ವಿಷಯಕ್ಕೆ ಹೋಗು

ಅರಣ್ಯನಾಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಕ್ಷಿಣ ಮೆಕ್ಸಿಕೊದಲ್ಲಿ ಕೃಷಿಗಾಗಿ ಕಾಡನ್ನು ಸುಟ್ಟುಹಾಕಿದ್ದು.
ಯುರೋಪಿನಲ್ಲಿ ಅರಣ್ಯನಾಶ

ಅರಣ್ಯನಾಶ ಎಂದರೆ ನೈಸರ್ಗಿಕವಾಗಿ ಕಾಣಿಸುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ. ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ ಇದ್ದಿಲನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳ ಮೇವಿಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್‌ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ ವಾಸಸ್ಥಾನಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ ನಾಶವಾಗಿದ್ದು ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದೆ. ಇದರಿಂದಾಗಿ ವಾತಾವರಣದ ಇಂಗಾಲ ಡೈಆಕ್ಸೈಡ್‌ಜೀವಿಗಳ ಸೇವನೆಯ ಪ್ರಮಾಣದಲ್ಲಿ ಮತ್ತಷ್ಟು ಏರುಪೇರಾಗಿ ಜೀವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅರಣ್ಯನಾಶವಾದ ಪ್ರದೇಶಗಳು ಮಹತ್ತರ ದುಷ್ಪರಿಣಾಮವಾದ ಮಣ್ಣಿನ ಸವಕಳಿಗೆ ಒಳಗಾಗುತ್ತವೆ ಹಾಗೂ ಅವುಗಳು ಆಗಿಂದಾಗ್ಗೆ ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ. ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು, ಅಳಿವು, ಹವಾಮಾನ ಬದಲಾವಣೆ, ಮರುಭೂಮೀಕರಣಗೊಳ್ಳುವಿಕೆಯಿಂದ ಸ್ಥಳೀಯ ಜನರ ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ. GDP ತಲಾವಾರು ಆದಾಯ ಕನಿಷ್ಟ US$ 4,600ನಷ್ಟು ಇರುವ ದೇಶಗಳಲ್ಲಿ, ಅರಣ್ಯನಾಶದ ಒಟ್ಟು ಪ್ರಮಾಣದ ಏರಿಕೆಗಳು ನಿಲ್ಲುತ್ತಿವೆ.[][]

ಮಾನವಜನ್ಯ ಅರಣ್ಯನಾಶಕ್ಕೆ ಕಾರಣಗಳು

[ಬದಲಾಯಿಸಿ]

ಸಮಕಾಲೀನ ಅರಣ್ಯನಾಶಕ್ಕೆ ಹಲವಾರು ಪ್ರಮುಖ ಕಾರಣಗಳಿದ್ದು, ಭ್ರಷ್ಟಗೊಂಡ ಸರ್ಕಾರಿ ಸಂಸ್ಥೆಗಳು,[] ಶಕ್ತಿ ಹಾಗೂ ಸಂಪತ್ತಿನ ವಿತರಣೆಯಲ್ಲಿ ಅಸಮಾನತೆ,[] ಜನಸಂಖ್ಯಾ ಬೆಳವಣಿಗೆ[] ಹಾಗೂ ಜನಸಂಖ್ಯಾ ಸ್ಪೋಟ,[][] ನಗರೀಕರಣವೂ ಸೇರಿದೆ.[] ಜಾಗತೀಕರಣದ (ಕಾರ್ಮಿಕ, ಬಂಡವಾಳ, ಉತ್ಪನ್ನಗಳು, ಹಾಗೂ ಹೊಸ ವಿಚಾರಗಳ ಒಳಹರಿವು) ಪರಿಣಾಮವು ಸ್ಥಳೀಯ ಅರಣ್ಯ ಸಂರಕ್ಷಣೆಗೆ[] ಕಾರಣವಾಗಿರುವ ಹಲವಾರು ಪ್ರಕರಣಗಳಿದ್ದರೂ ಜಾಗತೀಕರಣವನ್ನು ಅರಣ್ಯನಾಶದ ಮತ್ತೊಂದು ಪ್ರಮುಖ ಕಾರಣ ಎಂದು ನೋಡಲಾಗುತ್ತದೆ.[೧೦][೧೧] 2000ನೇ ಇಸವಿಯಲ್ಲಿ ಯುನೈಟೆಡ್ ನೇಷನ್ಸ್‌ ಆಹಾರ ಹಾಗೂ ಕೃಷಿ ಸಂಘಟನೆಯು (FAO) "ಜನಸಂಖ್ಯಾ ಸ್ಫೋಟಕ್ಕೆ ಸ್ಥಳೀಯ ವ್ಯವಸ್ಥೆಯು ನಿರ್ಣಾಯಕತೆ ಪಾತ್ರ ವಹಿಸುವುದರಿಂದ ಹಿಡಿದು ನಗಣ್ಯ ಪಾತ್ರ ವಹಿಸುವ ಸಾಧ್ಯತೆಗಳೂ ಇವೆ," ಹಾಗೂ "ಜನಸಂಖ್ಯೆ ಒತ್ತಡ ಹಾಗೂ ಆರ್ಥಿಕ, ಸಾಮಾಜಿಕ ಹಾಗೂ ತಂತ್ರಜ್ಞಾನದ ಸ್ಥಿತಿಗಳ ಸಂಯೋಜನೆ"ಗಳಿಂದಾಗಿ ಅರಣ್ಯನಾಶ ಉಂಟಾಗಬಹುದು ಎಂಬ ತೀರ್ಮಾನಕ್ಕೆ ಬಂದಿದೆ."[] ಯುನೈಟೆಡ್ ನೇಷನ್ಸ್‌ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೆಟ್ ಚೇಂಜ್ (UNFCCC) ಸೆಕ್ರೆಟರಿಯೆಟ್ ಸಂಸ್ಥೆಯು, ಅರಣ್ಯನಾಶಕ್ಕೆ ಕೃಷಿಯೇ ನೇರ ಕಾರಣ ಎಂದು ತಿಳಿಸಿದೆ. ಜೀವನಾಧಾರದ ಕೃಷಿ 48% ನಷ್ಟು ಅರಣ್ಯನಾಶಕ್ಕೆ ಕಾರಣವಾದರೆ; ವಾಣಿಜ್ಯ ಕೃಷಿ 32%ರಷ್ಟು ಅರಣ್ಯನಾಶಕ್ಕೆ ಕಾರಣವಾಗಿದೆ; ಮರಮುಟ್ಟುಗಳನ್ನು ಪಡೆಯಲು 14%ರಷ್ಟು ಅರಣ್ಯನಾಶ ಹಾಗೂ ಉರುವಲುಗಳಿಗಾಗಿ ಮರವನ್ನು ಕಡಿಯುತ್ತಿರುವುದು 5% ಅರಣ್ಯನಾಶಕ್ಕೆ ಕಾರಣವಾಗಿದೆ.[೧೨] ಆರ್ಥಿಕ ಪ್ರೇರಕಗಳು ಅರಣ್ಯ ರಕ್ಷಣೆಗಿಂತ ಅರಣ್ಯ ನಾಶವನ್ನು ಹೆಚ್ಚು ಲಾಭಧಾಯಕ ಎಂದು ತೋರುತ್ತಿರುವುದೂ ಕೂಡ ಅರಣ್ಯ ಪರಿಸರ ವ್ಯವಸ್ಥೆಗಳು ಕ್ಷೀಣಗೊಳ್ಳುತ್ತಿರುವುದಕ್ಕೆ ಕಾರಣ.[೧೩] ತಮ್ಮ ಜೀವನೋಪಾಯಕ್ಕಾಗಿ ಅರಣ್ಯಗಳನ್ನು ಅವಲಂಬಿಸಿರುವ ಮಾಲೀಕರು ಅಥವಾ ಸಮುದಾಯದವರ ಹಲವು ಪ್ರಮುಖ ಅರಣ್ಯ ಕಾರ್ಯಕ್ರಮಗಳು ಯಾವುದೇ ರೀತಿಯ ಮಾರುಕಟ್ಟೆಯಿಲ್ಲದೆ ತಮ್ಮ ಆರ್ಥಿಕ ಮೌಲ್ಯವು ವ್ಯಕ್ತಗೊಳ್ಳದ ಕಾರಣ ಗಮನ ಕಳೆದುಕೊಳ್ಳುತ್ತಿವೆ.[೧೩] ಅಭಿವೃದ್ದಿ ಹೊಂದುತ್ತಿರುವ ಪ್ರಪಂಚದ ದೃಷ್ಟಿಯಿಂದ ನೋಡುವುದಾದರೆ ಅರಣ್ಯಗಳು ಇಂಗಾಲವನ್ನು ಹೀರಿಕೊಳ್ಳುವುದರಿಂದ ಅಥವಾ ಜೀವ ವೈವಿಧ್ಯತೆ ಮೀಸಲು ಪ್ರದೇಶಗಳಿಂದ ಪ್ರಮುಖವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೆಚ್ಚು ಪ್ರಯೋಜನವಿದೆ ಹಾಗೂ ಈ ರೀತಿಯ ಸೇವೆಗಳಿಗೆ ಸರಿಯಾದ ಪ್ರಮಾಣದಲ್ಲಿ ಪರಿಹಾರ ಆ ರಾಷ್ಟ್ರಗಳಿಗೆ ಸಿಗುತ್ತಿಲ್ಲ. ಅಭಿವೃದ್ದಿ ಹೊಂದಿದ ಪ್ರಪಂಚದ ಅಮೇರಿಕಾ ಸಂಯುಕ್ತ ಸಂಸ್ಥಾನದಂತಹ ಕೆಲವು ದೇಶಗಳು ತಮ್ಮಲ್ಲಿದ್ದ ಕೆಲವು ದಶಕಗಳ ಹಿಂದೆಯೇ ಅರಣ್ಯ ಸಂಪತ್ತನ್ನು ನಾಶ ಮಾಡಿ ಅವುಗಳಿಂದಾಗುವ ಪ್ರಯೋಜನಗಳನ್ನು ಪಡೆದಿದ್ದು, ಆದರೆ ಅದೇ ರೀತಿಯ ಅವಕಾಶಗಳನ್ನು ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಹೊಂದಲು ಬಿಡದೆ ಬೂಟಾಟಿಕೆಯ ನಾಟಕಗಳನ್ನಾಡುತ್ತಿವೆ: ಅಭಿವೃದ್ಧಿಗೊಂಡ ರಾಷ್ಟ್ರಗಳು ಹುಟ್ಟುಹಾಕಿರುವ ಈ ಸಮಸ್ಯೆಯನ್ನು ಸರಿಪಡಿಸಲು ಆಗುವ ವೆಚ್ಚವನ್ನು ತಾವು ಭರಿಸುವ ಅವಶ್ಯಕತೆಯಿಲ್ಲ ಎಂಬ ಭಾವನೆಗಳನ್ನು ಅಭಿವೃದ್ದಿ ಹೊಂದುತ್ತಿರುವ ದೇಶಗಳು ವ್ಯಕ್ತಪಡಿಸಿವೆ.[೧೪] ಪರಿಣಿತರು ಕೈಗಾರಿಕಾ ಚಟುವಟಿಕೆಗಳಿಗಾಗಿ ಮರಗಳನ್ನು ಕತ್ತರಿಸಿರುವುದೇ ಜಾಗತಿಕ ಅರಣ್ಯನಾಶಕ್ಕೆ ಕಾರಣ ಎಂಬುದನ್ನು ಇದನ್ನು ಪುರಸ್ಕರಿಸುವುದಿವುಲ್ಲ.[೧೫][೧೬] ಅದೇ ರೀತಿ, ಅರಣ್ಯನಾಶಕ್ಕೆ ಬಡತನವೇ ಪ್ರಮುಖ ಕಾರಣ ಎಂಬುದನ್ನು ಒಪ್ಪಲೂ ಸಾಧ್ಯವಿಲ್ಲ. ಒಂದು ವರ್ಗ ಬಡ ಜನರಿಗೆ ಇನ್ನಾವುದೇ ರೀತಿಯ ಬದುಕು ತಿಳಿದಿಲ್ಲದೆ ಅರಣ್ಯವನ್ನು ನಾಶಪಡಿಸುತ್ತಿದ್ದಾರೆ ಎಂಬುದನ್ನು ಪ್ರತಿಪಾದಿಸಿದರೆ, ಮತ್ತೊಂದು ವರ್ಗ ತಮಗೆ ಬೇಕಾದ ಮರಮುಟ್ಟುಗಳಿಗೆ ಅಥವಾ ಕೂಲಿಕಾರ್ಮಿಕರಿಗೆ ಹಣ ನೀಡಲು ಸಾಧ್ಯವಿಲ್ಲದೆ ಕಾರಣ ಅವರು ಅರಣ್ಯವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಪ್ರತಿಪಾದಿಸುತ್ತಿದ್ದಾರೆ.[೧೫] ಜನಸಂಖ್ಯಾ ಬೆಳವಣಿಗೆಯಿಂದ ಅರಣ್ಯನಾಶ ಉಂಟಾಗುತ್ತಿದೆ ಎಂಬುದನ್ನು ಕೂಡ ಅಲ್ಲಗಳೆಯಲಾಗಿದೆ;[೧೫] ಒಂದು ಅಧ್ಯಯನದ ಪ್ರಕಾರ ಉಷ್ಣವಲಯ ಅರಣ್ಯನಾಶ ಕೇವಲ 8%ನಷ್ಟಿರುವೆಡೆಗಳಲ್ಲಿ ಫಲವತ್ತತೆ ಪ್ರಮಾಣ ಉತ್ತಮವಿರುವ ಕಾರಣದಿಂದಾಗಿ ಜನಸಂಖ್ಯೆ ಕೂಡ ತೀವ್ರಗತಿಯಲ್ಲಿ ಬೆಳೆಯುತ್ತಿದೆ.[೧೭] ಕಳೆದ 30 ವರ್ಷಗಳಲ್ಲಿ ಅರಣ್ಯನಾಶದ ಪ್ರೇರಕಗಳು ಬದಲಾಗಿವೆಯೆಂದು ಕೆಲವರು ವ್ಯಾಖ್ಯಾನಿಸುತ್ತಾರೆ.[೧೮] 1960ರ ಹಾಗೂ 1970ರ ದಶಕಗಳಲ್ಲಿ ನಡೆದ ಜೀವನಾಧಾರದ ಚಟುವಟಿಕೆಗಳು ಹಾಗೂ ಸರ್ಕಾರದ-ಪ್ರಾಯೋಜಕತ್ವದಲ್ಲಿ ನಡೆದ ಅಭಿವೃದ್ಧಿ ಯೋಜನೆಗಳಾದ ವಲಸೆ (ಇಂಡೊನೇಷ್ಯಾ) ಹಾಗೂ ವಸಾಹತುಗಳ ಸ್ಥಾಪನೆ (ಲ್ಯಾಟಿನ್‌ ಅಮೇರಿಕಾ) ಅರಣ್ಯ ನಾಶಕ್ಕೆ ಪ್ರೇರಣೆಯಾಯಿತು, 1990ನೇ ಇಸವಿಯ ಹೊತ್ತಿಗೆ, ಕೈಗಾರಿಕೆಗಳು, ದೊಡ್ಡ ಪ್ರಮಾಣದಲ್ಲಿ ಪಶುಸಂಗೋಪನಾ ವಲಯಗಳು, ಹಾಗೂ ಅಪರಿಮಿತ ಕೃಷಿ ಸೇರಿದಂತೆ ಇನ್ನಿತರೆ ಕೈಗಾರಿಕಾ ಕ್ರಿಯೆಗಳಿಂದಾಗಿ ಬಹುಪಾಲು ಅರಣ್ಯ ನಾಶವಾಯಿತು.[೧೯]

ಪರಿಸರ ತೊಂದರೆಗಳು

[ಬದಲಾಯಿಸಿ]

ವಾತಾವರಣದಲ್ಲಿ

[ಬದಲಾಯಿಸಿ]

ಅರಣ್ಯನಾಶ ನಿರಂತರವಾಗಿ ನಡೆಯುತ್ತಿದ್ದು, ಹವಾಮಾನ ಹಾಗೂ ಭೂಲಕ್ಷಣಗಳಲ್ಲಿ ಬದಲಾವಣೆ ತರುತ್ತಿದೆ.[೨೦][೨೧][೨೨][೨೩] ಜಾಗತಿಕ ತಾಪಮಾನ ಏರಿಕೆಗೆ ಅರಣ್ಯನಾಶ ಪ್ರಮುಖ ಕಾರಣವಾಗಿದ್ದು,[೨೪][೨೫] ಹಸಿರುಮನೆ ಪರಿಣಾಮ ಮತ್ತಷ್ಟು ಹೆಚ್ಚಾಗಲು ಅರಣ್ಯನಾಶ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಉಷ್ಣವಲಯದ ಅರಣ್ಯನಾಶ, ವಿಶ್ವದ ಸರಿಸುಮಾರು 20%ನಷ್ಟು ಹಸಿರುಮನೆ ಅನಿಲದ ಹೊರಸೂಸುವಿಕೆಗೆ ಕಾರಣವಾಗಿದೆ.[೨೬] ಹವಾಗುಣ ಬದಲಾವಣೆ ಕುರಿತು ಅಧ್ಯಯನ ನಡೆಸುತ್ತಿರುವ ಅಂತರ್‌‌-ಸರ್ಕಾರಿ ತಂಡದ ಪ್ರಕಾರ ಅರಣ್ಯನಾಶ, ಅದರಲ್ಲಿಯೂ ಪ್ರಮುಖವಾಗಿ ಉಷ್ಣವಲಯ ವಲಯಗಳ ಅರಣ್ಯನಾಶ, ಮೂರನೇ ಒಂದು ಭಾಗದಷ್ಟು ಮಾನವಜನ್ಯ ಇಂಗಾಲ ಡೈಆಕ್ಸೈಡ್‌ನ ಹೊರಸೂಸುವಿಕೆಗೆ ಕಾರಣವಾಗಿದೆ.[೨೭] ಅರಣ್ಯನಾಶ ಹಾಗೂ ಉರುವಲುಗಳಿಗಾಗಿ ಅರಣ್ಯದ ಅವನತಿಯು (ಜವುಗುಪ್ರದೇಶದ ಹೊರಸೂಸುವಿಕೆಗಳನ್ನು ಹೊರತುಪಡಿಸಿ) ಒಟ್ಟಾರೆ 12%ನಷ್ಟು ಇಂಗಾಲ ಡೈಆಕ್ಸೈಡ್‌ ಹೊರಸೂಸುವಿಕೆಗೆ ಕಾರಣವಾಗಿದ್ದು, 6ರಿಂದ 17%[೨೮] ದಷ್ಟು ಮಾನವಜನ್ಯ ಇಂಗಾಲ ಡೈಆಕ್ಸೈಡ್‌ ಹೊರಸೂಸುವಿಕೆಗಳಿಗೆ ಕಾರಣ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸುತ್ತವೆ. ಮರಗಳು ಹಾಗೂ ಇನ್ನಿತರೆ ಸಸ್ಯಗಳು ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯಲ್ಲಿ ವಾತಾವರಣದಿಂದ ಇಂಗಾಲವನ್ನು(ಇಂಗಾಲ ಡೈಆಕ್ಸೈಡ್‌ ರೂಪದಲ್ಲಿ) ಹೀರಿಕೊಳ್ಳುತ್ತವೆ ಹಾಗೂ ಸಹಜ ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಕ್ರಿಯಾತ್ಮಕವಾಗಿ ಬೆಳೆಯುತ್ತಿರುವ ಮರ ಅಥವಾ ಅರಣ್ಯ ಮಾತ್ರ ವರ್ಷ ಅಥವಾ ಇನ್ನೂ ಹೆಚ್ಚಿನ ಸಮಯದಲ್ಲಿ ಇಂಗಾಲವನ್ನು ವಾತಾವರಣದಿಂದ ತೆಗೆದುಹಾಕುತ್ತದೆ. ಮರಮುಟ್ಟುಗಳ ಕೊಳೆಯುವಿಕೆ ಹಾಗೂ ಬೆಂಕಿಯಲ್ಲಿ ಸುಡುವ ಎರಡೂ ಪ್ರಕ್ರಿಯೆಗಳಿಂದ ತಮ್ಮಲ್ಲಿ ಅಡಗಿಸಿಕೊಂಡಿರುವ ಇಂಗಾಲವನ್ನು ಮರಳಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಮರವನ್ನು ಸರಿಯಾದ ರೀತಿಯಲ್ಲಿ ಕಟಾವು ಮಾಡಿ ಹೆಚ್ಚು ಕಾಲ ಬಳಕೆಯಾಗುವ ಉತ್ಪನ್ನಗಳನ್ನಾಗಿ ಮಾಡಿ ಆ ಜಾಗದಲ್ಲಿ ಸಸಿಗಳನ್ನು ಪುನಃ ನೆಡುವುದರಿಂದ ಅರಣ್ಯಗಳು ಇಂಗಾಲವನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ.[೨೯] ಅರಣ್ಯನಾಶವು ಮಣ್ಣಿನಲ್ಲಿ ಶೇಖರಣೆಗೊಂಡಿರುವ ಇಂಗಾಲವು ಮರಳಿ ವಾತಾವರಣಕ್ಕೆ ಸೇರುವಂತೆ ಮಾಡುತ್ತದೆ. ಅರಣ್ಯಗಳು ಇಂಗಾಲದ ಭಂಡಾರವಾಗಿದ್ದು ಪರಿಸರದ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಕರಗಿಸುವ ಅಥವಾ ಉತ್ಪಾದಿಸುವ ಮೂಲ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸುತ್ತವೆ. ಸಂಪೂರ್ಣ ಬೆಳವಣಿಗೆ ಹೊಂದಿದ ಅರಣ್ಯಗಳು ಇಂಗಾಲ ಡೈಆಕ್ಸೈಡ್‌ನ ಒಟ್ಟು ಕರಗುವಿಕೆಯ ಪ್ರಮಾಣ ಒಟ್ಟು ಉತ್ಪಾದನಾ ಪ್ರಮಾಣದ (ಇಂಗಾಲ ಡೈಆಕ್ಸೈಡ್‌ ಹೀರುವಿಕೆ ಹಾಗೂ ಇಂಗಾಲ ಚಕ್ರವನ್ನೂ ಗಮನಿಸಿ) ನಡುವಣ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ. ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಉಷ್ಣವಲಯದ ಅರಣ್ಯನಾಶ ಹಾಗೂ ಅರಣ್ಯ ಅವನತಿ ಕಡಿಮೆಗೊಳಿಸಿ ಹೊರಸೂಸುವಿಕೆಯ ಪ್ರಮಾಣವನ್ನು (REDD) ನಿಯಂತ್ರಿಸಲು ನಿರಂತರವಾದ ಕೆಲವು ಹವಾಗುಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಅರಣ್ಯನಾಶ ಹಾಗೂ ಅರಣ್ಯ ಅವನತಿಯಿಂದ ಉಂಟಾಗುತ್ತಿರುವ ಹಸಿರುಮನೆ ಅನಿಲದ (GHG) ಹೊರಸೂಸುವಿಕೆ ಪ್ರಮಾಣವನ್ನು ನಿಯಂತ್ರಿಸಲು ಹಣಕಾಸಿನ ಸಹಾಯ ನೀಡುವ ಕಲ್ಪನೆಯಿದೆ".[೩೦] ವಿಶ್ವದ ಆಮ್ಲಜನಕ ಮಳೆಕಾಡುಗಳು ಗಣನೀಯ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ ಎಂದು ಜನಸಾಮಾನ್ಯರು ಭಾವಿಸಿದ್ದಾರೆ,[೩೧] ಇತ್ತೀಚೆಗೆ ವಾತಾವರಣಕ್ಕೆ ಮಳೆಕಾಡುಗಳು ಒಟ್ಟು ಆಮ್ಲಜನಕದ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗಿನ ಕೊಡುಗೆ ನೀಡಿದರೂ ಅರಣ್ಯನಾಶವು ವಾತಾವರಣದಲ್ಲಿ ಇರುವ ಆಮ್ಲಜನಕದ ಪ್ರಮಾಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ನಂಬಿದ್ದಾರೆ.[೩೨][೩೩] ಭೂಮಿಯನ್ನು ತೆರವು ಮಾಡುವ ಪ್ರಕ್ರಿಯೆಯಲ್ಲಿ ಅರಣ್ಯದಲ್ಲಿರುವ ಗಿಡಮರಗಳನ್ನು ದಹನ ಅಥವಾ ಸುಟ್ಟುಹಾಕುವುದರಿಂದಾಗಿ ಟನ್ನುಗಳಷ್ಟು CO2 ವಾತಾವರಣಕ್ಕೆ ಸೇರ್ಪಡೆಯಾಗುತ್ತದೆ, ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ.[೨೫] ಅರಣ್ಯಗಳು ಇಂಗಾಲ ಡೈಆಕ್ಸೈಡ್‌ ಹಾಗೂ ಇತರೆ ಮಲಿನಕಾರಕಗಳನ್ನು ವಾಯುವಿನಿಂದ ಹೀರಿಕೊಳ್ಳುತ್ತವೆ, ಇದರಿಂದಾಗಿ ಜೀವಗೋಳದ ಮೇಲೆ ಪ್ರಭಾವ ಬೀರಿವೆ.[ಸೂಕ್ತ ಉಲ್ಲೇಖನ ಬೇಕು]

ಜಲಮಂಡಲ

[ಬದಲಾಯಿಸಿ]

