ವಿಷಯಕ್ಕೆ ಹೋಗು

ಅಮರ್‍ಯಾಂತೇಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರ್‍ಯಾಂತೇಸೀ
ಅಮರ್‍ಯಾಂತಸ್ ರೆಟ್ರೋಫ಼್ಲೆಕ್ಸಸ್
Scientific classification e
ಸಾಮ್ರಾಜ್ಯ: ಪ್ಲಾಂಟೇ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡಿಕಾಟ್‌ಗಳು
ಗಣ: ಕ್ಯಾರ್ಯೋಫಿಲಾಲೀಸ್
ಕುಟುಂಬ: ಅಮರ್‍ಯಾಂತೇಸೀ
Juss.
Type genus
ಅಮರ್‍ಯಾಂತಸ್
ಉಪಕುಟುಂಬಗಳು
  • ಅಮರ್‍ಯಾಂತಾಯ್ಡೀ
  • ಬೀಟಾಯ್ಡೀ
  • ಕ್ಯಾಂಫ಼ರಾಸ್ಮಾಯ್ಡೀ
  • ಚೀನೋಪೋಡಿಯಾಯ್ಡೀ
  • ಕೋರಿಸ್ಪರ್ಮಾಯ್ಡೀ
  • ಗಾಂಫ಼್ರೆನಾಯ್ಡೀ
  • ಪಾಲಿಕ್ನೆಮಾಯ್ಡೀ
  • ಸ್ಯಾಲಿಕಾರ್ನಿಯಾಯ್ಡೀ
  • ಸ್ಯಾಲ್ಸೋಲಾಯ್ಡೀ
  • ಸುಯೇಡಾಯ್ಡೀ
Synonyms[]

ಚೀನೊಪೋಡಿಯೇಸೀ Vent.

ಅಮರ್‍ಯಾಂತೇಸೀ ಎನ್ನುವುದು ಹೂಬಿಡುವ ಸಸ್ಯಗಳ ಒಂದು ಕುಟುಂಬ. ಹಿಂದಿದ್ದ ಚೀನೊಪೋಡಿಯೇಸೀ ಅಂದರೆ ಚಕ್ಕೋತಸೊಪ್ಪಿನ ಗಿಡದ ಕುಟುಂಬವನ್ನು ಇದು ಒಳಗೊಂಡಿದೆ.[][] ಸೆಂಟ್ರಾಸ್ಪರ್ಮೆ ಗಣಕ್ಕೆ ಸೇರಿದೆ. ಇದರಲ್ಲಿ 165 ಜಾತಿಗಳು ಮತ್ತು 2,040 ಪ್ರಭೇದಗಳು ಇವೆ.[][]

ಸಸ್ಯಗಳ ಲಕ್ಷಣಗಳು

[ಬದಲಾಯಿಸಿ]

