ಅಧಿಸಾಮಾನ್ಯ
ಅಧಿಸಾಮಾನ್ಯ ಎಂಬುದು ಒಂದು ಸಾರ್ವತ್ರಿಕ ಶಬ್ದವಾಗಿದ್ದು (ಸುಮಾರು 1915–1920[೧] ರ [೨] ಅವಧಿಯಲ್ಲಿ ಸೃಷ್ಟಿಸಲ್ಪಟ್ಟಿತು), "ಸಾಮಾನ್ಯ ಅನುಭವ ಅಥವಾ ವೈಜ್ಞಾನಿಕ ವಿವರಣೆಯ[೩] ವ್ಯಾಪ್ತಿಯ" ಹೊರಗೆ ಇರುವ ಅನುಭವಗಳನ್ನು ನಿರ್ದಿಷ್ಟವಾಗಿ ಹೇಳುತ್ತದೆ ಅಥವಾ ವಿವರಿಸಲು ಅಥವಾ ಅಳೆಯಲು ವಿಜ್ಞಾನದ ಪ್ರಸಕ್ತ ಸಾಮರ್ಥ್ಯದ ಹೊರಗೆ ಇದೆ ಎಂಬುದಾಗಿ ಅರ್ಥೈಸಿಕೊಳ್ಳಲ್ಪಟ್ಟಿರುವ ವಿದ್ಯಮಾನಗಳನ್ನು ಇದು ಸೂಚಿಸುತ್ತದೆ.[೧][೪] ಕರಾಳ ವಿಷಯ ಮತ್ತು ಕರಾಳ ಶಕ್ತಿಯಂಥ ನಿರ್ದಿಷ್ಟ ಕಾಲ್ಪನಿಕ ಅಸ್ತಿತ್ವಗಳಿಗಿಂತ ಅಧಿಸಾಮಾನ್ಯ ವಿದ್ಯಮಾನಗಳು ಭಿನ್ನವಾಗಿವೆ; ವೈಜ್ಞಾನಿಕ ವಿಧಾನಶಾಸ್ತ್ರದೊಂದಿಗೆ ಜೋಡಿಸಲ್ಪಟ್ಟಿರುವ ಪ್ರಯೋಗವಾದಿ ವೀಕ್ಷಣೆಯ ಮೂಲಕ ಈಗಾಗಲೇ ಅರ್ಥೈಸಿಕೊಳ್ಳಲ್ಪಟ್ಟ ಪ್ರಪಂಚದೊಂದಿಗೆ ಅಧಿಸಾಮಾನ್ಯ ವಿದ್ಯಮಾನಗಳು ಅಸಮಂಜಸವಾಗಿ ಇರುವಷ್ಟರ ಮಟ್ಟಿಗೆ ಇವು ಭಿನ್ನವಾಗಿವೆ. ಅಧಿಸಾಮಾನ್ಯ ವಿದ್ಯಮಾನಗಳಿಗೆ ಸಂಬಂಧಿಸಿರುವ ಕಥೆಗಳು ಜನಪ್ರಿಯ ಸಂಸ್ಕೃತಿ, ಜನಪದ ಕಥೆಗಳು, ಮತ್ತು ವೈಯಕ್ತಿಕ ವಿಷಯಗಳ ನೆನಪುಗಳಲ್ಲಿ ಕಂಡುಬರುತ್ತವೆ. ಇದಕ್ಕೆ ತದ್ವಿರುದ್ಧವಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನ್ಯಾಷನಲ್ ಸೈನ್ಸ್ ಫೌಂಡೇಷನ್‌ನಂಥ ಸಂಘಟನೆಗಳಿಂದ ನೀಡಲ್ಪಟ್ಟ ಹೇಳಿಕೆಗಳಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ, ವೈಜ್ಞಾನಿಕ ಸಮುದಾಯವು ಸಮರ್ಥಿಸುವುದೇನೆಂದರೆ, ಅಧಿಸಾಮಾನ್ಯ ಎಂದು ನಿರೂಪಿಸಲ್ಪಟ್ಟಿರುವ ಒಂದು ವೈವಿಧ್ಯಮಯ ನಂಬಿಕೆಗಳನ್ನು ವೈಜ್ಞಾನಿಕ ಪುರಾವೆಯು ಬೆಂಬಲಿಸುವುದಿಲ್ಲ.[೫]
ವ್ಯುತ್ಪತ್ತಿ
[ಬದಲಾಯಿಸಿ]"ಪ್ಯಾರನಾರ್ಮಲ್" (“ಅಧಿಸಾಮಾನ್ಯ”) ಎಂಬ ಪದವು ಕನಿಷ್ಟಪಕ್ಷ 1920ರಿಂದಲೂ ಇಂಗ್ಲಿಷ್ ಭಾಷೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ.[೬][೭] ಇದು ಎರಡು ಭಾಗಗಳನ್ನು ಒಳಗೊಂಡಿದೆ. ಅವೆಂದರೆ: ಪ್ಯಾರ ಮತ್ತು ನಾರ್ಮಲ್. ಅಧಿಸಾಮಾನ್ಯ ಎಂಬ ಪದದ ಬಹುಪಾಲು ವ್ಯಾಖ್ಯಾನಗಳಲ್ಲಿ, ವೈಜ್ಞಾನಿಕವಾಗಿ ಸಾಧ್ಯ ಎಂದು ಯಾವುದು ಪರಿಗಣಿಸಲ್ಪಟ್ಟಿದೆಯೋ ಅದರ ಆಚೆಗೆ ಅಥವಾ ಅದರ ವಿರುದ್ಧವಾಗಿ ಇರುವ ಯಾವುದೇ ಸಂಗತಿ ಎಂಬುದಾಗಿ ಅದು ವಿವರಿಸಲ್ಪಟ್ಟಿದೆ.[೮] ನಮ್ಮ ಸುತ್ತಲಿರುವ ಪ್ರಪಂಚದ ವೈಜ್ಞಾನಿಕ ವಿವರಣೆಯು ಸದರಿ 'ಪ್ಯಾರನಾರ್ಮಲ್' ಪದದ 'ನಾರ್ಮಲ್' ಎಂಬ ಭಾಗವಾಗಿದ್ದರೆ, ಅರ್ಥದ ಮೇಲಿನ, ಆಚೆಯ, ಪಕ್ಕದ, ಪ್ರತಿಕೂಲವಾದ, ಅಥವಾ ವಿರುದ್ಧವಾದ ಭಾಗವನ್ನು 'ಪ್ಯಾರ' ಎಂಬುದು ರೂಪಿಸುತ್ತದೆ ಎಂಬುದಾಗಿ ವ್ಯಾಖ್ಯಾನವು ಸೂಚಿಸುತ್ತದೆ. ಪ್ಯಾರ ಎಂಬ ಭಾಗವು ಒಂದು ಗ್ರೀಕ್ ಮತ್ತು ಲ್ಯಾಟಿನ್ ಮೂಲವನ್ನು ಹೊಂದಿದೆ. ಇದರ ಅತ್ಯಂತ ಸಾಮಾನ್ಯ ಅರ್ಥವು (ಗ್ರೀಕ್ ಬಳಕೆ) ಖಂಡಭಾಗದಲ್ಲಿರುವಂತೆ 'ಇದನ್ನು ಹೋಲುವ' ಅಥವಾ 'ಇದಕ್ಕೆ ಸಮೀಪವಾಗಿರುವ' ಎಂಬುದಾಗಿದೆ. ಲ್ಯಾಟಿನ್ ಭಾಷೆಯಲ್ಲಿ, ಪ್ಯಾರ ಎಂಬುದಕ್ಕೆ 'ಮೇಲೆ', 'ವಿರುದ್ಧ', 'ಎದುರು', 'ಹೊರಗೆ', ಅಥವಾ 'ಆಚೆಗೆ' ಎಂಬ ಅರ್ಥಗಳಿವೆ. ಉದಾಹರಣೆಗೆ, ಫ್ರೆಂಚ್ ಭಾಷೆಯಲ್ಲಿ ಪ್ಯಾರಪ್ಲೂಯಿ ಎಂದರೆ 'ಮಳೆಯನ್ನು-ಎದುರಿಸು' – ಅಂದರೆ ಒಂದು ಛತ್ರಿ ಎಂದರ್ಥ. ಆಗ, ವಿಶ್ಲೇಷಣೆಯನ್ನು ಹೀಗೆ ಮಾಡಬಹುದು: ಪ್ಯಾರನಾರ್ಮಲ್ (ಅಧಿಸಾಮಾನ್ಯ) ಶಬ್ದವು 'ಪ್ಯಾರ' ಎಂಬುದರ ಲ್ಯಾಟಿನ್ ಬಳಕೆಯಿಂದ ಜನ್ಯವಾಗಿದ್ದು, ಇದು 'ರೂಢಿಯ ಮಾದರಿಯ ವಿರುದ್ಧ, ಎದುರು, ಹೊರಗೆ ಅಥವಾ ಆಚೆಗೆ' ಇರುವಂಥದು ಎಂಬ ಅರ್ಥವನ್ನು ಹೊಂದಿದೆ.
ಅಧಿಸಾಮಾನ್ಯ ವಿಷಯಗಳು
[ಬದಲಾಯಿಸಿ]ಗಮನಾರ್ಹವಾದ ಅಧಿಸಾಮಾನ್ಯ ನಂಬಿಕೆಗಳಲ್ಲಿ, ಪ್ರೇತಗಳು, ಭೂಮ್ಯತೀತ ಜೀವನ ಮತ್ತು ಗುರುತಿಸಲಾಗದ ಹಾರುವ ವಸ್ತುಗಳು (ಹಾರುವ ತಟ್ಟೆಗಳು), ಹಾಗೂ ನಿಗೂಢ ಜೀವಿಗಳಿಗೆ ಸಂಬಂಧಿಸಿರುವ ನಂಬಿಕೆಗಳು ಸೇರಿಕೊಂಡಿವೆ.
ಪ್ರೇತಗಳು ಮತ್ತು ಇತರ ಮಾನವಾತೀತ ಅಸ್ತಿತ್ವಗಳು
[ಬದಲಾಯಿಸಿ]ಪ್ರೇತವೆಂಬುದು ಓರ್ವ ವ್ಯಕ್ತಿಯ ಚೇತನ ಅಥವಾ ಆತ್ಮದ ಕಾಣಿಸಿಕೊಳ್ಳುವಿಕೆಯಾಗಿದೆ.[೯] ಆ ಪರಿಕಲ್ಪನೆಯ ಮೇಲೆ ಪರ್ಯಾಯ ಸಿದ್ಧಾಂತಗಳು ವಿಸ್ತರಿಸುತ್ತವೆ ಮತ್ತು ಇತ್ತೀಚೆಗೆ ಸತ್ತ ಪ್ರಾಣಿಗಳ ಪ್ರೇತಗಳಲ್ಲಿನ ನಂಬಿಕೆಯನ್ನು ಒಳಗೊಳ್ಳುತ್ತವೆ. ಕೆಲವೊಮ್ಮೆ "ಪ್ರೇತ" ಎಂಬ ಶಬ್ದವನ್ನು ಯಾವುದೇ ಚೇತನ ಅಥವಾ ಭೂತದೊಂದಿಗೆ[೧೦] ಸಮಾನಾರ್ಥಕವಾಗಿ ಬಳಸಲಾಗುತ್ತದೆಯಾದರೂ, ಜನಪ್ರಿಯ ಬಳಕೆಯಲ್ಲಿ ಈ ಶಬ್ದವು ವಿಶಿಷ್ಟವೆಂಬಂತೆ ಇತ್ತೀಚೆಗೆ ಸತ್ತ ಓರ್ವ ವ್ಯಕ್ತಿಗೆ ಉಲ್ಲೇಖಿಸಲ್ಪಡುತ್ತದೆ. ತೀರಿಕೊಂಡವರ ಆತ್ಮಗಳೆಂಬಂತೆ ಪ್ರೇತಗಳಲ್ಲಿ ಇಡುವ ನಂಬಿಕೆಯು, ಆತ್ಮವಾದದ ಪರಿಕಲ್ಪನೆಯೊಂದಿಗೆ ನಿಕಟವಾಗಿ ಬಂಧಿಸಲ್ಪಟ್ಟಿದೆ; ಆತ್ಮವಾದ ಎಂಬುದು ಒಂದು ಪ್ರಾಚೀನ ನಂಬಿಕೆಯಾಗಿದ್ದು, ಪ್ರಕೃತಿಯಲ್ಲಿನ ಪ್ರತಿಯೊಂದಕ್ಕೂ ಅದು ಆತ್ಮಗಳನ್ನು ಕಾರಣವಾಗಿಸಿದೆ.[೧೧] ಹತ್ತೊಂಬತ್ತನೇ-ಶತಮಾನದ ಮಾನವಶಾಸ್ತ್ರಜ್ಞನಾದ ಜೇಮ್ಸ್ ಫ್ರೇಜರ್ ಎಂಬಾತ ದಿ ಗೋಲ್ಡನ್ ಬಾಗ್ ಎಂಬ ತನ್ನ ಶ್ರೇಷ್ಠ ಕೃತಿಯಲ್ಲಿ ವಿವರಿಸಿರುವಂತೆ, ಶರೀರದೊಳಗೆ ಇದ್ದುಕೊಂಡು ಶರೀರವನ್ನು ಜೀವಂತಗೊಳಿಸಿದ ಜೀವಿಯಾಗಿ ಆತ್ಮಗಳನ್ನು ಕಾಣಲಾಯಿತು.