ಅಮೈಲ್ ನೈಟ್ರೈಟ್
ಹೆಸರುಗಳು | |
---|---|
ಐಯುಪಿಎಸಿ ಹೆಸರು
(3-methylbutyl) nitrite
| |
Other names
Isoamyl nitrite
Nitramyl 3-methyl-1-nitrosooxybutane Pentyl alcohol nitrite(ambiguous) Nitrous acid, pentyl ester(ambiguous) poppers (colloquial, street slang) | |
Identifiers | |
ECHA InfoCard | 100.003.429 |
ಗುಣಗಳು | |
ಆಣ್ವಿಕ ಸೂತ್ರ | C5H11NO2 |
ಮೋಲಾರ್ ದ್ರವ್ಯರಾಶಿ | ೧೧೭.೧೫ g mol−1 |
ಸಾಂದ್ರತೆ | 0.872 g/cm3, liquid (25 °C) |
ಕುದಿ ಬಿಂದು |
99 °C, 372 K, 210 °F |
ಕರಗುವಿಕೆ ನೀರಿನಲ್ಲಿ | slightly soluble |
Hazards | |
Main hazards | vasodilator |
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|
209 °C (408 °F; 482 K) | |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಅಮೈಲ್ ನೈಟ್ರೈಟ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಗುಂಡಿಗೆಯ ರೋಗದಿಂದೇಳುವ ಎದೆಸೆರೆಬಿಗಿತವನ್ನು (ಅಂಜೈನ ಪೆಕ್ಟೊರಿಸ್) ಕಳೆಯಲು ಬಳಸುವ ದ್ರವಮದ್ದು. ಇದರ ರಾಸಾಯನಿಕ ಸೂತ್ರ C5H11ONO.
ತಯಾರಿಕೆ
[ಬದಲಾಯಿಸಿ]ಹಿಟ್ಟು, ನೈಟ್ರಿಕಾಮ್ಲಗಳಿಂದ ಬರುವ ನೈಟ್ರಸ್ ಆವಿಯನ್ನು ಬೆಚ್ಚನೆಯ ಐಸೊಅಮೈಲ್ ಮದ್ಯಸಾರದೊಳಗೆ ಹಾಯಿಸುವುದರಿಂದಲೋ 15 ಪಾಲು ನೀರಲ್ಲಿರುವ 26 ಪಾಲು ಐಸೊಅಮೈಲ್ ಮದ್ಯಸಾರವನ್ನು ಕೂಡಿಸಿ ಬಟ್ಟಿಯಿಳಿಸುವುದರಿಂದಲೋ ತಯಾರಾಗುತ್ತದೆ.[೧]
ಲಕ್ಷಣಗಳು
[ಬದಲಾಯಿಸಿ]ತುಸು ಚೊಕ್ಕ ಹಳದಿ ಬಣ್ಣದ, ಬಲು ಸುಲಭವಾಗಿ ಆರಿಹೋಗುವ, ಹತ್ತಿಕೊಂಡುರಿವ, (ಕುದಿವ ಮಟ್ಟ 95೦ - 96೦ ಸೆಂ.ಗ್ರೇ). ವಿಶಿಷ್ಟಚೊಗರಿನ ಹಣ್ಣಿನ ವಾಸನೆಯ ದ್ರವ. ಹತ್ತಿರ ಬೆಂಕಿ, ಉರಿ ಇದ್ದಲ್ಲಿ ಸಿಡಿಯಬಹುದು. ಈ ರಾಸಾಯನಿಕ ನೀರಲ್ಲಿ ವಿಲೀನವಾಗದಿದ್ದರೂ ಸಲೀಸಾಗಿ ಮದ್ಯಸಾರ, ಈಥರ್, ಹಿಮದಂದ, ಅಸೆಟಿಕಾಮ್ಲ, ಕ್ಲೋರೋಫಾರ್ಮ್, ಬೆಂಜೀನ್‍ಗಳಲ್ಲಿ ವಿಲೀನವಾಗುತ್ತದೆ.[೨]
ಔಷಧ
[ಬದಲಾಯಿಸಿ]ಬಹುಮಟ್ಟಿಗೆ ಗುಂಡಿಗೆ ರೋಗಿಗಳು ಅನುಭವಿಸುವ ಮಾರಕ ಎದೆಶೂಲೆಯನ್ನು ಈ ದ್ರವ ಸರಕ್ಕನೆ ಕಳೆವುದು. ಶೂಲೆ ಬರುವ ಮುನ್ಸೂಚನೆ ಕಂಡಕೂಡಲೇ ತೆಗೆದುಕೊಳ್ಳಲು, ತೆಳುವಾದ ಗಾಜಿನ ಕಿರುಸೀಸೆಗಳಲ್ಲಿರುವ ಈ ದ್ರವವನ್ನು ರೋಗಿಗಳು ಯಾವಾಗಲೂ ಕಿಸೆಯಲ್ಲಿ ಇಟ್ಟುಕೊಂಡಿರುವವರು. ಬೇಕೆಂದಾಗ ಕೈವಸ್ತ್ರದ ಪದರಗಳಲ್ಲಿರಿಸಿ ಅಮುಕಿದಾಗ ಟಪಾರೆಂದು ಸದ್ದಾಗಿ ಒಡೆದು (0.3 ಮಿ.