ವಿಶಿಷ್ಟಾದ್ವೈತ
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ವಿಶಿಷ್ಟಾದ್ವೈತ ದರ್ಶನ
ವಿಶಿಷ್ಟಾದ್ವೈತ ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ವಿಶಿಷ್ಟಾದ್ವೈತ೧ ಸಿದ್ಧಾಂತವು ರಾಮಾನುಜಾಚಾರ್ಯರಿಂದ ಪ್ರವರ್ಧಮಾನಕ್ಕೆ ಬಂದಿದೆ.ಇದರ ಹಿಂದೆಯೇ ಇದನ್ನು ನಾಥಮುನಿಮುಂತಾದವರು ಪ್ರತಿಪಾದಿಸಿದ್ದರು.ಇದು ಮುಖ್ಯವಾಗಿ ತಮಿಳುನಾಡಿನ ಆಳ್ವಾರರುಗಳ ಅನುಭವಗಳು,ಪ್ರಸ್ಥಾನತ್ರಯ,ಭಾಗವತಮತ್ತು ಪಂಚರಾತ್ರ ಆಗಮ ಎಂಬ ಗ್ರಂಥಗಳ ಆಧಾರದಿಂದ ಪ್ರತಿಪಾದಿಸಲ್ಪಟ್ಟಿದೆ.ಇದು ಅದ್ವೈತಮತದ ಬ್ರಹ್ಮ-ಜೀವ-ಜಗತ್ತು ಈ ಸಂಬಂಧದ ಸಿದ್ಧಾಂತವನ್ನು ಒಪ್ಪದೆ ಅದರದೇ ಆದ ಹೊಸ ನಿಲುವನ್ನು ನೀಡಿರುವ ಮತವಾಗಿರುತ್ತದೆ.
ವಿಶಿಷ್ಟಾದ್ವೈತ ಎಂದರೆ ವಿಷೇಶಣಗಳಿಂದ ಕೂಡಿರುವ ಅದ್ವೈತ ಎಂದು ಅರ್ಥ.ಎರಡಿಲ್ಲದೆ ಒಂದೇ ಆಗಿರುವುದು ಬ್ರಹ್ಮ.'ಚಿತ್' ಮತ್ತು 'ಅಚಿತ್ ' ಎಂಬ ವಿಷೇಶಣಗಳಿಂದ ಕೂಡಿ ಏಕಮೇವಾದ್ವಿತೀಯವಾಗಿದೆ ಎಂಬುದು ಇದರ ಮೂಲ ತತ್ವವಾಗಿದೆ.
ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಬ್ರಹ್ಮ,ಚಿತ್,ಅಚಿತ್ಎಂಬ ಮೂರು ತತ್ವಾಂಶಗಳು ಇವೆ.ಬ್ರಹ್ಮ ಎಂದರೆ ಪರವಸ್ತು,ದೇವರು,ಪರಮಾತ್ಮ.ಚಿತ್ ಎಂದರೆ ಆತ್ಮ.ಅಚಿತ್ ಎಂದರೆ ಜಡವಸ್ತು.ಚಿತ್ ಮತ್ತು ಅಚಿತ್ ಬ್ರಹ್ಮನ ಶರೀರಗಳಾಗುತ್ತದೆ.ಈ ಶರೀರದಿಂದ ಕೂಡಿದ ಬ್ರಹ್ಮನು ಒಬ್ಬನೇ ಆಗಿದ್ದಾನೆ.ಚಿತ್ ಮತ್ತು ಅಚಿತ್ ಬ್ರಹ್ಮನಿಂದ ಬೇರೆಯಾದರೂ ಅವನಿಗೆ ಅಧೀನವಾಗಿವೆ.
ಈ ಸಿದ್ಧಾಂತದಲ್ಲಿ ಹೇಳಲಾಗಿರುವ ಬ್ರಹ್ಮನನ್ನು ಈಶ್ವರನೆಂದೂ ಕರೆಯಲಾಗಿದ್ದು,೧)ಬ್ರಹ್ಮ ಮತ್ತು ಈಶ್ವರ ಒಂದೇ ಆಗಿದ್ದು ಈಶ್ವರನೇ ಬ್ರಹ್ಮ. ೨) ಈಶ್ವರನು ಅಂತರ್ಯಾಮಿ. ೩) ಈಶ್ವರನು ಸರ್ವಕರ್ಮಗಳಿಗೂ ಅತೀತನು,ಪರಮಪುರುಷನು,ಪೂರ್ಣನು.ಅವನೇ ಜಗತ್ಪತಿ.
