ಅಭಂಗ
ಅಭಂಗ ಹಿಂದೂ ದೇವತೆ ವಿಠ್ಠಲನ ಪ್ರಶಂಸೆಯಲ್ಲಿ ಹಾಡಲಾದ ಭಕ್ತಿಪ್ರಧಾನ ಕಾವ್ಯದ ಒಂದು ರೂಪ. "ಅಭಂಗ" ಶಬ್ದದ ಅರ್ಥ ಭಂಗವಿಲ್ಲದ, ಅಂದರೆ ದೋಷರಹಿತ, ನಿರಂತರ ಪ್ರಕ್ರಿಯೆ, ಈ ಸಂದರ್ಭದಲ್ಲಿ ಒಂದು ಕವಿತೆಯನ್ನು ಸೂಚಿಸುತ್ತದೆ. ತದ್ವಿರುದ್ಧವಾಗಿ, ಭಜನೆಗಳೆಂದು ಪರಿಚಿತವಿರುವ ಭಕ್ತಿಗೀತೆಗಳು ಆಂತರಿಕ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತವೆ. ಅಭಂಗಗಳು ಸಮುದಾಯಕೇಂದ್ರೀಯ ಅನುಭವದ ಹೆಚ್ಚು ಉತ್ಸಾಹಿ ಅಭಿವ್ಯಕ್ತಿಗಳಾಗಿವೆ. ಅಭಂಗವನ್ನು ಓವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಅಭಂಗಗಳನ್ನು ಭಕ್ತರು ಪಂಢರಪುರದ ದೇವಸ್ಥಾನಗಳಿಗೆ ತೀರ್ಥಯಾತ್ರೆ ಹೋಗುವ ಅವಧಿಯಲ್ಲಿ ಹಾಡುತ್ತಾರೆ.[೧]
ಮರಾಠಿ ಭಜನೆಗಳು ನಮನ್‍ನಿಂದ (ದೇವರ ಆವಾಹನೆ) ಶುರುವಾಗುತ್ತವೆ, ಇದನ್ನು ರೂಪಾಂಚಾ ಅಭಂಗ್ ಅನುಸರಿಸುತ್ತದೆ (ಮಾನವ ರೂಪದಲ್ಲಿ ವ್ಯಕ್ತೀಕರಿಸುವ ಮೂಲಕ ದೇವರ ದೈಹಿಕ ಸೌಂದರ್ಯವನ್ನು ಚಿತ್ರಿಸುವುದು) ಮತ್ತು ಕೊನೆಯಲ್ಲಿ ಆಧ್ಯಾತ್ಮಿಕ ಹಾಗೂ ನೈತಿಕ ಸಂದೇಶಗಳನ್ನು ಕೊಡುವ ಭಜನೆಗಳನ್ನು ಹಾಡಲಾಗುತ್ತದೆ. ಭೀಮಸೇನ ಜೋಷಿ, ಸುರೇಶ್ ವಾಡ್ಕರ್, ಅರುಣಾ ಶ್ರೀರಾಮ್, ಜಯತೀರ್ಥ ಮೇವುಂಡಿ ಮತ್ತು ಜಿತೇಂದ್ರ ಅಭಿಶೇಕಿ ಅಭಂಗಗಳನ್ನು ಹಾಡಿದ ಕೆಲವು ಪ್ರಸಿದ್ಧ ಸಂಗೀತಗಾರರು. ಇದು ಶಾಸ್ತ್ರೀಯ ಮತ್ತು ಶಾಸ್ತ್ರೀಯೇತರ ಸಂಗೀತಗಾರರಿಂದ ಪ್ರದರ್ಶಿಸಲ್ಪಟ್ಟ ಸಂಗೀತದ ಒಂದು ರೂಪವಾಗಿದೆ. ದಕ್ಷಿಣ ಭಾರತದಾದ್ಯಂತ ಭಜನ ಕಛೇರಿಗಳಲ್ಲಿ ಇದು ಅವಿಭಾಜ್ಯವಾಗಿದೆ.
