ವಿಷಯಕ್ಕೆ ಹೋಗು

ವಿಶ್ವರೂಪಂ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಶ್ವರೂಪಂ ಇಂದ ಪುನರ್ನಿರ್ದೇಶಿತ)
ವಿಶ್ವರೂಪಂ
ನಿರ್ದೇಶನಕಮಲ್ ಹಾಸನ್
ನಿರ್ಮಾಪಕಎಸ್.ಚಂದ್ರಹಾಸನ್, ಕಮಲ್ ಹಾಸನ್, ಪ್ರಸಾದ್ ವರ ಪೊಟ್ಲುರಿ[][][]
ಲೇಖಕಕಮಲ್ ಹಾಸನ್, ಅತುಲ್ ತಿವಾರಿ
ಪಾತ್ರವರ್ಗಕಮಲ್ ಹಾಸನ್
ರಾಹುಲ್ ಬೋಸ್
ಪೂಜ ಕುಮಾರ್
ಆಂಡ್ರಿಯಾ ಜೆರೆಮೈಯ್ಯ
ಶೇಖರ್ ಕಪೂರ್
ಸಂಗೀತಶಂಕರ್-ಎಹ್ಸಾನ್-ಲಾಯ್
ಛಾಯಾಗ್ರಹಣಸಾನು ವರ್ಘೀಸ್
ಸಂಕಲನಮಹೇಶ್ ನಾರಾಯಣ್
ಬಿಡುಗಡೆಯಾಗಿದ್ದು೨೦೧೩
ದೇಶಭಾರತ
ಭಾಷೆತಮಿಳ್, ಹಿಂದಿ
ಚಿತ್ರ ನಿರ್ಮಾಣ ಸಂಸ್ಥೆಆರ್.ಕೆ.ಎಫ್.ಐ, ಪಿ.ವಿ.ಪಿ ಇಂಟೆರ್ನಶಿನಲ್

ವಿಶ್ವರೂಪಂ ೨೦೧೩ರ ಕಮಲ್ ಹಾಸನ್ ಬರೆದು, ನಿರ್ದೇಶಿಸಿ, ಸಹ-ನಿರ್ಮಾಪಿಸಿ, ಹಾಗು ನಾಯಕ ನಟನಾಗಿ ಅಭಿನಯಿಸಿರುವ ತಮಿಳ್ ಮತ್ತು ಹಿಂದಿ ಭಾಷೆಗಳ ಸ್ಪೈಥ್ರಿಲ್ಲೆರ್ ಚಿತ್ರ.ಹಾಸನಲ್ಲದೆ ಈ ಚಿತ್ರದಲ್ಲಿ ರಾಹುಲ್ ಬೋಸ್, ಶೇಖರ್ ಕಪೂರ್, ಆಣ್ಡ್ರಿಯಾ ಜೆರೆಮೈಯಾ, ಮತ್ತು ಪೂಜಾ ಕುಮಾರ್ ನಟಿಸಿದ್ದರೇ.ತೆಲಗುನಲ್ಲಿಯೂ ಈ ಚಿತ್ರ ಅನುವಾದವಾಗಿದೆ.ಈ ಚಿತ್ರಕ್ಕೆ ವೈರಮುತು ಮತ್ತು ಕಮಲ್ ಹಾಸನ್ ಸಂಗೀತಸಾಹಿತ್ಯ ಕೊಟ್ಟು ಶಂಕರ್-ಎಹ್ಸಾನ್-ಲಾಯ್ ಸಂಗೀತ ನಿರ್ದೇಶನ ಮಾಡಿದ್ದರೆ.ಈ ಚಿತ್ರಕ್ಕೆ ೯೫ಕೋಟಿ ಖರ್ಚು ಮಾಡಲಾಗಿದ್ದು ೨೦೦+ಕೋಟಿ ಗಳಿಸಿತು[].

ಈ ಚಿತ್ರ ೨೫ ಜನವರೀ ೨೦೧೩ರಂದು ತಮಿಳ್ನಲ್ಲಿ ಬಿಡುಗಡೆಯಾಗಿ, ಹಿಂದಿಯಲ್ಲಿ ೨ ಫೆಬ್ರವರಿ ೨೦೧೩ರಂದು ಬಿಡುಗಡೆಯಾಯಿತು.ಇದಕ್ಕೆ ನ್ಯಾಷಿನಲ್ ಫಿಲಮ್ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ಕಲಾ ನಿರ್ದೇಶನ' ಮತ್ತು 'ಅತ್ಯುತ್ತಮ ನೃತ್ಯ ನಿರ್ದೇಶನ' ಲಭ್ದವಾಗಿದೆ.[]

ವಿಶ್ವರೂಪಂ ಒಂದು ಸ್ಪೈ-ಥ್ರಿಲ್ಲರ್ ಕಥೆ. ಅಫ್ಘಾನಿಸ್ಥಾನ್ನ ಭಯೋತ್ಪಾದಕನಾದ ಒಮರ್ ಕುರೇಶಿ ಅಮೇರಿಕಾದಲ್ಲಿ ಬಾಂಬ್ ಗಳನ್ನು ಇಟ್ಟಾಗ ಭಾರತೀಯ ರಾ(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ಏಜೆಂಟ್ ವಿಸಾಮ್ ಅಹ್ಮೆದ್ ಕಶ್ಮೀರಿ ಅದನ್ನು ತಪ್ಪಿಸುವ ಕಥೆ ಇದು.

