ಅಳಿಲು ಮೀನು
ಅಳಿಲು ಮೀನು ಹವಳದ ಗುಡ್ಡಗಳಲ್ಲಿ ವಾಸಿಸುವ ಉಷ್ಣವಲಯದ ಸಮುದ್ರದ ಮೀನು (ಸಿಪಾಯಿ ಮೀನು). ವೈಜ್ಞಾನಿಕ ಹೆಸರು ಸಾರ್ಗೋಸೆಂಟ್ರಾನ್ ಈ ಮೀನುಗಳ ದೇಹದ ಮೇಲೆ ಹೊಳಪಾದ ಕೆಂಪು ಮತ್ತು ಹಳದಿ ಬಣ್ಣಗಳ ಉದ್ದವಾದ ಪಟ್ಟೆಗಳು ಪ್ರಮುಖವಾಗಿ ಕಾಣಬರುತ್ತವೆ. ಇದು ಸುಮಾರು 18 ಸೆಂ.ಮೀ ಉದ್ದ ಬೆಳೆಯುತ್ತದೆ. ಹೋಲೋಸೆಂಟ್ರಿಡೇ ಕುಟುಂಬಕ್ಕೆ ಸೇರಿದ ಈ ಮೀನುಗಳಲ್ಲಿ ಕಿವಿರು ಕವಚ, ಮೂಳೆಯ ಕೆಳಗೆ ಹಿಂಚಾಚಿದಂತೆ ಒಂದು ಬಲವಾದ ಕಂಟಕವಿದೆ. ಬೆನ್ನಿನ ಮೇಲೆ ಎರಡು ಈಜುರೆಕ್ಕೆಗಳಿವೆ. ಬಾಲದ ಈಜು ರೆಕ್ಕೆ ಕವಲೊಡೆದಿದೆ. ದೇಹದ ಮೇಲೆ ಬಿರುಸಾದ ಸುಮಾರು ದೊಡ್ಡ ಹುರುಪೆಗಳಿವೆ. ಮೈಮೇಲಿನ ಪಟ್ಟೆ ಮತ್ತು ದೊಡ್ಡ ಅಳಿಲು ಕಣ್ಣುಗಳಿಂದ ಈ ಮೀನುಗಳಿಗೆ ಅಳಿಲು ಮೀನುಗಳೆಂದು ಹೆಸರು ಬಂದಂತೆ ಕಾಣುತ್ತದೆ.[೧] [೨]
ವಿತರಣೆ
[ಬದಲಾಯಿಸಿ]ಇಂಡೋನೇಷಿಯಾ, ಹವಾಯ್ ಮತ್ತು ಪಶ್ಚಿಮ ಇಂಡೀಸ್ ಸುತ್ತಲಿನ ಸಮುದ್ರಗಳಲ್ಲಿ ವಾಸಿಸುವ ಈ ಮೀನುಗಳು ಸುಮಾರು ೧೫೦ ಜಾತಿಗಳಿವೆ.ಅಳಿಲು ಮೀನುಗಳು ಹವಳದ ದಿಬ್ಬಗಳಲ್ಲಿ ವಾಸಿಸುವ ಸಮುದ್ರ ಮೀನುಗಳಾಗಿವೆ.ಇವುಗಳು ಉತ್ತರ ದಕ್ಷಿಣ, ಅಮೆರಿಕಾ ಮತ್ತು ಬ್ರೆಜಿಲ್ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಪೂರ್ವ ಕರಾವಳಿಯುದ್ದಕ್ಕೂ ಕಂಡುಬರುತ್ತವೆ.ಇವುಗಳು ಕತ್ತಲಲ್ಲೇ ಹೆಚ್ಚು ಕಂಡುಬರುತ್ತವೆ
ಉಲ್ಲೇಖಗಳು
[ಬದಲಾಯಿಸಿ]