ವಿಷಯಕ್ಕೆ ಹೋಗು

ಅಂಜು ಜೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಜು ಜೈನ್
ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂರವರು ೨೦೦೬ ರಲ್ಲಿ ಅಂಜು ಜೈನ್ ಅವರಿಗೆ ೨೦೦೫ ರ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಅಂಜು ಜೈನ್
ಹುಟ್ಟು (1974-08-11) ೧೧ ಆಗಸ್ಟ್ ೧೯೭೪ (ವಯಸ್ಸು ೫೦)
ದೆಹಲಿ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್‍-ಬ್ರೇಕ್
ಪಾತ್ರವಿಕೆಟ್-ಕೀಪರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೪೧)೭ ಫೆಬ್ರವರಿ ೧೯೯೫ v ನ್ಯೂಜಿಲ್ಯಾಂಡ್
ಕೊನೆಯ ಟೆಸ್ಟ್೨೭ ನವೆಂಬರ್‌ ೨೦೦೩ v ನ್ಯೂಜಿಲ್ಯಾಂಡ್
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೩೮)೨೦ ಜುಲೈ ೧೯೯೩ v ವೆಸ್ಟ್ ಇಂಡೀಸ್
ಕೊನೆಯ ಅಂ. ಏಕದಿನ​೧೦ ಎಪ್ರಿಲ್‍ ೨೦೦೫ v ಆಸ್ಟ್ರೇಲಿಯಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೧೯೯೨/೯೩–೧೯೯೩/೯೪ದೆಹಲಿ
1993/94–2004/05ಏರ್ ಇಂಡಿಯಾ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಡಬ್ಲ್ಯೂಟೆಸ್ಟ್ ಡಬ್ಲ್ಯೂಒಡಿಐ ಡಬ್ಲ್ಯೂಎಫ್‍ಸಿ ಡಬ್ಲ್ಯೂಎಲ್‍ಎ
ಪಂದ್ಯಗಳು ೬೫ ೨೫ ೧೨೪
ಗಳಿಸಿದ ರನ್ಗಳು ೪೪೧ ೧,೭೨೯ ೧,೦೨೮ ೩,೭೯೮
ಬ್ಯಾಟಿಂಗ್ ಸರಾಸರಿ ೩೬.೭೫ ೨೯.೮೧ ೩೩.೧೬ ೩೫.೧೬
೧೦೦/೫೦ ೧/೩ ೦/೧೨ ೨/೫ ೦/೨೯
ಉನ್ನತ ಸ್ಕೋರ್ ೧೧೦ ೯೦ ೧೪೦* ೯೦
ಹಿಡಿತಗಳು/ ಸ್ಟಂಪಿಂಗ್‌ ೧೫/೮ ೩೦/೫೧ ೨೪/೧೭ ೪೯/೬೯
ಮೂಲ: CricketArchive, ೧೬ ಆಗಸ್ಟ್‌ ೨೦೨೨

ಅಂಜು ಜೈನ್ (ಜನನ ೧೧ ಆಗಸ್ಟ್ ೧೯೭೪) ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ತರಬೇತುದಾರರಾಗಿದ್ದಾರೆ. ಅವರು ವಿಕೆಟ್ ಕೀಪರ್ ಮತ್ತು ಬಲಗೈ ಬ್ಯಾಟ್ಸ್ಮನ್ ಆಗಿ ಆಡಿದರು. ೧೯೯೩ ಮತ್ತು ೨೦೦೫ ರ ನಡುವೆ ಅವರು ಭಾರತಕ್ಕಾಗಿ ಎಂಟು ಟೆಸ್ಟ್ ಪಂದ್ಯಗಳು ಮತ್ತು ೬೫ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಅವರು ದೆಹಲಿ ಮತ್ತು ಏರ್ ಇಂಡಿಯಾಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದಾರೆ.[][] ಅವರು ಈ ಹಿಂದೆ ಭಾರತ ಮತ್ತು ಬಾಂಗ್ಲಾದೇಶದ ತರಬೇತುದಾರರಾಗಿದ್ದರು ಮತ್ತು ಪ್ರಸ್ತುತ ಭಾರತೀಯ ದೇಶೀಯ ಸರ್ಕ್ಯೂಟ್‍ನಲ್ಲಿ ತರಬೇತುದಾರರಾಗಿದ್ದಾರೆ.[]

ವೈಯಕ್ತಿಕ ಮಾಹಿತಿ

[ಬದಲಾಯಿಸಿ]

