಯವಸ್ಥಾಪಕರ ವ್ಯವಹಾರದ ಕಾರ್ಯತಂತ್ರಗಳಲ್ಲಿ ಅಥವಾ ಪ್ರಸ್ತಾವನೆಗಳಲ್ಲಿ ಕಂಪನಿಯ ದೀರ್ಘಕಾಲೀನ ಹಿತಾಸಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುವಂತಹ ನ್ಯೂನತೆಗಳು ಕಂಡುಬಂದರೆ ಗೇಟ್ಸ್‌ ಅವರಿಗೆ ಛೀಮಾರಿ ಹಾಕುತ್ತಿದ್ದರು.[೩೪][೩೫] ವಿಷಯವೊಂದರ ನಿರೂಪಣೆ ನಡೆಯುತ್ತಿರುವಾಗ ಮಧ್ಯೆ ಬಾಯಿ ಹಾಕುತ್ತಿದ್ದ ಅವರು, "ಇಂಥಾ ಅವಿವೇಕದ ಕೆಲಸವನ್ನು ನಾನೆಂದಿಗೂ ನೋಡಿಲ್ಲ" ಎಂದು ಟೀಕಿಸಿಬಿಡುತ್ತಿದ್ದರು.[೩೬] ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, "ನಿಮ್ಮ ಕೆಲಸಗಳನ್ನು ಬಿಟ್ಟು ನೀವೇಕೆ ಶಾಂತಿ ಪಡೆಯನ್ನಾದರೂ ಸೇರಬಾರದು?" ಎಂದು ಗೇಟ್ಸ್‌ ಗದರಿಕೊಳ್ಳುತ್ತಿದ್ದರು.[೩೭]

ಗೇಟ್ಸ್‌ರ ಕೋಪಕ್ಕೆ ಗುರಿಯಾದವರು, ಅವರಿಗೆ ಸಂಪೂರ್ಣವಾಗಿ ತೃಪ್ತಿಯಾಗುವವರೆಗೂ ತಮ್ಮ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡು ವಿವರವಾಗಿ ಹೇಳಬೇಕಾಗುತ್ತಿತ್ತು.[೩೬] ತಮ್ಮ ಅಧೀನದಲ್ಲಿನ ಅಧಿಕಾರಿಗಳು ಅನಗತ್ಯವಾಗಿ ತಮ್ಮ ಕಾರ್ಯದಲ್ಲಿ ವಿಳಂಬ ಮಾಡುವುದು ಅಥವಾ ಮುಂದೂಡುವುದು ಕಂಡುಬಂದರೆ "ನಾನಿದನ್ನು ವಾರಾಂತ್ಯದೊಳಗೆ ಮಾಡುತ್ತೇನೆ" ಎಂದು ವ್ಯಂಗ್ಯವಾಗಿ ಟೀಕಿಸುವುದಕ್ಕೆ ಗೇಟ್ಸ್‌ ಹೆಸರುವಾಸಿಯಾಗಿದ್ದರು.[][೩೮][೩೯]

ಮೈಕ್ರೋಸಾಫ್ಟ್‌ನ ಇತಿಹಾಸದುದ್ದಕ್ಕೂ, ಪ್ರಮುಖವಾಗಿ ಅದರಲ್ಲಿನ ಆಡಳಿತ ಮತ್ತು ಕಾರ್ಯಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಗೇಟ್ಸ್‌ರವರ ಪಾತ್ರವಿತ್ತು. ಆದರೂ ಇವರು ಕಂಪನಿಯ ಆರಂಭಿಕ ವರ್ಷಗಳಲ್ಲಿ, ನಿರ್ದಿಷ್ಟವಾಗಿ ಪ್ರೋಗ್ರ್ಯಾಮಿಂಗ್‌ ಭಾಷೆಗೆ ಸಂಬಂಧಿಸಿದ ಕಂಪನಿಯ ಉತ್ಪನ್ನಗಳಲ್ಲಿ ಇದರ ಸಕ್ರಿಯ ಸಾಫ್ಟ್‌ವೇರ್‌ ಅಭಿವೃದ್ದಿಕಾರರಾಗಿದ್ದರು. ಇವರು TRS-80 ಮಾಡೆಲ್‌ 100 ಲೈನ್‌ ಮೇಲೆ ಕೆಲಸ ಮಾಡುತ್ತಿದ್ದುದರಿಂದ, ಅಭಿವೃದ್ಧಿ ತಂಡದಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡಿರಲಿಲ್ಲ. ಆದರೆ ಕಂಪನಿಯ ಉತ್ಪನ್ನಗಳನ್ನು 1989ರಲ್ಲಿ ವಿಶ್ವದೆಲ್ಲೆಡೆ ವಿತರಿಸುವ ತನಕವೂ ಸಂಕೇತಗಳನ್ನು ಬರೆದರು.[೩೮] ಲೋಕೋಪಕಾರಕ್ಕೆ ತಮ್ಮ ಹೆಚ್ಚಿನ ಸಮಯ ಮೀಸಲಿಡುವುದಕ್ಕೋಸ್ಕರ ಮುಂದಿನ ಎರಡು ವರ್ಷಗಳಲ್ಲಿ ತಮ್ಮ ದಿನನಿತ್ಯದ ಜವಾಬ್ಧಾರಿಗಳಿಂದ ಬೇರೊಂದು ಪಾತ್ರಕ್ಕೆ ವರ್ಗಾವಣೆ ಹೊಂದುವುದರ ಕುರಿತಾದ ನಿರ್ಧಾರವನ್ನು 2006ರ ಜೂನ್‌ 15ರಂದು ಗೇಟ್ಸ್‌ ಪ್ರಕಟಿಸಿದರು.

ಇಬ್ಬರು ಉತ್ತರಾಧಿಕಾರಿಗಳ ನಡುವೆ ಗೇಟ್ಸ್‌ ತಮ್ಮ ಜವಾಬ್ದಾರಿಗಳನ್ನು ಹಂಚಿದರು. ದೈನಂದಿನ ಅಡಳಿತ ಹೊಣೆಗಾರಿಕೆಯನ್ನು ರೇ ಓಝೀಯವರಿಗೆ ಮತ್ತು ದೀರ್ಘಕಾಲೀನ ಉತ್ಪನ್ನ ಕಾರ್ಯತಂತ್ರದ ಹೊಣೆಗಾರಿಕೆಯನ್ನು ಕ್ರೇಗ್‌ ಮುಂಡೀಯವರಿಗೆ ಒಪ್ಪಿಸಿದರು.[೪೦]