  1. ವಿಸಾಮ್ ಅಹ್ಮೆದ್ ಕಶ್ಮೀರಿ/ವಿಶ್ವನಾಥ್ ಆಗಿ ಕಮಲ್ ಹಾಸನ್
  2. ಒಮರ್ ಕುರೇಶಿಯಾಗಿ ರಾಹುಲ್ ಬೋಸ್
  3. ಕೊಲೋನೆಲ್ ಜಗನ್ನಾಥ್ ಆಗಿ ಶೇಖರ್ ಕಪೂರ್
  4. ನಿರುಪಮಳಾಗಿ ಪೂಜ ಕುಮಾರ್
  5. ಅಶ್ಮಿತಾಳಾಗಿ ಆಣ್ಡ್ರಿಯಾ ಜೆರೆಮೈಯಾ
  6. ಸಲೀಮ್ ಆಗಿ ಜಯದೀಪ್ ಅಹತ್ವಾಲ್
  7. ದೀಪಕ್ ಚಾಟರ್ಜೀಯಾಗಿ ಸಾಮ್ರಾಟ್ ಚಕ್ರಬರ್ತಿ
  8. ನಾಸರ್ ಆಗಿ ನಾಸರ್
  9. ಡಾಕಿನ್ಸ್ ಆಗಿ ಮೈಲ್ಸ್ ಆಂಡೆರ್ಸನ್
  10. ತೌಫೀಕ್ ಆಗಿ ಹಯತ್ ಅಸಿಫ್

ಸಂಗೀತ

[ಬದಲಾಯಿಸಿ]

ಚಿತ್ರದ ಸಂಗೀತವನ್ನು ಶಂಕರ್-ಎಹ್ಸಾನ್-ಲಾಯ್ ನಿರ್ದೇಶಿಸಿದ್ದರೆ.ಸಂಗೀತಸಾಹಿತ್ಯನವನ್ನು ವೈರಮುತು[] ಮತ್ತು ಕಮಲ್ ಹಾಸನ್ ಬರೆದಿದ್ದು, ಹಿಂದಿಯಲ್ಲಿ ಜಾವೇದ್ ಅಕ್ತರ್ ಬರೆದಿದ್ದರೆ.[]:

ಕ್ರ.ಸಂ ಹಾಡು ಗಾಯಕರು ಸಮಯ ಸಾಹಿತ್ಯ
1 "ವಿಶ್ವರೂಪಂ" ಸೂರಜ್ ಜಗನ್ ೪:೨೨ ವೈರಮುತು
2 "ತುಪಕಿ ಎಂಗಳ್ ಥೊಲಿಲೆ" ಕಮಲ್ ಹಾಸನ್, ಬೆನ್ನಿ ದಯಾಲ್ ೪:೪೨ ವೈರಮುತು
3 "ಉನ್ನೈ ಕಾಣಾದು ನಾನ್" ಶಂಕರ್ ಮಹಾದೇವನ್, ಕಮಲ್ ಹಾಸನ್ ೫:೩೫ ಕಮಲ್ ಹಾಸನ್
4 "ಅನು ವಿಧೈತ್ತ ಭೂಮಿಯಿಲೆ" ಕಮಲ್ ಹಾಸನ್, ನಿಖಿಲ್ ಡಿಸೌಜ಼ ೪:೧೬ ವೈರಮುತು
5 "ವಿಶ್ವರೂಪಂ (ರೀಮಿಕ್ಸ್)" ಶೇನ್ ಮೆಂಡೋಸ್ನ ೪:೨೩ ವೈರಮುತು


ಕ್ರ.ಸಂ ಹಾಡು ಗಾಯಕರು ಸಮಯ ಸಾಹಿತ್ಯ
1 "ವಿಶ್ವರೂಪ್" ಸೂರಜ್ ಜಗನ್ ೪:೨೪ ಜಾವೇದ್ ಅಕ್ತರ್
2 "ಜುಂಗ್ ಹೇ" ಶಂಕರ್ ಮಹಾದೇವನ್, ಬೆನ್ನಿ ದಯಾಲ್ ೪:೪೬ ಜಾವೇದ್ ಅಕ್ತರ್
3 "ಮೆ ರಾಧಾ ತು ಶಾಮ್" ಶಂಕರ್ ಮಹಾದೇವನ್, ಕಮಲ್ ಹಾಸನ್ ೫:೩೯ ಜಾವೇದ್ ಅಕ್ತರ್
4 "ಕೊಯೀ ಕಹಿನ್" ಕಮಲ್ ಹಾಸನ್, ನಿಖಿಲ್ ಡಿಸೌಜ಼ ೪:೧೯ ಜಾವೇದ್ ಅಕ್ತರ್
5 "ವಿಶ್ವರೂಪ್ (ರೀಮಿಕ್ಸ್)" ಶೇನ್ ಮೆಂಡೋಸ್ನ ೪:೨೭ ಜಾವೇದ್ ಅಕ್ತರ್


ಉಲ್ಲೇಖಗಳು

[ಬದಲಾಯಿಸಿ]
  1. 'Deccan decided that the price as well as the terms of payment was not acceptable' | Mail Online
  2. Vishwaroopam review – Telugu/Tamil cinema – Kamal Hassan
  3. What’s common between Paradesi, Vishwaroopam, Naan Ee and Vazhakku Enn?, PVP Cinemas, National Awa
  4. http://www.ibtimes.co.in/articles/445593/20130313/vishwaroopam-box-office-collection-kamal-haasan-starrer.htm
  5. http://pib.nic.in/archieve/others/2013/mar/d2013031801.pdf
  6. "ಆರ್ಕೈವ್ ನಕಲು". Archived from the original on 2011-10-31. Retrieved 2013-08-08.
  7. http://en.wikipedia.org/wiki/Vishwaroopam_%28soundtrack%29