ಅನಿರುದ್ಧ ಮಹಾತೇರ
ಅನಿರುದ್ಧ ಮಹಾತೇರ | |
---|---|
ಜನನ | ಗಜ ರತ್ನ ತುಲಾಧರ ೧೫ ಡಿಸೆಂಬರ್ ೧೯೧೫ ಅಸನ್, ಕಠ್ಮಂಡು |
ಮರಣ | February 17, 2003 | (aged 87)
ಭಾಷೆ | ನೇಪಾಳ |
ರಾಷ್ಟ್ರೀಯತೆ | ನೇಪಾಳೀಯರು |
ಸಾಹಿತ್ಯ ಚಳುವಳಿ | ನೇಪಾಳದಲ್ಲಿ ಥೇರವಾದ ಪುನರುಜ್ಜೀವನ |
ಅನಿರುದ್ಧ ಮಹಾತೇರ (ಜನನ ಗಜ ರತ್ನ ತುಲಾಧರ ) (೧೫ ಡಿಸೆಂಬರ್ ೧೯೧೫ – ೧೭ ಫೆಬ್ರವರಿ ೨೦೦೩) ನೇಪಾಳದ ಬೌದ್ಧ ಸನ್ಯಾಸಿ ಮತ್ತು ೧೯೯೮ ರಿಂದ ೨೦೦೩ ರಲ್ಲಿ ಅವರ ಮರಣದವರೆಗೆ ನೇಪಾಳದ ಸಂಘ ನಾಯಕರಾಗಿದ್ದರು. ನೇಪಾಳದಲ್ಲಿ ಥೇರವಾಡ ಬೌದ್ಧಧರ್ಮದ ಪುನರುಜ್ಜೀವನ ಮತ್ತು ದಕ್ಷಿಣ ನೇಪಾಳದಲ್ಲಿ ಬುದ್ಧನ ಜನ್ಮಸ್ಥಳವಾದ ಲುಂಬಿನಿಯನ್ನು ಅಂತರರಾಷ್ಟ್ರೀಯ ತೀರ್ಥಯಾತ್ರೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. [೧]
ಆರಂಭಿಕ ಜೀವನ
[ಬದಲಾಯಿಸಿ]ಅನಿರುದ್ಧ (ಪರ್ಯಾಯ ಹೆಸರು: ಅನಿರುದ್ಧ ಮಹಾಸ್ತವೀರ್) ತಂದೆ ದಾಸ್ ರತ್ನ ಮತ್ತು ತಾಯಿ ದಿಬ್ಯಾ ಲಕ್ಷ್ಮಿ ತುಲಾಧರ್‌ಗೆ ಕಠ್ಮಂಡುವಿನ ಅಸನ್ ಧಲಾಸಿಕ್ವಾದಲ್ಲಿ ಜನಿಸಿದರು. ಅವರು ಗಜ ರತ್ನ ತುಲಾಧರ ಎಂದು ಹೆಸರಿಸಲ್ಪಟ್ಟರು ಮತ್ತು ಟಿಬೆಟ್‌ನ ಲಾಸಾದಲ್ಲಿ ವ್ಯಾಪಾರ ಮನೆಯನ್ನು ಹೊಂದಿರುವ ವ್ಯಾಪಾರಿ ಕುಟುಂಬಕ್ಕೆ ಸೇರಿದವರು. ಬೌದ್ಧ ಸನ್ಯಾಸಿಯಾಗುವ ಮೊದಲು ಅವರ ತಂದೆ ಟಿಬೆಟ್‌ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. ಅವರು ಧಮ್ಮಲೋಕ್ ಮಹಾಸ್ತವೀರ್ ಎಂಬ ಹೆಸರನ್ನು ಪಡೆದರು.