ಜೀವ ಅಥವಾ ಆತ್ಮ ಚಿತ್ ಸ್ವರೂಪವನ್ನು ಹೊಂದಿದ್ದು ಬ್ರಹ್ಮನ ಅಂಶನಾಗಿರುತ್ತಾನೆ.ಜೀವನು ಇಚ್ಛೆ,ಜ್ಞಾನಮತ್ತು ಕ್ರಿಯೆಗಳಿಂದ ಕೂಡಿರುತ್ತಾನೆ.ಬ್ರಹ್ಮನಿಂದ ಬೇರೆಯೇ ಅಗಿದ್ದು,ಪರತಂತ್ರನು.ಜೀವನು ಸತ್ಯನಾಗಿದ್ದು,ಅಣು ಸ್ವರೂಪನಾಗಿ ಹೃದಯದಲ್ಲಿರುತ್ತಾನೆ.ಜೀವರುಗಳು ಅನಂತ.
ಜಗತ್ತು ಅಚಿತ್ ಅಥವಾ ಜಡವಸ್ತುವಿನಿಂದಾಗಿದೆ.ಜಗತ್ತನ್ನು ಮತ್ತು ಚರಾಚರ ವಸ್ತುಗಳನ್ನು ಸೃಷ್ಟಿಮಾಡಿರುವ ಈಶ್ವರ ಜಗತ್ತಿನ ಆಧಾರನಾಗಿರುತ್ತಾನೆ.ಜೀವನಂತೆ ಜಗತ್ತು ಕೂಡಾ ಸತ್ಯವಾಗಿದ್ದು ಭಗವಂತನಿಂದ ಭಿನ್ನವಾಗಿದ್ದರೂ ಅವನ ಶಕ್ತಿಯಿಂದ ಕೂಡಿರುತ್ತದೆ.
- ವಿವರ :
ವಿಶಿಷ್ಟಾದ್ವೈತ ದರ್ಶನ
[ಬದಲಾಯಿಸಿ]- ವಿಶಿಷ್ಟಾದ್ವೈತ ದರ್ಶನ೨
- ಈಶ್ವರ , ಜಗತ್ತು , ಜೀವ ಬೇರೆ ಬೇರೆಯಾಗಿದ್ದೂ , ಒಂದು ಎಂಬುದು ವಿಶಿಷ್ಟಾದ್ವೈತ . ಇದು ಅದ್ವೈತ ಮತ್ತು ದ್ವೈತವನ್ನು ಸೇರಿಸುವ ಪ್ರಯತ್ನ. (ಈ ದರ್ಶನದ ಗುರಿ).
ಇತಿಹಾಸ
[ಬದಲಾಯಿಸಿ]- ವೈಷ್ಣವ ದರ್ಶನಗಳಲ್ಲಿ ಒಂದಾದ ವಿಶಿಷ್ಟಾದ್ವೈತವು ಸಕಲ ಕಲ್ಯಾಣ ಗುಣನಿಧಿಯಾದ ವಿಷ್ಣುವನ್ನು ಪರಬ್ರಹ್ಮವೆಂದೂ ಅವನ ಅನುಗ್ರದಿಂದ ಮುಕ್ತಿದೊರೆಯುವುದೆಂದೂ ನಿರೂಪಿಸುತ್ತದೆ.
