ವಿಷಯಕ್ಕೆ ಹೋಗು

ಅದ್ನಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದ್ನಾನ್ ಬಿನ್ ಉದದ್
عدنان بن أدد
Other namesಅಬೂ ಮಅದ್ದ್
Known forಅದ್ನಾನಿ ಅರಬ್ಬರ ಪಿತಾಮಹ
Spouseಮಹ್ದದ್ ಬಿಂತ್ ಲಹ್ಮ್‌
Children
Parents
  • ಉದದ್ (father)
  • ಮುತಮತ್ತಿರ ಬಿಂತ್ ಅಲಿ (mother)
Familyಇಷ್ಮಾಯೇಲ್ ಕುಟುಂಬ

ಅದ್ನಾನ್ ಬಿನ್ ಉದದ್ (ಅರಬ್ಬಿ: عدنان بن أدد) (ಕ್ರಿ.ಪೂ. 122) ― ಅರೇಬಿಯದ ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯಭಾಗದಲ್ಲಿ ವಾಸವಾಗಿದ್ದ ಅರಬ್ಬರ ಪೂರ್ವ ಪಿತಾಮಹ.[] ಮುಹಮ್ಮದ್ ಪೈಗಂಬರರ ಪೂರ್ವಜರಲ್ಲೊಬ್ಬರು. ಇವರ ಸಂತತಿಯನ್ನು ಅದ್ನಾನಿಗಳು (Adnanite) ಎಂದು ಕರೆಯಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಅರೇಬಿಯದ ದಕ್ಷಿಣದಲ್ಲಿ ವಾಸವಾಗಿದ್ದ ಅರಬ್ಬರನ್ನು ಕಹ್ತಾನಿಗಳು (Qahtanite) ಎಂದು ಕರೆಯಲಾಗುತ್ತದೆ. ಇವರು ಕಹ್ತಾನ್‌ರ ಸಂತತಿಗಳು.

ಅದ್ನಾನ್ ಅಬ್ರಹಾಂರ ಮಗ ಇಷ್ಮಾಯೇಲರ ವಂಶದಲ್ಲಿ ಸೇರಿದವರು. ಅರಬ್ ಐತಿಹ್ಯಗಳು ಮತ್ತು ಮುಸ್ಲಿಂ ವಿದ್ವಾಂಸರು ಹೇಳುವಂತೆ ಇವರು ಇಷ್ಮಾಯೇಲರ ಮಗ ಕೇದಾರರ ವಂಶದವರು.[] ಇವರ ಸಂತತಿಗಳು ಅರೇಬಿಯದ ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯಭಾಗದಲ್ಲಿ ವಾಸವಾಗಿದ್ದರು.[][]

ಹೆಚ್ಚಿನ ಮುಸ್ಲಿಂ ವಿದ್ವಾಂಸರು ಅದ್ನಾನ್ ಮತ್ತು ಇಷ್ಮಾಯೇಲರನಡುವಿನ ಪೂರ್ವಜರನ್ನು ಗುರುತಿಸಲು ನಿರಾಕರಿಸುತ್ತಾರೆ ಮತ್ತು ಅಂತಹ ಪ್ರಯತ್ನ ಮಾಡುವವರನ್ನು ಖಂಡಿಸುತ್ತಾರೆ.[]

ಕುಟುಂಬ

[ಬದಲಾಯಿಸಿ]

ಅದ್ನಾನ್ ತನ್ನ ಪೂರ್ವಜರ ಮಲತಾಯಿ ಮಗ ಯಕ್‌ಶಾನ್‌ರ ವಂಶದಲ್ಲಿ ಸೇರಿದ ಮಹ್ದದ್ ಬಿಂತ್ ಲಹ್ಮ್‌ರನ್ನು ವಿವಾಹವಾದರು. ಇವರಿಗೆ ಮಅದ್ದ್ ಮತ್ತು ಅಕ್ಕ್ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಅಕ್ಕ್ ಯಮನಿನ ಅಶ್‌ಅರಿ ವಂಶದಲ್ಲಿ ಸೇರಿದ ಮಹಿಳೆಯನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದರು. ಅಶ್‌ಅರಿಗಳು ಸಬಾ ಬಿನ್ ಯಶ್‌ಜುಬ್ ಬಿನ್ ಯಅರುಬ್ ಬಿನ್ ಕಹ್ತಾನ್‌ರ ವಂಶದವರು.[]

ಉತ್ತರ ಅರೇಬಿಯನ್ ಶಾಸನಗಳಲ್ಲಿ

[ಬದಲಾಯಿಸಿ]