ಈ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳ (ಜೀರೋಫೈಟ್ಸ್) ಲಕ್ಷಣಗಳನ್ನು ಕಾಣುತ್ತೇವೆ. ಏಕೆಂದರೆ ಇವು ಲವಣಮಿಶ್ರಿತ ನೀರಿರುವ ಸಮುದ್ರ ತೀರಗಳಲ್ಲಿ ಬೆಳೆಯುತ್ತವೆ. ಸಮುದ್ರ ತೀರದ ಮಣ್ಣಿನಲ್ಲಿ ಲವಣದ ಅಂಶ ಅಧಿಕವಾಗಿರುವುದರಿಂದ ಸಸ್ಯಗಳು ಸಾಕಷ್ಟು ನೀರನ್ನು ಹೀರಿಕೊಳ್ಳಲಾರವು. ಹೀಗಾಗಿ ಈ ಪರಿಸ್ಥಿತಿಯಲ್ಲಿ ಬೆಳೆಯುವ ಸಸ್ಯಗಳಲ್ಲಿ ಬಾಷ್ಪವಿಸರ್ಜನಾ ಕ್ರಿಯೆ (ಟ್ರಾನ್ಸ್‌ಪಿರೇಷನ್) ಅನಿವಾರ್ಯವಾಗಿ ಅತ್ಯಲ್ಪ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಇವುಗಳ ದೇಹದಲ್ಲಿ ಕೆಲವು ವಿಶಿಷ್ಟ ಪರಿವರ್ತನೆಗಳನ್ನು ಕಾಣಬಹುದು. ಈ ಸಸ್ಯಗಳು ಸಾಮಾನ್ಯವಾಗಿ ಪುಟ್ಟಗಿಡಗಳ ರೂಪದಲ್ಲೂ, ಪೊದೆಗಳ ರೂಪದಲ್ಲೂ, ಚಿಕ್ಕ ಮರಗಳ ರೂಪದಲ್ಲೂ ಬೆಳೆಯುತ್ತವೆ. ಚೀನೊಪೋಡಿಯಮ್, ಸ್ಯಾಲಿಕಾರ್ನಿಯ, ಸುಯೇಡ, ಹ್ಯಾಲೊಕ್ಸೈಲಾನ್, ಬೀಟ, ಸ್ಪಿನೇಶಿಯ ಮುಂತಾದ ಜಾತಿಯ ಸಸ್ಯಗಳು ಈ ಕುಟುಂಬಕ್ಕೆ ಸೇರಿವೆ. ಸ್ಪಿನೇಶಿಯ ಓಲರೇಸಿಯ ಸಸ್ಯವನ್ನು ಸಾಮಾನ್ಯವಾಗಿ ಚಕ್ಕೋತಸೊಪ್ಪಿನ ಗಿಡ ಎಂದು ಕರೆಯುತ್ತಾರೆ. ಕೀನೊಪೋಡಿಯೇಸೀ ಕುಟುಂಬದ ಸಸ್ಯಗಳ ಬೇರುಗಳು ಭೂಮಿಯಲ್ಲಿ ಬಹು ಆಳಕ್ಕೆ ಹೋಗಿ ಬೆಳೆಯುತ್ತವೆ. ಎಲೆಗಳು ಚಿಕ್ಕವಾಗಿದ್ದು ವಿವಿಧ ರೂಪಗಳಲ್ಲಿ ಇರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ದಪ್ಪನಾಗಿ ರಸಭರಿತವಾಗಿ ಕಾಣುತ್ತವೆ. ಎಲೆಗಳ ಮೇಲೆ ಕೂದಲುಗಳು ಬೆಳೆದಿರುವುದೂ ಉಂಟು. ಕೆಲವು ಸಸ್ಯಗಳಲ್ಲಿ ಎಲೆಗಳೇ ಇಲ್ಲದಿರಬಹುದು. ಕಾಂಡ ಪಾಪಾಸ್‌ಕಳ್ಳಿಯಲ್ಲಿರುವಂತೆ ದಪ್ಪವಾಗಿರಬಹುದು. ಕೆಲವು ಪ್ರಭೇದಗಳಲ್ಲಿ ಕಾಂಡ ಖಂಡಖಂಡಗಳಾಗಿ ವಿಭಾಗವಾಗಿದೆ. ಕಾಂಡವನ್ನು ಕತ್ತರಿಸಿನೋಡಿದಾಗ ಜೀರೊಫೈಟ್ ಸಸ್ಯಗಳ ಗುಣಗಳನ್ನೇ ನೋಡಬಹುದು. ಹೂಗೊಂಚಲುಗಳು ಪ್ರಥಮವಾಗಿ ಅಂತ್ಯಾರಂಭಿ ಮಾದರಿಯಲ್ಲಿ ಜೋಡಣೆಯಾಗಿದ್ದು ಅದರ ಕವಲುಗಳಲ್ಲಿ ಮಧ್ಯಾರಂಭಿ ಜೋಡಣೆ (cymose) ಇರುತ್ತದೆ. ಹೂಗಳು ಬಹಳ ಚಿಕ್ಕಗಾತ್ರದವು; ಏಕಲಿಂಗ ಅಥವಾ ದ್ವಿಲಿಂಗಿಗಳಾಗಿರಬಹುದು. ಹೂವಿನ ಪೆರಿಯಾಂತ್ ಭಾಗ ಸರಳ ರೀತಿಯದು. ಕೆಲವೊಮ್ಮೆ ಪೆರಿಯಾಂತ್ ಭಾಗವೇ ಇರುವುದಿಲ್ಲ. ಕೇಸರಗಳ ಸಂಖ್ಯೆ ಪೆರಿಯಾಂತ್ ಸಂಖ್ಯೆಯಷ್ಟೆ ಅಥವಾ ಕಡಿಮೆ. ಅಂಡಾಶಯ ಉಚ್ಚಸ್ಥಾನದ್ದು. ಫಲ ಚಿಕ್ಕದಾಗಿದ್ದು ಅದಕ್ಕೆ ಎಕೀನ್ ಅಥವಾ ನಟ್ ಎಂದು ಹೆಸರಿದೆ.