ಈ ಪಂಥ ವೇದಗಳಷ್ಟು ಹಳೆಯದಿರಬೇಕು. ವಿಷ್ಣುವನ್ನು ವೇದಪುರುಷ, ಯಜ್ಞನಾರಾಯಣ ನಾರಾಯಣ ,ವಾಸುದೇವ, ವಿಷ್ಣು -ಈ ಕಲ್ಪನೆಗಳು ಇದರಲ್ಲಿ ಒಗ್ಗೂಡುತ್ತವೆ. ಶತಪಥ ಬ್ರಾಹ್ಮಣ, ಮಹಾಭಾರತ, ಭಗವದ್ಗೀತೆ ವಿಷ್ಣು ಪುರಾಣ ಭಾಗವತಗಳು ವೈಷ್ಣವ ಪಂಥದ ಆಧಾರ ಗ್ರಂಥಗಳಾಗಿವೆ. . ವೈಷ್ಣವ ಪಂಥದಲ್ಲಿ ನಾಲ್ಕು ಮುಖ್ಯ ಪಂಥಗಳು. ೧. ಶ್ರೀ ಸಂಪ್ರದಾಯ (ವಿಶಿಷ್ಟಾದ್ವೈತ); ೨. ಬ್ರಹ್ಮ ಸಂಪ್ರದಾಯ (ದ್ವೈತ -ತತ್ವವಾದ) ; ೩. ರುದ್ರ ಸಂಪ್ರದಾಯ (ಶುದ್ಧಾದ್ವೈತ) ; ಹಾಗೂ ೪. ಸನಕ ಸಂಪ್ರದಾಯ (ದ್ವೈತಾದ್ವೈತ) ; ಇವಕ್ಕೆ ಕ್ರಮವಾಗಿ ರಾಮಾನುಜ , ಮಧ್ವ , ವಲ್ಲಭ , ನಿಂಬಾರ್ಕರು ಆಚಾರ್ಯರು . ಚೈತನ್ಯರ ಅಚಿಂತ್ಯ ಬೇಧಾಬೇಧವು , ಮಾದ್ವ ಮತದ ಒಂದು ಶಾಖೆ.
ಏಳರಿಂದ ೧೦ ನೇ ಶತಮಾನದ ವರೆಗಿದ್ದ , ಆಳ್ವಾರರು (ತಮಿಳು), ತಮಿಳು ಗ್ರಂಥಗಳ ಆಧಾರಗಳಿಂದ , ಆ ಆಚಾರ್ಯರುಗಳು ಈ ಪಂಥಕ್ಕೆ ಪ್ರಚಾರ ಕೊಟ್ಟರು. ಇದು ಭಕ್ತಿ ಪ್ರಧಾನವಾದುದು. ಈ ಪರಂಪರೆಯಲ್ಲಿ , ರಾಮಾನುಜಾಚಾರ್ಯರು (ಕ್ರಿ. ಶ. ೧೦೧೭-೧೧೩೭) ವಿಶಿಷ್ಠಾದೈತವನ್ನು ವ್ಯವಸ್ಥಿತವಾಗಿ ರೂಪಿಸಿ, ಪ್ರಚಾರ ಪಡಿಸಿದರು. ಇವರು ಮಹಾನ್ ಮೇಧಾವಿ, ಪಂಡಿತರು, ಮತ್ತು ಭಕ್ತರು. ಬ್ರಹ್ಮ ಸೂತ್ರಕ್ಕೆ ಇವರು ಬರೆದ ಶ್ರೀ ಭಾಷ್ಯ ಇವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇವರು ಗೀತೆಗೂ ಭಾಷ್ಯ ಬರೆದಿದ್ದಾರೆ. ಇತರ ಪ್ರಮುಖ ಆಚಾರ್ಯರು , ವೆಂಕಟನಾಥ ಮತ್ತು ವೇದಾಂದೇಶಿಕರು.
ವಿಶಿಷ್ಟ -ಅದ್ವೈತ
[ಬದಲಾಯಿಸಿ]ವಿಶಿಷ್ಟಾದ್ವೈತ
- ರಾಮಾನುಜರ ಪ್ರಕಾರ ಜೀವ, ಜಗತ್ತು, ಈಶ್ವರ, (ದೇವರು-ವಿಷ್ಣು) ಈ ಮೂರೂ ಸತ್ಯಗಳೇ. ಇವನ್ನೇ ಸತ್ , ಚಿತ್, ಈಶ್ವರ ಎನ್ನುವರು. ಜೀವ ಜಗತ್ತುಗಳು ಈಶ್ವರನನ್ನು ಅವಲಂಬಿಸಿವೆ . ಅವನೇ ಅವುಗಳ ನಿಯಂತ್ರಕ. ಜೀವ ಜಗತ್ತುಗಳು ಅವನ ಶರೀರಗಳಂತಿವೆ. ಬೇರೆಯಾಗಿ ಇರುವಿಕೆ , ಬೇರೆಯಾಗದೇ ಇರುವಿಕೆ , -ಅಪಾರ್ಥ ಸಿದ್ಧಿ -ಒಂದೇ ಆಗಿರುವಿಕೆ -ಒಂದೇ ಆಗಿಲ್ಲದಿರುವಿಕೆ ; (ಮೂರೂ) ಚಿತ್ (ಜೀವ) ; ಅಚಿತ್ (ಜಗತ್ತು) ಭಗವಂತನ ವಿಶೇಷಣಗಳು. ಭಗವಂತನು ಇವು ಕೂಡಿದ ಐಕ್ಯವೇ ವಿಶಿಷ್ಟಾದ್ವೈತ ..