ಅರಣ್ಯನಾಶವು ಜಲಚಕ್ರದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮರಗಳು ಅಂತರ್ಜಲವನ್ನು ತಮ್ಮ ಬೇರುಗಳಿಂದ ಹೀರುತ್ತವೆ ಹಾಗೂ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಅರಣ್ಯದ ಕೆಲವು ಭಾಗವನ್ನು ನಿರ್ಮೂಲ ಮಾಡುವುದರಿಂದ, ಮರಗಳು ನೀರನ್ನು ಬಾಷ್ಪೀಕರಣ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದಾಗಿ ಹವಾಗುಣದಲ್ಲಿ ಒಣಹವೆ ಹೆಚ್ಚುತ್ತದೆ. ಅರಣ್ಯನಾಶವು ವಾಯುಮಂಡಲದಲ್ಲಿರುವ ತೇವಾಂಶ ಸೇರಿದಂತೆ ಮಣ್ಣಿನಲ್ಲಿರುವ ನೀರಿನ ಮಟ್ಟ ಹಾಗೂ ಅಂತರ್ಜಲ ಮಟ್ಟವನ್ನು ಕ್ಷೀಣಿಸುತ್ತದೆ.[೩೪] ಅರಣ್ಯನಾಶವು ಮಣ್ಣಿನ ಪರಸ್ಪರ ಆಕರ್ಷಣಾ ಶಕ್ತಿಯನ್ನು ಕಡಿಮೆ ಮಾಡುತ್ತವೆ, ಸವಕಳಿಯಿಂದಾಗಿ, ನೆರೆ ಹಾಗೂ ಭೂಕುಸಿತ ಉಂಟಾಗಲು ಕಾರಣವಾಗಿವೆ.[೩೫][೩೬] ಅರಣ್ಯಗಳು ಸ್ಥಳೀಯ ಜಲಕುಹರಗಳನ್ನು ಪುನಶ್ಚೇತನವಾಗುವ ಪ್ರಮಾಣವನ್ನು ಹೆಚ್ಚಿಸುತ್ತವೆ, ಇಷ್ಟೆಲ್ಲಾ ಆದರೂ, ಕೆಲವೆಡೆಗಳಲ್ಲಿ ಅರಣ್ಯಗಳೇ ಜಲಕುಹರಗಳ ನೀರಿನ ಮಟ್ಟ ಕ್ಷೀಣಿಸಲು ಪ್ರಮುಖ ಮೂಲವಾಗಿದೆ.[೩೭] ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶಗಳು ಕಡಿಮೆ ಮಾಡುತ್ತವೆ ಭೂದೃಶ್ಯಗಳ ತಡೆಹಿಡಿಯುವ ಕ್ಷಮತೆ, ಹಿಡಿದಿಟ್ಟುಕೊಳ್ಳುವ ಕ್ಷಮತೆ ಮತ್ತು ಆವಿಯ ರಚನೆ ವೇಗವಾಗುವಂತೆ ಮಾಡುತ್ತದೆ. ಮಳೆಯನ್ನು ನೀರನ್ನು ಹಿಡಿದಿಡಿಟ್ಟು ನಂತರದಲ್ಲಿ ಅಂತರ್ಜಲ ವ್ಯವಸ್ಥೆಗಳಿಗೆ ಜಿನುಗುವಂತೆ ಮಾಡುವ ಬದಲಿಗೆ, ಅರಣ್ಯನಾಶವಾದ ಪ್ರದೇಶಗಳಲ್ಲಿ ಮೇಲ್ಮೈ ಜಲ ಭೂಮಿಯ ಒಳಪದರದಲ್ಲಿ ಚಲಿಸುವ ನೀರಿಗಿಂತ ವೇಗವಾಗಿ ಚಲಿಸುತ್ತದೆ. ಅರಣ್ಯ ಪ್ರದೇಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚಲಿಸುವ ನೀರಿಗಿಂತ ಈ ರೀತಿಯಾಗಿ ಚಲಿಸುವ ಮೇಲ್ಮೈ ಜಲವು ಕ್ಷಣದಲ್ಲೇ ಪ್ರವಾಹವಾಗಿ ಹೆಚ್ಚಾಗಿ ಸ್ಥಳೀಯ ಪ್ರವಾಹವಾಗಿ ಪರಿವರ್ತನೆಯಾಗುತ್ತದೆ. ಅರಣ್ಯನಾಶವು ಕಡಿಮೆ ಪ್ರಮಾಣದ ಬಾಷ್ಪ ವಿಸರ್ಜನೆಯ ಆವಿಯಾಗುವಿಕೆಗೂ ಕಾರಣವಾಗಿದೆ, ಅರಣ್ಯನಾಶವಾದ ಪ್ರದೇಶಗಳಲ್ಲಿ ವಾತಾವರಣದಲ್ಲಿರುವ ತೇವಾಂಶದ ಪ್ರಮಾಣವನ್ನು ಕಡಿಮೆ ಮಾಡಿ, ಗಾಳಿಬೀಸುವ ಕಡೆಗೆ ಇರುವ ಅರಣ್ಯಗಳಲ್ಲಿ ಮಳೆಯಾಗುತ್ತದೆ ಈ ಪ್ರದೇಶಗಳಲ್ಲಿ ನೀರು ಸರಿಯಾದ ರೀತಿಯಲ್ಲಿ ಪುನರ್ಬಳಕೆಯಾಗದೆ ಮೇಲ್ಮೈ ಜಲ ವೇಗವಾಗಿ ಚಲಿಸಿ ನೇರವಾಗಿ ಸಾಗರಗಳಿಗೆ ಸೇರುತ್ತದೆ. 1950ರ ಹಾಗೂ 1980ರ ದಶಕಗಳಲ್ಲಿ ನಡೆಸಿದ ಪ್ರಾಥಮಿಕ ಅಧ್ಯಯನದ ಪ್ರಕಾರ ಉತ್ತರ ಹಾಗೂ ವಾಯುವ್ಯ ಚೀನಾದಲ್ಲಿ ನಡೆದ ಅರಣ್ಯನಾಶದಿಂದಾಗಿ, ವಾರ್ಷಿಕ ಮಳೆಯ ಪ್ರಮಾಣವು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಮರಗಳು ಹಾಗೂ, ಸಾಮಾನ್ಯವಾಗಿ ಸಸ್ಯಗಳು ಜಲಚಕ್ರದ ಮೇಲೆ ತೀವ್ರತರವಾಗಿ ಪರಿಣಾಮ ಬೀರುತ್ತವೆ:

ಇದರ ಪರಿಣಾಮವಾಗಿ, ಮರಗಳ ಇರುವಿಕೆ ಅಥವಾ ಇಲ್ಲದಿರುವಿಕೆಯು ಮೇಲ್ಮೈನಲ್ಲಿರುವ, ಮಣ್ಣಿನಲ್ಲಿರುವ ಅಥವಾ ಅಂತರ್ಜಲ, ಅಥವಾ ವಾತಾವರಣದಲ್ಲಿರುವ ಇರಬಹುದಾದ ನೀರಿನ ಪ್ರಮಾಣವನ್ನು ಬದಲಿಸುತ್ತದೆ. ಇದರಿಂದಾಗಿ ಪರಿಸರ ವ್ಯವಸ್ಥೆ ಪ್ರಕ್ರಿಯೆಗಳಿಗೆ ಅಥವಾ ಮಾನವನ ಬಳಕೆಗಳಿಗೆ ಉಪಯುಕ್ತವಾಗುವ ಮಣ್ಣಿನ ಸವಕಳಿ ಹಾಗೂ ನೀರಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಜೋರಾಗಿ ಮಳೆಯಾದ ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹಗಳಲ್ಲಿ ಅರಣ್ಯದ ಪಾತ್ರವೂ ಇದ್ದು, ಆರ್ದ್ರತೆ ಹೊಂದಿರುವ ಅಥವಾ ಆರ್ದ್ರತೆ ಹೊಂದುವ ಹಂತದಲ್ಲಿರುವ ಅರಣ್ಯದ ಮಣ್ಣಿನಲ್ಲಿರುವ ಶೇಖರಣಾ ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಉಷ್ಣವಲಯದ ಮಳೆಕಾಡುಗಳು ಭೂಮಿಯ ಸುಮಾರು 30%ನಷ್ಟು ಸಿಹಿನೀರನ್ನು ಉತ್ಪತ್ತಿ ಮಾಡುತ್ತವೆ.[೩೧]

ಮಣ್ಣು

[ಬದಲಾಯಿಸಿ]
ಬ್ರೆಜಿಲ್‌ನ ರಿಯೊ ಡಿ ಜನೈರೊ ಪಟ್ಟಣದಲ್ಲಿ ಜೇಡಿಮಣ್ಣಿನ ಬಳಕೆಗಾಗಿ ಅರಣ್ಯನಾಶ ಜಕಾರೆಪಗುವಾದ ಮೊರೊ ಡ ಕೊವಾಂಕದಲ್ಲಿ ಬೆಟ್ಟದ ಚಿತ್ರಣ..

ಯಾವುದೇ ತೊಂದರೆಗಳಿಗೆ ಒಳಪಡದ ಅರಣ್ಯಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಣ್ಣಿನ ನಷ್ಟ ಸಂಭವಿಸುತ್ತಿದ್ದು, ಇದರ ಪ್ರಮಾಣ ಪ್ರತಿ ಚದರ ಕಿಲೋಮೀಟರ್‌ಗೆ (ಪ್ರತಿ ಚದರ ಮೈಲಿಗೆ 6 ಶಾರ್ಟ್ ಟನ್ನುಗಳು) ಸರಿಸುಮಾರು 2 ಮೆಟ್ರಿಕ್ ಟನ್‌ಗಳಷ್ಟಿದೆ. [ಸೂಕ್ತ ಉಲ್ಲೇಖನ ಬೇಕು] ಸಾಮಾನ್ಯವಾಗಿ ಅರಣ್ಯನಾಶವು, ಮಣ್ಣನ್ನು ಸಂರಕ್ಷಿಸುವ ಮರಗಳ ತರಗೆಲೆಗಳ ಪ್ರಮಾಣವನ್ನು ಕಡಿಮೆ ಮಾಡಿ ಮೇಲ್ಮೈ ವ್ಯರ್ಥಹರಿವಿನ ಪ್ರಮಾಣವನ್ನು ಹೆಚ್ಚಿಸುವುದರಿಂದ ಮಣ್ಣಿನ ಸವಕಳಿ ಪ್ರಮಾಣವು ಮತ್ತಷ್ಟು ಹೆಚ್ಚುತ್ತದೆ. ಅತಿಯಾಗಿ ಸವಕಳಿಯಾಗುವ ಉಷ್ಣವಲಯದ ಮಳೆಕಾಡಿನ ಅರಣ್ಯದ ಮಣ್ಣಿಗೆ ಇದು ಒಂದು ರೀತಿಯ ಉಪಯೋಗವೆಂದೇ ಹೇಳಬಹುದು. ಅರಣ್ಯಪ್ರದೇಶಗಳಲ್ಲಿ ನಡೆಯುವಂತಹ ಕಾರ್ಯಗಳಾದ ರಸ್ತೆಗಳ ಅಭಿವೃದ್ಧಿ ಹಾಗೂ ಯಂತ್ರಗಳ ಬಳಕೆಯೂ ಕೂಡ ಸ್ವಯಂಚಾಲಿತವಾಗಿ ಮಣ್ಣಿನ ಸವಕಳಿ ಪ್ರಮಾಣವನ್ನು ಹೆಚ್ಚಿಸುತ್ತವೆ. ಚೀನಾದ ಲೋಎಸ್ ಪ್ರಸ್ತಭೂಮಿಯ ಅರಣ್ಯವನ್ನು ದಶಲಕ್ಷ ವರ್ಷಗಳ ಹಿಂದೆಯೇ ಸವರಿಹಾಕಲಾಗಿತ್ತು. ಆಗಿನಿಂದ ಇಂದಿನವರೆಗೂ ಆ ಪ್ರದೇಶದಲ್ಲಿ ಇನ್ನೂ ಸವಕಳಿ ಆಗುತ್ತಲೇ ಇದ್ದು, ಹಠಾತ್‌ ಕಡಿದಾದ ಕಣಿವೆಗಳನ್ನು ನಿರ್ಮಿಸುತ್ತದೆ ಹಾಗೂ ಹಳದಿ ನದಿಗೆ ಆ ಹೆಸರು ಬರಲು ಕಾರಣವಾದ ಹಳದಿ ಬಣ್ಣವನ್ನು ನೀಡಿದ್ದು, ನದಿಯ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲು ಕಾರಣವಾಗಿದೆ (ಈ ಕಾರಣಕ್ಕಾಗಿಯೇ ನದಿಗೆ 'ಚೀನಾದ ಕಣ್ಣೀರ ಹೊಳೆ' ಎಂಬ ಅಡ್ಡಹೆಸರು ಬಂದಿದೆ). ಮರಗಳನ್ನು ಕಡಿದು ಹಾಕುವುದರಿಂದ ಮಣ್ಣಿನ ಸವಕಳಿ ಪ್ರಮಾಣವು ಪ್ರತಿಬಾರಿಯೂ ಹೆಚ್ಚಾಗಲೇಬೇಕೆಂದಿಲ್ಲ. ನೈಋತ್ಯ USನ ಕೆಲವು ಪ್ರದೇಶಗಳ ಹುಲ್ಲುಗಾವಲಿನಲ್ಲಿ, ಪೊದೆಗಳು ಹಾಗೂ ಮರಗಳು ಕ್ರಮೇಣ ಆಕ್ರಮಿಸಿಕೊಳ್ಳುತ್ತಿವೆ. ಎತ್ತರವಾದ ಮರಗಳ ಹೊದಿಕೆ ತಮ್ಮಷ್ಟಕ್ಕೆ ತಾವೇ ಮರಗಳ ನಡುವಿನ ಹುಲ್ಲಿನ ನಷ್ಟವನ್ನು ಹೆಚ್ಚಿಸುತ್ತವೆ. ಮರಗಳ ಹೊದಿಕೆಯ ನಡುವಿನ ಪ್ರದೇಶಗಳು ಹೆಚ್ಚಿನ ಪ್ರಮಾಣದ ಸವಕಳಿಗೆ ಒಳಗಾಗುತ್ತವೆ. ಉದಾಹರಣೆಗೆ US ಅರಣ್ಯ ಸೇವೆಯು ಬ್ಯಾಂಡೆಲಿಯೆರ್ ರಾಷ್ಟ್ರೀಯ ಸ್ಮಾರಕದಲ್ಲಿ, ಮರಗಳನ್ನು ತೆರವುಗೊಳಿಸುವ ಮುಂಚಿನ ಪರಿಸರ ವ್ಯವಸ್ಥೆಯನ್ನು ಹೇಗೆ ಮರುಸ್ಥಾಪಿಸಬಹುದು ಹಾಗೂ ಸವಕಳಿಯನ್ನು ಕಡಿಮೆ ಮಾಡಬಹುದು ಎಂಬುದರ ಕುರಿತು ಅಧ್ಯಯನ ನಡೆಸುತ್ತಿದೆ. ಮರಗಳ ಬೇರುಗಳು ಮಣ್ಣನ್ನು ಹಿಡಿದಿಡುತ್ತವೆ, ಹಾಗೂ ಹಾಗೇನಾದರೂ ಮಣ್ಣಿನ ಸಾಂದ್ರತೆ ಕಡಿಮೆಯಾದಂತೆ ಕಂಡುಬಂದರೆ ಅವುಗಳು ಆಧಾರಶಿಲೆಯ ತಳದಲ್ಲಿರುವ ಮಣ್ಣನ್ನೂ ಕೂಡ ಗಟ್ಟಿಯಾಗಿ ಹಿಡಿದಿಡುತ್ತವೆ. ಕಡಿಮೆ ಸಾಂದ್ರತೆ ಇರುವ ಮಣ್ಣು ಕಂಡುಬರುವ ತಗ್ಗು ಪ್ರದೇಶಗಳಲ್ಲಿ ಮರವನ್ನು ಕತ್ತರಿಸಿ ಹಾಕುವುದರಿಂದ ಭೂಕುಸಿತಗಳಂತಹ ಅಪಾಯ ಹೆಚ್ಚಾಗುತ್ತದೆ, ಇದರಿಂದಾಗಿ ಸಮೀಪದಲ್ಲಿ ನೆಲೆ ಕಂಡುಕೊಂಡಿರುವ ಜನರಿಗೆ ಅಪಾಯ ಉಂಟಾಗಬಹುದು. ಹಾಗಿದ್ದರೂ ಬಹಳ ಮಟ್ಟಿಗೆ ಅರಣ್ಯನಾಶವು ಬರೀ ಮರಗಳ ತೊಗಟೆಗಳ ಮೇಲೆ ಪರಿಣಾಮ ಬೀರುತ್ತವೆ, ಬೇರುಗಳನ್ನು ಹಾಗೆಯೇ ಗಟ್ಟಿಗೊಳಿಸುತ್ತವೆ, ಭೂಕುಸಿತ ಉಂಟಾಗದಂತೆ ತಡೆಹಿಡಿಯುತ್ತವೆ.

ಪರಿಸರ ವಿಜ್ಞಾನ

[ಬದಲಾಯಿಸಿ]

ಅರಣ್ಯನಾಶದಿಂದಾಗಿ ಜೀವ ವೈವಿಧ್ಯತೆ ಕ್ಷೀಣಿಸುತ್ತದೆ.[೩೯] ಅರಣ್ಯ ಪ್ರದೇಶವನ್ನು ತೆರವು ಅಥವಾ ನಾಶ ಪಡಿಸುವುದರಿಂದ ಕಡಿಮೆ ಜೀವವೈವಿಧ್ಯತೆಯನ್ನು ಹೊಂದಿರುವ ಸಡಿಲ ಪರಿಸರ ರೂಪುಗೊಳ್ಳುವಂತೆ ಮಾಡುತ್ತದೆ.[೪೦] ಅರಣ್ಯಗಳು ಜೀವ ವೈವಿಧ್ಯತೆಗಳ ಬೆನ್ನೆಲುಬಾಗಿದ್ದು, ವನ್ಯಮೃಗಗಳಿಗೆ ವಾಸಸ್ಥಾನವಾಗಿದೆ;[೪೧] ಇದೆಲ್ಲದಕ್ಕೂ ಮೀರಿ, ಅರಣ್ಯಗಳು ವೈದ್ಯಕೀಯ ಸಸ್ಯೌಷಧಗಳ ರಕ್ಷಣಾ ತಾಣವಾಗಿದೆ.[೪೨] ಇದರೊಂದಿಗೆ ಅರಣ್ಯ ಬಯೊಟೋಪ್‌ಗಳು ಹೊಸ ರೀತಿಯ ಔಷಧಗಳ ಭರಿಸಲಾಗದ ಮೂಲವಾಗಿದೆ (ಟ್ಯಾಕ್ಸಾಲ್‌ನಂತಹವು), ಅರಣ್ಯನಾಶದಿಂದ ಅನುವಂಶೀಯ ಭಿನ್ನತೆಗಳು ಕೂಡ (ಫಸಲುಗಳ ನಿರೋಧಶಕ್ತಿ) ಪರಿಹರಿಸಲಾಗದಂತೆ ಹಾಳುಮಾಡುತ್ತದೆ.[೪೩] ಉಷ್ಣವಲಯ ಮಳೆಕಾಡುಗಳು ಭೂಮಿಯಲ್ಲಿಯೇ ಅತ್ಯಂತ ಹೆಚ್ಚಿನ ಮಟ್ಟದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಹೊಂದಿರುವುದರಿಂದ [೪೪][೪೫] ಹಾಗೂ ವಿಶ್ವದ ತಿಳಿದಿರುವ ಸುಮಾರು 80%ನಷ್ಟು ಜೀವ ವೈವಿಧ್ಯತೆಯನ್ನು ಉಷ್ಣವಲಯ ಮಳೆಕಾಡುಗಳಲ್ಲಿ ಕಾಣಬಹುದಾಗಿದೆ,[೪೬][೪೭] ಅರಣ್ಯದ ಪ್ರಮುಖ ಪ್ರದೇಶಗಳನ್ನು ತೆರವು ಅಥವಾ ನಾಶಮಾಡಿರುವುದರಿಂದಾಗಿ[೪೮] ಪರಿಸರ ಹಾಳಾಗಿ ಜೀವ ವೈವಿಧ್ಯತೆ ಕ್ಷೀಣಿಸತೊಡಗಿದೆ.[೪೯] ವಿನಾಶದ ಪ್ರಕ್ರಿಯೆ ಬಗೆಗಿರುವ ವೈಜ್ಞಾನಿಕ ಅರಿವು ಅಸಮರ್ಪಕವಾಗಿದ್ದು, ಇದರಿಂದ ಭವಿಷ್ಯದಲ್ಲಿ ಅರಣ್ಯನಾಶದಿಂದ ಜೀವ ವೈವಿಧ್ಯತೆಯ ಮೇಲೆ ಆಗಬಹುದಾದ ಪರಿಣಾಮಗಳನ್ನು ನಿಖರವಾಗಿ ತಿಳಿಯಲು ಸಾಧ್ಯವಿಲ್ಲ.[೫೦] ಹಲವು ಪ್ರಭೇದಗಳು-ಪ್ರದೇಶಾವಾರು ಮಾದರಿಗಳನ್ನು ಆಧಾರವಾಗಿಟ್ಟುಕೊಂಡು, ಅರಣ್ಯ ನಾಶವಾದಂತೆಲ್ಲಾ ಪ್ರಭೇದಗಳು ವೈವಿಧ್ಯತೆ ಕೂಡ ನಾಶವಾಗುತ್ತದೆ ಎಂಬ ಅರಣ್ಯ ಸಂಬಂಧಿತ ಜೀವ ವೈವಿಧ್ಯತೆ ಅಳಿವಿನ ಕುರಿತಾದ ಎಷ್ಟೋ ಊಹೆಗಳನ್ನು ಮಾಡಲಾಗಿದೆ.[೫೧] ಹೀಗಿದ್ದರೂ, ಈ ರೀತಿಯ ಹಲವು ಮಾದರಿಗಳು ತಪ್ಪೆಂದು ಪರಿಗಣಿಸಲಾಗಿದೆ ಹಾಗೂ ವಾಸಸ್ಥಳ ನಾಶದಿಂದ ಯಾವಾಗಲೂ ದೊಡ್ಡ ಪ್ರಮಾಣದಲ್ಲಿ ತಳಿಗಳ ನಾಶ ಅಗುತ್ತವೆ ಎಂದೇನೂ ಇಲ್ಲ.[೫೧] ಅರಣ್ಯನಾಶವು ನಿರಂತರವಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಪ್ರಭೇದಗಳು-ಪ್ರದೇಶಾವಾರು ಮಾದರಿ ಬಳಸಿಕೊಂಡು ಅಳಿವಿನಂಚಿನಲ್ಲಿರುವ ತಳಿಗಳ ಸಂಖ್ಯೆಯನ್ನು ಅತಿಯಾಗಿ ಅಂದಾಜಿಸಲಾಗುತ್ತದೆ, ಹಾಗೂ ಕೆಲವು ಬಾರಿ ಬಹುತೇಕ ಕಡೆ ಹರಡಿರುವ ತಳಿಗಳನ್ನೂ ಸಹ ಅಳಿವಿನಂಚಿನಲ್ಲಿರುವ ತಳಿಗಳ ಪಟ್ಟಿಗೆ ಸೇರಿಸಲಾಗುತ್ತದೆ.[೫೦] ಮಳೆಕಾಡು ಅರಣ್ಯನಾಶದಿಂದಾಗಿ ಪ್ರತಿ ದಿನವೂ ನಾವು 137 ಸಸ್ಯ, ಪ್ರಾಣಿ ಹಾಗೂ ಕೀಟಗಳ ತಳಿಗಳನ್ನು ಕಳೆದುಕೊಳ್ಳುತ್ತೇವೆ ಎಂದು ಅಂದಾಜಿಸಲಾಗಿದ್ದು, ಇದು ವಾರ್ಷಿಕವಾಗಿ 50,000 ತಳಿಗಳಿಗೆ ಸರಿಸಮವಾಗಿದೆ.[೫೨] ಮತ್ತೆ ಕೆಲವರು ಉಷ್ಣವಲಯ ಮಳೆಕಾಡು ಅರಣ್ಯನಾಶಗಳಿಂದಾಗಿ ಮಾನವನ ನಿರಂತರವಾದ ಕೈವಾಡದಿಂದಾಗಿ ಪ್ರಭೇದಗಳು ಒಟ್ಟಿಗೇ ಹಾಲಸೀನ್‌‌ ಸಾಮೂಹಿಕ ವಿನಾಶ ಹೊಂದುತ್ತಿವೆ ಎಂದು ಹೇಳುತ್ತಾರೆ.[೫೩][೫೪] ತಿಳಿದಿರುವಂತೆ ಅರಣ್ಯನಾಶದ ಪ್ರಮಾಣದಿಂದ ಉಂಟಾಗುತ್ತಿರುವ ಅಳಿವಿನ ಪ್ರಮಾಣ ತೀರಾ ಕಡಿಮೆಯಾಗಿದ್ದು, ಸಸ್ತನಿಗಳಿಂದ ಹಾಗೂ ಪಕ್ಷಿಗಳಿಂದ ಸರಿಸುಮಾರು ವರ್ಷಕ್ಕೆ 1 ತಳಿಗಳಂತೆ ಒಟ್ಟಾರೆಯಾಗಿ ಎಲ್ಲ ತಳಿಗಳಿಂದ ಸೇರಿ ಪ್ರತಿ ವರ್ಷಕ್ಕೆ 23,000 ಪ್ರಭೇದಗಳು ನಾಶವಾಗುತ್ತಿವೆ. ಆಗ್ನೇಯ ಏಷ್ಯಾದಲ್ಲಿನ 40%ಗಿಂತಲೂ ಹೆಚ್ಚು ಪ್ರಮಾಣದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು 21ನೇ ಶತಮಾನದ ಹೊತ್ತಿಗೆ ನಾಶವಾಗುತ್ತವೆ ಎಂದು ಅಂದಾಜಿಸಲಾಗಿದೆ.[೫೫] 1995ನೇ ಇಸವಿಯಲ್ಲಿ ಪಡೆದ ದತ್ತಾಂಶದ ಅಧಾರದ ಮೇಲೆ ಈ ರೀತಿಯ ಅಂದಾಜುಗಳನ್ನು ತನಿಖೆಗೊಳಪಡಿಸಲಾಗಿದ್ದು ಆಗ್ನೇಯ ಏಷ್ಯಾದಲ್ಲಿನ ಪ್ರದೇಶಗಳಲ್ಲಿ ಇಂದು ಬಹುಪಾಲು ಪ್ರಾಕೃತಿಕ ಅರಣ್ಯವು ಸಜಾತೀಯ ನೆಡುತೋಪುಗಳಾಗಿ ಮಾರ್ಪಟ್ಟಿದೆ, ಆದರೆ ವಿನಾಶದಂಚಿಗೆ ತಲುಪಿರುವ ಪ್ರಭೇದಗಳು ಕೆಲವಿದ್ದು ಹಾಗೂ ಸಸ್ಯಕುಲಗಳು ಪ್ರಬಲಗೊಂಡು ವಿಸ್ತಾರವಾಗಿ ಹರಡಿಕೊಂಡಿವೆ.[೫೦]

