ವಿಷಯಕ್ಕೆ ಹೋಗು

ಅಘೋರಶಿವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಘೋರಶಿವ ಈತ ದೇವೀತಾಲೋತ್ತರಂ ಎಂಬ ಒಂದು ವೀರಶೈವಧರ್ಮ ಗ್ರಂಥವನ್ನು ಬರೆದಿದ್ದಾನೆ. ಇವನನ್ನು ಅನೇಕ ಪ್ರಾಚೀನ ವೀರಶೈವ ಕವಿಗಳು ತಮ್ಮ ಕೃತಿಗಳಲ್ಲಿ ಸ್ಮರಿಸಿದ್ದಾರೆ. ಪದ್ಮಣಾಂಕ (ಸು. ೧೩೮೫) ತನ್ನ ಪದ್ಮರಾಜ ಪುರಾಣದಲ್ಲಿ ಪೂರ್ವಕವಿಗಳನ್ನು ಸ್ಮರಿಸುವಾಗ ಅಘೋರಶಿವನನ್ನು ಸ್ಮರಿಸಿದ್ದನಾದ ಕಾರಣ ಈತ ೧೪ನೆಯ ಶತಮಾನಕ್ಕಿಂತ ಹಿಂದಿನವನೆಂದು ತಿಳಿಯಬಹುದು. ಅಘೋರಶಿವ ಪದ್ಧತಿ, ತತ್ತ್ವತ್ರಯನಿರ್ಣಯವ್ಯಾಖ್ಯ, ತತ್ತ್ವಪ್ರಕಾಶವೃತ್ತಿ, ತತ್ತ್ವಸಂಗ್ರಹ, ಲಘುಟೀಕಾ, ನಾದಕಾರಿವೃತ್ತಿ, ಸರ್ವಜ್ಞಾನೋತ್ತರವೃತ್ತಿ, ದೀಕ್ಷಾವಿಧಿ, ವಿಗೇಂದ್ರವೃತ್ತಿದೀಪಿಕಾ, ಮಹೋತ್ಸವನಿಧಿ, ರತ್ನತ್ರಯವೃತ್ತಿ, ಭೋಗಕಾರಿಕಾವೃತ್ತಿ ಮೊದಲಾದವುಗಳನ್ನು ರಚಿಸಿದ್ದಂತೆ ತಿಳಿದಿದೆ. ಈತ ಚಿದಂಬರದ ಆಮರ್ಧಕ ಮಠದ ಗುರುವಾಗಿದ್ದ.

"https://kn.wikipedia.org/w/index.php?title=ಅಘೋರಶಿವ&oldid=1228177" ಇಂದ ಪಡೆಯಲ್ಪಟ್ಟಿದೆ