ವಿಷಯಕ್ಕೆ ಹೋಗು

ಅಪಸ್ಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೂರ್ಛೆರೋಗ ಇಂದ ಪುನರ್ನಿರ್ದೇಶಿತ)
ಮರೆವು ಲೇಖನಕ್ಕಾಗಿ ಇಲ್ಲಿ ನೋಡಿ.
ಸಾಮಾನ್ಯ ಸೆಳವಿನ ಚಿತ್ರ

ಅಪಸ್ಮಾರ ಸೆಳವುಗಳ ಲಕ್ಷಣಗಳಿರುವ ನರವೈಜ್ಞಾನಿಕ ಅಸ್ವಸ್ಥತೆಗಳ ಒಂದು ಗುಂಪು.[] ಅಪಸ್ಮಾರದ ಸೆಳವುಗಳು ಸಂಕ್ಷಿಪ್ತ ಹಾಗೂ ಸುಮಾರಾಗಿ ಗುರುತಿಸಲಾಗದಷ್ಟು ಅವಧಿಗಳಿಂದ ದೀರ್ಘಾವಧಿಗಳವರೆಗೆ ಬದಲಾಗಬಹುದಾದ ಜೋರಾದ ಅಲುಗಾಟದ ಘಟನೆಗಳು. ಈ ಘಟನೆಗಳು ಸಂದರ್ಭಾನುಸಾರ ಮೂಳೆಮುರಿತ ಸೇರಿದಂತೆ ದೈಹಿಕ ಗಾಯಗಳನ್ನು ಉಂಟುಮಾಡಬಹುದು. ಅಪಸ್ಮಾರದಲ್ಲಿ, ಸೆಳವುಗಳು ಪುನರಾವರ್ತಿಸುವ ಪ್ರವೃತ್ತಿ ಹೊಂದಿರುತ್ತವೆ ಮತ್ತು ನಿಯಮವಾಗಿ ತಕ್ಷಣದ ಆಧಾರವಾಗಿರುವ ಕಾರಣಗಳನ್ನು ಹೊಂದಿರುವುದಿಲ್ಲ. ವಿಷಸೇವನೆಯಂತಹ ಒಂದು ನಿರ್ದಿಷ್ಟ ಕಾರಣದಿಂದ ಪ್ರಚೋದಿತವಾದ ಪ್ರತ್ಯೇಕ ಸೆಳವುಗಳು ಅಪಸ್ಮಾರವನ್ನು ಪ್ರತಿನಿಧಿಸುತ್ತವೆಂದು ಪರಿಗಣಿಸಲಾಗುವುದಿಲ್ಲ. ವಿಶ್ವದ ಕೆಲವು ಪ್ರದೇಶಗಳಲ್ಲಿ, ಅಪಸ್ಮಾರವಿರುವವರು ಈ ಅಸ್ವಸ್ಥತೆಯ ಕಾರಣ ಕಳಂಕವನ್ನು ಅನುಭವಿಸುತ್ತಾರೆ.

