ವಿಷಯಕ್ಕೆ ಹೋಗು

ಬೆಲಾರುಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೆಲಾರೂಸ್ ಇಂದ ಪುನರ್ನಿರ್ದೇಶಿತ)
Рэспубліка Беларусь
Республика Беларусь
ಬೆಲಾರುಸ್ ಗಣರಾಜ್ಯ
Flag of ಬೆಲಾರುಸ್
Flag
ಚಿಹ್ನೆ of ಬೆಲಾರುಸ್
ಚಿಹ್ನೆ
Motto: none
Anthem: Мы, беларусы (ಬೆಲಾರುಸ್‍ನ ಭಾಷೆಯಲ್ಲಿ)
ಮಯ್, ಬೆರಾರುಸಿ
(ನಾವು, ಬೆಲಾರುಸಿನವರು)
Capitalಮಿನ್ಸ್ಕ್
Largest cityರಾಜಧಾನಿ
Official languagesಬೆಲಾರುಸಿನ ಭಾಷೆ, ರಷ್ಯನ್ ಭಾಷೆ
Governmentರಾಷ್ಟ್ರಪತಿ ಆಡಳಿತ ಗಣರಾಜ್ಯ
• ರಾಷ್ಟ್ರಪತಿ
ಅಲೆಕ್ಸಾಂಡರ್ ಲುಕಶೆಂಕೊ
• ಪ್ರಧಾನ ಮಂತ್ರಿ
ಸೆರ್ಗೆ ಸಿಡೊರ್ಸ್ಕಿ
ಸ್ವಾತಂತ್ರ್ಯ 
• ಘೋಷಿತ
ಜುಲೈ ೨೭, ೧೯೯೦
• ಸ್ಥಾಪನೆ
ಆಗಸ್ಟ್ ೨೫, ೧೯೯೧
• ಅಧಿಕೃತವಾಗಿ ಪ್ರಾರಂಭ
ಡಿಸೆಂಬರ್ ೨೫, ೧೯೯೧
• Water (%)
negligible (183 km²)1
Population
• ೨೦೦೭ estimate
9,724,723 (86th)
• ೧೯೯೯ census
10,045,237
GDP (PPP)೨೦೦೫ estimate
• Total
$79.13 billion (64th)
• Per capita
$7,700 (78th)
Gini (೨೦೦೨)29.7
low
HDI (೨೦೦೪)0.794
high · 67th
Currencyರೂಬಲ್ (BYR)
Time zoneUTC+3 (FET)
Calling code375
Internet TLD.by
  1. "Tourism". Belarusian Chamber of Commerce and Industry. Archived from the original on 2008-11-13. Retrieved 2006-03-26.

ಬೆಲಾರುಸ್ (ಬೆಲಾರುಸಿನ ಭಾಷೆ ಮತ್ತು ರಷ್ಯನ್ ಭಾಷೆಗಳಲ್ಲಿ: Беларусь; ಉಚ್ಛಾರ ) ಪೂರ್ವ ಯುರೋಪ್ನ ಒಂದು ದೇಶ. ಪೂರ್ವಕ್ಕೆ ರಷ್ಯಾ, ದಕ್ಷಿಣಕ್ಕೆ ಯುಕ್ರೇನ್, ಪಶ್ಚಿಮಕ್ಕೆ ಪೊಲೆಂಡ್, ಮತ್ತು ಉತ್ತರಕ್ಕೆ ಲಿಥುವೆನಿಯ ಮತ್ತು ಲಾಟ್ವಿಯ ದೇಶಗಳು ಇದರ ಗಡಿಯನ್ನು ನಿರ್ಮಿಸುತ್ತವೆ. ಇದರ ರಾಜಧಾನಿ ಮಿನ್ಸ್ಕ್. ದೇಶದ ಮೂರನೇ ಒಂದು ಭಾಗ ಕಾಡಿನಿಂದ ಆವೃತವಾಗಿರುವ ಈ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲಬು ಬೇಸಾಯ ಮತ್ತು ಉತ್ಪಾದನೆ. ಬೆಲಾರುಸ್ ಚೆರ್ನೊಬಿಲ್ ದುರಂತದಿ ಅತ್ಯಂತ ತೀವ್ರ ಪರಿಣಾಮವನ್ನು ಅನುಭವಿಸಿದ ದೇಶ.

