ಅಪಮಾನ ಪ್ರಜ್ಞೆಯ ಸಮಾಜ
ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ "ಅವಮಾನ ಪ್ರಜ್ಞೆಯ ಸಮಾಜ" ಅಥವಾ "ಅವಮಾನ ಪ್ರಜ್ಞೆಯ ಸಂಸ್ಕೃತಿ" (shame culture) ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ನಾಚಿಕೆ (ಅಪಕೀರ್ತಿ) ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ.[೧] ಈ ಪರಿಕಲ್ಪನೆಯು ಅಪರಾಧ ಪ್ರಜ್ಞೆಯ ಸಮಾಜ (guilt culture) ಗೆ ಪರ್ಯಾಯವಗಿದೆ. ಆತಂಕ ಪ್ರಜ್ಞೆಯ ಸಮಾಜ (fear culture) ವು ಸಹ ಇವುಗಳ ಮತ್ತೂಂದು ಪರ್ಯಾಯ ಸಮಾಜದ ಪರಿಕಲ್ಪನೆ ಆಗಿದೆ.
Eastern society
[ಬದಲಾಯಿಸಿ]ಚೈನಾ
[ಬದಲಾಯಿಸಿ]ಕನ್‌ಫ್ಯೂಶಿಯಸ್‌ನ ತತ್ವಬೋಧನೆಯಿಂದಾಗಿ, ಚೀನಾದಲ್ಲಿ, ಅವಮಾನದ ಪರಿಕಲ್ಪನೆಯನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ .[೨].
ಜಪಾನ್
[ಬದಲಾಯಿಸಿ]ರುಥ್ ಬೆನೆಡಿಕ್ಟ್ ಅವರು ಬರೆದ "" The Chrysanthemum and the Sword"" ಪುಸ್ತಕದಲ್ಲಿ ವಿವರಿಸಿದಂತೆ ಜಪಾನ್ ೨ನೆಯ ಮಹಾಯುದ್ಧದ ಸಮಯದಲ್ಲಿ ಅವಮಾನ ಪ್ರಜ್ಞೆ ಯನ್ನು ಸಮಾಜ ನಿಯಂತ್ರಣಕ್ಕೆ ಬಳಸಿತ್ತು. [೩]
ಭಾರತ
[ಬದಲಾಯಿಸಿ]ಭಾರತದಲ್ಲಿ ಅಪರಾಧ ಮತ್ತು ಅಪಮಾನ ಪ್ರಜ್ಞೆಯ ಸಂಸ್ಕೃತಿ ಎರಡೂ ಚಾಲ್ತಿಯಲ್ಲಿದೆ. ಮಹಾತ್ಮ ಗಾಂಧಿಯವರ ತತ್ವ ಮತ್ತು ಇದರಿಂದ ಪ್ರಭಾವಿತರಾದವರು ಇದಕ್ಕೆ ಉದಾಹರಣೆ ಯಾಗಿದ್ದಾರೆ.[೪]
ಪಾಶ್ಚಾತ್ಯ ಸಮಾಜ
[ಬದಲಾಯಿಸಿ]ಸಮಕಾಲೀನ ಪಾಶ್ಚಿಮಾತ್ಯ ಸಮಾಜವು ಅಪಮಾನ ಪ್ರಜ್ಞೆಯನ್ನು ಸಮಾಜ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಅಲ್ಲದೆ ಅಪರಾಧ ಪ್ರಜ್ಞೆಯನ್ನು ಸಹ ಪ್ರಮುಖವಾಗಿ ಉಪಯೋಗಿಸಲಾಗುತ್ತಿದೆ. ಇವೆರೆಡು ಫಲಿಸದ್ದಿದಾಗ ದಂಡಾರ್ಹ ನ್ಯಾಯಾಂಗ ವ್ಯವಸ್ಥೆಯು ಕಾರ್ಯಪ್ರವೃತ್ತವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Ezra F. Vogel, Foreword, The Chrysanthemum and the Sword (Boston: Houghton Mifflin 1989)
- ↑ Confucius, The Analects
- ↑ Kent, Pauline (June 1999). "Japanese Perceptions of The Chrysanthemum and the Sword". Dialectical Anthropology. 24 (2): 181–192. doi:10.1023/a:1007082930663.
{{cite journal}}
:|access-date=
requires|url=
(help) - ↑ "Shame Societies & Guilt Societies - Blood of the Beloved" (PDF). Archived from the original (PDF) on 2016-03-04. Retrieved 2015-06-19.