[೧೨] ಪ್ರಾಚೀನ ಸಂಸ್ಕೃತಿಗಳಲ್ಲಿ ಮಾನವನ ಆತ್ಮವು ಒಂದು ಪಕ್ಷಿಯಾಗಿ ಅಥವಾ ಇತರ ಪ್ರಾಣಿಯಾಗಿ ಕೆಲವೊಮ್ಮೆ ಸಾಂಕೇತಿಕವಾಗಿ ಅಥವಾ ಅಕ್ಷರಶಃ ಚಿತ್ರಿಸಲ್ಪಟ್ಟಿತಾದರೂ, ಪ್ರತಿಯೊಂದು ಲಕ್ಷಣದಲ್ಲಿಯೂ ಅಷ್ಟೇ ಏಕೆ ವ್ಯಕ್ತಿಯು ಧರಿಸಿರುವ ಬಟ್ಟೆಯವರೆಗೂ ಆತ್ಮವು ಶರೀರದ ಒಂದು ನಿಖರವಾದ ನಕಲಾಗಿತ್ತು ಎಂದು ವ್ಯಾಪಕವಾಗಿ ಸಮರ್ಥಿಸಲಾಯಿತು. ಈಜಿಪ್ಚಿಯನ್ ಬುಕ್ ಆಫ್ ದಿ ಡೆಡ್‌ನಂಥ ಕೃತಿಗಳೂ ಸೇರಿದಂತೆ, ಹಲವಾರು ಪ್ರಾಚೀನ ಸಂಸ್ಕೃತಿಗಳಿಗೆ ಸೇರಿದ ಕಲಾಕೃತಿಗಳಲ್ಲಿ ಇದು ಚಿತ್ರಿಸಲ್ಪಟ್ಟಿದೆ; ಇತ್ತೀಚೆಗೆ ಸತ್ತ ಜನರು, ದಿರಿಸಿನ ಶೈಲಿಯೂ ಸೇರಿದಂತೆ ತಮ್ಮ ಸಾವಿಗೆ ಮುಂಚೆ ಇದ್ದ ರೀತಿಯಲ್ಲಿಯೇ ಮರಣೋತ್ತರ ಜೀವನದಲ್ಲೂ ಕಾಣಿಸುವುದನ್ನು ಈಜಿಪ್ಚಿಯನ್ ಬುಕ್ ಆಫ್ ದಿ ಡೆಡ್ ಕೃತಿಯು ತೋರಿಸುತ್ತದೆ. ಪ್ರೇತಗಳಿಗೆ ಸಂಬಂಧಿಸಿದಂತೆ ಒಂದು ವ್ಯಾಪಕವಾಗಿ ಹಬ್ಬಿರುವ ನಂಬಿಕೆಯೆಂದರೆ, ಅವು ಒಂದು ಮಂಜಿನಂಥ, ಗಾಳಿಯಂಥ, ಅಥವಾ ಸೂಕ್ಷ್ಮ ದ್ರವ್ಯದಿಂದ ಮಾಡಲ್ಪಟ್ಟಿವೆ. ಮಾನವಶಾಸ್ತ್ರಜ್ಞರು ಊಹಿಸುವ ಪ್ರಕಾರ, ಪ್ರೇತಗಳು ವ್ಯಕ್ತಿಯೊಳಗಿನ ವ್ಯಕ್ತಿಯಾಗಿದ್ದವು ಎಂಬಂಥ ಹಿಂದಿದ್ದ ನಂಬಿಕೆಗಳಿಂದ ಇದೂ ಸಹ ಹುಟ್ಟಿಕೊಂಡಿರಬಹುದು; ಓರ್ವ ವ್ಯಕ್ತಿಯಲ್ಲಿ ಉಸಿರಿನಂತೆ ಇರುವ ಆತ್ಮವು, ಶೀತದ ಹವಾಮಾನಗಳಲ್ಲಿ ಉಸಿರುಬಿಟ್ಟಾಗ ಒಂದು ಬಿಳಿಯ ಮಂಜು ಗೋಚರಿಸುವಂತೆ ಕಾಣಿಸುತ್ತವೆ ಎಂಬುದು ಪ್ರಾಚೀನ ಸಂಸ್ಕೃತಿಗಳಲ್ಲಿ ಇದ್ದ ಒಂದು ಅತ್ಯಂತ ಗಮನಾರ್ಹ ನಂಬಿಕೆಯಾಗಿತ್ತು.[೧೧] ಲ್ಯಾಟಿನ್ ಭಾಷೆಯ ಸ್ಪಿರಿಟಸ್ ಮತ್ತು ಗ್ರೀಕ್ ಭಾಷೆಯ ನ್ಯೂಮಾ ದ ರೀತಿಯಲ್ಲಿ, ನಿರ್ದಿಷ್ಟ ಭಾಷೆಗಳಲ್ಲಿರುವ "ಉಸಿರು" ಎಂಬುದರ ರೂಪಕಾಲಂಕಾರದ ಅರ್ಥಕ್ಕೆ ಈ ನಂಬಿಕೆಯು ಇಂಬುಕೊಟ್ಟಿರಬಹುದು; ಇದೇ ಅರ್ಥವು ಹೋಲಿಕೆಯಿಂದಾಗಿ ಆತ್ಮವನ್ನು ಅರ್ಥೈಸಲು ವಿಸ್ತರಿಸಲ್ಪಟ್ಟಿದೆ. ಬೈಬಲ್‌ನಲ್ಲಿ, ದೇವರುಆಡಮ್‌ನನ್ನು ಒಂದು ಉಸಿರಿನೊಂದಿಗೆ ಜೀವಂತಗೊಳಿಸುತ್ತಿರುವಂತೆ ಚಿತ್ರಿಸಲಾಗಿದೆ. ಪ್ರೇತ ದೃಶ್ಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವಿವರಣೆಗಳನ್ನು ಒದಗಿಸಲು, ವಿಜ್ಞಾನಿಗಳು ಹಲವಾರು ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ.[೧೧] ಪ್ರೇತಗಳಿಗೆ ಸಂಬಂಧಿಸಿದ ಪುರಾವೆಯು ಹೆಚ್ಚಿನ ರೀತಿಯಲ್ಲಿ ಉಪಾಖ್ಯಾನ ರೂಪದಲ್ಲಿ ಇದೆಯಾದರೂ, ಇತಿಹಾಸದ ಉದ್ದಗಲಕ್ಕೂ ಕಂಡುಬರುವ ಪ್ರೇತಗಳಲ್ಲಿನ ನಂಬಿಕೆಯು ವ್ಯಾಪಕವಾಗಿ ಹಬ್ಬಿದೆ ಮತ್ತು ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ಭೂಮ್ಯತೀತ ಜೀವ ಮತ್ತು UFOಗಳು
[ಬದಲಾಯಿಸಿ]ಭೂಮ್ಯತೀತ ಜೀವದ ಸಾಧ್ಯತೆಯು ಸ್ವತಃ ಒಂದು ಅಧಿಸಾಮಾನ್ಯ ವಿಷಯವಲ್ಲ. ಮಂಗಳ ಗ್ರಹದ ಮೇಲ್ಮೈ ಕುರಿತು ಅಧ್ಯಯನಗಳನ್ನು ನಡೆಸುವ ಮೂಲಕ ಮತ್ತು ಭೂಮಿಗೆ ಬಿದ್ದ ಉಲ್ಕೆಗಳನ್ನು ಅವಲೋಕಿಸುವ ಮೂಲಕ, ಸೌರವ್ಯೂಹದ ವ್ಯಾಪ್ತಿಯೊಳಗಿನ ಏಕಕೋಶ ಜೀವದ ಇರುವಿಕೆಗೆ ಸಂಬಂಧಿಸಿದಂತೆ ಅನೇಕ ವಿಜ್ಞಾನಿಗಳು ಶೋಧದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.[೧೩] ಸೌರವ್ಯೂಹದ ಹೊರಗೆ ಇರಬಹುದಾದ ಬುದ್ಧಿವಂತ ಜೀವದ ಪುರಾವೆಯನ್ನು ತೋರಿಸಬಲ್ಲ, ವಿಕಿರಣ ಪಟುತ್ವಕ್ಕೆ ಸಂಬಂಧಿಸಿದ ಒಂದು ಖಗೋಳೀಯ ಶೋಧವನ್ನು SETIಯಂಥ ಯೋಜನೆಗಳು ನಿರ್ವಹಿಸುತ್ತಿವೆ.[೧೪] ಭೂಮಿಯ ಮೇಲೆ ಜೀವವು ಹೇಗೆ ಅಭಿವೃದ್ಧಿಗೊಂಡಿತು ಎಂಬುದನ್ನು ವಿಶದೀಕರಿಸುವ ವೈಜ್ಞಾನಿಕ ಸಿದ್ಧಾಂತಗಳು, ಇತರ ಗ್ರಹಗಳ ಮೇಲೆ ಜೀವವು ಅಭಿವೃದ್ಧಿಗೊಂಡಿದ್ದರ ಸಾಧ್ಯತೆಯನ್ನು ಕಂಡುಕೊಳ್ಳಲೂ ಸಹ ಅವಕಾಶ ಕಲ್ಪಿಸುತ್ತವೆ. ಭೂಮ್ಯತೀತ ಜೀವದ ಅಧಿಸಾಮಾನ್ಯ ಮಗ್ಗುಲು ಅಥವಾ ಅಂಶವು, ಗುರುತಿಸಲಾಗದ ಹಾರುವ ವಸ್ತುಗಳಲ್ಲಿನ (ಹಾರುವ ತಟ್ಟೆಗಳಲ್ಲಿನ) ಮತ್ತು ಅವುಗಳೊಂದಿಗೆ ಸಂಬಂಧಿಸಿದವೆಂದು ಹೇಳಲಾಗುವ ವಿದ್ಯಮಾನಗಳಲ್ಲಿನ ನಂಬಿಕೆಯ ಸುತ್ತ ಹೆಚ್ಚಿನ ಗಮನಹರಿಸುತ್ತದೆ. UFO ಸಂಸ್ಕೃತಿಯ ಇತಿಹಾಸದ ಆರಂಭದಲ್ಲಿ, ಅದರಲ್ಲಿ ನಂಬಿಕೆಯಿರುವವರು ತಮ್ಮನ್ನು ಎರಡು ಶಿಬಿರಗಳು ಅಥವಾ ಗುಂಪುಗಳಾಗಿ ವಿಂಗಡಿಸಿಕೊಂಡರು. ಸದರಿ ವಿದ್ಯಮಾನಗಳ ಕುರಿತಾದ ಒಂದು ಸಾಕಷ್ಟು ಸಂಪ್ರದಾಯಶೀಲ ದೃಷ್ಟಿಕೋನವನ್ನು ಮೊದಲ ಗುಂಪು ಪ್ರತಿಪಾದಿಸಿತು; ಗಂಭೀರ ಅಧ್ಯಯನಕ್ಕೆ ಪಾತ್ರವಾದ ವಿವರಿಸಲಾಗದ ಘಟನೆಗಳಾಗಿ ಇದನ್ನು ಈ ಗುಂಪು ವ್ಯಾಖ್ಯಾನಿಸಿತು 1950ರ ದಶಕದಲ್ಲಿ ತಮ್ಮನ್ನು "ಯೂಫೋ ತಜ್ಞರು" ಎಂಬುದಾಗಿ ಈ ಗುಂಪಿನ ಸದಸ್ಯರು ತಮ್ಮನ್ನು ಕರೆದುಕೊಳ್ಳಲು ಶುರುಮಾಡಿದರು ಮತ್ತು ಸದರಿ ದೃಶ್ಯದ ವರದಿಗಳ ತಾರ್ಕಿಕ ವಿಶ್ಲೇಷಣೆಯು, ಭೂಮ್ಯತೀತ ಪರೀಕ್ಷಾ ಭೇಟಿಯ ಗ್ರಹಿಕೆಯನ್ನು ಕ್ರಮಬದ್ಧಗೊಳಿಸುತ್ತದೆ ಎಂದು ಭಾವಿಸಿದರು.[೧೧] ಎರಡನೇ ಗುಂಪಿನಲ್ಲಿದ್ದ ವ್ಯಕ್ತಿಗಳು ಭೂಮ್ಯತೀತ ಪರೀಕ್ಷಾ ಭೇಟಿಯ ಪರಿಕಲ್ಪನೆಗಳನ್ನು, ಮೇಲ್ನೋಟಕ್ಕೆ-ಧಾರ್ಮಿಕವಾಗಿ ಕಾಣುವ ಚಾಲ್ತಿಯಲ್ಲಿರುವ ಆಂದೋಲನಗಳಿಗೆ ಸೇರಿದ ನಂಬಿಕೆಗಳೊಂದಿಗೆ ಸೇರಿಸಿಕೊಂಡರು. ವಿಶಿಷ್ಟವೆಂಬಂತೆ ಈ ವ್ಯಕ್ತಿಗಳು, ಐಂದ್ರಜಾಲಿಕ ವಿದ್ಯೆ ಮತ್ತು ಅಧಿಸಾಮಾನ್ಯ ಸಂಗತಿಯ ವಲಯದ ಉತ್ಸಾಹಿಗಳಾಗಿದ್ದರು. ಇವರಲ್ಲಿ ಅನೇಕರು ಕ್ರಿಯಾಶೀಲ ದೇವವಿದ್ಯಾವಾದಿಗಳಾಗಿ, ಪ್ರೇತ ಸಂಪರ್ಕವಾದಿಗಳಾಗಿ ಇರುವ ಹಿನ್ನೆಲೆಗಳನ್ನು ಹೊಂದಿದ್ದರು, ಅಥವಾ ಇತರ ಗೂಡಾರ್ಥದ ಸಿದ್ಧಾಂತಗಳ ಅನುಯಾಯಿಗಳಾಗಿದ್ದರು. ಸಮಕಾಲೀನ ಸಂದರ್ಭದಲ್ಲಿ, ಈ ನಂಬಿಕೆಗಳ ಪೈಕಿ ಅನೇಕವು ಹೊಸ ಯುಗದ ಆಧ್ಯಾತ್ಮಿಕ ಆಂದೋಲನಗಳಾಗಿ ಒಂದುಗೂಡಿದವು.[೧೧] ತಿಳಿದಿರುವ ವಾಯುಬಲ ವಿಜ್ಞಾನದ ನಿರ್ಬಂಧಗಳು ಮತ್ತು ಭೌತ ನಿಯಮಗಳ ಅನುಸಾರ ಸಾಧ್ಯ ಎಂದು ಪರಿಗಣಿಸಲ್ಪಟ್ಟಿರುವುದರ ಆಚೆಗಿರುವ ಸಾಮರ್ಥ್ಯಗಳನ್ನು, UFOಗಳು ಹೊಂದಿವೆ ಎಂಬುದಾಗಿ ಜಾತ್ಯತೀತ ನಂಬುಗೆಗಾರರು ಮತ್ತು ಆಧ್ಯಾತ್ಮಿಕ ನಂಬುಗೆಗಾರರಿಬ್ಬರೂ ವಿವರಿಸುತ್ತಾರೆ. ಅನೇಕ UFO ದೃಶ್ಯಗಳನ್ನು ಸುತ್ತುವರೆದಿರುವ ಕ್ಷಣಿಕ ಘಟನೆಗಳು, ವೈಜ್ಞಾನಿಕ ವಿಧಾನಕ್ಕೆ ಅಗತ್ಯವಿರುವ ಪುನರಾವರ್ತಿತ ಪರೀಕ್ಷೆಗೆ ಸಂಬಂಧಿಸಿದ ಅವಕಾಶವನ್ನೂ ಸಹ ಸೀಮಿತಗೊಳಿಸುತ್ತವೆ. ಬೃಹತ್ ವೈಜ್ಞಾನಿಕ ಸಮುದಾಯವು UFO ಸಿದ್ಧಾಂತಗಳಿಗೆ ತಮ್ಮ ಅಂಗೀಕಾರದ ಮುದ್ರೆಯನ್ನೊತ್ತಿರುವುದರಿಂದ, UFO ಸಂಸ್ಕೃತಿಯೊಂದಿಗೆ ಸಂಬಂಧಿಸಿದ ಅನೇಕ ಸಂಭವನೀಯ ತಮಾಷೆಗಾಗಿ ಮಾಡಿದ ಮೋಸಗಳು ಅಡಚಣೆಯೊಡ್ಡಿವೆ.