ಬ್ಯೆಲೋರಷ್ಯ

ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಸ್ವಯಂ ಆಡಳಿತವುಳ್ಳ ಒಂದು ರಾಜಕೀಯ ವಿಭಾಗ. ಇದನ್ನು ಬ್ಯೆಲೋ ರಷ್ಯನ್ ಸೋವಿಯತ್ ಸಮಾಜ ಗಣರಾಜ್ಯವೆಂದು ಕರೆಯುತ್ತಾರೆ. ಈ ರಾಜ್ಯ ಉ. ಅ. 50( 15(-56( 45' ಪೊ. ರೇ. 23( 30(-34(ವರೆಗೆ ಪ್ರಸರಿಸಿದೆ. ಇದರ ಪಶ್ಚಿಮಕ್ಕೆ ಪೋಲೆಂಡ್, ಪೂರ್ವಕ್ಕೆ ಸೋಲೆನ್‍ಸ್ಕ್ ಮತ್ತು ಉರಾಲ್ ಪರ್ವತ ಪ್ರದೇಶ, ದಕ್ಷಿಣಕ್ಕೆ ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ ಹಾಗೂ ಉತ್ತರಕ್ಕೆ ಲೆನಿನ್‍ಗ್ರಾಡಿನ ಪಸ್ಕೋಫ್ ಪ್ರದೇಶಗಳಿವೆ. 1919 ಜನವರಿ 1ರಂದು ಅಸ್ತಿತ್ವಕ್ಕೆ ಬಂದ ಈ ಪ್ರದೇಶ ಉಕ್ರೇನಿನಂತೆ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದಿದೆ. ಉತ್ತರ ದಕ್ಷಿಣವಾಗಿ 560 ಕಿಮೀ ಪೂರ್ವಪಶ್ಚಿಮವಾಗಿ 650 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 2,07,600 ಚ.ಕಿಮೀ. ಜನಸಂಖ್ಯೆ 9,559,000) 1979. ರಾಜಧಾನಿ ಮಿನ್ಸ್‍ಕ್.

ಬ್ಯೆಲೋರಷ್ಯ ಜನರಲ್ಲಿ ಬಹುಪಾಲು ಬ್ಯೆಲೋರಷ್ಯನ್ನರು. ಇತರರೆಂದರೆ ರಷ್ಯನ್, ಉಕ್ರೇನಿಯನ್, ಪೋಲಿಷ್, ಯಹೂದಿ, ಲಿಥುಅನಿಯನ್ ಮುಂತಾದವರು. ಬ್ಯೆಲೋರಷ್ಯದ ಮಧ್ಯಭಾಗದಲ್ಲಿ ಜನಸಾಂದ್ರತೆ ದಟ್ಟವಾಗಿಯೂ ದಕ್ಷಿಣಭಾಗದಲ್ಲಿ ವಿರಳವಾಗಿಯೂ ಇದೆ. ಹವಾಗುಣ ಜುಲೈನಲ್ಲಿ ಸರಾಸರಿ 17(-19(ಅ ವರೆಗೆ ಇದ್ದು ಜನವರಿಯಲ್ಲಿ 50(ಅ ಯಿಂದ 8(ಅ ವರೆಗೆ ಇರುತ್ತದೆ. ವರ್ಷಕ್ಕೆ ಸರಾಸರಿ 559ರಿಂದ 711 ಮಿಮೀ ಮಳೆ ಬೀಳುತ್ತದೆ.

