ವೈರಮುತ್ತು
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ವೈರಮುತ್ತು | |
---|---|
ಜನನ | ವೈರಮುತ್ತು ರಾಮಸ್ವಾಮಿ ೧೩ ಜುಲೈ ೧೯೫೩[೧][೨][೩] ವೈಗೈ, ಮಧುರೈ ಜಿಲ್ಲೆ, ಮದ್ರಾಸ್ ರಾಜ್ಯ, ಭಾರತ[೪][೫] (ಈದಿನ ವಡುಗಪಟ್ಟಿ, ಥೇನಿ ಜಿಲ್ಲೆ, ತಮಿಳುನಾಡು) |
ವೃತ್ತಿ |
|
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಪಚ್ಚಯ್ಯಪ್ಪ ಕಾಲೇಜಿ, ಚೆನ್ನೈ |
ಬಾಳ ಸಂಗಾತಿ | ಪೊನ್ಮಣಿ ವೈರಮುತ್ತು |
ಮಕ್ಕಳು | ಮದನ್ ಕಾರ್ಕಿ ಕಪಿಲನ್ ವೈರಮುತ್ತು |
ವೈರಮುತ್ತು ರಾಮಸ್ವಾಮಿ (ಜನನ: ೧೩ಜುಲೈ, ೧೯೫೩) ತಮಿಳು ಭಾಷೆಯ ಒಬ್ಬ ಪ್ರಸಿದ್ಧ ಕವಿ. ತಮಿಳು ಚಿತ್ರರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಎಲ್ಲರಿಗೂ ಚಿರಪರಿಚಿತರು. ಕವಿ,ಗೀತರಚನೆಕಾರ ಮತ್ತು ಕಾದಂಬರಿಕಾರರಾಗಿ ಅವರು ಹೆಸರು ಮಾಡಿದ್ದಾರೆ. ಚೆನ್ನೈಯ ಪಚ್ಚಯ್ಯಪ್ಪ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದ ಆನಂತರ ಅವರು ಕವನಗಳನ್ನು ಪ್ರಕಟಿಸುವುದರ ಜೊತೆಗೆ ಅನುವಾದಕರಾಗಿಯೂ ಕೆಲಸ ಮಾಡಿದರು. ೧೯೮೦ರಲ್ಲಿ ಪಿ. ಭಾರತಿರಾಜ ಅವರ ನಿರ್ದೇಶನದ ನಿಳಲ್ಗಳ್ ಎಂಬ ಚಿತ್ರದೊಂದಿಗೆ ಅವರು ತಮಿಳು ಚಿತ್ರೋದ್ಯಮವನ್ನು ಪ್ರವೇಶಿಸಿದರು. ಮುಂದೆ ೪೦ವರ್ಷಗಳ ಚಿತ್ರರಂಗದ ಉದ್ಯೋಗಕಾಲದಲ್ಲಿ ಅವರು ೭೫೦೦ಕ್ಕೂ ಹೆಚ್ಚು ಹಾಡುಗಳನ್ನೂ ಕವಿತೆಗಳನ್ನೂ ಬರೆದರು. ಅವುಗಳು ಅವರಿಗೆ ಏಳು ರಾಷ್ಟ್ರ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಇದು ಭಾರತೀಯ ಕವಿಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ರಾಷ್ಟ್ರಪ್ರಶಸ್ತಿ ಗೆದ್ದ ಕವಿ ಎಂಬ ದಾಖಲೆಯನ್ನು ಅವರದ್ದಾಗಿಸಿದೆ. ಅವರು ಸಾಹಿತ್ಯಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಸಾಹಿತ್ಯಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಪ್ರಾರಂಭಿಕ ಜೀವನ
[ಬದಲಾಯಿಸಿ]ವೈರಮುತ್ತು ಅವರು ತಮಿಳುನಾಡಿನ ತೇನಿ ಜಿಲ್ಲೆಯ ಕೃಷಿಕ ದಂಪತಿಗಳಾದ ರಾಮಸ್ವಾಮಿ ಮತ್ತು ಅಂಗಮ್ಮಾಳ್ ಅವರ ಪುತ್ರನಾಗಿ ೧೯೫೩ ಜುಲೈ ೧೩ರಂದು ಜನಿಸಿದರು. ೧೯೫೭ರಲ್ಲಿ ಅವರ ಕುಟುಂಬವು ತೇನಿಜಿಲ್ಲೆಯ ಇನ್ನೊಂದು ಸ್ಥಳವಾದ ವಡಗುಪಟ್ಟಿಗೆ ಸ್ಥಳಾಂತರಗೊಂಡಿತು. ವೈಗೈ ನದಿಗೆ ಅಡ್ಡವಾಗಿ ಕಟ್ಟಿದ ವೈಗೈ ಅಣೆಕಟ್ಟಿನಿಂದಾಗಿ ಮೆಟ್ಟೂರು ಸೇರಿದಂತೆ ೧೪ ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಯಿತು. ಹೀಗಾಗಿ ಅವರು ಹೊಸ ಪರಿಸರದಲ್ಲಿ ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡು ಕೆಲಸ ಮಾಡಬೇಕಾಯಿತು.