ಟ್ರಸ್ಟ್‌ ವಿರೋಧಿ ದಾವೆ

1998ರ ಆಗಸ್ಟ್ 27ರಂದು ಮೈಕ್ರೋಸಾಫ್ಟ್‌ನ ಅಧಿಕಾರದಿಂದ ಬಿಲ್‌ ಗೇಟ್ಸ್‌ ನಿರ್ಗಮಿಸುತ್ತಿರುವುದು

ಮೈಕ್ರೋಸಾಫ್ಟ್‌ನ ವ್ಯವಹಾರ ಪದ್ಧತಿಗಳಮೇಲಿನ ಟ್ರಸ್ಟ್‌‌ ವಿರೋಧಿ ದಾವೆ ಹೂಡುವಿಕೆಗೆ ಕಾರಣವಾಗಿದ್ದ ಹಲವು ತೀರ್ಮಾನಗಳಿಗೆ ಗೇಟ್ಸ್‌ರವರ ಅನುಮೋದನೆಯಿತ್ತು.1998ರ ಯುನೈಟೆಡ್‌ ಸ್ಟೇಟ್ಸ್‌ v. ಮೈಕ್ರೋಸಾಫ್ಟ್ ಪ್ರಕರಣದಲ್ಲಿ ಪ್ರಮಾಣ ಮಾಡಿಕೊಟ್ಟ ಹೇಳಿಕೆಯ ಕೈಫಿಯತ್ತನ್ನು ಗೇಟ್ಸ್ ಪುರಾವೆಯಾಗಿ ಸಲ್ಲಿಸಿದಾಗ, ಇದೊಂದು ನುಣುಚಿಕೊಳ್ಳುವ ಪ್ರಯತ್ನ ಎಂದು ಹಲವು ಪತ್ರಕರ್ತರು ಬರೆದರು. ವರದಿಯಲ್ಲಿನ "ಸ್ಪರ್ಧಿಸು", "ಸಂಬಂಧಪಟ್ಟ" ಮತ್ತು "ನಾವು" ಎಂಬ ಪದಗಳ ಸಾಂದರ್ಭಿಕ ಅರ್ಥವನ್ನು ಕುರಿತಾಗಿ ಪರೀಕ್ಷಕ ಡೇವಿಡ್‌ ಬೋಯೀಸ್‌ರೊಂದಿಗೆ ಗೇಟ್ಸ್‌ ವಾಗ್ವಾದ ನಡೆಸಿದರು.[೪೧]ಬಿಸಿನೆಸ್‌ವೀಕ್‌ ಇದನ್ನು ವರದಿ ಮಾಡಿತ್ತು.

Early rounds of his deposition show him offering obfuscatory answers and saying 'I don't recall,' so many times that even the presiding judge had to chuckle. Worse, many of the technology chief's denials and pleas of ignorance were directly refuted by prosecutors with snippets of e-mail Gates both sent and received.[೪೨]

ತಮ್ಮ ಪದಗಳ ಮತ್ತು ಕಾರ್ಯಗಳ ಅರ್ಥವನ್ನು ತಪ್ಪಾಗಿ ಚಿತ್ರಿಸಲು ಪ್ರಯತ್ನಿಸಿದ್ದ ಬೋಯೀಸ್‌ರ ಪ್ರಯತ್ನವನ್ನಷ್ಟೇ ತಾವು ತಡೆದದ್ದು ಎಂದು ನಂತರ ಗೇಟ್ಸ್‌ ಹೇಳಿದರು. ಕೈಫಿಯತ್ತನ್ನು ಸಲ್ಲಿಸುವ ಸಂದರ್ಭದಲ್ಲಿನ ತಮ್ಮ ವರ್ತನೆಗೆ ಸಂಬಂಧಿಸಿದಂತೆ, "ನಾನು ಬೋಯಿಸ್‌ನನ್ನು ದೂರ ಮಾಡಿದೆನಾ?... ನಾನು ನನ್ನ ತಪ್ಪೊಪ್ಪಿಕೊಳ್ಳುತ್ತೇನೆ. ಬೋಯೀಸ್‌ ಮೇಲೆ ಕೀಳುಮಟ್ಟದ ಒರಟುತನವನ್ನು ಪ್ರದರ್ಶಿಸಿದ್ದಕ್ಕಾಗಿ ಅದೆಷ್ಟು ದಂಡ ವಿಧಿಸಬೇಕೋ ಅಷ್ಟನ್ನು ನನ್ನ ಮೇಲೆ ವಿಧಿಸಬಹುದು" ಎಂದು ಅವರು ಹೇಳಿಕೊಂಡಿದ್ದರು.[೪೩] ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್‌ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು ಶರ್ಮನ್‌ ಟ್ರಸ್ಟ್‌ ವಿರೋಧಿ ಕಾಯಿದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು.[೪೩]

ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು

ಮೈಕ್ರೋಸಾಫ್ಟ್‌ ಉತ್ಪನ್ನಗಳನ್ನು ಉತ್ತೇಜಿಸುವ ಜಾಹೀರಾತು ಸರಣಿಯಲ್ಲಿ ಕನಿಷ್ಟ ಒಂದರಲ್ಲಾದರೂ ತಾವು ಕಾಣಿಸಿಕೊಳ್ಳಬೇಕೆಂದು ಗೇಟ್ಸ್‌ 2008ರಲ್ಲಿ ನಿರ್ಧರಿಸಿದರು. ಈ ಜಾಹೀರಾತಿನಲ್ಲಿ ಜೆರ್ರಿ ಸಿನ್‌ಫೆಲ್ಡ್‌ ಸಹತಾರೆಯಾಗಿ ನಟಿಸಿದ್ದರು. ಸಿನ್‌ಫೆಲ್ಡ್‌ ಮಾಲ್‌ ರಿಯಾಯಿತಿ ಪಾದರಕ್ಷೆ ಅಂಗಡಿ (ಶೂ ಸರ್ಕಸ್‌)ಯೊಂದರ ಮೆಟ್ಟಿಲೇರಿ ಹೋಗುತ್ತಿರುವಾಗ, ಗೇಟ್ಸ್‌ ಪಾದರಕ್ಷೆಯನ್ನು ಖರೀದಿ ಮಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಅಪರಿಚಿತರ ನಡುವೆ ನಡೆಯುವ 90 ಸೆಕೆಂಡ್‌ಗಳ ಮಾತುಕತೆಯೇ ಈ ಜಾಹೀರಾತು. ಮಾರಾಟಗಾರ, ಗೇಟ್ಸ್ ಅವರಿಗೆ ಗಾತ್ರದಲ್ಲಿ ಅತಿ ದೊಡ್ಡದಾದ ಪಾದರಕ್ಷೆಗಳನ್ನು ಮಾರಲು ಪ್ರಯತ್ನಿಸುತ್ತಿರುತ್ತಾನೆ. ಗೇಟ್ಸ್‌ ಪಾದರಕ್ಷೆಗಳನ್ನು ಕೊಳ್ಳುತ್ತಿರುವಾಗ, ಅವರು 1977ರಲ್ಲಿ ನ್ಯೂ ಮೆಕ್ಸಿಕೋದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಂಧಿಸಿದಾಗ ತೆಗೆದ ಚಿತ್ರದ ಸ್ವಲ್ಪ ಪರಿಷ್ಕರಿಸಿದ ಆವೃತ್ತಿಯಾಗಿ ಬಳಸಿಕೊಂಡಿದ್ದ ತಮ್ಮ ರಿಯಾಯಿತಿ ಕಾರ್ಡ್ ಅನ್ನು ಮೇಲೆತ್ತುತ್ತಾರೆ,[೪೪]