- ತತ್ವಮಸಿ ಯ ಅರ್ಥ -ತತ್ ಎಂದರೆ ಬ್ರಹ್ಮ (ವಿಷ್ಣು ) ; ತ್ವಂ ಎಂದರೆ ಜೀವನನ್ನು ಪ್ರಾಕಾರವಾಗಿ (ರೂಪಾಂತರದಿಂದ ) ಹೊಂದಿರುವ ಬ್ರಹ್ಮ -(ಜಗತ್ ಕಾರಣವಾದ ಬ್ರಹ್ಮ) . ಜೀವನಲ್ಲಿರುವ ಬ್ರಹ್ಮವೂ ಒಂದೇ /ಎಂದರೆ ಜೀವ ಮತ್ತು ಬ್ರಹ್ಮ ; ಜೀವ - ಬ್ರಹ್ಮ (ವಿಷ್ಣು)( ಒಂದೇಅಲ್ಲ. // ಇದೇ ವಿಶಿಷ್ಟಾದ್ವೈತ.
ಪ್ರಕೃತಿ
- ಸಾಂಸಾರಿಕ ಅನುಭವಗಳಿಗೆ ಆಧಾರವಾದುದು.-ಪ್ರಕೃತಿ (ಅಕ್ಷರಾ, ಮಾಯಾ, ಅವಿದ್ಯಾ) ಭಗವಂತನ ಶರೀರ. ಸೃಷ್ಟಿ ಎಂದರೆ ಕಾರಣದ ((ಬ್ರಹ್ಮ) ಇನ್ನೊಂದು ರೂಪಾಂತರ. ನೂಲಿನಿಂದ ಬಟ್ಟೆ ಇದ್ದಂತೆ. ವಿಷ್ಟುವಿನ ಪ್ರಕೃತಿ ಲಕ್ಷ್ಮಿ. ಇವರಿಬ್ಬರ ಅನುಗ್ರಹದಿಂದ ಜೀವನಿಗೆ ಮೋಕ್ಷ (ಮುಕ್ತಿ) ಸಿಗುವುದು.
ಜೀವ
[ಬದಲಾಯಿಸಿ]- ಜೀವವು ಚೈತನ್ಯ ಸ್ವರೂಪಿ . ದೇಹೇಂದ್ರಿಯಗಳಿಗಿಂತ ಬೇರೆ. ಜೀವ ಬ್ರಹ್ಮರ ಐಕ್ಯವನ್ನು ವಿಶಿಷ್ಟಾದ್ವೈತ ಒಪ್ಪುವುದಿಲ್ಲ. ಜೀವ ಬೇರೆ , ಬ್ರಹ್ಮ ಬೇರೆ. ಜೀವ (ಆತ್ಮ ) ಬ್ರಹ್ಮದಿಂದ ಬೇರೆ -ದೀಪದಿಂದ ಬೆಳಕಿದ್ದಂತೆ. ಬೆಳಕು ಆತ್ಮ ; ದೀಪದ (ಬ್ರಹ್ಮ) ಭಾಗವಲ್ಲ . ಜೀವನೊಳಗೆ ಅಂತರ‍್ಯಾಮಿಯಾಗಿ ಪರಮಾತ್ಮನಿದ್ದಾನೆ. ಜೀವನು ಉಪಾದಿಗಳಿಂದ ಆವೃತನಾಗಿ ದುಃಖಿಯಾಗಿದ್ದಾನೆ. ಸ್ವಭಾವತಃ ಆನಂದ ರೂಪಿ . ಕಾರಣ ಅನಾದಿಯಾದ ಕರ್ಮ. ಅದು ಜೀವನಿಗೆ ಮಾತ್ರ ಪರಮಾತ್ಮನಿಗಲ್ಲ. ಜೀವನಿಗೆ ಇಚ್ಛಾ ಸ್ವಾತಂತ್ರ್ಯ ಉಂಟು. ಆತ್ಮಕ್ಕೆ ಅನ್ನ ಪ್ರಮಾಣದ ಆಕೃತಿ ; ಹುಟ್ಟು ಸಾವುಗಳಿಲ್ಲ. ಒಂದು ಆತ್ಮಕ್ಕೂ ಇನ್ನೊಂದು ಆತ್ಮಕ್ಕೂ ಸಾದೃಶ್ಯವಿದೆ.
- ಜೀವದಲ್ಲಿ ಮೂರು ವಿಧ. ಬದ್ಧ ರು (ಸಂಸಾರದಲ್ಲಿದ್ದವ) ; ಮುಕ್ತ ರು(ನಿತ್ಯ ಸುಖಿಗಳು-ಆನಂದ ದಲ್ಲಿರುವವರು , ಪರಮಾತ್ಮನ ಸಾಮರ್ಥ್ಯವಿಲ್ಲ) ; ನಿತ್ಯ ರು (ಎಂದೂ ಸಂಸಾರಕ್ಕೆ ಸಿಲುಕದವರು -ಸದಾ ಮುಕ್ತರಾಗಿರುವವರು)- ಉದಾ : ಅನಂತ , ಗರುಡ ,ವಿಶ್ವಕ್ಸೇನ, ಮೊದಲಾದವರು ) ಈಶ್ವರ (ವಿಷ್ಣು )-ಲಕ್ಷ್ಮಿ .
ಈಶ್ವರ ಸಗುಣ
[ಬದಲಾಯಿಸಿ]- ಈಶ್ವರನದು ಶುದ್ಧ ಸತ್ವ ಗುಣ. ಪ್ರಳಯದಲ್ಲಿ ಜೀವ, ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಅವನದು ಶುದ್ಧ ಸತ್ವಗುಣ . ಪ್ರಳಯದಲ್ಲಿ ಜೀವ -ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಜಗತ್ತು ವ್ಯಕ್ತವಾದಾಗ ಕರ್ಮಾನುಸಾರವಾಗಿ ದೇಹಗಳು ಒದಗುತ್ತವೆ. ಶ್ರೀಮನ್ನಾರಾಯಣನೇ ಪರಬ್ರಹ್ಮ . ಅವನ ಶಕ್ತಿಯೇ ಲಕ್ಷ್ಮಿ . ವೈಕುಂಠವು ಸತ್ವದಿಂದಾಗಿದೆ. ಸರ್ವಕಲ್ಯಾಣ ಗಣಗಳಿಂದ ಕೂಡಿದ ನಾರಾಯಣನು ತನ್ನ ಲೀಲೆಗಾಗಿ ಪ್ರಪಂಚವನ್ನು ಸೃಷ್ಟಿಸುತ್ತಾನೆ. "ಅರ್ಚಾ",ಎಂಬ ರೂಪದಲ್ಲಿ ವಿಗ್ರಹದಲ್ಲಿದ್ದಾನೆ. ಲಕ್ಷ್ಮಿನಾರಾಯಣರಿಬ್ಬರೂ ಒಂದಾಗಿ ಭಕ್ತರನ್ನು ಪೊರೆಯುವರು.
ಜ್ಞಾನ ಮೀಮಾಂಸೆ
[ಬದಲಾಯಿಸಿ]ರಾಮಾನುಜರ ಪ್ರಕಾರ ಪ್ರತ್ಯಕ್ಷ, ಅನುಮಾನ, ಮತ್ತು , ಶಬ್ದ (ವೇದ-ಪುರಾಣ ವಾಕ್ಯ) ಇವು ಪ್ರಮಾಣಗಳು. ವೇದದ ಜ್ಞಾನ ಕಾಂಡ ಕರ್ಮಕಾಂಡ ಆಗಮಗಳು (ವೈಖಾನಸ ಆಗಮಗಳು), ಆಳ್ವಾರರ ಸ್ತೋತ್ರಗಳು (ವೇದದಂತೆ) ಶಬ್ದ ಪ್ರಮಾಣಗಳು. ನಮಗೆ ಉಂಟಾಗುವ ಎಲ್ಲಾ ಜ್ಞಾನಗಳೂ ಸತ್ಯ. ಸ್ವಪ್ನ , ಭ್ರಮೆಯಲ್ಲೂ ಸತ್ಯಾಂಶವಿದೆ .ಪ್ರಕೃತಿ , ಕಾಲ , ಶುದ್ಧ ಸತ್ಯ , ಧರ್ಮಭೂತ ಜ್ಞಾನ, ಜೀವ , ಈಶ್ವರ ಇವು ದ್ರವ್ಯಗಳು (ಸತ್ಯವಾದ ಶಕ್ತಿಗಳು). "ಅ ದ್ರವ್ಯ"ಗಳು ಹತ್ತು -> ಅವು ಪಂಚ ತನ್ಮಾತ್ರೆ , ತ್ರಿಗುಣಗಳು, ಸಂಯೋಗ ಮತು ಶಕ್ತಿ .
ಧರ್ಮಭೂತ ಜ್ಞಾನ
[ಬದಲಾಯಿಸಿ]ಅಪೃಥಕ್ ಸಿದ್ಧಿ , ಮತು ಧರ್ಮಭೂತ ಜ್ಞಾನ , ಇವು ರಾಮಾನುಜ ದರ್ಶನದ ವಿಶಿಷ್ಟ ಅಂಶಗಳು. ಅವರ ಪ್ರಕಾರ ಶುದ್ಧ ಜ್ಞಾನವೆಂಬುದಿಲ್ಲ . ಜ್ಞಾನವು ಯಾವುದಾದರೂ , ವಸ್ತುವಿಗೆ ಸಂಬಂಧಪಟ್ಟಿರಬೇಕು. ಜ್ಞಾನವು ದ್ರವ್ಯವಾದರೂ ಅದು , ಜೀವ ,ಈಶ್ವರನನ್ನು ಆಶ್ರಯಿಸಿರಬೇಕಾಗುತ್ತದೆ. ದೀಪ - ಬೆಳಕು ; ಬೆಳಕು ದೀಪದ ಧರ್ಮ , ಅದರ ಸ್ವರೂಪವಲ್ಲ, ಜ್ಞಾನವು ಜಡವೂ ಅಲ್ಲ , ಚೇತನವೂ ಅಲ್ಲ. ಸ್ವಯಂ ಪ್ರಕಾಶಕ, ತನ್ನನ್ನೂ ಬೆಳಗಿ -ಬೇರೆಯದನ್ನೂ ತೋರಿಸುತ್ತದೆ. ಆದರೆ ಹಾಗೆ ಮಾಡುತ್ತೇನೆ ಎಂಬ ಜ್ಞಾನ ಅದಕ್ಕಿಲ್ಲ. ಅಂದರೆ ಜ್ಙಾನಕ್ಕೆ ಜ್ಞಾನವಿಲ್ಲ. ಹಾಗಾಗಿ ಅದು ಜಡ , ಸುಖ , ದುಃಖ ಇತ್ಯಾದಿ ಎಲ್ಲಾ ಜ್ಙಾನವೇ ; ಆತ್ಮ ನ ಅನಂತ ಗುಣಗಳೆಲ್ಲಾ ಧರ್ಮಭೂತ ಜ್ಞಾನದ ಅವಸ್ಥಾ ಬೇಧಗಳಾಗಿವೆ . ಭಕ್ತಿ- ಪ್ರತಿಪತ್ತಿಗಳೂ ಅದರ ಬೇಧವೇ .
ಭಕ್ತಿ
[ಬದಲಾಯಿಸಿ]ಸಂಸಾರ ದುಃಖ ದಲ್ಲಿರುವ ಜೀವನಿಗೆ ಭಗವಂತನ ಕರುಣೆಯಿಂದ ಬಿಡುಗಡೆಯ ಬಯಕೆಯಾಗುವುದು. ಜ್ಞಾನ ಕರ್ಮಸೇರಿ ಭಕ್ತಿಗೆ ಕಾರಣ. ವೈದಿಕ ಕರ್ಮ , ದೇವತಾ ಅರ್ಚನೆ , ತಪಸ್ಸು , ಯಜ್ಞ , ತೀರ್ಥಯಾತ್ರೆ , ದಾನ , ಇತ್ಯಾದಿ, ಕರ್ಮಗಳು . ಜ್ಞಾನವೆಂದರೆ ತಾನು ಭಗವಂತನ , ಶೇಷನೆಂಬ ತಿಳಿವಳಿಕೆಯುಳ್ಳ ಧ್ಯಾನ. ಅದರಿಂದಾಗಿ ಚಿತ್ತ ಶುದ್ಧಿ ; ಈಶ್ವರ ಪ್ರೀತಿ, ಮತ್ತು ಈಶ್ವರ ಸಾಕ್ಷಾತ್ಕಾರ.
ಸಾಕ್ಷಾತ್ಕಾರ
[ಬದಲಾಯಿಸಿ]- ಸಾಧನೆಯಲ್ಲಿ ಕರ್ಮಜ್ಞಾನಗಳನ್ನು ದಾಟಿ ಅದರ ಮೇಲಿನ ಮೆಟ್ಟಿಲು ಭಕ್ತಿ .
- ವಿವೇಕ ಮೊದಲಾದ ಸಾಧನೆಗಳಿಂದ ಭಕ್ತಿಯನ್ನು ಗಳಿಸಬೇಕು . (ಭಕ್ತಿ ಶಬ್ದ : "ಪ್ರೀತಿ ವಿಶೇಷೇ ವರ್ತತೇ" -ವೇದಾಂತ ಸಂಗ್ರಹ).
ಭಕ್ತಿಗಿಂತ ಸುಲಭವಾದ ದಾರಿ ಪ್ರಪತ್ತಿ ಅಥವಾ ಶರಣಾಗತಿ . ತಾನು ಭಗವಂತನ ಶೇಷ ಎಂದು ತಿಳಿದು ಶೇಷತ್ವಾನುಸಂಧಾನ ಮಾಡುವುದೇ ಪ್ರಪತ್ತಿ. ಸರ್ವಸ್ವ ಅರ್ಪಣ ಭಾವ . -ಸದಾ ಅರ್ಚನೆ , ಕೀರ್ತನೆ, ನಾಮಸ್ಮರಣೆ ಮಾಡುವುದು. ಇದಕ್ಕೂ ಗುರು ಉಪದೇಶ ಅಗತ್ಯ. ಜಾತಿ, ಕುಲ, ಬೇಧವಿಲ್ಲದೆ, ಲಕ್ಷ್ಮಣನ ಆದರ್ಶವನ್ನು ಅನುಸರಿಸುವುದು. ಭಕ್ತಿಯಿಂದ ಸಾಕ್ಷಾತ್ಕಾರವಾದಾಗ ಆತ್ಮನು ದಿವ್ಯ ಶರೀರಿಯಾಗಿ ವೈಕುಂಠದಲ್ಲಿರುವನು.
ತೆಂಗಲೈ -ವಡಗಲೈ
[ಬದಲಾಯಿಸಿ]- (ತೆಂಕು -ಪಶ್ಚಿಮ ; ಬಡಗು -ಪೂರ್ವ)
- ರಾಮಾನುಜರ ನಂತರ ವೇದಾಂತ ದೇಶಿಕರು , ವೇದೋಪನಿಷತ್ , ತಮಿಳು ಪ್ರಬಂಧಗಳ ಮೇಲೆ ಪ್ರವರ್ತಿಸಿದ ಪಂಥ ವಡಗಲೈ ; ಈ ಪಂಥದ ಪ್ರಕಾರ ಕಪಿ-ಕಿಶೋರನ್ಯಾಯ : ಭಕ್ತನು ಭಗವಂತನನ್ನು ತಾನಾಗಿ ಆಶ್ರಯಿಸಬೇಕು .
- ಪಿಳೇಲೋಕಾಚಾರ್ಯರು ತಮಿಳು ಪ್ರಬಂಧಗಳ ಆಧಾರಗಳ ಮೇಲೆ ಮಾಡಿದ ಪಂಥ ತೆಂಗಲೈ :ಇದು ಮಾರ್ಜಾಲ-ಕಿಶೋರನ್ಯಾಯ . ; ಮರಿಯನ್ನು ಬೆಕ್ಕು ಕಚ್ಚಿ ವ್ಶೆದು(ತೆಗೆದುಕೊಂಡು ಹೋಗಿ) ರಕ್ಷಿಸುವುದು ; ಮರಿಯ ಪ್ರಯತ್ನವಿಲ್ಲ ; ಪರಮಾತ್ಮನಿಗೇ ಭಕ್ತನ ಜವಾಬ್ದಾರಿ . ಈ ಮಾರ್ಗದಲ್ಲಿ ಭಕ್ತನು ಭಗವಂತನನ್ನು ಪ್ರಾರ್ಥಿಸಿ ಸಾಕ್ಷಾತ್ಕಾರ ಪಡೆಯುವುದು .