ಅಂಜು ಜೈನ್ ೧೧ ಆಗಸ್ಟ್ ೧೯೭೪ ರಂದು ದೆಹಲಿಯಲ್ಲಿ ಜನಿಸಿದರು. ಇವರು ೧೯೮೬ ರಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು ೧೯೯೫ ಮತ್ತು ೨೦೦೩ ರ ನಡುವೆ ೮ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಮತ್ತು ೬೫ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಅವರು ವಿಕೆಟ್ ಕೀಪರ್ ಆಗಿದ್ದರು. ಅವರು ೮ ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸಿದ್ದರು. ೨೦೦೦ ದ ಕ್ರಿಕ್ಇನ್ಫೊ ಮಹಿಳಾ ಕ್ರಿಕೆಟ್ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೊದಲು ಸೆಮಿ-ಫೈನಲ್‍ಗೆ ಭಾರತವನ್ನು ಮುನ್ನಡೆಸಿದರು.[]

ವೃತ್ತಿಜೀವನ

[ಬದಲಾಯಿಸಿ]

ಅವರು ೨೦೦೦ ದ ವಿಶ್ವಕಪ್‍ನಲ್ಲಿ ಭಾರತವನ್ನು ಮುನ್ನಡೆಸಿದರು, ಅಲ್ಲಿ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲುವ ಮೊದಲು ಸೆಮಿಫೈನಲ್ ತಲುಪಿತು.[]

ಡಬ್ಲ್ಯುಒಡಿಐಗಳಲ್ಲಿ ಅತಿ ಹೆಚ್ಚು ಅಂದರೆ ೫೧ ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಅವರು ಜಂಟಿಯಾಗಿ ಹೊಂದಿದ್ದಾರೆ.[] ಜೈನ್ ನಾಯಕರಾಗಿ, ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ೮ ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದು ದಾಖಲೆಯಾಗಿದೆ.[]

ಅಂಜು ೨೦೦೫ ರಲ್ಲಿ ಅಂದಿನ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.[][]

ತರಬೇತಿ ಜೀವನ

[ಬದಲಾಯಿಸಿ]

ಆಂಧ್ರಪ್ರದೇಶದ ಯುವಕರ ಮತ್ತು ಮಹಿಳಾ ಕ್ರಿಕೆಟ್ ಆಟಗಾರರ ಅಭಿವೃದ್ಧಿಗೆ ಅವರು ತರಬೇತುದಾರರಾಗಿದ್ದಾರೆ. ಅವರು ಒಡಿಶಾ, ತ್ರಿಪುರಾ ಮತ್ತು ಅಸ್ಸಾಂ ಮತ್ತು ಭಾರತೀಯ ತಂಡಕ್ಕೆ ತರಬೇತುದಾರರಾಗಿದ್ದಾರೆ.[] ಪ್ರಸ್ತುತ, ಅವರು ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.[][] ಟಿ-೨೦ ಸಮಯದಲ್ಲಿ ದೇವಿಕಾ ಪಾಲ್ಶಿಕರ್ (ಸಹಾಯಕ ತರಬೇತುದಾರ) ಮತ್ತು ಅನುಜಾ ಡಾಲ್ವಿ (ಭೌತಚಿಕಿತ್ಸಕ) ಎಂಬ ಇಬ್ಬರು ಭಾರತೀಯರು ಅಂಜು ಅವರಿಗೆ ಸಹಾಯ ಮಾಡಿದರು. ಕಳೆದ ಋತುವಿನಲ್ಲಿ ವಿದರ್ಭ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿದ್ದರು ಮತ್ತು ೨೦೧೨ ರ ಮಹಿಳಾ ವಿಶ್ವ ಟಿ-೨೦ ಮತ್ತು ೨೦೧೩ ರ ವಿಶ್ವಕಪ್‍ನಲ್ಲಿ ಸಹ ಭಾರತ ತಂಡಕ್ಕೆ ತರಬೇತಿ ನೀಡಿದ್ದಾರೆ. ಇವರು ಬಾಂಗ್ಲಾದೇಶದ ಉದ್ಯೋಗವನ್ನು ನೆರವೇರಿಸುವ ಭಾರತದ ಎರಡನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Player Profile: Anju Jain". ESPNcricinfo. Retrieved 16 August 2022.
  2. "Player Profile: Anju Jain". CricketArchive. Retrieved 16 August 2022.
  3. ೩.೦ ೩.೧ ೩.೨ ೩.೩ ""I was able to change the perception of other teams about Bangladesh," says Anju Jain/The Pioneers". Female Cricket. Retrieved 16 August 2022.
  4. www.espncricinfo.com/india/content/player/53915.htm
  5. "ESPNcricinfo Women's World Cup 2000/01". ESPNcricinfo. Retrieved 16 August 2022.
  6. "Records/Women's One Day Internationals/Wicketkeeping Records/Most stumpings in career". ESPNcricinfo. Retrieved 16 August 2022.
  7. "Records. Women's One-Day Internationals. Individual records (captains, players, umpires). Captains who have kept wicket and opened the batting". ESPNcricinfo. Retrieved 2017-07-26.
  8. https://timesofindia.indiatimes.com
  9. "Anju Jain to take over as Bangladesh women coach". ESPNcricinfo. Retrieved 16 August 2022.