ವಿಷಯಕ್ಕೆ ಹೋಗು

ಆಕಾಶ ಬಾಣ (ರಾಕೆಟ್ )

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂತಾರಾಷ್ಟ್ರೀಯ ಕ್ಷಿಪಣಿ ಇಂದ ಪುನರ್ನಿರ್ದೇಶಿತ)
ಬೈಕೊನುರ್ ತಾಣ ೧/೫ ನಲ್ಲಿರುವ ಸೊಯುಜ್-ಯು.
ಅಪೊಲೊ 15 ಸ್ಯಾಟರ್ನ್ ವಿ ರಾಕೆಟ್ ಉಡಾವಣೆ:ಟಿ-೩೦ ರಿಂದ ಟಿ+೪೦ರ ವರೆಗಿನ ಮಾಪನ.

ರಾಕೆಟ್ ಅಥವಾ ಆಕಾಶ ಬಾಣ ಎಂದರೆ ರಾಕೆಟ್ ಎಂಜಿನ್‍ನಿಂದ ನೋದನ ಬಲವನ್ನು ಪಡೆಯುವ ಕ್ಷಿಪಣಿ, ಅಂತರಿಕ್ಷ ವಾಹನ ಅಥವಾ ವಿಮಾನ ಅಥವಾ ಇತರ ವಾಹನ. ಎಲ್ಲ ಆಕಾಶ ಬಾಣಗಳಲ್ಲಿ, ನಿಷ್ಕಾಸವು ಸಂಪೂರ್ಣವಾಗಿ ಬಳಕೆಗೆ ಮೊದಲು ರಾಕೆಟ್‍ನಲ್ಲಿ ಹೊತ್ತೊಯ್ಯಲಾದ ನೋದಕಗಳಿಂದ ರೂಪಗೊಂಡಿರುತ್ತದೆ.[] ರಾಕೆಟ್ ಎಂಜಿನ್‍ಗಳು ಕ್ರಿಯೆ ಮತ್ತು ಪ್ರತಿಕ್ರಿಯೆ ಮೂಲಕ ಕಾರ್ಯನಿರ್ವಹಿಸುತ್ತವೆ. ಕೇವಲ ತಮ್ಮ ನಿಷ್ಕಾಸವನ್ನು ಅತಿ ವೇಗವಾಗಿ ಹಿಂದಕ್ಕೆ ಎಸೆಯುವ ಮೂಲಕ ರಾಕೆಟ್ ಎಂಜಿನ್‍ಗಳು ರಾಕೆಟ್‍ಗಳನ್ನು ಮುಂದಕ್ಕೆ ನೂಕುತ್ತವೆ.

ಸೇನಾ ಮತ್ತು ಮನೋರಂಜನಾ ಬಳಕೆಗಳಲ್ಲಿ ರಾಕೆಟ್‍ಗಳು ಕನಿಷ್ಠ ಪಕ್ಷ ೧೩ ನೆಯ ಶತಮಾನದಿಂದಲೂ ಇದ್ದವೆಂದು ದಾಖಲೆಗಳಿವೆ.[] ೨೦ ನೆಯ ಶತಮಾನದವರೆಗೆ ಗಮನಾರ್ಹ ವೈಜ್ಞಾನಿಕ, ಅಂತರಗ್ರಹ ಮತ್ತು ಕೈಗಾರಿಕಾ ಬಳಕೆ ಆಗಲಿಲ್ಲ. ೨೦ನೇ ಶತಮಾನದಲ್ಲಿ ರಾಕೆಟ್ ವಿಜ್ಞಾನವು ಅಂತರಿಕ್ಷ ಯುಗವನ್ನು ಸಾಧ್ಯವಾಗಿಸಿದ ತಂತ್ರಜ್ಞಾನವಾಯಿತು, ಚಂದ್ರನ ಮೇಲೆ ಕಾಲಿಡುವುದನ್ನು ಒಳಗೊಂಡಂತೆ.

ಸುಡುಮದ್ದುಗಳು, ಶಸ್ತ್ರಾಸ್ತ್ರಗಳು, ನಿಷ್ಕಾಸನ ಆಸನಗಳು, ಕೃತಕ ಉಪಗ್ರಹಗಳ ಉಡಾವಣಾ ವಾಹನಗಳು, ಮಾನವನ ಅಂತರಿಕ್ಷಯಾನ ಮತ್ತು ಇತರ ಗ್ರಹಗಳ ಅನ್ವೇಷಣೆಗೆ ರಾಕೆಟ್‍ಗಳನ್ನು ಬಳಸಲಾಗುತ್ತದೆ. ಕಡಿಮೆ ವೇಗದ ಬಳಕೆಗೆ ಇವುಗಳು ತುಲನಾತ್ಮಕವಾಗಿ ಅಸಮರ್ಥವಾದರೂ, ಇವು ಬಹಳ ಹಗುರ ಮತ್ತು ಶಕ್ತಿಯುತವಾಗಿದ್ದು ಅತ್ಯಧಿಕ ವೇಗೋತ್ಕರ್ಷವನ್ನು ಸೃಷ್ಟಿಸಲು ಮತ್ತು ಉಚಿತ ಪ್ರಮಾಣದ ದಕ್ಷತೆಯೊಂದಿಗೆ ಅತ್ಯಂತ ಹೆಚ್ಚಿನ ವೇಗಗಳನ್ನು ಪಡೆಯಲು ಸಮರ್ಥವಾಗಿವೆ.

ರಾಸಾಯನಿಕ ರಾಕೆಟ್‌ಗಳು ಅತ್ಯಂತ ಸಾಮಾನ್ಯವಾದ ರಾಕೆಟ್‍ನ ಬಗೆಯಾಗಿವೆ. ಇವು ಸಾಮಾನ್ಯವಾಗಿ ರಾಕೆಟ್ ನೋದಕದ ದಹನದಿಂದ ತಮ್ಮ ನಿಷ್ಕಾಸವನ್ನು ಸೃಷ್ಟಿಸುತ್ತವೆ. ರಾಸಾಯನಿಕ ರಾಕೆಟ್‍ಗಳು ಬೃಹತ್ ಪ್ರಮಾಣದ ಶಕ್ತಿಯನ್ನು ಸುಲಭವಾಗಿ ಬಿಡುಗಡೆಯಾಗುವ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತವೆ, ಮತ್ತು ಬಹಳ ಅಪಾಯಕಾರಿಯಾಗಬಹುದು. ಆದರೆ, ಎಚ್ಚರಿಕೆಯುಳ್ಳ ವಿನ್ಯಾಸ, ಪರೀಕ್ಷೆ, ನಿರ್ಮಾಣ ಮತ್ತು ಬಳಕೆಯು ಅಪಾಯಗಳನ್ನು ಕನಿಷ್ಠಗೊಳಿಸುತ್ತದೆ.

ಆಕಾಶ ಬಾಣಗಳ ಇತಿಹಾಸ

[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ

[ಬದಲಾಯಿಸಿ]

ಭಾರತೀಯ ಪುರಾಣೇತಿಹಾಸಗಳಲ್ಲಿ ರಾಕೆಟ್ ಎಂಬ ಶಬ್ದ ನೇರವಾಗಿ ಎಲ್ಲೂ ಗೋಚರಿಸುವುದಿಲ್ಲವಾದರೂ ಮಹಾಕಾವ್ಯಗಳೆನಿಸಿರುವ ರಾಮಾಯಣ, ಮಹಾಭಾರತಗಳಲ್ಲಿ ಇದರ ಪೂರ್ವಜ ಎಂದು ಕರೆಯಬಹುದಾದ ಅಸ್ತ್ರಗಳ ಪ್ರಸ್ತಾಪ ಇದೆ. ಅಗ್ನ್ಯಸ್ತ್ರ, ಬ್ರಹ್ಮಾಸ್ತ್ರ, ವಾಯವ್ಯಾಸ್ತ್ರ, ನಾಗಾಸ್ತ್ರ - ಮುಂತಾದ ಅಸ್ತ್ರಗಳು ಒಂದು ವಿಧದಲ್ಲಿ ರಾಕೆಟ್ಟಿನ ಕಾರ್ಯನಿರ್ವಹಣೆಯನ್ನು ಹೋಲುತ್ತಿದ್ದ ಸಮರಸಾಧನಗಳೇ. ಈ ಅಸ್ತ್ರಗಳಿಗೆ ನೂಕುಬಲವನ್ನು ಒದಗಿಸುತ್ತಿದ್ದುದು ಎಂದರೆ ಬಿಲ್ಲು ಅಥವಾ ಧನುಸ್ಸು ಎಂಬ ಸಾಧನ. ಈ ಅಸ್ತ್ರಗಳ ಉಪಜ್ಞೆ, ಪ್ರಯೋಗವಿಧಾನ ಹಾಗೂ ಪರಿಣಾಮಕಾರಿ ಪ್ರಯೋಜನಗಳನ್ನು ಅವಲೋಕಿಸಿದಾಗ ಪುರಾಣಕಾಲೀನ ಭಾರತೀಯರಿಗೆ ರಾಕೆಟ್ಟಿನ ಕಲ್ಪನೆ ಇದ್ದೀತೆಂದು ಹೇಳಬಹುದು. ಗುರಿಯತ್ತ ಪ್ರಕ್ಷೇಪಿಸಿದಾಗ ಅಸ್ತ್ರಗಳು ಮುಂದೆ ಸಾಗಿ ಕೆಲಸ ನಿರ್ವಹಿಸುತ್ತಿದ್ದುವು. ಹೀಗಾಗಿ ಇಂಥ ಅಸ್ತ್ರಗಳ ವಿನಾಶಕಾರಿ ಸಾಮರ್ಥ್ಯವನ್ನು ಅರಿತಿದ್ದ ಪ್ರಾಚೀನ ಋಷಿಪುಂಗವರು ಅಗಿನ ಕಾಲಕ್ಕೇ ಅವುಗಳ ಯಾಂತ್ರಿಕಾಂಶ ಮತು ತಾಂತ್ರಿಕಾಂಶಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು ಎಂಬ ವಿಚಾರ ಸ್ಪಷ್ಪಡಿಸುತ್ತದೆ.

ಆಕಾಶಬಾಣದ ರೂಪದಲ್ಲಿದ್ದ ಅಸ್ತ್ರವನ್ನು ಮೊತ್ತಮೊದಲು ಶತ್ರುವಿನ ಮೇಲೆ ಯಾವಾಗ ಪ್ರಯೋಗಿಸಲಾಗಿತೆಂಬ ವಿಷಯ ಕಾಲಗರ್ಭದಲ್ಲಿ ಹುದುಗಿಹೋಗಿದೆ. ಬಹುಶಃ ಮನುಷ್ಯ ಬೆಂಕಿ ಚೆಂಡುಗಳ ಉಪಯೋಗಗಳನ್ನು ಕಲಿತಕೂಡಲೆ ಅವನ್ನು ಶತ್ರುವಿನ ಮೇಲೆ ಎಸೆಯುವುದನ್ನು ಕಲಿತಿರಬೇಕು. ಪ್ರಾಯಶಃ ಮೊದಲು ಮನುಷ್ಯನ ತಿಳಿವಳಿಕೆಗೆ ಬಂದು ಯಾವ ನಾಜೂಕೂ ಇಲ್ಲದ ಅಕಾಶಬಾಣ ಇದು.

ಕ್ರಿ.ಶ. 4 ನೆಯ ಶತಮಾನದಲ್ಲಿ ಗ್ರೀಸಿನ ದೊರೆ ಸಿಕಂದರ್ (ಅಲೆಕ್ಸಾಂಡರ್ ಮಹಾಶಯ) ಭಾರತದ ವಾಯುವ್ಯ ಸರಹದ್ದಿನ ಮೂಲಕ ಬಂದು ಪಂಜಾಬಿನ ಮೇಲೆ ಧಾಳಿ ನಡೆಸಿದ ಕಾಲಕ್ಕೆ ಭಾರತೀಯ ಯೋಧರು ಶತ್ರುಸೈನ್ಯ ಸಮೀಪಿಸುತ್ತಿದ್ದಂತೆಯೇ ಸಿಡಿಮದ್ದುಗಳ ಮಳೆಗರೆದರೆನ್ನಲಾಗಿದೆ.

ಮುಂಚಿನ ಚೀನಿ ರಾಕೆಟ್.

ಪ್ರಕ್ಷೇಪಕಗಳನ್ನು ಮುನ್ನೂಕಲು ಕಪ್ಪು ಪುಡಿಯ (ಕೋವಿಮದ್ದು) ಲಭ್ಯತೆಯು ಮೊದಲ ಘನ ರಾಕೆಟ್‍ನ ಅಭಿವೃದ್ಧಿಗೆ ಪೂರ್ವವರ್ತಿಯಾಗಿತ್ತು. ಒಂಬತ್ತನೆಯ ಶತಮಾನದ ಚೀನಿ ತಾವೊವಾದಿ ರಸವಾದಿಗಳು ಸಿದ್ಧರಸವನ್ನು ಹುಡುಕುತ್ತಿದ್ದಾಗ ಕಪ್ಪುಪುಡಿಯನ್ನು ಶೋಧಿಸಿದರು; ಈ ಆಕಸ್ಮಿಕ ಶೋಧನೆಯು ಶಸ್ತ್ರಾಸ್ತ್ರಗಳ ಪ್ರಯೋಗಗಳಿಗೆ ಕಾರಣವಾಯಿತು. ಉದಾಹರಣೆಗೆ ಬಾಂಬ್‌ಗಳು, ಫಿರಂಗಿಗಳು, ಬೆಂಕಿ ಹೊತ್ತಿಸುವ ಬೆಂಕಿ ಬಾಣಗಳು ಮತ್ತು ರಾಕೆಟ್‍ನಿಂದ ಮುಂದೂಡಲ್ಪಟ್ಟ ಬೆಂಕಿ ಬಾಣಗಳು.[nb ೧][nb ೨] ಕೋವಿಮದ್ದಿನ ಶೋಧನೆಯು ಸಂಭಾವ್ಯವಾಗಿ ಶತಮಾನಗಳ ರಸವಿದ್ಯಾ ಪ್ರಯೋಗ ಪರೀಕ್ಷೆಗಳ ಉತ್ಪನ್ನವಾಗಿತ್ತು.[]

ನಿಖರವಾಗಿ ರಾಕೆಟ್‍ಗಳ ಮೊದಲ ಹಾರಾಟಗಳು ಯಾವಾಗ ನಡೆದವು ಎಂಬುದು ವಿವಾದಾಸ್ಪದವಾಗಿದೆ. ಸುಡುಮದ್ದುಗಳ ಅತ್ಯಂತ ಮುಂಚಿನ ರುಜುವಾತುಪಡಿಸಬಹುದಾದ ಪ್ರಕಟಣವೆಂದರೆ ೨ ವೊಪಿಸ್ಕಸ್, ಕಾರಸ್, ನುಮೆರಿನಸ್ ಎಟ್ ಕಾರಿನಸ್ ಅ. xix.ನಲ್ಲಿನ ಒಂದು ಹೇಳಿಕೆ. ಇದರ ಪ್ರಕಾರ ಚಕ್ರವರ್ತಿ ಕಾರಿನುಸ್ (೨೮೪-೨೮೬) ನನ್ನು, ನಂತರ ಡೈಯೊಕ್ಲೆಶಿಯನ್‍ನನ್ನು (೨೮೪-೨೮೬) ಮನರಂಜಿಸಲು ಸುಡುಮದ್ದುಗಳನ್ನು ಬಳಸಲಾಯಿತು. ಒಂದು ಸಾಮಾನ್ಯ ವಾದದ ಪ್ರಕಾರ, ಸಮರದಲ್ಲಿ ರಾಕೆಟ್‍ನ ಮೊದಲ ದಾಖಲಿತ ಬಳಕೆಯೆಂದರೆ ಚೀನಿಯರಿಂದ ೧೨೩೨ ರಲ್ಲಿ ಕೈ ಫೆಂಗ್ ಫುನಲ್ಲಿ ಮಂಗೋಲ್ ಪಡೆಗಳ ವಿರುದ್ಧ ಆದದ್ದು. ಇದು ಒಂದು ಹಳೆಯ ಮ್ಯಾಂಡರಿನ್ ನಾಗರಿಕ ಸೇವಾ ಪರೀಕ್ಷಾ ಪ್ರಶ್ನೆಯನ್ನು ಆಧರಿಸಿದೆ, ಆ ಪ್ರಶ್ನೆಯು, "ಕೈ ಫೆಂಗ್ ಫುನಲ್ಲಿ ನಡೆದ ಮಂಗೋಲ್‍ರ (೧೨೩೨) ವಿರುದ್ಧದ ರಕ್ಷಣೆಯು ಫಿರಂಗಿಯ ಮೊದಲ ದಾಖಲಿತ ಬಳಕೆಯೇ?"[] ಎಂಬುದಾಗಿತ್ತು. ಇನ್ನೊಂದು ಇದೇ ರೀತಿಯ ಪ್ರಶ್ನೆಯು ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದು, "ಚೌ ರಾಜವಂಶದಲ್ಲಿ (ಕ್ರಿ. ಪೂ. ೧೧೨೨-೨೫೫) ರಾಕೆಟ್‍ಗಳ ಬಳಕೆಯಿಂದ ಸುಡುಮದ್ದುಗಳು ಆರಂಭವಾದವು-- ಯಾವ ಪುಸ್ತಕದಲ್ಲಿ (ಈಗ ಫಿರಂಗಿಗೆ ಬಳಸಲಾಗುವ) ಪಾ ಆವೊ ಎಂಬ ಶಬ್ದವನ್ನು ಮೊಟ್ಟಮೊದಲು ಕಾಣುತ್ತೇವೆ? ಎಂಬ ಪ್ರಶ್ನೆ[] ಕೇಳಲ್ಪಟ್ಟಿತ್ತು. ಚೀನಾದಲ್ಲಿ ರಾಕೆಟ್‍ಗಳ ಬಗ್ಗೆ ಮೊದಲ ವಿಶ್ವಾಸಾರ್ಹ ಪಾಂಡಿತ್ಯಪೂರ್ಣ ಉಲ್ಲೇಖ ಕೊ ಚೆಹ ಚಿಂಗ್ ಯುವಾನ್ (ದ ಮಿರರ್ ಆಫ್ ರಿಸರ್ಚ್) ನಲ್ಲಿ ಬರುತ್ತದೆ. ಇದರ ಪ್ರಕಾರ ಕ್ರಿ.ಶ. ೯೯೮ ರಲ್ಲಿ ತಾಂಗ್ ಫು ಎಂಬಾತ ಕಬ್ಬಿಣದ ಶಿರ ಇರುವ ಹೊಸ ಬಗೆಯ ರಾಕೆಟ್‍ನ್ನು ಆವಿಷ್ಕರಿಸಿದನು.[] ಅಪ್ಪಳಿಸಿ ಅವು ಸ್ಫೋಟಗೊಂಡಾಗ ೨೫ ಕಿ.ಮೀ ದೂರದವರೆಗೆ ಕೇಳಬಹುದಾಗಿದ್ದ ಬೆಂಕಿಬಾಣಗಳು ಮತ್ತು 'ಕಬ್ಬಿಣದ ಮಡಕೆಗಳ' ವರದಿಗಳಿದ್ದವು. ಇವು ೬೦೦ ಮೀಟರ್ ತ್ರಿಜ್ಯದ ವ್ಯಾಪ್ತಿಯಲ್ಲಿ ವಿನಾಶಕಾರಿ ಪರಿಣಾಮವನ್ನು ತೋರುತ್ತಿದ್ದವು, ಷ್ರ್ಯಾಪ್‍ನೆಲ್‍‍ನ ಕಾರಣದಿಂದ ಎಂದು ತೋರುತ್ತದೆ.[] ದಾಳಿಕೋರರನ್ನು ಉಡಾಯಿಸಲು ಕಬ್ಬಿಣದ ಮಡಕೆಗಳನ್ನು ಕೆಳಗಿಳಿಸುವುದು ಮುತ್ತಿಗೆ ಹಾಕಲ್ಪಟ್ಟ ಸೇನೆಗೆ ಒಂದು ದಾರಿಯಾಗಿರಬಹುದು. ಬೆಂಕಿಬಾಣಗಳು ಸ್ಫೋಟಕಗಳು ಲಗತ್ತಿಸಿದ ಬಾಣಗಳಾಗಿದ್ದವು ಅಥವಾ ಕೋವಿಮದ್ದಿನಿಂದ ಚಿಮ್ಮಿಸಲ್ಪಟ್ಟ ಬಾಣಗಳಾಗಿದ್ದವು. ಉದಾಹರಣೆಗೆ ಕೊರಿಯಾದ ಹ್ವಾಚಾ.[nb ೩]

ಕಡಿಮೆ ವಿವಾದಾಸ್ಪದವಾಗಿ, ಅಂತರ್ದಹನ ರಾಕೆಟ್ ನೋದನವನ್ನು ಬಳಸಿದ ಒಂದು ಅತ್ಯಂತ ಮುಂಚಿನ ಸಾಧನವೆಂದರೆ 'ಗ್ರೌಂಡ್ -ರಾಟ್ ' ಎನ್ನುವ ಒಂದು ಬಗೆಯ ಸುಡುಮದ್ದು. ೧೨೬೪ ರಲ್ಲಿ ಇದನ್ನು ಬಳಸಿದ್ದರ ಬಗ್ಗೆ ದಾಖಲೆಯಿದೆ. ಇದು ಅವರ ಪುತ್ರ ಚಕ್ರವರ್ತಿ ಲಿಜಾಂಗ್ ತಮ್ಮ ಗೌರವಾರ್ಥ ನೀಡಿದ್ದ ಔತಣ ಕೂಟವೊಂದರಲ್ಲಿ ಸಾಮ್ರಾಜ್ಞಿ-ಮಾತೆ ಕುಂಗ್ ಶೆಂಗ್ ಅವರನ್ನು ಹೆದರಿಸಿತ್ತು.[೧೧]

ನಂತರ, ರಾಕೆಟ್‍ಗಳ ಬಳಕೆಯನ್ನು ಉಲ್ಲೇಖಿಸಿದ ಅತ್ಯಂತ ಮುಂಚಿನ ಪಠ್ಯಗಳಲ್ಲಿ ಒಂದೆಂದರೆ ಹುಲೊಂಗ್ ಜಿಂಗ್. ಇದನ್ನು ಚೀನಾದ ಫಿರಂಗಿ ಅಧಿಕಾರಿ ಜಿಯಾವೊ ಯು ೧೪ ನೆಯ ಶತಮಾನದ ಮಧ್ಯ ಭಾಗದಲ್ಲಿ ರಚಿಸಿದ್ದಾನೆ. ಈ ಪಠ್ಯವು ಮೊದಲ ಪರಿಚಿತ ಬಹುಹಂತದ ರಾಕೆಟ್‌‍ನ ಬಳಕೆಯನ್ನೂ ಉಲ್ಲೇಖಿಸಿದೆ. 'ನೀರಿನಿಂದ ಹೊರಬರುವ ಒಂದು ಬೆಂಕಿಯುಗುಳುವ ಡ್ರಾಗನ್ ' (ಹುಯೊ ಲಾಂಗ್ ಚು ಶುಇ) ಯನ್ನೂ ಉಲ್ಲೇಖಿಸಲಾಗಿದೆ. ಇದನ್ನು ಹೆಚ್ಚಾಗಿ ಚೀನಾದ ನೌಕಾಪಡೆ ಬಳಸುತ್ತಿತ್ತು.[೧೨]

ರಾಕೆಟ್ ತಂತ್ರಜ್ಞಾನದ ಪ್ರಸರಣ

[ಬದಲಾಯಿಸಿ]
ಚೆಂಗೇಸ್ ಖಾನ್ ನ ಮಂಗೊಲಿಯನ್ ರು ಚೀನಾ ತಂತ್ರಜ್ಞಾನವನ್ನು ಎಲ್ಲೆಡೆ ಪ್ರಸರಿಸಿದರು.

ರಾಕೆಟ್ ತಂತ್ರಜ್ಞಾನವನ್ನು ಮಂಗೊಲಿಯನ್ನರಾದ ಚೆಂಗೇಜ್ ಖಾನ್ ಮತ್ತು ಒಗಡೆಯ ಖಾನ್ ರಶಿಯಾ, ಉತ್ತರ ಮತ್ತು ಮಧ್ಯ ಯುರೋಪ್‍ನ ಭಾಗಗಳನ್ನು ವಶಪಡಿಸಿಕೊಂಡಾಗ ಬಳಸಿದರು. ಇವರಿಂದ ಅದು ಯುರೋಪಿಯನ್‍ರಿಗೆ ತಿಳಿಯಿತು. ಮಂಗೊಲಿಯನ್‍ರು ಚೀನಾದ ಉತ್ತರ ಭಾಗವನ್ನು ವಶಪಡಿಸಿಕೊಂಡ ನಂತರ ಮತ್ತು ಚೀನಾದ ರಾಕೆಟ್ ವಿಜ್ಞಾನ ತಜ್ಞರನ್ನು ಮೊಂಗೋಲ್ ಸೈನ್ಯಕ್ಕೆ ಸಂಬಳದ ಮೇಲೆ ಸೇರಿಸಿಕೊಂಡ ಮೇಲೆ ಈ ತಂತ್ರಜ್ಞಾನವನ್ನು ಪಡೆದುಕೊಂಡಿದ್ದರು. ಸುಮಾರು 1241ರಲ್ಲಿ ನಡೆದ ಮೋಹಿ ಯುದ್ಧದಲ್ಲಿ ರಾಕೆಟ್‍ನಂತಹ ಆಯುಧಗಳನ್ನು ಮಂಗೊಲಿಯನ್‍ರು ಮಗ್ಯೆಯಾರ್ಸ್‌ ವಿರುದ್ಧ ಬಳಸಿದ ವರದಿಗಳಿವೆ.[] ನಂತರ ರಾಕೆಟ್ ತಂತ್ರಜ್ಞಾನವು ೧೫ ನೆಯ ಶತಮಾನದ ಹೊತ್ತಿಗೆ ಕೊರಿಯಾಕ್ಕೂ ಪಸರಿಸಿತು. ಅವರು ಚಕ್ರಗಳುಳ್ಳ ಹ್ವಾಚಾಗಳಿಂದ ಸಿಂಗಿಜಿಯೊನ್ ರಾಕೆಟ್‍ಗಳನ್ನು ಉಡಾವಣೆ ಮಾಡುತ್ತಿದ್ದರು. ಜೊತೆಗೆ, ಯುರೋಪ್‍ನಲ್ಲಿ ರಾಕೆಟ್‍ನ ಪ್ರಸಾರ ಒಟ್ಟೊಮನ್‍ರ ಪ್ರಭಾವದಿಂದಾಯಿತು. ಅವರು ೧೪೫೩ ರಲ್ಲಿ ಕಾನ್‍ಸ್ಟಂಟಿನೋಪಲ್‍ನ್ನು ವಶಪಡಿಸಿಕೊಳ್ಳುವಾಗ ಇವನ್ನು ಬಳಸಿದರು; ಒಟ್ಟೊಮನ್‍ರು ಸ್ವತಃ ಹಿಂದಿನ ಕೆಲವು ಶತಮಾನಗಳ ಮಂಗೊಲಿಯನ್‍ರ ದಾಳಿಗಳಿಂದ ಪ್ರಭಾವಿತರಾಗಿದ್ದಿರುವ ಸಾಧ್ಯತೆಯಿದೆ. ನಾಸಾ ಅಂತರಜಾಲದಲ್ಲಿ ಪ್ರಕಟಿಸಿದ ರಾಕೆಟ್‍ಗಳ ಇತಿಹಾಸದ ಪ್ರಕಾರ "ರಾಕೆಟ್‍ಗಳು ಕ್ರಿ.ಶ. ೧೨೫೮ ರಲ್ಲಿ ಅರಬ್ ಸಾಹಿತ್ಯದಲ್ಲಿ ಕಾಣಿಸುತ್ತವೆ. ಅದರಲ್ಲಿ ಮಂಗೋಲಿಯನ್ ದಾಳಿಕೋರರು ಬಾಗ್ದಾದ್‍ನ್ನು ಫೆಬ್ರವರಿ ೧೫ ರಂದು ವಶಪಡಿಸಿಕೊಂಡಾಗ ರಾಕೆಟ್‍ಗಳನ್ನು ಬಳಸಿದರು ಎಂದಿದೆ".[]

೧೨೭೦ ಮತ್ತು ೧೨೮೦ ರ ನಡುವೆ ಹಸನ್ ಅಲ್ ರಮ್ಹಾ ಎಂಬಾತ ಅಲ್ -ಫ್ರುಸಿಯಾ ವಾ ಅಲ್ -ಮನ್ಸಿಬ್ ಅಲ್ -ಹರ್ಬಿಯಾ (ದ ಬುಕ್ ಆಫ್ ಮಿಲಿಟರಿ ಹಾರ್ಸ್‌ಮನ್ಶಿಪ್ ಅಂಡ್ ಇಂಜಿನಿಯಸ್ ವಾರ್ ಡಿವೈಸಿಸ್ ) ಎಂಬ ಗ್ರಂಥವನ್ನು ರಚಿಸಿದ. ಇದರಲ್ಲಿ ೧೦೭ ಪ್ರಕಾರದ ಕೋವಿಮದ್ದಿನ ತಯಾರಿಕಾ ವಿಧಾನಗಳ ಬಗ್ಗೆ ವಿವರ ಇದೆ. ಇವುಗಳ ಪೈಕಿ ೨೨ ರಾಕೆಟ್‍ಗಳ ಬಗ್ಗೆ ಇದ್ದವು.[೧೩] ಅಹ್ಮದ್ ವೈ ಹಸನ್ ಪ್ರಕಾರ ಅಲ್ -ರಮ್ಹಾರ ತಯಾರಿಕಾ ವಿಧಾನಗಳು ಆ ವೇಳೆ ಚೀನಿಯರು ಉಪಯೋಗಿಸುತ್ತಿದ್ದ ರಾಕೆಟ್‍ಗಳಿಗಿಂತ ಹೆಚ್ಚು ಸ್ಫೋಟಕವಾಗಿದ್ದವು ಎಂದಿದ್ದಾರೆ.[೧೪]

ರಾಕೆಟ್ ಎನ್ನುವ ಹೆಸರು ಇಟಾಲಿಯನ್‌ನ ರೊಕ್ಕೆಟಾ ದಿಂದ ಬರುತ್ತದೆ. ಇದರರ್ಥ ಮುರಾತೋರಿ ಎಂಬ ಇಟ್ಯಾಲಿಯನ್ ಸೃಜಕ ೧೩೭೯ರಲ್ಲಿ ಸೃಷ್ಟಿಸಿದ ಸಣ್ಣ ಪಟಾಕಿ.[೧೫]

ಕೆಯೆಸರ್ ಅಲೆಕ್ಸಾಂಡರ್ ಮಹಾಶಯನ ದಂತಕಥೆಯಿಂದ ಅತಿ ಮೋಹಗೊಂಡಿದ್ದ:ಇಲ್ಲಿ ಅಲೆಕ್ಸಾಂಡರ್ ಒಂದು ರಾಕೆಟ್ ಹಿಡಿದದ್ದು ಇದರ ಮೊದಲ ಚಿತ್ರಣವಾಗಿದೆ.

ಕೊನ್ರಾಡ್ ಕೆಯೆಸರ್ ಎಂಬಾತ ೧೪೦೫ರ ಸುಮಾರಿಗೆ ತನ್ನ ಪ್ರಸಿದ್ಧ ಸೇನಾ ಶಾಸ್ತ್ರಗ್ರಂಥವಾದ ಬೆಲ್ಲಿಫೊರ್ಟೀಸ್‍ನಲ್ಲಿ ರಾಕೆಟ್‍ಗಳನ್ನು ವಿವರಿಸಿದ್ದನು.[೧೬]

೧೫೨೯ ಮತ್ತು ೧೫೫೬ ರ ನಡುವೆ ಕೊನ್ರಾಡ್ ಹಾಸ್ ಎಂಬಾತ ಬರೆದ ಪುಸ್ತಕದಲ್ಲಿ ರಾಕೆಟ್ ತಂತ್ರಜ್ಞಾನದ ಬಗ್ಗೆ ವಿವರಿಸಿದ್ದಾನೆ. ಇದರಲ್ಲಿ ಸುಡುಮದ್ದುಗಳು ಮತ್ತು ಆಯುಧಗಳ ತಂತ್ರಜ್ಞಾನದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಸ್ತಪ್ರತಿಯನ್ನು ೧೯೬೧ ರಲ್ಲಿ ಶೋಧಿಸಲಾಯಿತು, ಸಿಬಿಯು ಸಾರ್ವಜನಿಕ ದಾಖಲೆಗಳಲ್ಲಿ (ಸಿಬಿಯು ಪಬ್ಲಿಕ್ ರೆಕಾರ್ಡ್ಸ್ ವೆರಿಯಾ II ೩೭೪ ). ಆತನ ಗ್ರಂಥದಲ್ಲಿ ಬಹುಹಂತದ ರಾಕೆಟ್‍ಗಳ ಚಲನೆಯ ಸಿದ್ಧಾಂತ, ದ್ರವ ಇಂಧನವನ್ನು ಬಳಸುವ ವಿಭಿನ್ನ ಇಂಧನ ಮಿಶ್ರಣಗಳ ಕುರಿತ ವಿವರಣೆ ಇದೆ. ಆತ ಡೆಲ್ಟಾ ಆಕಾರದ ರೆಕ್ಕೆಗಳು ಮತ್ತು ಗಂಟೆ-ಆಕಾರದ ಸೂಸುಬಾಯಿಗಳನ್ನು ಪರಿಚಯಿಸಿದ.[೧೭]

ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ಪೋಲಿಶ್-ಲಿಥುಯೇನಿಯನ್ ಕಾಮನ್‍ವೆಲ್ತ್ ಕುಲೀನನಾದ ಕಾಜಿಮಿರೆಜ್ ಮ್ಯಾಗ್ನೆ ಸಿಮೆನಿವಿಕಿಜ್‍ರ ಕೃತಿಯಾದ "ಆರ್ಟಿಸ್ ಮ್ಯಾಗ್ನೆ ಆರ್ಟಿಲರೆ ಪಾರ್ಸ್ ಪ್ರೈಮಾ "("ಗ್ರೇಟ್ ಆರ್ಟ್ ಆಫ್ ಆರ್ಟಿಲ್ಲರಿ, ಮೊದಲ ಭಾಗ", "ದಿ ಕಂಪ್ಲೀಟ್ ಆರ್ಟ್ ಆಫ್ ಆರ್ಟಿಲ್ಲರಿ" ಎಂದೂ ಪರಿಚಿತವಾಗಿದೆ) ಅನ್ನು ಯುರೋಪ್‌ನಲ್ಲಿ ಮೂಲಭೂತ ಫಿರಂಗಿ ಕೈಪಿಡಿಯಾಗಿ ಬಳಸಲಾಯಿತು.[೧೮] ಈ ಗ್ರಂಥವನ್ನು ಮೊದಲ ಬಾರಿಗೆ ಆಮ್‍ಸ್ಟರ್ಡ್ಯಾಮ್ ನಲ್ಲಿ ೧೬೫೦ ರ ಸುಮಾರಿಗೆ ಪ್ರಕಟಿಸಲಾಯಿತು. ಅದನ್ನು ೧೬೫೧ ರಲ್ಲಿ ಫ್ರೆಂಚ್‌ಗೆ ಅನುವಾದಿಸಲಾಯಿತು, ೧೬೭೬ ರಲ್ಲಿ ಜರ್ಮನ್‌ಗೆ, ೧೭೨೦ ರಲ್ಲಿ ಇಂಗ್ಲಿಷ್ ಹಾಗೂ ಡಚ್‌ಗೆ, ೧೯೬೩ರಲ್ಲಿ ಪೋಲಿಶ್ ಭಾಷೆಗೆ ಭಾಷಾಂತರಿಸಲಾಯಿತು. ಈ ಪುಸ್ತಕವು ರಾಕೆಟ್‍ಗಳು, ಬೆಂಕಿಚೆಂಡುಗಳು ಮತ್ತು ಇತರ ಬಾಣಬಿರುಸಿನ ಸಾಧನಗಳನ್ನು ಸೃಷ್ಟಿಸಲು ಗುಣಮಟ್ಟದ ವಿನ್ಯಾಸಗಳನ್ನು ಒದಗಿಸಿತು. ಇದು (ಸೇನಾ ಮತ್ತು ನಾಗರಿಕ ಉದ್ದೇಶಗಳು ಎರಡಕ್ಕೂ) ರಾಕೆಟ್‍ಗಳ ಒಳವ್ಯಾಸ, ನಿರ್ಮಾಣ, ಉತ್ಪಾದನೆ ಮತ್ತು ಗುಣಲಕ್ಷಣಗಳ ಬಗ್ಗೆ ದೊಡ್ಡ ಅಧ್ಯಾಯವನ್ನೊಳಗೊಂಡಿದೆ. ಇದರಲ್ಲಿ ಬಹುಹಂತದ ರಾಕೆಟ್‍ಗಳು, ರಾಕೆಟ್‌ನ ಬ್ಯಾಟರಿಗಳು ಮತ್ತು (ಸಾಮಾನ್ಯ ಮಾರ್ಗದರ್ಶಕ ಸಳಿಗಳ ಬದಲಾಗಿ) ಡೆಲ್ಟರೆಕ್ಕೆ ಸ್ಥಿರೀಕಾರಕಗಳುಳ್ಳ ರಾಕೆಟ್‍ಗಳ ಬಗ್ಗೆ ವಿವರವಿದೆ.

ಭಾರತದಲ್ಲಿ

[ಬದಲಾಯಿಸಿ]

1399 ರಲ್ಲಿ ಮೂರಲಂಗ ಮತ್ತು ದೆಹಲಿಯ ಸುಲ್ತಾನರ ನಡುವೆ ನಡೆದ ಕಾಳಗದಲ್ಲಿ ದೆಹಲಿಯ ಸೇನೆ ಅಗ್ನಿ ಕುಂಡಗಳನ್ನು ಪ್ರಕ್ಷೇಪಿಸಿತೆಂಬ ವಿಚಾರ ಇತಿಹಾಸದ ಪುಟಗಳಲ್ಲಿ ಕಾಣಬರುತ್ತದೆ. ಮೊಗಲ್ ಪಕ್ರವರ್ತಿ ಅಕ್ಬರನ ಕಾಲದಲ್ಲಿ ಯುದ್ಧಗಳಲ್ಲಿ ತೋಪುಗಳ ಬಳಕೆ ಇದ್ದಿತೆನ್ನಲಾಗಿದೆ. ತೋಫನ್ನು ಉಡಾಯಿಸುವುದರಲ್ಲಿ ಮತ್ತು ಮುನ್ನುಗುವ ಶತ್ರುಸೈನ್ಯವನ್ನು ಚದರಿಸುವುದರಲ್ಲಿ ಹಾಗೂ ಅಭೇದ್ಯ ಕೋಟೆಗಳನ್ನು ಭೇದಿಸುವುದಕ್ಕೆ ರಾಕೆಟ್ಟಿನೋಪಾದಿಯಲ್ಲಿದ್ದ ಶಸ್ತ್ರಗಳನ್ನು ಬಳಸಿದ್ದ ವಿಚಾರ ತಿಳಿಯುತ್ತದೆ.  ತಾಳಿಕೋಟೆ ಯುದ್ಧದಲ್ಲಿ (1565) ವಿಜಯನಗರದ ಸೈನ್ಯ ಮತ್ತು ಗುಜರಾತಿನ ದಂಡಯಾತ್ರೆಯಲ್ಲಿ (1572) ಅಕ್ಬರನ ಸೈನ್ಯ ತೋಪುಗಳನ್ನು ಬಳಸಿದ್ದ ಬಗ್ಗೆ  ಐತಿಹಾಸಿಕ ದಾಖಲೆಗಳಿವೆ.  ಔರಂಗಜೇ಼ಬನ ಸೈನ್ಯ ಬೀದರಿನ ಕೋಟೆಯನ್ನೂ ಮುತ್ತಿ (1657) ತೋಫಿನ ಮಳೆಗೆರೆದಾಗ ಮದ್ದು ಗುಂಡುಗಳ ಉಗ್ರಾಣಕ್ಕೆ ಬೆಂಕಿ ತಗುಲಿ ಕೋಟೆಯೊಳಗೆಲ್ಲ ಬೆಂಕಿಪ್ರಮಾದ ಕಾಣಸಿಕೊಂಡಿತಂತೆ. ದೋಗಾಚಿಯುದ್ಧದಲ್ಲಿ ಮೊಗಲ ರಾಜಕುಮಾರ ಶಾಹಶೂಜಾನ ಪ್ರಮುಖನೌಕೆ ಘುರಬದ ಪತನಕ್ಕೆ ರಾಜನಿಷ್ಠ ಸೇನೆ ಪ್ರಯೋಗಿಸಿದ ನೌಕಾರಾಕೆಟ್ಟುಗಳೇ ಕಾರಣ ಎಂದು ಹೇಳಲಾಗಿದೆ. ಗುಂಡಿನ ಮದ್ದನ್ನು ಯುರೋಪಿನಲ್ಲಿ ಉಪಜ್ಞಿಸಿದ ಬಳಿಕ ಬ್ರಿಟಿಷರು ಆಕಾಶ ಬಾಣಗಳನ್ನು ಪ್ರಯೋಗಿಸುವ ತನಕವೂ ಅವುಗಳ ಬಳಕೆ ನಿಂತೇ ಹೋಗಿತ್ತು. ಆ ಅಸ್ತ್ರವನ್ನು ಕಡಲಿನ ಮೇಲೆ ನಿಂತ ದೋಣಿಗಳಲ್ಲಿ ಇದ್ದುಕೊಂಡೇ ದೂರದ ದಡಕ್ಕೆ ಹಾರಿಸಬಹುದಿತ್ತು. ಅಂದಿನಿಂದ ಅಕಾಶಬಾಣಗಳು, ನೌಕಾಫಿರಂಗಿಗಳು ಮತ್ತು ಲಘುಫಿರಂಗಿಗಳು ಯುದ್ಧೋಪಕರಣಗಳ ಪಟ್ಟಿಗೆ ಸೇರಿದುವು.