ಸಾರಾಂಶ
[ಬದಲಾಯಿಸಿ]- ಬ್ರಹ್ಮವಾದ , ಪರತತ್ವವಾದ (absolutism : The doctrine of an absolute being) ಮತ್ತು (ಈಶ್ವರ ವಾದ (theism-ಥೀಯಿಸಮ್) ಎರಡೂ ಪ್ರಾಚೀನವಾದವು . ಬೇಧ-ಅಬೇಧ ; ವ್ಯಕ್ತಿ-ದೇವರು ಸಮನ್ವಯಗೊಳಿಸಿ ವೈಷ್ಣವ ಭಕ್ತಿ ರೂಪದಲ್ಲಿ ನಿರೂಪಿಸುವುದೇ ರಾಮಾನುಜರ ಪ್ರಯತ್ನ. ಭಾಸ್ಕರಾಚಾರ್ಯ (೯-೧೦ನೇಶತಮಾನ) ರ ಬೇಧಾಬೇಧ ವಾದವನ್ನು ಮುಂದುವರೆಸಿ ಶ್ರೀ ಶಂಕರರ ಮಾಯಾವಾದವನ್ನು ಖಂಡಿಸಿದರು. ಉಪನಿಷತ್ತಿನ ಚಿತ್ಪ್ರಧಾನ (ಐಡಿಯಲಿಸಮ್-Idealism,)ವನ್ನು ವೈಷ್ಣವ ಭಕ್ತಿ ಮಾರ್ಗಕ್ಕೆ ತಿರುಗಿಸಿದರು ; ಸಮಾಜ ಸುಧಾರಣೆ ಇವರ ವಿಶೇಷ ಸಾಧನೆ.[೧][೨]
ಓಂ ತತ್ಸತ್.
ನೋಡಿ
[ಬದಲಾಯಿಸಿ]ಚಾರ್ವಾಕ ದರ್ಶನ | ಜೈನ ದರ್ಶನ | ಬೌದ್ಧ ದರ್ಶನ | ಸಾಂಖ್ಯ ದರ್ಶನ |
ರಾಜಯೋಗ | ನ್ಯಾಯ | ವೈಶೇಷಿಕ ದರ್ಶನ | ಮೀಮಾಂಸ ದರ್ಶನ |
ಆದಿ ಶಂಕರರು ಮತ್ತು ಅದ್ವೈತ | ಅದ್ವೈತ- ಜ್ಞಾನ-ಕರ್ಮ ವಿವಾದ | ವಿಶಿಷ್ಟಾದ್ವೈತ ದರ್ಶನ | ದ್ವೈತ ದರ್ಶನ |
ಮಾಧ್ವ ಸಿದ್ಧಾಂತ | ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ | ಭಾರತೀಯ ತತ್ವಶಾಸ್ತ್ರ ಸಮೀಕ್ಷೆ | ಭಗವದ್ಗೀತಾ ತಾತ್ಪರ್ಯ |
ಕರ್ಮ ಸಿದ್ಧಾಂತ | ವೀರಶೈವ ತತ್ತ್ವ | ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು | - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು |
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ | ಮೋಕ್ಷ | ಗೀತೆ | ಬ್ರಹ್ಮಸೂತ್ರ |
- ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ಶಕ್ತಿ ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ
-ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Biographies of Ramanuja and Vedanta Desika
- Ramanuja and VisishtAdvaita
- more information
- Advaita and VisishtAdvaita Archived 2019-04-03 ವೇಬ್ಯಾಕ್ ಮೆಷಿನ್ ನಲ್ಲಿ.
- more information
ಆಧಾರ ಗ್ರಂಥಗಳು
[ಬದಲಾಯಿಸಿ]೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
- ೨.ದರ್ಶನಶಾಸ್ತ್ರ -ಆಧಾರ: ಭಾರತೀಯ ತತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ.
ಉಲ್ಲೇಖ
[ಬದಲಾಯಿಸಿ]