ವಿಷಯಕ್ಕೆ ಹೋಗು

ಅಧ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಧ್ಯಾಯ ಗದ್ಯ, ಕಾವ್ಯ, ಅಥವಾ ಕಾನೂನಿನ ಪುಸ್ತಕದಂತಹ ತುಲನಾತ್ಮಕ ಉದ್ದದ ಬರವಣಿಗೆ ಖಂಡದ ಮುಖ್ಯ ವಿಭಾಗಗಳಲ್ಲಿ ಒಂದು. ಅಧ್ಯಾಯ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿರಬಹುದು ಮತ್ತು ಆ ನಿರ್ದಿಷ್ಟ ಅಧ್ಯಾಯದ ಮುಖ್ಯ ವಿಷಯವಾಗಿರಬಹುದಾದ ಅನೇಕ ವಸ್ತುಗಳನ್ನು ಸೂಚಿಸಬಹುದು. ಪ್ರತಿ ಸಂದರ್ಭದಲ್ಲೂ, ಅಧ್ಯಾಯಗಳಿಗೆ ಸಂಖ್ಯೆ ಕೊಡಬಹುದು ಅಥವಾ ಅವುಗಳನ್ನು ಹೆಸರಿಸಬಹುದು ಅಥವಾ ಎರಡನ್ನೂ ಮಾಡಬಹುದು.

ಸುದೀರ್ಘ ಅಳತೆಯ ಅನೇಕ ಕಾದಂಬರಿಗಳು ಅಧ್ಯಾಯಗಳನ್ನು ಹೊಂದಿರುತ್ತವೆ. ಕಾಲ್ಪನಿಕವಲ್ಲದ ಪುಸ್ತಕಗಳು, ವಿಶೇಷವಾಗಿ ಉಲ್ಲೇಖಕ್ಕಾಗಿ ಬಳಸಲಾಗುವಂತಹವು, ಸಂಚರಣೆಯನ್ನು ಸುಲಭವಾಗಿಸಲು ಬಹುತೇಕ ಯಾವಾಗಲೂ ಅಧ್ಯಾಯಗಳನ್ನು ಹೊಂದಿರುತ್ತವೆ. ಈ ಕೃತಿಗಳಲ್ಲಿ, ಅಧ್ಯಾಯಗಳನ್ನು ಹಲವುವೇಳೆ ವಿಭಾಗಗಳಾಗಿ ಉಪವಿಂಗಡಿಸಲಾಗುತ್ತದೆ. ಅಧ್ಯಾಯ ರಚನೆಯು ಒಂದು ಅಧ್ಯಾಯವನ್ನು ಹೇಗೆ ಬರೆಯಲಾಗಿದೆ ಎಂಬುದನ್ನು ಸೂಚಿಸುತ್ತದೆ. ಆಕರ ಕೃತಿಗಳ ಅಧ್ಯಾಯಗಳನ್ನು ಬಹುತೇಕ ಯಾವಾಗಲೂ ಪರಿವಿಡಿಯಲ್ಲಿ ಪಟ್ಟಿಮಾಡಲಾಗುತ್ತದೆ. ಕಾದಂಬರಿಗಳು ಕೆಲವೊಮ್ಮೆ ಪರಿವಿಡಿಯನ್ನು ಬಳಸುತ್ತವೆ, ಆದರೆ ಯಾವಾಗಲೂ ಅಲ್ಲ. ಅಧ್ಯಾಯಗಳನ್ನು ಬಳಸಲಾದರೆ ಅವನ್ನು ಸಾಮಾನ್ಯವಾಗಿ ಅನುಕ್ರಮವಾದ ಸಂಖ್ಯೆಗಳಿಂದ ಗುರುತುಮಾಡಲಾಗುತ್ತದೆ; ಅವು ಶೀರ್ಷಿಕೆಗಳನ್ನೂ ಹೊಂದಿರಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ ಒಂದು ಸಾಹಿತ್ಯಿಕ ಉಕ್ತಿ ಅಥವಾ ಪೀಠಿಕಾ ರೂಪದ ಉಕ್ತಿಯನ್ನು. ಹಳೆಯ ಕಾದಂಬರಿಗಳಲ್ಲಿ ಪರಿವಿಡಿಯಲ್ಲಿ ಪ್ರತಿ ಅಧ್ಯಾಯದ ವಿಷಯದ ಸಾರಾಂಶ ಹೇಳುವುದು ಸಾಮಾನ್ಯ ಅಭ್ಯಾಸವಾಗಿತ್ತು.

ಪ್ರಾಚೀನ ನಾಗರಿಕತೆಗಳಲ್ಲಿ, ಪುಸ್ತಕಗಳು ಹಲವುವೇಳೆ ಜಂಬು ಕಾಗದ ಅಥವಾ ಚರ್ಮಕಾಗದ ಸುರುಳಿಗಳ ರೂಪದಲ್ಲಿರುತ್ತಿದ್ದವು, ಮತ್ತು ಆಧುನಿಕ ಪುಸ್ತಕದಲ್ಲಿನ ಸಾಮಾನ್ಯ ಅಧ್ಯಾಯದಲ್ಲಿರುವಷ್ಟೇ ಪಠ್ಯವನ್ನು ಹೊಂದಿರುತ್ತಿದ್ದವು. ಈ ಕಾಲದ ಕೃತಿಗಳ ಇತ್ತೀಚಿನ ಪ್ರತಿಗಳು ಮತ್ತು ಅನುವಾದಗಳ ಅಧ್ಯಾಯಗಳನ್ನು ಹಲವುವೇಳೆ "ಪುಸ್ತಕ ೧", "ಪುಸ್ತಕ ೨" ಇತ್ಯಾದಿ ಎಂದು ಪ್ರದರ್ಶಿಸುವುದಕ್ಕೆ ಇದೇ ಕಾರಣ.

"https://kn.wikipedia.org/w/index.php?title=ಅಧ್ಯಾಯ&oldid=1273074" ಇಂದ ಪಡೆಯಲ್ಪಟ್ಟಿದೆ