ಲೋಹದ-ಉರುಳೆಯುಳ್ಳ ರಾಕೆಟ್ ಫಿರಂಗಿ

[ಬದಲಾಯಿಸಿ]

18 ನೆಯ ಶತಮಾನದ ಪೂರ್ವದಲ್ಲಿ ಭಾರತೀಯರಿಗೆ ತೋಫೀನ ಯುದ್ಧತಂತ್ರ ಕರತಲಾಮಲಕವಾಗಿತ್ತು. ಅವರ ಸಿಡಿಮದ್ದಿನ ಗುಡುಗಿನ ಮೊಳಗು ಯುರೋಪಿನವರೆಗೂ ಮೊಳಗಿತ್ತಂತೆ. 1750 ರಲ್ಲಿ ಕರ್ನಾಟಕದ  ನವಾಬನೊಬ್ಬ ಫ್ರೆಂಚದ ದಳಪತಿ ಚಾರ್ಲ್ಸ್ ಜೋಸೆಫ್ ಪ್ರಾಟ್‌ಸಿಯನ ಸೈನ್ಯ ಉರಿಗುಂಡುಗಳ ಹೊಡೆತದಿಂದ ಬೆಚ್ಚುವಂತೆ ಮಾಡಿದ್ದನಂತೆ,  1790 ರಲ್ಲಿ ಕೋರಮಂಡಲ ದಂಡೆಯ ಮೇಲೆ ಟಿಪ್ಪುಸುಲ್ತಾನನಿಗೂ ಬ್ರಿಟಿಷರ ಜನರಲ್ ಕಾರ್ನ್ವಾಲೀಸನಿಗೂ  ಯುದ್ಧ ನಡದು  ಟಿಪ್ಪುಸುಲ್ತಾನನ ಸೈನ್ಯ ಅಂಗ್ಲರ ಸೈನ್ಯದ ಮೇಲೆ ಮೊದಲ ಬಾರಿಗೆ ರಾಕೆಟ್ ಪ್ರಯೋಗಿಸಿತೆಂದು ಕರ್ನಲ್ ಮಾರ್ಕ್ಸ್ ವಿಲ್ಕನ ನರದಿ ತಿಳಿಸುತ್ತದೆ.  1791 ರ ಬೆಂಗಳೂರು ಯುದ್ದದಲ್ಲಿ  ಟಿಪ್ಪುಸುಲ್ತಾನನ ರಾಕೆಟ್ ಪ್ರಹಾರಗಳು ಅಂಗ್ಲರನ್ನು ದಿಕ್ಕೆಡಿಸಿದ್ದವಂತೆ.  1797 ರಲ್ಲಿ ಟಿಪ್ಪುವಿನ ರಾಕೆಟ್ಟುಗಳು ಕೊಯಮತ್ತೂರಿನ ಕೋಟೆಯನ್ನು ಧ್ವಂಸ ಮಾಡಿದ್ದುವು.

೧೭೯೨ ರಲ್ಲಿ ಮೊದಲ ಬಾರಿಗೆ ಕಬ್ಬಿಣ ಕವಚದ ರಾಕೆಟ್‍ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿ ಭಾರತದಲ್ಲಿ ಮೈಸೂರು ರಾಜ್ಯದ ರಾಜರಾದ ಹೈದರ್ ಅಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಬಳಸಿದರು (ಈಸ್ಟ್ ಇಂಡಿಯಾ ಕಂಪನಿಯ ಪಡೆಗಳ ವಿರುದ್ಧ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ). ಟಿಪ್ಪುವಿನ ರಾಕೆಟ್ಟು 3.8 ಸೆಂಮೀ ವ್ಯಾಸವುಳ್ಳದ್ದೂ 20.5 ಸೆಂಮೀ ಉದ್ದದ್ದೂ ಅದ ಒಂದು ನಳಿಕೆ. ಅದರಲ್ಲಿ ಗಂಧಕ, ಇದ್ದಿಲು ಹಾಗೂ ಪೆಟ್ಲುಪ್ಪುಗಳ (ಪೊಟ್ಯಾಸಿಯಮ್ ನೈಟ್ರೇಟ್) ಮಿಶ್ರಣವನ್ನು ತುಂಬಲಾಗುತ್ತಿತ್ತು. ಅಗ್ನಿಸ್ಪರ್ಶವಾದೊಡನೆಯೇ ಅದು ಸುಯ್ ಎಂದು ಮೇಲೇರುತ್ತಿತ್ತು. ಬೆಂಕಿಯ ಮಳೆಗರೆಯುತ್ತ  ಶತ್ರುಸೈನ್ಯದ ಮೇಲೆ ಬಿದ್ದು ಹಾನಿಯುಂಟುಮಾಡುತ್ತಿತ್ತು. ಆಗ ಬ್ರಿಟಿಶರು ಈ ತಂತ್ರಜ್ಞಾನದಲ್ಲಿ ಸಕ್ರಿಯ ಆಸಕ್ತಿ ಬೆಳಸಿಕೊಂಡು ಅದನ್ನು ೧೯ ನೆಯ ಶತಮಾನದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿದರು. ಆ ಕಾಲದ ಮೈಸೂರು ರಾಕೆಟ್‍ಗಳು ಬ್ರಿಟಿಶರು ನೋಡಿದ್ದಕ್ಕಿಂತ ಬಹಳ ಹೆಚ್ಚು ಮುಂದುವರಿದದ್ದಾಗಿದ್ದವು ಏಕೆಂದರೆ ಇವು ನೋದಕವನ್ನು ಹಿಡಿದಿಡಲು ಕಬ್ಬಿಣದ ನಳಿಕೆಗಳನ್ನು ಬಳಸಿದ್ದವು; ಇದು ಕ್ಷಿಪಣಿಗೆ ಹೆಚ್ಚಿನ ನೋದಕ ಬಲ ಮತ್ತು ಹೆಚ್ಚಿನ ವ್ಯಾಪ್ತಿಯನ್ನು ಕೊಡುತ್ತಿತ್ತು (ಸುಮಾರು ಎರಡು ಕಿ.ಮೀ ದೂರದಷ್ಟು ವ್ಯಾಪ್ತಿ). ನಾಲ್ಕನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಸೋಲಿನ ನಂತರ ಮೈಸೂರಿನ ಕಬ್ಬಿಣದ ರಾಕೆಟ್‍ಗಳನ್ನು ಬ್ರಿಟಿಶರು ವಶಪಡಿಸಿಕೊಂಡರು. ಅವು ಬ್ರಿಟಿಷ್ ರಾಕೆಟ್ ಅಭಿವೃದ್ಧಿ ಮೇಲೆ ಪ್ರಭಾವ ಬೀರಿದವು. ಇದರಿಂದ ಸ್ಫೂರ್ತಿಪಡೆದ ಕಾಂಗ್ರೀವ್ ರಾಕೆಟನ್ನು ಅವರು ಮುಂದಿನ ನೆಪೊಲಿಯೋನಿಕ್ ಯುದ್ಧಗಳಲ್ಲಿ ಶೀಘ್ರವೇ ಬಳಸಿದರು.[೧೯]

ಸ್ಟೀಫನ್ ಆಲಿವರ್ ಫಾಟ್ ಮತ್ತು ಜಾನ್ ಎಫ್ .ಗಿಲ್ಮಾರ್ಟಿನ್ ಜೂ. ಅವರು ಎನ್‍ಸೈಕ್ಲೊಪೀಡಿಯಾ ಬ್ರಿಟಾನಿಕಾ (೨೦೦೮) ದಲ್ಲಿ: "ಮೈಸೂರಿನ ರಾಜನಾದ ಹೈದರ ಅಲಿಯು ಮಹತ್ವದ ಬದಲಾವಣೆಯೊಂದಿಗೆ ಯುದ್ಧದ ರಾಕೆಟ್‍ಗಳನ್ನು ಅಭಿವೃದ್ಧಿಪಡಿಸಿದನು; ಇದರಲ್ಲಿ ಲೋಹದ ಉರುಳೆಗಳಲ್ಲಿ ದಹನ ಪುಡಿಯನ್ನು ತುಂಬುತ್ತಿದ್ದರು. ಅವನು ಬಳಸಿದ ಬಡಿದ ಮೆತು ಕಬ್ಬಿಣ ನಾಜೂಕಾಗಿಲ್ಲದಿದ್ದರೂ, ಕಪ್ಪು ಪುಡಿಯ ಧಾರಕದ ಸ್ಫೋಟಕ ಬಲ ಮುಂಚಿನ ಕಾಗದ ನಿರ್ಮಾಣಕ್ಕಿಂತ ಬಹಳ ಹೆಚ್ಚಾಗಿತ್ತು. ಹಾಗಾಗಿ ಹೆಚ್ಚಿನ ಆಂತರಿಕ ಒತ್ತಡ ಸಾಧ್ಯವಿತ್ತು. ಪರಿಣಾಮವಾಗಿ ನೋದಕ ಧಾರೆಯ ನೋದನ ಬಲ ಹೆಚ್ಚಿರುತ್ತಿತ್ತು. ಚರ್ಮದ ಚಾಟಿಗಳಿಂದ ರಾಕೆಟ್ ಕಾಯವನ್ನು ಉದ್ದನೆಯ ಬಿದಿರಿನ ಕೋಲಿಗೆ ಜೋಡಿಸಲಾಗಿರುತ್ತಿತ್ತು. ವ್ಯಾಪ್ತಿಯು ಬಹುಶಃ ಮೈಲೊಂದರ ಮೂರ್ನಾಲ್ಕಾಂಶದಷ್ಟಿತ್ತು (ಅಂದರೆ ಸುಮಾರು ಒಂದು ಕಿ.ಮೀ ಗಿಂತ ಹೆಚ್ಚು). ಪ್ರತ್ಯೇಕವಾಗಿ ಈ ರಾಕೆಟ್‍ಗಳು ನಿಖರವಾಗಿರಲಿಲ್ಲವಾದರೂ, ದೊಡ್ಡ ಸಂಖ್ಯೆಯ ರಾಕೆಟ್‍ಗಳನ್ನು ರಾಶಿ ದಾಳಿಗಳಲ್ಲಿ ಕ್ಷಿಪ್ರವಾಗಿ ಸಿಡಿಸಿದಾಗ ಚೆದರಿಕೆ ದೋಷ ಅಷ್ಟು ಮುಖ್ಯವಾಗಿರಲಿಲ್ಲ. ಇವುಗಳು ವಿಶೇಷವಾಗಿ ಅಶ್ವಸೈನ್ಯದ ವಿರುದ್ಧ ಪರಿಣಾಮಕಾರಿಯಾಗಿದ್ದವು. ಇವುಗಳನ್ನು ಹೊತ್ತಿಸಿ ಗಾಳಿಯಲ್ಲಿ ಎಸೆಯಲಾಗುತ್ತಿತ್ತು ಅಥವಾ ಗಟ್ಟಿ ಒಣ ನೆಲದುದ್ದಕ್ಕೆ ಸವರಿಕೊಂಡು ಹೋಗುತ್ತಿದ್ದವು. ಹೈದರ್ ಅಲಿಯ ಪುತ್ರ ಟಿಪ್ಪು ಸುಲ್ತಾನ ರಾಕೆಟ್ ಆಯುಧಗಳನ್ನು ಅಭಿವೃದ್ಧಿಪಡಿಸಿ ಅವುಗಳ ಬಳಕೆಯನ್ನು ವಿಸ್ತರಿಸುವುದನ್ನು ಮುಂದುವರಿಸಿದನು. ರಾಕೆಟ್ ಪಡೆಯ ಸಂಖ್ಯೆಯನ್ನು ೧,೨೦೦ ರಿಂದ ೫,೦೦೦ ದ ಸೈನ್ಯದಳದವರೆಗೆ ಹೆಚ್ಚಿಸಿದನು. ಶ್ರೀರಂಗಪಟ್ಟಣದಲ್ಲಿ ೧೭೯೨ ಮತ್ತು ೧೭೯೯ ರಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಶರ ವಿರುದ್ಧ ಇವುಗಳನ್ನು ಗಣನೀಯ ಪರಿಣಾಮದೊಂದಿಗೆ ಬಳಸಲಾಗಿತ್ತು.[೨೦]

ಮುಂಚಿನ ರಾಕೆಟ್‍ಗಳ ನಿಖರತೆ

[ಬದಲಾಯಿಸಿ]
ದ ಕಾಂಗ್ರೀವ್ ರಾಕೆಟ್

ಲಂಡನ್‍ನಲ್ಲಿನ ವುಲ್ವಿಚ್‍ನ ರಾಜ ಶಸ್ತ್ರಾಗಾರದ ನಿಯಂತ್ರಕನ ಮಗನಾಗಿದ್ದ ವಿಲಿಯಮ್ ಕಾಂಗ್ರೀವ್ ಈ ಕ್ಷೇತ್ರದಲ್ಲಿ ಪ್ರಧಾನ ವ್ಯಕ್ತಿಯಾದನು. ೧೮೦೧ ರಿಂದ, ಕಾಂಗ್ರೀವ್ ಮೈಸೂರಿನ ರಾಕೆಟ್‍ಗಳ ಮೂಲ ವಿನ್ಯಾಸದ ಮೇಲೆ ಸಂಶೋಧನೆ ಮಾಡಿ, ಶಸ್ತ್ರಾಗಾರದ ಪ್ರಯೋಗಾಲಯದಲ್ಲಿ ಹುರುಪಿನ ಅಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದ.[೨೧] ಕಾಂಗ್ರೀವ್ ಹೊಸ ನೋದಕ ಮಿಶ್ರಣವನ್ನು ತಯಾರಿಸಿ ಶಂಖಾಕೃತಿಯ ಮೂತಿಯುಳ್ಳ ಶಕ್ತಿಯುತ ಕಬ್ಬಿಣದ ನಳಿಕೆಯಿರುವ ರಾಕೆಟ್ ಮೋಟಾರೊಂದನ್ನು ಅಭಿವೃದ್ಧಿಪಡಿಸಿದನು. ಈ ಮುಂಚಿನ ಕಾಂಗ್ರೀವ್ ರಾಕೆಟ್ ೩೨ ಪೌಂಡಗಳಷ್ಟು ಭಾರ ಇತ್ತು (ಅಂದರೆ ೧೪.೫ ಕಿಲೊಗ್ರಾಮ್). ರಾಜ ಶಸ್ತ್ರಾಗಾರದಲ್ಲಿ ಘನ ಇಂಧನ ರಾಕೆಟ್‍ಗಳ ಮೊದಲ ಪ್ರದರ್ಶನ ೧೮೦೫ ರಲ್ಲಿ ಆಯಿತು. ನೆಪೊಲಿಯೋನಿಕ್ ಯುದ್ಧಗಳಲ್ಲಿ ಮತ್ತು ೧೮೧೨ ರ ಯುದ್ಧದಲ್ಲಿ ಈ ರಾಕೆಟ್‍ಗಳನ್ನು ಪರಿಣಾಮಕಾರಿಯಾಗಿ ಬಳಸಲಾಯಿತು. ರಾಕೆಟ್ ವಿಜ್ಞಾನದ ಬಗ್ಗೆ ಕಾಂಗ್ರೀವ್ ಮೂರು ಪುಸ್ತಕಗಳನ್ನು ಪ್ರಕಟಿಸಿದನು.[೨೨]

ಅಲ್ಲಿಂದ, ಯುರೋಪಿನಾದ್ಯಂತ ಸೇನಾ ರಾಕೆಟ್‍ಗಳ ಬಳಕೆ ಹರಡಿತು. ೧೮೧೪ ರಲ್ಲಿ ನಡೆದ ಬಾಲ್ಟಿಮೋರ್ ಕದನ ದಲ್ಲಿ ರಾಕೆಟ್ ನೌಕೆ ಎಚ್‍ಎಂಎಸ್ ಎರೆಬಸ್ ಮೂಲಕ ಮೆಕ್‍ಹೆನ್ರಿ ಕೋಟೆಯ ಮೇಲೆ ಹಾರಿಸಲಾದ ರಾಕೆಟ್‍ಗಳು (ದ ಸ್ಟಾರ್ -ಸ್ಪ್ಯಾಂಗಲ್ಡ್ ಬ್ಯಾನರ್‌ನಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ವರ್ಣಿಸಿದ) ರಾಕೆಟ್‌ಗಳ ಕೆಂಪು ಝಳಪಿನ ಮೂಲವಾಗಿತ್ತು.[೨೩] ವಾಟರ್ಲೂ ಕದನದಲ್ಲಿಯೂ ರಾಕೆಟ್‍ಗಳನ್ನು ಬಳಸಲಾಗಿತ್ತು.[೨೪]

ಮುಂಚಿನ ರಾಕೆಟ್‍ಗಳು ಬಹಳ ನಿಷ್ಕೃಷ್ಟವಿರಲಿಲ್ಲ. ತಿರುಗುವಿಕೆಯನ್ನು ಬಳಸದೇ ಅಥವಾ ನೋದಕ ಬಲದ ಯಾವುದೇ ಜಿಂಬಲಿಂಗ್ ಇಲ್ಲದೇ, ರಾಕೆಟ್‍ಗಳು ಉದ್ದೇಶಿತ ಮಾರ್ಗದಿಂದ ತೀವ್ರವಾಗಿ ದಿಕ್ಕು ಬದಲಾಯಿಸುವ ಪ್ರಬಲ ಪ್ರವೃತ್ತಿಯಿತ್ತು. ಮುಂಚಿನ ಬ್ರಿಟಿಶ್ ಕಾಂಗ್ರೀವ್ ರಾಕೆಟ್‍ಗಳಲ್ಲಿ (ಆಧುನಿಕ ಬಾಟಲಿ ರಾಕೆಟ್‍ಗಳಂತೆಯೇ) ರಾಕೆಟ್‍ನ ತುದಿಗೆ ಉದ್ದನೆಯ ಕೋಲನ್ನು ಜೋಡಿಸಲಾಗಿದ್ದರಿಂದ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಇದರಿಂದ ರಾಕೆಟ್‍ಗಳು ದಿಕ್ಕು ಬದಲಾಯಿಸುವುದು ಕಷ್ಟವಾಗಿರುತ್ತಿತ್ತು.[೨೧] ಕಾಂಗ್ರೀವ್ ರಾಕೆಟ್‍ಗಳಲ್ಲಿ ಅತಿ ದೊಡ್ಡದೆಂದರೆ ೩೨ ಪೌಂಡ್‍ಗಳ (೧೪.೫ ಕಿ.ಗ್ರಾಂ) ಕ್ಯಾರ್ಕಾಸ್. ಇದು ೧೫ ಅಡಿಯ (೪.೬ ಮೀಟರ್ ) ಕೋಲನ್ನು ಹೊಂದಿತ್ತು. ಮೂಲತಃ ಈ ಕೋಲುಗಳನ್ನು ಪಕ್ಕಕ್ಕೆ ಕಟ್ಟಲಾಗಿರುತ್ತಿತ್ತು; ಆದರೆ ನಂತರ ಬದಲಾಯಿಸಿ ಇವುಗಳನ್ನು ರಾಕೆಟ್‌ನ ಕೇಂದ್ರದಲ್ಲಿ ಜೋಡಿಸಲಾಗಿರುತ್ತಿತ್ತು. ಇದರಿಂದ ಪ್ರತಿರೋಧ ಕಡಿಮೆಯಾಗಿ ರಾಕೆಟ್‍ನ್ನು ಹೆಚ್ಚು ನಿಖರವಾಗಿ ಪೈಪ್‍ನ ವಿಭಾಗದಿಂದ ಚಿಮ್ಮಿಸುವುದು ಸಾಧ್ಯವಾಗುತ್ತಿತ್ತು.

ವಿಲಿಯಮ್ ಹೇಲ್[೨೫] ಎಂಬಾತ ೧೮೪೪ ರಲ್ಲಿ ರಾಕೆಟ್ ವಿನ್ಯಾಸದಲ್ಲಿ ಮಾರ್ಪಾಡು ಮಾಡಿದಾಗ ನಿಖರತಾ ಸಮಸ್ಯೆ ಬಹಳವಾಗಿ ಸುಧಾರಿಸಿತು. ಇದರಿಂದ ನೋದನ ಬಲ ಸ್ವಲ್ಪ ಸೂಚಿತವಾಗಿ, ರಾಕೆಟ್ ತನ್ನ ಪ್ರಯಾಣದ ಅಕ್ಷದ ಸುತ್ತಲೂ ಬುಲೆಟ್‍ನಂತೆ ಸುತ್ತುತ್ತಿತ್ತು. ಹೇಲ್‍ನ ಸುಧಾರಣೆಯು ರಾಕೆಟ್ ಕೋಲಿನ ಅಗತ್ಯವನ್ನು ಕಿತ್ತುಹಾಕಿತು. ವಾಯು ಪ್ರತಿರೋಧ ಕಡಿಮೆಯಾದ್ದರಿಂದ ರಾಕೆಟ್ ಗಾಳಿಯಲ್ಲಿ ಮತ್ತಷ್ಟು ದೂರ ಚಲಿಸುತ್ತಿತ್ತು ಮತ್ತು ಬಹಳ ಹೆಚ್ಚು ನಿಖರವಾಗಿರುತ್ತಿತ್ತು.

ಅಂತರಗ್ರಹ ರಾಕೆಟ್ ವಿಜ್ಞಾನದ ಸಿದ್ಧಾಂತಗಳು

[ಬದಲಾಯಿಸಿ]

೨೦ ನೆಯ ಶತಮಾನದ ಆರಂಭದಲ್ಲಿ, ಅಂತರಗ್ರಹ ಪ್ರಯಾಣದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಬಿರುಸಿನಿಂದ ಸಾಗಿದವು. ಇವು ಬಹುಮುಖ್ಯವಾಗಿ ಜೂಲ್ಸ್ ವೆರ್ನೆ ಮತ್ತು ಎಚ್. ಜಿ. ವೆಲ್ಸ್‌ರಂತಹ ಬರಹಗಾರರ ಕಲ್ಪನಾ ಸಾಹಿತ್ಯದಿಂದ ಸ್ಫೂರ್ತಿ ಪಡೆದಿದ್ದವು. ನಿಜ ಜೀವನದಲ್ಲಿ ಇದನ್ನು ಸಾಧಿಸಲು ಸಾಧ್ಯಮಾಡುವಂತಹ ತಂತ್ರಜ್ಞಾನವಾಗಿ ರಾಕೆಟ್‍ನ ಪರಿಕಲ್ಪನೆಯನ್ನು ವಿಜ್ಞಾನಿಗಳು ಹಿಡಿದಿಟ್ಟುಕೊಂಡರು.

೧೯೦೩ರಲ್ಲಿ ಪ್ರೌಢ ಶಾಲಾ ಗಣಿತ ಶಿಕ್ಷಕನಾದ ಕಾನ್‍ಸ್ಟಂಟೀನ್ ಸಿಯೋಲ್‍ಕಾವ್‍ಸ್ಕಿ (೧೮೫೭-೧೯೩೫) ಎಂಬಾತ Исследование мировых пространств реактивными приборами [೨೬] (ದಿ ಎಕ್ಸ್‌ಪ್ಲೊರೇಶನ್ ಆಫ್ ಕಾಸ್ಮಿಕ್ ಸ್ಪೇಸ್ ಬೈ ಮೀನ್ಸ್ ಆಫ್ ರಿಆಕ್ಸನ್ ಡಿವೈಸಿಸ್ ) ಎಂಬ ಪುಸ್ತಕವನ್ನು ಪ್ರಕಟಿಸಿದನು. ಇದು ಅಂತರಿಕ್ಷ ಯಾನದ ಬಗ್ಗೆ ಮೊದಲ ಗಂಭೀರ ವೈಜ್ಞಾನಿಕ ಗ್ರಂಥವಾಗಿತ್ತು.[೨೬] ರಾಕೆಟ್ ನೋದನವನ್ನು ನಿರ್ಣಯಿಸುವ ಸಿಯೋಲ್‍ಕಾವ್‍ಸ್ಕಿ ರಾಕೆಟ್ ಸಮೀಕರಣಕ್ಕೆ ಇವನ ಗೌರವಾರ್ಥ ಇವನ ಹೆಸರನ್ನು ಇಡಲಾಗಿದೆ (ಆದರೆ ಇದನ್ನು ಹಿಂದೆಯೇ ಶೋಧಿಸಲಾಗಿತ್ತು).[೨೭] ನೋದಕವಾಗಿ ದ್ರವರೂಪದ ಜಲಜನಕ ಮತ್ತು ಆಮ್ಲಜನಕದ ಬಳಕೆಯನ್ನೂ ಇವನು ಪ್ರತಿಪಾದಿಸಿದನು ಮತ್ತು ಗರಿಷ್ಠ ನಿಷ್ಕಾಸ ವೇಗವನ್ನು ಗಣನೆ ಮಾಡಿದನು. ಈತನ ಕೃತಿಯು ಸೊವಿಯತ್ ಒಕ್ಕೂಟದ ಹೊರಗೆ ವಾಸ್ತವವಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ದೇಶದೊಳಗೆ ಹೆಚ್ಚಿನ ಸಂಶೋಧನೆ, ಪ್ರಯೋಗ ಪರೀಕ್ಷೆ ಮತ್ತು ೧೯೨೪ರಲ್ಲಿ ಸೊಸೈಟಿ ಫಾರ್ ಸ್ಟಡೀಸ್ ಆಫ್ ಇಂಟರ್ ಪ್ಲ್ಯಾನೇಟರಿ ಟ್ರಾವೆಲ್‍ನ ರಚನೆಗೆ ಸ್ಫೂರ್ತಿ ನೀಡಿತು.

ರಾಬರ್ಟ್ ಎಸ್ನಾಲ್ಟ್ -ಪೆಲ್ಟ್ರಿ ಎಂಬಾತ ೧೯೧೨ ರಲ್ಲಿ ರಾಕೆಟ್ ಸಿದ್ಧಾಂತ ಮತ್ತು ಅಂತರಗ್ರಹ ಯಾನದ ಬಗ್ಗೆ ಒಂದು ಉಪನ್ಯಾಸವನ್ನು ಪ್ರಕಟಿಸಿದನು.[೨೮] ಅವನು ಸ್ವತಂತ್ರವಾಗಿ ಸಿಯೋಲ್‍ಕಾವ್‍ಸ್ಕಿಯ ರಾಕೆಟ್ ಸಮೀಕರಣವನ್ನು ನಿಷ್ಪತ್ತಿಸಿದನು, ಮತ್ತು ಚಂದ್ರ ಹಾಗೂ ಗ್ರಹಗಳಿಗೆ ಸುತ್ತು ಪ್ರಯಾಣಗಳನ್ನು ಮಾಡಲು ಬೇಕಾಗುವ ಶಕ್ತಿಯ ಬಗ್ಗೆ ಮೂಲಭೂತ ಗಣನೆಗಳನ್ನು ಮಾಡಿದ. ಜೊತೆಗೆ ಆತ ಜೆಟ್ ಸವಾರಿಗೆ ಚಾಲನೆ ನೀಡಲು ಪರಮಾಣು ಶಕ್ತಿಯ (ಅಂದರೆ ರೇಡಿಯಂ) ಬಳಕೆಯನ್ನೂ ಪ್ರಸ್ತಾಪಿಸಿದನು.

ರಾಬರ್ಟ್ ಗೊಡಾರ್ಡ್

ಮುಂಚಿನ ವಯಸ್ಸಿನಿಂದ ಎಚ್. ಜಿ. ವೆಲ್ಸ್‌ರಿಂದ ಸ್ಫೂರ್ತಿಪಡೆದಿದ್ದ ರಾಬರ್ಟ್ ಗೊಡಾರ್ಡ್ ಎಂಬಾತ ೧೯೧೨ ರಲ್ಲಿ ರಾಕೆಟ್‍ಗಳ ಗಂಭೀರ ವಿಶ್ಲೇಷಣೆಯನ್ನು ಆರಂಭಿಸಿದನು. ಸಾಂಪ್ರದಾಯಿಕ ಘನ-ಇಂಧನದ ರಾಕೆಟ್‍ಗಳನ್ನು ಮೂರು ಬಗೆಗಳಲ್ಲಿ ಸುಧಾರಿಸಬೇಕೆಂದು ತೀರ್ಮಾನಿಸಿದ. ಮೊದಲನೆಯದಾಗಿ, ಹೆಚ್ಚಿನ ಒತ್ತಡಗಳನ್ನು ತಾಳಿಕೊಳ್ಳಲು ಸಂಪೂರ್ಣ ನೋದಕ ಧಾರಕವನ್ನು ನಿರ್ಮಿಸುವ ಬದಲಾಗಿ ಇಂಧನವನ್ನು ಸಣ್ಣ ದಹನ ಕೋಶದಲ್ಲಿ ಉರಿಸಬೇಕು. ಎರಡನೆಯದಾಗಿ, ರಾಕೆಟ್‍ಗಳನ್ನು ಹಂತಹಂತವಾಗಿ ಸಜ್ಜುಗೊಳಿಸಬಹುದು. ಅಂತಿಮವಾಗಿ, ಡೆ ಲವಾಲ್ ಸೂಸುಬಾಯಿಯನ್ನು ಬಳಸಿ ನಿಷ್ಕಾಸ ವೇಗವನ್ನು (ಮತ್ತು ಹೀಗೆ ಸಾಮರ್ಥ್ಯವನ್ನೂ) ಬಹಳವಾಗಿ ಹೆಚ್ಚಿಸಬಹುದು (ಅಂದರೆ ಶಬ್ದದ ವೇಗವನ್ನು ಮೀರಿ). ಈ ಪರಿಕಲ್ಪನೆಗಳಿಗೆ ಆತ ೧೯೧೪ ರಲ್ಲಿ ಹಕ್ಕುಸ್ವಾಮ್ಯ ಪಡೆದನು.[೨೯] ಅವನು ಸ್ವತಂತ್ರವಾಗಿ ರಾಕೆಟ್ ಹಾರಾಟದ ಗಣಿತವನ್ನೂ ಅಭಿವೃದ್ಧಿಪಡಿಸಿದ.

ಗೊಡಾರ್ಡ್ ಈ ವಿಚಾರಗಳು ಮತ್ತು ಪ್ರಾಯೋಗಿಕ ಫಲಿತಾಂಶಗಳನ್ನು ಎ ಮೆಥೆಡ್ ಆಫ್ ರೀಚಿಂಗ್ ಎಕ್ಸ್‌ಟ್ರೀಮ್ ಆಲ್ಟಿಟ್ಯುಡ್ಸ್ ಎಂಬ ಪುಸ್ತಕದಲ್ಲಿ ಪ್ರಕಟಿಸಿದ.[೩೦] ಈ ಕೃತಿಯು ಘನ-ಇಂಧನ ರಾಕೆಟ್‍ನ್ನು ಚಂದ್ರನಿಗೆ ಕಳುಹಿಸುವ ಬಗ್ಗೆ ಹೇಳಿಕೆಗಳನ್ನು ಒಳಗೊಂಡಿತ್ತು. ಇದು ವಿಶ್ವಾದ್ಯಂತ ಗಮನ ಸೆಳೆಯಿತು ಮತ್ತು ಇದಕ್ಕೆ ಪ್ರಶಂಸೆ ಮತ್ತು ಟೀಕೆ ಎರಡೂ ದೊರೆತವು. ಒಂದು ನ್ಯೂ ಯಾರ್ಕ್ ಟೈಮ್ಸ್ ನ ಸಂಪಾದಕೀಯವು ಸಲಹೆ ನೀಡಿತು:

That Professor Goddard, with his 'chair' in Clark College and the countenancing of the Smithsonian Institution, does not know the relation of action to reaction, and of the need to have something better than a vacuum against which to react -- to say that would be absurd. Of course he only seems to lack the knowledge ladled out daily in high schools.

—New York Times, 13 January 1920[೩೧]

ಹೆರ್ಮನ್ ಒಬರ್ಥ್ (೧೮೯೪–೧೯೮೯) ಎಂಬಾತ ೧೯೨೩ ರಲ್ಲಿ ಡೈ ರಾಕೆಟೆ ಜು ಡೆನ್ ಪ್ಲಾನೆಟೊರಾಮನ್ ("ದ ರಾಕೆಟ್ ಇಂಟು ಪ್ಲಾನೇಟರಿ ಸ್ಪೇಸ್") ಎಂಬ ತನ್ನ ಡಾಕ್ಟರೇಟ್ ಪ್ರಬಂಧದ ಆವೃತ್ತಿಯನ್ನು (ಮ್ಯೂನಿಕ್ ವಿಶ್ವವಿದ್ಯಾಲಯವು ತಿರಸ್ಕರಿಸಿದ್ದರಿಂದ) ಪ್ರಕಟಿಸಿದನು.[೩೨]

ಸಿಯೋಲ್‍ಕಾವ್‍ಸ್ಕಿ ಕೂಡ ೧೯೨೪ ರಲ್ಲಿ ಬಹುಹಂತದ ರಾಕೆಟ್‍ಗಳ ಬಗ್ಗೆ 'ಕಾಸ್ಮಿಕ್ ರಾಕೆಟ್ ಟ್ರೇನ್ಸ್' ಎಂಬ ಪುಸ್ತಕದಲ್ಲಿ ಬರೆದ.[೩೩]

ಆಧುನಿಕ ರಾಕೆಟ್ ವಿಜ್ಞಾನ

[ಬದಲಾಯಿಸಿ]

ವಿಶ್ವಯುದ್ಧ IIರ ಮೊದಲು

[ಬದಲಾಯಿಸಿ]
ರಾಬರ್ಟ್ ಗೊಡಾರ್ಡ್ ಮತ್ತು ಮೊದಲ ದ್ರವ ಇಂಧನದ ರಾಕೆಟ್.

ಒಂದು ದ್ರವ ಇಂಧನದ ರಾಕೆಟ್‌ ಇಂಜಿನ್‍ನ ದಹನ ಕೋಶಕ್ಕೆ ಗೊಡಾರ್ಡ್ ಶಬ್ದಾತೀತ (ಡೆ ಲಾವಲ್) ಸೂಸುಬಾಯಿಯನ್ನು ಜೋಡಿಸಿದಾಗ ಆಧುನಿಕ ರಾಕೆಟ್‍ಗಳ ಉಗಮವಾಯಿತು. ಈ ಸೂಸುಬಾಯಿಗಳು ದಹನ ಕೋಶದಿಂದ ಬರುವ ಬಿಸಿ ಅನಿಲವನ್ನು ಹೆಚ್ಚು ತಂಪು, ಬಹಳವಾಗಿ ನಿರ್ದೇಶಿತ ಅನಿಲ ಧಾರೆಯಾಗಿ ಪರಿವರ್ತಿಸುತ್ತಿದ್ದವು ಮತ್ತು ನೋದನ ಬಲವನ್ನು ಎರಡು ಪಟ್ಟಿಗಿಂತ ಹೆಚ್ಚು ಏರಿಸುತ್ತಿದ್ದವು ಮತ್ತು ಎಂಜಿನ್‍ನ ಸಾಮರ್ಥ್ಯವನ್ನು ೨% ರಿಂದ ೬೪% ಗೆ ಏರಿಸುತ್ತಿದ್ದವು.[೩೪][೩೫] ರಾಬರ್ಟ್ ಗೊಡಾರ್ಡ್ ೧೯೨೬ ರಲ್ಲಿ ವಿಶ್ವದ ಪ್ರಥಮ ದ್ರವ-ಇಂಧನ ಚಾಲಿತ ರಾಕೆಟ್‍ನ್ನು ಮ್ಯಾಸಚುಸೆಟ್ಸ್‌ನ ಔಬರ್ನ್‌ನಲ್ಲಿ ಉಡಾಯಿಸಿದ.

೧೯೨೦ ರ ದಶಕದ ಅವಧಿಯಲ್ಲಿ, ವಿಶ್ವಾದ್ಯಂತ ಅನೇಕ ರಾಕೆಟ್ ಸಂಶೋಧನಾ ಸಂಘಟನೆಗಳು ಕಾಣಿಸಿಕೊಂಡವು. ಜರ್ಮನ್‌ ವಿಜ್ಞಾನಿಗಳು ೧೯೨೦ ರ ದಶಕದ ಮಧ್ಯ ಭಾಗದಲ್ಲಿ ದ್ರವ ನೋದಕಗಳನ್ನು ಬಳಸುವ ರಾಕೆಟ್‍ಗಳೊಂದಿಗೆ ಪ್ರಯೋಗಗಳನ್ನು ಆರಂಭಿಸಿದ್ದರು. ಇವು ತುಲನಾತ್ಮಕವಾಗಿ ಹೆಚ್ಚು ಎತ್ತರ ಮತ್ತು ಹೆಚ್ಚು ದೂರ ಮುಟ್ಟುವಲ್ಲಿ ಸಮರ್ಥವಾಗಿದ್ದವು. ೧೯೨೭ ರಲ್ಲಿ ಜರ್ಮನ್ ಕಾರು ತಯಾರಿಕಾ ಕಂಪನಿ ಒಪೆಲ್ ರಾಕೆಟ್ ವಾಹನಗಳನ್ನು ಸಂಶೋಧಿಸುವುದನ್ನು ಆರಂಭಿಸಿತು (ಮಾರ್ಕ್ ವೆಲಿಯರ್ ಮತ್ತು ರಾಕೆಟ್ ನಿರ್ಮಾತೃವಾದ ಫ್ರೆಡ್ರಿಚ್ ವಿಲ್ಹೆಮ್ ಸ್ಯಾಂಡರ್ ಇವರೊಂದಿಗೆ).[೩೬] ೧೯೨೮ ರಲ್ಲಿ ಫ್ರಿಜ್ ವೊನ್ ಒಪೆಲ್ ಒಪೆಲ್ -ರಾಕ್.೧ ಎಂಬ ರಾಕೆಟ್ ಕಾರೊಂದನ್ನು ಜರ್ಮನಿಯ ರಸೆಲ್‍ಶೈಮ್‍ನಲ್ಲಿರುವ ಒಪೆಲ್ ರೇಸ್‍ವೇ ಮೇಲೆ ಓಡಿಸಿದ. ೧೯೨೯ ರಲ್ಲಿ ವೊನ್ ಒಪೆಲ್ ಫ್ರಾಂಕ್‍ಫರ್ಟ್-ರೆಬ್‍ಸ್ಟಾಕ್ ವಿಮಾನ ನಿಲ್ದಾಣದಲ್ಲಿ ಒಪೆಲ್-ಸ್ಯಾಂಡರ್ ರಾಕ್-1 ವಿಮಾನವನ್ನು ಹಾರಿಸಿದನು. ಬಹುಶಃ ಇದು ಮೊದಲ ಮಾನವ-ಚಾಲಿತ ರಾಕೆಟ್-ವಿಮಾನ ಹಾರಾಟವಾಗಿತ್ತು. ೧೯೨೭ ರಲ್ಲಿ ಮತ್ತು ಜರ್ಮನಿಯಲ್ಲೂ ಹವ್ಯಾಸಿ ರಾಕೆಟ್ ಇಂಜನಿಯರ್‌ಗಳ ಒಂದು ತಂಡವು ವೆರನ್ ಫರ್ ರಾಮ್ಸುಚಿಫ್ ಹಾರ್ಟ್ (ಜರ್ಮನ್ ರಾಕೆಟ್ ಸೊಸೈಟಿ ಅಥವಾ VfR) ನ್ನು ರಚಿಸಿದ್ದರು. ೧೯೩೧ ರಲ್ಲಿ (ಆಮ್ಲಜನಕ ಮತ್ತು ಗ್ಯಾಸೊಲೀನ್ ಬಳಸಿ) ಒಂದು ದ್ರವ ನೋದಕ ರಾಕೆಟ್‍ನ್ನು ಉಡಾವಣೆ ಮಾಡಿದರು.[೩೭]

ರಶಿಯಾದಲ್ಲಿ ೧೯೩೧ ರಿಂದ ೧೯೩೭ ರ ವರೆಗೆ ಲೆನಿನ್‍ಗ್ರ್ಯಾಡ್‍ನಲ್ಲಿರುವ ಗ್ಯಾಸ್ ಡೈನಾಮಿಕ್ಸ್ ಲ್ಯಾಬೊರೇಟರಿಯಲ್ಲಿ ರಾಕೆಟ್ ಎಂಜಿನ್ ವಿನ್ಯಾಸದ ಮೇಲೆ ವ್ಯಾಪಕ ವೈಜ್ಞಾನಿಕ ಕೆಲಸ ನಡೆಯಿತು. ಉತ್ತಮ ಹಣಕಾಸು ನೆರವು ಮತ್ತು ಅಗತ್ಯ ಸಿಬ್ಬಂದಿಯಿರುವ ಇಲ್ಲಿ ೧೦೦ ಕ್ಕಿಂತ ಹೆಚ್ಚು ಪ್ರಾಯೋಗಿಕ ಎಂಜಿನ್‍ಗಳನ್ನು ವೆಲೆಂಟಿನ್ ಗ್ಲುಷ್ಕೊರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಈ ಕಾರ್ಯದಲ್ಲಿ ಪುನರುಜ್ಜೀವಕ ತಂಪಿಸುವಿಕೆ, ಜ್ವಲನಸಿದ್ಧ ನೋದಕ ಜ್ವಲನ ಮತ್ತು (ಸುತ್ತುಹಾಕುವಿಕೆ ಹಾಗೂ ದ್ವಿನೋದಕ ಮಿಶ್ರಣ ಅಂತಃಕ್ಷೇಪಕಗಳನ್ನು ಒಳಗೊಂಡಂತೆ) ಇಂಧನ ಅಂತಃಕ್ಷೇಪಕ ವಿನ್ಯಾಸಗಳು ಸೇರಿದ್ದವು. ಆದರೆ ೧೯೩೮ ರಲ್ಲಿ ಸ್ಟಾಲಿನ್‍‍ನಿಂದ ಬಹಿಷ್ಕಾರದ ವೇಳೆ ಗ್ಲುಶ್ಕೊ ಅವರ ಬಂಧನದಿಂದಾಗಿ ಈ ಕಾರ್ಯ ಮೊಟಕುಗೊಂಡಿತು. ಇದೇ ರೀತಿಯ ಕೆಲಸವನ್ನು ಆಸ್ಟ್ರಿಯನ್ ಪ್ರೊಫೆಸರ್ ಈಗನ್ ಸ್ಯಾಂಗರ್ ಮಾಡಿದರು. ಅವರು ಸಿಲ್ಬರ್‌ವೊಗೆಲ್‍ನಂತಹ (ಕೆಲವೊಮ್ಮೆ "ಪ್ರತಿಕಕ್ಷಾ" ಬಾಂಬರ್ ಎಂದು ಕರೆಯಲ್ಪಡುತ್ತದೆ) ರಾಕೆಟ್ ಚಾಲಿತ ಅಂತರಿಕ್ಷವಿಮಾನಗಳ ಮೇಲೆ ಕೆಲಸ ಮಾಡಿದರು.[೩೮]

