ಅಕೋಲಾ ಕೋಟೆ
ಅಕೋಲಾ ಕೋಟೆಯನ್ನು ಅಸಗಡ್ ಎಂದೂ ಕರೆಯುತ್ತಾರೆ.[೧] ನಾರ್ನಾಲ ಮತ್ತು ಅಕೋಲ ಕೋಟೆಗಳು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪ್ರಮುಖ ಕೋಟೆಗಳಾಗಿವೆ.
ಇತಿಹಾಸ
[ಬದಲಾಯಿಸಿ]ಈ ಕೋಟೆಯನ್ನು ೧೬೯೭ರಲ್ಲಿ ಅಸದ್ ಖಾನ್ನು ನಿರ್ಮಿಸಿದನು. ಔರಂಗಜೇಬನ ಆಳ್ವಿಕೆಯಲ್ಲಿ ಅಸದ್ ಖಾನ್ನಿಂದಾಗಿ ಕೋಟೆಯು ಅಸದ್ಗಡ್ ಎಂಬ ಹೆಸರನ್ನು ಪಡೆದುಕೊಂಡಿತು. ೧೮೦೩ರಲ್ಲಿ, ಆರ್ಥರ್ ವೆಲ್ಲೆಸ್ಲಿ ಎರಡನೇ ಆಂಗ್ಲೋ-ಮರಾಠಾ ಯುದ್ಧದಲ್ಲಿ ಅರ್ಗಾಂವ್ ಕದನವನ್ನು ಗೆಲ್ಲುವ ಮೊದಲು ಇಲ್ಲಿ ಕ್ಯಾಂಪ್ ಮಾಡಿದ್ದರು.[೨] ೧೮೭೦ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ಈ ಕೋಟೆಯನ್ನು ಕೆಡವಲಾಯಿತು. ಕೋಟೆಯ ಕೇಂದ್ರ ಭಾಗವನ್ನು (ಹವಾಖಾನಾ) ಶಾಲೆಯಾಗಿ ಬಳಸಲಾಗಿದೆ ಎಂದು ೧೯೧೦ರಲ್ಲಿ ಡಿಸ್ಟ್ರಿಕ್ ಗೆಜೆಟ್ನಲ್ಲಿ ವರದಿಯಾಗಿದೆ.
ಪ್ರಮುಖ ವೈಶಿಷ್ಟಗಳು
[ಬದಲಾಯಿಸಿ]ಅಕೋಲಾ ಕೋಟೆಯು ಯಾವುದೇ ಅಲಂಕಾರಿಕ ಚಿತ್ರಗಳನ್ನು ಹೊಂದಿಲ್ಲ. ಕೋಟೆಯ ಮೇಲೆ ಹಲವಾರು ಶಾಸನಗಳಿವೆ. ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ನವಾಬ್ ಅಸದ್ ಖಾನ್ ಮಂತ್ರಿಯಾಗಿದ್ದಾಗ ದಹಿ ಹಂಡಾ ದ್ವಾರದ ಮೇಲಿನ ಶಾಸನವು ಕೋಟೆಯ ನಿರ್ಮಾಣದ ದಿನಾಂಕವನ್ನು ೧೧೧೪ ಎಹೆಚ್(ಕ್ರಿಸ್ತ ಶಕ ೧೬೯೭) ದೀಪಕ್ ಎಂದು ನೀಡುತ್ತದೆ. ಫತೇಹ್ ಬುರುಜ್ನ ಮೇಲೆ ಈ ಕೋಟೆಯ ನಿರ್ಮಾಣದ ಬಗೆಗಿನ ನಿಖರವಾದ ದಿನಾಂಕವಿಲ್ಲ. ಆದರೆ ಮಂತ್ರಿ ಅಸದ್ ಖಾನ್ ಆದರೆ ಬೇರೆ ಚಕ್ರವರ್ತಿಯ ಹೆಸರನ್ನು ಉಲ್ಲೇಖಿಸಿದೆ. ಈದ್ಗಾಹ್ನ ಒಂದು ಭಾಗವು ಕಟ್ಟಡವನ್ನು ಖವ್ಜಾ ಅಬ್ದುಲ್ ಲತೀಫ಼್ ೧೧೧೬ ಎಹೆಚ್(ಕ್ರಿಸ್ತ ಶಕ ೧೬೯೮)ನಲ್ಲಿ ಪೂರ್ಣಗೊಳಿಸಿದ ಹೇಳಿಕೆಯನ್ನು ನೀಡುತ್ತದೆ. ಅಗರ್ವೆಸ್ ಗೇಟ್ನಲ್ಲಿ ಮರಾಠೀ ಭಾಷೆಯಲ್ಲಿನ ಒಂದು ಶಾಸನವು ಕ್ರಿಸ್ತ ಶಕ ೧೮೪೩ರಲ್ಲಿ ಗೋವಿಂದ ಅಪ್ಪಾಜಿ ಅವರು ಕೋಟೆಯನ್ನು ನಿರ್ಮಿಸಿದ್ದಾರೆ ಎಂದು ಸಾರುತ್ತದೆ. ನಂತರದ ಹೇಳಿಕೆಗಳು ಇತರ ಶಾಸನಗಳಿಗೆ ವಿರುದ್ದವಾಗಿದೆ.
ಶ್ರೀ ರಾಜ ರಾಜೇಶ್ವರ ಮಂದಿರ
[ಬದಲಾಯಿಸಿ]ಅಕೋಲಾದ ಹಳೆಯ ಶಿವ ದೇವಾಲಯ ರಾಜೇಶ್ವರ ಮಂದಿರ. ಶಿವ ದೇವಾಲಯವನ್ನು ಚೋಳ ಸಾಮ್ರಾಜ್ಯದ ರಾಜ, ರಾಜ ರಾಜೇಶ್ವರ ಚೋಳನು ನಿರ್ಮಿಸಿದನು.
ಜಾನಪದ
[ಬದಲಾಯಿಸಿ]ರಾಜ ಅಕೋಲ್ಸಿಂಗ್ ಅಸದ್ಗಡದಲ್ಲಿ ವಾಸಿಸುತ್ತಿದ್ದಾಗ, ಈ ದೇವಾಲಯಕ್ಕೆ ಸಂಬಂಧಿಸಿದ ಪ್ರಸಿದ್ಧ ಕಥೆಯಿದೆ. ಪ್ರತಿ ರಾತ್ರಿ ಅವನ ರಾಣಿ ಮಧ್ಯರಾತ್ರಿಯಲ್ಲಿ ಶಿವನನ್ನು ಪೂಜಿಸಲು ಈ ದೇವಾಲಯಕ್ಕೆ ಹೋಗುತ್ತಿದ್ದಳು. ಒಮ್ಮೆ ರಾಜ ಅಕೋಲ್ಸಿಂಗ್ ತನ್ನ ರಾಣಿ ಮಧ್ಯರಾತ್ರಿಯಲ್ಲಿ ಅಕ್ರಮ ಕಾರಣಗಳಿಗಾಗಿ ಹೊರಗೆ ಹೋಗುತ್ತಿದ್ದಾಳೆ ಎಂದು ಭಾವಿಸಿದನು. ಆದ್ದರಿಂದ ಅವನು ಕತ್ತಿಯೊಂದಿಗೆ ಅವಳನ್ನು ಹಿಂಬಾಲಿಸಿದನು. ರಾಜ ಅಕೋಲಸಿಂಗ್ ತನ್ನನ್ನು ಹಿಂಬಾಲಿಸುತ್ತಿದ್ದಾನೆಂದು ರಾಣಿಗೆ ತಿಳಿಯಿತು. ಅವಳು ನೇರವಾಗಿ ಶಿವ ದೇವಾಲಯಕ್ಕೆ ಹೋದಳು. ತನ್ನ ಪತಿಯು ತನ್ನ ಬಗ್ಗೆ ತಪ್ಪಾಗಿ ಯೋಚಿಸುತ್ತಿದ್ದಾನೆ ಮತ್ತು ತನ್ನ ನಿಷ್ಠೆ ಮತ್ತು ಚಾರಿತ್ರ್ಯದ ಮೇಲೆ ಅವನಿಗೆ ನಂಬಿಕೆಯಿಲ್ಲದಿರುವುದು ಅವಮಾನಕರ ಎಂದು ತಿಳಿದು, ತನ್ನನ್ನು ಕರೆದುಕೋ ಎಂದು ದೇವರನ್ನು ಬೇಡಿಕೊಂಡಳು. ಆಗ ಶಿವಲಿಂಗವು ಎರಡು ಭಾಗಗಳಾಗಿ ಒಡೆಯಿತು ಹಾಗೂ ರಾಣಿ ಅದರೊಳಗೆ ಸೇರಿದಾಗ ಮತ್ತೆ ಅದು ಮುಚ್ಚಲ್ಪಟ್ಟಿತು. ರಾಜನು ತನ್ನ ತಪ್ಪನ್ನು ಅರ್ಥಮಾಡಿಕೊಂಡನು ಮತ್ತು ಸ್ವತಃ ತನ್ನನ್ನು ಕ್ಷಮಿಸಲು ಅವನಿಂದ ಸಾಧ್ಯವಾಗಲಿಲ್ಲ. ಈಗಲೂ ಈ ದೇವಾಲಯದಲ್ಲಿ ಆ ಶಿವಲಿಂಗವಿದೆ ಎಂಬ ಪ್ರತೀತಿಯಿದೆ. ಈ ಕಥೆಯನ್ನು ದೃಢೀಕರಿಸಲು ಹೇಳಲಾಗುವ ಒಂದು ಸಣ್ಣ ಬಿರುಕು ಶಿವಲಿಂಗದ ಮೇಲೆಯಿದೆ. ಈ ದೇವಾಲಯವು ಅಕೋಲಾ ನಗರದ ಮೂಲ ಆಸ್ಥೆಯಾಗಿದೆ . ಇಲ್ಲಿ ೨ ಸೇತುವೆಗಳಿವೆ: ಮೊದಲನೆಯದು ದಗಡಿ ಕೊಳ (ಕಲ್ಲಿನ ಸೇತುವೆ) (ಇದನ್ನು 'ಚೋಟಾ ಪೂಲ್' ಎಂದರೆ ಚಿಕ್ಕ ಸೇತುವೆ ಎಂದು ಕರೆಯಲಾಗುತ್ತದೆ) ಮತ್ತು ಇನ್ನೊಂದು ಲೋಖಂಡ್ ಪೂಲ್ (ಕಬ್ಬಿಣದ ಸೇತುವೆ) (ಇದನ್ನು 'ಮೋಠಾ ಪೂಲ್' ಎಂದರೆ ದೊಡ್ಡ ಸೇತುವೆ ಎಂದೂ ಕರೆಯಲಾಗುತ್ತದೆ). ಈ ಕಬ್ಬಿಣದ ಸೇತುವೆಯನ್ನು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಯಿತು.
ಉಲ್ಲೇಖಗಳು
[ಬದಲಾಯಿಸಿ]