ತುಕಾರಾಮ್ ಪುಣೆಯ ಹತ್ತಿರದ ದೇಹು ಪಟ್ಟಣದಲ್ಲಿ ವಾಸಿಸುತ್ತಿದ್ದ ಒಬ್ಬ ಹದಿನೇಳನೆಯ ಶತಮಾನದ ಕವಿಯಾಗಿದ್ದನು. ಇವನು ಒಬ್ಬ ಜನಪ್ರಿಯ ಕವಿಯಾಗಿದ್ದನು ಮತ್ತು ತನ್ನ ಕಾಲದ ವಾರಕರಿ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ವಾರಕರಿ ಚಳುವಳಿಯು ಧಾರ್ಮಿಕ ಕ್ರಿಯಾವಿಧಿಗಳು ಮತ್ತು ರಹಸ್ಯಮಯ ಧರ್ಮಾಚರಣೆಗಳ ಕುರುಡು ವಿಧೇಯತೆಯ ಬದಲು, ದೇವರ ಕಡೆ ಭಕ್ತಿ ಹಾಗೂ ಪ್ರೀತಿ ಮೇಲೆ ಒತ್ತು ಹಾಕಲು ಪ್ರಯತ್ನಿಸಿತು. ಸಂತ ತುಕಾರಾಮನು ೫೦೦೦ಕ್ಕೂ ಹೆಚ್ಚು ಅಭಂಗಗಳನ್ನು ಬರೆದನು ಎಂದು ಹೇಳಲಾಗಿದೆ. ಇವುಗಳಲ್ಲಿ ಅನೇಕ ಅಭಂಗಗಳು ವಿಠ್ಠಲನಿಗೆ ಅರ್ಪಿತವಾಗಿದ್ದವು, ಆದರೆ ಹೆಚ್ಚಾಗಿ ತನ್ನ ಕಾಲದ ಸಾಮಾಜಿಕ ಅನ್ಯಾಯಗಳನ್ನು ಟೀಕಿಸುತ್ತಿದ್ದವು. ಅವು ಪ್ರಬಲ ನೀತಿಬೋಧೆಗಳಾಗಿದ್ದವು, ಮತ್ತು ಇಂದಿಗೂ ಉಪಯುಕ್ತವಾಗಿವೆ.
ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು ನಾಮಸಂಕೀರ್ತನೆಯ ಈ ಸಂಪ್ರದಾಯವನ್ನು ತಂಜಾವೂರಿಗೆ ತೆಗೆದುಕೊಂಡು ಹೋಗುವಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದರು. ಇದು ದಕ್ಷಿಣ ಭಾರತದಲ್ಲಿ ಅಭಂಗಗಳನ್ನು ಶಾಸ್ತ್ರೀಯ ರೂಪದಲ್ಲಿ ಹಾಡುವುದಕ್ಕೆ ಕಾರಣವಾಯಿತು ಮತ್ತು ಇವನ್ನು ದಕ್ಷಿಣ ಭಾರತದ ಕರ್ನಾಟಕ ಹಾಗೂ ಭಜನ ಕಛೇರಿಗಳ ಅವಿಭಾಜ್ಯ ಭಾಗವಾಗಿ ಮಾಡಿತು.
ಕೆಲ ಪ್ರಖ್ಯಾತ ಅಭಂಗಗಳು
ಹಾಡು | ಆಲ್ಬಮ್ / ಸಿನಿಮ ಹೆಸರು | ಗಾಯಕರು | ಸಾಹಿತ್ಯ | ಸಂಗೀತ ಸಂಯೋಜಕರು |
---|---|---|---|---|
ಜ್ಞಾನಿಯಾಂಚ ರಾಜ ಗುರು | ಅಭಂಗವಾಣಿ -೧ | ಭೀಮಸೇನ ಜೋಷಿ | ಸಂತ ತುಕಾರಾಂ | ಭೀಮಸೇನ ಜೋಷಿ |
ರಾಜಸ ಸುಕುಮಾರ್ ಮದನಾಚ ಪುತಳ | ಅಭಂಗ -೧ | ಭೀಮಸೇನ ಜೋಷಿ | ಸಂತ ತುಕಾರಾಂ | ಭೀಮಸೇನ ಜೋಷಿ |
ಧ್ಯಾನ್ ಕರು ಝಾತ | ಸಂತಾಂಚೆ ಆಭಂಗ್ | ಜಯತೀರ್ಥ ಮೇವುಂಡಿ | ಸಮರ್ಥ ರಾಮದಾಸರು | ಮಹೇಶ್ ಮಹದೇವ್ |
ಉಲ್ಲೇಖಗಳು
[ಬದಲಾಯಿಸಿ]- ↑ "Articles – Devotional Music of Maharashtra – by Chaitanya Kunte". swarganga.org. 22 May 2015. Archived from the original on 24 ಡಿಸೆಂಬರ್ 2018. Retrieved 2 ಸೆಪ್ಟೆಂಬರ್ 2017.