ನವೆಂಬರ್ ೧೨, ೧೯೩೨ ರಂದು ಅಮೆರಿಕನ್ ಅಂತರಗ್ರಹ ಸಂಸ್ಥೆಯ ಮೊದಲ ರಾಕೆಟ್‍ನ್ನು (ಜರ್ಮನ್ ರಾಕೆಟ್ ಸೊಸೈಟಿಯ ವಿನ್ಯಾಸಗಳ ಮೇಲೆ ಆಧಾರಿತವಾಗಿತ್ತು) ಸ್ಟಾಕ್ಟಾನ್ ಎನ್‍ಜೆಯ ಒಂದು ಹೊಲದಲ್ಲಿ ಸ್ಥಿರವಾಗಿ ಉರಿಸುವ ಪ್ರಯತ್ನ ಬೆಂಕಿಯಲ್ಲಿ ವಿಫಲವಾಯಿತು.[೩೯]

೧೯೩೦ ರ ದಶಕದಲ್ಲಿ ರೀಚ್‍ಸ್ವೇರ್ (ಇದು ೧೯೩೫ ರಲ್ಲಿ ವೆಹರ್‌ಮ್ಯಾಚ್ ಎಂದು ಆಯಿತು) ರಾಕೆಟ್ ವಿಜ್ಞಾನದಲ್ಲಿ ಆಸಕ್ತಿ ತೋರಿಸಲಾರಂಭಿಸಿತು.[೪೦] ಆದರೆ ವರ್ಸೇಲ್ಸ್ ಒಡಂಬಡಿಕೆಯು ವಿಧಿಸಿದ ಶಸ್ತ್ರಾಗಾರ ನಿರ್ಬಂಧಗಳು ದೂರದ ಶಸ್ತ್ರಾಸ್ತ್ರಗಳನ್ನು ಜರ್ಮನಿ ಪಡೆದುಕೊಳ್ಳುವುದನ್ನು ಸೀಮಿತಗೊಳಿಸಿತು. ದೂರದ ಫಿರಂಗಿ ಬಳಕೆಗೆ ರಾಕೆಟ್‍ಗಳನ್ನು ಉಪಯೋಗಿಸುವ ಸಾಧ್ಯತೆಯನ್ನು ನೋಡಿ, ಆರಂಭದಲ್ಲಿ ವೆಹೆರ್‌ಮ್ಯಾಚ್ VfR ತಂಡಕ್ಕೆ ಹಣಕಾಸು ನೆರವು ನೀಡಿತು. ಆದರೆ ಆ ತಂಡದ ಗಮನ ಕಟ್ಟುನಿಟ್ಟಾಗಿ ವೈಜ್ಞಾನಿಕವಾಗಿದ್ದರಿಂದ ಅದು ತನ್ನದೇ ಆದ ಸಂಶೋಧನಾ ತಂಡವನ್ನು ರಚಿಸಿಕೊಂಡಿತು. ಸೇನಾ ನಾಯಕರ ಇಚ್ಛೆಯ ಮೇರೆಗೆ ಆ ವೇಳೆಗೆ ರಾಕೆಟ್ ವಿಜ್ಞಾನಿಯಾಗಲು ಬಯಸಿದ್ದ ಯುವಕ ವೆರ್ನರ್ ವೊನ್ ಬ್ರೌನ್ ಸೇನೆಯನ್ನು ಸೇರಿಕೊಂಡ (ಇವನೊಂದಿಗೆ ಇಬ್ಬರು ಮಾಜಿ VfR ಸದಸ್ಯರೂ ಸೇರಿದರು). ವಿಶ್ವ ಸಮರ II ರಲ್ಲಿ ನಾಜಿ ಜರ್ಮನಿಯವರ ಬಳಕೆಗಾಗಿ ದೂರವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದರು.[೪೧]

ವಿಶ್ವ ಸಮರ II

[ಬದಲಾಯಿಸಿ]
ಮೈಲರ್‌ವ್ಯಾಗನ್ ಮೇಲೆ ಒಂದು ಜರ್ಮನ್ ವಿ-೨ ರಾಕೆಟ್.
ವಿ ೨ ರಾಕೆಟ್‌ನ ವಿನ್ಯಾಸ

ಜರ್ಮನಿಯಲ್ಲಿ ೧೯೪೩ ರಲ್ಲಿ, ವಿ-2 ರಾಕೆಟ್‍ಗಳ ಉತ್ಪಾದನೆ ಆರಂಭವಾಯಿತು. ಇದು 300 km (190 mi) ರಷ್ಟು ಕಾರ್ಯಕಾರಿ ವ್ಯಾಪ್ತಿಯನ್ನು ಹೊಂದಿತ್ತು ಮತ್ತು 1,000 kg (2,200 lb) ಯಷ್ಟು ಸಿಡಿತಲೆಯನ್ನು ಹೊತ್ತೊಯ್ಯುತ್ತಿತ್ತು ಮತ್ತು ಅಮಟೋಲ್ ಸ್ಪೋಟಕವನ್ನು ತುಂಬಿರಲಾಗುತ್ತಿತ್ತು. ಇದು ಸಾಮಾನ್ಯವಾಗಿ ಸುಮಾರು 90 km (56 mi) ನಷ್ಟು ಕಾರ್ಯಕಾರಿ ಗರಿಷ್ಠ ಎತ್ತರವನ್ನು ಸಾಧಿಸುತ್ತಿತ್ತು, ಆದರೆ ಇದನ್ನು ಲಂಬವಾಗಿ ಉಡಾಯಿಸಿದಾಗ 206 km (128 mi) ನಷ್ಟು ಎತ್ತರವನ್ನು ಸಾಧಿಸುತ್ತಿತ್ತು. ಈ ವಾಹನವು ಬಹುತೇಕ ಆಧುನಿಕ ರಾಕೆಟ್‍ಗಳಂತೆಯೇ ಇತ್ತು. ಇದರಲ್ಲಿ ಟರ್ಬೊಪಂಪ್‍ಗಳು, ಜಡತ್ವ ಮಾರ್ಗದರ್ಶಿ ಮತ್ತು ಅನೇಕ ಇತರ ಲಕ್ಷಣಗಳಿದ್ದವು. ಸಾವಿರಾರು ರಾಕೆಟ್‍ಗಳನ್ನು ವಿವಿಧ ಒಕ್ಕೂಟ ರಾಷ್ಟ್ರಗಳ ಮೇಲೆ ಉಡಾಯಿಸಲಾಯಿತು, ಪ್ರಮುಖವಾಗಿ ಬೆಲ್ಜಿಯಮ್ ಮೇಲೆ, ಜೊತೆಗೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮೇಲೂ. ಅವುಗಳನ್ನು ತಡೆಗಟ್ಟಲಾಗದಿದ್ದರೂ, ಅವುಗಳ ಮಾರ್ಗದರ್ಶಿ ವ್ಯವಸ್ಥಾ ವಿನ್ಯಾಸ ಮತ್ತು ಒಂದೇ ಪರಮಾಣ್ವೇತರ ಸಿಡಿತಲೆ ಇದ್ದಿದ್ದರಿಂದ ಸೇನಾ ಗುರಿಗಳ ವಿರುದ್ಧ ನಿಖರತೆ ಸಾಕಷ್ಟಿರಲಿಲ್ಲ. ಒಟ್ಟಾರೆ ಈ ಉಡಾವಣಾ ಕಾರ್ಯಾಚರಣೆ ಮುಗಿಯುವಷ್ಟರಲ್ಲಿ ಇಂಗ್ಲೆಂಡ್ ನಲ್ಲಿ ೨,೭೫೪ ಜನರು ಸತ್ತರಲ್ಲದೇ ೬,೫೨೩ ಜನರಿಗೆ ಗಾಯಗಳಾದವು. ಅದೂ ಅಲ್ಲದೇ ವಿ-೨ ಗಳ ನಿರ್ಮಾಣದ ವೇಳೆ ೨೦,೦೦೦ ಗುಲಾಮ ಕೂಲಿಗಳು ಸಾವನ್ನಪ್ಪಿದರು. ಇದು ಯುದ್ಧದ ಮಾರ್ಗದ ಮೇಲೆ ಗಣನೀಯವಾದ ಪ್ರಭಾವ ಬೀರಲಿಲ್ಲವಾದರೂ, ವಿ-೨ ಶಸ್ತ್ರಾಸ್ತ್ರಗಳಾಗಿ ಮಾರ್ಗದರ್ಶಿತ ರಾಕೆಟ್‍ಗಳ ಸಾಮರ್ಥ್ಯದ ಘಾತಕ ಪ್ರಾತ್ಯಕ್ಷಿಕೆಯನ್ನು ಒದಗಿಸಿತು.[೪೨][೪೩]

ನಾಜಿ ಜರ್ಮನಿಯಲ್ಲಿ ಮಾರ್ಗದರ್ಶಿತ ಕ್ಷಿಪಣಿ ಕಾರ್ಯಕ್ರಮದ ಸಮಯದಲ್ಲಿಯೇ ರಾಕೆಟ್‍ಗಳನ್ನು ವಿಮಾನಗಳ ಮೇಲೂ ಬಳಸಲಾಯಿತು, ಅಡ್ಡಡ್ಡಲಾದ ಹಾರಿಕೆಗೆ (JATO) ಅಥವಾ ಲಂಬ ಹಾರಿಕೆಗೆ ನೆರವಾಗಲು (ಬಚೆಮ್ ಬಾ 349 "ನ್ಯಾಟರ್") ಅಥವಾ ಅವುಗಳಿಗೆ ಶಕ್ತಿ ಒದಗಿಸಲು (ಮಿ 163,[೪೪] ಇತ್ಯಾದಿ). ಯುದ್ಧದ ಸಮಯದಲ್ಲಿ ಜರ್ಮನಿಯು ಹಲವಾರು ಮಾರ್ಗದರ್ಶಿತ ಮತ್ತು ಮಾರ್ಗದರ್ಶಿತವಲ್ಲದ ಗಾಳಿಯಿಂದ-ಗಾಳಿಗೆ, ನೆಲದಿಂದ ಗಾಳಿಗೆ ಮತ್ತು ನೆಲದಿಂದ ನೆಲಕ್ಕೆ ಹಾರುವ ಕ್ಷಿಪಣಿಗಳನ್ನೂ ಅಭಿವೃದ್ಧಿಪಡಿಸಿತು.

ಒಕ್ಕೂಟ ರಾಷ್ಟ್ರಗಳ ರಾಕೆಟ್ ಕಾರ್ಯಕ್ರಮಗಳು ಬಹಳ ಕಡಿಮೆ ಅತ್ಯಾಧುನಿಕವಾಗಿದ್ದವು. ಇವು ಬಹುತೇಕವಾಗಿ ಸೊವಿಯತ್‍ನ ಕಟ್ಯುಶಾ ರಾಕೆಟ್‍ನಂತಹ ಮಾರ್ಗದರ್ಶಿತವಲ್ಲದ ಕ್ಷಿಪಣಿಗಳ ಮೇಲೆ ಅವಲಂಬಿಸಿದ್ದವು.

ವಿಶ್ವ ಸಮರ II ರ ನಂತರ

[ಬದಲಾಯಿಸಿ]
ಡೊರ್ನ್‌ಬರ್ಜರ್ ಮತ್ತು ವೊನ್ ಬ್ರೌನ್ ಒಕ್ಕೂಟ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ಮೇಲೆ

ವಿಶ್ವ ಸಮರ II ರ ಕೊನೆಯಲ್ಲಿ ಪೈಪೋಟಿಯಲ್ಲಿದ್ದ ರಶಿಯನ್, ಬ್ರಿಟಿಶ್ ಮತ್ತು ಯುಎಸ್ ಸೇನಾ ಮತ್ತು ವೈಜ್ಞಾನಿಕ ತಂಡಗಳು ತಂತ್ರಜ್ಞಾನವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಎಲ್ಲ ಪ್ರಯತ್ನ ನಡೆಸಿದವು. ಜರ್ಮನ್ ರಾಕೆಟ್ ಕಾರ್ಯಕ್ರಮದ ಸಿಬ್ಬಂದಿಗೆ ಪೀನೆಮುಂಡೆಯಲ್ಲಿ ತರಬೇತಿ ನೀಡಿದವು. ರಶಿಯಾ ಮತ್ತು ಬ್ರಿಟನ್‍ಗಳು ಕೆಲಮಟ್ಟಿಗೆ ಯಶಸ್ವಿಯಾದವು, ಆದರೆ ಅಮೇರಿಕಾ ಅತಿ ಹೆಚ್ಚು ಲಾಭ ಪಡೆಯಿತು. ಯುಎಸ್ ಬಹಳಷ್ಟು ಜರ್ಮನ್ ರಾಕೆಟ್ ವಿಜ್ಞಾನಿಗಳನ್ನು ಸೆರೆಹಿಡಿದು ಆಪರೇಶನ್ ಒವರ್‌ಕಾಸ್ಟ್ ಭಾಗವಾಗಿ ಅಮೇರಿಕಕ್ಕೆ ಕರೆದುತಂದಿತು (ಇವರಲ್ಲಿ ಅನೇಕರು ನಾಜಿ ಪಕ್ಷದ ಸದಸ್ಯರಾಗಿದ್ದರು, ವೊನ್ ಬ್ರೌನ್ ಸೇರಿದಂತೆ).[೪೫] ಬ್ರಿಟನ್ ಮೇಲೆ ಮಳೆಗರೆಯಲು ವಿನ್ಯಾಸಗೊಳಿಸಲಾದ ರಾಕೆಟ್‍ಗಳನ್ನು ಅದರ ಬದಲಾಗಿ ಅಮೇರಿಕಾದಲ್ಲಿ ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಂಶೋಧನಾ ವಾಹನಗಳಾಗಿ ಬಳಸಿದರು. ವಿ-೨ ಅಮೆರಿಕದ ರೆಡ್‍ಸ್ಟೋನ್ ರಾಕೆಟ್ ಆಗಿ ವಿಕಸಿತವಾಯಿತು, ಇದನ್ನು ಮುಂಚಿನ ಅಂತರಿಕ್ಷ ಕಾರ್ಯಕ್ರಮದಲ್ಲಿ ಬಳಸಲಾಯಿತು.[೪೬]

ಯುದ್ಧದ ನಂತರ, ರಾಕೆಟ್‍ಗಳನ್ನು ವಾಯುಮಂಡಲದ ಉಷ್ಣಾಂಶ ಮತ್ತು ಒತ್ತಡದ ರೇಡಿಯೊ ಟೆಲಿಮೆಟ್ರಿಯಿಂದ ಅತಿ-ಎತ್ತರದಲ್ಲಿನ ಪರಿಸ್ಥಿತಿಗಳನ್ನು ಅಧ್ಯಯನಿಸಲು, ವಿಶ್ವಕಿರಣಗಳನ್ನು ಪತ್ತೆಹಚ್ಚಲು, ಮತ್ತು ಇನ್ನಷ್ಟು ಸಂಶೋಧನೆಗೆ ಬಳಸಲಾಯಿತು; ಗಮನಾರ್ಹವಾಗಿ ಶಬ್ದದ ಪ್ರತಿಬಂಧವನ್ನು ಮುರಿಯಲು ಬೆಲ್ X-1 ಗೆ. ಇದು ಯುಎಸ್‍ನಲ್ಲಿ ವೊನ್ ಬ್ರೌನ್ ಮತ್ತು ಇತರರ ಕೆಳಗೆ ಮುಂದುವರೆಯಿತು. ಇವರೆಲ್ಲರೂ ಯುಎಸ್‍ನ ವೈಜ್ಞಾನಿಕ ಸಂಕೀರ್ಣದ ಭಾಗವಾದರು.

ಆರ್-೭ ೮ಕೆ೭೨ "ವಾಸ್ಟಾಕ್"

ಸ್ವತಂತ್ರವಾಗಿ, ಸೋವಿಯತ್ ಒಕ್ಕೂಟದ ಅಂತರಿಕ್ಷ ಕಾರ್ಯಕ್ರಮದಲ್ಲಿ ಮುಖ್ಯ ವಿನ್ಯಾಸಕಾರ ಸೆರ್ಜೈ ಕೊರೊಲೆವ್‍ರ ನಾಯಕತ್ವದಲ್ಲಿ ಸಂಶೋಧನೆ ಮುಂದುವರೆಯಿತು.[೪೭] ಜರ್ಮನ್ ತಂತ್ರಜ್ಞರ ಸಹಾಯದಿಂದ ವಿ-೨ ವನ್ನು ನಕಲು ಮಾಡಿ ಆರ್-1, ಆರ್-2 ಮತ್ತು ಆರ್-5 ಕ್ಷಿಪಣಿಗಳಾಗಿ ಸುಧಾರಿಸಲಾಯಿತು. ೧೯೪೦ ರ ದಶಕದ ಕೊನೆಯ ವರ್ಷಗಳಲ್ಲಿ ಜರ್ಮನ್ ವಿನ್ಯಾಸಗಳನ್ನು ಕೈಬಿಡಲಾಯಿತು ಮತ್ತು ವಿದೇಶಿ ಕಾರ್ಮಿಕರನ್ನು ಮನೆಗೆ ಕಳಿಸಲಾಯಿತು. ಅಲೆಕ್ಸಿ ಮಿಹೈಲೊವಿಚ್ ಇಸಾಯೆವ್‍ನ ಆವಿಷ್ಕಾರಗಳ ಮೇಲೆ ಆಧಾರಿತವಾದ, ಗ್ಲುಶ್ಕೊ ನಿರ್ಮಿಸಿದ ಎಂಜಿನ್‍ಗಳ ಹೊಸ ಸರಣಿಯು ಮೊದಲ ICBM ಆದ ಆರ್-7 ನ ಆಧಾರವನ್ನು ರೂಪಿಸಿತು.[೪೮] ಆರ್-೭ ಮೊದಲ ಉಪಗ್ರಹವಾದ ಸ್ಪುಟ್ನಿಕ್ ೧ ನ್ನು, ಮತ್ತು ನಂತರ ಅಂತರಿಕ್ಷದಲ್ಲಿ ಮೊದಲ ಮಾನವನಾದ ಯುರಿ ಗಾಗರಿನ್‍ರನ್ನು, ಮತ್ತು ಮೊದಲ ಚಂದ್ರ ಹಾಗೂ ಗ್ರಹ ಅನ್ವೇಷಕಗಳನ್ನು ಉಡಾವಣೆ ಮಾಡಿತು. ಈ ರಾಕೆಟ್ ಇಂದಿಗೂ ಉಪಯೋಗದಲ್ಲಿದೆ. ಈ ಪ್ರತಿಷ್ಠೆಯ ಘಟನೆಗಳು ಅತ್ಯುಚ್ಚ ರಾಜಕಾರಣಿಗಳ ಗಮನ ಸೆಳೆದವು, ಜೊತೆಗೆ ಮತ್ತಷ್ಟು ಸಂಶೋಧನೆಗೆ ಹೆಚ್ಚುವರಿ ಹಣಕಾಸು ನೆರವು ಹರಿದು ಬಂತು.

ಬಗೆಹರಿಸಲಾಗಿರದ ಒಂದು ಸಮಸ್ಯೆಯೆಂದರೆ ವಾತಾವರಣ ಮರುಪ್ರವೇಶ. ಒಂದು ಕಕ್ಷೀಯ ವಾಹನವು ತನ್ನನ್ನು ತಾನು ಸುಲಭವಾಗಿ ಆವೀಕರಿಸಿಕೊಳ್ಳುವಷ್ಟು ಚಲನಶಕ್ತಿಯನ್ನು ಹೊಂದಿರುತ್ತದೆ ಎಂದು ತೋರಿಸಲಾಗಿತ್ತು. ಆದರೆ ಉಲ್ಕಾಶಿಲೆಗಳು ಭೂಮಿಯನ್ನು ತಲುಪಬಲ್ಲವೆಂದು ತಿಳಿದಿತ್ತು. ಈ ರಹಸ್ಯವನ್ನು ಯುಎಸ್‍ನಲ್ಲಿ ೧೯೫೧ ರಲ್ಲಿ ಬಗೆಹರಿಸಲಾಯಿತು. ನ್ಯಾಶನಲ್ ಅಡ್ವೈಸರಿ ಕಮಿಟಿ ಫಾರ್ ಏರೊನಾಟಿಕ್ಸ್ (NACA) ನ ಎಚ್. ಜೂಲಿಯನ್ ಅಲನ್ ಮತು ಎ.ಜೆ ಎಗರ್ಸ್ ಜೂ. ಅವರು ಮೊಂಡಾದ ಆಕಾರವು (ಹೆಚ್ಚು ಪ್ರತಿರೋಧ) ಅತ್ಯಂತ ಪರಿಣಾಮಕಾರಿ ಉಷ್ಣ ಕವಚವನ್ನು ಸಾಧ್ಯವಾಗಿಸುತ್ತದೆ ಎಂಬ ಅಂತರ್ಬೋಧೆಗೆ ವಿರುದ್ಧವಾದ ಶೋಧನೆಯನ್ನು ಮಾಡಿದರು.[೪೯] ಈ ಬಗೆಯ ಆಕಾರದೊಂದಿಗೆ, ಸುಮಾರು ೯೯% ಶಕ್ತಿ ವಾಹನದ ಬದಲಾಗಿ ಗಾಳಿಯಲ್ಲಿ ಹೋಗುತ್ತದೆ, ಮತ್ತು ಇದು ಕಕ್ಷೀಯ ವಾಹನಗಳ ಸುರಕ್ಷಿತ ಪುನರ್ವಶವನ್ನು ಸಾಧ್ಯವಾಗಿಸುತ್ತದೆ.

ಎಮ್‍ಕೆ-2 ಮರುಪ್ರವೇಶ ವಾಹನದ (RV) ಪ್ರಯೋಗ ಮಾದರಿಯ ರೂಪಾಂತರವನ್ನು ಮೊಂಡು ಕಾಯ ಸಿದ್ಧಾಂತದಿಂದ ಪಡೆಯಲಾಗಿತ್ತು.

ಆರಂಭದಲ್ಲಿ ಅಲನ್ ಮತ್ತು ಎಗರ್ಸ್ ಅವರ ಶೋಧನೆಯನ್ನು ಸೇನಾ ರಹಸ್ಯವೆಂದು ಪರಿಗಣಿಸಲಾಯಿತಾದರೂ ಅದನ್ನು ಅಂತಿಮವಾಗಿ ೧೯೫೮ ರಲ್ಲಿ ಪ್ರಕಟಿಸಲಾಯಿತು.[೫೦] ಮೊಂಡು ಕಾಯ ಸಿದ್ಧಾಂತವು ಮರ್ಕ್ಯುರಿ ಮತ್ತು ಎಲ್ಲ ಇತರ ಅಂತರಿಕ್ಷ ಕ್ಯಾಪ್ಸ್ಯೂಲ್‍ಗಳು ಮತ್ತು ಅಂತರಿಕ್ಷ ನೌಕೆಗಳು ಒಳಗೊಂಡಿದ್ದ ಉಷ್ಣ ಕವಚ ವಿನ್ಯಾಸವನ್ನು ಸಾಧ್ಯವಾಗಿಸಿತು. ಇದು ಭೂಮಿಯ ವಾಯುಮಂಡಲದೊಳಗೆ ದಹ್ಯ ಮರುಪ್ರವೇಶವನ್ನು ಪಾರಾಗಿ ಬದುಕಲು ಗಗನಯಾತ್ರಿಗಳಿಗೆ ಸಾಧ್ಯ ಮಾಡಿತು.

ಶೀತಲ ಸಮರ

[ಬದಲಾಯಿಸಿ]

ಒಮ್ಮೆ ಉಡಾಯಿಸಿದ ಮೇಲೆ ರಾಕೆಟ್ ವಾಹನದ ಮೇಲೆ ಹೊತ್ತೊಯ್ಯಲಾದ ಬೈಜಿಕ ಶಸ್ತ್ರಾಸ್ತ್ರಗಳ ವಿರುದ್ಧ ಮೂಲಭೂತವಾಗಿ ರಕ್ಷಣೆ ಸಾಧ್ಯವಿಲ್ಲ ಎಂಬುದು ಅರಿವಾದಾಗ, ಆಧುನಿಕ ಖಂಡಾಂತರ ಕ್ಷಿಪಣಿಗಳಾಗಿ (ICBMs) ಸೇನಾ ದೃಷ್ಟಿಯಿಂದ ರಾಕೆಟ್‍ಗಳು ಅತ್ಯಂತ ಮಹತ್ತ್ವದ್ದಾದವು. ಈ ಶಸ್ತ್ರಾಸ್ತ್ರಗಳಿಗೆ ಆರ್-೭, ಅಟ್ಲಾಸ್ ಮತ್ತು ಟೈಟಾನ್‌‍ನಂತಹ ICBM/ಉಡಾವಣಾ ವಾಹನಗಳು ಆಯ್ಕೆಯ ತಲುಪಿಸುವ ವೇದಿಕೆಯಾದವು.

ಭಾಗಶಃ ಶೀತಲ ಸಮರದಿಂದ ಉತ್ತೇಜಿತಗೊಂಡು ೧೯೬೦ ರ ದಶಕದಲ್ಲಿ ರಾಕೆಟ್ ತಂತ್ರಜ್ಞಾನದ ಕ್ಷಿಪ್ರ ಅಭಿವೃದ್ಧಿಯಾಯಿತು, ವಿಶೇಷವಾಗಿ ಸೋವಿಯತ್ ಒಕ್ಕೂಟದಲ್ಲಿ (ವೊಸ್ಟೊಕ್, ಸೋಯುಜ಼್, ಪ್ರೋಟಾನ್‌) ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ (ಉದಾ. ಎಕ್ಸ್ -15[೫೧] ಮತ್ತು ಎಕ್ಸ್ -20 ಡೈನಾ-ಸೋರ್[೫೨] ವಿಮಾನ). ಬ್ರಿಟನ್, ಜಪಾನ್, ಆಸ್ಟ್ರೇಲಿಯಾದಂತಹ ಇತರ ದೇಶಗಳಲ್ಲೂ ಗಮನಾರ್ಹವಾದ ಸಂಶೋಧನೆಯಾಯಿತು. ಬಾಹ್ಯಾಕಾಶ ಅನ್ವೇಷಣೆಗೆ ರಾಕೆಟ್‍ಗಳ ಬಳಕೆ ಬೆಳೆಯುತ್ತಿದೆ. ರಾಕೆಟ್‍ಗಳು ಚಂದ್ರನ ದೂರದ ಬದಿಯಿಂದ ಛಾಯಾಚಿತ್ರಗಳನ್ನು ಕಳುಹಿಸಿವೆ ಮತ್ತು ಮಂಗಳ ಗ್ರಹದ ಅನ್ವೇಷಣೆಗೆ ಮಾನವರಹಿತ ಹಾರಾಟಗಳನ್ನು ಕಳಿಸಲಾಗಿದೆ.

ಅಮೆರಿಕದಲ್ಲಿ ಮಾನವಸಹಿತ ಕಾರ್ಯಕ್ರಮಗಳಾದ ಪ್ರೊಜೆಕ್ಟ್ ಮರ್ಕ್ಯುರಿ, ಪ್ರೊಜೆಕ್ಟ್ ಜೆಮಿನಿ ಮತ್ತು ನಂತರ ಅಪೊಲೊ ಕಾರ್ಯಕ್ರಮ ನಡೆದವು. ಇವು ೧೯೬೯ ರಲ್ಲಿ ಸ್ಯಾಟರ್ನ್ ಫೈವ್ ಮೂಲಕ ಮೊದಲ ಬಾರಿಗೆ ಮನುಷ್ಯ ಚಂದ್ರನ ಮೇಲೆ ಇಳಿಯುವುದರೊಂದಿಗೆ ಕೊನೆಗೊಂಡವು. ಇದರಿಂದ ನ್ಯೂಯಾರ್ಕ್ ಟೈಮ್ಸ್ ಆಕಾಶಯಾನವು ಕೆಲಸಮಾಡದು ಎಂದು ಸೂಚಿಸುವ ಮುಂಚಿನ ಒಂದು ಸಂಪಾದಕೀಯವನ್ನು ಹಿಂಪಡೆಯುವ ಪರಿಸ್ಥಿತಿ ಉಂಟಾಯಿತು:

Further investigation and experimentation have confirmed the findings of Isaac Newton in the 17th century and it is now definitely established that a rocket can function in a vacuum as well as in an atmosphere. The Times regrets the error.

—New York Times, 17 June 1969 - A Correction[೫೩]

ಅಮೇರಿಕಾ ೧೯೭೦ ರ ದಶಕದಲ್ಲಿ ಚಂದ್ರನ ಮೇಲೆ ಮತ್ತಷ್ಟು ಬಾರಿ ನೌಕೆಗಳನ್ನು ಇಳಿಸಿತು. ೧೯೭೫ ರಲ್ಲಿ ಅಪೋಲೊ ಕಾರ್ಯಕ್ರಮವನ್ನು ರದ್ದುಮಾಡಿತು. ಬದಲಿ ವಾಹನವಾದ, ಭಾಗಶಃ ಮರುಬಳಕೆ ಮಾಡಬಲ್ಲ, 'ಸ್ಪೇಸ್ ಶಟಲ್' ಹೆಚ್ಚು ಅಗ್ಗವಾಗುವ ಉದ್ದೇಶ ಹೊಂದಿತ್ತು.[೫೪] ಆದರೆ ದೊಡ್ಡ ಪ್ರಮಾಣದಲ್ಲಿ ವೆಚ್ಚವನ್ನು ಉಳಿಸುವುದನ್ನು ಒಟ್ಟಾರೆಯಾಗಿ ಸಾಧಿಸಲಾಗಲಿಲ್ಲ. ಈ ನಡುವೆ ೧೯೭೩ ರಲ್ಲಿ, ಅಪ್ರಮುಖವಾದ ಎರಿಯೇನ್ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಲಾಂಚರು ೨೦೦೦ ನೆಯ ಹೊತ್ತಿಗೆ ಬಹುತೇಕ ಜಿಯೊಸ್ಯಾಟ್ ಮಾರುಕಟ್ಟೆಯನ್ನು ಸೆರೆಹಿಡಿಯಿತು.

ಪ್ರಸಕ್ತ ದಿನ

[ಬದಲಾಯಿಸಿ]

ರಾಕೆಟ್‍ಗಳು ಜನಪ್ರಿಯ ಸೇನಾ ಶಸ್ತ್ರಾಸ್ತ್ರವಾಗಿ ಉಳಿದಿವೆ. ವಿ-೨ ಬಗೆಯ ದೊಡ್ಡ ರಣರಂಗ ರಾಕೆಟ್‍ಗಳ ಬಳಕೆಯು ಮಾರ್ಗದರ್ಶಿತ ಕ್ಷಿಪಣಿಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ, ಭೂದಾಳಿಗಾಗಿ ಹೆಲಿಕಾಪ್ಟರ್‌ಗಳು ಮತ್ತು ಲಘು ವಿಮಾನಗಳು ಹಲವುವೇಳೆ ರಾಕೆಟ್‍ಗಳನ್ನು ಬಳಸುತ್ತವೆ. ಇವು ಮಶೀನ್ ಗನ್‌ಗಳಿಗಿಂತ ಹೆಚ್ಚು ಶಕ್ತಿಯುತವಾಗಿವೆ, ಆದರೆ ಭಾರದ ಫಿರಂಗಿಗಳ ಹಿಂದೊದೆತವನ್ನು ಹೊಂದಿರುವುದಿಲ್ಲ. ೧೯೬೦ರ ದಶಕದ ಮುಂಚಿನ ವರ್ಷಗಳ ವೇಳೆಗೆ ಗಾಳಿಯಿಂದ-ಗಾಳಿಯೆಡೆಗಿನ ಕ್ಷಿಪಣಿಗಳು ಜನಪ್ರಿಯತೆ ಗಳಿಸಿಕೊಂಡವು. MLRS ಅಥವಾ BM-30 ಸ್ಮೆರ್ಚ್‌ನಂತಹ ಪ್ರಸಕ್ತ ಫಿರಂಗಿ ವ್ಯವಸ್ಥೆಗಳು ಅನೇಕ ರಾಕೆಟ್‍ಗಳನ್ನು ಉಡಾವಣೆ ಮಾಡಿ ಯುದ್ಧಸಾಮಗ್ರಿಗಳಿಂದ ರಣರಂಗದ ಗುರಿಗಳನ್ನು ಧ್ವಂಸಗೊಳಿಸುತ್ತವೆ.

ಸ್ಪೇಸ್‍ಶಿಪ್‍ಒನ್

ಆರ್ಥಿಕ ದೃಷ್ಟಿಯಿಂದ, ರಾಕೆಟ್ ವಿಜ್ಞಾನವು ಎಲ್ಲ ಬಾಹ್ಯಾಕಾಶ ತಂತ್ರಜ್ಞಾನಗಳನ್ನು (ವಿಶೇಷವಾಗಿ ಉಪಗ್ರಹಗಳು) ಸಾಧ್ಯವಾಗಿಸುತ್ತದೆ. ಇವುಗಳಲ್ಲಿ ಹಲವು ಜನರ ದಿನನಿತ್ಯದ ಬದುಕಿನ ಮೇಲೆ ಬಹಳ ಮಟ್ಟಿಗೆ ಅಸಂಖ್ಯಾತ ವಿಧಗಳಲ್ಲಿ ಪ್ರಭಾವ ಬೀರುತ್ತವೆ.[೫೫]

ವೈಜ್ಞಾನಿಕವಾಗಿ, ರಾಕೆಟ್ ವಿಜ್ಞಾನವು ವಿಶ್ವಕ್ಕೆ ಕಿಟಕಿಯೊಂದನ್ನು ತೆರೆದಿದೆ. ಸೌರಮಂಡಲವನ್ನು ಅನ್ವೇಷಿಸಲು ಅಂತರಿಕ್ಷ ಅನ್ವೇಷಕಗಳನ್ನು ಮತ್ತು ವಿಶ್ವದ ಉಳಿದ ಭಾಗದ ಸ್ಪಷ್ಟವಾದ ನೋಟವನ್ನು ಪಡೆಯಲು ಬಾಹ್ಯಾಕಾಶ ಆಧಾರಿತ ದೂರದರ್ಶಕಗಳ ಉಡಾವಣೆಯನ್ನು ಅನುಮತಿಸುತ್ತವೆ.[೫೬]

ಆದರೆ, ಸಂಭಾವ್ಯವಾಗಿ ಮಾನವಸಹಿತ ಬಾಹ್ಯಾಕಾಶ ಹಾರಾಟವು ಪ್ರಧಾನವಾಗಿ ಸಾರ್ವಜನಿಕರ ಕಲ್ಪನಾಶಕ್ತಿಯನ್ನು ಹಿಡಿದಿದೆ. ವೈಜ್ಞಾನಿಕ ಸಂಶೋಧನೆಗಾಗಿ ಸ್ಪೇಸ್ ಶಟಲ್, ಕಕ್ಷೀಯ ಪ್ರವಾಸೋದ್ಯಮಕ್ಕಾಗಿ ಹೆಚ್ಚಾಗಿ ಸೋಯುಜ್, ಮತ್ತು ಉಪಕಕ್ಷೀಯ ಪ್ರಯಾಸೋದ್ಯಮಕ್ಕಾಗಿ ಸ್ಪೇಸ್‍ಶಿಪ್‍ಒನ್‍ನಂತಹ ವಾಹನಗಳು ಮಾನವಸಹಿತ ರಾಕೆಟ್ ವಿಜ್ಞಾನದ ಹೆಚ್ಚಿನ ವಾಣಿಜ್ಯೀಕರಣದ ಕಡೆಗೆ ಒಲವನ್ನು ತೋರಿಸಬಹುದು.[೫೭]

ಪ್ರಕಾರಗಳು

[ಬದಲಾಯಿಸಿ]
ವಾಹನ ವಿನ್ಯಾಸಗಳು
ಯಶಸ್ವಿಯಾಗಿ ಹಾರಿದ ಅತ್ಯಂತ ದೊಡ್ಡ ರಾಕೆಟ್ ಎಂದರೆ ಸ್ಯಾಟರ್ನ್ ಫೈವ್.

ರಾಕೆಟ್ ವಾಹನಗಳನ್ನು ಹಲವುವೇಳೆ ಲಂಬವಾಗಿ ಮೇಲೇರುವ ಎತ್ತರದ ತೆಳ್ಳಗಿನ "ರಾಕೆಟ್ " ಆಕಾರದಲ್ಲಿ ನಿರ್ಮಿಸಲಾಗಿರುತ್ತದೆ, ಆದರೆ ವಾಸ್ತವವಾಗಿ ರಾಕೆಟ್‌ನ ಅನೇಕ ವಿಭಿನ್ನ ಪ್ರಕಾರಗಳಿವೆ.[೫೮][೫೯] ಇವುಗಳಲ್ಲಿ ಕೆಳಗಿನವು ಸೇರಿವೆ:

  • ಪುಟ್ಟ ಮಾದರಿಗಳು ಉದಾಹರಣೆಗೆ ಬಲೂನ್ ರಾಕೆಟ್‌ಗಳು, ಜಲ ರಾಕೆಟ್‍ಗಳು, ಆಕಾಶ ರಾಕೆಟ್‌ಗಳು ಅಥವಾ ಹವ್ಯಾಸ ಅಂಗಡಿಗಳಲ್ಲಿ ಖರೀದಿಸಬಹುದಾದ ಸಣ್ಣ ಘನ ರಾಕೆಟ್‍ಗಳು
  • ಕ್ಷಿಪಣಿಗಳು
  • ಬಾಹ್ಯಾಕಾಶ ರಾಕೆಟ್‌ಗಳು ಉದಾಹರಣೆಗೆ ಅಪೊಲೊ ಕಾರ್ಯಕ್ರಮಕ್ಕೆ ಬಳಸಲಾದ ಬೃಹತ್ತಾದ ಸ್ಯಾಟರ್ನ ಫೈವ್.
  • ರಾಕೆಟ್ ಕಾರ್‌ಗಳು
  • ರಾಕೆಟ್ ಬೈಕ್
  • ರಾಕೆಟ್‍ನಿಂದ ಶಕ್ತಿ ಪಡೆಯುವ ವಿಮಾನ (ಸಾಂಪ್ರದಾಯಿಕ ವಿಮಾನವು ರಾಕೆಟ್ ನೆರವಿನಿಂದ ಮೇಲಕ್ಕೇರುವುದು-JATO ಸೇರಿದಂತೆ)
  • ರಾಕೆಟ್ ಸ್ಲೆಡ್‍ಗಳು
  • ರಾಕೆಟ್ ರೈಲುಗಳು
  • ರಾಕೆಟ್ ಟಾರ್ಪಿಡೊಗಳು[೬೦][೬೧]
  • ರಾಕೆಟ್‍ನಿಂದ ಶಕ್ತಿ ಪಡೆಯುವ ಜೆಟ್ ಪ್ಯಾಕ್‌ಗಳು[೬೨]
  • ಕ್ಷಿಪ್ರವಾಗಿ ಪಾರುಮಾಡುವ ವ್ಯವಸ್ಥೆಗಳು ಉದಾಹರಣೆಗೆ ನಿಷ್ಕಾಸನ ಆಸನಗಳು ಮತ್ತು ಉಡಾವಣಾ ಪಾರಾಗುವಿಕೆ ವ್ಯವಸ್ಥೆಗಳು
  • ಬಾಹ್ಯಾಕಾಶ ಶೋಧಕಗಳು

ಘನರಾಕೆಟ್ಟುಗಳು: ಘನ ನೋದಕಗಳನ್ನು ಹೊಂದಿರುವ ರಾಕೆಟ್‌ಗಳ ವಿನ್ಯಾಸ ಮತ್ತು ರಚನೆ ಸಾಕಷ್ಟು ಸರಳವಾದ್ದು. ಆದರೆ ಅವುಗಳ ದಕ್ಷತೆಯೂ ಪರಿಮಿತವಾದುದೇ. ದೀಪಾವಳಿಯಲ್ಲಿ ಹಾರಿಬಿಡಲಾಗುವ ಆಟದ ಘನರಾಕೆಟ್‌ಗಳು ಒಂದು ಉತ್ತಮ ಉದಾಹರಣೆ.