ಅದ್ನಾನ್ ಹೆಸರು ಸಾಮಾನ್ಯವಾಗಿ ವಿವಿಧ ಸಮೂದಿ ಶಾಸನಗಳಲ್ಲಿ ಕಂಡುಬರುತ್ತದೆ. ಆದರೆ ಅದರಲ್ಲಿ ಹೆಚ್ಚು ವಿವರಣೆಗಳಿಲ್ಲ. ಕೆಲವು ನಬತಿ ಶಾಸನಗಳಲ್ಲಿ ಅದ್ನಾನ್ ಕೆಲವು ರೀತಿಯ ಪ್ರಾಮುಖ್ಯತೆ ಅಥವಾ ಆದರವನ್ನು ಹೊಂದಿರುವಂತೆ ತೋರುತ್ತದೆ. ಏಕೆಂದರೆ ಕೆಲವು ನಬತಿಗಳು (ಇವರು ಇಷ್ಮಾಯೇಲರ ಹಿರಿಯ ಮಗ ನಬತ್‌ರ ವಂಶದವರು) ತಮ್ಮನ್ನು "ಅಬ್ದು ಅದ್ನಾನ್" (ಅದ್ನಾನರ ದಾಸರು) ಎಂದು ಕರೆಯುತ್ತಿದ್ದರು. ಅರಬ್ಬರು ಕೆಲವೊಮ್ಮೆ ತಮ್ಮ ಪುತ್ರರನ್ನು ತಮ್ಮ ಪೂರ್ವಜರ "ದಾಸರು" ಎಂದು ನಾಮಕರಣ ಮಾಡುತ್ತಿದ್ದರು. ಆದರೆ ಅವರು ಅದ್ನಾನರನ್ನು ಪೂಜಿಸುತ್ತಿದ್ದರು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.[]

ಎರಡನೇ ನೆಬುಕಡ್ನೆಜರ್ ಬ್ಯಾಬಿಲೋನ್‌ಗೆ ಹಿಂದಿರುಗಿದ ನಂತರ ಅದ್ನಾನ್ ನಿಧನರಾದರು. ಅದ್ನಾನ್‌ರ ಮರಣದ ನಂತರ, ಮೆಸೊಪಟೇಮಿಯಾ ಬಳಿಯ ಕೇದಾರಿ ಸಾಮ್ರಾಜ್ಯವು ನಾಶವಾಗಿ, ಅವರ ಮಗ ಮಅದ್ದ್ ಮಧ್ಯ-ಪಶ್ಚಿಮ ಹಿಜಾಝ್ ಪ್ರದೇಶಕ್ಕೆ ಹೋಗಿ ನೆಲೆಸಿದರು. ನವ-ಬ್ಯಾಬಿಲೋನಿಯನ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಅಳಿದುಳಿದ ಕೇದಾರಿ ಅರಬ್ಬರನ್ನು ಅವರ ಭೂಮಿಯಿಂದ ಉಚ್ಛಾಟಿಸಿ ಅಂಬಾರ್ ಪ್ರಾಂತ್ಯದಲ್ಲಿ ಮತ್ತು ಯೂಫ್ರಿಟೀಸ್ ನದಿಯ ತೀರದಲ್ಲಿ ವಾಸಿಸುವಂತೆ ಮಾಡಲಾಯಿತು.[]

ಸಂತತಿಗಳು

[ಬದಲಾಯಿಸಿ]

ಇಸ್ಲಾಮಿಕ್ ನಂಬಿಕೆಯ ಪ್ರಕಾರ ಮುಹಮ್ಮದ್ ಅದ್ನಾನರ ಸಂತತಿಯಲ್ಲಿ ಸೇರಿದವರು. ಅದ್ನಾನ್‌ರಿಂದ ಮುಹಮ್ಮದ್ ವರೆಗೆ 21 ತಲೆಮಾರುಗಳನ್ನು ಇತಿಹಾಸಕಾರರು ಗುರುತಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ದಿ ಎನ್‌ಸೈಕ್ಲೋಪೀಡಿಯಾ ಆಫ್ ಇಸ್ಲಾಂ (in English). ಬ್ರಿಲ್. 1986. p. 210.{{cite book}}: CS1 maint: unrecognized language (link)
  2. ಅಹ್ಮದ್ ಅಲ್-ಕಲ್ಕಶಂದಿ. Fulfilling the need of Knowing the origins of Arabs. Vol. 1. p. 118.
  3. ಅಬ್ಬಾಸ್ ಅಲ್-ಅಝ್ಝಾವಿ. Clans of Iraq. Vol. 1. p. 13.
  4. ಇಬ್ನ್ ಕಸೀರ್. ಅಲ್-ಬಿದಾಯ ವನ್ನಿಹಾಯ. Vol. 2. p. 187.
  5. ಅಬ್ದುಲ್ ರಹ್ಮಾನ್ ಅಲ್-ಮುಗೀರಿ. The chosen record of the Ancestries of Arab tribes. Vol. 1. p. 58.
  6. ಇಬ್ನ್ ಇಸ್ಹಾಕ್. ದಿ ಲೈಫ್ ಆಫ್ ಮುಹಮ್ಮದ್. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. p. 4.
  7. ಪ್ರೊ. ಜವ್ವಾದ್ ಅಲಿ. The Detailed History of Arabs before Islam. Vol. 1. p. 380.
  8. ಪ್ರೊ. ಜವ್ವಾದ್ ಅಲಿ. The Detailed History of Arabs before Islam. Vol. 1. pp. 160–161.
"https://kn.wikipedia.org/w/index.php?title=ಅದ್ನಾನ್&oldid=1177276" ಇಂದ ಪಡೆಯಲ್ಪಟ್ಟಿದೆ