ತಮ್ಮ ಎಳವೆಯಿಂದಲೇ ವೈರಮುತ್ತು ಅವರು ತಮಿಳುಭಾಷೆ ಮತ್ತು ಸಾಹಿತ್ಯದ ಕಡೆಗೆ ಆಕರ್ಷಿತರಾಗಿದ್ದರು. ೧೯೬೦ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ದ್ರಾವಿಡ ಚಳುವಳಿಯು ವೈರಮುತ್ತು ಅವರ ಮೇಲೆ ಗಣನೀಯ ಪ್ರಮಾಣದ ಪರಿಣಾಮವನ್ನು ಬೀರಿತು. ಅವರು ತಮಿಳುಭಾಷೆಯ ಗಣ್ಯವ್ಯಕ್ತಿಗಳಾದ ಪೆರಿಯಾರ್ ರಾಮಸ್ವಾಮಿ, ಪೇರರಿಜ್ಞರ್' ಅಣ್ಣಾದುರೈ, ‘ಕಲೈನರ್’ ಎಂ ಕರುಣಾನಿಧಿ, ಸುಬ್ರಮಣ್ಯ ಭಾರತಿ, ಭಾರತಿದಾಸನ್, ಕಣ್ಣದಾಸನ್ ಮೊದಲಾದವರಿಂದ ಪ್ರಭಾವಿತರಾದರು. ಅವರು ತಮ್ಮ ಹತ್ತನೇ ವರ್ಷದ ವಯಸ್ಸಿನಿಂದಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. ತಮ್ಮ ಹದಿಹರೆಯದಲ್ಲಿ ಅವರು ವಿದ್ಯಾಲಯದಲ್ಲಿ ಕವಿ ಮತ್ತು ಉತ್ತಮ ಭಾಷಣಕಾರರಾಗಿ ಪ್ರಸಿದ್ಧರಾದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಅವರು ತಿರುವಳ್ಳುವರ್ ಅವರ ತಿರುಕ್ಕುರಳ್ ನಿಂದ ಪ್ರಭಾವಿತರಾಗಿ “ವೆಂಬ ಕವಿತೆಗಳು” ಎಂಬ ಕವನಸಂಕಲನವನ್ನು ಪ್ರಕಟಿಸಿದರು.
ವಿದ್ಯಾಭ್ಯಾಸ ಮತ್ತು ಪ್ರಾರಂಭಿಕ ಉದ್ಯೋಗ
[ಬದಲಾಯಿಸಿ]ಚೆನ್ನೈಯ ಪಚ್ಚಯ್ಯಪ್ಪ ಕಾಲೇಜಿನಲ್ಲಿ ಪದವಿಶಿಕ್ಷಣದ ಸಮಯದಲ್ಲಿಯೇ ಅವರು ಉತ್ತಮ ವಾಗ್ಮಿಯಾಗಿಯೂ ಕವಿಯಾಗಿಯೂ ಪ್ರಸಿದ್ಧರಾದರು. ಹತ್ತೊಂಭತ್ತನೆಯ ವಯಸ್ಸಿನಲ್ಲಿ ತಮ್ಮ ಮೊದಲ ಕವನಸಂಕಲನವಾದ ವೈಗರೈ ಮೇಗಂಗಳ್ ('ಮುಂಜಾನೆಯ ಮೋಡಗಳು') ಪ್ರಕಟಿಸಿದರು. ಈ ಕವನಸಂಕಲನವು ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ಪಠ್ಯಕ್ರಮದಲ್ಲಿ ಒಳಗೊಂಡು, ವೈರಮುತ್ತು ಅವರಿಗೆ ವಿದ್ಯಾರ್ಥಿಯಾಗಿರುವಾಗಲೇ ಪಠ್ಯಪುಸ್ತಕ ಲೇಖಕರೆಂಬ ಹೆಸರನ್ನು ತಂದುಕೊಟ್ಟಿತು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ತಮಿಳುಸಾಹಿತ್ಯದಲ್ಲಿ ೨ ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಗಿಸಿದರು.
ತಮ್ಮ ವಿದ್ಯಾಭ್ಯಾಸದ ಆನಂತರ ಅವರು ೧೯೭೦ರ ದಶಕದ ಮಧ್ಯಕಾಲಾವಧಿಯಲ್ಲಿ ತಮಿಳುನಾಡು ಅಧಿಕೃತ ಭಾಷಾ ಆಯೋಗದಲ್ಲಿ ಜಸ್ಟಿಸ್ ಮಹಾರಾಜನ್ ಅವರ ಮಾರ್ಗದರ್ಶನದಲ್ಲಿ ಕಾನೂನಿನ ಪುಸ್ತಕಗಳ ಮತ್ತು ಕಡತಗಳ ಅನುವಾದಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಲ್ಲದೆ ಅವರು ಕವಿತೆಗಳನ್ನು ಬರೆಯುವುದನ್ನು ಮುಂದುವರಿಸಿದರು. ೧೯೭೯ರಲ್ಲಿ ಅವರು ತಿರುತ್ತಿ ಎಳುದಿಯ ಕವಿತೈಗಳ್ ('ಪರಿಷ್ಕೃತ ಮತ್ತು ಪುನಃ ಬರೆಯಲಾದ ಕವಿತೆಗಳು') ಎಂಬ ಶೀರ್ಷಿಕೆಯಡಿ ತಮ್ಮ ಎರಡನೆಯ ಕವನಸಂಕಲನವನ್ನು ಪ್ರಕಟಿಸಿದರು.