ಆರ್ಥಿಕ ಪರಿಣಾಮ

[ಬದಲಾಯಿಸಿ]

ಅರಣ್ಯಗಳಿಗೆ ಹಾನಿಮಾಡುವುದು ಹಾಗೂ ನಿಸರ್ಗದ ಇನ್ನಿತರೆ ಅಂಶಗಳು ವಿಶ್ವದ ಬಡವಜೀವನ ಮಟ್ಟವನ್ನು ಅರ್ಧಕ್ಕಿಳಿಸಿ ಹಾಗೂ 2050ನೇ ಇಸವಿಯ ಹೊತ್ತಿಗೆ ಜಾಗತಿಕ GDPಯನ್ನು 7%ನಷ್ಟು ಕಡಿಮೆ ಮಾಡುತ್ತದೆ, ಎಂದು ಬೊನ್ನ್‌ನಲ್ಲಿ ನಡೆದ ಸಭೆಯಲ್ಲಿ ಜೀವಿಗಳ ವೈವಿಧ್ಯತೆಗಳ ಒಪ್ಪಂದದಲ್ಲಿ (CBD) ಪ್ರಮುಖ ವರದಿಯನ್ವಯ ನಿರ್ಣಯಕ್ಕೆ ಬರಲಾಗಿದೆ.[೫೬] ಇತಿಹಾಸದ ಕಾಲದಿಂದಲೂ ಮರಮುಟ್ಟುಗಳು ಹಾಗೂ ಉರುವಲುಗಳೂ ಸೇರಿದಂತೆ ಅರಣ್ಯದ ಉತ್ಪನ್ನಗಳನ್ನು ಬಳಕೆ ಮಾಡಲ್ಪಡುತ್ತಿದ್ದು, ಜಲ ಹಾಗೂ ಕೃಷಿ ಭೂಮಿಯ ಪಾತ್ರಗಳಿಗೆ ಹೋಲಿಸಿದರೆ ಮಾನವನ ಸಮಾಜದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇಂದು, ಅಭಿವೃದ್ದಿ ಹೊಂದಿದ ದೇಶಗಳಲ್ಲಿಯೂ ಸಹ ಮನೆ ನಿರ್ಮಾಣಕ್ಕಾಗಿ ಹಾಗೂ ಮರದಿಂದ ಬರುವ ತ್ಯಾಜ್ಯಗಳನ್ನು ಕಾಗದಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ. ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಸರಿಸುಮಾರು ಮೂರು ಶತಕೋಟಿಯಷ್ಟು ಜನ ಕಾಯಿಸುವುದಕ್ಕೆ ಹಾಗೂ ಅಡುಗೆಗಾಗಿ ಮರಗಳಿಂದ ದೊರೆಯುವ ಉರುವಲುಗಳನ್ನು ಅವಲಂಬಿಸಿದ್ದಾರೆ.[೫೭] ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಅರಣ್ಯ ಉತ್ಪನ್ನಗಳನ್ನು ಆಧರಿಸಿರುವ ಕೈಗಾರಿಕೆಗಳು ಆರ್ಥಿಕತೆಯ ದೊಡ್ಡ ಭಾಗವೇ ಆಗಿದೆ. ಅರಣ್ಯದಿಂದ ಕೃಷಿಗೆ ಮಾರ್ಪಾಟಾಗಿರುವುದು, ಅಥವಾ ಸಸ್ಯೋತ್ಪನ್ನಗಳ ದುರ್ಬಳಕೆಯಿಂದಾಗಿ ಅಲ್ಪಾವಧಿಯಲ್ಲಿ ಆರ್ಥಿಕ ಲಾಭಗಳನ್ನು ಪಡೆಯಲು ಸಫಲವಾದಂತೆ ಕಂಡರೂ, ದೀರ್ಘಾವಧಿಯಲ್ಲಿ ಆರ್ಥಿಕ ನಷ್ಟವುಂಟಾಗಿ ಜೀವಿಗಳ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಯಾಗುವಂತೆ ಮಾಡುತ್ತದೆ (ಇದರಿಂದಾಗಿಯೇ ನೈಸರ್ಗಿಕ ಸೇವೆಗಳು ಕ್ಷೀಣಿಸುತ್ತಿವೆ). ಮರಗಳ ಫಸಲು ಕ್ಷೀಣಗೊಂಡ ಪರಿಣಾಮವಾಗಿ ಪಶ್ಚಿಮ ಆಫ್ರಿಕಾ, ಮಡಗಾಸ್ಕರ್‌, ಆಗ್ನೇಯ ಏಷ್ಯಾ ಹಾಗೂ ಇನ್ನಿತರೆ ಹಲವಾರು ಪ್ರದೇಶಗಳು ಕುಸಿಯುತ್ತಿರುವ ವರಮಾನದ ಅನುಭವ ಪಡೆದಿವೆ. ಅಕ್ರಮವಾಗಿ ಮರ ಕಡಿಯುತ್ತಿರುವುದರಿಂದ ಪ್ರತಿ ವರ್ಷವೂ ರಾಷ್ಟ್ರೀಯ ಆರ್ಥಿಕತೆಗಳಿಗೆ ಶತಕೋಟಿಗಳಷ್ಟು ಡಾಲರ್‌ಗಳು ನಷ್ಟ ಸಂಭವಿಸುತ್ತಿದೆ.[೫೮] ಮರಮುಟ್ಟುಗಳನ್ನು ಪಡೆಯಲು ಮಾಡಿರುವ ಹೊಸ ರೀತಿಯ ನಿಯಮಗಳು ಆರ್ಥಿಕತೆಯ ಮೇಲೆ ಮತ್ತಷ್ಟು ಹಾನಿ ಸಂಭವಿಸುವಂತೆ ಮಾಡಿವೆ ಹಾಗೂ ಮರಕತ್ತರಿಸುವ ಜನರ ಮೇಲೆ ದುಡ್ಡನ್ನು ವ್ಯಯಿಸುತ್ತಿರುವ ಪ್ರಮಾಣ ಮತ್ತಷ್ಟು ಹೆಚ್ಚಿದೆ.[೫೯] ಅಧ್ಯಯನವೊಂದರ ಪ್ರಕಾರ, "ಅಧ್ಯಯನ ನಡೆಸಿದ ಎಷ್ಟೋ ಪ್ರದೇಶಗಳಲ್ಲಿ, ಅರಣ್ಯನಾಶಕ್ಕೆ ಬೆಂಬಲ ಸೂಚಿಸುತ್ತಿರುವ ಹಲವಾರು ಸಂಸ್ಥೆಗಳು ಇಂಗಾಲದ ಪ್ರತಿ ಟನ್‌ನ ಬಳಕೆಗೆ US$5ಗೂ ಹೆಚ್ಚಿನ ಲಾಭವನ್ನು ಅಪರೂಪವಾಗಿ ಮಾತ್ರವೇ ಪಡೆಯುತ್ತಿದ್ದು, ಹೆಚ್ಚು ಸಾಮಾನ್ಯವಾಗಿ US$1ಗೂ ಕಡಿಮೆ ಲಾಭವನ್ನು ಪಡೆಯುತ್ತಿವೆ". ಐರೋಪ್ಯ ಮಾರುಕಟ್ಟೆಯಲ್ಲಿ ಒಂದು ಟನ್‌ ಇಂಗಾಲವನ್ನು ಕಡಿಮೆಮಾಡಲು 23 ಯೂರೊಗಳನ್ನು (ಸುಮಾರು US$35) ವ್ಯಯಿಸಬೇಕು.[೬೦]

ಐತಿಹಾಸಿಕ ಕಾರಣಗಳು

[ಬದಲಾಯಿಸಿ]

ಪ್ರಾಚೀನತೆ

[ಬದಲಾಯಿಸಿ]

ನಾಗರೀಕತೆ ಪ್ರಾರಂಭ ಆಗುವುದಕ್ಕೂ ಹತ್ತು ಹಲವು ಸಾವಿರ ವರ್ಷಗಳ ಮುಂಚಿನಿಂದಲೇ ಕೆಲವು ಸಮಾಜದಲ್ಲಿ ಸಣ್ಣ ಪ್ರಮಾಣದ ಅರಣ್ಯನಾಶವು ನಡೆಯುತ್ತಿತ್ತು.[೬೧] ಅರಣ್ಯನಾಶದ ಪ್ರಥಮ ಆಧಾರವು ಮಧ್ಯಶಿಲಾಯುಗ ಕಾಲದಲ್ಲಿ ಕಂಡುಬಂದಿತು.[೬೨] ದಟ್ಟ ಅರಣ್ಯಗಳನ್ನು ತೆರವುಗೊಳಿಸಿ ಬಲಿ ಪ್ರಾಣಿಗಳಿಗೆ ಅನುಕೂಲವಾಗುವಂತೆ ತೆರೆದ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ಇದನ್ನು ಮಾಡಿರಬಹುದು.[೬೧] ಕೃಷಿ ಪ್ರಾರಂಭವಾದ ನಂತರ, ದೊಡ್ಡ ಪ್ರಮಾಣದಲ್ಲಿ ಅರಣ್ಯಪ್ರದೇಶಗಳನ್ನು ನಾಶಮಾಡಲಾಗುತ್ತಿದೆ, ಹಾಗೂ ಅದಕ್ಕೆ ಬೆಂಕಿಯನ್ನು ಪ್ರಮುಖ ಮೂಲವಾಗಿ ಬಳಸಿಕೊಂಡು ಭೂಪ್ರದೇಶಗಳನ್ನು ತೆರವುಗೊಳಿಸಿ ಬೆಳೆಗಳಿಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಯುರೋಪಿನಲ್ಲಿ 7000 BCಗೂ ಮುಂಚಿನ ಪುರಾವೆಗಳೂ ಸರಿಯಾಗಿ ಸಿಕ್ಕಿಲ್ಲ. ಮಧ್ಯಶಿಲಾಯುಗದ ಅನ್ವೇಷಕರು ಬೆಂಕಿಯನ್ನು ಬಳಸಿಕೊಂಡು ಕೆಂಪು ಜಿಂಕೆ ಹಾಗೂ ಕಾಡು ಹಂದಿಗಳಿಗೆ ಜಾಗವನ್ನು ನಿರ್ಮಿಸುತ್ತಿದ್ದಾರೆ. ಗ್ರೇಟ್ ಬ್ರಿಟನ್‌ನಲ್ಲಿ, ಕಾರಿಲಸ್ ಕುಲದ, ರೂಬಸ್ ಕುಲದ, ಹುಲ್ಲುಗಳು ಹಾಗೂ ಕುಟುಕು ಕುಲದ ಗಿಡಗಳು ನೆರಳು-ಸಹಿಷ್ಣು ತಳಿಗಳಾದ ಓಕ್ ಹಾಗೂ ಆಷ್‌ಗಳನ್ನು ಪರಾಗಧೂಳಿನ ಹರಡುವಿಕೆಯ ಮೂಲಕ ತೆಗೆದುಹಾಕಿವೆ. ಅರಣ್ಯಗಳನ್ನು ತೆರವುಗೊಳಿಸುವುದರಿಂದ ಬಾಷ್ಪ ವಿಸರ್ಜನೆಯ ಪ್ರಮಾಣ ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ಒಳನಾಡುಗಳು ಜವುಗು ಪ್ರದೇಶಗಳಾಗಿ ಮಾರ್ಪಾಟಾಗುತ್ತಿವೆ. ನವಶಿಲಾಯುಗದಲ್ಲಿ ಕೃಷಿಗಾಗಿ ಭೂಮಿಗಾಗಿ ಅರಣ್ಯಪ್ರದೇಶವನ್ನು ಬೆಂಕಿಯಿಂದ ನಾಶಪಡಿಸಿದ್ದರ ಪರಿಣಾಮವಾಗಿ 8400-8300 BC ಹಾಗೂ 7200-7000 BC ಸಮಯದಲ್ಲಿ ಯುರೋಪಿನಾದ್ಯಂತ ಎಲ್ಮ್‌ ಮರಪರಾಗಗಳು ಕ್ಷೀಣಿಸತೊಡಗಿದವು ದಕ್ಷಿಣ ಯುರೋಪಿನಲ್ಲಿ ಆರಂಭವಾದ ಇದು ಉತ್ತರದಲ್ಲಿರುವ ಗ್ರೇಟ್ ಬ್ರಿಟನ್‌ಗೂ ಹಬ್ಬಿತು.

ಕಡಗಗಳು, ಕೊಡಲಿಗಳು, ಚಾಣಗಳು, ಹಾಗೂ ಹೊಳಪು ನೀಡುವ ಉಪಕರಣಗಳು ಸೇರಿಂತೆ ಮಾನವನಿರ್ಮಿತ ವಸ್ತುಗಳು ನವಶಿಲಾಯುಗದ ಪುರಾವೆಗಳು ಸಿಕ್ಕಿವೆ.

ನವಶಿಲಾಯುಗದ ಸಮಯದಲ್ಲಿ ಕೃಷಿ ಭೂಮಿಗಾಗಿ ತೀವ್ರಗತಿಯಲ್ಲಿ ಅರಣ್ಯವನ್ನು ನಾಶಮಾಡಲಾಯಿತು.[೬೩][೬೪] ಸರಿಸುಮಾರು 3000 BCಯ ಸಮಯದಲ್ಲಿ ಕೇವಲ ಫ್ಲಿಂಟ್‌ನಿಂದಲ್ಲದೇ ಬ್ರಿಟನ್‌ ಹಾಗೂ ಉತ್ತರ ಅಮೇರಿಕಾದಾದ್ಯಂತ ದೊರಕುವ ಗಟ್ಟಿಶಿಲೆಗಳನ್ನು ಬಳಸಿಕೊಂಡು ಕಲ್ಲಿನ ಕೊಡಲಿಗಳನ್ನು ಮಾಡಲಾಯಿತು. ಅವುಗಳಲ್ಲಿ ಇಂಗ್ಲೀಷ್‌ ಲೇಕ್‌ ಜಿಲ್ಲೆಯಲ್ಲಿನ ಲಾಂಗ್‌ಡೇಲ್‌ ಕೊಡಲಿಯ ಕೈಗಾರಿಕೆ ಸೇರಿದಂತೆ, ಉತ್ತರ ವೇಲ್ಸ್‌ಪೆನ್ಮೆನ್ಮಾರ್‌ನಲ್ಲಿ ಹಾಗೂ ಇನ್ನಿತರೆ ಹಲವು ಜಾಗಗಳಲ್ಲಿ ಕ್ವಾರಿಗಳು ಪ್ರಾರಂಭವಾದವು. ಅವುಗಳ ಅಪರಿಷ್ಕೃತ ರೀತಿಯನ್ನು ಕ್ವಾರಿಗಳ ಬಳಿಯಲ್ಲಿ ತಯಾರು ಮಾಡಿ, ಕೆಲವಕ್ಕೆ ಸ್ಥಳೀಯವಾಗಿ ಸರಿಯಾದ ರೂಪ ಕೊಡಲಾಗುತ್ತದೆ. ಈ ಹಂತದಿಂದ ಕೇವಲ ಕೊಡಲಿಯ ಯಾಂತ್ರಿಕ ಬಲ ಹೆಚ್ಚುವುದಲ್ಲದೆ ಮರಗಳ ಒಳಹೊಕ್ಕುವಿಕೆಯನ್ನೂ ಸಹ ಸುಲಭಗೊಳಿಸುತ್ತದೆ. ಇಂದಿಗೂ ಫ್ಲಿಂಟ್ ಕಲ್ಲನ್ನು ಅವುಗಳ ಮೂಲವಾದ ಗ್ರೈಂ ಗ್ರೇವ್ಸ್‌ನಿಂದ/ಹಾಳಾದ ಸ್ಮಶಾನಗಳಿಂದ ಹಾಗೂ ಯುರೋಪಿನಾದ್ಯಂತ ಇರುವ ಹಲವು ಗಣಿಗಳಿಂದ ಪಡೆಯಲಾಗುತ್ತಿದೆ. ಮಿನೋವನ್ ಕ್ರೀಟ್‌ನಲ್ಲಿ ಕೂಡ ಅರಣ್ಯನಾಶವಾದ ಆಧಾರ ದೊರಕಿದೆ; ಉದಾಹರಣೆಗೆ ನಾಸಸ್ಸ್‌ನ ಅರಮನೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ ಅರಣ್ಯವನ್ನು ಕಂಚಿನ ಯುಗದಲ್ಲಿಯೇ ನಾಶಪಡಿಸಲಾಗಿದೆ.[೬೫]

ಕೈಗಾರಿಕೆಗಳ ಆರಂಭಕ್ಕೂ ಮುಂಚಿನ ಇತಿಹಾಸ

[ಬದಲಾಯಿಸಿ]

