ವಿಷಯಕ್ಕೆ ಹೋಗು

ಬೆಳ್ಳಿಮೋಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೆಳ್ಳಿ ಮೋಡ ಇಂದ ಪುನರ್ನಿರ್ದೇಶಿತ)
ಬೆಳ್ಳಿಮೋಡ (ಚಲನಚಿತ್ರ)
ಬೆಳ್ಳಿಮೋಡ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಟಿ.ಎನ್.ಶ್ರೀನಿವಾಸನ್
ಕಥೆತ್ರಿವೇಣಿ
ಪಾತ್ರವರ್ಗಕಲ್ಯಾಣಕುಮಾರ್ ಕಲ್ಪನಾ ಬಾಲಕೃಷ್ಣ, ದ್ವಾರಕೀಶ್, ಅಶ್ವಥ್, ಪಂಡರೀಬಾಯಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿವಾಸ ಆರ್ಟ್ಸ್ ಪ್ರೊಡಕ್ಷನ್ಸ್

ಬೆಳ್ಳಿ ಮೋಡವು ೧೯೬೬ದಲ್ಲಿ ಪುಟ್ಟಣ್ಣ ಕಣಗಲ್ ನಿರ್ದೇಶಿತ ಚಿತ್ರ.

ಚಲನಚಿತ್ರವು ಪ್ರಸಿದ್ಧ ಲೇಖಕಿ ತ್ರಿವೇಣಿಯವರ ಬೆಳ್ಳಿಮೋಡವನ್ನು ಆಧಾರಿಸಿತ್ತು. ಚಲನಚಿತ್ರವು ಬೆಳ್ಳಿಮೋಡ ತೋಟದಲ್ಲಿ ವಾಸಮಾಡುತ್ತಿದ್ದ ಜನರ ಜೀವನದಲ್ಲಾದ ಪರಿವರ್ತನೆಗಳನ್ನು ಪರಿಶೀಲಿಸುತ್ತದೆ. ತೋಟದ ಮಾಲೀಕನ ಮಗಳ ಮತ್ತು ಒಬ್ಬ ಸಾಮಾನ್ಯ ಆದರೂ ಗಂಭೀರ ಹುಡುಗನ ಮಧ್ಯೆ ಮದುವೆ ನಿಚ್ಶಯ ವಾಗಿರುತ್ತದೆ. ಮಾಲೀಕನು ತೀರಿದ ನಂತರ ತೋಟದ ಅಧಿಕಾರವನ್ನು ವಹಿಸಿಕೊಳ್ಳಲು ಹುಡುಗನು ಚಿಂತಿಸುತ್ತಾನೆ. ಆ ಹುಡುಗನು ತನ್ನ ಉತ್ತರಾಧಿಕಾರಿತ್ವವನ್ನಲ್ಲದೆ, ತನ್ನನ್ನು ಮಾತ್ರ ಪ್ರೀತಿಸುತ್ತಾನೆ ಎಂದು ಊಹಿಸುತ್ತಾಳೆ. ವಿಧಿಯ ವಿಚಿತ್ರ ತಿರುವಿನಿಂದ, ತೋಟದ ಮಾಲೀಕನ ಹೆಂಡತಿ ಗಂಡು ಮಗುವುಗೆ ಜನ್ಮ ಕೊಡುತ್ತಾಳೆ. ಇದರಿಂದ, ಹುಡುಗನ ಆಶಮ್ಸನಗಳು ನುಚ್ಚುನೂರಾಗುತ್ತವೆ. ಇದು ಮಗಳ ಕನಸುಗಳನ್ನೂ ಮುರಿಯತ್ತದೆ ಮತ್ತು ಬೆಳ್ಳಿಮೋಡವನ್ನು ಚದುರಿಸುತ್ತದೆ. ಕಲ್ಪನಾಳ ಗಂಭೀರ ಅಭಿನಯ ನಟನೆಯಲ್ಲಿ ಪಾಠವಾಗಿ ಉಳಿದಿದೆ. ಪುಟ್ಟಣ್ಣರವರು ತಮ್ಮ ಪ್ರಥಮ ಸ್ವತಂತ್ರ ನಿರ್ದೇಶನದಲ್ಲಿ ಉತ್ತಮವಾಗಿದ್ದಾರೆ ಮತ್ತು ಬೆಳ್ಳಿಮೋಡವು ಉತ್ಕೃಷ್ಟವಾಗಿದೆ.