ಕುಟುಂಬ ಮತ್ತು ವೈಯಕ್ತಿಕ ಜೀವನ
[ಬದಲಾಯಿಸಿ]ವೈರಮುತ್ತು ಅವರು ಮೀನಾಕ್ಷಿ ಮಹಿಳಾ ಕಾಲೇಜಿನ ಉಪನ್ಯಾಸಕಿಯೂ ತಮಿಳು ವಿದುಷಿಯೂ ಆಗಿದ್ದ ಪೊನ್ಮಣಿ ಅವರನ್ನು ವಿವಾಹವಾದರು. ವೈರಮುತ್ತು-ಪೊನ್ಮಣಿ ದಂಪತಿಗಳಿಗೆ ಇಬ್ಬರು ಪುತ್ರರು – ಮದನ್ ಕಾರ್ಕಿ ಮತ್ತು ಕಪಿಲನ್. ಅವರಿಬ್ಬರೂ ತಮಿಳು ಚಿತ್ರರಂಗದಲ್ಲಿ ಗೀತರಚನೆಕಾರರಾಗಿಯೂ ಸಂಭಾಷಣೆ ರಚನೆಕಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಇಬ್ಬರು ಮೊಮ್ಮಕ್ಕಳಿದ್ದಾರೆ – ಹೈಕು ಮತ್ತು ಮೆಟ್ಟೂರಿ.
ಚಲನಚಿತ್ರ ವೃತ್ತಿಜೀವನ
[ಬದಲಾಯಿಸಿ]ಚೊಚ್ಚಲ ಮತ್ತು ಆರಂಭಿಕ ವರ್ಷಗಳು
[ಬದಲಾಯಿಸಿ]ವೈರಮುತ್ತು ಅವರ ಕವಿತೆಗಳನ್ನು ಓದಿ, ನಿರ್ದೇಶಕರಾದ ಪಿ.ಭಾರತಿರಾಜ ತಮ್ಮ ನಿಳಲ್ಗಳ್ ಎಂಬ ಚಿತ್ರಕ್ಕೆ ಗೀತರಚನಕಾರರಾಗಿ ೧೯೮೦ರಲ್ಲಿ ಅವರನ್ನು ಆಯ್ಕೆಮಾಡಿದರು. ಅವರ ವೃತ್ತಿಜೀವನದಲ್ಲಿ ಅವರು ಬರೆದ ಮೊದಲ ಹಾಡು "ಪೊನ್ಮಾಲೈ ಪೊಳುತು." ಈ ಹಾಡಿನ ಸಂಗೀತ ನಿರ್ದೇಶನವನ್ನು ಮಾಡಿದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಈ ಹಾಡನ್ನು ಹಾಡಿದರು. ಅವರ ಹಾಡುಗಳಲ್ಲಿ ಮೊದಲಿಗೆ ಬಿಡುಗಡೆಯಾದ ಹಾಡು "ಭದ್ರಕಾಳಿ ಉತ್ತಮಶೀಲಿ" (ಇಳಯರಾಜರಿಂದ ರಚಿಸಲ್ಪಟ್ಟಿದ್ದು), ಕಾಳಿ ಚಿತ್ರದ ಹಾಡು. ಈ ಹಾಡು ನಿಳಲ್ಗಳ್ ಬಿಡುಗಡೆಯಾಗುವ ನಾಲ್ಕು ತಿಂಗಳು ಮೊದಲು ಬಿಡುಗಡೆಯಾಯಿತು. ಚಿತ್ರರಂಗದಲ್ಲಿ ಗೀತರಚನೆಯನ್ನೇ ಮಾಡುವ ಉದ್ದೇಶಕ್ಕಾಗಿ ಅವರು ತಮ್ಮಅನುವಾದಕ ಹುದ್ದೆಗೆ ರಾಜೀನಾಮೆ ನೀಡಿದರು.