ಇತಿಹಾಸದ ಉದ್ದಕ್ಕೂ, ಮಾನವರು ಗುಂಪು ಬೇಟೆಗಾರರಾಗಿದ್ದು ಅರಣ್ಯಗಳ ಪರಿಮಿತಿಯಲ್ಲಿಯೇ ಬೇಟೆಗಳನ್ನಾಡುತ್ತಿದ್ದವರು. ಅಮೇಜಾನ್, ಉಷ್ಣವಲಯ, ಮಧ್ಯ ಅಮೇರಿಕಾ, ಹಾಗೂ ಕೆರಿಬಿಯನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ,[೬೬] ಮರಮುಟ್ಟುಗಳ ಹಾಗೂ ಇತರೆ ಅರಣ್ಯ ಉತ್ಪಾದನೆಗಳ ಕೊರತೆ ಉಂಟಾದ ನಂತರವಷ್ಟೆ ಅರಣ್ಯ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಕಾನೂನು ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೊನೆಯ ಹಂತದ ನವಶಿಲಾಯುಗದಿಂದ ಆರಂಭಿಕ ಕಂಚಿನ ಯುಗದ 500-1,000 ವರ್ಷಗಳ ಅಂತರದಲ್ಲಿ ಪ್ರಮುಖವಾದ ಸವಕಳಿ ನಡೆದಿರುವುದಕ್ಕೆ ಸರಿಯಾದ ಪುರಾವೆಗಳು ದೊರಕಿದ್ದು ಐತಿಹಾಸಿಕ ಸವಕಳಿಯಿಂದಾಗಿಯೇ ಗ್ರೀಸ್‌ನ ಹಲವಾರು ಪ್ರದೇಶಗಳಲ್ಲಿ ಮೆಕ್ಕಲು ಮಣ್ಣು ಶೇಖರಣೆ ಆಗಿ ಕೃಷಿ ಆರಂಭವಾಗಿತ್ತು ಎಂದು ಮೂರು ಸ್ಥಳೀಯ ಅಧ್ಯಯನಗಳು ತಿಳಿಸಿವೆ ಎಂಬುದನ್ನು ಪುರಾತನ ಗ್ರೀಸ್‌ನ, ಜೀರೆಡ್ ವಾನ್ ಅಂದೆಲ್ ಹಾಗೂ ಸಹಲೇಖಕರು[೬೭] ಉಲ್ಲೇಖಿಸುತ್ತಾರೆ. BCE ಪ್ರಥಮ ಶತಮಾನದ ಮಧ್ಯದಿಂದ ಸಾವಿರಾರು ವರ್ಷಗಳು ಹಲವಾರು ಸ್ಥಳಗಳಲ್ಲಿ ಅನುಕ್ರಮವಾಗಿ ತೀವ್ರರೀತಿಯಲ್ಲಿ ಮರುಕಳಿಸುವ ನಿರಂತರ ಕ್ರಮಬದ್ಧ ಸ್ಪಂದನಗಳಂತೆ ಮಣ್ಣಿನ ಸವಕಳಿಯನ್ನು ಗಮನಿಸಲಾಗಿದೆ. ಏಷ್ಯಾದ ದಕ್ಷಿಣ ಕರಾವಳಿ ಹಾಗೂ ಸಿರಿಯಾದ ಕರಾವಳಿ ಪ್ರದೇಶಗಳಲ್ಲಿ BCಯ ಅಂತ್ಯದ ಶತಮಾನಗಳಲ್ಲಿ (e.g. ಕ್ಲಾರಸ್, ಹಾಗೂ ಉದಾಹರಣೆಗಳಾದ ಎಫೆಸಸ್, ಪ್ರೈನ್ ಹಾಗೂ ಮಿಲೆಟಸ್‌ಗಳಲ್ಲಿ, ಅಂಕುಡೊಂಕಾದ ಹಾದಿಗಳಲ್ಲಿ ಹೂಳು ತುಂಬಿದ್ದರಿಂದಾಗಿ ಬಂದರುಗಳನ್ನು ತೆರವುಗೊಳಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು) ಬಂದರುಗಳಲ್ಲಿ ಐತಿಹಾಸಿಕ ಹೂಳು ತುಂಬುವಂತಹ ಪ್ರಕ್ರಿಯೆ ಉಂಟಾಗಿದೆ. ಇತ್ತೀಚಿನ ಶತಮಾನಗಳಲ್ಲಿ ಈಸ್ಟರ್ ದ್ವೀಪವು ಕೃಷಿ ಹಾಗೂ ಅರಣ್ಯನಾಶ ಪ್ರಕ್ರಿಯೆಗಳಿಂದ ದೊಡ್ಡ ಪ್ರಮಾಣದ ಮಣ್ಣಿನ ಸವಕಳಿ ವಿಕೋಪಕ್ಕೆ ತುತ್ತಾಗಿದೆ.[೬೮] ಜೇರಡ್ ಡೈಮಂಡ್ ತನ್ನ ಕೊಲ್ಯಾಪ್ಸ್‌ ಪುಸ್ತಕದಲ್ಲಿ ಪುರಾತನ ಈಸ್ಟರ್ ದ್ವೀಪದ ನಿವಾಸಿಗಳ ಅವನತಿಯ ಬಗ್ಗೆ ವಿಸ್ತಾರವಾಗಿ ಬೆಳಕು ಚೆಲ್ಲುತ್ತಾರೆ. ಒಂದೇ ಸಮಯದಲ್ಲಿ ಅಂದರೆ 17ನೇ ಹಾಗೂ 18ನೇ ಶತಮಾನದ ಆಸುಪಾಸಿನಲ್ಲಿ ದ್ವೀಪದಲ್ಲಿದ್ದ ಮರಗಳು ಕಣ್ಮರೆಯಾಗಿ ಅಲ್ಲಿನ ನಾಗರೀಕತೆ ನಾಶವಾಯಿತು. ಅರಣ್ಯನಾಶ ಹಾಗೂ ಅರಣ್ಯದ ಎಲ್ಲ ಸಂಪನ್ಮೂಲಗಳ ದುರ್ಬಳಕೆಯೇ ಇದಕ್ಕೆಲ್ಲಾ ಕಾರಣ ಎಂಬ ಆರೋಪ ಹೊರಿಸಿದ್ದಾರೆ.[೬೯][೭೦] ಬ್ರೂಗ್ಸ್‌ನ ಬಂದರು ಪ್ರದೇಶಗಳಲ್ಲಿ ಹೂಳು ತುಂಬುವುದು ಪ್ರಸಿದ್ಧವಾಗಿದ್ದು, ಇದರಿಂದಾಗಿ ವಾಣಿಜ್ಯ ಬಂದರನ್ನು ಆಂಟ್‌ವೆರ್ಪ್‌ಗೆ ಸ್ಥಳಾಂತರ ಮಾಡಿದರು, ಇದರೊಂದಿಗೆ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮತ್ತಷ್ಟು ಹೆಚ್ಚಾದ ಜನವಸತಿಗಳು (ಹಾಗೂ ಸ್ಪಷ್ಟವಾಗಿ ಅರಣ್ಯನಾಶ) ಆರಂಭವಾಯಿತು. ಮಧ್ಯಯುಗದ ಆರಂಭದಲ್ಲಿ ರಿಯೇಜ್‌ನ ಎತ್ತರದ ಪ್ರಾಂತ್ಯಗಳಲ್ಲಿ, ಎರಡು ಸಣ್ಣ ನದಿಗಳಿಂದ ಬಂದ ಮೆಕ್ಕಲು ಮಣ್ಣು ನದೀಪಾತ್ರಗಳನ್ನು ಮತ್ತಷ್ಟು ಎತ್ತರವನ್ನಾಗಿಸಿ ಪ್ರವಾಹದ ಪ್ರದೇಶಗಳನ್ನು ವಿಸ್ತಾರವಾಗುವಂತೆ ಮಾಡಿತು, ಇದು ನಿಧಾನವಾಗಿ ರೋಮನ್ನರ ವಸಾಹತನ್ನು ಮೆಕ್ಕಲಿನಲ್ಲಿ ಮುಳುಗುವಂತೆ ಮಾಡಿದಲ್ಲದೇ ಎತ್ತರ ಪ್ರದೇಶಗಳಲ್ಲಿ ನಡೆಯುತ್ತಿದ್ದ ನಿರ್ಮಾಣಗಳತ್ತ ಸಾಗಿತು; ಇದರ ಜೊತೆಗೆ ರಿಯೇಜ್‌ನ ಮೇಲ್ಭಾಗದಲ್ಲಿ ಮೂಲತೊರೆಗಳ ಕಣಿವೆಗಳನ್ನು ದನಗಳ ಮೇವಿಗಾಗಿ ತೆರವು ಮಾಡಲಾಯಿತು.[ಸೂಕ್ತ ಉಲ್ಲೇಖನ ಬೇಕು] ಅರಣ್ಯವನ್ನುನಾಶ ಮಾಡಿ ಆ ಪ್ರದೇಶಗಳಲ್ಲಿ ಪ್ರಗತಿಯ ಸುಳಿಯಲ್ಲಿ ನಗರಗಳನ್ನು ನಿರ್ಮಿಸಲಾಯಿತು, ಇದು ಕೆಲವು ಕೈಗಾರಿಕೆಗಳಿಗೆ ಮರಮುಟ್ಟುಗಳನ್ನು ಸಹ ನೀಡಿತು (e.g. ನಿರ್ಮಾಣ, ಹಡಗುನಿರ್ಮಾಣ, ಕುಂಬಾರಿಕೆ). ಸರಿಯಾದ ರೀತಿಯಲ್ಲಿ ಸಸಿಗಳನ್ನು ನೆಡದೆ ಅರಣ್ಯವನ್ನು ನಾಶಮಾಡಿದರ ಪರಿಣಾಮವಾಗಿ ಸಮೀಪ ಪ್ರದೇಶಗಳಲ್ಲಿ ಮರಮುಟ್ಟುಗಳು ದೊರಕುವುದೇ ಪ್ರಯಾಸದ ಕೆಲಸವಾಗಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಬಹಳಷ್ಟು ಕಷ್ಟವಾಯಿತು, ಇದರಿಂದಾಗಿ ಪುರಾತನ ಏಷ್ಯಾ ಮೈನರ್‌‌ನ ಕೆಲವೆಡೆಗಳಲ್ಲಿ ಮೇಲೆ ಮೇಲೆ ಆದಂತೆಯೇ ನಗರವನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಿಸಿತು. ಉರುವಲುಗಳು, ಗಣಿಗಾರಿಕೆ ಹಾಗೂ ಲೋಹವಿಜ್ಞಾನಗಳ ಅಗತ್ಯತೆಗಳು ಅರಣ್ಯನಾಶಕ್ಕೆ ದಾರಿಯಾಗಿ ನಗರವನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.[ಸೂಕ್ತ ಉಲ್ಲೇಖನ ಬೇಕು] ಜನರು ಕೃಷಿ ವಲಯದಲ್ಲಿ ಇನ್ನೂ ಚಟುವಟಿಕೆಗಳಲ್ಲಿ ನಿರತರಾಗಿರುವಂತೆಯೇ (ಅಥವಾ ಪರೋಕ್ಷವಾಗಿ ಅದನ್ನು ಅವಲಂಬಿಸಿರುವಂತೆ) ಹಲವು ಪ್ರದೇಶಗಳಲ್ಲಿ ಉದ್ಭವಿಸಿದ ಒತ್ತಡಗಳು ಬೆಳೆಗಳಿಗಾಗಿ ಹಾಗೂ ಪಶು ಸಂಗೋಪನೆಗಾಗಿ ಭೂಮಿಯನ್ನು ತೆರವುಗೊಳಿಸುವಂತೆ ಮಾಡಿತು. ಸಾಕಷ್ಟು ಕಾಡಿನ ಮರಗಿಡಗಳನ್ನು (ಹಾಗೂ ಭಾಗಶಃ ಮಾತ್ರವೇ ಬಳಸಿಕೊಳ್ಳಲಾಗುತ್ತಿತ್ತು, e.g. ಉರುವಲುಗಳನ್ನು ಸಂಗ್ರಹಿಸಲು, ಮರದ ದಿಮ್ಮಿಗಳು ಹಾಗೂ ಹಣ್ಣುಗಳು, ಅಥವಾ ಹಂದಿಗಳನ್ನು ಮೇಯಿಸಲು) ಕಾಡುಪ್ರಾಣಿಗಳು ಜೀವಿಸಲು ಅನುಕೂಲವಾಗುವಂತೆ ಬಿಟ್ಟರು. ಶ್ರೀಮಂತರ (ಅಂತಸ್ತಿನ ಮಂದಿ ಹಾಗೂ ಉನ್ನತ ಪಾದ್ರಿಗಳು) ತಮ್ಮ ಹಿತಾಸಕ್ತಿಗಾಗಿ ಬೇಟೆಯಂತಹ ಅವಕಾಶಗಳನ್ನು ಉಳಿಸಿಕೊಳ್ಳಲು ಹಾಗೂ ಬೇಟೆಯಾಡಲು ಮರಗಳಿಂದ ಆವೃತವಾಗಿರುವ ಗಮನಾರ್ಹ ಪ್ರಮಾಣದ ಭೂಮಿಯನ್ನು ಹಾಗೆಯೇ ಉಳಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು] ಪ್ರಮುಖ ಭಾಗಗಳಲ್ಲಿ ಹರಡಿದ (ಹಾಗೂ ಇದರಿಂದಾಗಿ ಮತ್ತಷ್ಟು ಬೆಳವಣಿಗೆ ಹೊಂದಿ) ಜನಸಂಖ್ಯೆ ಅದರಲ್ಲಿಯೂ ಸನ್ಯಾಸಿಗಳು ಇದರಲ್ಲಿ 'ಮೊದಲಿಗ'ರಾದರು (ಅದರಲ್ಲಿಯೂ ಪ್ರಮುಖವಾಗಿ ಬೆನೆಡಿಕ್ಟೀನ್ ಹಾಗೂ ವಾಣಿಜ್ಯ ಬೇಡಿಕೆಗಳು) ಹಾಗೂ ರೈತರಿಗೆ ಉತ್ತಮ ರೀತಿಯ ಕಾನೂನು ಹಾಗೂ ಹಣದ ಸಹಾಯವನ್ನು ಒದಗಿಸುವುದಾಗಿ ಹೇಳಿ ಕೆಲವು ಜಮೀನ್ದಾರರು ರೈತರನ್ನು (ಹಾಗೂ ತೆರಿಗೆಗಳನ್ನು ಕಟ್ಟಲಾಗುವಂತೆ) ತಮ್ಮ ಕೆಲಸ ಮಾಡಿಕೊಳ್ಳಲು ಅವರನ್ನು ಅಲ್ಲಿಯೇ ನೆಲೆಸುವಂತೆ ಮಾಡಿದರು. ಚಿಂತಕರು ಪಟ್ಟಣಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರೂ, ಅಲ್ಲಿ ನೆಲೆಸಿದವರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಥವಾ ಕೆಲವು ಬಾರಿ ರಕ್ಷಣಾ ಗೋಡೆಗಳ ಒಳಗೆ ಕೃಷಿವಲಯವನ್ನು ಹೊಂದಲು ಅಪೇಕ್ಷಿಸುತ್ತಿದ್ದರು. ಪ್ಲೇಗುಮಾರಿ ಅಥವಾ ವಿನಾಶಕಾರಿ ಯುದ್ಧಗಳಿಂದಾಗಿ (e.g. ಪೂರ್ವ ಹಾಗೂ ಮಧ್ಯ ಯುರೋಪಿನ ಮಧ್ಯೆ ಚೆಂಘೀಸ್ ಖಾನ್‌ಮಂಗೋಲಿಯಾ ಪಂಗಡಕ್ಕಾಗಿ, ಜರ್ಮನಿಯಲ್ಲಿ ನಡೆದ ಮೂವತ್ತು ವರ್ಷಗಳ ಕದನ) ಜನಸಂಖ್ಯೆ ಬಹುಬೇಗ ಕಡಿಮೆಯಾಗತೊಡಗಿತು, ಇದರಿಂದ ವಾಸಸ್ಥಾನಗಳು ಬರಿದಾಗತೊಡಗಿದವು. ನಿಸರ್ಗವು ಭೂಮಿಯನ್ನು ಮರುಪಡೆದುಕೊಂಡರೂ ದ್ವಿತೀಯ ಹಂತದ ಅರಣ್ಯಗಳು ಮೂಲ ಜೀವವೈವಿಧ್ಯತೆಯನ್ನು ಕಳೆದುಕೊಂಡವು. ಪಶ್ಚಿಮ ಯುರೋಪ್‌ನ ಕೆಲವು ಭಾಗಗಳಲ್ಲಿ 1100ನೇ ಇಸವಿಯಿಂದ 1500 ADಯ ವರೆಗೆ, ನಡೆದ ಜನಸಂಖ್ಯಾ ಹೆಚ್ಚಳ ಅತಿಯಾದ ಅರಣ್ಯನಾಶವು ಮತ್ತಷ್ಟು ಹರಡಲು ಕಾರಣವಾಯಿತು. ಐರೋಪ್ಯ (ಕರಾವಳಿ) ನೌಕೆಗಳ ಮಾಲೀಕರು 15ನೇ ಶತಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಮರದ ಹಾಯಿದೋಣಿಗಳನ್ನು ನಿರ್ಮಿಸಿ ಪರ್ಯಟನೆ, ವಸಾಹತೀಕರಣ, ಗುಲಾಮರ ವ್ಯಾಪಾರ – ಹಾಗೂ ಇನ್ನಿತರೆ ವ್ಯಾಪಾರಗಳಿಗೆ ಸಾಗರದಾಚೆಗೆ ಪ್ರಯಾಣಿಸಲು ಅನುಕೂಲವಾಗುವಂತೆ ಹಲವಾರು ಅರಣ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಯಿತು. ಸ್ಪೇಯ್ನ್‌ನಲ್ಲಿ ಆದಂತೆಯೇ ದರೋಡೆಗಳೂ ಕೂಡ ಅರಣ್ಯಗಳ ನಾಶಕ್ಕೆ ದಾರಿಯಾಯಿತು. ಆರ್ಥಿಕತೆಯು ವಸಾಹತುಗಳ ಚಟುವಟಿಕೆಗಳನ್ನು (ಲೂಟಿ, ಗಣಿಗಾರಿಕೆ, ಪಶು, ನೆಡುತೋಪುಗಳು, ವ್ಯಾಪಾರ, ಇತರೆ.) ಅವಲಂಬಿಸಿದ್ಧರಿಂದಾಗಿ ಕೊಲಂಬಸ್‌ ಅಮೇರಿಕಾ ಕಂಡುಹಿಡಿದ ನಂತರ ಇದು ಸ್ಥಳೀಯ ಆರ್ಥಿಕತೆಯನ್ನು ಕುಗ್ಗಿಸಿತು[ಸೂಕ್ತ ಉಲ್ಲೇಖನ ಬೇಕು] ಚೇಂಜಸ್‌ ಇನ್ ದಿ ಲ್ಯಾಂಡ್‌ (1983) ಎಂಬ ಪುಸ್ತಕದಲ್ಲಿ ವಿಲಿಯಂ ಕ್ರೊನನ್‌‌, 17ನೇ-ಶತಮಾನದ ಆಂಗ್ಲ ವಸಾಹತುದಾರರ ಹೊಸ ಇಂಗ್ಲೆಂಡ್‌ನಲ್ಲಿ ಆಗ ತಾನೆ ನೆಲೆನಿಂತವರು ಕೃಷಿಗಾಗಿ ಅರಣ್ಯಗಳನ್ನು ತೆರವುಗೊಳಿಸಿದ್ದರ ಪರಿಣಾಮ ನೆರೆ ಹೆಚ್ಚಾದ ಬಗ್ಗೆ ವಿಶ್ಲೇಷಿಸಿದ್ದು ಅದಕ್ಕೆ ಸಂಬಂಧಿಸಿದ ವರದಿಗಳನ್ನು ಉಲ್ಲೇಖಿಸಿದರು. ಪ್ರವಾಹಕ್ಕೆ ತಡೆಯೊಡುತ್ತಿರುವ ಅರಣ್ಯವನ್ನು ತೆರವುಗೊಳಿಸುತ್ತಿರುವುದಕ್ಕೂ ಹಾಗೂ ನೆರೆಹಾವಳಿಗೂ ಸಂಬಂಧ ಇದೆ ಎಂಬುದನ್ನು ಅವರು ನಂಬಿದ್ದರು. ಆಧುನಿಕ ಯುರೋಪಿನ ಆರಂಭದಲ್ಲಿ ಕೈಗಾರಿಕೆಗಳಿಗಾಗಿ ಕಲ್ಲಿದ್ದಲಿನ ಅತಿಯಾದ ಬಳಕೆ ಹೊಸ ರೀತಿಯಲ್ಲಿ ಪಾಶ್ಚಿಮಾತ್ಯ ಅರಣ್ಯಗಳನ್ನು ಆಹುತಿ ತೆಗೆದುಕೊಂಡವು; ಇಂಗ್ಲೆಂಡಿನ ಸ್ಟುವರ್ಟ್‌ನಲ್ಲಿ ಕೂಡ, ಕಲ್ಲಿದ್ದಲಿನ ಪುರಾತನ ರೀತಿಯ ಉತ್ಪಾದನೆ ಗಮನಾರ್ಹ ಹಂತಕ್ಕೆ ತಲುಪಿತು. ಇಂಗ್ಲೆಂಡಿನ ಸ್ಟಾರ್ಟ್‌ನಲ್ಲಿನ ಅರಣ್ಯ ಪ್ರದೇಶಗಳು ಯಾವ ರೀತಿಯಲ್ಲಿ ನಾಶಕ್ಕೊಳಗಾದವೆಂದರೆ ಅದರಿಂದಾಗಿ ಹಡಗುಗಳ ನಿರ್ಮಾಣಕ್ಕಾಗಿ ಅವರು ಬಾಲ್ಟಿಕ್ ವ್ಯಾಪಾರವನ್ನು ಅವಲಂಬಿಸಿದರು, ಹಾಗೂ ಹೊಸ ಇಂಗ್ಲೆಂಡ್‌ನ ಹೊರಸೆಳೆಯದ ಅರಣ್ಯಗಳನ್ನು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಕೆ ಮಾಡಿಕೊಂಡವು. ಟ್ರಾಫ್ಲಾಗರ್‌ನಲ್ಲಿನ (1805) ನೆಲ್ಸನ್‌ರ ಪ್ರತಿಯೊಂದು ರಾಯಲ್ ನೇವಿ ಯುದ್ಧ ನೌಕೆಗಳ ನಿರ್ಮಾಣಕ್ಕಾಗಿ ಸಂಪೂರ್ಣವಾಗಿ ಬಲಿತ 6,000 ಓಕ್ ಮರಗಳನ್ನು ಬಳಸಿಕೊಂಡಿತು. ಫ್ರಾನ್ಸ್‌ನಲ್ಲಿ, ಭವಿಷ್ಯದಲ್ಲಿ ಫ್ರೆಂಚ್ ನೌಕಾದಳಕ್ಕೆ ಓಕ್ ಮರಗಳನ್ನು ಪೂರೈಸುವ ಸಲುವಾಗಿ ಕೊಲ್ಬೆರ್ಟ್ ಓಕ್ ನೆಡುತೋಪುಗಳನ್ನು ಸಸಿಗಳನ್ನು ನೆಟ್ಟನು. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಅವುಗಳು ಸಂಪೂರ್ಣವಾಗಿ ಬಲಿತನಂತರ, ಆದರೆ ಹಡಗಿನ ನಿರ್ಮಾಣದ ರೀತಿಯಲ್ಲಿ ಬದಲಾವಣೆ ಆದುದರಿಂದ ಅವುಗಳನ್ನು ಹಾಗೆಯೇ ಉಳಿಸಲಾಯಿತು. ಮಧ್ಯಯುಗದ ಅಂತ್ಯದಲ್ಲಿ ನಡೆದ ಅರಣ್ಯನಾಶದಿಂದ ಉಂಟಾದ ಪರಿಣಾಮಗಳನ್ನು ಕುರಿತು ಬರೆದ ನಾರ್ಮನ್ F. ಕ್ಯಾಂಟರ್‌ರ ಸಾರಾಂಶ ಆಧುನಿಕ ಯುರೋಪ್‌ನ ಆರಂಭಿಕ ಸಮಯಕ್ಕೂ ಅನ್ವಯಿಸುತ್ತದೆ:[೭೧]

Europeans had lived in the midst of vast forests throughout the earlier medieval centuries. After 1250 they became so skilled at deforestation that by 1500 they were running short of wood for heating and cooking. They were faced with a nutritional decline because of the elimination of the generous supply of wild game that had inhabited the now-disappearing forests, which throughout medieval times had provided the staple of their carnivorous high-protein diet. By 1500 Europe was on the edge of a fuel and nutritional disaster [from] which it was saved in the sixteenth century only by the burning of soft coal and the cultivation of potatoes and maize.

ಕೈಗಾರಿಕಾ ಯುಗ

[ಬದಲಾಯಿಸಿ]

19ನೇ ಶತಮಾನದಲ್ಲಿ, ಉಗಿದೋಣಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಗಿದೋಣಿ/ಸ್ಟೀಮ್‌ಬೋಟ್‌ಗಳನ್ನು ಕಂಡು ಹಿಡಿದಿದ್ದರಿಂದಾಗಿ ಪ್ರಮುಖ ನದಿಗಳ ತಟಗಳ ಅರಣ್ಯನಾಶವಾಗುವುದಕ್ಕೆ ಕಾರಣವಾಯಿತು, ಇದಕ್ಕೆ ಪ್ರತಿಯಾಗಿ ಮಿಸಿಸ್ಸಿಪಿ ನದಿಯಲ್ಲಿ, ತೀವ್ರಗತಿಯಲ್ಲಿ ಹೆಚ್ಚಿದ ಹಾಗೂ ಅತಿಯಾದ ನೆರೆಹಾವಳಿಯಂತಹ ಪ್ರಕೃತಿ ವಿಕೋಪ ಸಂಭವಿಸಿತು. ಉಗಿದೋಣಿಯ ಸಿಬ್ಬಂದಿಯು ತಮ್ಮ ಉಗಿ ಚಾಲಿತ ಯಂತ್ರಗಳಿಗೆ ಉರುವಲುಗಳಾಗಿ ಪ್ರತಿದಿನವೂ ನದಿತಟದಲ್ಲಿದ್ದ ಮರಗಳನ್ನು ಕತ್ತರಿಸುತ್ತಿದ್ದರು. ಓಹಿಯೊ ನದಿ ಜೊತೆಗೆ ಹಾಗೂ St. ಲ್ಯೂಯಿಸ್‌ ದಕ್ಷಿಣದಲ್ಲಿ ಕೂಡಿ ಹರಿಯುವುದರಿಂದ ಮಿಸಿಸ್ಸಿಪಿ ಮೇಲ್ಮಟ್ಟದಲ್ಲಿ ಹರಿದು ಮತ್ತಷ್ಟು ವಿಶಾಲವಾಯಿತು, ಹಾಗೂ ಅದರ ದಿಕ್ಕನ್ನೇ ಬದಲಾಯಿಸಿತು. ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲು ಅಡೆತಡೆಗಳ ನಿವಾರಣೆಗಾಗಿ ಸ್ನ್ಯಾಗ್‌ಪುಲ್ಲರ್‌ಗಳನ್ನು ಬಳಸಲು ಸಿಬ್ಬಂದಿಗಳು ನದಿಯ ಅಂಚಿನಲ್ಲಿದ್ದ 100ರಿಂದ 200 ಅಡಿ ದೂರದವರೆಗಿನ ದೊಡ್ಡ ಮರಗಳನ್ನು ಕತ್ತರಿಸಿಹಾಕುತ್ತಿದ್ದರು. ಇಲ್ಲಿನಾಯ್ಸ್‌ ದೇಶದಲ್ಲಿನ ಹಲವಾರು ವಸಾಹತುಗಳಾದ, ಕಾಸ್ಕಾಸ್ಕಿಯಾ, ಚಹೋಕಿಯಾ ಹಾಗೂ St. ಫಿಲಿಪ್ಪೀಗಳಲ್ಲಿ, 19ನೇ ಶತಮಾನದಲ್ಲಿ ಇಲ್ಲಿನಾಯ್ಸ್‌ನಲ್ಲಿ ಉಂಟಾದ ನೆರೆಹಾವಳಿಯಿಂದಾಗಿ ಜನರು ಅಲ್ಲಿಂದ ಗುಳೇ ಹೊರಟಿದ್ದರಿಂದಾಗಿ ಅಲ್ಲಿನ ಸಂಸ್ಕೃತಿಯ ಬಗೆಗಿನ ಪುರಾತತ್ವ ದಾಖಲೆಗಳು ನಷ್ಟವಾದಂತಾಗಿದೆ.[೭೨] ಇಪ್ಪತ್ತನೇ-ಶತಮಾನದಲ್ಲಿಯೂ ಅಭಿವೃದ್ಧಿ ಹೊಂದುತ್ತಿರುವ ಹಲವಾರು ದೇಶಗಳಲ್ಲಿ ಅರಣ್ಯನಾಶದಿಂದ ಇದೇ ರೀತಿಯ ನಿರ್ದಿಷ್ಟ ಸಮಾನಾಂತರ ಪರಿಣಾಮಗಳನ್ನು ಕಾಣಬಹುದಾಗಿದೆ.

ಅರಣ್ಯನಾಶದ ಪ್ರಮಾಣ

[ಬದಲಾಯಿಸಿ]
ಪೂರ್ವ ಬೊಲಿವಿಯಾದಲ್ಲಿ ಟೈರಸ್ ಬಾಜಸ್ ಯೋಜನೆಯಡಿಯಲ್ಲಿ ಪ್ರಗತಿಯ ಹಂತದಲ್ಲಿರುವ ಮಾನವ ಜನ್ಯ ಅರಣ್ಯನಾಶದ ಪಥದ ಚಿತ್ರ