ಸಾಮಾನ್ಯವಾಗಿ ವೈಜ್ಞಾನಿಕ, ಅಂತರಿಕ್ಷ, ಹಾಗೂ ಕೆಲಮಟ್ಟಿಗೆ ಸೇನಾಕ್ಷೇತ್ರಗಳಲ್ಲಿ ಬಳಕೆಯಲ್ಲಿರುವ ಅನೇಕ ಘನರಾಕೆಟ್‌ಗಳಲ್ಲಿ ಅಲ್ಯೂಮಿನಿಯಮ್ ಪುಡಿಯನ್ನು ಇಂಧನವಾಗಿ ಬಳಸಲಾಗುತ್ತದೆ. ಅಂತೆಯೇ ಅಮೋನಿಯಮ್ ಪರ್‌ಕ್ಲೋರೇಟ್ ಎಂಬ ರಾಸಾಯನಿಕ ವಸ್ತುವನ್ನು ದಹನಾನುಕೂಲಿಯಾಗಿ ಬಳಸುವುದಿದೆ. ಈ ಇಂಧನ - ದಹನಾನುಕೂಲಿಗಳ ಮಿಶ್ರಣಕ್ಕೆ ಸ್ಥಿರತೆಯನ್ನು ನೀಡುವ ಸಲುವಾಗಿ ರಬ್ಬರಿನ ಗುಂಪಿಗೆ ಸೇರಿದ, ಸಾವಯವ (ಆರ್ಗ್ಯಾನಿಕ್) ರಾಸಾಯನಿಕ ವಸ್ತುವೊಂದನ್ನು ಅವಕ್ಕೆ ಬೆರೆಸಲಾಗುತ್ತದೆ. ಹೀಗೆ ತಯಾರಾದ ನೋದಕವನ್ನು ಟೊಳ್ಳಾದ ಕೊಳವೆಯಂತಿರುವ ರಾಕೆಟ್‌ನ ಒಳಗೆ ಎರಕಹೊಯ್ದು ಬಳಿಕ ಅದು ಗಟ್ಟಿಯಾಗಲು ಕೆಲಕಾಲ ಬಿಡಲಾಗುತ್ತದೆ. ಈ ರೀತಿ ರಾಕೆಟ್‌ನೊಳಗೆ ತುಂಬಿಸಲಾದ ನೋದಕದ ಮಧ್ಯಭಾಗದಲ್ಲಿ ಮೇಲಿಂದ ಕೆಳಗಿನವರೆಗೂ ರಂಧ್ರವೊಂದು ಇರುತ್ತದೆ. ಅದರ ದಹನಕ್ರಿಯೆಯನ್ನು ಪ್ರಾರಂಭಿಸುವ ಜ್ವಲನಕಾರಿವಸ್ತು (ಇಗ್ನೇಟರ್) ಹುದಗಿರುವುದು ಈ ರಂಧ್ರದಲ್ಲೇ. ನೋದಕದ ದಹನಕ್ರಿಯೆ ಪ್ರಾರಂಭವಾದ ಕ್ಷಣವೇ ರಾಕೆಟ್ ಸಹ ತನ್ನ ಕಾರ್ಯವನ್ನು ಪ್ರಾರಂಭಿಸುತ್ತದೆ.

ಘನರಾಕೆಟ್ ಎಂಜಿನ್ನೊಂದು ಕಾರ್ಯಾರಂಭ ಮಾಡಿದ ಬಳಿಕ ಬೇಕೆಂದಾಗ ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಸಾಧ್ಯವಾಗುವುದಿಲ್ಲ. ಅದರ ನೋದಕದ ಮಧ್ಯಭಾಗದಲ್ಲಿರುವ ರಂಧ್ರದ ಅಕಾರವನ್ನು ಅಗತ್ಯಕ್ಕೆ ತಕ್ಕಂತೆ ನಿರ್ಮಾಣದ ವೇಳೆಯಲ್ಲಿ ರೂಪಿಸುವ ಮೂಲಕ ಅ ನೋದಕ ಉರಿಯುವ ಮೊತ್ತವನ್ನೂ ನಿಯಂತ್ರಿಸಬಹುದು. ಇದು ಅಂತಿಮವಾಗಿ ರಾಕೆಟ್ ಉತ್ಪಾದಿಸುವ ನೂಕುಬಲದ ಮೊತ್ತವನ್ನು ನಿಯಂತ್ರಿಸುತ್ತದೆ.

ಇದೇ ರೀತಿ ಅಲ್ಯೂಮಿನಿಯಮ್ ಅಥವಾ ಉಕ್ಕಿನ ಕೊಳವೆಯೊಂದರಂತಿರುವ ಘನರಾಕೆಟ್ಟೊಂದರ ದಹನಕೋಣೆಯ ಒಳಕವಚದ ವೇಳೆ ವಿಶೇಷ ಉಷ್ಣವಿರೋಧಿ ವಸ್ತುಗಳನ್ನು ಅಂಟಿಸಿರಲಾಗುತ್ತದೆ. ಒಂದು ವೇಳೆ ಬೃಹತ್‌ಗಾತ್ರದ ಘನರಾಕೆಟ್ಟೊಂದು ಅನೇಕ ಘಟಕಗಳ ಜೋಡಣೆಯಿಂದ ನಿರ್ಮಿತವಾಗಿದ್ದಲ್ಲಿ ಹಾಗೆ ಜೋಡಣೆಗೊಂಡ ಭಾಗಗಳ ಒಳಗೆ ವಿಶೇಷ ರಬ್ಬರ್ ಹೊದಿಕೆಯನ್ನು ಅಳವಡಿಸಲಾಗುತ್ತದೆ.

ಘನರಾಕೆಟ್ಟಿನ ಸೂಸುಬಾಯಿ ಅನಿಲಗಳು ಒಂದೇ ಮೊತ್ತದಲ್ಲಿ ನೇರವಾಗಿ ಹೊರಚಿಮ್ಮುತ್ತಿದ್ದಲ್ಲಿ ಅ ರಾಕೆಟ್ ನೇರವಾಗಿ ಮುಂದೆ ಚಲಿಸುತ್ತಿರುತ್ತದೆ. ಹೀಗಾಗಿ ಅಂಥ ರಾಕೆಟ್ಟಿನ ಪಥವನ್ನು ಬದಲಿಸಲು ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಅಂಥ ಒಂದು ವಿಧಾನದಲ್ಲಿ ಇಡೀ ಸೂಸೂಬಾಯಿಯನ್ನೇ ಅತ್ತಿತ್ತ ಹೊರಳಿಸುವ ಮೂಲಕ ರಾಕೆಟ್ಟಿನ ಪಥವನ್ನು ಬದಲಿಸಲಾಗುವುದು. ಮತ್ತೊಂದು ವಿಧಾನದಲ್ಲಿ ಬಿಸಿ ಅನಿಲಗಳ ಬುಗ್ಗೆ ಸೂಸೂಬಾಯಿಯಿಂದ ಹೊರಗಿನ ಪರಿಸರಕ್ಕೆ ತಲುಪುವ ಮೊದಲು ಒಂದು ವಿಶೇಷ ದ್ರವವನ್ನೂ ಧಕ್ಕಾತರಂಗಗಳನ್ನು (ಷಾಕ್ ವೇವ್ಸ್) ಉತ್ಪತ್ತಿಮಾಡಿ ಅನಿಲಗಳು ಹೊರಚಿಮ್ಮುವ ದಿಶೆಯನ್ನು ಬದಲಿಸಿ ರಾಕೆಟ್ಟಿನ ಚಲನೆಯ ದಿಶೆಯನ್ನೂ ನಿಯಂತ್ರಿಸಿಕೊಳ್ಳಲಾಗುವುದು.

ಘನರಾಕೆಟ್ಟುಗಳು ಹೆಚ್ಚು ದಕ್ಷವಾದುವಲ್ಲವಾದರೂ ಅವುಗಳಲ್ಲಿನ ನೋದಕಗಳು ಬಹಳ ಬೇಗನೆ ದಹನವಾಗುವುದರಿಂದ ಅಂಥ ರಾಕೆಟ್ಟುಗಳು ಅಗಾಧಮೊತ್ತದಲ್ಲಿ ನೂಕುಬಲವನ್ನು ಉಂಟುಮಾಡುತ್ತವೆ. ಹೀಗಾಗಿ ಅವನ್ನು ರಾಕೆಟ್ಟೊಂದು ಭೂಮಿಯಿಂದ ಮೇಲೇರುವುದಕ್ಕೆ ನೆರವಾಗುವ ಅದರ ಮೊದಲ ಹಂತದ ಬೂಸ್ಟರ್‌ಗಳಾಗಿ ಬಳಸಲಾಗುತ್ತದೆ. ಉದಾಹರಣೆಗೆ ಅಮೆರಿಕದ ಅಂತರಿಕ್ಷ ಲಾಳಿ (ಸ್ಟೇಸ್ ಷಟಲ್) ಟೈಟನ್ - 4, ಯೂರೋಪಿನ ಏರಿಯಾನ್ - 5, ಜಪಾನಿನ ಎಚ್ - 2 ಹಾಗೂ ಭಾರತದ ಪಿ. ಎಸ್. ಎಲ್. ವಿ. ಈ ಉಡಾವಣಾ ವಾಹನಗಳಲ್ಲಿ ಘನರಾಕೆಟ್ಟುಗಳು ಬೂಸ್ಟರ್‌ಗಳಾಗಿ ಬಳಕೆಯಲ್ಲಿವೆ. ಘನರಾಕೆಟ್‌ಗಳನ್ನು ಹೆಚ್ಚು ಕಷ್ಟವಿಲ್ಲದೇ ಉಡಾಯಿಸಬಹುದಾದ್ದರಿಂದ ಅವನ್ನು ಸೇನಾಕ್ಷಿಪಣಿಗಳಲ್ಲಿ, ಅದರಲ್ಲೂ ಬೃಹತ್ ಖಂಡಾಂತರ ಕ್ಷಿಪಣಿಗಳಲ್ಲಿ (ಐ. ಸಿ. ಬಿ. ಎಂ) ಬಳಸುವುದಿದೆ. ಭೂವಾತಾವರಣಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ನೆರವಾಗುವ ಪರಿಜ್ಞಾಪಿ ಸಂಶೋಧನಾ ರಾಕೆಟ್ಟುಗಳು (ಸೌಂಡಿಂಗ್ ರಾಕೆಟ್ಸ್) ಘನರಾಕೆಟ್‌ಗಳಾಗಿವೆ.

ದ್ರವರಾಕೆಟ್‌ಗಳು: ಘನನೋದಕ ರಾಕೆಟ್‌ಗಳ ವೈಶಿಷ್ಟ್ಯ ಸರಳತೆಯಾದರೆ ದ್ರವನೋದಕ ರಾಕೆಟ್ಟುಗಳ ವೈಶಿಷ್ಟ್ಯ ದಕ್ಷತೆ ಮತ್ತು ಸಂಕೀರ್ಣತೆಗಳಾಗಿವೆ. ಜೊತೆಗೇ ಅಗತ್ಯವಿದ್ದಾಗ ಇದನ್ನು ಕಾರ್ಯಾರಂಭ ಮಾಡುವಂತೆ ಇಲ್ಲವೇ ಕಾರ್ಯ ಸ್ಥಗಿತಗೊಳಿಸುವಂತೆ ಮಾಡಬಹುದು ಎಂಬುದು ಇವುಗಳ ಮತ್ತೊಂದು ಪ್ರಮುಖ ವೈಶಿಷ್ಟ್ಯ. ಇಷ್ಟೇ ಅಲ್ಲದೇ ಇವು ಉತ್ಪಾದಿಸುವ ನೂಕುಬಲವನ್ನು ಯುಕ್ತರೀತಿಯಲ್ಲಿ ಹೆಚ್ಚು ಕಡಿಮೆ ಮಾಡುವುದೂ ಸಾಧ್ಯ.

ಕೊಳವೆಯಂಥ ಹೊರಮೈ ಹಾಗೂ ಅದರ ಹಿಂದಿರುವ ಗಂಟೆಯಾಕಾರದ ಸೂಸುಬಾಯಿಗಳು ಮೊದಲ ನೋಟಕ್ಕೆ ಕಣ್ಣಿಗೆ ಬೀಳುವ ಘನನೋದಕ ರಾಕೆಟ್ಟುಗಳ ಭಾಗಗಳು. ಸೂಸುಬಾಯಿಗೆ ಅಂಟಿರುವ ವಿವಿಧಾಕೃತಿಯ ಅನೇಕ ಸಣ್ಣ ಪುಟ್ಟ ಭಾಗಗಳು ದ್ರವನೋದಕ ರಾಕೆಟ್ಟಿನ ಮುಂದೆ ನಿಂತವರಿಗೆ ಕಾಣುತ್ತದೆ. ದ್ರವರಾಕೆಟ್ ಒಂದರ ಈ ಬಿಡಿಭಾಗಗಳೆಲ್ಲವೂ ನಿಖರವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಆ ಎಂಜಿನ್ನು ತನ್ನ ಸಾಫಲ್ಯವನ್ನು ಕಂಡುಕೊಳ್ಳುತ್ತದೆ.

ಬೃಹತ್‌ಗಾತ್ರದ ದ್ರವರಾಕೆಟ್ ಎಂಜಿನ್ನು ಸೆಕೆಂಡಿಗೆ ಅಪಾರಮೊತ್ತದಲ್ಲಿ ಇಂಧನ ದಹನಾನುಕೂಲಿಗಳ ಮಿಶ್ರಣವನ್ನು, ಅಂದರೆ ನೋದಕಗಳನ್ನು ಉರಿಸುತ್ತದಷ್ಟೆ. ಈ ನೋದಕಗಳು ಎಂಜಿನ್ನಿಗೆ ಸರಬರಾಜಾಗುವುದು ಬೃಹತ್ ತೊಟ್ಟಿಗಳಿಂದ (ಟ್ಯಾಂಕ್ಸ್). ಈ ತೊಟ್ಟಿಗಳು ಕೊಳವೆಯಿಂತಿರುವ ರಾಕೆಟ್ ವಾಹನದ ಮೈಯ್ಯೊಳಗೆ ಹುದುಗಿರುತ್ತವೆ. ಸಾಮಾನ್ಯವಾಗಿ ಇಂಧನ ಹಾಗೂ ದಹನಾನುಕೂಲಿ ವಸ್ತುಗಳಿಗೆ ಪ್ರತ್ಯೇಕ ತೊಟ್ಟಿಗಳಿರುತ್ತವೆ. ಕೆಲವು ವೇಳೆ ಗೋಡೆಯೊಂದರಿಂದ ಪ್ರತ್ಯೇಕಗೊಂಡ ಒಂದೇ ತೊಟ್ಟಿಯ ಎರಡು ಭಾಗಗಳಲ್ಲಿ ಅವನ್ನು ಸಂಗ್ರಹಿಸಿಡುವುದುಂಟು. ಈ ತೊಟ್ಟಿಗಳು ಎಷ್ಟು ಹಗುರವಾಗಿದ್ದರೆ ಅಷ್ಟು ಅನುಕೂಲ.

ದ್ರವರಾಕೆಟ್ ಎಂಜಿನ್ ತನಗೆ ವಹಿಸಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾದಲ್ಲಿ ಈ ಇಂಧನ-ದಹನಾನುಕೂಲಿಗಳ ಮಿಶ್ರಣ ಅಗಾಧ ಮೊತ್ತದಲ್ಲಿ ಅದರ ದಹನಕೋಣೆಗೆ ಸರಬರಾಜಾಗಬೇಕು. ಸ್ವಲ್ಪ ಚಿಕ್ಕ ಗಾತ್ರದ ದ್ರವರಾಕೆಟ್ ಎಂಜಿನ್ನು ಅದರ ದಹನಕೋಣೆಗೆ ಸರಬರಾಜಾಬೇಕಾಗುತ್ತದೆ. ಸ್ವಲ್ಪ ಚಿಕ್ಕ ಗಾತ್ರದ ದ್ರವರಾಕೆಟ್ ಎಂಜಿನ್ನುಗಳಲ್ಲಿ ಈ ಕೆಲಸವನ್ನು ಒತ್ತಡ ಬೀರುವ ಅನಿಲವೊಂದರ ನೆರವಿನೊಡನೆ ಮಾಡಲಾಗುತ್ತದೆ. ಆ ಮೂಲಕ ನೋದಕಗಳು ಅಗತ್ಯವಾದ ಮೊತ್ತದಲ್ಲಿ ದಹನಕೋಣೆಗೆ ವರ್ಗಾವಣೆಗೊಳ್ಳುತ್ತವೆ.

ಆದರೆ ಬೃಹತ್‌ಗಾತ್ರದ ದ್ರವರಾಕೆಟ್ ಎಂಜಿನ್ನುಗಳಲ್ಲಿ ನೋದಕಗಳ ಸರಬರಾಜಿನ ಕಾರ್ಯವನ್ನು ಟರ್ಬೋರೇಚಕಗಳೆಂಬ (ಟರ್ಬೋ ಪಂಪ್ಸ್) ಸಾಧನಗಳು ನಿರ್ವಹಿಸುತ್ತವೆ.  ಈ ರೇಚಕಗಳ ಸಾಮರ್ಥ್ಯ ಅಗಾಧವಾದ್ದು. ಉದಾಹರಣೆಗೆ ಅಮೆರಿಕದ ಮರುಪಯೋಗಿ ರಾಕೆಟ್ ವಿಮಾನವೆಂದೆನಿಸಿರುವ ಅಂತರಿಕ್ಷಲಾಳಿಯ (ಸ್ಪೇಸ್ ಷಟಲ್) ಮುಖ್ಯ ದ್ರವರಾಕಟ್ ಎಂಜಿನ್ನುಗಳ ಟರ್ಬೋರೇಚಕ ಗಾತ್ರದಲ್ಲಿ ಕೇವಲ ಒಂದು ಕಾರಿನ ಎಂಜಿನ್ನಿಗಿಂತಲೂ ಸ್ವಲ್ಪ ದೊಡ್ಡದಾಗಿದ್ದರೂ ಆ ಪೆಟ್ರೋಲ್ ಎಂಜಿನ್ ಉತ್ಪಾದಿಸುವ ಶಕ್ತಿಯ ಸಾವಿರಕ್ಕೂ ಹೆಚ್ಚು ಪಟ್ಟು ಶಕ್ತಿಯನ್ನು ಈ ರೇಚಕ ಉತ್ಪಾದಿಸುತ್ತದೆ.

ಹೆಸರೇ ಸೂಚಿಸುವಂತೆ ಟರ್ಬೋರೇಚಕ ಎನ್ನುವುದು ಟರ್ಬೈನ್ ಮತ್ತು ರೇಚಕ ಎಂಬ ಎರಡು ಪ್ರತ್ಯೇಕ ಪದಗಳ ಜೋಡಣೆಯಿಂದಾದ ಪದ. ಇಲ್ಲಿ ಟರ್ಬೈನ್ ಎಂಬ ಸಾಧನ ರೇಚಕವನ್ನು ಚಾಲನೆಗೊಳಿಸುತ್ತದೆ. ಆ ಟರ್ಬೈನನ್ನು ತಿರುಗಿಸುವುದಕ್ಕೆ ಒಂದು ಪ್ರತ್ಯೇತವಾದ ವ್ಯವಸ್ಥೆ ಇರುತ್ತದೆ. ಪುಟ್ಟದಾದ ಆ ವ್ಯವಸ್ಥೆಯೂ ಸಂಕೀರ್ಣವಾದುದೇ. ಸಾಮಾನ್ಯವಾಗಿ ಬೃಹತ್‌ಗಾತ್ರದ ದ್ರವರಾಕೆಟ್ ಎಂಜಿನ್ನುಗಳಲ್ಲಿ ಇಂಧನ ಹಾಗೂ ದಹನಾನುಕೂಲಿಗಳ ಸರಬರಾಜಿಗೆ ಪ್ರತ್ಯೇಕ ಟರ್ಬೋರೇಚಕಗಳಿರುತ್ತವೆ.

ದ್ರವರಾಕೆಟ್ ವಿನ್ಯಾಸ ಹಾಗೂ ನಿರ್ಮಾಣಗಳ ಸಂಬಂಧದಲ್ಲಿ ಕಂಡುಬರುವ ಸಮಸ್ಯೆಯಾದರೊ ಉಷ್ಣತೆಯನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದ್ದು. ಎಂಜಿನ್ನಿನ ದಹನಕೋಣೆಯಲ್ಲಿ ನೋದಕಗಳು ಹೆಚ್ಚಿನ ಉಷ್ಣತೆಯಲ್ಲಿ ಉರಿಯುವುದರಿಂದ ಸೂಸುಬಾಯಿಯ ಉಷ್ಣತೆ ವಿಶಿಷ್ಟ ಮಿಶ್ರಲೋಹಗಳೂ ಭರಿಸಲಾಗದಂಥ ಮಟ್ಟವನ್ನು ತಲುಪುತ್ತದೆ. ಇದನ್ನು ಕಡಿಮೆಮಾಡಲು ಸಾಮಾನ್ಯವಾಗಿ ಇಂಧವನ್ನು ದಹನಕೋಣೆಗೆ ವರ್ಗಾಹಿಸುವ ಮೊದಲು ಸೂಸುಬಾಯಿ ಹೊರಮೈಮೇಲೆ ಪರಿಚಲಿಸುವಂತೆ (ಸರ್ಕ್ಯುಲೇಟ್) ಮಾಡಿರುತ್ತಾರೆ. ಇದರಿಂದಾಗಿ ಸೂಸುಬಾಯಿಯ ಉಷ್ಣದ ಒಂದು ಭಾಗ ಇಂಧನಕ್ಕೆ ವರ್ಗಾವಣೆಗೊಂಡು ಸೂಸುಬಾಯಿಯ ಉಷ್ಣತೆ ಕಡಿಮೆಯಾಗುತ್ತದೆ. ಇದೇ ರೀತಿ ಇಂಧನವೂ ಸ್ವಲ್ಪ ಬಿಸಿಯಾಗಿ ಅದನ್ನು ಮುಂದೆ ದಹನಕೋಣೆಯಲ್ಲಿ ಉರಿಸುವುದೂ ಸುಲಭವಾಗುತ್ತದೆ.

ಘನನೋದಕಗಳಿಗೆ ಹೋಲಿಸಿದಲ್ಲಿ ದ್ರವನೋದಕಗಳು ತಮ್ಮ ದಹನಕ್ರಿಯೆಯ ಮೂಲಕ ರಾಕೆಟ್ಟಿನ ದಕ್ಷತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಷ್ಟೇ ಅಲ್ಲದೇ ದ್ರವನೋದಕಗಳನ್ನು ಬಳಸುವ ರಾಕೆಟ್ ತಕ್ಕಮಟ್ಟಿಗೆ ಹಗುರವಾಗಿರುವ ಮೂಲಕ ಮತ್ತಷ್ಟು ಹೆಚ್ಚಿನ ದಕ್ಷತೆಯನ್ನು ಸಾಧಿಸಬಲ್ಲುದು.

ಹೆಚ್ಚು ಸಂಕೀರ್ಣವಲ್ಲದ ದ್ರವರಾಕೆಟ್ ಎಂಜಿನ್ನುಗಳು ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲೇ ಇರುವ ನೋದಕಗಳನ್ನು ಬಳಸುತ್ತವೆ. ಈ ಪೈಕಿ ವಿಶೇಷ ಸೀಮೆಎಣ್ಣಿ ಹಾಗೂ ಅನ್‌ಸಿಮಿಟ್ರಿಕಲ್ ಡೈ ಮೀಥೈಲ್ ಹೈಡ್ರಜೀನ್ ಅಥವಾ ಮಾನೋಮೀಥೈಲ್ ಹೈಡ್ರಜೀನ್‌ಗಳು ಇಂಧನಗಳಾಗಿ ಬಳಕೆಯಾದರೆ ನೈಟ್ರೊಜನ್ ಟೆಟ್ರಾಕ್ಸೈಡ್ ಹಾಗೂ ಹೊಗೆಯಾಡುವ ಕೆಂಪು ನೈಟ್ರಿಕ್ ಆಮ್ಲ- ಇವು ದಹನಾನುಕೂಲಿಗಳಾಗಿ ಬಳಕೆಯಾಗುತ್ತಿವೆ. ಸಾಮಾನ್ಯವಾಗಿ ದ್ರವರೂಪದ ಈ ರಾಸಾಯನಿಕ ವಸ್ತುಗಳು ತಾವು ಸಂಪರ್ಕಿಸುವ ಭಾಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ದ್ರವರಾಕೆಟ್ ಎಂಜಿನ್ನುಗಳ ವಿನ್ಯಾಸದಲ್ಲಿ ಈ ಅಂಶವೂ ತೊದರೆಯನ್ನು ಒಡ್ಡುವ ಸಂದರ್ಭವೇ ಆಗುತ್ತದೆ.

ಇನ್ನು ಕೆಲವು ದ್ರವರಾಕೆಟ್ ಎಂಜಿನ್ನುಗಳು ಬಳಸುವ ನೋದಕಗಳ ಪೈಕಿ ದಹನಾನುಕೂಲಿವಸ್ತುವಾಗಿ ಬಳಕೆಯಾಗುವ ದ್ರವರೂಪದ ಆಕ್ಸಿಜನ್ ಸಾಮಾನ್ಯ ಉಷ್ಣತೆಯಲ್ಲಿ ಅನಿಲರೂಪದಲ್ಲಿರುತ್ತದೆ. ಹೀಗಾಗಿ ಅದನ್ನು ರಾಕೆಟ್ಟಿಗೆ ತುಂಬುವ ಮೊದಲು ವಿಶೇಷ ವಿಧಾನದ ನೆರವಿನಿಂದ ದ್ರವರೂಪಕ್ಕೆ ತರಲಾಗುತ್ತದೆ. ದ್ರವರೂಪದ ಆಕ್ಸಿಜನ್ -1830 C ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಅನಿಲರೂಪಕ್ಕೆ ಪರಿವರ್ತನೆಗೊಳ್ಳುವುದರಿಂದ ಅದನ್ನು ಕಡಿಮೆ ಉಷ್ಣತೆಯ ಪರಿಸರದಲ್ಲಿ ಆವಿ ಆಗದಂತೆ ರಾಕೆಟ್ಟಿನೊಳಗೆ ಶೇಖರಿಸಿಡುವ ವಿಶೇಷ ತೊಟ್ಟಿಗಳನ್ನು ನಿಖರತೆಯಿಂದ ನಿರ್ಮಿಸುವುದು ಅನಿವಾರ್ಯವಾಗುತ್ತದೆ. ದ್ರವಾಕ್ಸಿಜನ್ನನ್ನು ದಹನಾನುಕೂಲಿಯಾಗಿ ಬಳಸುವ ರಾಕೆಟ್ ಎಂಜಿನ್ ಒಂದಕ್ಕೆ ಭಾಗಶಃ ಕ್ರಯೋಜನಿಕ್ ರಾಕೆಟ್ ಎಂಜಿನ್ ಎಂದು ಹೆಸರು (ಕ್ರಯೋಜನಿಕ್ಸ್ ಎಂದರೆ ಅತಿಶೀತೋತ್ಪಾದನೆ, ಅದರ ಮಾಪನೆ, ಅತಿ ಶೀತಾವಸ್ಥೆಯಲ್ಲಿ ಉಂಟಾಗುವ ಪರಿಣಾಮಗಳು ಹಾಗೂ ಅವುಗಳ ವಿವರಣೆಗಳ ಶಾಸ್ತ್ರೀಯ ಅಧ್ಯಯನ). ಅನೇಕ ವೇಳೆ ದ್ರವಆಕ್ಸಿಜನ್ನನ್ನು ದಹನಾನುಕೂಲಿಯಾಗಿ ಬಳಸುವ ರಾಕೆಟ್‌ನ ದಕ್ಷತೆ ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ದಹನಾನುಕೂಲಿಯನ್ನು ಬಳಸುವ ರಾಕೆಟ್ ಎಂಜಿನ್ನಿನದಕ್ಕಿಂತ ಹೆಚ್ಚಿನದಾಗಿರುತ್ತದೆ.

ದ್ರವ ಆಕ್ಸಿಜನ್ನನ್ನು ದಹನಾನುಕೂಲಿಯಾಗಿ ಹಾಗೂ ದ್ರವ ಹೈಡ್ರೊಜನ್ನನ್ನು ಇಂಧನವಾಗಿ ಬಳಸುವ ಮತ್ತೊಂದು ಬಗೆಯ ದ್ರವರಾಕೆಟ್ ಎಂಜಿನ್ ಇದೆ. ಇದಕ್ಕೆ ಕ್ರಯೋಜನಿಕ್ ರಾಕೆಟ್ ಎಂಜಿನ್ ಎಂಬ ಹೆಸರಿದೆ. ಸಾಮಾನ್ಯ ಉಷ್ಣತೆಯಲ್ಲಿ ಅನಿಲರೂಪದ ಹೈಡ್ರೊಜನ್ನನ್ನು ದ್ರವರೂಪಕ್ಕೆ ತರುವುದು ಬಲುಕಷ್ಟ. ಇದು ಈ ರೂಪಕ್ಕೆ ಪರಿವರ್ತನೆಗೊಳ್ಳಬೇಕಾದರೆ ಉಷ್ಣತೆ -2580 C ಯಷ್ಟಿರಬೇಕು. ಜೊತೆಗೆ ದ್ರವಹೈಡ್ರೊಜನ್ ಅನಿಲರೂಪಕ್ಕೆ ಪರಿವರ್ತನೆಗೊಳ್ಳದ ಹಾಗೆ ರಾಕೆಟ್ಟೊಂದರ ತೊಟ್ಟಿಗಳಲ್ಲಿ ಶೇಖರಿಸಿಡುವುದೂ ಕಷ್ಟ. ಇದರೊಂದಿಗೇ ಆಕ್ಸಿಜನ್ ಹಾಗೂ ಹೈಡ್ರೊಜನ್‌ನುಗಳನ್ನು ಸಂಪೂರ್ಣ ದ್ರವರೂಪದಲ್ಲೇ ದಹನ ಕೋಣೆಗೆ ವರ್ಗಾಯಿಸಿ ಅಲ್ಲಿ ಅವು ಅವಿರತವಾಗಿ ಉರಿಯುವಂತೆ ಮಾಡುವುದು ಒಂದು ಪ್ರಮುಖ ತಾಂತ್ರಿಕ ಸವಾಲೇ ಸರಿ.

ಈ ಕಾರಣಗಳಿಂದಾಗಿ ಕ್ರಯೋಜನಿಕ್ ರಾಕೆಟ್ಟಿನ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ ಮಾನವನನ್ನು ಚಂದ್ರನತ್ತ ಉಡಾಯಿಸಿದ (1969 ಜುಲೈ 16) ಸ್ಯಾಟರ್ನ್ -5 ರಾಕೆಟ್ ಕ್ರಯೋಜನಿಕ್ ರಾಕೆಟ್ ಎಂಜಿನ್ನುಗಳನ್ನು ಹೊಂದಿತ್ತು. ಸಾಮಾನ್ಯವಾದ ದ್ರವನೋದಕ ರಾಕೆಟ್ ಎಂಜಿನ್ನುಗಳ ಪೈಕಿ ಕ್ರಯೋಜನಿಕ್ ರಾಕೆಟ್ ಎಂಜಿನ್ನು ಅತ್ಯಂತ  ದಕ್ಷವಾದುದು.

ದ್ರವನೋದಕ ರಾಕೆಟ್ಟುಗಳ ಪೈಕಿ ಕೆಲವು ನೋದಕಗಳ ದಹನಕ್ರಿಯೆಯನ್ನು ಪ್ರಾರಂಭಿಸಲು ಜ್ವಲನಕಾರಿಗಳು (ಇಗ್ನೈಟರ್ಸ್) ಎಂಬ ವಿಶೇಷ ಸಾಧನಗಳು ಬಳಕೆಯಾದರೆ ಇನ್ನು ಕೆಲವು ಸಂದರ್ಭಗಳಲ್ಲಿ ಇಂಧನ- ದಹನಾನುಕೂಲಿಗಳು ದಹನಕೋಣೆಯಲ್ಲಿ ಮಿಳಿತವಾದಾಗ ದಹನಕ್ರಿಯೆ ತನ್ನಷ್ಟಕ್ಕೆ ತಾನೇ ಪ್ರಾರಂಭ ಆಗುತ್ತದೆ. ಇನ್ನೊಂದು ಬಗೆಯ ಚಿಕ್ಕದಾದ ದ್ರವನೋದಕ ರಾಕೆಟ್ ಎಂಜಿನ್ನಿನಲ್ಲಿ ಇಂಧನ ದಹನಕೋಣೆಯಲ್ಲಿ ವಿಶೇಷ ವಸ್ತುವೊಂದರ ಮೇಲೆ ಹಾದುಹೋದಾಗ ಅನಿಲವಾಗಿ ಮಾರ್ಪಟ್ಟು ರಭಸವಾಗಿ ಹೊರಧಾವಿಸುವ ಮೂಲಕ ನೂಕುಬಲವನ್ನು ಉಂಟುಮಾಡುತ್ತದೆ. ದ್ರವರಾಕೆಟ್ ಎಂಜಿನ್ನುಗಳನ್ನು ಹೊಂದಿರುವ ವಾಹನಗಳ ದಿಶೆಯನ್ನು ಬದಲಿಸಲು ಜಿಂಬಲ್ ಎಂಬ ಸಾಧನಗಳನ್ನು ಅವಲಂಬಿಸಲಾಗುತ್ತದೆ.

ಹೈಬ್ರಿಡ್ ರಾಕೆಟ್: ರಾಸಾಯನಿಕ ರಾಕೆಟ್‌ಗಳ ಪೈಕಿ ಮತ್ತೊಂದು ಎಂದರೆ ಹೈಬ್ರಿಡ್ ರಾಕೆಟ್ ಎಂಜಿನ್ನು. ಇದು ಘನರೂಪದ ಇಂಧನ ಹಾಗೂ ದ್ರವರೂಪದ ದಹನಾನುಕೂಲಿ ಅಥವಾ ದ್ರವರೂಪದ ಇಂಧನ ಘನರೂಪದ ದಹನಾನುಕೂಲಿಗಳನ್ನು ಬಳಸಿಕೊಳ್ಳುತ್ತದೆ. ಈ ಅಪರೂಪದ ರಾಕೆಟ್ ಎಂಜಿನ್ನಿಗೆ ಘನ ಹಾಗೂ ದ್ರವ ರಾಕೆಟ್‌ಗಳಿರುವ ಅನುಕೂಲಗಳ ಪೈಕಿ ಕೆಲವಾದರೂ ಇರುತ್ತವೆ.

ನ್ಯೂಕ್ಲಿಯರ್ ರಾಕೆಟ್: ನ್ಯೂಕ್ಲಿಯರ್ ರಾಕೆಟ್ ಎಂಜಿನ್ನಿನಲ್ಲಿ ದ್ರವಹೈಡ್ರೋಜನ್ನನ್ನು ಪುಟ್ಟ ನ್ಯೂಕ್ಲಿಯರ್ ರಿಯಾಕ್ಟರ್ ಒಂದರ ಹೊರಮೈಯ್ಯ ಕವಲುಗಳಲ್ಲಿ ಹಾಯಿಸಲಾಗುತ್ತದೆ.  ಅಲ್ಲಿನ ಅಗಾಧ ಉಷ್ಣತೆಯಿಂದ ಅನಿಲರೂಪಕ್ಕೆ ತೆರಳುವ ಹೈಡ್ರೋಜನ್ ಮುಂದೆ ಸೂಸುಬಾಯಿಯ ಮೂಲಕ ರಭಸದಿಂದ ಹೊರಬೀಳುತ್ತದೆ. ಇಂತಹ ರಾಕೆಟ್ಟಿನ್ನು ಅಮೆರಿಕ ಪರೀಕ್ಷಾರ್ಥವಾಗಿ ನಿರ್ಮಿಸಿದೆ.

ಸ್ಥಾಯಿವಿದ್ಯುತ್ ಅಥವಾ ಅಯಾನು ರಾಕೆಟ್ ಒಂದರಲ್ಲಿ ಪಾದರಸ ಅಥವಾ ಸೀಸೀಯಮ್ ಧಾತುವಿನ ಅಯಾನುಗಳನ್ನು ಅಂದರೆ ವಿದ್ಯುದಾವೇಶವುಳ್ಳ (ಚಾರ್ಜ್ಡ್) ಪರಮಾಣುಗಳನ್ನು ವೇಗೋತ್ಕರ್ಷಿಸಿ ನೂಕುಬಲವನ್ನು ಉತ್ಪಾದಿಸಲಾಗುತ್ತದೆ. ಇಂಥ ಚಿಕ್ಕ ರಾಕೆಟ್ಟುಗಳು ಈಗಾಗಲೇ ಕೃತಕ ಭೂಉಪಗ್ರಹಗಳಲ್ಲಿ ಬಳಕೆಗೆ ಬಂದಿವೆ.

ವಿದ್ಯುತ್ಕಾಂತೀಯ (ಎಲೆಕ್ಟ್ರೊಮ್ಯಾಗ್ನೆಟಿಕ್) ರಾಕೆಟ್ ಒಂದರಲ್ಲಿ ಇಂಧನ ವಿದ್ಯುತ್ ಚಾಪ (ಆರ್ಕ್) ಒಂದರ  ನೆರವಿನೊಡನೆ ಅಯಾನುಗಳ ಸಮೂಹವಾಗಿ ಪರಿವರ್ತನೆಗೊಂಡು ಅನಂತರ ವಿದ್ಯುತ್ಯಾಂತೀಯ ಕ್ಷೇತ್ರವೊಂದರ ನೆರವಿನೊಡನೆ ವೇಗೋತ್ಕರ್ಷಕ್ಕೆ ಈಡಾಗಿ ರಾಕೆಟ್ಟಿನ ಸೂಸುಬಾಯಿಯಿಂದ ಹೊರಬೀಳುತ್ತದೆ. ಈ ಬಗೆಯ ರಾಕೆಟ್ಟಿಗೆ ಪ್ಲಾಸ್ಮಾರಾಕೆಟ್ ಎಂದು ಹೆಸರು.

ಪರಿಜ್ಞಾಪಿ ರಾಕೆಟ್: ರಾಕೆಟ್‌ಗಳ ನಿರ್ಮಾಣದ ಸಂಬಂಧದಲ್ಲಿ ಭಾರತೀಯ ವಿಜ್ಞಾನಿಗಳು ಮೊದಲು ಗಮನಹರಿಸಿದ್ದು ಪರಿಜ್ಞಾಪಿ ರಾಕೆಟುಗಳು (ಸೌಂಡಿಂಗ್ ರಾಕೆಟ್ಸ್) ಎಂಬ ಪುಟ್ಟ ಸಂಶೋಧನಾ ರಾಕೆಟ್‌ಗಳ ನಿರ್ಮಾಣದತ್ತ. ಭಾರತದ ಅಂತರಿಕ್ಷ ಸಂಶೋಧನಾ ಕಾರ್ಯಕ್ರಮವನ್ನು 1963 ರಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದ್ದು ಸೌಂಡಿಂಗ್ ರಾಕೆಟ್ ಒಂದರ ಉಡಾವಣೆಯ ಮೂಲಕ. ಭೂವಾತಾವರಣ ಮೇಲ್ಭಾಗ, ರಾಕೆಟ್ ಭೂಕಾಂತಕ್ಷೇತ್ರ, ಅಂತರಿಕ್ಷದ ಪರಿಸರ ಮುಂತಾದ  ವಿಷಯಗಳ ಬಗ್ಗೆ ಸಂಶೋಧನೆ ನಡೆಸಲು ನೆರವಾಗುವ ಆ ಪುಟ್ಟ ರಾಕೆಟ್ಟುಗಳ ನಿರ್ಮಾಣದತ್ತ 1960 ರ ದಶಕದ ಉತ್ತರಾರ್ಧದಲ್ಲಿ ಗಮನಹರಿಸಿದ ಭಾರತೀಯ ವಿಜ್ಞಾನಿಗಳು ಅನಂತರ ಅದರಲ್ಲಿ ಯಶಸ್ಸನ್ನೂ ಗಳಿಸಿದರು. ಇಷ್ಟೇ ಅಲ್ಲದೆ ಸುಮಾರು ಎಂಟು ಹತ್ತು ಅಡಿ ಉದ್ದವಿದ್ದು ಘನನೋದಕಗಳನ್ನು  ಬಳಸುವ, ರೋಹಿಣಿ ಸರಣಿಯ ಅನೇಕ ಬಗೆಯ ಇತ್ತೀಚಿನದಾದ ರೋಹಿಣಿ ಅರ್. ಎಚ್. 560 ಮಾರ್ಕ್ 2 ಎಂಬ ರಾಕೆಟ್ ಸುಮಾರು ನೂರು ಕಿಲೋಗ್ರಾಮ್ ತೂಕದ ವೈಜ್ಞಾನಿಕ ಉಪಕರಣಗಳನ್ನು ನಾನೂರೈವತ್ತು ಕಿಲೋಮೀಟರ್ ಎತ್ತರಕ್ಕೆ ಕೊಂಡಯ್ಯಬಲ್ಲದಾಗಿದೆ.

ಭಾರತದಲ್ಲಿ ಆಧುನಿಕ ಕಾಲದಲ್ಲಿ ರಾಕೆಟ್‍ಗಳು

[ಬದಲಾಯಿಸಿ]

ಉಪಗ್ರಹ ಉಡಾವಣಾ ರಾಕೆಟ್‌ಗಳಿಗೆ ಸಂಬಂಧಿಸಿದಂತೆ ಕಾರ್ಯ ಭಾರತದಲ್ಲಿ 1970 ದಶಕದ ಸುಮಾರಿಗೆ ಪ್ರಾರಂಭವಾಯಿತು. ಆದರೆ ಅಂಥ ರಾಕೆಟ್ಟೊಂದರಲ್ಲಿ ಕೊಂಚ ಬದಲಾವಣೆಯನ್ನು ಮಾಡುವ ಮೂಲಕ ಅದನ್ನು ಕ್ಷಿಪಣಿಯಾಗಿಯೂ ಬಳಸಿಕೊಳ್ಳಬಹುದು ಎಂಬ ಕಾರಣದಿಂದಾಗಿ ಈ ಸಂಬಂಧದಲ್ಲಿ ನೆರವು ಯಾವ ದೇಶದಿಂದಲೂ ಬಹುಮಟ್ಟಿಗೆ ಒದಗಲಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಭಾರತದ ವಿಜ್ಞಾನಿಗಳು ಅಗತ್ಯವಾದ ತಂತ್ರಜ್ಞಾನಗಳೆಲ್ಲವನ್ನೂ ಸ್ವತಃ ತಾವೇ ಸಹನೆಯಿಂದ ರೂಪಿಸಿಕೊಳ್ಳಬೇಕಾಯಿತು. ಅನಂತರದ ಸುಮಾರು ಅರು ವರ್ಷಗಳ ಅವರ ಪರಿಶ್ರಮದ ಫಲವಾಗಿ ಭಾರತದ ಪ್ರಥಮ ಉಪಗ್ರಹ ಉಡಾವಣಾ ವಾಹನ ಎಸ್. ಎಲ್. ವಿ. - 3 1979 ರಲ್ಲಿ ಯಾನಕ್ಕೆ ಸಜ್ಜಾಯಿತು.