ನಿಗೂಢ ಜೀವಿಗಳು
[ಬದಲಾಯಿಸಿ]ಈ ವಿಭಾಗವನ್ನು ವಿಸ್ತರಿಸಬೇಕಾಗಿದೆ. |
ನಿಗೂಢ ಜೀವಿ ಎಂಬುದೊಂದು ಪ್ರಾಣಿಯಾಗಿದ್ದು, ಅದರ ಅಸ್ತಿತ್ವವನ್ನು ವಿಜ್ಞಾನವು ದೃಢೀಕರಿಸಿಲ್ಲ. ಈ ಜೀವಿಗಳ ಅಧ್ಯಯನವನ್ನು ಗುಪ್ತ ಪ್ರಾಣಿಶಾಸ್ತ್ರ ಎಂದು ಕರೆಯಲಾಗುತ್ತದೆ.
ಅಧಿಸಾಮಾನ್ಯ ಸಂಶೋಧನೆ
[ಬದಲಾಯಿಸಿ]ಒಂದು ಸಂಶೋಧನಾ ದೃಷ್ಟಿಕೋನದಿಂದ ಅಧಿಸಾಮಾನ್ಯ ಸಂಗತಿಯನ್ನು ಸಮೀಪಿಸುವುದು ಅಥವಾ ಅದರೊಳಗೆ ಪ್ರವೇಶಿಸುವುದು ಅನೇಕವೇಳೆ ಕಷ್ಟಕರವಾಗಿ ಪರಿಣಮಿಸುತ್ತದೆ; ಏಕೆಂದರೆ, ಇಂಗಿತ ವ್ಯಕ್ತಪಡಿಸಿದ ಬಹುಪಾಲು ವಿದ್ಯಮಾನಗಳಿಗೆ ಸಂಬಂಧಿಸಿದ ಸ್ವೀಕಾರಾರ್ಹ ಭೌತಿಕ ಪುರಾವೆಯ ಕೊರತೆಯು ಇಲ್ಲಿ ಕಂಡುಬರುತ್ತದೆ. ವ್ಯಾಖ್ಯಾನದ ಅನುಸಾರ, ಅಧಿಸಾಮಾನ್ಯ ಸಂಗತಿಯು ಸ್ವಾಭಾವಿಕ ಸಂಗತಿಯ ಸಾಂಪ್ರದಾಯಿಕ ನಿರೀಕ್ಷೆಗಳೊಂದಿಗೆ ಸರಿಹೊಂದಿಕೊಳ್ಳುವುದಿಲ್ಲ. ಆದ್ದರಿಂದ, ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಒಂದು ಸಂಗತಿಯನ್ನು ಅಧಿಸಾಮಾನ್ಯ ಎಂಬುದಾಗಿ ದೃಢೀಕರಿಸಲು ಆಗುವುದಿಲ್ಲ; ಏಕೆಂದರೆ, ಒಂದು ವೇಳೆ ಅದು ಹಾಗಿದ್ದರೆ, ಅದು ಸದರಿ ವ್ಯಾಖ್ಯಾನದೊಳಗೆ ಮತ್ತೆಂದಿಗೂ ಅಡಕವಾಗಿ ಹೊಂದಿಕೊಳ್ಳುವುದಿಲ್ಲ. ಈ ಅಸಾಂಗತ್ಯದ ಹೊರತಾಗಿಯೂ, ಹಲವಾರು ಕಾರ್ಯಕ್ಷೇತ್ರಗಳಿಗೆ ಸೇರಿದ ಸಂಶೋಧಕರಿಂದ, ಅಧಿಸಾಮಾನ್ಯ ಸಂಗತಿಯ ಕುರಿತಾದ ಅಧ್ಯಯನಗಳು ಆಗಿಂದಾಗ್ಗೆ ನಡೆಸಲ್ಪಡುತ್ತಿವೆ. ಸದರಿ ವಿದ್ಯಮಾನಗಳು ವಸ್ತುನಿಷ್ಠವಾಗಿ ಅಸ್ತಿತ್ವದಲ್ಲಿರುವುದಾಗಿ ಪರಿಗಣಿಸಲ್ಪಟ್ಟಿವೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅಧಿಸಾಮಾನ್ಯ ಸಂಗತಿಯಲ್ಲಿನ ನಂಬಿಕೆಗಳ ಕುರಿತು ಕೆಲವೊಂದು ಸಂಶೋಧಕರು ಹಾಗೆಯೇ ಅಧ್ಯಯನ ನಡೆಸುತ್ತಾರೆ. ಅಧಿಸಾಮಾನ್ಯ ಸಂಗತಿಗೆ ಇರುವ ಹಲವಾರು ಪ್ರವೇಶಮಾರ್ಗಗಳೊಂದಿಗೆ ಈ ವಿಭಾಗವು ವ್ಯವಹರಿಸುತ್ತದೆ. ಅವುಗಳೆಂದರೆ: ಉಪಾಖ್ಯಾನ ರೂಪದ, ಪ್ರಯೋಗಾತ್ಮಕವಾದ, ಮತ್ತು ಸಹಭಾಗಿ-ವೀಕ್ಷಕರ ಪ್ರವೇಶಮಾರ್ಗಗಳು ಮತ್ತು ಸಂಶಯವಾದದ ತನಿಖೆಯ ಪ್ರವೇಶಮಾರ್ಗ.
ಉಪಾಖ್ಯಾನ ರೂಪದ ಪ್ರವೇಶಮಾರ್ಗ
[ಬದಲಾಯಿಸಿ]ಅಧಿಸಾಮಾನ್ಯ ಸಂಗತಿಗೆ ಇರುವ ಒಂದು ಉಪಾಖ್ಯಾನ ರೂಪದ ಪ್ರವೇಶಮಾರ್ಗವು, ಅಧಿಸಾಮಾನ್ಯ ಸಂಗತಿಗಳ ಕುರಿತಾಗಿ ಹೇಳಲಾದ ಕಥೆಗಳ ಸಂಗ್ರಹವನ್ನು ಒಳಗೊಳ್ಳುತ್ತದೆ. ಚಾರ್ಲ್ಸ್ ಫೋರ್ಟ್ (1874–1932) ಎಂಬಾತ ಪ್ರಾಯಶಃ ಅಧಿಸಾಮಾನ್ಯ ಐತಿಹ್ಯಗಳ ಅತ್ಯಂತ ಚಿರಪರಿಚಿತ ಸಂಗ್ರಾಹಕನಾಗಿದ್ದಾನೆ. ವಿವರಿಸಲಾಗದ ಅಧಿಸಾಮಾನ್ಯ ಅನುಭವಗಳ ಮೇಲಿನ 40,000 ಟಿಪ್ಪಣಿಗಳನ್ನು ಫೋರ್ಟ್ ಸಂಕಲಿಸಿದ್ದಾನೆ ಎಂದು ಹೇಳಲಾಗಿದ್ದರೂ, ನಿಸ್ಸಂಶಯವಾಗಿ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಂಗತಿಗಳು ಅಸ್ತಿತ್ವದಲ್ಲಿದ್ದವು ಎಂಬುದು ಗಮನಾರ್ಹ ವಿಷಯವಾಗಿದೆ. ಅವನು ಕರೆದಂತೆ "ವಿಜ್ಞಾನದ ಪರಂಪರಾಗತ ಸಾಂಪ್ರದಾಯಿಕತೆ"ಯಿಂದ ಈ ಟಿಪ್ಪಣಿಗಳು ಬಂದಿದ್ದು, ಇವು ದಿ ಟೈಮ್ಸ್‌ನಂಥ ನಿಯತಕಾಲಿಕಗಳು ಮತ್ತು ವೃತ್ತಪತ್ರಿಕೆಗಳಲ್ಲಿ ಹಾಗೂ ಸೈಂಟಿಫಿಕ್ ಅಮೆರಿಕನ್ , ನೇಚರ್ ಮತ್ತು ಸೈನ್ಸ್ ನಂಥ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಮೂಲತಃ ವರದಿಮಾಡಲ್ಪಟ್ಟ ಕ್ರಮವಿಲ್ಲದ ಘಟನೆಗಳಾಗಿದ್ದವು. ಈ ಸಂಶೋಧನೆಯ ನೆರವಿನಿಂದ ಫೋರ್ಟ್ ಏಳು ಪುಸ್ತಕಗಳನ್ನು ಬರೆದನಾದರೂ, ಅವುಗಳ ಪೈಕಿ ಕೇವಲ ನಾಲ್ಕು ಪುಸ್ತಕಗಳು ಉಳಿದುಕೊಂಡಿವೆ. ಅವುಗಳೆಂದರೆ: ದಿ ಬುಕ್ ಆಫ್ ದಿ ಡ್ಯಾಮ್ಡ್ (1919), ನ್ಯೂ ಲ್ಯಾಂಡ್ಸ್ (1923), ಲೋ! (1931) ಮತ್ತು ವೈಲ್ಡ್ ಟ್ಯಾಲೆಂಟ್ಸ್ (1932); ನ್ಯೂ ಲ್ಯಾಂಡ್ಸ್ ಮತ್ತು ಲೋ! ಪುಸ್ತಕಗಳ ನಡುವೆ ಒಂದು ಪುಸ್ತಕವು ಬರೆಯಲ್ಪಟ್ಟಿತಾದರೂ, ಅದನ್ನು ಬಿಟ್ಟುಬಿಡಲಾಯಿತು ಮತ್ತು ಲೋ! ಪುಸ್ತಕದಲ್ಲಿ ಅದರ ಅಂಶಗಳನ್ನು ಅಂತರ್ಗತ ಮಾಡಿಕೊಳ್ಳಲಾಯಿತು. ಅವನು ಸಂಗ್ರಹಿಸಿದ ವರದಿಮಾಡಲ್ಪಟ್ಟ ಘಟನೆಗಳಲ್ಲಿ ಇವು ಅವನು ಸಂಗ್ರಹಿಸಿದ ವರದಿಮಾಡಲ್ಪಟ್ಟ ಘಟನೆಗಳಲ್ಲಿ ಇವು ಸೇರಿವೆ: ದೂರಸ್ಥ ಚಾಲನೆ (ಈ ಶಬ್ದವನ್ನು ರಚಿಸಿದ ಕೀರ್ತಿಯು ಫೋರ್ಟ್‌ಗೆ ಸಾಮಾನ್ಯವಾಗಿ ಸಲ್ಲುತ್ತದೆ); ಒಂದು ಅಚ್ಚರಿಗೊಳಿಸುವ ಮಟ್ಟದವರೆಗೆ ಇದ್ದ ತಂಟಲಮಾರಿ ಭೂತದ ಘಟನೆಗಳು, ಕಪ್ಪೆಗಳು, ಮೀನುಗಳು, ಅಕಾರ್ಬನಿಕ ದ್ರವ್ಯಗಳ ಬೀಳುವಿಕೆಗಳು; ಬೆಳೆ ವರ್ತುಲಗಳು; ಕಾರಣ ವಿವರಿಸಲಾಗದ ಶಬ್ದಗಳು ಮತ್ತು ಸ್ಫೋಟಗಳು; ಸ್ವತಃ ಸಂಭವಿಸುವ ಬೆಂಕಿಗಳು; ಗಾಳಿಯಲ್ಲಿ ಮೇಲೇರಿ ತೇಲುವಿಕೆ; ಚೆಂಡು ಮಿಂಚು (ಈ ಶಬ್ದವನ್ನು ಫೋರ್ಟ್ ಸ್ಪಷ್ಟವಾಗಿ ಬಳಸಿದ); ಗುರುತಿಸಲಾಗದ ಹಾರುವ ವಸ್ತುಗಳು (ಹಾರುವ ತಟ್ಟೆಗಳು); ನಿಗೂಢವಾದ ವಸ್ತುಗಳ ಕಾಣಿಸುವಿಕೆಗಳು ಮತ್ತು ಕಣ್ಮರೆಯಾಗುವಿಕೆಗಳು; ಸಾಗರಗಳಲ್ಲಿ ಬೆಳಕಿನ ದೈತ್ಯ ಚಕ್ರಗಳು ಗೋಚರಿಸುವುದು; ಮತ್ತು ತಮ್ಮ ಸಾಮಾನ್ಯ ವ್ಯಾಪ್ತಿಗಳಿಂದ ಅಥವಾ ಗಾತ್ರಗಳಿಂದ ಹೊರಗೆ ಕಂಡುಬಂದ ಪ್ರಾಣಿಗಳು (ನೋಡಿ: ದೈತ್ಯಗಾತ್ರದ ಬೆಕ್ಕು). "ಔಟ್ ಆಫ್ ಪ್ಲೇಸ್" ಆರ್ಟಿಫ್ಯಾಕ್ಟ್ಸ್ ("ಸ್ಥಳದಿಂದ ಹೊರಗಿನ" ಹಸ್ತಕೃತಿಗಳು) ಎಂಬುದಕ್ಕಾಗಿರುವ ಸಂಕ್ಷಿಪ್ತ ರೂಪವಾದ OOP ಆರ್ಟ್ಸ್‌ನ ಅನೇಕ ವರದಿಗಳನ್ನು ಅವನು ನೀಡಿದ; ಅಸಂಭವ ತಾಣಗಳಲ್ಲಿ ಕಂಡುಬಂದ ವಿಚಿತ್ರ ವಸ್ತುಗಳು ಅವನಿಂದ ಈ ರೀತಿ ಕರೆಯಲ್ಪಟ್ಟಿದ್ದವು. ಅನ್ಯಲೋಕದ ಜೀವಿ ಅಪಹರಣದ ಊಹಾ ಸಿದ್ಧಾಂತದ ಮೂಲಕ, ವಿಚಿತ್ರ ಮಾನವರ ಕಾಣಿಸುವಿಕೆಗಳು ಮತ್ತು ಕಣ್ಮರೆಯಾಗುವಿಕೆಗಳನ್ನು ವಿವರಿಸುವಲ್ಲಿಯೂ ಪ್ರಾಯಶಃ ಅವನು ಮೊದಲ ವ್ಯಕ್ತಿಯಾಗಿದ್ದ, ಮತ್ತು ಆತ ಭೂಮ್ಯತೀತ ಊಹಾ ಸಿದ್ಧಾಂತದ ಓರ್ವ ಆರಂಭಿಕ ಪ್ರತಿಪಾದಕನಾಗಿದ್ದ. ಅಧಿಸಾಮಾನ್ಯ ಸಂಗತಿಯ ಅಧ್ಯಯನವಾಗಿರುವ ಆಧುನಿಕ ಅಧಿಸಾಮಾನ್ಯ ತತ್ತ್ವದ ಜನಕ ಎಂಬುದಾಗಿ ಫೋರ್ಟ್ ಅನೇಕರಿಂದ ಪರಿಗಣಿಸಲ್ಪಟ್ಟಿದ್ದಾನೆ. ಅಧಿಸಾಮಾನ್ಯ ಸಂಗತಿಯ ಉಪಾಖ್ಯಾನ ರೂಪದ ಸಮರ್ಥನೆಗಳನ್ನು ನಿಯತವಾಗಿ ವರದಿಮಾಡುವ ಮೂಲಕ, ಫೋರ್ಟಿಯನ್ ಟೈಮ್ಸ್ ನಿಯತಕಾಲಿಕವು ಚಾರ್ಲ್ಸ್ ಫೋರ್ಟ್‌ನ ಮಾರ್ಗವನ್ನು ಮುಂದುವರಿಸುತ್ತದೆ. ಪ್ರಯೋಗವಾದಿ ಪುರಾವೆಯ ಪುನರುತ್ಪಾದ್ಯತೆಯನ್ನು (ಪ್ರತಿ ಮಾಡಬಹುದಾಗಿರುವಿಕೆಯನ್ನು) ಹೊಂದಿಲ್ಲದ ಇಂಥ ಉಪಾಖ್ಯಾನ ರೂಪದ ಸಂಗ್ರಹಗಳು, ವೈಜ್ಞಾನಿಕ ತನಿಖೆಯ ಪರೀಕ್ಷೆಗೆ ಒಳಪಡುವುದಿಲ್ಲ. ಉಪಾಖ್ಯಾನ ರೂಪದ ಪ್ರವೇಶಮಾರ್ಗವು ಅಧಿಸಾಮಾನ್ಯ ಸಂಗತಿಗೆ ಇರುವ ಒಂದು ವೈಜ್ಞಾನಿಕ ಪ್ರವೇಶಮಾರ್ಗವಲ್ಲ; ಏಕೆಂದರೆ, ಪುರಾವೆಯನ್ನು ಸಾದರಪಡಿಸುತ್ತಿರುವ ಸಹಭಾಗಿಯ ವಿಶ್ವಾಸಾರ್ಹತೆಯ ಮೇಲೆ ಇದರ ಪರಿಶೀಲನೆಯು ಅವಲಂಬಿತವಾಗಿರುತ್ತದೆ. ಅದೇನೇ ಇದ್ದರೂ, ಇದು ಅಧಿಸಾಮಾನ್ಯ ವಿದ್ಯಮಾನಗಳಿಗೆ ಇರುವ ಒಂದು ಸಾಮಾನ್ಯ ಪ್ರವೇಶಮಾರ್ಗವಾಗಿದೆ.