ಉಪಯೋಗಗಳು

[ಬದಲಾಯಿಸಿ]

ಚೀನೊಪೋಡಿಯಮ್ ಆಲ್ಬಂ ಮತ್ತು ಕೀ. ಆಂಬ್ರಸಾಯ್ಡಿಸ್ ಪ್ರಭೇದಗಳಿಂದ ಒಂದು ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಕರುಳಿನಲ್ಲಿನ ಪರತಂತ್ರ ಜೀವಿಗಳು, ಕೊಕ್ಕೆಹುಳು, ಜಂತುಹುಳುಗಳ ನಿರ್ಮೂಲನಕ್ಕಾಗಿ ಔಷಧ ರೂಪದಲ್ಲಿ ಈ ಎಣ್ಣೆಯನ್ನು ಉಪಯೋಗಿಸುತ್ತಾರೆ. ಈ ಕುಟುಂಬಕ್ಕೆ ಸೇರಿದ ಕ್ವಿನೋವ ಎಂಬ ಸಸ್ಯ ದಕ್ಷಿಣ ಅಮೆರಿಕದಲ್ಲಿ ಒಂದು ಆಹಾರ ಬೆಳೆ.[] ಅದರ ಬೀಜಗಳನ್ನು ಅಕ್ಕಿಯಂತೆ ಆಹಾರವಾಗಿ ಸೇವಿಸುತ್ತಾರೆ. ಅದು ಒಂದು ಮಿಥ್ಯಾಧಾನ್ಯ ಸಸ್ಯ ಎಂತಲೂ ಹೇಳಬಹುದು. ಚಕ್ಕೋತಸೊಪ್ಪನ್ನು (ಸ್ಪಿನೇಶಿಯ ಓಲರೇಸಿಯ) ಹಸಿಯಾಗಿಯೊ ಬೇಯಿಸಿಯೊ ಉಪಯೋಗಿಸುತ್ತಾರೆ. ಇದರ ಎಲೆ ಮತ್ತು ಬೀಜಗಳು ಔಷಧರೂಪದಲ್ಲಿಯೂ ಉಪಯುಕ್ತ. ಬೀಟ್‌ರೂಟ್ ಎಂಬುದರಿಂದ ವಿವಿಧ ಜಾತಿಯ ಬೀಟಗಡ್ಡೆ ದೊರೆಯುತ್ತವೆ. ಇವನ್ನು ತರಕಾರಿಯಾಗಿ ಬಳಸುವುದು ಹೆಚ್ಚು.[] ಇದರಲ್ಲಿ ಸಕ್ಕರೆಯ ಅಂಶ ಅಧಿಕವಾಗಿರುವುದರಿಂದ ಐರೋಪ್ಯ ದೇಶಗಳಲ್ಲಿ ಇದರಿಂದ ಸಕ್ಕರೆಯನ್ನು ಉತ್ಪಾದಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Tropics: Amaranthaceae Juss. – synonyms". 2018. Retrieved 2018-06-16.
  2. "Caryophyllales". www.mobot.org. Retrieved 2020-12-02.
  3. Pam Dawling (1 February 2013). Sustainable Market Farming: Intensive Vegetable Production on a Few Acres. New Society Publishers. pp. 244–. ISBN 978-1-55092-512-8.
  4. Christenhusz, M. J. M.; Byng, J. W. (2016). "The number of known plants species in the world and its annual increase". Phytotaxa. 261 (3): 201–217. doi:10.11646/phytotaxa.261.3.1.
  5. The family Amaranthaceae at APWebsite.
  6. Bojanic, Alan (July 2011). Quinoa: An ancient crop to contribute to world food security (PDF). Food and Agriculture Organization (Technical report). Rojas, Wilfredo (Coordinator), (PROINPA), Alandia, Gabriela, Irigoyen, Jimena, Blajos, Jorge (Technical team), Santivañez, Tania (FAO). Quito: FAO. Retrieved 22 May 2018.
  7. Grubben, G.J.H. & Denton, O.A. (2004) Plant Resources of Tropical Africa 2. Vegetables. PROTA Foundation, Wageningen; Backhuys, Leiden; CTA, Wageningen.
  8. Dohm, Juliane C.; Minoche, André E.; Holtgräwe, Daniela; et al. (18 December 2013). "The genome of the recently domesticated crop plant sugar beet (Beta vulgaris)". Nature (in ಇಂಗ್ಲಿಷ್). 505 (7484). Nature Portfolio: 546–549. Bibcode:2014Natur.505..546D. doi:10.1038/nature12817. hdl:10230/22493. ISSN 0028-0836. PMID 24352233.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: