ವಿಷಯಕ್ಕೆ ಹೋಗು

ಅಲಾರ್ಕಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



1833-1891. ಸ್ಪೇನಿನ ಕಾದಂಬರಿಕಾರ. ಇಪ್ಪತ್ತೊಂದನೆಯ ವರ್ಷದಲ್ಲಿ ಮ್ಯಾಡ್ರಿಡ್ಗೆ ಬಂದು ಲ್ಯಾಟಿಗೊ ಎಂಬ ಕ್ರಾಂತಿಕಾರಕ ಪತ್ರಿಕೆಯ ಸಂಪಾದಕನಾದ. ಕಾಲಕ್ರಮೇಣ ಸಂಪ್ರದಾಯಶರಣನಾಗಿ ಮಾರ್ಪಟ್ಟು, ಉಗ್ರ ಕ್ಯಾಥೊಲಿಕ್ ಪಂಥದ ಅನುಯಾಯಿಯಾದ. ಇದಕ್ಕೆ ಮುಂಚೆ ಆಫ್ರಿಕದ ಯುದ್ಧ ಕಾಲದಲ್ಲಿ ಪತ್ರಿಕಾವರದಿಗಾರನಾಗಿ ದ್ದಾಗ ಬರೆದ ದಿನಚರಿ (ಡಿಯಾರೊ ಡಿ ಅನ್ಟೆಸ್ಟಿಗೊ ಡಿ ಲ ಗುಎರ್ರ ಎನ್ ಆಫ್ರಿಕ) ಅವನಿಗೆ ಹೇರಳವಾದ ಹಣ ಹಾಗೂ ಖ್ಯಾತಿ ತಂದಿತು. ಸುಮಾರು 10 ವರ್ಷ ರಾಜಕೀಯದಲ್ಲಿ ಮುಳುಗಿದ್ದು ಚುನಾವಣೆಯಲ್ಲಿ ಸೋತು, ಮತ್ತೆ ಲೇಖನ ವೃತ್ತಿಯನ್ನು ಕೈಗೊಂಡು ಅನೇಕ ಕಾದಂಬರಿಗಳನ್ನು ಬರೆದ. ಯಾವ ಗುಂಪಿಗೆ ಸೇರದಿದ್ದರೂ ಕೆಲವು ಕಾಲ ರೊಮ್ಯಾಂಟಿಕ್ ಪಂಥವನ್ನು ಕೆಲವು ಬಾರಿ ಬಾಲ್ಜಾಕ್‌ನನ್ನು ಅನುಸರಿಸುವ ಮನೋಭಾವವನ್ನು ತೋರಿದ. ಹಲವಾರು ಕವನ, ಪ್ರವಾಸಕಥನ, ಪ್ರಬಂಧಗಳನ್ನು ಬರೆದಿದ್ದರೂ ಇವನಿಗೆ ಶಾಶ್ವತವಾದ ಕೀರ್ತಿ ದೊರೆತಿರುವುದು ಇವನ ಎಲ್ ಸೊಂಬ್ರಿರೊ ಡೆಸ್ ಟ್ರೆಸ್ ಪಿಕೊಸ್ (ಮೂರು ಮೂಲೆಯ ಟೋಪಿ) ಎಂಬ ಹಾಸ್ಯರಸಭರಿತ ಪ್ರೇಮಕಥೆಯ ಮೂಲಕವೇ ಎನ್ನಬಹುದು. ಈ ಸುಂದರ ಕೃತಿಯನ್ನು ಸರ್ವಾಂಟಿಸ್‌ ಡಾನ್‌ಕ್ವಿಕ್ಸೊಟ್ ಕಾದಂಬರಿಗೆ ಹೋಲಿಸುತ್ತಾರೆ.