ಅವರು ಮಾಲ್‌ನಿಂದ ಹೊರಬರುತ್ತಿರುವಂತೆ, ನೀವು ನಿಮ್ಮ ಬುದ್ಧಿಯನ್ನು ಇತರೆ ಡೆವಲಪರ್‌ಗಳೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿರುವಿರಾ ಎಂದು ಗೇಟ್ಸ್‌ ಅವರನ್ನು ಸ್ಟಿನ್‌ಫೆಲ್ಡ್‌ ಕೇಳುತ್ತಾರೆ. ಗೇಟ್ಸ್ ಅದಕ್ಕೆ ಹೌದು ಎಂದಾಗ, ಸಿನ್‌ಫೆಲ್ಡ್‌ ಮತ್ತೊಮ್ಮೆ, ಬಳಕೆಯೋಗ್ಯ ಕಂಪ್ಯೂಟರ್‌ ಅನ್ನು ನಿರ್ಮಿಸುವ ಪಥದಲ್ಲಿ ಕೆಲಸ ನಡೆಯುತ್ತಿದೆಯೇ ಎಂದು ಕೇಳಿದಾಗ, ಹೌದು ಎನ್ನುವ ಉತ್ತರ ಸಿಗುತ್ತದೆ. ಇದು ಸಿನ್‌ಫೆಲ್ಡ್‌ನದೇ ಆಗಿರುವ "ನಥಿಂಗ್‌" (ಸಿನ್‌ಫೆಲ್ಡ್‌ ) ಎನ್ನುವ ಪ್ರದರ್ಶನದ ಬಗ್ಗೆ ತೋರುತ್ತಿರುವ ಗೌರವಾರ್ಪಣೆ ಎಂದು ಕೆಲವರು ಹೇಳುತ್ತಾರೆ.[೪೫] ಈ ಸರಣಿಯ ಎರಡನೇ ಜಾಹೀರಾತುನಲ್ಲಿ, ಗೇಟ್ಸ್‌ ಮತ್ತು ಸ್ಟಿನ್‌ಫೆಲ್ಡ್‌ ಸಾಮಾನ್ಯ ಕುಟುಂಬವೊಂದರ ಮನೆಯಲ್ಲಿದ್ದು, ಸಾಮಾನ್ಯ ಜನರೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯವಿದೆ.ಅದು ಕೂಡ ಸತ್ತ್ಯ

ಮೈಕ್ರೋಸಾಫ್ಟ್‌ನ ನಂತರದ ದಿನಗಳು

ಮೈಕ್ಟೋಸಾಫ್ಟ್‌ ಸಂಸ್ಥೆಯನ್ನು ಬಿಟ್ಟನಂತರ, ಗೇಟ್ಸ್‌ ತಮ್ಮ ಪರೋಪಕಾರಿ ಸೇವೆಗಳನ್ನು ಮತ್ತು ಇತರೆ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 1964ರಲ್ಲಿ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ರಿಚರ್ಡ್ ಫೆನ್‌ಮನ್ ಎನ್ನುವರು ದಿ ಕ್ಯಾರೆಕ್ಟರ್‌ ಆಫ್‌ ಫಿಸಿಕಲ್‌ ಲಾ‌ ಎನ್ನುವ ಶಿರೋನಾಮೆಯ ಪ್ರಚಾರ ಉಪನ್ಯಾಸ ಮಾಲೆಯನ್ನು ನೀಡಿದ್ದರು. ಇದನ್ನು BBC ಧ್ವನಿಮುದ್ರಿಸಿಕೊಂಡಿತ್ತು. ಈ ವಿಡಿಯೋ ಹಕ್ಕುಗಳನ್ನು ಕೊಂಡುಕೊಂಡ ಗೇಟ್ಸ್‌ ಅದನ್ನು ಮೈಕ್ರೋಸಾಫ್ಟ್‌ನ ಟುವ ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರು.[೪೬][೪೭]

ವೈಯಕ್ತಿಕ ಜೀವನ

ಬಿಲ್‌ ಮತ್ತು ಮೆಲಿಂಡ ಗೇಟ್ಸ್‌, ಜೂನ್‌ 2009.

ಗೇಟ್ಸ್‌,ದಲ್ಲಾಸ್‌ನವರಾದ ಮೆಲಿಂಡ ಫ್ರೆಂಚ್‌ ಅವರನ್ನು 1994ರ ಜನವರಿ 1ರಂದು ಟೆಕ್ಸಾಸ್‌ನಲ್ಲಿ ವಿವಾಹವಾದರು. ಇವರಿಗೆ ಜೆನ್ನಿಫರ್‌ ಕ್ಯಾಥರಿನ್‌ (1996), ರೋರಿ ಜಾನ್‌ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ. ಗೇಟ್ಸ್‌ ದಂಪತಿಗಳ ಮನೆಯು ಮಣ್ಣಿನ ಛಾವಣಿಯ ಮನೆಯಾಗಿದ್ದು, ಇದರ ಪಕ್ಕದಲ್ಲಿ ಬೆಟ್ಟವೊಂದಿದೆ. ಈ ಬೆಟ್ಟವು ವಾಷಿಂಗ್ಟನ್‌ನ ಮೆಡಿನನಗರದದಲ್ಲಿರುವ ವಾಷಿಂಗ್ಟನ್‌ ಸರೋವರವನ್ನು ಮೇಲಿನಿಂದ ನೋಡುವಂತಿದೆ. ಕಿಂಗ್‌ ಕೌಂಟಿ ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ.

66,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇವರ ಎಸ್ಟೇಟ್‌ 60 ಅಡಿಯ ಒಂದು ಈಜುಕೊಳ, ಇದರ ಅಡಿಯಲ್ಲಿ ಸಂಗೀತ ವ್ಯವಸ್ಥೆ, 2500 ಚದರ ಅಡಿ ವ್ಯಾಯಾಮ ಕೊಠಡಿ ಮತ್ತು 1000 ಚದರ ಅಡಿಗಳ ಊಟದ ಕೊಠಡಿಗಳನ್ನು ಒಳಗೊಂಡಿದೆ.[೪೮]

ಗೇಟ್ಸ್‌ ಅವರ ಖಾಸಗಿ ಸಂಪಾದನೆಯಲ್ಲಿ ಲಿಯೋನಾರ್ಡೋ ಡಾ ವಿಂಚಿ ಬರಹಗಳ ಸಂಗ್ರಹವಾಗಿರುವ ಕೋಡೆಕ್ಸ್‌ ಲೆಸ್ಟರ್‌ಕೂಡ ಒಂದು. ಇದನ್ನು 1994ರ ಹರಾಜಿನಲ್ಲಿ 30.8 ದಶಲಕ್ಷ $ಗೆ ಗೇಟ್ಸ್‌ ಖರೀದಿಸಿದ್ದರು.[೪೯] ಗೇಟ್ಸ್‌ ಅತ್ಯಾಸಕ್ತಿಯ ಓದುಗ ಎಂದು ಹೆಸರಾಗಿದ್ದಾರೆ. ಅಲ್ಲದೆ ಇವರ ಮನೆಯ ಒಳಮಾಳಿಗೆಯಲ್ಲಿ ಬೃಹತ್ತಾದ ಗ್ರಂಥಾಲಯವಿದ್ದು, ಇದನ್ನು ದಿ ಗ್ರೇಟ್‌ ಗ್ಯಾಟ್ಸ್‌ಬೈ ಕೃತಿಯಿಂದ ಆಯ್ದ ಉಕ್ತಿಯ ಕೆತ್ತನೆಯಿಂದ ಅಲಂಕರಿಸಲಾಗಿದೆ.[೫೦] ಬ್ರಿಡ್ಜ್‌, ಟೆನ್ನಿಸ್ ಮತ್ತು ಗಾಲ್ಫ್‌ ಆಟಗಳನ್ನು ಆಡುವ ಮೂಲಕ ಅವರು ಸಂತೋಷವನ್ನು ಕಂಡುಕೊಂಡಿದ್ದಾರೆ.[೫೧][೫೨]