ಅಧಿಮನಃಶ್ಯಾಸ್ತ್ರ
[ಬದಲಾಯಿಸಿ]ಅಧಿಸಾಮಾನ್ಯ ಸಂಗತಿಯ ಪ್ರಯೋಗಾತ್ಮಕ ತನಿಖೆಯನ್ನು ಅಧಿಮನಃಸಾಸ್ತ್ರಜ್ಞರು ನಿರ್ವಹಿಸಿಕೊಂಡು ಬಂದಿದ್ದಾರೆ. ಅಧಿಮನೋವಿಜ್ಞಾನವು ತನ್ನ ಮೂಲಗಳನ್ನು ಆರಂಭಿಕ ಸಂಶೋಧನೆಯಲ್ಲಿ ಹೊಂದಿದೆಯಾದರೂ, J. B. ರೈನ್ (1895–1980) ಎಂಬಾತನ ನಿರ್ದೇಶನದ ಅಡಿಯಲ್ಲಿ 1930ರ ದಶಕದಲ್ಲಿ ಪ್ರಯೋಗಾತ್ಮಕ ಪ್ರವೇಶಮಾರ್ಗವನ್ನು ಬಳಸಿಕೊಂಡು ಇದು ಪ್ರಾರಂಭವಾಯಿತು.[೧೧] ಈಗ ಪ್ರಸಿದ್ಧವಾಗಿರುವ, ಕಾರ್ಡ್‌ನ್ನು-ಊಹಿಸುವ ಮತ್ತು ದಾಳ-ಉರುಳಿಸುವ ಪ್ರಯೋಗಗಳನ್ನು ಬಳಸುವ ವಿಧಾನಶಾಸ್ತ್ರವನ್ನು ಪ್ರಯೋಗಾಲಯವೊಂದರಲ್ಲಿ ರೈನ್ ಜನಪ್ರಿಯಗೊಳಿಸಿದ; ಇಂದ್ರಿಯಾತೀತ ಗ್ರಹಿಕೆಯ ಒಂದು ಸಂಖ್ಯಾಶಾಸ್ತ್ರೀಯವಾದ ಕ್ರಮಬದ್ಧಗೊಳಿಸುವಿಕೆಯನ್ನು ಕಂಡುಕೊಳ್ಳುವುದರ ಭರವಸೆಯನ್ನಿಟ್ಟುಕೊಂಡು ಅವನು ಈ ಕ್ರಮಕ್ಕೆ ಮುಂದಾದ.[೧೧] ಅಧಿಮನಃಸಾಸ್ತ್ರಜ್ಞರಿಗೆ ಸಂಬಂಧಿಸಿದ ಸರ್ವೋತ್ಕೃಷ್ಟ ಸಂಘವಾಗಿ ಪ್ಯಾರಸೈಕಾಲಜಿಕಲ್ ಅಸೋಸಿಯೇಷನ್ 1957ರಲ್ಲಿ ರೂಪಿಸಲ್ಪಟ್ಟಿತು. 1969ರಲ್ಲಿ ಅವರು ಅಮೆರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ಸಂಸ್ಥೆಯ ಅಂಗವಾದರು. 1970ರ ದಶಕದಲ್ಲಿ ಕಂಡುಬಂದ ನಿಸರ್ಗಾತೀತ ಮತ್ತು ಐಂದ್ರಜಾಲಿಕ ವಿದ್ಯಮಾನಗಳಿಗೆ ದೊರಕಿದ ಒಂದು ಸಾರ್ವತ್ರಿಕ ಮುಕ್ತತೆಯೊಂದಿಗೆ ಆ ಅಂಗದ ಸದಸ್ಯತ್ವವೂ ಸೇರಿಕೊಂಡು, ಹೆಚ್ಚಿನ ಮಟ್ಟದಲ್ಲಿ ಅಧಿಮನೋವಿಜ್ಞಾನದ ಸಂಶೋಧನೆಯು ನಡೆದ ಒಂದು ದಶಕವು ಹೊರಹೊಮ್ಮಲು ಕಾರಣವಾಯಿತು.[೧೧] ಇದೇ ಅವಧಿಯಲ್ಲಿ, ಇತರ ಗಮನಾರ್ಹ ಸಂಘಟನೆಗಳೂ ಸಹ ರೂಪುಗೊಂಡವು. ಅವುಗಳೆಂದರೆ: ಅಕಾಡೆಮಿ ಆಫ್ ಪ್ಯಾರಾಸೈಕಾಲಜಿ ಅಂಡ್ ಮೆಡಿಸಿನ್ (1970), ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಸೈನ್ಸ್ (1971), ಅಕಾಡೆಮಿ ಆಫ್ ರಿಲಿಜನ್ ಅಂಡ್ ಸೈಕಿಕಲ್ ರಿಸರ್ಚ್, ಇನ್‌ಸ್ಟಿಟ್ಯೂಟ್ ಫಾರ್ ನೊಯೆಟಿಕ್ ಸೈನ್ಸಸ್ (1973), ಮತ್ತು ಇಂಟರ್‌ನ್ಯಾಷನಲ್ ಕಿರ್ಲಿಯನ್ ರಿಸರ್ಚ್ ಅಸೋಸಿಯೇಷನ್ (1975). ಈ ಗುಂಪುಗಳ ಪೈಕಿಯ ಪ್ರತಿಯೊಂದು ಗುಂಪೂ, ಅಧಿಸಾಮಾನ್ಯ ವಿಷಯಗಳ ಕುರಿತಾದ ಪ್ರಯೋಗಗಳನ್ನು ವಿಭಿನ್ನವಾದ ಮಟ್ಟಗಳಲ್ಲಿ ನಿರ್ವಹಿಸಿದವು. ಇದೇ ಅವಧಿಯಲ್ಲಿ ಸ್ಟಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿಯೂ ಅಧಿಮನೋವಿಜ್ಞಾನದ ಕಾರ್ಯವು ನಿರ್ವಹಿಸಲ್ಪಟ್ಟಿತು.[೧೧] ಅಧಿಮನೋವಿಜ್ಞಾನದ ತನಿಖೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದಂತೆ, ಅಧಿಮನಃಸಾಸ್ತ್ರಜ್ಞರ ಆವಿಷ್ಕಾರಗಳಿಗೆ ಮತ್ತು ಈ ಕ್ಷೇತ್ರಕ್ಕೆ ಯಾವುದೇ ಔಪಚಾರಿಕ ಮಾನ್ಯತೆಯನ್ನು ನೀಡುವುದಕ್ಕೆ ವಿರೋಧಗಳು ಕಂಡುಬಂದವು. ಈಗ ಕಮಿಟಿ ಫಾರ್ ಸ್ಕೆಪ್ಟಿಕಲ್ ಇನ್‌ಕ್ವೈರಿ ಎಂಬುದಾಗಿ ಕರೆಯಲ್ಪಡುತ್ತಿರುವ ಕಮಿಟಿ ಫಾರ್ ದಿ ಸೈಂಟಿಫಿಕ್ ಇನ್ವೆಸ್ಟಿಗೇಷನ್ ಆಫ್ ಕ್ಲೇಮ್ಸ್ ಆಫ್ ದಿ ಪ್ಯಾರನಾರ್ಮಲ್ (1976) ಸಂಘಟನೆಯ, ಮತ್ತು ಸ್ಕೆಪ್ಟಿಕಲ್ ಇನ್‌ಕ್ವೈರರ್ ಎಂಬ ಅದರ ನಿಯತಕಾಲಿಕದ ಸಂಸ್ಥಾಪನೆಯ ಮೂಲಕ ಈ ಕ್ಷೇತ್ರದ ಕುರಿತಾದ ಟೀಕೆಗಳು ಕೇಂದ್ರೀಕರಿಸಲ್ಪಟ್ಟವು.[೧೧] ಇದರ ಪರಿಣಾಮವಾಗಿ, ಅಧಿಮನೋವಿಜ್ಞಾನವನ್ನು ಒಂದು ಸಾಹಸವಾಗಿ ಪರಿಗಣಿಸುವಲ್ಲಿ ಮುಖ್ಯವಾಹಿನಿಗೆ ಸೇರಿದ ಹೆಚ್ಚಿನ ವಿಜ್ಞಾನಿಗಳು ಹುಳುಕು ಹುಡುಕುವಲ್ಲಿ ತೊಡಗಿದರು. ಅಷ್ಟೇ ಅಲ್ಲ, ಅಕಾಡೆಮೀಸ್ ಆಫ್ ಸೈನ್ಸ್ ಮತ್ತು ನ್ಯಾಷನಲ್ ಸೈನ್ಸ್ ಫೌಂಡೇಷನ್ ವತಿಯಿಂದ ನೀಡಲ್ಪಟ್ಟ ಹೇಳಿಕೆಗಳು ಅಧಿಮನೋವಿಜ್ಞಾನಕ್ಕೆ ಸಂಬಂಧಿಸಿದ ಪುರಾವೆಯ ಪ್ರತಿಪಾದನೆಗಳನ್ನು ಹಾಳುಗೆಡವಿದವು. ಇಂದು, ಅನೇಕರು ಅಧಿಮನೋವಿಜ್ಞಾನವನ್ನು ಒಂದು ಹುಸಿವಿಜ್ಞಾನವೊಂದರ ಒಂದು ಉದಾಹರಣೆಯಂತೆ ಉಲ್ಲೇಖಿಸುತ್ತಾರೆ. ಇಂದು ಕೆಲವೊಬ್ಬ ಅಧಿಮನಃಸಾಸ್ತ್ರಜ್ಞರು ಈಗಲೂ ಸಕ್ರಿಯರಾಗಿದ್ದಾರಾದರೂ, 1970ರ ದಶಕದಿಂದೀಚೆಗೆ ಆಸಕ್ತಿ ಮತ್ತು ಕ್ರಿಯಾಶೀಲತೆಯು ಗಣನೀಯವಾಗಿ ಕುಗ್ಗಿದೆ.[೧೫] ಅಧಿಸಾಮಾನ್ಯ ಸಂಗತಿಯ ಸಿಂಧುವಾದ ಪುರಾವೆಯಾಗಿ ವೈಜ್ಞಾನಿಕ ಸಮುದಾಯದಲ್ಲಿ ವ್ಯಾಪಕವಾದ ಮಾನ್ಯತೆಯನ್ನು ಗಳಿಸಿರುವ ಯಾವುದೇ ಪ್ರಯೋಗಾತ್ಮಕ ಫಲಿತಾಂಶಗಳು ಇಂದಿನವರೆಗೆ ನೆಲೆಗೊಂಡಿಲ್ಲ.[೧೫]
ಸಹಭಾಗಿ-ವೀಕ್ಷಕ ವಿಧಾನ
[ಬದಲಾಯಿಸಿ]ಅಧಿಮನಃಸಾಸ್ತ್ರಜ್ಞರು ಪ್ರಯೋಗಾಲಯಗಳಲ್ಲಿ ಅಧಿಸಾಮಾನ್ಯ ಸಂಗತಿಯ ಪರಿಮಾಣಾತ್ಮಕ ಪುರಾವೆಗಾಗಿ ಪ್ರಯಾಸ ಪಡುತ್ತಿದ್ದರೆ, ಒಂದು ಮಹಾನ್ ಸಂಖ್ಯೆಯಲ್ಲಿರುವ ಜನರು ಅಧಿಸಾಮಾನ್ಯ ಸಂಗತಿಗೆ ಇರುವ ಸಹಭಾಗಿ-ವೀಕ್ಷಕ ವಿಧಾನದ ಮೂಲಕ ಸ್ವತಃ ಗುಣಾತ್ಮಕ ಸಂಶೋಧನೆಯಲ್ಲಿ ತಲ್ಲೀನರಾಗಿದ್ದಾರೆ. ಮೂಲಭೂತವಾಗಿ ಗುಣಾತ್ಮಕವಾಗಿರುವ ಇತರ ವಿಧಾನಗಳನ್ನು ಸಹಭಾಗಿ-ವೀಕ್ಷಕ ವಿಧಾನ ಕ್ರಮಗಳು ಅತಿಕ್ರಮಿಸಿವೆ; ದೃಶ್ಯತ್ವ ಸಿದ್ಧಾಂತದ ಸಂಶೋಧನೆಯು ಇದಕ್ಕೊಂದು ಉದಾಹರಣೆಯಾಗಿದ್ದು, ಇದು ವಿಷಯಗಳನ್ನು ವಿವರಿಸುವುದಕ್ಕಿಂತ ಅವುಗಳು ಅನುಭವಿಸಲ್ಪಟ್ಟಿರುವ ರೀತಿಯಲ್ಲಿ ವಿವರಿಸುವುದನ್ನು ಬಯಸುತ್ತದೆ.[೧೬] ಅಧ್ಯಯನಮಾಡುತ್ತಿರುವ ವಿಷಯದಲ್ಲಿ ತನ್ನನ್ನೇ ತಲ್ಲೀನಗೊಳಿಸುವ ಮೂಲಕ, ಓರ್ವ ಸಂಶೋಧಕನು ವಿಷಯದ ಅರಿವನ್ನು ಗ್ರಹಿಸುತ್ತಾನೆ ಎಂದು ಭಾವಿಸಲ್ಪಡುತ್ತಾನೆ ಎಂಬುದಾಗಿ ಸಹಭಾಗಿ-ವೀಕ್ಷಣೆ ಸೂಚಿಸುತ್ತದೆ. ದತ್ತಾಂಶ-ಒಟ್ಟುಗೂಡಿಸುವ ಒಂದು ಕೌಶಲವಾಗಿ ಸಹಭಾಗಿ-ವೀಕ್ಷಣೆಯು ಪಡೆದಿರುವ ಟೀಕೆಗಳು, ಅಧಿಸಾಮಾನ್ಯ ಸಂಗತಿಗೆ ಇರುವ ಇತರ ಪ್ರವೇಶಮಾರ್ಗಗಳ ಟೀಕೆಗಳನ್ನು ಹೋಲುವಂತಿದ್ದರೂ, ಅವು ಮತ್ತಷ್ಟು ಅಂಶಗಳನ್ನು ಒಳಗೊಂಡಿವೆ. ಅವುಗಳೆಂದರೆ: ಸಂಶೋಧಕನ ವಸ್ತುನಿಷ್ಠತೆಗಿರುವ ಒಂದು ಹೆಚ್ಚಿನ ಮಟ್ಟದ ಬೆದರಿಕೆ, ಕ್ರಮಬದ್ಧವಾಗಿಲ್ಲದ ದತ್ತಾಂಶದ ಒಟ್ಟುಗೂಡಿಸುವಿಕೆ, ವ್ಯಕ್ತಿನಿಷ್ಠ ಮಾಪನದ ಮೇಲಿನ ನೆಚ್ಚಿಕೆ, ಮತ್ತು ಸಂಭವನೀಯ ವೀಕ್ಷಕ ಪರಿಣಾಮಗಳು (ವೀಕ್ಷಿಸಿದ ವರ್ತನೆಯನ್ನು ವೀಕ್ಷಣೆಯು ವಿರೂಪಗೊಳಿಸಬಹುದು).[೧೭] ಗೀಳುಹಿಡಿದ ತಾಣಗಳಲ್ಲಿನ EMF ಗುಣಾಂಕಗಳ ದಾಖಲಿಸುವಿಕೆಯಂಥ ನಿರ್ದಿಷ್ಟ ದತ್ತಾಂಶದ ಒಟ್ಟುಗೂಡಿಸುವಿಕೆಯ ವಿಧಾನಗಳು, ಸ್ವತಃ ಸಹಭಾಗಿ-ವೀಕ್ಷಣಾ ವಿಧಾನಕ್ಕೆ ಕಾರಣವಾದ ಟೀಕೆಗಳಿಗಿಂತ ಆಚೆಗಿನ ತಮ್ಮದೇ ಆದ ಟೀಕೆಗಳನ್ನು ಹೊಂದಿವೆ. ಅಧಿಸಾಮಾನ್ಯ ಸಂಗತಿಗಿರುವ ಸಹಭಾಗಿ-ವೀಕ್ಷಕ ವಿಧಾನವು, ಘೋಸ್ಟ್ ಹಂಟರ್ಸ್ ನಂಥ ವಾಸ್ತವದರ್ಶನದ ದೂರದರ್ಶನ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಮಟ್ಟದ ಗೋಚರತ್ವ ಮತ್ತು ಜನಪ್ರಿಯತೆಯನ್ನು ಗಳಿಸಿದೆ, ಮತ್ತು ಆರೋಪಿತ ಅಧಿಸಾಮಾನ್ಯ ತಾಣಗಳಲ್ಲಿನ ತಲ್ಲೀನಗೊಳಿಸುವ ಸಂಶೋಧನೆಯನ್ನು ಸಮರ್ಥಿಸುವ, ಪ್ರೇತ ಅನ್ವೇಷಿಸುವ ಸ್ವತಂತ್ರ ಗುಂಪುಗಳ ರೂಪಿಸುವಿಕೆಗೂ ಕಾರಣವಾಗಿದೆ. ಪ್ರೇತ ಅನ್ವೇಷಿಸುವ ಉತ್ಸಾಹಿಗಳಿಗೆ ಸಂಬಂಧಿಸಿದಂತಿರುವ ಒಂದು ಜನಪ್ರಿಯ ವೆಬ್‌ಸೈಟ್, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು the ಯುನೈಟೆಡ್ ಕಿಂಗ್‌ಡಂನ ಉದ್ದಗಲಕ್ಕೂ ಇರುವ 300ಕ್ಕೂ ಹೆಚ್ಚಿನ ಈ ಸಂಘಟನೆಗಳನ್ನು ಪಟ್ಟಿಮಾಡಿದೆ.[೧೮]
ಸಂಶಯವಾದದ ವೈಜ್ಞಾನಿಕ ತನಿಖೆ
[ಬದಲಾಯಿಸಿ]ಅಧಿಸಾಮಾನ್ಯ ವಿದ್ಯಮಾನಗಳ ಪ್ರತಿಪಾದನೆಗಳ ನಿರ್ಣಾಯಕ ತನಿಖೆಯನ್ನು ವೈಜ್ಞಾನಿಕ ಸಂದೇಹವಾದಿಗಳು ಸಮರ್ಥಿಸುತ್ತಾರೆ: ಅಂದರೆ, ಅಧಿಸಾಮಾನ್ಯ ಪ್ರತಿಪಾದನೆಗಳಿಗೆ ಸಮಜಾಯಿಷಿಗಳನ್ನು ನೀಡಲು, ವಿದ್ಯಮಾನಗಳ ಒಂದು ತರ್ಕಬದ್ಧ, ವೈಜ್ಞಾನಿಕ ವಿವರಣೆಯನ್ನು ತಲುಪಲು ವೈಜ್ಞಾನಿಕ ವಿಧಾನವನ್ನು ಅನ್ವಯಿಸುತ್ತಾರೆ; ಇದಕ್ಕಾಗಿ, ಆರೋಪಿತ ಅಧಿಸಾಮಾನ್ಯ ಸಾಮರ್ಥ್ಯಗಳು ಮತ್ತು ಘಟನೆಗಳು, ಕೆಲವೊಮ್ಮೆ ತಮಾಷೆಗಾಗಿ ಮಾಡಿದ ಮೋಸಗಳಾಗಿರುತ್ತವೆ ಅಥವಾ ಸ್ವಾಭಾವಿಕ ವಿದ್ಯಮಾನಗಳ ತಪ್ಪಾದ ಅರ್ಥವಿವರಣೆಗಳಾಗಿರುತ್ತವೆ ಎಂಬುದನ್ನು ಅವರು ಪರಿಗಣಿಸುತ್ತಾರೆ. ಒಕ್ಕಾಮ್‌ನ ರೇಜರ್‌ನ ಅನ್ವಯಿಸುವಿಕೆಯು ಈ ವಿಧಾನವನ್ನು ಸಾರೀಕರಿಸುವುದರ ಒಂದು ಮಾರ್ಗವಾಗಿದ್ದು, ಅತ್ಯಂತ ಸರಳವಾದ ಪರಿಹಾರೋಪಾಯವು ಸಾಮಾನ್ಯವಾಗಿ ಒಂದು ಸರಿಯಾದ ವಿಧಾನವಾಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.[೧೯]
ಯಾವುದು ಅಧಿಸಾಮಾನ್ಯ ವಿದ್ಯಮಾನಗಳಾಗಿರುವಂತೆ ಕಾಣಿಸುತ್ತವೆಯೋ ಅದು ಸಾಮಾನ್ಯವಾಗಿ, ಒಂದು ವಾಸ್ತವಿಕ ಅಧಿಸಾಮಾನ್ಯ ಸಂಗತಿಯಾಗಿರುವುದಕ್ಕಿಂತ ಹೆಚ್ಚಾಗಿ, ಸ್ವಾಭಾವಿಕ ವಿದ್ಯಮಾನಗಳ ಒಂದು ತಪ್ಪಾದ ಅರ್ಥವಿವರಣೆ, ತಪ್ಪುಗ್ರಹಿಕೆ, ಅಥವಾ ಅಸಂಬದ್ಧ ಬದಲಾವಣೆಯಾಗಿರುತ್ತದೆ ಎಂಬುದಕ್ಕೆ ಸಂಬಂಧಿಸಿದ ಒಂದು ವಿವರಣೆಯನ್ನು ಪ್ರಮಾಣಕ ವೈಜ್ಞಾನಿಕ ಮಾದರಿಗಳು ನೀಡುತ್ತವೆ.
ಹಿಂದೆ ಕಮಿಟಿ ಫಾರ್ ದಿ ಸೈಂಟಿಫಿಕ್ ಇನ್ವೆಸ್ಟಿಗೇಷನ್ ಆಫ್ ಕ್ಲೇಮ್ಸ್ ಆಫ್ ದಿ ಪ್ಯಾರನಾರ್ಮಲ್ (CSICOP) ಎಂದು ಕರೆಯಲ್ಪಡುತ್ತಿದ್ದ ದಿ ಕಮಿಟಿ ಫಾರ್ ಸ್ಕೆಪ್ಟಿಕಲ್ ಇನ್‌ಕ್ವೈರಿ ಎಂಬುದು ಒಂದು ಸಂಘಟನೆಯಾಗಿದ್ದು, ವೈಜ್ಞಾನಿಕವಾದ, ಸಂಶಯವಾದದ ವಿಧಾನವನ್ನು ಜಾಹೀರುಗೊಳಿಸು ಗುರಿಯನ್ನು ಹೊಂದಿದೆ. ವೈಜ್ಞಾನಿಕ ಗ್ರಹಿಕೆಯ ಪರಿಭಾಷೆಯಲ್ಲಿ ಅಧಿಸಾಮಾನ್ಯ ವರದಿಗಳನ್ನು ಅರ್ಥಮಾಡಿಕೊಳ್ಳುವೆಡೆಗೆ ಗುರಿಯಿಟ್ಟುಕೊಂಡಿರುವ ತನಿಖೆಗಳನ್ನು ಇದು ಕೈಗೊಳ್ಳುತ್ತದೆ ಮತ್ತು ಸ್ಕೆಪ್ಟಿಕಲ್ ಇನ್‌ಕ್ವೈರರ್ ಎಂಬ ತನ್ನ ನಿಯತಕಾಲಿಕದಲ್ಲಿ ಇದರ ಫಲಿತಾಂಶಗಳನ್ನು ಪ್ರಕಟಿಸುತ್ತದೆ. ಹಿಂದಿದ್ದ ಜೇಮ್ಸ್ ರ್ಯಾಂಡಿ ಎಂಬ ಓರ್ವ ವೇದಿಕೆ ಜಾದೂಗಾರನು ಅಧಿಸಾಮಾನ್ಯ ಪ್ರತಿಪಾದನೆಗಳ ಓರ್ವ ಸುಪರಿಚಿತ ತನಿಖೆಗಾರನಾಗಿದ್ದಾನೆ.[೨೦] ಭ್ರಾಂತಿಯ ವಿಷಯದಲ್ಲಿ ಒಂದು ಹಿನ್ನೆಲೆಯನ್ನು ಹೊಂದಿರುವ ಓರ್ವ ತನಿಖೆಗಾರನಾಗಿ ರ್ಯಾಂಡಿಯು ಭಾವಿಸುವ ಪ್ರಕಾರ, ಅಧಿಸಾಮಾನ್ಯ ಸಾಮರ್ಥ್ಯಗಳೆಂದು ಪ್ರತಿಪಾದಿಸುವವರಿಗೆ ಸಂಬಂಧಿಸಿದ ಅತ್ಯಂತ ಸರಳವಾದ ವಿವರಣೆಯು ಅನೇಕವೇಳೆ ಮೋಸಗಾರಿಕೆಯಾಗಿರುತ್ತದೆ; ಅತೀಂದ್ರಿಯ ಶಕ್ತಿಯಿರುವವನೆಂದು ಹೇಳಿಕೊಳ್ಳುತ್ತಿದ್ದ ಯೂರಿ ಗೆಲ್ಲರ್ ಹೊಂದಿದ್ದ, ಚಮಚೆಯನ್ನು ಬಗ್ಗಿಸುವ ಸಾಮರ್ಥ್ಯಗಳನ್ನು ತರಬೇತಿ ಪಡೆದ ವೇದಿಕೆ ಜಾದೂಗಾರರು ಸುಲಭವಾಗಿ ನಕಲುಮಾಡಬಲ್ಲರು ಎಂಬುದನ್ನು ಅವನು ಪ್ರಾತ್ಯಕ್ಷಿಕೆಯಾಗಿ ತೋರಿಸುವ ಮೂಲಕ ನಿರೂಪಿಸಿದ.[೨೧] ಅವನು ಜೇಮ್ಸ್ ರ್ಯಾಂಡಿ ಎಜುಕೇಷನಲ್ ಫೌಂಡೇಷನ್ ಸಂಬ ಸಂಸ್ಥೆಯ ಸಂಸ್ಥಾಪಕನೂ ಆಗಿದ್ದ. ಅಷ್ಟೇ ಅಲ್ಲ, ಯಾವುದೇ ಅಧಿಸಾಮಾನ್ಯ, ಅತಿಮಾನುಷ ಅಥವಾ ಐಂದ್ರಜಾಲಿಕ ಶಕ್ತಿ ಅಥವಾ ಘಟನೆಯ ಪುರಾವೆಯನ್ನು, ಎರಡೂ ಸಹಭಾಗಿಗಳಿಂದ ಸಮ್ಮತಿಸಲ್ಪಟ್ಟ ಪರೀಕ್ಷಾ ಷರತ್ತುಗಳ ಅಡಿಯಲ್ಲಿ ಯಾರಿಬೇಕಾದರೂ ಪ್ರದರ್ಶಿಸುವುದಕ್ಕಾಗಿ 1,000,000 US $ನಷ್ಟು ಮೊತ್ತವನ್ನು ಒಂದು ಬಹುಮಾನವನ್ನಾಗಿ ನೀಡುವ ಈ ಸಂಸ್ಥೆಯ ದಶಲಕ್ಷ ಡಾಲರ್ ಸವಾಲಿನ ಬಹುಮಾನ ನೀಡಿಕೆಯನ್ನೂ ಅವನು ಸ್ಥಾಪಿಸಿದ.[೨೨]