ಗಜ ರತ್ನ ಅವರಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವರ ತಂದೆ ದಾಸ್ ರತ್ನ ಅವರನ್ನು ೧೯೨೩ ರಲ್ಲಿ ಲಾಸಾಗೆ ಕರೆದುಕೊಂಡು ಹೋದರು. ಏಕೆಂದರೆ ಅವರ ತಾಯಿ ನಿಧನರಾದರು ಮತ್ತು ಅವರನ್ನು ಕಠ್ಮಂಡುವಿನಲ್ಲಿ ಬಿಡಲಾಗಲಿಲ್ಲ. [೨] ಟಿಬೆಟ್‌ನಿಂದ ಹಿಂದಿರುಗಿದ ಅವರು ವಾರಣಾಸಿಯ ಸೆಂಟ್ರಲ್ ಹಿಂದೂ ಬೋರ್ಡಿಂಗ್ ಸ್ಕೂಲ್‌ಗೆ ದಾಖಲಾದರು. ೧೯೨೫ ರಲ್ಲಿ ಗಜ ರತ್ನ ಮತ್ತೆ ಕಠ್ಮಂಡುವಿಗೆ ಬಂದರು. [೩]
ಶ್ರೀಲಂಕಾ ಮತ್ತು ಮ್ಯಾನ್ಮಾರ್‌ಗೆ
[ಬದಲಾಯಿಸಿ]ಗಜ ರತ್ನ ತನ್ನ ತಂದೆಯೊಂದಿಗೆ ಮತ್ತೊಂದು ವ್ಯಾಪಾರ ಪ್ರವಾಸದಲ್ಲಿ ಕೋಲ್ಕತ್ತಾಗೆ ಹೋದರು. ಅಲ್ಲಿ ಅವರು ಶ್ರೀಲಂಕಾದಲ್ಲಿ ಬೌದ್ಧಧರ್ಮವನ್ನು ಅಧ್ಯಯನ ಮಾಡಲು ಬಯಸುತ್ತಾರೆ ಎಂದು ನಿರ್ಧರಿಸಿದರು ಮತ್ತು ೧೯೨೯ ರಲ್ಲಿ ಅವರು ಕೊಲಂಬೊಗೆ ಪ್ರಯಾಣ ಬೆಳೆಸಿದರು. ಅವರು ವಿದ್ಯಾಲಂಕಾರ ಪಿರಿವೇನಾ ಬೌದ್ಧ ಕಾಲೇಜಿಗೆ ಸೇರಿಕೊಂಡರು ಮತ್ತು ಅನನುಭವಿ ಸನ್ಯಾಸಿಯಾದರು ಹಾಗೂ ಅವರಿಗೆ ಅನಿರುದ್ಧ ಎಂಬ ಹೆಸರನ್ನು ನೀಡಲಾಯಿತು. [೪] ಶ್ರೀಲಂಕಾದಲ್ಲಿ ಐದು ವರ್ಷಗಳನ್ನು ಕಳೆದ ನಂತರ ಹಾಗೂ ಸಿಂಹಳ, ಪಾಲಿ, ಸಂಸ್ಕೃತ ಮತ್ತು ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಪಡೆದ ನಂತರ ಅವರು ಭಾರತದ ಕುಸಿನಗರಕ್ಕೆ ಹೋದರು.
ಅನಿರುದ್ಧರು ಬೌದ್ಧಧರ್ಮದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಬರ್ಮಾಕ್ಕೆ (ಈಗ ಮ್ಯಾನ್ಮಾರ್ ಎಂದು ಕರೆಯುತ್ತಾರೆ) ಪ್ರಯಾಣಿಸಿದರು. ಒಂದು ವರ್ಷದ ನಂತರ ೧೯೩೭ ರಲ್ಲಿ ಅವರು ಮೌಲ್ಮೇನ್‌ನಲ್ಲಿ ಉನ್ನತ ದೀಕ್ಷೆಯನ್ನು ಪಡೆದರು. ಅವರು ಮೌಲ್ಮೇನ್‌ನಲ್ಲಿ ೧೦ ವರ್ಷಗಳ ಕಾಲ ಬರ್ಮಾ ಮತ್ತು ಬೌದ್ಧ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಅವರ ಅಧ್ಯಯನದ ಮಧ್ಯೆ ಎರಡನೇ ಮಹಾಯುದ್ಧ ಬರ್ಮಾಕ್ಕೆ ಬಂದಿತು. ಹೀಗಾಗಿ ಅವರು ಹೋರಾಟದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಲೇ ಇರಬೇಕಾಯಿತು. [೫]
ನೇಪಾಳಕ್ಕೆ ಹಿಂತಿರುಗಿ
[ಬದಲಾಯಿಸಿ]ಅನಿರುದ್ಧ ಅವರು ೧೯೪೬ ರಲ್ಲಿ ನೇಪಾಳಕ್ಕೆ ಹಿಂದಿರುಗಿದರು. ನೇಪಾಳದ ಭಾಸಾದ ಬೌದ್ಧ ಪತ್ರಿಕೆಯಾದ ಧರ್ಮೋದಯಕ್ಕೆ ಮೊದಲ ಸಂಪಾದಕರಾದರು. ಇದು ೧೯೪೭ ರಲ್ಲಿ ಕಾಲಿಂಪಾಂಗ್‌ನಿಂದ ಪ್ರಕಟಣೆಯನ್ನು ಪ್ರಾರಂಭಿಸಿತು.
ನಂತರ ಅವರು ಲುಂಬಿನಿಗೆ ತೆರಳಿದರು. ಅದನ್ನು ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡರು. ಆಗ ಲುಂಬಿನಿಯು ಕಾಡಿನಿಂದ ಸುತ್ತುವರಿದ ಖಾಲಿ ಜಾಗವಾಗಿತ್ತು. ಅಶೋಕನ ಸ್ತಂಭದಿಂದ ಗುರುತಿಸಲಾದ ಈ ಸ್ಥಳವನ್ನು [೬] ೧೮೯೬ ರಲ್ಲಿ ಮರುಶೋಧಿಸಲಾಗಿದೆ. ಅನಿರುದ್ಧನು ಮಠ ಮತ್ತು ವಿಶ್ರಾಂತಿ ಗೃಹವನ್ನು ನಿರ್ಮಿಸಿದನು ಮತ್ತು ಯಾತ್ರಾರ್ಥಿಗಳಿಗೆ ಸಹಾಯವನ್ನು ನೀಡಿದನು. [೭] ೧೯೬೭ ರಲ್ಲಿ ಅನಿರುದ್ಧ ಅವರು ಲುಂಬಿನಿಗೆ ತಮ್ಮ ಭೇಟಿಯ ಸಮಯದಲ್ಲಿ ಆಗಿನ ಯುಎನ್ ಸೆಕ್ರೆಟರಿ-ಜನರಲ್ ಯು ಥಾಂತ್ ಅವರನ್ನು ಸ್ವೀಕರಿಸಿದರು. ಇದು ಲುಂಬಿನಿ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಅನ್ನು ರೂಪಿಸಲು ಕಾರಣವಾಯಿತು. [೮]
ಅನಿರುದ್ಧರು ೪೬ ವರ್ಷಗಳ ಕಾಲ ಲುಂಬಿನಿಯಲ್ಲಿ ಕಳೆದರು ಮತ್ತು ೧೯೯೧ ರಲ್ಲಿ ಕಠ್ಮಂಡುವಿಗೆ ಹಿಂತಿರುಗಿ ಸ್ವಯಂಭುವಿನಲ್ಲಿ ಆನಂದ ಕುಟಿ ವಿಹಾರದ ಮಠಾಧೀಶರಾದರು. [೯] ಅವರು ಬೌದ್ಧರ ಪಠ್ಯಗಳನ್ನು ಸಿಂಹಳ ಮತ್ತು ಬರ್ಮೀಸ್‌ನಿಂದ ನೇಪಾಳ ಭಾಸಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ೨೧ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Ven. Bhikkhu Aniruddha: Patriarch of Nepal". Lumbini Nepalese Buddha Dharma Society (UK). 2008. Archived from the original on 27 September 2013. Retrieved 9 May 2012.
- ↑ Mahasthavir, Bhikkhu Dharmaloka (1999). A Pilgrimage in China. Kathmandu: Bhikkhu Aniruddha Mahasthavir. Page 127.
- ↑ Mahasthavir, Bhikkhu Dharmaloka (1999). A Pilgrimage in China. Kathmandu: Bhikkhu Aniruddha Mahasthavir. Pages 1-2.
- ↑ Mahasthavir, Bhikkhu Dharmaloka (1999). A Pilgrimage in China. Kathmandu: Bhikkhu Aniruddha Mahasthavir. Pages 5-9.
- ↑ "Ven. Bhikkhu Aniruddha: Patriarch of Nepal". Lumbini Nepalese Buddha Dharma Society (UK). 2008. Archived from the original on 27 September 2013. Retrieved 9 May 2012."Ven. Bhikkhu Aniruddha: Patriarch of Nepal". Lumbini Nepalese Buddha Dharma Society (UK). 2008. Archived from the original on 27 September 2013. Retrieved 9 May 2012.
- ↑ "Major Events Happened in Lumbini". Lumbini Development Trust. 2011. Archived from the original on 20 ಜೂನ್ 2013. Retrieved 10 May 2012.
- ↑ National Spiritual Assembly of the Baha'is of the United States (1968). World order, Volumes 3-4. National Spiritual Assembly of the Baha'is of the United States. Page 23.
- ↑ "Master Plan". Lumbini Development Trust. 2011. Archived from the original on 13 ಮೇ 2012. Retrieved 10 May 2012.
- ↑ "Ven. Bhikkhu Aniruddha: Patriarch of Nepal". Lumbini Nepalese Buddha Dharma Society (UK). 2008. Archived from the original on 27 September 2013. Retrieved 9 May 2012."Ven. Bhikkhu Aniruddha: Patriarch of Nepal". Lumbini Nepalese Buddha Dharma Society (UK). 2008. Archived from the original on 27 September 2013. Retrieved 9 May 2012.