ಪೆನ್ಸಿಲಿನಾಕಾರದ ಎಸ್. ಎಲ್. ವಿ. - 3 ಎಂಬುದು ಒಂದರ ಮೇಲೊಂದು ಜೋಡಿಸಿದ ನಾಲ್ಕು ಹಂತಗಳಿಂದ ರೂಪಿತವಾದ ಒಂದು ಘನರಾಕೆಟ್ಟು. ಸುಮಾರು 20 ಮೀಟರುಗಳು ಎತ್ತರವಿದ್ದ ಆ ವಾಹನದ ಎಲ್ಲ ಹಂತಗಳೂ ಘನನೋದಕಗಳನ್ನು ಬಳಸುತ್ತಿದ್ದವು. 40 ಕಿಲೋಗ್ರಾಮ್ ತೂಕದ ಪುಟ್ಟ ಉಪಗ್ರಹವೊಂದನ್ನು ಸಾವಿರ ಕಿಲೊಮೀಟರುಗಳ ಒಳಗಿರುವ ದೀರ್ಘ ವೃತ್ತಾಕಾರದ (ಎಲಿಪ್ಟಿಕಲ್) ಕಕ್ಷೆಯೊಂದಕ್ಕೆ ಉಡಾಯಿಸುವ ಸಾಮರ್ಥ್ಯವನ್ನು ಎಸ್. ಎಲ್. ವಿ. -3 ಹೊಂದಿತ್ತು.

1980 ರಲ್ಲಿ ಜುಲೈ 18 ರಂದು ತನ್ನ ಎರಡನೆಯ ಯಾನದ ನಡುವೆ ಎಸ್. ಎಲ್. ವಿ - 3 ರಾಕೆಟ್ ಮೊದಲ ಬಾರಿ ಯಶಸ್ಸನ್ನು ಕಂಡಾಗ ಕೃತಕ ಭೂಉಪಗ್ರಹಗಳನ್ನು ಸ್ವತಃ ತಾನೇ ಉಡಾಯಿಸಿದ್ದ ಅಮೆರಿಕ, ರಷ್ಯ, ಬ್ರಿಟನ್,  ಫ್ರಾನ್ಸ್, ಜಪಾನ್ ಹಾಗೂ ಚೀನಗಳ ಪ್ರತಿಷ್ಠಿತ ಗುಂಪಿಗೆ ಭಾರತ ಸೇರಿತು. ರೋಹಿಣಿ ಉಪಗ್ರಹಗಳನ್ನು ಅನುಕ್ರಮವಾಗಿ 1981 ಹಾಗೂ 1983 ರಲ್ಲಿ ಕಕ್ಷೆಗೆ ಹಾರಿಬಿಟ್ಟಿತು.

ಈ ಯಶಸ್ಸಿನ ಅನಂತರ ಭಾರತ ಆ ರಾಕೆಟ್‌ಗಿಂತ ಹೆಚ್ಚು ಶಕ್ತಿಯುತವಾದ ಹಾಗೂ ನಿಖರತೆಯಿಂದ ಕೂಡಿದ್ದ ಎ. ಎಸ್. ಎಲ್. ವಿ ಎಂಬ ರಾಕೆಟ್ಟನ್ನು ನಿರ್ಮಿಸಿತು. ಎ. ಎಸ್. ಎಲ್. ವಿ ನಿರ್ಮಾಣ ಸಂಬಂಧದಲ್ಲಿ ಅನುಸರಿಸಲಾದ ವಿಧಾನಗಳು ತಾಂತ್ರಿಕವಾಗಿ ಮತ್ತಷ್ಟು ಸಂಕೀರ್ಣವಾಗಿದ್ದವು. ಇರುವ ಉದ್ದ ದೃಷ್ಟಿಯಿಂದ ಎ. ಎಸ್. ಎಲ್. ವಿ. - 3  ಹಿಂದಿನ ಎಸ್. ಎಲ್. ವಿ.  - 3 ಕ್ಕಿಂತಲೂ ಸ್ವಲ್ಪವೇ ಹೆಚ್ಚಿತ್ತೆನ್ನಬಹುದಾಗಿದ್ದರೂ ತನ್ನ ತಳಭಾಗದಲ್ಲಿ ಎರಡು ಹೊಸ ಬೂಸ್ಟರ್ ರಾಕೆಟ್‌ಗಳನ್ನು ಹೊಂದಿತ್ತು. ಸುಮಾರು ನೂರೈವತ್ತು ಕಿಲೋಗ್ರಾಮ್ ತೂಕದ ಉಪಗ್ರಹವೊಂದನ್ನು ನಾನೂರು ಕಿಲೋಮೀಟರುಗಳ ಎತ್ತರದ ವೃತ್ತಾಕಾರದ ಕಕ್ಷೆಗೆ ಉಡಾಯಿಸುವ ಮೂಲ ಉದ್ದೇಶದಿಂದ ನಿರ್ಮಿಸಲಾದ ಎ. ಎಸ್. ಎಲ್. ವಿ. 1992 ರ ಮೇ 20 ರಂದು ಜರುಗಿದ ತನ್ನ ಮೂರನೆಯ ಉಡಾವಣೆಯ ಅನಂತರ ಉಪಗ್ರಹವೊಂದನ್ನು ಯಶಸ್ವಿಯಾಗಿ ಭೂಕಕ್ಷೆಯೊಂದಕ್ಕೆ ಹಾರಿಬಿಟ್ಟಿತು. ಇದಾದ ಬಳಿಕದ ಅದರ ನಾಲ್ಕನೆಯ ಯಾನವೂ ಯಶಸ್ವಿಯಾಯಿತು.

ಎ. ಎಸ್. ಎಲ್. ವಿ. ಯ ಮೊದಲ ಮೂರು ಯಾನಗಳು ಜರುಗುತ್ತಿದ್ದ ವೇಳೆಯಲ್ಲಿ ಭಾರತದ ಬೃಹತ್ ರಾಕೆಟ್ ಎನಿಸಿದ ಪಿ. ಎಸ್. ಎಲ್. ವಿ ಯ ನಿರ್ಮಾಣವೂ ಮುಂದೆ ಸಾಗುತ್ತಿತ್ತು. ಪ್ರಪಂಚಮಟ್ಟದಲ್ಲಿಂದು ಬಳಕೆಯಲ್ಲಿರುವ ಕೆಲವು ರಾಕೆಟ್‌ಗಳಿಗೆ ಹೋಲಿಸಬಹುದಾದ ಪಿ. ಎಸ್. ಎಲ್. ವಿ ದೊಡ್ಡ ದ್ರವರಾಕೆಟ್ ಎಂಜಿನ್ನುಗಳನ್ನು ಹೊಂದಿರುವ ಭಾರತದ ಮೊದಲ ರಾಕೆಟ್. ಹದಿನೈದು ಮಹಡಿಗಳಷ್ಟು ಎತ್ತರವಿರುವ ಇದರ ಮೂರು ಹಾಗೂ ನಾಲ್ಕನೆಯ ಹಂತಗಳು ದ್ರವರಾಕೆಟ್ ಎಂಜಿನ್‌ಗಳನ್ನು ಹೊಂದಿವೆ. ಮೊದಲನೆಯ ಮತ್ತು ಮೂರನೆಯ ಹಂತಗಳು ಹಾಗೂ ಮೊದಲ ಹಂತದ ಸುತ್ತಲೂ ಅಳವಡಿಕೆಗೊಂಡಿರುವ ಅರು ಸ್ಟ್ರಾಪ್ ಆನ್ ಮೋಟರುಗಳು ಘನರಾಕೆಟ್‌ಗಳಾಗಿವೆ. ಜರುಗಿರುವ ಪಿ. ಎಸ್. ಎಲ್. ವಿ ಯ ಮೂರು ಉಡಾವಣೆಗಳ ಪೈಕಿ ಎರಡು ಯಶಸ್ವಿಯಾದವು.

ಭಾರತೀಯ ಅಂತರಿಕ್ಷಾವಿಜ್ಞಾನಿಗಳಿಂದ ಜಿ. ಎಸ್. ಎಲ್. ವಿ. ಎಂಬ ಮತ್ತಷ್ಟು ದೊಡ್ಡ ಹಂತಗಳುಳ್ಳ ಒಂದು ಉಪಗ್ರಹ ಉಡಾವಣಾವಾಹನ ತಯಾರಾಯಿತು. ಹದಿನೇಳು ಮಹಡಿಗಳಷ್ಟು ಎತ್ತರವಿರುವ ಅ ಬೃಹತ್ ರಾಕೆಟ್‌ನ ಮೊದಲ ಹಂತ ಘನರಾಕೆಟ್ ಎಂಜಿನ್ನನ್ನು ಹೊಂದಿರುತ್ತದೆ. ಆ ಹಂತವನ್ನು ಸುತ್ತುವರೆದಿರುವ ನಾಲ್ಕು ಸ್ಟ್ರಾಪ್ ಆನ್ ಮೋಟಾರುಗಳು ಹಾಗೂ ಮೊದಲ ಹಂತದ ಮೇಲೆ ಕುಳಿತ ಎರಡನೆಯ ಹಂತ ದ್ರವನೋದಕ ರಾಕೆಟ್ ಎಂಜಿನ್ನುಗಳಿಂದ ನಿರ್ಮಿತವಾಗಿವೆ. ಇನ್ನು ಜಿ. ಎಸ್. ಎಲ್. ವಿ ಯ ಮೂರನೆಯ ಹಂತ ದ್ರವರಾಕೆಟ್ ಎಂಜಿನ್ನುಗಳ ಪೈಕಿ ಹೆಚ್ಚು ದಕ್ಷವಾದ ಕ್ರಯೋಜನಿಕ್ ರಾಕೆಟ್ ಎಂಜಿನ್ನನ್ನು ಹೊಂದಿರುತ್ತದೆ.

ಸುಮಾರು ಎರಡು ಸಾವಿರ ಕಿಲೋಗ್ರಾಮ್ ತೂಕದ ಇನ್ಸಾಟ್ - 2 ಉಪಗ್ರಹ ಒಂದನ್ನು ಸರಣಿಯ 36 ಸಾವಿರ ಕಿಲೋಮೀಟರ್ ಎತ್ತರದ ಭೂಸ್ಥಿರಕಕ್ಷೆಗೆ (ಜಿಯೋಸ್ಟೇಷನರಿ ಆರ್ಬಿಟ್) ದೂಡುವುದಕ್ಕೆ ಅನುವಾಗುವ ಮಧ್ಯಂತರ ಕಕ್ಷೆಯೊಂದಕ್ಕೆ ಹಾರಿಬಿಡುವ ಸಾಮರ್ಥ್ಯವಿರುವಂತೆ.  ಜಿ. ಎಸ್. ಎಲ್. ವಿ ಯನ್ನು ನಿರ್ಮಿಸಲಾಗಿತ್ತು. ಆ ಬೃಹತ್ ರಾಕೆಟ್ ವಾಹನದ ತೂಕ ನಾಲ್ಕು ಲಕ್ಷ ಕಿಲೊಗ್ರಾಮ್‌ಗಳು (ನಾನೂರು ಟನ್).  ಜಿ. ಎಸ್. ಎಲ್. ವಿ ರಾಕೆಟ್ಟಿನ ಕ್ರಯೊಜನಿಕ್ ಹಂತದ ನಿರ್ಮಾಣದ ಬಗ್ಗೆ ಭಾರತದ ಅಂತರಿಕ್ಷ ವಿಜ್ಞಾನಿಗಳು ತೀವ್ರ ಗಮನಹರಿಸಿದ್ದರು.

ವಿನ್ಯಾಸ

[ಬದಲಾಯಿಸಿ]

ರಾಕೆಟ್‌ನ ವಿನ್ಯಾಸವು ಕಪ್ಪು ಪುಡಿ ತುಂಬಿದ ರಟ್ಟಿನ ನಳಿಕೆಯಷ್ಟು ಸರಳವಾಗಿರಬಹುದು. ಆದರೆ ಒಂದು ದಕ್ಷ ಮತ್ತು ನಿಖರ ರಾಕೆಟ್ ಅಥವಾ ಕ್ಷಿಪಣಿ ತಯಾರಿಸಲು ಅನೇಕ ಕಠಿಣ ಸಮಸ್ಯೆಗಳನ್ನು ಜಯಿಸಬೇಕಾಗುತ್ತದೆ. ಪ್ರಮುಖ ತೊಂದರೆಗಳಲ್ಲಿ ದಹನ ಕೋಶವನ್ನು ತಂಪಾಗಿಸುವುದು, ಇಂಧನವನ್ನು ಒಳಸೇರಿಸುವುದು (ದ್ರವ ಇಂಧನವಿದ್ದಾಗ), ಮತ್ತು ಚಲನೆಯ ದಿಕ್ಕನ್ನು ನಿಯಂತ್ರಿಸುವುದು ಹಾಗೂ ಸರಿಪಡಿಸುವುದು ಸೇರಿವೆ.[೬೩]

ಅವಯವಗಳು(ರಚನಾಂಗಗಳು)

[ಬದಲಾಯಿಸಿ]

ರಾಕೆಟ್‍ಗಳು ನೋದಕ, (ನೋದಕ ತೊಟ್ಟಿಯಂತಹ) ನೋದಕವನ್ನು ಹಾಕಲು ಸ್ಥಳ ಮತ್ತು ಒಂದು ಸೂಸುಬಾಯಿಯನ್ನು ಹೊಂದಿರುತ್ತವೆ. ಇವು ಒಂದು ಅಥವಾ ಹೆಚ್ಚು ರಾಕೆಟ್ ಎಂಜಿನ್‍ಗಳು, (ರೆಕ್ಕೆಗಳು, ನೋದನ ಬಲ ನಿರ್ದೇಶನಕ್ಕೆ ವರ್ನಿಯರ್ ಎಂಜಿನ್‍ಗಳು ಅಥವಾ ಎಂಜಿನ್ ಗಿಂಬಲ್‍ಗಳು, ಜೈರೋಸ್ಕೋಪ್‌ಗಳಂತಹ) ದಿಕ್ಕು ಸ್ಥಿರೀಕರಣ ಸಾಧನ(ಗಳು) ಮತ್ತು ಈ ಅವಯಗಳನ್ನು ಒಟ್ಟಾಗಿ ಹಿಡಿದಿಡುವ ಒಂದು ರಚನೆಯನ್ನು (ಸಾಮಾನ್ಯವಾಗಿ ಏಕಕಾಯಕ ರಚನೆ) ಹೊಂದಿರಬಹುದು. ಅತಿ ವೇಗದ ವಾತಾವರಣ ಬಳಕೆಗೆ ಉದ್ದೇಶಿತವಾದ ರಾಕೆಟ್‍ಗಳು ನಾಸಿಕ ಶಂಕುವಿನಂತಹ ವಾಯುಬಲ ಸುಗಮಕಾರಕಗಳನ್ನೂ ಹೊಂದಿರುತ್ತವೆ. ಇದು ಸಾಮಾನ್ಯವಾಗಿ ಸರಕನ್ನು ಹಿಡಿದಿಟ್ಟುಕೊಂಡಿರುತ್ತದೆ.[೬೪]

ಈ ಅವಯವಗಳಲ್ಲದೇ, ರಾಕೆಟ್‍ಗಳು ಯಾವುದೇ ಸಂಖ್ಯೆಯ ಇತರ ಘಟಕಗಳನ್ನು ಹೊಂದಿರಬಹುದು, ಉದಾಹರಣೆಗಾಗಿ ರೆಕ್ಕೆಗಳು (ರಾಕೆಟ್ ವಿಮಾನಗಳು), ಪ್ಯಾರಾಶೂಟ್‌ಗಳು, ಚಕ್ರಗಳು (ರಾಕೆಟ್ ಕಾರ್‌ಗಳು), ಒಂದು ಅರ್ಥದಲ್ಲಿ ಒಬ್ಬ ವ್ಯಕ್ತಿಯೂ (ರಾಕೆಟ್ ಬೆಲ್ಟ್ ). ವಾಹನಗಳು ಹಲವುವೇಳೆ ನೌಕಾಯಾನ ವ್ಯವಸ್ಥೆಗಳು ಮತ್ತು ಮಾರ್ಗದರ್ಶನ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಉಪಗ್ರಹ ನೌಕಾಯಾನ ಮತ್ತು ಜಡತ್ವ ನೌಕಾಯಾನ ವ್ಯವಸ್ಥೆಗಳನ್ನು ಬಳಸುತ್ತವೆ.

ಎಂಜಿನ್‍ಗಳು

[ಬದಲಾಯಿಸಿ]

ರಾಕೆಟ್ ಎಂಜಿನ್‍ಗಳು ಜೆಟ್ ನೋದನ ತತ್ವವನ್ನು ಬಳಸುತ್ತವೆ.[] ರಾಕೆಟ್‍ಗಳಿಗೆ ಶಕ್ತಿ ಒದಗಿಸುವ ರಾಕೆಟ್ ಎಂಜಿನ್‍ಗಳು ವಿಭಿನ್ನ ವಿಧಗಳಲ್ಲಿ ಬರುತ್ತವೆ. ಬಹುತೇಕ ಪ್ರಸಕ್ತ ರಾಕೆಟ್‍ಗಳು ರಾಸಾಯನಿಕವಾಗಿ ಶಕ್ತಿ ಪಡೆಯುವ ರಾಕೆಟ್‍ಗಳಾಗಿವೆ (ಸಾಮಾನ್ಯವಾಗಿ ಅಂತರ್ದಹನ ಯಂತ್ರಗಳು,[೬೫],ಆದರೆ ಕೆಲವು ವಿಘಟಿಸುವ ಏಕನೋದಕವನ್ನು ಬಳಸುತ್ತವೆ) ಮತ್ತು ಬಿಸಿಯಾದ ಅನಿಲವನ್ನು ಹೊರಸೂಸುತ್ತವೆ. ರಾಕೆಟ್ ಎಂಜಿನ್ ಅನಿಲ ನೋದಕಗಳು, ಘನ ನೋದಕ, ದ್ರವ ನೋದಕ ಅಥವಾ ಘನ ಮತ್ತು ದ್ರವ ಎರಡರ ಮಿಶ್ರಣವನ್ನು ಬಳಸಬಹುದು.[] ಕೆಲವು ರಾಕೆಟ್‍ಗಳು ನೋದಕದ (ನೋದಕಗಳ) ರಾಸಾಯನಿಕ ಕ್ರಿಯೆಯಲ್ಲದ ಒಂದು ಮೂಲದಿಂದ ಪೂರೈಸಲಾಗಿರುವ ಉಷ್ಣಶಕ್ತಿ ಅಥವಾ ಒತ್ತಡವನ್ನು ಬಳಸುತ್ತವೆ, ಉದಾಹರಣೆಗೆ ಹಬೆ ರಾಕೆಟ್‍ಗಳು, ಸೌರೋಷ್ಣ ರಾಕೆಟ್‌ಗಳು, ಬೈಜಿಕ ಉಷ್ಣಶಕ್ತಿ ರಾಕೆಟ್ ಎಂಜಿನ್‍ಗಳು ಅಥವಾ ಜಲ ರಾಕೆಟ್ ಅಥವಾ ತಂಪು ಅನಿಲ ನೂಕುಕಾರಿಗಳಂತಹ ಸರಳ ಒತ್ತಡಕ್ಕೊಳಪಡಿಸಿದ ರಾಕೆಟ್‍ಗಳು.[] ದಹಿಸುವ ನೋದಕಗಳನ್ನು ಬಳಸಿದಾಗ, ದಹನ ಕೋಶದಲ್ಲಿ ಇಂಧನ ಮತ್ತು ಉತ್ಕರ್ಷಣಕಾರಿಯ ನಡುವೆ ರಾಸಾಯನಿಕ ಕ್ರಿಯೆಯನ್ನು ಆರಂಭಿಸಲಾಗುತ್ತದೆ, ಮತ್ತು ಪರಿಣಾಮರೂಪಿ ಬಿಸಿ ಅನಿಲಗಳು ರಾಕೆಟ್‍ನ ಹಿಂಬದಿಯ ತುದಿಯಲ್ಲಿರುವ ರಾಕೆಟ್ ಎಂಜಿನ್‍ನ ಸೂಸುಬಾಯಿಗಳ ಮೂಲಕ ಹೊರಗೆ ವೇಗೋತ್ಕರ್ಷಿತಗೊಳ್ಳುತ್ತವೆ. ಎಂಜಿನ್ ಮೂಲಕ ಈ ಅನಿಲಗಳ ವೇಗೋತ್ಕರ್ಷವು ದಹನ ಕೋಶ ಮತ್ತು ಸೂಸುಬಾಯಿ ಮೇಲೆ ಬಲವನ್ನು ("ನೋದನ ಬಲ") ವಿನಿಯೋಗಿಸಿದಾಗ ವಾಹನವನ್ನು ಮುನ್ನೂಕುತ್ತದೆ (ನ್ಯೂಟನ್‍ನ ಮೂರನೆಯ ನಿಯಮದ ಪ್ರಕಾರ).[]

ರಾಕೆಟ್ ನೋದಕವು, ಸಾಮಾನ್ಯವಾಗಿ ಯಾವುದೋ ಬಗೆಯ ನೋದಕ ತೊಟ್ಟಿ ಅಥವಾ ಕೋಶದಲ್ಲಿ, ಸಂಗ್ರಹಿಸಿಡಲಾದ ದ್ರವ್ಯರಾಶಿಯಾಗಿರುತ್ತದೆ. ಇದನ್ನು ನೋದನ ಬಲವನ್ನು ಸೃಷ್ಟಿಸಲು ತರಲ ಧಾರೆಯ ರೂಪದಲ್ಲಿ ರಾಕೆಟ್ ಎಂಜಿನ್‍ನಿಂದ ಹೊರಸೂಸಲಾದ ನೋದಕ ರಾಶಿಯಾಗಿ ಬಳಸಲಾಗುತ್ತದೆ.[] ರಾಸಾಯನಿಕ ರಾಕೆಟ್‍ಗಳಲ್ಲಿ ಹಲವುವೇಳೆ ನೋದಕಗಳು ದ್ರವ ಜಲಜನಕ ಅಥವಾ ಸೀಮೆಎಣ್ಣೆಯಂತಹ ಇಂಧನವಾಗಿರುತ್ತವೆ. ಇಂಧನವನ್ನು ದ್ರವ ಆಮ್ಲಜನಕ ಅಥವಾ ನೈಟ್ರಿಕ್ ಆಮ್ಲದಂತಹ ಉತ್ಕರ್ಷಣಕಾರಿಯಿಂದ ದಹಿಸಿದಾಗ ದೊಡ್ಡ ಪ್ರಮಾಣದಲ್ಲಿ ಬಹಳ ಬಿಸಿಯಾದ ಅನಿಲ ಸೃಷ್ಟಿಯಾಗುತ್ತದೆ. ಉತ್ಕರ್ಷಣಕಾರಿಯನ್ನು ಪ್ರತ್ಯೇಕವಾಗಿ ಇಟ್ಟು ದಹನ ಕೋಶದಲ್ಲಿ ಮಿಶ್ರಣ ಮಾಡಲಾಗುತ್ತದೆ, ಅಥವಾ ಘನ ರಾಕೆಟ್‍ಗಳಲ್ಲಿರುವಂತೆ ಮೊದಲೇ ಮಿಶ್ರಿತವಾಗಿ ಬರುತ್ತದೆ.

ಕೆಲವೊಮ್ಮೆ ನೋದಕವನ್ನು ದಹಿಸಲಾಗುವುದಿಲ್ಲ, ಆದರೂ ಇದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ನೋದಕವು ಹೈಡ್ರಜ಼ೀನ್, ನೈಟ್ರಸ್ ಆಕ್ಸೈಡ್ ಅಥವಾ ಹೈಡ್ರೊಜನ್ ಪೆರಾಕ್ಸೈಡ್‍ನಂತಹ ಏಕನೋದಕವಾಗಿರಬಹುದು. ಇವನ್ನು ವೇಗವರ್ಧಿತವಾಗಿ ಬಿಸಿ ಅನಿಲವಾಗಿ ವಿಘಟಿಸಬಹುದು.

ಪರ್ಯಾಯವಾಗಿ, ಬಾಹ್ಯವಾಗಿ ಬಿಸಿ ಮಾಡಬಹುದಾದ ಜಡ ನೋದಕವನ್ನು ಬಳಸಬಹುದು, ಉದಾಹರಣೆಗೆ ಹಬೆ ರಾಕೆಟ್, ಸೌರೋಷ್ಣ ರಾಕೆಟ್ ಅಥವಾ ಬೈಜಿಕ ಉಷ್ಣಶಕ್ತಿ ರಾಕೆಟ್‌ಗಳಲ್ಲಿ.[]

ನಿಲುವು ನಿಯಂತ್ರಣ ನೂಕುಕಾರಿಗಳಂತಹ ಹೆಚ್ಚು ಸಣ್ಣ ಮತ್ತು ಕಡಿಮೆ ಕಾರ್ಯಕ್ಷಮತೆಯ ರಾಕೆಟ್‍ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಅಗತ್ಯ ಕಡಿಮೆಯಿರುತ್ತದೆ. ಹಾಗಾಗಿ ನೋದಕವಾಗಿ ಒತ್ತಡಕ್ಕೊಳಪಡಿಸಿದ ತರಲವನ್ನು ಬಳಸಲಾಗುತ್ತದೆ. ಇದು ಸರಳವಾಗಿ ಮುನ್ನೂಕುವ ಸೂಸುಬಾಯಿಯ ಮೂಲಕ ಬಾಹ್ಯಾಕಾಶ ನೌಕೆಯಿಂದ ಹೊರಬರುತ್ತದೆ.[]

ಉಪಯೋಗಗಳು

[ಬದಲಾಯಿಸಿ]

ವಾಹನವು ನೋದನಕ್ಕೆ ಉಪಯುಕ್ತವಾಗಿ ಬಳಸಬಹುದಾದ ಯಾವುದೇ ಇತರ ಪದಾರ್ಥ (ಭೂಮಿ,ನೀರು ಅಥವಾ ಗಾಳಿ) ಅಥವಾ ಬಲವಿಲ್ಲದಿದ್ದಾಗ (ಗುರುತ್ವಾಕರ್ಷಣೆ, ಕಾಂತತ್ವ, ಬೆಳಕು) ತಮ್ಮ ಸ್ವಂತದ ನೋದಕವನ್ನು ಹೊತ್ತೊಯ್ಯುವ ರಾಕೆಟ್‍ಗಳು ಅಥವಾ ಇತರ ಹೋಲುವ ಪ್ರತಿಕ್ರಿಯಾ ಸಾಧನಗಳನ್ನು ಬಳಸಬೇಕು, ಉದಾಹರಣೆಗೆ ಅಂತರಿಕ್ಷದಲ್ಲಿ. ಈ ಸಂದರ್ಭಗಳಲ್ಲಿ, ಬಳಸಬೇಕಾದ ಎಲ್ಲ ನೋದಕವನ್ನು ಹೊತ್ತೊಯ್ಯಬೇಕಾಗುತ್ತದೆ.

ಆದರೆ, ಅವು ಇತರ ಸಂದರ್ಭಗಳಲ್ಲಿಯೂ ಪ್ರಯೋಜನಕಾರಿಯಾಗಿವೆ:

ಕ್ಷಿಪ್ತ ಪ್ರತಿರೋಧಕ ಬಾಣ ಕ್ಷಿಪಣಿಯ ಉಡಾವಣೆ

ಕೆಲವು ಸೇನಾ ಶಸ್ತ್ರಾಸ್ತ್ರಗಳು ತಮ್ಮ ಗುರಿಗಳತ್ತ ಸಿಡಿತಲೆಗಳನ್ನು ಚಿಮ್ಮಿಸಲು ರಾಕೆಟ್‍ಗಳನ್ನು ಬಳಸುತ್ತವೆ. ಒಟ್ಟಾಗಿ ಒಂದು ರಾಕೆಟ್ ಮತ್ತು ಅದರ ಸಿಡಿತಲೆಯನ್ನು ಸಾಮಾನ್ಯವಾಗಿ ಕ್ಷಿಪಣಿ ಎಂದು ಕರೆಯಲಾಗುತ್ತದೆ, ವಿಶೇಷವಾಗಿ ಆಯುಧವು ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದಾಗ (ಎಲ್ಲ ಕ್ಷಿಪಣಿಗಳು ರಾಕೆಟ್ ಎಂಜಿನ್‍ಗಳನ್ನು ಬಳಸುವುದಿಲ್ಲ, ಕೆಲವು ಗಾಳಿ ಉಸಿರಾಟದ ಜೆಟ್‍ಗಳು, ಟರ್ಬೋಜೆಟ್‍ಗಳು, ಪಲ್ಸ್ ಜೆಟ್‍ಗಳು ಅಥವಾ ರ್‍ಯಾಮ್‍ಜೆಟ್‍ಗಳನ್ನು ಬಳಸುತ್ತವೆ). ಹಲವಾರು ಮೈಲಿಗಳ ವ್ಯಾಪ್ತಿಯಲ್ಲಿ ತೀವ್ರ ವೇಗದಲ್ಲಿ ತಮ್ಮ ಗುರಿಗಳನ್ನು ತೊಡಗಿಸಿಕೊಳ್ಳಲು ಟ್ಯಾಂಕ್ ನಾಶಕ ಮತ್ತು ವಿಮಾನ ನಾಶಕ ಕ್ಷಿಪಣಿಗಳು ರಾಕೆಟ್ ಎಂಜಿನ್‍ಗಳನ್ನು ಬಳಸುತ್ತವೆ. ಸಾವಿರಾರು ಮೈಲಿ ದೂರಕ್ಕೆ ಬಹು ಪರಮಾಣು ಸಿಡಿತಲೆಗಳನ್ನು ಕಳುಹಿಸಲು ಖಂಡಾಂತರ ಕ್ಷಿಪಣಿಗಳನ್ನು ಬಳಸಬಹುದು. ಕ್ಷಿಪ್ತ ಪ್ರತಿರೋಧಕ ಕ್ಷಿಪಣಿಗಳು ಅವನ್ನು ನಿಲ್ಲಿಸಲು ಪ್ರಯತ್ನಿಸುತ್ತವೆ.

ವಿಜ್ಞಾನ ಮತ್ತು ಸಂಶೋಧನೆ

[ಬದಲಾಯಿಸಿ]
ಬಂಪರ್ ಸೌಂಡಿಂಗ್ ರಾಕೆಟ್

ಭೂಮಿಯ ಮೇಲ್ಮೈ ಮೇಲೆ ೫೦ kilometers (೩೦ mi) ನಿಂದ ೧,೫೦೦ kilometers (೯೩೦ mi) ವರೆಗೆ ಸೂಚ್ಯಂಕಗಳನ್ನು ತೆಗೆದುಕೊಳ್ಳುವ ಉಪಕರಣಗಳನ್ನು ಹೊತ್ತೊಯ್ಯಲು ಮಾಪನ ರಾಕೆಟ್‍ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಎತ್ತರಗಳು ಹವಾಮಾನ ಬಲೂನ್‍ಗಳು ಮತ್ತು ಉಪಗ್ರಹಗಳಿಂದ ತಲುಪಬಹುದಾದ ಎತ್ತರದ ನಡುವೆ ಇವೆ.[೬೬]

ರೈಲು ಕಂಬಿಯ ಮೇಲೆ ಅತಿ ಹೆಚ್ಚು ವೇಗವಾಗಿ ರಾಕೆಟ್ ಸ್ಲೆಡ್‍ಗಳಿಗೆ ಮುಂಚಲನೆ ಕೊಡಲು ಕೂಡ ರಾಕೆಟ್ ಎಂಜಿನ್‍ಗಳನ್ನು ಬಳಸಲಾಗುತ್ತದೆ. ಇದಕ್ಕೆ ವಿಶ್ವ ದಾಖಲೆಯು ಮಾಕ್ ೮.೫ ರಷ್ಟಿದೆ.[೬೭]

ಬಾಹ್ಯಾಕಾಶ ಹಾರಾಟ

[ಬದಲಾಯಿಸಿ]
ಉಡಾವಣಾ ಹಂತದ ವೇಳೆ ಸ್ಪೇಸ್ ಶಟಲ್ ಅಟ್ಲಾಂಟಿಸ್

ವಿಶಾಲ ರಾಕೆಟ್‍ಗಳನ್ನು ಸಾಮಾನ್ಯವಾಗಿ ಒಂದು ಉಡಾವಣೆ ಕಟ್ಟೆಯಿಂದ ಉಡಾಯಿಸಲಾಗುತ್ತದೆ. ಅದು ಜ್ವಲನದ ನಂತರ ಕೆಲವು ಸೆಕೆಂಡುಗಳವರೆಗೆ ಸ್ಥಿರ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ಅವುಗಳ ಅತಿ ಹೆಚ್ಚಿನ ನಿಷ್ಕಾಸ ವೇಗದ - ೨,೫೦೦ ರಿಂದ ೪,೫೦೦ ಮೀ/ಸೆ. ಕಾರಣದಿಂದ (ಮ್ಯಾಕ್ ~೧೦+), ಬಹಳ ಹೆಚ್ಚು ವೇಗ ಬೇಕಾದಾಗ ರಾಕೆಟ್‍ಗಳು ವಿಶೇಷವಾಗಿ ಉಪಯುಕ್ತವಾಗುತ್ತವೆ, ಉದಾಹರಣೆಗೆ ಕಕ್ಷೀಯ ವೇಗ ಬೇಕಾದಾಗ (ಮ್ಯಾಕ್ ೨೪+[೬೮]). ಕಕ್ಷೀಯ ವಿಕ್ಷೇಪ ಪಥಗಳಲ್ಲಿ ಗಗನನೌಕೆಗಳನ್ನು ಬಿಟ್ಟಾಗ ಅವು ಸಾಮಾನ್ಯವಾಗಿ ಕೃತಕ ಉಪಗ್ರಹಗಳಾಗಿ ಮಾರ್ಪಟ್ಟು ಅನೇಕ ವಾಣಿಜ್ಯ ಉದ್ದೇಶಗಳಿಗೆ ಬಳಕೆಗೆ ಬರುತ್ತವೆ. ವಾಸ್ತವವಾಗಿ ಬಾಹ್ಯಾಕಾಶ ನೌಕೆಯನ್ನು ಕಕ್ಷೆಯಲ್ಲಿ ಮತ್ತು ಅದರ ಆಚೆಗೆ ಉಡಾವಣೆ ಮಾಡಲು ರಾಕೆಟ್‍ಗಳು ಏಕೈಕ ದಾರಿಯಾಗಿವೆ.[೬೯] ಬಾಹ್ಯಾಕಾಶ ನೌಕೆಯು ಕಕ್ಷೆಗಳನ್ನು ಬದಲಾಯಿಸುವಾಗ ಅಥವಾ ಕೆಳಗಿಳಿಯಲು ಕಕ್ಷೆಯನ್ನು ಬಿಡುವಾಗ, ಅವುಗಳನ್ನು ಕ್ಷಿಪ್ರವಾಗಿ ವೇಗೋತ್ಕರ್ಷಿಸಲು ಕೂಡ ರಾಕೆಟ್‍ಗಳನ್ನು ಬಳಸಲಾಗುತ್ತದೆ. ಜೊತೆಗೆ, ಅವರೋಹಣಕ್ಕೆ ಅತಿ ಸನಿಹದಲ್ಲಿ ದೃಢ ಪ್ಯಾರಾಶೂಟ್ ಭೂಸ್ಪರ್ಶವನ್ನು ಮೆದುಗೊಳಿಸಲು ರಾಕೆಟ್‍ನ್ನು ಬಳಸಬಹುದು.

ರಕ್ಷಣೆ

[ಬದಲಾಯಿಸಿ]
ಕಾರ್ಯಕಾರಿಯಲ್ಲದ ಚಾಲಕ ತಂಡ ಮಾಡ್ಯೂಲ್‍ನೊಂದಿಗೆ ಅಪೊಲೊ LES ಕಟ್ಟೆ ವೈಫಲ್ಯ ಪರೀಕ್ಷೆ.

ಅಪಾಯದಲ್ಲಿರುವ ಹಡಗಿಗೆ ಹಗ್ಗವನ್ನು ತಳ್ಳಲು ರಾಕೆಟ್‍ಗಳನ್ನು ಬಳಸಲಾಗುತ್ತಿತ್ತು. ಆಗ ಹಡಗಿನ ಮೇಲಿರುವವರನ್ನು ರಕ್ಷಿಸಲು ಷರಾಯಿ ತೇಲುವೆಗಳನ್ನು ಬಳಸಬಹುದು. ತುರ್ತು ಉರಿಗಳನ್ನು ಉಡಾವಣೆ ಮಾಡಲು ಕೂಡ ರಾಕೆಟ್‍ಗಳನ್ನು ಬಳಸಲಾಗುತ್ತದೆ.

ಕೆಲವು ತಂಡವುಳ್ಳ ರಾಕೆಟ್‍ಗಳು, ಗಮನಾರ್ಹವಾಗಿ ಸ್ಯಾಟರ್ನ್ ವಿ[೭೦] ಮತ್ತು ಸೋಯುಜ್‌ಗ‌ಳು[೭೧] ಉಡಾವಣಾ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಇದು ಒಂದು ಚಿಕ್ಕ, ಸಾಮಾನ್ಯವಾಗಿ ಘನ ರಾಕೆಟ್ ಆಗಿದ್ದು ಕ್ಷಣಗಳ ಎಚ್ಚರಿಕೆಯೊಂದಿಗೆ ಮುಖ್ಯ ವಾಹನದಿಂದ ತಂಡವುಳ್ಳ ಕೋಣೆಯನ್ನು ಸುರಕ್ಷತೆ ಕಡೆಗೆ ಎಳೆಯಲು ಸಮರ್ಥವಾಗಿರುತ್ತದೆ. ಈ ಬಗೆಯ ವ್ಯವಸ್ಥೆಗಳನ್ನು, ಪರೀಕ್ಷೆ ಮತ್ತು ಹಾರಾಟ ಎರಡರಲ್ಲೂ, ಹಲವಾರು ಬಾರಿ ನಡೆಸಲಾಗಿದೆ, ಮತ್ತು ಪ್ರತಿ ಸಲವೂ ಸರಿಯಾಗಿ ನಡೆದಿದೆ.

ಹಾರಾಟ ನಿಯಂತ್ರಣ ತಪ್ಪಿಹೋದಾಗ ವಾಹನದಿಂದ ತಂಡವನ್ನು ದೂರಕ್ಕೆ ಸುರಕ್ಷತೆಯೆಡೆಗೆ ತಳ್ಳಲು ಘನ ರಾಕೆಟ್‍ನಿಂದ ಮುಂಚಲನೆ ಪಡೆವ ನಿಷ್ಕಾಸನ ಆಸನಗಳನ್ನು ಅನೇಕ ಸೇನಾ ವಿಮಾನಗಳಲ್ಲಿ ಬಳಸಲಾಗುತ್ತದೆ.[೭೨]

ಹವ್ಯಾಸ, ಕ್ರೀಡೆ ಮತ್ತು ಮನೋರಂಜನೆ

[ಬದಲಾಯಿಸಿ]

ಹವ್ಯಾಸಿಗಳು ವಿವಿಧ ತರಹದ ಮಾದರಿ ರಾಕೆಟ್‍ಗಳನ್ನು ನಿರ್ಮಿಸಿ ಹಾರಿಸುತ್ತಾರೆ. ವಾಣಿಜ್ಯಿಕವಾಗಿ ಲಭ್ಯವಿರುವ ಸುಡುಮದ್ದುಗಳು ಮತ್ತು ಕುಶಲ ಸುಡುಮದ್ದು ಪ್ರದರ್ಶನಗಳು ಎರಡನ್ನೂ ಉಡಾವಣೆ ಮಾಡಲು ರಾಕೆಟ್‍ಗಳನ್ನು ಬಳಸಲಾಗುತ್ತದೆ.

ಹೈಡ್ರೊಜೆನ್ ಪೆರಾಕ್ಸೈಡ್ ರಾಕೆಟ್‍ಗಳನ್ನು ಜೆಟ್ ಪ್ಯಾಕ್‌ಗಳಿಗೆ ಶಕ್ತಿ ಒದಗಿಸಲು ಬಳಸಲಾಗುತ್ತದೆ,[೭೩] ಮತ್ತು ಕಾರುಗಳಿಗೆ ಶಕ್ತಿ ಒದಗಿಸಲು ಇವನ್ನು ಬಳಸಲಾಗಿದೆ. ಒಂದು ರಾಕೆಟ್ ಕಾರು (ಅನಧಿಕೃತ ಆದರೂ) ಸಾರ್ವಕಾಲಿಕ ಡ್ರ್ಯಾಗ್ ರೇಸಿಂಗ್ ದಾಖಲೆಯನ್ನು ಹೊಂದಿದೆ.[೭೪]

ಗದ್ದಲ

[ಬದಲಾಯಿಸಿ]

ಅತಿ ಚಿಕ್ಕ ಗಾತ್ರದವುಗಳನ್ನು ಹೊರತುಪಡಿಸಿ ಎಲ್ಲ ರಾಕೆಟ್‍ಗಳ ನಿಷ್ಕಾಸವು ಇತರ ಎಂಜಿನ್‍ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಬಹಳ ಗದ್ದಲವುಳ್ಳದ್ದು. ಶಬ್ದಾತೀತ ನಿಷ್ಕಾಸವು ಸುತ್ತಲಿರುವ ಗಾಳಿಯೊಂದಿಗೆ ಬೆರೆತಾಗ, ಆಘಾತ ತರಂಗಗಳು ರೂಪುಗೊಳ್ಳುತ್ತವೆ. ಈ ಆಘಾತ ತರಂಗಗಳ ಶಬ್ದದ ತೀವ್ರತೆಯು ರಾಕೆಟ್‌ನ ಗಾತ್ರ ಜೊತೆಗೆ ನಿಷ್ಕಾಸದ ವೇಗವನ್ನು ಅವಲಂಬಿಸಿರುತ್ತದೆ. ದೊಡ್ಡದಾದ, ಹೆಚ್ಚಿನ ಕಾರ್ಯಕ್ಷಮತೆಯ ರಾಕೆಟ್‌ಗಳ ಶಬ್ದದ ತೀವ್ರತೆಯು ಹತ್ತಿರದ ವ್ಯಾಪ್ತಿಯಲ್ಲಿ ಸಂಭಾವ್ಯವಾಗಿ ಯಾರನ್ನಾದರೂ ಕೊಲ್ಲಬಹುದು.[೭೫]

ಸ್ಪೇಸ್ ಶಟಲ್ ತನ್ನ ಕೇಂದ್ರ ಕಾರ್ಯಸ್ಥಾನದ ಸುತ್ತಲೂ 200 dB(A) ಕ್ಕಿಂತ ಹೆಚ್ಚು ಶಬ್ದವನ್ನು ಉತ್ಪಾದಿಸುತ್ತದೆ. ಸ್ಯಾಟರ್ನ್ ವಿ ನ ಉಡಾವಣೆಯು ಉಡಾವಣಾ ತಾಣದಿಂದ ಗಣನೀಯವಾಗಿ ದೂರವಿರುವ ಭೂಕಂಪನಮಾಪಕಗಳಲ್ಲಿ ಪತ್ತೆಯಾಗಿದೆ.