ಅಸಂಗತತೆಗಳು
[ಬದಲಾಯಿಸಿ]ಅಧಿಸಾಮಾನ್ಯ ವಿದ್ಯಮಾನಗಳು ತಮಾಷೆಗಾಗಿ ಮಾಡಿದ ಮೋಸಗಳಿರಬಹುದು ಎಂಬ ಆಧಾರವಾಕ್ಯ ಅಥವಾ ಪ್ರಮೇಯದ ಮೇಲೆ ಆಧರಿಸಿ ಅಸಂಗತತೆಗಳು ಕಾರ್ಯನಿರ್ವಹಿಸುತ್ತವೆ; ಈ ಅಧಿಸಾಮಾನ್ಯ ವಿದ್ಯಮಾನಗಳು ಪ್ರಸಕ್ತ ವೈಜ್ಞಾನಿಕ ಮಾದರಿಗಳ ವ್ಯಾಪ್ತಿಯೊಳಗೆ ಅರ್ಥೈಸಿಕೊಂಡವುಗಳಾಗಿರಬಹುದು, ಅಥವಾ ಇನ್ನೂ ಪರಿಶೋಧಿಸದ ವಿಜ್ಞಾನದ ಒಂದು ಕ್ಷೇತ್ರವಾಗಿ ಬಳಸಿಕೊಳ್ಳುವ ಮೂಲಕ ತರ್ಕಬದ್ಧವಾಗಿಸಲ್ಪಡಬಹುದಾಗಿರಬಹುದು.[೨೩][೨೪][೨೫]
ನಂಬಿಕೆಯ ಜನಮತ ಸಂಗ್ರಹಗಳು
[ಬದಲಾಯಿಸಿ]ಅಧಿಸಾಮಾನ್ಯ ವಿದ್ಯಮಾನಗಳ ಅಸ್ತಿತ್ವದ ನ್ಯಾಯಸಮ್ಮತತೆಯು ವಿವಾದಾಸ್ಪದವಾಗಿದ್ದು, ಅಧಿಸಾಮಾನ್ಯ ಸಂಗತಿಯ ಪ್ರತಿಪಾದಕರ ಹಾಗೂ ಸಂದೇಹವಾದಿಗಳಎರಡೂ ವಲಯಗಳಿಂದಲೂ ಅದು ಉತ್ಕಟಭಾವದಿಂದ ಚರ್ಚಿಸಲ್ಪಡುತ್ತಿರುವ ವೇಳೆಗೇ, ಅಧಿಸಾಮಾನ್ಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಜನರು ಹೊಂದಿರುವ ನಂಬಿಕೆಗಳನ್ನು ನಿರ್ಣಯಿಸುವಲ್ಲಿ ಸಮೀಕ್ಷೆಗಳು ಪ್ರಯೋಜನಕಾರಿಯಾಗಿ ಕಂಡುಬರುತ್ತವೆ. ಚರ್ಚೆಯ ಪರವಾಗಿ ಅಥವಾ ವಿರುದ್ಧವಾಗಿರುವ ವೈಜ್ಞಾನಿಕ ಪುರಾವೆಯನ್ನು ರೂಪಿಸಲು ಈ ಅಭಿಪ್ರಾಯಗಳು ಅಸಮರ್ಥವಾಗಿರುವ ಸಂದರ್ಭದಲ್ಲೇ, ಜನಸಮುದಾಯದ ಒಂದು ನಿರ್ದಿಷ್ಟ ಭಾಗದ ಚಿಂತನಮಾರ್ಗದ ಒಂದು ಸೂಚನೆಯನ್ನು ಅವು ನೀಡಬಹುದು (ಕನಿಷ್ಟಪಕ್ಷ ಜನಮತ ಸಂಗ್ರಹಗಳಿಗೆ ಉತ್ತರಿಸಿದವರ ನಡುವೆ). ಅಧಿಸಾಮಾನ್ಯ ವಿಷಯಗಳ ಕುರಿತಾದ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸಾರ್ವತ್ರಿಕ ಜನಸಮುದಾಯವು ಹೊಂದಿರುವ ನಂಬಿಕೆಗಳ ಒಂದು ಸಮೀಕ್ಷೆಯನ್ನು ಗ್ಯಾಲಪ್ ಆರ್ಗನೈಸೇಷನ್ ಎಂಬ ಸಂಸ್ಥೆಯು 2005ರಲ್ಲಿ ಕೈಗೊಂಡಿತು.[೨೬] ಈ ಸಮೀಕ್ಷೆಯು ಕಂಡುಕೊಂಡ ಪ್ರಕಾರ, ಮತ ಚಲಾಯಿಸಿದವರಲ್ಲಿ 73 ಪ್ರತಿಶತ ಭಾಗದಷ್ಟು ಮಂದಿ, ಸಮೀಕ್ಷೆಯಲ್ಲಿ ಸಾದರಪಡಿಸಲಾದ ಹತ್ತು ಅಧಿಸಾಮಾನ್ಯ ಸಂಗತಿಗಳ ಪೈಕಿ ಕನಿಷ್ಟಪಕ್ಷ ಒಂದರಲ್ಲಿ ನಂಬಿಕೆಯಿರುವುದನ್ನು ತಿಳಿಸಿದ್ದರು. ಸಮೀಕ್ಷೆಯು ಒಳಗೊಂಡಿದ್ದ ಈ ಹತ್ತು ಸಂಗತಿಗಳೆಂದರೆ: ಇಂದ್ರಿಯಾತೀತ ಗ್ರಹಿಕೆ (41%ನಷ್ಟು ಜನ ಈ ನಂಬಿಕೆಯನ್ನು ಹೊಂದಿದ್ದರು), ಗೀಳುಹಿಡಿದ ಮನೆಗಳು (37%), ಪ್ರೇತಗಳು (32%), ದೂರಸಂವೇದನೆ (31%), ಅತೀಂದ್ರಿಯ ದೃಷ್ಟಿ (26%), ಜ್ಯೋತಿಷ್ಯ (25%), ಮೃತರೊಂದಿಗಿನ ಸಂವಹನೆ (21%), ಮಾಟಗಾತಿಯರು (21%), ಪುನರ್ಜನ್ಮ (20%), ಮತ್ತು ಆಧ್ಯಾತ್ಮಿಕ ಅಸ್ತಿತ್ವಗಳನ್ನು ನಿರ್ದೇಶಿಸುವಿಕೆ (9%). "ಮಾನವರು 'ಸಾಮಾನ್ಯ'ವಾದ ಐದು ಇಂದ್ರಿಯಗಳಿಗಿಂತ ಹೆಚ್ಚಿನದನ್ನು ಹೊಂದಿದ್ದಾರೆ ಎಂಬ ನಂಬಿಕೆಯನ್ನು ಅವರು ಬಯಸುವ ರೀತಿಯಲ್ಲಿ" ಈ ಅಂಶಗಳನ್ನು ಆರಿಸಲಾಗಿತ್ತು. ಪ್ರತಿಕ್ರಿಯೆ ನೀಡಿದವರ ಪೈಕಿ ಕೇವಲ ಒಂದು ಪ್ರತಿಶತದಷ್ಟು ಮಂದಿ ಎಲ್ಲಾ ಹತ್ತು ವಸ್ತುಗಳಲ್ಲೂ ನಂಬಿಕೆಯನ್ನು ಹೊಂದಿದ್ದರು. ವಿದ್ಯಮಾನಗಳ ಯಾವ ಬಗೆಗಳನ್ನು ತಾವು ಅನುಭವಕ್ಕೆ ತಂದುಕೊಂಡಿರುವುದಾಗಿ ಜನರು ಪ್ರತಿಪಾದಿಸುತ್ತಾರೆ ಮತ್ತು ಅವರ ಜೀವನಗಳ ಮೇಲೆ ಈ ಅನುಭವಗಳು ಬೀರಿದ ಪರಿಣಾಮಗಳೇನು ಎಂಬುದನ್ನು ನಿರ್ಣಯಿಸಲು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯಕ್ಕೆ[೨೭] ಸೇರಿದ ಸಂಶೋಧಕರಿಂದ 2006ರಲ್ಲಿ ನಡೆಸಲ್ಪಟ್ಟ ಮತ್ತೊಂದು ಸಮೀಕ್ಷೆಯು ಬಯಸಿತು. ಒಂದು ಆನ್‌ಲೈನ್ ಸಮೀಕ್ಷೆಯಾಗಿ ನಿರ್ವಹಿಸಲ್ಪಟ್ಟ ಈ ಅಧ್ಯಯನದಲ್ಲಿ ಪ್ರಪಂಚದಾದ್ಯಂತದ 2,000ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿ ಪ್ರತಿಕ್ರಿಯೆ ನೀಡಿದರು. ಇದರ ಫಲಿತಾಂಶಗಳು ಹೊರಗೆಡವಿದ ಮಾಹಿತಿಯ ಪ್ರಕಾರ, ಪ್ರತಿಕ್ರಿಯೆ ನೀಡಿದವರ ಪೈಕಿ ಸುಮಾರು 70%ನಷ್ಟು ಮಂದಿ ಒಂದು ವಿವರಿಸಲಾಗದ ಅಧಿಸಾಮಾನ್ಯ ಘಟನೆಯನ್ನು ಅನುಭವಕ್ಕೆ ತಂದುಕೊಂಡಿದ್ದರು; ಇದು ಅವರ ಜೀವನವನ್ನು ಬಹುಪಾಲು ಒಂದು ಗುಣಾತ್ಮಕವಾದ ರೀತಿಯಲ್ಲಿ ಬದಲಾಯಿಸಿತ್ತು. ಅಲ್ಲಿ ಇರುವಂಥದ್ದಲ್ಲ ಎಂದು ತಾವು ತಿಳಿದುಕೊಂಡಿದ್ದ ಒಂದು ಪ್ರಾಣಿ ಅಥವಾ ವ್ಯಕ್ತಿಯನ್ನು ತಾವು ನೋಡಿದುದಾಗಿ, ಅದರ ಧ್ವನಿಯನ್ನು ಕೇಳಿಸಿಕೊಂಡುದುದಾಗಿ, ಅಥವಾ ಅದರಿಂದ ಸ್ಪರ್ಶದ ಅನುಭವಕ್ಕೆ ಒಳಗಾದುದುದಾಗಿಯೂ ಸುಮಾರು 70%ನಷ್ಟು ಮಂದಿ ಪ್ರತಿಪಾದಿಸಿದ್ದರು; ಈ ಕುರಿತಾದ ಒಂದು ಮುನ್ಸೂಚನೆಯನ್ನು ತಾವು ಹೊಂದಿದ್ದಾಗಿ 80%ನಷ್ಟು ಮಂದಿ ವರದಿಮಾಡಿದ್ದರೆ, ಹೆಚ್ಚೂಕಮ್ಮಿ 50%ನಷ್ಟು ಮಂದಿ ತಾವು ಹಿಂದಿನ ಜೀವನವೊಂದನ್ನು ನೆನಪಿಸಿಕೊಂಡುದಾಗಿ ಹೇಳಿಕೆ ನೀಡಿದರು.[೨೭] ಓಕ್ಲಹಾಮಾ ನಗರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಬ್ರಿಯಾನ್ ಫರಾ ಹಾಗೂ ಯೂನಿವರ್ಸಿಟಿ ಆಫ್ ಸೆಂಟ್ರಲ್ ಓಕ್ಲಹಾಮಾದಲ್ಲಿ ಕೆಲಸ ಮಾಡುತ್ತಿದ್ದ ಗ್ಯಾರಿ ಸ್ಟೀವರ್ಡ್ ಎಂಬಿಬ್ಬರಿಂದ 2006ರಲ್ಲಿ ಜನಮತ ಸಂಗ್ರಹಗಳು ನಿರ್ವಹಿಸಲ್ಪಟ್ಟವು, ಮತ್ತು 2001ರಲ್ಲಿ ನಡೆದ ಗ್ಯಾಲಪ್ ಜನಮತ ಸಂಗ್ರಹವೊಂದಕ್ಕೆ ಇದರ ಫಲಿತಾಂಶಗಳು ಹೋಲಿಸಲ್ಪಟ್ಟವು.[೨೮] ಯಥೋಚಿತವಾಗಿ ಸುಸಂಗತವಾಗಿದ್ದ ಫಲಿತಾಂಶಗಳನ್ನು ಅವರು ಕಂಡುಕೊಂಡರು.
