ವಿಷಯಕ್ಕೆ ಹೋಗು

ರೇಡಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರೇಡಿಯಂ ಇಂದ ಪುನರ್ನಿರ್ದೇಶಿತ)


88 ಫ್ರಾನ್ಸಿಯಮ್ರೇಡಿಯಮ್ಆಕ್ಟಿನಿಯಮ್
ಬೇರಿಯಮ್

Ra

Ubn
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ರೇಡಿಯಮ್, Ra, 88
ರಾಸಾಯನಿಕ ಸರಣಿalkaline earth metals
ಗುಂಪು, ಆವರ್ತ, ಖಂಡ 2, 7, s
ಸ್ವರೂಪಬೆಳ್ಳಿಯ ಬಿಳಿ ಬಣ್ಣ
ಅಣುವಿನ ತೂಕ 226 g·mol−1
ಋಣವಿದ್ಯುತ್ಕಣ ಜೋಡಣೆ [ರೇಡಾನ್] 7s²
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 8, 1
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)5.5 g·cm−3
ಕರಗುವ ತಾಪಮಾನ973 K
(700 °C, 1292 °ಎಫ್)
ಕುದಿಯುವ ತಾಪಮಾನ2010 K
(1737 °C, 3159 °F)
ಸಮ್ಮಿಲನದ ಉಷ್ಣಾಂಶ8.5 kJ·mol−1
ಭಾಷ್ಪೀಕರಣ ಉಷ್ಣಾಂಶ113 kJ·mol−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 819 906 1037 1209 1146 1799
ಅಣುವಿನ ಗುಣಗಳು
ಸ್ಪಟಿಕ ಸ್ವರೂಪbody centered cubic
ಆಕ್ಸಿಡೀಕರಣ ಸ್ಥಿತಿಗಳು1
(strongly basic oxide)
ವಿದ್ಯುದೃಣತ್ವ0.9 (Pauling scale)
Ionization energies ೧ನೇ: 509.3 kJ/mol
೨ನೇ: 979.0 kJ/mol
ಅಣುವಿನ ತ್ರಿಜ್ಯ215 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ವಿದ್ಯುತ್ ರೋಧಶೀಲತೆ(20 °C) 1 microΩ·m
ಉಷ್ಣ ವಾಹಕತೆ(300 K) 18.6 W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ7440-14-4
ಉಲ್ಲೇಖನೆಗಳು

ರೇಡಿಯಮ್ ಒಂದು ಲೋಹ. ಇದು ಅತ್ಯಂತ ವಿಕಿರಣಶೀಲ ಲೋಹ. ಇದು ಮುಖ್ಯವಾಗಿ ಯುರೇನಿಯಮ್ ಹಾಗೂ ಥೋರಿಯಮ್ ಅದಿರಿನೊಂದಿಗೆ ದೊರೆಯುತ್ತದೆ. ಇದನ್ನು ಫ್ರಾನ್ಸ್‌ಮೇರಿ ಕ್ಯೂರಿ, ಪಿಯರೆ ಕ್ಯೂರಿ ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ ೧೮೯೮ರಲ್ಲಿ ಸಂಶೋಧಿಸಿದರು.[] ರೇಡಿಯಮ್ ಪ್ರಕೃತಿಯಲ್ಲಿ ಯುರೇನಿಯಮ್ವಿಕಿರಣ ಸವೆತ (radioactive decay) ದಿಂದ ರಚಿಸಲ್ಪಡುತ್ತದೆ. ಇದು ಸತತ ವಿಕಿರಣ ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.

ಇದು ಆವರ್ತಕೋಷ್ಟಕದ 2ಎ ಗುಂಪಿನ 7ನೆಯ ಆವರ್ತದ ಕ್ಷಾರಲೋಹೀಯ ಭಸ್ಮಧಾತು. ಪ್ರತೀಕ Ra. ರಾಸಾಯನಿಕವಾಗಿಯೂ ಪಟುವಾಗಿರುವ ಬೆಳ್ಳಿಬಿಳುಪಿನ ಲೋಹ. ಪರಮಾಣು ಸಂಖ್ಯೆ 88. ಪರಮಾಣು ತೂಕ 226. ದ್ರವನಬಿಂದು 697o ಸೆ. ಕುದಿಬಿಂದು 11370 ಸೆ. ಸಾಪೇಕ್ಷ ಸಾಂದ್ರತೆ 5. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d10 6s2 6p6 7s2. ವೇಲೆನ್ಸಿ 0, +2. ನಾಲ್ಕು ನೈಸರ್ಗಿಕ ವಿಕಿರಣಪಟು ಸಮಸ್ಥಾನಿಗಳಿವೆ.[] ಬೈಜಿಕ ಕ್ರಿಯೆ ಮುಖೇನ ಇನ್ನೂ 9 ಸಮಸ್ಥಾನಿಗಳು ಲಭ್ಯ. ಇವುಗಳ ಪೈಕಿ ವಿಕಿರಣಪಟು ರೇಡಿಯಮ್-226 ಬಲು ಮುಖ್ಯವಾದದ್ದು (ಅರ್ಧಾಯು 1620 ವರ್ಷ).[]

ಪಿಚ್‌ಬ್ಲೆಂಡ್ (1 ಟನ್ ಅದುರಿನಲ್ಲಿ 0.4 ಗ್ರಾಮ್ ರೇಡಿಯಮ್) ಮತ್ತು  ಕಾರ್ನೊಟೈಟ್ ಪ್ರಮುಖ ಅದುರುಗಳು. ಆಮ್ಲ ಅವಿಲೇಯ ಶೇಷವಾಗಿ ಸಲ್ಫೇಟುಗಳ ರೂಪದಲ್ಲಿ ಬೇರಿಯಮಿನೊಂದಿಗೆ ರೇಡಿಯಮನ್ನು ಅದುರಿನಿಂದ ಆಹರಿಸುತ್ತಾರೆ.