ರಾಕೆಟ್ ನೆಲಕ್ಕೆ ಹತ್ತಿರದಲ್ಲಿದ್ದಾಗ ಶಬ್ದವು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತದೆ, ಏಕೆಂದರೆ ಇಂಜಿನ್‌ಗಳಿಂದ ಬರುವ ಶಬ್ದವು ಹೊಗೆಮೋಡದಿಂದ ದೂರಕ್ಕೆ ಹೊರಸೂಸುತ್ತದೆ, ಜೊತೆಗೆ ನೆಲದಿಂದ ಪ್ರತಿಫಲಿಸುತ್ತದೆ. ಛಾವಣಿಗಳಿರುವ ಜ್ವಾಲಾ ಕಂದಕಗಳು, ಹೊಗೆಮೋಡದ ಸುತ್ತ ನೀರನ್ನು ಒಳನುಗ್ಗಿಸಿ ಮತ್ತು ಕೋನದಲ್ಲಿ ಹೊಗೆಮೋಡವನ್ನು ಬೇರೆಡೆ ತಿರುಗಿಸುವ ಮೂಲಕ ಈ ಶಬ್ದವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು.[೭೫]

ಸಿಬ್ಬಂದಿಯುಳ್ಳ ರಾಕೆಟ್‌ಗಳಲ್ಲಿ, ಪ್ರಯಾಣಿಕರಿಗೆ ಶಬ್ದದ ತೀವ್ರತೆಯನ್ನು ಕಡಿಮೆ ಮಾಡಲು ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ, ಮತ್ತು ಸಾಮಾನ್ಯವಾಗಿ ಗಗನಯಾತ್ರಿಗಳನ್ನು ರಾಕೆಟ್ ಇಂಜಿನ್‌ಗಳಿಂದ ದೂರವಿಡುವುದು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ, ವಾಹನವು ಶಬ್ದಾತೀತವಾಗಿ ಹಾರಿದಾಗ ಧ್ವನಿ ತರಂಗಗಳು ಇನ್ನು ಮುಂದೆ ವಾಹನದ ಜೊತೆಗೆ ಸಾಗಲು ಸಾಧ್ಯವಾಗದ ಕಾರಣ ಶಬ್ದವು ನಿಲ್ಲುತ್ತದೆ.[೭೫]

ಭೌತಶಾಸ್ತ್ರ

[ಬದಲಾಯಿಸಿ]

ಕಾರ್ಯ

[ಬದಲಾಯಿಸಿ]
ರಾಕೆಟ್ ಎಂಜಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ರೇಖಾಚಿತ್ರ.

ಹೆಚ್ಚಿನ ಒತ್ತಡದ ತರಲದ ಮೇಲೆ ರಾಕೆಟ್ ಇಂಜಿನ್‌ನ ದಹನ ಕೋಶಗಳು ಮತ್ತು ವಿಸ್ತರಣಾ ಸೂಸುಬಾಯಿಗಳ ಕ್ರಿಯೆಯು ತರಲವನ್ನು ಅತ್ಯಂತ ಹೆಚ್ಚಿನ ವೇಗಕ್ಕೆ ವೇಗೋತ್ಕರ್ಷಿಸಲು ಸಾಧ್ಯವಾಗುತ್ತದೆ, ಮತ್ತು ಪ್ರತಿಯಾಗಿ ಇದು ರಾಕೆಟ್‌ನ ಮೇಲೆ ದೊಡ್ಡ ಪ್ರತಿಕ್ರಿಯಾತ್ಮಕ ನೋದನ ಬಲವನ್ನು ವಿನಿಯೋಗಿಸುತ್ತದೆ (ನ್ಯೂಟನ್‌ನ ಮೂರನೇ ನಿಯಮದ ಪ್ರಕಾರ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ). ಇದು ರಾಕೆಟ್ ಅನ್ನು ಮುಂದಕ್ಕೆ ದೂಡುತ್ತದೆ.

ರಾಕೆಟ್‌ನ ನೋದನ ಬಲವು ಅದರ ದಹನ ಕೋಶ ಮತ್ತು ಸೂಸುಬಾಯಿ ಮೇಲೆ ವರ್ತಿಸುವ ಒತ್ತಡಗಳಿಂದ ಉಂಟಾಗುತ್ತದೆ.

ಮುಚ್ಚಿದ ಕೋಶದಲ್ಲಿ, ಒತ್ತಡಗಳು ಪ್ರತಿ ದಿಕ್ಕಿನಲ್ಲಿಯೂ ಸಮಾನವಾಗಿರುತ್ತವೆ ಮತ್ತು ಯಾವುದೇ ವೇಗೋತ್ಕರ್ಷ ಸಂಭವಿಸುವುದಿಲ್ಲ. ಕೋಶದ ಕೆಳಭಾಗದಲ್ಲಿ ರಂಧ್ರವನ್ನು ಒದಗಿಸಿದರೆ, ಕಾಣೆಯಾದ ವಿಭಾಗದ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ಈ ರಂಧ್ರವು ನಿಷ್ಕಾಸವು ತಪ್ಪಿಸಿಕೊಳ್ಳಲು ಅನುಮತಿಸುತ್ತದೆ. ಉಳಿದ ಒತ್ತಡಗಳು ರಂಧ್ರದ ವಿರುದ್ಧ ಬದಿಯಲ್ಲಿ ಪರಿಣಾಮರೂಪಿ ನೋದನ ಬಲವನ್ನು ನೀಡುತ್ತವೆ, ಮತ್ತು ಈ ಒತ್ತಡಗಳು ರಾಕೆಟ್ ಅನ್ನು ತಳ್ಳುತ್ತವೆ.

ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲವು. ಇದು ಸಾಧ್ಯವಾಗುವುದಕ್ಕೆ ರಾಕೆಟ್ಟುಗಳು ತಮ್ಮದೇ ಆದ ಆಕ್ಸಿಡಕವನ್ನೂ ಒಯ್ಯುವುದು ಕಾರಣ. ಇಂಧನ ದಹನಕ್ಕೆ ಆಕ್ಸಿಜನ್ ಒದಗಿಸುವ ಪದಾರ್ಥಕ್ಕೆ ಆಕ್ಸಿಡಕ ಎಂದು ಹೆಸರು. ಇಂಧನ ಮತ್ತು ಆಕ್ಸಿಡಕಗಳನ್ನು ಒಟಾಗಿ ನೋದನಕಾರಿಗಳು ಎನ್ನುತ್ತಾರೆ.

ರಾಕೆಟ್ಟಿನ ಒಟ್ಟು ರಾಶಿಯು (M) ನೋದನಕಾರಿಗಳ ರಾಶಿಯನ್ನೂ ಅದರಲ್ಲಿರುವ ವೈಜ್ಞಾನಿಕ ಸಾಧನ ಅಥವಾ ಉಪಗ್ರಹಕ್ಕೆ ಉಪಯುಕ್ತ ಹೊರೆ ಅಥವಾ ಪೇಲೋಡ್ ಎನ್ನುತ್ತಾರೆ. ರಾಕೆಟ್ಟನಲ್ಲಿ ಇಂಧನ ದಹನಗೊಂಡು ನಿಷ್ಕಾಸವನ್ನ ಬಿಡುಗಡೆ ಮಾಡಿದಾಗ ರಾಕೆಟ್ಟಿನ ವೇಗ ಏರುತ್ತದೆ. ರಾಕೆಟ್ಟಿನ ವೇಗೋತ್ಕರ್ಷವು ಇಂಧನ ದಹನದ ಪ್ರಮಾಣವನ್ನೂ ನಿಷ್ಕಾಸ ವೇಗ (Vex) ವನ್ನೂ ಅವಲಂಬಿಸಿರುತ್ತದೆ. ಜೊತೆಗೆ ರಾಕೆಟ್ಟಿನ ರಾಶಿಯ (M) ಪಾತ್ರವೂ ಇದೆ. ರಾಕೆಟ್ಟಿನ ರಾಶಿ ಹೆಚ್ಚಾದಷ್ಟೂ ವೇಗೋತ್ಕರ್ಷ ಕಡಿಮೆಯಾಗುತ್ತದೆ.

ಜೊತೆಗೆ ಸೂಸುಬಾಯಿಯನ್ನು ಬಳಸುವುದು ಹೆಚ್ಚಿನ ಬಲವನ್ನು ನೀಡುತ್ತದೆ ಏಕೆಂದರೆ ನಿಷ್ಕಾಸವು ಹೊರಕ್ಕೆ ವಿಸ್ತರಿಸುತ್ತಿದ್ದಂತೆ ಅದು ಕೂಡ ಸೂಸುಬಾಯಿಯ ಮೇಲೆ ಒತ್ತುತ್ತದೆ, ಮತ್ತು ಒಟ್ಟು ಬಲವನ್ನು ಸರಿಸುಮಾರು ದ್ವಿಗುಣಗೊಳಿಸುತ್ತದೆ. ನೋದಕ ಅನಿಲವನ್ನು ಕೋಶಕ್ಕೆ ನಿರಂತರವಾಗಿ ಸೇರಿಸಿದರೆ, ಈ ಒತ್ತಡಗಳನ್ನು ನೋದಕವು ಉಳಿದಿರುವವರೆಗೆ ಕಾಪಾಡಿಕೊಳ್ಳಬಹುದು.[]

ಒಂದು ಅಡ್ಡ ಪರಿಣಾಮವಾಗಿ, ರಾಕೆಟ್‌ನ ಮೇಲಿನ ಈ ಒತ್ತಡಗಳು ವಿರುದ್ಧ ದಿಕ್ಕಿನಲ್ಲಿ ನಿಷ್ಕಾಸದ ಮೇಲೂ ವರ್ತಿಸುತ್ತವೆ ಮತ್ತು ಇದನ್ನು ಅತಿ ಹೆಚ್ಚಿನ ವೇಗಕ್ಕೆ (ನ್ಯೂಟನ್‌ನ ಮೂರನೇ ನಿಯಮದ ಪ್ರಕಾರ) ವೇಗೋತ್ಕರ್ಷಿಸುತ್ತದೆ.[] ಸಂವೇಗದ ಸಂರಕ್ಷಣೆಯ ತತ್ವದಿಂದ ರಾಕೆಟ್‌ನ ನಿಷ್ಕಾಸದ ವೇಗವು ಒಂದು ನಿರ್ದಿಷ್ಟ ಪ್ರಮಾಣದ ನೋದಕಕ್ಕೆ ಎಷ್ಟು ಸಂವೇಗ ಹೆಚ್ಚಳವನ್ನು ಸೃಷ್ಟಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ನೋದಕದ ಮುನ್ನೂಕುವ ಒತ್ತಡ ಅನುಸರಿಸಿ ಇದನ್ನು ಅನುಪಾತದ ಮೇಲೆ ಗಣಿಸಲಾಗುತ್ತದೆ. ಇದನ್ನು ರಾಕೆಟ್‌ನ ವಿಶಿಷ್ಟ ಆವೇಗ ಎಂದು ಕರೆಯಲಾಗುತ್ತದೆ.[] ಯಾವುದೇ ಬಾಹ್ಯ ಪ್ರಕ್ಷುಬ್ಧತೆಗಳಿಲ್ಲದೆ, ಹಾರಾಟದಲ್ಲಿ ರಾಕೆಟ್, ನೋದಕ ಮತ್ತು ನಿಷ್ಕಾಸವನ್ನು ಮುಚ್ಚಿದ ವ್ಯವಸ್ಥೆ ಎಂದು ಪರಿಗಣಿಸಬಹುದಾದ್ದರಿಂದ ಒಟ್ಟು ಸಂವೇಗವು ಯಾವಾಗಲೂ ಸ್ಥಿರವಾಗಿರುತ್ತದೆ. ಆದ್ದರಿಂದ, ಒಂದು ದಿಕ್ಕಿನಲ್ಲಿ ನಿಷ್ಕಾಸದ ನಿವ್ವಳ ವೇಗವು ಎಷ್ಟು ವೇಗವಾಗಿರುತ್ತದೆಯೊ, ವಿರುದ್ಧ ದಿಕ್ಕಿನಲ್ಲಿ ರಾಕೆಟ್ ಸಾಧಿಸಬಲ್ಲ ವೇಗವು ಅಷ್ಟೇ ಹೆಚ್ಚಾಗಿರುತ್ತದೆ. ರಾಕೆಟ್ ಕಾಯದ ದ್ರವ್ಯರಾಶಿಯು ಸಾಮಾನ್ಯವಾಗಿ ಅಂತಿಮ ಒಟ್ಟು ನಿಷ್ಕಾಸ ದ್ರವ್ಯರಾಶಿಗಿಂತ ತುಂಬಾ ಕಡಿಮೆಯಿರುವುದರಿಂದ ಇದು ವಿಶೇಷವಾಗಿ ನಿಜವಾಗಿದೆ.

ಉಳಿದಿರುವ ನೋದಕ ಕಡಿಮೆಯಾದಂತೆ, ರಾಕೆಟ್ ವಾಹನಗಳು ಹಗುರವಾಗುತ್ತವೆ ಮತ್ತು ನೋದಕ ಖಾಲಿಯಾಗುವವರೆಗೆ ಅವುಗಳ ವೇಗೋತ್ಕರ್ಷ ಹೆಚ್ಚಾಗುವ ಪ್ರವೃತ್ತಿಯಿರುತ್ತದೆ. ಇದರರ್ಥ ವಾಹನವು ಹೆಚ್ಚು ಹಗುರವಾದಾಗ ಸುಡುವಿಕೆಯ ಕೊನೆಯ ಭಾಗದಲ್ಲಿ ಹೆಚ್ಚಿನ ವೇಗ ಬದಲಾವಣೆ ಆಗುತ್ತದೆ.[]

ಹಾರಾಟದಲ್ಲಿರುವ ರಾಕೆಟ್ ಮೇಲಿನ ಬಲಗಳು

[ಬದಲಾಯಿಸಿ]
ಹಾರಾಟದಲ್ಲಿರುವ ರಾಕೆಟ್ ಮೇಲಿನ ಬಲಗಳು; ಗಾಳಿಯ ಮೂಲಕ ಪ್ರಯಾಣಿಸಬೇಕಾದ ರಾಕೆಟ್‍ಗಳು ಸಾಮಾನ್ಯವಾಗಿ ಉದ್ದ ಮತ್ತು ತೆಳುವಾಗಿರುತ್ತವೆ ಏಕೆಂದರೆ ಈ ಆಕಾರವು ಹೆಚ್ಚಿನ ಪ್ರಕ್ಷೇಪಕ ಗುಣಾಂಕವನ್ನು ನೀಡುತ್ತದೆ ಮತ್ತು ಎಳೆತದ ನಷ್ಟಗಳನ್ನು ಕನಿಷ್ಠತಮಗೊಳಿಸುತ್ತದೆ.

ರಾಕೆಟ್ ಅಥವಾ ಇತರ ಬಾಹ್ಯಾಕಾಶ ನೌಕೆಯ ಮೇಲಿನ ಬಲಗಳ ಸಾಮಾನ್ಯ ಅಧ್ಯಯನವು ಕ್ಷಿಪಣಿಶಾಸ್ತ್ರದ ಭಾಗವಾಗಿದೆ ಮತ್ತು ಇದನ್ನು ಖಗೋಳ ಗತಿವಿಜ್ಞಾನ ಎಂದು ಕರೆಯಲಾಗುತ್ತದೆ.

ಹಾರುವ ರಾಕೆಟ್‍ಗಳು ಮುಖ್ಯವಾಗಿ ಈ ಕೆಳಗಿನವುಗಳಿಂದ ಪ್ರಭಾವಕ್ಕೊಳಗಾಗುತ್ತವೆ:[೭೬]

  • ಎಂಜಿನ್‍ನಿಂದ(ಗಳಿಂದ) ನೋದನ ಬಲ
  • ಖಗೋಳ ಕಾಯಗಳಿಂದ ಗುರುತ್ವ
  • ವಾತಾವರಣದಲ್ಲಿ ಚಲಿಸುತ್ತಿದ್ದರೆ ಎಳೆತ
  • ಉತ್ಥಾಪಕ ಬಲ; ಸಾಮಾನ್ಯವಾಗಿ ತುಲನಾತ್ಮಕವಾಗಿ ಸಣ್ಣ ಪರಿಣಾಮ (ರಾಕೆಟ್‍ನಿಂದ ಶಕ್ತಿ ಪಡೆವ ವಿಮಾನದ ಹೊರತಾಗಿ)

ಇದರ ಜೊತೆಗೆ, ಖಗೋಳ ಕಾಯದ ಕೇಂದ್ರದ ಸುತ್ತ ರಾಕೆಟ್‌ನ ಪಥದಿಂದಾಗಿ ಜಡತ್ವ ಮತ್ತು ಕೇಂದ್ರಾಪಗಾಮಿ ಮಿಥ್ಯಾಬಲವು ಗಣನೀಯವಾಗಿರಬಹುದು; ಸರಿಯಾದ ದಿಕ್ಕಿನಲ್ಲಿ ಮತ್ತು ಎತ್ತರದಲ್ಲಿ ಸಾಕಷ್ಟು ಹೆಚ್ಚಿನ ವೇಗದ ಸಾಧನೆಯಾದಾಗ ಸ್ಥಿರವಾದ ಕಕ್ಷೆ ಅಥವಾ ವಿಮೋಚನ ವೇಗವನ್ನು ಪಡೆಯಲಾಗುತ್ತದೆ.

ಸ್ಥಿರಗೊಳಿಸುವ ಬಾಲವಿದ್ದಾಗ (ಎಂಪನಜ್) ಈ ಬಲಗಳು, ಉದ್ದೇಶಪೂರ್ವಕ ನಿಯಂತ್ರಣ ಪ್ರಯತ್ನಗಳನ್ನು ಮಾಡದಿದ್ದಲ್ಲಿ, ವಾಹನವು ಸ್ವಾಭಾವಿಕವಾಗಿ ಗುರುತ್ವ ತಿರುವು ಎಂದು ಕರೆಯಲ್ಪಡುವ ಸರಿಸುಮಾರು ಪರವಲಯದ ಪಥವನ್ನು ಅನುಸರಿಸುವಂತೆ ಮಾಡುತ್ತವೆ. ಈ ವಿಕ್ಷೇಪ ಪಥವನ್ನು ಹಲವುವೇಳೆ ಕನಿಷ್ಠ ಪಕ್ಷ ಉಡಾವಣೆಯ ಆರಂಭಿಕ ಭಾಗದ ವೇಳೆ ಬಳಸಲಾಗುತ್ತದೆ. (ರಾಕೆಟ್ ಇಂಜಿನ್ ಅನ್ನು ಮೂತಿಯಲ್ಲಿ ಅಳವಡಿಸಲಾಗಿದ್ದರೂ ಇದು ನಿಜ.) ಹಾಗಾಗಿ, ವಾಹನಗಳು ಕಡಿಮೆ ಅಥವಾ ಶೂನ್ಯ ಆಕ್ರಮಣ ಕೋನವನ್ನು ಸಹ ಕಾಪಾಡಿಕೊಳ್ಳಬಹುದು. ಇದು ಉಡಾವಣಾ ವಾಹನದ ಮೇಲಿನ ಅಡ್ಡೊತ್ತಡವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುತ್ತದೆ; ಇದು ಹೆಚ್ಚು ದುರ್ಬಲವಾದ ಮತ್ತು ಹಾಗಾಗಿ ಹಗುರವಾದ ಉಡಾವಣಾ ವಾಹನವನ್ನು ಅನುಮತಿಸುತ್ತದೆ.[೭೭][೭೮]

ನಿವ್ವಳ ಬಲ

[ಬದಲಾಯಿಸಿ]
ನಿಷ್ಕಾಸ ಧಾರೆಯ ಧ್ವನ್ಯತೀತ ಸ್ವಭಾವದಿಂದಾಗಿ ನಿರ್ಗಮನ ಒತ್ತಡವು ಸುತ್ತಲಿನ ವಾತಾವರಣದ ಒತ್ತಡದಿಂದ ಭಿನ್ನವಾಗಿರಬಹುದು. ಈ ಸೂಸುಬಾಯಿಗಳು ಈ ಕೆಳಗಿನಂತೆ ಇರಬಲ್ಲವು (ಮೇಲಿನಿಂದ ಕೆಳಕ್ಕೆ):• ಕಡಮೆ ವಿಸ್ತರಿತ (ಸುತ್ತಲಿರುವುದಕ್ಕಿಂತ ಹೆಚ್ಚು).• ಸುತ್ತುವರಿದಿರುವ.• ಹೆಚ್ಚು ವಿಸ್ತರಿತ (ಸುತ್ತಲಿರುವುದಕ್ಕಿಂತ ಕಡಿಮೆ).• ಅತಿ ಹೆಚ್ಚು ವಿಸ್ತರಿತ.ಕಡಿಮೆ ಅಥವಾ ಹೆಚ್ಚು ವಿಸ್ತರಿಸಿದ್ದರೆ ದಕ್ಷತೆಯ ನಷ್ಟ ಸಂಭವಿಸುತ್ತದೆ, ಅತಿ ಹೆಚ್ಚು ವಿಸ್ತರಿಸಿದ ಸೂಸುಬಾಯಿಗಳು ಕಡಿಮೆ ದಕ್ಷತೆಯನ್ನು ಕಳೆದುಕೊಳ್ಳುತ್ತವೆ, ಆದರೆ ನಿಷ್ಕಾಸ ಧಾರೆಯು ಸಾಮಾನ್ಯವಾಗಿ ಅಸ್ಥಿರವಾಗಿರುತ್ತದೆ. ರಾಕೆಟ್‌ಗಳು ಎತ್ತರವನ್ನು ಪಡೆದಂತೆ ಹಂತಹಂತವಾಗಿ ಹೆಚ್ಚು ಕೆಳವಿಸ್ತರಿಸುತ್ತವೆ. ವಾತಾವರಣದಲ್ಲಿ ಪ್ರಾರಂಭದ ವೇಳೆ ಬಹುತೇಕ ಎಲ್ಲ ರಾಕೆಟ್ ಎಂಜಿನ್‌ಗಳು ಕ್ಷಣಿಕವಾಗಿ ಅತಿ ಹೆಚ್ಚು ವಿಸ್ತರಿಸಿರುತ್ತವೆ ಎಂಬುದನ್ನು ಗಮನಿಸಿ.[೭೯]

ಒಂದು ವಿಶಿಷ್ಟ ರಾಕೆಟ್ ಇಂಜಿನ್ ಪ್ರತಿ ಸೆಕೆಂಡಿಗೆ ನೋದಕದಲ್ಲಿ ತನ್ನ ಸ್ವಂತ ದ್ರವ್ಯರಾಶಿಯ ಗಮನಾರ್ಹ ಭಾಗವನ್ನು ನಿಭಾಯಿಸಬಲ್ಲದು. ನೋದಕವು ಪ್ರತಿ ಸೆಕೆಂಡಿಗೆ ಹಲವಾರು ಕಿಲೋಮೀಟರ್ ವೇಗದಲ್ಲಿ ಸೂಸುಬಾಯಿಯನ್ನು ಬಿಡುತ್ತದೆ. ಇದರರ್ಥ ರಾಕೆಟ್ ಇಂಜಿನ್‌ನ ನೋದನ ಬಲ ಮತ್ತು ತೂಕದ ಅನುಪಾತ, ಮತ್ತು ಹಲವುವೇಳೆ ಸಂಪೂರ್ಣ ವಾಹನದ ಅನುಪಾತ ಬಹಳ ಹೆಚ್ಚಾಗಿರಬಹುದು, ವಿಪರೀತ ಸಂದರ್ಭಗಳಲ್ಲಿ 100 ಕ್ಕಿಂತ ಹೆಚ್ಚು. ಇದು ಇತರ ಜೆಟ್ ನೋದನ ಎಂಜಿನ್‌ಗಳಿಗೆ ಹೋಲಿಕೆಯಾಗುತ್ತದೆ. ಅದು ಕೆಲವು ಉತ್ತಮ ಎಂಜಿನ್‌ಗಳಿಗೆ 5ನ್ನು ಮೀರಬಹುದು.[೮೦][೮೧]

ನೋದನ ಬಲವನ್ನು ಮತ್ತು ಹೀಗೆ ವಾಹನದ ಗಾಳಿಯ ವೇಗವನ್ನು ನಿಯಂತ್ರಿಸಲು ಒಂದು ಮಾರ್ಗವನ್ನು ಒದಗಿಸುವ ಸಲುವಾಗಿ, ಒಂದು ರಾಕೆಟ್‌ನ ನೋದಕದ ಹರಿವಿನ ಪ್ರಮಾಣವನ್ನು ಹಲವುವೇಳೆ ಹಾರಾಟದಲ್ಲಿ ಉದ್ದೇಶಪೂರ್ವಕವಾಗಿ ಬದಲಾಯಿಸಲಾಗುತ್ತದೆ. ಉದಾಹರಣೆಗೆ, ಇದು ವಾಯುಬಲ ಸಂಬಂಧಿ ನಷ್ಟಗಳ[೮೨] ಕನಿಷ್ಠೀಕರಣವನ್ನು ಅನುಮತಿಸುತ್ತದೆ ಮತ್ತು ನೋದಕದ ಭಾರದ ಕಡಿತದಿಂದಾಗಿ ಜಿ-ಬಲಗಳ ಹೆಚ್ಚಳವನ್ನು ಮಿತಿಗೊಳಿಸಬಲ್ಲದು.

ರಾಕೆಟ್‌ನ ನಿವ್ವಳ ನೋದನ ಬಲ ಕೆಳಗಿನಂತೆ ಇರುತ್ತದೆ ಎಂದು ತೋರಿಸಬಹುದು:

[೮೩]

ಇದರಲ್ಲಿ:

ನೋದಕದ ಹರಿವು (kg/s ಅಥವಾ lb/s)
ಪ್ರಭಾವಶಾಲಿ ನಿಷ್ಕಾಸ ವೇಗ (m/s ಅಥವಾ ft/s)

ಪ್ರಭಾವಶಾಲಿ ನಿಷ್ಕಾಸ ವೇಗ ve ಎಂಬುದು ಹೆಚ್ಚುಕಡಿಮೆ ವಾಹನದಿಂದ ಹೊರಹೋಗುವ ನಿಷ್ಕಾಸದ ವೇಗವಾಗಿರುತ್ತದೆ, ಮತ್ತು ಬಾಹ್ಯಾಕಾಶದ ನಿರ್ವಾತದಲ್ಲಿ, ಪ್ರಭಾವಶಾಲಿ ನಿಷ್ಕಾಸ ವೇಗವು ಹಲವುವೇಳೆ ನೋದನ ಬಲದ ಅಕ್ಷದ ಉದ್ದಕ್ಕಿರುವ ವಾಸ್ತವಿಕ ಸರಾಸರಿ ನಿಷ್ಕಾಸ ವೇಗಕ್ಕೆ ಸಮನಾಗಿರುತ್ತದೆ. ಆದರೆ, ಪರಿಣಾಮಕಾರಿ ನಿಷ್ಕಾಸ ವೇಗವು ವಿವಿಧ ನಷ್ಟಗಳಿಗೆ ಅವಕಾಶ ನೀಡುತ್ತದೆ ಮತ್ತು ಗಮನಾರ್ಹವಾಗಿ, ಒಂದು ವಾತಾವರಣದೊಳಗೆ ನಿರ್ವಹಿಸಲಾದಾಗ ಕಡಿಮೆಯಾಗುತ್ತದೆ.

ತನ್ನ ನೋದಕವನ್ನು ಸುಡುತ್ತಿರುವ ಒಂದು ರಾಕೆಟ್‍ನ ಒಟ್ಟು ಆವೇಗ ಸರಳವಾಗಿ ಕೆಳಗಿನಂತೆ ಇರುತ್ತದೆ:[೮೪]

ಅಲ್ಲಿ ನಿಶ್ಚಿತ ನೋದನಬಲವಿದ್ದಾಗ, ಇದು ಸರಳವಾಗಿ ಕೆಳಗಿನಂತೆ ಇರುತ್ತದೆ:

ವಿಶಿಷ್ಟ ಆವೇಗ

[ಬದಲಾಯಿಸಿ]

ನೋದನ ಬಲದ ಸಮೀಕರಣದಿಂದ ನೋಡಬಹುದಾದಂತೆ, ನಿಷ್ಕಾಸದ ಪರಿಣಾಮಕಾರಿ ವೇಗವು ಪ್ರತಿ ಸೆಕೆಂಡಿಗೆ ದಹನಗೊಂಡ ನಿರ್ದಿಷ್ಟ ಪ್ರಮಾಣದ ಇಂಧನದಿಂದ ಉತ್ಪತ್ತಿಯಾಗುವ ನೋದನ ಬಲದ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಸಮಾನವಾದ ಅಳತೆಯಾದ ಹೊರಹಾಕಲ್ಪಟ್ಟ ನೋದಕದ ಪ್ರತಿ ತೂಕದ ಏಕಮಾನಕ್ಕೆ ನಿವ್ವಳ ನೋದನ ಬಲ-ಸೆಕೆಂಡ್‌ಗಳನ್ನು (ಆವೇಗ) ವಿಶಿಷ್ಟ ಆವೇಗ "Isp" ಎಂದು ಕರೆಯಲಾಗುತ್ತದೆ. ಇದು ರಾಕೆಟ್‌ನ ಕಾರ್ಯಕ್ಷಮತೆಯನ್ನು ವಿವರಿಸುವ ಅತ್ಯಂತ ಮುಖ್ಯವಾದ ಸಂಖ್ಯೆಗಳಲ್ಲಿ ಒಂದಾಗಿದೆ. ಇದು ಪರಿಣಾಮಕಾರಿ ನಿಷ್ಕಾಸ ವೇಗಕ್ಕೆ ಸಂಬಂಧಿಸಿರುವಂತೆ ಇದನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗುತ್ತದೆ:

[೮೫]

ಇದರಲ್ಲಿ:

ಸೆಕೆಂಡ್‍ಗಳ ಏಕಮಾನವನ್ನು ಹೊಂದಿರುತ್ತದೆ
ಇದು ಭೂಮಿಯ ಮೇಲ್ಮೈಯಲ್ಲಿ ಇರುವ ವೇಗೋತ್ಕರ್ಷ.

ಹಾಗಾಗಿ, ವಿಶಿಷ್ಟ ಆವೇಗವು ಹೆಚ್ಚಾದಷ್ಟೂ, ಎಂಜಿನ್‌ನ ನಿವ್ವಳ ನೋದನ ಬಲ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇಂಜಿನ್ ಅನ್ನು ಪರೀಕ್ಷಿಸುವಾಗ ಅನ್ನು ಅಳತೆಯಿಂದ ನಿರ್ಧರಿಸಲಾಗುತ್ತದೆ. ವ್ಯವಹಾರದಲ್ಲಿ, ರಾಕೆಟ್‌ಗಳ ಪರಿಣಾಮಕಾರಿ ನಿಷ್ಕಾಸ ವೇಗಗಳು ಬದಲಾಗುತ್ತವೆ ಆದರೆ ಅತ್ಯಂತ ಹೆಚ್ಚಾಗಿರಬಹುದು (~4500 ಮೀ/ಸೆ), ಗಾಳಿಯಲ್ಲಿನ ಶಬ್ದದ ಸಮುದ್ರ ಮಟ್ಟದ ಜವಕ್ಕಿಂತ ಸುಮಾರು 15 ಪಟ್ಟು.

Typical performances of common propellants
Propellant mix Vacuum Isp
(seconds)
Effective exhaust
velocity (m/s)
liquid oxygen/
liquid hydrogen
455 4462
liquid oxygen/
kerosene (RP-1)
358 3510
nitrogen tetroxide/
hydrazine
344 3369
n.b. All performances at a nozzle expansion ratio of 40


ಡೆಲ್ಟಾ-ವಿ (ರಾಕೆಟ್ ಸಮೀಕರಣ)

[ಬದಲಾಯಿಸಿ]
ಭೂಮಿ ಮತ್ತು ಮಂಗಳದ ನಡುವೆ ಸೌರಮಂಡಲದ ಸುತ್ತಲಿರುವ ಅಂದಾಜು ಡೆಲ್ಟಾ-ವಿಗಳ ಒಂದು ನಕ್ಷೆ[೮೬][೮೭]

ರಾಕೆಟ್‌ನ ಡೆಲ್ಟಾ-ವಿ ಸಾಮರ್ಥ್ಯವೆಂದರೆ ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ (ವಾಯು ಪ್ರತಿರೋಧ ಅಥವಾ ಗುರುತ್ವ ಅಥವಾ ಇತರ ಬಲಗಳಿಲ್ಲದೆ) ರಾಕೆಟ್ ಸಾಧಿಸಬಹುದಾದ ವೇಗದಲ್ಲಿನ ಸೈದ್ಧಾಂತಿಕ ಒಟ್ಟು ಬದಲಾವಣೆ.

ಸ್ಥಿರವಾಗಿರುವಾಗ, ಒಂದು ರಾಕೆಟ್ ವಾಹನವು ಒದಗಿಸಬಹುದಾದ ಡೆಲ್ಟಾ-ವಿ ಅನ್ನು ಟ್ಸಿಯೊಲ್‍ಕಾವ್‍ಸ್ಕಿ ಸಮೀಕರಣದಿಂದ ಗಣಿಸಬಹುದು:[೮೮]

ಇದರಲ್ಲಿ:

ಇದು ನೋದಕ ಸೇರಿದಂತೆ ಆರಂಭಿಕ ಒಟ್ಟು ದ್ರವ್ಯರಾಶಿ, ಕಿ.ಗ್ರಾಂಗಳಲ್ಲಿ (ಅಥವಾ ಪೌಂಡ್‍ಗಳಲ್ಲಿ)
ಇದು ಅಂತಿಮ ಒಟ್ಟಾರೆ ದ್ರವ್ಯರಾಶಿ ಕಿ ಗ್ರಾಂ ಗಳಲ್ಲಿ (ಅಥವಾ ಪೌಂಡ್‍ಗಳಲ್ಲಿ)
ಇದು ಪರಿಣಾಮಕಾರಿ ನಿಷ್ಕಾಸ ವೇಗ ಮೀ/ಸೆ ಗಳಲ್ಲಿ ಅಥವಾ (ಅಡಿ/ಸೆ ಗಳಲ್ಲಿ)
ಇದು ಡೆಲ್ಟಾ-ವಿ ಮೀಟರ್/ಸೆ ಗಳಲ್ಲಿ (ಅಥವಾ ಅಡಿ/ಸೆ ಗಳಲ್ಲಿ)

ಭೂಮಿಯಿಂದ ಉಡಾವಣೆ ಮಾಡಿದಾಗ, ಉಪಯುಕ್ತ ಭಾರವನ್ನು ಹೊತ್ತೊಯ್ಯುವ ಏಕ ರಾಕೆಟ್‌ಗಳ ಕಾರ್ಯರೂಪದ ಡೆಲ್ಟಾ-ವಿ ಗಳು ಕೆಲವು ಕಿಮೀ/ಸೆಕೆಂಡು ಆಗಿರಬಹುದು. ಕೆಲವು ಸೈದ್ಧಾಂತಿಕ ವಿನ್ಯಾಸಗಳು 9 ಕಿಮೀ/ಸೆಕೆಂಡಿಗೆ ಡೆಲ್ಟಾ-ವಿ ಯುಳ್ಳ ರಾಕೆಟ್‌ಗಳನ್ನು ಹೊಂದಿವೆ.

ಒಂದು ನಿರ್ದಿಷ್ಟ ಕುಶಲ ಚಲನೆಗೆ ಅಗತ್ಯವಾದ ಡೆಲ್ಟಾ-ವಿ ಅನ್ನು ಸಹ ಲೆಕ್ಕ ಹಾಕಬಹುದು; ಉದಾಹರಣೆಗೆ ಭೂಮಿಯ ಮೇಲ್ಮೈಯಿಂದ ಕೆಳ ಭೂಕಕ್ಷೆಗೆ ಉಡಾವಣೆ ಮಾಡಲು ಬೇಕಾದ ಡೆಲ್ಟಾ-ವಿ ಸುಮಾರು 9.7 ಕಿಮೀ/ಸೆಕೆಂಡು. ಇದು ವಾಹನಕ್ಕೆ ಸುಮಾರು 200 ಕಿಮೀ ಎತ್ತರದಲ್ಲಿ ಸುಮಾರು 7.8 ಕಿಮೀ/ಸೆಕೆಂಡ್‌ನ ಪಾರ್ಶ್ವವೇಗದೊಂದಿಗೆ ಹಾರಲು ಬಿಡುತ್ತದೆ. ಈ ಕುಶಲ ಚಲನೆಯಲ್ಲಿ ಸುಮಾರು 1.9 ಕಿಮೀ/ಸೆಕೆಂಡ್ ನಷ್ಟು ವಾಯು ಎಳೆತ, ಗುರುತ್ವ ಎಳೆತ ಮತ್ತು ಎತ್ತರವನ್ನು ಪಡೆಯುವುದರಲ್ಲಿ ಕಳೆದುಹೋಗುತ್ತದೆ.

ಅನುಪಾತವನ್ನು ಕೆಲವೊಮ್ಮೆ ದ್ರವ್ಯರಾಶಿ ಅನುಪಾತ ಎಂದು ಕರೆಯಲಾಗುತ್ತದೆ.

ದ್ರವ್ಯರಾಶಿ ಅನುಪಾತಗಳು

[ಬದಲಾಯಿಸಿ]

ಉಡಾವಣಾ ವಾಹನದ ದ್ರವ್ಯರಾಶಿಯ ಬಹುತೇಕ ಎಲ್ಲ ಭಾಗ ನೋದಕವನ್ನು ಒಳಗೊಂಡಿರುತ್ತದೆ ಎಂದು ಬಾಹ್ಯಾಕಾಶ ಹಾರಾಟದ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ಅಪರೂಪವಾಗಿ ಅರಿವಾಗುತ್ತದೆ.[೮೯] ಯಾವುದೇ ದಹನಕ್ಕೆ, ದ್ರವ್ಯರಾಶಿ ಅನುಪಾತವು ರಾಕೆಟ್‌ನ ಆರಂಭಿಕ ದ್ರವ್ಯರಾಶಿ ಮತ್ತು ನಂತರದ ದ್ರವ್ಯರಾಶಿಯ ನಡುವಿನ ಅನುಪಾತವಾಗಿರುತ್ತದೆ.[೯೦] ಉಳಿದೆಲ್ಲವೂ ಸಮಾನವಾಗಿದ್ದರೆ, ಉತ್ತಮ ಕಾರ್ಯಕ್ಷಮತೆಗೆ ಹೆಚ್ಚಿನ ದ್ರವ್ಯರಾಶಿಯ ಅನುಪಾತವು ಅಪೇಕ್ಷಣೀಯವಾಗಿದೆ, ಏಕೆಂದರೆ ಇದು ರಾಕೆಟ್ ಹಗುರವಾಗಿದೆ ಮತ್ತು ಹಾಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸೂಚಿಸುತ್ತದೆ, ಮೂಲಭೂತವಾಗಿ ಕ್ರೀಡಾ ಕಾರುಗಳಲ್ಲಿ ಕಡಿಮೆ ತೂಕವು ಅಪೇಕ್ಷಣೀಯವಾಗಿರುವುದು ಯಾವ ಕಾರಣಗಳಿಗೊ ಅದೇ ಕಾರಣಗಳಿಂದಾಗಿ.

ಒಂದು ಗುಂಪಾಗಿ, ರಾಕೆಟ್‌ಗಳು ಯಾವುದೇ ರೀತಿಯ ಎಂಜಿನ್ ಪೈಕಿ ಅತ್ಯಧಿಕ ನೋದಕ ಬಲ-ತೂಕದ ಅನುಪಾತವನ್ನು ಹೊಂದಿರುತ್ತವೆ; ಇದು ವಾಹನಗಳು ಹೆಚ್ಚಿನ ದ್ರವ್ಯರಾಶಿ ಅನುಪಾತಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಹಾರಾಟಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಅನುಪಾತ ಹೆಚ್ಚಾದಂತೆ, ಕಡಿಮೆ ಎಂಜಿನ್ ದ್ರವ್ಯರಾಶಿಯನ್ನು ಹೊತ್ತೊಯ್ಯುವ ಅಗತ್ಯವಿರುತ್ತದೆ. ಇದು ಇನ್ನೂ ಹೆಚ್ಚಿನ ನೋದಕವನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ, ಹಾಗಾಗಿ ಡೆಲ್ಟಾ-ವಿ ಅನ್ನು ಅಗಾಧವಾಗಿ ಸುಧಾರಿಸುತ್ತದೆ. ಪರ್ಯಾಯವಾಗಿ, ಪಾರುಮಾಡುವ ಸನ್ನಿವೇಶಗಳು ಅಥವಾ ರೇಸಿಂಗ್‌ನಲ್ಲಿ ಬಳಸಲಾಗುವ ಕೆಲವು ರಾಕೆಟ್‌ಗಳು ತುಲನಾತ್ಮಕವಾಗಿ ಕಡಿಮೆ ನೋದಕ ಮತ್ತು ಪೇಲೋಡ್ ಅನ್ನು ಹೊತ್ತೊಯ್ಯುತ್ತವೆ ಮತ್ತು ಆದ್ದರಿಂದ ಅವಕ್ಕೆ ಹಗುರವಾದ ರಚನೆ ಮಾತ್ರ ಅಗತ್ಯವಿರುತ್ತದೆ ಮತ್ತು ಬದಲಾಗಿ ಹೆಚ್ಚಿನ ವೇಗೋತ್ಕರ್ಷಗಳನ್ನು ಸಾಧಿಸುತ್ತವೆ. ಉದಾಹರಣೆಗೆ, ಸೋಯುಜ್ ಪಾರು ವ್ಯವಸ್ಥೆಯು 20 g ಯಷ್ಟನ್ನು ಉತ್ಪಾದಿಸಬಲ್ಲದು.[೭೧]

ಸಾಧಿಸಬಹುದಾದ ದ್ರವ್ಯರಾಶಿಯ ಅನುಪಾತಗಳು ನೋದಕದ ಬಗೆ, ವಾಹನ ಬಳಸುವ ಎಂಜಿನ್‍ನ ವಿನ್ಯಾಸ, ರಚನಾತ್ಮಕ ಸುರಕ್ಷತಾ ಮಿತಿಗಳು ಮತ್ತು ನಿರ್ಮಾಣ ತಂತ್ರಗಳಂತಹ ಅನೇಕ ಅಂಶಗಳ ಮೇಲೆ ಬಹಳವಾಗಿ ಅವಲಂಬಿತವಾಗಿರುತ್ತವೆ.

ಅತಿಹೆಚ್ಚು ದ್ರವ್ಯರಾಶಿ ಅನುಪಾತಗಳನ್ನು ಸಾಮಾನ್ಯವಾಗಿ ದ್ರವ ರಾಕೆಟ್‌ಗಳೊಂದಿಗೆ ಸಾಧಿಸಲಾಗುತ್ತದೆ, ಮತ್ತು ಈ ಪ್ರಕಾರಗಳನ್ನು ಸಾಮಾನ್ಯವಾಗಿ ಕಕ್ಷೀಯ ಉಡಾವಣಾ ವಾಹನಗಳಿಗೆ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಡೆಲ್ಟಾ-ವಿ ಬೇಕಾಗುತ್ತದೆ. ದ್ರವ ನೋದಕಗಳು ಸಾಮಾನ್ಯವಾಗಿ ನೀರಿಗೆ ಹೋಲುವ ಸಾಂದ್ರತೆಗಳನ್ನು ಹೊಂದಿರುತ್ತವೆ (ದ್ರವ ಹೈಡ್ರೋಜನ್ ಮತ್ತು ದ್ರವ ಮೀಥೇನ್ ಗಮನಾರ್ಹ ಅಪವಾದಗಳಾಗಿವೆ). ಈ ಬಗೆಗಳು ಹಗುರವಾದ, ಕಡಿಮೆ ಒತ್ತಡದ ಟ್ಯಾಂಕ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ ಮತ್ತು ದಹನ ಕೋಶದೊಳಗೆ ನೋದಕವನ್ನು ನುಗ್ಗಿಸಲು ಹೆಚ್ಚಿನ ಕಾರ್ಯಕ್ಷಮತೆಯ ಟರ್ಬೋಪಂಪ್‌ಗಳನ್ನು ಚಲಾಯಿಸುತ್ತವೆ.

ಈ ಕೆಳಗೆ ಕೆಲವು ಟಿಪ್ಪಣಿ ಮಾಡುವ ದ್ರವ್ಯರಾಶಿಯ ಪರಿಮಾಣಗಳ ಪಟ್ಟಿ:(ಕೆಲವು ಗಗನ ನೌಕೆಗಳನ್ನು ಹೋಲಿಕೆಗಾಗಿ ಬಳಸಲಾಗಿದೆ.)

Vehicle Takeoff Mass Final Mass Mass ratio Mass fraction
Ariane 5 (vehicle + payload) 746,000 kg [೯೧] (~1,645,000 lb) 2,700 kg + 16,000 kg[೯೧] (~6,000 lb + ~35,300 lb) 39.9 0.975
Titan 23G first stage 117,020 kg (258,000 lb) 4,760 kg (10,500 lb) 24.6 0.959
Saturn V 3,038,500 kg[೯೨] (~6,700,000 lb) 13,300 kg + 118,000 kg[೯೨] (~29,320 lb + ~260,150 lb) 23.1 0.957
Space Shuttle (vehicle + payload) 2,040,000 kg (~4,500,000 lb) 104,000 kg + 28,800 kg (~230,000 lb + ~63,500 lb) 15.4 0.935
Saturn 1B (stage only) 448,648 kg[೯೩] (989,100 lb) 41,594 kg[೯೩] (91,700 lb) 10.7 0.907
Virgin Atlantic GlobalFlyer 10,024.39 kg (22,100 lb) 1,678.3 kg (3,700 lb) 6.0 0.83
V-2 13,000 kg (~28,660 lb) (12.8 ton) 3.85 0.74 [೯೪]
X-15 15,420 kg (34,000 lb) 6,620 kg (14,600 lb) 2.3 0.57[೯೫]
Concorde ~181,000 kg (400,000 lb [೯೫]) 2 0.5[೯೫]
Boeing 747 ~363,000 kg (800,000 lb[೯೫]) 2 0.5[೯೫]

ಹಂತಹಂತದ ಬೇರ್ಪಡಿಕೆ

[ಬದಲಾಯಿಸಿ]
ಹಂತಹಂತದ ಬೇರ್ಪಡಿಕೆಯು ದ್ರವ್ಯರಾಶಿಯನ್ನು ಕಡಿಮೆಮಾಡಲು ರಾಕೆಟ್‌ನ ಅನಗತ್ಯ ಭಾಗಗಳನ್ನು ತೆಗೆದುಹಾಕುವುದನ್ನು ಒಳಗೊಳ್ಳುತ್ತದೆ.
ಅಪೊಲೊ ೬ ತನ್ನ ಅಂತರಹಂತ ದುಂಡುಪಟ್ಟಿಯನ್ನು ತೆಗೆದು ಹಾಕುವಾಗ

ಹಲವುವೇಳೆ, ಉದ್ದಿಷ್ಟಕಾರ್ಯಕ್ಕೆ ಅಗತ್ಯವಾದ ವೇಗವನ್ನು (ಡೆಲ್ಟಾ-ವಿ) ಯಾವುದೇ ಒಂದು ರಾಕೆಟ್‌ನಿಂದ ಸಾಧಿಸಲಾಗುವುದಿಲ್ಲ, ಏಕೆಂದರೆ ನೋದಕ, ಟ್ಯಾಂಕ್ ಹೊರಬಲ್ಲ ಇಂಧನದ ತೂಕ, ರಚನೆ, ಮಾರ್ಗದರ್ಶನ, ಕವಾಟಗಳು ಮತ್ತು ಇಂಜಿನ್‌ಗಳು ಮತ್ತು ಇತ್ಯಾದಿ, ಉಡ್ಡಯನ ದ್ರವ್ಯರಾಶಿಯ ಒಂದು ನಿರ್ದಿಷ್ಟ ಕನಿಷ್ಠ ಶೇಕಡಾವಾರು ಪ್ರಮಾಣವನ್ನು ತೆಗೆದುಕೊಳ್ಳುತ್ತದೆ. ಆ ಡೆಲ್ಟಾ-ವಿ ಸಾಧಿಸಲು ಅದು ಹೊತ್ತೊಯ್ಯುವ ನೋದಕಕ್ಕೆ ಬಹಳ ಹೆಚ್ಚಾಗಿರುತ್ತದೆ.

ಉದಾಹರಣೆಗೆ, ಮೇಲಿನ ಹಂತಗಳ ಭಾರವನ್ನು ಹೊತ್ತುಕೊಂಡ, ಸ್ಯಾಟರ್ನ್ V ನ ಮೊದಲ ಹಂತವು ಸುಮಾರು 10 ರ ದ್ರವ್ಯರಾಶಿ ಅನುಪಾತವನ್ನು ಸಾಧಿಸುವುದು ಸಾಧ್ಯವಾಯಿತು ಮತ್ತು 263 ಸೆಕೆಂಡುಗಳ ವಿಶಿಷ್ಟ ಆವೇಗವನ್ನು ಸಾಧಿಸಿತು. ಇದು ಸುಮಾರು 5.9 ಕಿಮೀ/ಸೆಕೆಂಡಿನ ಡೆಲ್ಟಾ-ವಿ ಯನ್ನು ನೀಡುತ್ತದೆ. ಆದರೆ ಎಲ್ಲ ನಷ್ಟಗಳಿಗೆ ಅನುವು ಮಾಡಿಕೊಟ್ಟ ನಂತರ ಕಕ್ಷೆಯನ್ನು ಸಾಧಿಸಲು ಸುಮಾರು 9.4 ಕಿಮೀ/ಸೆಕೆಂಡ್ ಡೆಲ್ಟಾ-ವಿ ಬೇಕಾಗುತ್ತದೆ.

ಈ ಸಮಸ್ಯೆಯನ್ನು ಹಲವುವೇಳೆ ಹಂತಹಂತದ ಬೇರ್ಪಡಿಕೆಯ ಮೂಲಕ ಬಗೆಹರಿಸಲಾಗುತ್ತದೆ - ಉಡಾವಣೆಯ ವೇಳೆ ರಾಕೆಟ್ ಹೆಚ್ಚಿನ ತೂಕವನ್ನು (ಸಾಮಾನ್ಯವಾಗಿ ಖಾಲಿ ಟ್ಯಾಂಕ್ ಮತ್ತು ಸಂಬಂಧಿತ ಎಂಜಿನ್‌ಗಳು) ತ್ಯಜಿಸುತ್ತದೆ. ಹಂತಹಂತದ ಬೇರ್ಪಡಿಕೆಯು ಅನುಕ್ರಮವಾಗಿರಬಹುದು (ಹಿಂದಿನ ಹಂತವು ಬಿದ್ದು ಹೋದ ನಂತರ ರಾಕೆಟ್‌ಗಳು ಹೊತ್ತಿಕೊಳ್ಳುತ್ತವೆ), ಅಥವಾ ಸಮಾನಾಂತರವಾಗಿರಬಹುದು (ಇಲ್ಲಿ ರಾಕೆಟ್‌ಗಳು ಒಟ್ಟಿಗೆ ಉರಿಯುತ್ತವೆ ಮತ್ತು ನಂತರ ಅವು ಉರಿದು ಹೋದಮೇಲೆ ಬೇರ್ಪಡುತ್ತವೆ).[೯೬]

ಹಂತಹಂತದ ಬೇರ್ಪಡಿಕೆಯೊಂದಿಗೆ ಸಾಧಿಸಬಹುದಾದ ಗರಿಷ್ಠ ವೇಗಗಳು ಸೈದ್ಧಾಂತಿಕವಾಗಿ ಬೆಳಕಿನ ವೇಗದಿಂದ ಮಾತ್ರ ಸೀಮಿತವಾಗಿರುತ್ತದೆ. ಆದರೆ ಹೊತ್ತೊಯ್ಯಬಹುದಾದ ಪೇಲೋಡ್ ಅಗತ್ಯವಿರುವ ಪ್ರತಿ ಹೆಚ್ಚುವರಿ ಹಂತದೊಂದಿಗೆ ಜ್ಯಾಮಿತೀಯವಾಗಿ ಕಡಿಮೆಯಾಗುತ್ತದೆ, ಆದರೆ ಪ್ರತಿ ಹಂತಕ್ಕೆ ಇರಬೇಕಾದ ಹೆಚ್ಚುವರಿ ಡೆಲ್ಟಾ-ವಿ ಸರಳವಾಗಿ ಸಂಯೋಜನೀಯವಾಗಿರುತ್ತದೆ.

ವೇಗೋತ್ಕರ್ಷ ಮತ್ತು ನೋದನ ಬಲ-ತೂಕದ ಅನುಪಾತ

[ಬದಲಾಯಿಸಿ]

ನ್ಯೂಟನ್‍ನ ಎರಡನೆಯ ನಿಯಮದಿಂದ ಒಂದು ವಾಹನದ ವೇಗೋತ್ಕರ್ಷವು ಸರಳವಾಗಿ:

ಆಗಿರುತ್ತದೆ. ಇಲ್ಲಿ m ವಾಹನದ ತಾತ್ಕ್ಷಣೀಯ ದ್ರವ್ಯರಾಶಿ ಮತ್ತು ರಾಕೆಟ್ ಮೇಲೆ ವರ್ತಿಸುತ್ತಿರುವ ನಿವ್ವಳ ಬಲ (ಬಹುತೇಕವಾಗಿ ನೋದನ ಬಲ, ಆದರೆ ವಾಯು ಪ್ರತಿರೋಧ ಮತ್ತು ಇತರ ಬಲಗಳು ಪಾತ್ರವಹಿಸಬಲ್ಲವು.)

ಸಾಮಾನ್ಯವಾಗಿ, ರಾಕೆಟ್‌ನ ವೇಗೋತ್ಕರ್ಷವು ಕಾಲದೊಂದಿಗೆ ಹೆಚ್ಚಾಗುತ್ತದೆ (ನೋದನ ಬಲವು ಹಾಗೇ ಇದ್ದರೆ), ಏಕೆಂದರೆ ನೋದಕ ದಹನವಾದಂತೆ ರಾಕೆಟ್‌ನ ತೂಕವು ಕಡಿಮೆಯಾಗುತ್ತದೆ, ಆದರೆ ಅಗತ್ಯವಿದ್ದಲ್ಲಿ ಇದನ್ನು ಸರಿದೂಗಿಸಲು ಅಥವಾ ಬದಲಾಯಿಸಲು ನೋದನ ಬಲವನ್ನು ನಿಯಂತ್ರಿಸಬಹುದು. ಹಂತಗಳು ಉರಿದುಹೋದಾಗಲೂ ವೇಗೋತ್ಕರ್ಷದಲ್ಲಿ ವಿಚ್ಛಿನ್ನತೆಗಳು ಸಂಭವಿಸುತ್ತವೆ, ಹಲವುವೇಳೆ ಪ್ರತಿ ಹೊಸ ಹಂತ ಹೊತ್ತಿಕೊಂಡಂತೆ ಕಡಿಮೆ ವೇಗೋತ್ಕರ್ಷದಲ್ಲಿ ಪ್ರಾರಂಭವಾಗುತ್ತದೆ.

ಕಡಿಮೆ ದ್ರವ್ಯರಾಶಿ ಇರುವಂತೆ ವಾಹನವನ್ನು ವಿನ್ಯಾಸಗೊಳಿಸುವ ಮೂಲಕ ಗರಿಷ್ಠ ವೇಗೋತ್ಕರ್ಷಗಳನ್ನು ಹೆಚ್ಚಿಸಬಹುದು. ಇದನ್ನು ಸಾಮಾನ್ಯವಾಗಿ ಇಂಧನ ಭಾರ ಮತ್ತು ಟ್ಯಾಂಕ್‍ನ ಧಾರಣಶಕ್ತಿ ಮತ್ತು ಸಂಬಂಧಿತ ರಚನೆಗಳಲ್ಲಿನ ಕಡಿತದಿಂದ ಸಾಧಿಸಲಾಗುತ್ತದೆ. ಆದರೆ ನಿಸ್ಸಂಶಯವಾಗಿ ಇದು ವ್ಯಾಪ್ತಿ, ಡೆಲ್ಟಾ-ವಿ ಮತ್ತು ದಹನ ಸಮಯವನ್ನು ಕಡಿಮೆ ಮಾಡುತ್ತದೆ. ಆದರೂ, ರಾಕೆಟ್‌ಗಳನ್ನು ಬಳಸುವ ಕೆಲವು ಅನ್ವಯಗಳಿಗೆ, ಅಲ್ಪಾವಧಿಗೆ ಮಾತ್ರ ಹೆಚ್ಚಿನ ಗರಿಷ್ಠ ವೇಗೋತ್ಕರ್ಷವನ್ನು ಅನ್ವಯಿಸುವುದು ಬಹಳವಾಗಿ ಅಪೇಕ್ಷಣೀಯವಾಗಿದೆ.

ವಾಹನದ ಕನಿಷ್ಠತಮ ದ್ರವ್ಯರಾಶಿಯು ಕನಿಷ್ಠತಮ ಇಂಧನವಿರುವ ರಾಕೆಟ್ ಎಂಜಿನ್ ಮತ್ತು ಅದನ್ನು ಹೊರಲು ಬೇಕಾದ ರಚನೆಯನ್ನು ಹೊಂದಿರುತ್ತದೆ. ಆ ಸಂದರ್ಭದಲ್ಲಿ ರಾಕೆಟ್ ಎಂಜಿನ್‌ನ ನೋದನ ಬಲ-ತೂಕದ ಅನುಪಾತವು[nb ೪] ವಿನ್ಯಾಸಗೊಳಿಸಬಹುದಾದ ಗರಿಷ್ಠ ವೇಗೋತ್ಕರ್ಷವನ್ನು ಸೀಮಿತಗೊಳಿಸುತ್ತದೆ. ರಾಕೆಟ್ ಇಂಜಿನ್‌ಗಳು ಸಾಮಾನ್ಯವಾಗಿ ಕರಾರುವಾಕ್ಕಾಗಿ ಅತ್ಯುತ್ತಮವಾದ ನೋದನ ಬಲ-ತೂಕದ ಅನುಪಾತಗಳನ್ನು ಹೊಂದಿರುತ್ತವೆ (ಎನ್‍ಕೆ-33 ಎಂಜಿನ್‌ಗೆ 137,[೯೮] ಕೆಲವು ಘನ ರಾಕೆಟ್‌ಗಳಿಗೆ 1000 ಕ್ಕಿಂತ ಹೆಚ್ಚಿರುತ್ತದೆ[೯೭]), ಮತ್ತು ಬಹುತೇಕ ಎಲ್ಲ ನಿಜಕ್ಕೂ ಹೆಚ್ಚಿನ-ಜಿ ವಾಹನಗಳು ರಾಕೆಟ್‌ಗಳನ್ನು ಬಳಸಿಕೊಳ್ಳುತ್ತವೆ ಅಥವಾ ಬಳಸಿಕೊಂಡಿವೆ.

ರಾಕೆಟ್‌ಗಳು ಸ್ವಾಭಾವಿಕವಾಗಿ ಹೊಂದಿರುವ ಹೆಚ್ಚಿನ ವೇಗೋತ್ಕರ್ಷಗಳ ಅರ್ಥವೇನೆಂದರೆ ರಾಕೆಟ್ ವಾಹನಗಳು ಹಲವುವೇಳೆ ಲಂಬವಾದ ಉಡ್ಡಯನ ಮಾಡಲು ಸಮರ್ಥವಾಗಿರುತ್ತವೆ; ಭೂಮಿ ಅಥವಾ ಗುರುತ್ವ ಮೂಲದಿಂದ ಆಚೆಗೆ ಸ್ಥಳೀಯ ಗುರುತ್ವಾಕರ್ಷಣಾ ವೇಗೋತ್ಕರ್ಷಕ್ಕಿಂತ ಹೆಚ್ಚಿನದನ್ನು ವಾಹನದ ಎಂಜಿನ್‍ಗಳು ಒದಗಿಸಿದರೆ ಇದನ್ನು ಮಾಡಬಹುದು.

ಎಳೆತ ಎನ್ನುವುದು ರಾಕೆಟ್‌ನ ಚಲನೆಯ ದಿಕ್ಕಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಶಕ್ತಿಯಾಗಿದೆ. ಇದು ವಾಹನದ ವೇಗೋತ್ಕರ್ಷದಲ್ಲಿ ಇಳಿಕೆಗೆ ಕಾರಣವಾಗುತ್ತದೆ ಮತ್ತು ಅದೇ ಸಮಯದಲ್ಲಿ ರಚನಾತ್ಮಕ ಭಾರಗಳನ್ನು ಕೂಡ ಉತ್ಪಾದಿಸುತ್ತದೆ. ವೇಗವಾಗಿ ಚಲಿಸುವ ರಾಕೆಟ್‌ಗಳಿಗೆ ವೇಗಾಪಕರ್ಷ ಬಲವನ್ನು ಎಳೆತದ ಸಮೀಕರಣವನ್ನು ಬಳಸಿ ಲೆಕ್ಕ ಹಾಕಬಹುದು.

ವಾಯುಬಲ ನಾಸಿಕ ಶಂಕುವಿನ ಮೂಲಕ ಮತ್ತು ಹೆಚ್ಚಿನ ಪ್ರಕ್ಷೇಪಕ ಗುಣಾಂಕವಿರುವ ಆಕಾರವನ್ನು ಬಳಸಿ ("ಮಾದರಿ" ರಾಕೆಟ್ ಆಕಾರ - ಉದ್ದ ಮತ್ತು ತೆಳ್ಳಗಿರುವ) ಎಳೆತವನ್ನು ಕಡಿಮೆ ಮಾಡಬಹುದು.

ರಾಕೆಟ್ ಉಡಾವಣೆಯ ವೇಳೆ, ವಾಹನದ ವೇಗ ಹೆಚ್ಚಾದಂತೆ ಮತ್ತು ವಾತಾವರಣವು ತೆಳುವಾಗುತ್ತಾ ಹೋದಂತೆ, ಮ್ಯಾಕ್ಸ್ ಕ್ಯೂ ಎಂದು ಕರೆಯಲ್ಪಡುವ ಗರಿಷ್ಠ ವಾಯುಬಲವೈಜ್ಞಾನಿಕ ಎಳೆತದ ಬಿಂದುವಿರುತ್ತದೆ. ಇದು ವಾಹನದ ಕನಿಷ್ಠ ವಾಯುಬಲವೈಜ್ಞಾನಿಕ ಶಕ್ತಿಯನ್ನು ನಿರ್ಧರಿಸುತ್ತದೆ, ಏಕೆಂದರೆ ರಾಕೆಟ್ ಈ ಬಲಗಳ ಅಡಿಯಲ್ಲಿ ಬಿದ್ದು ಹೋಗುವುದನ್ನು ತಪ್ಪಿಸಬೇಕು.[೮೨]

ಶಕ್ತಿ

[ಬದಲಾಯಿಸಿ]

ಶಕ್ತಿಯ ದಕ್ಷತೆ

[ಬದಲಾಯಿಸಿ]

ರಾಕೆಟ್ ಉಡಾವಣಾ ವಾಹನಗಳು ಹೆಚ್ಚಿನ ಪ್ರಮಾಣದ ಜ್ವಾಲೆಗಳು, ಶಬ್ದ ಮತ್ತು ನಾಟಕೀಯ ಘಟನಾವಳಿಯೊಂದಿಗೆ ಮೇಲಕ್ಕೆ ಹಾರುತ್ತವೆ ಮತ್ತು ಅವುಗಳು ತೀವ್ರವಾಗಿ ಅಸಮರ್ಥವಾಗಿವೆ ಎಂಬುದು ಸ್ಪಷ್ಟ ಎಂದು ತೋರಬಹುದು. ಆದರೆ, ಅವು ಪರಿಪೂರ್ಣತೆಯಿಂದ ದೂರವಿದ್ದರೂ, ಅವುಗಳ ಶಕ್ತಿಯ ದಕ್ಷತೆಯು ಭಾವಿಸಿದಷ್ಟು ಕೆಟ್ಟದಾಗಿಲ್ಲ.

ಒಂದು ವಿಶಿಷ್ಟವಾದ ರಾಕೆಟ್ ನೋದಕದ ಶಕ್ತಿಯ ಸಾಂದ್ರತೆಯು ಹಲವುವೇಳೆ ಸಾಂಪ್ರದಾಯಿಕ ಹೈಡ್ರೋಕಾರ್ಬನ್ ಇಂಧನಗಳ ಸುಮಾರು ಮೂರನೇ ಒಂದು ಭಾಗದಷ್ಟು ಇರುತ್ತದೆ; ದ್ರವ್ಯರಾಶಿಯ ಬಹುಪಾಲು (ಹಲವುವೇಳೆ ತುಲನಾತ್ಮಕವಾಗಿ ಅಗ್ಗವಾದ) ಉತ್ಕರ್ಷಣಕಾರಿ ಆಗಿರುತ್ತದೆ. ಅದೇನೇ ಇದ್ದರೂ, ಮೇಲೆ ಹಾರುವಾಗ ವಾಹನದೊಳಗೆ ಸಂಗ್ರಹವಾಗಿರುವ ಇಂಧನ ಮತ್ತು ಉತ್ಕರ್ಷಣಕಾರಿಯಲ್ಲಿ ರಾಕೆಟ್ ಬಹಳ ಪ್ರಮಾಣದ ಶಕ್ತಿಯನ್ನು ಹೊಂದಿರುತ್ತದೆ . ನೋದಕ ಶಕ್ತಿಯ ಸಾಧ್ಯವಾದಷ್ಟು ಭಾಗ ರಾಕೆಟ್‌ನ ಕಾಯದ ಚಲನ ಅಥವಾ ಅಂತಸ್ಥಶಕ್ತಿಯಾಗಿ ಕೊನೆಗೊಳ್ಳಬೇಕು ಎಂಬುದು ಸಹಜವಾಗಿ ಅಪೇಕ್ಷಣೀಯವಾಗಿದೆ.

ಇಂಧನದಿಂದ ಉತ್ಪತ್ತಿಯಾದ ಶಕ್ತಿಯು ಗಾಳಿಯ ಎಳೆತ ಮತ್ತು ಗುರುತ್ವದ ಎಳೆತದಲ್ಲಿ ಕಳೆದುಹೋಗುತ್ತದೆ ಮತ್ತು ರಾಕೆಟ್ ಎತ್ತರ ಹಾಗೂ ವೇಗವನ್ನು ಪಡೆಯಲು ಬಳಸಲ್ಪಡುತ್ತದೆ. ಆದರೆ, ಕಳೆದುಹೋದ ಶಕ್ತಿಯ ಬಹುಪಾಲು ನಿಷ್ಕಾಸದಲ್ಲಿ ಕೊನೆಗೊಳ್ಳುತ್ತದೆ.[೯೯]

ಎಂಜಿನ್‍ನೊಳಗೆ 100% ದಕ್ಷತೆಯ (ಎಂಜಿನ್ ದಕ್ಷತೆ ) ಅರ್ಥವೆಂದರೆ ದಹನ ಉತ್ಪನ್ನಗಳ ಎಲ್ಲ ಉಷ್ಣ ಶಕ್ತಿಯು ಧಾರೆಯ ಚಲನ ಶಕ್ತಿಯಾಗಿ ಪರಿವರ್ತನೆಯಾಗಿದೆ ಎಂದು. ಇದು ಸಾಧ್ಯವಿಲ್ಲ, ಆದರೆ ರಾಕೆಟ್‌ಗಳೊಂದಿಗೆ ಬಳಸಬಹುದಾದ ಹೆಚ್ಚಿನ ವಿಸ್ತರಣಾ ಅನುಪಾತದ ಸೂಸುಬಾಯಿಗಳು ಆಶ್ಚರ್ಯಕರವಾಗಿ ಹತ್ತಿರಕ್ಕೆ ಬರುತ್ತವೆ: ಸೂಸುಬಾಯಿಯು ಅನಿಲವನ್ನು ವಿಸ್ತರಿಸಿದಾಗ, ಅನಿಲವು ತಂಪಾಗಿ ವೇಗೋತ್ಕರ್ಷಿಸುತ್ತದೆ ಮತ್ತು 70% ವರೆಗಿನ ಶಕ್ತಿಯ ದಕ್ಷತೆಯನ್ನು ಸಾಧಿಸಬಹುದು. ಉಳಿದವುಗಳಲ್ಲಿ ಬಹುಪಾಲು ಮರಳಿ ಪಡೆಯಲಾಗದ ನಿಷ್ಕಾಸದಲ್ಲಿನ ಶಾಖ ಶಕ್ತಿಯಾಗಿರುತ್ತದೆ.[೯೯] ಹೆಚ್ಚಿನ ದಕ್ಷತೆಯು, ರಾಕೆಟ್ ದಹನವನ್ನು ಬಹಳ ಹೆಚ್ಚಿನ ತಾಪಮಾನದಲ್ಲಿ ನಿರ್ವಹಿಸಬಹುದು ಮತ್ತು ಅನಿಲವು ಅಂತಿಮವಾಗಿ ಕಡಿಮೆ ತಾಪಮಾನದಲ್ಲಿ ಬಿಡುಗಡೆಯಾಗುತ್ತದೆ ಮತ್ತು ಆದ್ದರಿಂದ ಉತ್ತಮ ಕಾರ್ನೋಟ್ ದಕ್ಷತೆಯನ್ನು ನೀಡುತ್ತದೆ ಎಂಬ ವಾಸ್ತವಾಂಶದ ಪರಿಣಾಮವಾಗಿದೆ.

ಆದರೆ, ಎಂಜಿನ್ ದಕ್ಷತೆಯು ಸಂಪೂರ್ಣ ಕಥೆಯಲ್ಲ. ಇತರ ಜೆಟ್-ಆಧಾರಿತ ಎಂಜಿನ್‌ಗಳನ್ನು ಹೋಲುವಂತೆ, ಆದರೆ ಅವುಗಳ ಹೆಚ್ಚಿನ ಮತ್ತು ಸಾಮಾನ್ಯವಾಗಿ ಸ್ಥಿರವಾದ ನಿಷ್ಕಾಸ ವೇಗದ ಕಾರಣದಿಂದ ವಿಶೇಷವಾಗಿ ರಾಕೆಟ್‌ಗಳಲ್ಲಿ, ಎಂಜಿನ್ ದಕ್ಷತೆಯನ್ನು ಲೆಕ್ಕಿಸದೆ ಕಡಿಮೆ ವೇಗದಲ್ಲಿ ರಾಕೆಟ್ ವಾಹನಗಳು ವಿಪರೀತವಾಗಿ ಅಸಮರ್ಥವಾಗಿರುತ್ತವೆ. ಸಮಸ್ಯೆಯೆಂದರೆ ಕಡಿಮೆ ವೇಗಗಳಲ್ಲಿ, ನಿಷ್ಕಾಸವು ದೊಡ್ಡ ಪ್ರಮಾಣದಲ್ಲಿ ಚಲನ ಶಕ್ತಿಯನ್ನು ಹಿಂಬದಿಗೆ ದೂರ ಒಯ್ಯುತ್ತದೆ. ಈ ವಿದ್ಯಮಾನವನ್ನು ನೋದಕ ದಕ್ಷತೆ ಎಂದು ಕರೆಯಲಾಗುತ್ತದೆ ().[೯೯]

ಆದರೆ, ಜವಗಳು ಹೆಚ್ಚಾದಂತೆ, ಪರಿಣಾಮರೂಪಿ ನಿಷ್ಕಾಸ ವೇಗವು ಕಡಿಮೆಯಾಗುತ್ತದೆ, ಮತ್ತು ಒಟ್ಟಾರೆ ವಾಹನದ ಶಕ್ತಿಯ ದಕ್ಷತೆಯು ಹೆಚ್ಚಾಗುತ್ತದೆ, ಮತ್ತು ನಿಖರವಾಗಿ ನಿಷ್ಕಾಸವು ಹೊರಸೂಸಲ್ಪಡುತ್ತಿರುವ ವೇಗದಲ್ಲೇ ವಾಹನವು ಚಲಿಸುತ್ತಿರುವಾಗ ಎಂಜಿನ್ ದಕ್ಷತೆಯ ಸುಮಾರು 100% ನಷ್ಟು ಅತ್ಯುಚ್ಚ ಮಟ್ಟವನ್ನು ಮುಟ್ಟುತ್ತದೆ. ಈ ಸಂದರ್ಭದಲ್ಲಿ ನಿಷ್ಕಾಸವು ಚಲಿಸುವ ವಾಹನದ ಹಿಂದೆ ಬಾಹ್ಯಾಕಾಶದಲ್ಲಿ ಸೈದ್ಧಾಂತಿಕವಾಗಿ ಹಠಾತ್ತನೆ ನಿಂತುಹೋಗುವುದು, ಮತ್ತು ಶೂನ್ಯ ಶಕ್ತಿಯನ್ನು ತೆಗೆದುಕೊಂಡು ಹೋಗುತ್ತದೆ, ಮತ್ತು ಶಕ್ತಿಯ ಸಂರಕ್ಷಣೆಯ ತತ್ತ್ವದಿಂದ, ಎಲ್ಲ ಶಕ್ತಿಯು ವಾಹನದಲ್ಲಿಯೇ ಇರುತ್ತದೆ. ನಂತರ ಇನ್ನೂ ಹೆಚ್ಚಿನ ವೇಗದಲ್ಲಿ ದಕ್ಷತೆಯು ಮತ್ತೆ ಇಳಿಯುತ್ತದೆ ಮತ್ತು ನಿಷ್ಕಾಸವು ಮುಂದಕ್ಕೆ ಚಲಿಸುತ್ತದೆ ಮತ್ತು ವಾಹನದ ಹಿಂದೆ ಅದನ್ನು ಹಿಂಬಾಲಿಸುತ್ತದೆ.

ವಾಹನದ ವೇಗವನ್ನು ಪರಿಣಮಾಕಾರಿ ನಿಷ್ಕಾಸ ವೇಗದಿಂದ ಭಾಗಿಸಿದಾಗ ಬರುವ ಫಲನವಾಗಿ ರಾಕೆಟ್‌ನ ನೋದಕ ದಕ್ಷತೆ

ಈ ತತ್ವಗಳಿಂದ, ಜವದಿಂದ ಚಲಿಸುತ್ತಿರುವ ಮತ್ತು ನಿಷ್ಕಾಸ ವೇಗ ಯನ್ನು ಹೊಂದಿರುವ ರಾಕೆಟ್‌ನ ನೋದನ ದಕ್ಷತೆ ಈ ಕೆಳಗಿನಂತೆ ಇರುತ್ತದೆ ಎಂದು ತೋರಿಸಬಹುದು:

[೯೯]

ಮತ್ತು ಒಟ್ಟಾರೆ ಶಕ್ತಿಯ ದಕ್ಷತೆ ಈ ಕೆಳಗಿನಂತೆ ಇರುತ್ತದೆ:

ಉದಾಹರಣೆಗೆ, ಈ ಸಮೀಕರಣದಿಂದ, ೦.೭ ಇದ್ದಾಗ, ಮ್ಯಾಕ್ 10 ರ ನಿಷ್ಕಾಸ ವೇಗವಿದ್ದು ಮ್ಯಾಕ್ 0.85 ವೇಗದೊಂದಿಗೆ ಹಾರುತ್ತಿರುವ ರಾಕೆಟ್ (ಬಹುತೇಕ ವಿಮಾನಗಳು ಈ ವೇಗದಿಂದ ಹಾರುತ್ತವೆ), 5.9% ನಷ್ಟು ಮುನ್ನುಡಿದ ಒಟ್ಟಾರೆ ಶಕ್ತಿಯ ದಕ್ಷತೆಯನ್ನು ಹೊಂದಿರುತ್ತದೆ. ಆದರೆ ಸಾಂಪ್ರದಾಯಿಕ, ಆಧುನಿಕ, ಗಾಳಿ ಉಸಿರಾಡುವ ಜೆಟ್ ಎಂಜಿನ್ 35% ಗೆ ಹತ್ತಿರವಿರುವ ದಕ್ಷತೆಯನ್ನು ಸಾಧಿಸುತ್ತದೆ. ಹೀಗಾಗಿ ರಾಕೆಟ್‌ಗೆ ಸುಮಾರು 6 ಪಟ್ಟು ಹೆಚ್ಚು ಶಕ್ತಿಯ ಅಗತ್ಯವಿರುತ್ತದೆ; ಮತ್ತು ರಾಕೆಟ್ ನೋದಕದ ವಿಶಿಷ್ಟ ಶಕ್ತಿಗೆ ಸಾಂಪ್ರದಾಯಿಕ ವಾಯು ಇಂಧನದ ಸುಮಾರು ಮೂರನೇ ಒಂದು ಭಾಗವಾಗಿರಲು ಅನುವು ಮಾಡಿಕೊಟ್ಟರೆ, ಅದೇ ಪ್ರಯಾಣಕ್ಕೆ ಸರಿಸುಮಾರು 18 ಪಟ್ಟು ಹೆಚ್ಚು ನೋದಕದ ದ್ರವ್ಯರಾಶಿಯನ್ನು ಹೊತ್ತೊಯ್ಯಬೇಕಾಗುತ್ತದೆ. ಅದಕ್ಕಾಗಿಯೇ ಸಾಮಾನ್ಯ ವಿಮಾನಯಾನಕ್ಕಾಗಿ ರಾಕೆಟ್‌ಗಳನ್ನು ಬಳಸುವುದು ಅಪರೂಪ.

ಶಕ್ತಿಯು ಅಂತಿಮವಾಗಿ ಇಂಧನದಿಂದ ಬರುವುದರಿಂದ, ಈ ಪರಿಗಣನೆಗಳ ಅರ್ಥವೇನೆಂದರೆ, ICBM ಗಳು ಅಥವಾ ಕಕ್ಷೀಯ ಉಡಾವಣೆಗಳಂತಹ ಬಹಳ ಹೆಚ್ಚಿನ ವೇಗದ ಅಗತ್ಯವಿರುವಾಗ ರಾಕೆಟ್‌ಗಳು ಮುಖ್ಯವಾಗಿ ಉಪಯುಕ್ತವಾಗಿರುತ್ತವೆ. ಉದಾಹರಣೆಗೆ, ನಾಸಾದ ಸ್ಪೇಸ್ ಶಟಲ್ ತನ್ನ ಇಂಜಿನ್‌ಗಳನ್ನು ಸುಮಾರು 8.5 ನಿಮಿಷಗಳ ಕಾಲ ಉರಿಸುತ್ತದೆ, ಮತ್ತು 1,000 ಟನ್‌ಗಳಷ್ಟು ಘನ ನೋದಕವನ್ನು (16% ಅಲ್ಯೂಮಿನಿಯಂ ಅನ್ನು ಹೊಂದಿರುತ್ತದೆ) ಮತ್ತು (25,000 ಕೆಜಿ ಪೇಲೋಡ್ ಸೇರಿದಂತೆ) 100,000 ಕೆ.ಜಿ ಭಾರದ ವಾಹನವನ್ನು 111 ಕಿಮೀ ಎತ್ತರಕ್ಕೆ ಹಾರಿಸಲು ಮತ್ತು 30,000 ಕಿಮೀ / ಗಂ ಕಕ್ಷೀಯ ವೇಗವನ್ನು ಸಾಧಿಸಲು ಹೆಚ್ಚುವರಿ 2,000,000 ಲೀಟರ್ ದ್ರವ ನೋದಕವನ್ನು (106,261 ಕೆಜಿ ನಷ್ಟು ದ್ರವ ಜಲಜನಕ ಇಂಧನ) ಸೇವಿಸುತ್ತದೆ. ಈ ಎತ್ತರ ಮತ್ತು ವೇಗದಲ್ಲಿ, ವಾಹನವು ಸುಮಾರು 3 TJ ನಷ್ಟು ಚಲನಶಕ್ತಿಯನ್ನು ಹೊಂದಿರುತ್ತದೆ ಮತ್ತು ಸರಿಸುಮಾರು 200 GJ ನಷ್ಟು ಅಂತಸ್ಥಶಕ್ತಿಯನ್ನು ಹೊಂದಿರುತ್ತದೆ. ಆರಂಭಿಕ ಶಕ್ತಿಯು 20 TJ ನಷ್ಟು ಎಂದು ತೆಗೆದುಕೊಂಡರೆ, ಕಕ್ಷೆಗಾಮಿಯನ್ನು ಉಡಾವಣೆ ಮಾಡುವಲ್ಲಿ ಸ್ಪೇಸ್ ಶಟಲ್ ಸುಮಾರು 16% ಶಕ್ತಿ ಸಮರ್ಥವಾಗಿರುತ್ತದೆ.

ಹಾಗಾಗಿ ಟರ್ಬೋಫ್ಯಾನ್‌ಗಳಂತಹ (ಅವುಗಳ ಕಳಪೆ ಯ ಹೊರತಾಗಿಯೂ) ವೇಗ ಮತ್ತು ಧಾರೆಯ ನಿಷ್ಕಾಸ ವೇಗದ ನಡುವೆ ಉತ್ತಮ ಹೊಂದಾಣಿಕೆಯನ್ನು ಹೊಂದಿರುವ ಜೆಟ್ ಎಂಜಿನ್‌ಗಳು ಉಪಧ್ವನಿಕ ಮತ್ತು ಧ್ವನ್ಯತೀತ ವಾತಾವರಣದ ಬಳಕೆಗೆ ಪ್ರಧಾನವಾಗಿವೆ, ಆದರೆ ರಾಕೆಟ್‌ಗಳು ಅತಿಧ್ವನಿಕ ವೇಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಮತ್ತೊಂದೆಡೆ, ರಾಕೆಟ್‌ಗಳನ್ನು ಅನೇಕ ಕಡಿಮೆ-ವ್ಯಾಪ್ತಿಯ ತುಲನಾತ್ಮಕವಾಗಿ ಕಡಿಮೆ ವೇಗದ ಸೇನಾ ಅನ್ವಯಗಳಲ್ಲಿ ಸಹ ಬಳಸಲಾಗುತ್ತದೆ, ಏಕೆಂದರೆ ಅಲ್ಲಿ ಅವುಗಳ ಕಡಿಮೆ-ವೇಗದ ಅಸಮರ್ಥತೆಯನ್ನು ಅವುಗಳ ಅತ್ಯಂತ ಹೆಚ್ಚಿನ ನೋದನ ಬಲ ಮತ್ತು ಹಾಗಾಗಿ ಹೆಚ್ಚಿನ ವೇಗೋತ್ಕರ್ಷಗಳು ಮೀರಿಸುತ್ತವೆ.