"ಫೋರ್ಬ್ಸ್ 400" ಪಟ್ಟಿಯಲ್ಲಿ 1993ರಿಂದ 2007ರವರೆಗೆ ಗೇಟ್ಸ್‌ ಮೊದಲ ಸ್ಥಾನದಲ್ಲಿದ್ದರು. ಅಲ್ಲದೆ ಫೋರ್ಬ್ಸ್ ಬಿಡುಗಡೆ ಮಾಡುವ "ವಿಶ್ವದ ಅತ್ಯಂತ ದೊಡ್ಡ ಸಿರಿವಂತರ" ಪಟ್ಟಿಯಲ್ಲಿ 1995 ರಿಂದ 2007ರವರೆಗೆ ಮತ್ತು 2009ರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. 1999ರಲ್ಲಿ ಗೇಟ್ಸ್‌ ಅವರ ಸಂಪತ್ತಿನ ಒಟ್ಟು ಮೌಲ್ಯ 101 ಬಿಲಿಯನ್ $ನ್ನು ಮೀರಿತ್ತು. ಇದರಿಂದ ಮಾಧ್ಯಮಗಳು ಇವರನ್ನು "ಸೆಂಟಿಬಿಲಿಯನೇರ್‌" ಎಂದು ಕರೆದವು.[೫೩] ಡಾಟ್‌ ಕಾಮ್‌ ಗುಳ್ಳೆ ಒಡೆದ ನಂತರ ಮೈಕ್ರೋಸಾಫ್ಟ್‌ನ ಷೇರು ಬೆಲೆ ಕುಸಿದಿದ್ದರಿಂದಾಗಿ ಹಾಗೂ ಹಲವು ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗೇಟ್ಸ್‌ ದತ್ತಿ ಪ್ರತಿಷ್ಠಾನಗಳಿಗೆ ದಾನವಾಗಿ ನೀಡಿದ ಕಾರಣದಿಂದಾಗಿ, 2000ನೇ ಇಸವಿಯಿಂದ ಇವರ ಮೈಕ್ರೋಸಾಫ್ಟ್‌ ಹಿಡುವಳಿಯ ನಾಮಮಾತ್ರ ಮೌಲ್ಯವು ಕುಸಿಯಿತು. 2006ರ ಮೇ ತಿಂಗಳಲ್ಲಿ ಬಂದ ಸಂದರ್ಶನವೊಂದರಲ್ಲಿ, ತಾವು ವಿಶ್ವದ ಅತಿ ದೊಡ್ಡ ಶ್ರೀಮಂತ ಆಗಬಾರದಿತ್ತು; ಏಕೆಂದರೆ ಇದು ವಿಶ್ವದ ಗಮನವನ್ನು ತನ್ನ ಕಡೆ ಸೆಳೆಯಿತು, ಇದು ನನಗೆ ಇಷ್ಟವಿರಲಿಲ್ಲ ಎಂದು ಗೇಟ್ಸ್‌ ಹೇಳಿದ್ದರು.[೫೪] ಮೈಕ್ರೋಸಾಫ್ಟ್ ಕಂಪನಿಯ ಹೊರಗೂ ಗೇಟ್ಸ್‌ ಕೆಲವು ಹೂಡಿಕೆಗಳನ್ನು ಹೊಂದಿದ್ದಾರೆ. ಇವು 2006ರಲ್ಲಿ ಇವರಿಗೆ 616,667 $ನಷ್ಟು ಸಂಬಳ ಮತ್ತು 350,000 $ನಷ್ಟು ಬೋನಸ್‌ ಸೇರಿ ಒಟ್ಟು 966,667 $ನಷ್ಟು ಹಣವನ್ನು ಗೇಟ್ಸ್‌ಗೆ ತಂದುಕೊಟ್ಟವು.[೫೫]ಕೋರ್ಬಿಸ್‌ ಎಂಬ ಡಿಜಿಟಲ್‌ ಇಮೇಜಿಂಗ್‌ ಸಂಸ್ಥೆಯನ್ನು ಇವರು 1989ರಲ್ಲಿ ಸ್ಥಾಪಿಸಿದರು. ಇವರ ಬಹುದಿನಗಳ ಸ್ನೇಹಿತ ವಾರೆನ್‌ ಬಫೆಟ್‌ರವರು ಮು‌ಖ್ಯಸ್ಥರಾಗಿದ್ದ ಬರ್ಕ್‌ಷೈರ್‌ ಹಾಥ್‌ವೇ ಎಂಬ ಒಂದು ಹೂಡಿಕಾ ಕಂಪನಿಗೆ 2004ರಲ್ಲಿ ಗೇಟ್ಸ್‌ ನಿರ್ದೇಶಕರಾಗಿ ನೇಮಕಗೊಂಡರು.[೫೬] ೩, ಮೇ, ೨೦೨೧ ರಂದು ವಿಧ್ಯುಕ್ತವಾಗಿ ಹೇಳಿಕೆ ಕೊಟ್ಟ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ, ಮೆಲಿಂಡ ಗೇಟ್ಸ್ ೨೭ ವರ್ಷಗಳ ಬಳಿಕ ತಮ್ಮ ವೈವಾಹಿಕ ಜೀವನಕ್ಕೆ ಡಿವೋರ್ಸ್ ಘೋಷಿಸಿದ್ದಾರೆ.[೫೭]

ಲೋಕೋಪಕಾರ

'ಸಹಸ್ರಮಾನದ ಅಭಿವೃದ್ಧಿ ಗುರಿಗಳ ಮೇಲಿನ ಕ್ರಿಯಾಯೋಜನೆಗೆ ಕರೆ (ಕಾಲ್‌ ಟು ಆಕ್ಷನ್‌) (CTA)' ಕಾರ್ಯಕ್ರಮದಲ್ಲಿ ಬೋನೋ, ಜೋರ್ಡಾನ್‌ನ ರಾಣಿ ರೇನಿಯಾ, ಬ್ರಿಟಿಷ್‌ ಪ್ರಧಾನಮಂತ್ರಿ ಗೋರ್ಡಾನ್‌ ಬ್ರೌನ್‌, ನೈಜಿರಿಯಾದ ಅಧ್ಯಕ್ಷ ಯಾರ್‌ ಅದುವ ಮತ್ತು ಇತರೆ ಗಣ್ಯರೊಂದಿಗಿರುವ ಗೇಟ್ಸ್‌ 250 px (ಬಲದಿಂದ ಎರಡನೆಯವರು).