!ನಂಬಿಕೆ !ಖಾತ್ರಿಯಿಲ್ಲ !ನಂಬಿಕೆ !ಖಾತ್ರಿಯಿಲ್ಲ |- ! !colspan="2"|ಫರಾ-ಸ್ಟೀವರ್ಡ್ !colspan="2"|ಗ್ಯಾಲಪ್ |- |ನಿಸರ್ಗಾತೀತ/ಆಧ್ಯಾತ್ಮಿಕವಾಗಿ ಗುಣಪಡಿಸುವಿಕೆ |56 |26 |54 |19 |- |ESP |28 |39 |50 |20 |- |ಗೀಳುಹಿಡಿದ ಮನೆಗಳು |40 |25 |42 |16 |- |ಅತಿಮಾನುಷ ಶಕ್ತಿಯ ಸ್ವಾಮ್ಯ |40 |28 |41 |16 |- |ಪ್ರೇತಗಳು/ಮೃತರ ಚೇತನಗಳು |39 |27 |38 |17 |- |ದೂರಸಂವೇದನೆ |24 |34 |36 |26 |- |ಗತಕಾಲದಲ್ಲಿ ಭೂಮಿಗೆ ಭೇಟಿನೀಡಿದ ಭೂಮ್ಯತೀತ ಜೀವಿಗಳು |17 |34 |33 |27 |- |ಅತೀಂದ್ರಿಯ ದೃಷ್ಟಿ ಮತ್ತು ಭವಿಷ್ಯ ಹೇಳುವ ಸಾಮರ್ಥ್ಯ |24 |33 |32 |23 |- |ಮೃತರೊಂದಿಗಿನ ಸಂವಹನೆ |16 |29 |28 |26 |- |ಜ್ಯೋತಿಷ್ಯ |17 |26 |28 |18 |- |ಮಾಟಗಾತಿಯರು |26 |19 |26 |15 |- |ಪುನರ್ಜನ್ಮ |14 |28 |25 |20 |- |ನಿರ್ದೇಶಿಸುವಿಕೆ |10 |29 |15 |21 |} ವಿಭಿನ್ನ ಕಾಲಸಂದರ್ಭಗಳಲ್ಲಿ ವಿಭಿನ್ನ ಸಂಘಟನೆಗಳಿಂದ ನಡೆಸಲ್ಪಟ್ಟ ಇತರ ಸಮೀಕ್ಷೆಗಳು ಇದನ್ನೇ ಅತೀವವಾಗಿ ಹೋಲುವ ಫಲಿತಾಂಶಗಳನ್ನು ಕಂಡುಕೊಂಡಿವೆ. 2001ರಲ್ಲಿ ನಡೆಸಲಾದ ಒಂದು ಗ್ಯಾಲಪ್ ಜನಮತ ಸಂಗ್ರಹವು, ಸಾರ್ವಜನಿಕರು ಈ ಅಂಶಗಳನ್ನು ಅಂಗೀಕರಿಸಿದ್ದನ್ನು ಕಂಡುಕೊಂಡಿತು: 54%ನಷ್ಟು ಜನರು ನಿಸರ್ಗಾತೀತ/ಆಧ್ಯಾತ್ಮಿಕವಾದ ಗುಣಪಡಿಸುವಿಕೆಯಲ್ಲಿ ನಂಬಿಕೆಯನ್ನು ಹೊಂದಿದ್ದರು, 42%ನಷ್ಟು ಮಂದಿ ಗೀಳುಹಿಡಿದ ಮನೆಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದರು, 41%ನಷ್ಟು ಮಂದಿಗೆ ಸೈತಾನನಂಥ ಶಕ್ತಿಯ ಸ್ವಾಮ್ಯದಲ್ಲಿ ನಂಬಿಕೆಯಿತ್ತು, ದೂರಸಂವೇದನೆಯಲ್ಲಿ 36%ನಷ್ಟು ಮಂದಿ ನಂಬಿಕೆಯಿರಿಸಿದ್ದರೆ, 25%ನಷ್ಟು ಮಂದಿ ಪುನರ್ಜನ್ಮದಲ್ಲಿ, ಮತ್ತು 15%ನಷ್ಟು ಮಂದಿ ನಿರ್ದೇಶಿಸುವಿಕೆಯಲ್ಲಿ ನಂಬಿಕೆಯನ್ನು ಹೊಂದಿದ್ದರು.[೨೯] ನಾರ್ಫೋಕ್‌ನ ಈಸ್ಟರ್ನ್ ವರ್ಜೀನಿಯಾ ಮೆಡಿಕಲ್ ಸ್ಕೂಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ ಜೆಫ್ರಿ S. ಲೆವಿನ್ ಎಂಬಾತ ನಡೆಸಿದ ಒಂದು ಸಮೀಕ್ಷೆಯು ಕಂಡುಕೊಂಡ ಪ್ರಕಾರ, U.S. ಜನಸಮುದಾಯದ ಪೈಕಿ 2/3ರಷ್ಟು ಭಾಗಕ್ಕೂ ಹೆಚ್ಚಿನ ಜನರು ಕನಿಷ್ಟಪಕ್ಷ ಒಂದು ಇಂದ್ರಿಯಾತೀತ ಅನುಭವವನ್ನು ಹೊಂದಿದ್ದನ್ನು ವರದಿಮಾಡಿದ್ದರು.[೨೮][೩೦] 1996ರಲ್ಲಿ ನಡೆದ ಒಂದು ಗ್ಯಾಲಪ್ ಜನಮತ ಸಂಗ್ರಹವು ಅಂದಾಜಿಸಿದ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಜನರ ಪೈಕಿ 71%ನಷ್ಟು ಮಂದಿ, UFOಗಳ ಕುರಿತಾದ ಮಾಹಿತಿಯನ್ನು ಸರ್ಕಾರವು ಮುಚ್ಚಿಹಾಕುತ್ತಿದೆ ಎಂದು ನಂಬಿದ್ದರು. Sci Fi ವಾಹಿನಿಗಾಗಿ 2002ರಲ್ಲಿ ನಡೆಸಲ್ಪಟ್ಟ ರೋಪರ್ ಜನಮತ ಸಂಗ್ರಹವೊಂದು ವರದಿ ಮಾಡಿದ ಪ್ರಕಾರ, UFOಗಳು ನಿಜವಾದ ವಸ್ತುಗಳಾಗಿದ್ದವು ಎಂದು 56%ನಷ್ಟು ಮಂದಿ ನಂಬಿದ್ದರೆ, ಅನ್ಯಲೋಕದ ಜೀವಿಗಳು ಭೂಮಿಗೆ ಭೇಟಿನೀಡಿದ್ದವು ಎಂಬುದಾಗಿ 48%ನಷ್ಟು ಮಂದಿ ನಂಬಿದ್ದರು.[೨೮] 2001ರಲ್ಲಿ ನಡೆಸಲ್ಪಟ್ಟ ನ್ಯಾಷನಲ್ ಸೈನ್ಸ್ ಫೌಂಡೇಷನ್ ಸಮೀಕ್ಷೆಯೊಂದು ಕಂಡುಕೊಂಡ ಪ್ರಕಾರ, ಮತ ಚಲಾಯಿಸಿದ ಜನರ ಪೈಕಿ 9 ಪ್ರತಿಶತ ಭಾಗದಷ್ಟು ಜನರು ಜ್ಯೋತಿಷ್ಯವು ಅತ್ಯಂತ ವೈಜ್ಞಾನಿಕವಾಗಿದೆ ಎಂದು ಭಾವಿಸಿದ್ದರೆ, 31 ಪ್ರತಿಶತ ಭಾಗದಷ್ಟು ಜನರು ಇದು ಒಂದಷ್ಟು ವೈಜ್ಞಾನಿಕವಾಗಿದೆ ಎಂದು ಭಾವಿಸಿದ್ದರು. ಸಮೀಕ್ಷೆಗೆ ಒಳಪಡಿಸಲಾದ ಅಮೆರಿಕನ್ನರ ಪೈಕಿ ಸುಮಾರು 32%ನಷ್ಟು ಮಂದಿ ಕೆಲವೊಂದು ಸಂಖ್ಯೆಗಳು ಅದೃಷ್ಟದ ಸಂಖ್ಯೆಗಳು ಎಂಬುದಾಗಿ ತಿಳಿಸಿದ್ದರೆ, ಯುರೋಪ್‌ಗೆ ಸೇರಿದ 46%ನಷ್ಟು ಮಂದಿ ಆ ಪ್ರತಿಪಾದನೆಗೆ ಸಮ್ಮತಿಸಿದರು. ಮತ ಚಲಾಯಿಸಿದ ಎಲ್ಲಾ ಜನರ ಪೈಕಿ ಸುಮಾರು 60%ನಷ್ಟು ಮಂದಿ ಇಂದ್ರಿಯಾತೀತ ಗ್ರಹಿಕೆಯ ಒಂದು ಸ್ವರೂಪದಲ್ಲಿ ನಂಬಿಕೆಯನ್ನು ಹೊಂದಿದ್ದರೆ, "ವರದಿ ಮಾಡಲ್ಪಟ್ಟಿರುವ ಗುರುತಿಸಲಾಗದ ಹಾರುವ ವಸ್ತುಗಳ (ಹಾರುವ ತಟ್ಟೆಗಳ) ಪೈಕಿ ಕೆಲವೊಂದು, ನಿಜವಾಗಿಯೂ ಇತರ ನಾಗರಿಕತೆಗಳಿಂದ ಬಂದಿರುವ ಬಾಹ್ಯಾಕಾಶ ನೌಕೆಗಳಾಗಿವೆ" ಎಂದು 30%ನಷ್ಟು ಮಂದಿ ಭಾವಿಸಿದ್ದರು.[೩೧]
ಅಧಿಸಾಮಾನ್ಯ ಸವಾಲುಗಳು
[ಬದಲಾಯಿಸಿ]1922ರಲ್ಲಿ, ಸೈಂಟಿಫಿಕ್ ಅಮೆರಿಕನ್ 2,500 US$ ಮೊತ್ತದ ಎರಡು ಆಹ್ವಾನಗಳನ್ನು ಪ್ರಸ್ತಾವಿಸಿತು: ಪರೀಕ್ಷಾ ಷರತ್ತುಗಳ ಅಡಿಯಲ್ಲಿ ರೂಪಿಸಲಾದ ಮೊದಲ ಆಧಾರ ಪೂರ್ವಕ ಚೇತನ ಛಾಯಾಚಿತ್ರಕ್ಕೆ ಸಂಬಂಧಿಸಿದ್ದು ಮೊದಲನೆಯದಾದರೆ, ಒಂದು "ಗೋಚರಿಸುವ ನಿಸರ್ಗಾತೀತ ಕಾಣಿಸಿಕೊಳ್ಳುವಿಕೆ"ಯನ್ನು ರೂಪಿಸುವ ಅತೀಂದ್ರಿಯ ಶಕ್ತಿಯುಳ್ಳ ಮೊದಲ ವ್ಯಕ್ತಿಗೆ ಸಂಬಂಧಿಸಿದ್ದು ಎರಡನೆಯದಾಗಿತ್ತು. ಹ್ಯಾರಿ ಹೌಡಿನಿಯು ವಿಚಾರಣಾ ಸಮಿತಿಯ ಓರ್ವ ಸದಸ್ಯನಾಗಿದ್ದ. ಜಾರ್ಜ್ ವ್ಯಾಲಿಯಂಟೈನ್ ಎಂಬಾತನು ಪರೀಕ್ಷೆಗೊಳಗಾದ ಮೊದಲ ಮಾಧ್ಯಮವಾಗಿದ್ದ; ಒಂದು ಕತ್ತಲೆಗೊಳಿಸಲಾದ ಕೋಣೆಯ ಸುತ್ತಲೂ ತೇಲಾಡುತ್ತಿರುವ ಒಂದು ಕಹಳೆಯ ಮೂಲಕ ಚೇತನಗಳು ತನ್ನ ಸಮ್ಮುಖದಲ್ಲಿ ಮಾತನಾಡುತ್ತವೆ ಎಂಬುದಾಗಿ ಈತ ಪ್ರತಿಪಾದಿಸಿದ್ದ. ಪರೀಕ್ಷೆಗೆ ಸಂಬಂಧಿಸಿದಂತೆ ವ್ಯಾಲಿಯಂಟೈನ್‌ನನ್ನು ಒಂದು ಕೋಣೆಯಲ್ಲಿ ಇರಿಸಲಾಯಿತು, ಬೆಳಕುಗಳನ್ನು ಆರಿಸಲಾಯಿತು; ಆದರೆ ಒಂದು ವೇಳೆ ಅವನು ತನ್ನ ಕುರ್ಚಿಯಿಂದ ಬಿಟ್ಟು ಮೇಲಕ್ಕೆ ಎದ್ದರೆ ಪಕ್ಕದ ಕೋಣೆಯಲ್ಲಿ ಒಂದು ಸಂಕೇತ ದೀಪವು ಹೊತ್ತಿಕೊಳ್ಳುವ ರೀತಿಯಲ್ಲಿ ಅವನಿಗೆ ಗೊತ್ತಾಗದಂತೆ ಅವನ ಕುರ್ಚಿಯನ್ನು ಸಜ್ಜುಗೊಳಿಸಲಾಗಿತ್ತು. ಅವನ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಬೆಳಕಿನ ಸಂಕೇತಗಳು ಎಡವಿಸಲ್ಪಡುತ್ತಿದ್ದವಾದ್ದರಿಂದ, ಪ್ರಶಸ್ತಿಯನ್ನು ವ್ಯಾಲಿಯಂಟೈನ್ ದಕ್ಕಿಸಿಕೊಳ್ಳಲಾಗಲಿಲ್ಲ.[೩೨] ಸೈಂಟಿಫಿಕ್ ಅಮೆರಿಕನ್‌ನಿಂದ 1924ರಲ್ಲಿ ಪರೀಕ್ಷಿಸಲ್ಪಟ್ಟವರ ಪೈಕಿ ಮಿನಾ ಕ್ರಾಂಡನ್ ಎಂಬಾಕೆಯು ಕೊನೆಯವಳಾಗಿದ್ದಳು. ಅಲ್ಲಿಂದೀಚೆಗೆ, ವೀಕ್ಷಿಸಿದ ಸನ್ನಿವೇಶವೊಂದರಲ್ಲಿನ ಅಧಿಸಾಮಾನ್ಯ ಸಂಗತಿಯ ಪುರಾವೆಗೆ ಸಂಬಂಧಿಸಿದಂತೆ, ಇದೇ ರೀತಿಯ ಹಣದ ರೂಪದ ಪ್ರಶಸ್ತಿಗಳನ್ನು ಅನೇಕ ವ್ಯಕ್ತಿಗಳು ಮತ್ತು ಗುಂಪುಗಳು ಮುಂದುಮಾಡಿವೆ. 2.4 ದಶಲಕ್ಷ ಡಾಲರ್‌ಗಳಿಗೂ ಹೆಚ್ಚಿನ ಮೊತ್ತದ ಒಂದು ಸಂಯೋಜಿತ ಮೌಲ್ಯವನ್ನು ಈ ಬಹುಮಾನಗಳು ಹೊಂದಿವೆ.[೩೩] ಅತಿಮಾನುಷ ಅಥವಾ ಅಧಿಸಾಮಾನ್ಯ ಸಾಮರ್ಥ್ಯಗಳನ್ನು ತಾನು ಹೊಂದಿರುವುದಾಗಿ ಸೂಕ್ತ ಪರೀಕ್ಷಾ ಷರತ್ತುಗಳ ಅಡಿಯಲ್ಲಿ ಸಾಬೀತುಪಡಿಸಬಲ್ಲ ಓರ್ವ ವ್ಯಕ್ತಿಗೆ, ಒಂದು ದಶಲಕ್ಷ ಡಾಲರ್‌ಗಳಷ್ಟು ಮೊತ್ತದ ಒಂದು ಬಹುಮಾನವನ್ನು ನೀಡುವುದಾಗಿ ಜೇಮ್ಸ್ ರ್ಯಾಂಡಿ ಎಜುಕೇಷನಲ್ ಫೌಂಡೇಷನ್ ಪ್ರಸ್ತಾವಿಸಿದೆ. ಈ ಸವಾಲನ್ನು ಕೈಗೆತ್ತಿಕೊಳ್ಳಲು ಅತೀಂದ್ರಿಯ ಶಕ್ತಿಯುಳ್ಳ ಯಾವುದೇ ಪ್ರಸಿದ್ದ ವ್ಯಕ್ತಿಯೂ ಮುಂದೆಬಂದಿಲ್ಲ.
ಇವನ್ನೂ ಗಮನಿಸಿ
[ಬದಲಾಯಿಸಿ]Find more about ಅಧಿಸಾಮಾನ್ಯ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
ಅಧಿಸಾಮಾನ್ಯ: ಗುಪ್ತ ಪ್ರಾಣಿಶಾಸ್ತ್ರ, ಅಸಂಗತ ವಿದ್ಯಮಾನಗಳು, ಪ್ರೇತಗಳು, ಗೀಳುಹಿಡಿದ ತಾಣಗಳು, ಅತೀಂದ್ರಿಯವಾದ, ಹೊಸ ಯುಗ, ಐಂದ್ರಜಾಲಿಕ, ಅಧಿಸಾಮಾನ್ಯ ಕಾದಂಬರಿ, ಅಧಿಸಾಮಾನ್ಯ ವಿವರಣೆಗಳು for UFOಗಳು, ಅಧಿಮನೋವಿಜ್ಞಾನ, ಅಸಂದಿಗ್ಧಕರಣದ ಅಧ್ಯಯನ, ಅತೀಂದ್ರಿಯ ವಿಜ್ಞಾನ, ಅತಿಮಾನುಷ, UFOಗಳು, USO, UFO ದೃಶ್ಯಗಳು, ಪ್ರೇತ ಕೇಂದ್ರಗಳು. ಲೇಖಕರು: ಚಾರ್ಲ್ಸ್ ಫೋರ್ಟ್, ಬರ್ನಾರ್ಡ್ ಹ್ಯೂವೆಲ್ಮಾನ್ಸ್, J. ಫ್ರಾನ್ಸಿಸ್ ಹಿಚಿಂಗ್, J.B. ರೈನ್, ರಾಬರ್ಟ್ ರಿಪ್ಲೆ, ಅರ್ಥರ್ C ಕ್ಲಾರ್ಕ್, ಕಾರ್ಲ್ ಸ್ಯಾಗನ್, ಇವಾನ್ ಸ್ಯಾಂಡರ್‌ಸನ್, ಜಾನ್ ಕೀಲ್, ಹಿಲರಿ ಎವಾನ್ಸ್, ಬ್ರೂಸ್ ಬ್ಯಾರಿಮೋರ್ ಹಾಲ್‌ಪೆನ್ನಿ, ಬಿಲ್ ಸ್ವೀಟ್. ಸಂದೇಹವಾದ: ಸಂಶಯವಾದದ ವಿಚಾರಣೆಗೆ ಸಂಬಂಧಿಸಿದ ಸಮಿತಿ, ನಿಜಸ್ವರೂಪ ಬಯಲಿಗೆಳೆಯುವಿಕೆ, ಪ್ರೇತ ಅನ್ವೇಷಕರು, ತಮಾಷೆಗಾಗಿ ಮಾಡಿದ ಮೋಸಗಳು, ಜೇಮ್ಸ್ ರ್ಯಾಂಡಿ, ಅಧಿಸಾಮಾನ್ಯ ಪುರಾವೆಗಾಗಿ ನೀಡಲ್ಪಟ್ಟ ಬಹುಮಾನಗಳು, ಸಂದೇಹವಾದ ವಿಜ್ಞಾನ: ಗೌಣ ವಿಜ್ಞಾನ, ಹುಸಿವಿಜ್ಞಾನ, ವೈಜ್ಞಾನಿಕ ವಿಧಾನ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Paranormal". Dictionary.com. Ask.com.
