ಸೋಮೇಶ್ವರ ಶತಕ
ಗೋಚರ
(ಸೋಮೇಶ್ವ ರ ಶತಕ ಇಂದ ಪುನರ್ನಿರ್ದೇಶಿತ)
ಕವಿ: ಪುಲಿಗೆರೆ ಸೋಮನಾಥ
ಕವಿ - ಕಾಲ
[ಬದಲಾಯಿಸಿ]ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮ ನೆಂದು ನಂಬಲಾಗಿದೆ. ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ, ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ, ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮ ನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಶೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ. ಅವು ಮತ್ತೇ«ಭವಿ ಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಸೋಮೇಶ್ವರ ಶತಕ ಕನ್ನಡದಲ್ಲಿ ಬಹಳಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ ಅದು ೧೦೦ ಪದ್ಯಗಳನ್ನು ಹೊಂದಿದೆ. ಉದಾಹರಣೆಗಾಗಿ ಕೆಲವು ಪದ್ಯಗಳನ್ನು ಕೆಳಗ ಕೊಟ್ಟಿದೆ : ಇವನನ್ನು ನಡುಗನ್ನಡ ದ ವೀರಶೈವ ಕವಿಗಳ ಸಾಲಿಗೆ ಸೇರಿಸಿದೆ.ವೀರಕೇಸರಿ ಎಂದು ಈಗ ಕರೆಯಲಾಗಿದೆ
ಪದ್ಯಗಳು
[ಬದಲಾಯಿಸಿ]ಸರ್ವಜ್ಞನಾಗುವ ಬಗೆ :
[ಬದಲಾಯಿಸಿ]- ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ರಂಗಳಂ ಕೇಳುತಂ |
- ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ ||
- ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ||
- ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೧||
ಉನ್ನತ ವಸ್ತು :
[ಬದಲಾಯಿಸಿ]- ಮುಕುರಂಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ
- ಟಕೆ ಗೊಡ್ಡಾಕಳನಾಯ್ವರೇ ಗುಣಯುತರ್ ಪಾಲುಂಡು ಮೇಲುಂಬರೇ
- ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನತ್ಯಕಂ ಡೊಂಬರೇ
- ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೨||
ಬಡವ ಶ್ರೀಮಂತನಾಗ ಬಹುದು :
[ಬದಲಾಯಿಸಿ]- ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧ ಬೀಜಂ ಕೆಲಂ-
- ಸಿಡಿದುಂ ಪೆರ್ಮರನಾಗದೇ ಎಳೆಗರೇನೆತ್ತಾಗದೇ ಲೋಕದೋಳ್
- ಮಿಡಿ ಪಣ್ಣಾಗದೆ ದೈವದೊಲ್ಮೆಯಿರೆ ತಾಂ ಕಾಲಾನುಕಾಲಕ್ಕೆ ಕೇಳ್
- ಬಡವಂ ಬಲ್ಲಿದನಾಗನೇ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೩||
ರಾಜನ ಆಸ್ಥಾನದಲ್ಲಿ ಕವಿ ಇದ್ದರೆ ಚಂದ
[ಬದಲಾಯಿಸಿ]- ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ
- ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ |
- ಹವಿಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ
- ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚನ್ನ ಸೋಮೇಶ್ವರಾ ||೪||
ಸ್ವಪ್ನದಲ್ಲಿ ಕೊಳ ಗಿಳಿ ಇತ್ಯಾದಿ ಕಂಡರೆ ಒಳಿತು
[ಬದಲಾಯಿಸಿ]- ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ
- ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ವಕ್ಕಿಯಂ ಛತ್ರಮಂ |
- ತಳಿರಂ ಪೂರ್ಣ ತಟಾಕಮಂ ಕುಮುದಮಂ ದೇವರ್ಕಳಂ ತುಂಬಿಯಂ
- ತಿಳಿಯಲ್ ಸ್ವಪ್ನದಿ ಲೇಸಲೈ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೫||
ಸಂಪತ್ತಿಗೆ ಕಾರಣಗಳು
[ಬದಲಾಯಿಸಿ]- ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ -
- ಯತಮಂ ನಿಶ್ಚಲ ಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ |
- ಅತಿಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ಬಾಳ್ಕೆಯಂ
- ಶತಕಾರ್ಥ ಕೊಡದಿರ್ಪುದೇ ? ಹರಹರಾ ಶ್ರೀ ಚನ್ನ ಸೋಮೇಶ್ವರಾ ||೬||
ಶಬ್ದಾರ್ಥ
[ಬದಲಾಯಿಸಿ]- ಮುಕುರ =ಕನ್ನಡಿ ; ಶುಕ =ಗಿಳಿ ; ಕಾಕ =ಕಾಗೆ ; ರವ =ಸ್ವರ ; ಉಡುರಾಜ ಚಂದ್ರ (ಉಡು=ನಕ್ಷತ್ರ) ; ಪೆರ್ಚದೆ =ಹೆಚ್ಚಾಗದೆ ; ನ್ಯಗ್ರೋಧ = ಆಲದ ಮರ ; ಬಲ್ಲಿದ =ಬಲಶಾಲಿ ; ತೊತ್ತು = ದಾಸಿ ; ರಜನಿ = ಕತ್ತಲೆ ; ಸರಸಿ =ಸರೋವರ ; ಅಂಭೋಜಾತ =ತಾವರೆ ಹೂ ; ತಳಿರ್ತ = ಚಿಗುರಿದ ; ಮರಾಳ = ಹಂಸ ಪಕ್ಷಿ ; ಬೆಳ್ವಕ್ಕಿ = ಬಿಳಿಯ ಹಕ್ಕಿ ಕೊಕ್ಕರೆ ; ಪೂರ್ಣ ತಟಾಕ = ತುಂಬಿದ ಕೆರೆ ; ಕುಮುದ = ಬಿಳಿಯ ನೈದಿಲೆ, ತಾವರೆ ಹೂ ; ಗಮಕ = ಓದುವ ಸೊಬಗು ; ನೀತಿಯಾಯತ = ವಿಸಾರವಾದ ನೀತಿ ; ನೃಪವರಾಸ್ಥಾನೋಚಿತಾರ್ಥ ರಾಜ್ಯ ಶ್ರೇಷ್ಠರ ಸಭೆಗೆ ಯೋಗ್ಯವಾದ ವಿಷಯಗಳ ಜ್ಷಾನ (ನೃಪ +ವರ+ ಆಸ್ಥಾನ+ಉಚಿತ + ಅರ್ಥ) ; ಸುಭಾಷಿತ =ನಲ್ನುಡಿ ; ಬಾಳ್ಕೆ =ಜೀವನ.
ನೋಡಿ;
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]