ಇವರ ಸಂಪತ್ತಿನಲ್ಲಿ ಬಹು ಭಾಗವನ್ನು ದಾನವಾಗಿ ನೀಡಬಹುದೆಂದು ಸಾರ್ವಜನಿಕ ಅಭಿಪ್ರಾಯ ಸಂಚಯಗೊಳ್ಳುತ್ತಾ ಹೋದಾಗ, ಇತರರು ತಮ್ಮ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಗೇಟ್ಸ್‌ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. ಆಂಡ್ಯ್ರೂ ಕಾರ್ನೆಗೀ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರ ಲೋಕೋಪಕಾರಿ ಕಾರ್ಯಗಳನ್ನು ಅಧ್ಯಯನ ಮಾಡಿದ ಗೇಟ್ಸ್‌, ವಿಲಿಯಂ ಎಚ್‌. ಗೇಟ್ಸ್ ಪ್ರತಿಷ್ಠಾನ‌ ಸ್ಥಾಪಿಸಲು 1994ರಲ್ಲಿ ಮೈಕ್ರೋಸಾಫ್ಟ್‌ನ ಷೇರುಗಳ ಒಂದಷ್ಟು ಭಾಗವನ್ನು ಮಾರಿದರು. 2000ರಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿ ಮೆಲಿಂಡ ಗೇಟ್ಸ್‌ ಮೂರು ಕುಟುಂಬಗಳ ಪ್ರತಿಷ್ಠಾನಗಳನ್ನು ಒಗ್ಗೂಡಿಸಿ ಬಿಲ್‌ & ಮೆಲಿಂಡ ಗೇಟ್ಸ್ ಫೌಂಡೇಷನ್‌ ಎಂಬ ದತ್ತಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದು ಪಾರದರ್ಶಕವಾಗಿಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್‌ ದತ್ತಿ ಪ್ರತಿಷ್ಠಾನ ಎಂಬ ಹೆಗ್ಗಳಿಕೆ ಪಡೆದಿದೆ.[೫೮] ಪ್ರತಿಷ್ಠಾನದ ಹಣವು ವೆಲ್‌ಕಮ್‌ ಟ್ರಸ್ಟ್‌ನಂತಹ ಇತರೆ ಪ್ರಮುಖ ದತ್ತಿ ಸಂಸ್ಥೆಗಳಿಂತ ಭಿನ್ನವಾಗಿ ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ದಾನಿಗಳು ತಿಳಿಯಲಿ ಎಂಬ ಕಾರಣಕ್ಕೆ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು.[೫೯][೬೦] ಡೇವಿಡ್‌ ರಾಕ್‌ಫೆಲ್ಲರ್‌ ಅವರ ಔದಾರ್ಯ ಮತ್ತು ಅತೀವವಾದ ಪರೋಪಕಾರಿ ಗುಣ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಗೇಟ್ಸ್‌ ಹಾಗೂ ಅವರ ತಂದೆ, ರಾಕ್‌ಫೆಲ್ಲರ್‌ ಅವರನ್ನು ಹಲವು ಬಾರಿ ಭೇಟಿ ಮಾಡಿ, ರಾಕ್‌ಫೆಲ್ಲರ್‌ ಕುಟುಂಬದ ಪರೋಪಕಾರಿ ಉದ್ದೇಶಗಳ ಮಾದರಿಯಲ್ಲಿಯೇ ತಮ್ಮ ದಾನದ ಸ್ವರೂಪವನ್ನೂ ರೂಪಿಸಿಕೊಂಡರು. ಅಂದರೆ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ತಯಾರಿಸಿದರು.[೬೧] 2007ರವರೆಗೆ ಇದ್ದಂತೆ, ಬಿಲ್‌ ಮತ್ತು ಮೆಲಿಂಡ ಗೇಟ್ಸ್‌ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ.[೬೨]

ಪ್ರತಿಷ್ಠಾನವು ಟೀಕೆಗಳನ್ನೂ ಎದುರಿಸಿದೆ. ತನ್ನ ಹೂಡಿಕೆಯ ಮೇಲಿನ ಲಾಭವನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ, ಪ್ರತಿಷ್ಠಾನವು ತನ್ನ ವಿತರಣೆಯಾಗಿಲ್ಲದ ಆಸ್ತಿಯನ್ನು ಹೂಡಿಕೆ ಮಾಡುತ್ತದೆ ಎಂಬುದು ಇದರ ಹಿಂದಿನ ಕಾರಣ. ಇದರ ಪರಿಣಾಮವಾಗಿ, ಈಗಾಗಲೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತಷ್ಟು ಹೆಚ್ಚಲು ಕಾರಣವಾಗಿವೆ ಎಂದು ಟೀಕೆಗೆ ಗುರಿಯಾಗಿರುವ ಕಂಪನಿಗಳನ್ನು ಪ್ರತಿಷ್ಠಾನದ ಹೂಡಿಕೆಗಳು ಒಳಗೊಂಡಿವೆ. ದುರಂತವೆಂದರೆ ಇದೇ ದೇಶಗಳಲ್ಲಿ ಪ್ರತಿಷ್ಠಾನ ಬಡತನವನ್ನು ನೀಗಿಸಲು ಪ್ರಯತ್ನಪಡುತ್ತಿದೆ. ಅಂತಹ ಕಂಪನಿಗಳೆಂದರೆ ಪರಿಸರವನ್ನು ವ್ಯಾಪಕವಾಗಿ ಹಾಳುಗೆಡವುತ್ತಿರುವ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರದ ಔಷಧಿ ಸಂಸ್ಥೆಗಳು.[೬೩] ಮಾಧ್ಯಮಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರತಿಷ್ಠಾನವು 2007ರಲ್ಲಿ, ಸಾಮಾಜಿಕ ಜವಾಬ್ಧಾರಿಯನ್ನು ಮೌಲ್ಯಮಾಪನ ಮಾಡಲು ತನ್ನ ಹೂಡಿಕೆಗಳ ಪರಿಶೀಲನೆ ಮಾಡುವುದಾಗಿ ಘೋಷಿಸಿತು.[೬೪] ಇದು ತರುವಾಯ ಪರಿಶೀಲನೆಯನ್ನು ರದ್ದುಪಡಿಸಿತಲ್ಲದೆ ಕಂಪನಿಯ ಪದ್ಧತಿಗಳನ್ನು ಪ್ರಭಾವಿಸುವ ಮತ ಚಲಾವಣೆ ಹಕ್ಕನ್ನು ಬಳಸುವಾಗ ಹೆಚ್ಚಿನ ಲಾಭ ತರುವಲ್ಲಿ ಹೂಡಿಕೆ ಮಾಡುವ ತನ್ನ ನಿಯಮಕ್ಕೆ ಬದ್ಧವಾಗಿ ಹಾಗೆಯೇ ಉಳಿಯಿತು.[೬೫]

ಮಾನ್ಯತೆ

ಟೈಮ್‌ ನಿಯತಕಾಲಿಕವು ಗೇಟ್ಸ್‌ ಅವರನ್ನು 20ನೇ ಶತಮಾನವನ್ನು ಅತಿಯಾಗಿ ಪ್ರಭಾವಿಸಿದ ವಿಶ್ವದ 100 ಜನರಲ್ಲಿ ಒಬ್ಬರು ಎಂದು ಗುರ್ತಿಸಿದೆ. ಅಲ್ಲದೆ 2004, 2005, ಮತ್ತು 2006ರಲ್ಲಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರು ಎಂದೂ ಹೆಸರಿಸಿದೆ. ಗೇಟ್ಸ್‌, ಇವರ ಪತ್ನಿ ಮೆಲಿಂಡ ಮತ್ತು U2 ರಾಕ್‌ ಬ್ಯಾಂಡ್‌ನ ಹಾಡುಗಾರ ಬೊನೊ ಇವರನ್ನು ಇವರ ಜನೋಪಕಾರಿ ಕೆಲಸಗಳಿಗಾಗಿ 2005ರ ವರ್ಷದ ವ್ಯಕ್ತಿಗಳು ಎಂದು ಟೈಮ್‌ ನಿಯತಕಾಲಿಕವು ಗೌರವಿಸಿದೆ.[೬೬] 2006ರ‍ಲ್ಲಿ, "ನಮ್ಮ ಕಾಲದ ಹೀರೋಗಳು" ಎಂಬ ಪಟ್ಟಿ ಸಿದ್ಥಪಡಿಸಲು ನಡೆದ ಮತದಾನದಲ್ಲಿ ಗೇಟ್ಸ್‌ ಎಂಟನೇ ಸ್ಥಾನ ಗಳಿಸಿದ್ದರು.[೬೭] ಸಂಡೆ ಟೈಮ್ಸ್‌ ನ 1999ರ ಪವರ್‌ ಲಿಸ್ಟ್‌ನಲ್ಲಿ ಇವರು ಸೇರ್ಪಡೆಗೊಂಡಿದ್ದರು. ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್ಸ್ ಮ್ಯಾಗಜಿನ್‌ 1994ರಲ್ಲಿ ಇವರನ್ನು ವರ್ಷದ CEO ಎಂದು ಆಯ್ಕೆ ಮಾಡಿತ್ತು. ಟೈಮ್‌ 1998ರಲ್ಲಿ ಪ್ರಕಟಿಸಿದ "ಟಾಪ್‌ 50 ಸೈಬರ್‌ ಇಲೈಟ್‌" ಪಟ್ಟಿಯಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದರು. 1999ರಲ್ಲಿ ಅಪ್‌ಸೈಡ್‌ ಇಲೈಟ್‌ 100ರಲ್ಲಿ ಎರಡನೇ ಸ್ಥಾನ ಪಡೆದಿದ್ದರು. ದಿ ಗಾರ್ಡಿಯನ್‌ ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ "ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನ"ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು.[೬೮]

2000ದಲ್ಲಿ [೬೯]ನೆದರ‍್ಲ್ಯಾಂಡ್ಸ್‌ಬ್ರೂಕೆಲೆನ್‌ನಲ್ಲಿರುವ ನೆನ್ರೋಡ್‌ ಬಿಸಿನೆಸ್‌ ಯೂನಿವರ್ಸಿಟೀಟ್‌; 2002ರಲ್ಲಿ ಸ್ವೀಡನ್‌ಸ್ಟಾ‌ಕ್‌ಹೋಮ್‌‌ನಲ್ಲಿರುವ ರಾಯಲ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ; 2005ರಲ್ಲಿ ಜಪಾನ್‌ನ ಟೋಕ್ಯೋದಲ್ಲಿರುವ ವಾಸೆಡ ವಿಶ್ವವಿದ್ಯಾಲಯ; 2007ರ ಏಪ್ರಿಲ್‌ನಲ್ಲಿ ಚೀನಾಬೀಜಿಂಗ್‌ನಲ್ಲಿರುವ ಸಿಂಘುವಾ ವಿಶ್ವವಿದ್ಯಾಲಯ[೭೦]; 2007ರಲ್ಲಿ[೭೧] ಹಾರ್ವರ್ಡ್ ವಿಶ್ವವಿದ್ಯಾಲಯ; ಜನವರಿ 2008ರಲ್ಲಿ[೭೨] ಸ್ಟಾಕ್‌ಹೋಮ್‌‌ನಲ್ಲಿರುವ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟೆಟ್‌ ಮತ್ತು ಜೂನ್‌ 2009ರಲ್ಲಿ [೭೩]ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯಗಳು ಗೇಟ್ಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು‌ ನೀಡಿ ಗೌರವಿಸಿವೆ. ಇವರು ಪೆಕಿಂಗ್‌ ವಿಶ್ವವಿದ್ಯಾಲಯದ ಗೌರವ ಟ್ರಸ್ಟೀ ಆಗಿ 2007ರಲ್ಲಿ ಆಯ್ಕೆಯಾದರು.[೭೪] ಇಷ್ಟೇ ಅಲ್ಲದೆ 2005ರಲ್ಲಿ ರಾಣಿ ಎಲಿಜೆಬೆತ್‌ II ಅವರಿಂದ ಗೌರವಪೂರ್ವಕವಾದ ನೈಟ್‌ ಕಮ್ಯಾಂಡರ್‌ ಆಫ್‌ ದಿ ಆರ್ಡರ್‌ ಆಪ್‌ ದಿ ಬ್ರಿಟಿಷ್‌ ಎಂಪೈರ್‌ (KBE) ಆಗಿಯೂ ಗೇಟ್ಸ್‌ ನೇಮಕಗೊಂಡರು[೭೫]. ಇಷ್ಟೇ ಅಲ್ಲದೇ, ಕೀಟಶಾಸ್ತ್ರಜ್ಞರು ಎರಿಸ್ಟಾಲಿಸ್‌ ಗೇಟ್ಸಿ ಎಂಬ ಹೂವಿನ ನೊಣಕ್ಕೆ ಬಿಲ್‌ ಗೇಟ್ಸ್‌ ಅವರ ಹೆಸರನ್ನು ಗೌರವಸೂಚಕವಾಗಿ ಇರಿಸಿದ್ದಾರೆ.[೭೬]

ವಿಶ್ವದಾದ್ಯಂತ, ವಿಶೇಷವಾಗಿ ಮೆಕ್ಸಿಕೋದಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನಿರ್ದಿಷ್ಟವಾಗಿ "ಅನ್‌ ಪೇಸ್‌ ಡೆ ಲೆಕ್ಟೋರೆಸ್‌ " ಎಂಬ ಯೋಜನೆಯಲ್ಲಿ ಅವರು ಕೈಗೊಂಡ ಪರೋಪಕಾರಿ ಕೆಲಸಗಳಿಗಾಗಿ 2006ರ ನವೆಂಬರ್‌ನಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿಗೆ ಆರ್ಡರ್‌ ಆಫ್‌ ದಿ ಆಝ್‌ಟೆಕ್‌ ಈಗಲ್‌ ಎಂಬ ಪ್ರಶಸ್ತಿ ನೀಡಲಾಯಿತು.[೭೭]

ಹೂಡಿಕೆಗಳು

  • ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಗೊಂಡಿರುವ ಖಾಸಗಿ ಹೂಡಿಕೆ ಸಂಸ್ಥೆಯಾಗಿರುವ ಮತ್ತು ಹಿಡುವಳಿ ಕಂಪನಿಯಾಗಿರುವ ಕ್ಯಾಸ್ಕೇಡ್‌ ಇನ್‌ವೆಸ್ಟ್‌ಮೆಂಟ್‌ LLCಯನ್ನು ಬಿಲ್‌ ಗೇಟ್ಸ್ ನಿಯಂತ್ರಿಸುತ್ತಾರೆ. ಇದು ಕಿರ್ಕ್‌ಲ್ಯಾಂಡ್‌, WAನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.
  • bgC3ಎಂಬ ಹೊಸ ಚಿಂತನಾ-ಚಿಲುಮೆಯ ಕಂಪನಿಯನ್ನು ಬಿಲ್‌ ಗೇಟ್ಸ್ ಸ್ಥಾಪಿಸಿದ್ದಾರೆ.
  • ಕೋರ್ಬಿಸ್‌ ಎಂಬ ಡಿಜಿಟಲ್‌ ಇಮೇಜ್‌ ಪರವಾನಗಿ ಮತ್ತು ಹಕ್ಕುಗಳ ಸೇವೆಗಳನ್ನು ಒದಗಿಸುವ ಕಂಪನಿಯನ್ನು ಗೇಟ್ಸ್‌ ಹೊಂದಿದ್ದಾರೆ.