ಒಬೆರ್ಥ್ ಪರಿಣಾಮ

[ಬದಲಾಯಿಸಿ]

ರಾಕೆಟ್‌ಗಳ ಒಂದು ಸೂಕ್ಷ್ಮ ವೈಶಿಷ್ಟ್ಯವು ಶಕ್ತಿಗೆ ಸಂಬಂಧಿಸಿದೆ. ಒಂದು ರಾಕೆಟ್ ಹಂತವು, ನಿರ್ದಿಷ್ಟ ಭಾರವನ್ನು ಹೊತ್ತೊಯ್ಯುವಾಗ, ನಿರ್ದಿಷ್ಟ ಡೆಲ್ಟಾ-ವಿ ಅನ್ನು ನೀಡಲು ಸಮರ್ಥವಾಗಿದೆ. ಈ ಡೆಲ್ಟಾ-ವಿ ಯ ಅರ್ಥವೇನೆಂದರೆ ವೇಗವು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹೆಚ್ಚಾಗುತ್ತದೆ (ಅಥವಾ ಕಡಿಮೆಯಾಗುತ್ತದೆ), ಮತ್ತು ಇದು ಆರಂಭಿಕ ವೇಗದಿಂದ ಸ್ವತಂತ್ರವಾಗಿರುತ್ತದೆ. ಆದರೆ, ಚಲನಶಕ್ತಿಯು ವೇಗದ ಮೇಲೆ ಚೌಕಾಕಾರದ ನಿಯಮದೊಂದಿಗೆ ಸಂಬಂಧಿತವಾಗಿರುವುದರಿಂದ, ಇದರರ್ಥ ಉರಿಯುವ ಮೊದಲು ರಾಕೆಟ್ ವೇಗವಾಗಿ ಚಲಿಸಿದಷ್ಟು, ಅದು ಅಷ್ಟು ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳುತ್ತದೆ ಅಥವಾ ಕಳೆದುಕೊಳ್ಳುತ್ತದೆ.

ಈ ವಾಸ್ತವಾಂಶವನ್ನು ಅಂತರಗ್ರಹ ಪ್ರಯಾಣದಲ್ಲಿ ಬಳಸಲಾಗುತ್ತದೆ. ಇದರರ್ಥ ರಾಕೆಟ್ ಭೂಮಿ ಅಥವಾ ಇತರ ಗ್ರಹದ ಮೇಲ್ಮೈಗೆ ಸಮೀಪದಲ್ಲಿ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವಾಗ, ಡೆಲ್ಟಾ-ವಿ ಅನ್ನು ಅನ್ವಯಿಸಿದರೆ, ವಿಮೋಚನ ವೇಗವನ್ನು ಮುಟ್ಟಲು ಬೇಕಾದ್ದಕ್ಕಿಂತ ಹೆಚ್ಚಿರುವ, ಇತರ ಗ್ರಹಗಳನ್ನು ತಲುಪಲು ಬೇಕಾದ ಡೆಲ್ಟಾ-ವಿ ಪ್ರಮಾಣ ಬಹಳವಾಗಿ ಕಡಿಮೆಯಿರಬಹುದು; ಆದರೆ ರಾಕೆಟ್ ಎತ್ತರದಲ್ಲಿ ನಿಧಾನವಾಗುವವರೆಗೆ ಕಾಯುವುದರಿಂದ ಅಪೇಕ್ಷಿತ ಪಥವನ್ನು ಸಾಧಿಸಲು ಬೇಕಾದ ಪ್ರಯತ್ನವನ್ನು ಗುಣಿಸುತ್ತದೆ.

ಸುರಕ್ಷತೆ, ವಿಶ್ವಸನೀಯತೆ ಮತ್ತು ಅಪಘಾತಗಳು

[ಬದಲಾಯಿಸಿ]
ಉಡಾವಣೆಗೊಂಡ 73 ಸೆಕೆಂಡುಗಳಾದ ಮೇಲೆ, ಎಸ್ಆರ್‌ಬಿಗಳಿಂದ ಬಿಸಿ ಅನಿಲಗಳು ತಪ್ಪಿಸಿಕೊಂಡ ನಂತರ, ಸ್ಪೇಸ್ ಶಟಲ್ ಚ್ಯಾಲೆಂಜರ್ ಧ್ವಂಸಗೊಂಡಿತು. ಇದರಿಂದ ಶಟಲ್‍ನ ಒಟ್ಟಿಲಿನ ವಿಘಟನ ಉಂಟಾಯಿತು.

ರಾಕೆಟ್‌ಗಳು ಸ್ವರೂಪನಿಷ್ಠವಾಗಿ ಬಹಳವಾಗಿ ಅಪಾಯಕಾರಿ ಅಲ್ಲ. ಸೇನಾ ಬಳಕೆಯಲ್ಲಿ, ಪರ್ಯಾಪ್ತ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಪಡೆಯಲಾಗುತ್ತದೆ. ಆದರೆ, ಬಾಹ್ಯಾಕಾಶ ಬಳಕೆಗಾಗಿ, ಬಹುತೇಕ ವಿಮಾನಗಳು ಸ್ವಲ್ಪ ಅಪಾಯವನ್ನು ಹೊಂದಿರುತ್ತವೆ.[೧೦೦] ಶಟಲ್‍ನ ಉಡಾವಣೆಗೆ ಅಸುರಕ್ಷಿತ ಸ್ಥಿತಿಯ ಸಾಧ್ಯತೆಯು ಬಹಳ ಸರಿಸುಮಾರು 1% ಎಂದು ರಿಚರ್ಡ್ ಫೆಯ್ನ್‌ಮನ್ ಅಂದಾಜಿಸಿದರು,[೧೦೧] ಮತ್ತು ಕಕ್ಷೀಯ ಬಾಹ್ಯಾಕಾಶ ಹಾರಾಟದಲ್ಲಿ ಐತಿಹಾಸಿಕ ಪ್ರತಿ ವ್ಯಕ್ತಿ-ಹಾರಾಟದ ಅಪಾಯವು 50 ರಲ್ಲಿ ಸುಮಾರು 1 ರಷ್ಟಿದೆ.[೧೦೨]

ಉಪಯುಕ್ತ ರಾಕೆಟ್ ನೋದಕಗಳಲ್ಲಿ ಅಗಾಧವಾದ ರಾಸಾಯನಿಕ ಶಕ್ತಿಯ ಕಾರಣದಿಂದ (ತೂಕದಿಂದ ಸ್ಫೋಟಕಗಳಿಗಿಂತ ಹೆಚ್ಚಿನ ಶಕ್ತಿ, ಆದರೆ ಗ್ಯಾಸೋಲಿನ್‌ಗಿಂತ ಕಡಿಮೆ), ಅಪಘಾತಗಳು ಸಂಭವಿಸಬಹುದು, ಸಂಭವಿಸಿವೆ ಮತ್ತು ಸಂಭವಿಸುವವು. ಸಾಮಾನ್ಯವಾಗಿ ಬಹಳವಾದ ಕಾಳಜಿ ವಹಿಸುವುದರಿಂದ ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಜನರ ಸಂಖ್ಯೆ ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ, ಆದರೆ ಅವುಗಳ ದಾಖಲೆಯು ಪರಿಪೂರ್ಣವಾಗಿಲ್ಲ.

ಸುರಕ್ಷತೆಯನ್ನು ಸುಧಾರಿಸಲು ಕೂಡ ರಾಕೆಟ್‌ಗಳನ್ನು ಬಳಸಲಾಗುತ್ತದೆ- ಅನೇಕ ನಿಷ್ಕಾಸನ ಆಸನಗಳು ಮೂಲಭೂತವಾಗಿ ರಾಕೆಟ್‌ಗಳಾಗಿದ್ದು, ಪೈಲಟ್‌ಗಳನ್ನು ಅವರ ವಿಮಾನದಿಂದ ಬಹಳ ಬೇಗನೆ ದೂರ ಚಿಮ್ಮಬಲ್ಲವು, ಮತ್ತು ಅವು ಅನೇಕ ಜೀವಗಳನ್ನು ಉಳಿಸಿವೆ. ಅನೇಕ ಮಾನವಸಹಿತ ರಾಕೆಟ್ ವಾಹನಗಳಲ್ಲಿ ಇದೇ ರೀತಿಯ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿರುತ್ತದೆ.

ಖರ್ಚು-ವೆಚ್ಚಗಳು ಮತ್ತು ಆರ್ಥಿಕತೆ

[ಬದಲಾಯಿಸಿ]

ರಾಕೆಟ್‌ಗಳ ವೆಚ್ಚಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು, ನೋದಕದ ವೆಚ್ಚಗಳು, ರಾಕೆಟ್‌ನ 'ಶುಷ್ಕ ರಾಶಿ' ಯನ್ನು (ಡ್ರೈ ಮಾಸ್) ಪಡೆಯುವ ಮತ್ತು/ಅಥವಾ ಉತ್ಪಾದಿಸುವ ವೆಚ್ಚಗಳು ಮತ್ತು ಅಗತ್ಯವಿರುವ ಯಾವುದೇ ಆಧಾರ ಸಾಧನ ಮತ್ತು ಸೌಲಭ್ಯಗಳ ವೆಚ್ಚಗಳು.[೧೦೩]

ರಾಕೆಟ್‌ನ ಬಹುತೇಕ ಉಡ್ಡಯನ ದ್ರವ್ಯರಾಶಿಯು ಸಾಮಾನ್ಯವಾಗಿ ನೋದಕವಾಗಿರುತ್ತದೆ. ಆದರೆ, ನೋದಕವು ಪ್ರತಿ ಕೆಜಿಗೆ ಅಪರೂಪವಾಗಿ ಗ್ಯಾಸೋಲಿನ್‌ಗಿಂತ ಬಹಳ ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ (2009 ರ ವೇಳೆ ಗ್ಯಾಸೋಲಿನ್‍ನ ದರ ಸುಮಾರು $1/ಕೆಜಿ ಅಥವಾ ಅದಕ್ಕಿಂತ ಕಡಿಮೆ), ಮತ್ತು ಗಣನೀಯ ಪ್ರಮಾಣದಲ್ಲಿ ಇದು ಅಗತ್ಯವಿದ್ದರೂ, ಅತ್ಯಂತ ಅಗ್ಗದ ರಾಕೆಟ್‌ಗಳನ್ನು ಹೊರತುಪಡಿಸಿ ಉಳಿದೆಲ್ಲವಕ್ಕೂ ನೋದಕದ ವೆಚ್ಚಗಳು ಸಾಮಾನ್ಯವಾಗಿ ತುಲನಾತ್ಮಕವಾಗಿ ಸಣ್ಣದಾಗಿರುತ್ತವೆ, ಆದರೆ ಸಂಪೂರ್ಣವಾಗಿ ನಗಣ್ಯವಲ್ಲ.[೧೦೩]

ರಾಕೆಟ್‌ನ ಶುಷ್ಕ ರಾಶಿಯ ವೆಚ್ಚಗಳು ಹೆಚ್ಚಾಗಿ ಅದಕ್ಕೆ ಆಕಾರ ಕೊಡಲು ಮತ್ತು ಅದನ್ನು ಜೋಡಿಸಲು ಅಗತ್ಯವಾದ ಉತ್ಪಾದನಾ ಪ್ರಕ್ರಿಯೆಗಳ ಮೇಲೆ ಅವಲಂಬಿಸಿರುತ್ತವೆ; ಬಳಸಲಾದ ವಸ್ತುಗಳು ಅಪರೂಪವಾಗಿ ದುಬಾರಿಯಾಗಿರುತ್ತವೆ. ಸಂಪೂರ್ಣ ವೈಮಾಂತರಿಕ್ಷ ವಸ್ತುಗಳಿಗೆ ~$10,000/kg (2009 ರಂತೆ) ನಷ್ಟು ಸರಾಸರಿ ವೆಚ್ಚಗಳು ಸಾಮಾನ್ಯವಾಗಿವೆ. ಈ ಹೆಚ್ಚಿನ ವೆಚ್ಚವು ಬಹುಮಟ್ಟಿಗೆ ಕಾರ್ಯಪಡೆ ಮತ್ತು ರಾಕೆಟ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಹಗುರವಾದ ರಚನೆಗಳನ್ನು ರೂಪಿಸಲು ಅಗತ್ಯವಿರುವ ಉಪಕರಣಗಳಿಂದಾಗಿ ಇರುತ್ತದೆ. ರಾಕೆಟ್‌ನ ಶುಷ್ಕ ರಾಶಿಯು ಸಾಮಾನ್ಯವಾಗಿ ರಾಕೆಟ್‌ನ ಒಂದು ಅಲ್ಪ ಭಾಗವಾಗಿದ್ದರೂ (ಹಲವುವೇಳೆ ರಾಕೆಟ್‌ನ 1/6 ಮತ್ತು 1/40 ರ ನಡುವೆ), ಆದಾಗ್ಯೂ ಈ ವೆಚ್ಚವು ಪ್ರಾಬಲ್ಯ ಹೊಂದಿದೆ.

ಆದರೆ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುವ ಸರಳ ರಾಕೆಟ್‌ಗಳ ರಚನೆಯು ಹಲವು ಪಟ್ಟು ಅಗ್ಗವಾಗಿರಬಹುದು,[೧೦೩] ಆದರೆ ಹೆಚ್ಚಿನ ಕಾರ್ಯಕ್ಷಮತೆಯುಳ್ಳ, ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಲಾಗುವ ಸಂಕೀರ್ಣ ರಚನೆಗಳು ಹೆಚ್ಚು ದುಬಾರಿಯಾಗುವ ಪ್ರವೃತ್ತಿ ಹೊಂದಿರುತ್ತವೆ.

ಆಧಾರ ಸಾಧನಗಳ ವೆಚ್ಚಗಳು, ವ್ಯಾಪ್ತಿಯ ವೆಚ್ಚಗಳು ಮತ್ತು ಉಡಾವಣಾ ಕಟ್ಟೆಗಳ ವೆಚ್ಚಗಳು ಸಾಮಾನ್ಯವಾಗಿ ರಾಕೆಟ್‌ನ ಗಾತ್ರದೊಂದಿಗೆ ಹೆಚ್ಚಾಗುತ್ತವೆ, ಆದರೆ ಉಡಾವಣಾ ದರದೊಂದಿಗೆ ಕಡಿಮೆ ಬದಲಾಗುತ್ತವೆ ಮತ್ತು ಆದ್ದರಿಂದ ಇವನ್ನು ಸರಿಸುಮಾರು ಸ್ಥಿರ ವೆಚ್ಚವೆಂದು ಪರಿಗಣಿಸಬಹುದು.[೧೦೩]

ಇವನ್ನೂ ನೋಡಿ

[ಬದಲಾಯಿಸಿ]

ಸಾಮಾನ್ಯ ರಾಕೆಟ್ರಿ

  • ವಿಮಾನ
  • ಅಮೊನಿಯಮ್ ಪರ್ ಕ್ಲೊರೇಟ್ ಕಾಂಪೊಸಿಟ್ ಪ್ರೊಪೆಲಂಟ್ - ಬಹುತೇಕ ಸಾಮಾನ್ಯವಾದ ದೃಢ ರಾಕೆಟ್ ಇಂಧನ
  • ಆಸ್ಟ್ರೊಡೈನಾಮಿಕ್ಸ್ - ಗಗನನೌಕೆಯ ಅಧ್ಯಯನದ ಅಂಶಗಳು
  • ಬೈಪ್ರೊಪೆಲಂಟ್ ರಾಕೆಟ್ - ಎರಡು-ಭಾಗ ದ್ರವ ಅಥವಾ ಅನಿಲ ಶಕ್ತಿ ಬಳಸಿದ ರಾಕೆಟ್
  • ಟ್ರಿಪೊಪಲಂಟ್ ರಾಕೆಟ್ - ವಿವಿಧ ನೋದಕಗಳು ಅದರ ದಕ್ಷತೆ ಹೆಚ್ಚಿಸಬಲ್ಲವು.
  • ಬಿಸಿ ನೀರಿನ ರಾಕೆಟ್ - ಕುದಿಯುವ ನೀರಿನಿಂದ ಚಲಿಸುವ ರಾಕೆಟ್
  • ಹೈಬ್ರೀಡ್ ರಾಕೆಟ್ - ದೃಢ ರಾಕೆಟ್ ಎರಡನೆಯ ದ್ರವಶಕ್ತಿ ಚಾಲಿತ ನೋದಕದಿಂದ ಸುಟ್ಟು ಹೋದದ್ದು.
  • ರಾಕೆಟ್ ಉಡಾವಣಾ ಪೀಠ
  • ಪೆಂಡುಲಮ್ ರಾಕೆಟ್ ಭ್ರಾಂತಿ - ರಾಕೆಟ್‍ಗಳ ಅಸ್ಥಿರತೆ
  • ಶಕ್ತಿ ತುಂಬಿದ ರಾಕೆಟ್ ಮೊಟಾರ್‌ಗಳು - ದೃಢ ರಾಕೆಟ್‍ಗಳು ಆಯಾ ವಲಯದಲ್ಲಿ ಉರಿಯುತ್ತವೆ.
  • ರಾಕೆಟ್ ಎಂಜಿನ್‍ನ ನಳಿಕೆಗಳು - ಡೆ ಲಾವಲ್ ನೋಜಲ್
  • ಗಗನ ನೌಕೆಯ ಮುನ್ನೂಕುವ ನೋದಕ -ಇದು ವಿಭಿನ್ನ ಗಗನ ನೌಕೆಗಳಿಗೆ ಬಳಸುವ ವಿಧಾನವನ್ನು ವಿವರಿಸುತ್ತದೆ.
  • ತಿಸ್ಕ್ಲೊವಿಸ್ಕಿ ರಾಕೆಟ್ ಸಮೀಕರಣ - ರಾಕೆಟ್‌ನ ಕಾರ್ಯ ವೈಖರಿ ವರ್ಣಿಸುವ ಸಮೀಕರಣ

ಮನೋರಂಜನೆಗಾಗಿರುವ ರಾಕೆಟ್ರಿ

  • ಮಾದರಿ ರಾಕೆಟ್ - ಸಣ್ಣ ಹವ್ಯಾಸದ ರಾಕೆಟ್
  • ಅತ್ಯಧಿಕ ಶಕ್ತಿಯ ರಾಕೆಟ್
  • ಜಲ ರಾಕೆಟ್ - ಆಟದ ರಾಕೆಟ್‍ನ್ನು ಜಲಶಕ್ತಿ ಬಳಸಿ ಮನೋರಂಜನೆಗಾಗಿ ಹಾರಿಸಲಾಯಿತು.
  • ಬಲೂನ್ ರಾಕೆಟ್
  • ಟ್ರಿಪೊಲಿ ರಾಕೆಟ್ರಿ ಅಸೊಶಿಯೇಶನ್
  • ನಾಶನಲ್ ಅಸೊಶಿಯೇಶನ್ ಆಫ್ ರಾಕೆಟ್ರಿ

ರೀಕ್ರಿಯೇಶನಲ್ ಪೈರೊಟೆಕ್ನಿಕ್ ರಾಕೆಟ್ರಿ

  • ಬಾಟಲ್ ರಾಕೆಟ್ - ಸಣ್ಣ ಸುಡುಮದ್ದಿನಂತಹ ರಾಕೆಟ್ ಇದನ್ನು ಬಾಟಲ್ ಗಳಲ್ಲಿಟ್ಟು ಉಡಾಯಿಸಲಾಗುತ್ತದೆ.
  • ಆಕಾಶ ರಾಕೆಟ್ - ಸುಡುಮದ್ದುಗಳೂ ಸಹ ಅದೇ ರೀತಿ ಸ್ಪೋಟಗೊಳ್ಳುತ್ತವೆ.

ಶಸ್ತ್ರಗಾರಿಕೆ

  • ರಾಕೆಟ್-ಚಲನೆಯ ಆಧಾರದ ಗ್ರೆನೇಡ್ - ಮಿಲಿಟರಿ ಬಳಸಿದ ರಾಕೆಟ್‍ಗಳು
  • ಗಾಳಿಯಿಂದ-ನೆಲದಡೆಗೆ ಹಾರುವ ರಾಕೆಟ್ ಗಳು
  • ಬೆಂಕಿ ಬಾಣ -ಅತ್ಯಂತ ಹಳೆಯ ಮಾದರಿಯ ಆರಂಭಿಕ ರಾಕೆಟ್
  • ಶಿನ್ ಕಿ ಚೊನ್ - ಕೊರಿಯನ್ ವ್ಯತ್ಯಾಸ ಹೊಂದಿರುವ ಚೀನಾದ ಬೆಂಕಿ ಬಾಣ
  • ಕಟ್ಯುಶಾ ರಾಕೆಟ್ ಲಾಂಚರ್ - ಎತ್ತರವಾಗಿ ಮೇಲ್ಮುಖ ರಾಕೆಟ್
  • ವಿಎ-111 ಶಕ್ವಾಲ್ - ರಶಿಯನ್ ರಾಕೆಟ್-ಚಾಲಿತ ಸುಧಾರಿತ ಸುಡುಗುಂಡು

ಸಂಶೋಧನೆಗಳಿಗಾಗಿರುವ ರಾಕೆಟ್‍ಗಳು

  • ಅಗೋಚರ ರಾಕೆಟ್ - ನೆಲದಿಂದ ದಾಳಿಗಾಗಿ ಮತ್ತು ಸುರಕ್ಷತೆ ಕಾರಣಗಳಿಗಾಗಿ ಉಡಾಯಿಸಿದ ರಾಕೆಟ್
  • ರಾಕೆಟ್ ಗಗನ ನೌಕೆ - ರಾಕೆಟ್‍ಗಳ ಮೂಲಕ ಶಕ್ತಿ ಪಡೆದ ರೆಕ್ಕೆಯುಳ್ಳ ವಾಯುನೌಕೆ
  • ರಾಕೆಟ್ ವಾಹಕ ಜಾರು ಬಂಡಿ - ಎಲದ ಮೇಲಿನ ಎತ್ತರದ ಆಕ್ರಮಣಕ್ಕೆ ಉಪಯೋಗ
  • ಸದ್ದು ಮಾಡುವ ರಾಕೆಟ್ - ಉಪಕಕ್ಷಾ ಮಾದರಿ ನಿರ್ಮಿತ ರಾಕೆಟ್‍ನ್ನು ವಾಯುಗುಣ ಮತ್ತು ಇನ್ನಿತರ ಸಂಶೋಧನೆಗೆ ಬಳಸಲಾಗುತ್ತದೆ.

ಇತರೆ

  • ರಾಕೆಟ್ ಮೇಲ್ (ಅಂಚೆ) - ರಾಕೆಟ್ರಿಯನ್ನು ವಾಣಿಜ್ಯೀಕರಿಸುವ ಒಂದು ವಿಫಲ ಯತ್ನ
  • ರಾಕೆಟ್ ಹಬ್ಬ - ಲಾವೊಸ್ ಮತ್ತು ಈಶಾನ್ಯ ಥೈಲ್ಯಾಂಡ್ ನ ಸಾಂಪ್ರದಾಯಿಕ ರಾಕೆಟ್ ಗಳು
  • ಐನ್‍ಸ್ಟೈನ್ ಅವರ ಸಮದ್ರವ್ಯರಾಶಿ ತತ್ವದ ಪ್ರಕಾರ ಯಾವುದೇ ಅತಿ ಸಣ್ಣ ಬಾಹ್ಯಾಕಾಶ ಪ್ರದೇಶದಲ್ಲಿ ಉಡಾಯಿಸಿದ ರಾಕೆಟ್‌ನ ಚಲನಾವೇಗವು ಅದರ ಮೇಲಾಗುವ ಗುರುತ್ವಾಕರ್ಷಣ ಶಕ್ತಿಗೆ ಸಮರೂಪವಾಗಿರುತ್ತದೆ.

ಟಿಪ್ಪಣಿಗಳು

[ಬದಲಾಯಿಸಿ]
ಅಡಿ ಟಿಪ್ಪಣಿಗಳು
  1. "With its ninth century AD origins in China, the knowledge of gunpowder emerged from the search by alchemists for the secrets of life, to filter through the channels of Middle Eastern culture, and take root in Europe with consequences that form the context of the studies in this volume."[]
  2. "Without doubt it was in the previous century, around +850, that the early alchemical experiments on the constituents of gunpowder, with its self-contained oxygen, reached their climax in the appearance of the mixture itself."[]
  3. (正大九年)其守城之具有火砲名「震天雷」者,铁罐盛药,以火点之,砲起火发,其声如雷,闻百里外,所爇围半亩之上,火点著甲铁皆透。(蒙古)大兵又为牛皮洞,直至城下,掘城为龛,间可容人,则城上不可奈何矣。人有献策者,以铁绳悬「震天雷」者,顺城而下,至掘处火发,人与牛皮皆碎迸无迹。又「飞火枪」,注药以火发之,辄前烧十余步,人亦不敢近。(蒙古)大兵惟畏此二物云。(Rough translation: Year 1232: Among the weaponry at the defense city Kaifeng are the "thundercrash", which are made of iron pot, filled with drugs black powder, that exploded after being lighted with fire, and made a noise like thunder. They could be heard from over ೧೦೦ li, and could spread on more than a third of an acre, moreover they could penetrate the armours and the iron. The Mongol soldiers employed a siege carriage cloaked with cowskin, advanced to the city below, then grubbed a niche on the city-wall, which could spare a man between. The Jin defenders atop did not know what to do, but they got an advice later. Thus, they dropped the pot with an iron string from the fortress, and the pot reached to the niche area and exploded, blowing men and carriage to pieces without trace. The defenders also have the "flying fire-lance", which they infused with black powder and ignited it. This lance flamed within a range of over ten paces on the front, and no one dared to approach it. It was said that the Mongol soldiers could only be deterred by these two devices.) [೧೦]
  4. “thrust-to-weight ratio F/Wg is a dimensionless parameter that is identical to the acceleration of the rocket propulsion system (expressed in multiples of g0) ... in a gravity-free vacuum”[೯೭]
ಉಲ್ಲೇಖಗಳು
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ Sutton 2001 ಚಾಪ್ಟರ್ ೧
  2. MSFC History Office "ರಾಕೆಟ್ಸ್ ಇನ್ ಎನ್ಸಿಯಂಟ್ ಟೈಮ್ಸ್ in Ancient Times (೧೦೦ B.C. ಯಿಂದ ೧೭ ನೆಯ ಶತಮಾನ )"
  3. Buchanan 2006, p. 2
  4. Needham 1986, p. 7
  5. Chase 2003, pp. 31–32
  6. W. A. P. Martin (1901), The Lore of Cathay or The Intellect of China, New York: Fleming H. Revell Company, p. 25
  7. ಮಾರ್ಟಿನ್ |p.೨೫
  8. ಮಾರ್ಟಿನ್ |p.೨೬
  9. ೯.೦ ೯.೧ ೯.೨ "A brief history of rocketry". NASA Spacelink. Archived from the original on 2006-08-05. Retrieved 2006-08-19.
  10. History of Jin ch. ೧೧೩
  11. Crosby 2002, pp. 100–103
  12. Needham 1986, p. 510
  13. Hassan & a
  14. Hassan & b
  15. von Braun & Ordway 1966[page needed]
  16. "ರಾಕೆಟ್ಸ್ ಅಂಡ್ ಮಿಸೈಲ್ಸ್: ದಿ ಲೈಫ್ ಸ್ಟೊರಿ ಆಫ್ ಎ ಟೆಕ್ನಾಲಜಿ ", ಎ. ಬೌಡುವಿನ್ ವ್ಯಾನ್ ರೈಪರ್ ,p.೧೦
  17. ಕೊನಾರ್ಡ್ ಹ್ಯಾಸ್ ರಾಕೆಟೆನ್ ಪಾಯನಿರ್ ಇನ್ ಸೆಬೆನ್ ಬರ್ಗನ್ (ಜರ್ಮನ್)
  18. Nowak 1969, p. 182
  19. ರೊದ್ದಮ್ ನರಸಿಂಹ (೧೯೮೫). ರಾಕೆಟ್ಸ್ ಇನ್ ಮೈಸೂರ್ ಅಂಡ್ ಬ್ರಿಟೇನ್ , 1750-1850 A.D.[ಶಾಶ್ವತವಾಗಿ ಮಡಿದ ಕೊಂಡಿ] ನ್ಯಾಶನಲ್ ಏರೊನಾಟಿಕಲ್ ಲ್ಯಾಬ್ ರಾಟರಿ ಅಂಡ್ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್.
  20. ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕಾ (೨೦೦೮), "ರಾಕೆಟ್ ಅಂಡ್ ಮಿಸೈಲ್ "
  21. ೨೧.೦ ೨೧.೧ Stephen 1887 p. 9
  22. Van Riper 2004[page needed]
  23. ಬ್ರಿಟಿಶ್ ರಾಕೆಟ್ಸ್ ಎಟ್ ದಿ US ನ್ಯಾಶನಲ್ ಪಾರ್ಕ್ಸ್ ಸರ್ವಿಸ್, ಫೊರ್ಟ್ ಮೆಕೆನ್ರಿ ನ್ಯಾಶನಲ್ ಮೊನುಮೆಂಟ್ ಅಂಡ್ ಹಿಸ್ಟಾರಿಕ್ ಶ್ರೈನ್. ಮರುಪಡೆದಿದ್ದು ಫೆಬ್ರವರಿ ೨೦೦೮.
  24. ಹಿಸ್ಟರಿ ಆಫ್ ರಾಕೆಟ್ - 1804 ದಿಂದ 1815 ಬೈಗರೆಥ್ ಗ್ಲೊವರ್
  25. Space History Division 1999
  26. ೨೬.೦ ೨೬.೧ "Tsiolkovsky's Исследование мировых пространств реактивными приборами - ದಿ ಎಕ್ಸಪ್ಲೊರೇಶನ್ ಆಫ್ ಕಾಸ್ಮಿಕ್ ಸ್ಪೇಸ್ ಬೈ ಮೀನ್ಸ್ ಆಫ್ ರಿಅಕ್ಸನ್ ಡಿವೈಸಿಸ್ (ರಶಿಯನ್ ಪೇಪರ್)". Archived from the original on 2008-12-22. Retrieved 2010-08-13.
  27. Johnson 1995, pp. 499–521
  28. Esnault-Pelterie 1913
  29. "US ಪೇಟೆಂಟ್ 1,102,653". Archived from the original on 2017-07-28. Retrieved 2023-05-02.
  30. Goddard 1919
  31. "Topics of the Times". New York Times. January 13, 1920. Archived from the original on 2008-02-09. Retrieved 2007-06-21. {{cite news}}: Cite has empty unknown parameter: |coauthors= (help)
  32. ಜುರ್ಗೆನ್ ಹೆಂಜ್ ಇಂಜರ್ Heinz Ianzer, ಹರ್ಮನ್ ಒಬೆರ್ಥ, pǎrintele zborului cosmic ("ಹರ್ಮನ್ ಒಬೆರ್ಥ್ , ಫಾದರ್ ಆಫ್ ಕಾಸ್ಮಿಕ್ ಫ್ಲೈಟ್ ") (ಇನ್ ರೊಮನ್ ), pp. ೩, ೧೧, ೧೩, ೧೫.
  33. ಕೊನ್ ಸ್ಟಂಟಿನ್ ತಿಸೊಲ್ಕೊವಸ್ಕಿ - ರಾಕೆಟ್ಸ್ ಫ್ರಾಮ್ ರಸಿಯಾ [ಶಾಶ್ವತವಾಗಿ ಮಡಿದ ಕೊಂಡಿ]
  34. Goddard 2002, pp. 2, 15
  35. Clary 2003, pp. 44–45
  36. ದಿ ಇಂಟರ್ನೆಟ್ ಎನ್ ಸೈಕ್ಲೊಪಿಡಿಯಾ ಆಫ್ ಸೈನ್ಸ್ ಹಿಸ್ಟರಿ ಆಫ್ ರಾಕೆಟ್ರಿ: ಒಪೆಲ್-RAK
  37. ಹಿಸ್ಟರಿ ಆಫ್ ರಾಕೆಟ್ರಿ: ವೆರೆನ್ ಫರ್ ಫಾಮ್ಸುಚಿಫ್ ಹರ್ಟ್ (VfR)
  38. ಎ ರಾಕೆಟ್ ಡ್ರೈವ್ ಫಾರ್ ಲಾಂಗ್ ರೇಂಜ್ ಬಾಂಬರ್ಸ್ ಬೈ ಈ. ಸೆಂಗರ್ ಅಂಡ್ ಜೆ.ಬ್ರೆಡ್ ಆಗಸ್ಟ, 1944
  39. van der Linden, Frank H (November 2007), "Out of the Past", Aerospace America, pp. p39 {{citation}}: |first2= missing |last2= (help); |pages= has extra text (help); More than one of |last1= and |last= specified (help)
  40. Zaloga 2003, p. 3
  41. ದಿ ವಿ V-2 ಚಲನಶೀಲ ಕ್ಷಿಪಣಿ
  42. Hunt 1991, pp. 72–74
  43. Béon 1997[page needed]
  44. "ಮೆಸ್ಸರ್ ಸ್ಕಿಮಿಟ್ ಮಿ 163 ಕೊಮೆಟ್." Archived 2017-06-09 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಲ್ಡ್ ವಾರ್ ೨ ಪ್ಲೇನ್ಸ್ . ೩೦ ಮಾರ್ಚ್‌ ೨೦೦೯ರಂದು ಪುನಃಪಡೆದುಕೊಳ್ಳಲಾಯಿತು.
  45. ಜಾಯಿಂಟ್ ಇಂಟೆಲೆಜೆನ್ಸ್ ಆಬ್ಜೆಕ್ಟಿವ್ಸ್ ಏಜೆನ್ಸಿ. U.S. ರಾಷ್ಟ್ರೀಯ ಪತ್ರಾಗಾರಗಳು ಮತ್ತು ದಾಖಲೆಗಳ ಆಡಳಿತ.
  46. von Braun 1963, pp. 452–465
  47. ಇಂಟರ್ ನ್ಯಾಶನಲ್ ಸ್ಪೇಸ್ ಹಾಲ್ ಆಫ್ ಫೇಮ್: ಸರ್ಗಿ ಕೊರೊಲೆವ್
  48. "Rocket R-7". S.P.Korolev RSC Energia. Archived from the original on 2020-03-30. Retrieved 2010-08-13.
  49. Hansen 1987 ಚಾಪ್ಟರ್ 12. Archived 2019-07-14 ವೇಬ್ಯಾಕ್ ಮೆಷಿನ್ ನಲ್ಲಿ.
  50. Allen & Eggers 1958
  51. "(PDF) ಹೈಪರ್ ಸೊನಿಕ್ಸ್ ಬಿಫೊರ್ ದಿ ಶಟಲ್: ಎ ಕನ್ಸೃಸ್ ಹಿಸ್ಟರಿ ಆಫ್ ದಿ X-15 ರಿಸರ್ಚ್ ಏರ್ ಪ್ಲೇಬ್ನ್ (NASA SP-2000-4518, 2000)" (PDF). Archived from the original (PDF) on 2018-05-25. Retrieved 2010-08-13.
  52. Houchin 2006[page needed]
  53. New York Times 17 June 1969 - A Correction
  54. GAO 1972[page needed]
  55. ಗ್ಲೊಬಲ್ ಪೊಸಿಶನಿಂಗ್ ಸಿಸ್ಟೆಮ್ಸ ವಿಂಗ್
  56. "NASA'ದ ಅತ್ಯುತ್ತಮ ವೀಕ್ಷಣೆಗಳು". Archived from the original on 2011-08-20. Retrieved 2021-07-21.
  57. "ಫಟ್ರಾನ್ ರಿಪೊರ್ಟ್" (PDF). Archived from the original (PDF) on 2011-07-11. Retrieved 2010-08-13.
  58. "NASA ಇತಿಹಾಸ: ರಾಕೆಟ್ ವಾಹಕಗಳು". Archived from the original on 2013-01-25. Retrieved 2010-08-13.
  59. OPEL ರಾಕೆಟ್ ವಹಕಗಳು
  60. Polmar 2004, p. 304
  61. Baker 2000, p. 581
  62. ದಿ ರಾಕೆಟ್ ಮ್ಯಾನ್
  63. Richard B. Dow (1958), Fundamentals of Advanced Missiles, Washington (DC): John Wiley & Sons {{citation}}: Unknown parameter |loc= ignored (help)
  64. United States Congress. House Select Committee on Astronautics and Space Exploration (1959), "4. Rocket Vehicles", Space handbook: Astronautics and its applications : Staff report of the Select Committee on Astronautics and Space Exploration, House document / 86th Congress, 1st session, no. 86, Washington (DC): U.S. G.P.O., OCLC 52368435, archived from the original on 2009-06-18, retrieved 2010-08-13 {{citation}}: Unknown parameter |chapterurl= ignored (help); Unknown parameter |coauthor= ignored (|author= suggested) (help)
  65. "ಕನ್ಸೈಸ್ ಬ್ರಿಟಾನಿಕಾ ಇಂಟರ್ನಲ್ ಕಾಂಬುಶನ್ ಎಂಜಿನ್ಸ್". Archived from the original on 2008-01-14. Retrieved 2010-08-13.
  66. Marconi 2004
  67. "Test sets world land speed record". www.af.mil. Archived from the original on 2012-06-04. Retrieved 2008-03-18.
  68. Stillwell, Wendell H (1964), "Chapter 2: The First Hypersonic Airplane", X-15 Research Results, NASA, archived from the original on 2022-04-13, retrieved 2010-08-13 {{citation}}: Unknown parameter |chapterurl= ignored (help)
  69. ಸ್ಪೇಸ್ ಫ್ಲೈಟ್ ನೌ-ವರ್ಲ್ಡ್ ವೈಡ್ ಲಾಂಚ್ ಶೆಡ್ಯುಲ್
  70. ಅಪೊಲೊಸ್ಯಾಟರ್ನ್:ಅಪೊಲೊ ಲಾಂಚ್ ಎಸ್ಕೇಪ್ ಸಬ್ ಸಿಸ್ಟೆಮ್
  71. ೭೧.೦ ೭೧.೧ Astronautix.com:" ರಂಗ ಸಜ್ಜಿಕೆ ಮೇಲೆ ಸೊಯುಜ್ ಟಿ-10-1 "ಉಡಾವಣಾ ವಾಹನವನ್ನು ಸ್ಪೋಟಿಸಿದಾಗ;ತಂಡವು ಜೀವರಕ್ಷಕಗಳ ವಿಧಾನದ ಮೂಲಕ ಉಳಿಸಿತು.
  72. ಹೌಸ್ಟಫ್ ವರ್ಕ್ಸ್ ಇಜೆಕ್ಷನ್ ಸೀಟ್ಸ
  73. "jetbelt". Transchool.eustis.army.mil. 1961-10-12. Retrieved 2010-02-08.
  74. ಸಾಮ್ಮಿ ಮಿಲ್ಲರ್
  75. ೭೫.೦ ೭೫.೧ ೭೫.೨ Potter & Crocker 1966[page needed]
  76. "NASA- Four forces on a model rocket". Archived from the original on 2012-11-29. Retrieved 2023-07-13.
  77. Glasstone 1965 p. 209.
  78. Callaway 2004, p. 2
  79. [161][162]
  80. [೧]Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ. General electric J-85
  81. ಥ್ರಸ್ಟ್ SSC ಮ್ಯಾಚ್ 1 ಕ್ಲಬ್: ಆರ್ಟ್ ಆರ್ಫೊನ್ಸ್ ಲಾಸ್ಟ್ ಸ್ಟ್ಯಾಂಡ್ ಬೈ ರಿಚರ್ಡ್ ನೊಬೆಲ್ Archived 2016-06-17 ವೇಬ್ಯಾಕ್ ಮೆಷಿನ್ ನಲ್ಲಿ. J-೮೫ ವು ಪ್ರತಿ ಪೌಂಡ್ ಎಂಜಿನ್ ಗೆ "೫.೬ lbs ನಷ್ಟು ಶಕ್ತಿ ಹೊಂದಿದೆ."
  82. ೮೨.೦ ೮೨.೧ ಏರೊಸ್ಪೇಸ್ ವೆಬ್:ಸ್ಪೇಸ್ ಶಟಲ್ ಮ್ಯಾಕ್ಸ್ -Q
  83. Sutton 2001 eq-೨-೧೪
  84. Sutton 2001, p. 27
  85. Sutton 2001, p. 29
  86. [176]
  87. cislunar delta-vs
  88. "ಚೂಸ್ ಯುವರ್ ಎಂಜಿನ್". Archived from the original on 2010-05-29. Retrieved 2010-08-13.
  89. ರಾಕೆಟ್ ಗಳ ವಿಕಾಸ
  90. "ರಾಕೆಟ್ ದ್ರವರಾಶಿಯ ಅನುಪಾತಗಳು". Archived from the original on 2013-02-16. Retrieved 2010-08-13.
  91. ೯೧.೦ ೯೧.೧ Astronautix- Ariane 5g
  92. ೯೨.೦ ೯೨.೧ Astronautix - Saturn V
  93. ೯೩.೦ ೯೩.೧ Astronautix- Saturn IB
  94. Astronautix-V-2
  95. ೯೫.೦ ೯೫.೧ ೯೫.೨ ೯೫.೩ ೯೫.೪ AIAA2001-4619 RLVs
  96. NASA 2006
  97. ೯೭.೦ ೯೭.೧ Sutton 2001, p. 442
  98. ಆಸ್ಟ್ರೊನಾಟಿಕ್ಸ್ NK-33 ಪ್ರವೇಶ
  99. ೯೯.೦ ೯೯.೧ ೯೯.೨ ೯೯.೩ Sutton 2001, pp. 37–38
  100. "A brief history of space accidents". Jane's Civil Aerospace. 2003-02-03. Archived from the original on 2003-02-04. Retrieved 2010-04-24.
  101. "ರೊಜರ್ಸ್ ಕಮಿಶನ್ ಅಪೆಂಡಿಕ್ಸ್ F". Archived from the original on 2019-12-07. Retrieved 2010-08-13.
  102. Space.com Going Private: ದಿ ಪ್ರೊಮಿಸ್ ಅಂಡ್ ಡೇಂಜರ್ ಆಫ್ ಸ್ಪೇಸ್ ಟ್ರಾವೆಲ್ ಬ್ಯ್ ತಾರಿಕ್ ಮಲಿಕ್
  103. ೧೦೩.೦ ೧೦೩.೧ ೧೦೩.೨ ೧೦೩.೩ A ರಾಕೆಟ್ ಎ ಡೇ ಕೀಪ್ಸ್ ದಿ ಹೈ ಕಾಸ್ಟ್ಸ್ ಅವೆ ಬೈ ಜೊನ್ ವಾಕರ್ ಸೆಪ್ಟೆಂಬರ್ ೨೭, ೧೯೯೩

ಪರಾಮರ್ಶನಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಆಡಳಿತ ಸಂಸ್ಥೆಗಳು
ಮಾಹಿತಿ ವಿವರದ ತಾಣಗಳು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: