ಅಕ್ಯಾಂತೊಟೆರಿಜಿಯೈ
ಅಕ್ಯಾಂತೊಟೆರಿಜಿಯೈ | |
---|---|
Labidesthes sicculus | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
(ಶ್ರೇಣಿಯಿಲ್ಲದ್ದು): | ಅಕ್ಯಾಂತೊಮೊರ್ಫ಼ಾ |
ಮೇಲ್ಗಣ: | ಅಕ್ಯಾಂತೊಪ್ಟೆರಿಜಿಯಿ |
Orders | |
See text. |
ಅಕ್ಯಾಂತೊಟೆರಿಜಿಯೈಮೂಳೆಯ ಮೀನುಗಳಲ್ಲಿ ಇವು ವಿಕಾಸದ ದೃಷ್ಟಿಯಿಂದ ಮುಂದುವರಿದ ಉಪವರ್ಗಕ್ಕೆ ಸೇರಿವೆ.
ಲಕ್ಷಣಗಳು
[ಬದಲಾಯಿಸಿ]ಮುಂದಿನ ಈಜುರೆಕ್ಕೆಯ ಕಿರಣಗಳು ಬಿಡುವಾಗಿದ್ದು ಮೊದಲನೆಯದು ಮುಳ್ಳಾಗಿ ಪರಿವರ್ತನೆಹೊಂದಿದೆ. ಮೈಮೇಲಿನ ಹುರುಪೆಗಳು ಸಾಧಾರಣವಾಗಿ ಟೀನಾಯಿಡ್ ರೀತಿಯವು. ಪ್ರೌಢಜೀವಿಗಳಲ್ಲಿ ಅನ್ನನಾಳಕ್ಕೂ ಗಾಳಿ[ಯ ಕೋಶಕ್ಕೂ ಸಂಬಂಧವಿರುವುದಿಲ್ಲ. ಸೊಂಟದ ಈಜುರೆಕ್ಕೆಗಳು ಮುಂದೆ ಸರಿದು ಎದೆಯ, ಕೊರಳಿನ ಅಥವಾ ಕೆಳದವಡೆಯ ತಳದಲ್ಲಿ ಇರುತ್ತವೆ. ನಡುಕಟ್ಟು ಕ್ಲೈತ್ರಂ ಮೂಳೆಗೆ ಅಂಟಿಕೊಂಡಿರುತ್ತದೆ. ಮೇಲ್ದವಡೆಯ ಮ್ಯಾಕ್ಸಿಲ್ಲ ಮೂಳೆಗಳಲ್ಲಿ ಹಲ್ಲುಗಳಿಲ್ಲ ಮತ್ತು ಅವು ಬಾಯಿಯ ಅಂಚಿಗೆ ಸೇರಿರುವುದಿಲ್ಲ.
ವಾಸ
[ಬದಲಾಯಿಸಿ]ಇವು ಸಾಧಾರಣವಾಗಿ ಸಮುದ್ರವಾಸಿಗಳು.
ಪ್ರಬೇಧಗಳು
[ಬದಲಾಯಿಸಿ]ಇವುಗಳಲ್ಲಿ ಸುಮಾರು 36 ಕುಟುಂಬಗಳಿವೆ. ಹಾರುಮೀನು, ಬಾಸ್, ಗೋಬಿ, ಫ್ಲೌಂಡರ್, ಬಾಂಗಡಮೀನು, ಉಬ್ಬು ಮೀನು, ಮೂರ್ಖಮೀನು, ಸಂದೂಕಮೀನು, ಮುಳ್ಳುಹಂದಿ ಮೀನು, ತಲೆಮೀನು, ಅಳಿಮೀನು ಮುಂತಾದುವು ಈ ಉಪವರ್ಗಕ್ಕೆ ಸೇರಿವೆ. ಇವುಗಳ ಕೆಲವು ಜಾತಿಗಳು ಕ್ರಿಟೇಷಿಯಸ್ ಯುಗದಲ್ಲಿ ಹುಟ್ಟಿ ಟರ್ಷಿಯರಿ ಯುಗದಲ್ಲಿ ಅಧಿಕವಾಗಿದ್ದುವು.