ಗ್ರಂಥಸೂಚಿ

ಗೇಟ್ಸ್‌ ಎರಡು ಪುಸ್ತಕಗಳನ್ನು ಬರೆದಿದ್ದಾರೆ:

ಟಿಪ್ಪಣಿಗಳು

  1. ೧.೦ ೧.೧ "ಫೋರ್ಬ್ಸ್ ನಿಯತಕಾಲಿಕೆಯ 400 ಶ್ರೀಮಂತ ಅಮೆರಿಕನ್ನರ ಪಟ್ಟಿ - 2009 (ಆಂಗ್ಲ ವರದಿ)". Forbes. 2009-09-30. Retrieved 2009-10-02.
  2. (Manes 1994, p. 11)
  3. ೩.೦ ೩.೧ Chapman, Glenn (2008-06-27). "Bill Gates Signs Off". Agence France-Presse. Archived from the original on 2008-06-30.
  4. Wahba, Phil (2008-09-17). "Bill Gates tops U.S. wealth list 15 years in a row". Reuters. Retrieved 2008-11-06.
  5. ಗೇಟ್ಸ್‌ ನಿಯಮಿತವಾಗಿ ತಮ್ಮ ಷೇರು ಮಾಲೀಕತ್ವವನ್ನು ಸಾರ್ವಜನಿಕ SEC ಫಾರ್ಮ್‌ 4 ಫೈಲಿಂಗ್ಸ್‌ ಮೂಲಕ ದಾಖಲೆಗಳನ್ನು ಸಾರ್ವಜನಿಕರ ಮುಂದಿಡುತ್ತಾರೆ.
  6. (Manes 1994, p. 459)
  7. (Lesinski 2006, p. 96)
  8. ಬಿಲ್‌ ಗೇಟ್ಸ್‌ರ ಪೂರ್ವಜರು
  9. "Scottish Americans". albawest.com. Retrieved 2009-04-29.
  10. (Manes 1994, p. 15)
  11. (Manes 1994, p. 47)
  12. (Manes 1994, p. 24)
  13. (Manes 1994, p. 27)
  14. ೧೪.೦ ೧೪.೧ (Gates 1996, p. 12)
  15. (Manes 1994, p. 34)
  16. (Gates 1996, p. 14)
  17. "ಕಾಂಗ್ರೆಷ್ಯನಲ್‌ ಪೇಜ್‌ ಹಿಸ್ಟರಿ" Archived 2015-05-01 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಯುನೈಟೆಡ್‌ ಸ್ಟೇಟ್ಸ್‌ ಹೌಸ್‌ ಪೇಜ್‌ ಅಸೋಸಿಯೇಷನ್ ಆಫ್‌ ಅಮೆರಿಕ "ಪೇಜ್‌ ಯೋಜನೆಯು ಹಲವು ರಾಜಕಾರಣಿಗಳನ್ನು, ಕಾಂಗ್ರೆಸ್‌ ಸದಸ್ಯರನ್ನು ಜೊತೆಗೆ ಇತರೆ ಪ್ರಸಿದ್ಧ ಪುರುಷ ಮತ್ತು ಮಹಿಳೆಯರನ್ನು ಸೃಷ್ಟಿಸಿತು. ಅವರಲ್ಲಿ, ಅತಿ ಹೆಚ್ಚು ಅವಧಿಯವರೆಗೆ ಸೇವೆ ಸಲ್ಲಿಸಿದ ಕಾಂಗ್ರೆಸ್‌ನ ಸದಸ್ಯರಾದ ಗೌರವಾನ್ವಿತ ಜಾನ್‌ ಡಿಂಗೆಲ್‌, ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನ ಸ್ಥಾಪಕ ಮತ್ತು CEO ಬಿಲ್‌ ಗೇಟ್ಸ್‌, ಹೌಸ್‌ನ ಮಾಜಿ ಗುಮಾಸ್ತರಾದ ಡೊನಾಲ್ಡ್‌ ಕೆ. ಆಂಡರ್ಸನ್‌"
  18. "The new—and improved?—SAT". The Week Magazine. Archived from the original on 2006-05-10. Retrieved 2006-05-23.
  19. (Gates 1996, p. 15)
  20. "ಆರ್ಕೈವ್ ನಕಲು". Archived from the original on 2010-01-13. Retrieved 2009-11-12.
  21. http://www.forbes.com/forbes/1997/1013/6008040a_2.html
  22. Gates, William; Papadimitriou, Christos (1979). "Bounds for sorting by prefix reversal". Discrete mathematics. 27: 47–57. doi:10.1016/0012-365X(79)90068-2.
  23. ೨೩.೦ ೨೩.೧ (Gates 1996, p. 19)
  24. (Wallace, 1993 & 59)
  25. (Gates 1996, p. 18)
  26. ೨೬.೦ ೨೬.೧ ೨೬.೨ "Microsoft Visitor Center Student Information: Key Events in Microsoft History". Microsoft. Archived from the original (.DOC) on 2008-02-26. Retrieved 2008-02-18. {{cite journal}}: Cite journal requires |journal= (help)
  27. ೨೭.೦ ೨೭.೧ ೨೭.೨ ೨೭.೩ "Microsoft history". The History of Computing Project. Archived from the original on 2008-05-14. Retrieved 2008-03-31.
  28. (Manes 1994, p. 81)
  29. Gates, Bill (2005-10-13). Remarks by Bill Gates (Speech). Waterloo, Ontario. Retrieved 2008-03-31. (META redirects to http://www.microsoft.com/presspass/exec/billg/speeches/2005/10-13Waterloo.aspx)
  30. Maiello, John Steele Gordon Michael (2002-12-23). "Pioneers Die Broke". Forbes. Archived from the original on 2008-04-12. Retrieved 2008-03-31.
  31. (Gates 1996, p. 54)
  32. (Manes 1994, p. 193)
  33. "May 16, 1991 internal strategies memo from Bill Gates". Bralyn. Retrieved 2008-04-04.
  34. Rensin, David (1994). "The Bill Gates Interview". Playboy.
  35. Ballmer, Steve (1997-10-09). "Steve Ballmer Speech Transcript — Church Hill Club". Microsoft. Retrieved 2008-03-31.
  36. ೩೬.೦ ೩೬.೧ Isaacson, Walter (1997-01-13). "The Gates Operating System". Time. Archived from the original on 2000-06-19. Retrieved 2008-03-31.
  37. Bank, David (1999-02-01). "Breaking Windows". The Wall Street Journal. Archived from the original on 2012-07-29. Retrieved 2008-03-31.
  38. ೩೮.೦ ೩೮.೧ Gates, Bill (1997-09-26). Remarks by Bill Gates (Speech). San Diego, California. Retrieved 2008-03-31.
  39. Herbold, Robert (2004). The Fiefdom Syndrome: The Turf Battles That Undermine Careers and Companies - And How to Overcome Them.
  40. "Microsoft Announces Plans for July 2008 Transition for Bill Gates". Microsoft. 2006-06-15.
  41. "Gates deposition makes judge laugh in court". CNN. 1998-11-17. Retrieved 2008-03-30.
  42. "Microsoft's Teflon Bill". BusinessWeek. 1998-11-30. Retrieved 2008-03-30.
  43. ೪೩.೦ ೪೩.೧ Heilemann, John (2000-11-01). "The Truth, The Whole Truth, and Nothing But The Truth". Wired. 46: 833. doi:10.1007/s11517-008-0355-6. PMID 18509686. Retrieved 2008-03-31. {{cite journal}}: More than one of |author= and |last= specified (help); Unknown parameter |month= ignored (help)
  44. ದಿ ಸ್ಮೋಕಿಂಗ್‌ ಗನ್‌ ವೆಬ್‌ಸೈಟ್‌ನ ಛಾಯಾಚಿತ್ರಗಳು
  45. "MSNBC ಆಡ್‌ಬ್ಲಾಗ್‌ ಸೈಟ್‌". Archived from the original on 2010-05-05. Retrieved 2009-11-12.
  46. "CNET ಟುವ ಯೊಜನೆ". Archived from the original on 2012-07-13. Retrieved 2009-11-12.
  47. ಸಾಫ್ಟ್‌ಪೀಡಿಯ
  48. "Forbes.com ವಾಷಿಂಗ್ಟನ್‌ ಎಸ್ಟೇಟ್‌ನ, ಗೇಟ್ಸ್‌ರವ ಮೆಡಿನಾದ ಕವರೇಜ್‌". Archived from the original on 2012-09-06. Retrieved 2009-11-12.
  49. (Lesinski 2006, p. 74)
  50. Paterson, Thane (2000-06-13). "Advice for Bill Gates: A Little Culture Wouldn't Hurt". Business Week. Retrieved 2008-04-28.
  51. "Bill Gates: Chairman". Microsoft Corporation. 2008.
  52. "Profile: Bill Gates". BBC news. 2004.
  53. (Fridson 2001, p. 113)
  54. Bolger, Joe (2006-05-05). "I wish I was not the richest man in the world, says Bill Gates". The Times. Archived from the original on 2008-09-23. Retrieved 2008-03-31.
  55. "Microsoft 2006 Proxy Statement". Microsoft. 2007-10-06. Retrieved 2008-02-14.
  56. Fried, Ina (2004-12-14). "Gates joins board of Buffett's Berkshire Hathaway". CNET. Archived from the original on 2013-12-16. Retrieved 2008-03-31.
  57. Bill Gates and Melinda Gates are splitting up after 27 years,-Jordan novel,cnbc.com
  58. "Flat-pack accounting". The Economist. 2006-05-11. Retrieved 2008-04-01.
  59. Cronin, Jon (2005-01-25). "Bill Gates: billionaire philanthropist". BBC News. Retrieved 2008-04-01.
  60. "Our Approach to Giving". Bill & Melinda Gates Foundation. Archived from the original on 2008-04-04. Retrieved 2008-04-01.
  61. "2005 Annual Report" (PDF). Rockefeller Brothers Fund. 2006-01-01. Archived from the original (PDF) on 2008-02-16. Retrieved 2008-02-14. {{cite journal}}: Cite journal requires |journal= (help)
  62. 50 ಅತಿ ಉದಾರಿ ಅಮೆರಿಕನ್ನರು Archived 2010-01-11 ವೇಬ್ಯಾಕ್ ಮೆಷಿನ್ ನಲ್ಲಿ..
  63. ಗೇಟ್ಸ್ ಪ್ರತಿಷ್ಠಾನ‌ನ ಉತ್ತಮ ಕೆಲಸಗಳ ಮೇಲೆ ಕವಿದ ಕಗ್ಗತ್ತಲ ಮೋಡ, ಲಾಸ್ ಏಂಜಲೀಸ್‌ ಟೈಮ್ಸ್‌, 7 ಜನವರಿ, 2006
  64. ಗೇಟ್ಸ್ ಪ್ರತಿಷ್ಠಾನ‌ನಿಂದ ಹೂಡಿಕೆ ಅವಲೋಕನ, ದಿ ಸಿಯಾಟಲ್‌ ಟೈಮ್ಸ್‌, 10 ಜನವರಿ 2007
  65. ಗೇಟ್ಸ್ ಪ್ರತಿಷ್ಠಾನ‌ನಿಂದ ಹೂಡಿಕೆ ಯೋಜನೆಯ ನಿರ್ವಹಣೆ, ದಿ ಆಸ್ಟಿನ್‌ ಸ್ಟೇಟ್ಸ್‌‌ಮನ್‌, 14 ಜನವರಿ 2007
  66. (Lesinski 2006, p. 102)
  67. Cowley, Jason (2006-06-22). "Heroes of our time — the top 50". New Statesman. Retrieved 2008-02-17.
  68. "Gates 'second only to Blair'". BBC News. 1999-09-26. Retrieved 2008-03-30.
  69. "Eredoctoraat Universiteit Nyenrode voor Wim Kok" (Press release) (in Dutch). Nyenrode Business Universiteit. 2003-08-13. Archived from the original on 2008-02-18. Retrieved 2008-02-18.{{cite press release}}: CS1 maint: unrecognized language (link)
  70. "ಆರ್ಕೈವ್ ನಕಲು". Archived from the original on 2012-07-12. Retrieved 2009-11-12.
  71. Hughes, Gina (2007-06-08). "Bill Gates Gets Degree After 30 Years". Yahoo!. Archived from the original on 2007-12-27. Retrieved 2008-02-18.
  72. Svärd, Madeleine (2008-01-24). "Bill Gates honored with a doctor's cap". Karolinska Institutet. Archived from the original on 2008-02-19. Retrieved 2008-02-18.
  73. University of Cambridge (2009-06-12). "The Chancellor in Cambridge to confer Honorary Degrees". University of Cambridge. Archived from the original on 2012-07-17. Retrieved 2009-08-20.
  74. "ಆರ್ಕೈವ್ ನಕಲು". Archived from the original on 2011-06-11. Retrieved 2009-11-12.
  75. "Knighthood for Microsoft's Gates". BBC News. 2005-03-02. Retrieved 2008-02-18.
  76. Thompson, F. Christian (1999-08-19). "Bill Gates' Flower Fly Eristalis gatesi Thompson". The Diptera Site. Retrieved 2008-02-18.
  77. "Proclamation of the Award". Diario Oficial de la Federación. Retrieved 2008-03-30.


ಚೈತನ್ಯ ಇನ್ಫೋ-ಸಿಸ್ ಕಂಪ್ಯೂಟರ್ ಸೆಂಟರ್ ಮುದ್ಗಲ್

ಆಕರಗಳು

ಹೆಚ್ಚಿನ ಓದಿಗಾಗಿ

ಉಲ್ಲೇಖಗಳು


ಹೊರಗಿನ ಕೊಂಡಿಗಳು

Honorary titles
Preceded by World's Richest Person
1996–2007
Succeeded by
Preceded by World's Richest Person
2009–
Succeeded by
Incumbent