ನಿಳಲ್ಗಳ್ ಚಿತ್ರದ ತರುವಾಯ ವೈರಮುತ್ತು ಮತ್ತು ಇಳಯರಾಜ ಸುಮಾರು ಅರ್ಧದಶಕಕ್ಕಿಂತಲೂ ಹೆಚ್ಚುಕಾಲ ಯಶಸ್ವೀ ಸಹಯೋಗ ಮಾಡಿದರು. ನಿರ್ದೇಶಕ ಭಾರತಿರಾಜ ಅವರೊಂದಿಗಿನ ಸಹಯೋಗವು ಕೆಲವು ಅತ್ಯಂತ ಪ್ರಸಿದ್ಧ ಹಾಡುಗಳಿಗೆ ದಾರಿ ಮಾಡಿಕೊಟ್ಟಿತು. ಅವುಗಳಲ್ಲಿ ಕೆಲವು –ಅಲೈಗಳ್ ಒಯಿವದಿಲ್ಲೈ (ಇದು ವೈರಮುತ್ತು ಅವರಿಗೆ ಉತ್ತಮ ಸಾಹಿತ್ಯಕಾರನಿಗೆ ನೀಡಲ್ಪಡುವ ತಮಿಳುನಾಡು ರಾಜ್ಯ ಫಿಲಂ ಪ್ರಶಸ್ತಿಯನ್ನು ನೀಡಿತು), ಕಾದಲ್ ಓವಿಯಂ, ಮಣ್ಣ್ವಾಸನೈ, ಪುದುಮೈ ಪೆಣ್ಣ್, ಒರುಕೈದಿಯಿನ್ ಡೈರಿ, ಮುದಲ್ ಮರ್ಯಾದೈ (ಇದು ವೈರಮುತ್ತು ಅವರಿಗೆ ಉತ್ತಮಸಾಹಿತ್ಯಕಾರರಿಗೆ ನೀಡಲ್ಪಡುವ ರಾಷ್ಟ್ರಪ್ರಶಸ್ತಿಯನ್ನುಮೊದಲಬಾರಿಗೆ ನೀಡಿತು) ಮತ್ತು ಕಡಲೋರ ಕವಿತೈಗಳ್. ಇಳಯರಾಜ ಅವರೊಂದಿಗಿನ ಸಹಯೋಗಕಾಲದಲ್ಲಿಯೇ ವೈರಮುತ್ತು ಅವರು ನಿರ್ದೇಶಕ ಮಣಿರತ್ನಂ ಅವರೊಂದಿಗೆ ೧೯೮೫ರಲ್ಲಿ ಇದಯ ಕೋವಿಲ್ ಚಿತ್ರಕ್ಕೋಸ್ಕರ "ನಾನ್ ಪಾಡುಂ ಮೌನರಾಗಂ" (ಇದು ರತ್ನಂ ಅವರ ಪ್ರಸಿದ್ಧ ಮೌನರಾಗಂಗೆ ನಾಂದಿಯಾಯಿತು, ಅದು ೧೯೮೬ರಲ್ಲಿ ಬಿಡುಗಡೆಯಾಯಾಯಿತು) ಹಾಡನ್ನು ರಚಿಸಿದರು.
ಭಾರತಿರಾಜ ಅವರೊಂದಿಗಿನ ಸಹಯೋಗದ ಜೊತೆಗೆ ಸಾಹಿತ್ಯಕಾರ-ಸಂವಿಧಾಯಕ ಜೋಡಿಯು ಇನ್ನುಕೆಲವು ಪ್ರಸಿದ್ಧ ಸೌಂಡ್ ಟ್ರಾಕ್ ಗಳ ರಚನೆಗೆ ದಾರಿಮಾಡಿಕೊಟ್ಟಿತು. ಅವುಗಳಲ್ಲಿ ಕೆಲವು ರಾಜಪಾರ್ವೈ, ನಿನೈವೆಲ್ಲಾಮ್ ನಿತ್ಯ, ನಲ್ಲವನುಕ್ಕು ನಲ್ಲವನ್, ಸಲಂಗೈ ಒಲಿ ಮತ್ತು ಸಿಂಧುಭೈರವಿ (ಕೊನೆಯ ಎರಡು ಹಾಡುಗಳು ಇಳಯರಾಜ ಅವರಿಗೆ ಸಂಗೀತ ನಿರ್ದೇಶನಕ್ಕಾಗಿ ಮೊದಲ ಎರಡು ರಾಷ್ಟ್ರಪ್ರಶಸ್ತಿಗಳನ್ನು ತಂದುಕೊಟ್ಟವು.)
ವೈರಮುತ್ತು ಅವರು ಎಂ.ಎಸ್. ವಿಶ್ವನಾಥನ್ ಅವರೊಂದಿಗೆ ತಣ್ಣೀರ್ ತಣ್ಣೀರ್ ಎಂಬ ಚಿತ್ರದಲ್ಲಿ, ವಿ.ಎಸ್. ನರಸಿಂಹನ್ ಅವರೊಂದಿಗೆ ಅಚ್ಚಮಿಲ್ಲೈ ಅಚ್ಚಮಿಲ್ಲೈ ಮತ್ತು ಕಲ್ಯಾಣ ಅಗತಿಗಳ್ ಎಂಬ ಚಿತ್ರಗಳಲ್ಲಿ ಕೆಲಸಮಾಡಿದರು. ಈ ಮೂರೂ ಚಿತ್ರಗಳನ್ನು ಕೆ. ಬಾಲಚಂದರ್ ಅವರು ನಿರ್ದೇಶಿಸಿದರು.