1852ನೇ ಇಸವಿಯ ಹೊತ್ತಿಗೆ ಜಾಗತಿಕ ಅರಣ್ಯನಾಶದ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿತ್ತು.[೭೩][೭೪] 1947ನೇ ಇಸವಿಯ ತನಕ ಭೂಮಿಯನ್ನು[೭೫] ಆವರಿಸಿಕೊಂಡಿದ್ದ 15 ದಶಲಕ್ಷದಿಂದ 16 ದಶಲಕ್ಷ km2 (5.8 ದಶಲಕ್ಷದಿಂದ 6.2 ದಶಲಕ್ಷ ಚದರ ಮೈಲಿ) ಪ್ರದೇಶಗಳಲ್ಲಿ ವ್ಯಾಪಿಸಿದ್ದ ಪರಿಪೂರ್ಣ ಉಷ್ಣವಲಯದ ಅರಣ್ಯಗಳ ಅರ್ಧದಷ್ಟನ್ನು —7.5 ದಶಲಕ್ಷದಿಂದ 8 ದಶಲಕ್ಷ km2 (2.9 ದಶಲಕ್ಷದಿಂದ 3 ದಶಲಕ್ಷ ಚದರ ಮೈಲಿ)—ಅರಣ್ಯವನ್ನೇ ನಾಶಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.[೭೬][೭೭] ವಿಶ್ವದಾದ್ಯಂತ ಸರಿಯಾದ ಕ್ರಮಗಳನ್ನು ಅಳವಡಿಸಿಕೊಳ್ಳದೇ ಹೋದರೆ (ಅವುಗಳ ಬಗೆಗಿನ ಅರಿವು ಮೂಡಿಸುವುದು ಹಾಗೂ ಇನ್ನೂ ಹಂಚಿಕೆಯಾಗದ ಹಳೆಯ ಅರಣ್ಯಗಳನ್ನು ರಕ್ಷಿಸುವ ಕ್ರಮಗಳೂ ಸೇರಿದಂತೆ),[೭೫] 2030ನೇ ಇಸವಿಯ ಹೊತ್ತಿಗೆ ಕೇವಲ ಶೇಕಡಾ ಹತ್ತರಷ್ಟು ಉಳಿದಿರುತ್ತದೆ,[೭೩][೭೬] ಹಾಗೂ ಉಳಿದ ಶೇಕಡಾ ಹತ್ತರಷ್ಟು ಕಾಡು ಅವನತಿಯ ಅಂಚಿನಲ್ಲಿರುತ್ತದೆ ಎಂದು ಕೆಲವು ವಿಜ್ಞಾನಿಗಳು ಅಂದಾಜಿಸಿದ್ದಾರೆ.[೭೩] 80%ನಷ್ಟು ಕಾಡು ನಾಶವಾಗುವುದರೊಂದಿಗೆ ನೂರಾರು ಸಾವಿರ ಪ್ರಭೇದಗಳು ಕೂಡ ನಾಶವಾಗುತ್ತವೆ.[೭೩] ಮಳೆಕಾಡು ಅರಣ್ಯನಾಶದ ಪ್ರಮಾಣಕ್ಕಿಂತ ಅರಣ್ಯನಾಶ ಪ್ರಮಾಣವನ್ನು ಅಂದಾಜಿಸಲು ಇರುವ ಅಡೆತಡೆಗಳು ಇತ್ತೀಚೆಗೆ ಮತ್ತಷ್ಟು ಸ್ಪಷ್ಟವಾಗಿವೆ. ವಿಶ್ವದ ಉಷ್ಣವಲಯ ಮಳೆಕಾಡಿನ ಐದನೇ ಒಂದರಷ್ಟು ಭಾಗ 1960ರಿಂದ 1990ನೇ ಇಸವಿಯ ನಡುವೆ ನಾಶವಾಗಿವೆ, 50 ವರ್ಷಗಳ ಹಿಂದೆ ವಿಶ್ವದ ಭೂಪ್ರದೇಶವನ್ನು ಆವರಿಸಿದ್ದ 14%ನಷ್ಟು ಮಳೆಕಾಡುಗಳು 6%ಗೆ ಕುಸಿದಿವೆ,[೫೨] ಹಾಗೂ 2090ನೇ ಇಸವಿಯ ಸಮಯಕ್ಕೆ ಎಲ್ಲ ಉಷ್ಣವಲಯ ಅರಣ್ಯಗಳೂ ಸಹ ನಾಶವಾಗುತ್ತವೆ ಎಂಬ ವಾದವನ್ನು ಕೆಲವು ಪರಿಸರವಾದಿಗಳ ಗುಂಪು ಮಂಡಿಸುತ್ತಾರೆ.[೫೨] ಈ ಮಧ್ಯದಲ್ಲಿ, ಲೀಡ್ಸ್‌ ವಿಶ್ವವಿದ್ಯಾಲಯದ ಅಲಾನ್ ಗ್ರೇಂಗರ್‌, ಮಳೆಕಾಡು ಪ್ರದೇಶದ ನಾಶವು ದೀರ್ಘಕಾಲೀನವಾಗಿ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸುತ್ತಾರೆ.[೭೮] ದಿ ಸ್ಕೆಪ್ಟಿಕಲ್ ಎನ್ವಿರಾನ್ಮೆಂಟಲಿಸ್ಟ್ ಪುಸ್ತಕದ ಲೇಖಕ ಬ್ಜೋರ್ ಲಂಬೋರ್ಗ್, ಇಪ್ಪತ್ತನೇ ಶತಮಾನ ಮಧ್ಯಭಾಗದಿಂದಲೂ ಜಾಗತಿಕ ಅರಣ್ಯದ ಹೊದಿಕೆ ಹೆಚ್ಚೂ ಕಡಿಮೆ ಹಾಗೆಯೇ ಅಚಲವಾಗಿ ಉಳಿದಿದೆ ಎಂದು ತಿಳಿಸುತ್ತಾರೆ.[೭೯][೮೦] ಇದರೊಂದಿಗೆ, ಪ್ರತಿ ವರ್ಷವೂ ನಾಶವಾಗುತ್ತಿರುವ ಪ್ರತಿ ಎಕರೆ ಮಳೆ ಕಾಡಿಗೆ ಸಮನಾಗಿ ಉಷ್ಣವಲಯದಲ್ಲಿ 50 ಎಕರೆಗಳಿಗೂ ಹೆಚ್ಚು ಹೊಸ ಅರಣ್ಯ ಬೆಳೆಯುತ್ತಿದೆ ಎಂಬುದನ್ನೂ ಕೆಲವರು ತಿಳಿಸುತ್ತಾರೆ.[೮೧] ಉಷ್ಣವಲಯ ಅರಣ್ಯನಾಶದಿಂದ ಉಂಟಾದ ಅನಿಶ್ಚಿತತೆಗಳಿಂದಾಗಿ ಈ ರೀತಿಯ ವಿಭಿನ್ನ ನಿಲುವುಗಳನ್ನು ತಳೆಯಲಾಗಿದೆ. ಉಷ್ಣವಲಯ ದೇಶಗಳಲ್ಲಿ, ಅಂದಾಜು ಮಾಡಲಾದಂತೆ ಅರಣ್ಯನಾಶವು ಅನಿಶ್ಚಿತವಾಗಿದ್ದು ಇದರಲ್ಲಿ +/- 50%ನಷ್ಟು ತಪ್ಪು ಸಂಭವಿಸುವ ಸಾಧ್ಯತೆಗಳೂ ಇರಬಹುದು,[೮೨] ಇದರ ನಡುವೆ 2002ನೇ ಇಸವಿಯಲ್ಲಿ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ನಡೆಸಿದ ವಿಶ್ಲೇಷಣೆ ಪ್ರಕಾರ ತೇವಭರಿತ ಉಷ್ಣವಲಯದಲ್ಲಿ (ಪ್ರತಿ ವರ್ಷಕ್ಕೆ ಅಂದಾಜು 5.8 ದಶಲಕ್ಷ ಹೆಕ್ಟೇರುಗಳು) ಅರಣ್ಯನಾಶದ ಪ್ರಮಾಣವು ಇನ್ನುಳಿದ ಪ್ರದೇಶಗಳಿಗಿಂತ 23%ನಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದು ತೋರಿಸುತ್ತವೆ.[೮೩] ಇದಕ್ಕೆ ವಿರುದ್ಧವಾಗಿ, ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ನಡೆಸಿದ ಹೊಸ ವಿಶ್ಲೇಷಣೆಯು ಅಮೇಜಾನ್ ಮಳೆಕಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶವು ಹಿಂದೆ ಅಂದಾಜಿಸಿದ್ದಕ್ಕಿಂತ ಎರಡು ಪಟ್ಟು ವೇಗವಾಗಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ.[೮೪][೮೫] ಅರಣ್ಯ ನಾಶವಾಗುತ್ತಿರುವ ರೀತಿಗಳು ಕುನೆಟ್ಜ್‌ ತಿರುವನ್ನು ಅನುಸರಿಸುತ್ತಿದೆ ಎಂದು ಕೆಲವರು ವಾದಿಸಿದರೆ,[೮೬] ಹಾಗೇನಾದರೂ ಅದೇ ನಿಜವಾದಲ್ಲಿ ಎಷ್ಟೇ ಪ್ರಯತ್ನಗಳನ್ನು ಮಾಡಿಯೂ ಪುನರ್ ಸರಿಪಡಿಸಲಾಗದ ಆರ್ಥಿಕ ಅರಣ್ಯ ಮೌಲ್ಯಗಳನ್ನು ಕಳೆದುಕೊಳ್ಳಬೇಕಾದ (e.g., ಪ್ರಭೇದಗಳ ವಿನಾಶ) ಅಪಾಯವನ್ನು ನಿರ್ಮೂಲನೆ ಮಾಡುವಲ್ಲಿ ವಿಫಲವಾಗಬೇಕಾಗುತ್ತದೆ.[೮೭][೮೮] ಯುನೈಟೆಡ್ ನೇಷನ್ಸ್‌ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್‌ನ (FAO) 2005ನೇ ಇಸವಿಯಲ್ಲಿ ನೀಡಿದ ವರದಿಯು ಭೂಮಿಯ ಒಟ್ಟಾರೆ ಅರಣ್ಯದಲ್ಲಿ ಪ್ರತಿ ವರ್ಷಕ್ಕೆ 13 ದಶಲಕ್ಷ ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶ ಕ್ಷೀಣಿಸುತ್ತಿದ್ದು, ಜಾಗತಿಕ ಅರಣ್ಯನಾಶದ ಪ್ರಮಾಣ ಇತ್ತೀಚಿಗೆ ನಿಧಾನಗತಿಯಲ್ಲಿ ಸಾಗಿದೆ ಎಂದು ಅಂದಾಜಿಸಿದೆ.[೮೯][೯೦] ಹಾಗಿದ್ದೂ ಮಳೆಕಾಡುಗಳು ತೀವ್ರ ಗತಿಯ ಪ್ರಮಾಣಲ್ಲಿ ನಾಶವಾಗುತ್ತಿವೆ ಎಂದು ಇತರರು ಹೇಳುತ್ತಾರೆ.[೯೧] ಲಂಡನ್‌-ಮೂಲದ ಮಳೆಕಾಡು ಪ್ರತಿಷ್ಟಾನವೊಂದು, "UN ಅಂಕಿಅಂಶಗಳು ಅರಣ್ಯವು ಕನಿಷ್ಟಪಕ್ಷ 10%ನಷ್ಟು ಪ್ರಮಾಣದ ಮರಗಳು ಭೂಪ್ರದೇಶವನ್ನು ಆವರಿಸಿರಬೇಕು ಎನ್ನುವ ಅರಣ್ಯದ ಅರ್ಥನಿರೂಪಣೆಯಾದನ್ನು ಆಧರಿಸಿದ್ದು, ಇದರಿಂದಾಗಿಯೇ ಅದು ಸವನ್ನಾದಂತಹ ಪರಿಸರ ವ್ಯವಸ್ಥೆಗಳ ಪ್ರದೇಶಗಳನ್ನು ಹಾಗೂ ತೀವ್ರ ರೀತಿಯಲ್ಲಿ ಹಾಳಾದ ಅರಣ್ಯಗಳನ್ನು ತನ್ನಲ್ಲಿ ಸೇರಿಸಿಕೊಂಡಿದೆ ಎಂಬುದನ್ನು ತಿಳಿಸುತ್ತಾರೆ."[೯೨] FAO ದತ್ತಾಂಶದಲ್ಲಿ ಅರಣ್ಯ ವಿಧಗಳ ನಡುವೆ ಯಾವುದೇ ಭಿನ್ನತೆಗಳನ್ನು ಮಾಡಿಲ್ಲ ಎಂಬುದನ್ನು ಮತ್ತೆ ಕೆಲವು ವ್ಯಾಖ್ಯಾನಗಳು ಗುರುತಿಸುತ್ತವೆ,[೯೩] ಹಾಗೂ ಆ ದತ್ತಾಂಶಗಳು ಆಯಾ ದೇಶಗಳ ಅರಣ್ಯ ಇಲಾಖೆ ನೀಡುವ ವರದಿಯನ್ನು ದೊಡ್ಡ ಪ್ರಮಾಣದಲ್ಲಿ ಆಧರಿಸಿವೆ,[೯೪] ಇವುಗಳು ಕಾನೂನುಬಾಹಿರವಾಗಿ ಮರಗಳನ್ನು ಕತ್ತರಿಸುತ್ತಿರುವಂತಹ ಅನಧಿಕೃತ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.[೯೫] ಈ ಎಲ್ಲ ಅನಿಶ್ಚಿತತೆಗಳ ನಡುವೆಯೂ, ಮಳೆಕಾಡುಗಳ ನಾಶವು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯದ ಬಗ್ಗೆ ಒಮ್ಮತವನ್ನು ಕಾಯ್ದುಕೊಂಡಿದೆ. 1900ನೇ ಇಸವಿಯ ಹೊತ್ತಿಗೆ ಪಶ್ಚಿಮ ಆಫ್ರಿಕಾದ 90%ನಷ್ಟು ಕರಾವಳಿ ಮಳೆಕಾಡುಗಳು ಕಣ್ಮರೆಯಾದವು.[೯೬] ದಕ್ಷಿಣ ಏಷ್ಯಾದಲ್ಲಿ, 88%ನಷ್ಟು ಮಳೆಕಾಡುಗಳು ಸಂಪೂರ್ಣವಾಗಿ ನಾಶವಾಗಿವೆ.[೯೭] ವಿಶ್ವದ ಮಳೆಕಾಡುಗಳಲ್ಲಿ ಈಗ ಉಳಿದಿರುವುದು ಅಮೇಜಾನ್ ನದಿತಟ, ಅಮೇಜಾನ್ ಮಳೆಕಾಡು ಸುಮಾರು 4 ದಶಲಕ್ಷ ಚದರ ಕಿಲೋಮೀಟರ್‌ಗಳನ್ನು ಆವರಿಸಿದೆ.[೯೮] ಅತಿಹೆಚ್ಚು ಉಷ್ಣವಲಯ ಅರಣ್ಯನಾಶ ಪ್ರಮಾಣವನ್ನು 2000ದಿಂದ 2005ನೇ ಇಸವಿಗಳ ನಡುವೆ ಹೊಂದಿದ್ದ ಪ್ರದೇಶಗಳೆಂದರೆ ಮಧ್ಯ ಅಮೇರಿಕಾ— ಇದು ಪ್ರತಿ ವರ್ಷ ತನ್ನ ಅರಣ್ಯಗಳ 1.3%ನಷ್ಟು ಕಳೆದುಕೊಂಡಿದೆ— ಹಾಗೂ ಉಷ್ಣವಲಯ ಏಷ್ಯಾ.[೯೨] In Central America, two-thirds of lowland tropical forests have been turned into pasture since 1950 and 40% of all the rainforests have been lost in the last 40 yearsಮಧ್ಯ ಅಮೇರಿಕಾದಲ್ಲಿ, 1950ನೇ ಇಸವಿಯಿಂದ ಕೆಳನಾಡಿನ ಉಷ್ಣವಲಯ ಅರಣ್ಯಗಳ ಮೂರನೇ ಎರಡು ಭಾಗವನ್ನು ದನಗಳ ಮೇವಿಗಾಗಿ ಬದಲಾಯಿಸಲಾಗಿದೆ ಹಾಗೂ ಕಳೆದ 40 ವರ್ಷಗಳಲ್ಲಿ 40%ನಷ್ಟು ಮಳೆಕಾಡುಗಳು ನಾಶವಾಗಿದೆ.[೯೯] ಬ್ರೆಜಿಲ್ ತನ್ನ ಮಾಟಾ ಅಟ್ಲಾಂಟಿಕಾ ಅರಣ್ಯದ 90-95%ರಷ್ಟು ಭಾಗದ ಅರಣ್ಯವನ್ನು ಕಳೆದುಕೊಂಡಿದೆ.[೧೦೦] ಮಡಗಾಸ್ಕರ್‌ ತನ್ನ ಪೂರ್ವ ಮಳೆಕಾಡುಗಳಲ್ಲಿ 90%ನಷ್ಟು ಭಾಗವನ್ನು ಕಳೆದುಕೊಂಡಿದೆ.[೧೦೧][೧೦೨] 2007ನೇ ಇಸವಿಯಂತೆ, ಹೈಟಿಯ ಅರಣ್ಯಗಳಲ್ಲಿ ಕೇವಲ 1%ಗೂ ಕಡಿಮೆ ಅರಣ್ಯ ಮಾತ್ರ ಉಳಿದುಕೊಂಡಿದೆ.[೧೦೩] Mexico, India, the Philippines, ಇಂಡೋನೇಷ್ಯಾ, Thailand, Myanmar, Malaysia, Bangladesh, China, Sri Lanka, Laos, Nigeria, the Democratic Republic of the Congo, Liberia, Guinea, Ghana and the Côte d'Ivoire, have lost large areas of their rainforestಮೆಕ್ಸಿಕೊ, ಭಾರತ, ಫಿಲಿಪ್ಪೀನ್ಸ್‌, ಇಂಡೊನೇಷ್ಯಾ, ಥೈಲೆಂಡ್, ಮ್ಯಾನ್ಮಾರ್, ಮಲೇಷ್ಯಾ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ, ಲಾವೊಸ್‌, ನೈಜೀರಿಯಾ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಲೈಬೀರಿಯ, ಗಿನಿಯಾ, ಘಾನಾ ಹಾಗೂ ಕೋಟ್ ಡಿ ಐವಿಯಾರ್‌ಗಳು, ದೊಡ್ಡ ಪ್ರಮಾಣದಲ್ಲಿ ಮಳೆಕಾಡು ಪ್ರದೇಶವನ್ನು ಕಳೆದುಕೊಂಡಿವೆ.[೧೦೪][೧೦೫] ಹಲವಾರು ದೇಶಗಳು, ಮುಖ್ಯವಾಗಿ ಬ್ರೆಜಿಲ್, ತಮ್ಮಲ್ಲಿ ಉಂಟಾದ ಅರಣ್ಯನಾಶವನ್ನು ರಾಷ್ಟ್ರೀಯ ತುರ್ತುಪರಿಸ್ಥಿತಿ ಎಂದು ಘೋಷಿಸಿತು.[೧೦೬][೧೦೭]

ಪ್ರದೇಶವಾರು ಅರಣ್ಯನಾಶ

[ಬದಲಾಯಿಸಿ]

ಆಗ್ನೇಯ ಏಷ್ಯಾ ಹಾಗೂ ದಕ್ಷಿಣ ಅಮೇರಿಕಾದ ಕೆಲವು ಭಾಗಗಳಲ್ಲಿ ವಿಶ್ವದ ಸುತ್ತ ಅರಣ್ಯನಾಶದ ಪ್ರಮಾಣವು ಬದಲಾಗುತ್ತಿರುವುದು ಪರಿಸರವಾದಿಗಳಲ್ಲಿ ವಿಪರೀತ ಆತಂಕವನ್ನು ಉಂಟುಮಾಡಿದೆ.

ಅರಣ್ಯನಾಶವನ್ನು ತಡೆಯುವುದು

[ಬದಲಾಯಿಸಿ]

ರೆಡ್ಯೂಸಿಂಗ್ ಎಮಿಷನ್ ಫ್ರಮ್ ಡಿಫಾರೆಸ್ಟ್ರೇಷನ್ ಅಂಡ್ ಫಾರೆಸ್ಟ್ ಡೀಗ್ರೆಡೇಷನ್‌ (REDD)

[ಬದಲಾಯಿಸಿ]

ಯುನೈಟೆಡ್ ನೇಶನ್ಸ್‌‌ ಹಾಗೂ ವಿಶ್ವ ಬ್ಯಾಂಕ್ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಅರಣ್ಯನಾಶವನ್ನು ತಡೆಯಲು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಈ ರೀತಿಯ ಕಾರ್ಯಕ್ರಮಗಳಿಗೆ ಸಮಗ್ರವಾಗಿ ರೆಡ್ಯೂಸಿಂಗ್ ಎಮಿಷನ್ ಫ್ರಮ್ ಡಿಫಾರೆಸ್ಟ್ರೇಷನ್ ಅಂಡ್ ಫಾರೆಸ್ಟ್ ಡೀಗ್ರೆಡೇಷನ್‌ (REDD) ಎಂಬ ಪದವನ್ನು ಬಳಸಲಾಗಿದ್ದು, ಅರಣ್ಯನಾಶವನ್ನು ನಿಯಂತ್ರಿಸಲು ಹಾಗೂ/ಅಥವಾ ನಾಶವಾದ ಅರಣ್ಯವನ್ನು ಪುನರ್ ಸ್ಥಾಪಿಸುವ ಸಲುವಾಗಿ ನೇರವಾಗಿ ಹಣದ ಸಹಾಯದಿಂದ ಅಥವಾ ಇನ್ನಿತರೆ ಸೌಲಭ್ಯಗಳಿಂದ ಅಭಿವೃದ್ದಿ ಹೊಂದುತ್ತಿರುವ ದೇಶಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದರಲ್ಲಿ ಹಣವೇ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ, ಆದರೂ 2009ನೇ ಇಸವಿಯ ಡಿಸೆಂಬರ್‌ನಲ್ಲಿ ಕೋಪನ್‌ಹೇಗನ್‌ನಲ್ಲಿ ನಡೆದ UN ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೆಟ್ ಚೇಂಜ್ (UNFCCC) ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್‌-15 (COP-15) ಸಭೆಯಲ್ಲಿ, ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾರೆಯಾಗಿ ಒಂದು ನಿರ್ಣಯಕ್ಕೆ ಬಂದು ಅರಣ್ಯವೂ ಸೇರಿದಂತೆ ಇನ್ನಿತರೆ ಹೊಸ ರೀತಿಯ ಸಂಪನ್ಮೂಲಗಳಿಗಾಗಿ ಅಂತರರಾಷ್ಟ್ರೀಯ ಸಂಸ್ಥೆಗಳು ಅದಕ್ಕೆ ಸರಿಸುಮಾರು 2010–2012ನೇ ಇಸವಿಯ ಸಮಯಕ್ಕೆ USD 30 ಶತಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವ ನಿರ್ಣಯಕ್ಕೆ ಬರಲಾಗಿದೆ.[೧೦೮] ಅಭಿವೃದ್ಧಿ ಹೊಂದುತ್ತಿರುವ ದೇಶದ REDDಯೊಂದಿಗೆ ಮಾಡಿಕೊಂಡ ಗುರಿಗಳನ್ನು ಪಾಲಿಸುವ ಉದ್ದೇಶದಿಂದ ನಿಯಂತ್ರಣ ಸಾಧನಗಳನ್ನು ಅಭಿವೃದ್ಧಿ ಪಡಿಸುವ ಮಹತ್ತರ ಕಾರ್ಯಗಳು ಪ್ರಗತಿಯ ಹಂತದಲ್ಲಿವೆ. ಈ ಸಾಧನಗಳು, ಉಪಗ್ರಹ ಚಿತ್ರಗಳ ಹಾಗೂ ಇನ್ನಿತರೆ ದತ್ತಾಂಶಗಳನ್ನು ಬಳಸಿಕೊಂಡು ದೂರ ಪ್ರದೇಶದಲ್ಲಿರುವ ಅರಣ್ಯವನ್ನು ನೋಡಿಕೊಳ್ಳಬಹುದಾಗಿದ್ದು, ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ FORMAದೊಂದಿಗೆ (ಅರಣ್ಯ ಸರಿಯಾದ ರೀತಿಯಲ್ಲಿ ನಿಯಂತ್ರಿಸುವ ಪ್ರಕ್ರಿಯೆ) [೨] ಹಾಗೂ ಗ್ರೂಪ್‌ ಆನ್‌ ಅರ್ಥ್ ಅಬ್ಸರ್ವೇಷನ್ಸ್‌ ಫಾರೆಸ್ಟ್ ಕಾರ್ಬನ್ ಟ್ರಾಕಿಂಗ್ ಪೋರ್ಟಲ್‌‌ನ ಜೊತೆಗೂಡಿ ಮೊದಲ ಹೆಜ್ಜೆಯನ್ನಿಟ್ಟರು[೩] Archived 2010-05-21 ವೇಬ್ಯಾಕ್ ಮೆಷಿನ್ ನಲ್ಲಿ.. COP-15ರಲ್ಲಿ ಅರಣ್ಯವನ್ನು ಸಂರಕ್ಷಿಸುವ ಕ್ರಮಬದ್ಧವಾದ ನಿರ್ದೇಶನಗಳಿಗೂ ಪ್ರಾಧಾನ್ಯ ಕೊಡಲಾಗಿದೆ[೧೦೯]

ವ್ಯವಸಾಯ

[ಬದಲಾಯಿಸಿ]

ಮಿಶ್ರತಳಿಗಳು, ಹಸಿರುಮನೆ, ಸ್ವಜನ್ಯ ತೋಟಗಳನ್ನು ನಿರ್ಮಿಸುವುದು, ಹಾಗೂ ಜಲಕೃಷಿಯೂ ಸೇರಿದಂತೆ ಕೃಷಿಯನ್ನು ಗಮನದಲ್ಲಿರಿಸಿಕೊಂಡು ಹೊಸ ಪದ್ಧತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪದ್ಧತಿಗಳಲ್ಲಿ ತಮಗೆ ಬೇಕಾದಷ್ಟು ಬೆಳೆಫಸಲನ್ನು ಪಡೆಯಲು ರಾಸಾಯನಿಕ ಸಿಂಪಡಿಕೆಗಳ ಮೇಲೆ ಅವಲಂಬಿತವಾಗಿದೆ. ಆವರ್ತ ಬೇಸಾಯ ಪದ್ದತಿಯಲ್ಲಿ, ಸುಧಾರಿಸಲು ಹಾಗೂ ಚೈತನ್ಯ ಪಡೆಯಲು ಕೃಷಿ ಭೂಮಿಯಲ್ಲಿ ಪಶುಗಳನ್ನು ಮೇಯಿಸಲಾಗುತ್ತದೆ. ವಾಸ್ತವವಾಗಿ ಆವರ್ತ ಬೇಸಾಯ ಪದ್ದತಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅತಿಯಾದ ಕೃಷಿಯಲ್ಲಿ ಬೆಳೆಗಳಿಗೆ ಅಗತ್ಯವಾದ ಸೂಕ್ಷ್ಮ ಖನಿಜಗಳು ಅಧಿಕ ಪ್ರಮಾಣದಲ್ಲಿ ಬಳಕೆಯಾಗುವುದರಿಂದ ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಅರಣ್ಯಗಳ ನಿರ್ವಹಣೆ

[ಬದಲಾಯಿಸಿ]