ಅಪಸ್ಮಾರದ ಬಹುತೇಕ ಪ್ರಕರಣಗಳ ಕಾರಣ ತಿಳಿಯದಾಗಿದೆ. ಕೆಲವು ಪ್ರಕರಣಗಳು ಮೆದುಳಿನ ಗಾಯ, ಲಕ್ವ, ಮೆದುಳಿನ ಗೆಡ್ಡೆಗಳು, ಮೆದುಳಿನ ಸೋಂಕುಗಳು ಮತ್ತು ಎಪಿಲೆಪ್ಟೋಜೆನೆಸಿಸ್ ಪ್ರಕ್ರಿಯೆ ಮೂಲಕ ಆದ ಜನ್ಮ ದೋಷಗಳ ಪರಿಣಾಮವಾಗಿ ಉಂಟಾಗುತ್ತವೆ. ಪರಿಚಿತವಿರುವ ಆನುವಂಶಿಕ ನವವಿಕೃತಿಗಳು ಸಣ್ಣ ಪ್ರಮಾಣದ ಪ್ರಕರಣಗಳಿಗೆ ನೇರವಾಗಿ ಸಂಪರ್ಕ ಹೊಂದಿವೆ. ಅಪಸ್ಮಾರದ ಸೆಳವುಗಳು ಮೆದುಳಿನಲ್ಲಿ ಕಾರ್ಟೆಕ್ಸ್‌ನಲ್ಲಿ ವಿಪರೀತ ಹಾಗೂ ಅಸಹಜ ನರಕೋಶ ಚಟುವಟಿಕೆಯ ಪರಿಣಾಮವಾಗಿವೆ. ರೋಗನಿದಾನದಲ್ಲಿ, ಮೂರ್ಛೆಯಂತಹ ಅದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡಬಹುದಾದ ಇತರ ಸ್ಥಿತಿಗಳನ್ನು ತಳ್ಳಿಹಾಕುವುದು, ಮದ್ಯ ನಿವರ್ತನೆ ಅಥವಾ ವಿದ್ಯುದ್ವಿಚ್ಛೇದ್ಯ ಸಮಸ್ಯೆಗಳಂತಹ ಸೆಳವುಗಳ ಮತ್ತೊಂದು ಕಾರಣವಿದೆಯೇ ಎಂದು ನಿರ್ಧರಿಸುವುದು ಸೇರಿವೆ. ಇದನ್ನು ಭಾಗಶಃ ಮೆದುಳಿನ ಚಿತ್ರಗಳನ್ನು ತೆಗೆದು ಮತ್ತು ರಕ್ತಪರೀಕ್ಷೆಗಳನ್ನು ನಡೆಸಿ ಮಾಡಬಹುದು. ಅಪಸ್ಮಾರವನ್ನು ಹಲವುವೇಳೆ ಇಲೆಕ್ಟ್ರೊಎನ್ಸೆಫ಼ೆಲೊಗ್ರಾಮ್‍ನಿಂದ ದೃಢಪಡಿಸಬಹುದು, ಆದರೆ ಸಾಧಾರಣ ಪರೀಕ್ಷೆಯು ಅಸ್ವಸ್ಥತೆಯನ್ನು ತಳ್ಳಿಹಾಕುವುದಿಲ್ಲ.

ಇತರ ಸಮಸ್ಯೆಗಳ ಪರಿಣಾಮವಾಗಿ ಉಂಟಾಗುವ ಅಪಸ್ಮಾರವನ್ನು ತಡೆಯಬಹುದಾಗಿದೆ. ಶೇಕಡ ೭೦ರಷ್ಟು ಪ್ರಕರಣಗಳಲ್ಲಿ ಸೆಳವುಗಳನ್ನು ಔಷಧಿಗಳಿಂದ ನಿಯಂತ್ರಿಸಬಹುದು. ಅಗ್ಗದ ಆಯ್ಕೆಗಳು ಹಲವುವೇಳೆ ಲಭ್ಯವಿರುತ್ತವೆ. ಔಷದಿಗಳಿಗೆ ಸೆಳವುಗಳು ಪ್ರತಿಕ್ರಿಯಿಸದಿರುವವರಲ್ಲಿ, ಶಸ್ತ್ರಚಿಕಿತ್ಸೆ, ನರೋತ್ತೇಜನ, ಅಥವಾ ಆಹಾರ ಬದಲಾವಣೆಗಳನ್ನು ಪರಿಗಣಿಸಬಹುದು. ಅಪಸ್ಮಾರದ ಎಲ್ಲ ಪ್ರಕರಣಗಳು ಆಜೀವ ಪರ್ಯಂತವಿರುವುದಿಲ್ಲ, ಮತ್ತು ಅನೇಕ ಜನರು ಮುಂದೆ ಚಿಕಿತ್ಸೆ ಬೇಡವಾದ ಹಂತದವರೆಗೆ ಸುಧಾರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Fisher, Robert S; Acevedo, C; Arzimanoglou, A; Bogacz, A; Cross, JH; Elger, CE; Engel J, Jr; Forsgren, L; French, JA; Glynn, M; Hesdorffer, DC; Lee, BI; Mathern, GW; Moshé, SL; Perucca, E; Scheffer, IE; Tomson, T; Watanabe, M; Wiebe, S (April 2014). "ILAE Official Report: A practical clinical definition of epilepsy" (PDF). Epilepsia. 55 (4): 475–82. doi:10.1111/epi.12550. PMID 24730690.{{cite journal}}: CS1 maint: multiple names: authors list (link)


"https://kn.wikipedia.org/w/index.php?title=ಅಪಸ್ಮಾರ&oldid=793072" ಇಂದ ಪಡೆಯಲ್ಪಟ್ಟಿದೆ