ಅನಂತ ಕಲ್ಲೋಳ
ಗೋಚರ
ಕನ್ನಡದ ಖ್ಯಾತ ಲೇಖಕರಾದ ಶ್ರೀ ಅನಂತ ಕಲ್ಲೋಳ ಇವರು ೧೯೩೭ ಮಾರ್ಚ ೨೪ರಂದು ತಮ್ಮ ತಾಯಿಯ ತವರೂರಾದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ: ರಮಾಬಾಯಿ; ತಂದೆ: ಅಣ್ಣಾಜಿ.
ಶಿಕ್ಷಣ
[ಬದಲಾಯಿಸಿ]ಅನಂತ ಕಲ್ಲೋಳರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಹಾಗು ಎಲ್.ಎಲ್.ಬಿ. ಪದವಿಯನ್ನು ಪಡೆದಿದ್ದಾರೆ.
ಉದ್ಯೋಗ
[ಬದಲಾಯಿಸಿ]ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ಅಸಿಸ್ಟಂಟ ಕಮಿಶನರ ಎಂದು ನಿವೃತ್ತಿ ಹೊಂದಿ, ಬೆಳಗಾವಿಯಲ್ಲಿ ನೆಲಸಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಹಾಸ್ಯ ಸಂಕಲನ
[ಬದಲಾಯಿಸಿ]- ಬ್ರಹ್ಮ ಹಾಕಿದ ಗಂಟು
- ರಾಜಾ ಪಾಯಿಂಟ್
- ವೈಭೋಗದ ವೈಖರಿ
- ತಾಮ್ರದ ಕಡಗ
- ಹಗರಣ
- ಕಂಡಲ್ಲಿ ಗುಂಡು
- ತಂಡು ಮುಂಡು
- ರೇಡಿಯೋದಿಂದ ವಿಡಿಯೋದವರೆಗೆ
- ಮೂಗಿನ ತುದಿ
- ಜೇನಿನ ಬಾಬು
ಚರಿತ್ರೆ
[ಬದಲಾಯಿಸಿ]- ಕನಕದಾಸರು
- ರಾಮದಾಸರು
- ಸ್ವಾತಂತ್ರ್ಯವಿರ ಸಾವರಕರ
- ಧೋಂಡೊ ಕೇಶವ ಕರ್ವೆ
- ಬೆಳಗಿನ ಬೆಳಗು
ಏಕಾಂಕ ನಾಟಕ
[ಬದಲಾಯಿಸಿ]- ಅದೇ ದಾರಿ
- ಕುಂಟಕಾಲಿಗೆ ವೈದ್ಯ
- ಕನ್ನಡ ಸಂಚು ೦೦೧
ಕಥಾಸಂಕಲನ
[ಬದಲಾಯಿಸಿ]- ಕ್ಯಾಕ್ಟಸ್
- ಮೋಹಮತ್ಸರ
- ಕರೆ
ವೈಚಾರಿಕ
[ಬದಲಾಯಿಸಿ]- ಚಿನ್ನ ನಿಯಂತ್ರಣ ಅಧಿನಿಯಮ
- ಮಹಾಜನ ವರದಿ
ಅನುವಾದ
[ಬದಲಾಯಿಸಿ]- ಒಡೆಯನುಲಿದ ಪಾಡು (ಭಗವದ್ಗೀತೆಯ ಕನ್ನಡಾನುವಾದ)
- ಗಾಂಧಿ ಮತ್ತು ಅಂಬೇಡಕರ (ಮೂಲ ಮರಾಠಿ)
ಸಂಪಾದನೆ
[ಬದಲಾಯಿಸಿ]- ಬೆಳಗಾವಿ ಕರ್ನಾಟಕ ಸಂಘ ಮತ್ತು ವಾಚನಾಲಯ ಸ್ಮರಣಸಂಚಿಕೆ
- ಪ್ರಾ. ಪ್ರಹ್ಲಾದಕುಮಾರ ಭಾಗೋಜಿ ಸನ್ಮಾನ ಸಮಾರಂಭದ ಸ್ಮರಣ ಸಂಚಿಕೆ
- ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದಶಮಾನೋತ್ಸವ ಸ್ಮರಣ ಸಂಚಿಕೆ: ಸದಭಿಮಾನ
ಪ್ರಶಸ್ತಿ, ಪುರಸ್ಕಾರ
[ಬದಲಾಯಿಸಿ]- ೧೯೯೩ರಲ್ಲಿ “ಹಗರಣ” ವಿನೋದ ಲೇಖನ ಸಂಕಲನಕ್ಕೆ ವರ್ಷದ ಶ್ರೇಷ್ಠ ವಿನೋದ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.
- “ತಂಡ ಮುಂಡು” ಸಂಕಲನಕ್ಕೆ ಗೊರೂರು ಸ್ಮಾರಕ ಪ್ರಶಸ್ತಿ ಬಂದಿದೆ.
- ೧೯೯೪ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ದೊರೆತಿದೆ.
- ೨೦೦೬ರಲ್ಲಿ “ಮಹಾಜನ ವರದಿ” ಪುಸ್ತಕಕ್ಕೆ ಶ್ರೀ ಎಸ್. ಎಮ್. ಕುಲಕರ್ಣಿ ಷಷ್ಟ್ಯಬ್ದಿ ಸ್ಮರಣೆಯ ಪುರಸ್ಕಾರ ದೊರೆತಿದೆ.
- ೧೯೯೭ರಲ್ಲಿ ನಡೆದ ಚಿಕ್ಕೋಡಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವ.
ವೈಯಕ್ತಿಕ
[ಬದಲಾಯಿಸಿ]ಶ್ರೀ ಅನಂತ ಕಲ್ಲೋಳ ಇವರು ಬೆಳಗಾವಿಯಲ್ಲಿ ಕನ್ನಡದ ಕಟ್ಟಾಳು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮಡದಿ ಶೋಭಾ. ಇವರಿಗೆ ಇಬ್ಬರು ಮಕ್ಕಳು. ಮಗ ನಾಗೇಶ ಇಂಜನಿಯರ ಆಗಿ, ಬೆಳಗಾವಿಯಲ್ಲಿಯೆ ಸ್ವಂತ ಉದ್ಯೋಗದಲ್ಲಿದ್ದಾರೆ. ಮಗಳು ನಿರ್ಮಲಾ ಮದುವೆ ಆಗಿ ಗೃಹಿಣಿಯಾಗಿದ್ದಾರೆ.