- ↑ "Paranormal". Merriam-Webster Dictionary. Merriam-Webster.
- ↑ "Paranormal". The Free Dictionary. Retrieved February 3, 2008.
- ↑ Orapello, Christopher. "What does 'Paranormal' mean?". Mid-Atlantic Paranormal Research. Archived from the original on ನವೆಂಬರ್ 23, 2008. Retrieved November 23, 2008.
- ↑ "ಬಿಲೀಫ್ ಇನ್ ದಿ ಪ್ಯಾರನಾರ್ಮಲ್ ಆರ್ ಸ್ಯೂಡೋಸೈನ್ಸ್". Archived from the original on 2012-02-04. Retrieved 2021-07-21.
- ↑ ಮೆರ್ರಿಯಮ್-ವೆಬ್‌ಸ್ಟರ್‌ನಲ್ಲಿರುವ "ಪ್ಯಾರನಾರ್ಮಲ್" http://www.merriam-webster.com/dictionary/paranormal
- ↑ Dictionary.comನಲ್ಲಿರುವ "ಪ್ಯಾರನಾರ್ಮಲ್" http://dictionary.reference.com/browse/paranormal
- ↑ ಗ್ಲಾಸರಿ, ದಿ ಜರ್ನಲ್ ಆಫ್ ಪ್ಯಾರಸೈಕಾಲಜಿ Archived 2015-11-06 ವೇಬ್ಯಾಕ್ ಮೆಷಿನ್ ನಲ್ಲಿ., ಪ್ಯಾರಸೈಕಾಲಜಿಕಲ್ ಅಸೋಸಿಯೇಷನ್, 2006ರ ಆಗಸ್ಟ್ 05ರಂದು ಸಂಪರ್ಕಿಸಲಾಯಿತು
- ↑ http://www.parapsych.org/glossary_e_k.html#g Archived 2011-01-11 ವೇಬ್ಯಾಕ್ ಮೆಷಿನ್ ನಲ್ಲಿ. ಪ್ಯಾರಸೈಕಾಲಜಿಕಲ್ ಅಸೋಸಿಯೇಷನ್, ಅಧಿಮನೋವಿಜ್ಞಾನದಲ್ಲಿ ಆಗಿಂದಾಗ್ಗೆ ಬಳಸುವ ಪ್ರಮುಖ ಪದಗಳ ಸಂಗ್ರಹ ಪದಕೋಶ, 2006ರ ಡಿಸೆಂಬರ್ 13ರಂದು ಮರುಸಂಪಾದಿಸಲಾಯಿತು.
- ↑ http://www.thefreedictionary.com/ghost 2006ರ ಡಿಸೆಂಬರ್ 13ರಂದು ಮರುಸಂಪಾದಿಸಲಾಯಿತು.
- ↑ ೧೧.೦೦ ೧೧.೦೧ ೧೧.೦೨ ೧೧.೦೩ ೧೧.೦೪ ೧೧.೦೫ ೧೧.೦೬ ೧೧.೦೭ ೧೧.೦೮ ೧೧.೦೯ ಎನ್‌ಸೈಕ್ಲೋಪೀಡಿಯಾ ಆಫ್ ಅಕಲ್ಟಿಸಂ & ಪ್ಯಾರಸೈಕಾಲಜಿ; ಸಂಪಾದನೆ: J. ಗೋರ್ಡಾನ್ ಮೆಲ್ಟನ್ ಗೇಲ್ ರಿಸರ್ಚ್, ISBN 0-8103-5487-X
- ↑
- ↑ NASA ಸೈಂಟಿಸ್ಟ್ಸ್ ಟು ಡಿಸ್ಕಸ್ ಸರ್ಚ್ ಫಾರ್ ಎಕ್ಸ್‌ಟ್ರಾಟೆರೆಸ್ಟ್ರಿಯಲ್ ಲೈಫ್, ಸ್ಪೇಸ್ ಡೈಲಿ, 2003ರ ಡಿಸೆಂಬರ್ 11
- ↑ ಹೌ SETI ವರ್ಕ್ಸ್, HowStuffWorks.com, 2007ರ ಜುಲೈ 4ರಂದು ಸಂಪರ್ಕಿಸಲಾಯಿತು
- ↑ ೧೫.೦ ೧೫.೧ ಓಡ್ಲಿಂಗ್-ಸ್ಮೀ, L. (2007). ದಿ ಲ್ಯಾಬ್ ದಟ್ ಆಸ್ಕ್‌ಡ್ ದಿ ರಾಂಗ್ ಕ್ವೆಶ್ಚನ್ಸ್ Archived 2007-06-30 ವೇಬ್ಯಾಕ್ ಮೆಷಿನ್ ನಲ್ಲಿ.. ನೇಚರ್, ಫೆಬ್ರುವರಿ 2007.
- ↑ ಲಾಜಿಕಲ್ ಇನ್ವೆಸ್ಟಿಗೇಷನ್ಸ್ ಹಸ್ಸೆರ್ಲ್, E. 1970 ಹ್ಯುಮಾನಿಟೀಸ್ ಪ್ರೆಸ್
- ↑ ಪ್ರಾಬ್ಲಂ ಆಫ್ ಇನ್‌ಫರೆನ್ಸ್ ಅಂಡ್ ಪ್ರೂಫ್ ಇನ್ ಪಾರ್ಟಿಸಿಪೆಂಟ್ ಅಬ್ಸರ್ವೇಶನ್ : ಪ್ರಾಬ್ಲಂ ಆಫ್ ಇನ್‌ಫರೆನ್ಸ್ ಅಂಡ್ ಪ್ರೂಫ್ ಇನ್ ಪಾರ್ಟಿಸಿಪೆಂಟ್-ಅಬ್ಸರ್ವೇಶನ್, ಮರುಮುದ್ರಣದ ಆವೃತ್ತಿ. ಬೆಕರ್, ಹೋವರ್ಡ್ S. 1993 ಇರ್ವಿಂಗ್ಟನ್ ಪಬ್ಲಿಷರ್ಸ್
- ↑ ಪ್ಯಾರನಾರ್ಮಲ್ ಗ್ರೂಪ್ಸ್ Archived 2007-01-02 ವೇಬ್ಯಾಕ್ ಮೆಷಿನ್ ನಲ್ಲಿ., GhostVillage.com, 2006ರ ಡಿಸೆಂಬರ್ 14ರಂದು ಸಂಪರ್ಕಿಸಲಾಯಿತು
- ↑ ಥ್ರೀ ಸ್ಕೆಪ್ಟಿಕ್ಸ್' ಡಿಬೇಟ್ ಟೂಲ್ಸ್ ಎಕ್ಸಾಮಿನ್‌ಡ್, Archived 2008-10-13 ವೇಬ್ಯಾಕ್ ಮೆಷಿನ್ ನಲ್ಲಿ. 2007ರ ಜುಲೈ 1ರಂದು ಸಂಪರ್ಕಿಸಲಾಯಿತು.
- ↑ JREF ಕಾಮೆಂಟರಿ, ಫೆಬ್ರುವರಿ 18, 2005, 2007ರ ಜುಲೈ 1ರಂದು ಸಂಪರ್ಕಿಸಲಾಯಿತು
- ↑ NOVA ಸಂಚಿಕೆಯಲ್ಲಿನ ಜೇಮ್ಸ್ ರ್ಯಾಂಡಿ ಜೊತೆಗಿನ ಸಂದರ್ಶನ, "ಸೀಕ್ರೆಟ್ಸ್ ಆಫ್ ಸೈಕಿಕ್ಸ್".
- ↑ ಮಿಲಿಯನ್ ಡಾಲರ್ ಚಾಲೆಂಜ್, 2007ರ ಜುಲೈ 1ರಂದು ಸಂಪರ್ಕಿಸಲಾಯಿತು
- ↑ ಹೆಸ್ ಡೇವಿಡ್ J. (1997) "ಸೈನ್ಸ್ ಸ್ಟಡೀಸ್: ಆನ್ ಅಡ್ವಾನ್ಸ್‌ಡ್ ಇಂಟ್ರಡಕ್ಷನ್" ನ್ಯೂಯಾರ್ಕ್ ಯೂನಿವರ್ಸಿಟಿ ಪ್ರೆಸ್, ISBN 0814735649
- ↑ R. ವೆಸ್ಟ್ರಮ್, ಟ್ರುಜಿ ಮಾರ್ಸೆಲೊ (1978) "ಅನಾಮಲೀಸ್: ಎ ಬಯಾಗ್ರಫಿಕ್ ಇಂಟ್ರಡಕ್ಷನ್ ವಿತ್ ಸಮ್ ಕಾಷನರಿ ರಿಮಾರ್ಕ್ಸ್", ಝೆಟೆಟಿಕ್ ಸ್ಕಾಲರ್ 2, ಪುಟ 69-90
- ↑ ವೆಸ್ಕಾಟ್, ರಾಬರ್ಟ್ W. (1973) "ಅನಾಮಲಿಸ್ಟಿಕ್ಸ್: ದಿ ಔಟ್‌ಲೈನ್ ಆಫ್ ಆನ್ ಎಮರ್ಜಿಂಗ್ ಫೀಲ್ಡ್ ಆಫ್ ಇನ್ವೆಸ್ಟಿಗೇಷನ್" ಸಂಶೋಧನಾ ವಿಭಾಗ, ನ್ಯೂಜರ್ಸಿ ಶಿಕ್ಷಣ ಇಲಾಖೆ
- ↑ ಗ್ಯಾಲಪ್ ಪೋಲ್ ಷೋಸ್ ದಟ್ ಅಮೆರಿಕನ್ಸ್' ಬಿಲೀಫ್ ಇನ್ ದಿ ಪ್ಯಾರನಾರ್ಮಲ್ ಪರ್ಸಿಸ್ಟ್ಸ್ Archived 2007-05-14 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಕೆಪ್ಟಿಕಲ್ ಇನ್‌ಕ್ವೈರರ್, 2006ರ ಅಕ್ಟೋಬರ್ 28ರಂದು ಸಂಪರ್ಕಿಸಲಾಯಿತು
- ↑ ೨೭.೦ ೨೭.೧ 'ಸ್ಪೂಕಿ ಸರ್ವೆ' ಗೆಟ್ಸ್ ಬಿಗ್ ರೆಸ್ಪಾನ್ಸ್, ABC ಸೈನ್ಸ್ ಆನ್‌ಲೈನ್, 17 ನವೆಂಬರ್ 2006
- ↑ ೨೮.೦ ೨೮.೧ ೨೮.೨ ಸ್ಮಾರ್ಟ್ ಪೀಪಲ್ ಸೀ ಘೋಸ್ಟ್ಸ್ , ಬ್ರಾಡ್ ಸ್ಟೀಗರ್, ಫೇಟ್ ನಿಯತಕಾಲಿಕ, ಏಪ್ರಿಲ್ 2006 ಸಂಚಿಕೆ, ಪುಟ 52-56; ಫರಾ ಮತ್ತು ಸ್ಟೀವರ್ಡ್ ಕಂಡುಕೊಂಡ ಅಸಾಮಾನ್ಯ ವಿಷಯವೆಂದರೆ, ಅತಿಮಾನುಷ ಸಂಗತಿಯಲ್ಲಿನ ನಂಬಿಕೆಯು ಶಿಕ್ಷಣ ಮಟ್ಟವು ಹೆಚ್ಚುತ್ತಾ ಹೋದಂತೆ ಹೆಚ್ಚಿದ್ದು, ಇದು ಇತರ ಅನೇಕ ಸಮೀಕ್ಷೆಗಳಿಗೆ ತದ್ವಿರುದ್ಧವಾಗಿತ್ತು. ಆದಾಗ್ಯೂ, ಅವರ ಅಧ್ಯಯನದ ಆ ಮಗ್ಗುಲು ಇಲ್ಲಿ ಬಳಸಲ್ಪಡುತ್ತಿಲ್ಲ.
- ↑ ಸ್ಕೆಪ್ಟಿಕಲ್ ಇನ್‌ಕ್ವೈರರ್, 30, 1; 37-40
- ↑ USA ಟುಡೆ, ಜನವರಿ 12, 1994
- ↑ "ಸೈನ್ಸ್ ಅಂಡ್ ಟೆಕ್ನಾಲಜಿ: ಪಬ್ಲಿಕ್ ಆಟಿಟ್ಯೂಡ್ಸ್ ಅಂಡ್ ಅಂಡರ್‌ಸ್ಟಾಂಡಿಂಗ್-ಪಬ್ಲಿಕ್ ನಾಲೆಜ್ ಎಬೌಟ್ S&T , 2004ರ ಸೈನ್ಸ್ ಅಂಡ್ ಎಂಜಿನಿಯರಿಂಗ್ ಇಂಡಿಕೇಟರ್ಸ್‌ನ 7ನೇ ಅಧ್ಯಾಯ, ನ್ಯಾಷನಲ್ ಸೈನ್ಸ್ ಬೋರ್ಡ್, ನ್ಯಾಷನಲ್ ಸೈನ್ಸ್ ಫೌಂಡೇಷನ್". Archived from the original on 2010-04-12. Retrieved 2021-07-21.
- ↑ "Randi $1,000,000 paranormal challenge". The Skeptic's Dictionary. Retrieved 2008-02-03.
- ↑ Larsen, Claus (September, 2003). "Get Rich Quick or Save the World". Skeptic Report. Retrieved 2007-03-07.
{{cite news}}
: Check date values in:|date=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಸಾಮಾನ್ಯ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
[[ವರ್ಗ:ಅಸಂಗತ ವಿದ್ಯಮಾನಗಳು]]
- Pages with unresolved properties
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: dates
- Pages using ISBN magic links
- Articles with hatnote templates targeting a nonexistent page
- Articles to be expanded from December 2009
- All articles to be expanded
- Articles lacking reliable references from October 2008
- All articles lacking reliable references
- Articles with Open Directory Project links
- ಅಧಿಸಾಮಾನ್ಯ
- ಅಧಿಮನಃಶ್ಯಾಸ್ತ್ರ
- ಮನೋವಿಜ್ಞಾನ