೧೯೮೬ರಲ್ಲಿ ವೈರಮುತ್ತು ಅವರು ಮೊದಲಬಾರಿಗೆ ನಟ್ಪು ಚಿತ್ರಕ್ಕಾಗಿ ಸಂಭಾಷಣೆಯನ್ನು ಬರೆದರು, ಈ ಚಿತ್ರವನ್ನು ಅಮೀರ್ ಜಾನ್ ನಿರ್ದೇಶಿಸಿದರು. ತರುವಾಯ ಅಮೀರ್ ಜಾನ್ ಅವರೊಂದಿಗೆ ಮೂರು ಚಿತ್ರಗಳಲ್ಲಿ ವೈರಮುತ್ತು ಅವರು ಸಹಯೋಗಮಾಡಿದರು. ಅವುಗಳು ತುಳಸಿ (೧೯೮೭), ವಣ್ಣ ಕನವುಗಳ್ (೧೯೮೭) ಮತ್ತು ವಣಕ್ಕಂ ವಾದಿಯಾರೇ (೧೯೯೧). ಅವರು ಅನ್ರು ಪೆಯಿದ ಮಳೈಯಿಲ್ (೧೯೮೯) ಚಿತ್ರಕ್ಕೆ ಸಂಭಾಷಣೆಯನ್ನು ಬರೆದರು. ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಟೋಗ್ರಾಫರ್ ಅಶೋಕ್ ಕುಮಾರ್ ನಿರ್ದೇಶಿಸಿದರು.
ಇಳಯರಾಜ ಅವರೊಂದಿಗಿನ ಭಿನ್ನಾಭಿಪ್ರಾಯಗಳು
[ಬದಲಾಯಿಸಿ]೧೯೮೬ರ ಕೆ. ಬಾಲಚಂದರ್ ನಿರ್ದೇಶನದ ಪುನ್ನಗೈ ಮಣ್ಣನ್ ಚಿತ್ರದ ನಂತರ ವೈರಮುತ್ತು ಮತ್ತು ಇಳಯರಾಜ ಸಹಯೋಗವು ವಿಭಜಿಸಲ್ಪಟ್ಟಿತು. ಈ ವಿಭಜನೆಯ ನಂತರ ಐದು ವರ್ಷಗಳ ಕಾಲ ವೈರಮುತ್ತು ಅವರ ವೃತ್ತಿಯು ಸ್ಥಗಿತವಾಯಿತು. ಆ ಸಮಯದಲ್ಲಿ ಅವರು ತಮಿಳಿನಿಂದ ಬೇರೆ ಭಾಷೆಗಳಿಗೆ ಡಬ್ ಮಾಡಿದ ಚಿತ್ರಗಳಿಗೆ ಸಾಹಿತ್ಯಕಾರರಾಗಿ ಕೆಲಸ ಮಾಡಿದರು. ಭಾರತಿರಾಜ ಅವರೊಂದಿಗಿನ ಅವರ ಸಹಯೋಗವು ಧೃಡವಾಗಿತ್ತು. ಅವರಿಬ್ಬರೂ ೧೯೮೦ರ ದಶಕದ ಕೊನೆಯಲ್ಲಿ ವೇದಂ ಪುಡಿತ್ತು (ದೇವೇಂದ್ರನ್ ಅವರ ನಿರ್ದೇಶನ) ಮತ್ತು ಕೊಡಿ ಪರಕ್ಕುದು (ಹಂಸಲೇಖ ಅವರ ನಿರ್ದೇಶನ) ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು ಬಾಲಿವುಡ್ ನಿರ್ದೇಶಕರಾದ ಆರ್.ಡಿ.ಬರ್ಮನ್ ಅವರೊಂದಿಗೆ ಉಲಗಂ ಪಿರಂದದು ಎನಕ್ಕಾಗ ಮತ್ತು ಲಕ್ಷ್ಮಿಕಾಂತ್- ಪ್ಯಾರೇಲಾಲ್ ಅವರೊಂದಿಗೆ ಉಯಿರೆ ಉನಕ್ಕಾಗ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದರು.
ಈ ಸಮಯದಲ್ಲಿ ಅವರು ನಿರ್ದೇಶಕ ಚಂದ್ರಬೋಸ್ ಅವರೊಂದಿಗೆ ಶಂಕರ್ ಗುರು, ಮಕ್ಕಳ್ ಎನ್ ಪಕ್ಕಮ್, ಮನಿದನ್, ಕಥಾನಾಯಗನ್, ತೈಮೇಲೆ ಆಣೈ, ಪಾಟಿ ಸೊಲ್ಲೈ ತಟ್ಟಾದೆ, ವಸಂತಿ, ರಾಜ ಚಿನ್ನ ರೋಜಾ ಮತ್ತು ಸುಗಮನ ಸುಮೈಗಳ್ ಮೊದಲಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರಿಬ್ಬರೂ ಕೊನೆಯದಾಗಿ ೨೦೦೫ರಲ್ಲಿ ಬಿಡುಗಡೆಯಾದ ಆಧಿಕ್ಕಮ್ ನಲ್ಲಿ ಜೊತೆಯಾಗಿ ಕೆಲಸ ಮಾಡಿದರು.
ಪುನರುತ್ಥಾನ
[ಬದಲಾಯಿಸಿ]೧೯೯೧ರಲ್ಲಿ ಕೆ. ಬಾಲಚಂದರ್ ಅವರು ತಮ್ಮ ಮೂರು ಚಿತ್ರಗಳಿಗೆ ವೈರಮುತ್ತು ಅವರನ್ನು ಗೀತರಚನಾಕಾರರಾಗಿ ನಿಯಮಿಸಿದರು. ಆ ಮೂರು ಚಿತ್ರಗಳು ವಾನಮೇ ಎಲ್ಲೈ, ಅಣ್ಣಾಮಲೈ ಮತ್ತು ರೋಜಾ ೧೯೯೨ರಲ್ಲಿ ಬಿಡುಗಡೆಯಾದವು. ಮೊದಲನೆಯ ಚಿತ್ರವು ಬಾಲಚಂದರ್ ಅವರಿಂದ ನಿರ್ದೇಶಿಸಲ್ಪಟ್ಟಿದ್ದು, ಎಂ ಎಂ ಕೀರವಾಣಿ ಅವರ ಸಾಹಿತ್ಯ ರಚನೆಯಿಂದ ಕೂಡಿದ್ದಾಗಿದೆ. ಎರಡನೆಯದು ಸುರೇಶಕೃಷ್ಣ ಅವರಿಂದ ನಿರ್ದೇಶಿಸಲ್ಪಟ್ಟಿದ್ದು ದೇವಾ ಅವರ ಸಂಗೀತ ನಿರ್ದೇಶನ ದಿಂದ ಕೂಡಿದೆ. ಮೂರನೆಯದು ಮಣಿರತ್ನಂ ಅವರ ನಿರ್ದೇಶನವೂ ಎ. ಆರ್. ರಹ್ಮಾನ್ ಅವರ ಮೊದಲ ಸಾಹಿತ್ಯರಚನೆಯೂ ಉಳ್ಳದ್ದಾಗಿದೆ.
ಇಳಯರಾಜ ಅವರೊಂದಿಗಿನ ವಿದಳನದ ನಂತರ ಮಣಿರತ್ನಂ ನಿರ್ದೇಶನದ ಮೊದಲ ಚಿತ್ರ ರೋಜಾ ಆಗಿದ್ದು ಅದರ ಸಂಗೀತವು ತಮಿಳು ಒಂದಷ್ಟೇ ಅಲ್ಲ ಉಳಿದ ಭಾರತೀಯ ಭಾಷೆಗಳ ಸಂಗೀತದ ಮೇಲೂ ಉತ್ತಮ ಪ್ರಭಾವ ಬೀರಿತು. "ಚಿನ್ನ ಚಿನ್ನ ಆಸೈ" ಹಾಡು ರಹ್ಮಾನ್ ಅವರು ರಚಿಸಿದ ಮೊದಲ ಸಿನಿಮಾದ ಹಾಡಾಗಿತ್ತು. ಈ ಹಾಡಿಗೆ ವೈರಮುತ್ತು ಅವರಿಗೆ ಶ್ರೇಷ್ಠ ಸಾಹಿತ್ಯಕಾರನಿಗೆ ಕೊಡಲ್ಪಡುವ ರಾಷ್ಟ್ರಪ್ರಶಸ್ತಿ ಲಭಿಸಿತು, ಅದು ಅವರ ಎರಡನೆಯ ರಾಷ್ಟ್ರಪ್ರಶಸ್ತಿಯೂ ಆಗಿದೆ. ಈ ಆಲ್ಬಮ್ ಗೆ ಎ. ಆರ್. ರಹ್ಮಾನ್ ಅವರಿಗೆ ಉತ್ತಮ ಸಂಗೀತ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಅದು ಅವರಿಗೆ ಲಭಿಸಿದ ಮೊದಲ ರಾಷ್ಟ್ರಪ್ರಶಸ್ತಿಯೂ ಆಗಿದೆ.
ರೋಜಾ ಚಿತ್ರದ ನಂತರ ರಹ್ಮಾನ್- ವೈರಮುತ್ತು ಜೋಡಿಗೆ ಬಹಳ ಬೇಡಿಕೆಯಿದ್ದು, ಮುಂದಿನ ೨೫ ವರ್ಷಗಳಲ್ಲಿ ಅವರಿಬ್ಬರೂ ಹಲವು ಶ್ರೇಷ್ಠಚಿತ್ರಗಳನ್ನು ಬಿಡುಗಡೆ ಮಾಡಿದರು. ಅವರಿಬ್ಬರ ಮಣಿರತ್ನಂ ಅವರೊಂದಿಗಿನ ಸಹಯೋಗ (ರಹ್ಮಾನ್ ಅವರ ವೃತ್ತಿಜೀವನದುದ್ದಕ್ಕೂ) ಹಲವಾರು ವಿಮರ್ಶಾತ್ಮಕ ಮತ್ತು ಯಶಸ್ವೀ ಚಿತ್ರಗಳ ಬಿಡುಗಡೆಗೆ ಕಾರಣವಾಯಿತು. ಅಂತಹ ಕೆಲವು ಚಿತ್ರಗಳು - ತಿರುಡಾ ತಿರುಡಾ (೧೯೯೩), ಬಾಂಬೆ (೧೯೯೫), ಅಲೈಪಾಯುದೇ (೨೦೦೦), ಕಣ್ಣತ್ತಿಲ್ ಮುತ್ತಮಿಟ್ಟಾಲ್ (೨೦೦೨), ಆಯುತ ಎಳುತ್ತು (೨೦೦೪), ರಾವಣನ್ (೨೦೧೦), ಕಡಲ್ (೨೦೧೩), ಓ ಕಾದಲ್ ಕಣ್ಮಣಿ (೨೦೧೫), ಕಾಟ್ರು ವೆಳಿಯಿಡೈ (೨೦೧೭) ಮತ್ತು ಚೆಕ್ಕ ಚಿವಂದ ವಾನಂ (೨೦೧೮). ವೈರಮುತ್ತು ಅವರಿಗೆ ಸಾಹಿತ್ಯಕಾರನಿಗಾಗಿ ನೀಡುವ ರಾಷ್ಟ್ರಪ್ರಶಸ್ತಿಗಳಲ್ಲಿ ಲಭಿಸಿದ ಏಳು ರಾಷ್ಟ್ರಪ್ರಶಸ್ತಿಗಳಲ್ಲಿ ನಾಲ್ಕು ಅವರ ಮತ್ತು ರಹ್ಮಾನ್ ಅವರ ಸಹಯೋಗದಲ್ಲಿ ಮಾಡಿದ ಕೆಲಸಕ್ಕಾಗಿ ಲಭಿಸಿದವು. ರೋಜಾ, ಕರುತ್ತಮ್ಮ, ಮತ್ತು ಪವಿತ್ರ ಚಿತ್ರಗಳು ಅವುಗಳಲ್ಲಿ ಮುಖ್ಯವಾಗಿವೆ. ೧೯೯೫ರ ಕರುತ್ತಮ್ಮ ಮತ್ತು ಪವಿತ್ರ ಚಿತ್ರಗಳು ರಹ್ಮಾನ್ ಅವರನ್ನು ರಾಷ್ಟ್ರಪ್ರಶಸ್ತಿ ಕಮಿಟಿಗೆ ಪರಿಚಯಿಸಿದ್ದಲ್ಲದೆ ಅವರ ಕೊಡುಗೆ ಮಹತ್ವದ್ದಾಗಿ ಪರಿಗಣಿಸಲ್ಪಟ್ಟಿತು. ಸಂಗಮಮ್ ಮತ್ತು ಕಣ್ಣತ್ತಿಲ್ ಮುತ್ತಮಿಟ್ಟಾಲ್ ಕೂಡ ರಹ್ಮಾನ್ ಅವರ ಕೊಡುಗೆಗೆ ಉತ್ತಮ ನಿದರ್ಶನಗಳಾಗಿವೆ. ರಹ್ಮಾನ್ ಅವರಿಗೆ ಲಭಿಸಿದ ಆರು ರಾಷ್ಟ್ರಪ್ರಶಸ್ತಿಗಳಲ್ಲಿ ನಾಲ್ಕು ಅವರ ಮತ್ತು ವೈರಮುತ್ತು ಅವರ ಸಹಯೋಗದಿಂದಾಗಿ ಲಭಿಸಿದವು. ರೋಜಾ, ಮಿನ್ಸಾರ ಕನವು, ಕಣ್ಣತ್ತಿಲ್ ಮುತ್ತಮಿಟ್ಟಾಲ್ ಮತ್ತು ಕಾಟ್ರು ವೇಳಿಯಿಡೈ ಚಿತ್ರಗಳಿಂದಾಗಿ ರಹ್ಮಾನ್ ಅವರು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದರು. ಗಾಯಕರಾದ ಪಿ.ಉಣ್ಣಿಕೃಷ್ಣನ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶಂಕರ್ ಮಹಾದೇವನ್, ಸ್ವರ್ಣಲತಾ. ಕೆ. ಎಸ್. ಚಿತ್ರಾ, ಶಶಾ ತಿರುಪತಿ ಮೊದಲಾದವರು ವೈರಮುತ್ತು- ರಹ್ಮಾನ್ ಸಹಯೋಗದಿಂದಾಗಿ ರಾಷ್ಟ್ರಪ್ರಶಸ್ತಿಗಳನ್ನು ಗೆದ್ದರು.
ಮಣಿರತ್ನಂ ಅವರೊಂದಿಗಿನ ಸಹಯೋಗದೊಂದಿಗೆ ವೈರಮುತ್ತು- ರಹ್ಮಾನ್ ಜೋಡಿ ನಿರ್ದೇಶಕ ಶಂಕರ್ ಅವರೊಂದಿಗಿನ (ಜಂಟಲ್ಮನ್, ಕಢಳಾನ್, ಇಂಡಿಯನ್, ಜೀನ್ಸ್, ಮುದಲ್ವನ್, ಶಿವಾಜಿ ಮತ್ತು ಎಂದಿರನ್) ಸಹಯೋಗಕ್ಕೂ ಪ್ರಸಿದ್ಧವಾಗಿದೆ. ಇದೇ ಜೋಡಿಯು ಭಾರತಿರಾಜ ಅವರ ಜೊತೆಗೂಡಿ ಕಿಳಕ್ಕು ಸೀಮೆಯಿಲ್, ಕರುತ್ತಮ್ಮ, ಅಂತೀ ಮಂತಾರೈ ಮತ್ತು ತಾಜ್ ಮಹಲ್ ಮೊದಲಾದ ಚಿತ್ರಗಳನ್ನು ಬಿಡುಗಡೆ ಮಾಡಿತು. ಕೆ.ಎಸ್. ರವಿಕುಮಾರ್ ಜೊತೆಗೂಡಿ ಮುತ್ತು, ಪಡಯಪ್ಪ ಮತ್ತು ವರಲಾರ್ ಚಿತ್ರಗಳನ್ನೂ, ರಾಜೀವ್ ಮೆನನ್ ಸಹಯೋಗದಲ್ಲಿ ಮಿನ್ಸಾರ ಕನವು ಮತ್ತು ಕಂಡುಕೊಂಡೇನ್ ಕಂಡುಕೊಂಡೇನ್ ಚಿತ್ರಗಳನ್ನೂ ಬಿಡುಗಡೆ ಮಾಡಿತು. ಅವರ ಇನ್ನು ಕೆಲವು ಪ್ರಸಿದ್ಧ ಚಿತ್ರಗಳು - ಪುದಿಯ ಮುಗಮ್, ಡ್ಯುಯೆಟ್, ಮೇ ಮಾದಮ್, ರಿಥಮ್, ಕೊಚ್ಚಡೈಯಾನ್ ಮತ್ತು ೨೪.
ವೈರಮುತ್ತು ಅವರು ಸಾಹಿತ್ಯಕಾರ ದೇವಾ ಅವರೊಂದಿಗಿನ ತಮ್ಮ ೧೯೯೦ ಮತ್ತು ೨೦೦೦ದ ಮೊದಲ ವರ್ಷಗಳ ಸಹಯೋಗಕ್ಕೆ ಪ್ರಸಿದ್ಧರಾಗಿದ್ದಾರೆ. ಈ ಸಹಯೋಗವು ಕೆಲವು ಉತ್ತಮ ಸೌಂಡ್ ಟ್ರ್ಯಾಕ್ ಗಳಾದ ಅಣ್ಣಾಮಲೈ, ಭಾಷಾ, ಆಸೈ, ವನ್ಸ್ ಮೋರ್, ಅರುಣಾಚಲಂ, ನೇರುಕ್ಕು ನೇರ್, ವಾಲಿ, ಖುಷಿ ಮತ್ತು ಪಂಚತಂತ್ರಮ್ ಮೊದಲಾದವುಗಳನ್ನು ರಚಿಸಿತು. ಅವರು ಹಾರಿಸ್ ಜಯರಾಜ್, ಡಿ. ಇಮ್ಮಾನ್, ವಿದ್ಯಾಸಾಗರ್, ಶಂಕರ್-ಎಹಸಾನ್-ಲಾಯ್ ಅವರೊಂದಿಗೆ (ಆಳವಂದಾನ್ ಮತ್ತು ವಿಶ್ವರೂಪಂ), ಎನ್.ಆರ್. ರಘುನಾಥನ್ (ತೇನ್ಮೇರ್ಕು ಪರ್ವಕಾಟ್ರು ಚಿತ್ರಕ್ಕಾಗಿ ಅವರಿಗೆ ಆರನೇ ರಾಷ್ಟ್ರ ಪ್ರಶಸ್ತಿ ಲಭಿಸಿತು), ಯುವನ್ ಶಂಕರ್ ರಾಜ (ಇಳಯರಾಜಾ ಅವರ ಪುತ್ರ, ಧರ್ಮ ದುರೈ ಚಿತ್ರಕ್ಕೆ ಇವರಿಬ್ಬರ ಸಹಯೋಗದಿಂದ ವೈರಮುತ್ತು ಅವರಿಗೆ ತಮ್ಮ ಏಳನೆಯ ರಾಷ್ಟ್ರ ಪ್ರಶಸ್ತಿ ಲಭಿಸಿತು). ಅವರ ೪೦ ವರ್ಷಗಳ ವೃತ್ತಿಯಲ್ಲಿ ಅವರು ೧೫೦ಕ್ಕೂ ಹೆಚ್ಚು ಸಂಗೀತ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ.
ಹಾಡುಗಳು ಮಾತ್ರವಲ್ಲದೆ ವೈರಮುತ್ತು ಅವರು ಚಿತ್ರಗಳ ಸಂಭಾಷಣೆಯ ಭಾಗವಾಗಿ ಕವಿತೆಗಳನ್ನೂ ಬರೆದಿದ್ದಾರೆ. ಡ್ಯೂಯೆಟ್, ಇರುವರ್ (ಪ್ರಕಾಶ್ ರೈ ಅವರು ಮಾಡಿದ ಪಾತ್ರಕ್ಕಾಗಿ) ಮತ್ತು ಆಳವಂದಾನ್ (ಕಮಲ್ ಹಾಸನ್ ಮಾಡಿದ ನಂದು ಪಾತ್ರಕ್ಕಾಗಿ) ಅವರು ಕವಿತೆಗಳನ್ನು ಬರೆದರು. ಅವರು ಅನೇಕ ದೂರದರ್ಶನ ಕಾರ್ಯಕ್ರಮಗಳಿಗೂ ಜಾಹೀರಾತುಗಳಿಗೂ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಚಿತ್ತಿ ಎಂಬ ಮನೋರಂಜಕ ತಮಿಳು ಕಾರ್ಯಕ್ರಮವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]