ರೇ.) ದ್ರವ ಕೂಡಲೇ ಆವಿಯಾಗಿ ಬರುವುದನ್ನು ಮೂಗಿನ ಬಳಿ ಹಿಡಿದು ಉಸಿರಲ್ಲಿ ಸೇದಿಕೊಳ್ಳುವರು. ಇದರ ಪ್ರಭಾವ ಸರಕ್ಕನೆ ಕಾಣಿಸಿಕೊಂಡು 3 ಮಿನಿಟು ಹೊತ್ತು ಇರಬಹುದು. ಹಲವು ವೇಳೆ ಮೊಗ ಕೆಂಪೇರಿ, ತಲೆನೋವಿನ ಸಿಡಿತ, ತಲೆತಿರುಗೂ ಆಗುವುದು ಅನಾನುಕೂಲ. ಇದ್ದಕ್ಕಿದ್ದಂತೆ ರಕ್ತದ ಒತ್ತಡ ಕುಸಿಯುತ್ತದೆ. ಕೋಣೆಯೆಲ್ಲ ಇದರ ಕಂಪು ಹರಡಿಕೊಳ್ಳುತ್ತದೆ. ಸಯನೈಡುಗಳ ವಿಷವೇರಿಕೆಯಲ್ಲೂ ಇದರ ಬಳಕೆಯಾಗುವುದು. ಡೈಯಜೋನಿಯಂ, ಐಸೊನೈಟ್ರೊಸೊ ಸಂಯುಕ್ತಗಳನ್ನು ತಯಾರಿಸಲೂ ತುಸುಮಟ್ಟಿಗೆ ಬಳಸುವುದುಂಟು.[೩]
ಉಲ್ಲೇಖಗಳು
[ಬದಲಾಯಿಸಿ]- ↑ Noyes, W. A. (1943). "n-Butyl Nitrite". Org. Synth.
{{cite journal}}
: Cite has empty unknown parameter:|authors=
(help); Coll. Vol., vol. 2, p. 108 - ↑ Nickerson, Mark, John O Parker, Thomas P Lowry, and Edward W Swenson. Isobutyl Nitrite and Related Compounds Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., 1st ed. San Francisco: Pharmex, Ltd, 1979.
- ↑ AJ Giannini, AE Slaby, MC Giannini. The Handbook of Overdose and Detoxification Emergencies. New Hyde Park, NY. Medical Examination Publishing Co., 1982, pp.48-50.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Kjonaas, Richard A. (1996). "Amyl: A Misunderstood Word". Journal of Chemical Education. 73 (12): 1127. Bibcode:1996JChEd..73.1127K. doi:10.1021/ed073p1127. Editorial on the use of the word "amyl".
- Pages using the JsonConfig extension
- CS1 errors: empty unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Chemical articles without CAS registry number
- Chemicals without a PubChem CID
- Articles without InChI source
- Chemical pages without ChemSpiderID
- Articles without EBI source
- Articles without KEGG source
- Articles without UNII source
- ECHA InfoCard ID from Wikidata
- Articles containing unverified chemical infoboxes
- ರಸಾಯನಶಾಸ್ತ್ರ
- ರಾಸಾಯನಿಕ ಸಂಯುಕ್ತಗಳು
- ಔಷಧೀಯ ರಸಾಯನಶಾಸ್ತ್ರ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