ಅರಣ್ಯನಾಶದಿಂದ ಪರಿಸರಕ್ಕೆ ಧಕ್ಕೆ ಆಗುತ್ತಿದ್ದು ಹಾಗೂ ಇದರಿಂದ ಕೆಲವು ಬಾರಿ ಸಮಾಜವೂ ಕೂಡ ನಾಶ ಆಗಿರುವುದರಿಂದ, ಹಲವಾರು ಶತಮಾನಗಳಿಂದ ಅರಣ್ಯನಾಶವನ್ನು ನಿಯಂತ್ರಿಸಲು ಅಥವಾ ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಗಳೂ ನಡೆದಿವೆ. ಅಲ್ಪಾವಧಿ ಲಾಭಗಳನ್ನು ಪಡೆಯಲು ಅರಣ್ಯವನ್ನು ಕೃಷಿಭೂಮಿಯಾಗಿ ಪರಿವರ್ತಿಸಿ ಅರಣ್ಯನಾಶದಿಂದ ದೀರ್ಘಾವಧಿಯಲ್ಲಿ ಆಗಬಹುದಾದ ತೊಂದರೆಗಳನ್ನು ತಡೆಯುವ ಸಲುವಾಗಿ, ಟೊಂಗಾದಲ್ಲಿ ಸಾರ್ವಭೌಮ ಆಡಳಿತಗಾರರು ನಿಯಮಗಳನ್ನು ಮಾಡಿದ್ದು,[೧೧೦] ಈ ಮಧ್ಯೆ ಜಪಾನಿನ ಟೊಕುಗಾವದಲ್ಲಿ, ಹದಿನೇಳು ಹಾಗೂ ಹದಿನೆಂಟನೇ ಶತಮಾನದ ನಡುವೆ,[೧೧೧] ಹಲವಾರು ವರ್ಷಗಳಿಂದ ಮಾಡಿದ ಅರಣ್ಯನಾಶವನ್ನು ನಿಲ್ಲಿಸಿ ಪುನರ್ ಸ್ಥಾಪಿಸುವ ಸಲುವಾಗಿ, ಮರದ ದಿಮ್ಮಿಗಳ ಬದಲಾಗಿ ಇತರೆ ಉತ್ಪನ್ನಗಳನ್ನು ಬಳಸುವ ಹಾಗೂ ಹಲವಾರು ಶತಮಾನಗಳ ಕಾಲ ಬೇಸಾಯ ಮಾಡಿದ ಕೃಷಿ ಭೂಮಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಹ ಉನ್ನತ ಮಟ್ಟದ ವ್ಯವಸ್ಥೆಯನ್ನು ಷೋಗನ್‌ಗಳು ದೀರ್ಘಾವಧಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಹದಿನಾರನೇ ಶತಮಾನದಲ್ಲಿ ಜರ್ಮನಿಯ ಭೂಮಾಲೀಕರು ಅರಣ್ಯನಾಶದ ತೊಂದರೆಗಳನ್ನು ತಪ್ಪಿಸಲು ವೃಕ್ಷಪಾಲನೆ ಪದ್ಧತಿಯನ್ನು ಅಭಿವೃದ್ಧಿಪಡಿಸಿದ್ದರು. ಹಾಗಿದ್ದರೂ, ಈ ಕಾನೂನುಗಳು ಉತ್ತಮ ಮಳೆ ಯಾಗುವುದು, ಶುಷ್ಕತೆಯಿಲ್ಲದ ಹಾಗೂ ಹೊಸದಾಗಿ ರೂಪುಗೊಳ್ಳುತ್ತಿರುವ ಮಣ್ಣಿನ (ಜ್ವಾಲಾಮುಖಿರಚನಾ ಪ್ರಕ್ರಿಯೆ ಅಥವಾ ಹಿಮಶಿಲಾರಚನೆಯ ಪ್ರಕ್ರಿಯೆ) ಪರಿಸರ ಇರುವ ಪ್ರದೇಶಗಳಲ್ಲಿ ಮಾತ್ರ ನಿಯಮಿತ ಪರಿಧಿಗೆ ಸೀಮಿತವಾಗುತ್ತಿವೆ. ಹಳೆಯ ಹಾಗೂ ಕಡಿಮೆ ಫಲವತ್ತಾದ ಮಣ್ಣಿನಲ್ಲಿ ಮರಗಳು ನಿಧಾನ ಗತಿಯಲ್ಲಿ ಬೆಳೆಯುತ್ತವೆ ಇದರಿಂದ ವೃಕ್ಷಪಾಲನೆಯ ಬೆಳೆ ಆರ್ಥಿಕವಾಗಿ ಲಾಭದಾಯಕವಾಗುತ್ತದೆ, ಈ ಮಧ್ಯೆ ಅತಿಯಾದ ಶುಷ್ಕ ವಾತಾವರಣ ಇರುವ ಅರಣ್ಯದಲ್ಲಿ ಈ ಮರಬೆಳೆ ಪೂರ್ಣ ಬಲಿಯುವ ವೇಳೆಗೆ ಬೆಂಕಿ ತಗುಲುವ ಅಪಾಯ ಹೆಚ್ಚಾಗಿರುತ್ತದೆ. "ಕತ್ತರಿಸು-ಹಾಗೂ-ಬೆಂಕಿ ಹಚ್ಚುವ" ಪ್ರವೃತ್ತಿ ಇರುವ ಪ್ರದೇಶಗಳಲ್ಲಿ, "ಕತ್ತರಿಸು-ಹಾಗೂ-ಇದ್ದಿಲು ಮಾಡುವ" ಪ್ರವೃತ್ತಿಗೆ ಬದಲಾಗುವುದರಿಂದ ತ್ವರಿತ ಅರಣ್ಯನಾಶ ಹಾಗೂ ಅದರ ತರುವಾಯ ಪ್ರಾರಂಭವಾದ ಮಣ್ಣಿನ ಅವನತಿಯನ್ನು ತಡೆಗಟ್ಟಬಹುದಾಗಿದೆ. ಹೀಗೆ ಉಂಟಾದ ಜೈವಿಕ ಇದ್ದಿಲು, ಬಹುಕಾಲ ಉಳಿದುಕೊಳ್ಳುವ ಇಂಗಾಲವು ಸೆಕ್ವೆಸ್ಟ್ರೇಷನ್ ಪದ್ಧತಿಯಿಂದ ಮಣ್ಣಿಗೆ ಪುನಃ ಮರಳುತ್ತದೆ, ಇದರಿಂದಾಗಿ ತುಂಬಾ ಪರಿಣಾಮಕಾರಿ ಲಾಭದಾಯಕವಾದ ಮಣ್ಣಿನ ಸುಧಾರಣೆ ಆಗುತ್ತದೆ. ಜೈವಿಕ ರಾಶಿಯೊಂದಿಗೆ ಬೆರೆಯುವ ಇದು ಭೂಮಿಯಲ್ಲಿಯೇ ಅತ್ಯಂತ ಫಲವತ್ತಾದ ಹಾಗೂ ತನ್ನನ್ನು ತಾನು ಪುನರುತ್ಪಾದಿಸಿಕೊಳ್ಳವಲ್ಲಿ ಸಫಲವಾದ ಟೆರ್ರಾ ಪ್ರೇಟಾ ಉಂಟಾಗಲು ಕಾರಣವಾಗುತ್ತದೆ.

ಬಲಿಷ್ಟ ಅರಣ್ಯ ನಿರ್ವಹಣಾ ಪದ್ಧತಿಗಳ ದೃಢೀಕರಣ

[ಬದಲಾಯಿಸಿ]

ಜಾಗತಿಕ ದೃಢೀಕರಣ ವ್ಯವಸ್ಥೆಗಳಾದ PEFC ಹಾಗೂ FSCನಿಂದ ಪಡೆಯುವ ದೃಢೀಕರಣವು, ಅರಣ್ಯನಾಶದ ಪ್ರಮಾಣದ ಜಾಡು ಹಿಡಿಯಲು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿರುವ ಅರಣ್ಯಗಳ ಮರದ ದಿಮ್ಮಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡುತ್ತವೆ. ಯುನೈಟೆಡ್ ನೇಷನ್ಸ್‌ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್‌ (FAO) ಪ್ರಕಾರ, "ಅರಣ್ಯ ನಿರ್ವಹಣೆಯನ್ನು ಅಳವಡಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಬಹುಕಾಲದಿಂದ ಇರುವ ದುಬಾರಿ ಬೆಲೆ ತೆತ್ತು ಖರೀದಿ ಮಾಡುವ ಗ್ರಾಹಕರ ಅತಿಯಾದ ಬೇಡಿಕೆಯಿಂದ ನಿರಂತರವಾಗಿ ಉತ್ಪಾದನೆಯಾಗುತ್ತಿರುವ ಅರಣ್ಯ ಉತ್ಪನ್ನಗಳು. ದೃಢೀಕರಣವು ನಿಯಂತ್ರಣ ಹೇರುವ ಬದಲು, ಮಾರುಕಟ್ಟೆ ಪ್ರಚೋದಕಗಳು ಸರಿಯಾದ ರೀತಿಯಲ್ಲಿ ಅರಣ್ಯ ನಿರ್ವಹಣೆಯನ್ನು ಪ್ರೋತ್ಸಾಹಿಸುವಂತೆ ಮಾಡುತ್ತದೆ. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲ್ಪಟ್ಟ ಅರಣ್ಯಗಳ ಉತ್ಪನ್ನಗಳ ಉಪಯುಕ್ತ ಗುಣಗಳನ್ನು ಪ್ರೋತ್ಸಾಹಿಸುತ್ತಾ, ದೃಢೀಕರಣವು ಪರಿಸರ ರಕ್ಷಣೆಯತ್ತ ಗಮನ ಕೇಂದ್ರೀಕರಿಸುವಂತೆ ಮಾಡುತ್ತದೆ."[೧೧೨]

ಅರಣ್ಯದ ಮರುಸ್ಥಾಪನೆ

[ಬದಲಾಯಿಸಿ]

ವಿಶ್ವದ ಹಲವಾರು ಭಾಗಗಳಲ್ಲಿ, ಅದರಲ್ಲಿಯೂ ಪೂರ್ವ ಏಷ್ಯಾದ ದೇಶಗಳಲ್ಲಿ, ಅರಣ್ಯದ ಮರುಸ್ಥಾಪನೆ ಹಾಗೂ ಅರಣ್ಯೀಕರಣ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅರಣ್ಯದ ವ್ಯಾಪ್ತಿಪ್ರದೇಶ ಬೆಳೆಯುತ್ತಿದೆ.[೧೧೩] ವಿಶ್ವದ 50 ಅತ್ಯಂತ ಅರಣ್ಯೀಕರಣಕ್ಕೊಳಗಾದ ದೇಶಗಳಲ್ಲಿ 22ರಷ್ಟರಲ್ಲಿ ಮರಗಳಿಂದ ಕೂಡಿರುವ ಭೂಪ್ರದೇಶದ ಪ್ರಮಾಣವು ಹೆಚ್ಚಾಗುತ್ತಿದೆ. ಒಟ್ಟಾರೆ ಕೇವಲ ಏಷ್ಯಾ ಒಂದರಲ್ಲೇ 2000ರಿಂದ 2005ನೇ ಇಸವಿಯ ನಡುವೆ 1 ದಶಲಕ್ಷ ಹೆಕ್ಟೇರುಗಳಷ್ಟು ಅರಣ್ಯವನ್ನು ಸ್ಥಾಪಿಸಿದೆ. 1992ರಿಂದ 2001ನೇ ಇಸವಿಯ ನಡುವೆ ಎಲ್ ಸಲ್ವಡೊರ್‌ನ ಉಷ್ಣವಲಯದ ಅರಣ್ಯವು 20%ಗಿಂತಲೂ ಅಧಿಕ ಪ್ರಮಾಣದಲ್ಲಿ ಬೆಳೆದಿದೆ. ಈ ಏರಿಕೆಯ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಒಂದು ಶೈಕ್ಷಣಿಕ ಅಧ್ಯಯನದ ಪ್ರಕಾರ, ಜಾಗತಿಕ ಅರಣ್ಯವು 2050ನೇ ಇಸವಿಯ ಹೊತ್ತಿಗೆ 10%ನಷ್ಟು ಎಂದರೆ ಗಾತ್ರದಲ್ಲಿ ಭಾರತದಷ್ಟು ಏರಿಕೆಯಾಗುತ್ತದೆ.[೧೧೪] ದೊಡ್ಡ ಪ್ರಮಾಣದಲ್ಲಿ ಅರಣ್ಯಗಳು ನಾಶವಾಗುತ್ತಿರುವ ಪೀಪಲ್ಸ್‌ ರಿಪಬ್ಲಿಕ್‌ ಆಫ್‌‌ ಚೀನಾದಲ್ಲಿ ಅಲ್ಲಿನ ಸರ್ಕಾರ, 11 ಹಾಗೂ 60 ವರ್ಷಗಳ ನಡುವಿನ ಪ್ರತಿಯೊಬ್ಬ ಕಾರ್ಯಸಾಮರ್ಥ್ಯವುಳ್ಳ ಪ್ರಜೆಯೂ ಪ್ರತಿ ವರ್ಷಕ್ಕೆ ಮೂರಿಂದ ಐದು ಮರಗಳನ್ನು ನೆಡಬೇಕು ಅಥವಾ ಅದೇ ರೀತಿಯ ಯಾವುದಾದರೊಂದು ಅರಣ್ಯ ಸೇವೆಯಲ್ಲಿ ತೊಡಗಬೇಕು ಎಂದು ಮುಂಚೆಯೇ ಪ್ರಕಟಿಸಿದ್ದಾರೆ. 1982ನೇ ಇಸವಿಯಿಂದ ಪ್ರಾರಂಭವಾದ ಈ ಯೋಜನೆಯಿಂದ ಪ್ರತಿವರ್ಷವೂ ಕನಿಷ್ಟಪಕ್ಷ 1 ಶತಕೋಟಿ ಮರಗಳನ್ನು ನೆಡಲಾಗುತ್ತಿದೆ ಎಂದು ಚೀನಾದ ಸರ್ಕಾರ ಹೇಳಿಕೊಂಡಿದೆ. ಇಂದು ಇವುಗಳ ಅಗತ್ಯತೆ ಇಲ್ಲವಾದರೂ, ಚೀನಾದಲ್ಲಿ ಪ್ರತಿ ವರ್ಷದ ಮಾರ್ಚ್‌ 12ನೇ ತಾರೀಖಿನಂದು ಸಸಿ ನೆಡುವ ರಜಾದಿನವೆಂದು ಘೋಷಿಸಲಾಗಿದೆ. ಇದರ ಜೊತೆಗೆ, ಚೀನಾದ ಹಸಿರು ಗೋಡೆ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಿಂದ ಮರಗಳನ್ನು ನೆಟ್ಟು ಗೋಬಿ ಮರುಭೂಮಿ ಮತ್ತಷ್ಟು ಹರಡುವುದನ್ನು ತಡೆಯುವ ಗುರಿಹೊಂದಿದೆ. ಹಾಗಿದ್ದರೂ, ನೆಟ್ಟ ಮರಗಳು ಅತಿಯಾದ ಪ್ರಮಾಣದಲ್ಲಿ (75%ವರೆಗೆ) ಸಾಯುತ್ತಿರುವುದರಿಂದ, ಈ ಯೋಜನೆ ಅಷ್ಟೇನೂ ಯಶಸ್ವಿಯಾಗಿಲ್ಲ.[ಸೂಕ್ತ ಉಲ್ಲೇಖನ ಬೇಕು] 1970ರ ದಶಕದಿಂದೀಚೆಗೆ ಚೀನಾದಲ್ಲಿ 47-ದಶಲಕ್ಷ-ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶ ಬೆಳೆದಿದೆ.[೧೧೪] ಮರಗಳು ಒಟ್ಟು ಸಂಖ್ಯೆ ಅಂದಾಜು 35 ಶತಕೋಟಿಯಷ್ಟಿದ್ದು ಹಾಗೂ ಚೀನಾದ ಭೂರಾಶಿಯಲ್ಲಿ 4.55%ನಷ್ಟು ಅರಣ್ಯದಿಂದ ಆವರಿಸಲ್ಪಟ್ಟಿದೆ. ಎರಡು ದಶಕಗಳ ಹಿಂದಷ್ಟೇ 12%ನಷ್ಟಿದ್ದ ಅರಣ್ಯ ಪದರವು ಈಗ 16.55%ನಷ್ಟಾಗಿದೆ.[೧೧೫] ಚೀನಾದ ಮಹತ್ವಾಕಾಂಕ್ಷೆಯ ಪ್ರಸ್ತಾಪವಾದ ಗಾಳಿಯಲ್ಲಿ ಬಿತ್ತನೆ ಮಾಡಿ ಅರಣ್ಯವನ್ನು ಪುನರ್ ನಿರ್ಮಿಸುವುದು ಹಾಗೂ ಸವಕಳಿ ನಿಯಂತ್ರಣ ವ್ಯವಸ್ಥೆಗಳು ಮತ್ತು ಈಗಾಗಲೇ ಪ್ರಸ್ತಾಪಿತ ಸಹರಾ ಅರಣ್ಯ ಯೋಜನೆಯು ಸಮುದ್ರದ ನೀರಿನಲ್ಲಿ ಆಗುತ್ತಿರುವ ಹಸಿರುಮನೆ ಪರಿಣಾಮವನ್ನು ನಿಯಂತ್ರಿಸುವ ಯೋಜನೆಯೊಂದಿಗೆ ಜೊತೆಗೂಡಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಉತ್ಪಾದಿಸಿ ಕುಯ್ಲು ಮಾಡುವ ಮರಮುಟ್ಟುಗಳಿಗಾಗಿ ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದು, ಇವುಗಳಿಂದಾಗಿ ಅರಣ್ಯಗಳ ಒಡೆಯರು ಹಾಗೂ ಅರಣ್ಯ ಅವಲಂಬಿತ ಕೈಗಾರಿಕೆಗಳು ಅರಣ್ಯ ನಿರ್ವಹಣೆ ಹಾಗೂ ಮರದ ತೋಪುಗಳನ್ನು ರಕ್ಷಿಸುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ಆರ್ಬರ್ ಡೇ ಫೌಂಡೇಷನ್‌ ಸಂಸ್ಥೆಯ ರೈನ್ ಫಾರೆಸ್ಟ್ ರೆಸ್ಕ್ಯೂ ಪ್ರೋಗ್ರಾಂ ಅರಣ್ಯನಾಶವನ್ನು ತಡೆಗಟ್ಟಲು ಸಹಾಯ ಮಾಡುತ್ತಿರುವ ಒಂದು ಚಟುವಟಿಕೆಯಾಗಿದೆ. ಇನ್ನಾವುದೇ ಬೇರೆ ಪೀಠೋಪಕರಣ ಕಂಪನಿಗಳು ಖರೀದಿ ಮಾಡುವುದಕ್ಕಿಂತ ಮೊದಲೇ ಈ ಸಂಸ್ಥೆಯು ದತ್ತಿಯಿಂದ ಸಂಗ್ರಹಿಸಿದ ಹಣವನ್ನು ಮಳೆಕಾಡು ಇರುವ ಭೂಪ್ರದೇಶವನ್ನು ಕೊಂಡುಕೊಂಡು ರಕ್ಷಿಸಲು ಮುಂದಾಗುತ್ತಿದೆ. ಅದರ ನಂತರ ಆರ್ಬರ್ ಡೇ ಫೌಂಡೇಷನ್‌ ಆ ಭೂಪ್ರದೇಶದಲ್ಲಿ ಅರಣ್ಯನಾಶ ಆಗುವುದನ್ನು ತಡೆಗಟ್ಟುತ್ತದೆ. ಇದು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪುರಾತನ ಆದಿವಾಸಿಗಳ ಪ್ರಮುಖ ಜೀವನ ಶೈಲಿಯ ಮೇಲೂ ನಿಯಂತ್ರಣ ಸಾಧಿಸುತ್ತಿದೆ. ಕಮ್ಯುನಿಟಿ ಫಾರೆಸ್ಟ್ರಿ ಇಂಟರ್‌ನ್ಯಾಷನಲ್, ಕೂಲ್ ಅರ್ಥ್, ದಿ ನೇಚರ್ ಕನ್ಸರ್ವೆನ್ಸಿ, ವರ್ಲ್ಡ್‌ವೈಡ್‌ ಫಂಡ್ ಫಾರ್ ನೇಚರ್, ಕನ್ಸರ್ವೇಷನ್ ಇಂಟರ್‌ನ್ಯಾಷನಲ್, ಆಫ್ರಿಕನ್ ಕನ್ಸರ್ವೇಷನ್ ಫೌಂಡೇಷನ್ ಹಾಗೂ ಗ್ರೀನ್‌ಪೀಸ್‌ನಂತಹಾ ಸಂಘಸಂಸ್ಥೆಗಳೂ ಸಹ ಅರಣ್ಯ ಸ್ವಾಭಾವಿಕ ನೆಲೆಗಳನ್ನು ರಕ್ಷಿಸುವತ್ತ ಗಮನಹರಿಸಿವೆ. ಅದರಲ್ಲಿಯೂ ಮುಖ್ಯವಾಗಿ ಗ್ರೀನ್‌ಪೀಸ್‌ ಇನ್ನೂ ಅಳಿವಿನಂಚಿನಲ್ಲಿರುವ ಅರಣ್ಯಗಳನ್ನು ಗುರುತಿಸಿ [೪] Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಅಂತರ್ಜಾಲದಲ್ಲಿ ಅದರ ಕುರಿತಾದ ಮಾಹಿತಿಯನ್ನು ಪ್ರಕಟಿಸಿದೆ.[೧೧೬] ಹೌ ಸ್ಟಫ್‌ ವರ್ಕ್ಸ್ ಜಾಲತಾಣವು ವಿಷಯಗಳಿಗೆ ಅನುಗುಣವಾಗಿ ಸರಳ ಭೂಪಟ ರಚಿಸಿದೆ,[೧೧೭] ಇದು ಮಾನವನ ಉಗಮಕ್ಕೂ ಮುಂಚೆ (8000 ವರ್ಷಗಳಿಗೂ ಮುಂಚೆ) ಇದ್ದ ಹಾಗೂ ಪ್ರಸ್ತುತ (ಕಡಿಮೆಯಾದ) ಇರುವ ಅರಣ್ಯದ ಮಟ್ಟವನ್ನು ತೋರಿಸುತ್ತದೆ.[೧೧೮] ಈ ಭೂಪಟಗಳು ಮಾನವನಿಂದ ಆದ ಹಾನಿಯಿಂದ ಸರಿಪಡಿಸಿ ಪುನಃಶ್ಚೇತನ ಆಗಬೇಕಿರುವ ಅರಣ್ಯದ ಪ್ರಮಾಣವನ್ನು ಗುರುತಿಸುತ್ತವೆ.

ಅರಣ್ಯ ನೆಡುತೋಪುಗಳು

[ಬದಲಾಯಿಸಿ]

ಮರಗಳಿಗಾಗಿ ವಿಶ್ವದೆಲ್ಲೆಡೆ ಇರುವ ಬೇಡಿಕೆಗಳನ್ನು ಪೂರೈಸಲು, ಅರಣ್ಯಶಾಸ್ತ್ರ ಲೇಖಕರುಗಳಾದ ಬೊಟ್ಕಿನ್ಸ್ ಹಾಗೂ ಸೆಡ್ಜೊರು ಹೆಚ್ಚು ಇಳುವರಿ ನೀಡುವ ಅರಣ್ಯ ನೆಡುತೋಪುಗಳು ಸೂಕ್ತ ಎಂಬುದನ್ನು ತಿಳಿಸುತ್ತಾರೆ. 5%ನಷ್ಟು ವಿಶ್ವದ ಅರಣ್ಯ ಪ್ರದೇಶದಲ್ಲಿ ಮಾಡಿದ ನೆಡುತೋಪುಗಳಿಂದ ವಾರ್ಷಿಕವಾಗಿ ಪ್ರತಿ ಹೆಕ್ಟೇರಿಗೆ 10 ಘನ ಮೀಟರುಗಳಷ್ಟು ಇಳುವರಿ ಪಡೆಯಬಹುದಾಗಿದ್ದು, ಇದರಿಂದ ಅಂತರರಾಷ್ಟ್ರೀಯ ವ್ಯಾಪಾರದ ಅಗತ್ಯಗಳನ್ನು ಪೂರೈಸಲು ಸಾಧ್ಯ ಎಂದು ಅಂದಾಜಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಪ್ರಾಕೃತಿಕ ಅರಣ್ಯಗಳು ಪ್ರತಿ ಹೆಕ್ಟೇರಿಗೆ 1-2 ಘನ ಮೀಟರುಗಳನ್ನು ಉತ್ಪಾದನೆ ಮಾಡುತ್ತವೆ; ಇದರಿಂದಾಗಿ, ಅಗತ್ಯತೆಗಳನ್ನು ಪೂರೈಸಲು 5ರಿಂದ 10 ಪಟ್ಟು ಹೆಚ್ಚಿನ ಅರಣ್ಯಭೂಮಿ ಬೇಕಾಗುತ್ತದೆ. ರಕ್ಷಿತ ಅರಣ್ಯ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ವೈವಿಧ್ಯಮಯ ಅರಣ್ಯವನ್ನು ಬೆಳೆಸುವುದರಿಂದ ಅದನ್ನು ಸಂರಕ್ಷಿಸಬಹುದಾಗಿದೆ ಎಂದು ಅರಣ್ಯಾಧಿಕಾರಿ ಚಾಡ್ ಆಲಿವರ್ ಅಭಿಪ್ರಾಯ ಪಡುತ್ತಾರೆ.[೧೧೯] FAO ದತ್ತಾಂಶಗಳ ಒಂದು ವಿಶ್ಲೇಷಣೆಯು ಹೊಸ ಅರಣ್ಯಗಳನ್ನು ಬೆಳೆಸುವ ಹಾಗೂ ಅರಣ್ಯವನ್ನು ಪುನಶ್ಚೇತನಗೊಳಿಸುವ ಯೋಜನೆಗಳಿಂದ "ಜಾಗತಿಕವಾಗಿ ನಾಶವಾದ ಮರಕಾಡುಗಳನ್ನು ಕೇವಲ 30 ವರ್ಷಗಳಲ್ಲಿ ಮರಳಿ ಪಡೆಯಬಹುದು" ಎಂದು ತಿಳಿಸುತ್ತದೆ.[೧೨೦] ಸಸಿಗಳನ್ನು ನೆಟ್ಟು ಅರಣ್ಯವನ್ನು ಪುನಶ್ಚೇತನಗೊಳಿಸುವುದರಿಂದ, ಹವಾಗುಣದಲ್ಲಿ ವ್ಯತ್ಯಯ ಉಂಟಾಗಿ ಮಳೆಯ ಶೈಲಿಗಳಲ್ಲಿ ಬದಲಾವಣೆ ಆಗುತ್ತದೆ. ಇದನ್ನು ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಅಭ್ಯಾಸ ಮಾಡುವುದು (ಗ್ಲೋಬಲಿಸ್ ಅಭಿವೃದ್ಧಿ ಪಡಿಸಿದ "2050 ಮಳೆಯ ಪ್ರಮಾಣ"ದ ಭೂಪಟ Archived 2011-04-23 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಗಮನಿಸಿರಿ) ಹಾಗೂ ಈ ಪ್ರದೇಶಗಳಲ್ಲಿ ಅರಣ್ಯವನ್ನು ಪುನಶ್ಚೇತನಗೊಳಿಸುವ ಯೋಜನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಾಧಿಸಬಹುದು. ನೈಜರ್, ಸಿಯೆರಾ ಲಿಯೋನ್ ಹಾಗೂ ಲೈಬೀರಿಯದಂತಹ ಪ್ರದೇಶಗಳಲ್ಲಿ ಮರಳುಗಾಡು ವಿಸ್ತರಿಸುತ್ತಿರುವುದು (ಸಹರಾ) ಹಾಗೂ ಜೀವ ವೈವಿಧ್ಯತೆ (ಪ್ರಮುಖ ಜೀವ ವೈವಿಧ್ಯತೆಯ ತಾಣಗಳಾಗಿರುವುದರಿಂದ) ಕ್ಷೀಣಿಸುತ್ತಿರುವುದರಿಂದ ಬಹುಮುಖ್ಯ ಎಂದು ಪರಿಗಣಿಸಲ್ಪಟ್ಟಿವೆ.

ಸೇನಾ ಸನ್ನಿವೇಶಗಳು

[ಬದಲಾಯಿಸಿ]
ಓಕಿನಾವದಲ್ಲಿ ಅಮೇರಿಕಾದ ಶೆರ್ಮನ್ ಯುದ್ಧಟ್ಯಾಂಕುಗಳು ಜಪಾನಿನ ಫಿರಂಗಿದಳವನ್ನು ಸೋಲಿಸಿದ್ದು.