ಬ್ಯೆಲೋರಷ್ಯದಲ್ಲಿ ಹಳ್ಳ ದಿಣ್ಣೆ ಬಯಲುಗಳಿಂದ ಕೂಡಿದ ಪ್ರದೇಶ. ಸಮುದ್ರ ಮಟ್ಟದಿಂದ 346 ಮೀ ಎತ್ತರ ಇರುವ ಜಿರ್‍ಷಿನ್‍ಸ್ಕಿ ಪರ್ವತವೇ ಅತಿ ಎತ್ತರವಾದ್ದು. ಯೂರೋಪಿನ ಪ್ರಾಚೀನತಮ ಅಭಯಾರಣ್ಯವೆನಿಸಿದ ಬ್ಯೆಲೊವೆಷ್‍ಸ್ಕಯ ರಮಣೀಯ ಪ್ರದೇಶ. ಮೊದಲಿಗಿಂತ ಕಾಡು ಕಡಿಮೆಯಾಗಿದ್ದರೂ ಬ್ಯೆಲೋರಷ್ಯದ ಮೂರನೆಯ ಒಂದು ಭಾಗ ಅರಣ್ಯಪ್ರದೇಶದಿಂದ ಕೂಡಿದೆ. ಜಿಂಕೆ, ಕರಡಿ, ಮೊಲ, ಅಳಿಲು ಯೂರೋಪಿಯನ್ ಕಾಡೆಮ್ಮೆ, ಎಲ್ಕ್, 'ರೋ ಜಿಂಕೆ ಹೆಚ್ಚಾಗಿವೆ; ತೋಳ, ನರಿ, ಬ್ಯಾಡರ್, ಅರ್ಮಿನ್ ಮಾರ್ಟಿನ್, ನೀರುನಾಯಿ, ಮಿಂಕ್, ಬೀವರ್ ಮುಂತಾದವೂ ಕಾಣಸಿಗುತ್ತವೆ. ಇಲ್ಲಿಯ ಪಕ್ಷಿಗಳಲ್ಲಿ ಗ್ರೌಸ್, ಗೌಜಲು, ಕಾಡುಕೋಳಿ, ಉಲ್ಲಂಗಿ ಮುಂತಾದವು ಸೇರಿವೆ. ಸರೋವರಗಳಲ್ಲಿ ಬಗೆಬಗೆಯ ಮೀನುಗಳಿವೆ.

ಇಲ್ಲಿಯ ಬಹುಭಾಗ ಜವುಗು ಭೂಮಿ, ಕಾಳುಗಳು, ಆಲೂಗಡ್ಡೆ, ತರಕಾರಿ, ಹೊಗೆಸೊಪ್ಪು, ಗೋದಿ ವಿವಿಧ ತೆರನ ನಾರಿನ ಗಿಡಗಳನ್ನು ಮೇವಿನ ಹುಲ್ಲನ್ನೂ ವಿಶೇಷವಾಗಿ ಬೆಳೆಸುತ್ತಾರೆ. ರಬ್ಬರ್ ತಯಾರಿಕೆಯಲ್ಲಿ ಬಳಸುವ ಕೊಸಾಗಿಜ್ ಗಿಡ ಬೆಳೆಯುತ್ತದೆ. ಜೇನು, ಕೋಳಿ, ಹಂದಿ ಮುಂತಾದವುಗಳ ಸಾಕಣೆ, ಡೈರಿ ಫಾರಮ್ ಇತ್ಯಾದಿ ಕಸುಬುಗಳಲ್ಲಿ ಇಲ್ಲಿಯ ರೈತಾಪಿಜನ ನಿರತರು. ಮಿಂಕ್ ಮತ್ತು ಬೆಳ್ಳಿ ನರಿಗಳ ತಳಿ ಅಭಿವೃದ್ಧಿ ಇಲ್ಲಿಯ ವಿಶಿಷ್ಟ ಲಕ್ಷಣ.

ರಾಜಧಾನಿ ಮಿನ್ಸ್ಕ್‍ನಲ್ಲಿಯ ಯಾಕೂಬ್ ಕೋಲಾಸ್ ಚೌಕ

ಬ್ಯೆಲೋರಷ್ಯ ನದಿಸರೋವರಗಳ ನಾಡು. ಸುಮಾರು ಮೂರು ಸಾವಿರ ನದಿಗಳು ಒಟ್ಟು 51,000 ಕಿಮೀ ದೂರ ಕ್ರಮಿಸುತ್ತವೆ. ಸರೋವರಗಳ ಸಂಖ್ಯೆ ಸುಮಾರು ಹನ್ನೊಂದು ಸಾವಿರ. ಇವುಗಳಲ್ಲಿ ಹೆಚ್ಚಿನವು ಉತ್ತರಭಾಗದಲ್ಲಿವೆ. ಪಶ್ಚಿಮ ದ್ವಿನಾ, ಬಿರ್ಯೇಜಿನಾ, ನೀಪರ್, ಪ್ರಿಪ್ಯಾತ್, ಸೋಷ್ ಹಾಗೂ ನೀಮನ್ ಇಲ್ಲಿಯ ಮುಖ್ಯ ನದಿಗಳು. ನರೊಕ್, ಆಸ್ಟೆಯ್‍ಸ್ಕಾಯ್ ಹಾಗೂ ಡ್ರಿಸ್ವ್ಯಾತಿ ದೊಡ್ಡ ಸರೋವರಗಳು. ದೋಣಿಯಾನ, ಮರದ ದಿಮ್ಮಿಗಳ ಸಾಗಾಣಿಕೆ ಮತ್ತು ವಿದ್ಯುತ್ ಉತ್ಪಾದನೆಗೆ ನದಿಗಳು ಅನುವುಮಾಡಿಕೊಟ್ಟಿವೆ.

ಖನಿಜ ಸಂಪತ್ತಿನಲ್ಲಿ ಬ್ಯೆಲೋರಷ್ಯ ಶ್ರೀಮಂತರಾಜ್ಯ. ಕಲ್ಲಿದ್ದಲಿನಂತೆ ಬಳಸಲಾಗುವ ಪೀಟ್ ಹೇರಳವಾಗಿ ದೊರೆಯುತ್ತದೆ. ಎಣ್ಣೆ, ಕಲ್ಲಿದ್ದಲು, ಉಪ್ಪು, ಫಾಸ್ಫೇಟ್, ಕಬ್ಬಿಣದ ಅದುರು ಮುಂತಾದವು ಮತ್ತು ಉತ್ತಮವಾದ ಗಾಜಿನ ತಯಾರಿಕೆಗೆ ಅವಶ್ಯಕವಾದ ಸುಣ್ಣಕಲ್ಲು, ಡಾಲೊಮೈಟ್, ಮರಳು, ಬೆಣಚು ಮರಳು, ಸುಣ್ಣ ಜೇಡಿ ಸಿಗುತ್ತವೆ. ಹಂಚು ಮತ್ತು ಕೊಳವೆ ತಯಾರಿಕೆಯಲ್ಲಿ ಬಳಸುವ ಬಿರುಸು ಜೇಡಿಮಣ್ಣು ಬ್ರೆಸ್ಟ್ ಲಟಾಷಸ್ಕ್ ಎಂಬ ನಗರದ ಬಳಿ ದೊರೆಯುತ್ತದೆ.

ಮಹಾಯುದ್ದಗಳ ಅನಂತರ ಬ್ಯೆಲೋರಷ್ಯದಲ್ಲಿ ಕೈಗಾರಿಕೆಗಳು ಶೀಘ್ರವಾಗಿ ಬೆಳೆದಿವೆ. ಮಿನ್ಸ್ಕ್, ಗೋಮಲ್ ಮತ್ತು ಮಗೀಲ್ಯೆಫ್‍ಗಳಲ್ಲಿ ಕೃಷಿಗೆ ಸಂಬಂಧಿಸಿದ ಯಂತ್ರಗಳು, ಟ್ರ್ಯಾಕ್ಟರ್, ಲೋಹ ಕತ್ತರಿಸುವ ಸಾಧನಗಳು, ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಉತ್ಪಾದಿಸುವ ಘಟಕಗಳಾಗಿವೆ. ಸೊಲಗಾಸ್ರ್ಕ್ ಗ್ರಾಡ್ನೋ ಹಾಗೂ ಗೋಮಲ್ ನಗರಗಳಲ್ಲಿ ರಾಸಾಯನಿಕ ಗೊಬ್ಬರ, ರಬ್ಬರ್ ಸಾಧನಗಳು, ಪ್ಲಾಸ್ಟಿಕ್, ಬಣ್ಣ, ಶಾಖ ನಿರೋಧಕ ಗಾಜಿನ ಕೊಳವೆಗಳು ಇತ್ಯಾದಿ ತಯಾರಾಗುತ್ತವೆ. ಪ್ಲೈವುಡ್, ಬೆಂಕಿಕಡ್ಡಿ, ಪೀಠೋಪಕರಣ, ಲಿನನ್, ಉಲ್ಲನ್, ಸಿಲ್ಕ್ ಹಾಗೂ ಸಿಂಥೆಟಿಕ್ ದಾರಗಳು, ಸ್ಟಾರ್ಚ್, ಸೆಲ್ಯೂಲೋಸ್. ಚರ್ಮದ ಪದಾರ್ಥಗಳು ಮುಂತಾದವನ್ನು ಇಲ್ಲಿ ಸಿದ್ದಪಡಿಸಲಾಗುತ್ತದೆ.

ಬ್ಯೆಲೋ ಎಂದರೆ ಬಿಳಿ ಎಂದರ್ಥ. ಬ್ಯೆಲೋರಷ್ಯವನ್ನು ಬಿಳಿ ರಷ್ಯ ಎಂದೂ ಕರೆಯುವುದುಂಟು. ಮನೆಯಲ್ಲಿ ನೆಯ್ದ ಬಿಳಿಯ ಸಾಂಪ್ರದಾಯಿಕ ಉಡುಪುಗಳನ್ನು ಇಲ್ಲಿಯ ಜನ ಧರಿಸುತ್ತಿದ್ದುದರಿಂದ ಈ ಹೆಸರು ಬಂದಿತು. 1386ರಲ್ಲಿ ಲಿಥುವಾನಿಯಾದ ರಾಜಕುಮಾರ ಯಾಗಿಲನ್ ಪೋಲೆಂಡಿನ ಯಾಡ್ವೀಗಾ ಎಂಬಾಕೆಯನ್ನು ಮದುವೆಯಾದಾಗ ಬ್ಯೆಲೋರಷಿಯಾ ಪೋಲೆಂಡಿನ ಅಂಗವಾಯಿತು. ರಷ್ಯಾದ ಅರಸನಾದ ಮೂರನೆಯ ಇವಾನ್ (1465-1505) ಮತ್ತು ಮೂರನೆಯ ಬ್ಯಾಜಿಲ್ (1505-33) ಪೋಲೆಂಡಿನಿಂದ ಬ್ಯೆಲೋರಷ್ಯದ ಬಹುಭಾಗವನ್ನು ಕಸಿದುಕೊಂಡರು. 1656ರ ವಿಲ್ನಾ ಒಪ್ಪಂದದಂತೆ ಪೋಲೆಂಡ್ ಈ ಪ್ರದೇಶವನ್ನು ಮಾಸ್ಕೋಗೆ ಒಪ್ಪಿಸಬೇಕಾಯಿತು. ಮೂರು ಬಾರಿ ಸಂಭವಿಸಿದ ಪೋಲೆಂಡಿನ ವಿಭಜನೆಯಿಂದಾಗಿ ಅಳಿದುಳಿದ ಬ್ಯೆಲೋರಷ್ಯನ್ ಪ್ರದೇಶವೂ ರಷ್ಯಕ್ಕೆ ಸೇರಿತು. ನೆಪೋಲಿಯನ್ ಹೊರಟಾಗ ಮತ್ತೆ 1812ರಲ್ಲಿ ಬ್ಯೆಲೋರಷ್ಯ ಕಾದಾಟದ ಕಣವಾಯಿತು.

1916ರಲ್ಲಿ ಮೊದಲ ಮಹಾಯುದ್ಧದಲ್ಲಿ ಜರ್ಮನ್ನರ ಧಾಳಿಗೆ ತುತ್ತಾದ ಬ್ಯೆಲೋರಷ್ಯವನ್ನು ಕಭಳಿಸಲು ಪೋಲೆಂಡ್ ಹಾತೊರೆಯಿತು. 1919ರಲ್ಲಿ ರಷ್ಯ-ಪೋಲೆಂಡ್ ನಡುವೆ ಹೋರಾಟವಾಯಿತು. ರೀಗಾದ ಒಪ್ಪಂದದಂತೆ (1921) ಬ್ಯೆಲೋರಷ್ಯದ ಪಶ್ಚಿಮಭಾಗ ಪೋಲೆಂಡಿಗೆ ಸೇರಿತು. ಎರಡನೆಯಮಹಾಯುದ್ದ ಕಾಲದಲ್ಲಿ (1941)ರಿಂದ (1944)ರ ತನಕ ಮತ್ತೆ ಜರ್ಮನರ ಅಧೀನದಲ್ಲಿದ್ದ ಬ್ಯೆಲೋರಷ್ಯ ವಸ್ತುಶಃ ಬರಿದಾಯಿತು. ನಗರಗಳು ನೆಲಸಮವಾದುವು; ಕಾರ್ಖಾನೆಗಳು ನಾಶವಾದುವು. ಮೂರು ಲಕ್ಷಕ್ಕೂ ಹೆಚ್ಚಿನ ಜನ ನಿರಾಶ್ರಿತರಾದರು. (1945)ರಲ್ಲಿ ಸೇರಿದ ಯಾಲ್ಟಾ ಶಾಂತಿಮೇಳದಲ್ಲಿ 'ಕರ್ಜನ್ ರೇಖೆ) ಎಂದು ಕರೆಯಲಾದ ಪ್ರದೇಶ ಪೋಲೆಂಡ್ ಮತ್ತು ರಷ್ಯ ನಡುವಣ ಗಡಿ ಎಂದು ನಿರ್ಧರಿಸಲಾಯಿತು. ಯುದ್ಧಾನಂತರ ಬ್ಯೆಲೋರಷ್ಯ ಅಪಾರ ಅಭಿವೃದ್ಧಿ ಸಾಧಿಸಿದೆ.

ಬ್ಯೆಲೋರಷ್ಯಕ್ಕೆ ಪ್ರಾಚೀನ ಸಾಂಸ್ಕøತಿಕ ಪರಂಪರೆ ಇದೆ. ಪೊಲೊಸ್ಕದ ಸೇಂಟ್ ಸೋಫಿಯಾ ಕೆತೆಡ್ರಲ್ ಕ್ರಿ. ಶ. 11ನೆಯ ಶತಮಾನದ ರಚನೆ. 17-18ನೆಯ ಶತಮಾನಕ್ಕೆ ಸೇರಿದ ಬರಾಕ್ ಶೈಲಿಯ ಹಳವು ಕಟ್ಟಡಗಳಿವೆ. ಅಲ್ಲಿಯ ಮರದ ಶಿಲ್ಪಗಳು ಗಮನಾರ್ಹ. ಬ್ಯೆಲೋರಷ್ಯನ್ ಸಾಹಿತ್ಯ ಸುಮಾರು 13ನೆಯ ಶತಮಾನದಷ್ಟು ಹಿಂದಿನದು. 16ನೆಯ ಶತಮಾನದಿಂದ ಪುಸ್ತಕ ಮುದ್ರಣ ಆರಂಭವಾಯಿತು. 19-20ನೆಯ ಶತಮಾನದ ಕೆಲವು ಲೇಖಕರು ಸುಪ್ರಸಿದ್ದರಾಗಿದ್ದಾರೆ. ಇವರ ಪೈಕಿ ಯಾಂಕ್ ಕುಪಾಲ (1882-1942) ಮತ್ತು ಯಾಕೂಬ್ ಕೊಲಾಸ್ (1886-1956) ಅಗ್ರಗಣ್ಯರು. ಸಂಗೀತ ಕ್ಷೇತ್ರದಲ್ಲಿ ಗಣ್ಯರಾದ ಇ.ಎ.ಗೆಬ್ಲೊಫ್, ಜೋಲತಾರ್ಯೆಫ್ ಮತ್ತು ಆಲ್‍ದೊಫ್ ಮುಂತಾದವರು ಹಳವು ಬ್ಯಾಲೆ ನೃತ್ಯಗಳನ್ನು ಸಂಯೋಜಿಸಿದ್ದಾರೆ. ಇಲ್ಲಿಯ ಜನಪದ ಸಂಗೀತದ ತಂಡಗಳು ಹಾಗೂ ನಾಟಕದ ಕಂಪೆನಿಗಳೂ ಪ್ರಸಿದ್ಧ. (ಎಚ್.ಎಂ.ಎನ್.ಆರ್.)