ಗುಣಗಳು

[ಬದಲಾಯಿಸಿ]

ರೇಡಿಯಮ್ ವಾಯುವಿನಿಂದ ಬಲು ವೇಗವಾಗಿ ಉತ್ಕರ್ಷಿತವಾಗಿ ಕಪ್ಪಾಗುತ್ತದೆ. ಎಂದೇ, ರೇಡಿಯಮ್ ಕ್ಲೋರೈಡ್ ಅಥವಾ ರೇಡಿಯಮ್ ಬ್ರೋಮೈಡ್ ರೂಪದಲ್ಲಿ ಮಾತ್ರ ಬಳಕೆ. ರಾಸಾಯನಿಕ ಗುಣಗಳಲ್ಲಿ ಬೇರಿಯಮ್ ಧಾತುವಿಗೂ ರೇಡಿಯಮ್ ಧಾತುವಿಗೂ ಬಲು ಸಾಮ್ಯವಿದೆ.[] ನೀರಿನೊಂದಿಗೆ ಸುಲಭವಾಗಿ ವರ್ತಿಸುತ್ತದೆ; ಹೈಡ್ರೊಜನ್ ಮತ್ತು ಹೈಡ್ರಾಕ್ಸೈಡ್ ದ್ರಾವಣ ಉತ್ಪನ್ನಗಳು. ಎಲುಬುಗಳಲ್ಲಿ ಕ್ಯಾಲ್ಸಿಯಮಿನ ಬದಲು ರೇಡಿಯಮ್ ಸಂಚಯಿಸಬಲ್ಲದು. ತನ್ಮೂಲದ ದೀರ್ಘಕಾಲೀನ ವಿಕಿರಣನದ ಪರಿಣಾಮವೇ ರಕ್ತಹೀನತೆ ಮತ್ತು ಕ್ಯಾನ್ಸರ್ (ಸಹಿಷ್ಣುತಾ ಮಿತ 1 ಮಿಲಿಗ್ರಾಮ್).  ರೇಡಾನ್ ಅನಿಲಧಾತು ರೇಡಿಯಮಿನ ವಿಕಿರಣಕ್ಷಯದ ಉತ್ಪನ್ನ.

ಉಪಯೋಗಗಳು

[ಬದಲಾಯಿಸಿ]

ರೇಡಿಯಮಿನ ನಿಯಂತ್ರಿತ ವಿಕಿರಣವನ್ನು ಕ್ಯಾನ್ಸರ್ ಕೋಶಗಳ ನಾಶಕ್ಕೆ ಬಳಸುವುದುಂಟು.[][] ಔದ್ಯಮಿಕ ರೇಡಿಯೊರೇಖನದಲ್ಲಿ (ರೇಡಿಯೊಗ್ರಫಿ) ರೇಡಿಯಮ್ ಸಲ್ಫೇಟ್ ಬಳಕೆ ಇದೆ. ಸಂಶೋಧನೆ ಹಾಗೂ ನ್ಯೂಟ್ರಾನ್ ಪಟುಕರಣದಿಂದ ಪದಾರ್ಥ ವಿಶ್ಲೇಷಣೆಯಲ್ಲಿ ನ್ಯೂಟ್ರಾನ್ ಆಕರವಾಗಿಯೂ ಬಳಕೆ ಉಂಟು. ದೀಪ್ತಿಶೀಲ ಬಣ್ಣಗಳ ತಯಾರಿಯಲ್ಲಿ ಬಳಕೆ ಇತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. Hammond, C. R. "Radium" in ಟೆಂಪ್ಲೇಟು:RubberBible92nd
  2. Ropp, R.C. (2013), "The Alkaline Earths as Metals", Encyclopedia of the Alkaline Earth Compounds (in ಇಂಗ್ಲಿಷ್), Elsevier, pp. 1–23, doi:10.1016/b978-0-444-59550-8.00001-6, ISBN 978-0-444-59550-8, retrieved 2021-03-30
  3. Greenwood and Earnshaw, pp. 109–110
  4. Greenwood and Earnshaw, p. 112
  5. Radium. Encyclopædia Britannica
  6. Hayter, Charles (2005). "The Politics of Radon Therapy in the 1930s". An Element of Hope: Radium and the Response to Cancer in Canada, 1900–1940. McGill-Queen's Press. ISBN 978-0-7735-2869-7.
  7. Terrill Jr, J. G.; Ingraham Sc, 2nd; Moeller, D. W. (1954). "Radium in the healing arts and in industry: Radiation exposure in the United States". Public Health Reports. 69 (3): 255–62. doi:10.2307/4588736. JSTOR 4588736. PMC 2024184. PMID 13134440.{{cite journal}}: CS1 maint: numeric names: authors list (link)

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೇಡಿಯಮ್&oldid=1119663" ಇಂದ ಪಡೆಯಲ್ಪಟ್ಟಿದೆ