ಕೃಷಿಭೂಮಿಗಾಗಿ ಹಾಗೂ ನಗರಗಳಲ್ಲಿನ ಮಾನವರ ಅವಶ್ಯಕತೆಗೆ ಅನುಗುಣವಾಗಿ ಅರಣ್ಯನಾಶವು ಮಿತಿ ಮೀರಿದ್ದರೂ, ಸೇನಾ ಕಾರಣಗಳಿಗಾಗಿಯೂ ನಾಶವಾದ ಕೆಲವು ಉದಾಹರಣೆಗಳಿವೆ. ಅದಕ್ಕೊಂದು ಉದಾಹರಣೆ ಎಂದರೆ IIನೇ ವಿಶ್ವ ಯುದ್ಧ ಮುಗಿದ ನಂತರ ಜರ್ಮನಿಯಲ್ಲಿ U.S. ವಸತಿ ವಲಯಗಳು ತಮ್ಮ ಚಟುವಟಿಕೆಗಳಿಗಾಗಿ ಉದ್ಧೇಶಪೂರ್ವಕವಾಗಿ ಮಾಡಿದ ಅರಣ್ಯನಾಶ. ಇದಕ್ಕಿಂತ ಮುಂಚೆ ಶೀತಲ ಸಮರಕ್ಕಿಂತ ಮುಂಚೆ ಸೋಲನ್ನಪ್ಪಿದ ಜರ್ಮನಿಯನ್ನು ಸಂಭಾವ್ಯ ಭವಿಷ್ಯದ ಜೊತೆಗಾರ ಎಂಬುದಕ್ಕಿಂತ ಭವಿಷ್ಯದ ಸಂಭಾವ್ಯ ಅಪಾಯವೆಂದೇ ಪರಿಗಣಿಸಲಾಗಿತ್ತು. ಈ ಅಪಾಯವನ್ನು ಕುರಿತು, ಜರ್ಮನಿಯ ಕೈಗಾರಿಕಾ ಪ್ರಬಲತೆಯನ್ನು ಕುಸಿಯುವಂತೆ ಪ್ರಯತ್ನಗಳನ್ನು ಮಾಡಲಾಯಿತು, ಅರಣ್ಯಗಳು ಆ ಪ್ರಬಲತೆಯ ಒಂದು ಸಾಧನವಾಗಿದ್ದುದರಿಂದ ಅವು ಪ್ರಮುಖ ಗುರಿಯಾದವು. U.S. ಸರ್ಕಾರದ ಕೆಲವು ಮೂಲಗಳು ಒಪ್ಪಿಕೊಂಡಂತೆ ಇದರ ಮುಖ್ಯ ಉದ್ದೇಶ "ಯುದ್ಧದಲ್ಲಿ ಜರ್ಮನಿಯ ಪ್ರಾಬಲ್ಯಕ್ಕೆ ಕಾರಣವಾದ ಅರಣ್ಯಗಳ ಸರ್ವನಾಶ ಮಾಡುವುದಾಗಿತ್ತು." ಈ ರೀತಿಯ ಸರ್ವನಾಶ ಮಾಡಿದ ಚಟುವಟಿಕೆಗಳ ಪರಿಣಾಮವಾಗಿ ಉಂಟಾದ ಅರಣ್ಯನಾಶವು "ಶತಮಾನಕ್ಕೂ ಹೆಚ್ಚು ಕಾಲ ನಿರಂತರ ಪರಿಶ್ರಮದ ಮೂಲಕವಷ್ಟೇ ಅಭಿವೃದ್ಧಿ ಪಡಿಸಲು ಸಾಧ್ಯವಾದಷ್ಟು ಅರಣ್ಯವು ನಾಶವಾಗಿತ್ತು."[೧೨೧]

ಯುದ್ಧವೂ ಅರಣ್ಯನಾಶಕ್ಕೆ ಕಾರಣವಾಗಬಹುದಾಗಿದ್ದು, ಉದ್ದೇಶಪೂರ್ವಕವಾದಂತಹಾ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಬಳಕೆಯಾದ ಏಜೆಂಟ್ ಆರೆಂಜ್‌ಅನ್ನು,[೧೨೨] ಬಾಂಬುಗಳನ್ನು ಬುಲ್ಡೋಜರ್‌ ಜೊತೆಯಾಗಿ ಬಳಸಿದ್ದರಿಂದ 44%ನಷ್ಟು ಅರಣ್ಯ ನಾಶಕ್ಕೆ ಕಾರಣವಾಗಿತ್ತು,[೧೨೩] ಅಥವಾ ಅನುದ್ದೇಶಪೂರ್ವಕವಾದಂತಹಾ 1945ನೇ ಇಸವಿಯಲ್ಲಿ ನಡೆದ ಓಕಿನಾವ ಕದನದಲ್ಲಿ ಸತತ ದಾಳಿಗಳಿಂದಾಗಿ ಹಾಗೂ ಇನ್ನಿತರೆ ಯುದ್ಧ ಕಾರ್ಯಾಚರಣೆಗಳಿಂದಾಗಿ ಸೊಂಪಾಗಿ ಬೆಳೆದ ಉಷ್ಣವಲಯ ಭೂಪ್ರದೇಶವನ್ನು "ಮಣ್ಣು, ಸೀಸ, ಕೊಳೆವಸ್ತು ಹಾಗೂ ಹುಳುಗಳಿಂದ ತುಂಬಿಸಿತ್ತು".[೧೨೪]

ಇದನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
ಟಿಪ್ಪಣಿಗಳು
  1. ರಿಟರ್ನಿಂಗ್ ಫಾರೆಸ್ಟ್ಸ್ ಅನಲೈಜ್ಡ್ ವಿತ್ ದಿ ಫಾರೆಸ್ಟ್ ಐಡೆಂಟಿಟಿ Archived 2019-12-28 ವೇಬ್ಯಾಕ್ ಮೆಷಿನ್ ನಲ್ಲಿ., 2006, ಲೇ: ಪೆಕ್ಕಾ E. ಕೌಪ್ಪಿ (ಜೀವವಿಜ್ಞಾನ ಹಾಗೂ ಪರಿಸರ ವಿಜ್ಞಾನಗಳ ವಿಭಾಗ, ಹೆಲ್ಸಿಂಕಿ ವಿಶ್ವವಿದ್ಯಾಲಯ), ಜೆಸ್ಸಿ H. ಆಸುಬೆಲ್ (ಮಾನವ ಪರಿಸರದ ಕಾರ್ಯಕ್ರಮ, ರಾಕ್‌ಫೆಲ್ಲರ್ ವಿಶ್ವವಿದ್ಯಾಲಯ), ಜಿಂಗ್‌ಯುನ್‌ ಫಾಂಗ್ (ಪರಿಸರ ವಿಜ್ಞಾನ ವಿಭಾಗ, ಪೀಕಿಂಗ್ ವಿಶ್ವವಿದ್ಯಾಲಯ), ಅಲೆಕ್ಸಾಂಡರ್ S. ಮಾಥೆರ್ (ಭೂಗೋಳ ಹಾಗೂ ಪರಿಸರ ವಿಭಾಗ, ಅಬೆರ್ದೀನ್ ವಿಶ್ವವಿದ್ಯಾಲಯ), ರೋಜರ್ A. ಸೆಡ್ಜೋ (ಭವಿಷ್ಯದ ಸಂಪನ್ಮೂಲಗಳು), ಹಾಗೂ ಪೌಲ್ E. ವಾಗನರ್ (ಕನೆಕ್ಟಿಕಟ್ ವ್ಯವಸಾಯಿಕ ಪ್ರಯೋಗಕೇಂದ್ರ)
  2. "ಯೂಸ್‌ ಎನರ್ಜಿ, ಗೆಟ್ ರಿಚ್ ಅಂಡ್ ಸೇವ್ ಪ್ಲಾನೆಟ್", ದಿ ನ್ಯೂಯಾರ್ಕ್ ಟೈಮ್ಸ್‌ , ಏಪ್ರಿಲ್ 20, 2009
  3. . Philippine Daily Inquirer. January 3, 2008 last=Burgonio http://www.wrm.or last=Burgonio. {{cite web}}: Check |url= value (help); Missing or empty |title= (help); Missing pipe in: |url= (help)[ಶಾಶ್ವತವಾಗಿ ಮಡಿದ ಕೊಂಡಿ]
  4. "Global Deforestation". Global Change Curriculum. University of Michigan Global Change Program. January 4, 2006. Archived from the original on ಜೂನ್ 15, 2011. Retrieved ಫೆಬ್ರವರಿ 4, 2010.
  5. ೫.೦ ೫.೧ Alain Marcoux (August 2000). "Population and deforestation". SD Dimensions. Sustainable Development Department, Food and Agriculture Organization of the United Nations (FAO). Archived from the original on 2011-06-28. Retrieved 2010-02-04.
  6. Jocelyn Stock, Andy Rochen. "The Choice: Doomsday or Arbor Day". Archived from the original on ಏಪ್ರಿಲ್ 16, 2009. Retrieved May 13, 2009.
  7. Butler, Rhett A. "Impact of Population and Poverty on Rainforests". Mongabay.com / A Place Out of Time: Tropical Rainforests and the Perils They Face. Retrieved May 13, 2009.
  8. Karen. "Demographics, Democracy, Development, Disparity and Deforestation: A Crossnational Assessment of the Social Causes of Deforestation". Paper presented at the annual meeting of the American Sociological Association, Atlanta Hilton Hotel, Atlanta, GA, Aug 16, 2003. Archived from the original on ಡಿಸೆಂಬರ್ 10, 2008. Retrieved May 13, 2009.
  9. Susanna B. Hecht, Susan Kandel, Ileana Gomes, Nelson Cuellar and Herman Rosa (2006). "Globalization, Forest Resurgence, and Environmental Politics in El Salvador" (PDF). World Development Vol. 34, No. 2. pp. 308–323. Archived from the original (PDF) on 2008-10-29. Retrieved 2010-02-04.{{cite web}}: CS1 maint: multiple names: authors list (link)
  10. "The Double Edge of Globalization". YaleGlobal Online. Yale University Press. June 2007. Archived from the original on 2009-04-10. Retrieved 2010-02-04.
  11. Butler, Rhett A. "Human Threats to Rainforests—Economic Restructuring". Mongabay.com / A Place Out of Time: Tropical Rainforests and the Perils They Face. Retrieved May 13, 2009.
  12. UNFCCC (2007). "Investment and financial flows to address climate change" (PDF). unfccc.int. UNFCCC. p. 81.
  13. ೧೩.೦ ೧೩.೧ Pearce, David W (2001). "The Economic Value of Forest Ecosystems" (PDF). Ecosystem Health, Vol. 7, no. 4. pp. 284–296. {{cite web}}: Unknown parameter |month= ignored (help)
  14. Erwin H Bulte; Mark Joenje; Hans G P Jansen (2000). "Is there too much or too little natural forest in the Atlantic Zone of Costa Rica?". Canadian Journal of Forest Research; 30:3. pp. 495–506.{{cite web}}: CS1 maint: multiple names: authors list (link)
  15. ೧೫.೦ ೧೫.೧ ೧೫.೨ Arild Angelsen, David Kaimowitz (February 1999). "Rethinking the causes of deforestation: Lessons from economic models". The World Bank Research Observer, 14:1. Oxford University Press. pp. 73–98.
  16. Laurance, William F. (December 1999). "Reflections on the tropical deforestation crisis" (PDF). Biological Conservation, Volume 91, Issues 2-3. pp. 109–117. Archived from the original (PDF) on 2006-09-08. Retrieved 2010-02-04.
  17. Helmut J. Geist And Eric F. Lambin (February 2002). "Proximate Causes and Underlying Driving Forces of Tropical Deforestation" (PDF). BioScience, Vol. 52, No. 2. pp. 143–150. Archived from the original (PDF) on 2011-07-26. Retrieved 2010-02-04.
  18. Butler, Rhett A. and Laurance, William F. (August 2008). "New strategies for conserving tropical forests" (PDF). Trends in Ecology & Evolution, Vol. 23, No. 9. pp. 469–472. {{cite web}}: line feed character in |title= at position 39 (help)CS1 maint: multiple names: authors list (link)
  19. ರುಡೆಲ್, T.K. 2005 "ಟ್ರಾಪಿಕಲ್ ಫಾರೆಸ್ಟ್ಸ್: ರೀಜನಲ್ ಪಾತ್ಸ್ ಆಫ್ ಡಿಸ್ಟ್ರಕ್ಷನ್ ಅಂಡ್ ರೀಜನರೇಷನ್ ಇನ್ ದಿ ಲೇಟ್ 20ತ್‌ ಸೆಂಚುರಿ" ಕೊಲಂಬಿಯಾ ವಿಶ್ವವಿದ್ಯಾಲಯ ಮುದ್ರಣಾಲಯ
  20. ಟೆಂಪ್ಲೇಟು:CitvbBJjwe web
  21. "Massive deforestation threatens food security". Archived from the original on 2011-07-18. Retrieved 2010-02-04.
  22. ಡಿಫಾರೆಸ್ಟ್ರೇಷನ್ Archived 2015-04-03 ವೇಬ್ಯಾಕ್ ಮೆಷಿನ್ ನಲ್ಲಿ., ಸೈನ್ಸ್‌ಡೈಲಿ
  23. ಕನ್‌ಫರ್ಮಡ್: ಡಿಫಾರೆಸ್ಟ್ರೇಷನ್ ಪ್ಲೇಸ್ ಕ್ರಿಟಿಕಲ್ ಕ್ಲೈಮೇಟ್ ಚೇಂಜ್ ರೋಲ್, ಸೈನ್ಸ್‌ಡೈಲಿ, ಮೇ 11, 2007
  24. ಭೂ ತಾಪಮಾನ ಏರಿಕೆಗೆ ಅರಣ್ಯನಾಶ ಕಾರಣ Archived 2009-08-05 ವೇಬ್ಯಾಕ್ ಮೆಷಿನ್ ನಲ್ಲಿ., FAO
  25. ೨೫.೦ ೨೫.೧ ಫಿಲಿಪ್ M. ಫೆರ್ನಸಿಡೆಲ್ ಹಾಗೂ ವಿಲಿಯಂ F. ಲಾರೆನ್ಸ್, TROPICAL DEFORESTATION AND GREENHOUSE-GAS EMISSIONS , ಎಕಲಾಜಿಕಲ್ ಅಪ್ಲಿಕೇಷನ್ಸ್, ಸಂಪುಟ 14, ಸಂಚಿಕೆ 4 (ಆಗಸ್ಟ್‌‌ 2004) pp. 982–986
  26. "Fondation Chirac » Deforestation and desertification".
  27. http://www.ipcc.ch/pdf/assessment-report/ar4/wg1/ar4-wg1-chapter7.pdf Archived 2011-03-15 ವೇಬ್ಯಾಕ್ ಮೆಷಿನ್ ನಲ್ಲಿ. IPCC ನಾಲ್ಕನೇ ಪರಿಶೀಲನಾ ವರದಿ, ಕಾರ್ಯನಿರತ ಗುಂಪು I ವರದಿ "ದ ಫಿಸಿಕಲ್‌ ಸೈನ್ಸ್‌‌ ಬೇಸಿಸ್‌‌", ವಿಭಾಗ 7.3.3.1.5 (p. 527)
  28. G.R.ವಾನ್ ದೆರ್ ವ್ರೆಫ್,D.C.ಮಾರ್ಟನ್,R.S.ಡಿಫ್ರೇಯ್ಸ್,J.G.J.ಆಲಿವಿಯರ್,P.S.ಕಸಿಭಾತ್ಲಾ,R.B.ಜಾಕ್ಸನ್,G.J.ಕೊಲ್ಲೆಟ್ಜ್ ಹಾಗೂ J.T.ರ್ರ್ಯಾಂಡರ್‌ಸನ್, CO2 ಎಮಿಷನ್ ಫ್ರಂ ಫಾರೆಸ್ಟ್ ಲಾಸ್ , ನೇಚರ್ ಜಿಯೋಸೈನ್ಸ್, ಸಂಪುಟ 2 (ನವೆಂಬರ್‌ 2009) pp. 737-738
  29. I.C. ಪ್ರೆಂಟಿಸ್‌‌. "ದಿ ಕಾರ್ಬನ್ ಸೈಕಲ್ ಅಂಡ್ ಅಟ್ಮಾಸ್ಪಿಯರಿಕ್ ಕಾರ್ಬನ್ ಡೈಆಕ್ಸೈಡ್‌" IPCC, http://www.grida.no/CLIMATE/IPCC_TAR/wg1/pdf/TAR-03.PDF Archived 2009-08-04 ವೇಬ್ಯಾಕ್ ಮೆಷಿನ್ ನಲ್ಲಿ.
  30. ಬ್ರಿಂಗಿಂಗ್ ‘REDD’ ಇನ್‌ಟು ಎ ನ್ಯೂ ಡೀಲ್ ಫಾರ್ ದಿ ಗ್ಲೋಬಲ್ ಕ್ಲೈಮೇಟ್ , ವ್ರೆಟ್ಜ್-ಕನೋನಿಕಾಫ್, L. ಗ್ಸಿಮೆನಾ ರೂಬಿಯೊ ಅಲ್ವರಾಡೊ, ಅನಾಲಿಸೀಸ್, n° 2, 2007, ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ ಅಂಡ್ ಇಂಟರ್‌ನ್ಯಾಷನಲ್ ರಿಲೇಷನ್ಸ್.[೧] Archived 2007-12-25 ವೇಬ್ಯಾಕ್ ಮೆಷಿನ್ ನಲ್ಲಿ.
  31. ೩೧.೦ ೩೧.೧ "How can you save the rain forest. October 8, 2006. Frank Field". Archived from the original on ಮೇ 17, 2008. Retrieved ಫೆಬ್ರವರಿ 4, 2010.
  32. ಬ್ರೂಕರ್, ವಾಲೇಸ್ S. (2006). "ಬ್ರೀಥಿಂಗ್ ಈಸಿ: ಎಟ್ ಟು, O2." ಕೊಲಂಬಿಯಾ ವಿಶ್ವವಿದ್ಯಾಲಯ http://www.columbia.edu/cu/21stC/issue-2.1/broecker.htm.
  33. ಮೊರನ್, E.F., "ಡಿಫಾರೆಸ್ಟ್ರೇಷನ್ ಅಂಡ್ ಲ್ಯಾಂಡ್ ಯೂಸ್ ಇನ್ ದಿ ಬ್ರೆಜಿಲಿಯನ್ ಅಮೇಜಾನ್", ಹ್ಯೂಮನ್ ಎಕಾಲಜಿ, Vol 21, No. 1, 1993"
  34. "Underlying Causes of Deforestation: UN Report". Archived from the original on 2001-04-11. Retrieved 2010-02-04.
  35. "Deforestation and Landslides in Southwestern Washington". Archived from the original on 2012-08-05. Retrieved 2010-02-04.
  36. ಚೀನಾಸ್ ಫ್ಲಡ್ಸ್: ಇಸ್ ಡಿಫಾರೆಸ್ಟ್ರೇಷನ್ ಟು ಬ್ಲೇಮ್?, BBC ನ್ಯೂಸ್
  37. "Underlying Causes of Deforestation: UN Report". Archived from the original on 2008-12-06. Retrieved 2010-02-04.
  38. "ಸಾಯಿಲ್, ವಾಟರ್ ಅಂಡ್ ಪ್ಲಾಂಟ್ ಕ್ಯಾರೆಕ್ಟರಿಸ್ಟಿಕ್ಸ್ ಇಂಪಾರ್ಟೆಂಟ್ ಟು ಇರಿಗೇಷನ್". Archived 2012-11-25 ವೇಬ್ಯಾಕ್ ಮೆಷಿನ್ ನಲ್ಲಿ. ನಾರ್ತ್ ಡಕೊಟ ಸ್ಟೇಟ್ ವಿಶ್ವವಿದ್ಯಾಲಯ.
  39. http://www.actionbioscience.org/environment/nilsson.html ನಮ್ಮಲ್ಲಿ ಸಾಕಷ್ಟು ಪ್ರಮಾಣದ ಕಾಡುಗಳು ಇವೆಯಾ? ಲೇ: ಸ್ಟೆನ್ ನಿಲ್‌ಸ್ಸನ್‌
  40. "Deforestation". Archived from the original on 2009-04-16. Retrieved 2010-02-04.
  41. ರೈನ್‌ಫಾರೆಸ್ಟ್ಸ್ ಬಯೋಡೈವರ್ಸಿಟಿ ಷೋಸ್ ಡಿಫರೆಂಟ್ ಪ್ಯಾಟರ್ನ್ಸ್‌, ಸೈನ್ಸ್‌ಡೈಲಿ, ಆಗಸ್ಟ್ 14, 2007
  42. "BMBF: Medicine from the rainforest". Archived from the original on 2008-12-06. Retrieved 2010-02-04.
  43. ಸಿಂಗಲ್-ಲಾರ್ಜೆಸ್ಟ್ ಬಯೋಡೈವರ್ಸಿಟಿ ಸರ್ವೆ ಸೇಸ್ ಪ್ರೈಮರಿ ರೈನ್‌ಫಾರೆಸ್ಟ್ ಈಸ್ ಇರ್‌ರೀಪ್ಲೇಸೆಬಲ್ Archived 2009-08-14 ವೇಬ್ಯಾಕ್ ಮೆಷಿನ್ ನಲ್ಲಿ., ಬಯೋ-ಮೆಡಿಸಿನ್, ನವೆಂಬರ್ 14, 2007
  44. ಟ್ರಾಪಿಕಲ್ ರೈನ್‌ಫಾರೆಸ್ಟ್ಸ್ - ದಿ ಟ್ರಾಪಿಕಲ್ ರೈನ್‌ಫಾರೆಸ್ಟ್, BBC
  45. "Tropical Rainforest". Archived from the original on 2000-03-02. Retrieved 2010-02-04.
  46. U.N. ಕಾಲ್ಸ್ ಆನ್ ಏಷಿಯನ್ ನೇಷನ್ಸ್ ಟು ಎಂಡ್ ಡಿಫಾರೆಸ್ಟ್ರೇಷನ್, Reuters
  47. "Rainforest Facts".
  48. ಟ್ರಾಪಿಕಲ್ ರೈನ್‌ ಫಾರೆಸ್ಟ್ಸ್ - ರೈನ್‌ಫಾರೆಸ್ಟ್ ವಾಟರ್ ಅಂಡ್ ನ್ಯೂಟ್ರಿಯೆಂಟ್ ಸೈಕಲ್‌, BBC
  49. ಪ್ರೈಮರಿ ರೈನ್‌ ಫಾರೆಸ್ಟ್ ರಿಚರ್ ಇನ್ ಸ್ಪೀಸೀಸ್ ದ್ಯಾನ್ ಪ್ಲಾಂಟೋಷನ್ಸ್, ಸೆಕೆಂಡರಿ ಫಾರೆಸ್ಟ್ಸ್, ಜುಲೈ 2, 2007
  50. ೫೦.೦ ೫೦.೧ ೫೦.೨ ಪಿಮ್ಮ್, ಸ್ಟಾರ್ಟ್ L, ರಸ್ಸೆಲ್, ಗಾರೆಥ್ J, ಗಿಟ್ಟಲ್‌ಮನ್ನ್‌, ಜಾನ್ L, ಬ್ರೂಕ್ಸ್, ಥಾಮಸ್‌ . 1995 "ದಿ ಫ್ಯೂಚರ್ ಆಫ್ ಬಯೋಡೈವರ್ಸಿಟಿ" ಸೈನ್ಸ್ 269:5222 347-341
  51. ೫೧.೦ ೫೧.೧ ^ ಟಿಮೊಥಿ ಚಾರ್ಲ್ಸ್ ಹಾಗೂ ವೈಟ್‌ಮೂರ್, ಜೆಫ್ರಿ ಸೇಯರ್, 1992 "ಟ್ರಾಪಿಕಲ್ ಡಿಫಾರೆಸ್ಟ್ರೇಷನ್ ಅಂಡ್ ಸ್ಪೀಸೀಸ್ ಎಕ್ಸ್ಟಿಂಕ್ಷನ್ಸ್" ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸಸ್ ಕಮಿಷನ್ ಆನ್ ಎಕಾಲಜಿ.
  52. ೫೨.೦ ೫೨.೧ ೫೨.೨ "www.rain-tree.com/facts.htm".
  53. ಲೀಕಿ, ರಿಚರ್ಡ್ ಹಾಗೂ ರಾಜರ್ ಲೆವಿನ್, 1996, ದಿ ಸಿಕ್ಸ್ತ್ ಎಕ್ಸ್ಟಿಂಕ್ಷನ್: ಪ್ಯಾಟರ್ನ್ಸ್ ಆಫ್ ಲೈಫ್ ಅಂಡ್ ದಿ ಫ್ಯೂಚರ್ ಆಫ್ ಹ್ಯೂಮನ್‌ಕೈಂಡ್ , ಆಂಕರ್, ISBN 0-385-46809-1
  54. ದಿ ಗ್ರೇಟ್ ರೈನ್‌ಫಾರೆಸ್ಟ್ ಟ್ರಾಜಡಿ, ದಿ ಇಂಡಿಪೆಂಡೆಂಟ್
  55. ಬಯೋಡೈವರ್ಸಿಟಿ ವೈಪ್‌ಔಟ್ ಫೇಸಿಂಗ್ ಸೌತ್‌ಈಸ್ಟ್ ಏಷ್ಯಾ, ನ್ಯೂ ಸೈಂಟಿಸ್ಟ್, 23 ಜುಲೈ 2003
  56. ನೇಚರ್ ಲಾಸ್ 'ಟು ಹರ್ಟ್ ಗ್ಲೋಬಲ್ ಪೂರ್', BBC ನ್ಯೂಸ್, ಮೇ 29, 2008
  57. http://atlas.aaas.org/pdf/63-66.pdf Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ. ಅರಣ್ಯದ ಉತ್ಪನ್ನಗಳು
  58. "Destruction of Renewable Resources".
  59. ವಿಶ್ವದಾದ್ಯಂತ ಉಷ್ಣವಲಯ ಅರಣ್ಯಗಳ ನಾಶದಿಂದಾಗಿ ಕೊಂಚ ಮಟ್ಟಿಗಿನ ಆರ್ಥಿಕ ಲಾಭದೊಂದಿಗೆ ದೊಡ್ಡ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳು ಹೊರಬರುತ್ತಿವೆ ಎಂದು CGIAR.orgನಲ್ಲಿ ಬಂದ ಒಂದು ಅಧ್ಯಯನ ತಿಳಿಸುತ್ತದೆ Archived 2012-06-09 ವೇಬ್ಯಾಕ್ ಮೆಷಿನ್ ನಲ್ಲಿ., ಡಿಸೆಂಬರ್ 4, 2007
  60. "New ASB Report finds deforestation offers very little money compared to potential financial benefits at ASB.CGIAR.org".
  61. ೬೧.೦ ೬೧.೧ Flannery, T (1994). The future eaters. Melbourne: Reed Books.
  62. "Clearances and Clearings: Deforestation in Mesolithic/Neolithic Britain". Oxford Journal of Archaeology.[ಶಾಶ್ವತವಾಗಿ ಮಡಿದ ಕೊಂಡಿ]
  63. "hand tool :: Neolithic tools -- Britannica Online Encyclopedia".
  64. "Neolithic Age from 4,000 BC to 2,200 BC or New Stone Age". Archived from the original on 2007-03-04. Retrieved 2010-02-04.
  65. C. ಮೈಕೆಲ್ ಹೊಗನ್. 2007. "ನಾಸಸ್ ಫೀಲ್ಡ್‌ನೋಟ್ಸ್", ದಿ ಮಾಡ್ರನ್ ಆಂಟಿಕ್ವೇರಿಯನ್
  66. "www.school.eb.com/comptons/article-9310969?query=deforestation&ct=".
  67. ಟೀರ್ದ್ H. ವಾನ್ ಅಂದೆಲ್, ಎಬರ್ಹಾರ್ಡ್ ಜಂಜೆರ್, ಆನ್ನಾ ಡೆಮಿಟ್ರಾಕ್, "ಲ್ಯಾಂಡ್ ಯೂಸ್ ಅಂಡ್ ಸಾಯಿಲ್ ಎರೋಷನ್ ಇನ್ ಪ್ರೀಹಿಸ್ಟಾರಿಕ್ ಅಂಡ್ ಹಿಸ್ಟಾರಿಕಲ್ ಗ್ರೀಸ್‌' ಜರ್ನಲ್ ಆಫ್ ಫೀಲ್ಡ್ ಆರ್ಕಿಯಾಲಜಿ 17.4 (ವಿಂಟರ್ 1990), pp. 379-396
  68. "ದಿ ಮಿಸ್ಟರಿ ಆಫ್ ಈಸ್ಟರ್ ಐಲೆಂಡ್", ಸ್ಮಿತ್ಸೊನಿಯನ್ ಮ್ಯಾಗಜೈನ್ , ಏಪ್ರಿಲ್‌ 01, 2007
  69. "Historical Consequences of Deforestation: Easter Island". Archived from the original on 2009-04-29. Retrieved 2010-02-04.
  70. "Jared Diamond, Easter Island's End".
  71. ದಿ ಸಿವಿಲೈಜೇಷನ್ ಆಫ್ ದಿ ಮಿಡ್ಲ್ ಏಜಸ್ : ದಿ ಲೈಫ್ ಅಂಡ್ ಡೆತ್ ಆಫ್ ಎ ಸಿವಿಲೈಜೇಷನ್ ಪುಸ್ತಕದ ಅಂತ್ಯದಲ್ಲಿ (1993) pp 564f.
  72. F. ಟೆರ್ರಿ ನಾರಿಸ್, "ವೇರ್ ಡಿಡ್ ದಿ ವಿಲೇಜಸ್ ಗೊ? ಸ್ಟೀಮ್‌ಬೋಟ್ಸ್, ಡಿಫಾರೆಸ್ಟ್ರೇಷನ್, ಅಂಡ್ ಆರ್ಕಿಯೊಲಾಜಿಕಲ್ ಲಾಸ್ ಇನ್ ದಿ ಮಿಸಿಸ್ಸಿಪಿ ವ್ಯಾಲಿ", in ಕಾಮನ್ ಫೀಲ್ಡ್ಸ್‌ನಲ್ಲಿ: ಎನ್ ಎನ್ವಿರಾನ್ಮೆಂಟಲ್ ಹಿಸ್ಟರಿ ಆಫ್ St. ಲ್ಯೂಯಿಸ್‌ , ಆಂಡ್ರೂ ಹರ್ಲೆ, ed., St. ಲ್ಯೂಯಿಸ್‌, MO: ಮಿಸ್ಸೌರಿ ಹಿಸ್ಟಾರಿಕಲ್ ಸೊಸೈಟಿ ಪ್ರೆಸ್, 1997, pp. 73-89
  73. ೭೩.೦ ೭೩.೧ ೭೩.೨ ೭೩.೩ E. O. ವಿಲ್ಸನ್, 2002, ದಿ ಫ್ಯೂಚರ್ ಆಫ್ ಲೈಫ್ , ವಿಂಟೇಜ್ ISBN 0-679-76811-4
  74. ಭೂಪಟವು ಉಷ್ಣವಲಯ ದೇಶಗಳಲ್ಲಿ ಅರಣ್ಯನಾಶದ ಪ್ರಮಾಣವನ್ನು ತೋರಿಸುತ್ತದೆ, guardian.co.uk, ಜುಲೈ 1, 2008
  75. ೭೫.೦ ೭೫.೧ ಮೇಕಾಕ್, ಪೌಲ್ F. ಡಿಫಾರೆಸ್ಟ್ರೇಷನ್‌[ಶಾಶ್ವತವಾಗಿ ಮಡಿದ ಕೊಂಡಿ] . ವರ್ಲ್ಡ್‌ಬುಕ್ ಆನ್‌ಲೈನ್‌.
  76. ೭೬.೦ ೭೬.೧ ರಾನ್ ನೀಲ್ಸನ್, ದಿ ಲಿಟ್ಲ್ ಗ್ರೀನ್ ಹ್ಯಾಂಡ್‌ಬುಕ್: ಸೆವೆನ್ ಟ್ರೆಂಡ್ಸ್ ಷೇಪಿಂಗ್ ದಿ ಫ್ಯೂಚರ್ ಅಫ್ ಅವರ್ ಪ್ಲಾನೆಟ್ , ಪಿಕಾಡರ್, ನ್ಯೂಯಾರ್ಕ್ (2006) ISBN 978-0-312-42581-4
  77. ಮಳೆಕಾಡುಗಳು – ಮಳೆಕಾಡನ್ನು ಕುರಿತಾದ ನೈಜ ಸಂಗತಿಗಳು ಹಾಗೂ ಮಾಹಿತಿ.
  78. ಆಡಮ್, ಡೇವಿಡ್. ""ಗ್ಲೋಬಲ್‌ ಡಿಫಾರೆಸ್ಟ್ರೇಷನ್ ಫಿಗರ್ಸ್ ಕ್ವೆಶ್ಚನ್ಡ್". ದಿ ಗಾರ್ಡಿಯನ್‌‌. ಜನವರಿ 5, 2008
  79. "www.econlib.org/library/Enc/EnvironmentalQuality.html".
  80. Bjørn Lomborg (2001). The Skeptical Environmentalist. Cambridge: Cambridge University Press.
  81. ನ್ಯೂ ಜಂಗಲ್ ಪ್ರಾಮ್ಟ್ ಎ ಡಿಬೆಟ್ ಆನ್ ರೈನ್‌ಫಾರೆಸ್ಟ್, ದಿ ನ್ಯೂಯಾರ್ಕ್ ಟೈಮ್ಸ್‌, ಜನವರಿ 30, 2009.
  82. ಹವಾಗುಣ ಬದಲಾವಣೆ ಕುರಿತಾದ ಅಂತರ ಸರ್ಕಾರೀ ತಂಡ (2000). ಲ್ಯಾಂಡ್ ಯೂಸ್, ಲ್ಯಾಂಡ್ ಯೂಸ್ ಚೇಂಜ್ ಅಂಡ್ ಫಾರೆಸ್ಟ್ರಿ. ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌. [page needed]
  83. ಫ್ರೆಡ್ರಿಕ್ ಅಕಾರ್ಡ್, ಹಗ್ D ಈವಾ, ಹನ್ಸ್-ಜುರ್ಗೆನ್ ಸಿಟ್ಬಿಗ್, ಫಿಲಿಪ್ ಮೇಆಕ್ಸ್ (2002). ""ಡಿಟರ್ಮಿನೇಷನ್ ಆಫ್ ಡಿಫಾರೆಸ್ಟ್ರೇಷನ್ ರೇಟ್ಸ್ ಆಫ್ ದಿ ವರ್ಲ್ಡ್ಸ್ ಹ್ಯೂಮಿಡ್ ಟ್ರಾಪಿಕಲ್ ಫಾರೆಸ್ಟ್ಸ್." ವಿಜ್ಞಾನ 297:5583: pp. 999-1003.
  84. ಜ್ಹಾ, ಅಲೋಕ್. ""ಅಮೇಜಾನ್ ರೈನ್‌ಫಾರೆಸ್ಟ್ ವ್ಯಾನಿಷಿಂಗ್ ಅಟ್ ಟ್ವೈಸ್ ರೇಟ್ ಆಫ್ ಪ್ವಿಯಸ್ ಎಸ್ಟಿಮೇಟ್ಸ್". ದಿ ಗಾರ್ಡಿಯನ್‌‌. ‍ಅಕ್ಟೋಬರ್‌ 21, 2002.
  85. ಅತ್ಯಂತ ವೇಗವಾಗಿ ಕ್ಷೀಣಿಸುತ್ತಿರುವ ಅಮೇಜಾನ್ ಅರಣ್ಯದ ಉಪಗ್ರಹ ಚಿತ್ರಗಳು, csmonitor.com
  86. http://www.aseanenvironment.info/Abstract/41014849.pdf Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ಅರಣ್ಯನಾಶ ಹಾಗೂ ಪರಿಸರದ ಕುನೆಟ್ಜ್ ಕರ್ವ್:ಒಂದು ಸಂಸ್ಥೆಯ ದೃಷ್ಟಿಕೋನ
  87. ಎನ್ವಿರಾನ್‌ಮೆಂಟಲ್ ಎಕನಾಮಿಕ್ಸ್: ಎ ಡೀಫಾರೆಸ್ಟ್ರೇಷನ್ ಕುನೆಟ್ಜ್ ಕರ್ವ್?, ನವೆಂಬರ್ 22, 2006
  88. "Is there an environmental Kuznets curve for deforestation?".
  89. "Pan-tropical Survey of Forest Cover Changes 1980-2000". Forest Resources Assessment. Rome, Italy: Food and Agriculture Organization of the United Nations (FAO).
  90. "www.fao.org/DOCREP/MEETING/003/X9591E.HTM".
  91. ವರ್ಲ್ಡ್‌ವಾಚ್: ವುಡ್ ಪ್ರೊಡಕ್ಷನ್ ಅಂಡ್ ಡಿಫಾರೆಸ್ಟ್ರೇಷನ್ ಇನ್ಕ್ರೀಸ್ & ರೀಸೆಂಟ್ ಕಂಟೆಂಟ್ Archived 2008-10-25 ವೇಬ್ಯಾಕ್ ಮೆಷಿನ್ ನಲ್ಲಿ., ವರ್ಲ್ಡ್‌ವಾಚ್‌ ಸಂಸ್ಥೆ
  92. ೯೨.೦ ೯೨.೧ "World deforestation rates and forest cover statistics, 2000-2005".
  93. ಅತ್ಯಂತ ಹೆಚ್ಚು ವಿಭಿನ್ನ ನೆಲೆಗಳಿರುವ ಉಷ್ಣವಲಯ ಮಳೆಕಾಡಿನಂತಹ ಪ್ರದೇಶಗಳಲ್ಲಿ, ವೇಗವಾಗಿ ಕ್ಷೀಣಿಸುತ್ತಿದ್ದು ಅದನ್ನು ಕಡಿಮೆ ವೈವಿಧ್ಯತೆ ಇರುವ ಶುಷ್ಕ ಬಯಲು ಪ್ರದೇಶದ ನಿಧಾನ ಗತಿಯ ಅರಣ್ಯನಾಶವು ಮರೆಮಾಡುತ್ತಿರುವುದು ಭಯಹುಟ್ಟಿಸುತ್ತಿದೆ. ಇದನ್ನು ಕಡೆಗಣಿಸಿರುವುದರಿಂದ, ಜಾಗತಿಕ ಅರಣ್ಯನಾಶದ ಪ್ರಮಾಣ ಕುಂಠಿತವಾದರೂ ಅರಣ್ಯನಾಶದ ಅಪಾಯಕಾರಿ ಪರಿಣಾಮಗಳು (ಪ್ರಾಣಿಗಳ ನೆಲೆಗಳು ನಾಶವಾಗುತ್ತಿರುವುದು) ಹೆಚ್ಚಾಗುತ್ತಿವೆ.
  94. "Remote sensing versus self-reporting".
  95. ವಿಶ್ವ ಬ್ಯಾಂಕ್ ಅಂದಾಜಿಸಿದಂತೆ ಬೊಲಿವಿಯಾದಲ್ಲಿ 80%ನಷ್ಟು ಹಾಗೂ ಕಾಂಬೋಡಿಯಾದಲ್ಲಿ 42%ನಷ್ಟು ಮರಗಳನ್ನು ಕತ್ತರಿಸುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರವಾಗಿವೆ, ಪೆರುವಿನಲ್ಲಿ ಮಾತ್ರ, ಈ ರೀತಿಯ ಅಕ್ರಮ ಚಟುವಟಿಕೆಗಳು 80%ನಷ್ಟಿದೆ. ವಿಶ್ವಬ್ಯಾಂಕ್‌, 2006. ಫಾರೆಸ್ಟ್ ಲಾ ಎನ್ಫೋರ್ಸ್‌ಮೆಂಟ್ .) (ದಿ ಪೆರುವಿಯನ್ ಎನ್ವಿರಾನ್‌ಮೆಂಟಲ್ ಲಾ ಸೊಸೈಟಿ (2003). ಕೇಸ್ ಸ್ಟಡಿ ಆನ್ ದಿ ಡೆವಲಪ್ಮೆಂಟ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಗೈಡ್‌ಲೈನ್ಸ್ ಫಾರ್ ದಿ ಕಂಟ್ರೋಲ್ ಆಫ್ ಇಲ್ಲೀಗಲ್ ಲಾಗಿಂಗ್ ವಿತ್ ಎ ವೀವ್ ಟು ಸಸ್ಟೈನಬಲ್ ಫಾರೆಸ್ಟ್ ಮ್ಯಾನೇಜ್ಮೆಂಟ್ ಇನ್ ಪೆರು. .)
  96. "National Geographic: Eye in the Sky — Deforestation". Archived from the original on 2009-04-22. Retrieved 2010-02-04.
  97. "Rainforests & Agriculture". Archived from the original on 2012-09-30. Retrieved 2010-02-04.
  98. ಅಮೇಜಾನ್ ಮಳೆಕಾಡು, BBC
  99. "The Causes of Tropical Deforestation". Archived from the original on 2009-06-27. Retrieved 2010-02-04.
  100. "What is Deforestation?".
  101. IUCN - ಮೂರು ಹೊಸ ತಾಣಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ Archived 2009-01-14 ವೇಬ್ಯಾಕ್ ಮೆಷಿನ್ ನಲ್ಲಿ., ಜೂನ್‌ 27, 2007
  102. "Madagascar's rainforest". Archived from the original on 2009-03-27. Retrieved 2010-02-04.
  103. "International Conference on Reforestation and Environmental Regeneration of Haiti".
  104. "Chart - Tropical Deforestation by Country & Region".
  105. "Rainforest Destruction". Archived from the original on 2009-01-05. Retrieved 2010-02-04.
  106. 2007ನೇ ಇಸವಿಯಲ್ಲಿ ಅಮೇಜಾನ್‌ ಕಾಡಿನ ಅರಣ್ಯನಾಶ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ, USATODAY.com, ಜನವರಿ 24, 2008
  107. "Rainforest loss shocks Brazil".
  108. "Copenhagen Accord of 18 December 2009" (PDF). UNFCC. 2009. Retrieved 2009-12-28. {{cite news}}: Check date values in: |date= (help)
  109. "Methodological Guidance" (PDF). UNFCC. 2009. Retrieved 2009-12-28. {{cite news}}: Check date values in: |date= (help)
  110. ಡೈಮಂಡ್, ಜಾರೆಡ್‌ ಕೊಲ್ಯಾಪ್ಸ್: ಹೌ ಸೊಸೈಟೀಸ್ ಚೂಸ್ ಟು ಫೇಯ್ಲ್ ಆರ್ ಸಕ್ಸೀಡ್ ; ವೈಕಿಂಗ್ ಪ್ರೆಸ್ 2004, ಪುಟಗಳು 301-302
  111. ಡೈಮಂಡ್, ಪುಟಗಳು 320-331
  112. "ಸ್ಟೇಟ್ ಆಫ್ ದಿ ವರ್ಲ್ಡ್ಸ್ ಫಾರೆಸ್ಟ್ಸ್ 2009". ಯುನೈಟೆಡ್ ನೇಷನ್ಸ್‌ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್.
  113. ಜೋನಥನ್‌ A ಫೊಲೆ, ರುಥ್ ಡಿಫ್ರೆಯ್ಸ್, ಗ್ರೆಗರಿ P ಆಸ್ನರ್, ಕಾರೊಲ್ ಬರ್ಫೊರ್ಡ್, et al. 2005 "ಗ್ಲೋಬಲ್ ಕಾನ್ಸೀಕ್ವೆನ್ಸಸ್ ಆಫ್ ಲ್ಯಾಂಡ್ ಯೂಸ್" ಸೈನ್ಸ್‌ 309:5734 570-574
  114. ೧೧೪.೦ ೧೧೪.೧ ಜೇಮ್ಸ್‌ ಓವೆನ್, 2006, "ವರ್ಲ್ಡ್ಸ್ ಫಾರೆಸ್ಟ್ಸ್ ರಿಬೌಂಡಿಂಗ್, ಸ್ಟಡಿ ಸಜೆಸ್ಟ್ಸ್" ನ್ಯಾಷನಲ್ ಜಿಯಾಗ್ರಫಿಕ್ ನ್ಯೂಸ್ http://news.nationalgeographic.com/news/2006/11/061113-forests.html
  115. ಜಾನ್ ಗಿಟ್ಟಿಂಗ್ಸ್, 2001, "ಬ್ಯಾಟ್ಲಿಂಗ್ ಚೀನಾಸ್ ಡಿಫಾರೆಸ್ಟೇಶನ್‌ " ವರ್ಲ್ಡ್ ನ್ಯೂಸ್‌ https://www.theguardian.com/world/2001/mar/20/worlddispatch.china
  116. "World Intact Forests campaign by Greenpeace".
  117. "ವರ್ಲ್ಡ್ಸ್ ಫಾರೆಸ್ಟ್ ಕವರ್ ಮ್ಯಾಪ್". Archived from the original on 2009-06-14. Retrieved 2010-02-04.
  118. "Alternative thematic map by Howstuffworks; in pdf" (PDF). Archived from the original (PDF) on 2009-07-11. Retrieved 2010-02-04.
  119. ನೊ ಮ್ಯಾನ್ಸ್ ಗಾರ್ಡೆನ್ ಡೇನಿಯಲ್ B. ಬೊಟ್ಕಿನ್ p 246-247
  120. ಸ್ಯಾಂಪಲ್, ಇಯಾನ್. "ಫಾರೆಸ್ಟ್ಸ್ ಆರ್ ಪಾಯಿಸ್ಡ್‌ ಟು ಮೇಕ್ ಎ ಕಂಬ್ಯಾಕ್, ಸ್ಟಡಿ ಷೋಸ್". ದಿ ಗಾರ್ಡಿಯನ್‌‌. ನವೆಂಬರ್ 14, 1999
  121. ನಿಕೋಲಸ್ ಬಾಲಬ್ಕಿನ್ಸ್, "ಜರ್ಮನಿ ಅಂಡರ್ ಡೈರೆಕ್ಟ್ ಕಂಟ್ರೋಲ್ಸ್; ಎಕನಾಮಿಕ್ ಆಸ್ಪೆಕ್ಟ್ಸ್ ಆಫ್ ಇಂಡಸ್ಟ್ರಿಯಲ್ ಡಿಸ್‌ಆರ್ನಮೆಂಟ್ 1945-1948, ರುಟ್ಜರ್ಸ್ ವಿಶ್ವವಿದ್ಯಾಲಯ ಮುದ್ರಣಾಲಯ, 1964. p. 119. ಮೇಲ್ಕಂಡ ಎರಡೂ ಲೇಖನಗಳನ್ನು ಬಾಲಬ್ಕಿನ್ಸ್ ಕ್ರಮವಾಗಿ; U.S. ಸರ್ಕಾರದ ಸೇನಾ ಕಾರ್ಯಾಲಯ, ಎ ಯಿಯರ್ ಆಫ್ ಪಾಟ್ಸ್‌ಡಮ್: ದಿ ಜರ್ಮನ್‌ ಎಕಾನಮಿ ಸಿನ್ಸ್ ದಿ ಸರೆಂಡರ್ (1946), p.70; ಹಾಗೂ U.S. ಸರ್ಕಾರದ ಸೇನಾ ಕಾರ್ಯಾಲಯ, ದಿ ಜರ್ಮನ್‌ ಫಾರೆಸ್ಟ್ ರಿಸೋರ್ಸಸ್ ಸರ್ವೇ ದಿಂದ ಆಯ್ಕೆ ಮಾಡಿಕೊಂಡಿದ್ದಾರೆ (1948), p. II. ಇದೇ ಮಾದರಿಯ ಅಭಿಪ್ರಾಯಗಳಿಗೆ ಗಮನಿಸಿ G.W. ಹಾರ್ಮಸ್ಸೆನ್, Reparationen, Sozialproduct, Lebensstandard (ಬ್ರೆಮನ್: F. ಟ್ರುಜೆನ್, ವೆರ್ಲಾಗ್, 1948), I, 48
  122. "ಎನ್‌ಸೈಕ್ಲೋಪೆಡೀಯಾ ಆಫ್ ವರ್ಲ್ಡ್ ಎನ್ವಿರಾನ್‌ಮೆಂಟಲ್ ಹಿಸ್ಟರಿ ". ರೌಟ್‌ಲೆಡ್ಜ್, 2004. ISBN 978-0-7513-2886-8
  123. ಪ್ಯಾಟ್ರೀಸಿಯಾ ಮಾರ್ಚಕ್, "ಲಾಗಿಂಗ್ ದಿ ಗ್ಲೋಬ್" p. 157
  124. "Okinawan History and Karate-do". Archived from the original on 2011-08-19. Retrieved 2010-02-04.
ಸಾಮಾನ್ಯ ಆಕರಗಳು
ಇಥಿಯೋಪಿಯಾ ಅರಣ್ಯನಾಶ ಕುರಿತಾದ ಆಕರಗಳು
  • ಪಾರ್ರಿ, J. (2003). ಮರ ಕತ್ತರಿಸುವವರು ಮರಗಳನ್ನು ನೆಡುವವರಾಗಿದ್ದಾರೆ. ಸರಿಯಾದ ತಂತ್ರಜ್ಞಾನ, 30(4), 38-39. ABI/INFORM ಜಾಗತಿಕ ದತ್ತಾಂಶದಿಂದ 2006ನೇ ಇಸವಿಯ ನವೆಂಬರ್ 22ರಂದು ಆಯ್ಕೆ ಮಾಡಿಕೊಳ್ಳಲಾಗಿದೆ. (ದಾಖಲೆಯ ID: 538367341).
  • ಹಿಲ್‌ಸ್ಟ್ರಾಮ್, K & ಹಿಲ್‌ಸ್ಟ್ರಾಮ್, C. (2003). ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ. ಪರಿಸರ ಪರಿಣಾಮಗಳ ಕುರಿತಾದ ಖಂಡಾಂತರ ಸಮೀಕ್ಷೆ. ಸಂತಾಬಾರ್ಬರ, CA: ABC CLIO.
  • • ವಿಲಿಯಮ್ಸ್, M. (2006). ಭೂಮಿಯ ಅರಣ್ಯವನ್ನು ಮರಳಿ ಸ್ಥಾಪಿಸುವುದು: ಇತಿಹಾಸ ಪೂರ್ವದಿಂದ ಹಿಡಿದು ಜಾಗತಿಕ ಬಿಕ್ಕಟ್ಟಿನ ತನಕ: ಒಂದು ಸಾರಾಂಶ. ಷಿಕಾಗೋ: ಷಿಕಾಗೋ ವಿಶ್ವವಿದ್ಯಾಲಯದ ಮುದ್ರಣಾಲಯ.
  • • ಮೆಕ್‌ಕನ್. J.C. (1990). ಮಹತ್ತರ ಭೂಸುಧಾರಣಾ ಚಕ್ರ? 1900ನೇ ಇಸವಿಯಿಂದ 1987ನೇ ಇಸವಿಯವರೆಗೆ ಇಥಿಯೋಪಿಯಾದ ಎತ್ತರ ಪ್ರದೇಶಗಳ ಉತ್ಪಾದನಾ ಸಾಮರ್ಥ್ಯ. ಇತಿಹಾಸದ ದೈನಂದಿನ ದಾಖಲೆ, xx: 3,389-416. 2006ನೇ ಇಸವಿಯ ನವೆಂಬರ್ 18ರಂದು, JSTOR ದತ್ತಾಂಶದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಮಾಧ್ಯಮಗಳಲ್ಲಿ
ಅಂತರ್ಜಾಲದಲ್ಲಿ ಪ್ರಕಟವಾದ ಚಲನಚಿತ್ರಗಳು