ಅಭ್ರಕಚೂರ್ಣ
Appearance
![](http://upload.wikimedia.org/wikipedia/commons/thumb/9/91/Talc-177589.jpg/220px-Talc-177589.jpg)
ಅಭ್ರಕಚೂರ್ಣವು ಸಂಯುಕ್ತಜಲದಿಂದ ಕೂಡಿದ ಮೆಗ್ನೀಷಿಯಮ್ ಸಿಲಿಕೇಟ್ (ತಾಲಕ; ಟ್ಯಾಲ್ಕ್). Mg3Si4O10 ಇದರ ರಾಸಾಯನಿಕ ಸೂತ್ರ. ಇದರಲ್ಲಿ ಸ್ವಲ್ಪಮಟ್ಟಿಗೆ ಕ್ಯಾಲ್ಸಿಯಂ ಆಕ್ಸೈಡ್ CaO, ಅಲ್ಯೂಮಿನಿಯಂ ಆಕ್ಸೈಡ್ Al2O3 ಮತ್ತು ಇತರ ಆಕ್ಸೈಡುಗಳೂ ಇರುತ್ತವೆ. ಬಹುಶಃ ಇವು ಕಶ್ಮಲಗಳು. ರಚನೆಯಲ್ಲಿ ಅಭ್ರಕ (ಮೈಕ) ಜಾತಿಗೆ ಸಂಬಂಧಿಸಿದೆ. ಮೆಗ್ನೀಷಿಯಂ ಸಿಲಿಕೇಟ್ ಪದರಗಳಿಂದ ಕೂಡಿರುವ ಖನಿಜ; ಬಹಳ ಮೃದು.
ಉಪಯೋಗಗಳು[ಬದಲಾಯಿಸಿ]
ಮುಖಕ್ಕೆ ಸೌಂದರ್ಯವರ್ಧಕವಾಗಿ ಉಪಯೋಗಿಸುವ ಅಂಗರಾಗಗಳಿಗೆ ಆಧಾರ.[೧] ಪಿಂಗಾಣಿ ವಸ್ತುಗಳು, ಬಣ್ಣಗಳು, ಕ್ರಿಮಿನಾಶಕಗಳು, ಸಾಮಾನು ತಯಾರಿಕೆಗಳಲ್ಲೂ ಪ್ರಯೋಗಶಾಲೆಯಲ್ಲೂ ಇದರ ಬಳಕೆ ಇದೆ.
ಉಲ್ಲೇಖಗಳು[ಬದಲಾಯಿಸಿ]
![](http://upload.wikimedia.org/wikipedia/commons/thumb/4/4c/Wikisource-logo.svg/50px-Wikisource-logo.svg.png)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: