ಅರಕಲಗೂಡು
ಅರಕಲಗೂಡು
ಅರಕಲಗೂಡು | |
---|---|
ಪುರಸಭ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾಸನ |
Elevation | ೯೧೬ m (೩,೦೦೫ ft) |
Population (2001) | |
• Total | ೧೫,೧೮೪ |
Languages | |
• Official | Kannada |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಇದು ಹಾಸನ ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಿಂದ ಸುತ್ತುವರೆದಿದೆ.
ಕೊಣನೂರು ಹ್ಯಾಂಗಿಂಗ್ ಬ್ರಿಡ್ಜ್, ರಾಮನಾಥಪುರದ ದೇಗುಲಗಳಲ್ಲಿ ಗೊರೂರು ಅಣೆಕಟ್ಟು, ಶೆಟ್ಟಿಹಳ್ಳಿ ಚರ್ಚ್, ನರಸಿಂಹಸ್ವಾಮಿ, ಸುಬ್ರಹ್ಮಣ್ಯ ದೇಗುಲ ಇಲ್ಲಿನ ಆಕರ್ಷಣೀಯ ಪ್ರವಾಸಿ ತಾಣಗಳು. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗೆಡ್ಡೆ ಈ ತಾಲೂಕಿನ ಪ್ರಮುಖ ಬೆಳೆಗಳು. ದೊಡ್ಡಮ್ಮ ದೇವಿ ದೇವಸ್ಥಾನ ಇದ್ದು ಐದು ವರ್ಷಕ್ಕೆ ಒಮ್ಮೆ ದೊಡ್ಡಮ್ಮ ಹಬ್ಬ ಮತ್ತು ಚಿಕ್ಕಮ್ಮ ಹಬ್ಬದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ ಅರಕಲಗೂಡು ಮಲೆನಾಡು ಅರೆ ಮಲೆನಾಡು ಬಯಲು ಸೀಮೆಯ ಪ್ರದೇಶಗಳನ್ನು ಹೊಂದಿದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಏ ಮಂಜು ಅವರು ಈ ಬಾರಿ ಜಯಗಳಿಸಿದ್ದಾರೆ.
ಪ್ರಮುಖ ಸ್ಥಳಗಳು
[ಬದಲಾಯಿಸಿ]ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ದೊಡ್ಡಮ್ಮ ತಾಯಿಯ ದೇವಾಲಯವಿದೆ.
ಅರಕಲಗೂಡಿಗೆ ಹೊಂದಿಕೊಂಡಂತೆಯೆ ಇರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು ನೀರಾವರಿಗೆ ಇಂಬು ನೀಡಲಾಗಿದೆ.
ಕೊಣನೂರಿನಲ್ಲಿರುವ ತೂಗು ಸೇತುವೆ ಹಾಸನ ಜಿಲ್ಲೆಯ ರಾಮನಾಥಪುರದಿಂದ ಐದು ಕಿ.ಮೀ ದೂರದಲ್ಲಿದೆ. ಕೊಣನೂರಿನಿಂದ ಕಟ್ಟೇಪುರ ಗ್ರಾಮಕ್ಕೆ ಜನರು ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ಇದನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಐತಿಹಾಸಿಕ ಪ್ರಾಮುಖ್ಯತೆಯ ಅನೇಕ ದೇವಾಲಯಗಳು ಗ್ರಾಮದಲ್ಲಿವೆ.
ದಕ್ಷಿಣಕಾಶಿ ರಾಮನಾಥಪುರ
[ಬದಲಾಯಿಸಿ]ರಾಮನಾಥಪುರ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ. ಈ ಸ್ಥಳ ಪವಿತ್ರ ಕಾವೇರಿ ನದಿಯ ಎಡ ದಂಡೆಯ ಮೇಲಿದ್ದು, ಕರ್ನಾಟಕ ರಾಜ್ಯದ ಒಂದು ಪ್ರಮುಖ ಯಾತ್ರಾ ಮತ್ತು ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ. ರಾಮನಾಥಪುರ ಶತ-ಶತಮಾನಗಳಿಂದ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿದ್ದು "ದಕ್ಷಿಣ ಕಾಶಿ" ಎಂದು ಪ್ರಖ್ಯಾತಿ ಹೊಂದಿದೆ. ತ್ರೇತಾಯುಗದ ಶ್ರೀರಾಮಚಂದ್ರನು ಈಶ್ವರನ ಲಿಂಗವನ್ನು ಪೂಜಿಸಿದ ಸ್ಥಳವೆಂಬ ಕಾರಣದಿಂದ ಈ ಗ್ರಾಮಕ್ಕೆ "ರಾಮನಾಥಪುರ" ಎಂಬ ಹೆಸರು ಬಂದಿದೆ ಎಂದು ಪ್ರತೀತಿಯಿದೆ. ಈ ಗ್ರಾಮದಲ್ಲಿ ಹಲವಾರು ದೇವಾಲಯಗಳಿರುವುದರಿಂದ "ದೇವಾಲಯಗಳ ಪಟ್ಟಣ" ಎಂದೂ ಸಹ ಪ್ರಸಿದ್ದವಾಗಿದೆ. ರಾಮನಾಥಪುರದಲ್ಲಿರುವ ಹೆಸರುವಾಸಿಯಾಗಿರುವ ದೇವಾಲಯಗಳೆಂದರೆ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಚತುರ್ಯುಗ ಶ್ರೀ ರಾಮೇಶ್ವರ ದೇವಾಲಯ, ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಾಲಯ, ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮಿ ಮಠ ಮುಂತಾದವುಗಳು. ಕಾವೇರಿ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸೇವೆಯನ್ನು ಭಕ್ತಿಯಿಂದ ಮಾಡಿದರೆ, ಅವರ ಜನ್ಮಜನ್ಮಾಂತರದ ಪಾಪ-ಕರ್ಮಗಳೆಲ್ಲವೂ ಕರಗಿ ಹೋಗುವುದೆಂಬ ನಂಬಿಕೆಯಿದೆ. ಪ್ರತಿದಿನ ನೂರಾರು ಭಕ್ತಾದಿಗಳು, ಯಾತ್ರಾತ್ರಿಗಳು ಮತ್ತು ಪ್ರವಾಸಿಗರು ತಮ್ಮ ಹರಕೆ ಮತ್ತು ಮನಸ್ಸಿನ ಅಭೀಷ್ಠೆಗಳನ್ನು ಭಗವಂತನ ಪೂಜಾ-ಕೈಂಕರ್ಯದ ಮೂಲಕ ಈಡೇರಿಸಿಕೊಳ್ಳಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಡಿಸೆಂಬರ್-ಜನವರಿ ತಿಂಗಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]೧.ಹಾಸನ ಇತಿಹಾಸ ೨.ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಹಾಸನ ಜಿಲ್ಲೆಯ ತಾಲೂಕುಗಳು